Tag: dr

  • ಲೋಕಸಭೆಯಲ್ಲಿ ನಮ್ಮ ಲೆಕ್ಕಾಚಾರ ಏರುಪೇರಾಗಿದೆ; ಬಿಜೆಪಿ-ಜೆಡಿಎಸ್ ಮೈತ್ರಿ ಸಕ್ಸಸ್ ಆಗಿದೆ: ಪರಂ

    ಲೋಕಸಭೆಯಲ್ಲಿ ನಮ್ಮ ಲೆಕ್ಕಾಚಾರ ಏರುಪೇರಾಗಿದೆ; ಬಿಜೆಪಿ-ಜೆಡಿಎಸ್ ಮೈತ್ರಿ ಸಕ್ಸಸ್ ಆಗಿದೆ: ಪರಂ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Loksabha Elctions 2024) ನಮ್ಮ ನಿರೀಕ್ಷೆಯಷ್ಟು ಸ್ಥಾನ ಗಳಿಸದೇ ಲೆಕ್ಕ ತಪ್ಪಿದ್ದೇವೆ ಎಂದು ಡಾ.ಜಿ ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

    ಬೆಂಗಳೂರಿನಲ್ಲಿ‌ ಮಾತಾಡಿದ ಡಾ.ಜಿ.ಪರಮೇಶ್ವರ್ (G Parameshwar), ಬಿಜೆಪಿಗೂ ಬಹುಮತ ಬಂದಿಲ್ಲ. ಮೋದಿಯವರ ಪರವೂ ಜನಮನ್ನಣೆ ಸಿಕ್ಕಿಲ್ಲ. ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬರಲಿಲ್ಲ.‌ ಕನಿಷ್ಟ 20 ಸ್ಥಾನ ಬರುವ‌ ನಿರೀಕ್ಷೆ ಇತ್ತು. ನಮ್ಮ ಲೆಕ್ಕಾಚಾರ ತಪ್ಪಿದೆ, ಆದರೂ ಒಂದರಿಂದ ಒಂಭತ್ತು ಸ್ಥಾನ ಗೆದ್ದಿದ್ದೇವೆ.‌ ಫಲಿತಾಂಶ ಸಮಾಧಾನ ತಂದಿದೆ, ಆದ್ರೆ ಸಂತೋಷ ತಂದಿಲ್ಲ ಅಂದ್ರು.

    ಇಡೀ ಎಕ್ಸಿಟ್ ಪೋಲ್ ಒನ್ ಸೈಡ್ ಆಗಿ ಬಿಂಬಿಸಲಾಗಿತ್ತು. ಎಕ್ಸಿಟ್ ಪೋಲ್ ಫಲಿತಾಂಶ ಬಂದ ನಂತರ ಸುಳ್ಳಾಯ್ತು. ಇಂಡಿಯಾ ಒಕ್ಕೂಟ ಅತೀ ಹೆಚ್ಚು ಸೀಟುಗಳನ್ನು ಗೆದ್ದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷಗಳು ಇನ್ನೂ ಗಟ್ಟಿಯಾಗಿದೆ ಅಂತ ಫಲಿತಾಂಶ ತೋರಿಸಿದೆ. ಇನ್ನು ನಮ್ಮ ವೋಟ್ ಶೇರ್ ಹೆಚ್ಚಾಗಿದೆ. ರಾಜ್ಯದ ಜನ ನಮಗೂ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ. ಗ್ಯಾರಂಟಿಗಳಿಂದ ಜನ ಸಮಾಧಾನ ಆಗಿಲ್ಲ ಅನ್ಸತ್ತೆ. ಮುಂದಿನ ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಳ್ತೇವೆ. ಹಳೇ ಮೈಸೂರು ಭಾಗದಲ್ಲಿ ನಮ್ಮ ನಿರೀಕ್ಷೆ ಏರುಪೇರಾಗಿದೆ. ಸ್ವಲ್ಪ ಪ್ರಯತ್ನ ಮಾಡಿದ್ರೆ ಇನ್ನೂ ನಾಲ್ಕು ಸ್ಥಾನ ಬರಬಹುದಿತ್ತು. ನಮ್ಮ ಲೆಕ್ಕಾಚಾರವೂ ತುಮಕೂರಲ್ಲಿ ಕೈಹಿಡಿಯಲಿಲ್ಲ. ಮುದ್ದಹನುಮೇಗೌಡ ಗೆಲ್ತಾರೆ ಅನ್ಕೊಂಡಿದ್ದೆವು. ಆದ್ರೆ ಗೆಲ್ಲಲಿಲ್ಲ, ಲೆಕ್ಕಾಚಾರ ಏರುಪೇರಾಗಿದೆ ಎಂದು ಇದೇ ವೇಳೆ ಪರಮೇಶ್ವರ್ ತಿಳಿಸಿದರು.‌

    2019 ರ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸಕ್ಸಸ್ ಆಗಿರಲಿಲ್ಲ. ಈಗ ಬಿಜೆಪಿ ಜೆಡಿಎಸ್ ಮೈತ್ರಿ ಅವರಿಗೆ ಕೈಹಿಡಿದಿದೆ. ಇವತ್ತಿಗೂ ಕೇಂದ್ರದಲ್ಲಿ ಇಂಡಿಯಾ ಕೂಟ ಸರ್ಕಾರ ಮಾಡುವ ಅವಕಾಶ ಇದೆ. ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಮನಸು ಮಾಡಿ ಇಂಡಿಯಾ ಕೂಟಕ್ಕೆ ಬೆಂಬಲಿಸಿದರೆ ಸಾಧ್ಯವಿದೆ ಎಂದು ಹೇಳಿದರು.

