Tag: Dr Ambedkar

  • ಮುಸ್ಲಿಮರ ತುಷ್ಟಿಕರಣಕ್ಕೆ ಕಾಂಗ್ರೆಸ್‌ನಿಂದ ಸಂವಿಧಾನ ಬದಲಾವಣೆ – ಇದು ನಮ್ಮ ದೇಶದ ದುರಂತ: ಸಿಟಿ ರವಿ

    ಮುಸ್ಲಿಮರ ತುಷ್ಟಿಕರಣಕ್ಕೆ ಕಾಂಗ್ರೆಸ್‌ನಿಂದ ಸಂವಿಧಾನ ಬದಲಾವಣೆ – ಇದು ನಮ್ಮ ದೇಶದ ದುರಂತ: ಸಿಟಿ ರವಿ

    ಬೆಂಗಳೂರು: ಮುಸ್ಲಿಮರ (Muslims) ತುಷ್ಟಿಕರಣಕ್ಕೆ ಡಾ ಬಿ ಆರ್ ಅಂಬೇಡ್ಕರ್ (Dr Ambedkar) ರಚಿಸಿದ ಸಂವಿಧಾನವನ್ನೇ (Constitution) ಬದಲಾಯಿಸಲು ಡಿಕೆ ಶಿವಕುಮಾರ್‌ (DK Shivakumar) ಬದಲಾಯಿಸುತ್ತಾರೆ ಎಂದು ಪರಿಷತ್‌ ಸದಸ್ಯ ಸಿಟಿ ರವಿ ಆಕ್ರೋಶ ಹೊರ ಹಾಕಿದ್ದಾರೆ.

     

    ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು, ತುಷ್ಟಿಕರಣ ನೀತಿಯ ಪರಾಕಾಷ್ಠೆ. ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಾಯಿಸುತ್ತಾರಂತೆ ಉಪಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರು. ಮುಸ್ಲಿಮರ ತುಷ್ಟಿಕರಣಕ್ಕೆ, ಡಾ ಬಿ ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾಯಿಸುವ ಮಟ್ಟಕ್ಕೂ ಇಳಿಯುತ್ತಾರೆ ಕಾಂಗ್ರೆಸ್ಸಿಗಳು ಅನ್ನುವುದು ನಮ್ಮ ದೇಶದ ದುರಂತ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ಡಿಕೆ ಶಿವಕುಮಾರ್‌ ಈ ರೀತಿಯ ಹೇಳಿಕೆ ನೀಡಯವ ಮೂಲಕ ಕಾಂಗ್ರೆಸ್ಸ್‌ನವರಿಗೆ ನಾಚಿಕೆಯಾಗಬೇಕು ಎಂದು ಸಿಟ್ಟು ಹೊರಹಾಕಿದ್ದಾರೆ.