Tag: double decker bus

  • Uttar Pradesh| ಟ್ರಕ್‌ಗೆ ಹಿಂಬದಿಯಿಂದ ಡಬಲ್ ಡೆಕ್ಕರ್ ಬಸ್ ಡಿಕ್ಕಿ – ಐವರು ಸಾವು, 15 ಮಂದಿಗೆ ಗಾಯ

    Uttar Pradesh| ಟ್ರಕ್‌ಗೆ ಹಿಂಬದಿಯಿಂದ ಡಬಲ್ ಡೆಕ್ಕರ್ ಬಸ್ ಡಿಕ್ಕಿ – ಐವರು ಸಾವು, 15 ಮಂದಿಗೆ ಗಾಯ

    ಲಕ್ನೋ: ಟ್ರಕ್‌ಗೆ (Truck) ಹಿಂಬದಿಯಿಂದ ಡಬಲ್ ಡೆಕ್ಕರ್ ಬಸ್ (Double Decker Bus) ಡಿಕ್ಕಿ ಹೊಡೆದ ಪರಿಣಾಮ 5 ತಿಂಗಳ ಮಗು ಸೇರಿ ಐವರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಅಲಿಘರ್‌ನ (Aligarh) ಯಮುನಾ ಎಕ್ಸ್‌ಪ್ರೆಸ್‌ ವೇಯಲ್ಲಿ (Yamuna Expressway) ನಡೆದಿದೆ.

    ದೆಹಲಿಯಿಂದ ಅಜಂಗಢಕ್ಕೆ ತೆರಳುತ್ತಿದ್ದ ಬಸ್ ಹಿಂಬದಿಯಿಂದ ಟ್ರಕ್‌ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಗುದ್ದಿದ ರಭಸಕ್ಕೆ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತದೇಹ ಹಾಗೂ ಪ್ರಯಾಣಿಕರು ಬಸ್ ಒಳಗೆ ಸಿಲುಕಿಕೊಂಡಿದ್ದಾರೆ. ಅಪಘಾತದಲ್ಲಿ 11 ತಿಂಗಳ ಹೆಣ್ಣು ಮಗು, ಐದು ವರ್ಷದ ಮಗು, ಮೂವರು ಮಹಿಳೆಯರು ಮತ್ತು ಒಂಬತ್ತು ಪುರುಷರು ಸೇರಿದಂತೆ 15 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: PUBLiC TV Impact| ಸರ್ಕಾರಕ್ಕೆ ರೇಷನ್ ಕಾರ್ಡ್ ಪರಿಷ್ಕರಣೆ ವರದಿ ಸಲ್ಲಿಕೆ: ರದ್ದಿಗೆ ಮಾನದಂಡ ಏನು?

    ಸ್ಥಳೀಯರು ಬಸ್ಸಿನ ಗಾಜುಗಳನ್ನು ಒಡೆದು ಗಾಯಾಳುಗಳನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜೇವರ್‌ನ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಲಾಗಿದೆ. ಮೃತರ ಪೈಕಿ ಮೂರು ಶವಗಳ ಗುರುತು ಪತ್ತೆ ಹಚ್ಚಿದ್ದು, ಇಬ್ಬರ ಗುರುತು ಪತ್ತೆಯಾಗಿಲ್ಲ. ಇದನ್ನೂ ಓದಿ: 6 ತಿಂಗಳಿನಿಂದ ಸಿಕ್ಕಿಲ್ಲ ವೇತನ – ಹಲವು ಇಂದಿರಾ ಕ್ಯಾಂಟೀನ್‌ಗಳಿಗೆ ಬಿತ್ತು ಬೀಗ!

    ಬಸ್ ಫೈಜಾಬಾದ್ ಮೂಲದ ಟ್ರಾವೆಲ್ಸ್ ಕಂಪನಿಗೆ ಸೇರಿದೆ. ತಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಮತ್ತೆ ಕೋಟ್ಯಧೀಶನಾದ ಮಲೆ ಮಾದಪ್ಪ – 2.43 ಕೋಟಿ ರೂ. ಕಾಣಿಕೆ ಹಣ ಸಂಗ್ರಹ

  • ಡಬ್ಬಲ್ ಡೆಕ್ಕರ್ ಬಸ್‌ನಲ್ಲಿ ದಸರಾ ಕಣ್ತುಂಬಿಕೊಳ್ಳಿ

    ಡಬ್ಬಲ್ ಡೆಕ್ಕರ್ ಬಸ್‌ನಲ್ಲಿ ದಸರಾ ಕಣ್ತುಂಬಿಕೊಳ್ಳಿ

    ಬೆಂಗಳೂರು: ನಾಡಹಬ್ಬ ದಸರಾಗೆ (Dasara) ದಿನಗಣನೆ ಆರಂಭವಾಗಿದ್ದು,ಕರ್ನಾಟಕ ರಾಜ್ಯ ಅಭಿವೃದ್ಧಿ ಪ್ರವಾಸೋದ್ಯಮ ನಿಗಮದಿಂದ(KSTDC) ಮೈಸೂರಿಗೆ  ಆಗಮಿಸಿದ ಪ್ರವಾಸಿಗರಿಗೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ.

    ಈ ಬಾರಿಯ ದಸರಾದಲ್ಲಿ ಗತಕಾಲದ ಡಬ್ಬಲ್ ಡೆಕ್ಕರ್ (Double Decker) ಬಸ್‌ ವೈಭವ ಮರುಕಳಿಸಲಿದೆ. ಪ್ರವಾಸಿಗರು ಡಬ್ಬಲ್ ಡೆಕ್ಕರ್ ಬಸ್ ನಲ್ಲಿ ಕುಳಿತು ಮೈಸೂರಿನ (Mysuru) ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಪ್ರವಾಸಿಗರು ಬಸ್‌ ಮೇಲ್ಬಾಗದಲ್ಲಿ ಕುಳಿತು ಮೈಸೂರನ್ನು ಸೆರೆಹಿಡಿಯಬಹುದಾಗಿದೆ. ಈ ಬಸ್ ಹಳೆ ಡಿಸಿ ಕಚೇರಿ, ಕ್ರಾಫರ್ಡ್ ಹಾಲ್, ಓರಿಯೆಂಟಲ್ ಸೆಂಟ್ರಲ್ ಲೈಬ್ರರಿ, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲೆ, ಅರಮನೆ ದಕ್ಷಿಣ ದ್ವಾರ, ಜಯಮಾರ್ತಾಂಡ ಸರ್ಕಲ್ ಗೇಟ್, ಹಾರ್ಡಿಂಜ್ ಸರ್ಕಲ್, ಕೆಆರ್ ಸರ್ಕಲ್ , ಸೈಯಾಜಿರಾವ್ ವೃತ್ತ, ಆರ್ಯುವೇದ ವೈದ್ಯಕೀಯ ಕಾಲೇಜುವರೆಗೆ ರೌಂಡ್ ಹಾಕಲಿದೆ.

