Tag: dr. puneeth raj kumar

  • ಪುನೀತ್‌ ಹೆಸರಲ್ಲಿ ಯೋಜನೆ ಜಾರಿ- Heart Attack ಆದ್ರೆ ಗೋಲ್ಡನ್  Hourನಲ್ಲಿ ಟ್ರೀಟ್ಮೆಂಟ್

    ಪುನೀತ್‌ ಹೆಸರಲ್ಲಿ ಯೋಜನೆ ಜಾರಿ- Heart Attack ಆದ್ರೆ ಗೋಲ್ಡನ್ Hourನಲ್ಲಿ ಟ್ರೀಟ್ಮೆಂಟ್

    –  ಚಿಕಿತ್ಸೆ ಹೇಗೆ?, ಖರ್ಚು ಎಷ್ಟು?, ಎಲ್ಲೆಲ್ಲಿ ಹಬ್‍ಗಳಿವೆ?

    ಬೆಂಗಳೂರು: ಇತ್ತಿಚೆಗೆ ಯುವಕರು ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಿರುವುದೇ ಹೆಚ್ಚು. ಅಧ್ಯಯನದ ಪ್ರಕಾರ, ಹೃದಯಾಘಾತಕ್ಕೆ ಈಡಾಗುವರಲ್ಲಿ 35% ರಷ್ಟು ಮಂದಿ 40ರ ಆಸುಪಾಸಿನ ವಯಸ್ಸಿನವರು ಎಂಬುದು ಕಳವಳಿಕಾರಿ ಸಂಗತಿಯಾಗಿದೆ. ಹೃದಯಾಘಾತ (Heart Attack) ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಜೀವಗಳನ್ನ ಉಳಿಸಬೇಕು. ಮತ್ತೆ ಗೋಲ್ಡನ್ ಹವರ್ ಒಳಗೆ, ಸಕಾಲಕ್ಕೆ ಅವರಿಗೆ ಚಿಕಿತ್ಸೆ ದೊರೆಯಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ (Health Department) ಮಹತ್ವದ ಹೆಜ್ಜೆಯಿಟ್ಟಿದೆ.

    ಪುನೀತ್ ರಾಜಕುಮಾರ್ (Dr. Puneeth Raj Kumar) ಅವರ ಹೆಸರಿನಲ್ಲೇ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯನ್ನ ಅನುಷ್ಠಾನಕ್ಕೆ ತರಲಾಗುತ್ತಿದೆ. ಎರಡು ರೀತಿಯಲ್ಲಿ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ. Hub & Spoke ಮಾದರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ AED ಸಾಧನಗಳಗಳನ್ನ ಅಳವಡಿಸುವ ಯೋಜನೆಯನ್ನು ಇಲಾಖೆ ಇಟ್ಟುಕೊಂಡಿದೆ.

    ಚಿಕಿತ್ಸೆ ಹೇಗೆ?, ಖರ್ಚು ಎಷ್ಟು..?: ಯಾರಿಗೆ ಎದೆನೋವು ಕಾಣಿಸಿಕೊಂಡ್ರೂ, ಅವರು Spoke ಕೇಂದ್ರಗಳಿಗೆ ಭೇಟಿ ನೀಡಿದರೆ ತಕ್ಷಣ ECG ಮಾಡಲಾಗುತ್ತೆ. ಜೊತೆಗೆ AIತಂತ್ರಜ್ಞಾನದ ಮೂಲಕ ಅವರ ಪರಿಸ್ಥಿತಿ ಕ್ರಿಟಿಕಲ್ ಇದೆಯಾ, ಇಲ್ವಾ ಅನ್ನೋದನ್ನ ಸ್ಥಳದಲ್ಲಿಯೇ ನಾಲ್ಕರಿಂದ ಐದು ನಿಮಿಷದೊಳಗೆ ಪತ್ತೆ ಹಚ್ಚಲಾಗುತ್ತೆ. Tricog ಸಂಸ್ಥೆಯವರ AI ತಂತ್ರಜ್ಞಾನದ ಸಹಾಯ ಪಡೆದು ಕ್ರಿಟಿಕಲ್ ಅಥವಾ ನಾನ್ ಕ್ರಿಟಿಕಲ್ ಅನ್ನೋದನ್ನ ಪತ್ತೆ ಹಚ್ಚುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದನ್ನೂ ಓದಿ: BMTC ಸಾರಥಿಗಳ ಹಾರ್ಟ್ ಇನ್ ಡೇಂಜರ್- ಜಯದೇವ ವೈದ್ಯರ ವರದಿಯಲ್ಲಿ ಬಹಿರಂಗ

