Tag: Dowry

  • ವಧುವಿನ ಕಡೆಯವರು ಬೈಕ್ ಕೊಡಿಸಿಲ್ಲವೆಂದು ಮದುವೆ ಮಂಟಪದಿಂದ ಓಡಿ ಹೋದ ವರ

    ವಧುವಿನ ಕಡೆಯವರು ಬೈಕ್ ಕೊಡಿಸಿಲ್ಲವೆಂದು ಮದುವೆ ಮಂಟಪದಿಂದ ಓಡಿ ಹೋದ ವರ

    ಲಕ್ನೋ: ವಧುವಿನ ಕಡೆಯವರು ಬೈಕ್ (Bike) ಕೊಡಿಸಿಲ್ಲ ಎಂದು ವರನೊಬ್ಬ ಮದುವೆ (Wedding) ಮಂಟಪದಿಂದ ಓಡಿ ಹೋದ ಘಟನೆ ಉತ್ತರಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.

    ಉತ್ತರಪ್ರದೇಶದ ಬಾರಾಬಂಕಿಯ ವಧುವಿಗೆ ಅಯೋಧ್ಯೆಯ ಮಾವಿಯ ವರನ ಜೊತೆ ವಿವಾಹ ಏರ್ಪಟ್ಟಿತ್ತು. ಈ ವೇಳೆ ವರದಕ್ಷಿಣೆಯಾಗಿ (Dowry) ಬೈಕ್‍ನ್ನು ಕೇಳಿದ್ದರು. ಆದರೆ ವಧುವಿನ ಕಡೆಯವರಿಗೆ ಬೈಕ್‍ನ್ನು ನೀಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲೇ ಮದುವೆ ಮಂಟಪದಲ್ಲೇ ವರನ ಕಡೆಯವರಿಗೂ ವಧುವಿನ ಕಡೆಯವರಿಗೂ ವಾಗ್ವಾದ ನಡೆದಿದೆ.

    ಈ ವೇಳೆ ವಧುವಿನ ತಂದೆ ಬೈಕ್ ಕೊಡಿಸುವಷ್ಟು ಹಣವಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ವರನ ತಂದೆ ಶ್ಯಾಮ್ ಲಾಲ್ ವರದಕ್ಷಿಣೆಯನ್ನು ಸರಿಯಾಗಿ ನೀಡಿಲ್ಲ ಎಂದು ಮದುವೆಯನ್ನು ರದ್ದುಗೊಳಿಸಿ ವರನೊಂದಿಗೆ ಮದುವೆ ಮಂಟಪದಿಂದ ಹೊರಟು ಹೋಗಿದ್ದಾರೆ. ಇದನ್ನೂ ಓದಿ: ಕರ್ನಾಟಕ ಪಾಲಿಟಿಕ್ಸ್ ಜಿದ್ದಾ ಜಿದ್ದಿ – ಬಿಜೆಪಿಗೆ ವಲಸೆ ಹೋಗಲು ಕಾಯ್ತಿವೆ ಹಕ್ಕಿಗಳು?

    ಘಟನೆಗೆ ಸಂಬಂಧಿಸಿ ವಧುವಿನ ಮನೆಯವರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಅಷ್ಟೇ ಅಲ್ಲದೇ ವಧು ಮದುವೆ ನಡೆಯದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ. ಈ ವೇಳೆ ಪೊಲೀಸರು ವರ ಶೀಘ್ರದಲ್ಲೇ ಬರುತ್ತಾನೆ. ಮದುವೆ ನಡೆಯುತ್ತದೆ ಎಂದು ವಧುವಿನ ಮನೆಯವರನ್ನು ಮನೆಗೆ ಕಳುಹಿಸಲು ಪ್ರಯತ್ನಿಸಿದ್ದಾರೆ.

    ಇದಕ್ಕೆ ಒಪ್ಪದ ವಧು ತನ್ನ ತಂದೆ- ತಾಯಿ ಬಡವರು. ಶಾಸ್ತ್ರೋಕ್ತ ವಿವಾಹಕ್ಕೆ ಚಿನ್ನ ಉಂಗುರು ಹಾಗೂ 5,000 ಅಗತ್ಯವಿತ್ತು. ಅದನ್ನು ಕೊಟ್ಟಿದ್ದೆವು. ಆದರೂ ವರದಕ್ಷಿಣೆ ಕೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಆಕೆ ತನಗೆ ಮದುವೆ ಮಾಡಿಸುವಂತೆ ಪೊಲೀಸರ ಬಳಿ ವಿನಂತಿಸಿದ್ದಾಳೆ. ಅಷ್ಟೇ ಅಲ್ಲದೇ ಮದುವೆಯಾಗದಿದ್ದರೆ ನಾನು ನನ್ನ ಜೀವವನ್ನೇ ತೆಗೆದುಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾಗಿ ತಿಳಿಸಿದರು. ಇದನ್ನೂ ಓದಿ: ಸಿನಿಮಾ ರೀತಿಯಲ್ಲೇ ಮನೆಗೆ ನುಗ್ಗಿದ 50 ಗೂಂಡಾಗಳು- ವೈದ್ಯೆ ಕಿಡ್ನ್ಯಾಪ್

    Live Tv
    [brid partner=56869869 player=32851 video=960834 autoplay=true]

  • ವರದಕ್ಷಿಣೆ ಕಿರುಕುಳ ಆರೋಪ- ಮದುವೆಯಾಗಿ ಒಂದೂವರೆ ವರ್ಷಕ್ಕೆ ಗೃಹಿಣಿ ಆತ್ಮಹತ್ಯೆ

    ವರದಕ್ಷಿಣೆ ಕಿರುಕುಳ ಆರೋಪ- ಮದುವೆಯಾಗಿ ಒಂದೂವರೆ ವರ್ಷಕ್ಕೆ ಗೃಹಿಣಿ ಆತ್ಮಹತ್ಯೆ

    ಶಿವಮೊಗ್ಗ: ಮದುವೆಯಾಗಿ (Marriage) ಒಂದೂವರೆ ವರ್ಷಕ್ಕೆ ವಿವಾಹಿತೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ನಡೆದಿದೆ.

