Tag: dr. mc sudhakar

  • Chikkaballapur| ಸಚಿವ ಡಾ.ಎಂಸಿ ಸುಧಾಕರ್ ನಿವಾಸದ ಬಳಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು

    Chikkaballapur| ಸಚಿವ ಡಾ.ಎಂಸಿ ಸುಧಾಕರ್ ನಿವಾಸದ ಬಳಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು

    ಚಿಕ್ಕಬಳ್ಳಾಪುರ: ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ (M. C. Sudhakar) ನಿವಾಸದ ಸಮೀಪ ಸ್ಕಾರ್ಪಿಯೋ (Scorpio) ಕಾರಿಗೆ ಬೆಂಕಿ ತಗುಲಿದೆ.

    ಸಂಜೆ ಇದ್ದಕ್ಕಿದ್ದಂತೆ ನಿಲ್ಲಿಸಿದ ಕಾರಿಗೆ ಬೆಂಕಿ ಹೊತ್ತಿಕೊಂಡು ಧಗಧಗನೇ ಹೊತ್ತಿ ಉರಿದಿದೆ. ಕೂಡಲೇ ಅಕ್ಕ ಪಕ್ಕದವರು ಆಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಬೆಂಕಿ ನಂದಿಸಿದ್ದಾರೆ. ಇದನ್ನೂ ಓದಿ: ಕಡ್ಲೇಪುರಿಯಂತೆ ಮುಡಾ ಸೈಟ್ ಹಂಚಿಕೆ – 1962ರಲ್ಲಿ ವಶಪಡಿಸಿಕೊಂಡ ಭೂಮಿಗೆ 2023ರಲ್ಲಿ ಪರಿಹಾರ!

    ಚಿಂತಾಮಣಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರಿನ ನಂಬರ್ ಆಧರಿಸಿ ಮಾಲೀಕರ ವಿಳಾಸ ಪತ್ತೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್‌; ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

  • ರಾಜ್ಯ ಶಿಕ್ಷಣ ನೀತಿ ಸಮಿತಿ ಅವಧಿ ಆಗಸ್ಟ್ ವರೆಗೂ ವಿಸ್ತರಣೆ: ಡಾ.ಸುಧಾಕರ್

    ರಾಜ್ಯ ಶಿಕ್ಷಣ ನೀತಿ ಸಮಿತಿ ಅವಧಿ ಆಗಸ್ಟ್ ವರೆಗೂ ವಿಸ್ತರಣೆ: ಡಾ.ಸುಧಾಕರ್

    ಬೆಂಗಳೂರು: ರಾಜ್ಯ ಶಿಕ್ಷಣ ನೀತಿ (SEP) ರಚನಾ ಸಮಿತಿಯ ಅವಧಿಯನ್ನ ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ (Dr.MC Sudhakar) ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್‌ ವರೆಗೂ ಎಸ್‍ಇಪಿ ಸಮಿತಿ ಅವಧಿ ವಿಸ್ತರಣೆ ಮಾಡಲಾಗಿದೆ. ಎಸ್‍ಇಪಿ ಸಮಿತಿ ವರದಿ ವಿಸ್ತರಣೆ ಮಾಡಲಾಗಿದ್ದು, ಫೆಬ್ರವರಿವರೆಗೂ ಸಮಿತಿಗೆ ವರದಿ ಕೊಡಲು ಸಮಯ ಕೊಡಲಾಗಿತ್ತು. ಸಮಿತಿಯಿಂದ ಸಮಯ ಕೇಳಿದ ಹಿನ್ನಲೆಯಲ್ಲಿ ಆಗಸ್ಟ್‌ ವರೆಗೂ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಲ್ಲ: ಡಾ.ಎಂ.ಸಿ ಸುಧಾಕರ್

    ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿ ಮಾಡದೇ ಹೋದರೆ ಕೇಂದ್ರದ ಅನುದಾನ ಕಡಿಮೆ ಆಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಒತ್ತಡ ಹಾಕಿ ಎನ್‍ಇಪಿ ಅನುಷ್ಠಾನ ಮಾಡಿ ಅಂತ ಹೇಳೋದು ಸರಿಯಲ್ಲ. ಈಗಾಗಲೇ ಕೇರಳ, ತಮಿಳುನಾಡು ಸರ್ಕಾರ ರಾಜ್ಯ ಶಿಕ್ಷಣ ನೀತಿ ಅನುಷ್ಠಾನ ಮಾಡಿವೆ. ಹೀಗಿದ್ದರೂ ಆ ರಾಜ್ಯಗಳಿಗೆ ಕೇಂದ್ರ ಅನುದಾನ ಕೊಟ್ಟಿದೆ. 60:40 ಶೇರ್‌ನಲ್ಲಿ ಅನುದಾನ ಬರಬೇಕು. ಕೇಂದ್ರ ಸರ್ಕಾರ ಯಾವ ರೀತಿ ಕ್ರಮ ತೆಗೆದುಕೊಳ್ಳಲಿದೆ ಎಂದು ನೋಡೋಣ. ಅನುದಾನ ಬಿಡುಗಡೆ ಮಾಡದೇ ಹೋದ್ರೆ ಮುಂದೆ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.