    ಯಾರು ಕ್ರಿಟಿಕಲ್ ಹಂತದಲ್ಲಿದ್ದಾರೆ, ಅವರಿಗೆ  ಸ್ಫೋಕ್ ಕೇಂದ್ರಗಳಲ್ಲೇ ಅಂದ್ರೆ ತಾಲೂಕು ಆಸ್ಪತ್ರೆಗಳಲ್ಲೇ ಉಚಿತವಾಗಿ Tenecteplase ಇಂಜೆಕ್ಷನ್ ನ ಕೊಡಲಾಗುತ್ತೆ. ಈ ಇಂಜೆಕ್ಷನ್ ಹಠಾತ್ ಹೃದಯಾಘಾತ ಆಗುವುದನ್ನ ತಡೆಯುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಹೀಗಾಗಿ ಕ್ರಿಟಿಕಲ್ ಹಂತದಲ್ಲಿ ಇರುವವರಿಗೆ ತಕ್ಷಣಕ್ಕೆ ಹಾರ್ಟ್ ಅಟ್ಯಾಕ್ ಆಗದಂತೆ ನೋಡಿಕೊಳ್ಳುವಲ್ಲಿ ಈ ಚಿಕಿತ್ಸೆ ಸಹಕಾರಿಯಾಗಲಿದೆ. ಒಂದು Tenecteplase‌ ಚುಚ್ಚುಮದ್ದಿಗೆ ಖಾಸಗಿ ಆಸ್ಪತ್ರೆಗಳಲ್ಲಿ 30 ರಿಂದ 45 ಸಾವಿರ ಚಾರ್ಜ್ ಮಾಡ್ತಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಇಂಜೆಕ್ಷನ್ ಅನ್ನ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ.

    ತಾಲೂಕು ಅಥವಾ ಜಿಲ್ಲಾಸ್ಪತ್ರೆಯ ಸ್ಪೋಕ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗೆ ನಾವು ಸೂಪರ್ ಸ್ಪಾಷಾಲಿಟಿ ಆಸ್ಪತ್ರೆಯ ಹಬ್ ಕೇಂದ್ರಗಳಿಗೆ ಅಂಬುಲೆನ್ಸ್ ಸಹಾಯದೊಂದಿಗೆ ಕಳಿಸಿಕೊಡುವುದು. ಅಲ್ಲಿ ರೋಗಿಗಳಿಗೆ ಹೆಚ್ಚಿನ ವೈದ್ಯಕೀಯ ಸೇವೆಯನ್ನ ಕಲ್ಪಿಸಲಾಗುತ್ತೆ. ಆಂಜಿಯೋಗ್ರಾಮ್ ಅಥವಾ ಆಂಜಿಯೋಪ್ಲ್ಯಾಸ್ಟಿ, ಸೇರಿದಂತೆ ಉನ್ನತ ಮಟ್ಟದ ಹೃದಯ ಚಿಕಿತ್ಸೆಯನ್ನ ಈ Hub ಕೇಂದ್ರಗಳಲ್ಲಿ ಪಡೆಯಬಹುದಾಗಿದೆ.

    ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ Hub ಗಳಲ್ಲೂ ಕೂಡಾ ಬಿ.ಪಿ.ಎಲ್ ಕಾರ್ಡುದಾರರಿಗೆ ಉಚಿತ ಚಿಕಿತ್ಸೆ ದೊರೆಯಲಿದೆ. APL ಕಾರ್ಡುದಾರರು ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಅಡಿಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಜಯದೇವ ಹೃದ್ರೋಗ ಸಂಸ್ಥೆಯ ಬೆಂಗಳೂರು, ಮೈಸೂರು ಮತ್ತು ಕಲಬುರಗಿ ಆಸ್ಪತ್ರೆಗಳ ಮೂರು ಹಬ್ ಗಳ ವ್ಯಾಪ್ತಿಗೆ 45 ಸ್ಪೋಕ್ ಕೇಂದ್ರಗಳನ್ನ ಸಂಪರ್ಕಿಸಲಾಗಿದೆ. ಇವುಗಳಲ್ಲಿ 35 ತಾಲೂಕು ಆಸ್ಪತ್ರೆಗಳು ಮತ್ತು 10 ಜಿಲ್ಲಾಸ್ಪತ್ರೆಗಳು ಸೇರಿವೆ.

    ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಧಾರವಾಡ,  ಬಾಗಲಕೋಟೆ, ಬೆಳಗಾವಿ, ಬೆಂಗಳೂರು, ಮೈಸೂರು ಹಾಗೂ ಕಲಬುರಗಿಯಲ್ಲಿ ಹಬ್‌ಗಳಿವೆ. ಒಟ್ಟಾರೆ ರಾಜ್ಯದ 31 ಜಿಲ್ಲೆಗಳ ವ್ಯಾಪ್ತಿಯಲ್ಲಿ 10 ಹಬ್ಸ್, ಹಾಗೂ 85 ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಸ್ಪೋಕ್ ಕೇಂದ್ರಗಳನ್ನ ರೂಪಿಸುವ ಮೂಲಕ, ಹಠಾತ್ ಹೃದಯಘಾತಕ್ಕೆ ಒಳಗಾಗುವವರ ಜೀವ ಉಳಿಸುವಂತ ಒಂದು ಪರಿಣಾಮಕಾರಿ ಚಿಕಿತ್ಸಾ ಕಾರ್ಯಕ್ರಮವನ್ನ ಪುನಿತ್ ರಾಜಕುಮಾರ್ ಹೆಸರಿನಲ್ಲಿ ಜಾರಿಗೆ ತರುತ್ತಿದೆ.

    ಪುನೀತ್ ರಾಜಕುಮಾರ್ ಹೃದಯಜ್ಯೋತಿ ಕಾರ್ಯಕ್ರಮದ ಇನ್ನೊಂದು ಭಾಗವಾಗಿ 2 ಕೋಟಿ ವೆಚ್ಚದಲ್ಲಿ AED (Automated External Defibrillator) ಸಾಧನಗಳನ್ನ ಅಳವಡಿಸಲು ನಿರ್ಧರಿಸಲಾಗಿದೆ. ಬಸ್ ಸ್ಟಾಂಡ್, ರೈಲ್ವೇ ಸ್ಟೇಷನ್ಸ್, ಏರ್ ಪೋರ್ಟ್, ವಿಧಾನಸೌಧ, ಕೋರ್ಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂ ಚಾಲಿತ ಡಿಫಿಬ್ರಿಲೇಟರ್ ಗಳನ್ನ ಅಳವಡಿಸಲಾಗುತ್ತಿದೆ. ಒಂದು AED ಸಾಧನ ಖರೀದಿಗೆ 1 ಲಕ್ಷದ 10 ಸಾವಿರದ ವರೆಗೆ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ. ಈ ಸಾಧನಗಳನ್ನ ಖರೀದಿ ಪ್ರಗತಿಯಲ್ಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿ. ಪುನೀತ್‍ಗೆ ಕರ್ನಾಟಕ ರತ್ನ ಪ್ರಶಸ್ತಿ- ಮನೆ ಮನೆಗೆ ಕನ್ನಡ ಧ್ವಜ ಫ್ರೀ

