Tag: dr. soundarya

  • ಸೌಂದರ್ಯ ಆತ್ಮಹತ್ಯೆ ಕೇಸ್ ಇನ್ನೂ ನಿಗೂಢ- ಮನೆಕೆಲಸದವರಿಂದಲೂ ಹೇಳಿಕೆ ದಾಖಲು

    ಸೌಂದರ್ಯ ಆತ್ಮಹತ್ಯೆ ಕೇಸ್ ಇನ್ನೂ ನಿಗೂಢ- ಮನೆಕೆಲಸದವರಿಂದಲೂ ಹೇಳಿಕೆ ದಾಖಲು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ಆತ್ಮಹತ್ಯೆಗೆ ಕಾರಣ ಇನ್ನೂ ನಿಗೂಢವಾಗಿದ್ದು, ಪೊಲೀಸತು ತನಿಖೆ ಮುಂದುವರಿಸಿದ್ದಾರೆ.

    ನಿನ್ನೆ ಸೌಂದರ್ಯ ಪತಿ ಡಾ. ನೀರಜ್ ಅವರನ್ನು ಪೊಲೀಸರು ವಿಚಾರಣೆಗೆ ಒಳಡಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದರು. ಇದಾದ ಬಳಿಕ ಮನೆ ಕೆಲಸದವರ ಹೇಳಿಕೆಯನ್ನು ಕೂಡ ಪೊಲೀಸರು ಪಡೆದುಕೊಂಡಿದ್ದಾರೆ.

    ಮನೆ ಕೆಲಸದವರು ಹೇಳಿದ್ದೇನು..?
    ಮನೆ ಕೆಲಸದ ವಿಚಾರವಾಗಿ ಮೇಡಂ ಬಳಿ ಕೇಳೋಕೆ ಹೋದೆ. ರೂಂ ಲಾಕ್ ಆಗಿತ್ತು. ಸಾಕಷ್ಟು ಬಾರಿ ಕರೆದ್ರೂ ಮೇಡಂ ಮಾತನಾಡಿಲ್ಲ. ಡೋರ್ ಓಪನ್ ಕೂಡ ಮಾಡುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಆತಂಕವಾಯ್ತು. ಸರ್ ಬೇರೆ ಡ್ಯೂಟಿಗೆ ಹೋಗಿದ್ರು. ಕೂಡಲೇ ಸರ್ ಗ  ಕಾಲ್ ಮಾಡಿ, ಮೇಡಂ ಮಾತಾಡ್ತಿಲ್ಲ. ಡೋರ್ ಕೂಡ ಓಪನ್ ಮಾಡ್ತಿಲ್ಲ ಅಂತ ಹೇಳ್ದೆ. ಕೂಡಲೇ ಸರ್ ಬಂದು ನೋಡಿ ಕರೆದ್ರು ಪ್ರತಿಕ್ರಿಯೆ ಬರ್ಲಿಲ್ಲ. ಆಮೇಲೆ ಹೊರಗಿಂದ ನೋಡಿದಾಗ ಹ್ಯಾಂಗ್ ಮಾಡಿಕೊಂಡಿರೋ ವಿಚಾರ ಗೊತ್ತಾಯ್ತು. ಇದನ್ನೂ ಓದಿ: EXCLUSIVE: ಪೊಲೀಸರ ಮುಂದೆ ಡಾ. ಸೌಂದರ್ಯ ಪತಿ ಡಾ. ನೀರಜ್ ಹೇಳಿದ್ದೇನು..?