    SEP ಸಮಿತಿ ಮಧ್ಯಂತರ ವರದಿ ನೀಡಲು ಸಿದ್ದವಾಗಿದೆ. ಸಿಎಂ ಸಿದ್ದರಾಮಯ್ಯ (Siddaramaiah) ಅವರ ಸಮಯ ಪಡೆದುಕೊಂಡು ಮಧ್ಯಂತರ ವರದಿ ಸ್ವೀಕಾರ ಮಾಡ್ತೀವಿ. ಎಸ್‍ಇಪಿ ಸಮಿತಿ ಕೊಟ್ಟ ಬಳಿಕ ಉನ್ನತ ಶಿಕ್ಷಣ ಇಲಾಖೆಯಲ್ಲಿಯೇ ಮೊದಲು ಅನುಷ್ಠಾನ ಮಾಡ್ತೀವಿ. ಬಳಿಕ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಜಾರಿ ಮಾಡೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ತಂದಿದ್ದು ಬಿಜೆಪಿ, ಟಿಕೆಟ್ ಬಗ್ಗೆ ಡೌಟೇ ಇಲ್ಲ: ಸುಮಲತಾ

  • ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಲ್ಲ: ಡಾ.ಎಂ.ಸಿ ಸುಧಾಕರ್

    ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಲ್ಲ: ಡಾ.ಎಂ.ಸಿ ಸುಧಾಕರ್

    ಬೆಂಗಳೂರು: ಕಾಂಗ್ರೆಸ್‌ನಿಂದ (Congress) ಯಾವ ಶಾಸಕರೂ ಅಡ್ಡ ಮತದಾನ (Cross Voting) ಮಾಡೋದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ (Dr M.C.Sudhakar) ತಿಳಿಸಿದ್ದಾರೆ.

    ರಾಜ್ಯಸಭೆ ಚುನಾವಣೆ ವಿಚಾರ ಮತ್ತು ಕಾಂಗ್ರೆಸ್ ಶಾಸಕರು ರೆಸಾರ್ಟ್ ಹೋಗುತ್ತಿರುವ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಶಾಸಕರು ಯಾರೂ ಅಡ್ಡ ಮತದಾನ ಮಾಡೋದಿಲ್ಲ. ಶಾಸಕರು ಏಜೆಂಟ್‌ಗೆ ಮತ ತೋರಿಸಿ ಮತ ಹಾಕಬೇಕು. ಹೀಗಾಗಿ ನಮಗೆ ನಮ್ಮ ಶಾಸಕರು ಅಡ್ಡ ಮತದಾನ ಮಾಡುವ ಭೀತಿ ಇಲ್ಲ. ರಾಜ್ಯಸಭೆಯಲ್ಲಿ ಮತ ಹಾಕುವ ಪದ್ಧತಿ ಬೇರೆ ಇರುತ್ತದೆ. ಇದರ ಬಗ್ಗೆ ಮಾಹಿತಿ ನೀಡಲು ಶಾಸಕರನ್ನು ಸಂಜೆ ರೆಸಾರ್ಟ್‌ಗೆ ಕರೆದಿದ್ದಾರೆ ಎಂದರು. ಇದನ್ನೂ ಓದಿ: ಗಂಡಸರಿಗೆ ಅಧಿಕಾರ ನಮ್ಮಲ್ಲೇ ಇರಬೇಕು ಅನ್ನೋ ಭಾವನೆ- ಅಭಿಯಾನದ ವಿರುದ್ಧ ಶೋಭಾ ರೆಬೆಲ್

