Tag: double decker

  • ದೇಶದ ಮೊದಲ ಎಲೆಕ್ಟ್ರಿಕ್‌ ಡಬ್ಬಲ್ ಡೆಕ್ಕರ್ ಬಸ್‌ ಇಂದಿನಿಂದ ಕಾರ್ಯಾರಂಭ – ಏನಿದರ ವಿಶೇಷತೆ?

    ದೇಶದ ಮೊದಲ ಎಲೆಕ್ಟ್ರಿಕ್‌ ಡಬ್ಬಲ್ ಡೆಕ್ಕರ್ ಬಸ್‌ ಇಂದಿನಿಂದ ಕಾರ್ಯಾರಂಭ – ಏನಿದರ ವಿಶೇಷತೆ?

    ಮುಂಬೈ: ದೇಶದ ಮೊದಲ ಡಬ್ಬಲ್ ಡೆಕ್ಕರ್ ಹವಾನಿಯಂತ್ರಿತ (ಎಸಿ) ಬಸ್ ಸೇರಿದಂತೆ 2 ಎಲೆಕ್ಟ್ರಿಕ್‌ ಬಸ್‌ಗಳು ಮುಂಬೈನಲ್ಲಿ ಇಂದಿನಿಂದ ಕಾರ್ಯಾರಂಭ ಮಾಡಿವೆ.

    ಈ ಬಸ್‌ಗಳು ಉತ್ತಮ ಆಕರ್ಷಣೆಯಾಗಿದ್ದು, ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಸ್‌ಗಳಲ್ಲಿ 1 ಆ್ಯಪ್ (ತಂತ್ರಾಂಶ) ನಿಯಂತ್ರಿತ ಆಗಿದ್ದು, ಮತ್ತೊಂದು ನಿಯಂತ್ರಿತ ಎಲೆಕ್ಟಿಕ್ ಡಬ್ಬಲ್ ಡೆಕ್ಕರ್ ಬಸ್ ಆಗಿದೆ.

    ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಬಸ್‌ಗಳಿಗೆ ಚಾಲನೆ ನೀಡಲಿದ್ದಾರೆ. ಮುಂಬೈ ನಗರ ಸಾರ್ವಜನಿಕ ಸಾರಿಗೆ ನಗರದಾದ್ಯಂತ ಆಪ್ ಆಧಾರಿತ ಬಸ್ ಸೇವೆ ನೀಡಲು ಯೋಜನೆ ರೂಪಿಸಿದೆ.

    ಇತ್ತೀಚೆಗೆ ದೆಹಲಿಯ ಕೇಜ್ರಿವಾಲ್ ನೇತೃತ್ವದ ಸರ್ಕಾರ ಸುಮಾರು 200 ಎಲೆಕ್ಟ್ರಿಕ್‌ ಬಸ್‌ಗಳಿಗೆ ಚಾಲನೆ ನೀಡಿತ್ತು.

    Live Tv
    [brid partner=56869869 player=32851 video=960834 autoplay=true]

  • ನಮ್ಮ ಮೆಟ್ರೋಗೆ ಮತ್ತೊಂದು ಗರಿ ಸೇರ್ಪಡೆ – ಮೊದಲ ಬಾರಿಗೆ ಬರಲಿದೆ ಡಬಲ್ ಡೆಕ್ಕರ್ ಮೆಟ್ರೋ

    ನಮ್ಮ ಮೆಟ್ರೋಗೆ ಮತ್ತೊಂದು ಗರಿ ಸೇರ್ಪಡೆ – ಮೊದಲ ಬಾರಿಗೆ ಬರಲಿದೆ ಡಬಲ್ ಡೆಕ್ಕರ್ ಮೆಟ್ರೋ

    ಬೆಂಗಳೂರು: ನಮ್ಮ ಮೆಟ್ರೋ ಬೆಂಗಳೂರಿಗೆ ಮತ್ತೊಂದು ಗರಿ ಸೇರ್ಪಡೆಯಾಗಲಿದೆ. ಮೆಟ್ರೋ ಪಿಲ್ಲರ್ ಗಳು ಡಬಲ್ ಡೆಕ್ಕರ್ ಆಗಿ ಸಂಚಾರ ಸೇವೆ ನೀಡಲಿದೆ.

    ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೈಟೆಕ್ ಟಚ್ ಹೆಚ್ಚಾಗಲಿದೆ. ಜಯದೇವ ಆಸ್ಪತ್ರೆ ಮುಂಭಾಗ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಡಬಲ್ ಡೆಕ್ಕರ್ ಮೆಟ್ರೋ ಬರಲಿದೆ. ಅಂದ್ರೆ ಒಂದೇ ಮಾರ್ಗದಲ್ಲಿ ಒಂದೇ ಪಿಲ್ಲರ್ ಮೇಲೆ ಮೆಟ್ರೋ ಹಾಗೂ ಕಾರು, ಬೈಕ್ ಗಳು ಸಂಚರಿಸುವ ಡಬಲ್ ಟ್ರ್ಯಾಕ್ ಬರಲಿದೆ. ನಾಗಪುರದಲ್ಲಿ ಡಬಲ್ ಟ್ರ್ಯಾಕ್ ಮೆಟ್ರೋ ಕಂ ರೋಡ್ ಲೈನ್ ಮಾಡಲಾಗಿದೆ.

    ಈಗ ಇದೇ ಮಾದರಿಯಲ್ಲಿ ರಾಗಿಗುಡ್ಡ ಸ್ಟೇಷನ್ ನಿಂದ ಸಿಲ್ಕ್ ಬೋರ್ಡ್ ವರೆಗೂ 3.1 ಕಿ.ಮೀ ಡಬಲ್ ಡೆಕ್ಕರ್ ಟ್ರ್ಯಾಕ್ ಬರಲಿದೆ. ಸದ್ಯ ಜಯದೇವ ಮುಂಭಾಗ ಕಾಮಗಾರಿ ನಡೆಯುತ್ತಿದ್ದು, ಈ ಪ್ರಕಾರ ಫ್ಲೈಓವರ್ ಒಡೆಯಲಾಗುತ್ತದೆ. ನಂತರ ಇದೇ ಮಾರ್ಗದಲ್ಲಿ ನೆಲಭಾಗದಿಂದ ಪಿಲ್ಲರ್ ಮೊದಲ ಹಂತದಲ್ಲಿ ಕಾರು, ಬೈಕ್ ಎಂದರೆ ಲಘು ವಾಹನಗಳು ಸಂಚಾರಕ್ಕೆಂದು ರೋಡ್ ತಲೆಯೆತ್ತಲಿದೆ. ಹಾಗೇ ಭಾಗಶಃ ಅಂತರ ನೀಡಿ ಮತ್ತೆ ಅದೇ ಪಿಲ್ಲರ್ ಮೇಲೆ ಮೆಟ್ರೋ ಥರ್ಡ್ ಲೈನ್ ಸಿಸ್ಟಂ ಅಳವಡಿಸಿ ಎಲಿವೇಟೆಡ್ ಟ್ಯ್ರಾಕ್ ಮಾಡಲಾಗುತ್ತದೆ. ಇದರಿಂದ ಒಂದೇ ಖರ್ಚಿನಲ್ಲಿ ರಸ್ತೆ ಮೇಲಿನ ವಾಹನಗಳ ಒತ್ತಡ ನಿಯಂತ್ರಣ ಮಾಡಬಹುದಾಗಿದೆ.

    ಈ ಮಾರ್ಗದಲ್ಲಿ ಸದ್ಯ ಒಟ್ಟು 6 ಕಿಮೀ ಕಾಮಗಾರಿ ನಡೆಯುತ್ತಿದ್ದು, 3 ಕಿ.ಮೀಗೆ ಮಾತ್ರ ಡಬಲ್ ಡೆಕ್ಕರ್ ಟ್ರ್ಯಾಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಪರಿಣಾಮ ಜಯದೇವ ಜಂಕ್ಷನ್ ನಲ್ಲಿ ಸದಾ ಕಾಡುತ್ತಿದ್ದ ಟ್ರಾಫಿಕ್ ಸಮಸ್ಯೆ ಪರಿಹಾರ ಆಗಲಿದೆ. ಸುತ್ತಮುತ್ತಲಿನ 3 ಕಿ.ಮೀನಲ್ಲಿ ಮರಗಳು ಧರೆಗೆ ಉರುಳಲಿದೆ. ಉಳಿದಂತೆ ಈ ಮಾರ್ಗದಲ್ಲಿ ಯಾವುದೇ ಕಟ್ಟಡಕ್ಕೆ ಹಾನಿಯಾಗಲ್ಲ ಎನ್ನುತ್ತಿರುವ ಬಿಎಂಆರ್ ಸಿಎಲ್ ಹೊಸ ಪ್ರಯೋಗಕ್ಕೆ ಮುಂದಾಗಿದೆ.