Tag: Dowry

  • ವರದಕ್ಷಿಣೆಗಾಗಿ ಪತ್ನಿ, ಮಗುವನ್ನು ಬಿಟ್ಟು ಇನ್ನೊಂದು ಮದ್ವೆ ಆದ..!

    ವರದಕ್ಷಿಣೆಗಾಗಿ ಪತ್ನಿ, ಮಗುವನ್ನು ಬಿಟ್ಟು ಇನ್ನೊಂದು ಮದ್ವೆ ಆದ..!

    ಕೊಪ್ಪಳ: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತಿದೆ. ಆದರೆ ಇಲ್ಲೊಬ್ಬ ಪತಿ ಮಹಾಶಯ ವರದಕ್ಷಿಣೆ ದಾಹಕ್ಕೆ ಪತ್ನಿ ಮತ್ತು ಮಗುವನ್ನು ಬಿಟ್ಟು ಇನ್ನೊಂದು ಮದುವೆಯಾಗಿ ಮೊದಲ ಹೆಂಡತಿಗೆ ಮೋಸ ಮಾಡಿದ ಪ್ರಕರಣವೊಂದು ಕೊಪ್ಪಳದಲ್ಲಿ ನಡೆದಿದೆ.

    2017ರಲ್ಲಿ ಗಂಗಾವತಿಯ ಮೆಹಬೂಬ್ ನಗರ ನಿವಾಸಿ ಖಾಜಾಪಾಷಾ ಜೊತೆ ವಹೀದಾಬಾನು ಮದುವೆಯಾಗಿತ್ತು. ಮದುವೆ ಮಾರನೇ ದಿನವೇ ಕಿರುಕುಳ ಆರಂಭವಾಗಿತ್ತು. ಮದುವೆ ಸಮಯದಲ್ಲಿ ವರದಕ್ಷಿಣೆ ನೀಡಿಲ್ಲ ಹಣ ಕೊಡಬೇಕು ಎಂದು ಗಂಡ ಪೀಡಿಸುತ್ತಿದ್ದ. 7 ತಿಂಗಳು ಗಂಡನ ಮನೆಯಲ್ಲಿ ಕಳೆದು ಗರ್ಭಿಣಿಯಾದ ಬಳಿಕ ತವರು ಮನೆಗೆ ಕಳಿಸಿದ್ದಾರೆ. ಮನೆಗೆ ಬರಬೇಕಾದರೆ 1 ಲಕ್ಷ ಹಣ ತರಬೇಕೆಂದು ಪತಿ ಷರತ್ತು ಹಾಕಿ ಬಿಟ್ಟು ಹೋಗಿದ್ದ. ಮಗುವಾದ ಬಳಿಕ 1 ವರ್ಷ ಕಳೆದರೂ ಪತಿ ಮಗು ನೋಡಲು ಬಂದಿಲ್ಲ. ಬದಲಿಗೆ ಇನ್ನೊಂದು ಮದುವೆ ಮಾಡಿಕೊಂಡಿದ್ದಾನೆ.

    ವಹೀದಾಬಾನುಗೆ ತಂದೆ ಇಲ್ಲ. ತಂದೆ ಸ್ಥಾನದಲ್ಲಿ ಈಕೆಯ ಅಣ್ಣ, ತಂಗಿ ಖುಷಿಗಾಗಿ ಮದುವೆ ಸಮಯದಲ್ಲಿ ವರೋಪಚಾರವನ್ನೆಲ್ಲ ನೀಡಿದ್ದಾರೆ. ಮದುವೆ ಸಮಯದಲ್ಲಿ ಒಂದೂವರೆ ಲಕ್ಷ ನಗದು, 4 ತೊಲ ಬಂಗಾರ ಕೊಟ್ಟು ಖಾಜಾ ಪಾಷಾನ್ನೊಂದಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಇಷ್ಟೆಲ್ಲಾ ನೀಡಿದರೂ ಖಾಜಾ ಪಾಕ್ಷಾಗೆ ಹಣದ ಆಸೆಯಿಂದ ತನ್ನ ಪತ್ನಿಯನ್ನು ಇನ್ನೂ ಹಣ ತರುವಂತೆ ನಿತ್ಯ ಪೀಡಿಸುತ್ತಿದ್ದಾನೆ.

    ನಾವೆಲ್ಲ ಕಡು ಬಡವರಾಗಿದ್ದರೂ ಮದುವೆಗೆ ಯಾವುದೇ ಕುಂದು ಕೊರತೆ ಬರದಂತೆ ಮಾಡಿದರೂ ಸಹ ಖಾಜಾಪಾಷಾ ಕುಟುಂಬಸ್ಥರು ನಮಗೆ ಮೋಸ ಮಾಡಿದ್ದಾರೆ. ನಮಗೆ ಯಾವುದೇ ಮಾಹಿತಿ ನೀಡದೇ 2ನೇ ಮದುವೆ ಮಾಡಿಕೊಂಡು ನನ್ನ ತಂಗಿಗೆ ಮೋಸ ಮಾಡಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ವಹೀದಾಬಾನು ಅವರ ಅಣ್ಣ ನಾಸೀರ್ ಹುಸೇನ್ ಬೇಡಿಕೊಂಡಿದ್ದಾರೆ.

