Tag: Dr Manjunath

  • ಬದಲಾದ ವಾತಾವರಣದಿಂದ ಯುವಕರಲ್ಲಿ ಹೆಚ್ಚಿದ ಹೃದಯಾಘಾತ

    ಬದಲಾದ ವಾತಾವರಣದಿಂದ ಯುವಕರಲ್ಲಿ ಹೆಚ್ಚಿದ ಹೃದಯಾಘಾತ

    ಬೆಂಗಳೂರು: ವಾತಾವರಣ ಬದಲಾದಂತೆ ಮನುಷ್ಯರು ಕೂಡ ಬದಲಾಗುತ್ತಿದ್ದಾರೆ. ಆಚಾರ, ವಿಚಾರದಲ್ಲಿ ಬದಲಾವಣೆ ಮಾಡಿಕೊಂಡು ಆರೋಗ್ಯವಾಗಿ ಇರಬೇಕಾದಂತಹ ಪರಿಸ್ಥಿತಿಯಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಯುವಕರು ಚಿಕ್ಕ ವಯಸ್ಸಿಗೆ ಹಲವಾರು ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಪ್ರಮುಖವಾಗಿ ಚಿಕ್ಕವಯಸ್ಸಿಗೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. 10 ವರ್ಷಗಳ ಹಿಂದೆ ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದ ಸಂಖ್ಯೆ ಕಡಿಮೆ ಇತ್ತು. ಆದರೆ ಈಗ ಕಳೆದ 10 ವರ್ಷದಿಂದ ಯುವಕರು ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ 22% ಏರಿಕೆ ಆಗಿದೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಅವರು ಈ ಬಗ್ಗೆ ಅಚ್ಚರಿಯ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.

    manjunath

    ಬದಲಾದ ಜೀವನ ಶೈಲಿಯಿಂದ 25 ರಿಂದ 45 ವರ್ಷ ವಯಸ್ಸಿನವರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಚಿಕ್ಕ ವಯಸ್ಸು, ಯಂಗ್ ಆಗಿದ್ದೇವೆ ಅಂತ ನಿರ್ಲಕ್ಷ್ಯ ಮಾಡಬೇಡಿ. 1,000 ಜನಕ್ಕೆ ಟ್ರೀಟ್ ಮೆಂಟ್ ಕೊಟ್ಟರೆ 30% ಅಷ್ಟು 45 ವರ್ಷ ವಯಸ್ಸಿನವರಿಗೆ ಹೃದಯಾಘಾತ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹೃದಯಾಘಾತಕ್ಕೆ ಏನು ಕಾರಣ ಎನ್ನುವುದನ್ನು ಡಾ. ಮಂಜುನಾಥ್ ವಿವರಣೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಟಾಯ್ಲೆಟ್‌ ನೀರು ಮರುಬಳಸಿ ತಯಾರಿಸಿದ ಬಿಯರ್‌ ಸೂಪರ್‌ ಎಂದ ಮದ್ಯಪ್ರಿಯರು!

    ಚಿಕ್ಕ ವಯಸ್ಸಿಗೆ ಹೃದಯಾಘಾತಕ್ಕೆ ಏನು ಕಾರಣವೇನು?
    * ಧೂಮಪಾನ ಮಾಡುವುದು
    * ಮದ್ಯಪಾನ ಮಾಡುವುದು
    * ಆಹಾರ ಪದ್ದತಿ ಬದಲಾವಣೆ
    * ಆಹಾರ ಪದಾರ್ಥ ಬದಲಾವಣೆ
    * ಸಕ್ಕರೆ ಖಾಯಿಲೆ ಜೊತೆಗೆ ಬರುತ್ತಿರುವುದು
    * ದಿನಚರಿ ಬದಲಾಗಿರುವುದು
    * ನಿದ್ರೆ ಬರದೇ ಇರುವುದು
    * ಫ್ಯಾಮಿಲಿ ಸ್ಟ್ರೆಸ್
    * ನಿರುದ್ಯೋಗದ ಸಮಸ್ಯೆ
    * ವಿದ್ಯಾರ್ಥಿಗಳಿಗೆ ಸಿಕ್ಕಪಟ್ಟೆ ಒತ್ತಡ
    * ಭವಿಷ್ಯದ ಒತ್ತಡ
    * ಪೋಷಕರ ಒತ್ತಡ
    * ವರ್ಷದಲ್ಲಿ ಮಾಡಬೇಕಾದ ಸಾಧನೆ 10 ತಿಂಗಳಲ್ಲಿ ಮಾಡಬೇಕು ಅನ್ನೋದು
    * ವಾಯುಮಾಲಿನ್ಯ ಕಾರಣ

    ಹೃದಯಾಘಾತ ಆಗದಂತೆ ಎಚ್ಚರವಹಿಸುವುದು ಹೇಗೆ?
    * ಚಿಕ್ಕಂದಿನಿಂದಲೇ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು
    * ವ್ಯಾಯಾಮ ಮಾಡಬೇಕು
    * ಕೊಬ್ಬಿನಾಂಶ ಇರುವ ಆಹಾರ ಸೇರಿಸಬಾರದು
    * ಹೆಚ್ಚು ಉಪ್ಪಿನಾಂಶ ಇರುವ ಆಹಾರ ಸೇರಿಸಬಾರದು
    * ಧೂಮಪಾನ ಮಾಡಬಾರದು
    * ಮದ್ಯಪಾನ ಮಾಡಬಾರದು
    * 35 ವರ್ಷ ದಾಟಿದ ಗಂಡಸರು, 45 ವರ್ಷ ದಾಟಿದ ಗಂಡಸರು ವಾರ್ಷಿಕವಾಗಿ ಹೆಲ್ತ್ ಚೆಕಪ್ ಮಾಡಿಸಿಕೊಳ್ಳಬೇಕು . ಬ್ಲಡ್ ಬ್ರೆಸರ್, ಬ್ಲಡ್ ಕೊಲೆಸ್ಟ್ರಾಲ್ ಚೆಕ್ ಮಾಡಿಸಿಕೊಳ್ಳಬೇಕು
    * ಕುಟುಂಬದಲ್ಲಿ ಯಾರಿಗಾದ್ರು ಹಾರ್ಟ್ ಅಟ್ಯಾಕ್ ಆಗಿದ್ದರೆ ಎಚ್ಚರವಹಿಸಬೇಕು ಇದನ್ನೂ ಓದಿ: 45,000 ಸಾವಿರ ಬದಲಿಗೆ 1.42 ಕೋಟಿ ಸ್ಯಾಲರಿ ಹಾಕಿದ ಕಂಪನಿ – ಹಣ ಜೊತೆ ಉದ್ಯೋಗಿ ಎಸ್ಕೇಪ್

    ಒಟ್ಟಾರೆ 80 ರಿಂದ 90 ವರ್ಷ ಬಾಳಿ ಬದುಕಬೇಕಾದ ಯುವಕರು ಕೆಟ್ಟ ಚಟ ಮತ್ತು ಆರೋಗ್ಯದ ಬಗ್ಗೆ ನಿರ್ಲಕ್ಷ್ಯದಿಂದ ಚಿಕ್ಕವಯಸ್ಸಿಗೆ ಹೃದಯಾಘಾತಕ್ಕೆ ಬಲಿಯಾಗುವುದು ನಿಜಕ್ಕೂ ಆತಂಕ ಪಡುವಂತಹ ವಿಚಾರವಾಗಿದೆ.

