Tag: Dr. Narayana Gowda

  • ಯೋಗದಲ್ಲಿ ಕರ್ನಾಟಕ ಗಿನ್ನಿಸ್ ದಾಖಲೆ – ಏಕಕಾಲಕ್ಕೆ 6 ಲಕ್ಷಕ್ಕೂ ಅಧಿಕ ಮಂದಿ ಯೋಗಾಭ್ಯಾಸ

    ಯೋಗದಲ್ಲಿ ಕರ್ನಾಟಕ ಗಿನ್ನಿಸ್ ದಾಖಲೆ – ಏಕಕಾಲಕ್ಕೆ 6 ಲಕ್ಷಕ್ಕೂ ಅಧಿಕ ಮಂದಿ ಯೋಗಾಭ್ಯಾಸ

    ಬೆಂಗಳೂರು: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಯೋಗಥಾನ್ ವಿಶ್ವದಾಖಲೆ (World Records) ಸೃಷ್ಟಿಸಿದ್ದಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ (Dr. Narayana Gowda) ಸಂತಸ ವ್ಯಕ್ತಪಡಿಸಿದ್ದಾರೆ.

    ಇಂದು ರಾಜ್ಯಾದ್ಯಂತ 6 ಲಕ್ಷಕ್ಕೂ ಅಧಿಕ ಜನರು ಏಕಕಾಲಕ್ಕೆ ಯೋಗಾಭ್ಯಾಸ ಮಾಡುವ ಮೂಲಕ ವಿಶ್ವದಾಖಲೆ ಬರೆಯಲಾಗಿದೆ. ಈ ಮೂಲಕ ರಾಜಸ್ಥಾನದಲ್ಲಿ 1.60 ಲಕ್ಷ ಜನರ ಮೂಲಕ ಸೃಷ್ಟಿಯಾಗಿದ್ದ ದಾಖಲೆಯನ್ನು ಕರ್ನಾಟಕ ಅಳಿಸಿ ಹಾಕಿದೆ ಎಂದು ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಆಡಳಿತದಲ್ಲಿ ಭರವಸೆ ಉಚಿತ, ಸಾಲ ಖಚಿತ: ಸಚಿವ ಸುನಿಲ್ ಕುಮಾರ್ ವ್ಯಂಗ್ಯ

    ಭಾನುವಾರ ಬೆಳಗ್ಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಡಾ.ನಾರಾಯಣಗೌಡ ಯೋಗಥಾನ್ ಉದ್ಘಾಟಿಸಿದರು. ಗಿನ್ನಿಸ್‌ ದಾಖಲೆ ಸೃಷ್ಟಿ ಮಾಡುವ ಹಿನ್ನೆಲೆಯಲ್ಲಿ ಏಕಕಾಲದಲ್ಲಿ ಐದು ಲಕ್ಷ ಜನರು ಸೇರಿ ಯೋಗ ಮಾಡುವ ಗುರಿ ಹೊಂದಲಾಗಿತ್ತು. ಸರ್ಕಾರದ ಈ ಪ್ರಯತ್ನ ವ್ಯಾಪಕ ಬೆಂಬಲ ಸಿಕ್ಕಿದ್ದು, ಆರೂವರೆ ಲಕ್ಷಕ್ಕೂ ಹೆಚ್ಚು ಜನರು ಇಂದಿನ ಯೋಗಥಾನ್‍ನಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ಯಶಸ್ವಿಗೊಳಿಸಿದ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಸ್ವಯಂ ಸೇವಕರು, ಸರ್ಕಾರಿ ನೌಕರರು, ಅಧಿಕಾರಿಗಳು, ಯೋಗಪಟುಗಳು ಸೇರಿದಂತೆ ಎಲ್ಲರಿಗೂ ಅಭಿನಂದನೆಗಳನ್ನು ಸಚಿವರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೋದಿ ಭಾಗವಹಿಸುವ ರಾಷ್ಟ್ರೀಯ ಯುವ ಜನೋತ್ಸವದ ಲೋಗೋ, ಥೀಮ್ ರಚನೆ ಸ್ಪರ್ಧೆಗೆ ಆಹ್ವಾನ