    ಒಬ್ಬರಿಗೆ ಟಿಕೆಟ್ ದರ 250 ರೂ. (ಕೆಳಗಡೆ ಸೀಟ್) ಹಾಗೂ ಮೇಲ್ಬಾಗದ ಸೀಟ್‌ಗೆ ಒಬ್ಬರಿಗೆ 500 ರೂಪಾಯಿಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಚೇರ್ ಮನ್ ಶ್ರೀನಿವಾಸ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಇದರ ಜೊತೆಗೆ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಸ್ಪೆಷಲ್‌ ಪ್ಯಾಕೆಜ್‌ ವ್ಯವಸ್ಥೆ ಮಾಡಲಾಗಿದೆ. ಮೈಸೂರಿನಿಂದ ವಿವಿಧ ಸ್ಥಳಗಳಿಗೆ ದಿನಗಳ ಆಧಾರದ ಮೇಲೆ ಟೂರ್ ಪ್ಯಾಕೆಜ್‌ ಇದೆ. ಜೋಗ್‌ಫಾಲ್ಸ್, ಗೋಕರ್ಣ-ಗೋವಾ, ನಂಜನಗೂಡು, ಬಂಡೀಪುರ-ಊಟಿ, ದೊಡ್ಡ ಬೆಟ್ಟ, ಶ್ರವಣಬೆಳಗೊಳ, ಬೇಲೂರು-ಹಳೇಬೀಡು, ಸೋಮನಾಥಪುರ,ಶಿವನಸುಮುದ್ರ, ತಲಕಾಡು ಮುಡುಕುತೊರೆ ಹೀಗೆ ಹಲವು ಪ್ರವಾಸಿ ತಾಣಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕೆಎಸ್‌ಟಿಡಿಸಿ ಮಾಡಿದೆ.

     

  • ಬೆಂಗಳೂರಿನಲ್ಲಿ ರಸ್ತೆಗಿಳಿಯಲ್ಲ ಡಬ್ಬಲ್ ಡೆಕ್ಕರ್ ಬಸ್ – ಯೋಜನೆ ಕೈಬಿಟ್ಟ ಬಿಎಂಟಿಸಿ

    ಬೆಂಗಳೂರಿನಲ್ಲಿ ರಸ್ತೆಗಿಳಿಯಲ್ಲ ಡಬ್ಬಲ್ ಡೆಕ್ಕರ್ ಬಸ್ – ಯೋಜನೆ ಕೈಬಿಟ್ಟ ಬಿಎಂಟಿಸಿ

    ಬೆಂಗಳೂರು: ರಸ್ತೆಗಳಲ್ಲಿ ಗತ ವೈಭವ ಮೆರೆದಿದ್ದ ಡಬ್ಬಲ್ ಡೆಕ್ಕರ್ ಬಸ್ಸುಗಳನ್ನ (Double Decker Bus) ಮತ್ತೆ ನಗರದಲ್ಲಿ ಕಾಣುವ ಕನಸು ಕಂಡಿದ್ದ ಬೆಂಗಳೂರಿಗರಿಗೆ ನಿರಾಸೆ ಉಂಟಾಗಿದೆ. ಇನ್ಮುಂದೆ ಮತ್ತೆ ನಗರದ ರಸ್ತೆಗಳಲ್ಲಿ ಕನಸಿನ ಡಬಲ್ ಡೆಕ್ಕರ್ ಬಸ್‌ಗಳು ರಸ್ತೆಗಿಳಿಯಲ್ಲ ಅನ್ನೋ ವಿಚಾರ ಬಯಲಾಗಿದ್ದು, ಈ ಮೂಲಕ ಈ ಸಾಲಿನ ಜನರ ಕನಸು ಕನಸಾಗಿಯೇ ಉಳಿಯಲಿದೆ.

    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಅದೊಂದು ಕಾಲವಿತ್ತು. 80, 90ರ ದಶಕಗಳಲ್ಲಿ ಡಬ್ಬಲ್ ಡೆಕ್ಕರ್ ಬಸ್ಸುಗಳು ರಸ್ತೆಗಿಳಿದರೆ ಅದೇನೋ ವೈಭವ. ಬಸ್ಸುಗಳಲ್ಲಿ ಬೆಂಗಳೂರು ಸುತ್ತೋದು ಅದ್ಭುತ ಅನುಭವ. ಅದರಲ್ಲೂ ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನ ಆ ಬಸ್ ಮೇಲೆ ಕುಳಿತು ನೋಡುವುದಕ್ಕೆ ಅಂತಾನೇ ಬೇರೆ ಬೇರೆ ಭಾಗಗಳಿಂದ ನಗರಕ್ಕೆ ಜನ ಬರುತ್ತಿದ್ದರು. ಕಾಲ ಕ್ರಮೇಣ ಆ ಬಸ್ಸುಗಳು ಕಣ್ಮರೆಯಾಗಿ ವೈಭವವು ಮರೆಯಾಗಿಯೇ ಬಿಟ್ಟಿತ್ತು. ಆದರೆ ನಗರದಲ್ಲಿ ಮತ್ತೆ ಆ ಕ್ಷಣಗಳನ್ನ ವಾಪಸ್ ತರುವ ನಿಟ್ಟಿನಲ್ಲಿ ಸರ್ಕಾರ ಮತ್ತು ನಿಗಮ ಪ್ರಯತ್ನ ಪಟ್ಟಿತು. ಆದರೆ ಕೊನೆಗೂ ಕನಸು, ಕನಸಾಗೇ ಉಳಿಯುದುಕೊಳ್ಳುವಂತಾಗಿದೆ. ಇದನ್ನೂ ಓದಿ: ನನಗೆ ಈ ಟಿವಿ ಬೇಡ, ತೆಗೆದುಕೊಂಡು ಹೋಗಿ: ದರ್ಶನ್‌

