Tag: Dowry

  • 4 ತಿಂಗ್ಳ ಹಿಂದೆ ಟೆಕ್ಕಿಯನ್ನ ಮದ್ವೆಯಾಗಿದ್ದ ಗೃಹಿಣಿ ಅನುಮಾನಸ್ಪದ ಸಾವು

    4 ತಿಂಗ್ಳ ಹಿಂದೆ ಟೆಕ್ಕಿಯನ್ನ ಮದ್ವೆಯಾಗಿದ್ದ ಗೃಹಿಣಿ ಅನುಮಾನಸ್ಪದ ಸಾವು

    ರಾಮನಗರ: ಅನುಮಾನಸ್ಪದ ರೀತಿಯಲ್ಲಿ ನವ ವಿವಾಹಿತೆ ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ತಾಲೂಕಿನ ದೇವರ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

    ನವ ವಿವಾಹಿತೆ ಪವಿತ್ರ(25) ಮೃತ ದುರ್ದೈವಿ. ನಾಲ್ಕು ತಿಂಗಳ ಹಿಂದೆ ಚನ್ನಪಟ್ಟಣ ತಾಲೂಕಿನ ದೇವರ ಹೊಸಳ್ಳಿ ಗ್ರಾಮದ ನಿವಾಸಿ ಟೆಕ್ಕಿ ಹರ್ಷಿತ್ ಜೊತೆ ಮೃತ ಪವಿತ್ರಾಳ ಮದುವೆಯಾಗಿತ್ತು. ಮೃತ ಪವಿತ್ರ ಎಂಎ, ಬಿ.ಎಡ್ ಮಾಡಿದ್ದಾರೆ. ಇನ್ನು ಪತಿ ಟೆಕ್ಕಿ ಆಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಶುಕ್ರವಾರ ರಾತ್ರಿ ಪವಿತ್ರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

    ಪತಿ ಹರ್ಷಿತ್, ಅತ್ತೆ ಸರೋಜಮ್ಮ ಮತ್ತು ಮಾವ ರಾಮಕೃಷ್ಣಯ್ಯ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಶುಕ್ರವಾರ ರಾತ್ರಿ ವಿಷದ ಮಾತ್ರೆಯನ್ನು ಬಲವಂತವಾಗಿ ಸೇವಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆಂದು ಮೃತ ಪವಿತ್ರಾಳ ಪೋಷಕರು ಆರೋಪಿಸುತ್ತಿದ್ದಾರೆ.

    ಇನ್ನು ಘಟನೆ ನಡೆದ ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮದ್ವೆಯಾದ 6 ತಿಂಗ್ಳಿಗೇ ಪತ್ನಿಯ ಕೊಲೆಗೈದು ಮಕ್ಕಳ ಕಳ್ಳರು ಕೊಲೆ ಮಾಡಿದ್ರು ಎಂದಿದ್ದ- ಈಗ ಕಂಬಿ ಹಿಂದೆ ಪತಿ

    ಮದ್ವೆಯಾದ 6 ತಿಂಗ್ಳಿಗೇ ಪತ್ನಿಯ ಕೊಲೆಗೈದು ಮಕ್ಕಳ ಕಳ್ಳರು ಕೊಲೆ ಮಾಡಿದ್ರು ಎಂದಿದ್ದ- ಈಗ ಕಂಬಿ ಹಿಂದೆ ಪತಿ

    ಬಳ್ಳಾರಿ: ರಾಜ್ಯದೆಲ್ಲೆಡೆ ಇದೀಗ ಮಕ್ಕಳ ಕಳ್ಳರದ್ದೆ ಸುದ್ದಿ. ಮಕ್ಕಳನ್ನ ಕೊಲೆ ಮಾಡುತ್ತಾರೆ ಅನ್ನೋ ವದಂತಿ ಹಬ್ಬಿದ ಬೆನ್ನಲ್ಲೇ. ಪತ್ನಿಯನ್ನು ಕೊಲೆ ಮಾಡಿದ ಪತಿಯೊಬ್ಬ ಕೊಲೆ ಆರೋಪವನ್ನ ಮಕ್ಕಳ ಕಳ್ಳರ ಮೇಲೆ ಹೊರೆಸಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ.

