Tag: Dowry

  • ಫೇಸ್‍ಬುಕ್‍ನಲ್ಲಿ ಪರಿಚಯ, ಸೆಕ್ಸ್, ನಂತ್ರ ವಧುದಕ್ಷಿಣೆ ಹಣದೊಂದಿಗೆ ಎಸ್ಕೇಪ್- 11 ಜನರನ್ನ ಮದ್ವೆಯಾಗಿದ್ದವಳು ಅರೆಸ್ಟ್

    ಫೇಸ್‍ಬುಕ್‍ನಲ್ಲಿ ಪರಿಚಯ, ಸೆಕ್ಸ್, ನಂತ್ರ ವಧುದಕ್ಷಿಣೆ ಹಣದೊಂದಿಗೆ ಎಸ್ಕೇಪ್- 11 ಜನರನ್ನ ಮದ್ವೆಯಾಗಿದ್ದವಳು ಅರೆಸ್ಟ್

    ಥೈಲ್ಯಾಂಡ್: 11 ಜನರನ್ನು ಮದುವೆಯಾಗಿ ಯಾಮಾರಿಸಿ ಅವರ ಹಣದೊಂದಿಗೆ ಪರಾರಿಯಾಗುತ್ತಿದ್ದ ಮಹಿಳೆಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದ್ದು, 32 ವರ್ಷದ ಜರಿಯಪೋರ್ನ್ ನುಯಾಯ್ ಬಂಧಿತ ಮಹಿಳೆಯಾಗಿದ್ದಾಳೆ. ಈಕೆಯನ್ನು ಸೆ.7ರಂದು ಥಾಯ್ಲೆಂಡ್ ಪೊಲೀಸರು ನಖೋನ್ ಪಾಥೊಮ್ ಪ್ರಾಂತ್ಯದ ಸ್ಯಾಮ್ ಫ್ರಾನ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

    ಏನಿದು ಪ್ರಕರಣ?: ಥೈಲ್ಯಾಂಡ್ ಸಂಪ್ರದಾಯದ ಪ್ರಕಾರ ವಿವಾಹವಾಗುವ ಪ್ರತಿ ಪುರುಷ ಭಾವಿ ಪತ್ನಿಗೆ ವಧುದಕ್ಷಿಣೆ ನೀಡುವ ಸಂಪ್ರದಾಯವಿದೆ. ಈಕೆ ಪ್ರತಿ ಪುರುಷನಿಂದ ಸುಮಾರು 6,000ದಿಂದ 30,000 ಡಾಲರ್ (38 ಸಾವಿರದಿಂದ- 1.9 ಲಕ್ಷ ರೂ.) ವಧುದಕ್ಷಿಣೆ ಪಡೆದು ಪರಾರಿಯಾಗಿದ್ದಳು.

    ಫೇಸ್‍ಬುಕ್ ಮೂಲಕ ಪರಿಚಯ ಮಾಡಿಕೊಂಡು ಬಳಿಕ ಆ ಪುರುಷನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುತ್ತಾಳೆ. ಆ ನಂತ್ರ ಆತನನ್ನು ಮದುವೆಯಾಗುತ್ತಾಳೆ. ಆ ಬಳಿಕ ವಧು ದಕ್ಷಿಣೆಯೊಂದಿಗೆ ಅಲ್ಲಿಂದ ಕಾಲ್ಕೀಳುತ್ತಾಳೆ.

    ಈಕೆಯ ಚಾಣಾಕ್ಷತನ ಎಷ್ಟಿದೆ ಅಂದ್ರೆ ಅಗಸ್ಟ್ ಒಂದೇ ತಿಂಗಳಿನಲ್ಲಿ ಈಕೆ ನಾಲ್ವರನ್ನು ಮದುವೆಯಾಗಿ ಮೋಸ ಮಾಡಿದ್ದಾಳೆ. ಈಕೆ 11 ಮಂದಿಗೆ ವಂಚಿಸಿದ್ದಾಳೆ ಎಂದು ಪೊಲೀಸರು ಇಲ್ಲಿನ ಸ್ಥಳೀಯ ಪತ್ರಿಕೆ ತಿಳಿಸಿದ್ದಾರೆ. ಇದೇ ರೀತಿ ಮೋಸ ಹೋದ ವ್ಯಕ್ತಿಯೊಬ್ಬರು ಈಕೆಯ ಬಗ್ಗೆ ಎಚ್ಚರವಾಗಿರಿ ಎಂದು ಫೇಸ್‍ಬುಕ್ ಪೋಸ್ಟ್ ಹಾಕುವವರೆಗೆ ಮೋಸ ಹೋದವರು ಪೊಲೀಸರಿಗೆ ದೂರು ನೀಡಿರಲಿಲ್ಲ. ಪೋಸ್ಟ್ ನೋಡಿದ ನಂತರ ಪೊಲೀಸರ ಬಳಿ ಹೋಗಿ ಹೇಗೆ ಮೋಸ ಹೋದ್ರು ಅನ್ನೋದನ್ನ ಹೇಳಿಕೊಂಡಿದ್ದಾರೆ.

