Tag: Dr. shri. Shivakumara Swamiji

  • ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ಕೊಡಿ ಅಂತಾ ಪತ್ರ ಬರೆದಿದ್ದೆವು: ಸಿದ್ದರಾಮಯ್ಯ

    ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ಕೊಡಿ ಅಂತಾ ಪತ್ರ ಬರೆದಿದ್ದೆವು: ಸಿದ್ದರಾಮಯ್ಯ

    – ಎಲ್‌.ಕೆ.ಅಡ್ವಾಣಿಗೆ ಭಾರತ ರತ್ನ ಕೊಡಲಿ ಬಿಡಿ ಪಾಪ, ಬೇಡ ಎಂದವರ‍್ಯಾರು?

    ದಾವಣಗೆರೆ: ಎಲ್‌.ಕೆ.ಅಡ್ವಾಣಿ (L.K.Advani) ಅವರಿಗೆ ‘ಭಾರತ ರತ್ನ’ (Bharat Ratna) ಕೊಡಲಿ ಬಿಡಿ, ಪಾಪ ಬೇಡ ಎಂದವರು ಯಾರು? ನಾವು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ (Shivakumara Swamiji) ಅವರಿಗೆ ಭಾರತ ರತ್ನ ಕೊಡಿ ಎಂದು ಪತ್ರ ಬರೆದಿದ್ದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದರು.

    ದಾವಣಗೆರೆಯಲ್ಲಿ ನಡೆಯುತ್ತಿರುವ 38ನೇ ಪತ್ರಕರ್ತರ ಸಮ್ಮೇಳನದಲ್ಲಿ ಸಿಎಂ ಭಾಗಿಯಾಗಿದ್ದಾರೆ. ಇದಕ್ಕೂ ಮುನ್ನ, ಈಶ್ವರಾನಂದಪುರಿ ಸ್ವಾಮೀಜಿಗೆ ಗರ್ಭಗುಡಿ ಪ್ರವೇಶ ನಿಷೇಧ ಕುರಿತು ಮಾತನಾಡಿದ ಅವರು, ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ನನಗೆ ಗೊತ್ತಿಲ್ಲದಿರುವುದನ್ನ ಹೇಗೆ ಹೇಳಲಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಎಲ್‌ಕೆ ಅಡ್ವಾಣಿಗೆ ಭಾರತ ರತ್ನ : ನರೇಂದ್ರ ಮೋದಿ ಘೋಷಣೆ

    ನಗರೋತ್ಥಾನದಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಗುತ್ತೆದಾರರು ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರು ಯಾರೇ ಬಂದು ದೂರು ನೀಡಿದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

    ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಹೆಬ್ಬಾಳ್ಕರ್ ಪುತ್ರನಿಗೆ ಟಿಕೆಟ್ ಕೇಳಿರೋ ವಿಚಾರವಾಗಿ ಮಾತನಾಡಿ, ಅವರು ಕೇಳಲಿ ಬಿಡಿ. ಅವರು ಆಕಾಂಕ್ಷಿ. ಕಾಂಗ್ರೆಸ್‌ನಲ್ಲಿ ಟಿಕೆಟ್ ಕೇಳುವವರ ಸಂಖ್ಯೆ ಹೆಚ್ಚಾಗಿದೆ. ಲೋಕಸಭಾ ಚುನಾವಣೆ ಕುರಿತಂತೆ ಯಾರು ಗೆಲ್ತಾರೆ ಅಂತಾ ಸರ್ವೇ ಇನ್ನೂ ಆಗ್ತಾ ಇದೆ. ಕಾಂಗ್ರೆಸ್ ಎಲ್ಲ ಮುಖಂಡರ ಅಭಿಪ್ರಾಯ ಪಡೆದು ಟಿಕೆಟ್ ಯಾರಿಗೆ ನೀಡಬೇಕು ಅಂತಾ ನಿರ್ಧಾರ ಮಾಡ್ತೀವಿ ಎಂದು ಹೇಳಿದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದಲ್ಲಿ ರಾಜರಾಮ ‘ದರ್ಬಾರ್’ ಈ ವರ್ಷದ ಅಂತ್ಯದಲ್ಲಿ ಪೂರ್ಣ

  • ಇಂದು ಸಿದ್ದಗಂಗಾ ಶ್ರೀಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್- ನಡೆದಾಡೋ ದೇವರ ದರ್ಶನಕ್ಕೆ ಕಾದು ಕುಳಿತ ಭಕ್ತರು

