Tag: Dr. Sudhakar

  • 2-3 ದಿನಗಳಲ್ಲಿ SEP ವರದಿ ಸಿಎಂಗೆ ಸಲ್ಲಿಕೆ – ಡಾ.ಸುಧಾಕರ್

    2-3 ದಿನಗಳಲ್ಲಿ SEP ವರದಿ ಸಿಎಂಗೆ ಸಲ್ಲಿಕೆ – ಡಾ.ಸುಧಾಕರ್

    ಬೆಂಗಳೂರು: ಪ್ರೊ.ಸುಖದೇವ್ ಥೋರಟ್ ನೇತೃತ್ವದಲ್ಲಿ ರಚನೆ ಆಗಿರುವ ರಾಜ್ಯ ಶಿಕ್ಷಣ ನೀತಿಯ ಅಂತಿಮ ವರದಿಯನ್ನು 2-3 ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಸಲ್ಲಿಸುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ (Dr.Sudhakar) ತಿಳಿಸಿದರು.ಇದನ್ನೂ ಓದಿ: ಕೊಪ್ಪಳದ ಗವಿಸಿದ್ದಪ್ಪ ಕೊಲೆ ಕೇಸನ್ನ NIAಗೆ ವಹಿಸಿ – ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಶಿಕ್ಷಣ ನೀತಿಯ (SEP) ವರದಿ ಸಿದ್ಧವಾಗಿದೆ. ಇವತ್ತು ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಎಸ್‌ಇಪಿ ಸಮಿತಿ ಸಭೆ ಇದೆ. ಇಲ್ಲಿ ಚರ್ಚೆ ಮಾಡಿದ ನಂತರ ಸಮಯ ತೆಗೆದುಕೊಂಡು ವರದಿಯನ್ನು ಸಿಎಂಗೆ ಕೊಡ್ತೀವಿ. 2-3 ದಿನಗಳಲ್ಲಿ ಸಿಎಂಗೆ ವರದಿ ಸಲ್ಲಿಕೆ ಆಗಬಹುದು ಎಂದರು.

    2021ರಲ್ಲಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಅನುಷ್ಠಾನ ಮಾಡಲಾಗಿದೆ. ರಾಜ್ಯದಲ್ಲಿ ಎಸ್‌ಇಪಿ ಮಧ್ಯಂತರ ವರದಿ ಆಧಾರದ ಮೇಲೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಅನುಷ್ಠಾನ ಆಗಿದೆ. ಶಾಲಾ ಶಿಕ್ಷಣದಲ್ಲಿ ಎಸ್‌ಇಪಿ ಅನುಷ್ಠಾನ ಆಗಿಲ್ಲ. ಎಸ್‌ಇಪಿ ಸಮಿತಿ ವರದಿ ಕೊಟ್ಟ ಬಳಿಕ ಶಾಲಾ ಶಿಕ್ಷಣ ಹಂತದಲ್ಲಿ ಜಾರಿ ಮಾಡಲಾಗುತ್ತದೆ. ಶಾಲಾ ಶಿಕ್ಷಣದಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.ಇದನ್ನೂ ಓದಿ: ಎಸ್‌ಜೆಪಿ ಮಹಿಳಾ ಹಾಸ್ಟೆಲ್ ಅವ್ಯವಸ್ಥೆಗೆ ಉನ್ನತ ಶಿಕ್ಷಣ ಸಚಿವ ಗರಂ

  • ಸಂಸದ ಡಾ.ಸುಧಾಕರ್ ಸತ್ಯ ಹರಿಶ್ಚಂದ್ರ ಅಲ್ಲ: ಪ್ರದೀಪ್ ಈಶ್ವರ್

    ಸಂಸದ ಡಾ.ಸುಧಾಕರ್ ಸತ್ಯ ಹರಿಶ್ಚಂದ್ರ ಅಲ್ಲ: ಪ್ರದೀಪ್ ಈಶ್ವರ್

    ಬೆಂಗಳೂರು: ಸಂಸದ ಡಾ. ಸುಧಾಕರ್ (Dr. Sudhakar) ಸತ್ಯ ಹರಿಶ್ಚಂದ್ರ ಅಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತಿರುಗೇಟು ನೀಡಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅವರೇನು ಸತ್ಯ ಹರಿಶ್ಚಂದ್ರರಾ ಎಂದು ಪ್ರಶ್ನೆ ಮಾಡಿದ್ದ ಸಂಸದ ಸುಧಾಕರ್ ಅವರಿಗೆ ಪ್ರತಿಕ್ರಿಯಿಸುತ್ತಾ, 2013ರಲ್ಲಿ ಅಂಜಿನಪ್ಪ ಅವರಿಗೆ ಟಿಕೆಟ್ ತಪ್ಪಿಸಿ ನೀವು ಟಿಕೆಟ್ ತಗೊಂಡಿದ್ರಿ ಅಲ್ಲವಾ? ಅವತ್ತು ನೀವು ಸತ್ಯ ಹರಿಶ್ಚಂದ್ರ ಆಗಿದ್ರಾ? ಕುಮಾರಸ್ವಾಮಿ (Kumarswamy) ಅವರ ಸರ್ಕಾರ ಬೀಳಿಸೋದ್ರಲ್ಲಿ ನೀವು ಪ್ರಮುಖ ಪಾತ್ರವಾಗಿದ್ದೀರಿ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಬಿಕ್ಕಟ್ಟು – ಎರಡು ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಜಮೆಯಾಗದ ಸಂಬಳ