    ಕಳೆದ ಎರಡು ವರ್ಷದಿಂದ ಈಕೆಯ ವಿರುದ್ಧ 4 ಬಾರಿ ವಾರೆಂಟ್ ಜಾರಿ ಮಾಡಲಾಗಿತ್ತು.

    ಸದ್ಯ ಮೋಸಗಾರ್ತಿ ಮಹಿಳೆಯನ್ನು ಪೊಲೀಸರು ಬಂಧಿಸಿ ಕಿಮಿನಲ್ ಕೋಡ್‍ನ ಸೆಕ್ಷನ್ 342 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ- ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಪತಿ

    ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ- ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಪತಿ

    ಬೆಂಗಳೂರು: ವರದಕ್ಷಿಣೆಗಾಗಿ ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಯಶವಂತಪುರದ ತ್ರಿವೇಣಿ ನಗರದಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಹೆಬ್ಬಾಳದ ನಿವಾಸಿಗಳಾದ ಸುನಂದ ಮತ್ತು ಶಂಕರ್ ದಂಪತಿಯ ಮಗಳು ಚಂದ್ರಿಕಾ ಎಂಬಾಕೆಯನ್ನು ರಾಜೇಶ್ ಎಂಬಾತನ ಜೊತೆ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆ ಆದಾಗಿನಿಂದಲೂ ರಾಜೇಶ್ ವರದಕ್ಷಿಣೆ ತರುವಂತೆ ಪತ್ನಿಗೆ ನಿತ್ಯವೂ ಕಿರುಕುಳ ಹಾಗೂ ಚಿತ್ರ ಹಿಂಸೆ ನೀಡುತ್ತಿದ್ದನು.

    ನಿನ್ನೆ ರಾತ್ರಿ ಕೂಡ ಇದೇ ವಿಚಾರಕ್ಕೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಅಂತಾ ಚಂದ್ರಿಕಾ ಪೋಷಕರು ಆರೋಪಿಸುತ್ತಿದ್ದಾರೆ.

    ಸದ್ಯ ಚಂದ್ರಕಾರ ಮೃತದೇಹ ಖಾಸಗಿ ಆಸ್ಪತ್ರೆಯೊಂದರಲ್ಲಿ ಇರಿಸಲಾಗಿದೆ. ಮೃತ ಚಂದ್ರಿಕಾಗೆ ಒಂದು ವರ್ಷದ ಗಂಡು ಮಗು ಇದೆ. ಗಂಡು ಮಗುವನ್ನು ಲೆಕ್ಕಿಸದೇ ಗಂಡ, ಅತ್ತೆ, ಮಾವ ಸೇರಿ ಕೊಲೆ ಮಾಡಿದ್ದಾರೆಂದು ಪೋಷಕರ ಆರೋಪಿಸುತ್ತಿದ್ದಾರೆ. ಅಲ್ಲದೇ 25 ಲಕ್ಷ ವರದಕ್ಷಿಣೆ ತರುವಂತೆ ಪತಿ ರಾಜೇಶ್ ಕಿರುಕುಳ ನೀಡ್ತಾ ಇದ್ದ ಅಂತ ಪೋಷಕರು ದೂರಿದ್ದಾರೆ.

  • ಪ್ರೀತಿಸಿ ಮದುವೆಯಾಗಿ 3 ತಿಂಗ್ಳ ಗರ್ಭಿಣಿಯನ್ನ ರಾತ್ರೋರಾತ್ರಿ ಮನೆಯಿಂದ ಹೊರಹಾಕಿದ ಪತಿ!

    ಪ್ರೀತಿಸಿ ಮದುವೆಯಾಗಿ 3 ತಿಂಗ್ಳ ಗರ್ಭಿಣಿಯನ್ನ ರಾತ್ರೋರಾತ್ರಿ ಮನೆಯಿಂದ ಹೊರಹಾಕಿದ ಪತಿ!

    ಕೊಪ್ಪಳ: ಪತಿ ಮನೆಯವರಿಂದ ವರದಕ್ಷಿಣೆಗಾಗಿ ಮೂರು ತಿಂಗಳ ಗರ್ಭಿಣಿಗೆ ಕಿರುಕುಳ ನೀಡಿ ರಾತ್ರೋ ರಾತ್ರಿ ಹೊರಹಾಕಿದ ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ನಡೆದಿದೆ.

