ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಯಲವನ್ನು ಡಾ.ಮನಮೋಹನ್ ಸಿಂಗ್ (Manmohan Singh) ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗುವುದು ಸಿಎಂ ಸಿದ್ದರಾಮಯ್ಯ (CM Siddaramaiah) 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಈ ಬಾರಿ ದಾಖಲೆಯ 16ನೇ ಬಜೆಟ್ ಮಂಡಿಸುತ್ತಿರುವ ಸಿಎಂ, ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಡಾ| ಮನಮೋಹನ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗುವುದು. ಈ ವಿಶ್ವವಿದ್ಯಾಲಯವನ್ನು ದೇಶದಲ್ಲಿ ಮಾದರಿಯನ್ನಾಗಿಸುವ ಉದ್ದೇಶದಿಂದ, ಸರ್ಕಾರಿ ಕಲಾ ಕಾಲೇಜು ಹಾಗೂ ಸರ್ಕಾರಿ ಆರ್.ಸಿ.ಕಾಲೇಜುಗಳನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರಕಟಿಸಿದರು. ಇದನ್ನೂ ಓದಿ: Karnataka Budget 2025 LIVE: ಆಯುಷ್ಮಾನ್ ಭಾರತದಡಿ 5 ಲಕ್ಷ ಚಿಕಿತ್ಸಾ ವೆಚ್ಚ
ಮಹಿಳಾ ಉನ್ನತ ಶಿಕ್ಷಣದ ಬಲವರ್ಧನೆಗಾಗಿ 31 ಮಹಿಳಾ ಕಾಲೇಜುಗಳನ್ನು ಹಿಂದಿನ ವರ್ಷದಲ್ಲಿ ಉನ್ನತೀಕರಿಸಲು ಕ್ರಮ ಕೈಗೊಂಡಿದ್ದು, ಉಳಿದ 26 ಕಾಲೇಜುಗಳ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 26 ಕೋಟಿ ರೂ. ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸಲು ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ ಬಲವರ್ಧನೆ, ಶಿಕ್ಷಣ ಸಂಸ್ಥೆಗಳಲ್ಲಿ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ ಹಾಗೂ ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶಕ್ಕಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ 2,500 ಕೋಟಿ ರೂ. ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದರು.ಇದನ್ನೂ ಓದಿ: ಅಭಿವೃದ್ಧಿಯ ಬಜೆಟ್ ಇದು, ಗ್ಯಾರಂಟಿ ಮೀರಿ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ: ಸಿಎಂ
ನವದೆಹಲಿ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ (Mohammad Hamid Ansari), ಮಾಜಿ ಪ್ರಧಾನಿ ಮನಮೋಹನ್ ಸಿಂಗ್(Dr Manmohan Singh), ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ್ ಜೋಶಿ (Dr Murli Manohar Joshi) ಮತದಾನ ಮಾಡಿದ್ದಾರೆ.