    ದಿ. ಪುನೀತ್‍ಗೆ ಕರ್ನಾಟಕ ರತ್ನ ಪ್ರಶಸ್ತಿ- ಮನೆ ಮನೆಗೆ ಕನ್ನಡ ಧ್ವಜ ಫ್ರೀ

    ಚಿಕ್ಕೋಡಿ (ಬೆಳಗಾವಿ): ಕರ್ನಾಟಕ ರಾಜ್ಯೋತ್ಸವ ಹಾಗೂ ದಿವಂಗತ ಡಾ. ಪುನೀತ್ ರಾಜಕುಮಾರ್ (Dr. Puneeth Raj Kumar) ಅವರಿಗೆ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ನೌಕರರೆಲ್ಲ ಸೇರಿ ಪ್ರತಿ ಮನೆಗೆ ಕನ್ನಡ ಧ್ವಜ ನೀಡಿ ಅಪ್ಪುಗೆ ಗೌರವ ಸಲ್ಲಿಸಿದ್ದಾರೆ.

    ಗ್ರಾಮದ ಪ್ರತಿ ಮನೆಗಳಿಗೂ ಕನ್ನಡ ಧ್ವಜ (Kannada Flag) ನೀಡಿ ಧ್ವಜಾರೋಹಣ ಮಾಡುವ ಕಾರ್ಯವನ್ನ ನೇರಲಿ ಗ್ರಾಮ ಪಂಚಾಯತಿ ವತಿಯಿಂದ ಮಾಡಲಾಗಿದೆ. ರಾಜ್ಯೋತ್ಸವ ದಿನದಂದು ನೇರಲಿ ಗ್ರಾಮದ ಪ್ರತಿ ಮನೆ ಮನೆಗಳಲ್ಲೂ ಕನ್ನಡ ಬಾವುಟ ರಾರಾಜಿಸುತ್ತಿತ್ತು. ಇದನ್ನೂ ಓದಿ: ನಕ್ಷತ್ರದ ಕಣ್ಣುಗಳಿರುವ ಅಪ್ಪು ದೇವರ ಮಗು ಎಂದು ಹಾಡಿ ಹೊಗಳಿದ ರಜನಿಕಾಂತ್

    ಪವರ್ ಸ್ಟಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ದೊರಕಿದ್ದು, ಇಡೀ ಗ್ರಾಮಕ್ಕೆ ಅಲ್ಲದೇ ರಾಜ್ಯಕ್ಕೆ ಸಂತಸ ತಂದಿದೆ ಎಂದು ಗ್ರಾಮ ಪಂಚಾಯತಿ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇವತ್ತು ನಾನು ನಿರ್ದೇಶಕನಾಗಿರಲು ಅಪ್ಪುನೇ ಕಾರಣ: ಜೇಮ್ಸ್‌ ಡೈರೆಕ್ಟರ್

    ಇವತ್ತು ನಾನು ನಿರ್ದೇಶಕನಾಗಿರಲು ಅಪ್ಪುನೇ ಕಾರಣ: ಜೇಮ್ಸ್‌ ಡೈರೆಕ್ಟರ್

    ಬೆಂಗಳೂರು: ಇವತ್ತು ನಾನು ನಿರ್ದೇಶಕನಾಗಿರಲು ಅವರೇ ಕಾರಣ. ಒಂದು ವರ್ಷ ಹೇಗೆ ಕಳೆದಿದೆ ಅನ್ನೋದೆ ಗೊತ್ತಾಗುತ್ತಿಲ್ಲ ಎಂದು ಜೇಮ್ಸ್ ನಿರ್ದೇಶಕ (James Director) ಮಹೇಶ್ ಬಾಬು (Mahesh Babu) ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪುನೀತ್ (Puneeth Raj Kumar) ಸರ್ ಇಲ್ಲ ಅನ್ನೋದನ್ನ ಇನ್ನೂ ನಂಬೋಕೆ ಆಗುತ್ತಿಲ್ಲ. ನಾನು ಕೂಡ ಸಾಕಷ್ಟು ಚಿತ್ರಗಳಲ್ಲಿ ಅವರ ಜೊತೆ ಕೆಲಸ ಮಾಡಿದೆ. ಇವತ್ತು ನಾನು ನಿರ್ದೇಶಕನಾಗಿರಲು ಅವರೇ ಕಾರಣ. ಒಂದು ವರ್ಷ ಹೇಗೆ ಕಳೆದಿದೆ ಅನ್ನೋದೆ ಗೊತ್ತಾಗುತ್ತಿಲ್ಲ. ಅವರು ಇದ್ದಗಲೂ ಸಾಕಷ್ಟು ಜನರಿಗೆ ಮಾದರಿಯಾಗಿದ್ರು, ಅಗಲಿದ ಬಳಿಕವು ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ. ಗಂಧದಗುಡಿ ಮೂಲಕವು ಸಾಕಷ್ಟು ಜನರಿಗೆ ಪ್ರೇರೇಪಿತರಾಗಿದ್ದಾರೆ ಎಂದರು.

