Tag: dosa

  • ಫಟಾ ಫಟ್ ಆಗಿ ಮಾಡಿ ದೋಸೆ

    ಫಟಾ ಫಟ್ ಆಗಿ ಮಾಡಿ ದೋಸೆ

    ನಿನ್ನೆ ವೀಕೆಂಡ್‍ನಲ್ಲಿ ಮಾಂಸಹಾರವನ್ನು ಸೇವಿಸಿರುವ ನೀವು ಇಂದು ಮನೆಯಲ್ಲಿ ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂದು ಯೋಚಿಸುತ್ತಿರುತ್ತಿರಾ. ಹೀಗಾಗಿ ಇಂದು ಮನೆಯಲ್ಲಿ ಫಟಾ ಫಟ್ ಆಗಿ ದೋಸೆಯನ್ನು ಮಾಡಿ ನೋಡಿ…

    ಬೇಕಾಗುವ ಸಾಮಾಗ್ರಿಗಳು:
    * ಅಕ್ಕಿ- 1 ಕಪ್
    * ಉದ್ದಿನ ಬೇಳೆ-ಅರ್ಧ ಕಪ್
    * ತೊಗರಿಬೇಳೆ-2 ಟೀ ಸ್ಪೂನ್
    * ಕಡಲೆಬೇಳೆ-2 ಟೀ ಸ್ಪೂನ್
    * ಮೆಂತ್ಯೆ- ಅರ್ಧ ಟೀ ಸ್ಪೂನ್
    * ಅವಲಕ್ಕಿ- 1 ಕಪ್
    * ರವೆ- 2 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಬೇಕಿಂಗ್ ಸೋಡಾ- ಅರ್ಧ ಟೀ ಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಅಕ್ಕಿಯನ್ನು ಹಾಕಿ ಹುರಿಯಬೇಕು. ಅಕ್ಕಿಯಲ್ಲಿ ನೀರಿನ ಅಂಶ ಹೋಗುವವರೆಗೆ ಸ್ವಲ್ಪ ಪ್ರಮಾಣದಲ್ಲಿ ಹುರಿದು, ನಂತರ ಅಕ್ಕಿ ಸಂಪೂರ್ಣವಾಗಿ ತಣ್ಣಗಾದ ಬಳಿಕ ಪುಡಿ ಮಾಡಿಕೊಳ್ಳಬೇಕು.

    * ಇದೇ ಬಾಣಲೆಗೆ ಉದ್ದಿನ ಬೇಳೆ, ತೊಗರಿಬೇಳೆ, ಕಡಲೆಬೇಳೆ, ಮೆಂತ್ಯೆ, ಅವಲಕ್ಕಿ ಎಲ್ಲವನ್ನೂ ಹಾಕಿ ಹುರಿದುಕೊಳ್ಳಬೇಕು. ತಣ್ಣಗಾದ ಬಳಿಕ ಪುಡಿ ಮಾಡಿಕೊಳ್ಳಬೇಕು.

    * ನಂತರ ಈಗಾಗಲೇ ಪುಡಿ ಮಾಡಿಟ್ಟುಕೊಂಡ ಅಕ್ಕಿ ಹಿಟ್ಟಿಗೆ ಈ ಬೇಳೆಯ ಪುಡಿ, ರವೆ, ಉಪ್ಪು, ಹಾಗೂ ಬೇಕಿಂಗ್ ಸೋಡಾ ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಬೇಕು.

    * ನಂತರ ಅಗತ್ಯವಿದ್ದಷ್ಟು ನೀರು ಹಾಕಿಕೊಂಡು ಹಿಟ್ಟು ತಯಾರಿಸಿಕೊಂಡು ಒಲೆಯ ಮೇಲೆ ಕಾವಲಿ ಇಟ್ಟು ದೋಸೆ ಹಿಟ್ಟನ್ನು ಕಾವಲಿಯ ಮೇಲೆ ಹಾಕಬೇಕು. ಎರಡೂ ಬದಿಯಲ್ಲೂ ಬೇಯಿಸಿದರೆ, ರುಚಿಕರವಾದ ದಿಢೀರ್ ದೋಸೆ ಸವಿಯಲು ಸಿದ್ಧವಾಗುತ್ತದೆ.

