ಲಕ್ನೋ: ಮದುವೆ (Marriage) ಸಮಾರಂಭದಲ್ಲಿ ವರದಕ್ಷಿಣೆ (Dowry) ಕೇಳಿದ್ದಕ್ಕೆ ವಧುವಿನ ಕಡೆಯವರು ವರನನ್ನೇ (Groom) ಕಟ್ಟಿಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ವಧು-ವರ ಹೂ ಮಾಲೆಗಳನ್ನು ಬದಲಿಸಿಕೊಳ್ಳುವುದಕ್ಕೂ ಮೊದಲು ವರ ವಧುವಿನ ಕುಟುಂಬಕ್ಕೆ ವರದಕ್ಷಿಣೆಯ ಬೇಡಿಕೆ ಇಟ್ಟಿದ್ದ. ಇದರಿಂದ ಕೆಂಡಾಮಂಡಲವಾದ ವಧುವಿನ ಕುಟುಂಬದವರು ವರನನ್ನು ಮರಕ್ಕೆ ಕಟ್ಟಿ ಹಾಕಿದ್ದಾಗಿ ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ವೈರಲ್ ಆಗಿರುವ ವೀಡಿಯೋದಲ್ಲಿ ವಧುವಿನ ಕುಟುಂಬದವರು ವರನನ್ನು ಮರಕ್ಕೆ ಕಟ್ಟಿಹಾಕುವುದು ಮಾತ್ರವಲ್ಲದೇ ಅವಾಚ್ಯವಾಗಿ ನಿಂದಿಸುವುದನ್ನು ಕೇಳಬಹುದು. ಆದರೂ ವಧುವಿನಕಡೆಯವರ ವರ್ತನೆಯನ್ನು ವರ ವಿರೋಧಿಸದೇ ಮೌನವಾಗಿ ನಿಂತಿರುವುದು ಕಾಣಿಸಿಕೊಂಡಿದೆ. ಇದನ್ನೂ ಓದಿ: ಮಲಗಿದ್ದ ಪತಿಯ ಗುಪ್ತಾಂಗಕ್ಕೆ ಮಧ್ಯರಾತ್ರಿ ಕಾದ ಎಣ್ಣೆ ಎರಚಿ ಪತ್ನಿ ಎಸ್ಕೇಪ್!
ಘಟನೆಯ ಬಳಿಕ ಸ್ಥಳಕ್ಕೆ ಆಗಮಿಸಿದ ಮಾಂಧಾಟ ಪೊಲೀಸ್ ಠಾಣೆಯ ಪೊಲೀಸರು ವರನನ್ನು ಬಿಡುಗಡೆಗೊಳಿಸಿ ಬಳಿಕ ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಧು ಹಾಗೂ ವರನ ಕಡೆಯವರು ಬಳಿಕ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಆದರೆ ಎರಡೂ ಕಡೆಯವರು ರಾಜಿ ಮಾಡಿಕೊಳ್ಳಲು ಮುಂದಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೃಹತ್ ಗಾತ್ರದ ಕಡಿದ ಮರ ತಬ್ಬಿಕೊಂಡು ಸೆಕ್ಸ್ – ವಿಕೃತ ಕಾಮಿ ಅರೆಸ್ಟ್
ಚಿಕ್ಕೋಡಿ: ಅತ್ತೆ, ಮಾವ ಹಾಗೂ ಗಂಡ ಸೇರಿಕೊಂಡು ಸೊಸೆಯನ್ನು ಉಸಿರುಗಟ್ಟಿಸಿ ಕೊಂದ (Murder) ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಶ್ರೀದೇವಿ ದೀಪಕ್ ಬೇವಿನಕಟ್ಟಿ (31) ಅವರನ್ನು ವರದಕ್ಷಿಣೆಗಾಗಿ (Dowry) ಅತ್ತೆ, ಮಾವ ಹಾಗೂ ಅವರ ಗಂಡ ಉಸಿರುಗಟ್ಟಿಸಿ ಕೊಂದಿದ್ದಾರೆ. ದೀಪಕ್ ಬೇವಿನಕಟ್ಟಿ (34), ರಾಮಚಂದ್ರ ಬೇವಿನಕಟ್ಟಿ (64) ಹಾಗೂ ಪದ್ಮಾವತಿ ಬೇವಿನಕಟ್ಟಿ (50) ಸೊಸೆಯನ್ನು ಹತ್ಯೆಗೈದ ಆರೋಪಿಗಳು. ಇದನ್ನೂ ಓದಿ: ಕುಡಿದು ಮಧ್ಯರಾತ್ರಿ ಯುವಕರ ಡೆಡ್ಲಿ ಡ್ರೈವಿಂಗ್- ಅಮಾಯಕ ಜೀವಗಳು ಜಸ್ಟ್ ಮಿಸ್
ಮದುವೆಯಾಗಿ 3 ವರ್ಷಗಳಾದರೂ ಶ್ರೀದೇವಿಗೆ ಮಕ್ಕಳಾಗಿರಲಿಲ್ಲ. ಅಲ್ಲದೇ ತವರು ಮನೆಯಿಂದ ಹಣ ತರುವಂತೆ ಶ್ರೀದೇವಿ ಗಂಡ ಪೀಡಿಸುತ್ತಿದ್ದ. ಈ ಹಿನ್ನೆಲೆ ಪತಿ, ಅತ್ತೆ ಹಾಗೂ ಮಾವ ಸೇರಿಕೊಂಡು ಸೊಸೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿಂತಿದ್ದ ಲಾರಿಗೆ ಶವ ಸಾಗಿಸ್ತಿದ್ದ ಅಂಬುಲೆನ್ಸ್ ಡಿಕ್ಕಿ- ಮೂವರ ದುರ್ಮರಣ!