    ಆಗ ಬಾಂಬೆ ಬಾಯ್ಸ್ ಸರ್ಕಾರ ಬೀಳಿಸಿದ್ರಲ್ಲವಾ ಅವತ್ತು ನೀವು ಸತ್ಯ ಹರಿಶ್ಚಂದ್ರ ಆಗಿದ್ರಾ? ನೀವು ಕಾಂಗ್ರೆಸ್ ಪಕ್ಷದಲ್ಲಿ ಇರುವವವರೆಗೂ ಕಾಂಗ್ರೆಸ್ ಒಳ್ಳೆ ಪಕ್ಷ. ಬಿಜೆಪಿಗೆ ಹೋದ ಕೂಡಲೇ ಕಾಂಗ್ರೆಸ್ ಹಾಗೇ ಹೀಗೆ ಎಂದು ಮಾತಾಡ್ತಿದ್ದಾರೆ. ನೀವು ಸಮಿತಿ ಮಾಡಿ ಒಂದೂವರೆ ವರ್ಷ ಆಗಿದೆ. ಆದರೆ ವರದಿ ವಿಳಂಬ ಆಯ್ತು ಎಂದು ನಾವು ಸರ್ಕಾರದ ಮೇಲೆ ಒತ್ತಡ ಹಾಕಿದ್ವಿ. ಅವರು ಕೊಡುವ ಸಮಯಕ್ಕೆ ಮಧ್ಯಂತರ ವರದಿ ಕೊಟ್ಡಿದ್ದಾರೆ. ಅದರಲ್ಲಿ ಎಫ್‌ಐಆರ್ ಹಾಕಿ ತನಿಖೆ ಮಾಡಿ ಅನ್ನೋದು ಇದೆ. ತಪ್ಪು ಮಾಡಿದ್ರೆ ತಪ್ಪೇ. ತಾತ್ಕಾಲಿಕವಾಗಿ ನೀವು ಬೇಕಿದ್ದರೆ ಸ್ವಲ್ಪ ದಿನ ತಳ್ಳಿಹಾಕಬಹುದು. ಯಾವತ್ತೋ ಒಂದು ದಿನ ನಿಮ್ಮ ಕುತ್ತಿಗೆಗೆ ಬರುತ್ತದೆ ಎನ್ನುವ ನಂಬಿಕೆ ನನಗೆ ಇದೆ ಅಂತ ವಾಗ್ದಾಳಿ ನಡೆಸಿದರು.

    ನಮ್ಮ ಸರ್ಕಾರ ಯಾರ ಮೇಲು ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತದೆ. ಸಿಎಂ, ಡಿಸಿಎಂ ಕ್ರಮವಹಿಸುತ್ತಾರೆ. ಕೋವಿಡ್ ಸಮಯದಲ್ಲಿ ತುಂಬಾ ನಿಯಮ ಉಲ್ಲಂಘನೆ ಮಾಡಿದ್ದಾರೆ. 500 ಮಾಸ್ಕ್ ಯಾವ ಮೆಡಿಕಲ್ ಸ್ಟೋರ್‌ನಲ್ಲಿ ಸಿಗುತ್ತದೆ ಎಂದು ನನಗೆ ಈಗಲೂ ಗೊತ್ತಿಲ್ಲ. ಅದು ಹೇಗೆ ಇರುತ್ತದೆ ಎಂದು ನೋಡಬೇಕು. ಸಂಸದರೇ 500 ರೂಪಾಯಿ ಮಾಸ್ಕ್, ವೆಂಟಿಲೇಟರ್ಸ್, ಇವೆಲ್ಲ ಏನು? ಎಂದು ಕರ್ನಾಟಕದ ಜನತೆಗೆ ಹೇಳೋಕೆ ಇಷ್ಟ ಪಡ್ತೀನಿ. ಕೋವಿಡ್‌ನಲ್ಲಿ ಅಕ್ರಮ ಮಾಡಿರುವವರಿಗೆ ಕಾನೂನಿನಲ್ಲಿ ಯಾವಾಗ ಶಿಕ್ಷೆ ಆಗುತ್ತದೆ ಗೊತ್ತಿಲ್ಲ. ಜನತಾ ನ್ಯಾಯಾಲಯದಲ್ಲಿ ಕೋವಿಡ್ (Covid) ಕಳ್ಳರಿಗೆ 14 ತಿಂಗಳ ಹಿಂದೆ ಅವರನ್ನು ಸೋಲಿಸಿದ್ದೇವೆ. ಅದಕ್ಕೆ ನಾನೇ ನಿದರ್ಶನ ಎಂದು ಕಿಡಿಕಾರಿದರು.ಇದನ್ನೂ ಓದಿ: ಮತ್ತೆ ಸಿನಿಮಾಗೆ ದೀಪಿಕಾ ದಾಸ್ ಕಮ್‌ಬ್ಯಾಕ್- ‘ಪಾರು ಪಾರ್ವತಿ’ ಸಿನಿಮಾದಲ್ಲಿ ನಟಿ

    ಸುಧಾಕರ್ 5 ವರ್ಷ ಕಾಂಗ್ರೆಸ್ ಎಂಎಲ್‌ಎ (MLA) ಆಗಿದ್ದರು. ಆಗ ಬಚ್ಚೇಗೌಡರು (Bachegowda) ಸಂಸದರು ಆಗಿದ್ದರು. ಅವತ್ತು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಗೆ 30 ಸಾವಿರ ಲೀಡ್ ಇತ್ತು. ನಾನು ಕಾಂಗ್ರೆಸ್ ಎಂಎಲ್‌ಎ ಆಗಿದ್ದೇನೆ. ಈಗ ಲೀಡ್ 19 ಸಾವಿರಕ್ಕೆ ತಡೆದಿದ್ದೇನೆ. ಎಂಪಿಯಲ್ಲಿ ಮತ ಹಾಕೋದು ಬೇರೆ ಇತ್ತು. 8 ವಿಧಾನಸಭೆ ಕ್ಷೇತ್ರ. ಸಾವಿರಾರು ದುಡ್ಡು ಖರ್ಚು ಮಾಡಿದ್ದರಂತೆ. ನೋಡೋಣ ಏನ್ ಆಗುತ್ತದೆ. ಕೋವಿಡ್‌ನಲ್ಲಿ ತಪ್ಪು ಮಾಡಿದ್ದಾರೆ. ಅವರಿಗೆ ಶಿಕ್ಷೆ ಆಗುತ್ತದೆ. ಅಕ್ರಮ ಮಾಡಿರುವವರಿಗೆ ನಮ್ಮ ಸರ್ಕಾರ ಪಾಠ ಕಲಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