  • ಶೂಟಿಂಗ್ ಸೆಟ್‍ನಲ್ಲಿ ದೋಸೆ ಮಾಡಿದ ಸೋನು ಸೂದ್!

    ಶೂಟಿಂಗ್ ಸೆಟ್‍ನಲ್ಲಿ ದೋಸೆ ಮಾಡಿದ ಸೋನು ಸೂದ್!

    ಮುಂಬೈ: ಬಾಲಿವುಡ್ ನಟ ಸೋನು ಸೂದ್ ಶೂಟಿಂಗ್ ಸೆಟ್‍ನಲ್ಲಿ ಅಡುಗೆಯ ಬಗ್ಗೆ ಪಾಠ ಮಾಡಿದ್ದಾರೆ. ವಿಶೇಷವೆಂದರೆ ಈ ವೇಳೆ ತಮಗೆ ತಾವೇ ಕ್ರಂಚಿಯಾಗಿರುವ ದೋಸೆ ತಯಾರಿಸಿಕೊಂಡು ಚಟ್ನಿ ಜೊತೆ ಸವಿದಿದ್ದಾರೆ.

    ಸದ್ಯ ಈ ವೀಡಿಯೋವನ್ನು ಸೋನು ಸೂದ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡುವ ಹೊಸಬರಿಗೆ ಸಂದೇಶ ನೀಡಿದ್ದಾರೆ.


    ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸೋನು ಸೂದ್ ಅಭಿಮಾನಿಗಳು, ಸೆಲೆಬ್ರೆಟಿಗಳು ಮತ್ತು ಸ್ನೇಹಿತರು ಕಮೆಂಟ್ ಮಾಡುತ್ತಿದ್ದಾರೆ. ಅದರಲ್ಲೂ ನಿರ್ಮಾಪಕಿ ಫರ್ಹಾ ಖಾನ್ ‘ಬನ್ನಿ ಮತ್ತೆ ಮನೆಗೆ'( ಆಜಾ ಗರ್ ಫಿರ್) ಎಂಬ ಕಮೆಂಟ್ ಎಲ್ಲರ ಗಮನ ಸೆಳೆಯುತ್ತಿದೆ.

     

    View this post on Instagram

     

    A post shared by Sonu Sood (@sonu_sood)

    ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ಸೋನು ಸೂದ್ ಹಾಗೂ ಫರ್ಹಾ ಖಾನ್ ಒಟ್ಟಿಗೆ ಕೆಲಸ ಮಾಡಿದ್ದರು. ನಿನ್ನೆ 12ನೇ ತರಗತಿ ಪರೀಕ್ಷೆಯನ್ನು ಮುಂದೂಡಿದ ಬಳಿಕ 10ನೇ ತರಗತಿ ಸಿಬಿಎಸ್‍ಸಿ ಪರೀಕ್ಷೆಯನ್ನು ಕೋವಿಡ್-19ನಿಂದ ರದ್ದುಗೊಳಿಸಿದಕ್ಕೆ ಟ್ವಿಟ್ಟರ್ ಖಾತೆಯಲ್ಲಿ ಅಭಿನಂದನೆ ತಿಳಿಸಿದ್ದರು.