ಲಕ್ಷ್ಮಿ ಮಗಳನ್ನು 2027ರ ಜನವರಿ 16ರಂದು ಜಿತೇಂದರ್ ಎಂಬಾತನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆ ಬಳಿಕದಿಂದ ಜಿತೇಂದರ್ ಹಾಗೂ ಆತನ ಸಹೋದರ ಸೇರಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
ಸದ್ಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 304 ಬಿ (ವರದಕ್ಷಿಣೆ ಕಿರುಕುಳ), 506 (ಕೊಲೆ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ನೋ: ವಧುವೊಬ್ಬಳು (Bride) 12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಾಳೆ ಎಂಬ ಕಾರಣಕ್ಕೆ ವರನೊಬ್ಬ (Groom) ಮದುವೆಯಾಗಲು ನಿರಾಕರಿಸಿದ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ಉತ್ತರಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ವಧುವಿನ ಕುಟುಂಬಸ್ಥರು ವರದಕ್ಷಿಣೆ (Dowry) ಬೇಡಿಕೆ ಈಡೇರಿಸದ ಕಾರಣ ವರನ ಕುಟುಂಬವು ಮದುವೆಯನ್ನು ರದ್ದುಗೊಳಿಸಿದೆ ಎಂದು ಆರೋಪಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದೆ.
ಆದರೆ 12ನೇ ತರಗತಿ ಅಂಕಪಟ್ಟಿಯಲ್ಲಿ ಬಾಲಕಿಗೆ ಕಡಿಮೆ ಅಂಕ ಬಂದಿದೆ. ಇದರಿಂದಾಗಿ ಮದುವೆಯನ್ನು ರದ್ದು ಮಾಡಲಾಗಿದೆ ಎಂದು ವರನ ಕಡೆಯವರು ತಿಳಿಸಿದ್ದಾರೆ.
ಬಾಗನವಾ ಗ್ರಾಮದ ರಾಮಶಂಕರ್ ಎಂಬುವವರ ಪುತ್ರ ಸೋನು ಎಂಬಾತನೊಂದಿಗೆ ಸೋನಿ ಎಂಬಾಕೆಯ ಮದುವೆಯನ್ನು ನಿಶ್ಚಯಿಸಲಾಗಿತ್ತು. ವಧುವಿನ ಕುಟುಂಬಸ್ಥರು 60 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿ ವರನಿಗೆ 15 ಸಾವಿರ ಮೌಲ್ಯದ ಬಂಗಾರದ ಉಂಗುರ ಕೂಡ ನೀಡಿ ಮದುವೆ ಸಮಾರಂಭ ಏರ್ಪಡಿಸಿದ್ದರು.
ಹೈದರಾಬಾದ್: ವರದಕ್ಷಿಣೆ ವಿಚಾರಕ್ಕೆ ಬಹಳಷ್ಟು ಮದುವೆಗಳು ಮುರಿದಿರುವುದನ್ನು ನಾವು ಕಂಡಿದ್ದೇವೆ. ಆದರೆ ಹೈದರಾಬಾದ್ (Hyderabad) ಹೊರವಲಯ ಘಟ್‍ಕೇಸರ್‌ನಲ್ಲಿ (Ghatkesar) ನಡೆಯುತ್ತಿದ್ದ ಮದುವೆಯೊಂದು (Marriage) ವಧುದಕ್ಷಿಣೆ (Dowry) ವಿಚಾರಕ್ಕೆ ಮುರಿದು ಹೋಗಿದೆ.
ಮದುವೆಗೂ ಮುನ್ನ ವಧುದಕ್ಷಿಣೆಯಾಗಿ ಎರಡು ಲಕ್ಷ ರೂ. ನೀಡಲು ಮಾತುಕತೆ ನಡೆದಿತ್ತು. ಇದಕ್ಕೆ ಒಪ್ಪಿದ್ದ ವರನ ಕುಟುಂಬಸ್ಥರು ಹಣವನ್ನು ವಧುವಿನ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದರು. ಮದುವೆಗೆ ಎಲ್ಲಾ ತಯಾರಿಗಳೂ ನಡೆದಿದ್ದವು. ಆದರೆ ಕಡೆ ಕ್ಷಣದಲ್ಲಿ ಮನಸ್ಸು ಬದಲಿಸಿದ ಯುವತಿ ವಧುದಕ್ಷಿಣೆ ಕಡಿಮೆಯಾಗಿದೆ ಎಂದು ಆರೋಪಿಸಿ ಮದುವೆಗೆ ನಿರಾಕರಿಸಿದ್ದಾಳೆ. ಇದನ್ನೂ ಓದಿ: ಮದುವೆಗೆ ವಿರೋಧ – ಬೆಟ್ಟದಿಂದ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ
ಅಶ್ವರಾವ್‍ಪೇಟೆಯಿಂದ (Aswaraopeta) ವಿವಾಹ ಸ್ಥಳಕ್ಕೆ ತೆರಳಬೇಕಿದ್ದ ವಧು ಮದುವೆಗೆ ನಿರಾಕರಿಸಿ ಮನೆಯಲ್ಲೆ ಉಳಿದುಕೊಂಡಿದ್ದಾಳೆ. ಯುವತಿಯ ನಿರ್ಧಾರ ತಿಳಿಯುತ್ತಿದ್ದಂತೆ ವರನ ಮನೆಯವರು ಆಘಾತಗೊಂಡಿದ್ದಾರೆ. ಪೊಲೀಸ್ ಠಾಣೆಗೆ ತೆರಳಿ ವಧುವಿನ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.
ಮಂಡ್ಯ: ಸದಾ ಸುದ್ದಿಯಲ್ಲೇ ಇರುವ ಕಾಂಗ್ರೆಸ್‍ನ (Congress) ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‍ನ ಸಹೋದರ ಕೆ.ಬಿ.ರವಿಕುಮಾರ್ ಇದೀಗ ಮಹಿಳೆಯ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಕೆಆರ್ ಪೇಟೆಯ (K.R.Pete) ಮಹಿಳೆಯೊಂದಿಗೆ ಕೆ.ಬಿ.ರವಿ ಟವಲ್ ಹಾಗೂ ಬನಿಯನ್‍ನಲ್ಲಿ ಸಿಕ್ಕಿಬಿದ್ದು ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ನಗರದಲ್ಲಿರುವ ರವಿಯವರ ವಾಣಿಜ್ಯ ಕಟ್ಟಡದಲ್ಲಿ ಮಹಿಳೆ ಬ್ಯೂಟಿ ಪಾರ್ಲರ್ (Beauty Parlour) ನಡೆಸುತ್ತಿದ್ದಳು. ಶುಕ್ರವಾರ ಮಹಿಳೆ ಮನೆಗೆ ಬಾರದ ಹಿನ್ನೆಲೆ ಗಂಡ ಹಾಗೂ ಆತನ ಮನೆಯವರು ರವಿಯವರ ಮನೆಯ ಬಳಿ ಬಂದು ನೋಡಿದಾಗ ಆಕೆಯ ಸ್ಕೂಟರ್ (Scooter) ಇರುವುದು ಪತ್ತೆಯಾಗಿದೆ. ಕುಟುಂಬ ಆಕೆಯನ್ನು ಕರೆದು ಕೇಳಿದಾಗ ನನಗೆ ನೀನು ಬೇಡ, ನಾನು ಏನು ಬೇಕಾದರೂ ಮಾಡಿಕೊಳ್ಳುತ್ತೇನೆ ಎಂದು ಗಂಡನಿಗೆ ಗದರಿಸಿದ್ದಾಳೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಮಾಡಾಳ್ ಕುಟುಂಬದಿಂದ ಖತರ್ನಾಕ್ ಪ್ಲಾನ್- ಲೋಕಾಯುಕ್ತ ಬರುತ್ತೆ ಅಂತ ಸಿಸಿಟಿವಿ ಆಫ್!
