Tag: Dr. H.C. Mahadevappa

  • ದಲಿತ ಸಿಎಂ ಹೇಳಿಕೆ ವಿಚಾರದಲ್ಲಿ ಸಚಿವ ಮಹದೇವಪ್ಪ ಯೂಟರ್ನ್

    ದಲಿತ ಸಿಎಂ ಹೇಳಿಕೆ ವಿಚಾರದಲ್ಲಿ ಸಚಿವ ಮಹದೇವಪ್ಪ ಯೂಟರ್ನ್

    ಬೆಂಗಳೂರು: ದಲಿತರು (Dalit CM) ಸಿಎಂ ಆಗಬೇಕು ಎಂದು ಮಾತಾನಾಡಿದ್ದ ಸಚಿವ ಹೆಚ್‌.ಸಿ.ಮಹದೇವಪ್ಪ (H.C.Mahadevappa) ಇಂದು ಯೂಟರ್ನ್ ಹೊಡೆದಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಅಂಬೇಡ್ಕರ್ ಹೇಳಿದ್ದಾರೆ. ಮೀಸಲಾತಿಯಿಂದ ಸಂತೋಷವಾಗಿಲ್ಲ. ನನ್ನ ಜನರು ಅಧಿಕಾರದಲ್ಲಿ ಇರಬೇಕು. ಪಾಲಿಸಿ ಮೇಕಿಂಗ್ ಚೇರ್‌ನಲ್ಲಿ ಇರಬೇಕು ಅಂತ ಹೇಳಿದ್ದಾರೆ. ಅದಕ್ಕೆ ನಮ್ಮ ಜನರು ಒಗ್ಗಟ್ಟಾಗಬೇಕು ಅಂತ ಹೇಳಿದ್ದು. ಮತ ಹಾಕ್ತಿರಾ, ಆಯಾ ಜಾತಿಯವರು ನಾಯಕನ ಹಿಂದೆ ಹೋಗ್ತಾರೆ. ನೀವು ಮತಹಾಕಿ ಸುಮ್ಮನಾಗಿ ಬಿಡ್ತೀರಾ. ನಾವು ಮತ ಹಾಕಿ ಬೇರೆಯವರ ಮುಂದೆ ಕೈಜೊಡಿಸುತ್ತೇವೆ. ನಮ್ಮಿಂದ ಮತ ಪಡೆದವರು ನಮ್ಮ ಮೇಲೆ ಆಡಳಿತ ಮಾಡ್ತಾರೆ. ಅದಕ್ಕಾಗಿ ಒಗ್ಗಾಟಾಗಿ ಅಂತ ಹೇಳಿದ್ದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಸ್ಕರಣೆ ಮಾಡಿದ ನೀರು ಮರುಬಳಕೆಗೆ ಶೀಘ್ರವೇ ಆದೇಶ: ಈಶ್ವರ್ ಖಂಡ್ರೆ

    ಬಹುಜನ ಸಮಾಜ ಒಂದಾಗಿದೆ. ನಿಮಗೆ ಕಣ್ಣು ಕಾಣಲ್ವಾ? ಬಹುಜನರು ಒಂದಾಗಿದ್ದಕ್ಕೆ ಕಾಂಗ್ರೆಸ್ ಗೆಲ್ತಾ ಇರೋದು. ಬೇಕಾದಷ್ಟು ದಲಿತರಿಗೆ ಕಾಂಗ್ರೆಸ್ ಸಿಎಂ ಮಾಡಿದೆ. ಬೇರೆ ಪಾರ್ಟಿ ಕೂಡ ಸಿಎಂ ಮಾಡಬೇಕು. ಈ ಸಮುದಾಯಗಳ ಕುರಿತು ಮಾತನಾಡಿದ್ದೇನೆ. ಪಾರ್ಟಿ ಬಗ್ಗೆ ಹೇಳಿಕೆ ನೀಡಿಲ್ಲ. ವಿಷಯ ಕಾಂಪ್ಲಿಕೇಟ್ ಮಾಡಬೇಡಿ ನೀವು ಎಂದು ದಲಿತ ಸಿಎಂ ಬೇಡಿಕೆ ಇಟ್ಟು ಉಲ್ಟಾ ಹೊಡೆದಿದ್ದಾರೆ.