    ಮನೆ ಸರ್ಚ್ ಮಾಡಿದ್ರೂ ಸಿಕ್ಕಿಲ್ಲ ಯಾವುದೇ ಸಾಕ್ಷ್ಯ..!
    ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ನಿನ್ನೆ ಸೌಂದರ್ಯ ಪತಿ ಸಮ್ಮುಖದಲ್ಲಿ ಸತತ 2.30 ಗಂಟೆಗಳ ಕಾಲ ಸ್ಥಳ ಮಹಜರು ಮಾಡಿದ್ದಾರೆ. ಇಡೀ ಮನೆ ಹುಡುಕಾಡಿದ್ರೂ ಯಾವುದೇ ಡೆತ್‍ನೋಟ್ ಸಿಕ್ಕಿಲ್ಲ. ಆ ರೂಮ್‍ನಲ್ಲಿ ಕೂಡ ಯಾವುದೇ ಅನುಮಾನದ ವಸ್ತು ದೊರಕಿಲ್ಲ. ಡೆತ್‍ನೋಟ್ ಸಿಕ್ಕಿದ್ರೆ ಸಾವಿಗೆ ಅಸಲಿ ಕಾರಣವಾದರೂ ತಿಳಿಯುತ್ತಿತ್ತು. ಸಾಂದರ್ಭಿಕ ಸಾಕ್ಷ್ಯಗಳು ಖಿನ್ನತೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳುತ್ತಿದ್ದು, ಪೊಲೀಸರು ಕೂಡ ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ.

    ಬಿಎಸ್‍ವೈ ಮೊಮ್ಮಗಳು ಸೌಂದರ್ಯ ಅವರು ರಾಮಯ್ಯ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ಅವರ ಪತಿ ಡಾ. ನಿರಂಜನ್ ಕೂಡ ಅದೇ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ದಂಪತಿಗೆ 9 ತಿಂಗಳ ಗಂಡು ಮಗು ಇದೆ. ರಾಮಯ್ಯದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಬೌರಿಂಗ್‍ನಲ್ಲೇ ಸರ್ಜನ್ ಆಗಿದ್ದ ಸೌಂದರ್ಯ ಅವರು ಮಗುವಾದ ನಂತರ ಕೆಲಸ ಬಿಟ್ಟಿದ್ದರು. ನಂತರ ಡಿಪ್ರೆಷನ್‍ಗೆ ಒಳಗಾಗಿದ್ದರು. ಕಳೆದ ಮೂರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

    ಸೌಂದರ್ಯ ಹಾಗೂ ಪತಿ ಡಾ. ನಿರಂಜನ್ ಅವರು ಧವಳಗಿರಿ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ದರು. ಆದರೆ ಶುಕ್ರವಾರ ಡಾಲರ್ಸ್ ಕಾಲೋನಿಯ ಲೆಗೆಸ್ಸಿ ಅಪಾರ್ಟ್ ಮೆಂಟ್ ಫ್ಲ್ಯಾಟ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ 11 ಗಂಟೆಯ ಸುಮಾರಿಗೆ ಮಗುವನ್ನು ಪಕ್ಕದ ರೂಮ್‍ನಲ್ಲಿ ಮಲಗಿಸಿ ತಾನು ಬೇರೊಂದು ರೂಮ್‍ನಲ್ಲಿ ಸೌಂದರ್ಯ ಸೂಸೈಡ್ ಮಾಡಿಕೊಂಡಿದ್ದಾರೆ. ಸಂಜೆ ಅಬ್ಬಿಗೆರೆ ಫಾರಂ ಹೌಸ್‍ನಲ್ಲಿ ಲಿಂಗಾಯತ ಸಂಪ್ರದಾಯದಂತೆ ಸೌಂದರ್ಯ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದರು.

  • EXCLUSIVE: ಪೊಲೀಸರ ಮುಂದೆ ಡಾ. ಸೌಂದರ್ಯ ಪತಿ ಡಾ. ನೀರಜ್ ಹೇಳಿದ್ದೇನು..?

    EXCLUSIVE: ಪೊಲೀಸರ ಮುಂದೆ ಡಾ. ಸೌಂದರ್ಯ ಪತಿ ಡಾ. ನೀರಜ್ ಹೇಳಿದ್ದೇನು..?

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೊಮ್ಮಗಳು ಡಾ. ಸೌಂದರ್ಯ ಆತ್ಮಹತ್ಯೆಗೆ ಕಾರಣ ನಿಗೂಢವಾಗಿದ್ದು, ಇದೀ ಪತಿ ಡಾ. ನೀರಜ್ ಅವರಿಂದ ಪೊಲೀಸರು ಹೇಳಿಕೆಯನ್ನು ಪಡೆದಿದ್ದಾರೆ.