ಮಹಿಳೆಯ ಕುಟುಂಬದಲ್ಲಿ ಅಕ್ರಮ ಸಂಬಂಧ ವಿಚಾರವಾಗಿ ನಿರಂತರ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಗಂಡ ಹಾಗೂ ಅತ್ತೆ ಮಾವನ ವಿರುದ್ಧ ವರದಕ್ಷಿಣೆ (Dowry) ಕಿರುಕುಳದ ದೂರನ್ನು ಸಹ ನೀಡಿದ್ದಳು. ಅಲ್ಲದೇ ನನಗೆ ವಿಚ್ಛೇದನ (Divorce) ಬೇಕು ಎಂದು ಕಳೆದ ತಿಂಗಳು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಹ ಸಲ್ಲಿಸಿದ್ದಳು.
ಒಂದು ಕಡೆ ಕೆ.ಬಿ.ಚಂದ್ರಶೇಖರ್ ರಾಜಕೀಯದಲ್ಲಿ ಬೆಳವಣಿಗೆ ಪಡೆಯಬೇಕೆಂದು ಸರ್ಕಸ್ ಮಾಡ್ತಾ ಇದ್ದಾರೆ. ಇತ್ತ ಸಹೋದರ ಮಹಿಳೆಯ ಜೊತೆ ಸಿಕ್ಕಿ ಬಿದ್ದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂದೆ ಈ ಪ್ರಕರಣ ಯಾವ ಆಯಾಮ ಪಡೆದುಕೊಳ್ಳುತ್ತದೆ ಎಂದು ಜನ ಕಾದು ಕುಳಿತಿದ್ದಾರೆ. ಇದನ್ನೂ ಓದಿ: ನಿಯಮ ಉಲ್ಲಂಘನೆ ಮಾಡುವ ಕೆಮ್ಮಿನ ಸಿರಪ್ ಕಂಪನಿಗಳ ಮೇಲೆ `ಮಹಾ’ಅಸ್ತ್ರ
ಹೈದರಾಬಾದ್: ಇತ್ತೀಚೆಗೆ ಸಣ್ಣ-ಪುಟ್ಟ ವಿಚಾರಕ್ಕೆಲ್ಲ ಮದುವೆಗಳು ಮುರಿದಿರುವುದನ್ನು ನಾವು ಕಾಣುತ್ತೇವೆ. ಅಂತೆಯೇ ಹೈದರಾಬಾದ್‍ನಲ್ಲಿ ವರನೊಬ್ಬ ತನಗೆ ವಧು ಕಡೆಯವರು ವರದಕ್ಷಿಣೆ ಎಂದು ಹಳೆಯ ಬೆಡ್ (Old Bed) ನೀಡಿದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ (Marriage Cancel) ಮಾಡಿಕೊಂಡ ಪ್ರಸಂಗ ನಡೆದಿದೆ.
ಇತ್ತ ಮದುವೆ ಮುರಿದ ವರನ ವಿರುದ್ಧ ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವರ ಮೋಸ (Groom Cheating) ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ನೀಡದ್ದಕ್ಕೆ ಮಹಿಳೆಗೆ ಆ್ಯಸಿಡ್ ಕುಡಿಸಿದ ಅತ್ತೆ
ಏನಿದು ಘಟನೆ..?: ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಯುವಕನ ಜೊತೆ ಬಂದ್ಲಗುಡ ನಿವಾಸಿ ಯುವತಿಯ ಮದುವೆ ನಿಶ್ಚಯವಾಗಿತ್ತು. ಅಲ್ಲದೆ ಫೆಬ್ರವರಿ 19 ಕ್ಕೆ ಮದುವೆ ದಿನಾಂಕವೂ ನಿಗದಿಯಾಗಿತ್ತು. ವಿಶೇಷ ಅಂದರೆ ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹಳೆಯ ಪೀಠೋಪಕರಣಗಳನ್ನು ವರದಕ್ಷಿಣೆಯಾಗಿ ನೀಡುವುದಾಗಿ ವಧುವಿನ ತಂದೆ ಮೊದಲೇ ಹೇಳಿದ್ದಾರೆ. ಈ ಎಲ್ಲಾ ಷರತ್ತುಗಳನ್ನು ವರನೂ ಕೂಡ ಒಪ್ಪಿದ್ದು, ಬೆಡ್ ಮಾತ್ರ ಹೊಸದಾಗಿರಬೇಕು ಎಂದು ಹೇಳಿದ್ದನು.
ಇತ್ತ ಮದುವೆ ದಿನ ವಧುವಿನ ಮನೆಯವರು ಪೀಠೋಪಕರಣಗಳನ್ನು ವರನ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಬೆಡ್ ಕೂಡ ಕಳುಹಿಸಿದ್ದು, ಆದರೆ ಬೆಡ್ ಸರಿಪಡಿಲು ಹೋದಾಗ ಅದು ಸ್ವಲ್ಪ ಹರಿದು ಹೋಯಿತು. ಮದುವೆಯ ದಿನದಂದು ವರ ಮತ್ತು ಅವರ ಮನೆಯವರು ಬರಲಿಲ್ಲ. ಇನ್ನು ವಧುವಿನ ಮನೆಯವರು ಅವರ ಮನೆಗೆ ಹೋದಾಗ, ಅವರು ಹಳೆಯ ಹಾಸಿಗೆಯ ಬಗ್ಗೆ ಆಕೆಯ ತಂದೆಗೆ ತಿಳಿಸಿ ಜಗಳವಾಡಿದರು. ಅಲ್ಲದೆ ಅನುಚಿತವಾಗಿ ವರ್ತಿಸಿದರು.
ಮದುವೆಯ ಔತಣಕ್ಕೆ ಸಕಲ ವ್ಯವಸ್ಥೆ ಮಾಡಿ ಬಂಧುಗಳು, ಅತಿಥಿಗಳು ಕಾಯುತ್ತಿದ್ದರು. ಈ ಹಿನ್ನೆಲೆಯಲ್ಲಿ ವರನ ಬಳಿ ಮನವಿ ಮಾಡಿದರೂ ಆತ ಮದುವೆಗೆ ಬರಲು ನಿರಾಕರಿಸಿದ್ದಾನೆ. ಹಳೆಯ ಹಾಸಿಗೆಯನ್ನು ನೀಡಿದ್ದಕ್ಕಾಗಿ ವರ ಸಿಟ್ಟುಮಾಡಿಕೊಂಡಿದ್ದಾನೆ. ಅಲ್ಲದೆ ಹೊಸ ಹಾಸಿಗೆ ತರುವಂತೆ ತಾಕೀತು ಮಾಡಿದ್ದು, ಮದುವೆಯನ್ನೇ ಕ್ಯಾನ್ಸಲ್ ಮಾಡಿಕೊಂಡಿದ್ದಾನೆ.
ಲಕ್ನೋ: ವರದಕ್ಷಿಣೆ (Dowry) ನೀಡದ್ದಕ್ಕೆ ಅತ್ತೆಯೊಬ್ಬಳು ಮಹಿಳೆಗೆ (Woman) ಆ್ಯಸಿಡ್ (Acid) ಕುಡಿಸಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಉತ್ತರ ಪ್ರದೇಶದ ಉಡಾಲ ಜಾಗೀರ್ ಗ್ರಾಮದ ನಿವಾಸಿ ಅಂಜುಮ್ (25) ಎಂದು ಗುರುತಿಸಲಾಗಿದೆ. ಆಕೆಯ ಪೋಷಕರು ಮದುವೆ ಸಮಯದಲ್ಲಿ 2.50 ಲಕ್ಷ ರೂ. ನಗದು ಹಾಗೂ ವರದಕ್ಷಿಣೆಗಾಯಿ ಕಾರನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ ಅಂಜುಮ್ ಪೋಷಕರು ಅದನ್ನು ನೀಡುವಲ್ಲಿ ವಿಫಲವಾದ್ದರಿಂದ ಆಕೆಯ ಅತ್ತೆ ಕೋಪದಲ್ಲಿ ಆ್ಯಸಿಡ್ ಕುಡಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.
ಘಟನೆಗೆ ಸಂಬಂಧಿಸಿ ಅಂಜುಮ್ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಕೆಯ ಪತಿ ಹಾಗೂ ಅತ್ತೆ ವಿರುದ್ಧ ದೂರು ದಾಖಲಿಸಿದ್ದಾರೆ.