  • ಸಚಿವ ಸುಧಾಕರ್ ಬಗ್ಗೆ ಟೀಕಿಸಿದ್ದ ಕಾಂಗ್ರೆಸ್ ಮುಖಂಡ ಅರೆಸ್ಟ್

    ಸಚಿವ ಸುಧಾಕರ್ ಬಗ್ಗೆ ಟೀಕಿಸಿದ್ದ ಕಾಂಗ್ರೆಸ್ ಮುಖಂಡ ಅರೆಸ್ಟ್

    ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಫೌಂಡೇಶನ್ ವತಿಯಿಂದ ಚಿಕ್ಕಬಳ್ಳಾಪುರ ನಗರದ ಎಸ್‍ಜೆಸಿಐಟಿ ಕಾಲೇಜು ಆವರಣದಲ್ಲಿ ಇದೇ ತಿಂಗಳ 14 ಹಾಗೂ 15 ರಂದು ಬೃಹತ್ ಆರೋಗ್ಯ ಮೇಳ ಆಯೋಜನೆ ಮಾಡಲಾಗಿದೆ. ಹೀಗಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡುವಾರು ಗ್ರಾಮವಾರು ಆರೋಗ್ಯ ಇಲಾಖೆ ವತಿಯಿಂದ ಉಚಿತ ರಕ್ತ ತಪಾಸಣೆಗೆ ರಕ್ತ ಸಂಗ್ರಹಣೆ ಕಾರ್ಯ ಮಾಡಲಾಗುತ್ತಿದೆ.

    ಈ ವಿಚಾರವಾಗಿ ಚಿಕ್ಕಬಳ್ಳಾಪುರ ನಗರದ ಕಾಂಗ್ರೆಸ್ ಮುಖಂಡ ಸಂತೋಷ್ ಆರೋಗ್ಯ ಮೇಳ ಹಾಗೂ ರಕ್ತ ಸಂಗ್ರಹಣೆ ಮಾಡ್ತಿರೋದು ಇತ್ತೀಚೆಗೆ ಚಿಕ್ಕಬಳ್ಳಾಪುರ ನಗರಕ್ಕೆ ಬಂದ ಕಲುಷಿತ ನೀರಿನಿಂದ ಪ್ಲೋರೈಡ್ ಬಂದಿದ್ಯಾ..? ಕ್ಯಾನ್ಸರ್ ಬಂದಿದ್ಯಾ ಪರೀಕ್ಷೆ ಮಾಡೋಕೆ ಅಂತ ಮಾತನಾಡಿದ್ದಾರೆ. ಇದನ್ನ ಪ್ರಚೋದನೆ ಮಾಡಿ ವೀಡಿಯೋ ಮಾಡಿಕೊಂಡಿರುವ ಸಚಿವ ಸುಧಾಕರ್ ಬೆಂಬಲಿಗ ಅನಿಲ್ ಕುಮಾರ್ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಸಂತೋಷ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಪೊಲೀಸ್ ಗುಪ್ತಚರ ಪ್ರಧಾನ ಕಚೇರಿ ಮೇಲೆಯೇ ಗ್ರೆನೇಡ್ ದಾಳಿ

    ದೂರಿನನ್ವಯ ತಡರಾತ್ರಿ ಐಪಿಸಿ ಸೆಕ್ಷನ್ 153 ಹಾಗೂ 505(1)ರ ಅಡಿ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಆರೋಪಿ ಸಂತೋಷ್ ರನ್ನ ಬಂಧಿಸಿ ತಡರಾತ್ರಿಯೇ ಜೈಲಿಗೆ ಕಳುಹಿಸಿದ್ದಾರೆ. ಇದೇ ವಿಚಾರವಾಗಿ ತಡರಾತ್ರಿ ಸಹ ಕಾಂಗ್ರೆಸ್ ಕಾರ್ಯಕರ್ತ ಮುಖಂಡರು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು. ಇಂದು ಬೆಳಗ್ಗೆ ಸಹ ಮತ್ತೆ ಪೊಲೀಸ್ ಠಾಣೆ ಬಳಿ ಜಮಾಯಿಸಿರುವ ಕಾಂಗ್ರೆಸ್ ಕಾರ್ಯಕರ್ತ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.

    ದೂರುದಾರ ಅನಿಲ್ ವಿರುದ್ಧ ಸಹ ದಲಿತ ಸಮುದಾಯದ ವೆಂಕಟ್ ಎಂಬವರಿಗೆ ಜಾತಿನಿಂದನೆ ಮಾಡಿದ್ದಾರೆ ಅಂತ ದೂರು ನೀಡಿದ್ದು ಅನಿಲ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಪಟ್ಟು ಹಿಡಿದಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮುಂದುವರಿದಿದ್ದು ಬಿಗುವಿನ ವಾತವಾರಣ ನಿರ್ಮಾಣ ಆಗಿದೆ. ಇದನ್ನೂ ಓದಿ: ದೆಹಲಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ

  • ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ಕಲಾವಿದೆ ಜಯಂತಿ: ಗಣ್ಯರ ಸಂತಾಪ

    ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ಕಲಾವಿದೆ ಜಯಂತಿ: ಗಣ್ಯರ ಸಂತಾಪ

    -ನನ್ನ ಇಷ್ಟದ ನಟಿ ಜಯಂತಿಯವರ ನಿಧನ ಅತೀವ ದುಃಖವಾಗಿದೆ

    ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ಕಲಾವಿದೆ ಜಯಂತಿ ಅವರ ನಿಧನಕ್ಕೆ ಗಣ್ಯರು ಟ್ವೀಟ್ ಮಾಡುವ ಮೂಲಕವಾಗಿ ಸಂತಾಪ ಸೂಚಿಸಿದ್ದಾರೆ.

    ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜಯಂತಿ ಅವರ ನಿಧನಕ್ಕೆ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.ಪ್ರಖ್ಯಾತ ಹಿರಿಯ ಕಲಾವಿದೆ, ಅಭಿನಯ ಶಾರದೆ ಜಯಂತಿ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಕನ್ನಡ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬ, ಅಪಾರ ಅಭಿಮಾನಿ ಬಳಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

    ಅಭಿಜಾತ ಪ್ರತಿಭೆಯ ಮೂಲಕ ದಶಕಗಳ ಕಾಲ ಚಿತ್ರಪ್ರೇಮಿಗಳ ಮನಗೆದ್ದಿದ್ದ ನಟಿ ಜಯಂತಿ ಅವರು ನಿಧನರಾಗಿದ್ದರೆ. ನನ್ನ ಇಷ್ಟದ ನಟಿ ಅಭಿನಯ ಶಾರದೆ ಜಯಂತಿಯವರ ನಿಧನದಿಂದ ಅತೀವ ದುಃಖ ವಾಗಿದೆ. ಜಯಂತಿ ಅವರು ತಮ್ಮ ಚಿತ್ರಗಳ ಮೂಲಕ ಸದಾಕಾಲ ನಮ್ಮೆಲ್ಲರ ಮನದಲ್ಲಿ ಅಜರಾಮಾರರಾಗಿ ಇರುತ್ತಾರೆ. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.

    ಅಭಿನಯ ಶಾರದೆ ಜಯಂತಿ ಅವರು ನಿಧನರಾದ ಸಂಗತಿ ಬೇಸರ ತರಿಸಿದೆ. ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿಯಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಅವರು ದಕ್ಷಿಣ ಭಾರತದ ಪ್ರಖ್ಯಾತ ನಟಿ ಎನಿಸಿಕೊಂಡಿದ್ದರು. ಅವರು ಕನ್ನಡಿಗರೆಂಬುದೇ ನಮ್ಮ ಹೆಮ್ಮೆ. ಅವರಿಗೆ ಸದ್ಗತಿ ದೊರೆಯಲಿ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಟ್ವೀಟ್ ಮಾಡುವ ಮೂಲವಾಗಿ ಎಚ್ ಡಿ ಕುಮಾರಸ್ವಾಮಿಯವರು ಸಂತಾಪ ಸೂಚಿಸಿದ್ದಾರೆ.

    ಹಿರಿಯ ನಟಿ, ಅಭಿನಯ ಶಾರದೆ ಶ್ರೀಮತಿ ಜಯಂತಿ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. 6 ಭಾಷೆಗಳ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಒನಕೆ ಓಬವ್ವ ರೀತಿಯ ಪೌರಾಣಿಕ ಪಾತ್ರ ಸೇರಿದಂತೆ ಅನೇಕ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಆರೋಗಹ್ಯ ಸಚಿವ ಕೆ ಸುಧಾಕರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

     

  • ಕೊರೊನಾ ಚೈನ್ ಲಿಂಕ್ ಮುರಿಯಲು 14 ದಿನ ಕಠಿಣ ನಿಯಮ: ಡಾ. ಸುಧಾಕರ್

    ಕೊರೊನಾ ಚೈನ್ ಲಿಂಕ್ ಮುರಿಯಲು 14 ದಿನ ಕಠಿಣ ನಿಯಮ: ಡಾ. ಸುಧಾಕರ್

    – ರಾಜ್ಯದ ಜನತೆಯಲ್ಲಿ ಆರೋಗ್ಯ ಸಚಿವ ಮನವಿ
    – ಸೋಂಕು ಹೆಚ್ಚಿರುವ ಜಿಲ್ಲೆಗಳಿಗೆ ಶೀಘ್ರವೇ ಭೇಟಿ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ನಿಟ್ಟಿನಲ್ಲಿ ವೈಜ್ಞಾನಿಕ ನೆಲೆಗಟ್ಟು, ಸೋಂಕು ನಿಯಂತ್ರಣ, ಚಿಕಿತ್ಸೆ ವ್ಯವಸ್ಥೆ ಅಧ್ಯಯನ ಮಾಡಿ ಬಿಗಿ ನಿಯಮ ತರಲಾಗಿದೆ. ಈ ಮಾರ್ಗಸೂಚಿಯಲ್ಲಿ ಹದಿನಾಲ್ಕು ದಿನಗಳ ಕಾಲ ಕಠಿಣ ನಿಯಮ ಜಾರಿಗೆ ತರಲಾಗಿದೆ. ಒಂದು ಚೈನ್ ಮುರಿಯಲು ಕನಿಷ್ಟ 14 ದಿನ ಬೇಕು. ಹಾಗಾಗಿ 14 ದಿನ ಬಿಗಿಯಾದ ನಿಯಮಗಳ ಜಾರಿ ಮಾಡಲಾಗಿದ್ದು, ಜನ ಮಾರ್ಗಸೂಚಿಯನ್ವಯ ನಡೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ರಾಜ್ಯದ ಜನತೆಯೊಂದಿಗೆ ಮನವಿ ಮಾಡಿಕೊಂಡಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಸಕ್ರಿಯ ಸೋಂಕಿತರಿಗೆ ಸೂಕ್ತ ರೀತಿಯ ಚಿಕಿತ್ಸೆ ಕೊಡುವ ವ್ಯವಸ್ಥೆ ಈಗಾಗಲೇ ಮಾಡಲಾಗುತ್ತಿದ್ದು, ರೆಮೆಡಿಸಿವಿರ್, ಐಸಿಯು, ಬೆಡ್, ಆಕ್ಸಿಜನ್ ಲಭ್ಯತೆ ಹೆಚ್ಚು ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ವೈದ್ಯಕೀಯ ಸಿಬ್ಬಂದಿಗೆ ಹೆಚ್ಚುವರಿಯಾಗಿ ಕೆಲವು ವಿಶೇಷ ವೇತನ, ಜವಾಬ್ದಾರಿ ಕೊಡುತ್ತೇವೆ. ಬೆಂಗಳೂರಿನ ಎಂಟು ವಲಯಗಳಲ್ಲಿ ಉಸ್ತುವಾರಿ ಸಚಿವರು ನೇತೃತ್ವ ವಹಿಸಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ, ನಾನ್ ಕೋವಿಡ್ ರೋಗಿಗಳ ಡಿಸ್ಚಾರ್ಜ್ ಮಾಡಿಸುವ ಕೆಲಸ ಮಾಡಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

    ಕೆಲವು ಆಸ್ಪತ್ರೆಗಳ ನಿರ್ದೇಶಕರ ಜೊತೆಗೆ ಸಿಎಂ ವಿಡಿಯೋ ಕಾನ್ಫರೆನ್ಸ್ ಮಾಡಲಿದ್ದಾರೆ. ಎಲ್ಲ ಪ್ರತಿಪಕ್ಷ ನಾಯಕರೂ ಸರ್ಕಾರಕ್ಕೆ ಬೆಂಬಲ ಕೊಟ್ಟಿದಾರೆ ಅವರೆಲ್ಲರಿಗೂ ಧನ್ಯವಾದಗಳು. ಸಿಎಂ ಕೈ ಬಲಪಡಿಸಲು ಎಲ್ಲ ನಾಯಕರೂ ನೈತಿಕವಾಗಿ ಜೊತೆಗಿದ್ದಾರೆ. ಜನ ಭಯಪಡುವ ಅಗತ್ಯ ಇಲ್ಲ. ಪ್ರತಿಯೊಬ್ಬರಿಗೂ ಆಸ್ಪತ್ರೆ ದಾಖಲಾಗುವ ಅವಶ್ಯಕತೆ ಇಲ್ಲ. ಯಾರು ಆಸ್ಪತ್ರೆಗೆ ದಾಖಲಾಗಬೇಕು, ಯಾರು ಆಗಬಾರದು ಎಂದು ಸಂಜೆ ವಿವರವಾಗಿ ಹೇಳುತ್ತೇನೆ ಎಂದಿದ್ದಾರೆ.

    ಇವತ್ತು ಸಹ ಸಭೆ ಮಾಡುತ್ತೇವೆ ಕಂದಾಯ ಸಚಿವರು, ಗೃಹ ಸಚಿವರ ಜೊತೆ ಸಭೆ ನಡೆಯಲಿದ್ದು, ಐದು ಸೋಂಕು ಹೆಚ್ಚಿರುವ ಜಿಲ್ಲೆಗಳ ಡಿಸಿಗಳ ಜೊತೆ ಇಂದು ಸಭೆ ನಡೆಸಲಿದ್ದೇವೆ. ನಾಳೆ ಪೂರ್ತಿ ದಿನ ಮೈಸೂರಲ್ಲಿರುತ್ತೇನೆ. ರಾಜ್ಯದ ಏಳು ಸೋಂಕು ಹೆಚ್ಚಿರುವ ಜಿಲ್ಲೆಗಳಿಗೂ ಹೋಗುತ್ತೇನೆ. ಹೊಸ ಮಾರ್ಗಸೂಚಿಗಳಿಂದ ಚೈನ್ ಲಿಂಕ್ ಕಟ್ ಮಾಡಬಹುದು. ಇನ್ನು ಮೂರ್ನಾಲ್ಕು ದಿನಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗಲಿದೆ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

  • ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ, ಸ್ಟಾರ್ ಹೋಟೆಲ್‍ಗಳಲ್ಲಿ ಬೆಡ್ ವ್ಯವಸ್ಥೆ: ಸುಧಾಕರ್

    ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ, ಸ್ಟಾರ್ ಹೋಟೆಲ್‍ಗಳಲ್ಲಿ ಬೆಡ್ ವ್ಯವಸ್ಥೆ: ಸುಧಾಕರ್

    – ಚಿಕಿತ್ಸೆ, ಆಂಬುಲೆನ್ಸ್ ಉಚಿತ, ಔಷಧಿ ಕೊರತೆಯಾಗದಂತೆ ತುರ್ತು ಖರೀದಿ
    – ಇಂದಿನಿಂದ ಮತ್ತೆ ಟಫ್ ರೂಲ್ಸ್, ವಿವಾಹಕ್ಕೆ ಸೇರುವ ಜನರ ಸಂಖ್ಯೆ ಮತ್ತಷ್ಟು ಇಳಿಕೆ
    – ಹೊರಾಂಗಣ ಸಮಾರಂಭ 200, ಒಳಾಂಗಣದಲ್ಲಿ 100 ಜನರಿಗೆ ಮಾತ್ರ ಅವಕಾಶ

    ಬೆಂಗಳೂರು: ಕೊರೊನಾ ಪ್ರಕರಣಗಳು ಹೈ ಸ್ಪೀಡ್‍ನಲ್ಲಿ ಹೆಚ್ಚಳವಾಗುತ್ತಿದ್ದರೂ ಸರ್ಕಾರ ಮಾತ್ರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಮೀನಮೇಷ ಎಣಿಸುತ್ತಿದೆ. ಕೇವಲ ಸಭೆ ಸಮಾರಂಭಗಳಿಗೆ ಮಾತ್ರ ಕಡಿವಾಣ ಹಾಕಿ ಕೈ ತೊಳೆದುಕೊಳ್ಳಲಾಗಿದೆ.