    ದಲಿತರಲ್ಲಿ ಬಹಳಷ್ಟು ಜನರು ಪ್ರತಿಭಾವಂತರಿದ್ದಾರೆ. ದಲಿತ ಅನ್ನುವ ಕಾರಣಕ್ಕೆ ಅವಕಾಶ ಸಿಕ್ಕಿಲ್ಲ. ದಲಿತ ನಾಯಕತ್ವದ ಹಿಂದೆ ನಿಲ್ಲಬೇಕು ಅಂತ ಹೇಳಿದ್ದೇನೆ. ಇದು ಅಂಬೇಡ್ಕರ್ ಮಾತು. ನೀವೆಲ್ಲ ಸೇರಿ ನಮಗೆ ಸಿಎಂ ಅವಕಾಶ ‌ಕೊಡಿಸಿ ಎಂದಿದ್ದಾರೆ. ಇದನ್ನೂ ಓದಿ: ದೇಶದ್ರೋಹಿಗಳಿಗೂ, ಕೈ ನಾಯಕರಿಗೂ ಅಪ್ಪುಗೆಯ ನಂಟಿನ ಕಾರಣ FSL ವರದಿ ವಿಳಂಬ: ಸಿ.ಟಿ.ರವಿ

    ನಮ್ಮ ಪರವಾಗಿ ಯಾರೂ ಮಾತನಾಡುವುದಿಲ್ಲ. ನಿಮ್ಮ ಧ್ವನಿ ಕೂಡ ಮುಖ್ಯ. ನಮ್ಮ ಪರವಾಗಿ ಮಾತನಾಡಿ. ನಿಮ್ಮ ಐಡಿಯಾಗಳನ್ನು ನಮ್ಮ ಮಾತಿನಲ್ಲಿ ಹೇಳಿಸಬೇಡಿ. ಕಾಂಗ್ರೆಸ್ ಮಾತ್ರ ನಾಲ್ಕಾರು ರಾಜ್ಯದಲ್ಲಿ ದಲಿತರನ್ನು ಸಿಎಂ ಮಾಡಿರೋದು. ಬೇರೆ ಯಾರು ಮಾಡಿದ್ದಾರೆ ಅಂತ ತೋರಿಸಿ ಎಂದು ಪ್ರಶ್ನಿಸಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ನಾನು ನಿಲ್ಲಲ್ಲ. ದಲಿತರಿಗೆ ಹೆಚ್ಚಿನ ಲೋಕಸಭೆ ಟಿಕೆಟ್ ನೀಡುವುದಕ್ಕೆ ಪಾರ್ಟಿ ಈ ಬಗ್ಗೆ ನಿರ್ಧಾರ ಮಾಡಬೇಕು. ಮೀಸಲು ಕ್ಷೇತ್ರ ಬಿಟ್ಟು ಬೇರೆ ಕಡೆ ಅಭ್ಯರ್ಥಿಗಳು ಇದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ನಿರ್ಧಾರ ಮಾಡಬೇಕು. ಜನರಲ್ ಕ್ಷೇತ್ರದಲ್ಲಿ ಕೂಡ ಗೆಲ್ಲುವ ಸಾಮರ್ಥ್ಯ ನಮ್ಮ ನಾಯಕರಿಗಿದೆ. ಆದರೆ ಪಕ್ಷ ಅವಕಾಶ ಕೋಡಬೇಕು. ಸದ್ಯಕ್ಕೆ ಹೆಚ್ಚಿನ ಕ್ಷೇತ್ರಗಳಿಗೆ ಡಿಮ್ಯಾಂಡ್ ಇಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೆಫೆ ಬ್ಲಾಸ್ಟ್ ಪ್ರಕರಣ – ಶಂಕಿತ ಉಗ್ರನ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ

  • ಭೇಟಿಗೆ ಬರುವವರು ಹಾರ, ಪೇಟ ತರಬೇಡಿ, ನೋಟ್ ಬುಕ್ಸ್ ತನ್ನಿ: ಸಚಿವರ ಮನವಿ

    ಭೇಟಿಗೆ ಬರುವವರು ಹಾರ, ಪೇಟ ತರಬೇಡಿ, ನೋಟ್ ಬುಕ್ಸ್ ತನ್ನಿ: ಸಚಿವರ ಮನವಿ

    ಮೈಸೂರು: ತಮ್ಮನ್ನು ಭೇಟಿ ಮಾಡಲು ಬರುವಾಗ ಹಾರ ಹಾಗೂ ಪೇಟಗಳನ್ನು ತರಬೇಡಿ. ಅದರ ಬದಲು 200 ಪುಟಗಳ ನೋಟ್ ಬುಕ್ (Book) ತನ್ನಿ ಎಂದು ಮೈಸೂರು ಜಿಲ್ಲಾ ಉಸ್ತವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ (Dr H.C Mahadevappa) ಮನವಿ ಮಾಡಿದ್ದಾರೆ.

