Tag: dr rajakumar

  • ದೊಡ್ಡಗಾಜನೂರಿನಲ್ಲಿ ಈಡಿಗ ಸಂಪ್ರದಾಯದಂತೆ ನೆರವೇರಿದ ಡಾ.ರಾಜ್ ಸಹೋದರಿ ಅಂತ್ಯಕ್ರಿಯೆ

    ದೊಡ್ಡಗಾಜನೂರಿನಲ್ಲಿ ಈಡಿಗ ಸಂಪ್ರದಾಯದಂತೆ ನೆರವೇರಿದ ಡಾ.ರಾಜ್ ಸಹೋದರಿ ಅಂತ್ಯಕ್ರಿಯೆ

    – ಡಾ.ರಾಜ್ ಕುಟುಂಬಸ್ಥರು ಭಾಗಿ

    ಚಾಮರಾಜನಗರ: ದೊಡ್ಮನೆ ಕುಟುಂಬದ ನಾಗಮ್ಮ ಇನ್ನು ನೆನಪು ಮಾತ್ರ. ವರನಟ ಡಾ.ರಾಜಕುಮಾರ್ (Dr Rajkumar) ಅವರ ಮಕ್ಕಳಿಗೆ ಸಾಕು ತಾಯಿಯೇ ಆಗಿದ್ದ ನಾಗಮ್ಮ (Nagamma) ಅವರ ಅಂತ್ಯಕ್ರಿಯೆ ಡಾ.ರಾಜ್ ಹುಟ್ಟೂರು ದೊಡ್ಡಗಾಜನೂರಿನಲ್ಲಿ (Doddagajanur) ನೆರವೇರಿತು. ಅಂತ್ಯಕ್ರಿಯೆಯಲ್ಲಿ ಡಾ.ರಾಜ್‌ಕುಮಾರ್ ಕುಟುಂಬಸ್ಥರು ಭಾಗಿಯಾದರು.

    ವರನಟನ ಮಕ್ಕಳಿಗೆ ಒಂದು ರೀತಿಯಲ್ಲಿ ಸಾಕು ತಾಯಿಯೇ ಆಗಿದ್ದ ನಾಗಮ್ಮ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಇಡೀ ರಾಜ್ ಕುಟುಂಬ ದೊಡ್ಡಗಾಜನೂರಿಗೆ ಆಗಮಿಸಿತ್ತು. ಶುಕ್ರವಾರ ಸಂಜೆಯೇ ರಾಘವೇಂದ್ರ ರಾಜಕುಮಾರ್ ಅವರು ತಮ್ಮ ಪತ್ನಿ ಹಾಗು ಮಕ್ಕಳಾದ ವಿನಯ್ ರಾಜ್‌ಕುಮಾರ್ ಹಾಗು ಯುವ ರಾಜ್‌ಕುಮಾರ್ ಅವರೊಂದಿಗೆ ದೌಡಾಯಿಸಿದ್ದರು. ನಮ್ಮ ಅತ್ತೆ ನಮ್ಮನ್ನೆಲ್ಲಾ ಎದೆ ಹಾಲು ಕುಡಿಸಿ ಬೆಳೆಸಿದ್ದಾರೆ ಎಂದು ಸ್ಮರಿಸಿಕೊಂಡಿದ್ದರು. ಇದನ್ನೂ ಓದಿ: ವಿಕಸಿತ ಭಾರತ್ @ 2047: ಹೂಡಿಕೆದಾರರ ದುಂಡುಮೇಜಿನ ಸಮ್ಮೇಳನ