    ಮೋದಿ ಭಾಗವಹಿಸುವ ರಾಷ್ಟ್ರೀಯ ಯುವ ಜನೋತ್ಸವದ ಲೋಗೋ, ಥೀಮ್ ರಚನೆ ಸ್ಪರ್ಧೆಗೆ ಆಹ್ವಾನ

    ಬೆಳಗಾವಿ: ರಾಷ್ಟ್ರೀಯ ಯುವ ಜನೋತ್ಸವ (National Youth Day) ಈ ಬಾರಿ ಜನವರಿ 12 ರಿಂದ 16 ರವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ರೇಷ್ಮೆ, ಕ್ರೀಡಾ ಹಾಗೂ ಯುವಜನ ಸಬಲೀಕರಣ ಇಲಾಖೆಯ ಸಚಿವರಾದ ಡಾ.ನಾರಾಯಣಗೌಡ (Dr. Narayana Gowda)  ಅವರು ತಿಳಿಸಿದರು.

    ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಯುವಜನೋತ್ಸವದಲ್ಲಿ ದೇಶದ ಎಲ್ಲ ರಾಜ್ಯಗಳಿಂದ 7,500 ಕಲಾವಿದರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ. 26ನೇ ರಾಷ್ಟ್ರೀಯ ಯುವಜನೋತ್ಸವ ಆಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗಿದ್ದು, ಈಗಾಗಲೇ ಸಭೆ ಕೂಡ ನಡೆಸಲಾಗಿದೆ.ಯುವಜನೋತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಲು ಅನುಕೂಲವಾಗುವಂತೆ ಮುಂದಿನ ವಾರದಿಂದ ಭರದ ಸಿದ್ಧತೆಯನ್ನು ಆರಂಭಿಸಲಾಗುವುದು. ಊಟೋಪಹಾರ, ವಸತಿ ವ್ಯವಸ್ಥೆ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ – ನಿತಿನ್ ಗಡ್ಕರಿಗೆ ಮನವಿ ಸಲ್ಲಿಸಿದ ಸುಮಲತಾ ಅಂಬರೀಶ್

    ಲಾಂಛನ-ಚಿಹ್ನೆ ವಿನ್ಯಾಸಗಳಿಗೆ ಆಹ್ವಾನ:
    ರಾಷ್ಟ್ರೀಯ ಯುವ ಜನೋತ್ಸವದ ಲಾಂಛನ (ಲೋಗೋ) ಥೀಮ್, ಚಿಹ್ನೆ (ಮಾಸ್ಕಾಟ್) ವಿನ್ಯಾಸ ರಚನೆಗೆ ಸಾರ್ವಜನಿಕರಿಂದ ಸ್ಪರ್ಧೆಗೆ ಆಹ್ವಾನಿಸಲಾಗಿದೆ. ಉತ್ತಮ ಲೋಗೋ ರಚನೆಗೆ 50,000 ರೂ. ನಗದು ಬಹುಮಾನ ಮತ್ತು ಉತ್ತಮ ಥೀಮ್ಸ್ ರಚನೆಗೆ 25,000 ರೂ. ಬಹುಮಾನ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಪಂಚರತ್ನ ಯಾತ್ರೆಗೆ ಹೆದರಿ ಕೊರೊನಾ ಭೂತ ಬಿಡ್ತಿದ್ದಾರೆ – ಹೆಚ್‌ಡಿಕೆ

    ಸಾರ್ವಜನಿಕರು ಥೀಮ್ಸ್ ಲೋಗೋ ಹಾಗೂ ಮಾಸ್ಕಾಟ್ ರಚಿಸಿ ಡಿ. 28ರೊಳಗೆ ಸಲ್ಲಿಸಬೇಕು. ಸಾರ್ವಜನಿಕರು ಕಳಿಸುವ ಅತ್ಯುತ್ತಮ ಲೋಗೋ ಮತ್ತು ಥೀಮ್‍ನ್ನು ಸಮಿತಿಯ ಮೂಲಕ ಆಯ್ಕೆ ಮಾಡಿ ರಾಷ್ಟ್ರೀಯ ಯುವ ಉತ್ಸವದಲ್ಲಿ ಅಧಿಕೃತವಾಗಿ ಬಳಸಲಾಗುವುದು. ಲೋಗೋ ಮತ್ತು ಮಾಸ್ಕಾಟ್ ಪ್ರದರ್ಶಿಸುವ ತಂಡವು ತಮ್ಮ ಸಂಪರ್ಕ ವಿವರ ಹಾಗೂ ವಿನ್ಯಾಸಗಳನ್ನು ರಚಿಸಿ ಡಿಸೆಂಬರ್ 28ರ ಸಂಜೆ 6 ಗಂಟೆಯ ಒಳಗಾಗಿ nyf2023@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು ಎಂದು ಮಾಹಿತಿ ಹಂಚಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • 47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ತಂಡಕ್ಕೆ ಸನ್ಮಾನ

    47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ತಂಡಕ್ಕೆ ಸನ್ಮಾನ

    ಬೆಂಗಳೂರು: 47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕದ ಆಟಗಾರರಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಹಾಗೂ ಕರ್ನಾಟಕ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ, ಮಾಜಿ ಉಪಮಹಾಪೌರರು ಎಸ್.ಹರೀಶ್ ಸನ್ಮಾನಿಸಿದರು.

    ಪಶ್ಚಿಮ ಬಂಗಾಳದ ಬುದ್ರ್ವಾನ್‍ನಲ್ಲಿ ನಡೆದ ಜ್ಯೂನಿಯರ್ ವಾಲಿಬಾಲ್ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಕರ್ನಾಟಕದ ಪುರುಷರ ತಂಡ ದ್ವಿತೀಯ ಸ್ಥಾನ ಪಡೆದಿದೆ. ತಮಿಳುನಾಡಿನ ವಿರುದ್ಧ ನಡೆದ ಪೈನಲ್ ಪಂದ್ಯದಲ್ಲಿ 3-1 ರಲ್ಲಿ ಪರಾಭವಗೊಳ್ಳುವ ಮೂಲಕ ಕರ್ನಾಟಕ ತಂಡ ಬೆಳ್ಳಿ ಪದಕ ಪಡೆದಿದೆ. ಇದನ್ನೂ ಓದಿ: ಟೈಟಾನ್ಸ್ ವಿರುದ್ಧದ ಪಂದ್ಯವನ್ನು ಕಡೆಯ ನಿಮಿಷದ ಹೋರಾಟದಲ್ಲಿ ಟೈ ಮಾಡಿಕೊಂಡ ಬುಲ್ಸ್

    ಆಟಗಾರರನ್ಡಾನು ಪ್ರಶಂಸಿದ ನಾರಾಯಣಗೌಡ, ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಮಹಿಳೆಯರ ತಂಡ 8ನೇ ಸ್ಥಾನ ಪಡೆದಿದೆ. ಬುದ್ರ್ವಾನ್ ನಲ್ಲಿ ನಡೆದ ವಾಲಿಬಾಲ್ ನ್ಯಾಷನಲ್ ಚಾಂಪಿಯನ್‍ಶಿಪ್ ನಲ್ಲಿ ಪಾಲ್ಗೊಂಡು ಕರ್ನಾಟಕದ ಆಟಗಾರರು ಉತ್ತಮ ಸಾಧನೆ ಮಾಡಿದ್ದಾರೆ. ಪುರುಷರ ತಂಡ ಫೈನಲ್ ಪಂದ್ಯದಲ್ಲಿ ಸ್ವಲ್ಪ ಹಿನ್ನಡೆಯಿಂದ ಚಿನ್ನದ ಪದಕ ತಪ್ಪಿದೆ. ಆದರೆ, ಮುಂದಿನ ಟೂರ್ನಿಯಲ್ಲಿ ನಮ್ಮ ಕರ್ನಾಟಕ ತಂಡ ಚಿನ್ನದ ಪದಕ ಗೆಲ್ಲುವ ವಿಶ್ವಾಸವಿದೆ. ನಮ್ಮ ವಾಲಿಬಾಲ್ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು. ಇದನ್ನೂ ಓದಿ: ಟೀಂ ಇಂಡಿಯಾ ಸಾರಥ್ಯ ಹಿಡಿದ ಕನ್ನಡಿಗರಿವರು

