ಕೂಡಲೇ ಶಾಸಕರು ಪರಮೇಶ್‌ರನ್ನು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ವೃತ್ತಿಯಲ್ಲಿ ವೈದ್ಯರಾಗಿರುವ ರಂಗನಾಥ್ ಅವರು ಸ್ವತಃ ತಾವೇ ಮುಂದೆ ನಿಂತು ಭುಜದ ಮೂಳೆ ಆಪರೇಷನ್ ಮಾಡಿದ್ದಾರೆ. ಇದೀಗ ಶಾಸಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕಾಡಾನೆ ದಾಳಿಯಿಂದ ರೈತನ ಕಾಲು ಮುರಿತ – ನಡುರಸ್ತೆಯಲ್ಲೇ ಮಲಗಿಸಿ ಪ್ರತಿಭಟಿಸಿದ ಗ್ರಾಮಸ್ಥರು
ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ (Hemavati Express Canal) ವಿವಾದ ಮತ್ತಷ್ಟು ತೀವ್ರಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಹೇಮಾವತಿ ನೀರಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ (Dr Ranganath) ಹೇಳಿಕೆ ನೀಡಿದ್ದಾರೆ.
ಕುಣಿಗಲ್ ತಾಲೂಕಿನ ಎಲೆಯೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ತಾಲೂಕಿನ ರೈತರಿಗಾಗಿ ತಗ್ಗಿ ಬಗ್ಗಿ ನಡೆಯಲು ಸಿದ್ಧನಿದ್ದೇನೆ. ನೀವು ಪೈಪ್‌ಲೈನ್ ಕಾಮಗಾರಿಗೆ ಅಡ್ಡಿಪಡಿಸಲು ನಿಂತರೆ ಕುಣಿಗಲ್ ತಾಲೂಕಿನ ನಾವು ಗಂಡು ಮಕ್ಕಳು ಕಚ್ಚೆ ಕಟ್ಟಿ ಹೋರಾಟ ಮಾಡೋಕೆ ತಯಾರಿದ್ದೇವೆ. ಮುಂದಿನ ದಿನಗಳಲ್ಲಿ ಬೀದಿಗೆ ಇಳಿಯುತ್ತೇವೆ. ನಮ್ಮ ತಾಲೂಕಿನ ನೀರಿಗಾಗಿ ಹೋರಾಟ ಮಾಡುತ್ತೇವೆ ಎಂದರು. ಇದನ್ನೂ ಓದಿ: ಕಾಲ್ತುಳಿತ ಕೇಸ್; IPS ಅಧಿಕಾರಿ ವಿಕಾಸ್ ಕುಮಾರ್‌ಗೆ ರಿಲೀಫ್ – ಅಮಾನತು ರದ್ದಿಗೆ CAT ಆದೇಶ
ನಾನು ಸಹ ಕುಣಿಗಲ್ ತಾಲೂಕಿನ ಮಗನಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಹಿಂದೆಮುಂದೆ ನೋಡಲ್ಲ. ನನ್ನ ತಾಲೂಕಿನ ರೈತರಿಗೋಸ್ಕರ ನನ್ನ ದೇಹ ತ್ಯಾಗಕ್ಕೂ ಸಿದ್ಧನಿದ್ದೇನೆ. ನಮ್ಮೂರು ಎಲೆಯೂರಿನಲ್ಲಿ ಈ ಮಾತು ಹೇಳುತ್ತಿದ್ದೇನೆ. ನಾನು ಬಹಳ ತಾಳ್ಮೆಯಿಂದ ನೋಡುತ್ತಿದ್ದೇನೆ ಎಂದು ವೇದಿಕೆ ಮೇಲೆ ಭಾವುಕ ಮಾತುಗಳನ್ನಾಡಿದರು. ಇದನ್ನೂ ಓದಿ: ಅವಧಿ ಮುಗಿದ ವಾಹನಗಳಿಗೆ ಇಂದಿನಿಂದ ಪೆಟ್ರೋಲ್, ಡಿಸೇಲ್ ಇಲ್ಲ
ತುಮಕೂರು: ಹನಿಟ್ರ‍್ಯಾಪ್ (Honey Trap) ಸದ್ದು ರಾಜ್ಯದಲ್ಲಿ ಜೋರಾಗಿ ಕೇಳುತ್ತಿದೆ. ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಹಾಗೂ ಅವರ ಪುತ್ರ ಎಮ್‌ಎಲ್‌ಸಿ ರಾಜೇಂದ್ರ ರಾಜಣ್ಣರನ್ನು (MLC Rajendra Rajanna) ಹನಿಟ್ರ‍್ಯಾಪ್ ಖೆಡ್ಡಾ ತೋಡಿದ್ದು ಬಯಲಾಗಿದೆ. ಈ ಮಧು ಜಾಲದ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಆದರೆ ಪ್ರತಿಪಕ್ಷಗಳು ಮಾತ್ರ ಡಿಸಿಎಂ ಡಿಕೆಶಿ ವಿರುದ್ಧ ಬೊಟ್ಟು ಮಾಡಿ ತೋರಿಸುತ್ತಿದೆ. ಈ ನಡುವೆ ತುಮಕೂರು ಜಿಲ್ಲೆಯಲ್ಲಿ ಡಿಕೆಶಿ ವರ್ಸಸ್ ಸಿದ್ದರಾಮಯ್ಯರ ಬಣದ ಶೀತಲ ಸಮರ ಶುರುವಾಗಿದೆ. ಡಿಕೆ ಶಿವಕುಮಾರ್ ಸಂಬಂಧಿಯಾದ ಕುಣಿಗಲ್ ಶಾಸಕ ಡಾ. ರಂಗನಾಥ್ ವಿರುದ್ಧ ರಾಜೇಂದ್ರ ರಾಜಣ್ಣ ಹರಿಹಾಯ್ದಿದ್ದಾರೆ.
ರಾಮನಗರಕ್ಕೆ ನೀರು ಕೊಂಡೊಯ್ಯುವ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿರೋಧಿಸಿದ್ದಕ್ಕೆ ಶಾಸಕ ರಂಗನಾಥ್ (Dr Ranganath) ತಮ್ಮ ಬೆಂಬಲಿಗರಿಂದ ಧಮ್ಕಿ ಹಾಕಿದ್ದಾರೆ ಎಂದು ರಾಜೇಂದ್ರ ರಾಜಣ್ಣ ದೂರಿದ್ದಾರೆ. ಪ್ರಭಾವಿಗಳು ಇವರ ಜೊತೆ ಇದ್ದಾರೆ ಎಂಬ ಮಾತ್ರಕ್ಕೆ ಜಿಲ್ಲೆಗೆ ಅನ್ಯಾಯ ಮಾಡಿ ನೀರು ಕೊಡಲು ಸಾಧ್ಯವೇ ಎಂದು ಖಾರವಾಗಿ ರಾಜೇಂದ್ರ ಪ್ರಶ್ನಿಸಿದ್ದಾರೆ. ಇದು ಡಿಕೆಶಿ ಬಣದ ಕಾಂಗ್ರೆಸ್ ಶಾಸಕರನ್ನು ಕೆರಳಿಸಿದೆ. ಇದನ್ನೂ ಓದಿ: ಶಿರಸಿ: ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಕಸ್ಮಿಕ ಬೆಂಕಿ – ತಪ್ಪಿದ ಭಾರಿ ಅನಾಹುತ
ಇನ್ನೊಂದೆಡೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಸಚಿವ ರಾಜಣ್ಣ (KN Rajanna) ಕುಣಿಗಲ್ ಕ್ಷೇತ್ರದ ರೈತರಿಗೆ ಸಾಲ ಕೊಡುತ್ತಿಲ್ಲ ಎಂದು ಶಾಸಕ ರಂಗನಾಥ್ ಸದನದಲ್ಲಿ ಆರೋಪ ಮಾಡಿದರು. ಇದು ಕೂಡ ಮೌನ ಸಮರಕ್ಕೆ ಕಾರಣವಾಗಿದೆ. ರಾಜಣ್ಣರ ಪುತ್ರ ಗೆಲ್ಲಲು ಕುಣಿಗಲ್ ಕ್ಷೇತ್ರದ ಪಂಚಾಯತಿ ಸದಸ್ಯರುಗಳ ಋಣ ಇದೆ. ಇದನ್ನು ಅಪ್ಪ ಮಗ ಮರೆಯಬಾರದು ಎಂದು ಶಾಸಕ ರಂಗನಾಥ್ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: IPL 2025: ಗಾಯಕ್ವಾಡ್, ರಚಿನ್ ಫಿಫ್ಟಿ ಆಟ – ಮುಂಬೈ ವಿರುದ್ಧ ಚೆನ್ನೈಗೆ 4 ವಿಕೆಟ್‌ಗಳ ಜಯ
ಒಟ್ಟಾರೆ ಕುಣಿಗಲ್ ಶಾಸಕ ರಂಗನಾಥ್, ಗುಬ್ಬಿ ಶಾಸಕ ಶ್ರೀನಿವಾಸ್, ಮಾಜಿ ಶಾಸಕ ಗೌರಿಶಂಕರ್, ಮಾಜಿ ಸಚಿವ ಟಿ ಬಿ ಜಯಚಂದ್ರ ಡಿಕೆಶಿ ಪರವಾಗಿ ಇದ್ದಾರೆ ಎನ್ನಲಾಗಿದೆ. ಹನಿಟ್ರ‍್ಯಾಪ್ ವಿಚಾರ ಈ ಬಣಗಳ ನಡುವಿನ ಕಂದಕ ಇನ್ನಷ್ಟು ಹೆಚ್ಚು ಮಾಡಿದೆ. ಇದನ್ನೂ ಓದಿ: ಕುಕ್ಕೆ ಆಡಳಿತ ಮಂಡಳಿಯಲ್ಲಿ ಮಾಜಿ ರೌಡಿಶೀಟರ್‌ಗೆ ಸ್ಥಾನ ಕೊಡಲು ಸಚಿವರ ಯತ್ನ?
ಬೆಂಗಳೂರು: ಸಿಎಂ ಸ್ಥಾನ ಖಾಲಿ ಇಲ್ಲ. ಖಾಲಿಯಿರದ ಸ್ಥಾನದ ಬಗ್ಗೆ ಚರ್ಚೆ ಅಪ್ರಸ್ತುತ ಎಂದು ಕುಣಿಗಲ್ ಶಾಸಕ ರಂಗನಾಥ್ (Ranganath) ಸ್ವಪಕ್ಷದವರಿಗೆ ತಿರುಗೇಟು ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸದ್ಯ ಸಿಎಂ ಸ್ಥಾನದ ಕುರಿತು ನಡೆಯುತ್ತಿರುವ ಚರ್ಚೆ ವಿಷಯವಾಗಿ ಮಾತನಾಡಿ, ಎಂಎಲ್‌ಸಿಗಳಿಂದ ಕಾಂಗ್ರೆಸ್ ಹೈಕಮಾಂಡ್ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.ಇದನ್ನೂ ಓದಿ: ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಆರೋಗ್ಯ ಸ್ಥಿತಿ ತೀವ್ರ ಗಂಭೀರ
ಎಂಎಲ್‌ಎಗಳ (MLA) ಪತ್ರಕ್ಕೆ ನನ್ನ ಸಹಮತ ಇದೆ. ನನ್ನ ದೃಷ್ಟಿಯಲ್ಲಿ ರಾಜ್ಯದ ಸಮಸ್ಯೆ ನಿವಾರಣೆಗೆ ನಾವೆಲ್ಲ ಕೆಲಸ ಮಾಡಬೇಕು. ಸಿಎಂ ಬದಲಾವಣೆ ವಿಚಾರ ಮಾತಾನಾಡೋದು ಅಪ್ರಸ್ತುತ. ಸಿದ್ದರಾಮಯ್ಯ (CM Siddaramaiah) ವರು ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ. ಸದ್ಯ ಸಿಎಂ ಸ್ಥಾನ ಖಾಲಿ ಇಲ್ಲ. ಆ ಬಗ್ಗೆ ಚರ್ಚೆ ಸರಿಯಲ್ಲ ಎಂದರು.
ಅನೇಕ ವಿಷಯಗಳ ಪ್ರಣಾಳಿಕೆಯಲ್ಲಿ ಕೊಟ್ಟಿದ್ದೇವೆ. 5 ಗ್ಯಾರಂಟಿ, ಎತ್ತಿನಹೊಳೆ ಯೋಜನೆ ಉದ್ಘಾಟನೆ ಆಗಿದೆ. ಇದೊಂದು ಸಾಧನೆ, ನಮ್ಮ ಸರ್ಕಾರಕ್ಕೆ ಗರಿ ಅದು. ಅಂತಹ ಕೆಲಸ ಮಾಡಬೇಕು. ಇಲ್ಲ ಸಲ್ಲದ ವಿಚಾರ ಚರ್ಚೆ ಮಾಡಿ ವಿಪಕ್ಷಗಳಿಗೆ ಆಹಾರ ಆಗೋದು ಬೇಡ. ನಮ್ಮ ಅಧ್ಯಕ್ಷರು ಹೊರಗೆ ಹೋಗಿದ್ದಾರೆ ಅವರು ಬಂದ ಮೇಲೆ ಇಂತಹ ಮಾತುಗಳ ಬಗ್ಗೆ ಗಮನಹರಿಸುತ್ತಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ನಾವೆಲ್ಲ ಶಿಸ್ತಿನ ಸಿಪಾಯಿಗಳು. ಇಂತಹ ಗೊಂದಲಗಳು ಆಗೋದು ಬೇಡ. ಸಿಎಂ ಸ್ಥಾನ ಖಾಲಿ ಇಲ್ಲ ಅಂದ ಮೇಲೆ ಯಾಕೆ ಅದರ ಬಗ್ಗೆ ಮಾತಾಡ್ತಾರೆ. ಅದರ ಬಗ್ಗೆ ಯಾಕೆ ಮಾತಾಡ್ತೀವಿ ಅನ್ನೋದು ಗೊತ್ತಿಲ್ಲ ಯಾರೂ ಸಿಎಂ ವಿಚಾರದ ಬಗ್ಗೆ ಮಾತಾನಾಡೋದು ಬೇಡ. ಸಿದ್ದರಾಮಯ್ಯ 5 ವರ್ಷ ಇರುತ್ತಾರೆಎ ಎಂದು ಹೈಕಮಾಂಡ್ ನಾಯಕರು ಹೇಳಿದ್ದಾರೆ.ಇದನ್ನೂ ಓದಿ: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರಾಜ್ಯದಲ್ಲಿ ರದ್ದು ಮಾಡಿ- ಸಿಎಂಗೆ ಕುರುಬೂರು ಶಾಂತಕುಮಾರ್ ಮನವಿ
136 ಜನ ಒಟ್ಟಾಗಿ ಹೋಗ್ತಿದ್ದೇವೆ. ನಮಗೆ ಅನುದಾನ ಸಿಗುತ್ತಿದೆ. ಯಾವುದೇ ತೊಂದರೆ ಇಲ್ಲದೆ ಸರ್ಕಾರ ಹೋಗ್ತಿದೆ. nಮ್ಮ ಸರ್ಕಾರ ರಾಜ್ಯದ ಅಭಿವೃದ್ಧಿ ಮಿಷನ್ ಇಟ್ಟುಕೊಂಡು ಹೋಗೋಣ ಎಂದು ಅಧ್ಯಕ್ಷರು ಹೇಳಿದ್ದಾರೆ. ಅದರಂತೆ ನಾವು ಇರುತ್ತೇವೆ ಎಂದು ತಿರುಗೇಟು ಕೊಟ್ಟಿದ್ದಾರೆ.
ತುಮಕೂರು: ಶಾಸಕರ ಬಳಿ ಆರೋಗ್ಯ ಸಮಸ್ಯೆ ಹೇಳಿಕೊಳ್ಳಲು ಬಂದ ಬಡ ಮಹಿಳೆಯೊಬ್ಬರಿಗೆ ಸ್ವತಃ ಶಾಸಕ ಡಾ.ರಂಗನಾಥ್ (Dr. Ranganath) ಅವರೇ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕುಣಿಗಲ್ (Kunigal) ತಾಲೂಕಿನ ಕುಂದೂರು ಗ್ರಾಮದ ಆಶಾ ಎಂಬ ಮಹಿಳೆ ಕೀಲು ಸಮಸ್ಯೆಯಿಂದ ನೋವು ಅನುಭವಿಸುತ್ತಿದ್ದರು. ಇದನ್ನು ಶಾಸಕರ ಬಳಿ ಹೇಳಿ ಏನಾದರೂ ಸಹಾಯ ಪಡೆಯಲು ಮಹಿಳೆ ಬಂದಿದ್ದರು. ಶಾಸಕರು ಮಹಿಳೆಯನ್ನು ಬೋರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಶಾಸಕರೇ ಸ್ವತಃ ಮಹಿಳೆಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದನ್ನೂ ಓದಿ: PSI scam – ಇಂದು ಹೈಕೋರ್ಟ್‍ನಲ್ಲಿ ಮರುಪರೀಕ್ಷೆ ಅರ್ಜಿ ವಿಚಾರಣೆ
ಕಳೆದ 10 ವರ್ಷಗಳ ಹಿಂದೆ ಯಶಸ್ವಿನಿ ಯೋಜನೆಯಡಿ ಕೀಲು ಆಪರೇಷನ್ ಮಾಡಿಸಿಕೊಂಡಿದ್ದ ಮಹಿಳೆಗೆ ಮತ್ತೆ ಸಮಸ್ಯೆಯಾಗಿತ್ತು. ಸರ್ಕಾರದ ಉಚಿತ ಯೋಜನೆಯಲ್ಲಿ ಒಂದೇ ಕಾಯಿಲೆಗೆ 2 ಬಾರಿ ಸರ್ಜರಿಗೆ ಅವಕಾಶ ಇರಲಿಲ್ಲ. ಸ್ವತಃ ರೋಗಿಗಳೇ ಹಣ ಸಂದಾಯ ಮಾಡಿ ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು. ಶಸ್ತ್ರಚಿಕಿತ್ಸೆ ಮಾಡಲು 4-5 ಲಕ್ಷ ರೂ. ಖರ್ಚಾಗುತ್ತಿತ್ತು. ಈಗ ಶಾಸಕರೇ ಉಚಿತ ಶಸ್ತ್ರಚಿಕಿತ್ಸೆ ನೀಡಿದ್ದಾರೆ.
ಚಿತ್ರದುರ್ಗ: ಮುರುಘಾ ಶರಣರಿಗೆ 60 ವರ್ಷ ವಯಸ್ಸಾಗಿದ್ದು, ಹೃದಯ ತುಂಬಾ ಸೂಕ್ಷ್ಮವಾಗಿದೆ. ಹೀಗಾಗಿ ಈ ರೀತಿಯ ಪ್ರಾಬ್ಲಂ ಬರೋದು ಸಹಜ ಎಂದು ಚಿತ್ರದುರ್ಗ ಡಿಹೆಚ್ ಓ ಡಾ,ರಂಗನಾಥ್ ತಿಳಿಸಿದ್ದಾರೆ.
ಶ್ರೀಗಳ ಆರೋಗ್ಯದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಆದೇಶದ ಮೇರೆಗೆ ದಾವಣಗೆರೆಯ ಕಾರ್ಡಿಯಾಲಾಜಿಸ್ಟ್ ಡಾ.ಮಲ್ಲೇಶ್, ಡಾ.ಶ್ರೀನಿವಾಸ ತಂಡ ಜಿಲ್ಲಾಸ್ಪತ್ರೆಗೆ ಆಗಮಿಸಲಿದೆ. ಅವರು ಧಾವಿಸಿ ಮುರುಘಾ ಶ್ರೀಗಳನ್ನು ಗಮನಿಸಿ, ಸೆಕೆಂಡ್ ಒಪೀನಿಯನ್ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಇದನ್ನೂ ಓದಿ: ಮುರುಘಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು- ಐಸಿಯುಗೆ ಶಿಫ್ಟ್
ಜಿಲ್ಲಾಧಿಕಾರಿಗಳ ಆದೇಶದ ಮೇಲೆ ಇಬ್ಬರು ಹೃದಯ ತಜ್ಞರನ್ನ ಕರೆಸಲಾಗಿದೆ. ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗಿದ್ದಾರೆ. 60 ವರ್ಷ ವಯಸ್ಸಾಗಿದ್ದು, ಹೃದಯ ತುಂಬಾ ಸೂಕ್ಷ್ಮವಾಗಿದ್ರಿಂದ ಇಂತಹ ಸಮಸ್ಯೆಗಳು ಬರುತ್ತವೆ. ಕಾರ್ಡಿಯಾಲಜಿಸ್ಟ್ ಗಳು ಏನು ಸಜೆಸ್ಟ್ ಮಾಡ್ತಾರೆ ನೋಡಬೇಕು ಎಂದು ಅವರು ತಿಳಿಸಿದರು.
ಇತ್ತ ಜಿಲ್ಲಾಸ್ಪತ್ರೆಯಿಂದ ಶ್ರೀಗಳನ್ನ ನೇರವಾಗಿ ಮಠಕ್ಕೆ ಪೊಲೀಸರು ಕರೆದುಕೊಂಡು ಹೋಗಲಿದ್ದಾರೆ. ನಂತರ ಮಠದ ಬಳಿಯಿರುವ ಹೆಲಿಪ್ಯಾಡ್ ನಿಂದ ವಿಮಾನದಲ್ಲಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಶ್ರೀಗಳಿಗೆ ಹೃದಯ ಸಮಸ್ಯೆ ಬಗ್ಗೆ ಎಸ್ ಎಸ್ ಆಸ್ಪತ್ರೆ ವೈದ್ಯರು ದೃಢೀಕರಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
Live Tv
[brid partner=56869869 player=32851 video=960834 autoplay=true]
ತುಮಕೂರು: ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿದ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ವಿರುದ್ಧ ಕುಣಿಗಲ್ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಅಪಘಾತ ಪ್ರಕರಣವೊಂದರಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆಯನ್ನು ಶೀಘ್ರವಾಗಿ ಮಾಡಿಕೊಡುವಂತೆ ಮನವಿ ಮಾಡಿಕೊಂಡ ಗ್ರಾಪಂ ಸದಸ್ಯರೊಬ್ಬರೊಂದಿಗೆ ಸಿಪಿಐ ಗುರುಪ್ರಸಾದ್ ಉದ್ದಟತನದಿಂದ ವರ್ತಿಸಿದ್ದ ಆರೋಪ ಕೇಳಿಬಂದಿತ್ತು.
ಜೂನ್ 19ರಂದು ಸಿಪಿಐ ಗುರುಪ್ರಸಾದ್ ವಿರುದ್ಧ ಜನರನ್ನು ಸೇರಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಶಾಸಕ ಡಾ.ರಂಗನಾಥ್ ವಿರುದ್ಧ ಅಂದೇ ಪೊಲೀಸರು ಎನ್‍ಸಿಆರ್(ಗಂಭೀರವಲ್ಲದ ಪ್ರಕರಣ) ದಾಖಲಿಸಿದ್ದರು. ಆದರೆ ಎಫ್‍ಐಆರ್ ದಾಖಲಿಸಿರಲಿಲ್ಲ ಆದರೆ ಇದೀಗ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಪುಕ್ಕಟೆ ಕೊತ್ತಂಬರಿ ಸೊಪ್ಪಿಗಾಗಿ ಮುಗಿ ಬಿದ್ದ ಜನ
ಸಿಪಿಐ ಗುರುಪ್ರಸಾದ್ ವಿರುದ್ಧ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಎನ್‍ಸಿಆರ್ ಮಾತ್ರ ದಾಖಲಿಸಿದ್ದರು. ಜೆಡಿಎಸ್ ಮುಖಂಡ ಜಗದೀಶ್, ರಂಗನಾಥ್ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ದೂರು ನೀಡಿದ ಹಿನ್ನೆಲೆಯಲ್ಲಿ ಇದೀಗ ಎಫ್‍ಐಆರ್ ದಾಖಲಿಸಲಾಗಿದೆ.
ತುಮಕೂರು: ಕುಣಿಗಲ್ ಶಾಸಕ ಡಾ. ರಂಗನಾಥ್‍ಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.
ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು ತನಗೆ ಕೊರೊನಾ ಇರುವುದನ್ನು ದೃಢಪಡಿಸಿದ್ದಾರೆ. ಶಾಸಕರು ಕಳೆದ ವಾರ ಕುಣಿಗಲ್ ಪೋಲಿಸರೊಂದಿಗೆ ಸಭೆ ನಡೆಸಿದ್ದರು. ಆ ವೇಳೆ ಸೋಂಕಿತ ಪೇದೆಯಿಂದ ಶಾಸಕರಿಗೆ ಸೋಂಕು ತಗುಲಿರೋ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಶಾಸಕರನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಭಾನುವಾರ ಬೆಂಗಳೂರಿನಲ್ಲೇ ಸ್ಯಾಂಪಲ್ ಕೊಟ್ಟಿದ್ದರು. ಇಂದು ಬೆಳಗ್ಗೆ ರಿಪೋರ್ಟ್ ಬಂದಿದ್ದು ಪಾಸಿಟಿವ್ ದೃಢಪಟ್ಟಿದೆ. ಹಾಗಾಗಿ ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿದ್ದು, ಈ ಮಧ್ಯೆ ಸಚಿವರು, ಶಾಸಕರು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಂಗಳೂರು ಶಾಸಕ ಭರತ್ ಶೆಟ್ಟಿ ಅವರಿಗೂ ಕೊರೊನಾ ಸೋಂಕು ದೃಢವಾಗಿತ್ತು. ಈ ಬಗ್ಗೆ ಸ್ವಥಃ ಶಾಸಕರೇ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದರು.
ತುಮಕೂರು: ಡಿಕೆ ಸಹೋದರರ ಸಂಬಂಧಿ, ಕುಣಿಗಲ್ ಶಾಸಕ ಡಾ.ರಂಗನಾಥ್ ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಗದ್ಗದಿತರಾಗಿ ಕೈ ಮುಗಿದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಮಾಧುಸ್ವಾಮಿ ಬಳಿ ಬೇಡಿಕೊಂಡ ಘಟನೆ ಇಂದು ಕೆಡಿಪಿ ಸಭೆಯಲ್ಲಿ ನಡೆದಿದೆ.
