Tag: Dowry

  • ಪ್ರೀತಿಸಿ ಮದ್ವೆಯಾಗಿ ಪತಿ ಮನೆಗೆ ತೆರಳ್ತಿದ್ದಾಗ ಕಾರಿನಿಂದ ಜಿಗಿದು ಪೊಲೀಸ್ ಠಾಣೆಗೆ ಓಡಿದ ವಧು!

    ಪ್ರೀತಿಸಿ ಮದ್ವೆಯಾಗಿ ಪತಿ ಮನೆಗೆ ತೆರಳ್ತಿದ್ದಾಗ ಕಾರಿನಿಂದ ಜಿಗಿದು ಪೊಲೀಸ್ ಠಾಣೆಗೆ ಓಡಿದ ವಧು!

    ಪಾಟ್ನಾ: ಪ್ರೀತಿಸಿದ ಹುಡುಗನ ಜೊತೆ ಮದುವೆಯಾಗಿ ಆತನ ಮನೆಗೆ ಹೋಗುವಾಗ ವಧು ಕಾರಿನಿಂದ ಜಿಗಿದು ವರನ ವಿರುದ್ಧ ಅತ್ಯಾಚಾರದ ದೂರನ್ನು ದಾಖಲಿಸಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ವರದಿಗಳ ಪ್ರಕಾರ ವಧು-ವರ ಇಬ್ಬರೂ ಬಾಲ್ಯ ಸ್ನೇಹಿತರಾಗಿದ್ದು, 2012ರಿಂದ ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿದ್ದರು. ನಂತರ ಫೆಬ್ರವರಿ 9ರಂದು ಸಂಪ್ರದಾಯದಂತೆ ಮದುವೆಯಾಗಿದ್ದರು. ಮದುವೆ ಆದ ಮಾರನೇ ದಿನ ವಧು ತನ್ನ ಪತಿ ಹಾಗೂ ಕುಟುಂಬದ ವಿರುದ್ಧ ಅತ್ಯಾಚಾರ ಹಾಗೂ ವರದಕ್ಷಿಣೆ ಕೇಸನ್ನು ದಾಖಲಿಸಿದ್ದಾಳೆ.

     ಫೆಬ್ರವರಿ 9ರ ರಾತ್ರಿ ಮದುವೆ ನಡೆದಿದ್ದು, ಮಾರನೇ ದಿನ ಪತಿ, ಪತ್ನಿಯ ತವರು ಮನೆಯಿಂದ ತನ್ನ ಮನೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ದಾರಿ ಮಧ್ಯೆದಲ್ಲಿ ವಧು ಕಾರಿನಿಂದ ಜಿಗಿದು ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಪೊಲೀಸ್ ಠಾಣೆಗೆ ಹೋದ ನಂತರ ತನ್ನ ಪತಿ ವೈಭವ್, ಆತನ ಸಹೋದರ ಸೌರಬ್ ಆನಂದ್, ತಂದೆ ಅಲೋಕ್ ಕುಮಾರ್ ಹಾಗೂ ವರನ ಮಾವ ವಿರುದ್ಧ ದೂರು ನೀಡಿ ಕೇಸ್ ದಾಖಲಿಸಿದ್ದಾಳೆ.

    ಮದುವೆಯಾಗಿ ಗಂಡನ ಮನೆಗೆ ಹೋಗುತ್ತಿರುವಾಗ ಕಾರಿನಲ್ಲಿ ಪತಿ ಹಾಗೂ ನನ್ನ ನಡುವೆ ಜಗಳವಾಗಿತ್ತು. ಆಗ ವೈಭವ್‍ನನ್ನ ಕುತ್ತಿಗೆ ಬಿಗಿದು ಕೊಲ್ಲಲು ಯತ್ನಿಸಿದ್ದನು. ನಾನು ಜಿಗಿದು ಓಡಿ ಹೋಗಲು ಪ್ರಯತ್ನಿಸುವಾಗ ಕಾರು ಚಲಾಯಿಸುತ್ತಿದ್ದ ವೈಭವ್‍ನ ಮಾವ ಲಾಕ್ ಮಾಡಲು ಪ್ರಯತ್ನಿಸಿದ್ದ. ಅಷ್ಟೇ ಅಲ್ಲದೇ ನನ್ನ ಮೈಮೇಲೆ ಇರುವ ಚಿನ್ನಾಭರಣವನ್ನು ದೋಚಲು ಪ್ರಯತ್ನಿಸಿದ್ದರು ಎಂದು ವಧು ಆರೋಪಿಸಿದ್ದಾಳೆ.

    ಮದುವೆಯ ವೇಳೆ ದುಬಾರಿ ಕಾರನ್ನು ವರದಕ್ಷಿಣೆಯಾಗಿ ನೀಡಲು ಹೇಳಿದ್ದರು. ಅಷ್ಟೇ ಅಲ್ಲದೇ ಜಾತಿಯ ಬಗ್ಗೆ ನಿಂದಿಸಿದ್ದರು. 25ಲಕ್ಷ ರೂ. ಗಿಫ್ಟ್ ಆಗಿ ನೀಡಲು ಹೇಳಿದ್ದರು. ಆದರೆ ನಾವು ವರದಕ್ಷಿಣೆ ನೀಡಲು ನಿರಾಕರಿಸಿದ್ವಿ. ಇದರಿಂದ ವರ ಹಸಮಣೆಯಿಂದ ಓಡಿ ಹೋಗಲು ಪ್ರಯತ್ನಿಸುತ್ತಿದ್ದ. ಹಾಗಾಗಿ ಆತನ ವಿರುದ್ಧ ಅತ್ಯಾಚಾರದ ಆರೋಪವನ್ನು ವದು ನೀಡಿದ್ದಾಳೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ವರ ಹಾಗೂ ವಧು ಇಬ್ಬರೂ ಒಪ್ಪಿಕೊಂಡು 2012ರಲ್ಲೇ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಹೀಗಿರುವಾಗ ಸುಳ್ಳು ಅತ್ಯಾಚಾರದ ಕೇಸ್ ದಾಖಲಿಸಿದ್ದಾಳೆ ಎಂದು ವೈಭವ್ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಇಬ್ಬರೂ ಶಾಲಾ ದಿನಗಳಿಂದ ಸ್ನೇಹಿತರು. ವೈಭವ್ ಮಧ್ಯಮ ವರ್ಗದ ಕುಟುಂಬದವನಾಗಿದ್ದರೆ, ಹುಡುಗಿ ಹೈ ಪ್ರೊಫೈಲ್ ಕುಟುಂಬದವಳು ಎಂದು ವರದಿಯಾಗಿದೆ.

    ವೈಭವ್ ದೆಹಲಿಯ ಏರ್ ಲೈನ್ಸ್ ಕಂಪನಿಯಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದು, 2012ರಲ್ಲಿ ಇಬ್ಬರೂ ಒಪ್ಪಿಕೊಂಡು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ನಂತರ ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿದ್ದರು. ಫೆ. 09 ರಂದು ಇಬ್ಬರ ಕುಟುಂಬದವರ ಒಪ್ಪಿಗೆ ಪಡೆದು ಸಂಪ್ರದಾಯದಂತೆ ಮದುವೆಯಾಗಲು ನಿರ್ಧರಿಸಿದ್ದರು.

  • 8 ತಿಂಗಳ ಹಿಂದೆ ಮದ್ವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ಸಾವು

    8 ತಿಂಗಳ ಹಿಂದೆ ಮದ್ವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ಸಾವು

    ಬೆಂಗಳೂರು: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನಪ್ಪಿದ್ದು, ಮೃತಳ ಪೋಷಕರು ವರದಕ್ಷಿಣೆಗಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ.

    ಜೀವಿತಾ(21) ಅನುಮಾನಾಸ್ಪದವಾಗಿ ಮೃತಪಟ್ಟ ಗೃಹಿಣಿ. ಆನೇಕಲ್ ಪಟ್ಟಣದ ಬಹದೂರ್ ಪುರ ನಿವಾಸಿ ಮೋಹನ್ ಎಂಬವನಿಗೆ 8 ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಗುರುವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಜೀವಿತಾ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

    ಜೀವಿತಾ ಮದುವೆಯ ಸಂದರ್ಭದಲ್ಲಿ ಮೋಹನ್‍ಗೆ 120 ಗ್ರಾಂ ಚಿನ್ನ ಹಾಗೂ 75 ಸಾವಿರ ನಗದನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮದುವೆಯ ನಂತರ ಮೋಹನ್, ಅತ್ತೆ ಗೌರಮ್ಮ, ಮಾವ ನಾಗರಾಜು ಹಾಗೂ ನಾದಿನಿ ಶ್ವೇತಾ ಸೇರಿ ಹೆಚ್ಚಿನ ವರದಕ್ಷಿಣೆ ತರುವಂತೆ ಜೀವಿತಾಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಜೀವಿತಾಗೆ ಆರೋಗ್ಯ ಸಮಸ್ಯೆ ಇದ್ದುದ್ದರಿಂದ ಪೋಷಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತವರಿಗೆ ಕರೆತಂದಿದ್ದರು. ಆದರೆ ಬುಧವಾರ ಮೋಹನ್ ಜೀವಿತಾಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದ. ಜೀವಿತಾ ಒಲ್ಲದ ಮನಸ್ಸಿನಿಂದಲೇ ಗಂಡನ ಮನೆಗೆ ಹೋಗಿದ್ದರು.

    ಗುರುವಾರ ಬೆಳಗ್ಗೆ ಮೋಹನ್ ಜೀವಿತಾ ಮನೆಯವರಿಗೆ ಫೋನ್ ಮಾಡಿ, ನಿಮ್ಮ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಸ್ಪತ್ರೆಗೆ ಸೇರಿಸಿದ್ದೀವೆ ಎಂದು ತಿಳಿಸಿದ್ದಾನೆ. ಆದ್ರೆ ಕುಟುಂಬದವರು ಆಸ್ಪತ್ರೆಗೆ ಹೋಗಿ ನೋಡಿದಾಗ ಜೀವಿತಾ ಮೃತಪಟ್ಟಿದ್ದರು.

    ನಮ್ಮ ಮಗಳು ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದಾಳೆ. ಮೋಹನ್ ಹಾಗೂ ಅವರ ಕುಟುಂಬದವರು ಸೇರಿ ಮಗಳನ್ನು ಕೊಂದಿದ್ದಾರೆ ಎಂದು ಆರೋಪಿಸಿ ಜೀವಿತಾ ಕುಟುಂಬದವರು ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಪಡೆದ ಪೊಲೀಸರು ಮೋಹನ್ ಹಾಗೂ ಕುಟುಂಬದವರನ್ನು ವಶಕ್ಕೆ ಪಡೆದು ವಿಚಾರಣೆ ನೆಡೆಸುತ್ತಿದ್ದಾರೆ.

  • 2 ಲಕ್ಷ ರೂ. ವರದಕ್ಷಿಣೆ ತರದಕ್ಕೆ ಪತ್ನಿಯ ಕಿಡ್ನಿಯನ್ನ ಮಾರಿದ ಪತಿ

    2 ಲಕ್ಷ ರೂ. ವರದಕ್ಷಿಣೆ ತರದಕ್ಕೆ ಪತ್ನಿಯ ಕಿಡ್ನಿಯನ್ನ ಮಾರಿದ ಪತಿ

    ಕೋಲ್ಕತ್ತಾ: ಪತಿಯೊಬ್ಬ ಪತ್ನಿ ತವರು ಮನೆಯಿಂದ ವರದಕ್ಷಿಣೆ ತರಲಿಲ್ಲ ಎಂದು ಆಕೆಯ ಕಿಡ್ನಿಯನ್ನು ಮಾರಾಟ ಮಾಡಿರುವ ವಿಚಿತ್ರ ಘಟನೆಯೊಂದು ಪಶ್ಚಿಮ ಬಂಗಾಳ ರಾಜ್ಯದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    28 ವರ್ಷದ ರಿಟಾ ಸರ್ಕಾರ್ ಕಿಡ್ನಿ ಕಳೆದುಕೊಂಡ ಪತ್ನಿ. ರಿಟಾ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ರಿಟಾ ಪತಿ ಮತ್ತು ಬಾಮೈದನನ್ನು ಬಂಧಿಸಿದ್ದಾರೆ. 12 ವರ್ಷಗಳ ಹಿಂದೆ ಬಿಸ್ವಜಿತ್ ಸರ್ಕಾರ್ ಎಂಬಾತನೊಂದಿಗೆ ರಿಟಾ ಅವರ ಮದುವೆಯಾಗಿತ್ತು. ಮದುವೆ ಬಳಿಕ ಪತಿ ಮತ್ತು ಮಾವ ವರದಕ್ಷಿಣೆ ತರುವಂತೆ ಪ್ರತಿನಿತ್ಯ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು.