  • ಫ್ಲೈಯಿಂಗ್ ವಡಾಪಾವ್ ನೋಡಿ ನೆಟ್ಟಿಗರು ಫಿದಾ – ವೀಡಿಯೋ ವೈರಲ್

    ಫ್ಲೈಯಿಂಗ್ ವಡಾಪಾವ್ ನೋಡಿ ನೆಟ್ಟಿಗರು ಫಿದಾ – ವೀಡಿಯೋ ವೈರಲ್

    ಮುಂಬೈ: ಇತ್ತೀಚೆಗೆ ಬೀದಿ ಬದಿಯಲ್ಲಿ ದೋಸೆಯನ್ನು ಮೇಲಕ್ಕೆ ಹಾರಿಸಿ ತಯಾರಿಸಿದ ವೀಡಿಯೋವನ್ನು ಎಲ್ಲರು ನೋಡಿರಬಹುದು. ಆದರೆ ಮುಂಬೈನ ಬೋರಾ ಸ್ಟ್ರೀಟ್‍ನಲ್ಲಿ ವ್ಯಕ್ತಿಯೋರ್ವ ವಡಾಪಾವ್‍ನನ್ನು ಮೇಲಕ್ಕೆ ಗಾಳಿಯಲ್ಲಿ ಹಾರಿಸಿ ತಯಾರಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಕಾಣಿಸುವ ರಸ್ತೆ ಬದಿಯ ಈ ಅಂಗಡಿ ಸುಮಾರು 60 ವರ್ಷ ಹಳೆಯದಾಗಿದ್ದು, ದೋಸೆಯನ್ನು ಮಾರುವ ರಘು ಎಂಬವರು ವಡಾಪಾವ್‍ನನ್ನು ಮಾರಾಟ ಮಾಡುತ್ತಾರೆ. ಅಷ್ಟೇ ಅಲ್ಲದೆ ದೋಸೆ ಜೊತೆ ಇಡ್ಲಿ, ವಡೆ, ಚೀಸ್ ಮತ್ತು ಮಸಾಲ ವಡಾಪಾವ್ ಸೇರಿದಂತೆ ಇತರ ತಿಂಡಿಗಳನ್ನು ಕೂಡ ತಯಾರಿಸುತ್ತಾರೆ.

    ಈ ವೀಡಿಯೋವನ್ನು ಆಮ್ಚಿ ಮುಂಬೈ ಎಂಬ ಆಹಾರ ವ್ಲಾಗ್ಗರ್ ಎಂಬ ಯೂಟ್ಯೂಬ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸುಮಾರು 2 ಲಕ್ಷ ವಿವ್ಸ್ ಪಡೆದುಕೊಂಡಿದೆ.

    ವೀಡಿಯೋದಲ್ಲಿ ವ್ಯಕ್ತಿ ಮಸಾಲ ವಡಾಪಾವ್ ಮಾಡುತ್ತಿದ್ದು, ಪ್ಯಾನ್‍ಗೆ ಬೆಣ್ಣೆ ಸವರಿ, ಪಾವ್‍ನನ್ನು ಮಸಾಲ ಜೊತೆ ಪ್ರೈ ಮಾಡುತ್ತಾರೆ. ಬಳಿಕ ಕೆಲವೇ ಸೆಕೆಂಡುಗಳಲ್ಲಿ ಒಂದು ಕೈನಲ್ಲಿ ಉದ್ದದ ಹಳ್ಳೆ ಹಿಡಿದು ಗಾಳಿಯಲ್ಲಿ ವಡೆಯನ್ನು ಹಾರಿಸಿ ಮತ್ತೊಂದು ಕೈನಲ್ಲಿ ಹಿಡಿಯುತ್ತಾನೆ.

    ರಘು ತಯಾರಿಸುವ ಚೀಸ್ ವಡಾಪಾವ್ ಹಾಗೂ ಮಸಾಲ ವಡಾಪಾವ್ ಒಂದರ ಬೆಲೆ 40 ರೂ ಆಗಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೋಡಲು ವೀಡಿಯೋ ಹಾಸ್ಯಮಯವಾಗಿ ಕಂಡರೂ ವಡಾಪಾವ್ ಸಖತ್ ಟೆಸ್ಟಿಯಾಗಿದೆ ಎಂದು ಕರೆಯಲಾಗಿದೆ.

  • ಸ್ನೇಹಿತೆಗೆ ದೋಸೆ ತಿನ್ನಿಸುವಾಗ ತಗ್ಲಾಕ್ಕೊಂಡ ಪತಿ – ಪತ್ನಿಯಿಂದ ಕಂಪ್ಲೆಂಟ್

    ಸ್ನೇಹಿತೆಗೆ ದೋಸೆ ತಿನ್ನಿಸುವಾಗ ತಗ್ಲಾಕ್ಕೊಂಡ ಪತಿ – ಪತ್ನಿಯಿಂದ ಕಂಪ್ಲೆಂಟ್

    ಮುಂಬೈ: ವಿವಾಹಿತನೊಬ್ಬ ಕಾರೊನೊಳಗೆ ತನ್ನ ಸ್ನೇಹಿತೆಗೆ ದೋಸೆ ತಿನ್ನಿಸುವ ವೇಳೆ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಅಪರೂಪದ ನಾಟಕೀಯ ದೃಶ್ಯ ಉತ್ತರ ಪ್ರದೇಶದ ಬಂದನಲ್ಲಿ ನಡೆದಿದೆ. ಪತಿಯ ಅನೇಕ ಅಕ್ರಮ ಸಂಬಂಧಗಳಿಗೆ ಬೇಸತ್ತ ಮಹಿಳೆ ಇದೀಗ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾಳೆ.

    ಮಹಿಳೆಯ ಪತಿ ಉತ್ತರ ಪ್ರದೇಶದ ಸರ್ಕಾರಿ ಜೂನಿಯರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಆತ ತನ್ನ ಸ್ನೇಹಿತೆಯನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದಾನೆ. ನಂತರ ಹತ್ತಿರದ ಹೋಟೆಲ್ ನಿಂದ ದೋಸೆ ತೆಗೆದುಕೊಂಡು ಬಂದು ಕಾರಿನೊಳಗೆ ಆಕೆಗೆ ತಿನ್ನಿಸಿದ್ದಾನೆ. ಇದೇ ವೇಳೆ ಮಹಿಳೆ ಸಹೋದರನೊಂದಿಗೆ ಸ್ಥಳಕ್ಕೆ ಹೋದಾಗ ಪತಿ ರೆಡ್ ಹ್ಯಾಂಡ್ ಆಗಿ ಸ್ನೇಹಿತೆಯೊಂದಿಗೆ ಸಿಕ್ಕಿಬಿದ್ದಿದ್ದಾನೆ.

    ಪತಿ ಮಾಡಿದ ದ್ರೋಹಕ್ಕೆ ಕೋಪಗೊಂಡ ಪತ್ನಿ ಮತ್ತು ಆಕೆಯ ಸಹೋದರ ಇಬ್ಬರನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ಕಂಪ್ಲೆಂಟ್ ನೀಡಲು ಮುಂದಾಗಿದ್ದಾರೆ. ಆದರೆ ಭಾರತದಲ್ಲಿ ವ್ಯಭಿಚಾರ ಅಪರಾಧವೇನಲ್ಲ ಎಂದು ತಿಳಿಸಿ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

    ತನಿಖೆ ವೇಳೆ ತನ್ನ ಪತಿ ನನಗೆ ಮೊದಲ ಬಾರಿಗೆ ಮೋಸ ಮಾಡುತ್ತಿಲ್ಲ. ಮೊದಲಿನಿಂದಲೂ ಈತ ಅನೇಕ ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಪತಿ ವಿರುದ್ಧ ಮಹಿಳೆ ಆರೋಪಿಸಿದ್ದಾಳೆ.

    ವ್ಯಭಿಚಾರವು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 2018ರಂದು ತೀರ್ಪು ನೀಡಿತ್ತು.

  • ಸಿನಿಮಾದಲ್ಲಿ ಅವಕಾಶ ಸಿಗದೇ ರಸ್ತೆ ಬದಿ ದೋಸೆ ಮಾರಿದ್ದೆ- ಶೈನ್ ಶೆಟ್ಟಿ

    ಸಿನಿಮಾದಲ್ಲಿ ಅವಕಾಶ ಸಿಗದೇ ರಸ್ತೆ ಬದಿ ದೋಸೆ ಮಾರಿದ್ದೆ- ಶೈನ್ ಶೆಟ್ಟಿ

    ಬೆಂಗಳೂರು: ಎಷ್ಟೋ ಕಲಾವಿದರು ಒಂದೆರಡು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿ ನಂತರ ಅವಕಾಶಗಳಿಲ್ಲದೆ ಅಲೆದಾಡುತ್ತಿರುತ್ತಾರೆ. ಕೊನೆಗೆ ತಮ್ಮ ಜೀವನಕ್ಕಾಗಿ ಬೇರೆ ಕೆಲಸವನ್ನು ಮಾಡುತ್ತಿರುತ್ತಾರೆ. ಇದೀಗ ಇವರ ಸಾಲಿಗೆ ಕುಂದಾಪುರ ಮೂಲದ ಶೈನ್ ಶೆಟ್ಟಿ ಸೇರ್ಪಡೆಗೊಂಡಿದ್ದಾರೆ.