    ಈ ಸಂಬಂಧ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಪೇಟ ಹಾಗೂ ಶಾಲಿಗೆ ದುಂದು ವೆಚ್ಚ ಮಾಡಬೇಡಿ. ಅದೇ ಹಣದಲ್ಲಿ ನೋಟ್ ಬುಕ್ ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ತೆಗೆದುಕೊಂಡು ಬನ್ನಿ. ಬಳಿಕ ಈ ಪುಸ್ತಕಗಳನ್ನು ಹಾಗೂ ಸಾಮಗ್ರಿಗಳನ್ನು ಮಕ್ಕಳಿಗೆ ಹಂಚಲಾಗುವುದು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಷ್ಯಾದ 8 ವರ್ಷದ ಬಾಲಕನಿಗೆ ಇಷ್ಟಲಿಂಗ ದೀಕ್ಷೆ- ಗಣೇಶನಾಗಿ ಬದಲಾದ ಆ್ಯಂಡ್ರೆ

    ಈ ಮೂಲಕ ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೆ ಸಚಿವ ಮಹದೇವಪ್ಪ ಮನವಿ ಮಾಡಿದ್ದಾರೆ. ಇದರಿಂದಾಗಿ ನೂತನ ಬದಲಾವಣೆಗೆ ಸಚಿವರು ಮುಂದಾಗಿದ್ದಾರೆ. ಅಲ್ಲದೇ ತಮಗೆ ನೀಡುವ ಶಿಕ್ಷಣ ಸಾಮಾಗ್ರಿಗಳನ್ನು ಶಾಲಾ ಮಕ್ಕಳಿಗೆ ನೀಡುವ ಭರವಸೆ ನೀಡಿದ್ದಾರೆ. ಸಚಿವರ ಈ ನಡೆಯಿಂದ ಉಳಿದವರಿಗೂ ಮಾದರಿಯಾಗಿದ್ದಾರೆ. ಇದನ್ನೂ ಓದಿ: ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ: ಸಿದ್ದರಾಮಯ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅನುಕಂಪದ ಅಲೆಯ ಅಬ್ಬರ – ಟಿಕೆಟ್ ರೇಸ್‌ನಿಂದ ಹಿಂದೆ ಸರಿದ ಹೆಚ್.ಸಿ.ಮಹದೇವಪ್ಪ

    ಅನುಕಂಪದ ಅಲೆಯ ಅಬ್ಬರ – ಟಿಕೆಟ್ ರೇಸ್‌ನಿಂದ ಹಿಂದೆ ಸರಿದ ಹೆಚ್.ಸಿ.ಮಹದೇವಪ್ಪ

    ಮೈಸೂರು: ನಂಜನಗೂಡು (Nanjanagud) ಕಾಂಗ್ರೆಸ್ (Congress) ಟಿಕೆಟ್ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅಕ್ಷರಶಃ ಧರ್ಮ ಸಂಕಟದಲ್ಲಿದ್ದರು. ಆದರೆ, ಈಗ ಇಡೀ ವಿಚಾರ ಸಿನಿಮೀಯಾ ರೀತಿ ಬದಲಾಗಿದೆ. ಡಾ.ಹೆಚ್.ಸಿ.ಮಹದೇವಪ್ಪ (H.C.Mahadevappa) ಅಚ್ಚರಿ ರೀತಿ ಕ್ಷೇತ್ರದ ಟಿಕೆಟ್ ರೇಸ್‌ನಿಂದ ಹಠಾತ್ ಆಗಿ ಹೊರ ನಡೆದಿದ್ದಾರೆ.

    ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಮತ್ತು ಧ್ರುವನಾರಾಯಣ್ ನಡುವೆ ಫೈಟ್ ಸೃಷ್ಟಿಯಾಗಿತ್ತು. ಇಬ್ಬರಲ್ಲಿ ಯಾರ ಕೈ ಮೇಲಾಗುತ್ತದೋ ಎಂದು ಜನ ಕೂತೂಹಲದಿಂದ ನೋಡುತ್ತಿದ್ದ ಹೊತ್ತಿನಲ್ಲೇ ಧ್ರುವನಾರಾಯಣ್ (R.Dhruvanarayan) ಅವರು ಅಕಾಲಿಕವಾಗಿ ಮರಣ ಹೊಂದಿದ್ದರು. ಇವರ ಮರಣ ನಂತರ ಕ್ಷೇತ್ರದ ಟಿಕೆಟ್ ರೇಸ್‌ನ ವರಸೆಯೇ ಬದಲಾಗಿ ಬಿಟ್ಟಿತು. ಇದನ್ನೂ ಓದಿ: ಪುಡಿ ರೌಡಿಗಳ ಜೊತೆ ಶಾಸಕರ ಮೀಟಿಂಗ್? – ಮತ್ತೊಂದು ವಿವಾದ ಮೈಮೇಲೆಳೆದುಕೊಂಡ ಸತೀಶ್ ರೆಡ್ಡಿ

    ಧ್ರುವನಾರಾಯಣ್ ಅವರ ಹಠಾತ್ ನಿಧನದ ಪರಿಣಾಮ ಕ್ಷೇತ್ರದಲ್ಲಿ ಧ್ರುವನಾರಾಯಣ್ ಕುಟುಂಬದ ಪರ ಅನುಕಂಪದ ಅಲೆ ದೊಡ್ಡ ಮಟ್ಟದಲ್ಲಿ ಎದ್ದಿದೆ. ಧ್ರುವನಾರಾಯಣ್ ಪುತ್ರ ದರ್ಶನ್‌ಗೆ ಟಿಕೆಟ್ ಕೊಡಬೇಕೆಂಬ ಕೂಗು ಬಹು ಜೋರಾಗಿಯೆ ಕೇಳಿ ಬರುತ್ತಿದೆ.

    ಯಾವಾಗ ಧ್ರುವನಾರಾಯಣ್ ಅವರ ಪುತ್ರನ ಪರ ಕೂಗು ಹೆಚ್ಚಾಯ್ತೋ, ಅನುಕಂಪದ ಅಲೆಯ ಅಬ್ಬರವೂ ಜೋರಾಯ್ತೋ ತಕ್ಷಣವೇ ಮಹದೇವಪ್ಪಗೆ ಭವಿಷ್ಯದ ಅಪಾಯ ಕಣ್ಮುಂದೆ ಬಂದಂತೆ ಕಾಣುತ್ತಿದೆ. ಅನುಕಂಪದ ಅಲೆ ಈ ಮಟ್ಟಕ್ಕೆ ಇರುವಾಗ ಅದನ್ನು ಧಿಕ್ಕರಿಸಿ ಟಿಕೆಟ್ ಪಡೆದರೆ ಅದು ಚುನಾವಣೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೆ ದಲಿತ ನಾಯಕ ಎನ್ನಿಸಿಕೊಂಡ ಧ್ರುವನಾರಾಯಣ್ ಅವರ ಕುಟುಂಬಕ್ಕೆ ಮಹದೇವಪ್ಪ ಅನ್ಯಾಯ ಮಾಡಿದರು ಎಂಬ ಆರೋಪ ಶಾಶ್ವತವಾಗಿ ಉಳಿದು ಬಿಡುವ ಸಾಧ್ಯತೆಯೂ ಹೆಚ್ಚಿರುತ್ತದೆ. ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ಆಡಿಯೋ ಬಾಂಬ್- ರೇವಣ್ಣ, ಶಿವಲಿಂಗೇಗೌಡ ಮಾತುಕತೆ ಆಡಿಯೋ ವೈರಲ್

    ಎಲ್ಲವನ್ನೂ ಅಳೆದು ತೂಗಿರೋ ಹೆಚ್.ಸಿ.ಮಹದೇವಪ್ಪ ಏಕಾಏಕಿ ಮೈಸೂರಿನಲ್ಲಿನ ಧ್ರುವನಾರಾಯಣ್ ಅವರ ಮನೆಗೆ ಆಗಮಿಸಿ ಧ್ರುವನಾರಾಯಣ್ ಅವರ ಪುತ್ರನಿಗೆ ಸಾಂತ್ವನ ಹೇಳಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ನಾನು ನಂಜನಗೂಡು ಕ್ಷೇತ್ರದ ಟಿಕೆಟ್ ರೇಸ್‌ನಿಂದ ಹಿಂದೆ ಸರಿಯುತ್ತಿದ್ದೇನೆ. ದರ್ಶನ್ ಧ್ರುವನಾರಾಯಣ್‌ಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸುವ ಮೂಲಕ ಪ್ರಬುದ್ಧತೆ ಪ್ರದರ್ಶಿಸಿದ್ದಾರೆ.

    ಹೆಚ್.ಸಿ.ಮಹದೇವಪ್ಪರ ಈ ತೀರ್ಮಾನದಿಂದ ನಂಜನಗೂಡು ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ಗೊಂದಲ ಬಹುತೇಕ ಬಗೆಹರಿದಂತೆ ಕಾಣುತ್ತದೆ. ಆದರೆ ಈಗ ಪ್ರಶ್ನೆ ಇರೋದು ಮಹದೇವಪ್ಪ ಈಗ ಯಾವ ಕ್ಷೇತ್ರ ಹುಡುಕಿಕೊಳ್ಳುತ್ತಾರೆ ಎಂಬುದು. ಏಕೆಂದರೆ ಸ್ವಕ್ಷೇತ್ರವಾಗಿದ್ದ ಟಿ.ನರಸೀಪುರದಿಂದ ಮಗನನ್ನು ಕಣಕ್ಕೆ ಇಳಿಸೋಕೆ ಪ್ಲಾನ್ ಮಾಡಿರುವ ಕಾರಣ ಮಹದೇವಪ್ಪಗೆ ಸದ್ಯ ಹೊಸ ಕ್ಷೇತ್ರ ಹುಡುಕುವುದು ಅನಿವಾರ್ಯ. ಇದನ್ನೂ ಓದಿ: ಬಿಡಿಎದಿಂದ ಕರಗ ಮಂಟಪ ಅಭಿವೃದ್ಧಿಗೆ 6 ಕೋಟಿ ರೂ.: ಎಸ್.ಆರ್ ವಿಶ್ವನಾಥ್

  • ಅಂಬೇಡ್ಕರ್ ಕಟೌಟ್ ಅಳವಡಿಸುವಾಗ ವಿದ್ಯುತ್ ಸ್ಪರ್ಶದಿಂದ ಮೂವರ ಸಾವು

    ಅಂಬೇಡ್ಕರ್ ಕಟೌಟ್ ಅಳವಡಿಸುವಾಗ ವಿದ್ಯುತ್ ಸ್ಪರ್ಶದಿಂದ ಮೂವರ ಸಾವು

    ಮೈಸೂರು: ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬೃಹತ್ ಕಟೌಟ್ ಅಳವಡಿಸುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶದಿಂದ ಮೂವರು ಮೃತಪಟ್ಟು ಆರು ಜನರು ಗಂಭೀರವಾಗಿ ಗಾಯಗೊಂಡಿರೋ ಘಟನೆ ಜಿಲ್ಲೆಯ ಕ್ಯಾತಮಾರನಹಳ್ಳಿಯಲ್ಲಿ ನಡೆದಿದೆ.

    ಮಣಿಕಂಠ (27), ಕುಮಾರ್ (40), ಶಿವು (25) ಸಾವನ್ನಪ್ಪಿದ ದುರ್ದೈವಿಗಳು. ಕ್ಯಾತಮಾರನಹಳ್ಳಿಯ ಎಕೆ ಕಾಲೋನಿಯ ನಿಂಬೆಯಣ್ಣ ವೃತ್ತದ ಬಳಿ ಗುರುವಾರ ರಾತ್ರಿ ಅಂಬೇಡ್ಕರ್ ಅವರ ಬೃಹತ್ ಕಟೌಟ್ ಅಳವಡಿಸಲು ಸಿದ್ಧತೆ ಮಾಡಲಾಗಿತ್ತು. ಅಂಬೇಡ್ಕರ್ ಅವರ 30 ಅಡಿ ಎತ್ತರದ ಕಟೌಟ್‍ಗೆ ಕಬ್ಬಿಣದ ಫ್ರೇಂ ಹಾಕಿ ಕಟ್ಟಲಾಗುತ್ತಿತ್ತು. ಕಬ್ಬಿಣದ ಫ್ರೇಂ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

    ಗಂಭೀರವಾಗಿ ಗಾಯಗೊಂಡವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನ ಕೆಆರ್ ಆಸ್ಪತ್ರೆಯ ಶವಾಗಾರದಲ್ಲಿದ್ದ ಮೃತದೇಹಗಳನ್ನ ಇರಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಅಲ್ಲದೆ, ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದರು.