Tag: Dr Manjunath

  • ಡಿಕೆ ಸುರೇಶ್‌ನ ಬುಡಸಮೇತ ತೆಗೆಯಬೇಕು ಎಂದು ಡಾ.ಮಂಜುನಾಥ್‌ರನ್ನು ತಂದಿದ್ದೇವೆ: ಸಿ.ಪಿ.ಯೋಗೇಶ್ವರ್

    ಡಿಕೆ ಸುರೇಶ್‌ನ ಬುಡಸಮೇತ ತೆಗೆಯಬೇಕು ಎಂದು ಡಾ.ಮಂಜುನಾಥ್‌ರನ್ನು ತಂದಿದ್ದೇವೆ: ಸಿ.ಪಿ.ಯೋಗೇಶ್ವರ್

    – 5 ವರ್ಷದ ಹಿಂದೆ ನಾನು ಸ್ಪರ್ಧೆ ಮಾಡಿದ್ರೆ ಡಿ.ಕೆ.ಸುರೇಶ್ ಗೆಲ್ಲುತ್ತಿರಲಿಲ್ಲ
    – ನಾನು ಪಾರ್ಲಿಮೆಂಟ್‌ಗೆ ಹೋಗಬಾರದೆಂದು ನಿರ್ಧಾರ ಮಾಡಿದ್ದೇನೆ ಎಂದ ಮಾಜಿ ಸಚಿವ

    ರಾಮನಗರ: ನಾನು ಪಾರ್ಲಿಮೆಂಟ್‌ಗೆ (Parliament) ಹೋಗಬಾರದೆಂದು ನಿರ್ಧಾರ ಮಾಡಿದ್ದೇನೆ. ರಾಜ್ಯ ರಾಜಕೀಯದಲ್ಲಿ ಇರಬೇಕೆಂಬುದು ನನ್ನ ನಿಲುವು ಎಂದು ಮಾಜಿ ಸಚಿವ ಸಿಪಿ ಯೋಗೇಶ್ವರ್ (CP Yogeshwar) ಹೇಳಿದ್ದಾರೆ.

    ಚನ್ನಪಟ್ಟಣದಲ್ಲಿ (Channapatna) ಎ.ಮಂಜುನಾಥ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಯೋಗೇಶ್ವರ್ ಮಾತನಾಡಿದರು. ಸಿಪಿವೈ ಸ್ಪರ್ಧೆ ಮಾಡದೇ ಈಗಲೂ ನನಗೆ ಬೆಂಬಲ ನೀಡಿದ್ದಾರೆಂಬ ಡಿ.ಕೆ.ಸುರೇಶ್ (DK Suresh) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 5 ವರ್ಷದ ಹಿಂದೆ ನಾನು ಸ್ಪರ್ಧೆ ಮಾಡಿದ್ದರೆ ಸುರೇಶ್ ಗೆಲ್ಲುತ್ತಿರಲಿಲ್ಲ. ಹಾಗಾಗಿ ಈ ಬಾರಿ ಬುಡಸಮೇತ ತೆಗೆಯಬೇಕು ಎಂದು ಮಂಜುನಾಥ್ (Dr Manjunath) ಅವರನ್ನು ತಂದಿದ್ದೇವೆ. ಡಿ.ಕೆ.ಸುರೇಶ್ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಮಂಜುನಾಥ್ ಅವರ ಬಗ್ಗೆ ಮಾತನಾಡಲು ಅವರಿಗೆ ಯೋಗ್ಯತೆ ಇಲ್ಲ. ಡಾ.ಮಂಜುನಾಥ್ ವಿರುದ್ಧ ಗೆಲುವು ಸುಲಭವಿದ್ದರೆ ಕುಕ್ಕರ್, ಹಣ ಯಾಕೆ ಕೊಡುತ್ತಿದ್ದರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ ಇಲ್ಲದೇ ಇದ್ದಿದ್ರೆ ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ: ಸಂಜಯ್‌ ರಾವತ್‌

    ಕಳೆದ ಬಾರಿ ಮುನಿರತ್ನ ಕಾಂಗ್ರೆಸ್ (Congress) ಪರವಾಗಿದ್ದರು. ಆದರೂ ಬಿಜೆಪಿಗೆ ಅಲ್ಲಿ 30,000 ಲೀಡ್ ಇತ್ತು. ಇವತ್ತು ಮುನಿರತ್ನ ಬಿಜೆಪಿಯಲ್ಲಿದ್ದಾರೆ. ನಮ್ಮ ದೌರ್ಭಾಗ್ಯ ಬಿಜೆಪಿ-ಜೆಡಿಎಸ್ ಕಿತ್ತಾಡಿ ಅವರಿಗೆ ಲಾಭ ಆಗಿತ್ತು. ಈಗ ನಾವು, ಜೆಡಿಎಸ್‌ನವರು ಒಂದಾಗಿದ್ದೇವೆ. ದೇವೇಗೌಡರು ಬಿಜೆಪಿ ಜೊತೆಗೆ ಒಂದಾಗಿದ್ದಾರೆ. ಹಾಗಾಗಿ ನಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಮಂಡಲೋತ್ಸವ ನಡೆಸಿ ಮರಳಿದ ಪೇಜಾವರ ಶ್ರೀಗೆ ಮಂಗಳೂರಿನಲ್ಲಿ‌ ಅದ್ದೂರಿ ಸ್ವಾಗತ

    ಮಂಗಳವಾರ ಚನ್ಮಪಟ್ಟಣದಲ್ಲಿ ತಾಲೂಕು ಮಟ್ಟದ ಮೈತ್ರಿ ಕಾರ್ಯಕರ್ತರ ಸಭೆ ನಡೆಯಲಿದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮ ನಡೆಯಲಿದ್ದು, ತಾಲೂಕು ಮಟ್ಟದಲ್ಲಿ ಬೃಹತ್ ಮೈತ್ರಿ ಸಮಾವೇಶ ನಡೆಯಲಿದೆ. ಪಟ್ಟಣದ ಬಾಲಕರ ಕಾಲೇಜು ಮೈದಾನದಲ್ಲಿ ಬೆಳಗ್ಗೆ 11ಕ್ಕೆ ಸಮಾವೇಶ ಆರಂಭವಾಗಲಿದ್ದು, ಮಾಜಿ ಸಿಎಂ ಹೆಚ್‌ಡಿಕೆ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಭಾಗಿಯಾಗಲಿದ್ದಾರೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವಿನ ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಲು ಕರೆ ನೀಡಲಾಗಿದೆ. ಒಟ್ಟಾಗಿ ಕಾಂಗ್ರೆಸ್ ಎದುರಿಸಲು ಮೈತ್ರಿ ಪಕ್ಷಗಳ ಸಮ್ಮಿಲನ ಕಾರ್ಯಕ್ರಮ ನಡೆಯಲಿದ್ದು, ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲು ಒಗ್ಗಟ್ಟಾಗುವಂತೆ ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ: ಪಟ್ಟು ಬಿಡದ ಈಶ್ವರಪ್ಪ

  • ಧರ್ಮಯುದ್ಧದಲ್ಲಿ ನನ್ನನ್ನು ಗೆಲ್ಲಿಸಿ, ಸತ್ಯಕ್ಕೆ ಜಯಸಿಗಬೇಕು: ಡಾ.ಮಂಜುನಾಥ್

    ಧರ್ಮಯುದ್ಧದಲ್ಲಿ ನನ್ನನ್ನು ಗೆಲ್ಲಿಸಿ, ಸತ್ಯಕ್ಕೆ ಜಯಸಿಗಬೇಕು: ಡಾ.ಮಂಜುನಾಥ್

    ರಾಮನಗರ: ಬೆಂಗಳೂರು ಲೋಕಸಭಾ ಚುನಾವಣೆ ಗರಿಗೆದರಿದ್ದು, ಟಿಕೆಟ್ ಘೋಷಣೆ ಬಳಿಕ ಮೊದಲ ಬಾರಿಗೆ ರಾಮನಗರಕ್ಕೆ (Ramanagara) ಆಗಮಿಸಿದ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ (Dr Manjunath) ಇಂದು ಬಿಜೆಪಿ (BJP) ಕಾರ್ಯಕರ್ತರ ಸಭೆ ನಡೆಸಿದ್ದಾರೆ.