    ಸುನೀತಾ ಪತಿಯಿಂದ ಕೊಲೆಯಾದ ದುರ್ದೈವಿ. ಅಂಗವಿಕಲೆಯಾಗಿದ್ದ ಸುನೀತಾಳನ್ನು ಮಕ್ಕಳ ಕಳ್ಳರು ಕೊಲೆ ಮಾಡಿದ್ದಾರೆ ಅಂತಾ ಸುನೀತಾಳ ಪತಿ ಪೊಲೀಸ್ ಠಾಣೆಯ ಮೇಟ್ಟಿಲೇರಿದ್ದನು. ಪೊಲೀಸರು ತನಿಖೆಗೆ ಮುಂದಾದ ವೇಳೆ ಪಾಪಿ ಪತಿಯ ಹೀನ ಕೃತ್ಯ ಬೆಳಕಿಗೆ ಬಂದಿದೆ.

    ಘಟನೆ ವಿವರ:
    ಅಂಗವಿಕಲೆಯಾಗಿದ್ದ ಸುನೀತಾಳನ್ನು ಆರು ತಿಂಗಳ ಹಿಂದೆ ಬಳ್ಳಾರಿ ತಾಲೂಕಿನ ಶಿಡಗಿನಮೊಳ ಗ್ರಾಮದ ರಾಮಚಂದ್ರನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆ ವೇಳೆ ವರದಕ್ಷಿಣೆ ನೀಡಿದರೂ ಸುನೀತಾಳ ಮನೆಯವರು ಮದುವೆ ವೇಳೆ ಕೊಟ್ಟಿದ್ದ ಮಾತಿನಂತೆ ಬೈಕ್ ಕೊಡಿಸಿರಲಿಲ್ಲ. ಹೀಗಾಗಿ ನಿತ್ಯ ಕುಡಿದು ಬಂದು ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದನು. ಬಳಿಕ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ತಾನೇ ಪಿಡಿ ಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಪತ್ನಿಯನ್ನು ಮಕ್ಕಳ ಕಳ್ಳರು ಕೊಲೆ ಮಾಡಿ ಹೋಗಿದ್ದಾರೆ ಅಂತಾ ದೂರು ನೀಡಿದ್ದನು.

    ದೂರು ಸ್ವೀಕರಿಸಿದ ಪೊಲೀಸರಿಗೆ ಪತಿಯ ವಿರುದ್ಧವೇ ಸಂಶಯ ವ್ಯಕ್ತವಾಗಿದೆ. ಹೀಗಾಗಿ ಆತನನ್ನು ತನಿಖೆ ನಡೆಸಿದಾಗ ಸುನೀತಾಳನ್ನು ವರದಕ್ಷಿಣೆಗಾಗಿ ಪತಿ ರಾಮಚಂದ್ರನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ವರದಕ್ಷಿಣೆಗಾಗಿ ಕೊಲೆ ಮಾಡಿದ ರಾಮಚಂದ್ರನಿಗೆ ತಕ್ಕ ಶಿಕ್ಷೆಯಾಗಬೇಕು ಅಂತ ಪೋಷಕರು ಆಗ್ರಹಿಸಿದ್ದಾರೆ.

  • ವರದಕ್ಷಿಣೆಗಾಗಿ ಸೊಸೆಗೆ ಬೆಂಕಿ ಹಚ್ಚಿ ಕೊಂದ್ರು!

    ವರದಕ್ಷಿಣೆಗಾಗಿ ಸೊಸೆಗೆ ಬೆಂಕಿ ಹಚ್ಚಿ ಕೊಂದ್ರು!

    ಮುಂಬೈ: ವರದಕ್ಷಿಣೆಗಾಗಿ ಮಹಿಳೆಯನ್ನು ಪತಿ ಕುಟುಂಬಸ್ಥರು ಸಜೀವ ದಹಿಸಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯ ಮದನಪುರ ತಾಲೂಕಿನ ಮುಹಲಾನ್ ಗ್ರಾಮದಲ್ಲಿ ನಡೆದಿದೆ.

