Tag: Dowry

  • ಪೊಲೀಸ್ ಪೇದೆ ದಾಂಪತ್ಯದಲ್ಲಿ ಕಲಹ – ಪತ್ನಿ ಆತ್ಮಹತ್ಯೆ

    ಪೊಲೀಸ್ ಪೇದೆ ದಾಂಪತ್ಯದಲ್ಲಿ ಕಲಹ – ಪತ್ನಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡ-ಹೆಂಡತಿ ಜಗಳವಾಡಿದ್ದು, ಪರಿಣಾಮ ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಣಕನೂರು ಗ್ರಾಮದಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆ ಸುರೇಂದ್ರ ಅವರ ಪತ್ನಿ ಸ್ನೇಹಾ(25) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಸುರೇಂದ್ರ ಸಹ ಚಾಕುವಿನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಸ್ತುತ ಸುರೇಂದ್ರ ಅವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದನ್ನೂ ಓದಿ: ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!

    ಸ್ನೇಹಾ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿಲಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಮೃತಳ ಪೋಷಕರು ಹಾಗೂ ಸಂಬಂಧಿಕರ ಆಗಮನಕ್ಕಾಗಿ ಕಾದಿದ್ದು, ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ.

  • 82 ವರ್ಷದ ವೃದ್ಧನಿಂದ 78ರ ವೃದ್ಧೆ ಮೇಲೆ ವರದಕ್ಷಿಣೆ ಕಿರುಕುಳ!

    82 ವರ್ಷದ ವೃದ್ಧನಿಂದ 78ರ ವೃದ್ಧೆ ಮೇಲೆ ವರದಕ್ಷಿಣೆ ಕಿರುಕುಳ!

    ಲಕ್ನೋ: 78 ವರ್ಷದ ವೃದ್ಧೆಯೊಬ್ಬಳಿಗೆ 82ರ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಯ ಮೇಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಕಾನ್ಪುರದ ಚಕೇರಿ ಪ್ರದೇಶದಲ್ಲಿ ವೃದ್ಧ ಪತಿ, ಪತ್ನಿಗೆ ಕಿರುಕುಳ ನೀಡುತ್ತಿದ್ದಾನೆ. ಸಂತ್ರಸ್ತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆಕೆಯ ದೂರಿನ ಮೇರೆಗೆ ಪೊಲೀಸರು ವೃದ್ಧೆಯ ಪತಿ ಗಣೇಶ್ ನರೇನ್ ಶುಕ್ಲಾ ಮತ್ತು ಅವರ ಅಳಿಯ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    BRIBE

    ವೃದ್ಧೆಯ ದೂರಿನ ಪ್ರಕಾರ, ಪತಿ ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ. ಪತಿಯ ಕಾಟ ತಾಳದ ವೃದ್ಧೆ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ. ಇನ್ನು ಪತಿ ನರೇನ್ ಶುಕ್ಲಾ ಆತನ ಅಳಿಯ ಸೇರಿದಂತೆ ಒಟ್ಟು ಆರು ಜನರ ಮೇಲೆ ಕೇಸ್ ದಾಖಲಿಸಿದ್ದಾರೆ.

    ವೃದ್ಧ ದಂಪತಿಯ ಪುತ್ರ ರಜನೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ತನ್ನ ತಾಯಿ ಎಲ್ಲಾ ಕುಟುಂಬ ಸದಸ್ಯರೊಂದಿಗೆ ಚೆನ್ನಾಗಿ ವರ್ತಿಸುತ್ತಾಳೆ. ಆದರೆ ಕೆಲವು ಸಂಬಂಧಿಕರ ಪ್ರಭಾವದಿಂದ  ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ಓದಿ: ಯಾವುದೇ ಒತ್ತಡವಿಲ್ಲ, ಸ್ವ-ಇಚ್ಛೆಯಿಂದ ಆತ್ಮಹತ್ಯೆ- ಸೆಲ್ಫಿ ವೀಡಿಯೋ ಮಾಡಿ ಯುವಕ ಬಾವಿಗೆ ಹಾರಿದ!

    MONEY

    ಇದೇ ವೇಳೆ ವಕೀಲ ಶಿವೇಂದ್ರ ಕುಮಾರ್ ಪಾಂಡೆ ಮಾತನಾಡಿ, ಮೂಲಗಳ ಪ್ರಕಾರ, ಇಡೀ ವಿಷಯವು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದೆ. ಮದುವೆಯಾಗಿ ಇಷ್ಟು ವರ್ಷಗಳಾದರೂ ವರದಕ್ಷಿಣೆ ಕಿರುಕುಳದ ಆರೋಪದಲ್ಲಿ ಅರ್ಥವಿಲ್ಲ. ಆದ್ದರಿಂದ ದಂಪತಿ ನಡುವಿನ ಪರಸ್ಪರ ಮಾತುಕತೆಯಿಂದ ವಿವಾದವನ್ನು ಇತ್ಯರ್ಥಪಡಿಸಬಹುದು ಎಂದು ಪಾಂಡೆ ಹೇಳಿದರು.

  • 10 ಲಕ್ಷ ರೂ. ವರದಕ್ಷಿಣೆ ಕೇಳಿದ ವರನಿಗೆ ಮದುವೆ ಮನೆಯಲ್ಲೇ ಬಿತ್ತು ಗುಸಾ

    10 ಲಕ್ಷ ರೂ. ವರದಕ್ಷಿಣೆ ಕೇಳಿದ ವರನಿಗೆ ಮದುವೆ ಮನೆಯಲ್ಲೇ ಬಿತ್ತು ಗುಸಾ

    ಲಕ್ನೋ: ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ ಪ್ರದೇಶದಲ್ಲಿ ವರನೊಬ್ಬ ಮದುವೆ ಸಮಯದಲ್ಲಿ ಹೆಚ್ಚು ಹಣ ಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾನೆ. ಈ ಪರಿಣಾಮ ಅಲ್ಲಿದ್ದ ಜನರು ಆತನನ್ನು ಥಳಿಸಿದ್ದು, ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡಲಾಗಿದೆ.

    ಸಾಹಿಬಾಬಾದ್‍ನ ಬ್ಯಾಂಕ್ವೆಟ್ ಹಾಲ್‍ನಲ್ಲಿ ಶುಕ್ರವಾರ ರಾತ್ರಿ ಆರತಕ್ಷತೆ ಸಮಾರಂಭ ನಡೆಯುತ್ತಿದ್ದು, ಈ ವೇಳೆ ವರನ ಕಡೆಯವರು 10 ಲಕ್ಷ ರೂ. ವರದಕ್ಷಿಣೆ ಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ವಧುವಿನ ಕಡೆಯವರು ವರನ ಜೊತೆ ಕೆಟ್ಟದಾಗಿ ಮಾತನಾಡು ಪ್ರಾರಂಭಿಸಿದ್ದಾರೆ. ನಂತರ ವರನನ್ನು ಮಂಟಪದಿಂದ ಎಳೆದೊಯ್ದು ಥಳಿಸಲು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ:  ಎರಡು ವರ್ಷಗಳಲ್ಲಿ ಯಾದಗಿರಿ ಜಿಲ್ಲಾ ಪಂಚಾಯತ್ 57 ನೌಕರರ ವಿರುದ್ಧ ಶಿಸ್ತುಕ್ರಮ

    ಈ ವೇಳೆ ಆತನ ಸಂಬಂಧಿ ವಧುವಿನ ಕಡೆಯವರನ್ನು ತಡೆದಿದ್ದಾರೆ. ಗಲಾಟೆ ನಡೆಯುತ್ತಿರಬೇಕಾದರೆ ಸಂಭಾಗಣದಲ್ಲಿದ್ದ ಜನರು ಈ ಘಟನೆಯನ್ನು ಫೋನ್ ನಲ್ಲಿ ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಅದು ಅಲ್ಲದೇ ವರನ ವಿರುದ್ಧ ದೂರು ಸಹ ದಾಖಲಾಗಿದೆ.

    ವರನಿಗೆ 10 ಲಕ್ಷ ರೂ!
    ವಧುವಿನ ಪೋಷಕರಿಗೆ ವರನ ತಂದೆ ವರದಕ್ಷಿಣೆಯಾಗಿ 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದು, ಒಂದು ವೇಳೆ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮದುವೆಯನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ – 13 ಮಂದಿಗೆ 20 ವರ್ಷ ಜೈಲು

    ಅದು ಅಲ್ಲದೇ ವಧುವಿನ ಮನೆಯವರು ಈಗಾಗಲೇ 3 ಲಕ್ಷ ರೂಪಾಯಿ ನಗದು ಮತ್ತು 1 ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರವನ್ನು ವರನಿಗೆ ನೀಡಿದ್ದು, ಆದರೂ ಅವರು ಇನ್ನು ಹೆಚ್ಚು ಹಣಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ ನಮಗೆ ಇನ್ನು ಹೆಚ್ಚು ಕೊಡಲು ಸಾಧ್ಯವಾಗಲ್ಲ ಎಂದು ವರನ ಕಡೆಯವರಿಗೆ ಎಷ್ಟೇ ಮನವೊಲಿಸಿದರೂ ಅವರಿಗೆ ಮನವರಿಕೆ ಆಗಲಿಲ್ಲ. ಇದರಿಂದ ಕೋಪಗೊಂಡ ವಧುವಿನ ಮನೆಯವರು ವರನಿಗೆ ಥಳಿಸಿದ್ದಾರೆ.

    ವರನನ್ನು ಮುಝಮ್ಮಿಲ್ ಎಂದು ಗುರುತಿಸಲಾಗಿದ್ದು, ಆಗ್ರಾ ನಿವಾಸಿಯಾಗಿದ್ದಾನೆ. ಈತ ಈ ಹಿಂದೆ 2-3 ಬಾರಿ ಮದುವೆಯಾಗಿದ್ದಾನೆ ಎಂದು ವಧುವಿನ ಕಡೆಯವರು ಆರೋಪಿಸಿದ್ದಾರೆ.

  • ಸೆಲ್ಫಿ ವೀಡಿಯೋ ಮಾಡಿ ಅಳಿಯನ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಂಡ ಮಾವ

    ಸೆಲ್ಫಿ ವೀಡಿಯೋ ಮಾಡಿ ಅಳಿಯನ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಂಡ ಮಾವ

    ಹಾಸನ: ಸೆಲ್ಫಿ ವೀಡಿಯೋ ಮಾಡಿ ಅಳಿಯನ ಮನೆ ಬಾಗಿಲಲ್ಲಿ ಮಾವ ನೇಣಿಗೆ ಶರಣಾದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