    ಲೋಕಸಭಾ ಚುನಾವಣೆ ಯುದ್ಧದಲ್ಲಿ ಡಿಕೆ ಬ್ರದರ್ಸ್‌ಗೆ ಟಕ್ಕರ್ ಕೊಡಲು ಕಣಕ್ಕಿಳಿದಿರುವ ಮಂಜುನಾಥ್ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ ಗೆಲುವಿಗೆ ತಂತ್ರ ರೂಪಿಸಿದರು. ಇದೇ ವೇಳೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ (Bengaluru Rural) ಕ್ಷೇತ್ರಕ್ಕೆ ನಾನು ಸ್ಪರ್ಧೆ ಮಾಡಿದ್ದೇನೆ. ನಿಮ್ಮೆಲ್ಲರ ಸಹಕಾರ, ಸಲಹೆ ಮುಖ್ಯ. ಇಲ್ಲಿನ ಜನ ಎಷ್ಟು ಪ್ರೀತಿ ಮಾಡುತ್ತಾರೆ ಎಂದರೆ ನಾನು ಬಂದಾಗ ಪ್ರೀತಿಯ ಸಂಕೇತವಾದ ಗುಲಾಬಿ ಹೂ ನೀಡಿದರು. ಪ್ರಧಾನಿ ನರೇಂದ್ರ ಮೋದಿ (Narendra Modi) ನಿಸ್ವಾರ್ಥ ಸೇವೆ ಮೂಲಕ ಹೊಸ ಭಾರತ ಕಟ್ಟಲು ಮುಂದಾಗಿದ್ದಾರೆ. ಅವರ ಕೆಲಸಕ್ಕೆ ನಾವು ಕೈಜೋಡಿಸಬೇಕು ಎಂದರು. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಒಂದು ಮತ ಜಾಸ್ತಿ ಪಡೆದರೂ ರಾಜೀನಾಮೆ ಕೊಡ್ತೀರಾ? – ಪ್ರದೀಪ್‌ ಈಶ್ವರ್‌ಗೆ ಸುಧಾಕರ್‌ ಮರು ಸವಾಲ್‌!

    ನಾವು ಈ ಚುನಾವಣೆಯಲ್ಲಿ ಒಳ್ಳೆಯ ಈಜುಗಾರರಾಗಬೇಕು. ಆಗಲೇ ಸಮುದ್ರದಲ್ಲಿ ಮುತ್ತು ಸಿಗೋದು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ದಶಪಥ ಹೆದ್ದಾರಿ, ರಸ್ತೆ, ರೈಲ್ವೆ, ವಿಮಾನ ಸೇವೆ ಅಭಿವೃದ್ಧಿ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ವ್ಯಾಕ್ಸಿನ್ ಕೊಡುವ ಕೆಲಸ ಆಯಿತು. ದೇಶದ ಕೋವಿಡ್ ನಿಯಂತ್ರಣದ ಬಗ್ಗೆ ವಿಶ್ವಸಂಸ್ಥೆ ಕೂಡ ಹೊಗಳಿದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ನನಗೆ ಪ್ರೇಮಿಗಳ ರೀತಿ ಕಾಣುತ್ತಿದ್ದಾರೆ. ನಾನು ಹೃದ್ರೋಗ ತಜ್ಞನಾಗಿ ಕೆಲಸ ಮಾಡಿದ್ದೇನೆ. ಬಡವರನ್ನು ಕಂಡರೆ ನನಗೆ ಬಹಳ ಪ್ರೀತಿ. ಈಗ ನಡೆಯುತ್ತಿರುವುದು ಧರ್ಮ ಯುದ್ದ. ಈ ಯುದ್ಧದಲ್ಲಿ ನಾವು ಜಯಶೀಲರಾಗಬೇಕು. ಈ ಯುದ್ಧದಲ್ಲಿ ಸತ್ಯಕ್ಕೆ ಜಯ ಸಿಗಬೇಕು. ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ – ಬಿಎಸ್‌ವೈ ವಿರುದ್ಧ ಗುಡುಗಿದ ಈಶ್ವರಪ್ಪ

  • ಸೇವೆ v/s ಸುಲಿಗೆ – ಡಿಕೆ ಸುರೇಶ್ ವಿರುದ್ಧ ಜೆಡಿಎಸ್ ಕಿಡಿ

    ಸೇವೆ v/s ಸುಲಿಗೆ – ಡಿಕೆ ಸುರೇಶ್ ವಿರುದ್ಧ ಜೆಡಿಎಸ್ ಕಿಡಿ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬೆಂಗಳೂರು ಗ್ರಾಮಾಂತರಕ್ಕೆ ಡಾ. ಮಂಜುನಾಥ್ (Dr.C.N Manjunath) ಅವರನ್ನು ಮೈತ್ರಿ ಅಭ್ಯರ್ಥಿಯನ್ನಾಗಿ ನೇಮಿಸಿದ ಹಿನ್ನೆಲೆ ಮಂಜುನಾಥ್ ಅವರ ಪರ ಜೆಡಿಎಸ್ (JDS) ಅಖಾಡಕ್ಕೆ ಇಳಿದಿದೆ.

    ಈ ಕುರಿತು ಜೆಡಿಎಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಡಾ.ಮಂಜುನಾಥ್ ಹಾಗೂ ಡಿಕೆ ಸುರೇಶ್ (DK Suresh) ನಡುವಿನ ವ್ಯತ್ಯಾಸದ ಬಗ್ಗೆ ಟ್ವೀಟ್ ಮಾಡಿದೆ. ಎಕ್ಸ್ ಮೂಲಕ ಡಾ. ಮಂಜುನಾಥ್ ಎಂದರೇನು? ಡಿಕೆ ಸುರೇಶ್ ಎಂದರೇನು ಎಂದು ಜೆಡಿಎಸ್ ತಿಳಿಸಿದೆ. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗಳ ಪರ ಕೆಲಸ ಮಾಡಿ – ಜೆಡಿಎಸ್‌ ನಾಯಕರಿಗೆ ಹೆಚ್‌ಡಿಡಿ ಕರೆ

    ಟ್ವೀಟ್‌ನಲ್ಲಿ ಏನಿದೆ?
    ನಿಸ್ವಾರ್ಥ v/s ಸ್ವಾರ್ಥ
    ಸೇವೆ v/s ಸುಲಿಗೆ
    ಒಳಿತು v/s ಕೆಡುಕು