    24 ವರ್ಷದ ಚಂಚಲಾ ದೇವಿ ಸಾವನ್ನಪ್ಪಿದ ಮಹಿಳೆ. ಮಂಗಳವಾರ ಮಧ್ಯರಾತ್ರಿ ಚಂಚಲಾರ ಕೊಲೆಯಾಗಿದ್ದು, ಕುಟುಂಬಸ್ಥರು ಮಹಿಳೆಯ ಪೋಷಕರಿಗೂ ಮಾಹಿತಿ ನೀಡದೇ ಬುಧವಾರ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.

    ಚಂಚಲಾ ಸಾವಿನ ಸುದ್ದಿ ತಿಳಿದ ಗ್ರಾಮಕ್ಕೆ ಆಗಮಿಸಿದ ಪೋಷಕರು ಆಕೆಯ ಪತಿ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಚಂಚಲಾ ಮಾವ ಕುಮಾರ್ ಬಲಿ ಸಿಂಗ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

    ಚಂಚಲಾ ಪೋಷಕರು ಮೂಲತಃ ಜಾರ್ಖಂಡ್ ರಾಜ್ಯದ ಹುಸೇನಾಬಾದ್ ನಗರದ ನಿವಾಸಿಗಳು. ಮದುವೆ ಬಳಿಕ ಚಂಚಲಾಗೆ ಪತಿ ನೀರಜ್ ಸಿಂಗ್, ಮಾವ ಬಲಿ ಸಿಂಗ್ ಸೇರಿದಂತೆ ಇತರೆ ಕುಟುಂಬಸ್ಥರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಚಂಚಲಾ ತಂದೆ ಸುನಿಲ್ ಸಿಂಗ್ ಆರೋಪಿಸಿದ್ದಾರೆ.

    ಕೆಲವು ತಿಂಗಳ ಹಿಂದೆ ಗ್ರಾಮದಲ್ಲಿ ಜಮೀನು ಮಾರಿ ಬಂಗಾರದ ಚೈನ್ ತಂದುಕೊಡಲಾಗಿತ್ತು. ಆದ್ರೂ ಕೆಲವು ದಿನಗಳಿಂದ ಚಂಚಲಾಳನ್ನು ಕೊಲೆ ಮಾಡುತ್ತೇವೆ ಅಂತಾ ಧಮ್ಕಿ ಹಾಕುತ್ತಿದ್ದರು. ಸದ್ಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಅಂತಾ ಸಿನಿಲ್ ಸಿಂಗ್ ಹೇಳಿದ್ದಾರೆ.

  • 2 ವರ್ಷಗಳ ಹಿಂದೆ ಮದ್ವೆಯಾಗಿದ್ದ ಗೃಹಿಣಿ ನೇಣಿಗೆ ಶರಣು

    2 ವರ್ಷಗಳ ಹಿಂದೆ ಮದ್ವೆಯಾಗಿದ್ದ ಗೃಹಿಣಿ ನೇಣಿಗೆ ಶರಣು

    ಬೆಂಗಳೂರು: ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿದೆ.

    ರಮ್ಯಾ ಮೃತ ದುರ್ದೈವಿಯಾಗಿದ್ದು, ಈಕೆ ಎರಡು ವರ್ಷದ ಹಿಂದೆ ಮಂಜುನಾಥ್ ಎಂಬಾತನನ್ನು ವರಿಸಿದ್ದಳು. ಮದುವೆ ನಂತರ ಪ್ರತಿದಿನ ವರದಕ್ಷಿಣೆ ತರುವಂತೆ ಮಂಜುನಾಥ್ ಕಿರುಕುಳ ನೀಡುತ್ತಿದ್ದನು. ಇದರಿಂದ ನೊಂದ ರಮ್ಯಾ ನೇಣಿಗೆ ಶರಣಾಗಿದ್ದಾಳೆ ಎಂದು ರಮ್ಯಾ ಪೋಷಕರು ಆರೋಪಿಸುತ್ತಿದ್ದಾರೆ.

