Tag: Dr. Puneeth Rajkumar

  • ದಿ. ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬಕ್ಕೆ ರಾಹುಲ್‌ ಗಾಂಧಿ ವಿಶ್‌

    ದಿ. ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬಕ್ಕೆ ರಾಹುಲ್‌ ಗಾಂಧಿ ವಿಶ್‌

    ನವದೆಹಲಿ: ಇಂದು ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ದಿವಂಗತ ಪುನೀತ್‌ ರಾಜ್‌ ಕುಮಾರ್‌ (Dr. Puneeth Rajkumar) ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಶುಭಕೋರಿದ್ದಾರೆ.

    ಈ ಸಂಬಂಧ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಅಪ್ಪು ಫೋಟೋದ ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ಅವರಿಗೆ ವಿನಮ್ರ ನಮನಗಳು. ಒಬ್ಬ ಅದ್ಭುತ ಕಲಾವಿದ, ಸಿನಿಮಾದಲ್ಲಿನ ಅವರ ಕೆಲಸ ಮತ್ತು ಜನರ ಕಲ್ಯಾಣಕ್ಕಾಗಿ ಅವರು ನೀಡಿರುವ ಕೊಡುಗೆ ಇಂದಿಗೂ ಅನೇಕರಿಗೆ ಸ್ಫೂರ್ತಿ ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ.

    ರಾಹುಲ್‌ ಗಾಂಧಿಯವರು (Rahul Gandhi) ಪುನೀತ್‌ ರಾಜ್‌ ಕುಮಾರ್‌ ಅವರು ನಿಧನರಾದ ಸಂದರ್ಭದಲ್ಲಿಯೂ ಟ್ವೀಟ್‌ ಮಾಡಿದ್ದರು. ಕನ್ನಡ ನಟ ಪುನೀತ್ ರಾಜ್​ಕುಮಾರ್ ಅವರ ಕುಟುಂಬ, ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದರು. ಅಲ್ಲದೇ ಕೆಲ ದಿನಗಳ ಬಳಿಕ ಪುನೀತ್‌ ಕುಟುಂಬ ಭೇಟಿಯಾಗಿ ಸಾಂತ್ವನ ಹೇಳಿದರು. ಇದೀಗ ನಟನ ಜನ್ಮದಿನವಾದ ಇಂದು ಕೂಡ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ನೆನಪಿನಲ್ಲಿ ಅಶ್ವಿನಿ- ಎಂದೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತ ಎಂದ ಪತ್ನಿ

    ಪುನೀತ್ ರಾಜ್​ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಪುಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಭಿಮಾನಿಗಳಿಂದ ಸೆಲೆಬ್ರಿಟಿಗಳವರೆಗೂ ಎಲ್ಲರೂ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಸಾಮಾಜಿಕ ಜಾತಲತಾಣಗಳಲ್ಲಿ ಅಪ್ಪು ಫೋಟೋ ಹಾಕಿ ವಿಶೇಷವಾಗಿ ಸಂಭ್ರಮಿಸುತ್ತಿದ್ದಾರೆ. ಇನ್ನೂ ಕೆಲವರು ಅಪ್ಪು ಸಮಾಧಿ ಬಳಿ ಹೋಗಿ ಪೂಜೆ ಸಲ್ಲಿಸುತ್ತಿದ್ದಾರೆ.

  • ಸಚಿನ್ ದಾಖಲೆ ಸರಿಗಟ್ಟಿದ್ದೇ ತಡ ಬೆಂಗ್ಳೂರಿನ ರಸ್ತೆಗಳಿಗೆ ಕೊಹ್ಲಿ ಹೆಸರಿಡಲು ಒತ್ತಾಯ

    ಸಚಿನ್ ದಾಖಲೆ ಸರಿಗಟ್ಟಿದ್ದೇ ತಡ ಬೆಂಗ್ಳೂರಿನ ರಸ್ತೆಗಳಿಗೆ ಕೊಹ್ಲಿ ಹೆಸರಿಡಲು ಒತ್ತಾಯ

    ಬೆಂಗಳೂರು: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಶತಕದ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿಗೆ (Virat Kohli) ಹೆಚ್ಚಿನ ಗೌರವ ಬೆಂಗಳೂರಿಗರು (Bengaluru) ನೀಡಬೇಕು. ಆರ್‌ಸಿಬಿಯ (RCB) ತಂಡದಲ್ಲೇ ಇರುವ ಕೊಹ್ಲಿಗೆ ಇನ್ನಷ್ಟು ಗೌರವವನ್ನು ನಮ್ಮ ಬಿಬಿಎಂಪಿ (BBMP), ಸರ್ಕಾರ ನೀಡಬೇಕು ಎಂದು ಪಾಲಿಕೆಗೆ ಮನವಿ ಬಂದಿದೆ.