    ಇದಕ್ಕೆ ಮಿಗಿಲಾಗಿ ಹೆಚ್ಚಿನದನ್ನು ಹೇಳುವ ಅಗತ್ಯವಿಲ್ಲ. ಡಿ.ಕೆ.ಸುರೇಶ್ ಅವರೇ ನೀವೇನು? ಡಾ.ಸಿ.ಎನ್.ಮಂಜುನಾಥ್ ಅವರೇನು? ಎನ್ನುವುದು ರಾಜ್ಯಕ್ಕಷ್ಟೇ ಅಲ್ಲ, ಇಡೀ ಭಾರತ ದೇಶಕ್ಕೇ ಗೊತ್ತಿದೆ. ಅನಗತ್ಯವಾಗಿ ನಾಲಿಗೆ ಜಾರಿ ಗುಣ ಹಾಳು ಮಾಡಿಕೊಳ್ಳಬೇಡಿ. ಇದನ್ನೂ ಓದಿ: ಕಾಫಿನಾಡಲ್ಲಿ ವರ್ಷದ ಮೊದಲ ಮಳೆ – ಕಾದ ಕಾವಲಿಯಂತಾದ ನೆಲಕ್ಕೆ ತಂಪು ಸುರಿದ ವರುಣ

    ಆರೋಗ್ಯ ಕ್ಷೇತ್ರದಲ್ಲಿ ಎಣೆ ಇಲ್ಲದಷ್ಟು ಸೇವೆ ಮಾಡಿ ಲಕ್ಷಾಂತರ ಬಡಜನರ ಹೃದಯದಲ್ಲಿ ನೆಲೆಸಿರುವ ಡಾ.ಸಿ.ಎನ್.ಮಂಜುನಾಥ್ ಅವರ ಬಗ್ಗೆ ಅನಾರೋಗ್ಯಕರ ಅಪಪ್ರಚಾರದಲ್ಲಿ ನೀವು ನಿರತರಾಗಿದ್ದೀರಿ. ಸೋಲಿನ ದುಸ್ವಪ್ನದಿಂದ ನೀವು ಬಳಲುತ್ತಿರುವುದು ಸ್ಪಷ್ಟ. ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ನಿಮಗೆಲ್ಲಿದೆ? ಇಡೀ ಕಾಂಗ್ರೆಸ್ ನಿಮ್ಮ ಕಬಂಧಬಾಹುಗಲ್ಲಿ ಬಂಧಿಯಾಗಿದೆ. ಅಣ್ಣ ಡಿಸಿಎಂ, ತಮ್ಮ ಎಂಪಿ, ಸಹೋದರಿಯ ಗಂಡ ವಿಧಾನ ಪರಿಷತ್ ಸದಸ್ಯ, ಇನ್ನೊಬ್ಬರು ಕುಣಿಗಲ್ ಶಾಸಕ. ಇದನ್ನೂ ಓದಿ: ಕನ್ನಡದಲ್ಲಿ ರಾಜ್ಯಸಭೆ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದ ಸುಧಾಮೂರ್ತಿ

    ಇದೇನು ಫ್ಯಾಮಿಲಿ ಪಾಲಿಟಿಕ್ಸೋ ಅಥವಾ ಫ್ಯಾಮಿಲಿ ಪ್ಯಾಕೇಜೋ? ನೀವು ಏನೆಂದು ಕರೀತೀರಿ ಡಿ.ಕೆ.ಸುರೇಶ್ ಅವರೇ? ಅಳಿಯ ಜಾಣ ಆಗೋದು ತಪ್ಪಲ್ಲ. ನಿಮ್ಮಂತೆ ಇನ್ನೊಬ್ಬರ ಜೀವನಕ್ಕೆ ಎರವಾಗೋದು ತಪ್ಪಲ್ಲವೇ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಚುನಾವಣಾ ಆಯೋಗದ ಆಯುಕ್ತರಾಗಿ ಇಬ್ಬರ ನೇಮಕ

  • ನನ್ನ ಸೇವೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಆಗಬೇಕೆಂದು ಜನ ನಿರೀಕ್ಷಿಸುತ್ತಿದ್ದಾರೆ, ನಾನು ಯೋಚನೆ ಮಾಡುತ್ತಿದ್ದೇನೆ: ಡಾ. ಮಂಜುನಾಥ್

    ನನ್ನ ಸೇವೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಆಗಬೇಕೆಂದು ಜನ ನಿರೀಕ್ಷಿಸುತ್ತಿದ್ದಾರೆ, ನಾನು ಯೋಚನೆ ಮಾಡುತ್ತಿದ್ದೇನೆ: ಡಾ. ಮಂಜುನಾಥ್

    ಮೈಸೂರು: ನನ್ನ ಸೇವೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಆಗಬೇಕು ಎಂದು ಜನ ನಿರೀಕ್ಷೆ ಮಾಡುತ್ತಿದ್ದಾರೆ. ನಾನು ಕೂಡ ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂದು ಜಯದೇವ ಆಸ್ಪತ್ರೆಯ (Jayadeva Hospital) ನಿವೃತ್ತ ನಿರ್ದೇಶಕ ಡಾ. ಮಂಜುನಾಥ್ ಹೇಳಿದರು.

    ಬೆಂಗಳೂರಿನ ಜಯದೇವ ಆಸ್ಪತ್ರೆಯನ್ನು ಮುನ್ನಡೆಸಿ ಈಗ ನಿವೃತ್ತರಾಗಿರುವ ಡಾ.ಸಿ.ಎನ್‌ ಮಂಜುನಾಥ್‌ (Dr C.N. Manjunath) ಅವರಿಗಾಗಿ ಮೈಸೂರಿನ (Mysuru) ನಾಗರಿಕರ ಪರವಾಗಿ ಆಯೋಜನೆಗೊಂಡಿದ್ದ ʼಧನ್ಯವಾದ ಧನ್ವಂತರಿʼ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ:ಪಾಕಿಸ್ತಾನದಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ನವಾಜ್‌ ಷರೀಫ್‌ ಪುತ್ರಿ ಆಯ್ಕೆ

     
    ಹೆಚ್‌ಆರ್‌ ರಂಗನಾಥ್‌ (HR Ranganath) ಮಾತನಾಡುವಾಗ ಹಲವು ಸಲಹೆ ಕೊಟ್ಟಿದ್ದಾರೆ. ಪ್ರಶಸ್ತಿಗಳು ಮತ್ತು ಸನ್ಮಾನಗಳು ಇನ್ನು ಹೆಚ್ಚಿನ ಜವಾಬ್ದಾರಿ ನೀಡುತ್ತದೆ. ಜನರ ಆಶೋತ್ತರ, ಬಯಕೆಗೆ ಸ್ಪಂದಿಸುವ ಕೆಲಸ ಮಾಡಬೇಕಾಗಬಹುದೇನೋ? ಆದರೆ ಇನ್ನೂ ನಾನು ನಿರ್ಧಾರ ತೆಗೆದುಕೊಂಡಿಲ್ಲ ಎಂದು ಡಾ.ಮಂಜುನಾಥ್‌ ಹೇಳಿದರು. ಇದನ್ನೂ ಓದಿ: ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ, ಡಾ. ಮಂಜುನಾಥ್‌ ರಾಜಕಾರಣಕ್ಕೆ ಬರಬೇಕು: ಹೆಚ್‌ಆರ್‌ ರಂಗನಾಥ್‌

    ಶರೀರದ ತೂಕ ಹೆಚ್ಚಾದರೆ ವ್ಯಾಯಾಮ ಮಾಡಬೇಕು. ಮನಸ್ಸಿನ ತೂಕ ಹೆಚ್ಚಾದರೆ ಧ್ಯಾನ ಮಾಡಬೇಕು. ಜೇಬಿನ ತೂಕ ಹೆಚ್ಚಾದರೆ ದಾನ ಮಾಡಬೇಕು. ಈಗ ಸನ್ಮಾನ ಮಾಡುವ ಮೂಲಕ ನನಗೆ ಇನ್ನೂ ಹೆಚ್ಚಿನ  ಜವಾಬ್ದಾರಿ ಸಿಕ್ಕಂತಾಗಿದೆ.  ತೂಕ ಜಾಸ್ತಿಯಾಗಿದೆ  ಎಂದರು.

