Tag: dr. giridhar babu

  • ತಕ್ಷಣವೇ ಬೆಡ್ ವ್ಯವಸ್ಥೆ ಮಾಡಿ – ಐಸಿಎಂಆರ್ ಸದಸ್ಯ ಗಿರಿಧರ್ ಬಾಬು ಎಚ್ಚರಿಕೆ

    ತಕ್ಷಣವೇ ಬೆಡ್ ವ್ಯವಸ್ಥೆ ಮಾಡಿ – ಐಸಿಎಂಆರ್ ಸದಸ್ಯ ಗಿರಿಧರ್ ಬಾಬು ಎಚ್ಚರಿಕೆ

    ಬೆಂಗಳೂರು: ಸಿಲಿಕಾನ್ ಸಿಟಿ ಭಯಾನಕ ಸ್ಥಿತಿಯಲ್ಲಿದ್ದು ತಕ್ಷಣವೇ ಬೆಡ್ ವ್ಯವಸ್ಥೆ ಮಾಡಿ ಎಂದು ಐಸಿಎಂಆರ್ ಸದಸ್ಯ ಡಾ.ಗಿರಿಧರ್ ಬಾಬು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬೆಂಗಳೂರು ಬಿಕ್ಕಟ್ಟಿನಲ್ಲಿದೆ. ಹೀಗಾಗಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳಿಗೆ ಸರ್ಕಾರ ಕೂಡಲೇ ಬೆಡ್ ವ್ಯವಸ್ಥೆ ಕಲ್ಪಿಸಿಕೊಡಲಿ. ಗಂಭೀರ ಸ್ಥಿತಿಯಲ್ಲಿದ್ದವರಿಗೆ ಸೂಕ್ತ ಚಿಕಿತ್ಸೆ ಸಿಗುವಂತಾಗಬೇಕಿದೆ ಎಂದು ಗಿರಿಧರ್ ಬಾಬು ಸರ್ಕಾರವನ್ನು ಎಚ್ಚರಿಸಿದ್ದಾರೆ.

    ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸ್ಥಿತಿ ಚಿಂತಾಜನಕವಾಗಿದೆ. ಬೆಡ್, ಆಕ್ಸಿಜನ್ ಸಿಗದೆ ಜನ ನರಳಾಡುತ್ತಿದ್ದಾರೆ. ಅಲ್ಲದೆ ಜನ ಸರ್ಕಾರಕ್ಕೆ ಬೆಡ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಳ್ಳುವ ಮೂಲಕ ಕಣ್ಣೀರು ಹಾಕುತ್ತಿದ್ದಾರೆ.