Tag: Doubt

  • ಹಲವು ಅನುಮಾನ ಮೂಡಿಸಿದ ನಟ ಆದಿತ್ಯ ಸಿಂಗ್ ರಜಪೂತ್ ಸಾವು

    ಹಲವು ಅನುಮಾನ ಮೂಡಿಸಿದ ನಟ ಆದಿತ್ಯ ಸಿಂಗ್ ರಜಪೂತ್ ಸಾವು

    ರಡು ದಿನಗಳ ಹಿಂದೆಯಷ್ಟೇ ನಟ (Actor), ಮಾಡೆಲ್, ಫೋಟೋಗ್ರಾಫರ್ ಆದಿತ್ಯ ಸಿಂಗ್ ರಜಪೂತ್ (Aditya Singh Rajput) (32) ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿರುವ (Mumbai Apartment) ತಮ್ಮ ಮನೆಯ ಬಾತ್‌ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದು ಸಹಜ ಸಾವಾ? ಅಥವಾ ಕೊಲೆಯಾ? ಎನ್ನುವ ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ಪೊಲೀಸರು ಅನುಮಾನ ವ್ಯಕ್ತ ಪಡಿಸಿದ್ದು, ಆದಿತ್ಯ ತಲೆಗೆ ಗಾಯವಾಗಿದೆ ಎಂದು ತಿಳಿಸಿದ್ದಾರೆ.

    ಆದಿತ್ಯ ಸಿಂಗ್ ರಜಪೂತ್ ಅವರ ತಲೆಯ ಮೇಲೆ ಗಾಯಗಳಿದ್ದು, ರಕ್ತಸ್ರಾವ ಆಗುವಷ್ಟು ಗಾಯಗಳು ಅವಲ್ಲ ಅಂದಿದ್ದಾರೆ. ಹಾಗಾಗಿ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಗಾಗಿಯೂ ಅಧಿಕಾರಿಗಳು ಕಾಯುತ್ತಿದ್ದಾರೆ. ಇದನ್ನೂ ಓದಿ:ಹೃದಯಾಘಾತದಿಂದ ಫೇಮಸ್ ನಟ ನಿತೇಶ್ ಪಾಂಡೆ ನಿಧನ

    ಮುಂಬೈನ ಅಂಧೇರಿಯ ಅಪಾರ್ಟ್‌ಮೆಂಟ್‌ನಲ್ಲಿ ಆದಿತ್ಯ ಸಿಂಗ್ ರಜಪೂತ್ ವಾಸಿಸುತ್ತಿದ್ದರು. ಬಾತ್‌ರೂಮ್‌ನಲ್ಲಿ ಬಿದ್ದಿದ್ದ ಆದಿತ್ಯ ಸಿಂಗ್ ರಜಪೂತ್ ಅವರನ್ನ ಸ್ನೇಹಿತರೊಬ್ಬರು ಹಾಗೂ ಅಪಾರ್ಟ್‌ಮೆಂಟ್‌ನ ವಾಚ್‌ಮ್ಯಾನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಆಸ್ಪತ್ರೆ ತಲುಪುವ ಮುನ್ನವೇ ಆದಿತ್ಯ ಸಿಂಗ್ ರಜಪೂತ್ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದರು.

    ಮುಂಬೈನಲ್ಲಿ ಕಾಸ್ಟಿಂಗ್ ಕೋ-ಆರ್ಡಿನೇಟರ್ ಆಗಿಯೂ ಕೆಲಸ ಮಾಡುತ್ತಿರುವ ಆದಿತ್ಯ ಸಿಂಗ್ ರಜಪೂತ್ ನಟ ಹಾಗೂ ಮಾಡೆಲ್ ಕೂಡ ಹೌದು. ಅಂಧೇರಿಯ ಅಪಾರ್ಟ್‌ಮೆಂಟ್‌ನಲ್ಲಿನ 11ನೇ ಮಹಡಿಯಲ್ಲಿ ಆದಿತ್ಯ ಸಿಂಗ್ ರಜಪೂತ್ ವಾಸಿಸುತ್ತಿದ್ದರು. ಮನೆಯ ಬಾತ್‌ರೂಮ್‌ನಲ್ಲಿ ಆದಿತ್ಯ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದರು. ವರದಿಗಳ ಪ್ರಕಾರ, ಡ್ರಗ್ಸ್ ಓವರ್‌ಡೋಸ್‌ನಿಂದಾಗಿ ಆದಿತ್ಯ ಸಿಂಗ್ ರಜಪೂತ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು.

  • 15 ಕೋಟಿ ವ್ಯವಹಾರವೇ ಖ್ಯಾತ ನಟ ಸತೀಶ್ ಕೌಶಿಕ್ ಸಾವಿಗೆ ಕಾರಣ

    15 ಕೋಟಿ ವ್ಯವಹಾರವೇ ಖ್ಯಾತ ನಟ ಸತೀಶ್ ಕೌಶಿಕ್ ಸಾವಿಗೆ ಕಾರಣ

    ಬಾಲಿವುಡ್ (Bollywood) ಖ್ಯಾತ ನಟ ಹಾಗೂ ನಿರ್ದೇಶಕ ಸತೀಶ್ ಕೌಶಿಕ್ (Satish Kaushik) ಸಾವು ಹೃದಯಾಘಾತದಿಂದ ಆಗಿದ್ದು ಎಂದು ಹೇಳಲಾಗಿತ್ತು, ಆದರೆ  ಈ ಸಾವಿಗೆ (Death) ಬೇರೆ ತಿರುವು ನೀಡಲಾಗುತ್ತಿದೆ. ಈ ಸಾವಿನ ಹಿಂದೆ 15 ಕೋಟಿ ರೂಪಾಯಿಗಳಿಗಾಗಿ ನಡೆದ ಕೊಲೆ ಎಂದು ದೂರು ದಾಖಲಾಗಿದೆ. ದೆಹಲಿ ಮೂಲದ ಉದ್ಯಮಿಯೊಬ್ಬರ ಪತ್ನಿಯು, ತನ್ನ ಪತಿ ಮೇಲೆಯೇ ಈ ಕೊಲೆಯ ಆರೋಪವನ್ನೂ ಮಾಡಿದ್ದಾರೆ. ಕಲೆ ಮಾತ್ರೆಗಳು ನೀಡಿ ಸತೀಶ್ ಅವರನ್ನು ಕೊಲ್ಲಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

    ದೆಹಲಿ ಪೊಲೀಸ್ ಕಮಿಷನರ್ ಗೆ ದೂರು ನೀಡಿರುವ ಆ ಮಹಿಳೆ, ಎರಡು ದಿನಗಳ ಹಿಂದೆ ನಡೆದ ಹೋಳಿ ಆಚರಣೆಗಾಗಿ ಸತೀಶ್ ಫಾರ್ಮ್ ಹೌಸ್ ಗೆ ಬಂದಿದ್ದರು. ಅಲ್ಲಿ ಔಷಧಿ ನೀಡಿ ಕೊಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಣದ ವ್ಯವಹಾರಕ್ಕಾಗಿ ಸತೀಶ್ ಮತ್ತು ತಮ್ಮ ಪತಿ ದೆಹಲಿ ಮತ್ತು ದುಬೈನಲ್ಲಿ ಭೇಟಿ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಸತೀಶ್ ಸಾವಿನ ಹಿಂದಿನ ದಿನ ಹೋಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಆ ಸ್ಥಳದಲ್ಲಿ ಔಷಧಿ ಸಿಕ್ಕಿದೆ ಎಂದು ಗೊತ್ತಾಗಿದೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಸತೀಶ್ ಸಾವಿನ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಹೋಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ಫಾರ್ಮ್ ಹೌಸ್ ಗೆ ಭೇಟಿ ನೀಡಿದ್ದರು. ಪಾರ್ಟಿ ನಡೆದ ಸ್ಥಳದಲ್ಲಿ ಕೆಲವು ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಸತೀಶ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೂ ಕಳುಹಿಸಿದ್ದರು ಎಂದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರಂತೆ.

    ಸತೀಶ್ ನಿಧನದ ಸುದ್ದಿಯನ್ನು ಖ್ಯಾತ ನಟ ಅನುಪಮ್ ಖೇರ್ ಟ್ವೀಟ್ ಮಾಡಿ, ಸಂತಾಪವನ್ನು ವ್ಯಕ್ತ ಪಡಿಸಿದ್ದರು. ಅವರೊಂದಿಗೆ ಕೆಲಸ ಮಾಡಿದ್ದನ್ನೂ ನೆನಪಿಸಿಕೊಂಡಿದ್ದರು. ಕಂಗನಾ ರಣಾವತ್ ನಿರ್ದೇಶನದ ಎಮರ್ಜೆನ್ಸಿ ಸಿನಿಮಾದಲ್ಲಿ ಸತೀಶ್ ನಟಿಸುತ್ತಿದ್ದರು. ಈ ಸಿನಿಮಾದಲ್ಲಿ ಅನುಪಮ್ ಖೇರ್ ಕೂಡ ಪ್ರಮುಖ ಪಾತ್ರಲ್ಲಿ ನಟಿಸಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಸತೀಶ್, ನಟನೆಯ ಜೊತೆಗೆ ನಿರ್ದೇಶನವನ್ನೂ ಮಾಡಿದ್ದರು. ಅಲ್ಲದೇ, ಖ್ಯಾತ ನಟರ ಜೊತೆ ತೆರೆಹಂಚಿಕೊಂಡಿದ್ದು ವಿಶೇಷ. ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಹಲವರು ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದ್ದರು. ಇದೀಗ ಸತೀಶ್ ಸಾವು ಅನುಮಾನಕ್ಕೆ ಕಾರಣವಾಗಿದೆ ಎಂದು ಸುದ್ದಿಯಾಗಿದೆ.

  • ಖ್ಯಾತ ನಟ ಸತೀಶ್ ಕೌಶಿಕ್ ಸಾವು: ತನಿಖೆ ಕೈಗೊಂಡ ಪೊಲೀಸ್

    ಖ್ಯಾತ ನಟ ಸತೀಶ್ ಕೌಶಿಕ್ ಸಾವು: ತನಿಖೆ ಕೈಗೊಂಡ ಪೊಲೀಸ್

    ಬಾಲಿವುಡ್ (Bollywood) ಖ್ಯಾತ ನಟ ಹಾಗೂ ನಿರ್ದೇಶಕ ಸತೀಶ್ ಕೌಶಿಕ್ (Satish Kaushik) ಮೊನ್ನೆಯಷ್ಟೇ ಹೃದಯಾಘಾತದಿಂದ ನಿಧನರಾಗಿದ್ದಾರೆ (Death). ಸತೀಶ್ ಗೆ ಎದೆನೋವು ಕಾಣಿಸಿಕೊಂಡಿತ್ತು. ಹಾಗಾಗಿ ತಕ್ಷಣವೇ ಅವರನ್ನು ದೆಹಲಿಯ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸತೀಶ್ ನಿಧನ ಹೊಂದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದರು. ಇದೀಗ ಈ ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದೆ. ಸತೀಶ್ ಸಾವಿನ ಹಿಂದಿನ ದಿನ ಹೋಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಆ ಸ್ಥಳದಲ್ಲಿ ಔಷಧಿ ಸಿಕ್ಕಿದೆ ಎಂದು ಗೊತ್ತಾಗಿದೆ.

    ಸತೀಶ್ ಸಾವಿನ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಹೋಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ಫಾರ್ಮ್ ಹೌಸ್ ಗೆ ಭೇಟಿ ನೀಡಿದ್ದರು. ಪಾರ್ಟಿ ನಡೆದ ಸ್ಥಳದಲ್ಲಿ ಕೆಲವು ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಸತೀಶ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೂ ಕಳುಹಿಸಿದ್ದರು ಎಂದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರಂತೆ. ಇದನ್ನೂ ಓದಿ: ಧ್ವನಿಯಿಂದ ಎದುರಿಸಿದ ಟೀಕೆ ಬಗ್ಗೆ ಬಾಯ್ಬಿಟ್ಟ ರಾಣಿ ಮುಖರ್ಜಿ

    ಸತೀಶ್ ನಿಧನದ ಸುದ್ದಿಯನ್ನು ಖ್ಯಾತ ನಟ ಅನುಪಮ್ ಖೇರ್ ಟ್ವೀಟ್ ಮಾಡಿ, ಸಂತಾಪವನ್ನು ವ್ಯಕ್ತ ಪಡಿಸಿದ್ದರು. ಅವರೊಂದಿಗೆ ಕೆಲಸ ಮಾಡಿದ್ದನ್ನೂ ನೆನಪಿಸಿಕೊಂಡಿದ್ದರು. ಕಂಗನಾ ರಣಾವತ್ ನಿರ್ದೇಶನದ ಎಮರ್ಜೆನ್ಸಿ ಸಿನಿಮಾದಲ್ಲಿ ಸತೀಶ್ ನಟಿಸುತ್ತಿದ್ದರು. ಈ ಸಿನಿಮಾದಲ್ಲಿ ಅನುಪಮ್ ಖೇರ್ ಕೂಡ ಪ್ರಮುಖ ಪಾತ್ರಲ್ಲಿ ನಟಿಸಿದ್ದಾರೆ.

    ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಸತೀಶ್, ನಟನೆಯ ಜೊತೆಗೆ ನಿರ್ದೇಶನವನ್ನೂ ಮಾಡಿದ್ದರು. ಅಲ್ಲದೇ, ಖ್ಯಾತ ನಟರ ಜೊತೆ ತೆರೆಹಂಚಿಕೊಂಡಿದ್ದು ವಿಶೇಷ. ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಹಲವರು ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದ್ದರು. ಇದೀಗ ಸತೀಶ್ ಸಾವು ಅನುಮಾನಕ್ಕೆ ಕಾರಣವಾಗಿದೆ ಎಂದು ಸುದ್ದಿಯಾಗಿದೆ.

  • ಮದುವೆಯಾದ 6 ತಿಂಗಳಿನಲ್ಲೇ ಪತ್ನಿಯ ಕತ್ತು ಹಿಸುಕಿ ಕೊಲೆ

    ಮದುವೆಯಾದ 6 ತಿಂಗಳಿನಲ್ಲೇ ಪತ್ನಿಯ ಕತ್ತು ಹಿಸುಕಿ ಕೊಲೆ

    ಹೈದರಾಬಾದ್: ಮದುವೆಯಾದ ಆರು ತಿಂಗಳಲ್ಲೇ ಹೆಂಡತಿ ಮೇಲೆ ಅನುಮಾನಪಟ್ಟು, ಅವಳನ್ನು ಕೊಲೆ ಮಾಡಿರುವ ಘಟನೆ ಹೈದರಾಬಾದ್‍ನ ಮೂಸಾಪೇಟೆಯಲ್ಲಿ ನಡೆದಿದೆ.

    ಪುಣ್ಯವತಿ(20) ಮೃತಳು, ಸಂತೋಷ್ ಕೊಲೆ ಮಾಡಿದ ಪತಿಯಾಗಿದ್ದಾನೆ. ಮದುವೆಯಾಗಿ ಆರು ತಿಂಗಳಲ್ಲೇ ಕಟ್ಟಿಕೊಂಡ ಹೆಂಡತಿ ಮೇಲೆ ಅನುಮಾನಪಟ್ಟು, ಅವಳನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಪತ್ನಿಯ ಶಿರಚ್ಛೇದ ಮಾಡಿ ಪೊಲೀಸ್ ಠಾಣೆಗೆ ಹೊತ್ತೊಯ್ದ

    ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯವನಾದ ಸಂತೋಷ್, ಬಾಲ್ಯದಿಂದಲೂ ಪೋಷಕರೊಂದಿಗೆ ಹೈದರಾಬಾದ್‍ನ ಮುಸಾಪೇಟೆಯಲ್ಲಿ ವಾಸವಾಗಿದ್ದನು. ವೆಲ್ಡಿಂಗ್‍ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದನು. ಕಳೆದ ಮೇ ತಿಂಗಳಲ್ಲಿ ಸ್ಥಳೀಯ ನಿವಾಸಿ ಪುಣ್ಯವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ. ಇದರ ಬೆನ್ನಲ್ಲೇ ಹೆಂಡತಿ ಜೊತೆ ಬೇರೆ ಮನೆ ಮಾಡಿಕೊಂಡು ವಾಸ ಮಾಡಲು ಶುರು ಮಾಡಿದ್ದನು. ಇದನ್ನೂ ಓದಿ: ಓಮಿಕ್ರಾನ್‌ ಸೋಂಕಿತನ ಪತ್ನಿ, ಬಾಮೈದುನನಿಗೂ ಸೋಂಕು- ಗುಜರಾತ್‌ನಲ್ಲಿ 3ಕ್ಕೇರಿದ ಸಂಖ್ಯೆ

    ಕೆಲ ತಿಂಗಳು ಕಳೆದ ಮೇಲೆ ಪುಣ್ಯವತಿ ಮೇಲೆ ಅನುಮಾನಪಡಲು ಶುರು ಮಾಡಿದ್ದ. ಕುಟುಂಬದ ಸದಸ್ಯರು ಸೇರಿದಂತೆ ಯಾರೊಂದಿಗೂ ಫೋನ್‍ನಲ್ಲಿ ಮಾತನಾಡದಂತೆ ತಿಳಿಸಿದ್ದನು. ಈ ವಿಚಾರವಾಗಿ ಮಾನಸಿಕವಾಗಿ ನೊಂದಿದ್ದ ಪುಣ್ಯವತಿ ತಮ್ಮ ಚಿಕ್ಕಪ್ಪ, ಚಿಕ್ಕಮ್ಮನ ಬಳಿ ಹೇಳಿಕೊಂಡಿದ್ದಳು. ಈ ವೇಳೆ, ಎರಡು ಕುಟುಂಬದವರು ಮಧ್ಯಪ್ರವೇಶ ಮಾಡಿ, ರಾಜಿ ಮಾಡಿಸಿ, ಸಂತೋಷ್‍ಗೆ ಬುದ್ಧಿವಾದ ಹೇಳಿದ್ದರು. ಇದಾದ ಬಳಿಕ ಕೆಲ ದಿನಗಳ ಕಾಲ ಚೆನ್ನಾಗಿದ್ದ ಆತ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದ್ದ. ಜೊತೆಗೆ ಮದ್ಯಪಾನ ಮಾಡಲು ಶುರು ಮಾಡಿ, ಪತ್ನಿ ಜೊತೆ ಜಗಳ ಮಾಡಲು ಆರಂಭಿಸಿದ್ದ.

    ಕಿರುಕುಳ ನೀಡಲು ಶುರು ಮಾಡಿರುವ ಸಂತೋಷ್ ನಿನ್ನೆ ಹೆಂಡತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ತುಂಬಾ ಸಮಯವಾದರೂ ಮನೆಯ ಬೀಗ ಹಾಕಿದ್ದ ಕಾರಣ ಸ್ಥಳೀಯರು ಎರಡು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದು ನೋಡಿದಾಗ ಪುಣ್ಯವತಿ ಕೊಲೆಯಾಗಿದ್ದಳು. ಘಟನಾ ಸ್ಥಳಕ್ಕೆ ಕುಕ್ಕಟ್‍ಪಲ್ಲಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಆರೋಪಿ ಸಂತೋಷ್ ಸ್ಥಳದಿಂದ ಪರಾರಿಯಾಗಿದ್ದಾನೆ.

  • ಪಕ್ಕದೂರಿನ ಅಸಾಮಿ ಕಲ್ಲು ಎಸೆದಿದ್ದರಿಂದ ಕೆರೆ ನೀರನ್ನೇ ಖಾಲಿ ಮಾಡಿದ ಗ್ರಾಮಸ್ಥರು!

    ಪಕ್ಕದೂರಿನ ಅಸಾಮಿ ಕಲ್ಲು ಎಸೆದಿದ್ದರಿಂದ ಕೆರೆ ನೀರನ್ನೇ ಖಾಲಿ ಮಾಡಿದ ಗ್ರಾಮಸ್ಥರು!

    ರಾಯಚೂರು: ಅನುಮಾನಕ್ಕಿಂತ ದೊಡ್ಡ ರೋಗವಿಲ್ಲ ಅಂತಾರೆ, ನಿಜ ಇಂತಹದ್ದೇ ಅನುಮಾನದಿಂದ ರಾಯಚೂರಿನ ಸಿರವಾರ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ಗ್ರಾಮಸ್ಥರು ಕೆರೆಯಲ್ಲಿದ್ದ ಕುಡಿಯುವ ನೀರಿನ್ನೇ ಖಾಲಿಮಾಡಿ ಈಗ ಪರದಾಡುತ್ತಿದ್ದಾರೆ. ಪಕ್ಕದ ಅತ್ತನೂರು ಗ್ರಾಮದ ವ್ಯಕ್ತಿಯೋರ್ವ ಕೆರೆಗೆ ಏನನ್ನೋ ಎಸೆದ ಎಂಬ ಕಾರಣಕ್ಕೆ ಅವನು ಏನೋ ಕೆಟ್ಟದ್ದನ್ನೇ ಎಸೆದಿದ್ದಾನೆ ಎಂದು ಕೆರೆಯ ನೀರನ್ನೇ ಖಾಲಿಮಾಡಿದ್ದಾರೆ.

    ಕೊರೊನಾ ವೈರಸ್ ಆತಂಕ ಕೂಡ ಜನರನ್ನು ಕಾಡಿದೆ. ಕೆರೆಗೆ ಕಲ್ಲಿನ ರೂಪದ ವಸ್ತುವನ್ನ ಎಸೆದ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರಿಂದ ಗ್ರಾಮಸ್ಥರ ಅನುಮಾನ ಬಲವಾಗಿದೆ. ಆದರೆ ಮರುದಿನ ಗ್ರಾಮಸ್ಥರು ಹಾಗೂ ಸಿರವಾರ ಠಾಣೆ ಪೊಲೀಸರ ಸಮ್ಮುಖದಲ್ಲಿ ಆ ವ್ಯಕ್ತಿ ಕೆರೆಯ ನೀರನ್ನು ಸ್ವತಃ ಕುಡಿದು, ನನ್ನಿಂದ ತಪ್ಪಾಗಿಲ್ಲ ಕೇವಲ ಕಲ್ಲನ್ನ ಎಸೆದಿದ್ದೆ ಎಂದು ಸ್ಪಷ್ಟಪಡಿಸಿದ್ದಾನೆ. ಆದರೆ ಗ್ರಾಮಸ್ಥರಲ್ಲಿ ಅನುಮಾನ ಕಡಿಮೆಯಾಗದ ಹಿನ್ನೆಲೆ ಕೆರೆ ನೀರನ್ನು ಪಂಪ್ ಸೆಟ್ ನಿಂದ ಖಾಲಿಮಾಡಲಾಗಿದೆ.

    ಕೆರೆಯ ಬಳಿಯ ಶುದ್ಧಕುಡಿಯುವ ನೀರಿನ ಘಟಕದಲ್ಲಿ ನೀರು ಕೇಳಿದ್ದಕ್ಕೆ, ಘಟಕದ ಸಿಬ್ಬಂದಿ ಹಣ ಕೇಳಿದ್ದಾರೆ. ಇದೇ ಗ್ರಾಮದ ಪಂಚಾಯ್ತಿಯಲ್ಲಿ ಲೈನ್ ಮ್ಯಾನ್ ಆಗಿ ಈ ಹಿಂದೆ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಹಣಕೊಟ್ಟು ನೀರು ಪಡೆಯದೇ ಕೆರೆಯ ನೀರನ್ನು ಕುಡಿದು ಕೆರೆಗೆ ಕಲ್ಲು ಎಸೆದಿದ್ದಾನೆ. ಇದನ್ನು ಗಮನಿಸಿದ ಗ್ರಾಮಸ್ಥರು ಏನೋ ವಿಷಕಾರಿ ವಸ್ತುವನ್ನ ಎಸೆದಿದ್ದಾನೆ ಎಂದು ಅನುಮಾನಗೊಂಡಿದ್ದಾರೆ ಎನ್ನಲಾಗಿದೆ.

    ಕೆರೆಯಲ್ಲಿ ನೀರು ಖಾಲಿಯಾಗಿದ್ದರಿಂದ ಈಗ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಆದಷ್ಟು ಬೇಗ ಕೆರೆಯನ್ನ ತುಂಬಿಸುವುದಾಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

  • ರಹಸ್ಯ ಸ್ಥಳಕ್ಕೆ ತೆರೆಳಿದ್ರಾ ರಮೇಶ್ ಜಾರಕಿಹೊಳಿ..?

    ರಹಸ್ಯ ಸ್ಥಳಕ್ಕೆ ತೆರೆಳಿದ್ರಾ ರಮೇಶ್ ಜಾರಕಿಹೊಳಿ..?

    ಬೆಳಗಾವಿ: ಸಂಪುಟ ವಿಸ್ತರಣೆಯಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟ ಹಿನ್ನೆಲೆಯಲ್ಲಿ ಯಾರ ಕೈಗೂ ಸಿಗದೆ ಅವರು ಸೈಲೆಂಟ್ ಆಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಬೆಳ್ಳಂಬೆಳಗ್ಗೆಯೇ ಮನೆಯಿಂದ ಹೊರಟ ರಮೇಶ್ ಜಾರಕಿಹೊಳಿ, ಈವರೆಗೂ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡು ಫೋನ್ ಸಂಪರ್ಕಕ್ಕೂ ಸಿಗದೆ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಈ ನಡೆ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಯಾರ ಕೈಗೂ ಸಿಗದೆ ಫೋನ್ ಸಂಪರ್ಕಕ್ಕೂ ಸಿಗದ ರಮೇಶ್ ಜಾರಕಿಹೊಳಿ ಬೇರೆ ಏನಾದರೂ ಕಾರ್ಯ ತಂತ್ರ ಮಾಡುತ್ತಿದ್ದಾರಾ ಅಂತ ಅನುಮಾನ ಎದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಹಾಗೂ ರಮೇಶ್ ಜಾರಕಿಹೊಳಿ ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಆದ್ರೆ ಈಗ ರಮೇಶ್ ಜಾರಕಿಹೊಳಿ ಅವರ ಫೋನ್ ಸ್ವಿಚ್ ಆಫ್ ಆಗಿರುವುದು ಹಲವಾರು ಅನುಮಾನ ಸೃಷ್ಟಿಸಿದೆ. ಅವರು ವಿಮಾನದಲ್ಲಿ ಪ್ರಯಾಣಿಸಿದ್ರಾ? ಇಲ್ಲಾ ಮನ ಬದಲಾಯಿಸಿಕೊಂಡು ವಾಪಸ್ ಹೋದ್ರಾ? ಎಲ್ಲ ಪಕ್ಷವನ್ನು ಬಿಡುವ ನಿರ್ಧಾರ ಮಾಡಿದ್ದಾರಾ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.

    ಮಾಧ್ಯಮಗಳಿಂದ ದೂರ ಉಳಿಯಲು ರಮೇಶ್ ಜಾರಕಿಹೊಳಿಗೆ ಆಪ್ತರು ಸೂಚಿಸಿದ್ದಾರೆ. ಸದ್ಯ ಗೋಕಾಕ್‍ನಲ್ಲಿರುವ ಮನೆಯಲ್ಲೂ ಇಲ್ಲದೆ ಯಾರ ಕೈಗೂ ಅವರು ಸಿಗುತ್ತಿಲ್ಲ. ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅವರು ಬೇಸರಗೊಂಡು ಈ ರೀತಿ ಯಾರ ಕಣ್ಮುಂದೆಯೂ ಬರದೆ ಕಣ್ಮರೆಯಾಗಿದ್ದಾರಾ ಎನ್ನುವ ಚರ್ಚೆಗಳು ರಾಜಕೀಯ ವಲಯದಿಂದ ಕೇಳಿಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇವಿಎಂಗಳ ಮೇಲೆ ಅನುಮಾನ ಮೂಡುತ್ತಿದೆ – ತೆಲಂಗಾಣ ಕೈ ಮುಖಂಡ

    ಇವಿಎಂಗಳ ಮೇಲೆ ಅನುಮಾನ ಮೂಡುತ್ತಿದೆ – ತೆಲಂಗಾಣ ಕೈ ಮುಖಂಡ

    ಹೈದರಾಬಾದ್: ತೆಲಂಗಾಣದಲ್ಲಿ ಭರ್ಜರಿಯಾಗಿ ಟಿಆರ್‍ಎಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದ ಬೆನ್ನಲ್ಲೆ ಇಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳ ಮೇಲೆಯೇ ಅನುಮಾನ ಮೂಡುತ್ತಿದೆ ಎಂದು ಕಾಂಗ್ರೆಸ್ ಸಮಿತಿ ವಕ್ತಾರ ಉತ್ತಮ್ ಕುಮಾರ್ ರೆಡ್ಡಿ ಶಂಕೆ ವ್ಯಕ್ತಪಡಿಸಿದ್ದಾರೆ.

    ತೆಲಂಗಾಣದಲ್ಲಿ ಟಿಆರ್‍ಎಸ್ ನಾಗಲೋಟ ಕುರಿತು ಪ್ರತಿಕ್ರಿಯಿಸಿರುವ ಅವರು, ಇಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್ ಗಳ ಮೇಲೆ ನಮಗೆ ಅನುಮಾನವಿದೆ. ವಿವಿ ಪ್ಯಾಟ್ ಗಳಲ್ಲಿ ನಮೂದಾಗಿರುವ ದಾಖಲೆಗಳನ್ನು ಸಹ ಪರಿಶೀಲನೆ ನಡೆಸಬೇಕು. ಇವಿಎಂ ಹ್ಯಾಕ್ ಮಾಡಿರುವ ಗುಮಾನಿಯಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಚುನಾವಣಾ ನಿಯಂತ್ರಣಾಧಿಕಾರಿಗಳಿಗೆ ದೂರನ್ನು ನೀಡುತ್ತಾರೆಂದು ಹೇಳಿದ್ದಾರೆ.

    ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಟಿಆರ್‍ಎಸ್ ನಾಯಕರು ಯಾವ ಕ್ಷೇತ್ರಗಳಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ ಎಂಬುದು ಹೇಳಲು ಹೇಗೆ ಸಾಧ್ಯ. ಈ ಬಗ್ಗೆ ಭಾರತೀಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ದಾಖಲಿಸುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ತೆಲಂಗಾಣದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‍ಎಸ್) ನಿರೀಕ್ಷೆಯಂತೆ ಅಧಿಕಾರಕ್ಕೆ ಏರುವುದು ಖಚಿತವಾಗಿದೆ. ಹಾಲಿ ಅಧಿಕಾರದಲ್ಲಿರುವ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‍ಎಸ್ ಮತ್ತೆ ಅಧಿಕಾರ ಉಳಿಸಿಕೊಳ್ಳುತ್ತದೆ ಎಂದಿದ್ದ ಚುನಾವಣೋತ್ತರ ಸಮೀಕ್ಷೆ ನಿಜವಾಗಿದೆ.ಸದ್ಯದ ಮಾಹಿತಿಗಳ ಪ್ರಕಾರ ಟಿಆರ್‍ಎಸ್ 90 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

     

    ಕಾಂಗ್ರೆಸ್ ಹಾಗೂ ಟಿಡಿಪಿ ಮೈತ್ರಿ ಕೂಟ 20 ಸ್ಥಾನಗಳಲ್ಲಿ ಮಾತ್ರವೇ ಮುನ್ನಡೆ ಸಾಧಿಸಿದೆ. ಇನ್ನು ಬಿಜೆಪಿ 02 ಕ್ಷೇತ್ರ ಹಾಗೂ ಎಐಎಂಎಂ 06 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಇದನ್ನೂ ಓದಿ: ನಿರೀಕ್ಷೆಯಂತೆ ತೆಲಂಗಾಣದಲ್ಲಿ ಕೆಸಿಆರ್ ಅಧಿಕಾರಕ್ಕೆ – ಟಿಆರ್‏ಎಸ್ ಜಯಕ್ಕೆ ಕಾರಣ ಏನು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಾನು ಮಲಗಿರೋವಾಗ ಏನಾದ್ರೂ ಮಾಡಬಹುದೆಂಬ ಭಯವಿದೆ ಅಂದಿದ್ದರು ಶ್ರೀಗಳು- ಸಂತೋಷ್ ಗುರೂಜಿ

    ನಾನು ಮಲಗಿರೋವಾಗ ಏನಾದ್ರೂ ಮಾಡಬಹುದೆಂಬ ಭಯವಿದೆ ಅಂದಿದ್ದರು ಶ್ರೀಗಳು- ಸಂತೋಷ್ ಗುರೂಜಿ

    ಉಡುಪಿ: ಕಳೆದ ಎರಡು ತಿಂಗಳಿಂದ ನನಗೆ ಇಲ್ಲಿ ಊಟ ಮಾಡುವುದಕ್ಕೂ ಭಯವಾಗುತ್ತಿದೆ ಎಂದು ಶಿರೂರು ಹೇಳಿಕೊಂಡಿದ್ದರು ಅಂತ ಬಾರ್ಕೂರು ಮಠಾಧೀಶದ ಸಂಸ್ಥಾಪಕ ಸಂತೋಷ್ ಗುರೂಜಿ ಹೇಳಿದ್ದಾರೆ.

    ಶಿರೂರು ಮಠದ ಸ್ವಾಮೀಜಿಗಳು ಇಂದು ಬೆಳಗ್ಗೆ ಕೆಎಂಸಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು, ಈ ಸಂಬಂಧ ಸಂತೋಷ್ ಗುರೂಜಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ರು. ಊಟ ಮಾಡುವುದಕ್ಕೂ ಭಯವಾಗುತ್ತಿದೆ ಅಂತ ಶ್ರೀಗಳ ಹೇಳಿಕೆಯಿಂದ ನನಗೆ ಆತಂಕವಾಗಿತ್ತು. ಆದ್ರೆ ನನ್ನ ವೈಯಕ್ತಿಕ ಕಾರಣದಿಂದ ಅವರು ಒಂದು ವಾರದಿಂದ ನನ್ನ ಜೊತೆ ಮಾತನಾಡಲಿಲ್ಲ ಅಂದ್ರು.

    ಒಬ್ಬರೇ ಓಡಾಡಬೇಡಿ ಯಾರಾದರೂ ನಾಲ್ಕು ಜನರನ್ನು ನಿಮ್ಮ ಜೊತೆ ಇರಿಸಿಕೊಳ್ಳಿ ಎಂದು ನಾನು ಅವರಿಗೆ ಹೇಳಿದ್ದೆ. ಆಗ ಅವರು ನನ್ನ ಎದುರಿಗೆ ಬಂದು ಯಾರು ಏನು ಮಾಡಲು ಸಾಧ್ಯವಿಲ್ಲ. ಆದರೆ ನನ್ನ ಆಹಾರದಲ್ಲಿ ಅಥವಾ ನಾನು ಮಲಗಿರುವಾಗ ಏನಾದರೂ ಮಾಡಬಹುದು ಎಂಬ ಭಯವಿದೆ ಎಂದು ಹೇಳಿದ್ದರು ಅಂತ ಗೂರೂಜಿ ಹೇಳಿದ್ರು.

    ನಾಲ್ಕು ತಿಂಗಳ ಹಿಂದೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ನಂತರ ಎರಡು ತಿಂಗಳಿಂದ ಅದಕ್ಕೆ ರಕ್ಕೆಪುಕ್ಕಗಳೆಲ್ಲವೂ ಸೇರಿಕೊಂಡಿತ್ತು. ಬಳಿಕ ಶಿರೂರು ನೀಡಿದ ಹೇಳಿಕೆಗಳು ಮಾಧ್ಯಮದಲ್ಲಿ ಬಂತು. ಇದರಿಂದ ಅವರು ತೀವ್ರ ವಿರೋಧವನ್ನು ಕಾಣಬೇಕಾಯಿತ್ತು. ಶಿರೂರು ಸ್ವಾಮಿಜಿ ಅವರು ಕಂಡಿದ್ದನ್ನ ಹಾಗೇ ಹೇಳುತ್ತಾರೆ. ಯಾವುದನ್ನು ವಿರೋಧಿಸಬೇಕೋ ಅದನ್ನು ವಿರೋಧಿಸುತ್ತಾರೆ. ಅವರು ಕಂಡಿದನ್ನು ಬಿಡುವುದಿಲ್ಲ. ಸಾಮಾಜಿಕ ಕಾಂತ್ರಿಯಲ್ಲೂ ಕೂಡ ಇವರು ವಿರೋಧವನ್ನು ಕಂಡಿದ್ದರು. ಅವರ ಮಠದಲ್ಲಿ ಎಲ್ಲ ಜಾತಿಯ ಜನರಿಗೆ ನೇರ ಪ್ರವೇಶವಿದೆ ಅಂದ್ರು.

    ಶ್ರೀಗಳ ಜೊತೆ ನನ್ನ ಹತ್ತಿರದ ಒಡನಾಟವಿತ್ತು. ಶಿರೂರು ಮಠಕ್ಕೂ ಹಾಗೂ ನಮ್ಮ ಬಾರ್ಕೂರು ಮಠಕ್ಕೂ ಆತ್ಮೀಯ ಸಂಬಂಧವಿತ್ತು. ನನ್ನ ಪಟ್ಟಾಭಿಷೇಕದಿಂದ ಮೊನ್ನೆವರೆಗೂ ನಮ್ಮಿಬ್ಬರ ನಡುವೆ ಆತ್ಮೀಯ ಬಾಂಧವ್ಯವಿತ್ತು ಅಂತ ಹೇಳಿದ್ರು.

  • ಶೀಲ ಶಂಕಿಸಿ ಪತ್ನಿಯ ಮುಖಕ್ಕೆ ಆಸಿಡ್ ಎರಚಿದ ಪಾಪಿ ಪತಿ

    ಶೀಲ ಶಂಕಿಸಿ ಪತ್ನಿಯ ಮುಖಕ್ಕೆ ಆಸಿಡ್ ಎರಚಿದ ಪಾಪಿ ಪತಿ

    ಜೈಪುರ್: ಪತ್ನಿಯ ಶೀಲದ ಮೇಲೆ ಸಂಶಯ ಪಟ್ಟು ಆಕೆಯ ಮೇಲೆ ಆಸಿಡ್ ಎರಚಿದ ಘಟನೆ ಶನಿವಾರ ಸಂಜೆ ರಾಜಸ್ಥಾನದ ಜೈಪುರ್ ಜಿಲ್ಲೆಯ ಮಾಲಾಪದದಲ್ಲಿ ನಡೆದಿದೆ.

    ಭಾಗಿರಥಿ ಮಹಾಲಿಕ್ (45) ಪತ್ನಿಗೆ ಆಸಿಡ್ ಹಾಕಿದ ಆರೋಪಿ ಪತಿ. ಆಸಿಡ್ ದಾಳಿಯಿಂದ 40 ವರ್ಷದ ಮಹಿಳೆಯ ಮುಖ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಮಹಿಳೆ ಆಸಿಡ್ ದಾಳಿಯಿಂದ ಬಳಲುತ್ತಿದ್ದಾಗ ಅಕ್ಕಪಕ್ಕದ ಮನೆಯವರು ರಕ್ಷಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ನನ್ನ ತಂದೆ, ತಾಯಿಯ ಶೀಲದ ಮೇಲೆ ಯಾವಾಗಲೂ ಸಂಶಯಪಡುತ್ತಿದ್ದನು. ಮನೆಗೆ ಬಂದ ತಕ್ಷಣ ನನ್ನ ತಾಯಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದನು ಎಂದು 20 ವರ್ಷದ ಮಗಳೇ ತಂದೆಯ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ಈ ಘಟನೆ ಶನಿವಾರ ನಡೆದಿದ್ದು, ಮನೆಗೆ ಬಂದ ತಕ್ಷಣ ಭಾಗಿರಥಿ ತನ್ನ ಹೆಂಡತಿಯ ಜೊತೆ ಜಗಳವಾಡಿ ಆಕೆಯ ಮೇಲೆ ಆಸಿಡ್ ಎರಚಿದ್ದಾನೆ. ಭಾನುವಾರ ಪೊಲೀಸರು ಭಾಗಿರಥಿಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಭಾಗಿರಥಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಆತನ ಜಾಮೀನು ಅರ್ಜಿಯನ್ನು ಕೂಡ ತಿರಸ್ಕರಿಸಿದೆ ಎಂದು ಜೈಪುರ್ ನ ಉಪ-ವಿಭಾಗದ ಪೊಲೀಸ್ ಅಧಿಕಾರಿಯಾದ ಪ್ರಶಾಂತ್ ಕುಮಾರ್ ಮಾಲಾ ತಿಳಿಸಿದ್ದಾರೆ.