    Live Tv

  • ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಆರಂಭ – ಡಾ. ಸಿ.ಎನ್.ಮಂಜುನಾಥ್ ಎಚ್ಚರಿಕೆ

    ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಆರಂಭ – ಡಾ. ಸಿ.ಎನ್.ಮಂಜುನಾಥ್ ಎಚ್ಚರಿಕೆ

    ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಕೋವಿಡ್ 4ನೇ ಅಲೆ ಆರಂಭವಾಗಿದ್ದು, ಮುಂದಿನ 4-5 ವಾರಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಲಿವೆ ಎಂದು ಕೋವಿಡ್ ಟಾಸ್ಕ್‌ಫೋರ್ಸ್‌ ಸಮಿತಿ ಸದಸ್ಯ ಹಾಗೂ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾರತಕ್ಕೆ ಈಗಾಗಲೇ ಕೊರೊನಾ 4ನೇ ಅಲೆ ಬಂದಿದ್ದು, ದೆಹಲಿ, ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ರಾಜ್ಯಕ್ಕೂ ಕೋವಿಡ್ 4ನೇ ಅಲೆ ಕಾಲಿಟ್ಟಿದೆ. ಮುಂದಿನ 4-5 ವಾರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕೋವಿಡ್‍ನಿಂದ ಗುಣವಾದವರಿಗೆ ಕ್ಷಯ ರೋಗ: ಸುಧಾಕರ್

    COVID HIKE 2

    ಕೋವಿಡ್ 2, 3ನೇ ಅಲೆಯಲ್ಲಿ ಯಾವ ರೀತಿ ಕೊರೊನಾ ರೋಗಲಕ್ಷಣಗಳಿರುತ್ತೋ 4ನೇ ಅಲೆಯಲ್ಲೂ ಅದೇ ರೀತಿ ಇರಲಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಕಡಿಮೆಯಿರಲಿದೆ. ಆದರೆ ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ ಪೀಡಿತರು, ಕ್ಯಾನ್ಸರ್ ರೊಗಿಗಳು, ನಿಶ್ಯಕ್ತಿಯುಳ್ಳವರು, ಡಯಾಲಿಸಿಸ್ ಚಿಕಿತ್ಸೆಗೆ ಒಳಗಾದವರು, ಅಸ್ತಮಾ ರೋಗಿಗಳು ಹಾಗೂ ಇತರೇ ಕಾಯಿಲೆ ಇರುವವರು ಎಚ್ಚರವಾಗಿರಬೇಕು ಎಂದು ಸಲಹೆ ನೀಡಿದ್ದಾರೆ.

    CORONA

    ಕೊರೊನಾ ರೂಪಾಂತರವಾಗೋದು ಅದರ ಸಹಜ ಗುಣ, ಸ್ವಭಾವ ಕೂಡ. ಈಗ ಪತ್ತೆಯಾಗಿರುವ BA2.10, BA2.12 ಹೊಸ ತಳಿಯೇನಲ್ಲ. ಇದು ಮೊದಲಿನಿಂದಲೂ ಕಾಲಕಾಲಕ್ಕೆ ಬದಲಾಗುತ್ತಿದೆ. ಕಳೆದೊಂದು ವಾರದಿಂದ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. 40-50ರ ಆಸುಪಾಸಿನಲ್ಲಿದ್ದ ಪ್ರಕರಣಗಳು 100ರ ಗಡಿ ದಾಟುತ್ತಿವೆ. ರಾಜ್ಯಕ್ಕೆ ಈಗಾಗಲೇ BA2.10, BA2.12 ವೈರಸ್ ಕಾಲಿಟ್ಟಿರುವ ಸಾಧ್ಯತೆಗಳಿವೆ. ಈ ಉಪತಳಿಗಳ ಗುಣಲಕ್ಷಣಗಳನ್ನು ತಿಳಿಯಲು ಅಧ್ಯಯನಗಳು ನಡೆಯುತ್ತಿವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಳಿಕೆಯತ್ತ ಕೋವಿಡ್‌ ಕೇಸ್‌ -ಇಂದಿನ ಪಾಸಿಟಿವಿಟಿ ರೇಟ್ ಶೇ.1.45

    corona

    ಕೋವಿಡ್ 4ನೇ ಅಲೆ ತಡೆಗೆ ಮಾಸ್ಕ್ ಅತ್ಯಗತ್ಯ, ಎಲ್ಲರೂ ತಪ್ಪದೇ ಮಾಸ್ಕ್ ಧರಿಸಬೇಕು. ಲಸಿಕೆ ಪೂರ್ಣವಾಗಿದೆ ಎಂದು ನಿರ್ಲಕ್ಷ್ಯ ಮನೋಭಾವ ತೋರಬಾರದು. ಜ್ವರ, ಕೆಮ್ಮು, ನೆಗಡಿಯಾದರೆ ನಿರ್ಲಕ್ಷ್ಯ ಮಾಡದೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಏಕೆಂದರೆ ಮುಂದಿನ ವಾರಗಳಲ್ಲಿ 4ನೇ ಅಲೆ ಇರಲಿದ್ದು, ನಂತರ ಸಹಜವಾಗಿ ಕ್ಷೀಣಿಸುತ್ತದೆ ಎಂದು ಹೇಳಿದ್ದಾರೆ.