    ಸುಷ್ಮಾ (19) ಎಂಬ ಯುವತಿಗೆ ಪತಿ ಬಸವರಾಜ ತಳಕಲ್ (27) ಹಾಗೂ ಕುಟುಂಬ ಸ್ಥರಿಂದ ವರದಕ್ಷಿಣೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದಾರೆ.

    ಪ್ರೀತ್ಸೆ ಅಂತ ದುಂಬಾಲು ಬಿದ್ದು ಬಸವರಾಜ ಸುಷ್ಮಾಳನ್ನ ಮದುವೆಯಾಗಿದ್ದನು. ಪ್ರೀತಿಸಿ ಮದುವೆಯಾಗಿ ನಾಲ್ಕೇ ತಿಂಗಳಿಗೆ ಪತ್ನಿಯನ್ನು ವರದಕ್ಷಿಣೆಗಾಗಿ ಪತಿ ಮನೆಯಿಂದ ಹೊರಹಾಕಿದ್ದು, ರಾತ್ರಿಯಿಡೀ ಅನ್ನ, ನೀರು ಕೊಡದೆ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಸದ್ಯ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಆದ್ರೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಸಹೋದರ ಗುಂಡಪ್ಪ ಕರಡಿ ರಾಜಕೀಯ ಪ್ರಭಾವದಿಂದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಅನ್ನೋ ಆರೋಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನೊಂದ ಯುವತಿ ಇದೀಗ ಎಸ್‍ಪಿ ಮೊರೆಹೋಗಿದ್ದಾರೆ.

  • ವರದಕ್ಷಿಣಿ ಕಿರುಕುಳ ನೀಡಿ ಪತಿಯಿಂದಲೇ ಪತ್ನಿಯ ಹತ್ಯೆ?

    ವರದಕ್ಷಿಣಿ ಕಿರುಕುಳ ನೀಡಿ ಪತಿಯಿಂದಲೇ ಪತ್ನಿಯ ಹತ್ಯೆ?

    ಹಾವೇರಿ: ವರದಕ್ಷಿಣೆ ಕಿರುಕುಳ ನೀಡಿ ಕೊನೆಗೆ ಪತ್ನಿಗೆ ಪತಿ ವಿಷ ನೀಡಿ ಹತ್ಯೆಗೈದ ಆರೋಪವೊಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶಾಡಗುಪ್ಪಿ ಗ್ರಾಮದಲ್ಲಿ ಕೇಳಿ ಬಂದಿದೆ.

    ಮೃತ ಗೃಹಿಣಿಯನ್ನ ರೇಖಾ ಮುರುಡಣ್ಣನವರ(23) ಎಂದು ಗುರುತಿಸಲಾಗಿದೆ. ಮೃತ ರೇಖಾ, ಹಾನಗಲ್ ತಾಲೂಕಿನ ಹರವಿ ಗ್ರಾಮದ ನಿವಾಸಿ.

    ರೇಖಾರಿಗೆ ಶಾಡಗುಪ್ಪಿ ಗ್ರಾಮದ ಶಂಭು ಎಂಬವನ ಜೊತೆ ಮೂರು ವರ್ಷಗಳ ಹಿಂದೆ ಮದುವೆ ಆಗಿತ್ತು. ಮೃತ ರೇಖಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಒಂದು ವರ್ಷದ ಹೆಣ್ಣು ಮಗುವಿದೆ. ಇದೀಗ ಪತಿ ಹಾಗೂ ಆತನ ಸಂಬಂಧಿಕರು ವರದಕ್ಷಿಣೆ ಕಿರುಕುಳ ನೀಡಿ, ವಿಷಕುಡಿಸಿ ಶನಿವಾರ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಅಂತಾ ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.

    ಈ ಕುರಿತಂತೆ ಆಡೂರು ಪೊಲೀಸ್ ಠಾಣೆಯಲ್ಲಿ ರೇಖಾ ಪತಿ ಶಂಭು ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

     

     

     

  • ಮಾವ ಮಂಚಕ್ಕೆ ಕರೆದ್ರೆ, ಗಂಡ ಹೋಗು ಅಂದನಂತೆ-ಕಾಮುಕರ ವಿರುದ್ಧ ನೊಂದ ಮಹಿಳೆ ದೂರು

    ಮಾವ ಮಂಚಕ್ಕೆ ಕರೆದ್ರೆ, ಗಂಡ ಹೋಗು ಅಂದನಂತೆ-ಕಾಮುಕರ ವಿರುದ್ಧ ನೊಂದ ಮಹಿಳೆ ದೂರು

    ತುಮಕೂರು: ಮಾವನೊಬ್ಬ ಮಗಳಂತಿರುವ ಸೊಸೆಯನ್ನು ಮಂಚಕ್ಕೆ ಕರೆದಿರುವ ಅಮಾನವೀಯ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮದಲ್ಲಿ ನಡೆದಿದೆ.