    ಇದೇ ವೇಳೆ ನಿರ್ದೇಶಕ ಚೇತನ್ (Director Chetan) ಮಾತನಾಡಿ, ಕೊನೆಯ ಚಿತ್ರ ನಿರ್ದೇಶನ ಸಂದರ್ಭದಲ್ಲಿ ಅಪ್ಪು ಸರ್ ಕೊನೆಯ ದಿನಗಳಲ್ಲಿ ನಾನು ಜೊತೆಗಿದ್ದೆ. ಅಗಲಿಕೆಗೂ ಮೂರು ದಿನ ಮುನ್ನ ಅವರ ಮನೆಯಲ್ಲೇ ಫೋಟೋಶೂಟ್ ಮಾಡಿದ್ದೆವು. ಒಂದು ವರ್ಷ ಆಗಿದ್ದೆ ಗೊತ್ತಾಗಲಿಲ್ಲ. ಅಪ್ಪು ಸರ್ ಎಲ್ಲೂ ಹೋಗಿಲ್ಲ. ನಮ್ಮ ಮನದಲ್ಲೇ ಇದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಯಾರ ಹೊಟ್ಟೆಯಲ್ಲಾದ್ರೂ ಮತ್ತೊಮ್ಮೆ ಹುಟ್ಟಿ ಬಾರಪ್ಪ- ವೃದ್ಧೆ ಕಣ್ಣೀರು

    ಅಪ್ಪು ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅಪ್ಪು ಸಮಾಧಿಯತ್ತ ಅಭಿಮಾನಿಗಳ ದಂಡೇ ಹರಿದುಬರುತ್ತಿದೆ. ಕಳೆದ ವರ್ಷ ಅಕ್ಟೋಬರ್ 29ರಂದು ಹೃದಯ ಸ್ತಂಭನಕ್ಕೆ ಒಳಗಾಗಿ ಅಪ್ಪು ಅವರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಅಪ್ಪುಗೆ ಯಾವುದೇ ರೀತಿಯ Attitude ಇರಲಿಲ್ಲ: ಹಿರಿಯ ನಟ ಸುಮನ್

    ಅಪ್ಪುಗೆ ಯಾವುದೇ ರೀತಿಯ Attitude ಇರಲಿಲ್ಲ: ಹಿರಿಯ ನಟ ಸುಮನ್

    ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ಯಾವುದೇ ರೀತಿಯ ಆಟಿಟ್ಯೂಡ್ ಇರಲಿಲ್ಲ. ಅವರ ಜೀವನ ಶೈಲಿ ಹಲವರಿಗೆ ಮಾರ್ಗದರ್ಶನ ಎಂದು ತೆಲುಗು ಹಿರಿಯ ನಟ ಸುಮನ್ ಹೇಳಿದರು.

    ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಇಂದು ಅವರ ಸಮಾಧಿಗೆ ಬೇಟಿ ಕೊಟ್ಟ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಅಪ್ಪು ಅಗಲಿಕೆ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಲಾಸ್ ಆಗಿದೆ. ಇಂದು ಪುನೀತ್ ರಾಜ್ ಕುಮಾರ್ ಅವರ ಜನ್ಮದಿನ. ಅವರ ಸಮಾಜಸೇವೆ ಅವರ ಚಿಂತನೆ ತುಂಬಾ ಮೆಚುರ್ಡ್ ಆಗಿದೆ. ನಟನೆ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಭಾವುಕರಾದರು. ಇದನ್ನೂ ಓದಿ: ಅಪ್ಪು ಸಮಾಧಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