    ವಿಶ್ವದಾಖಲೆಗಳ ಸರದಾರ ಕಿಂಗ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಸರಿಗಟ್ಟಿದ್ದೆ ತಡ, ಅವರ ಹೆಸರನ್ನು ಬೆಂಗಳೂರಿನ ಕೆಲ ರಸ್ತೆಗಳಿಗೆ ಇಡಬೇಕು ಎನ್ನುವ ಒತ್ತಾಯ ಮತ್ತೆ ಮುನ್ನೆಲೆಗೆ ಬಂದಿದೆ. ವಿರಾಟ್ ಕೊಹ್ಲಿ ಹಾಗೂ ನಮ್ಮ ಹೆಮ್ಮೆಯ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ (Dr.Puneeth Rajkumar) ಹೆಸರಿಡಲು ಪಾಲಿಕೆಗೆ ಈ ಹಿಂದೆಯೇ ಮನವಿ ಮಾಡಲಾಗಿತ್ತು. ಈ ಇಬ್ಬರ ಹೆಸರನ್ನು ಎರಡು ಪ್ರತ್ಯೇಕ ರಸ್ತೆಗಳಿಗೆ ಇರಿಸುವ ಮೂಲಕ ಅಭಿಮಾನಿಗಳ ಆಶಯ ಈಡೇರಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಲಂಕಾಗೆ ಮತ್ತೆ ಶಾಕ್‌ – ಕ್ರಿಕೆಟ್‌ ಮಂಡಳಿಯನ್ನೇ ಅಮಾನತುಗೊಳಿಸಿದ ICC

    ಶಾಂತಿನಗರ ಬಸ್ ಟರ್ಮಿನಲ್ ಎದುರಿನ ರಸ್ತೆಗೆ ಡಾ. ಪುನೀತ್ ರಾಜ್‌ಕುಮಾರ್ ಅವರ ಹೆಸರು ಹಾಗೂ ವಿಲ್ಸನ್ ಗಾರ್ಡನ್‌ನ 8ನೇ ಅಡ್ಡರಸ್ತೆಗೆ ವಿರಾಟ್ ಕೊಹ್ಲಿ ಹೆಸರು ಇಡಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆಯಲಾಗಿತ್ತು. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರು ಸರ್ಕಾರದ ಜೊತೆಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ. ಆದರೆ ರಸ್ತೆಗಳಿಗೆ ಈವರೆಗೆ ಯಾವುದೇ ಅಧಿಕೃತ ಹೆಸರು ಇರಿಸಿಲ್ಲ. ದಯವಿಟ್ಟು ಈ ಇಬ್ಬರು ಸಾಧಕರ ಹೆಸರು ಇಟ್ಟರೇ ಸೂಕ್ತ ಎನ್ನುವ ಮನವಿ ಮಾಡಲಾಗಿತ್ತು. ಆದರೆ ಈ ಬಗ್ಗೆ ಯಾಕೋ ನಿರಾಸಕ್ತಿ ತೋರುತ್ತಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಮರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆ ಒಬ್ಬ ಆಟಗಾರ 20-30 ಓವರ್‌ ಆಡಿದ್ರೆ, ಸೆಮಿಸ್‌ ಪ್ರವೇಶ ಮಾಡ್ತೀವಿ – ಬಾಬರ್‌ ಆಜಂ