    ಮದುವೆಯಾಗಿ ಸುಖಿ ಸಂಸಾರ ಜೀವನ ನಡೆಸಬೇಕಿದ್ದ ಯುವತಿ ಕೇವಲ 7 ತಿಂಗಳಲ್ಲೇ ಸಂಸಾರ ಜೀವನದಲ್ಲಿ ನರಕಯಾತನೆ ಅನುಭವಿಸಿದ್ದಾಳೆ. ತನ್ನ ಹೆಂಡತಿ, ಮಗುವನ್ನು ಬೀದಿಗೆ ತಳ್ಳಿದ ಗಂಡ ರಾಜಾರೋಷವಾಗಿ ಮೆರೆದಾಡುತ್ತಿದ್ದಾನೆ. ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಪತ್ನಿ ವಹೀದಾಬಾನು ಬೇಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮದ್ವೆಯಾದ 7 ತಿಂಗಳಿಗೆ ನೇಣು ಬಿಗಿದುಕೊಂಡ ಗರ್ಭಿಣಿ

    ಮದ್ವೆಯಾದ 7 ತಿಂಗಳಿಗೆ ನೇಣು ಬಿಗಿದುಕೊಂಡ ಗರ್ಭಿಣಿ

    ಹೈದರಾಬಾದ್: ವರದಕ್ಷಿಣೆ ಕಿರುಕುಳದಿಂದ ಗರ್ಭಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ನಡೆದಿದೆ.

    ಧನಲಕ್ಷ್ಮಿ (22) ಆತ್ಮಹತ್ಯೆಗೆ ಶರಣಾದ ಗರ್ಭಿಣಿ. ಶ್ರೀಕಾಕುಲಂ ಜಿಲ್ಲೆಯ ಪತಿವಾಡಪಾಲೆಮ್ ನಲ್ಲಿ ಗುರುವಾರ ಈ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳದಿಂದ ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿ ಮಗಳ ಪತಿಯ ವಿರುದ್ಧ ದೂರು ನೀಡಿದ್ದಾರೆ.

    ವಿಜಯನಗರ ಜಿಲ್ಲೆಯ ಮೃತ ಧನಲಕ್ಷ್ಮಿಗೆ ಉಪ್ಪಾಲಾ ಗುರುಮೂರ್ತಿ ಜೊತೆ ಏಪ್ರಿಲ್ 18 ರಂದು ಮದುವೆಯಾಗಿತ್ತು. ಆದರೆ ಮದುವೆಯಾದ ಕೆಲವು ತಿಂಗಳಲ್ಲೇ ಎರಡೂ ಕುಟುಂಬದವರಿಗೆ ವರದಕ್ಷಿಣೆ ಕುರಿತು ಜಗಳವಾಡಿದ್ದರು. ಮೃತ ಧನಲಕ್ಷ್ಮಿ ಗರ್ಭಿಣಿಯಾಗಿದ್ದರಿಂದ ದಸರಾ ಹಬ್ಬದ ಸಮಯದಲ್ಲಿ ತನ್ನ ಪೋಷಕರ ಮನೆಗೆ ಹೋಗಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ.

    ಅಕ್ಟೋಬರ್ 30 ರಂದು ಗುರುಮೂರ್ತಿಯ ಅಜ್ಜಿ ನಿಧನರಾಗಿದ್ದರು. ಅಂದು ಧನಲಕ್ಷ್ಮಿ ಪತಿಯ ಮನೆಗೆ ವಾಪಸ್ ಬಂದಿದ್ದಾರೆ. ಆದರೆ ಆ ದಿನವೇ ಸುಮಾರು 6 ಗಂಟೆಗೆ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾವಿನ ಸುದ್ದಿ ತಿಳಿದ ಪೋಷಕರು ಸ್ಥಳಕ್ಕೆ ದೌಡಾಯಿಸಿದ್ದು, ಬಳಿಕ ಮೃತಳ ತಂದೆ ಮುತ್ಯಾಲ ವೆಂಕಟರಮಣ ಅವರು ಜೆ.ಆರ್.ಪುರಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನನ್ನ ಮಗಳಿಗೆ ಪ್ರತಿದಿನ ವರದಕ್ಷಿಣೆ ಬೇಕೆಂದು ಗುರುಮೂರ್ತಿ ಕಿರುಕುಳ ನೀಡುತ್ತಿದ್ದನು. ಆದ್ದರಿಂದ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ಬಳಿಕ ಮೃತಳ ತಂದೆ ನೀಡಿದ ದೂರಿನ ಮೆರೆಗೆ ಪೊಲೀಸರು ಮೃತ ಧನಲಕ್ಷ್ಮಿ ಪತಿ ಗುರುಮೂರ್ತಿ ಸೇರಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದ ಮೂವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.

    ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೃತದೇಹವನ್ನು ಆರ್‍ಐಎಮ್‍ಎಸ್ ಆಸ್ಪತ್ರೆಗೆ ರವಾನಿಸಿದ್ದು, ಪೊಲೀಸರು ಈ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ

    ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ

    ಬೆಳಗಾವಿ: ವರದಕ್ಷಿಣೆಗಾಗಿ ಪತ್ನಿ, ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ಹತ್ಯೆಗೈದಿದ್ದ ಆರೋಪಿ ಪತಿಗೆ ಗಲ್ಲು ಶಿಕ್ಷೆ ವಿಧಿಸಿ 6ನೇ ಅಪರ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

    ಸವದತ್ತಿ ತಾಲೂಕಿನ ಅಚ್ಚಮನಟ್ಟಿ ಗ್ರಾಮದ ರವಿ ಪ್ರಜಾರ ಗಲ್ಲು ಶಿಕ್ಷೆಗೆ ಗುರಿಯಾದ ಆರೋಪಿ. ಪತ್ನಿ ಕಮಲವ್ವಾ, ಮಕ್ಕಳಾದ ಗೀತಾ (4) ಹಾಗೂ ಆಕಾಶ್ (2) ಕೊಲೆಯಾದ ದುರ್ದೈವಿಗಳು. ಕೃತ್ಯಕ್ಕೆ ಸಹಾಯ ನೀಡಿದ್ದ ರವಿ ತಾಯಿ ಹಾಗೂ ಸಹೋದರನಿಗೆ 7 ವರ್ಷ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