    ಸೌಂದರ್ಯ ನಿನ್ನೆ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಪತಿ ನೀರಜ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನೀರಜ್ ಅವರು ಪೊಲೀಸರ ಮುಂದೆ ನೀಡಿರುವ ಹೇಳಿಕೆ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಕೋವಿಡ್ ಸಮಯದಲ್ಲಿ PPE ಕಿಟ್ ಧರಿಸಿ ಕೆಲಸ ಮಾಡಿದ್ದ ಸೌಂದರ್ಯ..!

    ಸೌಂದರ್ಯ ಪತಿ ಹೇಳಿದ್ದೇನು..?
    ನನ್ನ, ನನ್ನ ಹೆಂಡತಿ ಸೌಂದರ್ಯ ನಡುವೆ ಯಾವುದೇ ಗಲಾಟೆ ಇರಲಿಲ್ಲ. ನಾವಿಬ್ಬರೂ ತುಂಬಾ ಅನ್ಯೋನ್ಯವಾಗಿದ್ದೆವು. ಸೌಂದರ್ಯಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ. ಸಾಕಷ್ಟು ವರ್ಷಗಳಿಂದ ಸೌಂದರ್ಯ ಕುಟುಂಬ ಹಾಗೂ ನಮ್ಮ ಕುಟುಂಬ ಪರಿಚಯ ಇತ್ತು. ನನ್ನ ದೊಡ್ಡಪ್ಪನ ಮೂಲಕ ಸೌಂದರ್ಯ ಕುಟುಂಬ ಆತ್ಮೀಯವಾಗಿತ್ತು. ಮದುವೆಗೂ ಮುನ್ನವೇ ನನಗೆ ಸೌಂದರ್ಯ ಪರಿಚಯ ಇತ್ತು. ಇಬ್ಬರು ಕೂಡ ಒಳ್ಳೆಯ ಸ್ನೇಹಿತರಾಗಿದ್ದೆವು. ಇದನ್ನೂ ಓದಿ: ಟೀ ಕುಡಿಯಲು ಬರ್ತಿದ್ದರು, ಬಿಎಸ್‍ವೈ ಮೊಮ್ಮಗಳು ಅಂತ ಗೊತ್ತಿರ್ಲಿಲ್ಲ- ಸೌಂದರ್ಯ ಸಾವಿಗೆ ಸ್ಟಾಲ್ ಯುವಕ ಬೇಸರ

    ಮನೆಯವರ ಒಪ್ಪಿಗೆ ಮೇರೆಗೆ 2018ರಲ್ಲಿ ಮದುವೆ ಆಗಿತ್ತು. ಹೆಚ್ಚಿನ ಸಂದರ್ಭದಲ್ಲಿ ಸೌಂದರ್ಯ ತಾಯಿಯ ಮನೆಯಲ್ಲಿ ಇರುತ್ತಿದ್ದಳು. ಬಳಿಕ ಆಕೆ ಬೌರಿಂಗ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದಳು. ನಾನು ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾ ಇದ್ದೆ. ಇಬ್ಬರಿಗೂ ಹತ್ತಿರವಾಗಲಿ ಅಂತ ಮೌಂಟ್ ಕಾರ್ಮೆಲ್ ಬಳಿ ಮನೆ ಮಾಡಿಕೊಂಡೆವು. ಸೌಂದರ್ಯ ಆಸೆಯಂತೆ ಕಳೆದ ತಿಂಗಳು ಕಿಯಾ ಕಾರನ್ನೂ ಪ್ರೆಸೆಂಟ್ ಮಾಡಿದ್ದೆ. ಕಳೆದ ತಿಂಗಳು ನಾನು ದುಬೈಗೆ ಹೋದಾಗಲೂ ಸಂತೋಷವಾಗಿದ್ದಳು. ಮನೆಯಲ್ಲಿ ಜಗಳ ಯಾವುದೂ ನಡೆದಿರಲಿಲ್ಲ. ಆದರೆ ನಾನು ಆಸ್ಪತ್ರೆಗೆ ಹೋದಾಗ ಈ ಘಟನೆ ನಡೆದಿದೆ. ಇದನ್ನೂ ಓದಿ: 15 ದಿನದ ಹಿಂದೆಯಷ್ಟೇ ಪತಿ ಜೊತೆಗೆ ಕಾಲೇಜಿಗೆ ತೆರಳಿ ಹಳೆ ಸ್ನೇಹಿತರನ್ನು ಮಾತಾಡಿಸಿದ್ದ ಸೌಂದರ್ಯ!

    ನನಗೆ ವಿಚಾರ ಗೊತ್ತಾದ ಬಳಿಕ ಮನೆಗೆ ಹೋದೆ. ಬಾಗಿಲು ತೆರೆಯದೇ ಇದ್ದಾಗ ಬಾಲ್ಕನಿ ಮೂಲಕ ಒಳಗೆ ಹೋಗಿ ಬಾಗಿಲು ತೆರೆದೆವು. ಈ ವೇಳೆ ಸೌಂದರ್ಯ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಳು. ಕೆಳಗೆ ಇಳಿಸಿದಾಗ ಬ್ರೀಥಿಂಗ್ ಇತ್ತು. ನಾನು ಬದುಕಿಸೋ ಪ್ರಯತ್ನ ಮಾಡಿದೆ. ಕೊನೆಗೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷೆ ಮಾಡಿದರು. ಐಸಿಯೂ ಅಲ್ಲಿ ಪ್ರಯತ್ನ ಮಾಡಿದ್ರು. ಆದರೆ ಅಷ್ಟರಲ್ಲಿ ಸೌಂದರ್ಯ ಪ್ರಾಣ ಹೋಗಿದೆ ಅನ್ನೋದು ತಿಳಿಸಿದ್ರು ಅಂತ ಪೊಲೀಸರ ಮುಂದೆ ನೀರಜ್ ಉಲ್ಲೇಖಿಸಿದ್ದಾರೆ.

    ಬೆಂಗಳೂರಿನ ವಸಂತನಗರದಲ್ಲಿರುವ ಅಪಾರ್ಟ್‍ಮೆಂಟ್‍ನ ಫ್ಲಾಟ್‍ನಲ್ಲಿ ಬಿಎಸ್‍ವೈ ಅವರ ಮೊಮ್ಮಗಳು ಸೌಂದರ್ಯ (30) ಆತ್ಮಹತ್ಯೆ ಮಾಡಿಕೊಂಡಿದ್ದರು. ವೃತ್ತಿಯಲ್ಲಿ ವೈದ್ಯರಾಗಿದ್ದ, ಸೌಂದರ್ಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತಿ ಡಾಕ್ಟರ್ ನೀರಜ್ ಆಸ್ಪತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಸೌಂದರ್ಯ ನೇಣು ಬಿಗಿದುಕೊಂಡಿದ್ದರು. 9 ತಿಂಗಳ ಗಂಡು ಮಗುವನ್ನು ಬೇರೊಂದು ಕೊಠಡಿಯಲ್ಲಿ ಮಲಗಿಸಿ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂಜೆ ಅಬ್ಬಿಗೆರೆ ಫಾರ್ಮ್ ಹೌಸ್‍ನಲ್ಲಿ ಲಿಂಗಾಯತ ಸಂಪ್ರದಾಯದಂತೆ ಸೌಂದರ್ಯ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದರು.

  • ಕೋವಿಡ್ ಸಮಯದಲ್ಲಿ PPE ಕಿಟ್ ಧರಿಸಿ ಕೆಲಸ ಮಾಡಿದ್ದ ಸೌಂದರ್ಯ..!

    ಕೋವಿಡ್ ಸಮಯದಲ್ಲಿ PPE ಕಿಟ್ ಧರಿಸಿ ಕೆಲಸ ಮಾಡಿದ್ದ ಸೌಂದರ್ಯ..!

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೊಮ್ಮಗಳು ಡಾ. ಸೌಂದರ್ಯ ಆತ್ಮಹತ್ಯೆ ಪ್ರಕರಣ ಶಾಕ್ ನೀಡಿದೆ. ವೃತ್ತಿಯಲ್ಲಿ ವೈದ್ಯರಾಗಿದ್ದ ಸೌಂದರ್ಯ ಅವರು ಕೋವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್ ಧರಿಸಿಕೊಂಡು ಕೆಲಸ ನಿರ್ವಹಿಸಿದ್ದರು.

    ಬೌರಿಂಗ್ ಆಸ್ಪತ್ರೆಯಲ್ಲಿ ಸೌಂದರ್ಯ ಸರ್ಜನ್ ಆಗಿದ್ದರು. ಸುಮಾರು 6 ತಿಂಗಳ ಕಾಲ ಸರ್ಜನ್ ಆಗಿ ಕೆಲಸ ಮಾಡಿದ್ದ ಸೌಂದರ್ಯ ನಂತರ ವೈಯಕ್ತಿಕ ಕಾರಣಗಳಿಂದ ಕೆಲಸದಿಂದ ಬಿಡುವು ಪಡೆದುಕೊಂಡಿದ್ದರು. ಕಳೆದ ನವೆಂಬರ್ ನಲ್ಲಿ ಸೌಂದರ್ಯ ಕೆಲಸ ಬಿಟ್ಟಿದ್ದರು. ಇದೀಗ ಸೌಂದರ್ಯ ಜೊತೆ ಕೆಲಸ ಮಾಡಿದ್ದ ಬೌರಿಂಗ್ ಆಸ್ಪತ್ರೆಯ ಸಹದ್ಯೋಗಿಗಳು ಕಣ್ಣೀರಾಕುತ್ತಿದ್ದಾರೆ. ಇದನ್ನೂ ಓದಿ: ಟೀ ಕುಡಿಯಲು ಬರ್ತಿದ್ದರು, ಬಿಎಸ್‍ವೈ ಮೊಮ್ಮಗಳು ಅಂತ ಗೊತ್ತಿರ್ಲಿಲ್ಲ- ಸೌಂದರ್ಯ ಸಾವಿಗೆ ಸ್ಟಾಲ್ ಯುವಕ ಬೇಸರ

    ಇತ್ತ ಆಸ್ಪತ್ರೆ ಆವರಣದಲ್ಲಿರುವ ಟೀ ಸ್ಟಾಲ್ ಯುವಕ ಚಂದನ್ ಕೂಡ ಸೌಂದರ್ಯ ಸಾವಿಗೆ ಕಂಬನಿ ಮಿಡಿದಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯುವಕ ಚಂದನ್, ಸೌಂದರ್ಯ ಅವರು ತುಂಬಾ ಅನೊನ್ಯವಾಗಿದ್ದರು. ತಮ್ಮ ಸ್ನೇಹಿತರ ಜೊತೆ ಆಗಾಗ ಟೀ ಸ್ಟಾಲ್ ಗೆ ಬರುತ್ತಿದ್ದರು. ಆದರೆ ಅವರು ಬಿಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಅಂತ ಗೊತ್ತಿರಲಿಲ್ಲ. ಇದೀಗ ಆತ್ಮಹತ್ಯೆ ವಿಷಯ ತಿಳಿದ ಕೂಡಲೇ ನಮ್ಮ ಅಕ್ಕನೇ ಹೋದ್ರು ಅನ್ನೋ ತರ ಶಾಕ್ ಆಯ್ತು ಎಂದು ಕಣ್ಣೀರು ಹಾಕಿದರು. ಒಟ್ಟಿನಲ್ಲಿ ಸೌಂದರ್ಯನನ್ನು ಕಳೆದುಕೊಂಡ ಬೌರಿಂಗ್ ಆಸ್ಪತ್ರೆಯ ಸಿಬ್ಬಂದಿ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

  • ಟೀ ಕುಡಿಯಲು ಬರ್ತಿದ್ದರು, ಬಿಎಸ್‍ವೈ ಮೊಮ್ಮಗಳು ಅಂತ ಗೊತ್ತಿರ್ಲಿಲ್ಲ- ಸೌಂದರ್ಯ ಸಾವಿಗೆ ಸ್ಟಾಲ್ ಯುವಕ ಬೇಸರ

    ಟೀ ಕುಡಿಯಲು ಬರ್ತಿದ್ದರು, ಬಿಎಸ್‍ವೈ ಮೊಮ್ಮಗಳು ಅಂತ ಗೊತ್ತಿರ್ಲಿಲ್ಲ- ಸೌಂದರ್ಯ ಸಾವಿಗೆ ಸ್ಟಾಲ್ ಯುವಕ ಬೇಸರ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ಆತ್ಮಹತ್ಯೆ ವಿಚಾರ ತೀವ್ರ ಆಘಾತವನ್ನುಂಟುಮಾಡಿದೆ. ಇದೀಗ ಬಾರಿಂಗ್ ಆಸ್ಪತ್ರೆ ಆವರಣದಲ್ಲಿದ್ದ ಟೀ ಸ್ಟಾಲ್ ಯುವಕ ಕೂಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯುವಕ ಚಂದನ್, ಸೌಂದರ್ಯ ಅವರು ತುಂಬಾ ಅನೊನ್ಯವಾಗಿದ್ದರು. ತಮ್ಮ ಸ್ನೇಹಿತರ ಜೊತೆ ಆಗಾಗ ಟೀ ಸ್ಟಾಲ್ ಗೆ ಬರುತ್ತಿದ್ದರು. ಆದರೆ ಅವರು ಬಿಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಅಂತ ಗೊತ್ತಿರಲಿಲ್ಲ. ಇದೀಗ ಆತ್ಮಹತ್ಯೆ ವಿಷಯ ತಿಳಿದ ಕೂಡಲೇ ನಮ್ಮ ಅಕ್ಕನೇ ಹೋದ್ರು ಅನ್ನೋ ತರ ಶಾಕ್ ಆಯ್ತು ಎಂದು ಕಣ್ಣೀರು ಹಾಕಿದರು. ಒಟ್ಟಿನಲ್ಲಿ ಸೌಂದರ್ಯನನ್ನು ಕಳೆದುಕೊಂಡ ಬೌರಿಂಗ್ ಆಸ್ಪತ್ರೆಯ ಸಿಬ್ಬಂದಿ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ವಿಭಿನ್ನವಾಗಿ ಪ್ರೆಗ್ನೆಸ್ಸಿ ಫೋಟೋಶೂಟ್ ಮಾಡಿಸಿಕೊಂಡ ನಟಿ ದಿಶಾ..!

    ಸೌಂದರ್ಯ ಹಾಗೂ ಪತಿ ಡಾ. ನಿರಂಜನ್ ಅವರು ಧವಳಗಿರಿ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ದರು. ಆದರೆ ಶುಕ್ರವಾರ ಡಾಲರ್ಸ್ ಕಾಲೋನಿಯ ಲೆಗೆಸ್ಸಿ ಅಪಾರ್ಟ್ ಮೆಂಟ್‍ ಫ್ಲಾಟ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ 11 ಗಮಟೆಯ ಸುಮಾರಿಗೆ ಮಗುವನ್ನು ಪಕ್ಕದ ರೂಮ್‍ನಲ್ಲಿ ಮಲಗಿಸಿ ತಾನು ಬೇರೊಂದು ರೂಮ್‍ನಲ್ಲಿ ಸೌಂದರ್ಯ ಸೂಸೈಡ್ ಮಾಡಿಕೊಂಡಿದ್ದಾರೆ.

    ಬಿಎಸ್‍ವೈ ಮೊಮ್ಮಗಳು ಸೌಂದರ್ಯ ಅವರು ರಾಮಯ್ಯ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ಅವರ ಪತಿ ಡಾ. ನಿರಂಜನ್ ಕೂಡ ಅದೇ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ದಂಪತಿಗೆ 9 ತಿಂಗಳ ಗಂಡು ಮಗು ಇದೆ. ರಾಮಯ್ಯದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಬೌರಿಂಗ್‍ನಲ್ಲೇ ಸರ್ಜನ್ ಆಗಿದ್ದ ಸೌಂದರ್ಯ ಅವರು ಮಗುವಾದ ನಂತರ ಕೆಲಸ ಬಿಟ್ಟಿದ್ದರು. ನಂತರ ಡಿಪ್ರೆಷನ್‍ಗೆ ಒಳಗಾಗಿದ್ದರು. ಕಳೆದ ಮೂರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.