    ಕಿಡ್ನಿ ಮಾರಾಟ ಮಾಡಿದ್ದು ಹೇಗೆ?: ಎರಡು ವರ್ಷಗಳ ಹಿಂದೆ ರಿಟಾ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ವೇಳೆ ರಿಟಾ ಪತಿ ಕೊಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ರು. ವೈದ್ಯರು ರಿಟಾ ಅಪೆಂಡಿಕ್ಸ್ ನಿಂದ ಬಳಲುತ್ತಿದ್ದಾರೆ ಎಂದು ಪತಿಗೆ ತಿಳಿಸಿದ್ದಾರೆ. ಇದೇ ಸಮಯವನ್ನು ದುರುಪಯೋಗ ಮಾಡಿಕೊಂಡ ರಿಟಾ ಪತಿ ಶಸ್ತ್ರ ಚಿಕಿತ್ಸೆ ವೇಳೆ ವೈದ್ಯರೊಂದಿಗೆ ಸೇರಿಕೊಂಡು ಪತ್ನಿಯ ಕಿಡ್ನಿ ತೆಗೆದು ಮಾರಾಟ ಮಾಡಿದ್ದಾನೆ.

    ಅಪೆಂಡಿಕ್ಸ್ ಶಸ್ತ್ರ ಚಿಕಿತ್ಸೆ ಬಳಿಕ ರಿಟಾ ನೋವಿನಿಂದ ಬಳಲುತ್ತಿದ್ದರು. ಆದ್ರೆ ಪತಿರಾಯ ಮಾತ್ರ ಕೋಲ್ಕತ್ತಾದಲ್ಲಿ ಸರ್ಜರಿ ನಡೆದಿರುವ ಬಗ್ಗೆ ಯಾರಿಗೂ ಹೇಳದಂತೆ ಪತ್ನಿಗೆ ಎಚ್ಚರಿಕೆ ಕೊಟ್ಟಿದ್ದ. ರಿಟಾ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೂ ನಿರ್ಲಕ್ಷ್ಯ ಮಾಡಿದ್ದ.

    ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಿಟಾರನ್ನು ನೋಡಿದ ಪೋಷಕರು ಉತ್ತರ ಬಂಗಾಲ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ರಿಟಾರನ್ನು ಪರೀಶಿಲಿಸಿದ ವೈದ್ಯರು ಒಂದು ಕಿಡ್ನಿ ಇಲ್ಲವೆಂಬ ವಿಷಯ ತಿಳಿಸಿದ್ದಾರೆ. ಅಲ್ಲಿಂದ ಹಿಂದಿರುಗಿ ಬಂದ ರಿಟಾ ಮಲಡಾದಲ್ಲಿರುವ ನರ್ಸಿಂಗ್ ಹೋಮ್ ನ ವೈದ್ಯರ ಭೇಟಿಯಾಗಿದ್ದಾರೆ. ಈ ವೇಳೆ ವೈದುರು ಒಂದು ಕಿಡ್ನಿ ಮಾತ್ರ ತೆಗೆಯಲಾಗಿದ್ದು, ಪ್ರಾಣಾಪಾಯವೇನಿಲ್ಲ ಎಂಬ ಸಲಹೆ ನೀಡಿದ್ದಾರೆ.

    ನನ್ನ ದೇಹದಿಂದ ಕಿಡ್ನಿ ತೆಗೆದಿದ್ದು ಹೇಗೆ ಎಂಬುದನ್ನು ಯೋಚಿಸಿದಾಗ ಎರಡು ವರ್ಷಗಳ ಹಿಂದೆ ನಡೆದಿರುವ ಅಪೆಂಡಿಕ್ಸ್ ಶಸ್ತ್ರ ಚಿಕಿತ್ಸೆಯ ನೆನಪಾಯಿತು. ಚಿಕಿತ್ಸೆಯ ಬಳಿಕ ಪತಿಯ ವರ್ತನೆ, ಶಸ್ತ್ರ ಚಿಕಿತ್ಸೆ ನಡೆದಿರುವ ಬಗ್ಗೆ ಯಾರಿಗೂ ಹೇಳದಂತೆ ನೀಡಿದ್ದ ಎಲ್ಲ ಎಚ್ಚರಿಕೆಯ ಮಾತುಗಳು ಅನುಮಾನ ಮೂಡಿಸಿದವು ಎಂದು ರಿಟಾ ಹೇಳಿದ್ದಾರೆ.

    ಪತಿ ವಿರುದ್ಧ ದೂರು: ತನ್ನ ಕಿಡ್ನಿ ಕಳ್ಳತನ ಆಗಿದ್ದರ ಬಗ್ಗೆ ರಿಟಾ ತನ್ನ ಪೋಷಕರ ಸಹಾಯದೊಂದಿಗೆ ಉತ್ತರ ಬಂಗಾಳದ ಫರಕ್ಕ ಪೊಲೀಸ್ ಠಾಣೆಯಲ್ಲಿ ಪತಿ, ಮಾವ, ಅತ್ತೆ ಮತ್ತು ಬಾಮೈದನ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ್ವಯ ಮುರ್ಷಿದಾಬಾದ್ ನಗರದಲ್ಲಿ ಬಟ್ಟೆ ವ್ಯಾಪಾರಿಯಾಗಿರುವ ರಿಟಾ ಪತಿ ಬಿಸ್ವಜಿತ್ ಸರ್ಕಾರ್ ಮತ್ತು ಬಾಮೈದ ಶ್ಯಾಮಲ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ರಿಟಾ ಅತ್ತೆ ಬುಲ್‍ರಾಣಿ ಮತ್ತು ಮಾವ ಎಸ್ಕೇಪ್ ಆಗಿದ್ದಾರೆ.