    ಏನಿದು ಪ್ರಕರಣ?:
    ಮದುವೆ ವೇಳೆ ಬಾಕಿ ಉಳಿದಿದ್ದ 10 ಸಾವಿರ ರೂ. ವರದಕ್ಷಿಣೆ ತರುವಂತೆ ಪತ್ನಿ ಕಮಲವ್ವಾ ಅವರಿಗೆ ರವಿ ಒತ್ತಾಯಿಸುತ್ತಿದ್ದ. ಈ ಸಂಬಂಧ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಕೊಲೆಗೆ ಸಂಚು ರೂಪಿಸಿದ್ದ ರವಿ, ಜುಲೈ 8, 2012 ರಂದು ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಇಟ್ಟಿದ್ದ. ಗಂಭೀರ ಗಾಯಗೊಂಡಿದ್ದ ಪತ್ನಿ ಹಾಗೂ ಮಕ್ಕಳು ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರದಕ್ಷಿಣೆಯಾಗಿ ಕೊಟ್ಟಿದ್ದ ಬೈಕ್ ಹಿಂಪಡೆದ ಮಾವ-ರಸ್ತೆಯಲ್ಲಿ ಉರುಳಾಡಿದ ಅಳಿಯ

    ವರದಕ್ಷಿಣೆಯಾಗಿ ಕೊಟ್ಟಿದ್ದ ಬೈಕ್ ಹಿಂಪಡೆದ ಮಾವ-ರಸ್ತೆಯಲ್ಲಿ ಉರುಳಾಡಿದ ಅಳಿಯ

    ಲಕ್ನೋ: ಮಾವ ಮದುವೆಯಲ್ಲಿ ನೀಡಿದ್ದ ಬೈಕ್ ಹಿಂಪಡೆದಿದ್ದಕ್ಕೆ ಅಳಿಯ ರಸ್ತೆಯಲ್ಲಿ ಉರುಳಾಡಿದ ಘಟನೆ ಉತ್ತರ ಪ್ರದೇಶದ ಮಹರಾಜಗಂಜ್ ಜಿಲ್ಲೆಯಲ್ಲಿ ನಡೆದಿದೆ.

    ಸಿಂದುರಿಯಾ ಚೌಕ ವ್ಯಾಪ್ತಿಯ ಅಂತರ್ಗತ ಗ್ರಾಮದ ಸಫರ್ ಹುಸೇನ್ ರಸ್ತೆಯಲ್ಲಿ ಉರುಳಾಡಿದ ಅಳಿಯ. ನಾಲ್ಕು ತಿಂಗಳ ಹಿಂದೆ ಹುಸೇನ್ ಮದುವೆ ಆಗಿತ್ತು. ಈ ವೇಳೆ ಮದುವೆಯಲ್ಲಿ ಆತನಿಗೆ ವರದಕ್ಷಿಣೆ ಜೊತೆ ಬೈಕ್ ಸಹ ನೀಡಿದ್ದರು. ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡಿಕೊಂಡಿದ್ದ ಹುಸೇನ್ ಮದುವೆಯ ನಂತರ ಮನೆಯಲ್ಲಿಯೇ ಉಳಿದುಕೊಂಡಿದ್ದನು.

    ಮದುವೆಯಲ್ಲಿ ನೀಡಿದ್ದ ವರದಕ್ಷಿಣೆಯನ್ನು ಬಳಸಿಕೊಂಡು ಜೀವನ ಸಾಗಿಸುತ್ತಿದ್ದನು. ಕೊನೆಗೆ ಮದುವೆಯಲ್ಲಿ ನೀಡಿದ್ದ ಬೈಕ್ ಸಹ ಮಾರಲು ಯತ್ನಿಸಿದ್ದಾನೆ. ವಿಷಯ ತಿಳಿದು ಮಾವ ಬೈಕ್ ವಾಪಾಸ್ಸು ತೆಗೆದುಕೊಂಡು ಬಂದಿದ್ದಾರೆ. ಇದರಿಂದ ಕೋಪಗೊಂಡ ಹುಸೇನ್ ಮಾವನ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಕೊನೆಗೆ ಮಾವ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.

    ಅಳಿಯನನ್ನು ವಶಪಡಿಸಿಕೊಂಡು ಪೊಲೀಸರು ಕೆಲ ಸಮಯದ ಬಳಿಕ ಬುದ್ದಿ ಹೇಳಿ ಕಳುಹಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಸಿಂದುರಿಯಾ-ನಿಚಲೌಲ ಮಾರ್ಗದಲ್ಲಿ ಮಲಗಿಕೊಂಡು ಉರುಳಾಡಿದ್ದಾನೆ. ಹುಸೇನನ ಅವಾಂತರ ನೋಡಿ ಜನರು ಸೇರಿದ್ದರಿಂದ ಟ್ರಾಫಿಕ್ ಸಮಸ್ಯೆಯುಂಟಾಗಿತ್ತು. ಕೊನೆಗೆ ಪೊಲೀಸರು ಬಂದು ಮತ್ತೊಮ್ಮೆ ಹುಸೇನನ್ನು ವಶಕ್ಕೆ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೈಕ್ ಚೆನ್ನಾಗಿಲ್ಲ, ಮದ್ವೆ ಆಗಲ್ಲವೆಂದ ವರ ಸೇರಿ ನಾಲ್ವರ ಅರ್ಧ ತಲೆಯೇ ಬೋಳಿಸಿದ್ರು..!

