Tag: dr. bharath shetty

  • ವಿಜಯದ ಬೆನ್ನಲ್ಲೇ ದೀಪಕ್ ರಾವ್ ಮನೆಗೆ ಡಾ.ವೈ ಭರತ್ ಶೆಟ್ಟಿ ಭೇಟಿ

    ವಿಜಯದ ಬೆನ್ನಲ್ಲೇ ದೀಪಕ್ ರಾವ್ ಮನೆಗೆ ಡಾ.ವೈ ಭರತ್ ಶೆಟ್ಟಿ ಭೇಟಿ

    ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೊಯಿದ್ದೀನ್ ಬಾವಾ ಅವರನ್ನು ಬಿಜೆಪಿಯ ಡಾ.ಭರತ್ ಶೆಟ್ಟಿ ಸೋಲಿಸಿದ್ದಾರೆ.

    ಭರತ್ ಶೆಟ್ಟಿ ಜಯಗಳಿಸುತ್ತಿದ್ದಂತೆಯೇ ಇತ್ತೀಚೆಗೆ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳ ದಾಳಿಗೆ ತುತ್ತಾಗಿದ್ದ ದೀಪಕ್ ರಾವ್ ಕುಟುಂಬಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದೀಪಕ್ ತಾಯಿ ಭರತ್ ಶೆಟ್ಟಿಯವರ ಹಣೆಗೆ ಪ್ರಸಾದ ಹಚ್ಚಿ, ದೃಷ್ಟಿ ತೆಗೆದು, ಹೂಹಾರ ಹಾಕಿ ಸ್ವಾಗತಿಸಿದ್ದಾರೆ.

    ನಂತರ ಭರತ್ ಅವರು ದೀಪಕ್ ಫೋಟೋಗೆ ಹೂ ಹಾರ ಹಾಕಿ, ಕೈಮುಗಿದಿದ್ದಾರೆ. ಈ ಸಂದರ್ಭದಲ್ಲಿ ದೀಪಕ್ ತಾಯಿ ಕಣ್ಣೀರು ಸುರಿಸಿದ್ದು, ಭರತ್ ಶೆಟ್ಟಿ ಸಾಂತ್ವಾನ ನೀಡಿದ್ದಾರೆ.

    ಸದ್ಯ ಕರ್ನಾಟಕ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಏಕೈಕ ಪಕ್ಷವಾಗಿ ಹೊರಹೊಮ್ಮಿದ್ದು, ದಕ್ಷಿಣ ಕನ್ನಡದ ಒಟ್ಟು 8 ಕ್ಷೇತ್ರಗಳ ಪೈಕಿ 7ರಲ್ಲಿ ಜಯಭೇರಿ ಬಾರಿಸಿದೆ.

    ದಕ್ಷಿಣ ಕನ್ನಡ ಜಿಲ್ಲೆ ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದಾರೆ?
    * ಮೂಡಬಿದಿರೆ – ಉಮಾನಾಥ್ ಕೊಟ್ಯಾನ್(ಬಿಜೆಪಿ) – ಅಭಯ್‍ಚಂದ್ರ ಜೈನ್(ಕಾಂಗ್ರೆಸ್)
    * ಮಂಗಳೂರು ಉತ್ತರ – ಡಾ.ಭರತ್ ಶೆಟ್ಟಿ(ಬಿಜೆಪಿ) – ಮೊಯಿದ್ದೀನ್ ಬಾವಾ(ಕಾಂಗ್ರೆಸ್)
    * ಮಂಗಳೂರು ದಕ್ಷಿಣ – ವೇದವ್ಯಾಸ ಕಾಮತ್(ಬಿಜೆಪಿ) – ಜೆ.ಆರ್.ಲೋಬೋ(ಕಾಂಗ್ರೆಸ್)
    * ಮಂಗಳೂರು – ಯು.ಟಿ ಖಾದರ್(ಕಾಂಗ್ರೆಸ್) – ಸಂತೋಷ್ ಕುಮಾರ್ ರೈ(ಬಿಜೆಪಿ)
    * ಬಂಟ್ವಾಳ – ಯು.ರಾಜೇಶ್ ನಾಯ್ಕ್(ಬಿಜೆಪಿ) – ಬಿ.ರಮಾನಾಥ್ ರೈ(ಕಾಂಗ್ರೆಸ್)
    * ಪುತ್ತೂರು – ಸಂಜೀವ ಮಠಂದೂರ್(ಬಿಜೆಪಿ) – ಶಕುಂತಳಾ ಶೆಟ್ಟಿ(ಕಾಂಗ್ರೆಸ್)
    * ಸುಳ್ಯ – ಎಸ್.ಅಂಗಾರ(ಬಿಜೆಪಿ) – ಬಿ.ರಘು(ಕಾಂಗ್ರೆಸ್)
    * ಬೆಳ್ತಂಗಡಿ – ಹರೀಶ್ ಪೂಂಜಾ(ಬಿಜೆಪಿ) – ವಸಂತ ಬಂಗೇರ(ಕಾಂಗ್ರೆಸ್)