– ಕರ್ನಾಟಕದಲ್ಲಿ ಬಿಜೆಪಿ ದಾಖಲೆಯ ಸಾಧನೆ – ಮೊದಲ ಚುನಾವಣೆ ಕಂಡ ಜಾರ್ಖಂಡ್, ಉತ್ತರಾಂಚಲ, ಛತ್ತೀಸಗಢ
ಪಬ್ಲಿಕ್ ಟಿವಿ ವಿಶೇಷ 1999-2004 ರ ವರೆಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ನೇತೃತ್ವದಲ್ಲಿ ದೇಶವು ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಭದ್ರತೆಯನ್ನು ಕಂಡಿತ್ತು. ಅದಕ್ಕಿಂತ ಮುಖ್ಯವಾಗಿ ಇದರ ಹಿಂದಿನ ಮೂರು ಚುನಾವಣೆಗಳ ನಂತರ ಭಾರತವು ರಾಜಕೀಯ ಸ್ಥಿರತೆಗೆ ಸಾಕ್ಷಿಯಾಯಿತು. 2004 ರಲ್ಲಿ ವಾಜಪೇಯಿ ವರ್ಷಗಳು ತೆರೆಗೆ ಬಂದವು. ಆಡಳಿತಾರೂಢ ಬಿಜೆಪಿಯು ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಜನಪ್ರಿಯತೆ ಮತ್ತು ಸರ್ಕಾರದ ಆಡಳಿತವನ್ನು ಮುಂದಿಟ್ಟುಕೊಂಡು ಮತ್ತೊಂದು ಸಾರ್ವತ್ರಿಕ ಚುನಾವಣೆ ಗೆಲುವಿನ ವಿಶ್ವಾಸದೊಂದಿಗೆ ಮುನ್ನಡೆಯಿತು. ಮೆಗಾ ‘ಇಂಡಿಯಾ ಶೈನಿಂಗ್’ ಅಭಿಯಾನದ ಮೂಲಕ ಆರ್ಥಿಕ ಸಾಧನೆ ಮತ್ತು ಜನಸಾಮಾನ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಭರವಸೆಯೊಂದಿಗೆ ಚುನಾವಣೆಗೆ ಧುಮುಕಿತು. ಆಗಿನ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವಿನ ಭವಿಷ್ಯವನ್ನೇ ನುಡಿದಿದ್ದವು. ಆದರೆ ಅಂತಿಮ ತೀರ್ಪು ಬೇರೆಯದೇ ಆಯಿತು. ಚುನಾವಣಾ ಲೆಕ್ಕಾಚಾರ ತಲೆಕೆಳಗಾಯಿತು.
ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ ಉದಯ
2004 ಕ್ಕೂ ಹಿಂದೆ ಭಾರತದ ಹಳೆಯ ಪಕ್ಷವಾಗಿ ಐಎನ್‌ಸಿ ಹಲವು ದಶಕಗಳ ಕಾಲ ಆಡಳಿತ ನಡೆಸಿತ್ತು. ನಂತರ ಬದಲಾದ ರಾಜಕೀಯ ಪರಿಸ್ಥಿತಿಗಳನ್ನು ನಿಭಾಯಿಸಲು ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳೊಂದಿಗೆ ಸೇರಿ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಮೈತ್ರಿಕೂಟ ರಚಿಸಿತು. ಆಗಾಗಲೇ ಭಾರತದಲ್ಲಿ ಭದ್ರಬುನಾದಿ ಹಾಕಿದ್ದ ಎನ್‌ಡಿಎಗೆ ಪ್ರತಿಸ್ಪರ್ಧಿಯಾಗಿ ಪರ್ಯಾಯ ಇರಬೇಕು ಎಂಬ ಆಶಯದೊಂದಿಗೆ 2004 ರಲ್ಲಿ ಯುಪಿಎ (UPA) ಹುಟ್ಟುಕೊಂಡಿತು. ಇದನ್ನೂ ಓದಿ: 1999: ಮತ್ತೆ ಪ್ರಧಾನಿಯಾದ ‘ಅಜಾತಶತ್ರು’ – 5 ವರ್ಷ ಪೂರ್ಣ ಆಡಳಿತ ನಡೆಸಿದ ಮೊದಲ ಬಿಜೆಪಿ ನಾಯಕ
ಅಸ್ಥಿರ ನಾಯಕತ್ವ, ಆಂತರಿಕ ಭಿನ್ನಾಭಿಪ್ರಾಯ ಮತ್ತು ಕಲಹದಿಂದ ದುರ್ಬಲವಾಗಿದ್ದ ಕಾಂಗ್ರೆಸ್ ಮತ್ತೆ ಪ್ರಾಬಲ್ಯ ಸಾಧಿಸಲು ಮುಂದಾಯಿತು. ಸೋನಿಯಾ ಗಾಂಧಿ ಅವರು ಪಕ್ಷದೊಳಗೆ ತಮ್ಮ ಪ್ರಾಬಲ್ಯದ ಮುದ್ರೆಯೊತ್ತಿದ್ದರು. ಆದರೂ ಭಾರತೀಯ ಮತದಾರರ ಮನಸ್ಸು ಮತ್ತು ಹೃದಯದಲ್ಲಿ ಸೋನಿಯಾ ನೇತೃತ್ವದ ಕಾಂಗ್ರೆಸ್‌ಗೆ ಯಾವ ಸ್ಥಾನ ಸಿಗಬಹುದು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿತ್ತು. ಈ ಹೊತ್ತಿನಲ್ಲಿ ಅವರು ಕೈಗೊಂಡ ನಿರ್ಧಾರ ದೇಶದ ಗಮನ ಸೆಳೆಯಿತು. ಗಾಂಧಿಯೇತರ ನಾಯಕರೊಬ್ಬರನ್ನು ಪ್ರಧಾನಿಯನ್ನಾಗಿ ಮಾಡಿ ಅಚ್ಚರಿ ಮೂಡಿಸಿದ್ದರು.