     

    ಮೊದಲು ಮಾತನಾಡಿದ್ದ ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌, ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ. ಸುಸಂಸ್ಕೃತರು ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕೆಲಸಕ್ಕೆ ಬರಬೇಕು. ವೈದ್ಯ ವೃತ್ತಿಯಲ್ಲಿ ಇದ್ದಾಗ ಒಂದು ಕ್ಷಣವೂ ರಾಜಕೀಯ ಸುಳಿಗೆ ಸಿಲುಕದೇ ಇದ್ದದ್ದು ಒಂದು ಅಚ್ಚರಿ. ರಾಜಕಾರಣ ಕೆಟ್ಟದಲ್ಲ. ನಿಮ್ಮಂಥ ಒಳ್ಳೆಯವರ ಅವಶ್ಯಕತೆ ರಾಜಕಾರಣಕ್ಕೆ ಇದೆ. ಜನರ ಒತ್ತಾಸೆಯನ್ನು ನಮ್ರತೆಯಿಂದ ಸ್ವೀಕರಿಸಿ ಎಂದು ಮನವಿ ಮಾಡಿದ್ದರು.

  • ಡಾ.ಮಂಜುನಾಥ್ ಏನು ತೀರ್ಮಾನ ಮಾಡ್ತಾರೆ ಎಂದು ಸಮಯ ಬಂದಾಗ ನೋಡೋಣ: ಹೆಚ್‍ಡಿಕೆ

    ಡಾ.ಮಂಜುನಾಥ್ ಏನು ತೀರ್ಮಾನ ಮಾಡ್ತಾರೆ ಎಂದು ಸಮಯ ಬಂದಾಗ ನೋಡೋಣ: ಹೆಚ್‍ಡಿಕೆ

    ಬೆಂಗಳೂರು: ಡಾ.ಸಿ.ಎನ್ ಮಂಜುನಾಥ್ (Dr.C.N Manjunath) ಅವರು ಸಲ್ಲಿಸಿರುವ ವೈದ್ಯಕೀಯ ಸೇವೆಯ ಬಗ್ಗೆ ಎಲ್ಲರಲ್ಲೂ ಒಳ್ಳೆಯ ಭಾವನೆ ಇದೆ. ಅವರ ಬಗ್ಗೆ ಅಪಾರ ಗೌರವ ಇದೆ. ಕೆಲವರು ಅವರನ್ನು ರಾಜಕೀಯಕ್ಕೆ ತರಬೇಕು ಎಂಬ ಆಶಯ ವ್ಯಕ್ತಪಡಿಸ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜಕೀಯಕ್ಕೆ ಬರುವ ಬಗ್ಗೆ ನಾನೇನು ತೀರ್ಮಾನ ಮಾಡಿಲ್ಲ ಎಂದು ಡಾ.ಮಂಜುನಾಥ್ ಅವರೇ ಹೇಳಿದ್ದಾರೆ. ಏನು ತೀರ್ಮಾನ ಮಾಡುತ್ತಾರೆ ಎಂದು ಸಮಯ ಬಂದಾಗ ನೋಡೋಣ ಎಂದಿದ್ದಾರೆ. ಇದನ್ನೂ ಓದಿ: ಅವರ ಬತ್ತಳಿಕೆಯಲ್ಲಿ ಏನಿದೆ ಎಂದು ನಮಗೆ ಗೊತ್ತಿದೆ: ಡಿಕೆಶಿ

    ಬಿಜೆಪಿ – ಜೆಡಿಎಸ್ ಮೈತ್ರಿ ಸೀಟ್ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ಸೀಟ್ ಹಂಚಿಕೆಯಲ್ಲಿ ಯಾವುದೇ ಗೊಂದಲ ಹಾಗೂ ಸಮಸ್ಯೆ ಇಲ್ಲ. ನಾವು 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಬೇಕು. ಇಂತಹ ಕೆಟ್ಟ ಸರ್ಕಾರ ಕಿತ್ತು ಹಾಕಬೇಕು ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿದೆ, ನಮ್ಮ ನಿರ್ಣಯ ಅಂಗೀಕಾರ ಆಗಿದೆ: ಬೊಮ್ಮಾಯಿ ತಿರುಗೇಟು

  • ಲೋಕಸಭೆಗೆ ಬೆಂಗಳೂರು ಗ್ರಾಮಾಂತರದಿಂದ ಡಾ.ಮಂಜುನಾಥ್‌ ಸ್ಪರ್ಧೆ? – ಆರ್‌.ಅಶೋಕ್‌ ಹೇಳಿದ್ದೇನು?

    ಲೋಕಸಭೆಗೆ ಬೆಂಗಳೂರು ಗ್ರಾಮಾಂತರದಿಂದ ಡಾ.ಮಂಜುನಾಥ್‌ ಸ್ಪರ್ಧೆ? – ಆರ್‌.ಅಶೋಕ್‌ ಹೇಳಿದ್ದೇನು?

    ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಾ.ಮಂಜುನಾಥ್ (Dr.Manjunath) ಬಿಜೆಪಿ ಅಭ್ಯರ್ಥಿಯಾಗುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ (R.Ashok) ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತಾಡಿದ ಆರ್.ಅಶೋಕ್, ಬಹಳ ದಿನಗಳಿಂದ ಡಾ.ಮಂಜುನಾಥ್ ಹೆಸರು ಓಡಾಡ್ತಿದೆ. ಮಂಜುನಾಥ್‌ ಅವರಿಗೆ ನಮ್ಮಿಂದ ಟಿಕೆಟ್ ಕೊಡಬೇಕು ಅನ್ನುವ ಬಗ್ಗೆ ನಮ್ಮ ಪಕ್ಷದಲ್ಲಿ ಇನ್ನೂ ಚರ್ಚೆಗೆ ಬಂದಿಲ್ಲ. ಸೀಟು ಹೊಂದಾಣಿಕೆ ಸೂತ್ರ ಇನ್ನೂ ಆಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಗಳಲ್ಲಿ CBSE ಪಠ್ಯಕ್ರಮ ಜಾರಿ: ಮಹದೇವಪ್ಪ

    ಡಾ.ಮಂಜುನಾಥ್ ಇನ್ನೂ ಯಾವ ಪಕ್ಷಕ್ಕೂ ಸೇರಿದವರಲ್ಲ. ಅವರು ಜೆಡಿಎಸ್‌ಗೆ ಸೇರ್ತಾರೋ ಬಿಜೆಪಿಗೆ ಸೇರ್ತಾರೋ ಅಂತ ನೋಡಬೇಕು. ಅವರಿಗೆ ಟಿಕೆಟ್ ಕೊಡುವ ಬಗ್ಗೆ ಹೈಕಮಾಂಡ್ ನಿರ್ಣಯ ಮಾಡಲಿದೆ. ನಮ್ಮ ಕೇಂದ್ರದ ನಾಯಕರು ಎಲ್ಲ ಕಡೆ ಎರಡು ಸರ್ವೆ ಮಾಡಿದ್ದಾರೆ. ಅದರಲ್ಲಿ ಯಾರ ಹೆಸರು ಬರುತ್ತೋ ನೋಡಬೇಕು ಎಂದು ಹೇಳಿದ್ದಾರೆ.