    ಕೊರೊನಾ ನಿಯಂತ್ರಣದ ಬಗ್ಗೆ ಸಿಎಂ ಜೊತೆಗೆ ಸಭೆ ನಡೆಸಿದ ಬಳಿಕ ಆರೋಗ್ಯ ಸಚಿವ ಸುಧಾಕರ್ ಸುದ್ದಿಗಾರರೊಂದಿಗೆ ಮಾತನಾಡಿ, ವೈದ್ಯರ ಕೊರತೆ ಆಗದಂತೆ 6 ತಿಂಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ವಾರ್ಡ್ ಗೆ ಇನ್ನೊಂದು ಆಂಬುಲೆನ್ಸ್ ಹೆಚ್ಚಳ, ಚಿಕಿತ್ಸೆ ಉಚಿತ, ಆಂಬುಲೆನ್ಸ್ ಉಚಿತ, ಔಷಧಿ ಕೊರತೆಯಾಗದಂತೆ ತುರ್ತು ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಆಕ್ಸಿಜನ್ ಲಭ್ಯತೆ ಹೆಚ್ಚಳ ಮಾಡುತ್ತೇವೆ, ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ಯೂನಿಟ್ ಸ್ಥಾಪನೆ, ಕೇಂದ್ರಕ್ಕೂ ಕೋರಿಕೆ ಸಲ್ಲಿಸಲಿದ್ದೇವೆ, ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಖಾಸಗಿ ಆಸ್ಪತ್ರೆಗಳ ಬೆಡ್ ಮೇಲುಸ್ತುವಾರಿಗೆ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಒಟ್ಟು 5 ಸಾವಿರ ಬೆಡ್ ಗಳ ನ್ನು ಸಿದ್ಧ ಮಾಡುತ್ತೇವೆ. ಓರ್ವ ಐಎಎಸ್, ಓರ್ವ ಐಪಿಎಸ್, ಓರ್ವ ನೋಡಲ್ ಅಧಿಕಾರಿ ಮತ್ತು ಇನ್ನೊಬ್ಬರು ಒಟ್ಟು 4 ಜನ ಇರುತ್ತಾರೆ. ಹಾಸಿಗೆ ಹೆಚ್ಚಳಕ್ಕೆ ಸಹ ಕ್ರಮ ವಹಿಸಲಾಗಿದೆ. ಖಾಸಗಿ ಸ್ಟಾರ್ ಹೋಟೆಲ್ ಜೊತೆಗೆ ಒಡಂಬಡಿಕೆ ಮಾಡಿಕೊಂಡು ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಪರಿವರ್ತನೆ ಮಾಡಲಾಗುವುದು. ತುರ್ತು ಅಗತ್ಯ ಇದ್ದವರಿಗೆ ಬಳಕೆಗೆ ನೀಡಲಾಗುವುದು ಎಂದು ತಿಳಿಸಿದರು.

    ಅನಗತ್ಯ ಗುಂಪು ಸೇರಲು ನಿಷೇಧವಿದೆ, ವಿವಾಹ ಸಮಾರಂಭಗಳಿಗೆ ನಿಯಮಿತ ಅವಕಾಶ ನೀಡಲಾಗಿದೆ. ಒಳಾಂಗಣ 100, ಹೊರಾಂಗಣ 200 ಮಂದಿ ಮಾತ್ರ ಅವಕಾಶ ನೀಡಲಾಗಿದೆ. ಜನಸಂದಣಿ ಇಳಿಕೆಗೆ ಆದೇಶ ನೀಡಲಾಗಿದೆ. ಈ ಹಿಂದೆ ವಿವಾಹ ಸಮಾರಂಭಗಳಲ್ಲಿ ಒಳಾಂಗಣದಲ್ಲಿ 200 ಮತ್ತು ಹೊರಾಂಗಣದಲ್ಲಿ 500 ಜನ ಭಾಗವಹಿಸಬಹುದಿತ್ತು. ಈ ಪ್ರಮಾಣವನ್ನು ಇದೀಗ ಕಡಿತಗೊಳಿಸಲಾಗಿದೆ ಎಂದು ತಿಳಿಸಿದರು.

    ಏಪ್ರಿಲ್ 18 ರಂದು ಮತ್ತೆ ಸಭೆ ಕರೆಯಲಾಗಿದೆ, ಸಭೆಯ ಸಲಹೆ, ಸೂಚನೆ ಪಡೆದು ಸೂಕ್ತ ಘೋಷಣೆಯನ್ನು ಸಿಎಂ ಮಾಡುತ್ತಾರೆ. ಅಂದು ಸಚಿವರ ಸಭೆ ಕೂಡ ಕರೆಯಲಾಗಿದೆ, ಸಚಿವರ ಅಭಿಪ್ರಾಯ ಪಡೆದು, ವಿಶೇಷವಾಗಿ ಬೆಂಗಳೂರಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜನತೆಯ ಸಹಕಾರ ಅಗತ್ಯವಾಗಿದ್ದು, ಪ್ಯಾನಿಕ್ ಆಗೋದು ಬೇಡ, ಎಲ್ಲ ಸೌಲಭ್ಯವನ್ನು ಸರ್ಕಾರ ಮಾಡುತ್ತದೆ. ಹೆಚ್ಚು ಲಕ್ಷಣಗಳಿರುವವರು ಮಾತ್ರ ಆಸ್ಪತ್ರೆ ಬಳಸುವಂತೆ ಆದೇಶಿಸುತ್ತೇವೆ ಎಂದರು.

  • ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಸಾಧ್ಯತೆ- ಸುಧಾಕರ್

    ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಸಾಧ್ಯತೆ- ಸುಧಾಕರ್

    – ಮಾಸ್ಕ್, ಸಾಮಾಜಿಕ ಅಂತರ ಮರೆತು ಜನರಿಂದ ಉದಾಸೀನ
    – ಗಡಿಭಾಗಗಳಲ್ಲಿ ಹೈ ಅಲರ್ಟ್ ಗೆ ಗೃಹಸಚಿವರಿಗೆ ಪತ್ರ

    ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ನಿರ್ನಾಮವಾಗಿದೆ ಎಂದು ಜನ ಉದಾಸೀನ ಮಾಡುತ್ತಿದ್ದಾರೆ. ಆದರೆ ರಾಜ್ಯಕ್ಕೆ ಕೊರೊನಾ ಎರಡನೇ ಅಲೆ ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಗಡಿಭಾಗಗಳಲ್ಲಿ ಹೈ ಅಲರ್ಟ್ ಘೋಷಿಸಲು ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ. ಈಗಾಗಲೇ ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಅರಂಭವಾಗಿದ್ದು, ಕೇರಳ-ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಕೋವಿಡ್ 19 ನೆಗಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು.