  • ಕೊರೊನಾ ಇನ್ನೂ ಜೀವಂತವಾಗಿದೆ ನಿರ್ಲಕ್ಷ್ಯ ಬೇಡ: ಡಾ.ಮಂಜುನಾಥ್

    ಕೊರೊನಾ ಇನ್ನೂ ಜೀವಂತವಾಗಿದೆ ನಿರ್ಲಕ್ಷ್ಯ ಬೇಡ: ಡಾ.ಮಂಜುನಾಥ್

    ಬೆಂಗಳೂರು: ಕೊರೊನಾ ಮೂರನೇ ಅಲೆ ನಮ್ಮ ದೇಶಕ್ಕೆ ಇನ್ನೂ ಬಂದಿಲ್ಲ ನಿಜ. ಆದರೇ ಸಂಪೂರ್ಣವಾಗಿ ನಿರ್ನಾಮವಾಗಿಲ್ಲ, ಕೊರೊನಾ ಇನ್ನೂ ಜೀವಂತವಾಗಿದೆ. ಕೇರಳದಲ್ಲಿ ಪ್ರತಿನಿತ್ಯ 6 ರಿಂದ 8 ಸಾವಿರ ಕೇಸ್‍ಗಳು ಬರುತ್ತಿದೆ. ಜನ ನಿರ್ಲಕ್ಷ್ಯ ಮಾಡಬಾರದು ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೆಶಕರಾದ ಡಾ. ಮಂಜುನಾಥ್ ಹೇಳಿದ್ದಾರೆ.

    ಈಗಾಗಲೇ ಕೊರೊನಾ ಮೂರನೇ ಅಲೆ ಬ್ರಿಟನ್, ರಷ್ಯಾ, ಅಮೆರಿಕಾ ಸೇರಿದಂತೆ ಹಲವೆಡೆ ಶುರುವಾಗಿದೆ. ರಷ್ಯಾದಲ್ಲಿ ಶೇ 75 ರಷ್ಟು ವ್ಯಾಕ್ಸಿನ್ ಆಗಿಲ್ಲದರ ಪರಿಣಾಮ ಅಲ್ಲಿ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ. ಭಾರತಕ್ಕೂ ಮೂರನೇ ಅಲೆ ಬರುವುದು ಪಕ್ಕ, ಆದರೇ ಯಾವಾಗ ಎನ್ನುವುದನ್ನು ನಿಖರವಾಗಿ ಜ್ಯೋತಿಷ್ಯ ರೀತಿ ಹೇಳುವುದಕ್ಕೆ ಆಗುವುದಿಲ್ಲ. ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳ ಲಾಭಿಯೊಂದಿಗೆ ಸರ್ಕಾರವೂ ಶಾಮೀಲಾಗಿತ್ತೇ: ಕಾಂಗ್ರೆಸ್ ಪ್ರಶ್ನೆ

    ಜನ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು, ಎಲ್ಲರೂ ವ್ಯಾಕ್ಸಿನ್ ಪಡೆಯಬೇಕು. ಇದರಿಂದ ಜನರಲ್ಲಿ ರೋಗ ನಿರೋಧಕ ಶಕ್ತಿ ಬೆಳವಣಿಗೆ ಆಗಲಿದೆ. ಹಾಗಂತ ವ್ಯಾಕ್ಸಿನ್ ಪಡೆದರೆ ಕೊರೊನಾ ಬರುವುದಿಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಯುವತಿಯ ಹೊಟ್ಟೆಯಲ್ಲಿ ಒಂದೂವರೆ ಕೆಜಿ ಕೂದಲು – ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು

    ವ್ಯಾಕ್ಸಿನ್ ಪಡೆದವರಿಗೂ ಸೋಂಕು ಬರಬಹುದು, ವ್ಯಾಕ್ಸಿನ್ ಪಡೆದವರು ಸಹ ಕೊರೊನಾದಿಂದ ಮೃತಪಟ್ಟ ದಾಖಲೆಗಳಿವೆ. ಆದರೇ ಆ ಸಂಖ್ಯೆ ಕಡಿಮೆ ಇದೆ. ಶೇ 90 ರಷ್ಟು ವ್ಯಾಕ್ಸಿನ್ ಕೊರೊನಾದಿಂದ ರಕ್ಷಣೆ ನೀಡಿದರೆ ಮಾಸ್ಕ್ ಕೊರೊನಾ ಬರದಂತೆ ತಡೆಯುವ ಒಂದೇ ಒಂದು ಅಸ್ತ್ರ. ಹಾಗಾಗಿ ಜನ ಮಾಸ್ಕ್ ಇಲ್ಲದೇ ಮನೆಯಿಂದ ಹೊರಬರಲೇ ಬಾರದು. ಕೊರೊನಾ ನಿಯಮಗಳ ಪಾಲನೆ ಮಾಡುವುದನ್ನು ಮರೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

  • ದೊಡ್ಡಣ್ಣ ಐಸಿಯುನಲ್ಲಿದ್ದು, ಆರಾಮಾಗಿದ್ದಾರೆ: ಡಾ. ಮಂಜುನಾಥ್

    ದೊಡ್ಡಣ್ಣ ಐಸಿಯುನಲ್ಲಿದ್ದು, ಆರಾಮಾಗಿದ್ದಾರೆ: ಡಾ. ಮಂಜುನಾಥ್

    ಬೆಂಗಳೂರು: ಹಿರಿಯ ನಟ ದೊಡ್ಡಣ್ಣ ಅವರು ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಮಾಹಿತಿ ನೀಡಿದ್ದಾರೆ.

    ದೊಡ್ಡಣ್ಣ ಆರೋಗ್ಯ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು ಬೆಳಗ್ಗೆ ದೊಡ್ಡಣ್ಣ ಅವರಿಗೆ ಪರ್ಮನೆಂಟ್ ಪೇಸ್ ಮೇಕರ್ ಅಳವಡಿಸಿದೆ. ಸದ್ಯ ಅವರು ಆರಾಮಾಗಿದ್ದಾರೆ. ಇನ್ನೇನು 2-3 ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆದ ಅಫ್ಘಾನ್ ಮಾಜಿ ಸಚಿವ!

    ಕೆಲವರಿಗೆ ಹೃದಯದ ಬಡಿತ ಕಡಿಮೆ ಇರುತ್ತದೆ. ಆದರೆ ಇದು ಹಾರ್ಟ್ ಅಟ್ಯಾಕ್ ಕಾಯಿಲೆ ಅಲ್ಲ. ಹೃದಯದ ಬಡಿತ ತುಂಬಾ ಕಡಿಮೆ ಆದಾಗ ಕೆಲವರಿಗೆ ತಲೆ ಸುತ್ತು, ಪ್ರಜ್ಞೆ ತಪ್ಪುವುದೆಲ್ಲ ಆಗುತ್ತದೆ. ಸದ್ಯ ದೊಡ್ಡಣ್ಣ ಅವರಿಗೆ ಪೇಸ್ ಮೇಕರ್ ಹಾಕಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಜೈಲಿನಲ್ಲಿಯೇ ಆರೋಪಿಗಳ ಎಣ್ಣೆ ಪಾರ್ಟಿ- ವೀಡಿಯೋ ವೈರಲ್