    ಚಂದ್ರಯ್ಯ ಎಂಬಾತನೇ ಸೊಸೆಯನ್ನ ಮಂಚಕ್ಕೆ ಕರೆದ ಕಾಮುಕ ಮಾವ. ಮಾವನ ಕಾಮದಾಟವನ್ನು ಹೋಗಿ ಪತಿ ಪ್ರಭಾಕರ್‍ನಿಗೆ ತಿಳಿಸಿದ್ರೆ ಅವನೂ ಸ್ವಲ್ಪ ಅಡ್ಜಸ್ಟ್ ಮಾಡಿಕೋ ಎಂದು ಹೇಳಿದ್ದಾನೆ.

    ಪ್ರಭಾಕರ್ ಮೂರು ತಿಂಗಳ ಹಿಂದೆ ಮೈಸೂರು ಮೂಲದ ಗೀತಾ (ಹೆಸರು ಬದಲಾಯಿಸಿದೆ) ಎಂಬವರನ್ನು ಮದುವೆಯಾಗಿದ್ದನು. ಮದುವೆ ವೇಳೆ ಗೀತಾ ಪೋಷಕರು ವರದಕ್ಷಿಣೆ, ವರೋಪಚಾರ ಎಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು.

    ಇತ್ತ ಮದುವೆಯಾದ ಮೂರು ತಿಂಗಳು ಆಗುವಷ್ಟರಲ್ಲಿ ಪತಿ ಪ್ರಭಾಕರ, ಮಾವ ಚಂದ್ರಯ್ಯ, ಅತ್ತೆ ಸಂತೋಷಮ್ಮ ವರದಕ್ಷಿಣೆ ಕಿರುಕುಳ ಕೊಡಲು ಆರಂಭಿಸಿದ್ದಾರೆ. ಕೊನೆಗೆ ಮಾವ ಚಂದ್ರಯ್ಯ ಸೊಸೆ ಗೀತಾಳಿಗೆ ತನ್ನ ಜೊತೆ ಹಾಸಿಗೆ ಹಚಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ಸ್ವತಃ ಗಂಡ ಪ್ರಭಾಕರ್ ಹಾಗು ಅತ್ತೆ ಇದಕ್ಕೆ ಕುಮ್ಮಕ್ಕೂ ನೀಡಿದ್ದಾರೆ ಎಂದು ಗೀತಾ ಆರೋಪ ಮಾಡಿದ್ದಾರೆ.

    ಸ್ನಾನ ಮಾಡುವುದನ್ನ ಬಗ್ಗಿ ನೋಡುತ್ತಿದ್ದ ಮಾವ: 55 ವರ್ಷದ ಮಾವ ಚಂದ್ರಯ್ಯ ಮನೆಯಲ್ಲಿ ಯಾರು ಇಲ್ಲದಿದ್ದಾಗ ಗೀತಾ ಸ್ನಾನ ಮಾಡುವಾಗ ಹೋಗಿ ಬಗ್ಗಿ ನೋಡುವುದು. ಬಾತ್ ರೂಂ ಒಳಗೆ ಹೋಗಿ ಮೈ ಮುಟ್ಟುವುದನ್ನು ಮಾಡುತಿದ್ದಾನಂತೆ. ಇನ್ನೂ ಚಂದ್ರಯ್ಯ ಟೈಂ ಸಿಕ್ಕಾಗೆಲ್ಲ ಸೊಸೆಯ ಕೈ ಹಿಡಿದು ನನಗೆ ಸಪೋರ್ಟ್ ಮಾಡು ಎಂದು ಹಿಂಸೆ ಕೊಡುತ್ತಿದ್ದನು.

    ಕೊನೆಗೆ ಗೀತಾ ಕಾಮುಕ ಮಾವನ ಮಾತುಗಳನ್ನು ಮೊಬೈಲ್ ಫೋನ್‍ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ಸಂಬಂಧ ಗೀತಾ ತನ್ನ ಅತ್ತೆ, ಮಾವ, ಮೈದುನ, ಅತ್ತಿಗೆ ಹಾಗು ಗಂಡನ ವಿರುದ್ಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಐವರು ನಾಪತ್ತೆಯಾಗಿದ್ದಾರೆ.

  • ವರದಕ್ಷಿಣೆಗಾಗಿ ಹೆಂಡ್ತಿಯನ್ನ ಕೊಂದನೆಂದು ಗಂಡ ಜೈಲಿನಲ್ಲಿ, ಹೆಂಡತಿ ಲವರ್ ಜೊತೆ!