    ಚಿಕ್ಕ ವಯಸ್ಸಿನಲ್ಲೆ ತುಂಬಾ ಮೆಚುರ್ಡ್ ಥಿಂಕಿಂಗ್ ಅವರಲ್ಲಿತ್ತು. ತುಂಬಾ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಗಿರೋದು ನೋವು ತಂದಿದೆ. ಅಪ್ಪುಗೆ ಯಾವುದೇ ರೀತಿಯ ಆಟ್ಯಿಡ್ಯೂಡ್ ಇರಲಿಲ್ಲ. ಅವರ ಜೀವನ ಶೈಲಿ ಹಲವರಿಗೆ ಮಾರ್ಗದರ್ಶನ ಆಗಿದೆ ಎಂದು ಹೇಳುತ್ತಾ ಇಂದು ಜೇಮ್ಸ್ ರಿಲೀಸ್ ಆಗಿದೆ ಶುಭ ಹಾರೈಸುತ್ತೇವೆ ಅಂದ್ರು. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಹುಟ್ಟಹುಬ್ಬ- ಬಿಎಸ್‍ವೈ, ಬೊಮ್ಮಾಯಿ ಹೇಳಿದ್ದೇನು..?

    ಇಂದು ಪುನೀತ್‍ಗೆ 47 ವರ್ಷದ ಹುಟ್ಟುಹಬ್ಬವಾಗಿದ್ದು, ಇಂದೇ ಅಪ್ಪು ನಟನೆಯ ಕೊನೆಯ ಸಿನಿಮಾ ಜೇಮ್ಸ್ ಕೂಡ ರಿಲೀಸ್ ಆಗಿದೆ. ಈ ಮೂಲಕ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗಿದೆ. ಆದರೆ ಈ ನಡುವೆ ಅಪ್ಪು ಇಲ್ಲ ಅನ್ನೋ ನೋವು ಕೂಡ ಅಭಿಮಾನಿಗಳಲ್ಲಿದೆ. ರಾಜ್ಯದ ಥಿಯೇಟರ್ ಗಳ್ಲಿ ಜೇಮ್ಸ್ ಜಾತ್ರೆ ಈಗಾಗಲೇ ಆರಂಭವಾಗಿದ್ದು, ಅಪ್ಪು ಚಿತ್ರ ನೋಡಿ ಕರುನಾಡು ಕಣ್ಣಿರಾಗಿದೆ. ಇದನ್ನೂ ಓದಿ: ಡಾ.ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ – ಸಮಾಧಿ ಬಳಿ ಕೇಕ್ ಕತ್ತರಿಸಿದ ದೊಡ್ಮನೆ ಕುಟುಂಬ

  • ಡಾ.ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ – ಸಮಾಧಿ ಬಳಿ ಕೇಕ್ ಕತ್ತರಿಸಿದ ದೊಡ್ಮನೆ ಕುಟುಂಬ

    ಡಾ.ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ – ಸಮಾಧಿ ಬಳಿ ಕೇಕ್ ಕತ್ತರಿಸಿದ ದೊಡ್ಮನೆ ಕುಟುಂಬ

    ಬೆಂಗಳೂರು: ಇಂದು ಪವರ್ ಸ್ಟಾರ್, ಎಲ್ಲರ ಮೆಚ್ಚಿನ ಅಪ್ಪು. ನಗುವಿನ ಶ್ರೀಮಂತ ಡಾ. ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ. ಇದೇ ಮೊದಲ ಬಾರಿಗೆ ಪುನೀತ್ ಇಲ್ಲದೇ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಇಂದೇ ಪುನೀತ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ತೆರೆಗಪ್ಪಳಿಸಿದೆ.