    ಇದೇ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ, ಡಾ.ಮಂಜುನಾಥ್ ಒಳ್ಳೆಯ ಮನುಷ್ಯ. ಅಂಥವರು ರಾಜಕೀಯಕ್ಕೆ ಬಂದರೆ ಒಳ್ಳೆಯದೇ ಆಗುತ್ತೆ. ಅವರ ರಾಜಕೀಯ ಪ್ರವೇಶವನ್ನು ನಾನು ಸ್ವಾಗತಿಸುತ್ತೇನೆ. ಆದ್ರೆ ಯಾವ ಪಕ್ಷದಿಂದ ಅನ್ನೋದು ಅವರಿಗೆ ಬಿಟ್ಟಿದ್ದು. ಆದ್ರೆ ನಮ್ಮ ಪಕ್ಷದಲ್ಲಿ ಅಭ್ಯರ್ಥಿ ಯಾರನ್ನ ಮಾಡ್ತಾರೆ ಅಂತಾ ಗೊತ್ತಿಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಇದರ ಬಗ್ಗೆ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಮುಖ್ಯಮಂತ್ರಿ ಅಮ್ಮಾ.. ತಾಯಿ.. ಅಂತ ಬೇಡುವ ಸ್ಥಿತಿ ಉದ್ಭವಿಸಿದೆ: ಹೆಚ್‌ಡಿಕೆ ಲೇವಡಿ

  • ಮಂಜುನಾಥ್‌ರಂತಹ ಅಳಿಯ ಸಿಕ್ಕಿದ್ದು ನನ್ನ ಪುಣ್ಯ: ಹೆಚ್‌.ಡಿ ದೇವೇಗೌಡ

    ಮಂಜುನಾಥ್‌ರಂತಹ ಅಳಿಯ ಸಿಕ್ಕಿದ್ದು ನನ್ನ ಪುಣ್ಯ: ಹೆಚ್‌.ಡಿ ದೇವೇಗೌಡ

    ಬೆಂಗಳೂರು: ಜಯದೇವ (Jayadeva Hospital) ನಿರ್ದೇಶಕ ಡಾ. ಮಂಜುನಾಥ್‌ (Dr. Manjunath) ಅವರ ಸೇವಾವಧಿ ಬುಧವಾರಕ್ಕೆ ಮುಕ್ತಾಯಗೊಳ್ಳಲಿದೆ. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಮಂಜುನಾಥ್‌ ಅವರ ಬಗ್ಗೆ ಮಾತನಾಡುತ್ತಾ ಇಂತಹ ಅಳಿಯ ಸಿಕ್ಕಿದ್ದು ನನ್ನ ಪುಣ್ಯ ಎಂದು ಹೇಳಿದ್ದಾರೆ.

    ಈ ಸಂಸ್ಥೆಗೆ ಪ್ರಥಮ ಬುನಾದಿ ಹಾಕಿದವರು ಡಾಕ್ಟರ್ ಚೆನ್ನಯ್ಯ. ಅವರಿಗೂ ಮಂಜುನಾಥ್ ಕಂಡರೆ ತುಂಬಾ ಪ್ರೀತಿ. ನೀವು ಹೊರದೇಶಕ್ಕೆ ಹೋಗಿ ಕೋಟ್ಯಂತರ ರೂಪಾಯಿ ದುಡಿಯಬಹುದು. ಆದರೆ ಇಲ್ಲಿಯ ಜನರ ಕಷ್ಟ ಕೇಳಿದಷ್ಟು ತೃಪ್ತಿ ಸಿಗುವುದಿಲ್ಲ ಎಂದರು.

    ನಾನು ಮತ್ತು ನನ್ನ ಶ್ರೀಮತಿ 15 ವರ್ಷ ಮಗಳು ಅನುಸೂಯ ಮನೆಯಲ್ಲಿಯೇ ಇದ್ದೆವು. ಅದು ನನ್ನ ಜೀವನದ ಸೌಭಾಗ್ಯ ಅಂತ ಹೇಳುತ್ತೇನೆ. ಇವತ್ತು ಹೆಮ್ಮೆ ಇದೆ ನನಗೆ, ಇಡೀ ರಾಷ್ಟ್ರದಲ್ಲಿ ಎರಡು ಸಾವಿರ ಬೆಡ್ ಆಸ್ಪತ್ರೆ ಬಹುಶಃ ಇಲ್ಲ ಅಂತ ನನ್ನ ಭಾವನೆ. ಸಚಿವ ಸುಧಾಕರ್ ಬಂದು ಇಲ್ಲಿ ಭಾಗವಹಿಸಿದ್ದು ಸಂತೋಷ. ಈ ಸಂಸ್ಥೆ ಆಗಿನ ದಿನಗಳನ್ನು ನೀವು ಸಹ ನೋಡಿದ್ದೀರಿ ಎಂದು ಹೇಳಿದರು. ಇದನ್ನೂ ಓದಿ: ಜ.31 ರಂದು ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್ ನಿವೃತ್ತಿ – ಹೇಗಿತ್ತು 16 ವರ್ಷಗಳ ಜರ್ನಿ?

    ನನ್ನ ಮಗ ನನ್ನ ಮಗಳ ಸೌಭಾಗ್ಯ ಅಂತ ಭಾವಿಸುತ್ತೇನೆ. ಮಂಜುನಾಥ್ ಅಂತಹ ಒಬ್ಬ ಶ್ರೇಷ್ಠ ವ್ಯಕ್ತಿ ಕೈ ಹಿಡಿದಿರುವುದು ನನ್ನ ಮಗಳ ಪುಣ್ಯ. ಅಂದು ನಾನು, ಬಡವರಿಗೆ ಸಹಾಯ ಮಾಡಬೇಕು ಅಂದರೆ ಇಲ್ಲೇ ಇರಬೇಕು ಅಂತ ಹೇಳಿದ್ದೆ. ಅದನ್ನು ಮಂಜುನಾಥ್ ಪುರಸ್ಕಾರ ಮಾಡಿದರು. ನಾನು ಎಲ್ಲೂ ಹೋಗಲ್ಲ, ಇಲ್ಲೇ ಇರುತ್ತೇನೆ ಎಂದು ಮಾತು ಕೊಟ್ಟಿದ್ದರು ಎಂದು ಹೆಚ್‌ಡಿಡಿ (HD Devegowda) ತಿಳಿಸಿದರು.

    ಯಾವ ಶ್ರೀಗಳು ಬೇಕಾಗಿಲ್ಲ: ಮಂಜುನಾಥ್ ಅವರಿಗೆ ಪದ್ಮಶ್ರೀ ಅಥವಾ ಯಾವ ಶ್ರೀಗಳು ಬೇಕಾಗಿಲ್ಲ. ಅಂತಹ ಬಿರುದುಗಳಿಗಿಂತಲೂ ಜನತೆ ಪ್ರೀತಿ ದೊಡ್ಡದು ಅಂತ ಹೇಳಿದ್ರು. ಇವತ್ತು ಈ ಸಂಸ್ಥೆಯಲ್ಲಿ ಎಲ್ಲ ಸಿಬ್ಬಂದಿ ಕುಟುಂಬ ಎನ್ನುವ ರೀತಿ ನಡೆಸಿಕೊಂಡು ಬಂದಿದ್ದಾರೆ. ಯಾರೊಬ್ಬರ ಮನಸ್ಸನ್ನು ಕೂಡ ನೋಯಿಸದೆ ಇರೋದು ಎಲ್ಲಾ ನನಗೆ ಗೊತ್ತಿದೆ. ಇದಕ್ಕೆ ನನ್ನ ಮಗಳ ದೈವ ಭಕ್ತಿ ಸಹ ಕಾರಣ ಎಂದರು.