    ತಪ್ಪೊಪ್ಪಿಕೊಂಡ ಪತಿ: ಪೊಲೀಸ್ ವಿಚಾರಣೆ ವೇಳೆ ಬಿಸ್ವಜಿತ್ ಪತ್ನಿಯ ಕಿಡ್ನಿಯನ್ನು ಛತ್ತೀಸ್‍ಘಢ ರಾಜ್ಯದ ಉದ್ಯಮಿಯೊಬ್ಬರಿಗೆ ಮಾರಿಕೊಂಡಿದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇನ್ನು ರಿಟಾ ಸರ್ಜರಿ ನಡೆದಿರುವ ಖಾಸಗಿ ಆಸ್ಪತ್ರೆಯ ಮೇಲೆ ಪೊಲೀಸರು ದಾಳಿ ನಡೆಸಲಾಗಿದೆ ಎಂದು ಫರಕ್ಕ ಠಾಣೆಯ ಹೆಸರು ಹೇಳಲು ಇಚ್ಚಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ತನಿಖೆಗೆ ವಿಶೇಷ ಟೀಂ: ಕಿಡ್ನಿ ಸಮಗಲಿಂಗ್ ಗ್ಯಾಂಗ್‍ವೊಂದು ನಗರದಲ್ಲಿ ಈ ರೀತಿಯ ಚಟುವಟಿಕೆ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಕಿಡ್ನಿ ದಂಧೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲು ವಿಶೇಷ ಟೀಮ್ ರಚನೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ರಿಟಾ 2005ರಲ್ಲಿ ಬಿಸ್ವಜಿತ್ ನೊಂದಿಗೆ ಮದುವೆಯಾಗಿದ್ದು, ವರದಕ್ಷಿಣೆ ಹಣಕ್ಕಾಗಿ ಪತಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ರಿಟಾ ಮತ್ತು ಬಸ್ವಜಿತ್‍ಗೆ 11 ವರ್ಷದ ಒಬ್ಬ ಮಗನು ಇದ್ದಾನೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 19(ಹಣಕ್ಕಾಗಿ ಮಾನವ ಅಂಗಗಳ ಮಾರಾಟ), ಸೆಕ್ಷನ್ 21 (ಹಣಕ್ಕಾಗಿ ಅಂಗಗಳ ಮಾರಾಟ ಕಾನೂನು ಉಲ್ಲಂಘನೆ), ಸೆಕ್ಷನ್ 307 (ಕೊಲೆಗೆ ಯತ್ನ) ಮತ್ತು ಸೆಕ್ಷನ್ 498(ವಿವಾಹಿತ ಮಹಿಳೆಯ ಅಸಹಾಯಕತೆಯ ದುರುಪಯೋಗ) ಅನ್ವಯ ಪ್ರಕರಣ ದಾಖಲಾಗಿದೆ.

    Black woman in handcuffs
  • ಪತಿ, ಅತ್ತೆ, ಮಾವ ಸೇರಿ ಶೌಚಾಲಯದಲ್ಲೇ 5ಲೀ. ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ರು!

    ಪತಿ, ಅತ್ತೆ, ಮಾವ ಸೇರಿ ಶೌಚಾಲಯದಲ್ಲೇ 5ಲೀ. ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ರು!

    ವಿಜಯಪುರ: ವರದಕ್ಷಿಣೆಗಾಗಿ ಮಹಿಳೆಯೊಬ್ಬರ ಪತಿಯ ಕುಟುಂಬಸ್ಥರು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಕನ್ನೊಳ್ಳಿಯಲ್ಲಿ ನಡೆದಿದೆ.

    ಪತಿ ವಿಶ್ವನಾಥ ಅಡ್ಡಿ, ಮಾವ ಕಂಠೇಪ್ಪ, ಅತ್ತೆ ಶಂಕರವ್ವ ಸೇರಿ ಭಾಗ್ಯವತಿ ಎಂಬ ಮಹಿಳೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಸದ್ಯ ಮಹಿಳೆ 90% ರಷ್ಟು ಸುಟ್ಟ ಗಾಯಗಳಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

    ಆರೋಪಿ ವಿಶ್ವನಾಥ ಅಡ್ಡಿ ಮತ್ತು ಭಾಗ್ಯವತಿ ಮದುವೆಯಾಗಿ 2 ವರ್ಷಗಳಾಗಿದ್ದು, ಆರೋಪಿ ಪತಿ ಮದುವೆಯಾದಗಿನಿಂದ ಪತ್ನಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದನು. ಪತಿ ಅಷ್ಟೇ ಅಲ್ಲದೇ ಆಕೆಯ ಅತ್ತೆ ಮಾವ ಕೂಡ ತವರು ಮನೆಗೆ ಹೋಗಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ.

    ಮಂಗಳವಾರ ಇದೇ ವಿಚಾರಕ್ಕೆ ಮತ್ತೆ ಜಗಳವಾಡಿ ಮುಂಜಾನೆ ಸುಮಾರು 4 ಗಂಟೆಗೆ ಪತಿ, ಅತ್ತೆ, ಮಾವ ಸೇರಿಕೊಂಡು ಶೌಚಾಲಯದಲ್ಲಿ 5 ಲೀಟರ್ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿಯಿಂದ ಹೊಗೆ ಬರುತ್ತಿತ್ತು. ಇದನ್ನು ಗಮನಿಸಿದ ನೆರೆಹೊರೆಯವರು ಬಂದು ಕಾಪಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಿ ಭಾಗ್ಯವತಿ ಸುಮಾರು 90% ಭಾಗದಷ್ಟು ಸುಟ್ಟು ಹೋಗಿದ್ದರು. ಸದ್ಯ ಭಾಗ್ಯವತಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

    ಈ ಪ್ರಕರಣ ಸಂಬಂಧ ಸಿಂಧಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ವರದಕ್ಷಿಣೆಗಾಗಿ ಪತ್ನಿಯನ್ನು ಮನೆಯಿಂದ ಹೊರಹಾಕಿದ ಪತಿ- ನನಗೆ ಗಂಡ ಬೇಕು ಗಂಡ ಎಂದು ಮಹಿಳೆ ಕಣ್ಣೀರು

    ವರದಕ್ಷಿಣೆಗಾಗಿ ಪತ್ನಿಯನ್ನು ಮನೆಯಿಂದ ಹೊರಹಾಕಿದ ಪತಿ- ನನಗೆ ಗಂಡ ಬೇಕು ಗಂಡ ಎಂದು ಮಹಿಳೆ ಕಣ್ಣೀರು

    ವಿಜಯಪುರ: ವರದಕ್ಷಿಣೆ ತರುವಂತೆ ಪತಿ ಹಾಗೂ ಕುಟುಂಬಸ್ಥರು ಮಹಿಳೆಯನ್ನು ಮನೆಯಿಂದ ಹೊರಹಾಕಿದ ಘಟನೆ ವಿಜಯಪುರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆದಿದೆ.

    ಶೈಲಾಬಾಯಿ ಸುರೇಶ್ ವಾಲಿ ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಪತ್ನಿಯಾಗಿದ್ದು, ಈಕೆಯ ಪತಿ ಸುರೇಶ್ ವಾಲಿ ಹಾಗೂ ಈತನ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರಹಾಕಿದ್ದಾರೆ. ಈಗ ಶೈಲಾಬಾಯಿ ನನಗೆ ಪತಿ ಬೇಕೆಂದು ಸುರೇಶ್ ವಾಲಿ ಮನೆ ಮುಂದೆ ಕಳೆದ 6 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ.

    ಸುರೇಶ್ ಹಾಗೂ ನಾನು ಮದುವೆಯಾಗಿ 7 ವರ್ಷಗಳಾಗಿವೆ. ಆದರೆ ಸುರೇಶ್ ಈಗ ತಾಯಿ ಹಾಗೂ ತಂಗಿಯ ಮಾತು ಕೇಳಿ ನನಗೆ ವರದಕ್ಷಿಣೆ ತರುವಂತೆ ಪೀಡುಸುತ್ತಿದ್ದಾರೆ. ಎರಡು ಸಾರಿ ತವರು ಮನೆಗೆ ಹೋಗಿ ವರದಕ್ಷಿಣೆ ತಂದು ಕೊಟ್ಟರೂ ಸುರೇಶ್ ಮನೆಯವರಿಗೆ ವರದಕ್ಷಿಣೆ ದಾಹ ತಿರಿಲ್ಲ. ನಮಗೆ ಇನ್ನು ವರದಕ್ಷಿಣೆ ಬೇಕು ಎಂದು ಹೇಳಿ ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಶೈಲಾಬಾಯಿ ಆರೋಪಿಸಿದ್ದಾರೆ.

    ನನಗೆ 5 ವರ್ಷದ ಹೆಣ್ಣು ಮಗಳು ಕೂಡ ಇದ್ದು, ಗಂಡ ಮನೆಯಿಂದ ಹೊರಹಾಕಿದ ಹಿನ್ನೆಲೆಯಲ್ಲಿ ಅದೇ ಊರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದೆ. ಆದರೆ ಅಲ್ಲಿಯೂ ಕೂಡ ಸುರೇಶ್ ನ ಮಾತು ಕೇಳಿ ಬಾಡಿಗೆ ಮನೆ ಮಾಲೀಕ ನನ್ನನ್ನು ಹೊರಹಾಕಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ನಾನು ಈಗ ಪತಿ ಮನೆ ಎದುರು ಅಡುಗೆ ಸಾಮಗ್ರಿಗಳನ್ನು ಇಟ್ಟುಕೊಂಡು ಪ್ರತಿಭಟನೆಗೆ ಇಳಿದಿದ್ದೇನೆ ಎಂದು ಶೈಲಾಬಾಯಿ ಹೇಳಿಕೆ ನೀಡಿದ್ದಾರೆ.

  • ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು- ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು- ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    ಹಾಸನ: ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

    22 ವರ್ಷದ ಅಮೃತಾ ಮೃತ ದುರ್ದೈವಿ. ಮಂಡ್ಯ ಮೂಲದ ಅಮೃತಾರನ್ನ 6 ವರ್ಷಗಳ ಹಿಂದೆ ಚನ್ನರಾಯಪಟ್ಟಣದ ಪ್ರವೀಣ್ ಎಂಬಾತನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಪ್ರವೀಣ್ ಮತ್ತು ಆತನ ಮನೆಯವರು ಮೊದಲಿಂದಲೂ ವರದಕ್ಷಿಣೆಗೆ ಕಿರುಕುಳ ನೀಡುತ್ತಿದ್ದರು ಎಂದು ಅಮೃತಾ ಪೋಷಕರು ಮತ್ತು ಸಂಬಂಧಿಕರು ಆರೋಪಿಸುತ್ತಿದ್ದಾರೆ.

    ಮನೆಯಿಂದ 5 ಲಕ್ಷ ರೂಪಾಯಿ ತರುವಂತೆ ಕಳೆದ ಕೆಲ ತಿಂಗಳಿನಿಂದ ಅಮೃತಾಗೆ ಬೆದರಿಕೆ ಹಾಕಿದ್ದರು. ಇದು ಆತ್ಮಹತ್ಯೆಯಲ್ಲ, ಬದಲಾಗಿ ವ್ಯವಸ್ಥಿತ ಕೊಲೆ. ಅಮೃತಾಳನ್ನ ಕೊಲೆ ಮಾಡಿ ನೇಣು ಬಿಗಿದಿದ್ದಾರೆ. ಮಂಡಿಯೂರಿ ನೇಣು ಹಾಕಿಕೊಂಡಿರುವುದನ್ನ ನೋಡಿದರೆ ಮೇಲ್ನೋಟಕ್ಕೆ ಇದೊಂದು ಕೊಲೆಯೆಂದೇ ಭಾಸವಾಗುತ್ತಿದ್ದು, ಅಮೃತಾ ಪತಿ ಪ್ರವೀಣ್ ಹಾಗೂ ಆತನ ಮನೆಯವರನ್ನ ಬಂಧಿಸಿ ನ್ಯಾಯ ಕೊಡಿಸಿ ಎಂದು ಮಾಧ್ಯಮದ ಎದುರು ಅಮೃತಾ ತಾಯಿ ಲಕ್ಷ್ಮಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಘಟನೆ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಮೃತ ಅಮೃತಾ ಪತಿ ಪ್ರವೀಣ್, ಅತ್ತೆ ಕಮಲಬಾಯಿ, ಸುನೀತಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಅಮೃತಾ ಶವವನ್ನ ಚನ್ನರಾಯಪಟ್ಟಣದ ಶವಗಾರದಲ್ಲಿ ಇಡಲಾಗಿದೆ. ಅಮೃತಾ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಪತ್ನಿ ಅಂದವಾಗಿದ್ದಾಳೆಂದು ಮೊಬೈಲ್ ಕೊಡದ ಶಿಕ್ಷಕ ಪತಿ, ನೇಣು ಬಿಗಿದು ಕೊಂದೇ ಬಿಟ್ಟ!

    ಪತ್ನಿ ಅಂದವಾಗಿದ್ದಾಳೆಂದು ಮೊಬೈಲ್ ಕೊಡದ ಶಿಕ್ಷಕ ಪತಿ, ನೇಣು ಬಿಗಿದು ಕೊಂದೇ ಬಿಟ್ಟ!

    ಬಳ್ಳಾರಿ: ಪತ್ನಿ ಚಂದವಾಗಿ, ಅಂದವಾಗಿದ್ದಾಳೆ. ಅವಳಿಗೆ ಮೊಬೈಲ್ ನೀಡಿದ್ರೆ ಬೇರೆಯವರ ಜೊತೆ ಮಾತನಾಡುತ್ತಾಳೆಂದು ಅನುಮಾನಪಡುತ್ತಿದ್ದ ಶಿಕ್ಷಕ ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಹೂವಿನಹಡಗಲಿ ತಾಲೂಕಿನ ಕುಂಬಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢ ಶಾಲೆಯ ಶಿಕ್ಷಕ ನಾಗರಾಜ್, ತನ್ನ ಪತ್ನಿಯನ್ನು ನೇಣು ಬಿಗಿದು ನಂತರ ಹೃದಯಾಘಾತವೆಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.

    ಶಿಕ್ಷಕ ನಾಗರಾಜ್ ಚೆನ್ನಗಿರಿಯ ಹೆಬ್ಬಾಳಗೇರಿಯ ನೇತ್ರಾವತಿಯೊಂದಿಗೆ ಕಳೆದ ವರ್ಷವಷ್ಟೆ ಮದುವೆಯಾಗಿದ್ದ. ಆದ್ರೆ ಮದುವೆಯಾದ ನಂತರ ಪತ್ನಿಯನ್ನು ಸದಾ ಅನುಮಾನಿಸುತ್ತಿದ್ದ ನಾಗರಾಜ್, ಪತ್ನಿಯನ್ನು ತವರು ಮನೆಗೂ ಸಹ ಕಳುಹಿಸದೆ, ಮೊಬೈಲ್ ನಲ್ಲಿ ಮಾತನಾಡಲು ಅವಕಾಶ ನೀಡುತ್ತಿರಲಿಲ್ಲ. ಅಲ್ಲದೇ ವರದಕ್ಷಿಣೆ ತಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದ ಎನ್ನಲಾಗಿದೆ.

    ಪತಿಯ ಕಿರುಕುಳಕ್ಕೆ ಸೊಪ್ಪು ಹಾಕದ ನೇತ್ರಾವತಿ, ತವರು ಮನೆಯಿಂದ ವರದಕ್ಷಿಣೆ ತರಲು ನಿರಾಕರಿಸಿದ್ದರು. ಹೀಗಾಗಿ ನಾಗರಾಜ್ ಬುಧುವಾರ ರಾತ್ರಿ ಪತ್ನಿಗೆ ಹಡಗಲಿಯ ಇಸ್ಲಾಂಪೇಟೆಯ ಮನೆಯಲ್ಲಿ ಹಲ್ಲೆ ಮಾಡಿ ನೇಣು ಬಿಗಿದು ಕೊಲೆ ಮಾಡಿದ್ದಾನೆ. ನಂತರ ಪತ್ನಿಗೆ ಹೃದಯಾಘಾತವಾಗಿದೆ ಎಂದು ಬೀಗರಿಗೆ ಫೋನ್ ಮಾಡಿ ಕರೆಸಿದ್ದಾನೆ. ನೇತ್ರಾವತಿಯ ಪೋಷಕರು ಅಳಿಯನ ಮನೆಗೆ ಬಂದು ನೋಡಿದಾಗ ಮಗಳನ್ನು ನೇಣು ಬಿಗಿದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

    ಇಷ್ಟಾದ್ರೂ ಆಗಿದ್ದು ಆಗಿ ಹೋಗಿದೆ ಎಂದು ರಾಜಿ ಮಾಡಿಸುವ ಪ್ರಯತ್ನವನ್ನು ನಾಗರಾಜ್ ಮಾಡಿದ್ದ. ರಾಜಿಯಾಗದ ಹಿನ್ನಲೆಯಲ್ಲಿ ನಾಗರಾಜ್ ಇದೀಗ ತೆಲೆಮರೆಸಿಕೊಂಡಿದ್ದಾನೆ.

    ಘಟನೆಯ ಕುರಿತು ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಲ್ಯಾಣ ಮಂಟಪದಲ್ಲೇ ಬೆಂಗ್ಳೂರು ವರನಿಗೆ ಗೆಟ್ ಔಟ್ ಎಂದ ವಧು!

    ಕಲ್ಯಾಣ ಮಂಟಪದಲ್ಲೇ ಬೆಂಗ್ಳೂರು ವರನಿಗೆ ಗೆಟ್ ಔಟ್ ಎಂದ ವಧು!

    ಛತ್ತೀಸ್‍ಗಢ: ಮದುವೆ ಮುನ್ನ ಕಲ್ಯಾಣ ಮಂಟಪದಲ್ಲಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದ ವರನ ಜೊತೆ ವಧು ಮದುವೆ ನಿರಾಕರಿಸಿರುವ ಘಟನೆ ಛತ್ತೀಸ್‍ಗಢದ ಮುರಾದಾಬಾದ್ ಜಿಲ್ಲೆಯ ಪಾರ್ಕ್ ಸ್ಕ್ವೈರ್ ಹೋಟೆಲ್ ನಲ್ಲಿ ನಡೆದಿದೆ.

    ಜ್ಯೋತಿ ಎಂಬವರೇ ಕಲ್ಯಾಣ ಮಂಟಪದಿಂದ ವರನ ಕುಟುಂಬ ಹೊರ ನಡೆಯಲು ಸೂಚಿಸಿದ ವಧುವಾಗಿದ್ದಾರೆ. ಜ್ಯೋತಿಯವರ ಪೋಷಕರು ತಮ್ಮ ಮಗಳ ಮದುವೆ ಮಾಡಲು ವೆಬ್ ಸೈಟ್‍ಯೊಂದರಲ್ಲಿ ವಿವರಗಳನ್ನು ದಾಖಲಿಸಿದ್ದರು. ಇದರಂತೆ ಬೆಂಗಳೂರು ಮೂಲದ ಇಂಟೀರಿಯರ್ ಡಿಸೈನರ್ ಅಶೀಶ್ ಎಂಬವರ ಜೊತೆ ಡಿಸೆಂಬರ್ 14 ರಂದು ಮದುವೆ ನಿರ್ಣಯಿಸಲಾಗಿತ್ತು.

    ಆದರೆ ಮದುವೆ ಮುನ್ನ ದಿನ ಆರತಕ್ಷತೆ ಸಮಾರಂಭದ ವೇಳೆ ಅಶೀಶ್ ತಂದೆ, ಜ್ಯೋತಿ ತಂದೆಯವರ ಜೊತೆ ವರದಕ್ಷಿಣೆಯಾಗಿ ಸೆಡನ್ ಕಾರು ಹಾಗೂ 15 ಲಕ್ಷ ರೂ. ಹಣ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಜ್ಯೋತಿ ಆಶೀಶ್ ನೊಂದಿಗೆ ಮಾತನಾಡಿ ಇಬ್ಬರು ವಿದ್ಯಾವಂತರಾಗಿದ್ದು, ಉತ್ತಮ ಕೆಲಸದಲ್ಲಿ ಇದ್ದೇವೆ, ಮದುವೆ ನಂತರ ಹಣ ಸಂಪಾದನೆ ಮಾಡಲು ಸಾಧ್ಯವಿಲ್ಲವೇ ಎಂದು ತಿಳಿಹೇಳಲು ಪ್ರಯತ್ನಿಸಿದ್ದಾರೆ. ಆದರೆ ಇವರು ಮಾತನ್ನು ಕೇಳದ ಆಶೀಶ್ ಕುಟುಂಬದವರು ವರದಕ್ಷಿಣೆ ನೀಡಿದರೆ ಮಾತ್ರ ಮದುವೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.

    ಈ ವೇಳೆ ಇತರರ ಮುಂದೆ ತನ್ನ ತಂದೆ ಅವಮಾನಪಡುವುದನ್ನು ಸಹಿಸಲಾರದೇ ವಧು ಜ್ಯೋತಿ ಮದುವೆ ನಿರಾಕರಿಸಿ ಆಶೀಶ್ ಹಾಗೂ ಅವರ ಕುಟುಂಬವನ್ನು ಕಲ್ಯಾಣ ಮಂಟಪದಿಂದ ಹೊರ ನಡೆಯುವಂತೆ ಸೂಚಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಜ್ಯೋತಿ, ಅಶೀಶ್ ಹಾಗೂ ಆತನ ತಂದೆ ನರೇಶ್ ಸೇರಿದಂತೆ ಮೂವರ ವಿರುದ್ಧ ಮಝೋಲಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

    ವರನ ತಂದೆ ಮದುವೆ ಸಂದರ್ಭದಲ್ಲಿ ನನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ವರದಕ್ಷಿಣೆಗಾಗಿ ಬೇಡಿಕೆ ಇಟ್ಟರು, ನಾನು ಅವರಿಗೆ ತಿಳಿಹೇಳಲು ಪ್ರಯತ್ನಿಸಿದೆ, ಆದರೆ ನನ್ನ ಮಗಳೇ ಮದುವೆಯನ್ನು ನಿರಾಕರಿಸಿದಳು. ನನ್ನ ಮಗಳ ನಿರ್ಣಯಕ್ಕೆ ನಾನು ಹಾಗೂ ನನ್ನ ಕುಟುಂಬ ಬೆಂಬಲ ಸೂಚಿಸಿದ್ದೇವೆ ಎಂದು ಜ್ಯೋತಿ ಅವರ ತಂದೆ ಕಮಲ್ ಸಿಂಗ್ ಹೇಳಿದ್ದಾರೆ.

    ಜ್ಯೋತಿ ಅವರ ಹೇಳಿಕೆ ಪಡೆದಿರುವ ಪೊಲೀಸರು ವರನ ಕುಟುಂಬದ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ಅಂದಹಾಗೇ ಜ್ಯೋತಿ ಅವರು ಛತ್ತೀಸ್‍ಗಢ ಸರ್ಕಾರಿ ಕಾಲೇಜಿನಲ್ಲಿ ಬಂಗಾರ ಪದಕದೊಂದಿಗೆ ಎಂ. ಟೆಕ್ ಪದವಿಯನ್ನು ಪಡೆದಿದ್ದಾರೆ.

  • ವರದಕ್ಷಿಣೆ ಕೊಡದಿದ್ದಕ್ಕೆ ಪತ್ನಿಗೆ ತಲಾಖ್ ಹೇಳಿ ನಾದಿನಿ ಜೊತೆ ಎಸ್ಕೇಪ್!

    ವರದಕ್ಷಿಣೆ ಕೊಡದಿದ್ದಕ್ಕೆ ಪತ್ನಿಗೆ ತಲಾಖ್ ಹೇಳಿ ನಾದಿನಿ ಜೊತೆ ಎಸ್ಕೇಪ್!