    ಬೈಕ್ ಚೆನ್ನಾಗಿಲ್ಲ, ಮದ್ವೆ ಆಗಲ್ಲವೆಂದ ವರ ಸೇರಿ ನಾಲ್ವರ ಅರ್ಧ ತಲೆಯೇ ಬೋಳಿಸಿದ್ರು..!

    ಲಕ್ನೋ: ವರದಕ್ಷಿಣೆಯಾಗಿ ನೀಡಿದ್ದ ಬೈಕ್ ಚೆನ್ನಾಗಿಲ್ಲ. ಬೇರೆ ಬೈಕ್ ಬೇಕೆಂದು ಹಠ ಹಿಡಿದು ಮದುವೆ ಮಂಟಪದಿಂದ ಹೊರ ಬಂದ ಅಹಂಕಾರಿ ವರ ಮತ್ತು ಆತನ ಸಂಬಂಧಿಕರ ತಲೆ ಬೋಳಿಸಿದ ಘಟನೆ ಉತ್ತರ ಪ್ರದೇಶದ ಖುರ್‍ಮನಗರದಲ್ಲಿ ನಡೆದಿದೆ.

    ಮದುವೆ ದಿನ ವರದಕ್ಷಿಣೆ ಬೇಕೆಂದು ಹಠ ಹಿಡಿದಿದ್ದ ವರನ ಸಂಬಂಧಿಕರನ್ನು ವಧುವಿನ ಪೋಷಕರು ಕೂಡಿ ಹಾಕಿ ಎಲ್ಲರ ಬೆವರು ಇಳಿಸಿದ್ದಾರೆ. ಬಂಧಿಯಾಗಿದ್ದವರಲ್ಲಿ ಓರ್ವ, ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಎಲ್ಲರೂ ವಧುವಿನ ಪೋಷಕರ ಕೋಪದಿಂದ ಬದುಕುಳಿದಿದ್ದಾರೆ.

    ಏನಿದು ಘಟನೆ?:
    ಖುರ್‍ಮನಗರದ ಜಿಯಾಉಲ್ ಪಾರ್ಕ್ ಕ್ಷೇತ್ರದ ವಧುವಿನೊಂದಿಗೆ ಧೋಕಲಾಪುರದ ಅಬ್ದುಲ್ ಕಲಾಮ್‍ ಎಂಬ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ವಧುವಿನ ತಂದೆ ಖುರ್‍ಮನಗರದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಸಣ್ಣದಾದ ಮನೆಯಲ್ಲಿ ವಾಸವಾಗಿದ್ದರು. ಮೂರು ತಿಂಗಳ ಹಿಂದೆಯೇ ಗುರು-ಹಿರಿಯರ ಸಮ್ಮುಖದಲ್ಲಿ ಮಗಳ ಮದುವೆಯನ್ನು ನಿಶ್ಚಯಿಸಲಾಗಿತ್ತು. ಒಂದು ತಿಂಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಸಹ ನಡೆದಿತ್ತು.

    ಗುರು-ಹಿರಿಯರ ಸಮ್ಮುಖದಲ್ಲಿ ವಧುದಕ್ಷಿಣೆಯಾಗಿ 25 ಸಾವಿರ ರೂ. ನಗದು ನೀಡಬೇಕೆಂದು ಮಾತಾಗಿತ್ತು. ಇತ್ತ ವರನಿಗೆ ಬೈಕ್, 40 ಗ್ರಾಂ ಬಂಗಾರ ಮತ್ತು ನಗದು ನೀಡಬೇಕೆಂದು ಒಪ್ಪಂದವಾಗಿತ್ತು. ಒಪ್ಪಂದದಂತೆ ಭಾನುವಾರ ಮದುವೆಯೂ ನಡೆಯಬೇಕಿತ್ತು. ಶನಿವಾರ ವಧುವಿನ ಮನೆಗೆ ಬಂದ ವರ ಹಾಗು ಆತನ ಕುಟುಂಬಸ್ಥರು ಮತ್ತಷ್ಟು ಬಂಗಾರ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ನೀಡದೇ ಇದ್ದಲ್ಲಿ, ತಾವು ಹಿಂದಿರುಗುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ವಧು ದಕ್ಷಿಣೆಯನ್ನು ನೀಡಲ್ಲ ಎಂದು ಮೊಂಡುತನ ಪ್ರದರ್ಶನ ಮಾಡಿದ್ದಾರೆ.

    ಮದುವೆ ಮನೆಯಲ್ಲಿ ಇಷ್ಟೆಲ್ಲ ಗಲಾಟೆ ನಡೆಯುತ್ತಿದ್ದರೂ ವರನ ಗೆಳೆಯರು ಕುಡಿದು ಬಂದು ಪುಂಡಾಟ ಮಾಡಿದ್ದಾರೆ. ವರ ಮತ್ತು ಆತನ ಸಹೋದರ ನೂರ್-ಉಲ್-ಸಲಾಮ್ ಅಪಾಚಿ ಅಥವಾ ಪಲ್ಸರ್ ಬೈಕ್ ನೀಡಬೇಕೆಂದು ಕುಡಿದ ನಶೆಯಲ್ಲಿ ಗಲಾಟೆ ಮಾಡಿದ್ದಾರೆ. ವಧುವಿನ ಪೋಷಕರು ಒಂದು ಹಂತದವರೆಗೆ ಎಲ್ಲವನ್ನು ಕೇಳಿದ್ದಾರೆ.

    ಯಾವಾಗ ವರನ ಕುಟುಂಬಸ್ಥರು ತಮ್ಮ ಮೊಂಡುತನವನ್ನು ಬಿಡದೇ ಇದ್ದಾಗ ಎಲ್ಲರನ್ನು ಕೂಡಿಹಾಕಿದ್ದಾರೆ. ಈ ವೇಳೆ ವರ ಅಬ್ದುಲ್ ಕಲಾಮ್, ಸೋದರ ನೂರ್-ಉಲ್-ಸಲಾಮ್, ಸಂಬಂಧಿಗಳಾದ ಜಾವೇದ್ ಮತ್ತು ಕಬೀರ್ ಎಂಬವರ ಅರ್ಧ ತಲೆಯನ್ನು ಬೋಳಿಸಿದ್ದಾರೆ. ಇದರಿಂದ ಗಾಬರಿಗೊಂಡ ವರನ ಕಡೆಯವರು ಎದ್ನೊ-ಬಿದ್ನೋ ಎಂದು ಓಡಿ ಹೋಗಿದ್ದಾರೆ.

    ಜ್ಯೂಸ್ ಮಾರುತ್ತಿದ್ದ ವರ:
    ಇಷ್ಟೆಲ್ಲ ವರದಕ್ಷಿಣೆ ಕೇಳಿದ ವರ ಮುಂಬೈನ ರಸ್ತೆ ಬದಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಮದುವೆ ಹಿಂದಿನ ದಿನ ಆಪ್ತ ಕುಟುಂಬಸ್ಥರು ಮಾತ್ರವೇ ಬರುತ್ತೇವೆ ಅಂತಾ ಹೇಳಿದ್ದವರು, 250 ಜನರು ಕರೆದುಕೊಂಡು ಬಂದಿದ್ದರು. ಆದ್ರೂ ಯಾರು ಯಾಕೆ ಅಂತಾ ಕೇಳಿರಲಿಲ್ಲ. ನಾವು ಖರೀದಿ ಮಾಡಿದ್ದ 85 ಸಾವಿರ ರೂ. ಬೈಕ್ ಬೇಡ ಅಂತ ತಗಾದೆ ತೆಗೆದರು. ಮದುವೆ ನಿಂತಿದ್ದೇ ಒಳ್ಳೆಯದಾಯಿತು. ಮದುವೆ ಮುನ್ನವೇ ವರನ ಅಸಲಿ ಮುಖ ಎಲ್ಲರಿಗೂ ಗೊತ್ತಾಯಿತು ಎಂದು ವಧುವಿನ ಪೋಷಕರು ಹೇಳಿದ್ದಾರೆ.

    ಸ್ಥಳಕ್ಕಾಗಮಿಸಿದ ಪೊಲೀಸರು ಬಂಧನದಲ್ಲಿದ್ದ ಎಲ್ಲರನ್ನೂ ರಕ್ಷಿಸಿದ್ದಾರೆ. ಆದ್ರೆ ಯಾರು ದೂರು ದಾಖಲಿಸಲು ಮುಂದಾಗಲಿಲ್ಲ. ಸ್ಥಳದಲ್ಲಿಯೇ ವರ ನನಗೆ ಈ ಮದುವೆ ಬೇಡ ಎಂದು ಪೊಲೀಸರ ಸಮ್ಮುಖದಲ್ಲಿ ತಿಳಿಸಿ, ಅರ್ಧ ತಲೆ ಹೊತ್ತು ಹಿಂದಿರುಗಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಪತಿ, ಸಂಬಂಧಿಕರಿಂದ್ಲೇ ಮಹಿಳೆಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ

    ಪತಿ, ಸಂಬಂಧಿಕರಿಂದ್ಲೇ ಮಹಿಳೆಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ

    – ಸಾವು ಬದುಕಿನಲ್ಲಿ ಗೃಹಿಣಿ

    ಕೊಪ್ಪಳ: ವರದಕ್ಷಿಣೆಗಾಗಿ ಗಂಡ ಹಾಗೂ ಸಂಬಂಧಿಕರು ಮಹಿಳೆಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮುರುಡಿ ಗ್ರಾಮದಲ್ಲಿ ನಡೆದಿದೆ.

    ಮಂಜುಳಾ ಅವರಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಲಾಗಿದೆ. ಕಳೆದ ನಾಲ್ಕು ವರ್ಷದ ಹಿಂದೆ ಮಂಜುಳ ಅವರು ಚನ್ನಪ್ಪ ಜೊತೆ ಮದುವೆಯಾಗಿದ್ದರು. ಸದ್ಯ ಈಗ ಮಂಜುಳಾ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

    ಪತಿ ಚನ್ನಪ್ಪ, ಬಸಮ್ಮ, ನಾಗಮ್ಮ ಹಾಗೂ ಚಂದಾಲಿಂಗಪ್ಪ ಎಂಬವರ ಮೇಲೆ ಮಂಜುಳಾ ಪೋಷಕರು ಕೊಲೆ ಆರೋಪ ಮಾಡುತ್ತಿದ್ದಾರೆ. ಸಂಬಂಧಿ ಚಂದಾಲಿಂಗಪ್ಪ ಕೊಪ್ಪಳ ನಗರ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿದ್ದಾನೆಂದು ತಿಳಿದುಬಂದಿದೆ.

    ಈ ಬಗ್ಗೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತಿಗೆ Good Night ಮೆಸೇಜ್ ಮಾಡಿ ನೇಣಿಗೆ ಶರಣಾದ ಗೃಹಿಣಿ

    ಪತಿಗೆ Good Night ಮೆಸೇಜ್ ಮಾಡಿ ನೇಣಿಗೆ ಶರಣಾದ ಗೃಹಿಣಿ

    ಕಲಬುರಗಿ: ನೇಣು ಬಿಗಿದುಕೊಂಡು ಅನುಮಾನಸ್ಪದವಾಗಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಸಂಧ್ಯಾರಾಣಿ ಮೃತ ಗೃಹಿಣಿ. ಈಕೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡೊಣಗಾಂವ್ ಗ್ರಾಮದವರಾಗಿದ್ದು, 2017 ರಲ್ಲಿ ಕಲಬುರಗಿ ಜಿಲ್ಲೆಯ ಕಮಲಾಪುರ ಪಟ್ಟಣದ ವಿನಯ್ ಜೊತೆ ಮದುವೆಯಾಗಿತ್ತು. ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಇಪ್ಪತ್ತು ತೊಲ ಚಿನ್ನ, ಲಕ್ಷಾಂತರ ರೂಪಾಯಿ ಹಣ ನೀಡಿ ಅದ್ಧೂರಿಯಾಗಿ ವಿವಾಹವನ್ನ ಮಾಡಿಕೊಡಲಾಗಿತ್ತು.

    ಬೆಂಗಳೂರಿನ ಕಂಪನಿಯೊಂದರಲ್ಲಿ ಒಳ್ಳೆಯ ಕೆಲಸವಿದೆ ಅಂತ ನಂಬಿಸಿ ಸಂಧ್ಯಾರಾಣಿಯನ್ನ ವರಿಸಿದ್ದನು. ಆದರೆ ಮದುವೆಯ ನಂತರ ಕೆಲವು ದಿನಗಳ ಪತ್ನಿಯೊಂದಿಗೆ ಅನ್ಯೋನ್ಯವಾಗಿದ್ದ ಪತಿ ವಿನಯ್, ಕೆಲವು ದಿನಗಳ ನಂತರ ಬೆಂಗಳೂರಿನಲ್ಲಿನ ಕೆಲಸವನ್ನ ಬಿಟ್ಟು ಕಲಬುರಗಿ ನಗರದ ಜಾಗೃತಿ ಕಾಲೋನಿಯಲ್ಲಿ ಪತ್ನಿ ಮತ್ತು ಕುಟುಂಬಸ್ಥರ ಜೊತೆಗೆ ವಾಸ ಮಾಡುತ್ತಾ ಫೋಟೋ ಡಿಸೈನಿಂಗ್ ಕೆಲಸ ಆರಂಭಿಸಿದ್ದನು.

    ದಿನ ಕಳೆದಂತೆ ವಿನಯ್ ಕುಡಿತದ ಚಟಕ್ಕೆ ಬಿದ್ದು, ಕಂಠಪೂರ್ತಿ ಕುಡಿದು ಬಂದು ಪತ್ನಿ ಸಂಧ್ಯಾಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡಲಾರಂಭಿಸಿದ್ದ. ಅಲ್ಲದೇ ಲಕ್ಷಾಂತರ ರೂಪಾಯಿ ಹಣ ಮತ್ತು ಚಿನ್ನ ಕೊಟ್ಟು ಮದುವೆ ಮಾಡಿಕೊಟ್ಟರೂ ಸಹ ಪೋಷಕರ ಜೊತೆಗೂಡಿ ತವರು ಮನೆಯಿಂದ ಮತ್ತಷ್ಟು ವರದಕ್ಷಿಣೆ ತೆಗೆದುಕೊಂಡು ಬಾ ಅಂತ ಹೊಡೆಯುತ್ತಿದ್ದನು. ಆದರೆ ನನ್ನ ಮಗಳು ಇವೆಲ್ಲ ಕಿರುಕುಳ ಸಹಿಸಿಕೊಂಡು ಪತಿಯೇ ಪರದೈವ ಅಂತ ಇದ್ಧಳು. ಆದರೆ ಶನಿವಾರ ರಾತ್ರಿ ನನ್ನ ಮಗಳು ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಮ್ಮ ಮಗಳ ಸಾವಿಗೆ ಪತಿಯ ಮನೆಯವರೇ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದು, ಅವರೇ ಕೊಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.

    ಪತಿ ವಿನಯ್ ಎಂಬಿಎ ಪದವೀಧರನಾಗಿದ್ದು, ಪತ್ನಿ ಸಂಧ್ಯಾ ಕೂಡ ಬಿಸಿಎ ಕಂಪ್ಯೂಟರ್ ಸೈನ್ಸ್ ಮಾಡಿದ್ದಳು. ಪತಿಯ ಮನೆಯವರು ಇಷ್ಟೆಲ್ಲ ಕಿರುಕುಳ ಕೊಡುತ್ತಿದ್ದರು ಸಹ ಸಂಧ್ಯಾರಾಣಿ ತನ್ನ ಪೋಷಕರ ಮುಂದೆ ಬಾಯ್ಬಿಟ್ಟಿರಲಿಲ್ಲ. ಕೆಲವು ದಿನಗಳ ಹಿಂದೆ ನೋವು ತಾಳಲಾರದೇ ತಂದೆ ಧನರಾಜ್ ಬಳಿ ಪತಿಯ ಮನೆಯವರ ಚಿತ್ರಹಿಂಸೆಯ ಬಗ್ಗೆ ಹೇಳಿಕೊಂಡಿದ್ದಳು. ಹೀಗಾಗಿ ತಂದೆ ಶನಿವಾರ ಸಂಜೆಯಷ್ಟೆ ಮಗಳ ಮನೆಗೆ ಬಂದು ಅಳಿಯನ ಜೊತೆ ಸಂಧಾನ ಮಾತುಕತೆ ನಡೆಸಿದ್ದಾರೆ.

    ಅಷ್ಟೇ ಅಲ್ಲದೇ ನಿಮಗೆ ಏನು ಬೇಕೋ ಅದನೆಲ್ಲ ಕೊಡುತ್ತೇನೆ ಅಂತ ಹೇಳಿ ನನ್ನ ಮಗಳನ್ನ ಸುಖವಾಗಿ ನೋಡಿಕೊಳ್ಳಿ ಅಂತಾ ಅಂಗಲಾಚಿ ಹೋಗಿದ್ದಾರೆ. ದುರಂತವೆಂದರೇ ತಂದೆ ಬಂದು ಹೋದ ಮಧ್ಯರಾತ್ರಿಯೇ ಸಂಧ್ಯಾರಾಣಿ ನೇಣು ಬಿಗಿದುಕೊಂಡು ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಎಮ್ಬಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಸಂಧ್ಯಾರಾಣಿಯ ಶವವನ್ನ ಮರಣೋತ್ತರ ಪರೀಕ್ಷೆಗೆಂದು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.

    ಪತ್ನಿಯ ಮನೆಯವರ ಕೊಲೆ ಆರೋಪವನ್ನ ನಿರಾಕರಿಸಿರುವ ಪತಿ ವಿನಯ್, ನಾನಾಗಲಿ ಅಥವಾ ನಮ್ಮ ತಂದೆ ತಾಯಿಯಾಗಲಿ ನನ್ನ ಪತ್ನಿಗೆ ಯಾವುದೇ ಕಿರುಕುಳ ಕೊಡುತ್ತಿರಲಿಲ್ಲ. ಅವಳನ್ನ ಹೂವಿನ ಹಾಗೇ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೇವು. ಕಳೆದ ರಾತ್ರಿ ಇಬ್ಬರು ಒಟ್ಟಿಗೆ ಊಟ ಮಾಡಿ ಅವಳು ರೂಮಿಗೆ ಹೋಗಿ ಮಲಗಿಕೊಂಡಿದ್ದಳು. ನಾನು ಹಾಲ್ ನಲ್ಲಿ ಮಲಗಿಕೊಂಡಿದ್ದೆನು. ಇದೇ ವೇಳೆಯಲ್ಲಿ ಆಕೆ ನನಗೆ ವಾಟ್ಸಪ್ ಮೂಲಕ ಬಾಯ್ ಗುಡ್ ನೈಟ್ ಅಂತ ಮೆಸೇಜ್ ಸಹ ಮಾಡಿದ್ದಾಳೆ. ಆದರೆ ಬೆಳಗಾಗೋದ್ರೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರ ಬಗ್ಗೆ ನಮಗೆ ಏನು ಗೊತ್ತಿಲ್ಲ ಅಂತ ಹೇಳಿದ್ದಾನೆ.

    ಈ ಬಗ್ಗೆ ಎಮ್ಬಿ ನಗರ ಠಾಣೆ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದು, ಪತಿ ವಿನಯ್ ನನ್ನ ವಶಕ್ಕೆ ಪಡೆದು ವಿಚಾರಣೆಯನ್ನ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದ್ವೆಯಾಗಿ 14 ತಿಂಗಳಿಗೆ ಪತ್ನಿಯನ್ನು ಮನೆಯಿಂದ ಹೊರದಬ್ಬಿದ ಪೊಲೀಸ್ ಪತಿ

    ಮದ್ವೆಯಾಗಿ 14 ತಿಂಗಳಿಗೆ ಪತ್ನಿಯನ್ನು ಮನೆಯಿಂದ ಹೊರದಬ್ಬಿದ ಪೊಲೀಸ್ ಪತಿ

    ಬಳ್ಳಾರಿ: ಪೊಲೀಸ್ ಪೇದೆ ವರ್ಷಕ್ಕೊಂದು ಮದುವೆಯಾಗುವುದ್ದಕ್ಕೆ, ಮದುವೆಯಾಗಿ 14ನೇ ತಿಂಗಳಿಗೆ ತನ್ನ ಮೊದಲ ಗರ್ಭಿಣಿ ಪತ್ನಿಗೆ ಕೊಡಬಾರದ ಕಾಟ ಕೊಟ್ಟು ಈಗ ವರದಕ್ಷಿಣೆ ತೆಗದುಕೊಂಡು ಬಾ ಎಂದು ಮನೆಯಿಂದ ಹೊರಹಾಕಿದ ಪ್ರಕರಣವೊಂದು ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.

    ಬಳ್ಳಾರಿಯ ಕೌಲಬಜಾರ ಪೊಲೀಸ್ ಠಾಣೆಯಲ್ಲಿ ಕ್ರೈಂ ಪೇದೆಯಾಗಿರುವ ಮೆಹಬೂಬ್ ಬಾಷಾ ಕಳೆದ 14 ತಿಂಗಳ ತಿಂದೆಯಷ್ಟೇ ನಸೀಮಾ ಅವರನ್ನು ಮದುವೆಯಾಗಿದ್ದ. ಆದರೆ ಮದುವೆಯಾದ ನಂತರ ಕೇವಲ 2 ತಿಂಗಳು ಮಾತ್ರ ಪತ್ನಿಯೊಂದಿಗೆ ಸಂಸಾರ ಮಾಡಿದ್ದಾನೆ. ಆದರೆ ಇದೀಗ ಪತ್ನಿಗೆ ಕೊಡಬಾರದ ಕಾಟ ಕೊಟ್ಟು ವರದಕ್ಷಿಣೆ ತರುವಂತೆ ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದಾನೆ.

    ಪೇದೆ ಮೆಹಬೂಬ್ ಬಾಷಾ ಮದುವೆಯ ವೇಳೆ 3 ಲಕ್ಷ ಹಣ ಹಾಗೂ ಬಂಗಾರವನ್ನು ವರದಕ್ಷಿಣೆಯಾಗಿ ಪಡೆದಿದ್ದ. ಇದೀಗ ಮತ್ತೆ 2 ಲಕ್ಷ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾನೆ. ಪೇದೆ ಮೆಹಬೂಬ್ ಬಾಷಾರ ತಾಯಿ ಹಾಗೂ ಅವರ ಸೋದರ ಮಾವ ಸಹ ವರದಕ್ಷಿಣೆ ತರುವಂತೆ ಪೀಡಿಸುತ್ತಾ ಹಲ್ಲೆ ಮಾಡಿದ್ದಾರೆ. ಪತಿ ಈಗ ಮೂರು ತಿಂಗಳ ಗರ್ಭಿಣಿಯಾಗಿರುವ ನನ್ನನ್ನು ಮನೆಯಿಂದಲೇ ಹೊರಹಾಕಿ ವರದಕ್ಷಿಣೆಗಾಗಿ ಮತ್ತೊಂದು ಮದುವೆಯಾಗಲು ಸಜ್ಜಾಗಿದ್ದಾನೆ ಎಂದು ನಸೀಮಾ ಆರೋಪಿಸಿದ್ದಾರೆ.

    ಪೇದೆಯ ಕಿರುಕುಳಕ್ಕೆ ಬೇಸತ್ತ ನಸೀಮಾ ಇದೀಗ ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ವರದಕ್ಷಿಣೆ ಕಿರುಕುಳದಿಂದ ಬೇಸತ್ತು 19ರ ನವವಿವಾಹಿತೆ ನೇಣಿಗೆ ಶರಣು

    ವರದಕ್ಷಿಣೆ ಕಿರುಕುಳದಿಂದ ಬೇಸತ್ತು 19ರ ನವವಿವಾಹಿತೆ ನೇಣಿಗೆ ಶರಣು

    ಹುಬ್ಬಳ್ಳಿ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಲಕ್ಷ್ಮಿ ಜಾಲಿಹಾಳ(19) ನೇಣಿಗೆ ಶರಣಾದ ಗೃಹಿಣಿ. ಮೂರು ತಿಂಗಳ ಹಿಂದೆ ಯಲ್ಲಪ್ಪನ ಜೊತೆ ಲಕ್ಷ್ಮಿ ಮದುವೆ ಮಾಡಿಕೊಡಲಾಗಿತ್ತು. ಮನೆಯಲ್ಲಿಯೇ ನೇಣು ಹಾಕಿಕೊಂಡ ಆತ್ಮಹತ್ಯೆಗೆ ಮಾಡಿಕೊಂಡಿದ್ದು, ಗಂಡನ ಮನೆಯವರು ಕೊಲೆ ಮಾಡಿ ನೇಣು ಹಾಕಿದ್ದಾರೆಂದು ಯುವತಿಯರ ಪೋಷಕರು ಆರೋಪಿಸಿದ್ದಾರೆ.

    ತವರು ಮನೆಯಿಂದ ವರದಕ್ಷಿಣೆ ತರಬೇಕು. ಹೊಸ ಬೈಕ್ ಕೊಡೆಸಬೇಕೆಂದು ಪತಿ ಯಲ್ಲಪ್ಪ ಪದೇ ಪದೇ ಪೀಡಿಸುತ್ತಿದ್ದ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ. ವಿಷಯ ತಿಳಿಯುತ್ತಿದಂತೆ ಕಲಘಟಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸದ್ಯ ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಷದ ಮಾತ್ರೆ ಸೇವಿಸಿ ಗೃಹಿಣಿ ಸಾವು

    ವಿಷದ ಮಾತ್ರೆ ಸೇವಿಸಿ ಗೃಹಿಣಿ ಸಾವು

    ಮಂಡ್ಯ: ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಗೃಹಿಣಿ ವಿಷದ ಮಾತ್ರೆ ಸೇವಿಸಿ ಸಾವನ್ನಪ್ಪಿದ್ದು ಗಂಡನ ಮನೆಯವರು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

    ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ವಳಗೆರೆಮೆಣಸ ಗ್ರಾಮದ ಹರ್ಷಿತ(22) ಮೃತ ಗೃಹಿಣಿ. ಕಳೆದ ಮೂರು ವರ್ಷಗಳ ಹಿಂದೆ ವಳಗೆರೆಮೆಣಸ ಗ್ರಾಮದ ಲೋಕೇಶ್ ಜೊತೆ ಹರ್ಷಿತ ಮದುವೆಯಾಗಿತ್ತು. ಇಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಒಂದೂವರೆ ವರ್ಷದ ಹೆಣ್ಣು ಮಗು ಕೂಡ ಇತ್ತು.

    ಹರ್ಷಿತ ವಿಷದ ಕಾಳಿನ ಮಾತ್ರೆ ನುಂಗಿದ್ದಾಳೆ ಎಂದು ಪತಿ ಲೋಕೇಶ್ ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹರ್ಷಿಕ ಮೃತಪಟ್ಟಿದ್ದಳು. ಹರ್ಷಿತ ಸಾವಿನ ನಂತರ ಪತಿ ಲೋಕೇಶ್ ನಾಪತ್ತೆಯಾಗಿದ್ದು, ಆಕೆಯ ಸಾವಿಗೆ ಗಂಡನ ಮನೆಯವರು ಕಾರಣ. ಇದೊಂದು ವ್ಯವಸ್ಥಿತ ಕೊಲೆ ಎಂದು ಮೃತಳ ಪೋಷಕರು ಆರೋಪ ಮಾಡುತ್ತಿದ್ದಾರೆ.

    ಸದ್ಯ ಈ ಬಗ್ಗೆ ಕೆಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv