Tag: dove

  • 14 ಕೋಟಿಗೆ ಮಾರಾಟವಾದ ಪಾರಿವಾಳ

    14 ಕೋಟಿಗೆ ಮಾರಾಟವಾದ ಪಾರಿವಾಳ

    ಬ್ರಸೆಲ್ಸ್: ಬೆಲ್ಜಿಯಂನಲ್ಲಿ ಎರಡು ವರ್ಷದ ಪಾರಿವಾಳ 19 ಲಕ್ಷ ಡಾಲರ್ ಅಂದ್ರೆ ಬರೋಬ್ಬರಿ 14 ಕೋಟಿ ರೂಪಾಯಿಗೆ ಮಾರಾಟವಾಗಿದೆ.

    ಪಾರಿವಾಳದ ಮೂಲ ಬೆಲೆಯನ್ನು 237 ಡಾಲರ್ ಎಂದು ನಿಗದಿ ಮಾಡಲಾಗಿತ್ತು. ಆದ್ರೆ ಚೀನಾ ವ್ಯಕ್ತಿಯೋರ್ವ 19 ಲಕ್ಷ ಡಾಲರ್ (14 ಕೋಟಿ 15 ಲಕ್ಷ ರೂಪಾಯಿ) ನೀಡಿ ಮುದ್ದಾದ ಎರಡು ವರ್ಷದ ಪಾರಿವಾಳ ಖರೀದಿಸಿದ್ದಾರೆ.

    ತನ್ನ ಪಾರಿವಾಳ 19 ಲಕ್ಷಕ್ಕೆ ಮಾರಾಟವಾದ ಸುದ್ದಿ ಕೇಳಿ ಮಾಲಕ ಆಶ್ಚರ್ಯ ವ್ಯಕ್ತಪಡಿಸಿದ್ದಾನೆ. ಮಾರಾಟದ ಬೆಲೆಯನ್ನ ಹೇಳಿದಾಗ ಆತನ ಕುಟುಂಬಸ್ಥರು ಆರಂಭದಲ್ಲಿ ನಂಬಲಿಲ್ಲ ಎಂದು ವರದಿಯಾಗಿದೆ. ಇದಕ್ಕೂ ಮೊದಲು ನಾಲ್ಕು ವರ್ಷದ ಪಾರಿವಾಳ 14 ಲಕ್ಷ ಡಾಲರ್ ಗೆ ಮಾರಾಟವಾಗಿ ದಾಖಲೆ ಬರೆದಿತ್ತು.

  • ಬಜಾರಲ್ಲಿ ಹಾರಾಡಲಿರೋದು ಭೂಗತ ಪಾರಿವಾಳ!

    ಬಜಾರಲ್ಲಿ ಹಾರಾಡಲಿರೋದು ಭೂಗತ ಪಾರಿವಾಳ!

    ಬೆಂಗಳೂರು: ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರ ಈಗಾಗಲೇ ವಿಭಿನ್ನವಾಗಿರೋ ಪೋಸ್ಟರ್, ಟ್ರೈಲರ್‍ಗಳಿಂದಾಗಿ ಸಖತ್ ಸೌಂಡ್ ಮಾಡುತ್ತಿದೆ. ಫೆಬ್ರವರಿ ಒಂದರಂದು ತೆರೆ ಕಾಣುತ್ತಿರೋ ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿರೋ ಕುತೂಹಲ ಒಂದೆರಡಲ್ಲ. ಅದೆಲ್ಲದಕ್ಕೂ ಕಾರಣ ಪಾರಿವಾಳ!

    ಈವರೆಗೂ ಪಾರಿವಾಳಗಳನ್ನು ಸಿನಿಮಾಗಳಲ್ಲಿ ಬಳಸುವ ಪರಿಪಾಠ ನಡೆದುಕೊಂಡು ಬಂದಿದೆ. ಆದರೆ ಪಾರಿವಾಳಗಳೇ ಪ್ರಧಾನವಾಗಿರುವ, ಅದರ ಮೂಲಕವೇ ಕಥೆ ಬಿಚ್ಚಿಕೊಳ್ಳುವ ಸಿನಿಮಾಗಳು ಬಂದಿಲ್ಲ. ಈ ನಿಟ್ಟಿನಲ್ಲಿ ಬಜಾರ್ ಚಿತ್ರ ಮೈಲಿಗಲ್ಲಾಗಿ ದಾಖಲಾಗುತ್ತದೆ.

    ಬೆಂಗಳೂರಿನಂಥಾ ನಗರಗಳಲ್ಲಿ ಪಾರಿವಾಳಗಳ ರೇಸ್ ಆಗಾಗ ನಡೆಯುತ್ತಿರುತ್ತದೆ. ಈಗ ಮೋಜಿಗಷ್ಟೇ ಸೀಮಿತವಾಗಿರೋ ಈ ಆಟ ಒಂದು ಕಾಲದಲ್ಲಿ ರೌಡಿಸಂನ ಸೂತ್ರವಾಗಿತ್ತೆಂಬುದು ಅಚ್ಚರಿಯ ವಿಚಾರ. ಅಂಥಾ ಸೂಕ್ಷ್ಮ ಕಥೆಯನ್ನು ಕಲೆ ಹಾಕಿಯೇ ಸುನಿ ಈ ಚಿತ್ರವನ್ನು ರೂಪಿಸಿದ್ದಾರೆ. ನವ ನಾಯಕ ಧನ್ವೀರ್ ಇಲ್ಲಿ ವಿಭಿನ್ನವಾದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈ ಮೂಲಕವೇ ಅವರು ನಾಯಕನಾಗಿಯೂ ಅದ್ಧೂರಿ ಎಂಟ್ರಿ ಕೊಡುವ ಸನ್ನಾಹದಲ್ಲಿದ್ದಾರೆ.

    https://www.youtube.com/watch?v=m1gTKSLidMs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಜಾರ್: ಸಿಂಪಲ್ ಸುನಿಯ ಸಿನಿ ಜರ್ನಿ ಸಲೀಸಿನದ್ದಲ್ಲ!

    ಬಜಾರ್: ಸಿಂಪಲ್ ಸುನಿಯ ಸಿನಿ ಜರ್ನಿ ಸಲೀಸಿನದ್ದಲ್ಲ!

    ಸಿಂಪಲ್ಲಾಗೊಂದು ಲವ್ ಸ್ಟೋರಿ ಚಿತ್ರದ ಮೂಲಕವೇ ಸ್ಟಾರ್ ನಿರ್ದೇಶಕರಾಗಿ ಹೊರ ಹೊಮ್ಮಿದವರು ಸುನಿ. ಈ ಚಿತ್ರದ್ದು ಕನ್ನಡ ಚಿತ್ರರಂಗದಲ್ಲಿಯೇ ಅಚ್ಚರಿದಾಯಕವಾದ ಗೆಲುವು. ಒಂದು ಹೊಸ ತಂಡ, ಫ್ರೆಶ್ ಆದ ಕಥೆಯೊಂದಿಗೆ ಸುನಿ ಮಾಡಿದ್ದ ಮೋಡಿ ಸಣ್ಣದೇನಲ್ಲ. ಹೊರ ಜಗತ್ತಿನ ಪಾಲಿಗೆ ಸುನಿ ಸಿಂಪಲ್ಲಾಗೊಂದ್ ಲವ್ ಸ್ಟೋರಿ ಮೂಲಕ ಏಕಾಏಕಿ ಉದ್ಭವಿಸಿದ ಹುಡುಗ ಅನ್ನಿಸಿದ್ದರೂ ಇರಬಹುದು. ಆದರೆ, ಸುನಿ ಯುವ ನಿರ್ದೇಶಕ ಸಿಂಪಲ್ ಸುನಿ ಆಗಿದ್ದರ ಹಾದಿಯೇನೂ ಅಷ್ಟು ಸಲೀಸಿನದ್ದಲ್ಲ.

    ಹೆಸರಘಟ್ಟ ಸೀಮೆಯಲ್ಲಿಯೇ ಹುಟ್ಟಿ ಬೆಳೆದವರು ಸುನಿ. ಅವರ ತಂದೆ ಇನ್ಸ್ ಪೆಕ್ಟರ್ ಆಗಿದ್ದವರು. ಆದ್ದರಿಂದ ಸುನಿ ಪಾಲಿಗೆ ಮನೆಯ ವಾತಾವರಣದಲ್ಲಿ ಕಷ್ಟ ಗೊತ್ತಾಗಿಲ್ಲ. ಆದರೆ ಆ ಕಾಲದಲ್ಲಿಯೇ ಓದುವ, ಕಥೆ ಕವನ ಬರೆಗೋ ಗೀಳಿತ್ತಲ್ಲಾ? ಅದುವೇ ಸಿನಿಮಾ ಹುಚ್ಚು ಹತ್ತಿಸಿ ಸುನಿಯನ್ನು ಕಡು ಕಷ್ಟದ ಟ್ರ್ಯಾಕಿಗೆ ತಂದು ಬಿಟ್ಟಿತ್ತು.

    ಸಿನಿಮಾ ನಿರ್ದೇಶಕನಾಗೋ ಕನಸು ಹೊತ್ತು ಗಾಂಧಿನಗರದತ್ತ ಬಂದ ಸುನಿ ಕಷ್ಟದ ಹಾದಿ ಸವೆಸಿದ್ದಾರೆ. ಕೆಲ ನಿರ್ದೇಶಕರ ಬಳಿ ಅಸಿಸ್ಟೆಂಟ್ ಆಗಿದ್ದುಕೊಂಡು ವರ್ಷಾಂತರಗಳ ಕಾಲ ದುಡಿದಿದ್ದಾರೆ. ಆದರೆ ಏನೇ ಕಷ್ಟಗಳು ಬಂದರೂ ಎದೆಗುಂದದೆ ಮುಂದುವರೆದ ಪರಿಣಾಮವಾಗಿಯೇ ಅವರು ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ.

    ಸಿಂಪಲ್ ಆಗೊಂದ್ ಲವ್ ಸ್ಟೋರಿಯಿಂದ ಆರಂಭವಾದ ಅವರ ಪ್ರಯಾಣ ಬಜಾರ್ ವರೆಗೂ ಬಂದು ತಲುಪಿಕೊಂಡಿದೆ. ಆದರೆ ಬಜಾರ್ ಸುನಿಯ ಈ ಹಿಂದಿನ ಚಿತ್ರಗಳಿಗಿಂತಲೂ ಸಂಪೂರ್ಣ ಭಿನ್ನ. ಈ ಸಿನಿಮಾ ಈ ಪಾಟಿ ಸೆನ್ಸೇಷನ್ ಕ್ರಿಯೇಟ್ ಮಾಡಿರೋದೇ ಆ ಕಾರಣಕ್ಕಾಗಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಕ್ಷಿಗಳಿಗೆ ಎಲ್ಲಾ ಕಾಲದಲ್ಲೂ ಸಿಗುತ್ತೆ ಆಸರೆ- ಇದು ಬೀದರ್‍ನ ಮಸ್ಕಲ್ ಗ್ರಾಮಸ್ಥರ ಪಕ್ಷಿಪ್ರೇಮ

    ಪಕ್ಷಿಗಳಿಗೆ ಎಲ್ಲಾ ಕಾಲದಲ್ಲೂ ಸಿಗುತ್ತೆ ಆಸರೆ- ಇದು ಬೀದರ್‍ನ ಮಸ್ಕಲ್ ಗ್ರಾಮಸ್ಥರ ಪಕ್ಷಿಪ್ರೇಮ

    ಬೀದರ್: ಬೇಸಿಗೆ ಪ್ರಾರಂಭವಾಗಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಬಿಸಿಲು ದಾಖಲಾಗುತ್ತಿದೆ. ಜನರಿಗೇನೋ ಮಾತು ಬರುತ್ತೆ ಸಂಕಟ, ಸಮಸ್ಯೆಯನ್ನ ಹೇಳ್ಕೊಳ್ತಾರೆ. ಆದ್ರೆ ಪ್ರಾಣಿ-ಪಕ್ಷಿಗಳು ಏನು ಮಾಡ್ಬೇಕು? ಇಂಥ ಪಕ್ಷಿಗಳಿಗೆ ಬೀದರ್‍ನ ಮಸ್ಕಲ್ ಗ್ರಾಮಸ್ಥರು ಒಳ್ಳೇ ಐಡಿಯಾ ಮಾಡಿ ಆಶ್ರಯ ಕೊಟ್ಟಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಸ್ಕಲ್ ಗ್ರಾಮಸ್ಥರು ಪಕ್ಷಿಗಳಿಗೆ ಡಬ್ಬಗಳನ್ನು ನಿರ್ಮಾಣ ಮಾಡಿ ಆಶ್ರಯ ಕೊಟ್ಟಿದ್ದಾರೆ. ಗ್ರಾಮದ 2 ಕಡೆ 20ಕ್ಕೂ ಹೆಚ್ಚು ಡಬ್ಬಗಳನ್ನು ಕಟ್ಟಿದ್ದಾರೆ. ಅಷ್ಟೇ ಅಲ್ಲದೇ ಇವುಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನೂ ಮಾಡಿದ್ದಾರೆ.

    ಮನುಷ್ಯನ ಅತಿಯಾಸೆಯಿಂದ ಅವಸಾನವಾಗ್ತಿರೋ ಕಾಡಿನಿಂದಾಗಿ ಪಕ್ಷಿಗಳಿಗೂ ಆಸರೆಯಿಲ್ಲದಂತಾಗಿದೆ. ಆದ್ರೆ ಈ ಗ್ರಾಮಸ್ಥರು ಮಾತ್ರ ಮೂರು ಕಾಲದಲ್ಲೂ ಪಕ್ಷಿಗಳಿಗೆ ಅನ್ನಾಹಾರ ನೀಡ್ತಿದ್ದಾರೆ. ಈಗಿನ ಬೇಸಿಗೆಯಲ್ಲಂತೂ ಪಾರಿವಾಳ, ಗುಬ್ಬಚ್ಚಿಗಳು ಖುಷಿಯಾಗಿ ಗ್ರಾಮಸ್ಥರ ಆತಿಥ್ಯ ಸ್ವೀಕರಿಸುತ್ತಿವೆ.

    https://www.youtube.com/watch?v=4EH1zg-enwo