ಬರೇಲಿ ಗ್ರಾಮೀಣ ಪೊಲೀಸ್ ಮಾತನಾಡಿ, ಇದು ಅತ್ಯಂತ ಗಂಭೀರ ವಿಷಯವಾಗಿದೆ. ನವಾಬ್‍ಗಂಜ್ ಮತ್ತು ಬಿತ್ರಿ ಚೈನ್‍ಪುರ್ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಸೋಮವಾರ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ: ಬಿಎಸ್‍ವೈ
6 ವರ್ಷಗಳ ಹಿಂದೆ ಉಡಾಲ ಜಾಗೀರ್ ಗ್ರಾಮದ ಇಲಿಯಾಸ್ ಎಂಬಾತನನ್ನು ಅಂಜುಮ್ ಮದುವೆಯಾಗಿದ್ದಳು. 15 ದಿನಗಳ ಹಿಂದೆ ಅಂಜುಮ್ ತನ್ನ ಪೋಷಕರ ಮನೆಗೆ ಭೇಟಿ ನೀಡಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ. 2.50 ಲಕ್ಷ ನಗದು ಮತ್ತು ಕಾರು ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ತಿಳಿಸಿದ್ದಳು ಎಂದು ಆಕೆಯ ಸಹೋದರಿ ಹೇಳಿದ್ದಾಳೆ. ಇದನ್ನೂ ಓದಿ:ಪತ್ನಿಯನ್ನು ಕೊಂದು ಬ್ಯಾರಲ್‍ಗೆ ತುಂಬಿದ್ದವ ಅರೆಸ್ಟ್
ಲಕ್ನೋ: ವ್ಯಕ್ತಿಯೊಬ್ಬ ವರದಕ್ಷಿಣೆಯಾಗಿ (Dowry) ಸ್ಪೋರ್ಟ್ಸ್ ಬೈಕ್ (Sports Bike) ನೀಡದ್ದಕ್ಕೆ ಪತ್ನಿಗೆ ವಿಚ್ಛೇದನ (Divorce) ನೀಡಿದ್ದಾನೆ. ಇದನ್ನು ನೋಡಿದ ವ್ಯಕ್ತಿಯ ಅತ್ತೆ (Mother In Law) ಆಘಾತದಿಂದ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಲಕ್ನೋದ (Lucknow) ಅಮೀನಾಬಾದ್ ಚಿಕಮಂಡಿ ಮಹಿಳೆಯೊಂದಿಗೆ ಸೀತಾಪುರದ ಮೊಹಮ್ಮದ್ ಯೂನಸ್ ಎಂಬಾತ 2021ರಲ್ಲಿ ವಿವಾಹವಾಗಿದ್ದ. ಮದುವೆಯಾದ (Marriage) ನಂತರ ಮಹಿಳೆಗೆ ಆಕೆಯ ಪತಿ ಮೊಹಮ್ಮದ್ ಹಾಗೂ ಅವನ ತಾಯಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಆ ವೇಳೆ ಮೊಹಮ್ಮದ್‍ಗೆ ಆತನ ಪತ್ನಿಯ ಮನೆಯವರು 2 ಲಕ್ಷ ರೂ. ನೀಡಿದ್ದರು.
ಆದರೆ ಮೊಹಮ್ಮದ್ ಪುನಃ ಹಣಕ್ಕಾಗಿ ಬೇಡಿಕೆಯಿಡಲು ಪ್ರಾರಂಭಿಸಿದ್ದನು. ಆದರೆ ಪತ್ನಿಯ ಮನೆಯವರು ಹಣ ನೀಡಲು ವಿಫಲವಾದಾಗ ಮೊಹಮ್ಮದ್ ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ. ಜೊತೆಗೆ ಮೊಬೈಲ್‌ನಲ್ಲಿಮೂರು ಬಾರಿ ತಲಾಕ್ ಹೇಳಿ ವಿಚ್ಛೇದನ ನೀಡಿದ್ದಾನೆ. ಇದನ್ನೂ ಓದಿ: ಪ್ರಧಾನಿ ಮೋದಿ ತಾಯಿ ಹೀರಾಬೆನ್ ಆಸ್ಪತ್ರೆಗೆ ದಾಖಲು
ಹಾಸನ: ವರದಕ್ಷಿಣೆ (Dowry) ಕಿರುಕುಳಕ್ಕೆ ಮೂರು ತಿಂಗಳ ಗರ್ಭಿಣಿ ಬಲಿಯಾಗಿರುವ ಘಟನೆ ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಮುದ್ರವಳ್ಳಿ ಬಳಿ ನಡೆದಿದೆ.