ಈ ಐದು ವರ್ಷಗಳು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಅನಿಶ್ಚಿತ ಸಮಯವಾಗಿತ್ತು. ಕಾರ್ಗಿಲ್ ಸಂಘರ್ಷದ ನಂತರ ಭಾರತ-ಪಾಕಿಸ್ತಾನ ಸಂಬಂಧಗಳು ಉದ್ವಿಗ್ನವಾಗಿದ್ದವು. ಆದರೆ ವಾಜಪೇಯಿ ಅವರು ಎಲ್ಲಕ್ಕಿಂತ ಹೆಚ್ಚಾಗಿ ಶಾಂತಿಗೆ ಆದ್ಯತೆ ನೀಡಿದರು. ರಾಷ್ಟ್ರೀಯ ಭದ್ರತೆಯು ಪ್ರಮುಖವಾಗಿ ಉಳಿದಿದ್ದರೂ, ಭಯೋತ್ಪಾದನೆಯ ಬೆದರಿಕೆಗಳ ಹೊರತಾಗಿಯೂ ಭಾರತವು ಜವಾಬ್ದಾರಿಯುತ ರೀತಿಯಲ್ಲಿ ವರ್ತಿಸಿತು. 2001 ರಲ್ಲಿ ನ್ಯೂಯಾರ್ಕ್ನಲ್ಲಿ ನಡೆದ 9/11 ದಾಳಿಯು ವಿಶ್ವದಾದ್ಯಂತ ದೇಶಗಳಿಗೆ ಒಂದು ತಿರುವು ನೀಡಿತು. ಯುಎಸ್ ಅಲ್ ಖೈದಾ ವಿರುದ್ಧ ಹೆಚ್ಚು ಆಕ್ರಮಣಕಾರಿ ರೀತಿಯಲ್ಲಿ ಹೊರಬಂದಿತು. ಅದು ಜಾಗತಿಕ ವ್ಯಾಪಾರ ಮತ್ತು ಆರ್ಥಿಕತೆಯ ಮೇಲೆ ಆಳವಾದ ಪರಿಣಾಮ ಬೀರಿತು. ಇದನ್ನೂ ಓದಿ: 1998: ಮತ್ತೆ ದಿಲ್ಲಿ ಗದ್ದುಗೆಯೇರಿದ ವಾಜಪೇಯಿ – ಕರ್ನಾಟಕದಲ್ಲಿ ಬಿಜೆಪಿ ಎರಡಂಕಿಗೆ ಜಿಗಿತ
3 ಹೊಸ ರಾಜ್ಯಗಳ ಹುಟ್ಟು
2004 ರ ಲೋಕಸಭಾ ಚುನಾವಣೆಯನ್ನು (Lok Sabha Elections 2004) ಭಾರತದಲ್ಲಿ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಯಿತು. ಬಿಹಾರದಿಂದ ಜಾರ್ಖಂಡ್, ಹಿಮಾಚಲ ಪ್ರದೇಶದಿಂದ ಉತ್ತರಾಂಚಲ (ಈಗ ಉತ್ತರಾಖಂಡ) ಮತ್ತು ಮಧ್ಯಪ್ರದೇಶದಿಂದ ಛತ್ತೀಸಗಢ 2000 ರಲ್ಲಿ ಪ್ರತ್ಯೇಕ ರಾಜ್ಯಗಳಾಗಿ ರೂಪುಗೊಂಡವು.