    ಸಿಬಿಐ ಪತ್ರ ಬರೆದರೆ ವಾಲ್ಮಿಕಿ ಅಕ್ರಮ ಪ್ರಕರಣ ವಹಿಸ್ತೇವೆ: ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ಎಂಟ್ರಿ ಆಗಿರುವ ಬಗ್ಗೆ ಮಾತಾಡಿದ ಪರಮೇಶ್ವರ್, ಸಿಬಿಐನವರಿಗೆ ಯೂನಿಯನ್ ಬ್ಯಾಂಕಿನವರು ಪತ್ರ ಬರೆದಿದ್ರು. ಮೂರು ಕೋಟಿಗೂ ಹೆಚ್ಚು ಅಕ್ರಮ ಆಗಿದ್ರೆ ಸಿಬಿಐ ಸೂಮೋಟೋ ದೂರು ದಾಖಲು ಮಾಡಬಹುದು. ಬ್ಯಾಂಕ್ ನವರು ಪತ್ರ ಬರೆದಿದ್ದರು. ಈಗ ಸಿಬಿಐನವರು ತನಿಖೆ ಮಾಡ್ತಾರೆ.

    ನಾವು ಸಿಬಿಐನವ್ರಿಗೆ ತನಿಖೆ ವಹಿಸಬೇಕಾಗುತ್ತದೆ. ಅದಕ್ಕೂ ಮೊದಲು ಸಿಬಿಐ ನವ್ರು ನಮಗೆ ಪತ್ರ ಬರೆಯಬೇಕು. ಸರ್ಕಾರ ಕೇಸ್ ಸಿಬಿಐಗೆ ವಹಿಸಲು ಕ್ಯಾಬಿನೆಟ್ ನಲ್ಲಿ ತೀರ್ಮಾನ ತಗೋಬೇಕಾಗುತ್ತೆ. ಈಗ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ನಡೆಸಲು ಆಗಲ್ಲ. ಮೊದಲು ಸಿಬಿಐನವರು ಪತ್ರ ಬರೆಯಲಿ, ಆಮೇಲೆ ನೋಡ್ತೇವೆ. ಪ್ರಕರಣ ಸಿಬಿಐಗೆ ವಹಿಸುವ ಬಗ್ಗೆ ಕ್ಯಾಬಿನೆಟ್ ನಲ್ಲಿ ತೀರ್ಮಾನ. ಸಿಬಿಐನವರು ಅಗತ್ಯ ಬಿದ್ದರೆ ಸಚಿವ ನಾಗೇಂದ್ರರಿಗೂ ವಿಚಾರಣೆಗೆ ನೊಟೀಸ್ ಕೊಡಬಹುದು. ಸಿಬಿಐ ನಿಯಮದಂತೆ ತನಿಖೆ ನಡೆಯಬಹುದು ಅಂತ ಪರಮೇಶ್ವರ್ ತಿಳಿಸಿದರು.

  • ಏ.14 ರಂದು ಸರ್ಕಾರಿ ಶಾಲೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಕಡ್ಡಾಯ; ಸರ್ಕಾರ ಆದೇಶ

    ಏ.14 ರಂದು ಸರ್ಕಾರಿ ಶಾಲೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಕಡ್ಡಾಯ; ಸರ್ಕಾರ ಆದೇಶ

    ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು (Ambedkar Jayanti 2024) ಕಡ್ಡಾಯವಾಗಿ ಆಚರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಇದೇ ತಿಂಗಳು ಏಪ್ರಿಲ್ 10 ರಂದು ಮುಕ್ತಾಯವಾಗಲಿದೆ. ಆದರೆ ಏಪ್ರಿಲ್ 14ರಂದು ‘ಡಾ. ಬಿ. ಆರ್ ಅಂಬೇಡ್ಕರ್ ಜಯಂತಿಯಿದ್ದು, ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಜಯಂತಿ ಆಚರಿಸುವಂತೆ ರಾಜ್ಯ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ದಕ್ಷಿಣ ಕನ್ನಡ ನಂ.1 – ಬಾಲಕಿಯರೇ ಮೇಲುಗೈ

    ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ, ಮುಖ್ಯ ಶಿಕ್ಷಕರು, ಶಿಕ್ಷಕರು, ಸಿಬ್ಬಂದಿ, ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ವಿದ್ಯಾರ್ಥಿಗಳ ಸಹಿಭಾಗಿತ್ವದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸುವಂತೆ ಎಲ್ಲಾ ಶಾಲಾ ಮುಖ್ಯಸ್ಥರಿಗೆ, ಕ್ಷೇತ್ರ ಶಿಕ್ಷಾಣಧೀಕರಿಗಳಿಗೆ, ಉಪ ನಿರ್ದೇಶಕರಿಗೆ ತಿಳಿಸಿದೆ.

  • ಜಯದೇವ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ಆಯ್ಕೆ

    ಜಯದೇವ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ಆಯ್ಕೆ

    ಬೆಂಗಳೂರು: ಜಯದೇವ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ಅವರು ಆಯ್ಕೆಯಾಗಿದ್ದಾರೆ.

    69 ವಯಸ್ಸಾಗಿರುವ ಡಾ.ರವೀಂದ್ರನಾಥ್ ಅವರು ಜಯದೇವ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿದ್ದರು. ಇದೀಗ ಇಂದು ಜಯದೇವ ಆಸ್ಪತ್ರೆ (Jayadeva Hospital) ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ (Dr C.N Manjunath) ಅವಧಿ ಮುಕ್ತಾಯ ಹಿನ್ನೆಲೆ ಅವರ ಸ್ಥಾನಕ್ಕೆ ಡಾ.ರವೀಂದ್ರನಾಥ್ (Dr Ravindranath) ಅವರನ್ನು ನೇಮಿಸಲಾಗಿದೆ.

    ಡಾ.ಸಿ.ಎನ್ ಮಂಜುನಾಥ್ (Dr CN Manjunath ಅವರ ಸೇವಾವಧಿ ಇಂದಿಗೆ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಮಂಗಳವಾರ ಜಯದೇವ ಆಸ್ಪತ್ರೆ (Jayadeva Hospital) ಸಿಬ್ಬಂದಿ ಹೃದಯಪೂರ್ವಕ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿದ್ದರು. ಈ ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಸಿಬ್ಬಂದಿ ಮಂಜುನಾಥ್ ಅವರಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಆರತಿ ಬೆಳಗಿ ಗೌರವಿಸಿದ್ದರು.

    ಬೀಳ್ಕೊಡುಗೆ ಸಮಾರಂಭದಲ್ಲಿ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿದ್ದ ಡಾ.ಸಿ.ಎನ್‌ ಮಂಜುನಾಥ್‌, ಜಯದೇವ ಹೃದ್ರೋಗ ಆಸ್ಪತ್ರೆ ಜನರ ಆಸ್ಪತ್ರೆಯಾಗಿದೆ. ನಾವು ಪಂಚತಾರಾ ಖಾಸಗಿ ಆಸ್ಪತ್ರೆಯಂತೆ ಮಾಡುವ ಗುರಿ ಇತ್ತು. ಅದು 100 ಕ್ಕೆ100 ಆಗಿದೆ. ಇಲ್ಲಿ ಪ್ರತಿಯೋಬ್ಬರಿಗೂ ಸೇವಾ ಮನೋಭಾವ ಬೆಳಸಲಾಗಿದೆ. ಸರ್ಕಾರದ ಸಹಕಾರ, ದಾನಿಗಳ ಸಹಕಾರದಿಂದ ಇವತ್ತು ಈ ಮಟ್ಟಕ್ಕೆ ಆಸ್ಪತ್ರೆ ಬೆಳೆದಿದೆ. ನಾನು ಇಲ್ಲಿಗೆ ಬಂದಾಗ 300 ಹಾಸಿಗೆ ಇತ್ತು, ಈಗ 2,000 ಸಾವಿರ ಹಾಸಿಗೆಗಳಿವೆ. 3,500 ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. 16 ವರ್ಷಗಳಲ್ಲಿ 75 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇನೆ. 8 ಲಕ್ಷ ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ಇಷ್ಟು ವರ್ಷಗಳ ಸೇವೆ ಸಂತೋಷ ತಂದಿದೆ ತಮ್ಮ ನೆನಪುಗಳನ್ನ ಹಂಚಿಕೊಂಡಿದ್ದರು.

  • ಆ ವಿವೇಕಾನಂದ ಬೇರೆ, ಈ ವಿವೇಕಾನಂದ ಬೇರೆ: ಸಿದ್ದರಾಮಯ್ಯ ಸ್ಪಷ್ಟನೆ

    ಆ ವಿವೇಕಾನಂದ ಬೇರೆ, ಈ ವಿವೇಕಾನಂದ ಬೇರೆ: ಸಿದ್ದರಾಮಯ್ಯ ಸ್ಪಷ್ಟನೆ

    ಮೈಸೂರು: ಡಾ. ಯತೀಂದ್ರ ವೈರಲ್ ವೀಡಿಯೋದಲ್ಲೂ ಉಲ್ಲೇಖವಾಗಿದ್ದ ವಿವೇಕಾನಂದ ಬೇರೆ, ಈ ವಿವೇಕಾನಂದ ಬೇರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದ ಡಾ.ಯತೀಂದ್ರ ಸಿದ್ದರಾಮಯ್ಯ ವೀಡಿಯೋ ಕುರಿತು ಪ್ರತಿಕ್ರಿಯಿಸಿದರು. ಆ ವಿವೇಕಾನಂದ (Vivekananda) ಬೇರೆ ಈ ವಿವೇಕಾನಂದ ಬೇರೆ. ಅವರು ಬಿಐಓ, ಇವರು ಇನ್ಸ್ ಪೆಕ್ಟರ್. ಬಿಇಓ ನಮ್ಮ ಕ್ಷೇತ್ರವರು ಈಗ ವರ್ಗಾವಣೆ ಆಗಿರುವುದು ಚಾಮರಾಜ ಕ್ಷೇತ್ರ ವ್ಯಾಪ್ತಿ. ಯಾರು ವರ್ಗಾವಣೆ ಮಾಡಿಸಿಕೊಂಡರು ಅನ್ನುವುದನ್ನು ಸ್ಥಳೀಯ ಶಾಸಕರನ್ನು ಕೇಳಿ ಎಂದು ವಿವೇಕಾನಂದ ಹೆಸರಿಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

    ಈ ಹಿಂದೆ ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆಗೊಂಡಿದ್ದ ವಿವೇಕಾನಂದ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ. ರಾಜ್ಯಾದ್ಯಂತ ಸದ್ದು ಮಾಡಿದ್ದ ಯತೀಂದ್ರ (Yathindra Siddaramaiah) ವಿಡಿಯೋದಲ್ಲಿ ವಿವೇಕಾನಂದ ಹೆಸರು ಪ್ರಸ್ತಾಪವಾಗಿತ್ತು. ವಿವೇಕಾನಂದನಾ? ಎಲ್ಲಿಗೆ? ಎಂದು ಯತೀಂದ್ರ ಪ್ರಶ್ನೆ ಮಾಡಿದ್ದರು.

    ನಾನು ಕೊಟ್ಟಿದ್ದ 4-5 ಮಾತ್ರ ಮಾಡಿ ಎಂದು ಯತೀಂದ್ರ ಹೇಳಿದ್ದರು. ಈಗ ಮೈಸೂರಲ್ಲಿ ನಾಲ್ವರು ಇನ್ಸ್ ಪೆಕ್ಟರ್ ಗಳ ವರ್ಗಾವಣೆ ನಡೆದಿದ್ದು ಈ ನಾಲ್ವರಲ್ಲಿ ಒಬ್ಬರ ಹೆಸರು ವಿವೇಕಾನಂದ ಆಗಿದ್ದರಿಂದ ಇವರೇನಾ ಅವರು ಎಂಬ ಪ್ರಶ್ನೆ ಎದ್ದಿತ್ತು. ಇದನ್ನೂ ಓದಿ: ಮೈಸೂರಿಗೆ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿವೇಕಾನಂದ ವರ್ಗಾವಣೆ – ಯತೀಂದ್ರ ಪ್ರಸ್ತಾಪಿಸಿದ್ದ ವಿವೇಕಾನಂದ ಇವರೇನಾ?

  • ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಕುಮಾರ್ ಮೀಸೆಗೆ ಹೆದರಿದ್ರಾ ಜಿ.ಪರಮೇಶ್ವರ್?

    ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಕುಮಾರ್ ಮೀಸೆಗೆ ಹೆದರಿದ್ರಾ ಜಿ.ಪರಮೇಶ್ವರ್?

    ತುಮಕೂರು: ಚುನಾವಣಾ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಆದರೆ ಇತ್ತ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಡಿಕೊಂಡು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಇದೀಗ ಮಾಜಿ ಡಿಸಿಎಂ ಜಿ.ಪರಮೇಶ್ವರ್ (Dr. G Parameshwar) ಅವರ ಕಣ್ಣು ಕೊರಟಗೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯ ಮೀಸೆ ಮೇಲೆ ಬಿದ್ದಂಗಿದೆ. ಈ ಮೂಲಕ ಅನಿಲ್ ಕುಮಾರ್ (Anil Kumar) ಮೀಸೆಗೆ ಪರಂ ಹೆದರಿದ್ರಾ ಅನ್ನೋ ಪ್ರಶ್ನೆಯೊಂದು ಮೂಡಿದೆ.

    ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ನಡೆದ ಬೆಂಬಲಿತ ಒಕ್ಕಲಿಗ ಮುಖಂಡರ ಸಮಾವೇಶದಲ್ಲಿ ಮಾತನಾಡಿದ ಅವರು, ಬನ್ರೋ ನನ್ ಮಕ್ಳಾ ಯಾರು ಬರ್ತೀರೋ ಬನ್ನಿ ಎಂದು ಡಾ.ಜಿ.ಪರಮೇಶ್ವರ್ ಸವಾಲೆಸೆದರು. ಯಾವ ಮೀಸೆನೂ ಇಲ್ಲ ಗೀಸೆಗೂ ನಾನು ಹೆದರೋಲ್ಲ ಎಂದು ಪರೋಕ್ಷವಾಗಿ ಅನಿಲ್ ಕುಮಾರ್ ಗೆ ಟಾಂಗ್ ನೀಡಿದರು. ಸಾವಿರ ಜನ ಕರೆದ್ರು ಬೆಂಗಳೂರಿಗೆ ಬನ್ನಿ ಅಂತಾ. ಆದರೆ ನಾನು ಕೊರಟಗೆರೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡ್ತೀನಿ ಎಂದರು. ಇದನ್ನೂ ಓದಿ: ಚುನಾವಣೆಗೆ‌ ಸ್ಪರ್ಧಿಸಲು ಗೂಳಿಹಟ್ಟಿ ಶೇಖರ್‌ಗೆ ದೇಣಿಗೆ ನೀಡಿದ ಮತದಾರರು

    ಇಷ್ಟು ವರ್ಷ ಕೊರಟಗೆರೆಯಲ್ಲಿ ಕಾಂಗ್ರೆಸ್‍ಗೆ ಕೇವಲ ಜೆಡಿಎಸ್ (JDS) ಮಾತ್ರ ಪ್ರತಿಸ್ಪರ್ಧಿ ಆಗಿತ್ತು. ಈಗ ಬಿಜೆಪಿಯ ಅನಿಲ್ ಕುಮಾರ್ ಪ್ರಬಲ ಪೈಪೋಟಿ ಕೊಡುವ ಸಾಧ್ಯತೆ ಇದೆ. ಭಾನುವಾರ ಬಿ.ವೈ ವಿಜಯೇಂದ್ರ (B Y Vijayendra), ತೇಜಸ್ವಿ ಸೂರ್ಯ (Tejaswi Surya)ಉಪಸ್ಥಿತಿಯಲ್ಲಿ ಅನಿಲ್ ಕುಮಾರ್ ಅವರು ಬೃಹತ್ ರ್ಯಾಲಿ ನಡೆಸಿದ್ದರು. ಹಾಗಾಗಿ ಪದೇ ಪದೇ ಅನಿಲ್ ಕುಮಾರ್ ಮೀಸೆ ಬಗ್ಗೆ ಪರಂ ತಮ್ಮ ಭಾಷಣದುದ್ದಕ್ಕೂ ಲೇವಡಿ ಮಾಡಿದರು.

  • ತಂದೆಗಾಗಿ ಅಖಾಡಕ್ಕಿಳಿದ ಡಾ.ಯತೀಂದ್ರ

    ತಂದೆಗಾಗಿ ಅಖಾಡಕ್ಕಿಳಿದ ಡಾ.ಯತೀಂದ್ರ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರಾಜಕೀಯ ಜೀವನದ ಕೊನೆ ಆಟದಲ್ಲಿ ಮಗನ ಗೆಲುವಿಗೆ ಸಂಕಲ್ಪ ತೊಟ್ಟಿರುವಂತಿದೆ. ಮತ್ತೊಂದೆಡೆ ಡಾ.ಯತೀಂದ್ರ (Dr. Yathindra) ಸಿದ್ದರಾಮಯ್ಯ ಪರವಾಗಿ ಅಖಾಡಕ್ಕೆ ಇಳಿದಿದ್ದರಂತೆ.

    ಅಪ್ಪನ ರಾಜಕೀಯ ಉತ್ತುಂಗದ ಜೊತೆಗೆ ತಮ್ಮ ರಾಜಕೀಯ ಭವಿಷ್ಯದ ಸೇಫ್ ಗೇಮ್‍ಗೆ ಪ್ಲಾನ್ ಮಾಡಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಅಲ್ಲೊಂದು ಕೈ ನೋಡೋಣ ಆಗದಿದ್ದರೆ ಇದು ಇದ್ದೇ ಇದೆ ಎಂಬ ಹೊಸ ಲೆಕ್ಕಾಚಾರ ಶುರು ಮಾಡಿದ್ದಾರಂತೆ.

    ತಂದೆ ಸಿದ್ದರಾಮಯ್ಯ ಪರವಾಗಿ ಡಾ.ಯತೀಂದ್ರ ಅಖಾಡಕ್ಕಿಳಿದಿದ್ದಾರೆ. ತಂದೆಗೆ ಕೊನೆ ಚುನಾವಣೆಯಲ್ಲಿ ವರುಣಾ ಕ್ಷೇತ್ರ (Varuna Constituency) ಬಿಟ್ಟು ಕೊಡುವ ಸಾಧ್ಯತೆ ಇದೆ. ಅತ್ತ ಕೋಲಾರದ್ಲೂ ಸೀಕ್ರೆಟ್ ಸರ್ವೇ ಆರಂಭಿಸಿರುವ ಯತೀಂದ್ರ, ಕೋಲಾರದಲ್ಲಿ ಸಿದ್ದರಾಮಯ್ಯ ಸೇಫ್ ಆದ್ರೆ ವರುಣಾದಲ್ಲಿ ಯತೀಂದ್ರ ಸೇಫ್ ಎಂಬ ಲೆಕ್ಕಾಚಾರವಿದೆ. ಇದನ್ನೂ ಓದಿ: ರಾಜಕೀಯ ಎದುರಾಳಿಗಳಿಗೆ ಸಿದ್ದರಾಮಯ್ಯ ಪ್ರತ್ಯಾಸ್ತ್ರ- ಕ್ಷೇತ್ರ ಘೋಷಣೆ ಮುಂದೂಡಿಕೆಗೆ ಮಾಸ್ಟರ್‌ಪ್ಲಾನ್‌

    ಸಿದ್ದರಾಮಯ್ಯ ಕೊನೆ ಚುನಾವಣೆಯಲ್ಲಿ ವರುಣಾ ಕ್ಷೇತ್ರವನ್ನ ಅಪ್ಪನಿಗೆ ಬಿಟ್ಟು ಕೊಡಲು ಮುಂದಾಗಿದ್ದಾರೆ. ಅದರ ಮಧ್ಯದಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧೆಗೂ ಒತ್ತಡ ಹೆಚ್ಚುತ್ತಿದೆ. ಹಾಗೇನಾದರು ಸಿದ್ದರಾಮಯ್ಯಗೆ ಕೋಲಾರ ಸೇಫಾಗಿದೆಯಾ….?, ಇದನ್ನ ತಿಳಿಯರು ಕೋಲಾರದಲ್ಲಿ ಡಾ.ಯತೀಂದ್ರ ಸೀಕ್ರೆಟ್ ಸರ್ವೆ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.

    ಅಪ್ಪನ ವಿಚಾರದಲ್ಲಿ ರಿಸ್ಕ್ ತಗೆದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಕೋಲಾರದಲ್ಲಿ ಡಾ.ಯತೀಂದ್ರ ಟೀಂ ಕಂಪ್ಲೀಟ್ ಸರ್ವೆ ನಡೆಸುತ್ತಿದೆ. ಕೋಲಾರದಲ್ಲಿ ಸಿದ್ದರಾಮಯ್ಯ ಸೇಫಾದರೆ ವರುಣಾದಲ್ಲಿ ಯತೀಂದ್ರ ಸೇಫ್ ಅನ್ನೋದು ಈ ಸರ್ವೆಯ ಲೆಕ್ಕಾಚಾರವಾಗಿದೆ. ಕೋಲಾರದಲ್ಲಿ ಸಿದ್ದರಾಮಯ್ಯ ಸಂಪೂರ್ಣ ಸೇಫ್ ಎನ್ನಿಸಿದರೆ ಯತೀಂದ್ರ ವರಿಣಾದಿಂದ ಸ್ಪರ್ಧೆ ಮಾಡಬಹುದು. ಇಲ್ಲದಿದ್ದರೆ ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.

    ಅಪ್ಪನಿಗಾಗಿ ಕ್ಷೇತ್ರ ತ್ಯಾಗಕ್ಕೆ ಮುಂದಾದ ಡಾ.ಯತೀಂದ್ರ ಕೊನೆಯ ಪ್ರಯತ್ನವಾಗಿ ಕೋಲಾರದಲ್ಲಿ ಸೀಕ್ರೆಟ್ ಸರ್ವೆ ಆರಂಭಿಸಿದ್ದಾರೆ. ಹಾಗೇನಾದರೂ ಸರ್ವೆ ಪ್ರಕಾರ ಕೋಲಾರ ಸೇಫ್ ಆದರೆ ಅಪ್ಪ ಮಗ ಇಬ್ಬರ ಸ್ಪರ್ಧೆ ಬಗ್ಗೆಯೂ ಅಂತಿಮ ತೀರ್ಮಾನ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಪುನೀತ್ ಅಭಿಮಾನಿಗಳಿಗೆ ಗುಡ್‍ನ್ಯೂಸ್- ಅಪ್ಪು ಜನ್ಮದಿನ ಇನ್ಮೇಲೆ ಸ್ಫೂರ್ತಿ ದಿನ

    ಪುನೀತ್ ಅಭಿಮಾನಿಗಳಿಗೆ ಗುಡ್‍ನ್ಯೂಸ್- ಅಪ್ಪು ಜನ್ಮದಿನ ಇನ್ಮೇಲೆ ಸ್ಫೂರ್ತಿ ದಿನ

    ಬೆಂಗಳೂರು: ನಟ ದಿ. ಡಾ.ಪುನೀತ್ ರಾಜ್‍ಕುಮಾರ್ (Dr. Puneeth RajKumar) ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಗುಡ್‍ನ್ಯೂಸ್ ಕೊಟ್ಟಿದೆ.

    ಹೌದು. ಪುನೀತ್ ರಾಜ್‍ಕುಮಾರ್ ಜನ್ಮದಿನವನ್ನು ಸ್ಫೂರ್ತಿ ದಿನ (Inspiration Day) ಎಂದು ಆಚರಣೆ ಮಾಡೋದಾಗಿ ಘೋಷಿಸಿದೆ. ಮಾರ್ಚ್ 17ರಂದು ಅಂದರೆ ದಿವಂಗತ ಪುನೀತ್ ರಾಜ್‍ಕುಮಾರ್ ಹುಟ್ಟಿದ ದಿನ (Birthday) ದಂದು ರಾಜ್ಯ ಸರ್ಕಾರ ವತಿಯಿಂದಲೇ ಸ್ಫೂರ್ತಿ ದಿನವನ್ನು ಆಚರಣೆ ಮಾಡಲಾಗುತ್ತದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಚಿವ ಸುನಿಲ್ ಕುಮಾರ್ (Sunil Kumar), ಸ್ಫೂರ್ತಿ ದಿನ ನಡೆಸಬೇಕೆಂಬ ನನ್ನ ಮನವಿಗೆ ಸ್ಪಂದಿಸಿರುವ ಸಿಎಂಗೆ ಧನ್ಯವಾದಗಳು. ಲಕ್ಷಾಂತರ ಯುವಕರಿಗೆ, ಅಭಿಮಾನಿಗಳಿಗೆ ಇದು ಸ್ಫೂರ್ತಿಯಾಗಲಿದೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ವಿವಿಯಿಂದ ಪುನೀತ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್

    ಟ್ವಿಟ್‍ನಲ್ಲೇನಿದೆ..?: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರಿಗೆ ಧನ್ಯವಾದಗಳು. ಅಪ್ಪು ಜನ್ಮದಿನ, ಮಾರ್ಚ್ 17 ಇನ್ನು ಮುಂದೆ ಸ್ಪೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೆಎಎಸ್ ಅಧಿಕಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಡಾ. ರವಿ ಎಂ. ತಿರ್ಲಾಪೂರ ಆಯ್ಕೆ

    ಕೆಎಎಸ್ ಅಧಿಕಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಡಾ. ರವಿ ಎಂ. ತಿರ್ಲಾಪೂರ ಆಯ್ಕೆ

    ಬೆಂಗಳೂರು: ಕರ್ನಾಟಕ ಆಡಳಿತ ಸೇವಾ ಅಧಿಕಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಡಾ. ರವಿ ಎಂ. ತಿರ್ಲಾಪೂರ ಆಯ್ಕೆಯಾಗಿದ್ದಾರೆ.

    ಇಂದು ನಡೆದ ಕೆಎಎಸ್ ಅಧಿಕಾರಿಗಳ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಸಂಘದ ಉಪಾಧ್ಯಕ್ಷರಾಗಿ ಎಂ.ಕೆ ಜಗದೀಶ್, ಕಾರ್ಯದರ್ಶಿಯಾಗಿ ಡಾ. ಬಿ. ಆರ್ ಹರೀಶ್ ನಾಯ್ಕ್, ಜಂಟಿ ಕಾರ್ಯದರ್ಶಿಯಾಗಿ ಡಾ. ನಾಗೇಂದ್ರ ಎಫ್ ಹಿನ್ನಳ್ಳಿ, ಖಜಾಂಚಿಯಾಗಿ ಡಾ. ಸಂತೋಷ್ ಬಿರಾದಾರ ಇವರನ್ನು ಸೂಚಿಸಲಾಗಿದೆ. ಇದನ್ನೂ ಓದಿ: ಯುಪಿಯಲ್ಲಿ ಬೀದರ್ ಪ್ರವಾಸಿಗರಿಗೆ ಅಪಘಾತ – ಸಂತ್ರಸ್ತರ ನೆರವಿಗೆ ಯೋಗಿ ಜೊತೆ ಬೊಮ್ಮಾಯಿ ಮಾತುಕತೆ

    ಕಾರ್ಯಕಾರಿ ಸಮಿತಿ ಸದ್ಯರಾಗಿ ಎನ್ ಮಹೇಶ್ ಬಾಬು, ಬಿ. ಎನ್ ವರಪ್ರಸಾದ್ ರೆಡ್ಡಿ, ಹೆಚ್. ಆರ್ ಶಿವಕುಮಾರ್, ಎಸ್.ಎಂ ಆಶಾ ಪರ್ವಿನ್, ಶ್ರೀಪಾದ್ ಎಸ್.ಬಿ, ಎಲಿಷ ಆಂಡ್ರೂಸ್, ಎಂ.ಎಸ್ ಎನ್ ಬಾಬು, ಸಿ.ಎನ್ ಮಂಜುನಾಥ್, ಬಸವರಾಜ್ ಆರ್ ಸೋಮಣ್ಣನವರ್, ಶೈಲಜಾ ಪ್ರಿಯದರ್ಶಿನಿ, ಬಿ.ಸಿ ಶಿವಾನಂದ ಮೂರ್ತಿ, ಸಿ.ಎಲ್ ಶಿವಕುಮಾರ್, ವಿ. ಸೋಮಶೇಖರ್, ಡಾ. ಮಧು ಎನ್.ಎನ್, ನಾಗ ಪ್ರಶಾಂತ್, ಕುನಾಲ್ ಕೆ, ಸ್ವಾಮಿ ಬಿ.ಎನ್ ಹಾಗೂ ಲೋಕೇಶ್ ಕೆ.ಎನ್ ಆಯ್ಕೆಯಾಗಿದ್ದಾರೆ.

  • ಮಾನವಹಕ್ಕುಗಳ ಪ್ರತಿಷ್ಠಾನದ ಡಾ. ಶಾನುಭಾಗ್‍ಗೆ ಹೃದಯಾಘಾತ- ಕೆಎಂಸಿಯಲ್ಲಿ ಚಿಕಿತ್ಸೆ

    ಮಾನವಹಕ್ಕುಗಳ ಪ್ರತಿಷ್ಠಾನದ ಡಾ. ಶಾನುಭಾಗ್‍ಗೆ ಹೃದಯಾಘಾತ- ಕೆಎಂಸಿಯಲ್ಲಿ ಚಿಕಿತ್ಸೆ

    ಉಡುಪಿ: ಇಲ್ಲಿನ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಪಬ್ಲಿಕ್ ಹೀರೋ ಹಿರಿಯ ನಾಗರೀಕರ ಹಕ್ಕುಗಳ ಹೋರಾಟಗಾರ, ಡಾ. ರವೀಂದ್ರನಾಥ ಶಾನುಭಾಗ್ ಅವರಿಗೆ ಹೃದಯಾಘಾತ ಆಗಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಶಾನುಭಾಗ್ ಅವರಿಗೆ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಗುರುವಾರ ರಾತ್ರಿ ಮಣಿಪಾಲದ ಮನೆಯಲ್ಲಿ ಶಾನುಭಾಗ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಕುಟುಂಬಸ್ಥರು ಅವರನ್ನು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿಗೆ ದಾಖಲು ಮಾಡಿದ್ದಾರೆ. ಆಂಜಿಯೋಪ್ಲಾಸ್ಟ್ ಮಾಡಲಾಗಿದ್ದು, ಶಾನುಭಾಗ್ ಚಿಕಿತ್ಸೆ ಗೆ ಸ್ಪಂದಿಸುತ್ತಿದ್ದಾರೆ. ಸ್ಟಂಟ್ ಅಳವಡಿಸಲಾಗಿದೆ. ತಜ್ಞ ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮುಂಬೈನಲ್ಲಿ ಮಾಸ್ಕ್ ಕಡ್ಡಾಯವಲ್ಲ