    ನಿರಾಸಕ್ತಿ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ದೂರು ಸಹ ನೀಡಲಾಗಿದೆ. ಇಬ್ಬರು ಸಾಧಕರ ಹೆಸರು ಇಡಬೇಕು ಎಂದು ಪತ್ರ ಬರೆದು ಒಂದು ವರ್ಷ ಕಳೆದರೂ ಹೆಸರಿಡಲು ಪಾಲಿಕೆ ನಿರಾಸಕ್ತಿ ತೊರುತ್ತಿದೆ. ಈಗ ಕೊಹ್ಲಿ ವಿಶ್ವ ದಾಖಲೆ ಮಾಡಿದ್ದಾರೆ. ಆದರೇ ಇನ್ನೂ ಹೆಸರು ಇಡದ ಕಾರಣ ಡಿಸಿಎಂ ಡಿಕೆಶಿಗೆ ದೂರು ನೀಡಿದ್ದಾರೆ. ಕೂಡಲೇ ನೀವು ಹೆಸರಿಡಲು ಸೂಚಿಸಬೇಕು ಎಂದಿದ್ದಾರೆ. ಇದನ್ನೂ ಓದಿ: World Cup 2023: ಮೈಲಿಗಲ್ಲು ಸ್ಥಾಪಿಸಲು RO-KO ವೇಯ್ಟಿಂಗ್‌ – ಸೂಪರ್‌ ಸಂಡೇ ಡಬಲ್‌ ಧಮಾಕ..!

  • ಅಪ್ಪು ಹುಟ್ಟುವಾಗಲೇ ಸೂಪರ್ ಸ್ಟಾರ್: ನಟ ಶಿವಣ್ಣ ಭಾವನ್ಮಾತಕ ಮಾತು

    ಅಪ್ಪು ಹುಟ್ಟುವಾಗಲೇ ಸೂಪರ್ ಸ್ಟಾರ್: ನಟ ಶಿವಣ್ಣ ಭಾವನ್ಮಾತಕ ಮಾತು

    ಚಿತ್ರರಂಗದ ಪ್ರತಿಯೊಂದು ಕೆಲಸದಲ್ಲೂ ಪುನೀತ್ ಅವರನ್ನ ನೆನಪಿಸಿಕೊಳ್ತಾರೆ. ಪ್ರತಿ ಹೆಜ್ಜೆಯಲ್ಲೂ ಪವರ್‌ಸ್ಟಾರ್ ಪುನೀತ್ ಅವರನ್ನ ಸ್ಮರಿಸಿಸುತ್ತಾರೆ. ಇದೀಗ ಕನ್ನಡ ಒಟಿಟಿ ಟಾಕೀಸ್ ಲಾಂಚ್ ಕಾರ್ಯಕ್ರಮವೊಂದರಲ್ಲಿ ನಟ ಶಿವಣ್ಣ ಸಹೋದರ ಪುನೀತ್ ನೆನಪುಗಳನ್ನು ಮತ್ತೆ ಮೆಲುಕು ಹಾಕಿದ್ದಾರೆ.

    ನಟ ಪುನೀತ್ ರಾಜ್‌ಕುಮಾರ್ ಅವರು ಬಾಲನಟನಾಗಿ ಬಂದು, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದೈತ್ಯ ಪ್ರತಿಭೆ. ಡಾ. ರಾಜ್‌ಕುಮಾರ್ ಪುತ್ರ ಅನ್ನೋ ಹಣೆಪಟ್ಟಿಯನ್ನು ಮೀರಿ ತಮ್ಮ ಸ್ವಂತ ಪ್ರತಿಭೆಯಿಂದ ಗುರುತಿಸಿಕೊಂಡವರು. ಇನ್ನು ಕನ್ನಡ ಚಿತ್ರರಂಗ ಪುನೀತ್ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕನ್ನಡ ಒಟಿಟಿ ಟಾಕೀಸ್ ಲಾಂಚ್ ಮಾಡಿದ ಸಂದರ್ಭದಲ್ಲಿ ಅಪ್ಪು ಕುರಿತು ಶಿವಣ್ಣ ಮಾತಾನಾಡಿದ್ದಾರೆ. ಇದನ್ನೂ ಓದಿ: ಮಗಳ ನಿರ್ಮಾಣದ ವೆಬ್ ಸೀರಿಸ್‌ನಲ್ಲಿ ಶಿವಣ್ಣ ಆಕ್ಟಿಂಗ್