35 ರಾಜ್ಯ, 21 ದಿನದ ಚುನಾವಣೆ
ಭಾರತದ 14ನೇ ಸಾರ್ವತ್ರಿಕ ಚುನಾವಣೆಯು ಏ.20 ರಿಂದ ಮೇ 10 ರ ವರೆಗೆ ನಡೆಯಿತು. 35 ರಾಜ್ಯಗಳಿಗೆ 21 ದಿನಗಳ ಕಾಲ ಮತದಾನ ನಡೆಯಿತು.
ಒಟ್ಟು ಮತದಾರರು: 67,14,87,930
ಪುರುಷರು: 34,94,90,864
ಮಹಿಳೆಯರು: 32,19,97,066
ಮತದಾನ: 38,99,48,330 ಮಂದಿ
ವೋಟಿಂಗ್ ಪ್ರಮಾಣ: 58.07%
ಒಟ್ಟು ಅಭ್ಯರ್ಥಿಗಳು: 5,435
ಮಹಿಳಾ ಅಭ್ಯರ್ಥಿಗಳು: 355 (ಗೆಲುವು 45)
ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಕಾಂಗ್ರೆಸ್ – 145
ಬಿಜೆಪಿ – 138
ಸಿಪಿಎಂ – 43
ಬಿಎಸ್‌ಪಿ – 19
ಸಿಪಿಐ – 10
ಎನ್‌ಸಿಪಿ – 9
ಪಕ್ಷೇತರ – 5
ಇತರೆ – 174
ಗೆಲುವಿನ ವಿಶ್ವಾಸದಲ್ಲಿದ್ದ ಬಿಜೆಪಿಗೆ ಶಾಕ್
ಚುನಾವಣೆಯ ಫಲಿತಾಂಶ ಬಿಜೆಪಿಗೆ ಆಘಾತ ನೀಡಿತು. ಸುಲಭ ಜಯಭೇರಿ ಬಾರಿಸುವ ವಿಶ್ವಾಸವಿದ್ದರೂ ಪಕ್ಷವು ತನ್ನ ಸ್ವಂತ ಅರ್ಹತೆಯ ಮೇಲೆ ಕೇವಲ 138 ಸ್ಥಾನಗಳನ್ನು ಗೆದ್ದಿತು. ಈ ಮೂಲಕ 44 ಸ್ಥಾನಗಳ ಕುಸಿತ ಕಂಡಿತು. ಎನ್‌ಡಿಎ ಬಹುಮತಕ್ಕೆ ಸ್ವಲ್ಪ ದೂರದಲ್ಲಿ ಕುಸಿದಿತ್ತು. ಕೇವಲ 181 ಸ್ಥಾನಗಳಲ್ಲಿ ಮೈತ್ರಿಕೂಟ ಗೆಲುವು ಸಾಧಿಸಿತು. ಅದರ ಕೆಲವು ಪ್ರಮುಖ ಮಿತ್ರಪಕ್ಷಗಳು ಸಹ ಪ್ರಭಾವ ಬೀರಲು ವಿಫಲವಾದವು.