    ಬಿಜೆಪಿ-ಜೆಡಿಎಸ್ ಅವರು ಹೊಸ ಸಂಬಂಧ ಬೆಳೆಸಿಕೊಂಡು ಏನೋ ಮಾಡೋಣ ಎಂದು ಹೊರಟಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಸೋಲಾಗಿ ಮೈತ್ರಿಗೆ ಉತ್ತರ ಕೊಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಗೆದ್ದಿದ್ದಾರೆ. ಬಿಜೆಪಿ-ಜೆಡಿಎಸ್ ಅವರು ಏನೋ ಮಾಡಲು ಹೊರಟಿದ್ದಾರೆ. ಹೀಗಾಗಿ ನಾವು ಹುಷಾರಾಗಿ ಇರಬೇಕು. ಶಾಸಕಾಂಗ ಸಭೆ ಕೂಡಾ ಕರೆದಿದ್ದಾರೆ. ಹೀಗಾಗಿ ರೆಸಾರ್ಟ್‌ಗೆ ಹೋಗುತ್ತಿದ್ದೇವೆ. ನಮಗೆ ಅಡ್ಡ ಮತದಾನದ ಭೀತಿ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯನವರೇ ನಿಮ್ಮಷ್ಟು ನೀಚತನಕ್ಕೆ ನಾನು ಇಳಿಯೋದಿಲ್ಲ – ಸಿಎಂ ವಿರುದ್ಧ ಹರಿಹಾಯ್ದ ಜೋಶಿ

  • ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ: ಡಾ.ಎಂ.ಸಿ ಸುಧಾಕರ್

    ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ: ಡಾ.ಎಂ.ಸಿ ಸುಧಾಕರ್

    ಚಿಕ್ಕಬಳ್ಳಾಪುರ: ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ (Rajiv Gandhi) ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ (Dr. M. C Sudhakar) ಹೇಳಿದ್ದಾರೆ.

    ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ (BJP- Congress) ಪಕ್ಷಗಳು ಪರ-ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ನಾವೆಲ್ಲರೂ ಹಿಂದುಗಳು ಇದು ಜ್ಯಾತ್ಯಾತೀತ ರಾಷ್ಟ್ರ ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ನಮಗೆಲ್ಲರಿಗೂ ಸಹಮತ ಇದೆ ಎಂದಿದ್ದಾರೆ.

    ನಾವೆಲ್ಲ ನಮ್ಮ ಜಾತಿ ನಮ್ಮ ಧರ್ಮದ ಮೇಲೆ ಹೆಚ್ಚು ನಂಬಿಕೆ ಇಟ್ಟುಕೊಂಡಿರೋರು. ನನ್ನ ಕೊರಳಲ್ಲಿ ವೆಂಕಟರವಣಸ್ವಾಮಿ ಲಾಕೆಟ್ ಇದೆ, ಅಯೋಧ್ಯೆಯಲ್ಲಿ ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ, ಇದನ್ನ ಬಿಜೆಪಿಯವರು ಮರೆಮಾಚಿದ್ದಾರೆ. ಈ ಸತ್ಯವನ್ನ ಜನರಿಗೆ ತಿಳಿಸಬೇಕು. ರಾಮಮಂದಿರ ಉದ್ಘಾಟನೆ ವಿಚಾರ ಎಲ್ಲರಿಗೂ ಸಂತೋಷ ಇದೆ ಎಂದು ಹೇಳಿದರು. ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ನಾನೂ ದೇಣಿಗೆ ಕೊಟ್ಟಿದ್ದೇನೆ: ಪರಮೇಶ್ವರ್‌

    ಅನ್ನಭಾಗ್ಯ ಅಕ್ಕಿ ರಾಮಮಂದಿರ ಮಂತ್ರಾಕ್ಷತೆಗೆ ಬಳಕೆ ಡಿಕೆಶಿ ಹೇಳಿಕೆ ವಿಚಾರವನ್ನ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಮಾತನಾಡಿದ ಅವರು ರಾಮಮಂದಿರ ವಿಚಾರವನ್ನ ಬಿಜೆಪಿಯವರು ರಾಜಕೀಯವಾಗುವ ಬಂಡವಾಳ ಮಾಡಿಕೊಳ್ತಿದ್ದಾರೆ. ಯಾಕೆ ಅವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಅದಕ್ಕಾಗಿಯೇ ಡಿಕೆಶಿಯವರು ಹಾಗೆ ಹೇಳಿದ್ದಾರೆ ಎಂದರು. ಅವರವರ ಧರ್ಮ ಧರ್ಮದ ಮೇಲೆ ಅವರಿಗೆ ನಂಬಿಕೆ‌ ಇದೆ. ರಾಜಕೀಯ ವಾಗಿ ಅನುಕೂಲ ಪಡೆಯಲು ಹೀಗೆ ಮಾಡ್ತಿದ್ದಾರೆ. ಇದು ಕೀಳು ಮಟ್ಟದ ರಾಜಕಾರಣ ಎಂದು ಬಿಜೆಪಿಗೆ ವಿರುದ್ದ ಹರಿಹಾಯ್ದರು.