    ಇಂದು ಸಿದ್ದಗಂಗಾ ಶ್ರೀಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್- ನಡೆದಾಡೋ ದೇವರ ದರ್ಶನಕ್ಕೆ ಕಾದು ಕುಳಿತ ಭಕ್ತರು

    ಬೆಂಗಳೂರು/ತುಮಕೂರು: ಸಿದ್ದಗಂಗಾ ಶ್ರೀಗಳು ಬಿಜಿಎಸ್ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು ಇಂದು ಡಿಸ್ಚಾರ್ಜ್ ಆಗಲಿದ್ದಾರೆ.

    ಇತ್ತ ಸಿದ್ದಗಂಗಾ ಮಠದಲ್ಲಿ ಭಕ್ತ ಸಮೂಹ ಶ್ರೀಗಳ ದರ್ಶನಕ್ಕಾಗಿ ಕಾದು ಕುಳಿತಿದೆ. ಬೇರೆ ಬೇರೆ ಜಿಲ್ಲೆಗಳಿಂದ ಗುರುವಾರ ರಾತ್ರಿಯೇ ಬಂದು ತಂಗಿದ ಭಕ್ತರು ನಡೆದಾಡುವ ದೇವರ ಬರುವಿಕೆಗಾಗಿ ಕಾದು ಕುಳಿತಿದ್ದಾರೆ. ಅಲ್ಲದೆ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಆಗಲಿ ಎಂದು ಹೇಳಿ ಗದ್ದುಗೆಗೆ ನಮಸ್ಕರಿಸಿ ಬೇಡಿಕೊಳ್ಳುತ್ತಿದ್ದಾರೆ.

    ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಬುಧವಾರ ಸಂಜೆ ವೇಳೆಗೆ ಶ್ರೀಗಳಿಗೆ ಜ್ವರ ಹಾಗೂ ಕಫ ಕಾಣಿಸಿಕೊಂಡಿತ್ತು. ತಕ್ಷಣ ಸಿದ್ದಗಂಗಾ ಡಯಾಗ್ನಾಸ್ಟಿಕ್‍ನಲ್ಲಿ ಶ್ರೀಗಳಿಗೆ ರಕ್ತ ಪರೀಕ್ಷೆ ನಡೆಸಿ ಚಿಕಿತ್ಸೆ ಕೊಡಿಸಲಾಗಿತ್ತು.

    ಇದೀಗ ಶ್ರೀಗಳು ಚೇತರಿಸಿಕೊಂಡಿದ್ದು, ಇಂದು ಡಿಸ್ಚಾರ್ಜ್ ಆಗಿ ಮಠಕ್ಕೆ ಹಿಂದಿರುಗಲಿದ್ದಾರೆ.

  • ಸಿದ್ದಗಂಗಾ ಶ್ರೀಗಳ ಆರೋಗ್ಯ ಸುಧಾರಣೆ – ಮಠ ತಲುಪಿದ ಸ್ವಾಮೀಜಿಗಳು

    ಸಿದ್ದಗಂಗಾ ಶ್ರೀಗಳ ಆರೋಗ್ಯ ಸುಧಾರಣೆ – ಮಠ ತಲುಪಿದ ಸ್ವಾಮೀಜಿಗಳು

    ತುಮಕೂರು: ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಿವಕುಮಾರ ಸ್ವಾಮೀಜಿಗಳು ಮಧ್ಯಾಹ್ನ 1.40 ಕ್ಕೆ ಮಠ ತಲುಪಿದ್ದಾರೆ.

    ಮಠಕ್ಕೆ ಆಗಮಿಸಿದ ಶ್ರೀಗಳನ್ನು ಹಳೆ ಮಠದ ಪ್ರವೇಶ ದ್ವಾರದಿಂದ ವ್ಹೀಲ್ ಚೇರ್ ಮೂಲಕ ಕೋಣೆಗೆ ಕರೆದೊಯ್ಯಲಾಯಿತು. ಶ್ರೀಗಳು ಗುಣಮುಖರಾಗಿ ಮಠಕ್ಕೆ ಮರಳುತ್ತಿರುವ ಸಂಗತಿ ತಿಳಿದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ರು. ಕಾರಿನಿಂದ ಇಳಿಯುತ್ತಿದ್ದಂತೆ ನಡೆದಾಡುವ ದೇವರನ್ನು ಕಂಡು ಭಕ್ತ ಸಮೂಹ ಕಣ್ಣುತುಂಬಿಕೊಂಡರು.