    ಡಬ್ಬಲ್ ಡೆಕ್ಕರ್ ಬಸ್‌ಗಳನ್ನ ರಸ್ತೆಗಳಿಸುವ ಸಂಬಂಧ ಇಲ್ಲಿ ತನಕ ಮೂರು ಬಾರಿ ಟೆಂಡರ್ ಆಹ್ವಾನ ಮಾಡಲಾಗಿದೆ. ಆದರೆ ಈವರೆಗೂ ಯಾವ ಕಂಪನಿಯೂ ಟೆಂಡರ್‌ನಲ್ಲಿ ಭಾಗಿಯಾಗಿಲ್ಲ. ನಿಗಮದ ನಿರೀಕ್ಷೆಯಂತೆ ಟೆಂಡರ್‌ನಲ್ಲಿ ಬಿಡ್ ಮಾಡಲು ಸಂಸ್ಥೆಗಳು ಸಿದ್ಧವಿಲ್ಲ. ಭಾಗವಹಿಸಿದ್ದ ಕೆಲವೇ ಕೆಲವು ಬಿಡ್‌ದಾರರು ಪ್ರತಿ ಕಿ.ಮೀ.ಗೆ 96ರೂ. ದರವನ್ನು ಪ್ರಸ್ತಾಪಿಸಿದ್ದಾರೆ. 96 ರೂ.ಗೆ ನೀಡಿ ಡಬಲ್ ಡೆಕ್ಕರ್ ಬಸ್‌ಗಳನ್ನು ಓಡಿಸಿದರೆ, ಭಾರಿ ನಷ್ಟವಾಗುವ ಸಾಧ್ಯೆಯಿರುವುದರಿಂದ ಯೋಜನೆ ಕೈಬಿಡಲು ನಿಗಮ ತೀರ್ಮಾನಿಸಿದೆ. ಇದನ್ನೂ ಓದಿ: ಜೋಗಕ್ಕೆ ಹೋಗುವ ಪ್ರವಾಸಿಗರೇ ಎಚ್ಚರವಾಗಿರಿ – ರಸ್ತೆಯಲ್ಲೇ ಹಸುವನ್ನು ಬೇಟೆಯಾಡಿದ ಕರಿ ಚಿರತೆ

    ಯೋಜನೆ ಕೈ ಬಿಡಲು ಕಾರಣಗಳೇನು?
    – ಕಂಪನಿಗಳು ಬಿಡ್‌ನಲ್ಲಿ ಭಾಗಿಯಾಗದೇ ಇರೋದು
    – ಭಾಗಿಯಾದ ಕಂಪನಿಗಳ ಬೇಡಿಕೆಗೆ ತಕ್ಕಂತೆ ಹಣ ನೀಡಲು ನಿಗಮಕ್ಕೆ ಸಾಧ್ಯ ಆಗದೇ ಇರೋದು
    – ಒಂದೊಮ್ಮೆ ಕೇಳಿದಷ್ಟು ಹಣ ನೀಡಿ ಬಸ್ ತಂದರೆ ಹೊರೆ ಹೆಚ್ಚಾಗುವ ಭೀತಿ
    – ಸಾಮಾನ್ಯ ಬಸ್‌ಗಳಗಿಂತಲೂ ಹೆಚ್ಚಿನ ಟಿಕೆಟ್ ದರ ನಿಗದಿ ಮಾಡಬೇಕಾದ ಸವಾಲು
    – ಆಯ್ದ ಸ್ಥಳಗಳಲ್ಲಿ ಮಾತ್ರ ಓಡಿಸಬೇಕಾದ ಕಾರಣ ಲಾಭಾಂಶದ ನಿರೀಕ್ಷೆ ಇಲ್ಲದಿರೋದು
    – ಎಲ್ಲಾ ಸವಾಲುಗಳನ್ನ ದಾಟಿ ತಂದರು ಲಾಭ ಬಾರದಿದ್ದರೆ ನಿಗಮಕ್ಕೆ ನಷ್ಟವಾಗುವ ಸಾಧ್ಯತೆ ಹಿನ್ನೆಲೆ ಯೋಜನೆಗೆ ಎಳ್ಳು ನೀರು ಬಿಡಲಾಗಿದೆ. ಇದನ್ನೂ ಓದಿ: ಪಿತೃಪಕ್ಷದಂದು ಧರ್ಮ ಸಂಕಟ – ಗಾಂಧಿ ಜಯಂತಿಯಂದು ಮಾಂಸ ಮಾರಾಟಕ್ಕೆ ಅನುಮತಿ ನೀಡುವಂತೆ ಮನವಿ

    ಬಿಎಂಟಿಸಿಗೆ (BMTC) ವಜ್ರ ಬಸ್ ಈಗಾಗಲೇ ಭಾರಿ ಹೊರೆಯಾಗಿ ಪರಿಣಮಿಸಿದ್ದು, ಇದರೊಂದಿಗೆ ಡಬಲ್ ಡೆಕ್ಕರ್ ಬಸ್‌ಗಳೂ ನಿಗಮಕ್ಕೆ ಮತ್ತಷ್ಟು ಆರ್ಥಿಕ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆಯೂ ಹೆಚ್ಚಾಗಿತ್ತು. ಹವಾನಿಯಂತ್ರಣ ರಹಿತ ಬಸ್‌ಗಳಾಗಿರುವುದರಿಂದ ಈ ಬಸ್‌ಗಳಿಂದ ಹೆಚ್ಚಿನ ಆದಾಯದ ನಿರೀಕ್ಷೆಯಿಲ್ಲ. ಆದ್ದರಿಂದ ಸಾಮಾನ್ಯ ದರವನ್ನೇ ನಿಗದಿ ಪಡಿಸಬೇಕಾಗಿತ್ತು. ಡಬಲ್ ಡೆಕ್ಕರ್ ಬಸ್‌ಗಳನ್ನು ಖರೀದಿಸಿದರೆ ಸಂಸ್ಥೆಗೆ ಲಾಭದ ಬದಲು ಮತ್ತಷ್ಟು ಹೊರೆಯಾಗುವ ಆತಂಕದಿಂದಾಗಿ ಬಸ್ ಖರೀದಿಸಲು ನಿಗಮ ಮುಂದಾಗಿಲ್ಲ.

    ಹೊಸ ತಲೆಮಾರು ನಗರದ ರಸ್ತೆಗಳಲ್ಲಿ ನಾವು ಕೂಡ ಬಸ್‌ನ ವೈಭವ ನೋಡಬಹುದೇನೋ ಅನ್ನೋ ನಿರೀಕ್ಷೆಯಲ್ಲಿದ್ದರು, ಆದರೆ ಸದ್ಯ ನಿರೀಕ್ಷೆ ಹುಸಿಯಾಗಿದ್ದು, ಈ ಯೋಜನೆ ಅಸಾಧ್ಯ ಅನ್ನೋ ನಿಟ್ಟಿನಲ್ಲಿ ನಿಗಮ ಯೋಜನೆ ಪ್ಲ್ಯಾನ್ ಕೈ ಬಿಟ್ಟು ಸುಮ್ಮನಾಗಿದೆ. ಇದನ್ನೂ ಓದಿ: US Presidential Debate| ಮೊದಲ ಬಾರಿಗೆ ಟ್ರಂಪ್‌, ಕಮಲಾ ಮುಖಾಮುಖಿ: ಆರ್ಥಿಕತೆ, ವಲಸೆ ಬಗ್ಗೆ ಚರ್ಚೆ

  • ಬೆಳ್ಳಂಬೆಳಗ್ಗೆ ಭೀಕರ ಅಪಘಾತ – 18 ಮಂದಿ ದುರ್ಮರಣ, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಬೆಳ್ಳಂಬೆಳಗ್ಗೆ ಭೀಕರ ಅಪಘಾತ – 18 ಮಂದಿ ದುರ್ಮರಣ, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಲಕ್ನೋ: ಬೆಳ್ಳಂಬೆಳಗ್ಗೆ ದೆಹಲಿಗೆ ತೆರಳುತ್ತಿದ್ದ ಡಬಲ್‌ ಡೆಕ್ಕರ್‌ ಬಸ್‌ (Double Decker Bus0 ಹಾಲಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು 18 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ (Lucknow Agra Expressway) ನಡೆದಿದೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

    ಘಟನೆ ಮಾಹಿತಿ ಪಡೆದು ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು (UP Police) ಗಾಯಾಳುಗಳನ್ನು ರಕ್ಷಿಸಿದ್ದಾರೆ. ಬಳಿಕ ಚಿಕಿತ್ಸೆಗಾಗಿ ಬಂಗಾರ್‌ಮೌನ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ಪ್ರಾಥಮಿಕ ಮೂಲಗಳು ತಿಳಿಸಿವೆ.

    ಈ ಕುರಿತು ಮಾಹಿತಿ ನೀಡಿರುವ ಉನ್ನಾವೋ ಮ್ಯಾಜಿಸ್ಟ್ರೇಟ್‌ ಗೌರಂಗ್‌ ರಾಠಿ, ಬುಧವಾರ (ಇಂದು) ಮುಂಜಾನೆ 5:15ರ ಸುಮಾರಿಗೆ ಬಿಹಾರದ ಮೋತಿಹಾರಿಯಿಂದ ಬರುತ್ತಿದ್ದ ಡಬಲ್‌ ಡೆಕ್ಕರ್‌ ಖಾಸಗಿ ಬಸ್, ಹಾಲಿನ ಟ್ಯಾಂಕರ್‌ಗೆ (Milk Tanker) ಡಿಕ್ಕಿ ಹೊಡೆದಿದೆ. ಇದರಿಂದ 18 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಸುಮಾರು 20ಕ್ಕೂ ಮಂದಿ ಗಾಯಗೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬಸ್‌ನ ಅತಿವೇಗದ ಚಾಲನೆಯೇ ಕಾರಣವಾಗಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಸಮೀಪದ ಗರ್ಹಾ ಗ್ರಾಮದ ನಿವಾಸಿಗಳು ಸಿಒ ಅರವಿಂದ್ ಚೌರಾಸಿಯಾ ನೇತೃತ್ವದ ಪೊಲೀಸ್ ತಂಡಕ್ಕೆ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಿದ್ದಾರೆ. ಘಟನೆ ಕಂಡು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಸಂತಾಪ ಸೂಚಿಸಿದ್ದಾರೆ.

  • ವಾಣಿಜ್ಯ ನಗರಿಯಲ್ಲಿ ಎಲೆಕ್ಟ್ರಿಕ್ ಐಕಾನಿಕ್ ಡಬಲ್ ಡೆಕ್ಕರ್ ಬಸ್‍ಗಳು ಸಂಚರಿಸಲಿವೆ: ಆದಿತ್ಯ ಠಾಕ್ರೆ

    ವಾಣಿಜ್ಯ ನಗರಿಯಲ್ಲಿ ಎಲೆಕ್ಟ್ರಿಕ್ ಐಕಾನಿಕ್ ಡಬಲ್ ಡೆಕ್ಕರ್ ಬಸ್‍ಗಳು ಸಂಚರಿಸಲಿವೆ: ಆದಿತ್ಯ ಠಾಕ್ರೆ

    ಮುಂಬೈ: ವಾಣಿಜ್ಯ ನಗರಿಯಲ್ಲಿ ಐಕಾನಿಕ್ ಡಬಲ್ ಡೆಕ್ಕರ್ ಬಸ್‍ಗಳು ಸಂಚರಿಸಲಿವೆ. ದಹನಕಾರಿ ಎಂಜಿನ್‍ಗಳ ಬದಲಿಗೆ ಎಲೆಕ್ಟ್ರಿಕ್ ಮೊಟಾರುಗಳು ಈ ಬಸ್‍ಗಳಿಗೆ ಶಕ್ತಿ ನೀಡುತ್ತವೆ. ಬೃಹತ್ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಕಂಪನಿಯು ಮುಂಬೈಗೆ 900 ಎಸಿ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‍ಗಳನ್ನು ನೀಡಲಿದೆ ಎಂದು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ತಿಳಿಸಿದ್ದಾರೆ.

    ನಗರದಲ್ಲಿ ಐಕಾನಿಕ್ ಡಬಲ್ ಡೆಕ್ಕರ್ ಬಸ್‍ಗಳ ಸಂಚಾರವನ್ನು ಪ್ರಾರಂಭಿಸಲು ನಾನು ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವೈಯಕ್ತಿಕವಾಗಿ ಉತ್ಸುಕರಾಗಿದ್ದೇವೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮೂಗಿನ ಮೂಲಕ ನೀಡಲಾಗುವ ಕೋವ್ಯಾಕ್ಸಿನ್‌ನ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಒಪ್ಪಿಗೆ

    ಬೆಸ್ಟ್ ಕಂಪನಿಯ 900 ಎಲೆಕ್ಟ್ರಿಕ್ ಬಸ್‍ಗಳನ್ನು ರೋಡಿಗೆ ಇಳಿಸುವ ಯೋಜನೆಯಲ್ಲಿದ್ದೇವೆ. ನಗರವನ್ನು ಹೊಗೆ ರಹಿತ ಮಾಡುವ ಉದ್ದೇಶ ನಮ್ಮದಾಗಿದೆ. 10,000 ಎಲೆಕ್ಟ್ರಿಕ್/ಕ್ಲೀನ್ ಪರ್ಯಾಯ ಇಂಧನ ಬಸ್‍ಗಳನ್ನು ಹೆಚ್ಚಿಸುವುದು ಮತ್ತು ಗರಿಷ್ಠ ಡಬಲ್ ಡೆಕ್ಕರ್ ಬಸ್‍ಗಳನ್ನು ಹೊಂದುವುದು ನಮ್ಮ ಗುರಿಯಾಗಿದೆ. ಇದು ನಮ್ಮ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ ಎಂದರು. ಇದನ್ನೂ ಓದಿ: ಟಾಟಾ ಸಂಸ್ಥೆಗೆ ಏರ್‌ ಇಂಡಿಯಾ ಅಧಿಕೃತ ಹಸ್ತಾಂತರ

    ಬಿಡುವಿಲ್ಲದ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‍ಗಳು ಹೆಚ್ಚಾಗಿ ಸಂಚರಿಸಲು ಅನುವು ಮಾಡಿಕೊಡಬೇಕೆಂದು ಇತರ ನಗರಗಳ ಮುನ್ಸಿಪಲ್ ಕಮಿಷನರ್‍ಗಳಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.