    ಇನ್ನು ಶುಕ್ರವಾರ ಗೋವಾಗೆ ತೆರಳಿದ್ದ ಶಿವರಾಜಕುಮಾರ್ ಅವರು ನಾಗಮ್ಮ ನಿಧನದ ಮಾಹಿತಿ ತಿಳಿಯುತ್ತಿದ್ದಂತೆ ಅಲ್ಲಿಂದ ವಾಪಸ್ಸಾಗಿ ತಮ್ಮ ಪತ್ನಿ ಗೀತಾ ಶಿವರಾಜಕುಮಾರ್ ಹಾಗೂ ತಮ್ಮ ಪುತ್ರಿಯರೊಂದಿಗೆ ಮಧ್ಯರಾತ್ರಿಯೇ ದೊಡ್ಡಗಾಜನೂರಿಗೆ ಆಗಮಿಸಿದ್ದರು. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅವರ ಮಗಳು ವಂದಿತಾ, ಡಾ.ರಾಜಕುಮಾರ್ ಅವರ ಪುತ್ರಿಯರು, ಮೊಮ್ಮಕ್ಕಳು, ಪಾರ್ವತಮ್ಮ ರಾಜಕುಮಾರ್ ಅವರ ಸಹೋದರರಾದ ಎಸ್ ಎ ಗೋವಿಂದರಾಜು, ಚಿನ್ನೇಗೌಡ ಸೇರಿದಂತೆ ಅಪಾರ ಸಂಖ್ಯೆಯ ಬಂದು ಬಳಗದವರು ನಾಗಮ್ಮ ಅವರ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಅತ್ಯಾಚಾರ ಕೇಸಲ್ಲಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು – ಸಂತ್ರಸ್ತೆಗೆ 11 ಲಕ್ಷ ಪರಿಹಾರ

    ಈ ವೇಳೆ ಸೋದರತ್ತೆ ನಾಗಮ್ಮ ಅವರೊಡನೆ ಬಾಲ್ಯದ ನೆನಪು ಮೆಲಕು ಹಾಕಿದ ಡಾ.ಶಿವರಾಜಕುಮಾರ್, ನನಗೆ ನಮ್ಮವ್ವ ಒಬ್ಬರೇ ತಾಯಿಯಲ್ಲ, ಸಾಕಿ ಸಲಹಿದ ನಾಗಮ್ಮ ಕೂಡ ಒಬ್ಬರು ತಾಯಿಯಾಗಿದ್ದರು ಎಂದು ಸ್ಮರಿಸಿದರು. ಇದನ್ನೂ ಓದಿ: ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ – ಹೈಡೆಲ್ ಪ್ರಾಜೆಕ್ಟ್ ಸೈಟ್‌ನಲ್ಲಿದ್ದ 12 ಕಾರ್ಮಿಕರಿಗೆ ಗಾಯ

    ನಾಗಮ್ಮ ಅವರು ಗುಡ್ಡೆ ಮಠ ದೀಕ್ಷೆ ಪಡೆದಿದ್ದು, ಗುಡ್ಡೆ ಮಠದ ರಾಘವೇಂದ್ರ ಸ್ವಾಮಿ ನೇತೃತ್ವದಲ್ಲಿ ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ದೊಡ್ಮನೆ ಸದಸ್ಯರೆಲ್ಲಾ ನಾಗಮ್ಮ ಅವರ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸುವ ಮೂಲಕ ನಾಗಮ್ಮ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಡಾ.ರಾಜಕುಮಾರ್ ಅವರ ಗಾಜನೂರಿನ ಮನೆಯ ಹಿಂಭಾಗದ ತೋಟದಲ್ಲಿ ನಾಗಮ್ಮ ಪತಿ ವೆಂಕಟೇಗೌಡ ಅವರ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದನ್ನೂ ಓದಿ: ತಾನು ಕಳ್ಳ ಪರರ ನಂಬ ಮಾನಸಿಕತೆಯಿರುವ ರಾಹುಲ್ ಗಾಂಧಿ ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳಲಿ: ಸಿ.ಟಿ ರವಿ

  • ರಾಜ್‌ಕುಮಾರ್ ಕಿಡ್ನಾಪ್ ವೇಳೆ ಸ್ಯಾಟ್‌ಲೈಟ್ ಫೋನ್‌ನಿಂದ ವೀರಪ್ಪನ್ ಜೊತೆ ಮಾತನಾಡಿದ್ದ ಎಸ್‌ಎಂಕೆ

    ರಾಜ್‌ಕುಮಾರ್ ಕಿಡ್ನಾಪ್ ವೇಳೆ ಸ್ಯಾಟ್‌ಲೈಟ್ ಫೋನ್‌ನಿಂದ ವೀರಪ್ಪನ್ ಜೊತೆ ಮಾತನಾಡಿದ್ದ ಎಸ್‌ಎಂಕೆ

    ಚಾಮರಾಜನಗರ: ಮೇರುನಟ ಡಾ.ರಾಜ್‌ಕುಮಾರ್ (Rajkumar) ಅವರು ಕಾಡುಗಳ್ಳ ವೀರಪ್ಪನ್‌ನಿಂದ ಅಪಹರಣವಾದಾಗ ಎಸ್‌ಎಂ ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ರಾಜ್‌ಕುಮಾರ್ ಬಿಡುಗಡೆಗೊಳಿಸಲು ಸ್ಯಾಟ್‌ಲೈಟ್ ಫೋನ್ ಮೂಲಕ ವೀರಪ್ಪನ್ ಜೊತೆ ಎಸ್‌ಎಂಕೆ (SM Krishna) ಮಾತನಾಡಿದ್ದರು.

    ರಾಜ್‌ಕುಮಾರ್ ಅಪಹರಣ ಪ್ರಕರಣ ಎಸ್‌ಎಂ ಕೃಷ್ಣ ಅವರಿಗೆ ತಮ್ಮ ಅಧಿಕಾರವಧಿಯಲ್ಲಿ 108 ದಿನಗಳ ಕಾಲ ಹೈರಾಣು ಮಾಡಿತ್ತು. ಜೊತೆಗೆ ಇದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಆದರೂ ಎಸ್‌ಎಂ ಕೃಷ್ಣ ಅವರು ಧೃತಿಗೆಡದೆ ಜಾಣ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದರು. ಕಾಡುಗಳ್ಳ ವೀರಪ್ಪನ್ ಜೊತೆ ಸ್ಯಾಟ್‌ಲೈಟ್ ಫೋನ್ ಮೂಲಕ ಮಾತನಾಡಿ ಮನವೊಲಿಸಿ, ಆತನ ಕಪಿಮುಷ್ಟಿಯಿಂದ ರಾಜ್‌ಕುಮಾರ್ ಅವರನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದರು.ಇದನ್ನೂ ಓದಿ: ಎಸ್‌ಎಂ ಕೃಷ್ಣ ವಿಧಿವಶ – ಬುಧವಾರ ರಾಮನಗರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ

    ಹೌದು, 2000ರ ಜು.30 ರಂದು ರಾತ್ರಿ ಸುಮಾರು 9 ಗಂಟೆ ವೇಳೆಗೆ ಚಾಮರಾಜನಗರ ಜಿಲ್ಲೆ ಗಡಿಭಾಗದ ತಮಿಳುನಾಡಿನ ದೊಡ್ಡ ಗಾಜನೂರಿನಿಂದ ಮೇರುನಟ ಡಾ.ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದನು. ಈ ವೇಳೆ ಪಾರ್ವತಮ್ಮ ಅವರು ರಾಜ್‌ಕುಮಾರ್ ಜೊತೆಗಿದ್ದರು. ಅಪಹರಣ ಮಾಡುವಾಗ ಆಡಿಯೋ ಕ್ಯಾಸೆಟ್‌ವೊಂದನ್ನು ಕೊಟ್ಟು, ಅದನ್ನು ಎಸ್‌ಎಂ ಕೃಷ್ಣ ಅವರಿಗೆ ತಲುಪಿಸುವಂತೆ ಹೇಳಿದ್ದನು.

    ಅಂದು ರಾತ್ರಿಯೇ ಪಾರ್ವತಮ್ಮ ಚಾಮರಾಜನಗರಕ್ಕೆ ಬಂದು ಎಸ್.ಎಂ.ಕೃಷ್ಣ ಅವರಿಗೆ ದೂರವಾಣಿ ಕರೆ ಮಾಡಿ ಅಪಹರಣದ ಸುದ್ದಿ ತಿಳಿಸಿದ್ದರು. ಜೊತೆಗೆ ಆ ದಿನ ಮಧ್ಯರಾತ್ರಿ ಬೆಂಗಳೂರಿಗೆ ತೆರಳಿ ಎಸ್‌ಎಂಕೆಗೆ ಆಡಿಯೋ ಕ್ಯಾಸೆಟ್‌ನ್ನು ಕೂಡ ನೀಡಿದ್ದರು. ಕ್ಯಾಸೆಟ್‌ನಲ್ಲಿ ತಮಿಳುನಾಡಿಗೆ ಇಂತಿಷ್ಟೇ ಕಾವೇರಿ ನೀರು ಬಿಡುಗಡೆ ಮಾಡಬೇಕು ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ವೀರಪ್ಪನ್ ಒತ್ತಾಯಿಸಿದ್ದನು.

    ಕಾವೇರಿ ವಿವಾದ, ಭೀಕರ ಬರಗಾಲದಂತಹ ಸಮಸ್ಯೆ ಎದುರಿಸುತ್ತಿದ್ದ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರಕ್ಕೆ ಡಾ.ರಾಜ್‌ಕುಮಾರ್ ಅಪಹರಣ ಪ್ರಕರಣ ಬರಸಿಡಿಲಿನಂತೆ ಎರಗಿತ್ತು. ಒಂದೆಡೆ ಇಡೀ ರಾಜ್ಯ ಹೊತ್ತಿ ಉರಿಯತೊಡಗಿತ್ತು. ಇನ್ನೊಂದೆಡೆ ವೀರಪ್ಪನ್ ಬೇಡಿಕೆಗಳನ್ನು ಈಡೇರಿಸಿ ರಾಜ್‌ಕುಮಾರ್ ಅವರನ್ನು ಜೀವಂತವಾಗಿ ಕರೆತರುವ ಸವಾಲು ಎಸ್‌ಎಂ ಕೃಷ್ಣ ಅವರಿಗೆ ಎದುರಾಗಿತ್ತು.

    ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿದ ಎಸ್‌ಎಂ ಕೃಷ್ಣ ರಾಜ್‌ಕುಮಾರ್ ಬಿಡುಗಡೆಗೆ ಹಲವು ರೀತಿಯಲ್ಲಿ ಪ್ರಯತ್ನಿಸಿದರು. ವೀರಪ್ಪನ್ ಬಳಿಗೆ ಸಂಧಾನಕಾರರನ್ನು ಕಳುಹಿಸಿದ ಎಸ್‌ಎಂ ಕೃಷ್ಣ ವೀರಪ್ಪನ್ ಜೊತೆ ಸ್ಯಾಟ್‌ಲೈಟ್ ಫೋನ್‌ನಲ್ಲಿ ಮಾತನಾಡಿ ವೀರಪ್ಪನ್ ಕಪಿಮುಷ್ಟಿಯಿಂದ ಡಾ.ರಾಜ್‌ಕುಮಾರ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಆಗ ಇಡೀ ಕರ್ನಾಟಕ ನಿಟ್ಟುಸಿರು ಬಿಟ್ಟಿತ್ತು.ಇದನ್ನೂ ಓದಿ: ಭಾಗ-1 | ಶಾಸಕನಿಂದ ಮುಖ್ಯಮಂತ್ರಿವರೆಗೆ…. ಎಸ್‌ಎಂಕೆ ರಾಜಕೀಯ ಜೀವನದ ಏಳುಬೀಳು!

  • ಸೌತ್ ಸಿನಿಮಾ ರಂಗಕ್ಕೆ ಅಣ್ಣಾವ್ರ ಮೊಮ್ಮಗಳ ಎಂಟ್ರಿ

    ಸೌತ್ ಸಿನಿಮಾ ರಂಗಕ್ಕೆ ಅಣ್ಣಾವ್ರ ಮೊಮ್ಮಗಳ ಎಂಟ್ರಿ

    ಣ್ಣಾವ್ರ ಮೊಮ್ಮಕ್ಕಳು ಒಬ್ಬೊಬ್ಬರಾಗಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈಗಾಗಲೇ `ನಿನ್ನ ಸನಿಹಕೆ’ ಚಿತ್ರದ ಮೂಲಕ ಧನ್ಯಾ ರಾಮ್‌ಕುಮಾರ್ ಎಂಟ್ರಿ ಕೊಟ್ಟಾಗಿದೆ. ಸ್ಯಾಂಡಲ್‌ವುಡ್‌ನಲ್ಲೇ ಧನ್ಯಾಗೆ ಒಳ್ಳೆಯ ಅವಕಾಶಗಳು ಅರಸಿ ಬರುತ್ತಿರಬೇಕಾದರೆ, ತೆಲುಗು, ತಮಿಳು ಚಿತ್ರರಂಗದಿಂದ ನಟಿ ಧನ್ಯಾಗೆ ಬುಲಾವ್ ಬರುತ್ತಿದೆ.

    `ನಿನ್ನ ಸನಿಹಕೆ’ ಚಿತ್ರ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಗುರುತಿಸಿಕೊಂಡ ನಟಿ, ಮೊದಲ ಚಿತ್ರದಲ್ಲೇ ತಾನೆಂತಹ ಕಲಾವಿದೆ ಅಂತಾ ಪ್ರೂವ್ ಮಾಡಿದ್ದರು. ಈ ಚಿತ್ರದ ನಂತರ ಧನ್ಯಾಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ಸಖತ್ ಚ್ಯೂಸಿಯಾಗಿ ಭಿನ್ನ ಕಥೆಗೆ ಗ್ರೀನ್ ಸಿಗ್ನಲ್ ಕೊಡ್ತಿದ್ದಾರೆ. ತೆಲುಗು ಮತ್ತು ತಮಿಳಿನಲ್ಲೂ ಧನ್ಯಾ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸೌತ್ ಅಂಗಳದಲ್ಲೂ ತಾನು ಮಿಂಚಬೇಕು ಅಂತಾ ಧನ್ಯಾ ಕೂಡ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

    ಡಾ.ರಾಜ್ ಅವರ ಮೊಮ್ಮಗಳು ಧನ್ಯಾಗೆ ಸೌತ್ ಸಿನಿ ಇಂಡಸ್ಟ್ರಿಯಿಂದ ಸಿನಿಮಾ ಮಾಡಲು ಬುಲಾವ್ ಬಂದಿದೆ. ಅಳೆದು ತೂಗಿ ಕಥೆ ಕೇಳಿ ಒಂದಿಷ್ಟು ಚಿತ್ರಗಳಿಗೆ ಓಕೆ ಅಂದಿದ್ದಾರೆ. ತೆಲುಗು ಮತ್ತು ತಮಿಳು ಎರಡು ಭಾಷೆಯಲ್ಲೂ ಬೇರೆ ಬೇರೆ ಸಿನಿಮಾ ಮಾಡುತ್ತಿದ್ದು, ಸದ್ಯದಲ್ಲೇ ಈ ಚಿತ್ರದ ಬಗ್ಗೆ ಅನೌನ್ಸ್ ಮಾಡಲಿದ್ದಾರೆ. ಅಧಿಕೃತ ಮಾಹಿತಿಯನ್ನು ಆಯಾ ಚಿತ್ರತಂಡದವರೇ ರಿವೀಲ್ ಮಾಡಲಿದ್ದಾರೆ. ಇದನ್ನೂ ಓದಿ:`ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    ಕನ್ನಡದ `ಕಾಲಾಪತ್ಥರ್’ ಚಿತ್ರದಲ್ಲೂ ನಟಿಸಿರುವ ಧನ್ಯಾ ಈಗ ದಕ್ಷಿಣ ಭಾರತದ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಒಂದೊಳ್ಳೆ ಸಿನಿಮಾದ ಮೂಲಕ ಧನ್ಯಾ ಸೌತ್ ಸಿನಿಪ್ರೇಕ್ಷಕರ ಮನ ಗೆಲ್ಲುತ್ತಾರಾ ಅಂತಾ ಕಾದುನೋಡಬೇಕಿದೆ.

  • ನಾವು ಲತಾ ಮಂಗೇಶ್ಕರ್ ಅವರ ಸಾಂಗ್‍ಗಳನ್ನು ಕೇಳಿ ಬೆಳೆದಿದ್ದೇವೆ: ಶಿವರಾಜ್ ಕುಮಾರ್

    ನಾವು ಲತಾ ಮಂಗೇಶ್ಕರ್ ಅವರ ಸಾಂಗ್‍ಗಳನ್ನು ಕೇಳಿ ಬೆಳೆದಿದ್ದೇವೆ: ಶಿವರಾಜ್ ಕುಮಾರ್

    ಬೆಂಗಳೂರು: ನಾವು ಬಾಲಿವುಡ್ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಹಾಡುಗಳನ್ನು ಚಿಕ್ಕವರಿದ್ದಾಗಿನಿಂದಲೂ ಕೇಳುತ್ತಾ ಬೆಳೆದಿದ್ದೇವೆ ಎಂದು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಸಂತಾಪ ವ್ಯಕ್ತಪಡಿಸಿದರು.

    ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನರಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಾವು ಲತಾ ಮಂಗೇಶ್ಕರ್ ಅವರ ಹಾಡುಗಳನ್ನು ಚಿಕ್ಕವರಿದ್ದಾಗಿನಿಂದಲೂ ಕೇಳುತ್ತಾ ಬೆಳೆದಿದ್ದೇವೆ. ಭಾರತೀಯ ಚಲನಚಿತ್ರರಂಗದಲ್ಲಿ ಲತಾ ಅವರದ್ದು ಅತ್ಯುತ್ತಮ ಧ್ವನಿ ಎಂದರೇ ತಪ್ಪಾಗಲಾರದು. ಅಷ್ಟೇ ಅಲ್ಲದೆ ಅವರು ಹಾಡೋದನ್ನು ಬಿಟ್ಟು ಅದರ ಆಚೆಗೆ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದರು ಎಂದರು. ಇದನ್ನೂ ಓದಿ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ

    ಲತಾ ಮಂಗೇಶ್ಕರ್ ಅವರನ್ನು ಭೇಟಿಯಾಗುವ ಭಾಗ್ಯ ನನಗೆ ಇದುವರೆಗೂ ಸಿಗಲಿಲ್ಲ. ಅಪ್ಪಾಜಿ ಡಾ. ರಾಜ್‍ಕುಮಾರ್ ಅವರನ್ನು ಭೇಟಿ ಮಾಡಿದ್ದರು. ನಮ್ಮ ಮಾವನವರಾದ ಬಂಗಾರಪ್ಪ ಅವರು ಕೂಡಾ ಅವರನ್ನು ಭೇಟಿ ಆಗಿದ್ದರು. ಬಂಗಾರಪ್ಪ ಅವರು ಸಿಎಂ ಆಗಿದ್ದಾಗ ಒಮ್ಮೆ ಅವರು ಬೆಂಗಳೂರಿಗೆ ಬಂದಿದ್ದ ಫೋಟೋವನ್ನು ನೋಡಿದ್ದು, ಮಧು ಬಂಗಾರಪ್ಪ ಅವರು ಅದನ್ನು ತೋರಿಸಿದ್ದರು ಎಂದು ಹೇಳಿದರು.

    ಅಪ್ಪಾಜಿ ರಾಜ್‍ಕುಮಾರ್ ಅವರು ಈ ಹಿಂದೆ ಬಾಂಬೆಯಲ್ಲಿದ್ದಾಗ ಲತಾರವರನ್ನು ಭೇಟಿ ಆಗಿದ್ದಾರೆ. ಅವರ ಧ್ವನಿ ಭಾರತೀಯ ಚಲನಚಿತ್ರರಂಗದಲ್ಲಿ ಎಂದಿಂದಿಗೂ ಅಜರಾಮರ. ಬೇರೆ ಮಕ್ಕಳಿಗೂ ಹಾಡಲು ಪ್ರೋತ್ಸಾಹ ನೀಡುತ್ತಿದ್ದು, ಅಂತ ಒಳ್ಳೇಯ ವಕ್ತಿತ್ವದ ಗಾಯಕಿಯನ್ನು ಕಳೆದುಕೊಂಡಿರುವುದು ನಮಗೆ ತುಂಬಾ ನೋವು ತಂದಿದೆ. ಭಾರತೀಯ ಚಲನಚಿತ್ರ ರಂಗಕ್ಕೆ ಇದು ಒಂದು ದೊಡ್ಡ ನಷ್ಟ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್

    ಲತಾ ಅವರು ಹಾಡಿರುವ ಅನೇಕ ಹಿಂದಿ ಸಾಫ್ಟ್, ಡಿವೋಶನಲ್ ಹಾಗೂ ಎಮೋಷನಲ್ ಹಾಡುಗಳ ಛಾಪು ಯಾವಗಲೂ ಸಂಗೀತಕ್ಷೇತ್ರದಲ್ಲಿ ಅಚ್ಚ ಅಳಿಯದೇ ಇದ್ದೇ ಇರುತ್ತೆ. ಅವರು ಹಾಡಿರುವ ಯಾವುದೇ ಹಾಡನ್ನು ಕೇಳಿದರು ಸಾಕು ಲತಾ ಮಂಗೇಶ್ಕರ್ ಅವರೇ ಹಾಡಿದ್ದಾರೆ ಅಂತಾ ಗೊತ್ತಾಗುತ್ತೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೌನ ಮುರಿದರು.