  • ಮನೆ ಮನೆಗೆ ಹಣ್ಣು, ತರಕಾರಿ ಮಾರಾಟ ಮಾಡಿ – ಸರ್ಕಾರದಿಂದ ಸೂಚನೆ

    ಮನೆ ಮನೆಗೆ ಹಣ್ಣು, ತರಕಾರಿ ಮಾರಾಟ ಮಾಡಿ – ಸರ್ಕಾರದಿಂದ ಸೂಚನೆ

    ಬೆಂಗಳೂರು: ಹಣ್ಣು, ತರಕಾರಿ ಸರಬರಾಜಿನಲ್ಲಿ ತೊಂದರೆ ಆಗದಂತೆ ಕ್ರಮ ವಹಿಸಿ ಎಂದು ತೋಟಗಾರಿಕಾ ಸಚಿವ ಡಾ. ನಾರಾಯಣ ಗೌಡ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು ರೈತರಿಂದ ನೇರವಾಗಿ ರೈತರ ಉತ್ಪನ್ನಗಳನ್ನು ಆಯ್ದ ಭಾಗಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಹಾಪ್ ಕಾಮ್ಸ್ ಸಹಯೋಗದೊಂದಿಗೆ ತೋಟಗಾರಿಕಾ ಇಲಾಖೆಯಿಂದ ಮೊಬೈಲ್ ವ್ಯಾನ್‍ಗಳ ಮೂಲಕ ಮನೆಮನೆಗೆ ಹಣ್ಣು, ತರಕಾರಿ ಮಾರಾಟ ಮಾಡಬೇಕು. ಇಲಾಖೆಯ ರೈತ ಉತ್ಪಾದಕಾ ಸಂಸ್ಥೆಗಳ ಮೂಲಕ ಹಣ್ಣು ತರಕಾರಿ ಮಾರಾಟಕ್ಕೆ ಸೂಚನೆ ನೀಡಿದ್ದಾರೆ.

    ಈಗಾಗಲೇ ಹಾಪ್‌ ಕಾಮ್ಸ್‌ಗಳ ಮೂಲಕ ಬೆಂಗಳೂರಿನಲ್ಲಿ 225 ಮಳಿಗೆಗಳು, ಜಿಲ್ಲೆಗಳಲ್ಲಿನ 257 ಮಳಿಗೆಗಳ ಮೂಲಕ ಹಣ್ಣು, ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹಾಪ್‌ ಕಾಮ್ಸ್‌ಗಳ ಮೂಲಕ ಪ್ರತಿ ದಿನ 100 ಟನ್‍ಗಳಷ್ಟು ಹಣ್ಣು ತರಕಾರಿಗಳು ಮಾರಾಟವಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

    ಹಿರಿಯ ಅಧಿಕಾರಿಗಳ ತಂಡದಿಂದ ಜಿಲ್ಲೆಗಳ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಹೊಂದುವಂತೆ ತಿಳಿಸಲಾಗಿದೆ. ಹಣ್ಣು ತರಕಾರಿ ಸರಬರಾಜಿನಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಹಾಗೆಯೇ ದ್ರಾಕ್ಷಿ ಬೇಡಿಕೆ ಇರುವ ಸ್ಥಳಗಳನ್ನು ಗುರುತಿಸಿ ಮಾರಾಟ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಲಾಗಿದೆ.