    ತಮ್ಮ ಆಶೀರ್ವಾದ ಪಡೆಯಲು ಕಾದು ಕುಳಿತ ಭಕ್ತರಿಗೆ ಶ್ರೀಗಳು ನಿರಾಸೆ ಮಾಡಲಿಲ್ಲ. ಹಳೇ ಮಠದಲ್ಲೇ ಭಕ್ತಾದಿಗಳ ದರ್ಶನಕ್ಕೆ ಅನುವು ಮಾಡಿಕೊಡುವಂತೆ ಆಡಳಿತ ಮಂಡಳಿಗೆ ಹೇಳಿದ್ರು. ಅದರಂತೆ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ಶ್ರೀಗಳ ಆಶೀರ್ವಾದ ಪಡೆದು ಪುನೀತರಾದರು.

    ಪಿತ್ತನಾಳದಲ್ಲಿ ಸೋಂಕು ತಗುಲಿದ್ದ ಪರಿಣಾಮ ಶುಕ್ರವಾರ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಎಂಡೋಸ್ಕೋಪಿ ಮೂಲಕ ಸ್ಟಂಟ್ ಬದಲಾವಣೆ ಮಾಡಲಾಗಿತ್ತು. ಶೀಘ್ರವೇ ಚೇತರಿಸಿಕೊಂಡ ಶ್ರೀಗಳನ್ನು ಇವತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

    ಶ್ರೀಗಳ ಡಿಸ್ಚಾರ್ಜ್ ಬಳಿಕ ಮಾತನಾಡಿದ ಬಿಜಿಎಸ್ ಆಸ್ಪತ್ರೆ ವೈದ್ಯರಾದ ಡಾ. ರವೀಂದ್ರ, ಶ್ರೀಗಳ ಚೇತರಿಕೆ ನಿಜಕ್ಕೂ ಮ್ಯಾಜಿಕ್ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶುಕ್ರವಾರ 10 ಗಂಟೆಗೆ ಶ್ರೀಗಳು ಆಸ್ಪತ್ರೆಗೆ ಬಂದಿದ್ರು. ನಿನ್ನೆ ನೀಡಿರುವ ಚಿಕಿತ್ಸೆ ಕ್ಲಿಷ್ಟಕರವಾಗಿದ್ರೂ ಅವರು ಶೀಘ್ರವೇ ಚೇತರಿಸಿಕೊಂಡ್ರು. ನಿನ್ನೆ ರಾತ್ರಿ ನಮಗೆ ಹಿತವಚನ ನೀಡಿದ್ರು. ಯಾವುದೇ ವ್ಯಕ್ತಿಗೆ ಇಂಥ ಚಿಕಿತ್ಸೆ ಮಾಡಿದ್ರೆ ಕ್ಯೂರ್ ಆಗೋದು ಕಡಿಮೆ. ಆದ್ರೆ ಶ್ರೀಗಳು ನಿರೀಕ್ಷೆಗೂ ಮೀರಿ ಗುಣಮುಖರಾಗಿದ್ದಾರೆ. ಇದು ವೈದ್ಯಲೋಕಕ್ಕೆ ಅಚ್ಚರಿ ಅಂದ್ರು.

  • ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಲ್ಲೇ ಬೆಳಗ್ಗೆ ದೇವರ ಪೂಜೆ, ಇಂದು ಡಿಸ್ಚಾರ್ಜ್ ಸಾಧ್ಯತೆ

    ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಲ್ಲೇ ಬೆಳಗ್ಗೆ ದೇವರ ಪೂಜೆ, ಇಂದು ಡಿಸ್ಚಾರ್ಜ್ ಸಾಧ್ಯತೆ

    ಬೆಂಗಳೂರು: ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆಯಾಗಿದೆ.

    ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಶ್ರೀಗಳು ಶುಕ್ರವಾರ ರಾತ್ರಿ ಗಂಜಿ, ಅನ್ನ, ತಿಳಿ ಸಾರು ಮತ್ತು ಫಲಾಹಾರ ಸೇವಿಸಿದ್ದಾರೆ. ವೈದ್ಯರ ಸಲಹೆಯಂತೆ ಸ್ವಾಮೀಜಿಗಳು ವಿಶ್ರಾಂತಿ ಪಡೆಯುತ್ತಿದ್ದಾರೆ.