    ಇಂದು ಈ ಕಾರ್ಯಕ್ರಮ ಅದ್ಬುತವಾಗಿ ನಡೆದಿದೆ. ಇಷ್ಟು ವರ್ಷ ಕೆಲಸ ಮಾಡಿದ ಅವರು ಇನ್ನೂ ಇರಬೇಕು ಎಂಬ ನಿರೀಕ್ಷೆ ಸಹಜ. ನೀವು ಬಿಟ್ಟು ಹೋದ ಮೇಲೆ ಏನು ಎಂಬ ಬಗ್ಗೆಯೂ ಯೋಚನೆ ಮಾಡಿ ಅಂತ ಹೇಳಿದ್ದೆ. ಮುಂದೆ ಬರುವ ಹೊಸ ನಿರ್ದೇಶಕರಿಗೆ ಆ ಶಕ್ತಿ ಸಿಗಲಿ ಅಂತ ಪ್ರಾರ್ಥನೆ ಮಾಡುತ್ತೇನೆ.
    ದೇಶ-ವಿದೇಶಗಳಿಂದ ಬಂದ ಜನರಿಗೆ ಉಚಿತ ಚಿಕಿತ್ಸೆ ನೀಡಿದ್ದನ್ನು ಸ್ಮರಿಸಿಕೊಳ್ಳುತ್ತೇನೆ. ಮಂಜುನಾಥ್ ಅವರಿಗೆ ಉತ್ತಮ ಆರೋಗ್ಯ ಸಿಗಲಿ ಪ್ರಾರ್ಥನೆ ಮಾಡುತ್ತೇನೆ. ನನಗೆ ಈಗ 91 ವರ್ಷ ಇಂತಹ ಸಂದರ್ಭಕ್ಕಿಂತ ಇನ್ನೇನು ಖುಷಿ ಬೇಕು ನನಗೆ. ಇದಕ್ಕಿಂತ ಹೆಮ್ಮೆ ನನಗೆ ಏನೂ ಬೇಕಾಗಿಲ್ಲ ಎಂದು ಹೆಚ್‌ಡಿಡಿ ಹೇಳಿದರು.

  • ಜ.31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಅವಧಿ ಅಂತ್ಯ

    ಜ.31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಅವಧಿ ಅಂತ್ಯ

    ಬೆಂಗಳೂರು: ಜಯದೇವ ಆಸ್ಪತ್ರೆ ನಿರ್ದೇಶಕರನ್ನಾಗಿ ಡಾ. ಮಂಜುನಾಥ್‍ರನ್ನು (Dr Manjunath) ಮುಂದುವರಿಸುವ ನಿರ್ಧಾರವನ್ನು ಸರ್ಕಾರ ಕೈ ಬಿಟ್ಟಿದೆ. ಜನವರಿ 31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ (Jayadeva Hospital Director) ಡಾ. ಮಂಜುನಾಥ್ ಅವಧಿ ಮುಕ್ತಾಯವಾಗಲಿದೆ.

    ಕಳೆದ ಬಾರಿ ಅವಧಿ ಮುಕ್ತಾಯ ಬಳಿಕ ಜನರ ಒತ್ತಾಯ ಕೇಳಿ ಬಂದ ಹಿನ್ನೆಲೆ 6 ತಿಂಗಳ ಕಾಲ ಹುದ್ದೆಯಲ್ಲಿ ಸರ್ಕಾರ ಮುಂದುವರಿಸಿತ್ತು. ಎನ್‍ಎಂಸಿ ಆಕ್ಟ್ ಪ್ರಕಾರ 70 ವರ್ಷದವರೆಗೂ ಸೇವೆ ಸಲ್ಲಿಸಬಹುದಾಗಿದೆ. ಡಾ. ಮಂಜುನಾಥ್ ಅವರಿಗೆ 67 ವರ್ಷವಾಗಿದ್ದು, ಇನ್ನು 3 ವರ್ಷಗಳ ಕಾಲ ಸೇವೆ ಸಲ್ಲಿಸಬಹುದಾಗಿದೆ. ಆದರೆ ಸರ್ಕಾರ ಮುಂದುವರಿಸುವ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಜನವರಿ 31ಕ್ಕೆ ಡಾ. ಮಂಜುನಾಥ್ ನಿವೃತ್ತಿ ಘೋಷಣೆ ಮಾಡಲಿದ್ದಾರೆ.

    ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಪೈಪೋಟಿ ಆರಂಭವಾಗಿದ್ದು, 15ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ನಡುವೆ ಮೈಸೂರು ಮೂಲದ ಸಿಎಂ ಆಪ್ತರಿಗೆ ನಿರ್ದೇಶಕರ ಹುದ್ದೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಅನ್ನೋ ಚರ್ಚೆ ಜೋರಾಗಿದೆ.

    ಚುನಾವಣೆಗೆ ಸ್ಪರ್ಧಿಸ್ತಾರೆ ಎಂಬ ಚರ್ಚೆ ಜೋರಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಾ.ಮಂಜುನಾಥ್ ಅವರು, ಆ ರೀತಿ ಏನಿಲ್ಲ ಚುನಾವಣೆಗೆ ನಿಲ್ಲೊಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 3 ದಿನ ಲಾಡ್ಜ್‌ನಲ್ಲಿಟ್ಟು ಚಿತ್ರಹಿಂಸೆ ಕೊಟ್ಟ ಆರೋಪ- ಕಾಟನ್‍ಪೇಟೆ ಪೊಲೀಸರ ವಿರುದ್ಧ ವ್ಯಕ್ತಿ ದೂರು

  • ಪತಿಯ ಜೀವ ಉಳಿಸಿದ ಡಾ.ಮಂಜುನಾಥ್ ಬಗ್ಗೆ ಸುಧಾ ಬರಗೂರು ಹೇಳಿದ್ದೇನು?

    ಪತಿಯ ಜೀವ ಉಳಿಸಿದ ಡಾ.ಮಂಜುನಾಥ್ ಬಗ್ಗೆ ಸುಧಾ ಬರಗೂರು ಹೇಳಿದ್ದೇನು?