    ವರದಕ್ಷಿಣೆಗಾಗಿ ಹೆಂಡ್ತಿಯನ್ನ ಕೊಂದನೆಂದು ಗಂಡ ಜೈಲಿನಲ್ಲಿ, ಹೆಂಡತಿ ಲವರ್ ಜೊತೆ!

    ಪಾಟ್ನಾ: 2015ರಲ್ಲಿ ವರದಕ್ಷಿಣೆಗಾಗಿ ಹೆಂಡತಿಯನ್ನ ಕೊಲೆ ಮಾಡಿದ ಆರೋಪದ ಮೇಲೆ ಗಂಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ರೆ ಅತ್ತ ಹೆಂಡತಿ ತನ್ನ ಪ್ರಿಯಕರನ ಜೊತೆಗಿದ್ದ ಸಂಗತಿ ಈಗ ಬೆಳಕಿಗೆ ಬಂದಿದೆ.

    ಬಿಹಾರದ ಮುಜಾಫರ್‍ಪುರದ ನಿವಾಸಿ ಪಿಂಕಿಗೆ 2015ರಲ್ಲಿ ಮನೋಜ್ ಶರ್ಮಾ ಜೊತೆ ವಿವಾಹವಾಗಿತ್ತು. ಆದ್ರೆ ಮದುವೆಯಾದ ಕೆಲವೇ ತಿಂಗಳಲ್ಲಿ ಪಿಂಕಿ ನಾಪತ್ತೆಯಾಗಿದ್ದಳು. ಪಿಂಕಿ ಕುಟುಂಬಸ್ಥರು ಮನೋಜ್ ಶರ್ಮಾ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ, ನಮ್ಮ ಮಗಳನ್ನ ಈತನೇ ಕೊಂದಿದ್ದಾನೆ ಎಂದು ಆರೋಪಿಸಿದ್ದರು.

    ಕೆಲವು ವಾರಗಳ ನಂತರ ಮುಜಾಫರ್‍ಪುರದ ಸರೈಯ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುತು ಸಿಗಲಾರದಂತಹ ಕೊಳೆತ ಶವವೊಂದು ಪತ್ತೆಯಾಗಿತ್ತು. ಈ ಶವ ನಮ್ಮ ಮಗಳದ್ದೇ ಎಂದು ಪಿಂಕಿ ಪೋಷಕರು ಗುರುತಿಸಿದ್ದರು. ನಂತರ ಹೆಂಡತಿಯನ್ನ ಕೊಲೆ ಮಾಡಿದ್ದಾರೆಂಬ ಆರೋಪದ ಮೇಲೆ ಮನೋಜ್ ಶರ್ಮಾ ಅವರನ್ನ ಪೊಲೀಸರು ಬಂಧಿಸಿದ್ರು. ಸದ್ಯ ಮನೋಜ್ ಶರ್ಮಾ ಜೈಲಿನಲ್ಲಿದ್ದಾರೆ.

    ಹೆಂಡತಿ ಬದುಕಿರೋದು ಗೊತ್ತಾಗಿದ್ದು ಹೇಗೆ?: ಕಳೆದ ಕೆಲವು ವಾರಗಳ ಹಿಂದೆ ಮನೋಜ್ ಶರ್ಮಾ ಅವರ ಕುಟುಂಬಸ್ಥರಿಗೆ ಪರಿಚಯಸ್ಥರೊಬ್ಬರ ಕರೆ ಬಂದಿತ್ತು. ಮಧ್ಯಪ್ರದೇಶದ ಜಬಲ್‍ಪುರದ ಕಾಂಟ್ ಪ್ರದೇಶದಲ್ಲಿ ನಾನು ಪಿಂಕಿಯನ್ನ ಮತ್ತೊಬ್ಬ ವ್ಯಕ್ತಿಯ ಜೊತೆಯಲ್ಲಿ ನೋಡಿದೆ ಎಂದು ಅವರು ಹೇಳಿದ್ದರು. ಆ ಬಳಿಕ ಮನೋಜ್ ಶರ್ಮಾ ಕುಟುಂಬಸ್ಥರು ಕೂಡ ಜಬಲ್‍ಪುರಕ್ಕೆ ಹೋಗಿ ಪಿಂಕಿಯನ್ನು ಕಣ್ಣಾರೆ ನೋಡಿದ ಮೇಲೆ ನಮಗೆ ಮಾಹಿತಿ ನೀಡಿದ್ರು ಎಂದು ಸರೈಯ್ಯಾ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಶತ್ರುಘ್ನ ಶಮಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಪಿಂಕಿಗೆ ಮದುವೆಗೂ ಮುಂಚೆ ಮಯೂರ್ ಮಲಿಕ್ ಎಂಬಾತನ ಜೊತೆ ಸಂಬಂಧವಿತ್ತು. ತನಗೆ ಇಷ್ಟವಿಲ್ಲದೆ ಮನೋಜ್ ಶರ್ಮಾ ಜೊತೆ ಮದುವೆಯಾಗಿದ್ದಳು. ನಂತರ ಮಲಿಕ್ ಹಾಗೂ ಪಿಂಕಿ ಮುಜಾಫರ್‍ಪುರದಿಂದ ಓಡಿಹೋಗಿ ಜಬಲ್‍ಪುರದ ಕಾಂಟ್ ಪ್ರದೇಶದಲ್ಲಿ ನೆಲೆಸಿದ್ರು. ಇದೀಗ ಇಬ್ಬರನ್ನೂ ಬಿಹಾರಕ್ಕೆ ಕರೆದುಕೊಂಡು ಹೋಗಲಾಗ್ತಿದೆ ಎಂದು ಬಿಹಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಮನೋಜ್ ಅವರನ್ನ ಕೊಲೆ ಆರೋಪಿಯಾಗಿಸುವ ಸಂಚಿನಲ್ಲಿ ಇನ್ನೂ ಹಲವರು ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಮುಂದೇನು?: ಮೊದಲಿಗೆ ಬಿಹಾರ ಪೊಲೀಸರು ಪಿಂಕಿ ಬದುಕಿದ್ದಾಳೆಂದು ಕೋರ್ಟ್‍ನಲ್ಲಿ ಸಾಬೀತುಪಡಿಸಿ, ಕೊಲೆಯೇ ಮಾಡದೆ ನಿರಪರಾಧಿಯಾಗಿದ್ರೂ ಶಿಕ್ಷೆ ಅನುಭವಿಸ್ತಿರೋ ಮನೋಜ್ ಶರ್ಮಾ ಅವರನ್ನ ಬಿಡುಗಡೆ ಮಾಡಿಸಲಿದ್ದಾರೆ. ಮನೋಜ್ ಶರ್ಮಾ ವಿರುದ್ಧ ಸಂಚು ರೂಪಿಸಿದವರು, ಶವವನ್ನ ಪಿಂಕಿಯದ್ದು ಎಂದು ಗುರುತಿಸಿದವರನ್ನೂ ಸೇರದಂತೆ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಕಾಂಟ್ ಪೊಲೀಸ್ ಠಾಣೆಯ ಅಧಿಕಾರಿ ಮಂಜೀತ್ ಸಿಂಗ್ ಹೇಳಿದ್ದಾರೆ.

  • ನನ್ನ ಸಾವಿಗೆ ಇವ್ರೇ ಕಾರಣ- ಕೈ ಮೇಲೆ ಹೆಸರು ಬರೆದು ಮಹಿಳೆ ಆತ್ಮಹತ್ಯೆಗೆ ಶರಣು

    ನನ್ನ ಸಾವಿಗೆ ಇವ್ರೇ ಕಾರಣ- ಕೈ ಮೇಲೆ ಹೆಸರು ಬರೆದು ಮಹಿಳೆ ಆತ್ಮಹತ್ಯೆಗೆ ಶರಣು

    ತುಮಕೂರು: ಮಹಿಳೆಯೋರ್ವರು ಗಂಡ ಸೇರಿದಂತೆ ತನ್ನ ಅತ್ತೆ ಮನೆಯ ಕುಟುಂಬಸ್ಥರ ಹೆಸರನ್ನು ಕೈ ಮೇಲೆ ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧುಗಿರಿ ಪಟ್ಟಣದ ರಾಘವೆಂದ್ರ ಬಡಾವಣೆಯಲ್ಲಿ ನಡೆದಿದೆ.

    24 ವರ್ಷದ ಹರ್ಷಿತಾ ಮೃತ ದುರ್ದೈವಿ. ಮಧುಗಿರಿ ಪಟ್ಟಣದ ರಾಘವೇಂದ್ರ ಬಡಾವಣೆಯ ತನ್ನ ತವರು ಮನೆಯಲ್ಲಿ 24 ವರ್ಷದ ಹರ್ಷಿತಾ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಹರ್ಷಿತಾ ಅವರನ್ನ ಚಿತ್ರದುರ್ಗ ಮೂಲದ ಮುರುಳೀಧರ್ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಸದ್ಯ ತುಮಕೂರು ಸಾರಿಗೆ ಸಂಸ್ಥೆಯ ಡಿಪೋದಲ್ಲಿ ಮೆಕ್ಯನಿಕ್ ಆಗಿ ಕೆಲಸ ನಿರ್ವಹಿಸುತಿದ್ದ ಮುರುಳೀಧರ್ ಪದೇ ಪದೇ ವರದಕ್ಷಿಣೆ ತರುವಂತೆ ಪೀಡಿಸುತಿದ್ದ ಎನ್ನಲಾಗಿದೆ. ಹಣ ತರದೇ ಇದ್ದಾಗ ಹರ್ಷಿತಾರನ್ನ ವಂಚಿಸಿ ಮೋಸದಿಂದ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾನೆ ಎನ್ನಲಾಗಿದೆ.

