Tag: Dowry

  • ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

    ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

    – ತಬ್ಬಲಿಯಾಯ್ತು 5 ತಿಂಗಳ ಗಂಡು ಮಗು

    ಕಲಬುರಗಿ: ಪತಿಯ ಮನೆಯವರ ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿ ತಾಲೂಕಿನ ಉದನೂರು ಗ್ರಾಮದಲ್ಲಿ ನಡೆದಿದೆ.

    25 ವರ್ಷದ ಕಾವ್ಯ ನೇಣಿಗೆ ಶರಣಾದ ಗೃಹಿಣಿ. ಈಕೆಯನ್ನು ಅಗ್ರಿಕಲ್ಚರ್ ಫಿಲ್ಡ್‍ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜ್ ಜೊತೆ ಕಳೆದ ಒಂದೂವರೆ ವರ್ಷದ ಹಿಂದೆ 50 ಸಾವಿರ ಹಣ, 50 ಗ್ರಾಂ ಚಿನ್ನವನ್ನ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಅಲ್ಲದೇ ಕಳೆದ ಐದು ತಿಂಗಳ ಹಿಂದೆಯಷ್ಟೇ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿ, ಮೂರು ದಿನಗಳ ಹಿಂದೆ ಗಂಡನ ಮನೆಗೆ ಹೋಗಿದ್ದಳು.

    ಮಗುವಿನ ಮುಖ ನೋಡಿ ಸಹ ಅವಳನ್ನು ಚೆನ್ನಾಗಿ ನೋಡಿಕೊಳ್ಳದ ಪತಿ ಬಸವರಾಜ್ ಮತ್ತು ಆಕೆಯ ಮನೆಯವರು, ತವರು ಮನೆಯಿಂದ ಎರಡು ಲಕ್ಷ ರೂಪಾಯಿ ತಗೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದು ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆ ಪೊಲೀಸರು ಪತಿ ಬಸವರಾಜ್ ನನ್ನು ಬಂಧಿಸಿದ್ದಾರೆ. ಅಲ್ಲದೇ ಒಂಬತ್ತು ಜನರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿ ದಪ್ಪ ಆಗಿದ್ದಕ್ಕೆ ಸ್ವಿಫ್ಟ್ ಕಾರ್, 18 ಲಕ್ಷ ರೂ. ಬೇಡಿಕೆ ಇಟ್ಟ ಪತಿ!

    ಪತ್ನಿ ದಪ್ಪ ಆಗಿದ್ದಕ್ಕೆ ಸ್ವಿಫ್ಟ್ ಕಾರ್, 18 ಲಕ್ಷ ರೂ. ಬೇಡಿಕೆ ಇಟ್ಟ ಪತಿ!

    ಮುಂಬೈ: ಪತ್ನಿ ದಪ್ಪ ಆಗಿದ್ದಕ್ಕೆ 18 ಲಕ್ಷ ರೂ. ಹಾಗೂ ಸ್ವಿಫ್ಟ್ ಕಾರ್ ನೀಡುವಂತೆ ಮುಂಬೈ ಪತಿಯೊಬ್ಬ ವಿಚಿತ್ರ ಬೇಡಿಕೆಯಿಟ್ಟಿದ್ದಾನೆ.

    ಮುಂಬೈನ 30ವರ್ಷದ ವ್ಯಕ್ತಿ ತನ್ನ ಪತ್ನಿಗೆ (26) ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದಾನೆ. ಅಷ್ಟೇ ಅಲ್ಲದೇ ತಂದೆಯ ಜೊತೆಗೆ ಸೇರಿ ಆಕೆಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾನೆ. ಪತಿಯ ವರ್ತನೆಯಿಂದ ಮನನೊಂದ ಮಹಿಳೆ ಮುಂಬೈನ ಬಿಕೆಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ಏನಿದು ಪ್ರಕರಣ?:
    ಸಂತ್ರಸ್ತ ಮಹಿಳೆ 2017ರಲ್ಲಿ ಮದುವೆ ಆಗಿದ್ದಳು. ಮದುವೆಯ ಸಮಯದಲ್ಲಿ 18 ಲಕ್ಷ ರೂ. ಮೌಲ್ಯದ ಆಭರಣವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೆ ಈಗ ನೀನು ದಪ್ಪ ಆಗಿದ್ದಿಯಾ. ಹೀಗಾಗಿ ಮತ್ತೆ 18 ಲಕ್ಷ ರೂ, ಹಾಗೂ ಒಂದು ಸ್ವಿಫ್ಟ್ ಕಾರ್ ಕೊಡಿಸುವಂತೆ ನಿಮ್ಮ ತಂದೆಗೆ ಹೇಳು ಅಂತಾ ಪತಿ ಮತ್ತು ಮಾವ ಕಿರುಕುಳ ನೀಡಲು ಆರಂಭಿಸಿದ್ದಾರೆ.