    ಮೃತ ಗೃಹಿಣಿಯನ್ನು ಸಂಗೀತ (24) ಎಂದು ಗುರುತಿಸಲಾಗಿದೆ. ಶಿಕಾರಿಪುರ ತಾಲೂಕಿನ ಉಡುಗಣಿ ಗ್ರಾಮದ ಸಂಗೀತ ಹಾಗೂ ಶಿರಾಳಕೊಪ್ಪದ ಹರೀಶ್ ಕಳೆದ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದರು. ವಿವಾಹದ ಸಂದರ್ಭದಲ್ಲಿ ಹುಡುಗಿಯ ತಂದೆ ಚಿನ್ನಾಭರಣ ಹಾಗೂ ಹಣವನ್ನು ವರದಕ್ಷಿಣೆಯಾಗಿ ನೀಡಿದ್ದರು. ಆದರೂ ಹೆಚ್ಚಿನ ವರದಕ್ಷಿಣೆ (Dowry) ತರುವಂತೆ ಗಂಡನ ಮನೆಯವರು ಆಗಾಗ ಮೃತ ಸಂಗೀತಾಳಿಗೆ ಕಿರುಕುಳ ನೀಡುತ್ತಿದ್ದರು. ಗಂಡನ (Husband) ಮನೆಯವರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಗೀತ ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಮೈಸೂರು ರಿಂಗ್ ರಸ್ತೆ – ಬೀದಿ ದೀಪಗಳ MCBಯನ್ನೇ ಕದ್ದ ಕಳ್ಳರು

    ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಅನಿಸಿದರೂ, ಮೃತಳ ದೇಹದ ಮೇಲೆ ಗಾಯಗಳಾಗಿವೆ. ಹೀಗಾಗಿ ಪತಿ ಹಾಗೂ ಆತನ ಕುಟುಂಬಸ್ಥರೇ ಕೊಲೆ ಮಾಡಿ‌ ನೇಣು ಹಾಕಿದ್ದಾರೆ ಎಂಬುದು ಸಂಗೀತ ಪೋಷಕರ ಆರೋಪವಾಗಿದೆ. ಘಟನೆ ಕುರಿತು ಶಿರಾಳಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಂತರ ಆರೋಪಿ ಪತಿ ಹರೀಶ್ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರ ತನಿಖೆಯ ನಂತರವಷ್ಟೇ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಬಹಿರಂಗವಾಗಬೇಕಿದೆ. ಇದನ್ನೂ ಓದಿ: ಲೇಡಿ PSI ಕಿರುಕುಳ ಆರೋಪ- ಡೆತ್‌ನೋಟ್ ಬರೆದಿಟ್ಟು ಯುವಕ ನಾಪತ್ತೆ

    Live Tv
    [brid partner=56869869 player=32851 video=960834 autoplay=true]

  • ವರದಕ್ಷಿಣೆಗಾಗಿ ಮದುವೆಯಾಗಿ ಹಣ ಸಿಕ್ಕ ಮೇಲೆ ಮಹಿಳೆಗೆ ಮೋಸ ಮಾಡಿ ಪರಾರಿಯಾಗ್ತಿದ್ದ ವ್ಯಕ್ತಿ ಅರೆಸ್ಟ್

    ವರದಕ್ಷಿಣೆಗಾಗಿ ಮದುವೆಯಾಗಿ ಹಣ ಸಿಕ್ಕ ಮೇಲೆ ಮಹಿಳೆಗೆ ಮೋಸ ಮಾಡಿ ಪರಾರಿಯಾಗ್ತಿದ್ದ ವ್ಯಕ್ತಿ ಅರೆಸ್ಟ್

    ಲಕ್ನೋ: ಮ್ಯಾಟ್ರಿಮೋನಿಯಲ್ ವೆಬ್‍ಸೈಟ್‍ನಲ್ಲಿ (Matrimonial Site) ನಕಲಿ ಪ್ರೊಪೈಲ್‍ಗಳನ್ನು ಸೃಷ್ಟಿಸಿ ವರದಕ್ಷಿಣೆಗಾಗಿ (Dowry) ಮಹಿಳೆಯರನ್ನು ಬಲೆಗೆ ಬೀಳಿಸಿ ನಂತರ ಅವರನ್ನು ವಂಚಿಸುತ್ತಿದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಸಂಜಯ್ ಸಿಂಗ್ ಅಲಿಯಾಸ್ ಹರಿಓಂ ದುಬೆ (38) ಬಂಧಿತ ವ್ಯಕ್ತಿ. ಈತ ಮೂಲತಃ ಬಿಹಾರನವನಾಗಿದ್ದು, ಶಾದಿ ಡಾಟ್ ಕಾಮ್‍ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ತಾನು ಎಂಜಿನಿಯರ್ ಎಂದು ಹೇಳಿಕೊಂಡಿದ್ದ. ಹೀಗೆ ಅನೇಕರನ್ನು ಮದುವೆ ಆಗಿದ್ದ. ಅದಾದ ಬಳಿಕ ವರದಕ್ಷಿಣೆಯಾಗಿ ಕಾರು, ನಗದು (Money), ಆಭರಣಗಳನ್ನು ಪಡೆದುಕೊಂಡು ಅಲ್ಲಿಂದ ಪರಾರಿಯಾಗುತ್ತಿದ್ದ. ಹೀಗೆ ಅನೇಕರಿಗೆ ಮಾಡಿದ್ದ.  ಅದಾದ ಬಳಿಕ ತಲೆ ಮರೆಸಿಕೊಂಡಿದ್ದ.

    ಘಟನೆಗೆ ಸಂಬಂಧಿಸಿ ಪ್ರತಾಪಘಢ ನಿವಾಸಿ ಮಹಿಳೆಯೊಬ್ಬರು ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಅವರು ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಸಂಜಯ್‌ನನ್ನು ಭೇಟಿಯಾಗಿದ್ದೆ. ನಂತರ ಅವನನ್ನೆ ಮದುವೆಯಾದೆ. ಆದರೆ ಮದುವೆಯಾದ ಕೂಡಲೇ ವರದಕ್ಷಿಣೆಗಾಗಿ ಕಿರುಕುಳ ನೀಡಲಾರಂಭಿಸಿದ್ದ. ಈ ಹಿನ್ನೆಲೆಯಲ್ಲಿ ವರದಕ್ಷಿಣೆಯನ್ನು ನೀಡಲಾಗಿತ್ತು.

    ಅದಾದ ಬಳಿಕ ಸಂಜಯ್ ತನ್ನನ್ನು ಬಿಹಾರಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾಗ ಆತ ವರದಕ್ಷಿಣೆಯಾಗಿ ನೀಡಿದ್ದ 1 ಲಕ್ಷ ರೂ. ನಗದು, ಚಿನ್ನಾಭರಣ ಹಾಗೂ ಕಾರಿನೊಂದಿಗೆ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಇದನ್ನೂ ಓದಿ: ಅಸ್ಸಾಂ, ಮೇಘಾಲಯ ಗಡಿಯಲ್ಲಿ ಮರ ಕಳ್ಳಸಾಗಣೆ – ಘರ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿ 6 ಸಾವು

    ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುವಾಗ ಈಗಾಗಲೇ ಸಂಜಯ್‍ಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಲಕ್ನೋ ಪೊಲೀಸರು ಆಶಿಯಾನಾ ಅಂಡರ್‌ಪಾಸ್‍ನಲ್ಲಿ ಆರೋಪಿ ಸಂಜಯ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಶಾರೀಕ್‌ ಬಳಿಯಿದ್ದ ಕುಕ್ಕರ್‌ ಬಾಂಬ್‌ಗೆ ಬಸ್ಸನ್ನೇ ಸ್ಫೋಟಿಸುವ ಸಾಮರ್ಥ್ಯ ಇತ್ತು

    Live Tv
    [brid partner=56869869 player=32851 video=960834 autoplay=true]

  • ಲಿವಿಂಗ್ ಟುಗೆದರ್ ಟೆನ್ಶನ್- ಮಹಿಳಾ ಆಯೋಗಕ್ಕೆ ದೂರುಗಳ ಸುರಿಮಳೆ

    ಲಿವಿಂಗ್ ಟುಗೆದರ್ ಟೆನ್ಶನ್- ಮಹಿಳಾ ಆಯೋಗಕ್ಕೆ ದೂರುಗಳ ಸುರಿಮಳೆ

    ಬೆಂಗಳೂರು: ಪತಿ-ಪತ್ನಿ ಕಲಹ, ವರದಕ್ಷಿಣೆ ಕಿರುಕುಳ, ಮದುವೆಯಾಗೋದಾಗಿ ನಂಬಿಸಿ ಮೋಸ ಹೀಗೆ ನಾನಾ ಕೇಸ್‍ಗಳನ್ನು ಆಟೆಂಡ್ ಮಾಡ್ತಿರುವ ಮಹಿಳಾ ಆಯೋಗಕ್ಕೆ ಈಗ ಹೊಸ ತಲೆನೋವು ಶುರುವಾಗಿದೆ ಅದೇ ಲಿವಿಂಗ್ ಟುಗೆದರ್ (Living Together) ಕಂಟಕ.

    ಬೆಂಗಳೂರಿನಲ್ಲಿ ಈಗ ಲಿವಿಂಗ್ ಟುಗೆದರ್ ಕಲಹ ಹೆಚ್ಚಾಗ್ತಿದೆಯಂತೆ. ಅದರಲ್ಲೂ ಲಿವಿಂಗ್ ಟುಗೆದರ್ ಜೋಡಿಗಳಲ್ಲಿ ಕಲಹ ಉಂಟಾಗಿ ಅನೇಕ ಹೆಣ್ಣುಮಕ್ಕಳು ಮಹಿಳಾ ಆಯೋಗ (Women Commission) ದ ಮೆಟ್ಟಿಲೇರುತ್ತಿದ್ದಾರಂತೆ. ಕಾಲೇಜ್, ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾಗಿ ಲಿವಿಂಗ್ ಟುಗೆದರ್ ನಿರ್ಧಾರವನ್ನು ತೆಗೆದುಕೊಂಡು ಒಟ್ಟಾಗಿ ಒಂದೇ ಮನೆಯಲ್ಲಿ ಜೀವನ ಸಾಗಿಸ್ತಾರೆ. ಆದರೆ ವರ್ಷ ಕಳೆಯೋದ್ರೊಳಗೆ ಗಲಾಟೆ ಶುರುವಾಗಿ ಹೆಣ್ಣುಮಕ್ಕಳು ನ್ಯಾಯ ಕೊಡಿಸಿ ಅಂತಾ ಆಯೋಗದ ಮೆಟ್ಟಿಲೇರುತ್ತಿದ್ದಾರಂತೆ. ಲಿವಿಂಗ್ ಟುಗೆದರ್ ಚಾಳಿಯಿಂದ ಹೆಣ್ಣುಮಕ್ಕಳು ತಮ್ಮ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದ್ದಾರೆ. ಇನ್ನು ಇಂತಹ ಕೇಸ್‍ನಲ್ಲಿ ನ್ಯಾಯ ಒದಗಿಸೋದು ಕೂಡ ಕಷ್ಟ ಅಂತ ಆಯೋಗದ ಅಧ್ಯಕ್ಷರು ಹೇಳುತ್ತಾರೆ.

    ಇನ್ನು ಪ್ರಮುಖವಾಗಿ ವಿದ್ಯಾರ್ಥಿನಿಯರಲ್ಲಿ, ಮಹಿಳೆಯರು ಕಾರ್ಯನಿರ್ವಹಿಸುವ ಸ್ಥಳದಲ್ಲಿ ಈಗಾಗಲೇ ಲಿವಿಂಗ್ ಟುಗೆದರ್ ಮೋಸದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಹಿಳಾ ಆಯೋಗ ಮಾಡಲು ನಿರ್ಧರಿಸಿದ್ದು ಹಲವಡೆ ಪ್ರಾಯೋಗಿಕವಾಗಿ ಆರಂಭಿಸಿದೆ. ಲಿವಿಂಗ್ ಟುಗೆದರ್ ಚಾಳಿಯಿಂದಾಗಿ ಮಹಿಳೆಯರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕೂಡ ಸಮಸ್ಯೆಯಾಗುತ್ತಿದೆ. ಖಿನ್ನತೆಯಂತಹ ಸಮಸ್ಯೆ ಕೂಡ ಎದುರಿಸಬೇಕಾಗಿದ್ದು ಆತಂಕಕ್ಕೆ ಕಾರಣವಾಗ್ತಿದೆ.