  • ಶಾಸಕ ನಾರಾಯಣಗೌಡರ ಅನುಪಸ್ಥಿತಿಯಲ್ಲಿ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

    ಶಾಸಕ ನಾರಾಯಣಗೌಡರ ಅನುಪಸ್ಥಿತಿಯಲ್ಲಿ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

    ಮಂಡ್ಯ: ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಹೋಟೆಲಿನಲ್ಲಿರುವ ಕೆ.ಆರ್.ಪೇಟೆ ಕ್ಷೇತ್ರದ ಅತೃಪ್ತ ಶಾಸಕ ಡಾ.ನಾರಾಯಣಗೌಡರ ವಿರುದ್ಧ ಕೆಲವರು ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ ಅವರ ಅಭಿಮಾನಿಗಳು ಮಾತ್ರ ಇಂದು ಅವರ ಅನುಪಸ್ಥಿತಿಯಲ್ಲಿ ಅವರ 57ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ.

    ಕೆ.ಆರ್.ಪೇಟೆಯ ಬಸವೇಶ್ವರ ನಗರದಲ್ಲಿರುವ ಶಾಸಕ ನಾರಾಯಣಗೌಡ ನಿವಾಸದಲ್ಲಿ ಕೇಕ್ ಕತ್ತರಿಸಿ ಬಳಿಕ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು. ವಿರೋಧಿಗಳು ಕ್ಷೇತ್ರದಲ್ಲಿ ನಾರಾಯಣಗೌಡ ನಡೆಗೆ ಆಕ್ರೋಶ ವ್ಯಕ್ತಪಡಿಸಿದರೆ, ಇತ್ತ ನಾರಾಯಣ ಗೌಡ ಅಭಿಮಾನಿಗಳು ಶಾಸಕರಿಗೆ ಜೈಕಾರ ಹಾಕಿದರು.

    ನಾರಾಯಣಗೌಡ ನಡೆಗೆ ಸಂತಸ ವ್ಯಕ್ತಪಡಿಸಿದ ಅಭಿಮಾನಿಗಳು, ನಾರಾಯಣಗೌಡ ತೆಗೆದುಕೊಂಡಿರೋ ತೀರ್ಮಾನಕ್ಕೆ ಇಡೀ ಕ್ಷೇತ್ರದ ಜನರ ಬೆಂಬಲವಿದೆ. ಶಾಸಕ ನಾರಾಯಣಗೌಡ ಹಣಕೋಸ್ಕರ ರಾಜೀನಾಮೆ ನೀಡಿಲ್ಲ. ಇಡೀ ಕ್ಷೇತ್ರದ ಅಭಿವೃದ್ಧಿಗೋಸ್ಕರ ನೀಡಿದ್ದಾರೆ. ಅವರು ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿಲ್ಲ ಎಂದು ಹೇಳಿದರು.

    ಅವರಿಗೇನು ಇಲ್ಲಿ ದುಡ್ಡು ಮಾಡಿ ಅವರ ಮಕ್ಕಳನ್ನು ಸಾಕುವ ಅವಶ್ಯಕತೆ ಇಲ್ಲ. ಕ್ಷೇತ್ರಕ್ಕೆ ಬಂದು ನಾರಾಯಣಗೌಡರೇ ಸುದ್ದಿಗೋಷ್ಠಿ ಮಾಡುತ್ತಾರೆ. ಆ ಮೂಲಕ ನಾರಾಯಣಗೌಡ ವಿರೋಧಿಗಳಿಗೆ ಉತ್ತರ ಕೊಡುವ ಆಶಾಭಾವನೆ ವ್ಯಕ್ತಪಡಿಸಿದರು.