ಕುಣಿಗಲ್ ಕ್ಷೇತ್ರದ ರಸ್ತೆ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದ್ದ 14 ಕೋಟಿ ರೂ ಸರ್ಕಾರದಿಂದ ತಡೆಹಿಡಿಯಲಾಗಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದ್ದು ನನಗೆ ತುಂಬಾ ನೋವಾಗಿದೆ ಎಂದು ಶಾಸಕರು ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ. ಅಲ್ಲದೆ ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡುವಂತೆ ಕೆಡಿಪಿ ಸಭೆಯಲ್ಲಿ ಇದ್ದಂತಹ ಉಸ್ತುವಾರಿ ಸಚಿವ ಮಾಧುಸ್ವಾಮಿ ಬಳಿ ಕೈ ಮುಗಿದು ಕೇಳಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಕೆಲ ಕ್ಷೇತ್ರಗಳ ಅನುದಾನಗಳನ್ನು ತಡೆಹಿಡಿಯಲಾಗಿದೆ. ಮುಂದಿನ ಕೆಲ ದಿನದಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಡಾ.ರಂಗನಾಥ್‍ಗೆ ಭರವಸೆ ನೀಡಿದ್ದಾರೆ.
ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ದೋಸ್ತಿ ಸರ್ಕಾರ ರಚನೆ ಮಾಡಿಕೊಂಡಿದೆ. ಆದರೆ ಜಿಲ್ಲೆಯ ಕುಣಿಗಲ್‍ನಲ್ಲಿ ಕಾಂಗ್ರೆಸ್ ಶಾಸಕರ ವಿರುದ್ಧವೇ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಸಾಗುವಳಿ ಚೀಟಿ ವಿತರಣೆಯಲ್ಲಿ ಶಾಸಕ ಡಾ.ರಂಗನಾಥ್ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಕುಣಿಗಲ್‍ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ತಹಶೀಲ್ದಾರ್ ಕಚೇರಿಗೆ ಜಾನುವಾರುಗಳನ್ನು ನುಗ್ಗಿಸಿ ಧರಣಿ ಕುಳಿತು, ಶಾಸಕರ ವಿರುದ್ಧ ಘೋಷಣೆ ಕೂಗಿದರು.
ಜೆಡಿಎಸ್‍ಗೆ ಹೆಚ್ಚು ಮತದಾನ ಮಾಡಿದ ಗ್ರಾಮಗಳ ರೈತರಿಗೆ ಸಾಗುವಳಿ ಚೀಟಿ ನೀಡದೇ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ವಂಚಿಸುತ್ತಿದ್ದಾರೆ. ತಮಗೆ ಹೆಚ್ಚು ಮತದಾನ ಮಾಡಿದ ಭೂತ್ ಮಟ್ಟದ ರೈತರಿಗೆ ಮಾತ್ರ ಸಾಗುವಳಿ ಚೀಟಿ ವಿತರಿಸುತ್ತಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ನಮ್ಮ ನಾಯಕ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಒಂದು ವೇಳೆ ನಾವು ಪ್ರತಿಭಟನೆ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ ಅಂತ ಸುಮ್ಮನಿದ್ವಿ. ಆದರೆ ಶಾಸಕರು ನೀವು ಯಾವ ಪಕ್ಷಕ್ಕೆ ಮತ ಹಾಕಿದ್ದೀರಾ? ಯಾರಿಗೆ ಬೆಂಬಲ ನೀಡಿದ್ದೀರಾ ಅಂತ ರೈತರನ್ನು ಪ್ರಶ್ನಿಸುತ್ತಿದ್ದಾರೆ. ಕೇವಲ ಕಾಂಗ್ರೆಸ್ಸಿನ ಕಾರ್ಯಕರ್ತರನ್ನು ಕರೆಸಿಕೊಂಡು ಸರ್ಕಾರದ ಯೋಜನೆಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಟ್ಟ ರಾಜಕೀಯ ವ್ಯವಸ್ಥೆ ವಿರುದ್ಧ ನಾವು ಹೋರಾಡುತ್ತಿದ್ದೇವೆ ಎಂದು ಜೆಡಿಎಸ್ ಸ್ಥಳೀಯ ಮುಖಂಡ ಜಗದೀಶ್ ದೂರಿದ್ದಾರೆ.