    ಮೋಸ ಹೋದ ಬಳಿಕ ನ್ಯಾಯಕ್ಕಾಗಿ ಮೊರೆ ಹೋಗುವ ಬದಲು, ಮೋಸ ಹೋಗದಂತೆ ಎಚ್ಚರ ವಹಿಸಬೇಕಾಗಿದೆ. ಬದುಕು ರೂಪಿಸಿಕೊಳ್ಳವ ಹಂತದಲ್ಲಿ ಮಹಿಳೆಯರು ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.

    Live Tv
    [brid partner=56869869 player=32851 video=960834 autoplay=true]

  • 50 ಲಕ್ಷ ರೂ, 1 ಕೆಜಿ ಚಿನ್ನ ಕೊಟ್ಟರೂ ಹಣ ಬೇಕೆಂದ – ಹೈದರಾಬಾದ್ ವೈದ್ಯೆಗೆ ವಂಚನೆ

    50 ಲಕ್ಷ ರೂ, 1 ಕೆಜಿ ಚಿನ್ನ ಕೊಟ್ಟರೂ ಹಣ ಬೇಕೆಂದ – ಹೈದರಾಬಾದ್ ವೈದ್ಯೆಗೆ ವಂಚನೆ

    ಬಳ್ಳಾರಿ: ಜಿಲ್ಲೆಯಲ್ಲಿ ಮತ್ತೊಂದು ಹೈಪ್ರೊಫೈಲ್ ವರದಕ್ಷಿಣೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹೈದ್ರಾಬಾದ್ ಮೂಲದ ವೈದ್ಯೆಯನ್ನು ಮದುವೆಯಾಗಿ ಪ್ರತಿನಿತ್ಯ ವರದಕ್ಷಿಣೆ ಕಿರುಕುಳ ನೋಡುತ್ತಿದ್ದ ವ್ಯಕ್ತಿ ಇದೀಗ ಮತ್ತೊಂದು ವಿವಾಹವಾಗಿ ಮಹಿಳೆಗೆ ವಂಚಿಸಿದ್ದಾನೆ.

    ಬಳ್ಳಾರಿ ಮೂಲದ ರಘುರಾಮ ರೆಡ್ಡಿ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು ಹೈದರಾಬಾದ್ ಮೂಲದ ಡಾಕ್ಟರ್ ಮೌನಿಕಾರಿಗೆ ಅವರನ್ನು 2019ರಲ್ಲಿ ಮದುವೆಯಾಗಿದ್ದನು. ಮದುವೆ ವೇಳೆ ಐವತ್ತು ಲಕ್ಷ ರೂಪಾಯಿ ವರದಕ್ಷಿಣೆ, ಒಂದು ಕೆ.ಜಿ. ಬಂಗಾರವನ್ನು ನೀಡಲಾಗಿತ್ತು. ಆದರೆ ಎರಡು ತಿಂಗಳು ಕೂಡ ಸಂಸಾರ ಮಾಡದ ರಘುರಾಮ ರೆಡ್ಡಿ ಹಣಕ್ಕಾಗಿ ಹೆಂಡತಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದನು. ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಸಾಹಿತಿ ಕಾಹು ಇನ್ನಿಲ್ಲ

    ಆಸ್ಟ್ರೆಲಿಯಾದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ರಘುರಾಮ ರೆಡ್ಡಿಗೆ ನಿಜವಾಗಿಯೂ ಯಾವುದೇ ಕೆಲಸವಿಲ್ಲರಲಿಲ್ಲ. ಹೀಗಾಗಿ ನಿತ್ಯ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದನು. ಈ ಹಿನ್ನಲೆ ಮನೆಯಿಂದ ವೈದ್ಯೆ ಹೊರ ಬಂದಿದ್ದರು. ಆದರೆ ಇದೀಗ ಪತ್ನಿಯಿಂದ ವಿಚ್ಛೇದನ ಪಡೆಯದೇ ಮತ್ತೊಂದು ಮದುವೆಯಾಗಿದ್ದಾನೆ. ಈ ಬಗ್ಗೆ ಪ್ರಶ್ನಿಸಲು ಬಂದ ಮೊದಲ ಹೆಂಡತಿ, ಮತ್ತವರ ಮನೆಯವರ ಮೇಲೆ ಮಾರಾಕಾಸ್ತ್ರಗಳಿಂದ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾನೆ.

    ಈ ಬಗ್ಗೆ ವೈದ್ಯೆ ನೀಡಿದ್ದ ದೂರಿನ ಮೇರೆಗೆ ಗಂಡ ರಘುರಾಮ ರೆಡ್ಡಿ, ತಂದೆ ನಾಗೀರೆಡ್ಡಿ, ಸಹೋದರ ಹರೀಶ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಸೇರಿದಂತೆ ಕುಟುಂಬ ಏಳು ಜನರ ಮೇಲೆ ದೂರು ದಾಖಲಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಅಪಘಾತ – ಇನ್ಸ್‌ಪೆಕ್ಟರ್ ದಂಪತಿಯಿಂದ ಕಿರಿಕ್

    Live Tv
    [brid partner=56869869 player=32851 video=960834 autoplay=true]

  • ವರದಕ್ಷಿಣೆಗಾಗಿ ಸೊಸೆಯನ್ನು ಹೊರಹಾಕಿದವರ ಮನೆ ಮುಂದೆ ಘರ್ಜಿಸಿತು ಬುಲ್ಡೋಜರ್‌ – ಮುಂದೇನಾಯ್ತು?

    ವರದಕ್ಷಿಣೆಗಾಗಿ ಸೊಸೆಯನ್ನು ಹೊರಹಾಕಿದವರ ಮನೆ ಮುಂದೆ ಘರ್ಜಿಸಿತು ಬುಲ್ಡೋಜರ್‌ – ಮುಂದೇನಾಯ್ತು?

    ಲಕ್ನೋ: ಹಿಂಸಾಚಾರದ ಆರೋಪಿಗಳ ವಿರುದ್ಧ ʼಬುಲ್ಡೋಜರ್‌ ಕಾರ್ಯಾಚರಣೆʼ ನಡೆಸುತ್ತೇವೆಂದು ಹೇಳಿ ಅಮಾಯಕರ ಮನೆಗಳನ್ನೂ ಧ್ವಂಸ ಮಾಡಲಾಗುತ್ತಿದೆ ಎಂಬ ವಿವಾದಕ್ಕೆ ಉತ್ತರ ಪ್ರದೇಶ ಸರ್ಕಾರ ಸಿಲುಕಿತ್ತು. ಆದರೆ ಈ ಯೋಜನೆಯನ್ನು ಪೊಲೀಸರು ಸಕಾರಾತ್ಮಕ ಕಾರ್ಯಗಳಿಗೆ ಬಳಿಸಿಕೊಂಡಿದ್ದಾರೆ.

    ಹೌದು, ವರದಕ್ಷಿಣೆಗಾಗಿ ಪತಿ ಮನೆಯಿಂದ ಹೊರಹಾಕಲ್ಪಟ್ಟ ಮಹಿಳೆಗೆ ಸಹಾಯ ಮಾಡಲು ಪೊಲೀಸರು ಮೊದಲ ಬಾರಿಗೆ ʼಬುಲ್ಡೋಜರ್‌ ಆಪರೇಷನ್‌ʼ ಪ್ಲ್ಯಾನ್‌ ಬಳಸಿಕೊಂಡಿದ್ದಾರೆ. ಸಂತ್ರಸ್ತೆ ತನ್ನ ಗಂಡನ ಮನೆಗೆ ಮರಳಲು ಸಹಾಯ ಮಾಡುವಂತೆ ಅಲಹಾಬಾದ್‌ ಹೈಕೋರ್ಟ್‌ ಆದೇಶಿಸಿದ ನಂತರ ಬಿಜ್ನೋರ್‌ ಜಿಲ್ಲೆಯ ಮನೆಯ ಮುಂದೆ ಬುಲ್ಡೋಜರ್‌ ಘರ್ಜಿಸಿದೆ. ಇದನ್ನೂ ಓದಿ: ಚಿರಯುವಕರಂತೆ ವಾಲಿಬಾಲ್ ಆಡಿದ ಭಗವಂತ್ ಮಾನ್ – ವೀಡಿಯೋ ವೈರಲ್

    ಮಹಿಳೆ ನೂತನಾ ಮಲಿಕ್‌ ಪತಿ ರಾಬಿನ್‌ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಈ ವೇಳೆ ಕುಟುಂಬದವರಿಗೆ ನ್ಯಾಯಾಲಯದ ಆದೇಶದ ಕುರಿತು ಮನವರಿಕೆ ಮಾಡಿದ್ದಾರೆ. ಆದೇಶ ಪಾಲಿಸದಿದ್ದರೆ ಬುಲ್ಡೋಜರ್‌ ಆಪರೇಷನ್‌ ಮಾಡುವ ಎಚ್ಚರಿಕೆ ಕೂಡ ನೀಡಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಹೊರಗಡೆ ಬುಲ್ಡೋಜರ್‌ ಇರುವ ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಖ್ಯಾತ ಅರ್ಥಶಾಸ್ತ್ರಜ್ಞ ಅಭಿಜಿತ್‌ ಸೇನ್‌ ನಿಧನ

    ಮಹಿಳೆಯ ಗಂಡನ ಮನೆಯವರು ಬಾಗಿಲು ಹಾಕಿಕೊಂಡಿದ್ದರು. ʻನಾವು ನಿಮ್ಮನ್ನು ವಿನಂತಿಸುತ್ತೇವೆ ಅಮ್ಮಾ.. ದಯವಿಟ್ಟು ಬಾಗಿಲು ತೆರೆಯಿರಿ. ಇದು ಹೈಕೋರ್ಟ್‌ನ ಆದೇಶʼ ಎಂದು ಅಧಿಕಾರಿಯೊಬ್ಬರು ಧ್ವನಿವರ್ಧಕದಲ್ಲಿ ಹೇಳುತ್ತಿರುವ ದೃಶ್ಯ ವೀಡಿಯೋದಲ್ಲಿದೆ.

    Allahabad high court

    ಪೊಲೀಸ್ ತಂಡವು ಮಹಿಳೆ ತನ್ನ ಅತ್ತೆಯ ಮನೆಗೆ ಮರಳಲು ಸಹಾಯ ಮಾಡಿದೆ. ಈಗ ಪರಿಸ್ಥಿತಿ ತಿಳಿಗೊಂಡಿದೆ ಎಂದು ಬಿಜ್ನೋರ್ ಪೊಲೀಸ್ ಅಧೀಕ್ಷಕ (ನಗರ) ಪ್ರವೀಣ್ ರಂಜನ್ ಸಿಂಗ್ ಹೇಳಿದ್ದಾರೆ.

    2017ರಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಗಂಡನ ಮನೆಯವರು ಕಿರುಕುಳ ನೀಡಲಾರಂಭಿಸಿದರು. 5 ಲಕ್ಷ ಹಾಗೂ ಬೊಲೆರೊ ಕಾರಿಗೆ ಬೇಡಿಕೆ ಇಟ್ಟಿದ್ದರು. ಅವರ ಬೇಡಿಕೆ ಈಡೇರಿಸದ ನನ್ನ ಮಗಳನ್ನು ಥಳಿಸಿ ಮನೆಯಿಂದ ಹೊರಹಾಕಿದ್ದರು. 2019ರಿಂದ ಮಗಳು ನಮ್ಮೊಂದಿಗೆ ವಾಸವಾಗಿದ್ದಳು ಎಂದು ಮಹಿಳೆಯ ತಂದೆ ಆರೋಪಿಸಿದ್ದರು.

    ನಿನ್ನೆ ಪೊಲೀಸರು ಅಲ್ಲಿಗೆ ಹೋದಾಗಲೂ ಮನೆಯವರು ಒಂದು ಗಂಟೆಯವರೆಗೂ ಬಾಗಿಲು ತೆರೆಯಲಿಲ್ಲ. ನಂತರ ಪೊಲೀಸರು ಸ್ಥಳಕ್ಕೆ ಬುಲ್ಡೋಜರ್ ತಂದರು. ಆಗ ನನ್ನ ಮಗಳನ್ನು ಮನೆಗೆ ಸೇರಿಸಿಕೊಂಡರು ಎಂದು ಆಕೆ ತಂದೆ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 3 ಗ್ರಾಂ ಚಿನ್ನ ನೀಡದ್ದಕ್ಕೆ ಕಿರುಕುಳ: ಗೃಹಿಣಿ ಅನುಮಾನಾಸ್ಪದ ಸಾವು

    3 ಗ್ರಾಂ ಚಿನ್ನ ನೀಡದ್ದಕ್ಕೆ ಕಿರುಕುಳ: ಗೃಹಿಣಿ ಅನುಮಾನಾಸ್ಪದ ಸಾವು

    ದಾವಣಗೆರೆ: ಮದುವೆಯಾಗಿ ಮೂರು ತಿಂಗಳಿಗೆ ಅನುಮಾನಸ್ಪದವಾಗಿ ಗೃಹಿಣಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮೀಯಾಪುರದಲ್ಲಿ ನಡೆದಿದೆ.

    ರೂಪಬಾಯಿ(22) ವಿಷ ಸೇವನೆ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಗೃಹಿಣಿ. ರೂಪಾಬಾಯಿ ಸಾವು ಕೊಲೆ ಎಂದು ಕೇಳಿಬರುತ್ತಿದ್ದು, ಇದಕ್ಕೆ ಕಾರಣ ಗಂಡನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡಿ, ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.

    ರೂಪಬಾಯಿ ಮೂರು ತಿಂಗಳ ಹಿಂದೆ ಗಂಗಾಧರ್(32) ಜೊತೆ ಮದುವೆಯಾಗಿದ್ದಳು. ಮದುವೆಗೆ ರೂಪಬಾಯಿ ಪೋಷಕರು ವರದಕ್ಷಿಣೆ ನೀಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆದರೆ ಗಂಗಾಧರ್ ಪೋಷಕರು 3ಗ್ರಾಂ ಚಿನ್ನ ಕಡಿಮೆ ನೀಡಿದ್ದಾರೆ ಎಂದು ರೂಪಬಾಯಿಗೆ ಕಿರುಕುಳ ನೀಡುತ್ತಿದ್ದರು. ಜೊತೆಗೆ ರೂಪಬಾಯಿ ಒಂದುವರೆ ತಿಂಗಳ ಗರ್ಭಿಣಿಯಾಗಿದ್ದರೂ, ಗಂಡನ ಮನೆಯವರು ನಿತ್ಯ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬರುತ್ತಿದೆ. ಇದನ್ನೂ ಓದಿ: ತ್ರಿವರ್ಣ ಧ್ವಜದ ಡಿಪಿ ಹಾಕಿದ ಆರ್‌ಎಸ್‌ಎಸ್‌

    ವರದಕ್ಷಿಣೆ ಕಡಿಮೆ ನೀಡಿರುವುದಕ್ಕೆ ರೂಪಬಾಯಿಯ ಮೇಲೆ ಆಕೆಯ ಪತಿಯ ಮನೆಯವರು ಹಲ್ಲೆ ಮಾಡಿ, ವಿಷ ಕುಡಿಸಿ ನಂತರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಷ್ಟೇ ಅಲ್ಲದೇ, ರೂಪಬಾಯಿಯನ್ನು ಆಸ್ಪತ್ರೆಗೆ ದಾಖಲು ಮಾಡಿ 2 ದಿನದ ನಂತರ ಗಂಗಾಧರ್ ವಿಷಯ ತಿಳಿಸಿದ್ದಾನೆ ಎಂದು ಗಂಡನ ಮನೆಯವರ ವಿರುದ್ಧ ರೂಪಬಾಯಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

    ವಿಷ ಸೇವಿಸಿ ತೀವ್ರ ಗಂಭೀರ ಪರಿಸ್ಥಿತಿಯಲ್ಲಿದ್ದ ರೂಪಾಬಾಯಿ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಮುಂಭಾಗದಲ್ಲಿ ರೂಪಬಾಯಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧಿಸಿ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇಂದಿನಿಂದ ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನ

    Live Tv
    [brid partner=56869869 player=32851 video=960834 autoplay=true]

  • ಪತ್ನಿ ಮೇಲೆ ಮೂತ್ರವಿಸರ್ಜನೆ ಮಾಡಿ ವಿಕೃತಿ ಮೆರೆದ ಪತಿ ವಿರುದ್ಧ ದೂರು

    ಪತ್ನಿ ಮೇಲೆ ಮೂತ್ರವಿಸರ್ಜನೆ ಮಾಡಿ ವಿಕೃತಿ ಮೆರೆದ ಪತಿ ವಿರುದ್ಧ ದೂರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರತಿಷ್ಠಿತ ಉದ್ಯಮಿ ಪುತ್ರಿಗೆ ವರದಕ್ಷಿಣೆ ಕಿರುಕುಳ ಆರೋಪವೊಂದು ಕೇಳಿಬಂದಿದೆ.

    ಈ ಸಂಬಂಧ ಉದ್ಯಮಿ ಪುತ್ರಿ ಸಂದೀಪ್ ಎಂಬಾತನ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಸಂದೀಪ್ ಆಗಾಗ ಮನೆಯಲ್ಲಿ ಸ್ನೇಹಿತರೊಂದಿಗೆ ಡ್ರಗ್ಸ್ ಪಾರ್ಟಿ ಮಾಡಿತ್ತಿರುತ್ತಾನೆ. ಬಳಿಕ ಗೆಳೆಯರ ಮುಂದೇಯೇ ಹಲ್ಲೆ ನಡೆಸಿ ಅಶ್ಲೀಲವಾಗಿ ಬೈಯುತ್ತಾನೆ. ಅಲ್ಲದೆ ತನ್ನ ಮೇಲೆ ಮೂತ್ರವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾನೆ ಎಂದು ಪತ್ನಿ ತಿಳಿಸಿದ್ದಾರೆ.

    ದೂರು ನೀಡಿರುವಾಕೆಯ ತಂದೆ ತೆಲಂಗಾಣದಲ್ಲಿ ಪ್ರತಿಷ್ಠಿತ ಬಟ್ಟೆ ಕಂಪನಿ ಹೊಂದಿದ್ದಾರೆ. 2021ರ ಜನವರಿಯಲ್ಲಿ ರಾಮೋಜಿ ಫಿಲಂ ಸಿಟಿಯಲ್ಲಿ ಮಗಳನ್ನು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಈ ವೇಳೆ 4 ಕೆಜಿ ಚಿನ್ನ, 200 ಕೆಜಿ ಬೆಳ್ಳಿ, 50 ಲಕ್ಷ ಹಣ, 55 ಲಕ್ಷದ ಮಿನಿಕೂಪರ್ ಕಾರು ವರದಕ್ಷಿಣೆ ನೀಡಿದ್ದರು. ಇದನ್ನೂ ಓದಿ: ದೇವನಹಳ್ಳಿಯಲ್ಲಿ ಒಂಟಿ ಮಹಿಳೆ ಕೊಲೆ – ಕತ್ತು ಕೊಯ್ದು ನಗದು ದೋಚಿದ್ದ ಕೆಲಸಗಾರನ ಬಂಧನ

    ಇಷ್ಟು ವರದಕ್ಷಿಣೆ ಕೊಟ್ಟಿದ್ರೂ ಸಂದೀಪ್‍ಗೆ ಹಣದಾಹ ನೀಗಿರಲಿಲ್ಲ. ಸಂದೀಪ್ ಹೆಸರಿಗೆ ತೆಲಂಗಾಣದಲ್ಲಿ 2 ಬಟ್ಟೆ ಶಾಪ್ ಮಾಡಿಕೊಡಲಾಗಿತ್ತು. ಇಷ್ಟೆಲ್ಲಾ ವರದಕ್ಷಿಣೆ ಕೊಟ್ಟರೂ ಪತಿ ಡ್ರಗ್ ಸೇವಿಸಿ ಪತ್ನಿಗೆ ಹಿಂಸೆ ನೀಡುತ್ತಿದ್ದನು. ಇದೀಗ ಪತಿಯ ಹಿಂಸೆ ತಾಳಲಾರದೆ ನೊಂದ ಪತ್ನಿ ಪೊಲೀಸ್ ಮೆಟ್ಟಿಲು ಹತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವರದಕ್ಷಿಣೆ ನೀಡದ್ದಕ್ಕೆ ಸ್ನೇಹಿತರೊಂದಿಗೆ ಪತ್ನಿಯನ್ನೇ ಗ್ಯಾಂಗ್‌ರೇಪ್‌ಗೈದ

    ವರದಕ್ಷಿಣೆ ನೀಡದ್ದಕ್ಕೆ ಸ್ನೇಹಿತರೊಂದಿಗೆ ಪತ್ನಿಯನ್ನೇ ಗ್ಯಾಂಗ್‌ರೇಪ್‌ಗೈದ

    ಲಕ್ನೋ: ಪತ್ನಿ ವರದಕ್ಷಿಣೆ ತಂದು ಕೊಡಲಿಲ್ಲವೆಂದು ಪತಿಯೊಬ್ಬ ಸ್ನೇಹಿತರ ಜೊತೆ ಸೇರಿ ಪತಿಯನ್ನು ಅತ್ಯಾಚಾರ ಮಾಡಿರುವ ಘಟನೆಯೊಂದು ಕಾನ್ಪುರದಲ್ಲಿ ನಡೆದಿದೆ.

    ವರದಕ್ಷಿಣೆಗಾಗಿ ಪತಿಯೊಬ್ಬ ಪತ್ನಿಯ ಕುಟುಂಬವನ್ನು ಪೀಡಿಸುತ್ತಿದ್ದ. ಇತ್ತ ಪತ್ನಿಗೂ ಕಿರುಕುಳ ನೀಡುತ್ತಿದ್ದ. ಪತ್ನಿಯ ಕುಟುಂಬ ವರದಕ್ಷಿಣೆಯನ್ನು ನೀಡಲಿಲ್ಲವೆಂದು ತನ್ನ ಸ್ನೇಹಿತರ ಜೊತೆ ಸೇರಿ ಪತ್ನಿಯನ್ನು ಪತಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾನೆ. ಈ ಹಿನ್ನೆಲೆ ಮಹಿಳೆಯ ಕುಟುಂಬ, ಆಕೆಯ ಪತಿ ಮತ್ತು ಆತನ ಸ್ನೇಹಿತರ ವಿರುದ್ಧ ಕಿರುಕುಳ ಮತ್ತು ಅತ್ಯಾಚಾರ ಆರೋಪದ ಮೇಲೆ ಚಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮ್ಯೂಸಿಕ್ ಶೂಟ್ ವೇಳೆ ದಾಳಿ: 8 ಮಹಿಳಾ ರೂಪದರ್ಶಿಗಳ ಮೇಲೆ ಅತ್ಯಾಚಾರ

    ದೂರಿನಲ್ಲಿ ಏನಿದೆ?
    2020 ರ ಮಾರ್ಚ್ 6 ರಂದು ನಾವು ಮದುವೆಯಾಗಿದ್ದು, ಅಂದಿನಿಂದ ನನ್ನ ಪತಿ ವರದಕ್ಷಿಣೆಯಾಗಿ 2 ಲಕ್ಷ ರೂ. ಮತ್ತು ಕಾರಿಗೆ ಬೇಡಿಕೆಯಿಟ್ಟಿದ್ದ. ಅವರ ಬೇಡಿಕೆಗಳನ್ನು ನಾವು ಈಡೇರದಿದ್ದಾಗ ನನ್ನನ್ನು ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು. ಅಷ್ಟೇ ಅಲ್ಲದೇ ನನ್ನ ಪತಿ ತನ್ನ ಮೂವರು ಸ್ನೇಹಿತರನ್ನು ಕರೆದುಕೊಂಡು ಬಂದು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದಾಗ ನನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ) ಮೃಗಾಂಕ್ ಪಾಠಕ್ ಮಾತನಾಡಿ, ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ನಂತರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಫೈನಲ್ ತಲುಪಿದ ಕನ್ನಡಿಗ, ಈಜುಪಟು ಶ್ರೀಹರಿ ನಟರಾಜ್ 

    Live Tv
    [brid partner=56869869 player=32851 video=960834 autoplay=true]

  • ವರದಕ್ಷಿಣೆ ಕೊಡಲಿಲ್ಲವೆಂದು ಮದುವೆಯಾದ ಮರುದಿನವೇ ವಾಟ್ಸಾಪ್‌ನಲ್ಲೇ ತಲಾಖ್ ನೀಡಿ ಪರಾರಿಯಾದ

    ವರದಕ್ಷಿಣೆ ಕೊಡಲಿಲ್ಲವೆಂದು ಮದುವೆಯಾದ ಮರುದಿನವೇ ವಾಟ್ಸಾಪ್‌ನಲ್ಲೇ ತಲಾಖ್ ನೀಡಿ ಪರಾರಿಯಾದ

    ಲಕ್ನೋ: ಹುಡುಗಿ ಮನೆಯವರು ವರದಕ್ಷಿಣೆ ಕೊಡಲಿಲ್ಲವೆಂದು ಮದುವೆಯಾದ ಮರುದಿನವೇ ಪತ್ನಿಗೆ ವಾಟ್ಸಾಪ್‌ನಲ್ಲೇ ತ್ರಿವಳಿ ತಲಾಖ್ ನೀಡಿ ನವ ವರ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಖೋಡಾ ಪ್ರದೇಶದಲ್ಲಿ ನಡೆದಿದೆ.

    ನವ ವರನ ಮನೆಯವರು ವರದಕ್ಷಿಣೆಯಾಗಿ ಕಾರು, 2 ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣಗಳಿಗೆ ಬೇಡಿಕೆಯಿಟ್ಟಿದ್ದರು. ಆದರೆ ಹುಡುಗಿ ಮನೆಯವರು ವರದಕ್ಷಿಣೆ ಕೊಡಲು ನಿರಾಕರಿಸಿದ್ದರಿಂದಾಗಿ ಪತಿಯು ವಾಟ್ಸಾಪ್‌ನಲ್ಲಿಯೇ ತ್ರಿವಳಿ ತಲಾಖ್ ನೀಡಿ ಪರಾರಿಯಾಗಿದ್ದಾನೆ. ಇದರಿಂದ ಗಾಬರಿಗೊಂಡ ನವ ವಧು ಮನೆಯವರು ತಕ್ಷಣವೇ ಆರೋಪಿ ವಿರುದ್ಧ ಖೋಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕನ್ನಡದಲ್ಲೂ ನಿಖಿಲ್ ಸಿದ್ಧಾರ್ಥ್ ನಟನೆಯ ‘ಕಾರ್ತಿಕೇಯ-2’ ಸಿನಿಮಾದ ಟೀಸರ್

    ಪೋಷಕರು ನೀಡಿದ ದೂರಿನಲ್ಲಿ ಏನಿದೆ?
    ತಮ್ಮ ಮಗಳು ಎಮ್‌ಐಟಿ ಕಾಲೇಜಿನಲ್ಲಿ ಬಿ-ಟೆಕ್ ಓದಿದ್ದಾಳೆ. ಅವಳಿಗೆ ಗಾಜಿಪುರದ ಮೊಹಮ್ಮದ್ ದಿಲ್ಶಾದ್ ಕುಟುಂಬದಿಂದ ಒಂದು ಸಂಬಂಧ ಬಂದಿತು. ಹೆಚ್ಚು ಯೋಚನೆ ಮಾಡದೇ ಸಂಬಂಧವನ್ನು ಒಪ್ಪಿ ಮದುವೆ ಮಾಡಿಸಲು ನಿಶ್ಚಯಿಸಲಾಯಿತು. ನಿಶ್ಚಯದ ಬಳಿಕ ವರನ ಕುಟುಂಬದಿಂದ ವರದಕ್ಷಿಣೆ ಕೇಳಲು ಪ್ರಾರಂಭಿಸಿದರು. ಅಗ ಹುಡುಗಿಯ ತಂದೆ ವರದಕ್ಷಿಣೆ ನೀಡಲು ನಿರಾಕರಿಸಿದರು. ಅಲ್ಲದೆ ನಾವು ಮದುವೆ ಮಾಡುವುದಿಲ್ಲ ಎಂದೂ ಹೇಳಿದ್ದರು. ಇದನ್ನೂ ಓದಿ: ಅಮೆರಿಕದಲ್ಲಿ ಇಬ್ಬರು ಮಕ್ಕಳಲ್ಲಿ ಕಾಣಿಸಿಕೊಂಡ ಮಂಕಿಪಾಕ್ಸ್ – ಈವರೆಗೆ 2,500ಕ್ಕೂ ಹೆಚ್ಚು ಕೇಸ್ ದಾಖಲು

    ಕೆಲವು ದಿನಗಳ ನಂತರ ಹುಡುಗನ ಕಡೆಯವರೇ ಮತ್ತೆ ವರದಕ್ಷಿಣೆ ಇಲ್ಲದೆ ಮದುವೆ ಮಾಡಿಕೊಳ್ಳುವುದಾಗಿ ಒಪ್ಪಿದರು. ಮಗಳ ಮದುವೆ ಬಳಿಕ ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು. ಮದುವೆಯಾದ ಮರುದಿನವೇ ದಿಲ್ಶಾದ್ ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆಗಾಗಿ ಆಕೆಯನ್ನು ಥಳಿಸಿದ್ದರು. ನಂತರ ವಾಟ್ಸಾಪ್‌ನಲ್ಲಿ ತ್ರಿವಳಿ ತಲಾಖ್ ಕೂಡ ನೀಡಿದ್ದು, ಪರಾರಿಯಾಗಿದ್ದಾನೆ ಎಂದು ಹೆಣ್ಣಿನ ಮನೆಯವರು ದೂರಿನಲ್ಲಿ ಉಲ್ಲೇಖಿಸಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಖೋಡಾ ಪೊಲೀಸರು ಆರೋಪಿ ಪತ್ತೆಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಶೀಘ್ರದಲ್ಲೇ ಬಂಧಿಸಿ, ಕಠಿಣ ಶಿಕ್ಷೆ ಕೊಡಿಸುವುದಾಗಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]