ಮೃತ ಗರ್ಭಿಣಿಯನ್ನು ರೋಹಿಣಿ (23) ಎಂದು ಗುರುತಿಸಲಾಗಿದೆ. ಮಗಳ ಸಾವಿಗೆ ಪತಿಯೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು (Mysuru) ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಪಶುಪತಿ ಗ್ರಾಮದ ಕುಮಾರ್-ಸುಧಾ ದಂಪತಿಯ ಮಗಳು ರೋಹಿಣಿಯನ್ನು ಅರಕಲಗೂಡು ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸುಮಂತ್ ಎಂಬಾತನಿಗೆ ಮೇ 28ರಂದು ಕೇರಾಳಪುರದ ಕಲ್ಯಾಣಮಂಟಪದಲ್ಲಿ ಅದ್ಧೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು. ಮದುವೆ ವೇಳೆ ಸುಮಂತ್‌ಗೆ 250 ಗ್ರಾಂ ಚಿನ್ನ ಇದರ ಜೊತೆಗೆ 20 ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿದ್ದರು. ಸುಮಂತ್‌ನ ತಂದೆ ಮೃತಪಟ್ಟಿದ್ದರಿಂದ, ತಾಯಿ ಮೀನಾಕ್ಷಿ ಜೊತೆ ಆತ ವಾಸವಿದ್ದನು.
ಮದುವೆಯಾದ ಎರಡು ತಿಂಗಳು ದಂಪತಿ ಇಬ್ಬರು ಅನ್ಯೋನ್ಯವಾಗಿದ್ದರು. ಆದರೆ 2 ತಿಂಗಳು ಕಳೆಯುತ್ತಿದ್ದಂತೆ ಸುಮಂತ್ ತಾಯಿ ಮೀನಾಕ್ಷಿ ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದಳು. ಇದರ ಜೊತೆಗೆ ಸುಮಂತ್ ಮದುವೆ ವೇಳೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ ಎಂಬುದು ರೋಹಿಣಿಗೆ ಗೊತ್ತಾಗಿತ್ತು. ಇವರಿಬ್ಬರಲ್ಲದೇ ಸುಮಂತ್ ಅಕ್ಕ ಸುಶ್ಮಿತಾ ಹಾಗೂ ಭಾವ ಪ್ರಮೋದ್ ಕೂಡ ಮನೆಗೆ ಬಂದಾಗಲೆಲ್ಲಾ ರೋಹಿಣಿಗೆ ಚುಚ್ಚು ಮಾತನಾಡುತ್ತಿದ್ದರು.
ಆದರೆ ರೋಹಿಣಿ ಈ ಬಗ್ಗೆ ಎಂದೂ ತನ್ನ ಪೋಷಕರ ಬಳಿ ಹೇಳಿಕೊಂಡಿರಲಿಲ್ಲ. ಆದರೆ ತನ್ನ ಸಹೋದರನಿಗೆ ಮೆಸೇಜ್ ಮಾಡಿ ಪತಿ ಸುಮಂತ್ ನೀಡುತ್ತಿದ್ದ ಕಿರುಕುಳದ ಬಗ್ಗೆ ಹೇಳಿದ್ದಳು. ಸುಮಂತ್ ರೋಹಿಣಿಗೆ ಯಾವುದಾದರೂ ಫೋನ್ ಬಂದರೆ ಅನುಮಾನದಿಂದ ನೋಡುತ್ತಿದ್ದ. ಅಷ್ಟೇ ಅಲ್ಲದೇ ಪೋಷಕರಿಗೆ ಫೋನ್ ಮಾಡಿದರೆ ಹಲ್ಲೆ ಮಾಡುತ್ತಿದ್ದ ಎಂದು ಹೇಳಿಕೊಂಡಿದ್ದ ರೋಹಿಣಿಯು, ಸಹೋದರಿಗೆ ನಿನ್ನ ಜೊತೆ ಮಾತನಾಡಬೇಕು, ಇನ್ನೂ ಕೆಲವು ವಿಷಯಗಳನ್ನು ಹೇಳಬೇಕು ಎಂದು ಸಹೋದರನಿಗೆ ಮೆಸೇಜ್ ಹಾಕಿದ್ದಳು.
ಆದರೆ ಭಾನುವಾರ ರೋಹಿಣಿ ಹಾಗೂ ಸುಮಂತ್ ದಂಪತಿ, ಸುಶ್ಮಿತಾ ಸೀಮಂತ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ತೆರಳಿದ್ದರು. ಮಂಗಳವಾರ ಬೆಂಗಳೂರಿನಿಂದ ಇಬ್ಬರು ರೈಲಿನಲ್ಲಿ ಹೊರಟಿದ್ದಾರೆ. ಈ ವೇಳೆ ರೋಹಿಣಿ ತಂದೆಗೆ 2 ಬಾರಿ ಕರೆ ಮಾಡಿ ಚೆನ್ನಾಗಿಯೇ ಮಾತನಾಡಿದ್ದಾಳೆ. ದಂಪತಿ ಇಬ್ಬರು ಚನ್ನರಾಯಪಟ್ಟಣ ತಾಲೂಕಿನ ಸಮುದ್ರವಳ್ಳಿ ಬಳಿ ರೈಲಿನಿಂದ ಇಳಿದಿದ್ದಾರೆ. ಅದಾದ ಬಳಿಕ ಅಲ್ಲೇ ಸ್ವಲ್ಪ ದೂರದಲ್ಲಿದ್ದ ಕೆರೆಯ ಬಳಿ ನಡೆದುಕೊಂಡು ಬಂದಿದ್ದು, ಕೆರೆಯಲ್ಲಿ ಗ್ರಾಮದ ಮಹಿಳೆಯರು ಬಟ್ಟೆ ಒಗೆಯುತ್ತಿದ್ದನ್ನು ಕಂಡ ಸುಮಂತ್ ಪತ್ನಿಗೆ ಇಲ್ಲೇ ಇರು ಎಂದು ಹೇಳಿ ಮರೆಯಾಗಿದ್ದಾನೆ. ರೋಹಿಣಿ ಕೆರೆಯ ಬಳಿ ಒಬ್ಬಳೆ ನಿಂತಿದ್ದನ್ನು ಅಲ್ಲಿದ್ದ ಮಹಿಳೆಯರು ನೋಡಿದ್ದಾರೆ. ಇದಾದ ಬಳಿಕ ರೋಹಿಣಿ ನಾಪತ್ತೆಯಾಗಿದ್ದಾಳೆ. ತಂದೆ ಎಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಟವರ್ ಲೊಕೇಷನ್ ಮೂಲಕ ರೋಹಿಣಿ ಮೊಬೈಲ್ ಇರುವ ಜಾಗವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೆರೆಯ ಬಳಿ ಬಂದು ನೋಡಿದಾಗ ದಡದಲ್ಲಿ 1,760 ರೂ. ಹಣ, ಮೊಬೈಲ್ ಹಾಗೂ ಚಪ್ಪಲಿ ಕಂಡುಬಂದಿದೆ. ಅನುಮಾನಗೊಂಡು ಕೆರೆಯಲ್ಲಿ ಶೋಧಕಾರ್ಯ ನಡೆಸಿದಾಗ ರೋಹಿಣಿ ಶವ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಶ್ರದ್ಧಾ ಕೊಲೆ ಪ್ರಕರಣ – ಜಾಮೀನು ಅರ್ಜಿಯನ್ನು ವಾಪಸ್ ಪಡೆದ ಪೀಸ್ ಪೀಸ್ ಪ್ರೇಮಿ
ಈ ಬಗ್ಗೆ ರೋಹಿಣಿ ಪೋಷಕರು ಮಾತನಾಡಿ, ಸುಮಂತ್ ತನ್ನ ಮಗಳನ್ನು ಹೊಡೆದು ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಆಕೆಯ ಮೈಮೇಲೆ ಇರುವ ಗಾಯದ ಗುರುತುಗಳೇ ಇದಕ್ಕೆ ಸಾಕ್ಷಿ. ನಮ್ಮ ಮಗಳನ್ನು ಆಕೆಯ ಪತಿ ಸುಮಂತ್ ರೈಲಿನಲ್ಲಿ ಕರೆದುಕೊಂಡು ಬಂದು ಹೊಡೆದು ಕೊಲೆ ಮಾಡಿ ನಂತರ ಕೆರೆಗೆ ತಳ್ಳಿದ್ದಾನೆ ಎಂದು ರೋಹಿಣಿ ಪೋಷಕರು ಆರೋಪಿಸಿದ್ದಾರೆ. ನಮ್ಮ ಮಗಳ ಸಾವಿಗೆ ಸುಮಂತ್, ಮೀನಾಕ್ಷಿ, ಸುಶ್ಮಿತಾ ಹಾಗೂ ಪ್ರಮೋದ್ ಕಾರಣ ಇವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ:ಮಹಿಳೆಯರ ಶಿಕ್ಷಣಕ್ಕೆ ತಾಲಿಬಾನ್ ನಿಷೇಧ – ಪ್ರತಿಭಟನೆಗೆ ಪರೀಕ್ಷೆಯಿಂದಲೇ ಹೊರನಡೆದ ಅಫ್ಘನ್ ಯುವಕರು
Live Tv
[brid partner=56869869 player=32851 video=960834 autoplay=true]