    ಕಿರುತೆರೆಯ ಜನಪ್ರಿಯ Weekend With Ramesh ಶೋಗೆ ಈ ವಾರ ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್ (Dr. Manjinath) ಎಂಟ್ರಿ ಕೊಟ್ಟಿದ್ದಾರೆ. ಅದೆಷ್ಟೋ ಜೀವಗಳಿಗೆ ಮರು ಜೀವ ಕೊಟ್ಟಿರುವ ಸ್ಪೂರ್ತಿಯ ಕಥೆಯನ್ನ ಏಳೆ ಏಳೆಯಾಗಿ ನಟ ರಮೇಶ್ ಅರವಿಂದ್ (Ramesh Aravind) ಬಿಚ್ಚಿಟ್ಟಿದ್ದಾರೆ. ಡಾ. ಮಂಜುನಾಥ್ ಅವರು ಕೂಡ ಸಾಕಷ್ಟು ತೆರೆಮರೆಯ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಸದಾ ನಗಿಸುವ ಸುಧಾ ಬರಗೂರು (Sudha Baragur) ಅವರ ಪತಿಯ ಜೀವ ಉಳಿದಿದ್ದೇ ಡಾ.ಮಂಜುನಾಥ್ ಅವರ ಅರೈಕೆ ಮತ್ತು ಚಿಕಿತ್ಸೆಯಿಂದ ಎಂದು ಅಸಲಿ ಸಂಗತಿಯನ್ನ ಮಾತನಾಡಿದ್ದಾರೆ.

    ವೈದ್ಯೋ ನಾರಾಯಣೋ ಹರಿಃ ಎಂಬುದು ಅಕ್ಷರಶಃ ಸತ್ಯ. ಅದಕ್ಕೆ ತಾಜಾ ಉದಾಹರಣೆ ಪದ್ಮಶ್ರೀ ಡಾ.ಮಂಜುನಾಥ್ ಅವರು ಎಂದರೆ ತಪ್ಪಾಗಲಾರದು. ವೈದ್ಯಕೀಯ ಕ್ಷೇತ್ರದಲ್ಲಿ ಅವರ ಸಾಧನೆ ಅಪಾರ. 50 ಲಕ್ಷ ಹೃದಯ ಸಮಸ್ಯೆಯುಳ್ಳ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇನ್ನೂ ಮಾತಿನ ಕಟ್ಟೆಯಲ್ಲಿ ಸುಧಾ ಬರಗೂರು ಕೂತರೆ ಅವರ ಹಾಸ್ಯದಿಂದಾನೇ ಅದೆಷ್ಟೋ ಮನಸ್ಸುಗಳು ನಕ್ಕು ನಕ್ಕು ತಣ್ಣಗಾಗುತ್ತವೆ. ಆದರೆ, ಸದಾ ನಗಿಸುವ ಸುಧಾ ಬರಗೂರು ಜೀವನದಲ್ಲೂ ಅಳುವ ಸನ್ನಿವೇಶಗಳು ಬಂದಿದ್ದವು. ಸುಧಾ ಬರಗೂರು ಅವರ ಪತಿ ಜಯಪ್ರಕಾಶ್ ಬರಗೂರು ಅವರ ಹಾರ್ಟ್‌ನಲ್ಲಿ ಸಮಸ್ಯೆ ಇದ್ದಂತಹ ದಿನ. ಆ ವೇಳೆ ಸುಧಾ ಬರಗೂರು ಅವರ ಪತಿಗೆ ಯಾವುದೇ ತೊಂದರೆಯಾಗದಂತೆ ಕಾಪಾಡಿದ್ದು ಡಾ. ಮಂಜುನಾಥ್.

    ವೀಕೆಂಡ್ ಟೆಂಟ್‌ನಲ್ಲಿ ನಡೆದ ಸತ್ಯವನ್ನೆಲ್ಲಾ ಸುಧಾ ಬರಗೂರು ತಿಳಿಸಿದ್ದಾರೆ. ನಾನು ಇವತ್ತೇನಾದರೂ ಚೆನ್ನಾಗಿದ್ದರೆ ಅದರ ಮೊದಲ ಕ್ರೆಡಿಟ್ ಡಾಕ್ಟರ್‌ಗೆ ಎರಡನೇ ಕ್ರೆಡಿಟ್ ನನ್ನ ಗಂಡನಿಗೆ. ನಾನು ನಗಿಸೋದನ್ನ ಕರ್ನಾಟಕ ಜನತೆ ನೋಡಿದ್ದಾರೆ. ಆದರೆ ಅಳುವ ಸುಧಾರನ್ನ ನೋಡಿ, ಕಣ್ಣೀರು ಒರೆಸುವ ಕೆಲಸ ಮಾಡಿದ್ದರೆ ಅದು ಇವರೇ ಎಂದು ಡಾ.ಮಂಜುನಾಥ್ ಬಗ್ಗೆ ಗೌರವ ಪೂರ್ವಕವಾಗಿ ಮಾತನಾಡಿದ್ದಾರೆ. ಡಾ.ಮಂಜುನಾಥ್ ಅಭಿಮಾನಿ ಸಂಘದ ಅಜೀವ ಸದಸ್ಯೆ ನಾನು. ನನ್ನ ಗಂಡನಿಗೆ ಹಾರ್ಟ್ ಪ್ರಾಬ್ಲಮ್. ಹೌದು, ನನ್ನಂತಹ ಬಾಯಾಳಿನ ಮದುವೆ ಆದ್ಮೇಲೆ ಹಾರ್ಟ್ ಪ್ರಾಬ್ಲಮ್ ಬರಲೇಬೇಕು. 15-16 ವರ್ಷದ ಹಿಂದೆ. ನಂಜನಗೂಡು ದೇವಸ್ಥಾನದಲ್ಲಿ ಇವರು ಬಿದ್ದು ಹೋದ್ರು. ತಕ್ಷಣ ಮಂಜುನಾಥ್ ಸರ್‌ಗೆ ಕರೆ ಮಾಡಿ, ಯಜಮಾನ್ರು ಹೀಗೆ ಬಿದ್ದು ಹೋದ್ರು ಅಂದೆ. ಕರೆದುಕೊಂಡು ಬನ್ನಿ ಅಂದ್ರು. ಕೇವಲ ಹದಿನೈದು ನಿಮಿಷದಲ್ಲಿಯೇ ಐಸಿಯೂ ವಾರ್ಡ್‌ನಲ್ಲಿ ಎಲ್ಲಾ ರೆಡಿಯಾಗಿತ್ತು. ನಾನು ಕಲಾವಿದೆ ಅಂತಲ್ಲ, ಮಂಜುನಾಥ್ ಸರ್ ಹೇಳಿದ್ರು ಅನ್ನೋ ಕಾರಣಕ್ಕೆ. ಇದನ್ನೂ ಓದಿ: ವಾಯುಪಡೆ ಅಧಿಕಾರಿಯಾದ ನಟ ವರುಣ್ ತೇಜ್

    ಡಾಕ್ಟರ್‌ಗೂ ದೇವರಿಗೂ ಕೋಪ ಬರಿಸಬಾರದು. ಯಾಕಂದ್ರೆ, ದೇವರಿಗೆ ಕೋಪ ಬಂದ್ರೆ ಡಾಕ್ಟರ್ ಬಳಿ ಕಳಿಸ್ತಾನೆ. ಡಾಕ್ಟರ್‌ಗೆ ಕೋಪ ಬಂದ್ರೆ ದೇವರ ಬಳಿಯೇ ಕಳುಹಿಸಿ ಬಿಡ್ತಾರೆ. ಶ್ರೀಕ್ಷೇತ್ರ ಧರ್ಮಸ್ಥಳ ದೂರ ಅಲ್ವಾ. ಅದಕ್ಕೆ ಆಗಾಗ ಇಲ್ಲೆ ಇರುವ ಮಂಜುನಾಥ ಸ್ವಾಮಿ ದರ್ಶನ ಮಾಡಿಕೊಂಡು ಬಂದರೆ ನಮ್ಮಮನೆ ಸ್ವಾಮಿ ಖುಷಿಯಾಗಿ ಇರುತ್ತಾರೆ. ಇದು ನನ್ನ ವೈಯಕ್ತಿಕ ಅನುಭವ ಎಂದು ಡಾ.ಮಂಜುನಾಥ್ ಬಗ್ಗೆ ಸುಧಾ ಬರಗೂರು ಹೇಳಿದ್ದಾರೆ.