    ತಲೆ ಸುತ್ತು ಹಾಗೂ ಒಂದೊಂದು ಬಾರಿ ಪ್ರಜ್ಞೆ ತಪ್ಪಿದಂತೆ ಆಗುತ್ತಿದ್ದರಿಂದ ನಿನ್ನೆ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಸದ್ಯ ಅವರು ಐಸಿಯುನಲ್ಲಿದ್ದಾರೆ ಎಂದರು.  ಇದನ್ನೂ ಓದಿ:ಕಾರು ಸಮೇತ ಭದ್ರಾ ನಾಲೆಗೆ ಬಿದ್ದು ನಾಲ್ವರು ಆತ್ಮಹತ್ಯೆಗೆ ಯತ್ನ

  • ನನಗೆ 104 ವಯಸ್ಸು, ಹಾಸಿಗೆ ವೇಸ್ಟ್ ಮಾಡ್ಬೇಡಿ, ಯುವಕರಿಗೆ ನೀಡಿ ಅಂತಿದ್ರು- ದೊರೆಸ್ವಾಮಿ ಬಗ್ಗೆ ಡಾ.ಮಂಜುನಾಥ್ ಮಾತು

    ನನಗೆ 104 ವಯಸ್ಸು, ಹಾಸಿಗೆ ವೇಸ್ಟ್ ಮಾಡ್ಬೇಡಿ, ಯುವಕರಿಗೆ ನೀಡಿ ಅಂತಿದ್ರು- ದೊರೆಸ್ವಾಮಿ ಬಗ್ಗೆ ಡಾ.ಮಂಜುನಾಥ್ ಮಾತು

    ಬೆಂಗಳೂರು: ನನಗೆ 104 ವರ್ಷ ವಯಸ್ಸು ಸುಮ್ಮನೇ ಹಾಸಿಗೆ ವೇಸ್ಟ್ ಮಾಡಬೇಡಿ, ಬೇರೆ ಯುವಕರಿಗೆ ನೀಡಿ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ನೆನಪಿಸಿಕೊಂಡರು.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಿನ್ನೆ ಸಂಜೆ ಕರೆ ಮಾಡಿದಾಗ ಬೇರೆ ರೀತಿಯೇ ಮಾತನಾಡಿದರು. ಮಂಜುನಾಥ್ ಅವರೇ ನನಗೆ 104 ವರ್ಷ ಆಗಿದೆ. ಈ ಹಾಸಿಗೆಯನ್ನು ಬೇರೆ ಯುವಕರಿಗೆ ನೀಡಿ, ಚಿಕ್ಕ ವಯಸ್ಸಿನವರಿಗೆ ಈ ಬೆಡ್‍ನಲ್ಲಿ ಚಿಕಿತ್ಸೆ ನೀಡಿ, ನನ್ನನ್ನು ಯಾಕೆ ಇಲ್ಲಿ ಮಲಗಿಸಿ ಹಾಸಿಗೆ ವೇಸ್ಟ್ ಮಾಡುತ್ತಿದ್ದೀರಿ ಎಂದು ದೊರೆಸ್ವಾಮಿ ಅವರು ಹೇಳಿರುವ ಬಗ್ಗೆ ನೆನೆದರು.

    ಅಯ್ಯೋ ಆ ರೀತಿ ಇಲ್ಲ, ಜಯದೇವ ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆ ಇಲ್ಲ, ಎಲ್ಲರಿಗೂ ಹಾಸಿಗೆ ಇದೆ ಎಂದು ಹೇಳಿದೆ. ಕೊರೊನಾದಿಂದ ಗುಣಮುಖರಾದ ಬಳಿಕ ಮೇ 12 ರಂದು ಡಿಸ್ಚಾರ್ಜ್ ಮಾಡಿದ್ದೆವು. ಎರಡ್ಮೂರು ದಿನ ಕಳೆದ ಬಳಿಕ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ವಿಧಿವಶರಾದರು, ಈ ಬಾರಿ ಅವರಿಗೆ ಆತ್ಮಸ್ಥೈರ್ಯ ಕಡಿಮೆಯಾಗಿತ್ತು. ಇತ್ತೀಚೆಗೆ ಅವರ ಪತ್ನಿ ಸಹ ತೀರಿಕೊಂಡರು ಎಂದರು.

    ಹಾರ್ಟ್ ಫೇಲ್ಯೂರ್ ಇಂದಾನೆ ಅವರು ಸಾವನ್ನಪ್ಪಿದ್ದಾರೆ. ಕೊರೊನಾ ಸಹ ಸ್ವಲ್ಪ ಘಾಸಿ ಮಾಡಿತು. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಅವರಿಗೆ ಆಕ್ಸಿಜನ್ ಕೊಟ್ಟೇ ಇರಲಿಲ್ಲ. ಯಾವಾಗಲೂ 97-98 ಆಕ್ಸಿಜನ್ ಇರುತ್ತಿತ್ತು. ಆದರೆ ಇಂದು ಮಾತ್ರ ಕೊನೇ ಘಳಿಗೆಯಲ್ಲಿ ಆಕ್ಸಿಜನ್ ನೀಡಿದೆವು ಮತ್ತೆ ಎಂದೂ ಆಕ್ಸಿಜನ್ ನೀಡಿರಲಿಲ್ಲ ಎಂದು ಡಾ.ಮಂಜುನಾಥ್ ಅವರು ಹೇಳಿದರು.

    ಸುಮಾರು 10-12 ವರ್ಷದಿಂದ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇತ್ತು. ಹೃದಯದಲ್ಲಿನ ಎಡ ಭಾಗದ ಕವಚದಲ್ಲಿ ಸೋರಿಕೆ ಇತ್ತು. ಅಲ್ಲದೆ ಲಂಗ್ ಡಿಸೀಸ್ ಕೂಡ ಇತ್ತು. ಹೀಗಾಗಿ ಕಳೆದ 10 ವರ್ಷಗಳಲ್ಲಿ 10-12 ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರತಿ ಬಾರಿಯೂ ನಾವು ಚಿಕಿತ್ಸೆ ಮಾಡಿ ಕಳುಹಿಸುತ್ತಿದ್ದೆವು. ಬಳಿಕ ಮನೆಗೆ ಹೋಗಿ ರೆಸ್ಟ್ ಮಾಡಿ ಎಂದರೆ ಪ್ರತಿಭಟನೆಗೆ ತೆರಳುತ್ತಿದ್ದರು. 11 ಗಂಟೆಗೆ ಡಿಸ್ಚಾರ್ಜ್ ಮಾಡಿದರೆ, ಬಳಿಕ ಟಿವಿಯಲ್ಲಿ ನೋಡಿದಾಗ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿರುತ್ತಿದ್ದರು ಎಂದು ಹಳೆ ನೆನಪುಗಳನ್ನು ಮೆಲುಕು ಹಾಕಿದರು.