    ಈ ಬಗ್ಗೆ ಮಹಾರಾಷ್ಟ್ರ ಹಾಗೂ ಕೇರಳ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದ್ದು, ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಸಿಎಂ ನೇತೃತ್ವದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಜೊತೆ ನಾಳೆ ಸಭೆ ನಡೆಸಿ, ಎರಡನೇ ಅಲೆ ಆರಂಭವಾಗದಂತೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಜನ ಕೊರೊನಾ ಮಾಯವಾಗಿದೆ ಎಂದು ಮಾಸ್ಕ್ ಹಾಕದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಉದಾಸೀನ ಮಾಡುತ್ತಿದ್ದಾರೆ ಎಂದು ಸಚಿವರು ಅಸಮಾಧಾನ ಹೊರಹಾಕಿದರು.

  • ರಾಜ್ಯದಲ್ಲಿ 6.30 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ: ಸಚಿವ ಸುಧಾಕರ್

    ರಾಜ್ಯದಲ್ಲಿ 6.30 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ: ಸಚಿವ ಸುಧಾಕರ್

    – ಲಸಿಕೆ ನೀಡಲು 9,807 ಅನುಭವಿ ವ್ಯಾಕ್ಸಿನೇಟರ್ ಸಿಬ್ಬಂದಿ
    – ರಾಜ್ಯಾದ್ಯಂತ 28,427 ಲಸಿಕಾ ಕೇಂದ್ರಗಳು

    ಬೆಂಗಳೂರು: ಇತ್ತೀಚೆಗಷ್ಟೇ ಕೊರೊನಾ ಲಸಿಕೆಗೆ ಅನುಮತಿ ಸಿಕ್ಕಿದೆ. ಅಲ್ಲದೆ ಜನವರಿ 13ರಿಂದ ಲಸಿಕೆ ವಿತರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸಹ ತಿಳಿಸಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಸಹ ಸಿದ್ಧತೆ ಮಾಡಲಾಗಿದ್ದು, ಒಟ್ಟು 6.30 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿ ತಿಳಿಸಿರುವ ಅವರು, ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದ್ದು, ರಾಜ್ಯ ಸರ್ಕಾರ ಸುವ್ಯವಸ್ಥಿತ ಲಸಿಕೆ ವಿತರಣೆಗೆ ಸಕಲ ಸಿದ್ಧತೆ ನಡೆಸಿದೆ. ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಿದ್ದು, 2,73,211 ಸರ್ಕಾರಿ ಹಾಗೂ 3,57,313 ಖಾಸಗಿ ಸೇರಿ ಒಟ್ಟು 6,30,524 ಅರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ ಎಂದು ವಿವರಿಸಿದ್ದಾರೆ.

    ಲಸಿಕೆ ನೀಡಲು ತರಬೇತಿ ಪಡೆದ 9,807 ಅನುಭವಿ ವ್ಯಾಕ್ಸಿನೇಟರ್ ಸಿಬ್ಬಂದಿ ಮತ್ತು ರಾಜ್ಯಾದ್ಯಂತ 28,427 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ. ಇನ್ನೂ ಹೆಚ್ಚಿನ ಕೇಂದ್ರಗಳನ್ನು ಗುರುತಿಸಲಾಗುವುದು. ಈ ಎಲ್ಲ ದತ್ತಾಂಶವನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಕೊವಿನ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ ಎಂದು ತಿಳಿಸಿದ್ದಾರೆ.

    ರಾಜ್ಯಕ್ಕೆ ಅವಶ್ಯಕತೆ ಇರುವ ಹೆಚ್ಚಿನ ಮೂಲಭೂತ ಸೌಕರ್ಯವನ್ನು ಕೇಂದ್ರ ಸರ್ಕಾರ ಪೂರೈಸುತ್ತಿದ್ದು, ಈವರೆಗೂ 64 ಬೃಹತ್ ಐಸ್ ಲೈನ್ಡ್ ರೆಫ್ರಿಜರೇಟರ್ (ILR), 24 ಲಕ್ಷ ಸಿರಿಂಜುಗಳು ರಾಜ್ಯಕ್ಕೆ ಬಂದಿವೆ. ಎಲ್ಲವನ್ನೂ ಜಿಲ್ಲೆಗಳಿಗೆ ರವಾನಿಸಲಾಗಿದೆ. ಇನ್ನುಳಿದ 31 ಲಕ್ಷ ಸಿರಿಂಜುಗಳು ಸೇರಿದಂತೆ ಹೆಚ್ಚುವರಿ ಉಪಕರಣಗಳು ಶೀಘ್ರದಲ್ಲೇ ತಲುಪಲಿವೆ ಎಂದು ವಿವರಿಸಿದ್ದಾರೆ.

  • ನೈಟ್ ಕರ್ಫ್ಯೂ ಗೊಂದಲ – ಅಶೋಕ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ಸುಧಾಕರ್

    ನೈಟ್ ಕರ್ಫ್ಯೂ ಗೊಂದಲ – ಅಶೋಕ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ಸುಧಾಕರ್

    ಬೆಂಗಳೂರು: ಕೊರೊನಾ ನಿಯಂತ್ರಣ ಮಾಡುವುದಕ್ಕಾಗಿ ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿಗೊಳಿಸುವ ವಿಚಾರದಲ್ಲಿ ಆರ್ ಅಶೋಕ್ ಹೇಳಿಕೆಯನ್ನು ಆರೋಗ್ಯ ಸಚಿವ ಡಾ. ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ.

    ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾನಾಡಿದ್ದ ಸಚಿವ ಅಶೋಕ್, ಬ್ರಿಟನ್‍ನಿಂದ ಬಂದಿರುವ ರೂಪಾಂತರಿಕ ವೈರಸ್ ವೇಗವಾಗಿ ಹರಡುತ್ತಿದ್ದು ಇದರ ತಡೆಗಟ್ಟುವಿಕೆಗಾಗಿ ಕಫ್ರ್ಯೂ ಅಗತ್ಯವಿದೆ ಎಂದಿದ್ದರು. ಆದರೆ ಆರೋಗ್ಯ ಸಚಿವ ಸುಧಾಕರ್ ರಾತ್ರಿ ಕರ್ಫ್ಯೂ ಮುಗಿದ ಅಧ್ಯಾಯ. ಇನ್ನೂ ಕರ್ಫ್ಯೂ ಜಾರಿ ಮಾಡಲಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಮಾಧ್ಯಮಗಳೊಂದಿಗೆ ಹೇಳಿಕೆ ಕೊಟ್ಟಿದ್ದರು. ಇದರಿಂದ ಇಬ್ಬರು ಸಚಿವರ ಹೇಳಿಕೆಯಲ್ಲಿ ಭಿನ್ನ ನಿಲುವು ಕಂಡುಬಂದಿತ್ತು.