    ಹೌದು. ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುವ ‘ಲಕ್ಷ್ಮಿ ಬಾರಮ್ಮ’ ಧಾರವಾಹಿಯಲ್ಲಿ ಶೈನ್ ಶೆಟ್ಟಿ ಅಭಿನಯಿಸಿದ್ದರು. ಸುಮಾರು 2 ವರ್ಷಗಳ ಸೀರಿಯಲ್ ನಲ್ಲಿ ನಟಿಸಿದ್ದರ ಪರಿಣಾಮ ಶೈನ್, ಚಂದು ಎಂದೇ ಪ್ರಖ್ಯಾತರಾಗಿದ್ದರು. ಧಾರಾವಾಹಿಯಲ್ಲಿ ಶೈನ್, ಚಂದನ್ ಆಗಿ ಕಾಣಿಸಿಕೊಂಡಿದ್ದರು. ನಂತರ ಸಿನಿಮಾದಲ್ಲಿ ಅಭಿನಯಿಸುವ ಆಸೆಯಿಂದ ಧಾರಾವಾಹಿಯಿಂದ ಹೊರಬಂದಿದ್ದರು. ಆದರೆ ಸಿನಿಮಾ ಕೈ ಹಿಡಿಯಲೇ ಇಲ್ಲ. ನಟಿಸಿಲು ಅವಕಾಶಗಳೇ ಒದಗಿ ಬಂದಿರಲಿಲ್ಲ.

    ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗಲಿಲ್ಲ ಎಂದು ಕೊರಗಿಕೊಂಡು ಸುಮ್ಮನೆ ಕೂರದ ಶೈನ್, ರಸ್ತೆ ಬದಿಯಲ್ಲಿ ದೋಸೆ ಮಾರಾಟ ಮಾಡಿ ಜೀವನ ನಡೆಸಲು ಆರಂಭಿಸಿದ್ದರು. ಈ ಬಗ್ಗೆ ಸ್ವತಃ ಶೈನ್ ಶೆಟ್ಟಿಯವರೇ ಹೇಳಿಕೊಂಡಿದ್ದಾರೆ. “ಧಾರಾವಾಹಿ ಮಾಡಿದ್ದರಿಂದ ಅನೇಕರಿಗೆ ಪರಿಚಯವಿದ್ದೆ. ಆದರೆ ಸೀರಿಯಲ್‍ನಿಂದ ಹೊರ ಬಂದ ನಂತರ ನನಗೆ ಯಾವುದೇ ಅವಕಾಶವೂ ಸಿಗಲಿಲ್ಲ. ಆಗ ಧೈರ್ಯಮಾಡಿ ಬೆಂಗಳೂರಿನ ಬನಶಂಕರಿ ಬಳಿ ಫುಡ್ ಟ್ರಕ್ ಮಾಡಿ ದೋಸೆ ಮಾರಲು ಪ್ರಾರಂಭಿಸಿದೆ. ದೋಸೆ ಮಾಡುವ ಸಮಯದಲ್ಲಿ ಅನೇಕರು ಬಂದು ನೀವು ಸೀರಿಯಲ್ ನಲ್ಲಿ ನಟಿಸುತ್ತಿದ್ರಾ ಎಂದು ಕೇಳಿ ನಂತರ ಅದು ನೀವಲ್ಲ ಬಿಡಿ ಎಂದು ಸುಮ್ಮನಾಗುತ್ತಿದ್ದರು. ಇದರಿಂದ ನನಗೆ ಖುಷಿಯಾಗುತ್ತಿತ್ತು” ಎಂದು ಹೇಳಿದ್ದಾರೆ. ಸದ್ಯಕ್ಕೆ ಶೈನ್ ಶೆಟ್ಟಿ ಬಿಗ್‍ಬಾಸ್ ಮನೆಗೆ 17 ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

  • ಅಮೆರಿಕದಲ್ಲಿ ಸಿಗುತ್ತೆ ವಿಶೇಷ ದೀಪಿಕಾ ದೋಸೆ!

    ಅಮೆರಿಕದಲ್ಲಿ ಸಿಗುತ್ತೆ ವಿಶೇಷ ದೀಪಿಕಾ ದೋಸೆ!

    ಮುಂಬೈ: ಅಮೆರಿಕದ ರೆಸ್ಟೋರೆಂಟ್ ಒಂದು ದೋಸೆಗೆ `ದೀಪಿಕಾ ದೋಸೆ’ ಎಂದು ಹೆಸರಿಟ್ಟ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಮೆರಿಕದ ಟೆಕ್ಸಾಸ್ ರೆಸ್ಟೋರೆಂಟ್ ಒಂದು ದೋಸೆಗೆ ದೀಪಿಕಾ ಪಡುಕೋಣೆ ದೋಸೆ ಎಂದು ಹೆಸರಿಟ್ಟಿದೆ. ದೀಪಿಕಾ ಪಡುಕೋಣೆ ಅಭಿಮಾನಿಯೊಬ್ಬರು ಆ ರೆಸ್ಟೋರೆಂಟ್‍ನ ಮೆನು ಕಾರ್ಡ್‍ನ ಫೋಟೋ ತೆಗೆದು ಅದನ್ನು ಟ್ವೀಟ್ ಮಾಡಿದ್ದಾರೆ. ದೀಪಿಕಾ ಈ ಟ್ವೀಟ್‍ಗೆ ಪ್ರತಿಕ್ರಿಯಿಸಿ, “ವರ್ಷ ಪ್ರಾರಂಭಿಸಲು ಇದು ಸಾಕು. ಹ್ಯಾಪಿ ನ್ಯೂ ಇಯರ್” ಎಂದು ಟೈಪಿಸಿ ರೀ- ಟ್ವೀಟ್ ಮಾಡಿದ್ದಾರೆ.

    https://twitter.com/deepikapadukone/status/1080180850631749637?ref_src=twsrc%5Etfw%7Ctwcamp%5Etweetembed%7Ctwterm%5E1080180850631749637&ref_url=https%3A%2F%2Fwww.hindustantimes.com%2Fbollywood%2Fthere-s-a-dosa-named-after-deepika-padukone-and-husband-ranveer-singh-has-a-spicy-comeback%2Fstory-GMjhpDBvGs1fUzy7vMEF4J.html

    ಈ ವಿಚಾರ ತಿಳಿದ ಮತ್ತೊಬ್ಬ ಅಭಿಮಾನಿ, “ಪುಣೆಯಲ್ಲಿ ನೀವು ಪರಾಟಾ ಥಾಲಿ ಆಗಿದ್ದೀರಿ” ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ದೀಪಿಕಾ ನಗುವ ಎಮೋಜಿ ಹಾಕಿ ರೀ-ಟ್ವೀಟ್ ಮಾಡಿದ್ದಾರೆ.

    https://twitter.com/deepikapadukone/status/1080311208824123394

    ಇದೇ ವೇಳೆ ದೀಪಿಕಾ ಪತಿ, ನಟ ರಣ್‍ವೀರ್ ಸಿಂಗ್ ತಮ್ಮ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ದೀಪಿಕಾ ಪಡುಕೋಣೆ ದೋಸೆ ಎಂದು ಮೆನು ಇರುವ ಫೋಟೋ ಹಾಕಿ, “ಈಗ ನಾನು ಇದನ್ನು ತಿನ್ನುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಬಾಲಿವುಡ್ ಹಾಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ನವೆಂಬರ್ ತಿಂಗಳಿನಲ್ಲಿ ಇಟಲಿಯಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದರು. ಈಗ ಈ ಜೋಡಿ ಹನಿಮೂನ್‍ಗೆ ಹೋಗಿದೆ.

    ಮದುವೆ ನಂತರ ದೀಪಿಕಾ ಹಾಗೂ ರಣ್‍ವೀರ್ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರಿಂದ ಅವರು ತಮ್ಮ ಹನಿಮೂನ್‍ಗೂ ಕೂಡ ಪ್ಲಾನ್ ಮಾಡಿರಲಿಲ್ಲ. ಈಗ ದೀಪ್‍ವೀರ್ ತಮ್ಮ ಹನಿಮೂನ್‍ಗೆ ಹೋಗಿದ್ದು, ಯಾವ ದೇಶಕ್ಕೆ ಹೋಗಿದ್ದಾರೆ ಎನ್ನುವ ಎಂಬ ಮಾಹಿತಿ ದೊರೆತಿಲ್ಲ.