    ನಮ್ಮ ಮನೆಯಲ್ಲಿ ಅಷ್ಟು ಪ್ರಮಾಣದ ಹಣ ಹೊಂದಿಸಲು ಸಾಧ್ಯವಿಲ್ಲ. ಹೀಗಾಗಿ ವರದಕ್ಷಿಣೆ ನೀಡಲು ಆಗುವುದಿಲ್ಲ ಎಂದು ಪತ್ನಿ ಹೇಳಿದ್ದಾಳೆ. ಇದರಿಂದಾಗಿ ನನ್ನ ಮೇಲೆ ಹಲ್ಲೆ ಮಾಡಿ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

    ಆರೋಪಿಗಳ ವಿರುದ್ಧ ವರದಕ್ಷಿಣೆ ಕಿರುಕುಳ, ಐಪಿಸಿ ಸೆಕ್ಷನ್ 505 (ಉದ್ದೇಶ ಪೂರ್ವಕ ಅವಮಾನ), 506 (ದಂಡನೆ) ಅಡಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಮಹಿಳೆಯ ಹೇಳಿಕೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಬಿಕೆಸಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಕಲ್ಪನಾ ಗಡೆಕರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣಿಗೆ ಶರಣು

    ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣಿಗೆ ಶರಣು

    ಕಲಬುರಗಿ: ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಸೊಂತ ಗ್ರಾಮದಲ್ಲಿ ಸೋಮವಾರದಂದು ನಡೆದಿದೆ.

    ದೀಪಾಲಿ (27) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಏಳು ವರ್ಷದ ಹಿಂದೆ ಶ್ರೀಕಾಂತ್ ಮಾಲದಾರ ಎಂಬವನ ಜೊತೆ ದೀಪಾಲಿ ಮದುವೆಯಾಗಿತ್ತು. ಮದುವೆ ಆದಾಗಿನಿಂದಲೂ ಗಂಡನ ಮನೆಯವರು ದೀಪಾಲಿಗೆ ತವರಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಇದೆಲ್ಲವನ್ನು ಸಹಿಸಿಕೊಂಡು ದೀಪಾಲಿ ಶ್ರೀಕಾಂತ್ ಜೊತೆ ಜೀವನ ನಡೆಸುತ್ತಿದ್ದರು. ಆದರೆ ಕಳೆದ ಹಲವು ದಿನಗಳಿಂದ ಗಂಡ ಹಾಗೂ ಅವನ ಮನೆಯವರು ಗೃಹಿಣಿಗೆ ಕೊಡಬಾರದ ಚಿತ್ರಹಿಂಸೆ ಕೊಟ್ಟಿದ್ದಾರೆ. ಇದರಿಂದ ಬೇಸತ್ತಿದ್ದ ದೀಪಾಲಿ ಮನನೊಂದು ಸೋಮವಾರದಂದು ನೇಣಿಗೆ ಶರಣಾಗಿದ್ದಾರೆ.

    ಪತಿ, ಅತ್ತೆ ವಂದನಾ, ಮಾವ ರಮೇಶ ಸೇರಿದಂತೆ ಏಳು ಜನರ ವಿರುದ್ಧ ದೀಪಾಲಿ ಕುಟುಂಬಸ್ಥರು ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮದುವೆಯಾಗಿ ಕೆಲ ತಿಂಗಳಿಗೆ ಮಕ್ಕಳಾಗದ್ದಕ್ಕೆ ಮತ್ತಷ್ಟು ವರದಕ್ಷಿಣೆ ಕೇಳಿ ಬೆಂಕಿ ಹಚ್ಚಿದ!

    ಮದುವೆಯಾಗಿ ಕೆಲ ತಿಂಗಳಿಗೆ ಮಕ್ಕಳಾಗದ್ದಕ್ಕೆ ಮತ್ತಷ್ಟು ವರದಕ್ಷಿಣೆ ಕೇಳಿ ಬೆಂಕಿ ಹಚ್ಚಿದ!

    – ತಂದೆ ಜೊತೆ ಸೇರಿ ಪತ್ನಿಯನ್ನೇ ಕೊಂದ ಪತಿ
    – ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪತ್ನಿ ಸಾವು

    ಕಲಬುರಗಿ: ವರದಕ್ಷಿಣೆ ತರಲಿಲ್ಲವೆಂದು ತಂದೆ ಜೊತೆ ಸೇರಿ ಪತಿಯೊಬ್ಬ ಪತ್ನಿಗೆ ಬೆಂಕಿ ಹಚ್ಚಿದ ಘಟನೆ ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿ ಗ್ರಾಮದಲ್ಲಿ ನಡೆದಿದೆ.

    ಬೆಂಕಿ ಹೊತ್ತಿಕೊಂಡು ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದ ಪತ್ನಿ ಈಶ್ವರಿಯನ್ನು(30) ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

    ಈಶ್ವರಿ ಅದೇ ಗ್ರಾಮದ ಸುರೇಶ ಕಡ್ಲಿ ಎಂಬವನ ಜೊತೆಗೆ ಮದುವೆ ಆಗಿದ್ದರು. ಆದರೆ ಮದುವೆಯಾದ ಕೆಲ ತಿಂಗಳ ಬಳಿಕ ನಿನಗೆ ಮಕ್ಕಳಾಗಿಲ್ಲ, ಹೀಗಾಗಿ ನೀನು ಮತ್ತಷ್ಟು ವರದಕ್ಷಿಣೆ ತರುಬೇಕೆಂದು ಸುರೇಶ್ ಪಟ್ಟು ಹಿಡಿದಿದ್ದ.

    ಪತಿ ಹಾಗೂ ಮಾವ ಚಂದ್ರಶೇಖರ್ ಇಬ್ಬರು ಸೇರಿ ಗುರುವಾರ ರಾತ್ರಿ ಬೆಂಕಿ ಹಚ್ಚಿದ್ದಾರೆ ಎಂದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪತ್ನಿ ಈಶ್ವರಿ ಆಸ್ಪತ್ರೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾಳೆ.

    ಮನೆಯಲ್ಲಿ ಯಾರು ಇಲ್ಲದಿರುವಾಗ ಈಶ್ವರಿ ಬೆಂಕಿ ಹಚ್ಚಿಕೊಂಡು, ಮನೆಯಿಂದ ಹೊರ ಬಂದಿದ್ದಾಳೆ. ತಕ್ಷಣವೇ ಬೆಂಕಿ ನಂದಿಸಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಇತ್ತ ಮನೆಗೂ ಬೆಂಕಿ ಹೊತ್ತಿಕೊಂಡು ಸಾಮಗ್ರಿಗಳು ಸುಟ್ಟು ಕರಕಲಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ.

    ಚಿತ್ತಾಪುರ ಠಾಣಾ ಪೊಲೀಸರು ಈಶ್ವರಿ ಸಾಯುವುದಕ್ಕೂ ಮುನ್ನ ಹೇಳಿಕೆ ಪಡೆದಿದ್ದು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆಯಷ್ಟೇ ಕಲಬುರಗಿಯ ಅಂಬಿಕಾ ನಗರದಲ್ಲಿ ವರದಕ್ಷಿಣೆ ಕಾಟಕ್ಕೆ ಬೇಸತ್ತು ಗೃಹಿಣಿ ಮೀನಾಕ್ಷಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತಿ ಮಲಗಿದ ನಂತ್ರ ಅಡುಗೆ ಮನೆಯಲ್ಲಿ ಗೃಹಿಣಿ ನೇಣಿಗೆ ಶರಣು

    ಪತಿ ಮಲಗಿದ ನಂತ್ರ ಅಡುಗೆ ಮನೆಯಲ್ಲಿ ಗೃಹಿಣಿ ನೇಣಿಗೆ ಶರಣು

    ಕಲಬುರಗಿ: ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯ ಅಂಬಿಕಾ ನಗರದಲ್ಲಿ ನಡೆದಿದೆ.