  • ಧ್ರುವನಾರಾಯಣ್ ನಿಧನಕ್ಕೆ ಕಾರಣ ಬಿಚ್ಚಿಟ್ಟ ವೈದ್ಯ ಡಾ. ಮಂಜುನಾಥ್

    ಧ್ರುವನಾರಾಯಣ್ ನಿಧನಕ್ಕೆ ಕಾರಣ ಬಿಚ್ಚಿಟ್ಟ ವೈದ್ಯ ಡಾ. ಮಂಜುನಾಥ್

    ಮೈಸೂರು: ಹಳೇ ಮೈಸೂರು ಭಾಗದ ಪ್ರಬಲ ದಲಿತ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ನಿಧನದ ಹಿಂದಿನ ಕಾರಣವನ್ನು ವೈದ್ಯ ಡಾ. ಮಂಜುನಾಥ್ (Dr. Manjunath) ಚ್ಚಿಟ್ಟಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬೆಳಗ್ಗೆ ಜಾಗಿಂಗ್ ಮುಗಿಸಿ ವಾಪಸ್ ಬರುತ್ತಿದಂತೆಯೇ ಅವರ ಡ್ರೈವರ್ ಹಾಗೂ ಗಾರ್ಡ್ ಬೇಗ ಬರುವಂತೆ ನನ್ನ ಕೂಗಿದರು. ಕೂಡಲೇ ಅವರ ಮನೆಗೆ ಓಡಿದೆ. ಈ ವೇಳೆ ಮೊದಲನೇ ಮಹಡಿಯಲ್ಲಿ ಧ್ರುವನಾರಾಯನ್ ಅವರು ಮಂಚದಿಂದ ಕೆಳಗೆ ಬಿದ್ದು, ಸುಮಾರು 3 ಲೀಟರ್ ಆಗುವಷ್ಟು ರಕ್ತದ ಮಡುವಿನಲ್ಲಿ ಮಲಗಿದ್ದರು. ಆದರೆ ಅವರಲ್ಲಿ ಹಾರ್ಟ್ ಬೀಟ್, ಚಲನವಲನ ಯಾವುದೂ ಇರಲಿಲ್ಲ. ಅಂದರೆ ಅದಾಗಲೇ ಅವರ ಉಸಿರು ನಿಂತ ಸ್ಥಿತಿಯಲ್ಲಿತ್ತು ಎಂದರು.

    ಕೂಡಲೇ ಆಸ್ಪತ್ರೆಗೆ ಕರೆ ಮಾಡಿ ಅಂಬುಲೆನ್ಸ್ ಮೂಲಕ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಎಲ್ಲಾ ಪ್ರಯತ್ನಗಳನ್ನೂ ಮಾಡಿದರೂ ಅವರನ್ನು ನಮಗೆ ಉಳಿಸಿಕೊಳ್ಳಲು ಆಗಲಿಲ್ಲ. ಹೊಟ್ಟೆಯಲ್ಲಿ ಮ್ಯಾಸಿವ್ ಬ್ಲೀಡಿಂಗ್ ಆಗಿದ್ದೇ ಅವರ ನಿಧನಕ್ಕೆ ಕಾರಣ ಎಂದರು ಹೇಳಿದರು. ಇದನ್ನೂ ಓದಿ: ಧ್ರುವನಾರಾಯಣ್ ನಿಧನಕ್ಕೆ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರಿಂದ ಸಂತಾಪ

    ಶುಕ್ರವಾರ ರಾತ್ರಿನೇ ಸ್ವಲ್ಪ ಹುಷಾರಿಲ್ಲ ಅಂತ ನನಗೆ ಕರೆ ಮಾಡಿ ಹೇಳಿದ್ದರು. ಆಗ ತಕ್ಷಣ ನಾನು ಬನ್ನಿ ಆಸ್ಪತ್ರೆಗೆ ಅಂದೆ. ಇಲ್ಲ ಬೆಳಗ್ಗೆ ಬರ್ತೀನಿ ಅಂತ ಹೇಳಿದ್ರು. ಆ ಸಂದರ್ಭದಲ್ಲಿಯೇ ಅವರಿಗೆ ಬ್ಲೀಡಿಂಗ್ ಶುರುವಾಗಿದೆ. ಅದಕ್ಕೆ ಅವರಿಗೆ ಸ್ವಲ್ಪ ಆಯಾಸ ಆದಂತೆ ಭಾಸವಾಗಿದೆ. ಅದು ಬೆಳಗ್ಗೆ ಅಷ್ಟೊತ್ತಿಗೆ ಬ್ಲೀಡಿಂಗ್ ಜಾಸ್ತಿ ಆಗಿದೆ ಎಂದು ವಿವರಿಸಿದರು.

    ವಿಧಾನಸಭಾ ಚುನಾವಣೆ (Vidhanasabha Election) ಹತ್ತಿರದಲ್ಲಿದೆ. ಧ್ರುವ ನಾರಾಯಣ್ (Dhruva Narayan) ಅವರು ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದರು. ಹೀಗಾಗಿ ಅವರು ಸ್ವಲ್ಪ ಒತ್ತಡದಲ್ಲಿದ್ದರು. ಈ ಒತ್ತಡ ಜಾಸ್ತಿ ಆದಾಗ ಅಲ್ಸರ್ಸ್ ಜಾಸ್ತಿ ಆಗಿ ಹೊಟ್ಟೆಯಲ್ಲಿ ಬ್ಲೀಡಿಂಗ್ ಆಗುತ್ತದೆ. ಹಾರ್ಟ್ ಟ್ಯಾಕ್ ಅಂತೀವಿ ಆದರೆ ಅವರ ನಿಧನಕ್ಕೆ ಕಾರಣ ಮ್ಯಾಸೀವ್ ಬ್ಲೀಡಿಂಗ್ ಎಮದು ಅವರು ತಿಳಿಸಿದರು. ಇದನ್ನೂ ಓದಿ: ಧ್ರುವನಾರಾಯಣ್ ಕಾರ್ಯಾಧ್ಯಕ್ಷ ಅಲ್ಲ, ನನ್ನ ಕುಟುಂಬವಾಗಿದ್ದರು: ಕಣ್ಣೀರು ಹಾಕಿದ ಡಿಕೆಶಿ

    ಧ್ರುವ ನಾರಾಯಣ್ (62) ಅವರು ಶನಿವಾರ ಹೃದಯಾಘಾತ (Heart Attack) ದಿಂದ ಮೈಸೂರಿನ ಡಿಆರ್‍ಎಂಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 1961 ಜುಲೈ 31ರಂದು ಚಾಮರಾಜನಗರದ ಹಗ್ಗವಾಡಿಯಲ್ಲಿ ಜನಿಸಿದ್ದ ಇವರು ಬೆಂಗಳೂರಿನ ಜಿಕೆವಿಕೆಯಲ್ಲಿ ಪದವಿ ಪಡೆದಿದ್ದರು. ಕಳೆದ 2 ವರ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಈ ಬಾರಿ ನಂಜನಗೂಡಿನಿಂದ ವಿಧಾನಸಭೆ ಚುನಾವಣೆ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. 2 ಬಾರಿ ಶಾಸಕ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.