  • 18 ವರ್ಷ ಮೇಲ್ಪಟ್ಟರೂ ಕೆಲವರಿಗೆ ಸಿಗಲ್ಲ ಲಸಿಕೆ

    18 ವರ್ಷ ಮೇಲ್ಪಟ್ಟರೂ ಕೆಲವರಿಗೆ ಸಿಗಲ್ಲ ಲಸಿಕೆ

    – ಡಿಸಿಜಿಐ ಎರಡು ಲಸಿಕೆಗೆಗಳಿಗೆ ಅನುಮತಿ ಕೊಟ್ಟಿರುವುದು ಸ್ವಾಗತಾರ್ಹ
    – ಹಂತಹಂತವಾಗಿ ಲಸಿಕೆ ವಿತರಣೆ
    – ಪಬ್ಲಿಕ್ ಟಿವಿಗೆ ಡಾ. ಮಂಜುನಾಥ್ ಪ್ರತಿಕ್ರಿಯೆ

    ಬೆಂಗಳೂರು: ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ ಕೊಟ್ಟಿರುವುದು ಸ್ವಾಗತಾರ್ಹವೆಂದು ಜಯದೇವ ಆಸ್ಪತ್ರೆಯ ನಿರ್ದೇಶಕ, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತಾನಾಡಿದ ಇವರು ಲಸಿಕೆಗಾಗಿ ತುಂಬಾ ದಿನಗಳಿಂದ ವೈದ್ಯರು ಮತ್ತು ಜನರು ಕಾಯುತ್ತಿದ್ದಾರೆ. ಲಸಿಕೆ ಬಂದ ಕೂಡಲೇ ಹಂತ ಹಂತವಾಗಿ ಕೊಡಲಾಗುವುದು. ಮೊದಲ ಹಂತದಲ್ಲಿ ಕೊರೊನಾ ವಾರಿರ್ಯಸ್ ಮತ್ತು ಆರೋಗ್ಯ ಸಿಬ್ಬಂದಿಗೆ ಕೊಡಲಾಗುವುದು ಎಂದರು.

    ನಮ್ಮ ರಾಜ್ಯದಲ್ಲಿ ಲಸಿಕೆ ವಿತರಣೆಗೆ ಸಿದ್ಧತೆ ಮಾಡಲಾಗುತ್ತಿದೆ. ಡ್ರೈರನ್ ಕೂಡ ಯಶಸ್ವಿಯಾಗಿ ನಡೆದಿದೆ. ಲಸಿಕೆ ಪೂರೈಕೆಯಾಗುತ್ತಿದ್ದಂತೆ ಹಂತ ಹಂತವಾಗಿ ವಿತರಣೆಯನ್ನು ಮಾಡಲಾಗುವುದು. ಲಸಿಕೆ ವಿತರಣೆಗೆ ಈಗಿರುವ ತಾತ್ಕಾಲಿಕ ಸ್ವಾಬ್ ಸಂಗ್ರಹ ಕೇಂದ್ರಗಳನ್ನು ಮತ್ತು ಟೆಸ್ಟಿಂಗ್ ಕೇಂದ್ರಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಮುಂದೆ ಇವುಗಳನ್ನೇ ವ್ಯಾಕ್ಸಿನೇಷನ್ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತದೆ ಎಂದು ತಿಳಿಸಿದರು.

    ಲಸಿಕೆ ಕೊಟ್ಟ ಮೇಲೆ ನಿಗಾ ಇಡಬೇಕಾಗಿದೆ ಹಾಗಾಗಿ ಒಂದು ಕೇಂದ್ರದಲ್ಲಿ ನೂರು ಜನರಂತೆ ವಿಂಗಡಿಸಿ ಲಸಿಕೆ ಕೊಡಲಾಗುತ್ತದೆ. ಲಸಿಕೆ ಪಡೆದ ಬಳಿಕ ಅಡ್ಡ ಪರಿಣಾಮ ಆಗುವುದಿಲ್ಲ. ಆದರೆ ಕೆಳವರಲ್ಲಿ ಸಣ್ಣಜ್ವರ, ತಲೆನೋವು ಕಾಣಿಸಿಕೊಳ್ಳುವ ಸಾಧ್ಯತೆಗಳು ಇದೆ. ಅಲರ್ಜಿ ಸಮಸ್ಯೆ ಇರುವವರಿಗೆ ಲಸಿಕೆ ಕೊಟ್ಟರೆ ಜಾಸ್ತಿ ನಿಗಾ ಇರಿಸಬೇಕಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸದ್ಯ ಲಸಿಕೆ ಕೊಡಲಾಗುತ್ತಿದೆ. ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಿಗೆ ಲಸಿಕೆ ಈಗ ಕೊಡುವುದಿಲ್ಲ. ಯಾಕೆಂದರೆ ಮಕ್ಕಳು, ಬಾಣಂತಿಯರು ಮತ್ತು ಗರ್ಭಿಣಿಯರ ಮೇಲೆ ಲಸಿಕೆ ಪ್ರಯೋಗ ಮಾಡಿಲ್ಲ. ಹಾಗಾಗಿ ಲಸಿಕೆ ಬಂದರೂ ನೀಡುವುದಿಲ್ಲ. ಇವರ ಮೇಲೆ ಪ್ರಯೋಗ ಮಾಡಿದ ನಂತರದ ಹಂತದಲ್ಲಿ ಲಸಿಕೆ ಕೊಡಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು.

    ಇನ್ನೂ ಒಂದೆರಡು ವಾರಗಳಲ್ಲಿ ಕೊರೊನಾ ಲಸಿಕೆ ಬರುವ ಸಾಧ್ಯತೆ ಇದೆ. ನಮ್ಮ ರಾಜ್ಯ ಲಸಿಕೆ ವಿತರಣೆಗೆ ಸನ್ನದ್ಧವಾಗಿದೆ. ನಮ್ಮ ರಾಜ್ಯದಲ್ಲಿ ಕೊರೊನಾ ರೊಪಾಂತರ ಅಧ್ಯಯನ ಮಾಡುವ ನಿರ್ಧಾರ ಆಗಿದೆ. ಎಲ್ಲರಿಗೂ ಜಿನೆಟಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ಮಾಡುವುದಿಲ್ಲ. ಪಾಸಿಟಿವ್ ಬಂದವರಿಗೆ ಜಿನೆಟಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ಮಾಡಲಾಗುತ್ತದೆ. ಹಾಗಾಗಿ ಲ್ಯಾಬ್‍ಗಳ ಕೊರತೆಯು ಆಗುವುದಿಲ್ಲ. ಕೊರೊನಾ ಪ್ರತಿಯೊಂದು ದೇಶದಲ್ಲೂ ರೂಪಾಂತರವಾಗಿರುವುದು ವರದಿಯಾಗಿದೆ ಎಂದು ತಿಳಿಸಿದರು.

  • ಕನ್ನಡ ಕಣ್ಣಾಗಿರಬೇಕೇ ಹೊರತು ಕನ್ನಡಕವಾಗಬಾರದು: ಡಾ. ಮಂಜುನಾಥ್

    ಕನ್ನಡ ಕಣ್ಣಾಗಿರಬೇಕೇ ಹೊರತು ಕನ್ನಡಕವಾಗಬಾರದು: ಡಾ. ಮಂಜುನಾಥ್

    – ವೈದ್ಯ ಸಮುದಾಯಕ್ಕೆ ಕೊಟ್ಟ ದೊಡ್ಡ ಗೌರವವಿದು
    – ಮುಂದಿನ ವರ್ಷವೇ ಕೊರೊನಾಗೆ ಲಸಿಕೆ

    ಮೈಸೂರು: ದಸರಾ ಉದ್ಘಾಟಿಸಿದ್ದು ನನ್ನ ಜೀವಿತಾವಧಿಯ ದೊಡ್ಡ ಗೌರವವಿದು. ವೈದ್ಯ ಸಮುದಾಯಕ್ಕೆ ಕೊಟ್ಟ ದೊಡ್ಡ ಗೌರವವಿದು ಎಂದು ಜಯದೇವ ಆಸ್ಪತ್ರೆ ನಿರ್ದೇಶಕ, ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ಹೇಳಿದ್ದಾರೆ.

    ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಕಣ್ಣಾಗಿರಬೇಕೇ ಹೊರತು ಕನ್ನಡಕವಾಗಬಾರದು. ಜಗತ್ತಿನಲ್ಲಿ ಬದುಕುವ ಭಾಷೆ ಇಂಗ್ಲಿಷ್ ಆಗಿದೆ. ಎರಡರ ನಡುವೆ ಸಮತೋಲನವಾಗಬೇಕು. ಇಂದು ನನಗಾಗಿ ನಾನು ಏನನ್ನೂ ಚಾಮುಂಡಿ ದೇವಿಯ ಬಳಿ ಬೇಡಿಲ್ಲ. ಕೊರೊನಾ ಲಸಿಕೆ ಬೇಗ ಬರಲಿ, ಕೊರೊನಾ ಸಂಪೂರ್ಣ ನಿವಾರಣೆಯಾಗಲಿ, ಜಲಪ್ರವಾಹ ಕಡಮೆಯಾಗಲಿ ಎಂದು ದೇವರ ಬಳಿ ಬೇಡಿದ್ದೇನೆ ಎಂದರು.

    ಮಾಡಬಾರದ್ದು ಮಾಡಿದರೆ, ತಿನ್ನಬಾರದ್ದನ್ನು ತಿಂದರೆ ಹೇಗೆ ವೈರಸ್ ಉತ್ಪಾದನೆ ಆಗುತ್ತದೆ ಎಂಬುದಕ್ಕೆ ಈ ವೈರಸ್ ಸಾಕ್ಷಿ. ಚೀನಾದಲ್ಲಿ ಸೃಷ್ಟಿಯಾದ ವೈರಸ್ ಇಡೀ ಪ್ರಪಂಚವನ್ನೇ ನಡುಗಿಸಿದೆ. ಕೊರೊನಾ ವಾರಿಯರ್ಸ್ ಮೃತರಾದರೆ ಅವರನ್ನು ಹುತಾತ್ಮರ ಎಂದು ಕರೆಯಬೇಕು. ಹುತಾತ್ಮ ಯೋಧರಿಗೆ ಸಿಗುವ ಗೌರವ ಕರೋನಾ ವಾರಿಯರ್ಸ್ ಮೃತರಾದರೆ ಅವರಿಗೆ ಸಿಗಬೇಕು. ಕೊರೊನಾ ಪಾಸಿಟಿವ್ ಬಂದರೆ ಅವರನ್ನು ಅಸ್ಪೃಶ್ಯರ ರೀತಿ ನೋಡಬೇಡಿ ಎಂದು ಹೇಳಿದರು.

    ಕೊರೊನಾ ಕಾಯಿಲೆಗಿಂತ ಕೊರೊನಾದ ಭಯವೇ ದೊಡ್ಡ ಕಾಯಿಲೆಯಾಗಿದೆ. ವೈದ್ಯರೇ ರೋಗಿಗಳಾಗುತ್ತಿದ್ದಾರೆ. ವೈದ್ಯರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹಲ್ಲೆ ಮಾಡುವುದು, ಆಸ್ಪತ್ರೆಗಳ ಮೇಲೆ ದಾಳಿ ಮಾಡುವುದು ನಿಲ್ಲಿಸಬೇಕು. ವೈದ್ಯರಿಗೆ ಗ್ರಾಮೀಣ ಭಾಗದಲ್ಲಿ ರಕ್ಷಣೆ ಸಿಗುತ್ತಿಲ್ಲ. ಹೀಗಾಗಿ ವೈದ್ಯರು ಗ್ರಾಮೀಣ ಭಾಗಕ್ಕೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ ಭಾಗದ ಆಸ್ಪತ್ರೆಗಳನ್ನು ಮೇಲೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಿಂದ ಹೊರಗಿಟ್ಟು ಜಿಲ್ಲಾ ಕೇಂದ್ರದಿಂದ ನಿರ್ವಹಣೆ ಮಾಡಿಸಬೇಕು ಎಂದರು.

    ಸಾಮಾಜಿಕ ಜಾಲತಾಣಗಳು ಸಮಾಜ ಕಟ್ಟಬೇಕಿತ್ತು. ಆದರೆ ಅವು ಸಮಾಜವನ್ನು ತಪ್ಪು ದಾರಿಗೆ ತಳ್ಳುತ್ತಿದೆ. ಇದು ವಿಷಾದನೀಯ. ಜಯದೇವ ಆಸ್ಪತ್ರೆಯಲ್ಲಿ ಈವರೆಗೆ 50 ಲಕ್ಷ ಜನರಿಗೆ ಚಿಕಿತ್ಸೆ ಕೊಟ್ಟಿದ್ದೇವೆ. 5 ಲಕ್ಷ ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಕೊರೊನಾಗೆ ಈ ವರ್ಷ ಲಸಿಕೆ ಬರುವ ಲಕ್ಷಣಗಳಿಲ್ಲ. ಮುಂದಿನ ವರ್ಷದ ಫೆಬ್ರವರಿ, ಮಾರ್ಚ್ ನಲ್ಲಿ ಲಸಿಕೆ ಬರಬಹುದು ಎಂದು ಮಾಹಿತಿ ನೀಡಿದರು.

  • ಇತಿಹಾಸದಲ್ಲೇ ಮೊದಲ ಬಾರಿಗೆ ವೈದ್ಯರಿಗೆ ಆಹ್ವಾನ, ಸರ್ಕಾರದ ಗೌರವಕ್ಕೆ ನಾನು ಆಭಾರಿ: ಡಾ.ಮಂಜುನಾಥ್

    ಇತಿಹಾಸದಲ್ಲೇ ಮೊದಲ ಬಾರಿಗೆ ವೈದ್ಯರಿಗೆ ಆಹ್ವಾನ, ಸರ್ಕಾರದ ಗೌರವಕ್ಕೆ ನಾನು ಆಭಾರಿ: ಡಾ.ಮಂಜುನಾಥ್

    – ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ, ಡಿಸಿಎಂಗೆ ಆಹ್ವಾನ

    ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ವೈದ್ಯರಿಗೆ ಆಹ್ವಾನ ನೀಡಿದ್ದಾರೆ. ಹೀಗಾಗಿ ಸರ್ಕಾರದ ಗೌರವಕ್ಕೆ ನಾನು ಆಭಾರಿಯಾಗಿರುತ್ತೇನೆ ಎಂದು ಡಾಕ್ಟರ್ ಮಂಜುನಾಥ್ ದಸರಾ ಉದ್ಘಾಟನೆಗೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೊರೊನಾ ವಾರಿಯರ್ಸ್‍ಗೆ ಗೌರವ- ಡಾ.ಮಂಜುನಾಥ್‍ರಿಂದ ಮೈಸೂರು ದಸರಾ ಉದ್ಘಾಟನೆ

    ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗಿದೆ. ಮೈಸೂರು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದ ತಂಡ ಇಂದು ಸಿಎಂ ಯಡಿಯೂರಪ್ಪಗೆ ಅಧಿಕೃತವಾಗಿ ಆಹ್ವಾನ ನೀಡಿದೆ. ಮುಖ್ಯ ಅತಿಥಿಯಾಗಿ ಕಾರ್ಯಕ್ರಮ ಉದ್ಘಾಟನೆಗೆ ಡಾ.ಮಂಜುನಾಥ್ ಅವರಿಗೂ ಆಹ್ವಾನ ನೀಡಿದ್ದಾರೆ. ಮೈಸೂರು ಪೇಟ ಮತ್ತು ರೇಷ್ಮೆ ಶಾಲು ಹೊದಿಸಿ ಉದ್ಘಾಟನೆಗೆ ಆಹ್ವಾನಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ಡಾ.ಮಂಜುನಾಥ್, ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸುವ ಸಲುವಾಗಿ ವಿಶ್ವವಿಖ್ಯಾತ ದಸರಾ ಉದ್ಘಾಟನೆಗೆ ನನ್ನನ್ನು ಆಹ್ವಾನ ಮಾಡಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ವೈಧ್ಯರಿಗೆ ಆಹ್ವಾನ ನೀಡಿದ್ದಾರೆ. ಸರ್ಕಾರದ ಗೌರವಕ್ಕೆ ನಾನು ಆಭಾರಿಯಾಗಿರುತ್ತೇನೆ. ಜೊತೆಗೆ ಕೊರೊನಾ ನಡುವೆ ದಸರಾ ನಡೆಯುತ್ತಿದೆ. ಹೀಗಾಗಿ ಸರ್ಕಾರದ ಜೊತೆಗೆ ಸಾರ್ವಜನಿಕರು ಎಚ್ಚರಿ ವಹಿಸಬೇಕು ಎಂದರು.

    ಕೊರೊನಾಕ್ಕೆ ಇನ್ನೂ ವ್ಯಾಕ್ಸಿನ್ ಇಲ್ಲ. ವ್ಯಾಕ್ಸಿನ್ ಅಂದರೆ ಅದು ಕೇವಲ ಮಾಸ್ಕ್ ಮಾತ್ರ. ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಪಾಡಬೇಕು. ಬಹುಮುಖ್ಯವಾಗಿ ಮಾತನಾಡುವಾಗ ಮಾಸ್ಕ್ ಹಾಕಿಕೊಂಡು ಮಾತನಾಡಿ. ರೋಗದಿಂದ ದೂರ ಇರೋದು ನಿಮ್ಮ ಎಚ್ಚರಿಕೆಯ ಕೆಲಸವಾಗಿದೆ ಎಂದು ಡಾಕ್ಟರ್ ಮಂಜುನಾಥ್ ಸಾರ್ವಜನಿಕರ ಬಳಿ ಮನವಿ ಮಾಡಿಕೊಂಡರು.

    ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಡಿಸಿಎಂಗೆ ಆಹ್ವಾನ
    ಇದೇ ಅಕ್ಟೋಬರ್ 17ರಂದು ಆರಂಭವಾಗಲಿರುವ ಜಗತ್ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಿದರು. ಮೈಸೂರು ನಗರದ ಮೇಯರ್ ತಸ್ನಿಂ, ಅಧಿಕಾರಿಗಳೊಂದಿಗೆ ಡಿಸಿಎಂ ನಿವಾಸಕ್ಕೆ ಭೇಟಿ ನೀಡಿದ ಸಚಿವರು, ಉಪ ಮುಖ್ಯಮಂತ್ರಿಗಳಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ ನಾಡಹಬ್ಬದಲ್ಲಿ ಪಾಲ್ಗೊಳ್ಳುವಂತೆ ಆತ್ಮೀಯವಾಗಿ ಸ್ವಾಗತ ಕೋರಿದರು.

    ಆಹ್ವಾನ ಪತ್ರಿಕೆಯನ್ನು ಸ್ವೀಕರಿಸಿದ ಡಿಸಿಎಂ, ಕೋವಿಡ್ ಸಂಕಷ್ಟ ಕಾಲದಲ್ಲಿ ನಡೆಯುತ್ತಿರುವ ಈ ವರ್ಷದ ನಾಡಹಬ್ಬವು ಯಾವುದೇ ವಿಘ್ನವಿಲ್ಲದೆ ನಡೆಯಲಿ. ಆ ತಾಯಿ ಚಾಮುಂಡೇಶ್ವರಿ ಕರುಣೆ ಎಲ್ಲರ ಮೇಲೆ ಇರಲಿ ಎಂದು ಶುಭ ಹಾರೈಸಿದರು.

    ಚಾಮುಂಡಿಬೆಟ್ಟದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನಾಡಹಬ್ಬಕ್ಕೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ ಜೋಷಿ, ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಜೊತೆಗೆ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸಿ.ಟಿ.ರವಿ ಮುಂತಾದವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

  • ಬೆಂಗಳೂರಿಗೆ ಮತ್ತಷ್ಟು ಕೊರೊನಾ ವಿನಾಯ್ತಿ ಸಿಗೋ ಸಾಧ್ಯತೆ

    ಬೆಂಗಳೂರಿಗೆ ಮತ್ತಷ್ಟು ಕೊರೊನಾ ವಿನಾಯ್ತಿ ಸಿಗೋ ಸಾಧ್ಯತೆ

    ಬೆಂಗಳೂರು: ಕೊರೊನಾ ಸೋಂಕಿತ ವ್ಯಕ್ತಿಯ ಏರಿಯಾವನ್ನು ಸೀಲ್‍ಡೌನ್ ಮಾಡುವ ನಿರ್ಧಾರದಿಂದ ಸರ್ಕಾರ ತೆಗೆದು ಹಾಕಿತ್ತು. ಸದ್ಯ ಸೋಂಕಿತನ ಮನೆಯ ಗೋಡೆಗೆ ಅಂಟಿಸುವ ಪೋಸ್ಟರ್‌ನ್ನು ತೆಗೆದು ಹಾಕುವ ಬಗ್ಗೆ ಸರ್ಕಾರಕ್ಕೆ ತಜ್ಞರು ಶಿಫಾರಸು ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಕೊರೊನಾ ರೋಗಿಗಳ ಮನೆ ಮುಂದೇ ಕ್ವಾರಂಟೈನ್ ಕುರಿತು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಕೆಂಪು ನೋಟಿಸ್ ಅಂಟಿಸಲಾಗುತ್ತದೆ. ಆದರೆ ನಿನ್ನೆ ಸಭೆಯಲ್ಲಿ ಟಾಸ್ಕ್ ಫೋರ್ಸ್ ಸಮಿತಿಯಿಂದ ಮನೆಯ ಮುಂದೆ ಪೋಸ್ಟರ್ ಅಂಟಿಸುವ ವಿಚಾರದಲ್ಲಿ ಚರ್ಚೆ ನಡೆದಿದ್ದು, ಕೊರೊನಾ ಸೀಲ್‍ಡೌನ್ ತೆಗೆದಂತೆ ಪೋಸ್ಟರ್ ಅಂಟಿಸುವ ವಿಧಾನವನ್ನು ತೆಗೆದುಹಾಕಿದರೆ ಜನರು ಹೆಚ್ಚು ಟೆಸ್ಟಿಂಗ್‍ಗೆ ಬರುತ್ತಾರೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

    ಕೆಂಪು ನೋಟಿಸ್ ಅಂಟಿಸುವುದರಿಂದ ಮನೆಯವರಿಗೂ ಮುಜುಗರವಾಗುತ್ತದೆ. ಅಕ್ಕ ಪಕ್ಕದ ನಿವಾಸಿಗಳಿಗೆ ಇದರಿಂದ ಭಯದ ವಾತಾವರಣ ನಿರ್ಮಾಣವಾಗುತ್ತೆ. ಹೀಗಾಗಿ ಇದನ್ನು ತೆಗೆದು ಹಾಕಿದರೆ ಜನ ಸ್ವಯಂ ಪ್ರೇರಿತವಾಗಿ ಟೆಸ್ಟ್‍ಗೆ ಬರುತ್ತಾರೆ. ತಜ್ಞರ ಸಲಹೆಯನ್ನು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತೆ ಎಂಬ ಮಾಹಿತಿ ಲಭಿಸಿದೆ.

    ಒಂದೊಮ್ಮೆ ತಜ್ಞರ ಈ ಸಲಹೆಯನ್ನು ಸರ್ಕಾರ ಸ್ವೀಕರಿಸಿದರೆ ಕೊರೊನಾ ಸೋಂಕಿತರಿಗೆ ಬಿಗ್ ರಿಲೀಫ್ ಸಿಕ್ಕಿದ್ದಂತೆ ಆಗುತ್ತೆ. ಆದರೆ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದರೆ ಏನು ಮಾಡುವುದು ಎಂಬುವುದು ಬಿಬಿಎಂಪಿಗೆ ಹಾಗೂ ಆರೋಗ್ಯ ಇಲಾಖೆಗೆ ತಲೆನೋವು ಆಗಲಿದೆ.

    ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಡಾ.ಮಂಜುನಾಥ್ ಅವರು, ನಿನ್ನೆ ಸಭೆಯಲ್ಲಿ ಕೊರೊನಾ ಪಾಸಿಟಿವ್ ಇರುವವರ ಮನೆಯ ಮುಂದೆ ಪೋಸ್ಟರ್ ಅಂಟಿಸುವುದು ಬೇಡ ಎನ್ನುವ ಶಿಫಾರಸು ಮಾಡಿದ್ದೇವೆ. ಸರ್ಕಾರ ಇದನ್ನು ಸ್ವೀಕರಿಸುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಪೋಸ್ಟರ್ ನಿಂದ ಜನರು ಟೆಸ್ಟ್ ಮಾಡಿಸಿಕೊಳ್ಳು ಹಿಂದೇಟು ಹಾಕುತ್ತಿದ್ದಾರೆ. ಈ ಪೋಸ್ಟರ್ ತೆಗೆದರೆ ಹೆಚ್ಚು ಜನ ಟೆಸ್ಟ್ ಗೆ ಬರುತ್ತಾರೆ. ಇದರಿಂದ ಪೋಸ್ಟರ್ ತೆಗೆದುಹಾಕಲು ನಾವು ಶಿಫಾರಸು ಮಾಡಿದ್ದೇವೆ. ಉಳಿದಂತೆ ದೆಹಲಿಯಲ್ಲಿ ಕೋವಿಡ್ ಡ್ಯೂಟಿ ಮಾಡುವ ವೈದ್ಯರಿಗೆ ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡಲಾಗುತ್ತೆ. ಆದರೆ ಬೆಂಗಳೂರಿನಲ್ಲಿ ಇದಾಗುತ್ತಿಲ್ಲ. ಹೀಗಾಗಿ ಈ ಬಗ್ಗೆಯೂ ನಾವು  ಶಿಫಾರಸು ಮಾಡಿದ್ದೇವೆ ಎಂದರು.