    ರಣ್‍ವೀರ್ ಹಾಗೂ ದೀಪಿಕಾ ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಕೊಂಕಣಿ ಸಂಪ್ರದಾಯ ಹಾಗೂ ಹಾಗೂ ನವೆಂಬರ್ 15ರಂದು ಸಿಖ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಬೆಂಗಳೂರಿನಲ್ಲಿ ಒಂದು ಬಾರಿ ಹಾಗೂ ಮುಂಬೈನಲ್ಲಿ ಎರಡೂ ಬಾರಿ ಈ ಜೋಡಿ ಅದ್ಧೂರಿಯಾಗಿ ಆರತಕ್ಷತೆಯನ್ನು ಮಾಡಿಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 5 ರೂ.ಗೆ 2 ಮಸಾಲೆದೋಸೆ- ಇದು ಇಂದಿರಾ ಕ್ಯಾಂಟೀನ್ ಅಲ್ಲ, ಕೊಪ್ಪಳ ಮಹಿಳೆಯರ ಓಪನ್ ದೋಸಾ ಕ್ಯಾಂಟೀನ್

    5 ರೂ.ಗೆ 2 ಮಸಾಲೆದೋಸೆ- ಇದು ಇಂದಿರಾ ಕ್ಯಾಂಟೀನ್ ಅಲ್ಲ, ಕೊಪ್ಪಳ ಮಹಿಳೆಯರ ಓಪನ್ ದೋಸಾ ಕ್ಯಾಂಟೀನ್

    ಕೊಪ್ಪಳ: 3 ರೂಪಾಯಿಗೆ ಮಸಾಲೆ ದೋಸೆ, 5 ರೂಪಾಯಿಗೆ 2 ಮಸಾಲೆ ದೋಸೆ. ಇಂದಿರಾ ಕ್ಯಾಂಟೀನ್‍ನಲ್ಲಿ ಅನ್ಕೋತಿದ್ದೀರಾ. ಖಂಡಿತಾ ಅಲ್ಲ, ಇದು ಕೊಪ್ಪಳದಲ್ಲಿ ಸಮಾಜ ಸೇವೆ ಉದ್ದೇಶದಿಂದ ಮಹಿಳೆಯರು ನಡೆಸುತ್ತಿರುವ ಓಪನ್ ದೋಸಾ ಕ್ಯಾಂಟೀನ್.

    ಮೆಹಬೂಬಿ ಮತ್ತು ಮರ್ತೂಜಾ ಎಂಬವರು ಕಳೆದ 10 ವರ್ಷಗಳಿಂದ ಕೊಪ್ಪಳದ ಗಂಗಾವತಿಯ ಪಾಂಡುರಂಗ ದೇಗುಲದ ಬಳಿ ತೆರೆದ ಹೋಟೆಲ್ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‍ನಲ್ಲಿ 5 ರೂಪಾಯಿಗೆ ತಿಂಡಿ ಕೊಡುತ್ತಿದ್ದರೆ, ಇವರು ಕೇವಲ 3 ರೂಪಾಯಿಗೆ ಒಂದು ದೋಸೆ ನೀಡ್ತಾರೆ. 5 ರೂಪಾಯಿ ಕೊಟ್ರೆ 2 ಮಸಾಲೆ ದೋಸೆ ನೀಡ್ತಾರೆ. ಇದರ ಜೊತೆಗೆ ರುಚಿರುಚಿಯಾದ ಕೊಬ್ಬರಿ ಚಟ್ನಿ ಕೂಡ ಇರುತ್ತದೆ. ಹಾಗಂತ ಇವರು ಲಾಭಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಸಮಾಜಸೇವೆ ಉದ್ದೇಶದಿಂದ ಅಗ್ಗದ ದರದಲ್ಲಿ ದೋಸೆ ನೀಡುತ್ತಿದ್ದು, ಅದಕ್ಕೆ ತಗುಲುವ ಖರ್ಚು ಬಂದ್ರೆ ಸಾಕು ಅಂತ ಮೆಹಬೂಬಿ ಹೇಳಿದ್ದಾರೆ.

    ಬೆಳಗ್ಗೆ 5.30ಕ್ಕೆ ಅಂಗಡಿ ತೆರೆಯುವ ಇವರು 10 ಗಂಟೆವರೆಗೆ ಈ ಸೇವೆ ಮಾಡ್ತಾರೆ. ಬೆಳಗ್ಗೆಯಿಂದಲೇ ಮಕ್ಕಳು, ಕೂಲಿ ಕಾರ್ಮಿಕರು ದೋಸೆ ಸವಿಯಲು ಇವರ ಅಂಗಡಿಗೆ ಮುಗಿಬೀಳ್ತಾರೆ.