    ಕನ್ನಡ ಒಟಿಟಿ ಟಾಕೀಸ್ ವಿಭಿನ್ನ ಪ್ರಯತ್ನಕ್ಕೆ ಶಿವಣ್ಣ ಸಾಥ್ ಕೊಟ್ಟಿದ್ದಾರೆ. ಈ ವೇಳೆ ಮಾತಾನಾಡಿದ ಶಿವಣ್ಣ, ನನ್ನ ತಮ್ಮ ಅಪ್ಪು ವಿಷಯ ಪ್ರಸ್ತಾಪ ಮಾಡದೇ ಚಿತ್ರರಂಗದ ವಿಷಯವನ್ನು ಮಾತನಾಡಲು ಸಾಧ್ಯವಿಲ್ಲ. ಅವನು ಚಿಕ್ಕ ವಯಸ್ಸಿನಲ್ಲೇ ಸೂಪರ್ ಸ್ಟಾರ್. ಅವನು ಇದ್ದಿದ್ದರೆ ಸಾಕಷ್ಟು ಕೆಲಸ ಮಾಡುತ್ತಿದ್ದ ಇನ್ನೂ ಸಾಕಷ್ಟು ಕೆಲಸ ಮಾಡುತ್ತಿದ್ದ ಎಂದು ಶಿವಣ್ಣ ಭಾವುಕರಾಗಿದ್ದಾರೆ. ಅಪ್ಪು ಅಗಲಿಕೆಯಿಂದ ಇಡೀ ಕುಟುಂಬಕ್ಕೆ ಆದ ನೋವನ್ನು ಹೇಳಲು ಅಸಾಧ್ಯ. ಆದರೂ ಆ ನೋವಿನ ಜತೆ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ.

  • ಅಪ್ಪು ಪೋಸ್ಟರ್ ತೆರವುಗೊಳಿಸಿದ ಆಂಧ್ರ ಸಿಬ್ಬಂದಿ: ಕರವೇ ಗಜಸೇನೆ ಖಡಕ್ ವಾರ್ನಿಂಗ್

    ಅಪ್ಪು ಪೋಸ್ಟರ್ ತೆರವುಗೊಳಿಸಿದ ಆಂಧ್ರ ಸಿಬ್ಬಂದಿ: ಕರವೇ ಗಜಸೇನೆ ಖಡಕ್ ವಾರ್ನಿಂಗ್

    ತಿರುಪತಿ ದೇವಸ್ಥಾನಕ್ಕೆ ಹೋಗುವಾಗ ಕಾರಿನ ಮೇಲಿದ್ದ ಫೋಟೋ ಮತ್ತು ನಾಡಧ್ವಜವನ್ನು ತೆರವುಗೊಳಿಸಿದ್ದಕ್ಕೆ ಆಂಧ್ರ ರಕ್ಷಣಾ ಸಿಬ್ಬಂದಿ ವರ್ತನೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಹೋರಾಟ ಮಾಡಿತು.

    ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವಾಗ ಕಾರಿನ ಮೇಲಿದ್ದ ಫೋಟೋ ಮತ್ತು ನಾಡಧ್ವಜವನ್ನು ತೆರೆವು ಮಾಡಿದ್ದ ಟಿಟಿಡಿ ಸಿಬ್ಬಂದಿ ಕ್ರಮ ವಿರೋಧಿಸಿ ಕರವೇ ಗಜಸೇನೆ ಹೋರಾಟ ಮಾಡಿದ್ದಾರೆ. ತಿರುಪತಿಯ ಅಮಾನವೀಯ ಘಟನೆಯನ್ನು ವಿರೋಧಿಸಿ ಟಿಟಿಡಿ ದೇವಸ್ಥಾನದ ಬೆಂಗಳೂರು ಮಲ್ಲೇಶ್ವರ ಆವರಣದಲ್ಲಿ ಕರವೇ ಗಜಸೇನೆ ಉಗ್ರ ಹೋರಾಟ ಮಾಡಲಾಗಿದೆ.

    ಈ ವೇಳೆ ಟಿಟಿಡಿ ಆಂಧ್ರಪ್ರದೇಶದ ಸಿಬ್ಬಂದಿಗಳಿಂದ ನಟ ಪುನೀತ್ ಅವರ ಭಾವಚಿತ್ರ ಇರುವ ಗಾಡಿಯನ್ನು ತಿರುಮಲ ಬೆಟ್ಟ ಹತ್ತಲು ಬಿಡದೇ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಟಿಟಿಡಿ ದೇವಸ್ಥಾನದ ಒಳಗಡೆ ಪುನೀತ್ ಫೋಟೋ ಇಟ್ಟು ಕರವೇ ಗಜಸೇನೆ ಪೂಜೆ ಮಾಡಿದ್ದಾರೆ. ಇದೇ ವೇಳೆ ಕರ್ನಾಟಕದ ಗಜಸೇನೆ ಮತ್ತು ಪುನೀತ್ ಅಭಿಮಾನಿಗಳು ತಿರುಮಲದ ಟಿಟಿಡಿ ಭದ್ರತಾ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನು ಓದಿ:ತಿರುಪತಿಯಲ್ಲಿ ಅಪ್ಪು ಪೋಸ್ಟರ್ ತೆರವು: ನಟ ಶಿವಣ್ಣ ಬೇಸರ

    ಅಪ್ಪು ಪೋಸ್ಟರ್ ಜತೆಗೆ ಕನ್ನಡ ಧ್ವಜಕ್ಕೂ ಅವಮಾನಿಸಿದ್ದಕ್ಕೆ ತಿರುಪತಿಯ ರಕ್ಷಣಾ ಸಿಬ್ಬಂದಿ ಈ ಕೂಡಲೇ ಕ್ಷಮೆ ಕೋರಬೇಕು. ಅಪ್ಪು ವಿಚಾರ ಕನ್ನಡಿಗರಿಗೆ ನೋವು ತಂದಿದೆ. ಈ ಅನ್ಯಾಯವನ್ನು ಆಂಧ್ರ ಸರ್ಕಾರ ಸರಿಪಡಿಸಬೇಕು ಇಲ್ಲವಾದಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದು ಕರವೇ ಗಜಸೇನೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಹೋರಾಟಕ್ಕೆ ಪುನೀತ್ ಅಭಿಮಾನಿಗಳು ಸಾಥ್ ನೀಡಿದ್ದಾರೆ.

  • ತಿರುಪತಿಯಲ್ಲಿ ಅಪ್ಪು ಪೋಸ್ಟರ್ ತೆರವು: ನಟ ಶಿವಣ್ಣ ಬೇಸರ

    ತಿರುಪತಿಯಲ್ಲಿ ಅಪ್ಪು ಪೋಸ್ಟರ್ ತೆರವು: ನಟ ಶಿವಣ್ಣ ಬೇಸರ

    ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವಾಗ ಕಾರಿನ ಮೇಲಿದ್ದ ಫೋಟೋ ಮತ್ತು ನಾಡಧ್ವಜವನ್ನು ತೆರೆವು ಮಾಡಿದ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರೋ ನಟ ಶಿವರಾಜ್‌ಕುಮಾರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

    ತಿರುಪತಿಯಲ್ಲಿ ಅಪ್ಪು ಪೋಸ್ಟರ್ ತೆರವು ಮಾಡಿದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಶಿವಣ್ಣ, ಪುನೀತ್ ಭಾವಚಿತ್ರ ತೆಗೆಸಿರುವ ವಿಚಾರ ನನಗೆ ಗೊತ್ತಿಲ್ಲ ಆದರೆ ಯಾರದ್ದೇ ಆಗಲಿ ಈ ರೀತಿ ಮಾಡಬಾರದು. ನನ್ನ ತಮ್ಮ ಅಂತಾ ಈ ಮಾತನ್ನ ಹೇಳುತ್ತಿಲ್ಲ ಏಕೆಂದರೆ ಅಭಿಮಾನದಿಂದ ಅಭಿಮಾನಿಗಳು ಫೋಟೋ ಹಾಕಿರುತ್ತಾರೆ. ಅವರ ಭಾವನೆಗೆ ಧಕ್ಕೆ ತರಬಾರದು. ಒಬ್ಬ ಮನುಷ್ಯನಿಗೆ ಇನ್ನೊಬ್ಬ ಮನುಷ್ಯ ನೋವು ಕೊಡಬಾರದು.

    ಎಲ್ಲರಲ್ಲೂ ಒಂದು ಟ್ರೂ ಫೀಲಿಂಗ್ ಇರುತ್ತೆ ಅದಕ್ಕೆ ಮಸಿ ಬಳಿಯಬಾರದು. ನಮಗೆ ಇಷ್ಟ ಇರುತ್ತೋ ಇಲ್ವೋ ಗೊತ್ತಿಲ್ಲ ಯಾರು ಈ ರೀತಿ ಮಾಡಬಾರದು. ವಿಐಪಿ ಆಗಿರಲಿ, ಸಾಮಾನ್ಯ ವ್ಯಕ್ತಿಯಾಗಿರಲಿ ನೋವಾಗುವಂತೆ ಯಾರು ನಡೆದುಕೊಳ್ಳಬಾರದು ಅವರಲ್ಲಿ ಒಂದು ಫೀಲಿಂಗ್ಸ್ ಇರುತ್ತೆ. ಅದರಲ್ಲೂ ಫ್ಯಾನ್ಸ್‌ಗಳಿಗೆ ಅವಮಾನ ಮಾಡಬಾರದು ಎಂದರು. ಇದನ್ನೂ ಓದಿ: ಪ್ರಿನ್ಸ್‌ ಮಹೇಶ್‌ ಬಾಬುಗೆ ʻಭರಾಟೆʼ ಬ್ಯೂಟಿ ಜೋಡಿ