    ಲಕ್ನೋ: ದೇಶಾದ್ಯಂತ ತ್ರಿವಳಿ ತಲಾಖ್ ವಿರುದ್ಧ ಭಾರೀ ಚರ್ಚೆ ನಡೆಯುತ್ತಿದೆ. ಆದರೆ ವ್ಯಕ್ತಿಯೊಬ್ಬ ವರದಕ್ಷಿಣೆ ನೀಡಿಲ್ಲ ಎಂದು ಪತ್ನಿಗೆ ತಲಾಖ್ ಹೇಳಿದ್ದು ಮಾತ್ರವಲ್ಲದೇ ನಾದಿನಿ ಜೊತೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಡಿಯೋಬಾಂಡ್ ಪಠಾಣ್‍ಪುರ ಕಾಲೊನಿಯಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಸಂತ್ರಸ್ತ ಮಹಿಳೆ ನೂರ್‍ಜಹನ್ ಬೇಗಂ (27) ಭಾನುವಾರ ಪೊಲೀಸರಿಗೆ ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?
    ಕಳೆದ ಮೂರು ವರ್ಷಗಳ ಹಿಂದೆ ನೂರ್‍ಜಹನ್ ತಮ್ಮ ಪಕ್ಕದ ನಿವಾಸಿ ಅರ್ಷದ್ ಅಹ್ಮದ್‍ನ ಜೊತೆ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ. ಮದುವೆಯ ಬಳಿಕ ಪತಿ ವರದಕ್ಷಿಣೆ ತರುವಂತೆ ಪ್ರತಿದಿನ ಪೀಡಿಸುತ್ತಿದ್ದನು. ನನ್ನ ತಂದೆಯವರು ಆತನ ಬೇಡಿಕೆಗಳನ್ನು ಈಡೇರಿಸುತ್ತಲೇ ಬಂದಿದ್ದರು. ಆದರೆ ಡಿಸೆಂಬರ್ 7ರಂದು ಅರ್ಷದ್ ನನ್ನ ಜೊತೆ ಕ್ರೂರವಾಗಿ ನಡೆದುಕೊಂಡು ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿದ್ದ. ಈ ವೇಳೆ ನನ್ನ ಅದೃಷ್ಟ ಚೆನ್ನಾಗಿ ಇದ್ದರಿಂದ ನೆರೆಹೊರೆಯವರು ಬಂದು ನನ್ನನ್ನು ಕಾಪಾಡಿದರು. ನಂತರ ಪತಿ ನನಗೆ ತಲಾಖ್ ನೀಡಿ, ನನ್ನ ಆಭರಣಗಳನ್ನು ತೆಗೆದುಕೊಂಡು ನನ್ನ ತಂಗಿಯ ಜೊತೆ ಓಡಿ ಹೋಗಿದ್ದಾನೆ ಎಂದು ನೂರ್‍ಜಹನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಸಂಬಂಧ ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಯೋಬಾಂಡ್ ಪೊಲೀಸರ ಬಳಿ ಮನವಿ ಮಾಡಿದ್ದೆ. ಆದರೆ ಅವರು ಪ್ರಕರಣ ದಾಖಲಿಸಲು ಒಪ್ಪಿಕೊಳ್ಳಲಿಲ್ಲ ಎಂದು ನೂರ್‍ಜಹನ್ ಆರೋಪಿಸಿದ್ದಾರೆ.

    ಮಹಿಳೆ ದೂರು ನೀಡಿದ್ದು, ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಈ ಸಂಬಂಧ ತನಿಖೆ ಆದ ಮೇಲೆ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸಹರಾನ್ಪುರದ ಸೀನಿಯರ್ ಸೂಪರಿಟೆಂಡೆಂಟ್ ಪೊಲೀಸ್ ಬಬ್ಲೂ ಕುಮಾರ್ ಹೇಳಿದ್ದಾರೆ.

     

     

  • ವರದಕ್ಷಿಣೆ ಕಿರುಕುಳಕ್ಕೆ ತಂದೆಯಿಂದಲೇ ಒಂದು ವರ್ಷದ ಮಗು ಬಲಿ

    ವರದಕ್ಷಿಣೆ ಕಿರುಕುಳಕ್ಕೆ ತಂದೆಯಿಂದಲೇ ಒಂದು ವರ್ಷದ ಮಗು ಬಲಿ

    ಬೆಳಗಾವಿ: ವರದಕ್ಷಿಣೆ ಕಿರುಕುಳಕ್ಕೆ ಒಂದು ವರ್ಷದ ಮಗು ತನ್ನ ತಂದೆ ಹಾಗೂ ಅಜ್ಜಿಯಿಂದಲೇ ಕೊಲೆಯಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ನಡೆದಿದೆ.

    ಜೋಯೆಲ್ ನಾಮದೇವ ನಡುವಿನಕೇರಿ (1) ಮೃತ ಮಗು. ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಹಣಕ್ಕಾಗಿ ಮಗುವನ್ನು ಕೊಲೆ ಮಾಡಿದ್ದರೆಂದು ತಾಯಿ ಆರೋಪಿಸಿದ್ದಾರೆ. ಕಳೆದ ಒಂದು ವರ್ಷದಿಂದ ದಾಂಡೇಲಿಯಲ್ಲಿರುವ ತವರು ಮನೆಯಲ್ಲಿ ತಾಯಿ-ಮಗು ವಾಸಿಸುತ್ತಿದ್ದರು. ಮಗುವಿನ ತಾಯಿ 10 ದಿನಗಳ ಹಿಂದೆ ಗಂಡನ ಮನೆಗೆ ಹಸುಗೂಸನ್ನು ಕರೆದುಕೊಂಡು ಹೋಗಿದ್ದರು.

    ಶುಕ್ರವಾರ ನನ್ನನ್ನು ಹೊರಗಡೆ ಕಳಿಸಿ ನನ್ನ ಗಂಡ ನಾಮದೇವ ಹಾಗೂ ಅವರ ತಾಯಿ ಮಗುವಿಗೆ ಕೀಟನಾಶಕ ಸಿಂಪಡಿಸಿ ಕೊಲೆ ಮಾಡಿದ್ದಾರೆ ಎಂದು ಮಗುವಿನ ತಾಯಿ ಆರೋಪಿಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.