    ಶುಕ್ರವಾರದಂದು ಹರ್ಷಿತಾ ಹಾಗೂ ಮುರುಳೀಧರ್‍ಗೆ ಕೋರ್ಟ್ ವಿಚ್ಛೇದನ ನೀಡಿದೆ. ವರದಕ್ಷಿಣೆ ಕಿರುಕುಳ ಹಾಗೂ ವಿಚ್ಛೇದನದ ಕಾರಣದಿಂದ ಹರ್ಷಿತಾ ತನ್ನ ಗಂಡ ಮುರುಳಿಧರ್, ಅತ್ತೆ ಮಂಜುಳಾ, ಮಾವ ವಿಠ್ಠಲ್, ಭಾವ ಸಂತೋಷ್ ಸೇರಿದಂತೆ ಒಟ್ಟು 7 ಜನರ ಹೆಸರನ್ನು ಕೈಯಲ್ಲಿ ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಇದಕ್ಕೆ ಸಂಬಂಧಿಸಿದಂತೆ ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿ ಕುಟುಂಬಸ್ಥರಿಂದ ವರದಕ್ಷಿಣೆಯ ಹಣಕ್ಕಾಗಿ ಬೇಡಿಕೆ: ಪತಿರಾಯ ಆತ್ಮಹತ್ಯೆ

    ಪತ್ನಿ ಕುಟುಂಬಸ್ಥರಿಂದ ವರದಕ್ಷಿಣೆಯ ಹಣಕ್ಕಾಗಿ ಬೇಡಿಕೆ: ಪತಿರಾಯ ಆತ್ಮಹತ್ಯೆ

    ಬೀದರ್: ಪತ್ನಿಯ ಸಂಬಂಧಿಕರು ವರದಕ್ಷಿಣೆಯಾಗಿ ನೀಡಿದ ಹಣವನ್ನು ಮರಳಿ ನೀಡುವಂತೆ ಜೀವ ಬೆದರಿಕೆ ಹಾಕಿದ್ದಕ್ಕೆ ಭಯಗೊಂಡ ಪತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಔರಾದ್ ತಾಲೂಕಿನ ಬೆಡಕುಂದಾ ಗ್ರಾಮದಲ್ಲಿ ನಡೆದಿದೆ.

    30 ವರ್ಷ ವಯಸ್ಸಿನ ಅರವಿಂದ್ ಶಂಕರ್ ಆತ್ಮಹತ್ಯೆಗೆ ಶರಣಾದ ಪತಿರಾಯ. ಒಂದು ವರ್ಷದ ಹಿಂದೆ ಭಾಲ್ಕಿ ತಾಲೂಕಿನ ಜಯಶ್ರೀ ಎಂಬವರನ್ನು ಮದುವೆಯಾಗಿದ್ದರು. ಸಂಸಾರದ ಗಲಾಟೆಯಿಂದಾಗಿ ಜಯಶ್ರೀ ಅವರು ತವರು ಮನೆ ಸೇರಿದ್ದರು.

    ತವರು ಮನೆಗೆ ಸೇರಿದ ಬಳಿಕ ಜಯಶ್ರೀ ಮತ್ತು ಅವರ ಕುಟುಂಬಸ್ಥರು ಮದುವೆ ವೇಳೆ ನೀಡಿದ್ದ ವರದಕ್ಷಿಣೆ 5 ಲಕ್ಷ ರೂ.ಗಳನ್ನು ಮರಳಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಒಂದು ವೇಳೆ ಈ ಹಣವನ್ನು ನೀಡದೇ ಇದ್ದರೆ ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಅರವಿಂದ್ 4.5 ಲಕ್ಷ ರೂ. ಹಣವನ್ನು ಹಿಂದುರುಗಿಸಿದ್ದರು. ಆದರೆ ಪತ್ನಿ ಮತ್ತು ಕುಟುಂಬಸ್ಥರ ಕಿರುಕುಳಕ್ಕೆ ಅರವಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ ಹೇಳಲಾಗುತ್ತಿದೆ.

    ಸ್ಥಳಕ್ಕೆ ಠಾಣಾಕುಶನೂರು ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

     

  • ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಮಹಿಳೆ ಸಾವು

    ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಮಹಿಳೆ ಸಾವು

    ಧಾರವಾಡ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಮಹಿಳೆ ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ಧಾರವಾಡದ ಬೋಗೂರ ಗ್ರಾಮದಲ್ಲಿ ನಡೆದಿದೆ.

    ಭೀಮವ್ವ ಮಾಳವಾಡ ಮೃತ ಮಹಿಳೆ. ಭೀಮವ್ವ 14 ತಿಂಗಳ ಹಿಂದೆ ಗ್ರಾಮದ ನಾಗಪ್ಪ ಎಂಬುವನನ್ನು ಮದುವೆ ಆಗಿದ್ದರು. ವರದಕ್ಷಿಣೆ ಕಿರುಕುಳವೇ ಭೀಮವ್ವ ಸಾವಿಗೆ ಕರಣ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇತ್ತ ಭೀಮವ್ವ ಪತಿ ನಾಗಪ್ಪ ಘಟನೆ ಬಳಿಕ ಪರಾರಿಯಾಗಿದ್ದಾನೆ. ಮಹಿಳೆಯ ಅತ್ತೆ ಮಾವನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

    ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವರದಕ್ಷಿಣೆ ಕೊಡದೇ ಇದ್ರೆ ಫಸ್ಟ್ ನೈಟ್ ಇಲ್ಲ ಎಂದ ಪತಿ ವಿರುದ್ಧ ದೂರು

    ವರದಕ್ಷಿಣೆ ಕೊಡದೇ ಇದ್ರೆ ಫಸ್ಟ್ ನೈಟ್ ಇಲ್ಲ ಎಂದ ಪತಿ ವಿರುದ್ಧ ದೂರು

    ಬೆಂಗಳೂರು: ವರದಕ್ಷಿಣಿಯ ಹಣವನ್ನು ಕೊಟ್ಟಿಲ್ಲ ಅಂದ್ರೆ ಮಂಚಕ್ಕೆ ಏರಬೇಡ ಎಂದು ಪೀಡಿಸುತ್ತಿದ್ದ ಪತಿಯ ವಿರುದ್ಧ ಪತ್ನಿ ಈಗ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಪತಿ ಮಹೇಶ್, ಅತ್ತೆ ಶಕುಂತಲ, ಮಾವ ಶಿವನಾರಾಯಣ ವಿರುದ್ಧ ಪತ್ನಿ ದಿವ್ಯಾ(ಹೆಸರು ಬದಲಾಯಿಸಲಾಗಿದೆ) ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

    ಪತ್ನಿ ಆರೋಪ ಏನು?
    ಮಹಾಗಣಪತಿ ನಗರದಲ್ಲಿ ನೆಲೆಸಿರುವ ಮಹೇಶ್ ಜೊತೆ ನನ್ನ ವಿವಾಹ 2016ರ ಮೇ1ರಂದು ನಡೆದಿದೆ. ಮದುವೆ ವೇಳೆ ಚಿನ್ನ, ಹಣ ನೀಡುವಂತೆ ಪೀಡಿಸುತ್ತಿದ್ದರು. ಮದುವೆಯಾದ ಬಳಿಕ ಪತಿ ಮನೆಯವರು ಕಿರುಕುಳ ಜಾಸ್ತಿ ಆಗಿದ್ದು, ನನ್ನ ಮೇಲೆ ಹಲ್ಲೆ ನಡೆಸಿ ವರದಕ್ಷಿಣೆ ತರುವಂತೆ ಒತ್ತಾಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ವರದಕ್ಷಿಣೆಯ ತರದೇ ನಿನ್ನ ಮೇಲೆ ಲೈಂಗಿಕ ಕ್ರಿಯೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಹಣವನ್ನು ತರದಿದ್ದರೆ ಈ ಮನೆಯಲ್ಲಿ ನೀನು ಇರಬಾರದು. ಇದ್ದರೆ ಜೀವ ಸಹಿತ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ, ಇವರ ಕಿರುಕುಳಕ್ಕೆ ಬೇಸತ್ತು ನಾನು 2017ರ ಜನವರಿ 23ರಂದು ತವರು ಮನೆಗೆ ಹೋಗಿದ್ದೇನೆ. ಹೀಗಾಗಿ ವರದಕ್ಷಿಣೆ ಕಿರುಕುಳ ನೀಡಿದ್ದಕ್ಕೆ ಈ ಮೂವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪತ್ನಿ ದಿವ್ಯಾ ದೂರು ನೀಡಿದ್ದಾರೆ.

    ಇದನ್ನೂ ಓದಿ: ನಾಯಿ ಜೊತೆ ಸೆಕ್ಸ್ ನಡೆಸುವಂತೆ ಪತ್ನಿಗೆ ಪತಿ ಚಿತ್ರಹಿಂಸೆ!