    ದೊಡ್ಡಗದ್ದವಳ್ಳಿ ಗ್ರಾಮದ ನಾಗರಾಜ್ (55) ಮೃತ ವ್ಯಕ್ತಿ. ತನ್ನ ಮಗಳ ಸಾವಿಗೆ ಅಳಿಯ ಹಾಗೂ ಅವನ ಮನೆಯವರೇ ಕಾರಣ ಎಂದು ಹೇಳಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ನಾಗರಾಜ್ ಮಗಳು ಹೇಮಶ್ರೀ ಅ.30ರಂದು ಸಾವನ್ನಪ್ಪಿದ್ದಳು. ಇಂದು ತಿಂಗಳ ತಿಥಿ ಕಾರ್ಯ ಮಾಡಲು ನಾಗರಾಜ್ ಬಂದಿದ್ದರು. ಆದರೆ ಅಳಿಯ ಪ್ರವೀಣ್ ಹಾಗೂ ಕುಟುಂಬಸ್ಥರು ಮನೆಗೆ ಬೀಗ ಹಾಕಿ ಹೋಗಿದ್ದರು. ಬೆಳಗ್ಗೆಯಿಂದ ಕಾದು ನಂತರ ಮೊಬೈಲ್‍ನಲ್ಲಿ ವೀಡಿಯೋ ಮಾಡಿ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ನನ್ನ ಮಗಳು ಸಾವನ್ನಪ್ಪಿದ್ದಾಳೆ. ನನ್ನ ಮಗಳ ಸಾವಿಗೆ ಪತಿ ಪ್ರವೀಣ್, ಅತ್ತೆ ಭದ್ರಮ್ಮ ಕಾರಣ. ನನಗೆ, ನನ್ನ ಮಗಳಿಗೆ ಆದ ಪರಿಸ್ಥಿತಿ ಇನ್ಯಾರಿಗೂ ಆಗಬಾರದು. ಸಾಯುವವರೆಗೂ ಅವರನ್ನು ಜೈಲಿಗೆ ಹಾಕಿ ಎಂದು ಮೊಬೈಲ್ ನಲ್ಲಿ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಒಂದೂವರೆ ವರ್ಷದ ಹಿಂದೆ ಮಾಳೆಗೆರೆ ಗ್ರಾಮದ ಪ್ರವೀಣ್‍ಗೆ ಹೇಮಶ್ರೀಯನ್ನು ಮದುವೆ ಮಾಡಿಕೊಡಲಾಗಿತ್ತು. ಪ್ರವೀಣ್ ಆಂಧ್ರಪ್ರದೇಶದಲ್ಲಿ ಬೇಕರಿ ಇಟ್ಟುಕೊಂಡಿದ್ದರು. ಮದುವೆಯಾದಾಗಿನಿಂದಲೂ ಅತ್ತೆ ಭದ್ರಮ್ಮ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ 1.50 ಲಕ್ಷ ನಗದು, 40 ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ನೀಡಿದ್ದರು. ಇದನ್ನೂ ಓದಿ: ಮಂಡ್ಯದಲ್ಲಿ ಪಡಿತರ ಅಕ್ಕಿ ಪಾಲಿಶ್ ಮಾಡಿ ವಿದೇಶಕ್ಕೆ ರಫ್ತು 

    ಗರ್ಭಿಣಿ ವೇಳೆ ಹೇಮಶ್ರೀಯನ್ನು ಪ್ರವೀಣ್ ತವರು ಮನೆಗೆ ಕಳುಹಿಸಿದ್ದರು. ಅ.29ರಂದು ಹೊಟ್ಟೆಯಲ್ಲಿಯೆ ಮಗು ಸಾವನ್ನಪ್ಪಿತ್ತು. ಇದಾದ ಎರಡು ದಿನಗಳ ಬಳಿಕ ಹೇಮಶ್ರೀ ಸಾವನ್ನಪ್ಪಿದ್ದರು. ಗಂಡನ ಊರು ಮಾಳೆಗೆರೆಯಲ್ಲಿ ಹೇಮಶ್ರೀ ಅಂತ್ಯಕ್ರಿಯೆ ನಡೆಸಲಾಗಿತ್ತು.

    11 ದಿನದ ತಿಥಿ ಕಾರ್ಯದ ದಿನ ಗ್ರಾಮದ ಹಿರಿಯರು ಪಂಚಾಯ್ತಿ ನಡೆಸಿದ್ದರು. ವರದಕ್ಷಿಣೆಯಾಗಿ ನೀಡಿದ್ದ ಹಣ, ಒಡವೆಯನ್ನು ತಿಂಗಳ ತಿಥಿಯಂದು ವಾಪಸ್ ನೀಡುವಂತೆ ತೀರ್ಮಾನ ಮಾಡಿದ್ದರು. ಇದಕ್ಕೆ ಪ್ರವೀಣ್ ಹಾಗೂ ತಾಯಿ ಭದ್ರಮ್ಮ ಒಪ್ಪಿದ್ದರು. ಈ ಹಿನ್ನೆಲೆಯಲ್ಲಿ ನಾಗರಾಜ್ ಮಗಳ ಮನೆಗೆ ಹೂವು, ತಿಥಿ ಕಾರ್ಯ ಮಾಡಲು ಎಲ್ಲಾ ಸಾಮಗ್ರಿಗಳನ್ನು ತಂದಿದ್ದರು. ಆದರೆ ಪ್ರವೀಣ್ ಮನೆಗೆ ಬೀಗ ಹಾಕಿ ತೆರಳಿದ್ದರು. ಮಧ್ಯಾಹ್ನದವರೆಗೂ ಕಾದು ಮನೆಯ ಬಾಗಿಲು ಮುಂದೆಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರ – ನಾಳೆ ಮಧ್ಯಾಹ್ನವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ – ಪತಿ ಮೇಲೆ ಅನುಮಾನ

    ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ – ಪತಿ ಮೇಲೆ ಅನುಮಾನ

    ಕಲಬುರಗಿ: ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾದ ಘಟನೆ ಕಲಬುರಗಿ ನಗರದ ಪ್ರಗತಿ ಕಾಲೋನಿಯಲ್ಲಿ ನಡೆದಿದೆ.