    ಇದೇ ವೇಳೆ ಸಂಚಲನ ಮೂಡಿಸುತ್ತಿರುವ ರಾಷ್ಟ್ರ ಭಾಷೆ ಕುರಿತಂತೆ ಮಾತಾನಾಡಿದ ಶಿವಣ್ಣ, ಎಲ್ಲಾ ಭಾಷೆಗಳು ಒಂದೇ ಅಂತಾ ನಮ್ಮ ರಾಷ್ಟ್ರ ಗೀತೆಯಲ್ಲಿದೆ. ದೇಶದಲ್ಲಿ ಎಲ್ಲಾ ಭಾಷೆ ಇದೆ. ನಾವೆಲ್ಲಾ ಒಂದೇ ಆದರೆ ಕನ್ನಡದ ವಿಚಾರಕ್ಕೆ ಬಂದರೆ ನಮಗೆ ಕನ್ನಡವೇ ಮುಖ್ಯ ಎಂದರು.

  • ಕರ್ಮಭೂಮಿಯಿಂದ ಪುಣ್ಯ ಭೂಮಿವರೆಗೂ ಅಮರ ಜ್ಯೋತಿ ಯಾತ್ರೆ: ಡಾ.ರಾಜ್ ಸಹೋದರಿ ನಾಗಮ್ಮರಿಂದ ಚಾಲನೆ

    ಕರ್ಮಭೂಮಿಯಿಂದ ಪುಣ್ಯ ಭೂಮಿವರೆಗೂ ಅಮರ ಜ್ಯೋತಿ ಯಾತ್ರೆ: ಡಾ.ರಾಜ್ ಸಹೋದರಿ ನಾಗಮ್ಮರಿಂದ ಚಾಲನೆ

    ಚಾಮರಾಜನಗರ: ಏಪ್ರಿಲ್ 24 ರಂದು ದಿವಂಗತ ಮೇರುನಟ ಡಾ.ರಾಜ್‍ಕುಮಾರ್ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಅವರ ಜನ್ಮಸ್ಥಳದಿಂದ ಸಮಾಧಿಯವರೆಗೆ ಅಮರ ಜ್ಯೋತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಡಾ.ರಾಜ್ ಹಾಗೂ ಡಾ.ಪುನೀತ್ ರಾಜ್‍ಕುಮಾರ್ ಅವರ ಅಮರಜ್ಯೋತಿ ಯಾತ್ರೆಯನ್ನು ರಾಜ್ ಹುಟ್ಟೂರು ದೊಡ್ಡಗಾಜನೂರಿನಲ್ಲಿ ಇಂದು(ಗುರುವಾರ) ಚಾಲನೆ ನೀಡಲಾಯಿತು.

    ಗಾಜನೂರಿನಲ್ಲಿರುವ ಡಾ.ರಾಜ್ ಸಹೋದರಿ ನಾಗಮ್ಮರಿಂದ ಜ್ಯೋತಿ ಬೆಳಗಿಸಿ ಹಸ್ತಾಂತರಿಸುವ ಮೂಲಕ ಕರ್ಮಭೂಮಿಯಿಂದ ಪುಣ್ಯಭೂಮಿವರೆಗಿನ ಅಮರಜ್ಯೋತಿ ಯಾತ್ರೆ ಮೆರವಣಿಗೆಗೆ ಚಾಲನೆ ನೀಡಿದರು. ದೊಡ್ಮನೆ ಕುಟುಂಬದ ಅಭಿಮಾನಿಗಳ ಬಳಗದಿಂದ ಹಮ್ಮಿಕೊಂಡಿರುವ ಈ ಯಾತ್ರೆ ಇಂದು ಗಾಜನೂರಿನಿಂದ ಹೊರಟು ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಮೂಲಕ ತೆರಳಿ ಏಪ್ರಿಲ್ 24 ರಂದು ಬೆಂಗಳೂರಿಗೆ ತೆರಳಿ ರಾಜ್ ಹಾಗೂ ಪುನೀತ್‍ ರಾಜ್‍ಕುಮಾರ್ ಸಮಾಧಿ ತಲುಪಲಿದೆ. ಇದನ್ನೂ ಓದಿ:  ಧ್ವಂಸಗೊಂಡ ಅಪ್ಪನ ಅಂಗಡಿಯಲ್ಲಿ ಕಾಯಿನ್ ಸಂಗ್ರಸುತ್ತಿದ್ದ ಬಾಲಕ – ಫೋಟೋ ವೈರಲ್ 

    ಡಾ.ರಾಜ್ ಹಾಗೂ ಡಾ.ಪುನೀತ್ ರಾಜ್‍ಕುಮಾರ್ ಎಂದೆಂದಿಗೂ ಅಮರ ಎಂದು ಸಾರಲು ಹಾಗೂ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಆಶಿಸಿ ಈ ಅಮರ ಜ್ಯೋತಿ ಯಾತ್ರೆ ನಡೆಸಲಾಗುತ್ತಿದೆ ಎಂದು ದೊಡ್ಮನೆ ಕುಟುಂಬದ ಅಭಿಮಾನಿಗಳ ಬಳಗದ ಅಧ್ಯಕ್ಷ ಮುನಿಯಪ್ಪ ತಿಳಿಸಿದರು.

  • ಡಾ.ಪುನೀತ್ ರಾಜ್‍ಕುಮಾರ್ ನೆನೆದು ಗುಣಗಾನ ಮಾಡಿದ ಪ್ರಿಯಾಂಕ್ ಖರ್ಗೆ

    ಡಾ.ಪುನೀತ್ ರಾಜ್‍ಕುಮಾರ್ ನೆನೆದು ಗುಣಗಾನ ಮಾಡಿದ ಪ್ರಿಯಾಂಕ್ ಖರ್ಗೆ

    ಕಲಬುರಗಿ: ಡಾ.ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನೆನೆದು ಸಿನಿರಂಗದವರು ಮಾತ್ರವಲ್ಲ ಅವರ ಸಮಾಜಮುಖಿ ಕೆಲಸಗಳನ್ನು ನೆನೆದು ರಾಜಕೀಯ ಮುಖಂಡರು ಅವರನ್ನು ಗುಣಗಾನ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ರಾಜಕೀಯ ಗಣ್ಯರು ಅಪ್ಪು ನೆನೆದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಮಾಜಿ ಸಚಿವರು, ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಸಹ ಅಪ್ಪು ಹುಟ್ಟುಹಬ್ಬದ ಸಂದರ್ಭದಲ್ಲಿ ಅವರನ್ನು ನೆನೆದು ಭಾವುಕ ಪೋಸ್ಟ್ ಮಾಡಿದ್ದಾರೆ.

    ಖರ್ಗೆ ಅವರು ಟ್ವಿಟ್ಟರ್‌ನಲ್ಲಿ, ಕಾಂಗ್ರೆಸ್ ಯೂಥ್ ಐಕಾನ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿರುವುದು ನಿಜಕ್ಕೂ ನಂಬಲಾರದ ಸತ್ಯ. ಅವರು ದೈಹಿಕವಾಗಿ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶಗಳು, ಅವರ ಯೋಚನೆಗಳು, ಯೋಜನೆಗಳು ಎಂದೆಂದಿಗೂ ನಮ್ಮೊಂದಿಗಿರುತ್ತದೆ ಎಂದು ಕರುನಾಡ ಕುವರನ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್

    ಸಾವಿರಾರು ಮಕ್ಕಳಿಗೆ ವಿದ್ಯೆ ನೀಡಿ, ಅನೇಕರಿಗೆ ತೆರೆಮರೆಯಲ್ಲಿ ನಿಂತು ಬದುಕು ಕಟ್ಟಿ ಕೊಟ್ಟ ರಾಜಕುಮಾರ, ಎಂದೆಂದಿಗೂ ಮರೆಯಲಾಗದ ಮಾಣಿಕ್ಯ ಡಾ.ಪುನೀತ್ ರಾಜ್‍ಕುಮಾರ್ ಅವರ ಜಯಂತಿಯಂದು ಅವರನ್ನ ಹೃದಯ ಪೂರ್ವಕವಾಗಿ ಸ್ಮರಿಸುತ್ತೇನೆ ಎಂದು ಫೇಸ್ ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.