    ಮೀನಾಕ್ಷಿ (25) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಎರಡೂವರೆ ವರ್ಷದ ಹಿಂದೆ ಆನಂದ್ ಜೊತೆ ಮೀನಾಕ್ಷಿ ಮದುವೆ ನಡೆದಿತ್ತು. ಆದರೆ ಬುಧವಾರ ರಾತ್ರಿ ಎಲ್ಲರೂ ಮಲಗಿದ ಮೇಲೆ ಅಡುಗೆ ಮನೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಜಾನೆ ಎಲ್ಲರು ಎದ್ದು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

    ನನ್ನ ಮಗಳಿಗೆ ಮದುವೆಯಾದಗಿನಿಂದ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ಮಗಳು ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳ ಸಾವಿಗೆ ಪತಿಯೇ ಕಾರಣ ಎಂದು ಮೃತ ಮೀನಾಕ್ಷಿ ಪೋಷಕರು ಆರೋಪಿಸಿದ್ದಾರೆ.

    ಈ ಕುರಿತು ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪತಿ ಆನಂದ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಲೆದಿಂಬಿನಿಂದ ಉಸಿರುಗಟ್ಟಿಸಿ ಗೃಹಿಣಿಯ ಕೊಲೆ

    ತಲೆದಿಂಬಿನಿಂದ ಉಸಿರುಗಟ್ಟಿಸಿ ಗೃಹಿಣಿಯ ಕೊಲೆ

    ಹಾವೇರಿ: ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಗೃಹಿಣಿಯನ್ನು ಕೊಲೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ.

    ಮೃತ ಗೃಹಿಣಿಯನ್ನ ಸುಮಾ ಕೆರ್ನೆಲ್ಲಿ(23) ಎಂದು ಗುರುತಿಸಲಾಗಿದೆ. 2015ರಲ್ಲಿ ಮಾಲತೇಶ್ ಜೊತೆ ಸುಮಾಳ ಮದುವೆ ಆಗಿತ್ತು. ಮದುವೆ ನಂತರ ಪತಿ ಹಾಗೂ ಆತನ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

    ಸುಮಾಳ ಪತಿ ಮಾಲತೇಶ್ ವಿರುದ್ಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಹಿರೇಕೆರೂರು ಪೊಲೀಸರು ಮಾಲತೇಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಮೃತಳ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

    ಸದ್ಯ ಪತಿ ಹಾಗೂ ಆತನ ಸಂಬಂಧಿಕರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮೃತಳ ಸಂಬಂಧಿಕರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಲ್ಸ ಮುಗ್ಸಿ ಬರೋದಾಗಿ ತಂದೆಗೆ ಹೇಳಿ ನೇಣಿಗೆ ಶರಣಾದ್ಳು!

    ಕೆಲ್ಸ ಮುಗ್ಸಿ ಬರೋದಾಗಿ ತಂದೆಗೆ ಹೇಳಿ ನೇಣಿಗೆ ಶರಣಾದ್ಳು!

    ಚೆನ್ನೈ: ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನಲ್ಲಿರುವ ಅಣ್ಣಾ ನಗರದಲ್ಲಿ ನಡೆದಿದೆ.

    ಜಯಶ್ರೀ (26) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಜಯಶ್ರೀ 2016ರಲ್ಲಿ ಸರವಣನ್ ಎಂಬವರ ಜೊತೆ ವಿವಾಹವಾಗಿದ್ದರು. ಪತಿ ಸರವಣನ್ ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಮಂಗಳವಾರ ಜಯಶ್ರೀ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಮದುವೆಯ ಸಮಯದಲ್ಲಿ 70 ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೆ ಮದುವೆಯಾದ ದಿನದಿಂದಲೂ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಈ ಮಧ್ಯೆ ಜಯಶ್ರೀಗೆ ಹೆರಿಗೆಯಾಗಿತ್ತು. ಆದರೆ ಮಗು ಹುಟ್ಟುವ ಮೊದಲೆ ಮೃತಪಟ್ಟಿತ್ತು. ಇದರಿಂದ ಜಯಶ್ರೀ ಖಿನ್ನತೆಗೆ ಒಳಗಾಗಿ ತನ್ನ ಪೋಷಕರ ಮನೆಯಲ್ಲಿ ಇದ್ದಳು.