    ಜ್ಯೋತಿ(22) ಶವವಾಗಿ ಪತ್ತೆಯಾದ ಮಹಿಳೆ. ಪತಿಯೇ ಪತ್ನಿ ಕೊಲೆ ಮಾಡಿ ಫ್ಯಾನಿಗೆ ನೇಣು ಹಾಕಿದ್ದಾನೆ ಎಂಬ ಆರೋಪ ಕೇಳಿಬರುತ್ತಿದೆ. ಕಲಬುರಗಿ ನಗರದ ಪ್ರಗತಿ ಕಾಲೋನಿಯಲ್ಲಿ ವಾಸವಾಗಿದ್ದ ಜ್ಯೋತಿ ಮತ್ತು ಪತಿ ಲೋಕೇಶ್, ಏಳು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಕೆಕೆಆರ್‌ಟಿಸಿ ಯ ಸೇಡಂ ಡಿಪೋದಲ್ಲಿ ಚಾಲಕನಾಗಿರೋ ಲೋಕೇಶ್ ಕಲಬುರಗಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇದನ್ನೂ ಓದಿ:  ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ನೆಲಮಂಲಗದಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಬ್ರೇಕ್

    ಲೋಕೇಶ್ ಮತ್ತು ಅವರ ಕುಟುಂಬವರು ಜ್ಯೋತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಫ್ಯಾನಿಗೆ ಶವವನ್ನು ನೇತು ಹಾಕಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಹಣಕ್ಕಾಗಿ ಲೋಕೇಶ್ ಪ್ರತಿದಿನ ಜ್ಯೋತಿಯನ್ನು ಪೀಡಿಸುತ್ತಿದ್ದ. ಅದು ಅಲ್ಲದೇ ಇವರ ಮದುವೆ ಸಮಯದಲ್ಲಿ 120 ಗ್ರಾಂ ಬಂಗಾರ, ಐದು ಲಕ್ಷ ರೂ. ವರದಕ್ಷಿಣೆಯಾಗಿ ತೆಗೆದುಕೊಂಡಿದ್ದರೆ ಎಂಬ ಆರೋಪ ಕೇಳಿಬರುತ್ತಿದೆ.

    ಕಲಬುರಗಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಲೋಕೇಶ್ ಮತ್ತು ಅವರ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದೆ.

  • ಗದ್ದೆಗೆ ಹೋಗೋ ನೆಪದಲ್ಲಿ ಬಾವಿಗೆ ತಳ್ಳಿ ಹೆಂಡ್ತಿ ಕೊಲೆ – ಅಪರಾಧಿಗೆ ಜೀವಾವಧಿ ಶಿಕ್ಷೆ

    ಗದ್ದೆಗೆ ಹೋಗೋ ನೆಪದಲ್ಲಿ ಬಾವಿಗೆ ತಳ್ಳಿ ಹೆಂಡ್ತಿ ಕೊಲೆ – ಅಪರಾಧಿಗೆ ಜೀವಾವಧಿ ಶಿಕ್ಷೆ

    ಚಾಮರಾಜನಗರ:  ಪತ್ನಿಯನ್ನು ಕೊಲೆಗೈದ ಪತಿಗೆ ಚಾಮರಾಜನಗರ  ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

    2017 ರ ಫೆಬ್ರವರಿ 22ರಂದು ಗದ್ದೆ ನೋಡಲು ಹೋಗೋಣ ಬಾ ಎಂದು ಪತ್ನಿಯನ್ನು ಕರೆದೊಯ್ದು ಬಾವಿಗೆ ತಳ್ಳಿ ಕೊಲೆ ಮಾಡಿದ್ದ ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆ ಆತನಿಗೆ ಜೀವಾವಧಿ ಶಿಕ್ಷೆ ಹಾಗೂ 45 ಸಾವಿರ ರೂ. ದಂಡವನ್ನು ನ್ಯಾಯಾಧೀಶ ಲೋಕಪ್ಪ ವಿಧಿಸಿದ್ದಾರೆ. ಈ ಸಂಬಂಧ ಮೃತಳ ತಾಯಿ ಸಾವಿತ್ರಮ್ಮ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸರ್ಕಾರಿ ಅಭಿಯೋಜಕರಾಗಿ ಉಷಾ ವಾದ ಮಂಡಿಸಿದ್ದರು.

    ವಿವಾಹವಾದ ಕೇವಲ 9 ದಿನಕ್ಕೆ ವರದಕ್ಷಿಣೆ ಕೊಡಲಿಲ್ಲವೆಂದು ಪತ್ನಿ ಕೊಂದ ಪೊಲೀಸ್ ಕಾನ್ಸ್‌ಟೇಬಲ್‌ಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಅಪರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಲೋಕಪ್ಪ ಜೀವಾವಧಿ ಶಿಕ್ಷೆ ವಿಧಿಸಲು ಆದೇಶಿಸಿದ್ದಾರೆ. ಇದನ್ನೂ ಓದಿ: ಖಾಸಗಿ ಶಾಲೆಗಳ ದುಬಾರಿ ಶುಲ್ಕ- ರಮೇಶ್ ಕುಮಾರ್ ಉಪಸ್ಥಿತಿಯಲ್ಲಿ ಚಿಂತನ ಮಂಥನ

    ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ ವೆಂಕಟೇಶ್ ಶಿಕ್ಷೆಗೊಳಗಾದ ಅಪರಾಧಿ. ಈತ ವೃತ್ತಿಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ ಆಗಿದ್ದು, ಕೊಳ್ಳೇಗಾಲ ತಾಲೂಕಿನ ಧನಗೆರೆ ಗ್ರಾಮದ ಸಾವಿತ್ರಮ್ಮರವರ ಪುತ್ರಿ ದಿವ್ಯಾರನ್ನು 2017ರ ಫೆಬ್ರವರಿ 2ರಂದು ವಿವಾಹ ಮಾಡಿಕೊಂಡಿದ್ದ. ಮದುವೆಗೂ ಮುನ್ನ ಹುಡುಗಿಗೆ ಮಾಂಗಲ್ಯ ಸರ, ಹುಡುಗನಿಗೆ ಚಿನ್ನದ ಉಂಗುರ, 2.5 ಲಕ್ಷ ವರದಕ್ಷಿಣೆ ಕೊಡಲು ಒಪ್ಪಂದ ಮಾಡಿಕೊಂಡು ಅದರಂತೆ ವಿವಾಹಕ್ಕೂ ಮುನ್ನ ಮದುಮಗನಿಗೆ 2 ಲಕ್ಷ ಹಣ, ಚಿನ್ನದ ಉಂಗುರ ನೀಡಲಾಗಿತ್ತು. ಇದನ್ನೂ ಓದಿ: ಸರ್ಕಾರ ಕೊಟ್ಟ ಮಾತಿನಂತೆ ನಡೆಯದಿದ್ದರೇ ರಾಜ್ಯದಲ್ಲಿ ದೊಡ್ಡ ಕ್ರಾಂತಿಯಾಗಲಿದೆ: ಕಾಶಪ್ಪನವರ್

    chamarajanagara

    ಮದುವೆಯಾದ ಮೂರೇ ದಿನಕ್ಕೆ ಮಾಂಗಲ್ಯ ಸರ, ಉಳಿದ ಹಣ 50 ಸಾವಿರ ರೂ. ಹಣವನ್ನು ತರುವಂತೆ ಕಿರುಕುಳ ಕೊಟ್ಟು ಫೆಬ್ರವರಿ 20ರಂದು ಹೆಂಡತಿಯನ್ನು ತವರಿಗೆ ಕಳುಹಿಸಿದ್ದ. ಆದರೆ ಫೆಬ್ರವರಿ 22ರಂದು ಗದ್ದೆ ನೋಡಲು ಹೋಗೋಣ ಬಾ ಎಂದು ಪತ್ನಿಯನ್ನು ಕರೆದೊಯ್ದು ಬಾವಿಗೆ ತಳ್ಳಿ ಕೊಲೆ ಮಾಡಿದ್ದ. ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

  • ವರದಕ್ಷಿಣೆ ಕಿರುಕುಳ- ಪತಿಯಿಂದಲೇ ಪತ್ನಿ ಹತ್ಯೆ

    ವರದಕ್ಷಿಣೆ ಕಿರುಕುಳ- ಪತಿಯಿಂದಲೇ ಪತ್ನಿ ಹತ್ಯೆ

    ಹುಬ್ಬಳ್ಳಿ: ವರದಕ್ಷಿಣೆ ಕಿರುಕುಳ ನೀಡಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ.

    ಮಂಜುಳಾ ಗಂಜಿಗಟ್ಟಿ (30) ಮೃತ ದುರ್ದೈವಿ. ಕಳೆದ ಎರಡು ತಿಂಗಳ ಹಿಂದಷ್ಟೇ ಕರಿಬಸಪ್ಪ ಜೊತೆ ಮಂಜುಳಾ ವಿವಾಹವಾಗಿತ್ತು. ಮದುವೆ ವೇಳೆ ಸಾಕಷ್ಟು ವರೋಪಚಾರ ಕೂಡ ಮಾಡಲಾಗಿತ್ತು. ಆದರೆ ಪತಿ ಕರಿಬಸಪ್ಪ ಹಾಗೂ ಕುಟುಂಬದವರು ಮಂಜುಳಾಗೆ ನಿತ್ಯ ವರದಕ್ಷಿಣೆ ಸಂಬಂಧ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ – 11 ಮಂದಿ ಸಾವು

    ಇಂದು ಸಹ ಕಿರುಕುಳ ನೀಡಲು ಮುಂದಾಗಿದ್ದು, ವರದಕ್ಷಿಣೆ ತರಲು ಸಾಧ್ಯವಿಲ್ಲ ಎಂದು ಮಂಜುಳಾ ವಾದಿಸಿದ್ದಕ್ಕೆ ಕರಿಬಸಪ್ಪ ಹಾಗೂ ಅವರ ಕುಟುಂಬದವರು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

  • ಸೊಸೆ ಕಿರುಕುಳ ತಾಳಲಾರದೆ ಮಾವ ಆತ್ಮಹತ್ಯೆ

    ಸೊಸೆ ಕಿರುಕುಳ ತಾಳಲಾರದೆ ಮಾವ ಆತ್ಮಹತ್ಯೆ

    ಚಂಡೀಗಡ: ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಸೊಸೆಯ ಆರೋಪದ ಅವಮಾನ ತಾಳಲಾರದೆ ಬೆಂಕಿ ಹಚ್ಚಿಕೊಂಡು ಮಾವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಜಾಬ್‍ನ ಲುಧಿಯಾನದಲ್ಲಿ ನಡೆದಿದೆ.

    60 ವರ್ಷದ ವ್ಯಕ್ತಿಯೊಬ್ಬರು ತಮ್ಮ ಸೊಸೆ ಮಾಡಿದ ಸುಳ್ಳು ವರದಕ್ಷಿಣೆ ಆರೋಪದಿಂದ ಅವಮಾನಗೊಂಡಿದ್ದರು. ತಮಗೆ ತಾವೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳಂತೆ ನೋಡಿಕೊಳ್ಳುತ್ತಿದ್ದ ಸೊಸೆ ವರದಕ್ಷಿಣೆ ಆರೋಪ ಮಾಡಿ ಪೊಲೀಸರಿಗೆ ದೂರು ನೀಡುತ್ತೇವೆಂದು ಹೇಳಿದ್ದನ್ನು ಸಹಿಸಲಾಗದೆ ಆ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ – ಕೊನೆಗೂ ಮೌನ ಮುರಿದ ನಟಿ ರಾಗಿಣಿ

    ಒಂದೂವರೆ ವರ್ಷದ ಹಿಂದೆ ಅವರ ಮಗನಿಗೆ ಮದುವೆಯಾಗಿತ್ತು. 6 ತಿಂಗಳ ಮಗಳು ಕೂಡ ಇದ್ದಾಳೆ. ಮದುವೆಯಾದ ಕೂಡಲೇ ಅತ್ತೆ-ಮಾವನ ಮೇಲೆ ದೌರ್ಜನ್ಯ ನಡೆಸಲು ಶುರು ಮಾಡಿದ್ದ ಸೊಸೆ ತನ್ನ ಗಂಡನೊಂದಿಗೆ ಬೇರೆ ಮನೆಯಲ್ಲಿ ವಾಸವಾಗಿದ್ದಳು. ಇದೇ ವಿಷಯಕ್ಕೆ ಅತ್ತೆ-ಮಾವ ಹಾಗೂ ಸೊಸೆಯ ನಡುವೆ ಜಗಳವಾಗುತ್ತಿತ್ತು. ಇತ್ತೀಚೆಗೆ ಆಕೆಯ ಪೋಷಕರು ಆಕೆಯ ಅತ್ತೆ-ಮಾವನ ಮೇಲೆ ಹಲ್ಲೆಯನ್ನೂ ಮಾಡಿದ್ದರು. ಇದನ್ನೂ ಓದಿ: ದೇಶ ಬಿಟ್ಟು ತೆರಳಬೇಡಿ- ತಾಲಿಬಾನ್ ಬೆದರಿಕೆ

    60 ವರ್ಷದ ಆ ವ್ಯಕ್ತಿಗೆ ಸೊಸೆ ಹಾಗೂ ಆಕೆಯ ಮನೆಯವರು ಬೆದರಿಕೆಯೊಡ್ಡಿದ್ದರು. ಹಾಗೇ ಹೊಡೆದು ದೈಹಿಕ ಹಿಂಸೆಯನ್ನೂ ಮಾಡಿದ್ದರು. ಅಲ್ಲದೆ ಇಡೀ ಕುಟುಂಬದ ವಿರುದ್ಧ ವರದಕ್ಷಿಣೆ ಕೇಸ್ ದಾಖಲಿಸುವುದಾಗಿ ಹೆದರಿಸಿದ್ದರು. ಇದರಿಂದ ಆತಂಕಗೊಂಡಿದ್ದ ಅವರು ಈ ಸುಳ್ಳು ಕೇಸ್‍ನಿಂದ ತಮ್ಮ ಮರ್ಯಾದೆ ಹೋಗುತ್ತದೆ ಎಂಬ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಹೆಂಡತಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯನ್ನ ಮೆಚ್ಚಿಸಲು ಕಾಂಗ್ರೆಸ್ ನಾಯಕರನ್ನು ಸಿ.ಟಿ ರವಿ, ಯತ್ನಾಳ್ ಬೈಯುತ್ತಿದ್ದಾರೆ: ಶ್ರೀನಿವಾಸ್ ಬಿ.ವಿ.

    ಸೊಸೆಯ ಮನೆಯವರು ಬ್ಲಾಕ್‍ಮೇಲ್ ಮಾಡಿದ್ದರಿಂದ ನೊಂದಿದ್ದ ವ್ಯಕ್ತಿ ಮನೆಗೆ ಬಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಹೆಂಡತಿ ತಕ್ಷಣ ಪಕ್ಕದ ಮನೆಯವರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಸುಟ್ಟ ಗಾಯಗಳಿಂದ ಅವರು ಸಾವನ್ನಪ್ಪಿದ್ದರು.

  • ಆಮೆ, ಲ್ಯಾಬ್ರಡಾರ್ ಶ್ವಾನ- ವರದಕ್ಷಿಣೆ ಕೇಳಿದ ವರ

    ಆಮೆ, ಲ್ಯಾಬ್ರಡಾರ್ ಶ್ವಾನ- ವರದಕ್ಷಿಣೆ ಕೇಳಿದ ವರ

    ಮುಂಬೈ: ಮದುವೆಗೆ ಹಣ, ಕಾರು ,ಮನೆ ವರದಕ್ಷಿಣೆ ಕೇಳುವವರ ಮಧ್ಯೆ ಇಲ್ಲೊಬ್ಬ ವರ ಕೇಳಿರುವ ವರದಕ್ಷಿಣೆಯನ್ನು ಕೇಳಿದರೆ ಖಂಡಿತವಾಗಿಯೂ ನೀವು ಆಶ್ಚರ್ಯವಾಗುತ್ತೀರ.

    ನಿಮ್ಮ ಮಗಳನ್ನು ಮದುವೆ ಮಾಡಿಕೊಳ್ಳಬೇಕಾದರೆ ನನಗೆ ಬೆನ್ಜ್ ಕಾರ್ ಕೊಡಿ ಎನ್ನುವ ಈ ಕಾಲದಲ್ಲಿ ವರ ಮಾತ್ರ 21 ಕಾಲು ಬೆರಳು ಇರುವ ಆಮೆ ಹಾಗೂ ಲ್ಯಾಬ್ರಡಾರ್ ಜಾತಿಯ ಶ್ವಾನವನ್ನು ಕೇಳಿದ್ದಾನೆ. ಇದನ್ನೂ ಓದಿ: ಆಷಾಢ ಮಾಸ – 1000 ಕೆ.ಜಿ ಮೀನು, 10 ಕುರಿ ಮಗಳಿಗೆ ಗಿಫ್ಟ್ ಕೊಟ್ಟ ತಂದೆ

    ಜೌರಂಗಾಬಾದ್‍ನಲ್ಲಿ ನೆಲೆಸಿರುವ ವರನ ತಂದೆ, ತಾಯಿ ಇಂಥವೊಂದು ಬೇಡಿಕೆಯನ್ನು ಹುಡುಗಿ ಮನೆಯವರ ಮುಂದೆ ಇಟ್ಟಿದ್ದಾರೆ. ಫೆಬ್ರವರಿಯಲ್ಲಿ ಎಂಗೆಜ್‍ಮೆಂಟ್ ಮಾಡಿಕೊಂಡಿದ್ದಾರೆ. ಆಗಲೇ 2ಲಕ್ಷ ನಗದು ಹಾಗೂ 10 ಗ್ರಾಮ್ ಚಿನ್ನಾಭರಣವನ್ನು ಹುಡುಗಿ ಮನೆಯವರು ವರನಿಗೆ ಕೊಟ್ಟಿದ್ದಾರೆ. ಆದರೆ ಇದೀಗ ಮದುವೆಗೆ 21 ಕಾಲು ಬೆರಳು ಇರುವ ಆಮೆ, ಮತ್ತೆ ಲ್ಯಾಬ್ರಡಾರ್ ನಾಯಿ, ಬುದ್ಧ ವಿಗ್ರಹ ಕೊಡುವಂತೆ ಕೇಳಿದ್ದಾರೆ. ಇದನ್ನೂ ಓದಿ:  ಕುಟುಂಬ ಸಮೇತರಾಗಿ ಈ ಸಿನಿಮಾ ನೋಡಿ: ಶಿಲ್ಪಾ ಶೆಟ್ಟಿ

    21 ಕಾಲು ಬೆರಳು ಇರುವ ಆಮೆ ಮನೆಗೆ ಅದೃಷ್ಟವನ್ನು ತರುತ್ತದೆ ಹೀಗಾಗಿ ಅದನ್ನು ಕೇಳಿದ್ದಾರೆ. ಈ ಆಮೆಯ ಬೆಲೆ ಬರೋಬ್ಬರಿ 5 ರಿಂದ 10 ಲಕ್ಷರೂಪಾಯಿ ಆಗಿದೆ. ಎಷ್ಟು ಹುಡುಕಿದರೂ ಈ ಆಮೆ ಸಿಗದ ಕಾರಣ ಹುಡುಗಿ ಮನೆಯವರು ವರನ ಮನೆಯವರ ಮೇಲೆ ವರದಕ್ಷಿಣೆ ಕೇಸ್ ಹಾಕಿದ್ದಾರೆ. ವರನ ಮೇಲೆ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದೀಗ ಮದುವೆಯೂ ಕ್ಯಾನ್ಸಲ್ ಆಗಿದೆ.

  • ಬಾಲ್ಯ ವಿವಾಹ ತಡೆಯುವಂತೆ ಜಿಲ್ಲಾಧಿಕಾರಿ ಸೂಚನೆ

    ಬಾಲ್ಯ ವಿವಾಹ ತಡೆಯುವಂತೆ ಜಿಲ್ಲಾಧಿಕಾರಿ ಸೂಚನೆ

    ತುಮಕೂರು: ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ನಡೆಯದಂತೆ ತಡೆಯಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ, ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಅಧಿನಿಯಮ 2005ರಡಿಯ ಮತ್ತು ಸಖಿ ಯೋಜನೆಯ ಅನುಷ್ಠಾನ ಕುರಿತ ಜಿಲ್ಲಾ ಸಮನ್ವಯ ಸಮಿತಿ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸಮರ್ಪಕ ಅನುಷ್ಠಾನ, ಸ್ಥೈರ್ಯನಿಧಿ ಯೋಜನೆಯ ಸಮರ್ಪಕ ಅನುಷ್ಠಾನ ಕುರಿತು ಜಿಲ್ಲಾ ಸಮಿತಿ ಮತ್ತು ಜಿಲ್ಲಾ ಮಟ್ಟದ ವಿಧವಾ ಕೋಶ ಮತ್ತು ಶೆಲ್ಟರ್ ಹೋಮ್ಸ್ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮ ಮಟ್ಟದ ಅಧಿಕಾರಿಗಳು ಸೇರಿದಂತೆ ಬೀಟ್ ಪೊಲೀಸರು ಬಾಲ್ಯ ವಿವಾಹ ತಡೆಯವ ಕಾರ್ಯಕ್ಕೆ ಮೊದಲಾದ್ಯತೆ ನೀಡಬೇಕು ಎಂದು ನಿರ್ದೇಶಿಸಿದರು.

    ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಹಾಗೂ ಸಮಾಜದಲ್ಲಿ ಅನಿಷ್ಟ ಪದ್ಧತಿಗಳಲ್ಲಿ ಒಂದಾದ ಬಾಲ್ಯವಿವಾಹಗಳನ್ನು ತಡೆಯಲು ಸರ್ಕಾರವು ಎಲ್ಲಾ ಇಲಾಖೆಗಳ ಗ್ರಾಮ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ಬಾಲ್ಯವಿವಾಹ ನಿಷೇಧ ತಡೆ ಅಧಿಕಾರಿಗಳನ್ನಾಗಿ ನೇಮಕ ಮಾಡಿದೆ. ಹಾಗಾಗಿ ಬಾಲ್ಯವಿವಾಹ ತಡೆಯುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಇದರ ಜವಾಬ್ದಾರಿ ಹೊತ್ತು ಬಾಲ್ಯವಿವಾಹಕ್ಕೆ ಕಡಿವಾಣ ಹಾಕಬೇಕು. ವಿಶೇಷವಾಗಿ ಶಾಲೆಗಳ ಶಾಲಾ ಮುಖ್ಯೋಪಾಧ್ಯಾಯರು, ಪಿಡಿಒ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಪೆÇಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಬಾಲ್ಯವಿವಾಹ ತಡೆಗೆ ಶ್ರಮಿಸಬೇಕು. ಬಾಲ್ಯ ವಿವಾಹ ನಡೆದಲ್ಲಿ ಅಲ್ಲಿನ ವ್ಯಾಪ್ತಿಗೆ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಪ್ರತಿಯೊಂದು ಗ್ರಾಮಗಳಲ್ಲಿ ಬಾಲ್ಯವಿವಾಹ ನಡೆಸದಂತೆ ಅರಿವು ಮೂಡಿಸಿ, ತಾಲೂಕು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಶ್ರಮಿಸಬೇಕೆಂದು ಸೂಚಿಸಿದರು.

    ಬಾಲ್ಯ ವಿವಾಹ ಮಾಡುವುದರಿಂದ ಹೆಣ್ಣು ಮಗುವಿನ ಆರೋಗ್ಯ ಹಾಗೂ ಮಾನಸಿಕ ಸ್ಥಿತಿಯ ಮೇಲೆ ತೀವ್ರವಾದ ಪರಿಣಾಮ ಉಂಟಾಗುತ್ತದೆ. ಇದನ್ನು ತಪ್ಪಿಸಬೇಕಾದರೆ ಬಾಲ್ಯ ವಿವಾಹ ನಡೆಯುವ ಮುನ್ನವೇ ಕ್ರಮ ಕೈಗೊಂಡು ಅದನ್ನು ತಡೆಯುವುದು ಅತ್ಯವಶ್ಯಕ. ಬಾಲ್ಯವಿವಾಹವನ್ನು ಪೋತ್ಸಾಹಿಸುವ ಅಥವಾ ಒತ್ತಾಯಪೂರ್ವಕವಾಗಿ ಮದುವೆ ನಡೆಸುವ ಪೋಷಕರ ಮೇಲೆ ಹಾಗೂ ಒಂದು ವೇಳೆ ಹುಡುಗ ಪ್ರಾಪ್ತ ವಯಸ್ಸಿನವನಾಗಿದ್ದರೆ ಅವನ ಮೇಲೂ ಸಹ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

    ಬಾಲ್ಯ ವಿವಾಹ ತಡೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ನಿಷೇಧ ಹಾಗೂ ಮಹಿಳಾ ಅಭಿವೃದ್ಧಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುವ ಸಮುದಾಯಗಳಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ತಿಳಿಸಿದರು. ಬಾಲ್ಯ ವಿವಾಹ ನಿಷೇಧ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಸೇರಿದಂತೆ ಇತರೆ ಕಾಯ್ದೆಯಡಿ ದಾಖಲಾಗಿ ಬಾಕಿ ಉಳಿದಿರುವ ಪ್ರಕರಣಗಳನ್ನು ಸಕಾಲಕ್ಕೆ ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿದರು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್.ನಟರಾಜು ಮಾತನಾಡಿ, 2021-22ನೇ ಸಾಲಿನ ಜೂನ್ ಅಂತ್ಯಕ್ಕೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ 31 ಬಾಲ್ಯ ವಿವಾಹ ಪ್ರಕರಣ ದಾಖಲಾಗಿದ್ದು, ಅವುಗಳಲ್ಲಿ 28 ಬಾಲ್ಯವಿವಾಹಗಳನ್ನು ತಡೆಹಿಡಿಯಲಾಗಿದೆ. ಮೂರು ಬಾಲ್ಯವಿವಾಹ ನಡೆದಿದ್ದು, ಈ ಬಗ್ಗೆ ಎಫ್ ಐಆರ್ ದಾಖಲಾಗಿದೆ ಎಂದರು.

    ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ 20 ಪ್ರಕರಣಗಳು ದಾಖಲಾಗಿದ್ದು, ಎರಡು ಪ್ರಕರಣಗಳು ಇತ್ಯರ್ಥಗೊಂಡಿವೆ. ಉಳಿದಂತೆ ಸಂರಕ್ಷಣಾಧಿಕಾರಿಗಳ ಹಂತದಲ್ಲಿ 16, ನ್ಯಾಯಾಲಯದ ಹಂತದಲ್ಲಿ 2 ಪ್ರಕರಣಗಳಿವೆ. ಸಾಂತ್ವಾನ ಯೋಜನೆಯಡಿ ಕೌಟುಂಬಿಕ ಕಲಹದಲ್ಲಿ 142 ಪ್ರಕರಣಗಳು ದಾಖಲಾಗಿದ್ದು, 82 ಪ್ರಕರಣಗಳು ಇತ್ಯರ್ಥಗೊಂಡು 60 ಪ್ರಕರಣಗಳು ಬಾಕಿ ಇವೆ. ವರದಕ್ಷಿಣೆ ನಿಷೇಧ ಕಾಯ್ದೆಯಡಿ 23 ಪ್ರಕರಣಗಳು ದಾಖಲಾಗಿದ್ದು, 7 ಪ್ರಕರಣಗಳು ವಿಲೇವಾರಿಯಾಗಿದೆ ಹಾಗೂ 16 ಬಾಕಿ ಉಳಿದಿವೆ ಎಂದು ತಿಳಿಸಿದರು.

    ಸಭೆಯಲ್ಲಿ ಸ್ವಯಂ ಸಂಸ್ಥೆಗಳ ಮುಖ್ಯಸ್ಥರು, ಪ್ರತಿನಿಧಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಇದನ್ನೂ ಓದಿ:ಭಟ್ಕಳದಲ್ಲಿ ಚೌಥನಿ ನದಿ ಭರ್ತಿ – ಹಲವು ಮನೆಗಳು ಜಲಾವೃತ