    ಶಾನುಭಾಗ್ ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸಲಾಗಿದೆ. ಎರಡು ಮೂರು ದಿನಗಳ ಚಿಕಿತ್ಸೆಯ ನಂತರ ಡಿಸ್ಚಾರ್ಜ್ ಮಾಡಬಹುದು ಎಂದು ಕೆಎಂಸಿ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

     

  • ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ- ಹಾಡಿನ ಮೂಲಕ ಅಪ್ಪುಗೆ ಪೊಲೀಸ್ ನಮನ

    ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ- ಹಾಡಿನ ಮೂಲಕ ಅಪ್ಪುಗೆ ಪೊಲೀಸ್ ನಮನ

    ಮಡಿಕೇರಿ: ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ದಿನ ಅವರ ಕೊನೆಯ ಚಿತ್ರ ‘ಜೇಮ್ಸ್’ ವಿಶ್ವದ್ಯಾಂತ ತೆರೆಕಂಡು ಭರ್ಜರಿ ಪ್ರದರ್ಶನಗೊಳ್ಳುತ್ತಿದೆ. ಪುನೀತ್ ರಾಜ್‍ಕುಮಾರ್ ಅವರನ್ನು ‘ಜೇಮ್ಸ್’ ಸಿನಿಮಾದಲ್ಲಿ ನೋಡಿ ಅಭಿಮಾನಿಗಳು ಭಾವುಕವಾಗುತ್ತಿರುವುದು ಸಾಮಾನ್ಯವಾಗಿದೆ. ಇಲ್ಲೊಬ್ಬ ವೃತ್ತಿ ನಿರೀಕ್ಷಕ ಮಹೇಶ್ ಸಹ ಅವರೊಂದಿಗಿನ ಒಡನಾಟ ನೆನಪಿಸಿಕೊಂಡು ಭಾವುಕರಾಗಿ ಹಾಡುವ ಮೂಲಕ ಅಪ್ಪುಗೆ ನಮನ ಸಲ್ಲಿಸಿದ್ದಾರೆ.

    ಅಪ್ಪು ಅಗಲಿ ನಾಲ್ಕು ತಿಂಗಳು ಕಳೆದ್ರು ಅಪ್ಪುವಿನ ಮೇಲೆ ಅಭಿಮಾನಿಗಳು ಇಟ್ಟಿರುವ ಪ್ರೀತಿ ಕಡಿಮೆಯಾಗಿಲ್ಲ. ಅವರನ್ನು ಕಳೆದುಕೊಂಡ ಮೇಲೆ ಪೆÇಲೀಸ್ ಅಧಿಕಾರಿಗೆ ಅಪ್ಪು ಮಾಡಿರುವ ಸಮಾಜಸೇವೆ ನೆನೆದು ಭಾವುಕರಾಗಿ ಡಾ.ರಾಜ್‍ಕುಮಾರ್ ಹಾಡಿರುವ ರೀತಿಯಲ್ಲಿಯೇ ಹಾಡನ್ನು ಹಾಡಿ ಅಚ್ಚರಿ ಮೂಡಿಸಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರದ ವೃತನೀರಿಕ್ಷಕರಾಗಿ ಕರ್ತವ್ಯ ಮಾಡುತ್ತಿರುವ ಮಹೇಶ್ ದೇವರು, ಪುನೀತ್ ರಾಜ್‍ಕುಮಾರ್ ಬಗ್ಗೆ ಅಪಾರವಾದ ಗೌರವ ಹಾಗೂ ಅಭಿಮಾನ ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಮೊದಲ ದಿನವೇ 30 ಕೋಟಿ ಕಲೆಕ್ಷನ್ – 100 ಕೋಟಿ ಕ್ಲಬ್ ಸೇರುತ್ತಾ ಜೇಮ್ಸ್..?

    ಪುನೀತ್ ರಾಜ್‍ಕುಮಾರ್ ಕೊನೆ ಚಿತ್ರ ‘ಜೇಮ್ಸ್’ ದೃಶ್ಯಗಳನ್ನು ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಮಹೇಶ್ ಅವರು ಸ್ಥಳದಲ್ಲಿ ಇದ್ದರು. ಈ ವೇಳೆ ಅಪ್ಪು ಅವರೊಂದಿಗೆ ಒಂದಷ್ಟು ಸಮಯ ಕಳೆದಿದ್ದಾರೆ. ಆ ನೆನಪು ಇಂದಿಗೂ ಅವರನ್ನು ಕಾಡುತ್ತಿದೆ.

    ಪ್ರಸ್ತುತ ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಬಗ್ಗೆ ಇಟ್ಟಿರುವ ಅಭಿಮಾನ ಕಂಡ ಪೆÇಲೀಸ್ ಅಧಿಕಾರಿ ಮಹೇಶ್ ದೇವರು ‘ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ, ಇಂದು ಮಾತನಾಡಿದೆ ಪ್ರೀತಿ ಮೌನವಾಗಿದೆ. ನೀನೆ ಜೀವ ಜೀವನ ನೀನೆ ಪ್ರೇಮ ಕಾರಣ’ ಎಂದು ಸಾಂಗ್ ಹಾಡುವ ಮೂಲಕ ಅಪ್ಪುಗೆ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್

    ಮಹೇಶ್ ಅವರು ಹಾಡಿರುವ ಈ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಅಗುತ್ತಿದೆ.