    ಜಯಶ್ರೀ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್‍ನೋಟ್ ಬರೆದಿದ್ದಾಳೆ. ನನ್ನ ಮಗಳ ಸಾವಿಗೆ ಆಕೆಯ ಪತಿ, ಅತ್ತೆ-ಮಾವನೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಮೃತ ಜಯಶ್ರೀ ತನ್ನ ಅತ್ತೆ-ಮಾವ ವರದಕ್ಷಿಣೆಗೆ ಕಿರುಕುಳ ನೀಡುತ್ತಿದ್ದಾರೆ ಎಂದು ತಂದೆಗೆ ತಿಳಿಸಿದ್ದಾಳೆ. ಕೂಡಲೇ ತಂದೆ ಮಗಳ ಮನೆಗೆ ಹೋಗಿ ತನ್ನ ಜೊತೆ ಬರುವಂತೆ ಕೇಳಿದ್ದಾರೆ. ಆಗ ಜಯಾ ಮನೆಯಲ್ಲಿ ಸ್ವಲ್ಪ ಕೆಲಸವಿದೆ ಮುಗಿಸಿ ಬರುತ್ತೇನೆ ಎಂದು ಹೇಳಿ ತಂದೆಯನ್ನು ವಾಪಸ್ ಕಳುಹಿಸಿದ್ದಾಳೆ.

    ಮಾರನೇ ದಿನ ಅಂದರೆ ಮಂಗಳವಾರ ಜಯಶ್ರೀ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಮಾಹಿತಿ ತಿಳಿದ ಕಾಸಿಮೆಡು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

    ನನ್ನ ಮಗಳನ್ನು ಸರವಣನ್ ಕುಟುಂಬದವರು ಕೊಲೆ ಮಾಡಿದ್ದಾರೆ. ಆದರೆ ಅದನ್ನು ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದು ಮೃತಾಳ ತಂದೆ ಪೊಲೀಸ್ ಠಾಣೆಗೆ ಹೋಗಿ ಆರೋಪಿಸಿದ್ದಾರೆ. ಜೊತೆಗೆ ವರದಕ್ಷಿಣೆಗೆ ಕಿರುಕುಳ ನೀಡಿದ್ದಾರೆ. ಆದ್ದರಿಂದ ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿ ಸರವಣನ್ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯಕ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ವಧುದಕ್ಷಿಣೆಗಾಗಿ ಜೋಡಿಯ ಕಿಡ್ನಾಪ್

    ವಧುದಕ್ಷಿಣೆಗಾಗಿ ಜೋಡಿಯ ಕಿಡ್ನಾಪ್

    ಕಲಬುರಗಿ: ವರದಕ್ಷಿಣೆ ಬೇಕಂತ ಅದೆಷ್ಟೋ ಜನ ಡಿಮ್ಯಾಂಡ್ ಮಾಡುವುದನ್ನು ನೋಡಿದ್ದೀವಿ, ಕೇಳಿದ್ದೀವಿ. ಆದರೆ ಜಿಲ್ಲೆಯಲ್ಲಿ ವಧುದಕ್ಷಿಣೆ ಬೇಕಂತ ಹುಡುಗಿ ಮನೆಯವರೇ ಟಾರ್ಚರ್ ಮಾಡಿದ್ದಾರೆ.

    ಕಲಬುರಗಿ ಜಿಲ್ಲೆಯ ನಿಡಗುಂದಾ ಗ್ರಾಮದ ಅಜಯ್ ಪ್ರೀತಿಸಿ ಜ್ಯೋತಿ ಎಂಬವರನ್ನು ಮದುವೆಯಾಗಿದ್ದರು. ಒಂದೂವರೆ ವರ್ಷದಿಂದ ಅಜಯ್ ಮತ್ತು ಜ್ಯೋತಿ ಸಂಸಾರ ಮಾಡುತ್ತಿದ್ದರು. ಆದರೆ ಅಷ್ಟರಲ್ಲಿಯೇ ಜ್ಯೋತಿ ಸಹೋದರ ರವಿ ವಧುದಕ್ಷಿಣೆಗಾಗಿ ಕಿರುಕುಳ ಕೊಡಲು ಶುರು ಮಾಡಿದ್ದಾನೆ. ಅಷ್ಟೇ ಆಲ್ಲದೇ ಈ ಜೋಡಿಯನ್ನ ಕಿಡ್ನಾಪ್ ಮಾಡಿ ಅಜ್ಞಾತ ಸ್ಥಳದಲ್ಲಿಟ್ಟಿದ್ದಾನೆ ಎಂದು ಅಜಯ್ ತಾಯಿ ಆರೋಪ ಮಾಡಿದ್ದಾರೆ.

    ವಧುದಕ್ಷಿಣೆ ಅನ್ನೋ ಪದ್ಧತಿ ಇರುವುದು ಪಾರ್ದಿ ಜನಾಂಗದಲ್ಲಿ. ಹೀಗಾಗಿ ಪಾರ್ದಿ ಸಮುದಾಯಕ್ಕೆ ಸೇರಿದ ಅಜಯ್ ತನ್ನ ತಂಗಿ ಜ್ಯೋತಿಯನ್ನ ಪ್ರೀತಿಸಿ ಮದುವೆಯಾಗಿದ್ದಾನೆ. ಆದ್ದರಿಂದ ಪದ್ಧತಿ ಪ್ರಕಾರ ವಧುದಕ್ಷಿಣೆ ಕೊಟ್ಟಿಲ್ಲ. ಹೀಗಾಗಿ ಟಾರ್ಚರ್ ಕೊಟ್ಟಿದ್ದಾನೆ ಅನ್ನೋ ಮಾತು ಕೇಳಿ ಬರುತ್ತಿದೆ.

    ಅಜಯ್ ಮತ್ತು ಜ್ಯೋತಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಪ್ರಕರಣ ಕಿಡ್ನಾಪ್ ಅಂತ ಬದಲಾಗಲಿ ಎಂದು ಅಜಯ್ ಕುಟುಂಬದವರು ಆಗ್ರಹ ಮಾಡಿದ್ದಾರೆ. ಈ ಬಗ್ಗೆ ಪೊಲೀಸರನ್ನು ಕೇಳಿದರೆ ತನಿಖೆ ಮುಗಿದ ನಂತರ ಎಲ್ಲ ಗೊತ್ತಾಗಲಿದೆ ಎಂದು ಕಲಬುರಗಿಯ ಹೆಚ್ಚುವರಿ ಎಸ್‍ಪಿ ಜಯಪ್ರಕಾಶ್ ಹೇಳಿದ್ದಾರೆ.

    ಈಗಾಗಲೇ ಅಜಯ್ ಗೆ ಮಹಾರಾಷ್ಟ್ರದಲ್ಲಿಯೇ ಒಂದು ಮದುವೆಯಾಗಿದೆ ಮತ್ತು ಮಕ್ಕಳಿವೆ. ಅಷ್ಟಾದರೂ ಎರಡನೇ ಮದುವೆ ಬೇಕಿತ್ತಾ ಅನ್ನೋದು ಚರ್ಚೆಗೆ ಎಡೆಮಾಡಿಕೊಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪತ್ನಿಯ ನಾಲಗೆ ಕತ್ತರಿಸಿ 10 ದಿನ ಕೂಡಿಟ್ಟು ಚಿತ್ರಹಿಂಸೆ ಕೊಟ್ಟ!

    ಪತ್ನಿಯ ನಾಲಗೆ ಕತ್ತರಿಸಿ 10 ದಿನ ಕೂಡಿಟ್ಟು ಚಿತ್ರಹಿಂಸೆ ಕೊಟ್ಟ!

    ಲಕ್ನೋ: ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಬರ್ರಾ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ವರದಕ್ಷಿಣೆಗಾಗಿ ಪತ್ನಿಯ ನಾಲಗೆ ಕತ್ತರಿಸಿ ಆಕೆಯನ್ನು 10 ದಿನಗಳ ಕಾಲ ಮನೆಯಲ್ಲೇ ಕೂಡಿ ಹಾಕಿದ ವಿಲಕ್ಷಣೀಯ ಘಟನೆ ಭಾನುವಾರದಂದು ಬೆಳಕಿಗೆ ಬಂದಿದೆ.

    ಬರ್ರಾ ಪ್ರದೇಶದ ನಿವಾಸಿ ಆಕಾಶ್ ಎಂಬಾತ ಪತ್ನಿಯ ನಾಲಗೆ ಕತ್ತರಿಸಿದ ಪತಿ. ನವೆಂಬರ್ 06 ರಂದು ಆಕಾಶ್ ಹಾಗೂ ಆತನ ಪತ್ನಿ ನಡುವೆ ವರದಕ್ಷಿಣೆ ವಿಚಾರವಾಗಿ ಜಗಳವಾಗಿತ್ತು. ಜಗಳದಿಂದ ಕೋಪಗೊಂಡ ಆಕಾಶ್ ಪತ್ನಿಯ ನಾಲಗೆಯನ್ನು ಕತ್ತರಿಸಿದ್ದಾನೆ. ಬಳಿಕ ಆಕೆಗೆ ಚಿಕಿತ್ಸೆಯನ್ನು ಕೊಡಿಸದೆ ಸುಮಾರು 10 ದಿನಗಳ ಕಾಲ ಮನೆಯಲ್ಲಿಯೇ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದಾನೆ. ನಂತರ ಪಾಪಿ ಪತಿ ಕೈಯಿಂದ ತಪ್ಪಿಸಿಕೊಂಡು ಪತ್ನಿ ತನ್ನ ತಂದೆಗೆ ನಡೆದ ಘಟನೆಯನ್ನು ತಿಳಿಸಿದ್ದಾಳೆ.

    ಘಟನೆ ತಿಳಿದ ಮೇಲೆ ನನ್ನ ತಂದೆ ಆಕಾಶ್ ಹಾಗೂ ಆತನ ಕುಟುಂಬದವರ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಆಕಾಶ್ ತಂದೆ ವೃತ್ತಿಯಲ್ಲಿ ಪೊಲೀಸ್ ಅಧಿಕಾರಿ. ಅದಕ್ಕಾಗಿ ನಾವು ನೀಡಿದ ದೂರನ್ನು ಸ್ಥಳಿಯ ಪೊಲೀಸರು ಕಡೆಗಣಿಸಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಪತಿಯ ವಿರುದ್ಧ ಪತ್ನಿ ಕಾನ್ಪುರ ಹಿರಿಯ ಪೊಲೀಸ್ ಅಧಿಕಾರಿಗೆ ದೂರು ನೀಡಿದ್ದಾಳೆ.

    ಸದ್ಯ ಆರೋಪಿಯ ಮೇಲೆ ಕಾನ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಅದಷ್ಟು ಬೇಗ ಬಂಧಿಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿ ಆದೇಶಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸ್ವಂತ ಮಕ್ಕಳನ್ನೇ ಕಿಡ್ನಾಪ್ ಮಾಡಿ ದುಬೈಗೆ ತಂದೆ ಪರಾರಿ!

    ಸ್ವಂತ ಮಕ್ಕಳನ್ನೇ ಕಿಡ್ನಾಪ್ ಮಾಡಿ ದುಬೈಗೆ ತಂದೆ ಪರಾರಿ!

    ಉಡುಪಿ: ಐಸ್ ಕ್ರೀಂ ಕೊಡಿಸುವುದಾಗಿ ಹೇಳಿ ತನ್ನಿಬ್ಬರು ಮಕ್ಕಳನ್ನು ತಂದೆಯೇ ಕಿಡ್ನಾಪ್ ಮಾಡಿ, ದುಬೈಗೆ ಪರಾರಿಯಗಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಉಡುಪಿಯ ಮಾನವಹಕ್ಕುಗಳ ಪ್ರತಿಷ್ಠಾನದಲ್ಲಿ ದೂರು ದಾಖಲಿಸಿದ್ದಾರೆ.

    ದಕ್ಷಿಣ ಕನ್ನಡದ ರಿಶಾನಾ ನಿಲೋಫರ್ ದೂರು ಕೊಟ್ಟ ಮಹಿಳೆ. ಕೇರಳದ ಕುಂಬ್ಳೆ ಮೂಲದ ಪತಿ ಮಹಮ್ಮದ್ ಶಾನಿಬ್ ತನ್ನಿಬ್ಬರು ಮಕ್ಕಳನ್ನು ಕಿಡ್ನಾಪ್ ಮಾಡಿಕೊಂಡು ದುಬೈಗೆ ಪರಾರಿಯಾಗಿದ್ದಾನೆ ಎಂದು ರಿಶಾನಾ ದೂರು ನೀಡಿದ್ದಾರೆ.

    ಏಳು ವರ್ಷದ ಹಿಂದೆ ರಿಶಾನಾ ಹಾಗೂ ಮಹಮ್ಮದ್ ಮದುವೆಯಾಗಿದ್ದರು. ವರದಕ್ಷಿಣೆಗಾಗಿ ಪತಿ ಹಾಗೂ ಅತ್ತೆ ರಿಶಾನಾಗೆ ತುಂಬ ಚಿತ್ರಹಿಂಸೆ ನೀಡುತ್ತಿದ್ದರು. ಅಷ್ಟೇ ಅಲ್ಲದೆ ರಿಶಾನಾ ತಂದೆಯಿಂದ ಬರೋಬ್ಬರಿ ಅರ್ಧ ಕೋಟಿ ಬೆಳೆಬಾಳುವ 1 ಫ್ಲಾಟ್ ಹಾಗೂ 130 ಪವನ್ ಚಿನ್ನವನ್ನು ಪಡೆದಿದ್ದನು. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಮಹಮ್ಮದ್, ಕೆಲಸದ ಮೇಲೆ ದುಬೈಗೆ ತೆರಳಿದ್ದ. ಎರಡು ತಿಂಗಳ ಹಿಂದೆ ದುಬೈನಿಂದ ಊರಿಗೆ ಬಂದಿದ್ದನು. ಇಲ್ಲಿಂದ ವಾಪಸ್ ಹೋಗುವ ವೇಳೆ ತನ್ನ ಐದು ವರ್ಷದ ಮಗನನ್ನು ಹಾಗೂ ಒಂದೂವರೆ ವರ್ಷದ ಹೆಣ್ಣು ಮಗುವನ್ನು ತನಗೆ ತಿಳಿಸದೇ ಕಿಡ್ನಾಪ್ ಮಾಡಿ ದುಬೈಗೆ ಕರೆದೊಯ್ದಿದ್ದಾನೆ ಎಂದು ರಿಶಾನಾ ಆರೋಪಿಸಿದ್ದಾರೆ.

    ಈ ಕುರಿತು ಮಂಗಳೂರಿನ ಪಾಂಡೇಶ್ವರ ಮತ್ತು ಉಳ್ಳಾಲ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಯಾಕೆಂದರೆ ಆರೋಪಿ ಮಹಮ್ಮದ್ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಸಂಬಂಧಿಯಾಗಿದ್ದು, ಸಚಿವರ ಪ್ರಭಾವದಿಂದ ನನಗೆ ನ್ಯಾಯ ಸಿಗುತ್ತಿಲ್ಲ. ಎದೆಹಾಲು ಕುಡಿಯುವ ಮಗುವನ್ನು ಅಮ್ಮನಿಂದ ದೂರ ಮಾಡುವುದು ಮುಸ್ಲಿಂ ಕಾನೂನಿನಲ್ಲೂ ತಪ್ಪು, ಭಾರತೀಯ ಕಾನೂನಲ್ಲೂ ತಪ್ಪು ಎಂದು ನ್ಯಾಯಕ್ಕಾಗಿ ಮಾನವಹಕ್ಕುಗಳ ಪ್ರತಿಷ್ಠಾನದಲ್ಲಿ ರಿಶಾನಾ ದೂರು ದಾಖಲಿಸಿದ್ದಾರೆ.

    ಇದೀಗ ಎರಡು ತಿಂಗಳ ಮಗುವನ್ನು ಕೈಯಲ್ಲಿ ಎತ್ತಿಕೊಂಡು ಮತ್ತಿಬ್ಬರು ಮಕ್ಕಳಿಗಾಗಿ ಹೋರಾಟದ ಕೊನೆಯ ಹಂತವೆಂಬಂತೆ ರಿಶಾನಾ ಮಾನವಹಕ್ಕುಗಳ ಪ್ರತಿಷ್ಠಾನಕ್ಕೆ ಬಂದಿದ್ದಾರೆ. ಈಗಾಗಲೇ ಪ್ರತಿಷ್ಠಾನ ಮಹಮ್ಮದ್ ಸಂಬಂಧಿಕರನ್ನು ಕರೆಸಿ ಮಾತನಾಡಿ ಜಮಾತನ್ನು ಸಂಪರ್ಕಿಸಿದೆ. ನಂತರ ಮುಸ್ಲಿಂ ಮುಖಂಡರ ಜೊತೆಗೆ ಮಾತುಕತೆ ಮಾಡಿ ಕೊನೆಗೆ ಕೇಂದ್ರ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದೆ. ಈ ನಡುವೆಯೆ ಮುಸ್ಲಿಂ ಯುವ ಸಂಘಟನೆ, ಅಬುದಾಬಿ ಕನ್ನಡಿಗರನ್ನು ಮಾನವಹಕ್ಕುಗಳ ಪ್ರತಿಷ್ಠಾನ ಸಂಪರ್ಕಿಸಿ ಸಹಕರಿಸುವಂತೆ ಕೇಳಿದೆ. ರಿಶಾನಾಗೆ ನ್ಯಾಯ ಸಿಗುವಂತೆ ಹೋರಾಡುತ್ತೇವೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಡಾ. ರವೀಂದ್ರನಾಥ್ ಶಾನುಭಾಗ್ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews