Tag: Dowry

  • ವಿಸ್ಮಯಾ ಸಾವಿನ ಪ್ರಕರಣ- ಪತಿ ಕಿರಣ್‍ಗೆ ಜೈಲಿನ ತೋಟಗಾರಿಕೆಯಲ್ಲಿ ಕೆಲಸ

    ವಿಸ್ಮಯಾ ಸಾವಿನ ಪ್ರಕರಣ- ಪತಿ ಕಿರಣ್‍ಗೆ ಜೈಲಿನ ತೋಟಗಾರಿಕೆಯಲ್ಲಿ ಕೆಲಸ

    ತಿರುವನಂತಪುರಂ: ಕೇರಳದ ನರ್ಸಿಂಗ್ ವಿದ್ಯಾರ್ಥಿನಿ ವಿಸ್ಮಯಾಳ ವರದಕ್ಷಿಣೆ ಸಾವಿನ ಪ್ರಕರಣದಲ್ಲಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ಆಕೆಯ ಪತಿ ಎಸ್. ಕಿರಣ್ ಕುಮಾರ್‌ಗೆ ಪೂಜಾಪುರದ ಕೇಂದ್ರ ಕಾರಾಗೃಹದ ಆವರಣದಲ್ಲಿರುವ ತರಕಾರಿ ತೋಟದಲ್ಲಿ ತೋಟಗಾರನ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

    ಮೊದಲ ಬಾರಿಗೆ ದೇಶದಲ್ಲೇ ವರದಕ್ಷಿಣೆ ಪ್ರಕರಣಕ್ಕೆ ಕಠಿಣ ಶಿಕ್ಷೆ ಆಗಿದ್ದು, ಈ ಪ್ರಕರಣ ಕೇರಳವನ್ನೇ ತಲ್ಲಣಗೊಳಿಸಿತ್ತು. ಸದ್ಯ ಜೈಲಿನಲ್ಲಿರುವ ಕಿರಣ್, ಅಲ್ಲಿ ಗಡಿ ಗೋಡೆಯೊಳಗೆ ಇರುವ 9.5 ಎಕರೆ ಬಯಲು ಪ್ರದೇಶದ ಕೆಲವು ಭಾಗಗಳಲ್ಲಿ ತರಕಾರಿ ಕೃಷಿಯಲ್ಲಿ ಕೆಲಸವನ್ನು ನೀಡಲಾಗಿದೆ. ಈ ರೀತಿಯ ತೋಟಗಾರಿಕೆ ಕೆಲಸಕ್ಕೆ ಕಿರಣ್‍ನಂತಹ ಆಯ್ದ ಜೈಲು ಕೈದಿಗಳನ್ನು ಮಾತ್ರ ನಿಯೋಜಿಸಲಾಗುವುದು.

    ಕಿರಣ್‍ನನ್ನು ಜೈಲಿನ 5ನೇ ಬ್ಲಾಕ್‍ನಲ್ಲಿ ಇರಿಸಲಾಗಿದ್ದು, ಈತ ಬೆಳಗ್ಗೆ 7.15 ರಿಂದ ಸಂಜೆ 5ರ ವರೆಗೆ ಕಿರಣ್ ಕೆಲಸ ಮಾಡುತ್ತಾನೆ. ಉಪಾಹಾರ ಮತ್ತು ಮಧ್ಯಾಹ್ನದ ಊಟಕ್ಕೆ ಸ್ವಲ್ಪ ವಿರಾಮವಿದೆ. ಸಂಜೆ ಚಹಾ ನೀಡಲಾಗುತ್ತದೆ. ರಾತ್ರಿ ಊಟದ ನಂತರ 5.45ಕ್ಕೆ ಕೈದಿಗಳನ್ನು ಪುನಃ ಜೈಲಿಗೆ ಹಾಕುತ್ತಾರೆ. ಈ ಕೆಲಸಕ್ಕೆ ಪ್ರತಿನಿತ್ಯ 63 ರೂ.ಗಳನ್ನು ಆತ ಕೂಲಿಯಾಗಿ ಪಡೆಯುತ್ತಾನೆ. ಇದನ್ನೂ ಓದಿ: ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾ ಸಾವು ಪ್ರಕರಣ – ಪತಿಗೆ 10 ವರ್ಷ ಜೈಲು, 12 ಲಕ್ಷ ದಂಡ

    ಜೈಲಿನಲ್ಲಿ ಹೊಸಬರು ಅದರ ಕಾಂಪೌಂಡ್ ಗೋಡೆಯ ಹೊರಗೆ ಕೆಲಸ ಮಾಡುವಂತಿಲ್ಲ. ಸಾಮಾನ್ಯ ಅಪರಾಧಿಗಳು, ಅಪಾಯಕಾರಿ ಎಂದು ಪಟ್ಟಿಮಾಡಲ್ಪಟ್ಟವರು ಮತ್ತು ಹೆಚ್ಚಿನ ಮಾಧ್ಯಮಗಳ ಗಮನವನ್ನು ಸೆಳೆದ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರನ್ನು ಸಾಮಾನ್ಯವಾಗಿ ಜೈಲಿನ ಹೊರಗೆ ಕೆಲಸಕ್ಕೆ ಕಳುಹಿಸಲಾಗುವುದಿಲ್ಲ. ಜೈಲು ಅಧಿಕಾರಿಗಳ ವಿಶ್ವಾಸ ಪಡೆದ ನಂತರವೇ ಕೈದಿಯನ್ನು ಹೊರಗಿನ ಕೆಲಸಕ್ಕೆ ಕಳುಹಿಸಲಾಗುತ್ತದೆ.