    ಈ ಘಟನೆ ಬಳಿಕ ರಮ್ಯಾ ಪತಿ ಮನೆಯವರು ಪರಾರಿಯಾಗಿದ್ದಾರೆ. ಇತ್ತ ಮಗಳ ಸಾವಿನ ನ್ಯಾಯಕ್ಕಾಗಿ ಮನೆ ಮುಂದೆ ಶವವಿಟ್ಟು ಪೋಷಕರು ಪ್ರತಿಭಟನೆ ಮಾಡುತ್ತಿದ್ದಾರೆ.

    ಈ ಪ್ರಕರಣ ಕುರಿತು ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ವರದಕ್ಷಿಣೆ ಕಿರುಕುಳದಿಂದ ಮನನೊಂದು ಮಹಿಳೆ ನೇಣಿಗೆ ಶರಣು

    ವರದಕ್ಷಿಣೆ ಕಿರುಕುಳದಿಂದ ಮನನೊಂದು ಮಹಿಳೆ ನೇಣಿಗೆ ಶರಣು

    ದಾವಣಗೆರೆ: ವರದಕ್ಷಿಣೆ ಕಿರುಕುಳದಿಂದಾಗಿ ಮಹಿಳೆಯೊಬ್ಬಳು ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ಇಲ್ಲಿನ ಭಾಷಾನಗರದ ಆಫ್ರೀನ್ ಬಾನು ಆತ್ಮಹತ್ಯ ಮಾಡಿಕೊಂಡ ಮಹಿಳೆಯಾಗಿದ್ದಾರೆ. ಅವರು ಮೂರು ವರ್ಷಗಳ ಹಿಂದೆ ಇದ್ರೀಸ್ ಜೊತೆ ವಿವಾಹವಾಗಿದ್ದರು. ಸುಮಾರು ದಿನಗಳಿಂದ ಪತಿ ಮನೆಯವರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದ ಆಫ್ರೀನಾ ನೇಣು ಹಾಕಿಕೊಂಡು ಆತ್ಮಹತ್ಯ ಶರಣಾಗಿದ್ದಾರೆ ಎಂದು ಮೃತರ ಪೋಷಕರು ಆರೋಪಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಮದ್ವೆಯಾದ ಹತ್ತೇ ದಿನಕ್ಕೆ ಪತ್ನಿಗೆ ಗುಂಡಿಟ್ಟು, 100ಗೆ ಕಾಲ್ ಮಾಡ್ದ!

    ಮದ್ವೆಯಾದ ಹತ್ತೇ ದಿನಕ್ಕೆ ಪತ್ನಿಗೆ ಗುಂಡಿಟ್ಟು, 100ಗೆ ಕಾಲ್ ಮಾಡ್ದ!

    ಲಕ್ನೋ: ಹತ್ತು ದಿನಗಳ ಹಿಂದೆ ಮದುವೆಯಾಗಿದ್ದ ವ್ಯಕ್ತಿಯೊಬ್ಬ ವರದಕ್ಷಿಣೆಗಾಗಿ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ದಾರುಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಪಿಂಕಿ ಗಂಡನಿಂದಲೇ ಕೊಲೆಯಾದ ಪತ್ನಿ. ಆರೋಪಿ ಪತಿ ರವಿಕಾಂತ್ ಗಿರಿ ಉತ್ತರಪ್ರದೇಶದ ದಕ್ಷಿಣ ಭಾಗದ ಬುಲಂದಷಹಾರ್ ನಗರದ ವ್ಯಾಪಾರಿಯಾಗಿದ್ದಾನೆ. ಮದುವೆ ಬಳಿಕ ಪತ್ನಿಗೆ ತವರು ಮನೆಯಿಂದ 15 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದನು. ಹೀಗಾಗಿ ಆತನೇ ನಮ್ಮ ಮಗಳನ್ನು ಕೊಲೆ ಮಾಡಿದ್ದಾನೆ ಅಂತಾ ಪಿಂಕಿ ಪೋಷಕರು ಆರೋಪಿಸಿದ್ದಾರೆ.

    ಕೊಲೆಗೈದು 100ಗೆ ಕಾಲ್ ಮಾಡಿದ್ದ: ತಡರಾತ್ರಿ ದೇವಸ್ಥಾನದಿಂದ ಹಿಂದಿರುಗುವಾಗ ದರೋಡೆಕೋರರು ನಮ್ಮ ಕಾರ್ ಅಡ್ಡಗಟ್ಟಿದ್ರು. ಆದ್ರೆ ಪತ್ನಿ ದರೋಡೆಕೋರರ ವಿರುದ್ಧ ವಾಗ್ವಾದಕ್ಕೆ ಇಳಿದಿದ್ದಳು. ಇದ್ರಿಂದ ಕೋಪಗೊಂಡ ದರೋಡೆಕೋರರು ಪತ್ನಿಗೆ ಗುಂಡಿಟ್ಟು ಕೊಲೆಗೈದು ಪರಾರಿಯಾದ್ರು. ನಂತರ ನಾನು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ ಅಂತಾ ರವಿಕಾಂತ್ ಕುಟುಂಬಸ್ಥರ ಮುಂದೆ ಹೇಳಿದ್ದನು.

    ಘಟನೆ ಸಂಬಂಧ ಪೊಲೀಸರು ಪತಿಯನ್ನು ವಶಪಡಿಸಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯಲ್ಲಿ ಪತಿ ತಾನೇ ಪತ್ನಿಯನ್ನು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ ಅಂತಾ ಬುಲಂದಷಹಾರ್ ಠಾಣೆಯ ಪೊಲೀಸ್ ಅಧಿಕಾರಿ ಪ್ರವೀಣ್ ರಂಜನ್ ಸಿಂಗ್ ಹೇಳಿದ್ದಾರೆ.

    ಮೃತ ಪಿಂಕಿ ಮೂಲತಃ ದೆಹಲಿಯವರು. ಪಿಂಕಿ ಮದುವೆಗಾಗಿ ಆಕೆಯ ಕುಟುಂಬ 20 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಮದುವೆಯಾದ ಎರಡು ದಿನಗಳ ನಂತರ ಆರೋಪಿ ರವಿಕಾಂತ್ 15 ಲಕ್ಷ ರೂಪಾಯಿ ವರದಕ್ಷಿಣೆ ನೀಡುವಂತೆ ಒತ್ತಾಯಿಸುತ್ತಿದ್ದನು. ಈ ವಿಚಾರಕ್ಕೆ ಆಕೆಯನ್ನು ಕೊಲೆಗೈದಿದ್ದಾನೆ ಎಂಬುದಾಗಿ ವರದಿಯಾಗಿದೆ.

  • ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

    ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

    ಚಾಮರಾಜನಗರ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿರುವ ಘಟನೆ ಕೊಳ್ಳೇಗಾಲ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ನಡೆದಿದೆ.

    ಪವಿತ್ರ (22) ಮೃತ ದುರ್ದೈವಿ. ಮೃತ ಪವಿತ್ರ ಕೊಳ್ಳೇಗಾಲ ತಾಲೂಕಿನ ಬಸಪ್ಪನ ಪಾಳ್ಯದ ನಿವಾಸಿಯಾಗಿದ್ದರು. ನಾಲ್ಕು ವರ್ಷದ ಹಿಂದೆ ಆಶ್ರಯ ಬಡಾವಣೆಯ ಮಹೇಶ್ ಜೊತೆ ಮದುವೆಯಾಗಿದ್ದರು. ಆದರೆ ಈಗ ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

    ಮೂರು ವರ್ಷಗಳಿಂದ ನನ್ನ ಮಗಳಿಗೆ ಪತಿ ಮತ್ತು ಆತನ ಮನೆಯವರು ಐದು ಲಕ್ಷ ರೂ. ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಈಗ ಅವರೇ ಕೊಲೆ ಮಾಡಿ ನಂತರ ನೇಣು ಬಿಗಿದಿದ್ದು, ಆತ್ಮಹತ್ಯೆ ಎಂದು ಹೇಳುತ್ತಿದ್ದಾರೆ ಎಂದು ಪವಿತ್ರ ಪೋಷಕರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೃತ ಪವಿತ್ರ ಅವರ ತಂದೆ ಶಿವಪ್ಪ ಮಹೇಶ್ ಮತ್ತು ಆತನ ತಾಯಿ ಸಿದ್ದಮ್ಮ ವಿರುದ್ಧ ದೂರು ನೀಡಿದ್ದು, ಈ ಕುರಿತು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಪತ್ನಿಯನ್ನ ಮನೆಯಿಂದ ಹೊರಹಾಕಿದ ಪತಿ!

    ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಪತ್ನಿಯನ್ನ ಮನೆಯಿಂದ ಹೊರಹಾಕಿದ ಪತಿ!

    ಬೆಂಗಳೂರು: ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದ ಪತಿ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಕುಮಾರ್ ಎಂಬಾತನೇ ಪತ್ನಿಯನ್ನ ಮನೆಯಿಂದ ಹೊರಹಾಕಿದ ಪತಿರಾಯ. 2016 ಏಪ್ರಿಲ್ ನಲ್ಲಿ ದೇವಿ (ಹೆಸರು ಬದಲಾಯಿಸಲಾಗಿದೆ) ಎಂಬವರ ಜೊತೆ ಕುಮಾರ್ ಆಗಿತ್ತು. ಆದ್ರೆ ಮದುವೆಯಾದ ಕೆಲ ತಿಂಗಳ ನಂತರ ಕುಮಾರ್ ಒಡವೆ, ಸೈಟ್‍ಗಾಗಿ ಬೇಡಿಕೆ ಇಟ್ಟು ಪ್ರತಿನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದನು. ಇತ್ತ ಪತ್ನಿ ಗರ್ಭಿಣಿ ಆಗುತ್ತಿದ್ದಂತೆ ಕುಮಾರ್ ಮತ್ತಷ್ಟು ಕಿರುಕುಳ ನೀಡಲು ಆರಂಭಿಸಿದ್ದನು.

    2017 ಏಪ್ರಿಲ್ ನಲ್ಲಿ ದೇವಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಪತಿ ಕುಮಾರ್ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದಾನೆ. ದೇವಿ ಮತ್ತು ಕುಟುಂಬಸ್ಥರು ಎಷ್ಟೇ ಬೇಡಿಕೊಂಡ್ರು ಕುಮಾರ್ ಪತ್ನಿಯನ್ನು ಮನೆಗೆ ಸೇರಿಸಿಕೊಂಡಿಲ್ಲ.

    ದೇವಿ ಪೋಷಕರು 3 ಲಕ್ಷ ನಗದು ಮತ್ತು 150 ಗ್ರಾಂ ಒಡವೆಯನ್ನು ವರದಕ್ಷಿಣೆಯಾಗಿ ನೀಡಿ ಮಗಳ ಮದುವೆ ಮಾಡಿಕೊಟ್ಟಿದ್ದರು. ಆದ್ರೂ ದುರಾಸೆಯ ಪತಿ ಕುಮಾರ್ ಮತ್ತಷ್ಟು ಒಡವೆ ಮತ್ತು ಸೈಟ್ ಗಾಗಿ ಬೇಡಿಕೆ ಇಟ್ಟು ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಅಂತಾ ದೇವಿ ಆರೋಪಿಸುತ್ತಿದ್ದಾರೆ.

    ಪತಿಯ ವರ್ತನೆಯಿಂದ ಬೇಸತ್ತ ದೇವಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಮದ್ವೆಯಾದ ಮೂರೇ ದಿನಕ್ಕೆ ಸ್ನೇಹಿತರ ಜೊತೆ ಸೇರಿ ಪತ್ನಿಯ ಮೇಲೆ ಗ್ಯಾಂಗ್‍ರೇಪ್

    ಮದ್ವೆಯಾದ ಮೂರೇ ದಿನಕ್ಕೆ ಸ್ನೇಹಿತರ ಜೊತೆ ಸೇರಿ ಪತ್ನಿಯ ಮೇಲೆ ಗ್ಯಾಂಗ್‍ರೇಪ್

    ಗುವಾಹಟಿ: ಪಾಪಿ ಪತಿಯೊಬ್ಬ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಈ ಘಟನೆ ದಕ್ಷಿಣ ಅಸ್ಸಾಂನ ಕರೀಮ್ಗಂಜ್ ಜಿಲ್ಲೆಯಲ್ಲಿ ನಡೆದಿದ್ದು, ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಆರೋಪಿ ಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ನನ್ನ ಮದುವೆಯಾದ ನಂತರ ಪತಿ ವರದಕ್ಷಿಣೆಗಾಗಿ ಚಿನ್ನವನ್ನು ತರುವಂತೆ ಒತ್ತಾಯಿಸಿದ್ದಾನೆ. ಆದರೆ ಆತನ ಬೇಡಿಕೆಗೆ ನಾನು ಒಪ್ಪದಿದ್ದಕ್ಕೆ ಆತ ಸ್ನೇಹಿತರ ಜೊತೆ ಸೇರಿ ಏಪ್ರಿಲ್ 17 ರಂದು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಅಂತಾ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸಂತ್ರಸ್ತೆ ದೂರು ನೀಡಿದ ಬಳಿಕ ಆಕೆಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಿದ್ದು, ವರದಿಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಆದ್ದರಿಂದ ಮೂವರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಸದ್ಯಕ್ಕೆ ಆರೋಪಿ ಪತಿಯನ್ನು ಬಂಧಿಸಿಲಾಗಿದೆ. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

     

  • ಪತ್ನಿಯ ಗುಪ್ತಾಂಗಕ್ಕೆ ಒದ್ದು, ಚಾಕು ಇರಿದ ಪತಿ

    ಪತ್ನಿಯ ಗುಪ್ತಾಂಗಕ್ಕೆ ಒದ್ದು, ಚಾಕು ಇರಿದ ಪತಿ

    ದಾವಣಗೆರೆ: ಪತಿ ಹಾಗೂ ಅತ್ತೆ ಸೇರಿ ಸೊಸೆಗೆ ಚಾಕು ಇರಿದಿರುವ ಘಟನೆ ಜಿಲ್ಲೆಯ ಶಾಮನೂರು ಗ್ರಾಮದಲ್ಲಿ ನಡೆದಿದೆ.

    ನಿರ್ಮಲ ಚಾಕು ಇರಿತಕ್ಕೆ ಒಳಗಾದ ಮಹಿಳೆ. ಈ ಘಟನೆ ಎರಡು ದಿನದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಪತಿ ಮಧು ಮತ್ತು ಅತ್ತೆ ನೀಲಮ್ಮ ಮದುವೆಯ ಬಳಿಕ ನಿರ್ಮಲರಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು.

    ಪತಿ ಮತ್ತು ಅತ್ತೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸಿದ್ದಾರೆ. ನಿರ್ಮಲ ಇದ್ದಕ್ಕೆ ನಿರಾಕರಿಸಿದ್ದಕೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪತ್ನಿ ಮನೆಬಿಟ್ಟು ಹೋಗಬೇಕು. ಆಗ ತಾನು ಇನ್ನೊಂದು ಮದುವೆಯಾಗಬಹುದು ಎಂಬ ಉದ್ದೇಶದಿಂದ ಈ ರೀತಿ ಮನೆಯಲ್ಲಿ ಮಲಗಿದ್ದ ವೇಳೆ ಗುಂಪ್ತಾಂಗಕ್ಕೆ ಕಾಲಿನಿಂದ ಒದ್ದು, ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ ಅಂತಾ ನಿರ್ಮಲ ಸಂಬಂಧಿಕರು ಆರೋಪಿಸುತ್ತಿದ್ದಾರೆ.

    ಈ ಬಗ್ಗೆ ಮಹಿಳಾ ಠಾಣೆಗೆ ದೂರು ನೀಡಿದರು ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಇತ್ತ ಹಲ್ಲೆಗೊಳಗಾದ ಮಹಿಳೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.