    ಶ್ರೀಗಳ ಲಿಂಗ ಪೂಜೆಗೆ ಪೂಜಾಸಾಮಗ್ರಿಗಳ ಮಠದಿಂದ ತರಿಸಲಾಗಿದೆ. ಶ್ರೀಗಳಿಗೆ ಮಠದಿಂದಲೇ ಪ್ರಸಾದವನ್ನ ಶಿಷ್ಯವೃಂದ ತಂದಿದ್ದಾರೆ. ಬೆಳಗ್ಗೆ 7:30ರ ಸುಮಾರಿಗೆ ಶ್ರೀಗಳು ಆಸ್ಪತ್ರೆಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ. ಇಂದು ಮತ್ತೊಂದು ಸುತ್ತಿನ ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ ನಡೆಯಲಿದೆ. ಮಠಕ್ಕೆ ಕರೆದುಕೊಂಡು ಹೋಗಿ ಅಲ್ಲೇ ಚಿಕಿತ್ಸೆ ಮುಂದುವರೆಸಿ ಅಂತಾ ಈಗಾಗಲೇ ಶ್ರೀಗಳು ಹೇಳಿರೋದ್ರಿಂದ ಇಂದು ಸ್ವಾಮೀಜಿಯವ್ರನ್ನ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ. ಡಿಸ್ಚಾರ್ಜ್ ಬಳಿಕ ಶ್ರೀಗಳಿಗೆ ಮಠದಲ್ಲೇ ಚಿಕಿತ್ಸೆ ಮುಂದುವರೆಸುವ ಸಾಧ್ಯತೆಯಿದೆ. ಇಂದು ಆರೋಗ್ಯ ತಪಾಸಣೆಯ ರಿಪೋರ್ಟ್ ಬಂದ ಬಳಿಕ ವೈದ್ಯರ ತಂಡ ಮಠದವರ ಜೊತೆ ಚರ್ಚೆ ಮಾಡಿ ಮುಂದಿನ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಲಿದ್ದಾರೆ.

    ಪಿತ್ತನಾಳದಲ್ಲಿ ಅಳವಡಿಸಿದ್ದ ಸ್ಟಂಟ್‍ಗೆ ಸೋಂಕು ತಗುಲಿದ ಪರಿಣಾಮ ಬಿಜಿಎಸ್ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಸುಮಾರು ಒಂದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಗ್ಯಾಸ್ಟ್ರೋ ಎಂಟಾಲಾಜಿಸ್ಟ್ ಡಾ.ರವೀಂದ್ರ ನೇತೃತ್ವದಲ್ಲಿ ಎಂಡೋಸ್ಕೋಪಿ ಮೂಲಕ ಸ್ಟಂಟ್ ಬದಲಾವಣೆ ಮಾಡಲಾಯ್ತು. ಸದ್ಯ ಶ್ರೀಗಳನ್ನು ಜನರಲ್ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದ್ದು, 24 ಗಂಟೆಗಳಲ್ಲಿ ಶ್ರೀಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ ಅಂತ ವೈದ್ಯ ರವೀಂದ್ರ ಹೇಳಿದ್ದಾರೆ.

    ಸಿದ್ದಗಂಗಾ ಮಠದಲ್ಲಿ ಶ್ರೀಗಳ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಾದು ಕುಳಿತಿದ್ದಾರೆ. ರಾಜ್ಯದ ನಾನಾ ಭಾಗದಿಂದ ಆಗಮಿಸಿರುವ ಭಕ್ತಾದಿಗಳು ಮಠದಲ್ಲೇ ಉಳಿದುಕೊಂಡಿದ್ದು ಶಿವಕುಮಾರ ಸ್ವಾಮಿಜಿಗಳ ಬರುವಿಕೆಗಾಗಿ ಎದುರು ನೋಡುತ್ತಿದ್ದಾರೆ. ಅಲ್ಲದೆ ಶ್ರೀಗಳು ಕುಳಿತು ಭಕ್ತಾದಿಗಳಿಗೆ ಆಶೀರ್ವಾದ ಮಾಡುತಿದ್ದ ಗದ್ದುಗೆಗೆ ಭಕ್ತರು ನಮಿಸಿ ಶ್ರೀಗಳು ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುತಿದ್ದಾರೆ.