    ಜೈಲು ಶಿಕ್ಷೆಯ ಹೊರತಾಗಿ ಕಿರಣ್‍ಗೆ 12.55 ಲಕ್ಷ ರೂ. ದಂಡವನ್ನು ವಿಧಿಸಿದ್ದು, ಅದರಲ್ಲಿ 4 ಲಕ್ಷ ರೂ.ಗಳನ್ನು ವಿಸ್ಮಯಾ ಪೋಷಕರಿಗೆ ಪಾವತಿಸಬೇಕು. ಈ ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 27 ತಿಂಗಳು 15 ದಿನ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆ ನಂತರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ: ಸಚಿವ ಉಮೇಶ್ ಕತ್ತಿ

    2021ರ ಜೂನ್ 21ರಂದು ಕೊಲ್ಲಂ ಜಿಲ್ಲೆಯ ಸಾಸ್ತಮಕೋಟಾದ ಪೊರುವಾಜಿಯಲ್ಲಿರುವ ಕಿರಣ್‍ನ ಮನೆಯಲ್ಲಿ ವಿಸ್ಮಯಾ ಶವವಾಗಿ ಪತ್ತೆಯಾಗಿದ್ದರು. ಕಿರಣ್ ಮತ್ತು ವಿಸ್ಮಯಾ 2020ರ ಮೇ 30ರಂದು ವಿವಾಹವಾದರು.

    Live Tv

  • ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ- ಕೊಲೆ ಆರೋಪ

    ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ- ಕೊಲೆ ಆರೋಪ

    ನೆಲಮಂಗಲ: 2 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಪತ್ನಿ ಗಂಡನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

    ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ವೀವರ್ಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಪೂಜಾ ಮೃತ ಗೃಹಿಣಿ. ಕಳೆದ ಎರಡು ವರ್ಷಗಳ ಹಿಂದೆ ಅವರು ಮಂಜುನಾಥ್ ಜೊತೆ ಮದುವೆ ಮಾಡಿಕೊಂಡಿದ್ದರು. ಗೃಹಿಣಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್ ತನಿಖೆ CBIಗೆ ವಹಿಸುವಂತೆ ಬಿಜೆಪಿ ಒತ್ತಾಯ

    ಪೂಜಾ ಅವರ ಪತಿ ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಅಲ್ಲದೆ ಚಿತ್ರಹಿಂಸೆ ನೀಡುತ್ತಿದ್ದ ಬಗ್ಗೆ ಮೃತ ಪೂಜಾ ಕುಟುಂಬಸ್ಥರು ಆರೋಪಿಸಿದ್ದಾರೆ. ಆತನಿಗೆ ಶಿಕ್ಷೆ ಆಗಬೇಕೆಂದು ಮೃತ ಮಹಿಳೆಯ ಪೋಷಕರು ಆಗ್ರಹಿಸಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಪತಿಗೆ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣ ಮಸೀದಿ ವಿವಾದ – ಹಿಂದೂ, ಮುಸ್ಲಿಮರ ವಾದ ಏನು? 

  • ವರದಕ್ಷಿಣೆ ನೀಡ್ಲಿಲ್ಲ ಅಂತ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ – ವೀಡಿಯೋ ವೈರಲ್ ಮಾಡಿ ಹಣ ಗಳಿಸುತ್ತೇನೆಂದ ಪತಿ

    ವರದಕ್ಷಿಣೆ ನೀಡ್ಲಿಲ್ಲ ಅಂತ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ – ವೀಡಿಯೋ ವೈರಲ್ ಮಾಡಿ ಹಣ ಗಳಿಸುತ್ತೇನೆಂದ ಪತಿ

    ಜೈಪುರ: ಒಂದೂವರೆ ಲಕ್ಷ ರೂಪಾಯಿ ವರದಕ್ಷಿಣೆ ನೀಡಲಿಲ್ಲ ಎಂಬ ಕಾರಣಕ್ಕೆ ಪತ್ನಿ ಮೇಲೆ ಸಂಬಂಧಿಕರಿಂದಲೇ ಪತಿಯೊಬ್ಬ ಸಾಮೂಹಿಕ ಅತ್ಯಾಚಾರ ಎಸಗಿಸಿರುವ ಘಟನೆ ರಾಜಸ್ಥಾನದ ಭರತ್‍ಪುರದಲ್ಲಿ ನಡೆದಿದೆ. ಅಲ್ಲದೇ ಗ್ಯಾಂಗ್ ರೇಪ್ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ.

    RAPE

    ಯೂಟ್ಯೂಬ್‍ನಲ್ಲಿ ಲೈಂಗಿಕ ದೌರ್ಜನ್ಯದ ವೀಡಿಯೋವನ್ನು ಅಪ್‍ಲೋಡ್ ಮಾಡುವ ಮೂಲಕ ಬರಬೇಕಾಗಿರುವ ವರದಕ್ಷಿಣೆ ಹಣವನ್ನು ಪಡೆಯುತ್ತೇನೆ ಎಂದು ಪತಿ ತನ್ನ ಹೆಂಡತಿಗೆ ಹೇಳಿದ್ದಾನೆ. ಇದೀಗ ಸಂತ್ರಸ್ತೆ ಪತಿ ಮತ್ತು ಆತನ ಸಂಬಂಧಿಕರಿಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾಳೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ಗುಂಡಿನ ದಾಳಿ – ಮಹಿಳೆಗೆ ಗಾಯ

    ಭರತ್‍ಪುರದ ಕಮಾನ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ದೌಲತ್ ಸಾಹು ಅವರು, ಮಹಿಳೆಯೊಬ್ಬಳು ತನ್ನ ಪತಿ ಮತ್ತು ಇಬ್ಬರು ಸಂಬಂಧಿಕರು ಅತ್ಯಾಚಾರ ಎಸಗಿರುವುದಾಗಿ ದೂರು ದಾಖಲಿಸಿದ್ದಾಳೆ. ಅಲ್ಲದೇ ಯೂಟ್ಯೂಬ್‍ಗೆ ಅಶ್ಲೀಲ ವೀಡಿಯೋ ಅಪ್‍ಲೋಡ್ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

    POLICE JEEP

    ದೂರಿನಲ್ಲಿ ಸಂತ್ರಸ್ತೆ, ನನ್ನ ಅತ್ತೆಯಂದಿರು ವರದಕ್ಷಿಣೆಗಾಗಿ ನನಗೆ ಕಿರುಕುಳ ನೀಡುತ್ತಿದ್ದರು. ಅವರಿಗೆ ವರದಕ್ಷಿಣೆ ನೀಡದಿದ್ದಾಗ, ಅವರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಪತಿಯ ಸಂಬಂಧಿಕರು ನನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ ಮತ್ತು ಘಟನೆಯನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು, ಆ ವೀಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾಳೆ.  ಇದನ್ನೂ ಓದಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಭೇಟಿಯಾದ ಶರದ್ ಪವಾರ್

    2019ರಲ್ಲಿ ದಂಪತಿ ಹರಿಯಾಣದಲ್ಲಿ ಮದುವೆಯಾಗಿದ್ದು, ಅಂದಿನಿಂದ ಮಹಿಳೆಗೆ ಅತ್ತೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಈ ಕಾರಣದಿಂದ ಆಕೆ ತನ್ನ ಪೋಷಕರ ಮನೆಗೆ ಮರಳಿದ್ದಳು. ಆದರೆ ಪತಿ ಮತ್ತೆ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದನು. ನಂತರ ಪತಿ ತನ್ನ ಇಬ್ಬರು ಸಂಬಂಧಿಕರನ್ನು ಮನೆಗೆ ಕರೆದುಕೊಂಡು ಬಂದು ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುವಂತೆ ಸಂಬಂಧಿಕರಿಗೆ ಹೇಳಿ, ಘಟನೆಯನ್ನು ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಮತ್ತು ನಿಮ್ಮ ಕುಟುಂಬಸ್ಥರು ನನಗೆ ವರದಕ್ಷಿಣೆ ನೀಡಲು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಈ ವೀಡಿಯೋವನ್ನು ಯೂಟ್ಯೂಬ್‍ನಲ್ಲಿ ಹಾಕುವ ಮೂಲಕ ಅದೇ ಮೊತ್ತವನ್ನು ಗಳಿಸುತ್ತೇನೆ ಎಂದು ಹೇಳಿ ಅಶ್ಲೀಲ ವೀಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

  • ಕುರೂಪಿ ಹೆಣ್ಣುಮಕ್ಕಳಿಗೆ ವರದಕ್ಷಿಣೆ ಸಹಕಾರಿ- ಪಠ್ಯಪುಸ್ತಕದಲ್ಲಿ ಪಾಠ

    ಕುರೂಪಿ ಹೆಣ್ಣುಮಕ್ಕಳಿಗೆ ವರದಕ್ಷಿಣೆ ಸಹಕಾರಿ- ಪಠ್ಯಪುಸ್ತಕದಲ್ಲಿ ಪಾಠ

    ನವದೆಹಲಿ: ವರದಕ್ಷಿಣೆ ವ್ಯವಸ್ಥೆಯು ಕುರೂಪಿ ಹುಡುಗಿಯರಿಗೆ ಮದುವೆಯಾಗಲು ಸಹಾಯ ಮಾಡುತ್ತದೆ ಎಂದು ಪುಸ್ತಕವೊಂದರಲ್ಲಿ ನಮೂದಿಸಲಾಗಿದೆ. ಈ ಪುಸ್ತಕ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

    ಈ ಪುಸ್ತಕದಲ್ಲಿ “ವರದಕ್ಷಿಣೆಯ ಉದ್ದೇಶ” ಎಂಬ ಉಪಶೀರ್ಷಿಕೆಯ ಅಡಿಯಲ್ಲಿ ಈ ಸಂಗತಿಗಳನ್ನು ಪಟ್ಟಿ ಮಾಡಲಾಗಿದ. ಈ ಪುಸ್ತಕವು ನಸಿರ್ಂಗ್ ವಿದ್ಯಾರ್ಥಿಗಳಿರುವ ಪುಸ್ತಕವಾಗಿದ್ದು ಭಾರತೀಯ ನಸಿರ್ಂಗ್ ಕೌನ್ಸಿಲ್ ಪಠ್ಯಕ್ರಮದ ಪ್ರಕಾರ ಬರೆಯಲಾಗಿದೆ ಎಂದು ಪುಸ್ತಕದ ಕವರ್ ಮೇಲಿದೆ. ಪುಟದ ಚಿತ್ರವನ್ನು ಹಂಚಿಕೊಂಡ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಶಿವಸೇನಾ ನಾಯಕಿ ಮತ್ತು ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ಅವರಲ್ಲಿ ಈ ಪಠ್ಯವನ್ನು ತೆಗೆದುಹಾಕುವಂತೆ ಕರೆ ನೀಡಿದರು. ಇಂಥಾ ಪುಸ್ತಕಗಳು ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಭಾಗವಾಗಿರುವುದು ಭಯಾನಕವಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

    ಟಿಕೆ ಇಂದ್ರಾಣಿ ಅವರು ಬರೆದಿರುವ ದಾದಿಯರ ಸಮಾಜಶಾಸ್ತ್ರದ ಪಠ್ಯಪುಸ್ತಕದ (Textbook of Sociology for Nurses) ಪುಟ ಇದು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ.

    ಪುಸ್ತಕದಲ್ಲಿ ಏನಿದೆ?: ಪುಸ್ತಕದಲ್ಲಿ ಪಟ್ಟಿ ಮಾಡಿದ ವರದಕ್ಷಿಣೆಯ ಪ್ರಯೋಜನದ ಪಟ್ಟಿಯಲ್ಲಿ ಪೀಠೋಪಕರಣಗಳು, ರೆಫ್ರಿಜರೇಟರ್‌ಗಳು ಮತ್ತು ವಾಹನಗಳಂತಹ ಉಪಕರಣಗಳೊಂದಿಗೆ ಹೊಸ ಮನೆಯನ್ನು ಸಜ್ಜುಗೊಳಿಸಲು ವರದಕ್ಷಿಣೆ ಸಹಾಯಕವಾಗಿದೆ. ಪೋಷಕರ ಆಸ್ತಿಯಲ್ಲಿ ಪಾಲನ್ನು ಹುಡುಗಿಯರು ವರದಕ್ಷಿಣೆ ಮೂಲಕ ಪಡೆಯುತ್ತಾರೆ. ವರದಕ್ಷಿಣೆ ಎಂಬುದು ನಮ್ಮ ಸಾಮಾಜಿಕ ಪಾರಂಪರಿಕ ಪದ್ದತಿಯಾಗಿದ್ದು ಒಮ್ಮೆಗೇ ಪದ್ಧತಿಗಳನ್ನು ನಿರ್ಮೂಲನೆ ಮಾಡುವುದು ಅಸಾಧ್ಯ. ಇದನ್ನೂ ಓದಿ : ಪಾವನಾ ನಾಯಕಿಯಾಗಿ ನಟಿಸಿದ ‘ಇನ್’ ಚಿತ್ರದ ಟೀಸರ್ ರಿಲೀಸ್ ಮಾಡಿದ ಕಿಚ್ಚ

    ವರದಕ್ಷಿಣೆ ವ್ಯವಸ್ಥೆಯ ಪರೋಕ್ಷ ಪ್ರಯೋಜನ: ಪೋಷಕರು ಈಗ ತಮ್ಮ ಹೆಣ್ಣುಮಕ್ಕಳಿಗೆ ಕಡಿಮೆ ವರದಕ್ಷಿಣೆ ನೀಡುವ ಉದ್ದೇಶದಿಂದ ಶಿಕ್ಷಣವನ್ನು ನೀಡುತ್ತಿದ್ದಾರೆ. ಪುಟದ ಕೊನೆಯ ಅಂಶವು ವರದಕ್ಷಿಣೆ ವ್ಯವಸ್ಥೆಯು ಕುರೂಪಿ ಹುಡುಗಿಯರಿಗೆ ಮದುವೆಯಾಗಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ.

  • ವರದಕ್ಷಿಣೆ ಕಿರುಕುಳ – ತಾಯಿ, ಮಗ ಆತ್ಮಹತ್ಯೆ

    ವರದಕ್ಷಿಣೆ ಕಿರುಕುಳ – ತಾಯಿ, ಮಗ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳದ ಆರೋಪದಡಿ ತಾಯಿಯೊರ್ವಳು ತನ್ನ ಮಗನ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.

    BRIBE

    ಗ್ರಾಮದ 26 ವರ್ಷದ ನವಲತ ಹಾಗೂ ಅವರ 5 ವರ್ಷದ ಮಗ ಅಂಜನ್ ಕುಮಾರ್ ಮೃತರು. ನಿನ್ನೆ ಸಂಜೆ 6 ಗಂಟೆಗೆ ತೋಟದ ಕಡೆ ಹೋದವರು ಮನೆಗೆ ವಾಪಸ್ ಬಂದಿಲ್ಲ ಅಂತ ಹುಡುಕಾಡಿದಾಗ ತೋಟದ ಬಳಿಯ ಸಂಪಿನಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಸತತ 3ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ

    ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತಳ ಸಂಬಂಧಿಕರು ದೂರು ದಾಖಲಿಸಿದ್ದಾರೆ. ತಮ್ಮ ಮಗಳಿಗೆ ಗಂಡ ಸೊಣ್ಣೇ ಗೌಡ, ಈತನ ತಂದೆ ರಾಮಣ್ಣ, ತಾಯಿ ಪಿಳ್ಳಮ್ಮ, ಸೋದರರಾದ ಮುರುಳಿ, ಚಂದ್ರು, ಗಾಯತ್ರಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಆರೋಪಿಸಿ ದೂರು ದಾಖಲಿಸಲಾಗಿದೆ. ಇದನ್ನೂ ಓದಿ: ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಸ್ವಾಗತ: ಡಿಕೆಶಿ

  • ಪ್ರೀತಿಸಿ ಮದುವೆಯಾಗಿ ವರ್ಷ ತುಂಬುವ ಮೊದಲೇ ಪತ್ನಿ ನೇಣಿಗೆ ಶರಣು

    ಪ್ರೀತಿಸಿ ಮದುವೆಯಾಗಿ ವರ್ಷ ತುಂಬುವ ಮೊದಲೇ ಪತ್ನಿ ನೇಣಿಗೆ ಶರಣು

    ಬೆಂಗಳೂರು: ಮದುವೆಯಾಗಿ ವರ್ಷ ತುಂಬುವ ಮೊದಲೇ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಲಿಕಾನ್ ಸಿಟಿಯ ಗಾಯತ್ರಿ ನಗರದಲ್ಲಿ ತಡರಾತ್ರಿ ನಡೆದಿದೆ.

    ವಿಂದ್ಯಾಶ್ರೀ ನೇಣಿಗೆ ಶರಣಾದ ಪತ್ನಿಯಾಗಿದ್ದು, ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ರಾಕೇಶ್ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾನೆ. ಈ ಹಿನ್ನೆಲೆ ಮನನೊಂದ ಪತ್ನಿಯು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ

    ಎಂಕಾಂ ಮಾಡಿದ್ದ ವಿಂದ್ಯಾ ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ವಿಂದ್ಯಾ ಶ್ರೀ ಅವರ ತಂದೆಯು ಪತಿ ರಾಕೇಶ್ ವಿರುದ್ಧ ದೂರು ನೀಡಿದ್ದಾರೆ. ಸುಬ್ರಮಣ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೋಮವಾರ ಬೆಳಗ್ಗೆ 9.30ಕ್ಕೆ ಮೃತದೇಹ ಮನೆಗೆ ಬರಲಿದೆ: ನವೀನ್ ತಂದೆ

  • ವರದಕ್ಷಿಣೆಗಾಗಿ ಪತ್ನಿ, ಮಗಳನ್ನೇ ಮನೆಯಿಂದ ಹೊರಹಾಕಿದ ವೈದ್ಯ!

    ವರದಕ್ಷಿಣೆಗಾಗಿ ಪತ್ನಿ, ಮಗಳನ್ನೇ ಮನೆಯಿಂದ ಹೊರಹಾಕಿದ ವೈದ್ಯ!

    ಗಾಂಧಿನಗರ: ವೈದ್ಯನೊಬ್ಬ ವರದಕ್ಷಿಣೆ ತರುವಂತೆ ಹಿಂಸಿಸಿದ್ದಲ್ಲದೇ ಪತ್ನಿ ಹಾಗೂ ತನ್ನ 7 ವರ್ಷದ ಮಗಳನ್ನೇ ಮನೆಯಿಂದ ಹೊರಹಾಕಿದ ಘಟನೆಯೊಂದು ಗುಜರಾತ್‍ನ ಅಹಮ್ಮದಾಬಾದ್‍ನಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ ವೈದ್ಯ 2011ರಲ್ಲಿ ಮದುವೆಯಾಗಿದ್ದಾನೆ. ಮೊದ ಮೊದಲು ಪತ್ನಿ ಜೊತೆ ಚೆನ್ನಾಗಿಯೇ ಇದ್ದ ಆತ, ನಂತರ ತನ್ನ ಹೆತ್ತವರ ಜೊತೆ ಸೇರಿಕೊಂಡು ತವರು ಮನೆಯಿಂದ ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸಲು ಆರಂಭಿಸಿದ್ದಾನೆ. ಈ ಮಧ್ಯೆ ದಂಪತಿಗೆ ಹೆಣ್ಣು ಮಗು ಕೂಡ ಜನಿಸಿತ್ತು. ಆ ಬಳಿಕವಂತೂ ಆತ ಪತ್ನಿಯನ್ನು ಮತ್ತಷ್ಟು ಪೀಡಿಸಲು ಶುರು ಮಾಡಿದ. ಇದನ್ನೂ ಓದಿ: ಉಕ್ರೇನ್‌ಗೆ ಸಹಕಾರ ನೀಡುತ್ತೇವೆ ಎಂದಿದ್ದ ಅಮೆರಿಕ ಸೇನೆಯನ್ನು ಕಳುಹಿಸಿಲ್ಲ ಯಾಕೆ?

    ಇತ್ತ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆತ 2014ರಲ್ಲಿ ತಮಿಳುನಾಡಿನ ತಂಜಾವೂರಿಗೆ ಶಿಫ್ಟ್ ಆದ. ಈ ವೇಳೆ ಪತ್ನಿ ಕೂಡ ಪತಿ ಜೊತೆಗೇ ತೆರಳಿದ್ದಾಳೆ. ಆದರೆ ಅಲ್ಲಿ ಆತ ಬೇರೊಂದು ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ. ಈ ವಿಚಾರ ಪತ್ನಿ ಗಮನಕ್ಕೆ ಬಂದಿದೆ. ಕೂಡಲೇ ಈ ಕುರಿತು ಪತಿಯನ್ನು ಪ್ರಶ್ನೆ ಮಾಡಿದಳು. ಇದರಿಂದ ಸಿಟ್ಟಿಗೆದ್ದ ವೈದ್ಯ, ಪತ್ನಿಯನ್ನು ಚೆನ್ನಾಗಿ ಥಳಿಸಿದ್ದಾನೆ. ಇದನ್ನೂ ಓದಿ: ರಷ್ಯಾ ಅಧ್ಯಕ್ಷ ಪುಟಿನ್‌ಗೆ ವೈಯಕ್ತಿಕ ನಿರ್ಬಂಧ ಹೇರಲು ಮುಂದಾದ ಅಮೆರಿಕ

     

    ಪತಿಯ ಹಿಂಸೆ ತಾಳಲಾರದೆ ಪತ್ನಿ ತನ್ನ ತವರಿಗೆ ತೆರಳಿದಳು. ಆದರೆ ತವರು ಮನೆಯವರು ಅವಳ ಮನಸ್ಸನ್ನು ಪರಿವರ್ತನೆ ಮಾಡಿ, ಇಬ್ಬರನ್ನು ಬಲವಂತವಾಗಿ ಹೊಂದಾಣಿಕೆ ಮಾಡಿಸಿ ಮತ್ತೆ ಪತಿ ಬಳಿ ಕಳುಹಿಸಿದ್ದಾರೆ. 2020ರಲ್ಲಿ ಮತ್ತೆ 20 ಲಕ್ಷ ಹಣ ತರುವಂತೆ ಬೇಡಿಕೆ ಇಟ್ಟ. ಆಸ್ಪತ್ರೆ ಕಟ್ಟಿಸಬೇಕು ಹಣ ಬೇಕು, ತವರಿಂದ ಹಣ ತರುವಂತೆ ತಿಳಿಸಿದ್ದಾನೆ. ಅಂತೆಯೇ ಪತ್ನಿ ತನ್ನ ತವರು ಮನೆಯಲ್ಲಿ ಹಣ ಕೇಳಿದ್ದಾಳೆ. ಆದರೆ ಅವರು ಹಣ ಕೊಡಲು ಒಪ್ಪಲಿಲ್ಲ. ಇದರಿಂದ ರೊಚ್ಚಿಗೆದ್ದ ವೈದ್ಯ ತನ್ನ ಪತ್ನಿ ಹಾಗೂ ಮಗಳನ್ನು ಮನೆಯಿಂದ ಹೊರಹಾಕಿದ್ದಾನೆ.

    ಸದ್ಯ ಪತ್ನಿ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪತಿ ದೂರು ದಾಖಲಿಸಿದ್ದಾಳೆ.

  • ಮಗಳ ಮದುವೆಗೆ ಸಾಹಿತ್ಯ ಕೃತಿಗಳನ್ನು ವರದಕ್ಷಿಣೆಯಾಗಿ ನೀಡಿದ ಕವಿ

    ಮಗಳ ಮದುವೆಗೆ ಸಾಹಿತ್ಯ ಕೃತಿಗಳನ್ನು ವರದಕ್ಷಿಣೆಯಾಗಿ ನೀಡಿದ ಕವಿ

    ಚೆನ್ನೈ: ಮಗಳ ಮದುವೆ ಮಾಡಿ ಹಣ, ಕಾರು, ಬಂಗಲೆಯನ್ನು ವರದಕ್ಷಿಣೆಯಾಗಿ ಕೊಡುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಕವಿ ಮಗಳ ಮದುವೆ ಮಾಡಿಕೊಟ್ಟು ಸಾಹಿತ್ಯದ ಪುಸ್ತಕಗಳನ್ನು ವರದಕ್ಷಿಣೆಯಾಗಿ ನೀಡಿದ್ದಾರೆ.

    ತಮಿಳುನಾಡಿನ ಪುಡುಕೊಟ್ಟಾಯಿ ನಿವಾಸಿ ತಂಗಂ ಮೂರ್ತಿ ಅವರು ಮಗಳ ಮದುವೆಯನ್ನು ಸಾಂಪ್ರದಾಯಿಕವಾಗಿ   ಅದ್ಧೂರಿಯಾಗಿ ಮಾಡಿದ್ದಾರೆ. ತಮಿಳುನಾಡಿ ಪ್ರಸಿದ್ಧ ಕವಿಗಳು, ಬರಹಗಾರರು ಬರೆದಿರುವ ಸಾಹಿತ್ಯದ ಪುಸ್ತಕಗಳನ್ನು ಮಗಳಿಗೆ ವರದಕ್ಷಿಣೆಯಾಗಿ ನೀಡಿದ್ದಾರೆ. ಫೆಬ್ರವರಿ 22 ರಂದು ಪುಡುಕೊಟ್ಟೈನ ಖಾಸಗಿ ಸಭಾಂಗಣದಲ್ಲಿ ನಡೆದ ತಂಗಂ ಮೂರ್ತಿ ಅವರ ಮಗಳ ಮದುವೆ ನಡೆಯಿತ್ತು. ಎಲ್ಲವೂ ಸಂಪ್ರದಾಯಬದ್ಧವಾಗಿಯೇ ನಡೆಯಿತು. ಆದರೆ ವರದಕ್ಷಿಣೆಯ ರೂಪ ಮಾತ್ರ ಭಿನ್ನವಾಗಿತ್ತು. ಮದುವೆಯಲ್ಲಿ ಅಲ್ಲಿನ ಸಂಪ್ರದಾಯದಂತೆ, ಸಾಂಪ್ರದಾಯಿಕ ಶೈಲಿಯಲ್ಲಿ ಅಲಂಕರಿಸಲಾದ ಒಂಬತ್ತು ಎತ್ತಿನ ಬಂಡಿಗಳಲ್ಲಿ ಈ ಅಮೂಲ್ಯ ಉಡುಗೊರೆಗಳು ಮದುವೆ ಸ್ಥಳಕ್ಕೆ ಬಂದವು. ಎತ್ತಿನಗಾಡಿಯಲ್ಲಿ ವರದಕ್ಷಿಣೆ ನೀಡಿರುವುದು ಮಾತ್ರ ತುಂಬಾ ವಿಭಿನ್ನವಾಗಿತ್ತು. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ತಮಿಳು ಸಾಹಿತ್ಯ ಮತ್ತು ಕವಿತೆಗಳ ಪುಸ್ತಕಗಳನ್ನು ಗಂಟು ಕಟ್ಟಿ 9 ಎತ್ತಿನ ಗಾಡಿಗಳಲ್ಲಿ ಇರಿಸಲಾಯಿತು. ಸಾಹಿತ್ಯದ ಖಜಾನೆಗಳನ್ನು ಹೊತ್ತ ಆ ಎತ್ತಿನ ಗಾಡಿಗಳು ತಂಗಂ ಮೂರ್ತಿ ಅವರ ಮನೆಯಿಂದ ಮದುವೆಯ ಛತ್ರದ ವರೆಗೆ ಮೆರವಣಿಗೆ ಹೋದವು. ಈ ಮದುವೆ ತುಂಬಾ ವಿಶೇಷ ಮತ್ತು ವಿಭಿನ್ನವಾಗಿ ನಡೆಯುವ ಮೂಲಕವಾಗಿ ಸುದ್ದಿಯಾಗಿದೆ. ಇದನ್ನೂ ಓದಿ: ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

    ಅವೈಯಾರ್, ತಿರುವಳ್ಳುವರ್, ಕಂಬಾರ್, ಭಾರತಿಯಾರ್, ಕಣ್ಣದಾಸನ್, ಇಳಂಗೋ ಅಡಿಗಲ್, ಭಾರತೀದಾಸನ್, ಪಟ್ಟುಕೋಟೈ ಕಲ್ಯಾಣಸುಂದರಂ ಮತ್ತು ವಾಲಿ ಸೇರಿದಂತೆ ಹಲವು ಖ್ಯಾತ ತಮಿಳು ಸಾಹಿತಿಗಳು ಮತ್ತು ಕವಿಗಳ ಪುಸ್ತಕಗಳನ್ನು ಮೆರವಣಿಗೆಯಲ್ಲಿ ಹೊತ್ತು ಸಾಗಿದರು. ಅವರೆಲ್ಲರು ಪುಸ್ತಕಗಳ ಜೊತೆಜೊತೆಗೆ ಕೈಗಳಲ್ಲಿ (ಹಲಸಿನಕಾಯಿ, ಮಾವಿನ ಹಣ್ಣು ಮತ್ತು ಬಾಳೆ ಹಣ್ಣುಗಳನ್ನು) ಕೂಡ ಹಿಡಿದಿದ್ದರು.

  • ನವವಿವಾಹಿತೆ ಟೆಕ್ಕಿ ಅನುಮಾನಸ್ಪದ ಸಾವು – ವರದಕ್ಷಿಣೆ ಕಿರುಕುಳ ಆರೋಪ

    ನವವಿವಾಹಿತೆ ಟೆಕ್ಕಿ ಅನುಮಾನಸ್ಪದ ಸಾವು – ವರದಕ್ಷಿಣೆ ಕಿರುಕುಳ ಆರೋಪ

    ಚಿಕ್ಕಬಳ್ಳಾಪುರ: ನವವಿವಾಹಿತೆ ಟೆಕ್ಕಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಪ್ರಶಾಂತ ನಗರದಲ್ಲಿ ನಡೆದಿದೆ.

    ಪ್ರಶಾಂತ ನಗರದ ಮನೆಯ ಮೂರನೇ ಅಂತಸ್ತಿನ ಸ್ಟೋರ್ ರೂಂನಲ್ಲಿ ನವ್ಯ(23) ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಹಾಗೂ ತಾಲೂಕು ದಂಡಾಧಿಕಾರಿ ಗಣಪತಿ ಶಾಸ್ತ್ರೀ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.

    Chikkaballapura

    ಇತ್ತ ಮೃತಳ ಸಂಬಂಧಿಕರು ಗಂಡ ಚೇತನ್ ಹಾಗೂ ಅತ್ತೆ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಾರೆ. ತಮ್ಮ ಮಗಳ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿ ತದನಂತರ ನೇಣು ಹಾಕಿದ್ದಾರೆ ಅಂತ ಆರೋಪಿಸಿದ್ದಾರೆ. ಮತ್ತೊಂದೆಡೆ ಮಗಳನ್ನು ಕಳೆದುಕೊಂಡ ದುಃಖದ ಮಡುವಿನಲ್ಲಿರುವ ಮೃತಳ ಸಂಬಂಧಿಕರು ಗಂಡ ಚೇತನ್ ಮೇಲೆ ಮುಗಿ ಬಿದ್ದು ಹಲ್ಲೆ ನಡೆಸಿದ್ದಾರೆ.

    ಗಂಡನ ಕಡೆಯವರು ವರದಕ್ಷಿಣೆ ಕಿರುಕುಳ ಇಲ್ಲ. ಕೆಲಸದ ಒತ್ತಡ, ಮಾನಸಿಕ ಒತ್ತಡಕ್ಕೆ ನವ್ಯ ಗುರಿಯಾಗಿದ್ದಳು, ಗಂಡ ಹೆಂಡತಿ ಮಧ್ಯೆ ಕಳೆದ 6 ತಿಂಗಳಿಂದ ಒಂದಷ್ಟು ಕಲಹಗಳು ಏರ್ಪಟ್ಟಿದ್ದವು ಹೊಂದಾಣಿಕೆ ಇರಲಿಲ್ಲ. ಹೀಗಾಗಿ ನವ್ಯ ಸಾಕಷ್ಟು ಮನನೊಂದಿದ್ದಳು ಅಂತ ಹೇಳುತ್ತಿದ್ದಾರೆ. ಸದ್ಯ ಚಿಕ್ಕಬಳ್ಳಾಪುರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದು ತನಿಖೆಯಿಂದ ಅಸಲಿ ಸತ್ಯ ಬಯಲಾಗಬೇಕಿದೆ. ಇನ್ನೂ ಬಾಗೇಪಲ್ಲಿ ತಾಲೂಕು ಸಡ್ಲವಾರಪಲ್ಲಿ ಗ್ರಾಮದ ನವ್ಯ ಹಾಗೂ ಚೇತನ್ ವಿವಾಹ ಕಳೆದ 1 ವರ್ಷದ ಹಿಂದೆ ನಡೆದಿತ್ತು.

  • ವರದಕ್ಷಿಣೆ ಹಣ, ಸ್ಕಾರ್ಪಿಯೋ ಕಾರಿಗಾಗಿ ಹೆಂಡತಿಯನ್ನು ಸುಟ್ಟು ಕೊಂದ ಪತಿ

    ವರದಕ್ಷಿಣೆ ಹಣ, ಸ್ಕಾರ್ಪಿಯೋ ಕಾರಿಗಾಗಿ ಹೆಂಡತಿಯನ್ನು ಸುಟ್ಟು ಕೊಂದ ಪತಿ

    ಬಿಹಾರ: ವರದಕ್ಷಿಣೆ ಹಣ ಮತ್ತು ಸ್ಕಾರ್ಪಿಯೋ ಕಾರಿಗಾಗಿ ಆಕೆಯ ಗಂಡ ಮತ್ತು ಅತ್ತೆ ಸೇರಿ ಮಹಿಳೆಯನ್ನು ಜೀವಂತ ಸುಟ್ಟು ಹಾಕಿರುವ ಘಟನೆಯು ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾರತ್ ಗ್ರಾಮದಲ್ಲಿ ನಡೆದಿದೆ.

    ಮೃತಳನ್ನು ಕೋಮಲ್ ಕುಮಾರಿ ಎಂದು ಗುರುತಿಸಲಾಗಿದೆ. ವರದಕ್ಷಿಣೆಯಾಗಿ ಹಣ, ಸ್ಕಾರ್ಪಿಯೋ ಕಾರಿಗಾಗಿ ಮಹಿಳೆಯನ್ನು ಸುಟ್ಟು ಕೊಂದಿದ್ದಾರೆ.ಕೊಲೆ ಮಾಡಲಾಗಿದೆ ಎಂದು ಮೃತಳ ಸಹೋದರ ಮಹಿಳೆಯ ಪತಿ ಮತ್ತು ಅತ್ತೆಯ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ಸಿಂಧೂರ ರಾಜಕಾರಣ – ಸಂಸ್ಕೃತಿ ತಂಟೆಗೆ ಬರ್ಬೇಡಿ ಎಂದು ಸರ್ಕಾರದ ಎಚ್ಚರಿಕೆ

    BRIBE

    ಅಡುಗೆ ಮಾಡುವಾಗ ಪ್ರೆಶರ್ ಕುಕ್ಕರ್ ಸ್ಫೋಟಗೊಂಡು ಕೋಮಲ್ ಸುಟ್ಟು ಕರಕಲಾಗಿರುವುದಾಗಿ ಅತ್ತೆಯ ಮನೆಯವರು ಮಹಿಳೆಯ ತಾಯಿಯ ಮನೆಗೆ ಸುದ್ದಿ ಮುಟ್ಟಿಸಿದ್ದರು. ಮಹಿಳೆಯ ತವರಿನ ಮನೆಯವರು ತರಾತುರಿಯಲ್ಲಿ ಪಾವಾಪುರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾಳೆ. ವರದಕ್ಷಿಣೆಗಾಗಿ ತನ್ನ ಸಹೋದರಿಯನ್ನು ಜೀವಂತ ಸುಟ್ಟು ಹಾಕಲಾಗಿದೆ ಎಂದು ಮೃತನ ಸಹೋದರ ಆರೋಪಿಸಿದ್ದಾನೆ. ಆರೋಪಿ ಅಳಿಯನ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆಗೆ ಆಗ್ರಹಿಸಿದ್ದಾರೆ. ಮೃತ ಮಹಿಳೆಯ ಶವದ ಮರಣೋತ್ತರ ಪರೀಕ್ಷೆಯನ್ನು ಪಾವಾಪುರಿ ವಿಮ್ಸ್‌ನಲ್ಲಿ ನಡೆಸಲಾಗುತ್ತಿದೆ.