    ಕರ್ನಾಟಕ ರತ್ನ ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮ ರಾಜ್ಯದಲ್ಲಿ ಮನೆ ಮಾಡಿದೆ. ಪುನೀತ್ ಇಲ್ಲದೇ ಆಗ್ತಿರೋ ಮೊದಲ ಹುಟ್ಟು ಹಬ್ಬ ಅನ್ನೋ ಬೇಸರ ಕೂಡ ಅಭಿಮಾನಿಗಳಲ್ಲಿದೆ. ಇದನ್ನೂ ಓದಿ: ಜೇಮ್ಸ್ ಚಿತ್ರದ 1003 ಟಿಕೆಟ್ ಖರೀದಿ ಮಾಡಿದ ಅಪ್ಪು ಅಭಿಮಾನಿ

    ಅಭಿಮಾನಿ ದೇವರುಗಳ ಜೈಕಾರ ಮುಗಿಲು ಮುಟ್ಟಿದ್ದು, ಸಂಭ್ರಮ ಮನೆ ಮಾಡಿದೆ. ಕುಟುಂಬಸ್ಥರು ಅಪ್ಪು ಸಮಾಧಿ ಬಳಿ ಕೇಕ್ ಕತ್ತರಿಸಿದ್ದಾರೆ. `ಆಕಾಶ’ ನೋಡಿ ಅಪ್ಪುಗೆ ರಾಘಣ್ಣ ವಿಶ್ ಮಾಡಿದ್ದಾರೆ. ಅಲ್ಲದೆ ಇವತ್ತು ನಿಮ್ಮಲ್ಲಿ ಕೋಟ್ಯಂತರ ಅಪ್ಪು ಕಾಣ್ತಿದ್ದಾನೆ. ಅಪ್ಪು ಆಸೆಯಂತೆ ಬರ್ತ್ ಡೇ ದಿನವೇ ಚಿತ್ರ ರಿಲೀಸ್ ಆಗುತ್ತಿದೆ ಎಂದು ಕಂಠೀರವ ಸ್ಟುಡಿಯೋ ಬಳಿ ಹೇಳಿದರು. ಇದನ್ನೂ ಓದಿ: ಅಪ್ಪು ಹುಟ್ಟು ಹಬ್ಬಕ್ಕೆ ನೇತ್ರದಾನದ ವಾಗ್ದಾನ

    ನಿನ್ನೆ ರಾತ್ರಿ ಪುನೀತ್ ಸಮಾಧಿ ಸ್ಥಳಕ್ಕೆ ಆಗಿಮಿಸಿದ್ದ ಪುನೀತ್ ರಾಜ್‍ಕುಮಾರ್ ಕುಟುಂಬದವರು ಪುನೀತ್ ಸಮಾಧಿಯ ದರ್ಶನ ಪಡೆದು ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಅಪ್ಪುಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ. ವಿನಯ್ ರಾಜ್ ಕುಮಾರ್ ಪುನೀತ್ ಸಮಾಧಿಗೆ ಪೂಜೆ ಮಾಡಿ ಅಪ್ಪು ಚಿಕ್ಕಪ್ಪನ ಹುಟ್ಟುಹಬ್ಬವನ್ನು ಅವರು ಇಲ್ಲದೇ ಇದ್ದರೂ ನಮ್ಮ ನಡುವೆ ಪರಮಾತ್ಮನಂತೆ ಇದ್ದಾರೆ ಅನ್ನೋ ಭಾವನೆಯಿಂದ ಸಮಾಧಿಗೆ ನಮಸ್ಕರಿಸಿ ಆರ್ಶೀವಾದ ಪಡೆದ್ರು. ಇದನ್ನೂ ಓದಿ: ರವಿವರ್ಮಾ ಸ್ಟಂಟ್‌ಗೆ ಪವರ್ ಸ್ಟಾರ್ ಫಿದಾ: ಫೋನ್ ಮಾಡಿ ಪುನೀತ್ ಹೇಳಿದ್ದೇನು?

    ಇತ್ತ ಇಂದು ಅಭಿಮಾನಿಗಳಿಗೆ ಅಪ್ಪು ಸಮಾಧಿ ನೋಡಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗಾಗಿ ಮುಂಜಾನೆಯಿಂದ ಕಾದು ನಿಂತಿದ್ದ ಅಭಿಮಾನಿಗಳನ್ನು ಸಮಾಧಿ ನೋಡಲು ಬಿಟ್ಟಿದ್ದಾರೆ.