    ಇದೀಗ ಈ ಹೇಳಿಕೆಯನ್ನು ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ. ನೈಟ್ ಕರ್ಫ್ಯೂ ಬಗ್ಗೆ ನಮ್ಮಲ್ಲಿ ದ್ವಂದ್ವಗಳಿಲ್ಲ. ಅಶೋಕ್ ಅವರು ಕರ್ಫ್ಯೂ ಮಾಡಿದ್ದರೆ ಚೆನ್ನಾಗಿತ್ತು ಎಂದು ಹೇಳಿದ್ದಾರೆ ಅಷ್ಟೇ ಎಂದಿದ್ದಾರೆ.

    ಬ್ರಿಟನ್‍ನಿಂದ ಬಂದ 30 ಜನಕ್ಕೆ ಪಾಸಿಟಿವ್ ಬಂದಿತ್ತು. ಇನ್ನೂ ಅವರ ಸಂಪರ್ಕದಲ್ಲಿದ್ದ 6 ಜನಕ್ಕೂ ಸೋಂಕು ತಗುಲಿದೆ. ಹಾಗೆ 7 ಜನರಿಗೆ ರೂಪಾಂತರ ವೈರಸ್ ಕಂಡುಬಂದಿದೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪತ್ತೆ ಆಗದಿರುವ 199 ಜನರಲ್ಲಿ 80 ಜನ ನಮ್ಮ ದೇಶದ ಪ್ರಜೆಗಳಲ್ಲ, ಅವರನ್ನು ಕೂಡ ಪತ್ತೆ ಹಚ್ಚಲು ಕ್ರಮ ತೆಗೆದುಕೊಂಡಿದ್ದೇವೆಂದು ತಿಳಿಸಿದರು.

    ಸುರಕ್ಷಿತವಾಗಿ ಹೊಸ ವರ್ಷವನ್ನು ಆಚರಣೆ ಮಾಡಿ. ಈ ಬಾರಿ ಕೊರೊನಾ ಕಾರಣದಿಂದ ಆಚರಣೆ ಮಾಡದಿದ್ದರೆ ತುಂಬಾ ಒಳ್ಳೆಯದು. ನಾನು ರಾಜ್ಯದ ಆರೋಗ್ಯ ಸಚಿವನಾಗಿ ಈ ಕಿವಿಮಾತು ಹೇಳುತ್ತಾ ಇದ್ದೇನೆ, ಗುಂಪು ಗುಂಪಾಗಿ ಸೇರಿ ಈ ಬಾರಿ ಆಚರಣೆ ಬೇಡ. ಮಾಡಲೇ ಬೇಕೆಂದಿದ್ದರೆ ನಿಮ್ಮ ನಿಮ್ಮ ಮನೆಗಳಲ್ಲೇ ಸರಳವಾಗಿ ಆಚರಿಸಿ ಎಂದು ರಾಜ್ಯದ ಜನರಲ್ಲಿ ಸಚಿವರು ವಿನಂತಿಸಿಕೊಂಡರು.

  • ಪಂಚಾಯತಿ ಚುನಾವಣೆ ಘೋಷಣೆ – ಸುಧಾಕರ್ ಅಸಮಾಧಾನ

    ಪಂಚಾಯತಿ ಚುನಾವಣೆ ಘೋಷಣೆ – ಸುಧಾಕರ್ ಅಸಮಾಧಾನ

    ಬೆಂಗಳೂರು: ಗ್ರಾಮ ಪಂಚಾಯತಿ ಚುನಾವಣೆ ಘೋಷಣೆ ಮಾಡಿದ ಚುನಾವಣೆ ಆಯೋಗ ನಿರ್ಧಾರಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್ ವಿರೋಧ ವ್ಯಕ್ತಪಡಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಸುಧಾಕರ್ ಅವರು ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಿ ಅಂತ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದೆ. ಆದರೆ ಚುನಾವಣಾ ಆಯೋಗ ಇದನ್ನು ಪರಿಗಣಿಸಲಿಲ್ಲ. ಕೋರ್ಟ್‍ಗೂ ಮನವಿ ಮಾಡಿದರೂ ಈ ಬಗ್ಗೆ ಅರ್ಥ ಮಾಡಿಕೊಳ್ಳಲಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

    ಕೋರ್ಟ್ ಗಳಲ್ಲಿ ಏನೇನ್ ಆಗುತ್ತಿದೆ ಎನ್ನುವ ಮಾಹಿತಿ ಇದೆ. ಪಂಚಾಯತಿ ಚುನಾವಣೆ ನಡೆಸಿದರೆ ಮನೆ ಮನೆಗೆ ವೈರಸ್ ಹರಡಿಸಿದಂತೆ ಆಗುತ್ತದೆ ಎಂದು ತಜ್ಞರು ಹೇಳಿದ್ದರು. ಹೀಗಾಗಿ ಚುನಾವಣೆ ನಡೆಸಬಾರದು ಎಂಬ ನಮ್ಮ ಸಲಹೆಯನ್ನು ಆಯೋಗ, ಕೋರ್ಟ್ ಪರಿಗಣಿಸಲಿಲ್ಲ. ಮಾರ್ಚ್ ವರೆಗೆ ಚುನಾವಣೆ ಮುಂದೂಡಬಹುದಿತ್ತು. ಆದರೆ ಈಗ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಈಗ ಅನಿವಾರ್ಯವಾಗಿ ಚುನಾವಣೆ ಮಾಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.