ಮತ್ತೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್
ಕಾಂಗ್ರೆಸ್ ಕಳೆದ ಚುನಾವಣೆಗೆ ಹೋಲಿಸಿದರೆ 31 ಸ್ಥಾನಗಳನ್ನು ಹೆಚ್ಚಿಸಿಕೊಂಡು 145 ಸ್ಥಾನ ಗಳಿಸುವಲ್ಲಿ ಯಶಸ್ವಿಯಾಯಿತು. ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಅವಧಿಯಲ್ಲಿನ ಪ್ರದರ್ಶನಗಳಿಗೆ ಹೋಲಿಸಿದರೆ ಇದು ಯಾವುದೇ ರೀತಿಯಲ್ಲೂ ಅತ್ಯುತ್ತಮ ಚುನಾವಣಾ ಕಾರ್ಯಕ್ಷಮತೆಯ ಪ್ರದರ್ಶನವಾಗಿರಲಿಲ್ಲ. ಚುನಾವಣೆಯ ನಂತರ ಇತರ ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸಿ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ ಸ್ಥಾಪಿಸಿದ್ದು ಕಾಂಗ್ರೆಸ್‌ನ ಬುದ್ದಿವಂತಿಕೆ ನಡೆ ಎಂದು ವಿಶ್ಲೇಷಿಸಲಾಗಿದೆ. ಯುಪಿಎ ಒಟ್ಟು 218 ಸ್ಥಾನಗಳನ್ನು ಗಳಿಸಿತು. ಅದು ಎನ್‌ಡಿಎ ಸಂಖ್ಯಾಬಲಕ್ಕಿಂತ ಹೆಚ್ಚಿದ್ದರೂ, ಬಹುಮತ ಸಾಧ್ಯವಾಗಲಿಲ್ಲ. ಇದನ್ನೂ ಓದಿ: 1989: ಯಾವ ಪಕ್ಷಕ್ಕೂ ಬಹುಮತ ನೀಡದ ಭಾರತದ ಜನ
ಯುಪಿಎ ಮೈತ್ರಿಕೂಟ ಸರ್ಕಾರ ರಚನೆ
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಸಿಪಿಐ-ಮಾರ್ಕ್ಸ್‌ವಾದಿ, ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ ಮತ್ತು ಆಲ್-ಇಂಡಿಯಾ ಫಾರ್ವರ್ಡ್ ಬ್ಲಾಕ್‌ಗಳನ್ನು ಒಳಗೊಂಡಿರುವ ಎಡರಂಗದ ಹೊರಗಿನ ಬೆಂಬಲವು ಒಟ್ಟಾಗಿ 59 ಸ್ಥಾನಗಳನ್ನು ನೀಡಿತು. ಸ್ವತಂತ್ರರ ಸಹಾಯದಿಂದ ಮತ್ತು ಬಹುಜನ ಸಮಾಜ ಪಕ್ಷ (19 ಸ್ಥಾನಗಳು), ಸಮಾಜವಾದಿ ಪಕ್ಷ (36 ಸ್ಥಾನಗಳು) ಮತ್ತು ಕೇರಳ ಕಾಂಗ್ರೆಸ್ (1 ಸ್ಥಾನ) ಹೊರಗಿನ ಬೆಂಬಲದೊಂದಿಗೆ ಯುಪಿಎ ಸರ್ಕಾರ ರಚನೆಗೆ ಹಕ್ಕು ಸಾಧಿಸಲು 335 ರ ಮ್ಯಾಜಿಕ್ ಮಾರ್ಕ್ ಬಂತು. ಕಾಂಗ್ರೆಸ್ ಸೋನಿಯಾ ಗಾಂಧಿ ಅವರನ್ನು ಪ್ರಧಾನಿಯಾಗಿ ಸ್ವಾಗತಿಸಲು ಸಜ್ಜಾಗಿತ್ತು. ಆದರೆ ಪ್ರಧಾನಿ ಹುದ್ದೆಯನ್ನು ಸೋನಿಯಾ ಅವರು ನಿರಾಕರಿಸುತ್ತಾರೆ.
ಮನಮೋಹನ್ ಸಿಂಗ್ 14ನೇ ಪ್ರಧಾನಿ
ಅರ್ಥಶಾಸ್ತ್ರಜ್ಞ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿ ಅಪಾರ ಅನುಭವ ಹೊಂದಿದ್ದ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ. ದೇಶದ 14ನೇ ಪ್ರಧಾನಿಯಾಗಿ ಹಲವಾರು ಆರ್ಥಿಕ ಸುಧಾರಣೆಗಳಿಗೆ ಕಾರಣರಾಗುತ್ತಾರೆ.
ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸಾಧನೆ
1999 ರ ಚುನಾವಣೆಯಲ್ಲಿ ಕೇವಲ 7 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, 2004 ರಲ್ಲಿ ಎರಡಂಕಿಗೆ ಜಿಗಿದು ಸಾಧನೆ ಮಾಡಿತು. 28 ರ ಪೈಕಿ 18 ಕ್ಷೇತ್ರಗಳನ್ನು ದಾಖಲೆಯ ಜಯ ಸಾಧಿಸಿತು. ಕಾಂಗ್ರೆಸ್ 8 ಮತ್ತು ಜೆಡಿಎಸ್ 2 ಸ್ಥಾನಗಳನ್ನು ಮಾತ್ರ ಗೆದ್ದವು.
ನವದೆಹಲಿ: ಎದೆನೋವಿನಿಂದಾಗಿ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರನ್ನು ಭಾನುವಾರ ರಾತ್ರಿ 8:45ಕ್ಕೆ ಆಸ್ಪತ್ರೆಯ ಕಾರ್ಡಿಯೋ-ಥೊರಾಸಿಕ್ ವಾರ್ಡಿಗೆ ಕರೆದೊಯ್ಯಲಾಯಿತು. ಅವರಿಗೆ ಎದೆನೋವು, ಜ್ವರ ಕಾಣಿಸಿಕೊಂಡಿದ್ದರಿಂದ ಭಾನುವಾರ ರಾತ್ರಿಯಿಂದ ಚಿಕಿತ್ಸೆ ನೀಡಿ, ವೈದ್ಯರು ನಿಗಾ ವಹಿಸಿದ್ದರು ಎಂದು ವರದಿಯಾಗಿದೆ.
Former Prime Minister Dr Manmohan Singh has been discharged from AIIMS, Delhi on medical advice: AIIMS official pic.twitter.com/hcJSbGDVrT
ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಅವರಿಗೆ ಕೋವಿಡ್-19 ಟೆಸ್ಟ್ ಮಾಡಲಾಗಿದ್ದು, ರಿಪೋರ್ಟ್ ನೆಗೆಟಿವ್ ಬಂದಿದೆ. ಹೀಗಾಗಿ ಎದೆನೋವು ಹಾಗೂ ಜ್ವರದಿಂದ ಗುಣಮುಖರಾದ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ವರದಿಯಾಗಿದೆ.
ಪ್ರಸ್ತುತ ರಾಜ್ಯಸಭೆಯಲ್ಲಿ ರಾಜಸ್ಥಾನವನ್ನು ಪ್ರತಿನಿಧಿಸುತ್ತಿರುವ ಮನಮೋಹನ್ ಸಿಂಗ್ ಅವರು ಎರಡು ಬಾರಿ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮೊದಲ 1990ರಲ್ಲಿ ಮತ್ತು ಎರಡನೇ ಬಾರಿ 2009ರಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಅವರಿಗೆ ಮಧುಮೇಹ ಕೂಡ ಇದೆ.
ನವದೆಹಲಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
87 ವರ್ಷದ ಮನಮೋಹನ್ ಸಿಂಗ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ವೈದ್ಯರು ಚಿಕಿತ್ಸೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
Delhi: Former Prime Minister Dr Manmohan Singh has been admitted to All India Institute of Medical Sciences (AIIMS) after complaining about chest pain (File pic) pic.twitter.com/a38ajJDNQP
ಪಂಜಾಬ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಮನಮೋಹನ್ ಸಿಂಗ್ ಪ್ರಧಾನಿಯಾಗುವ ಮೊದಲು ಅರ್ಥಶಾಸ್ತ್ರಜ್ಞರಾಗಿ ಕೆಲಸ ಮಾಡಿದ್ದರು. ಅವರು ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದರು. ಬಳಿಕ ಅಂದ್ರೆ 2004ರಿಂದ 2014ರವರೆಗೆ ಪ್ರಧಾನಿಯಾಗಿದ್ದರು.