Tag: doora theera yaana

  • ‘ದೂರ ತೀರ ಯಾನ’ ಚಿತ್ರದಲ್ಲಿ ಶ್ರುತಿ ಹರಿಹರನ್ ಗೆಸ್ಟ್

    ‘ದೂರ ತೀರ ಯಾನ’ ಚಿತ್ರದಲ್ಲಿ ಶ್ರುತಿ ಹರಿಹರನ್ ಗೆಸ್ಟ್

    ಮಂಸೋರೆ (MansoRe) ನಿರ್ದೇಶಿಸಿರುವ ‘ದೂರ ತೀರ ಯಾನ’ (Doora Theera Yaana) ಸಿನೆಮಾ ಇದೇ ಜುಲೈ 11 ರಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಸಿನೆಮಾದ ಎರಡು ಹಾಡುಗಳು ಜನರ ಮನ್ನಣೆ ಗಳಿಸುತ್ತಿವೆ. ಸಿನೆಮಾ ಆರಂಭದಿಂದ ಇಲ್ಲಿಯವರೆಗೂ ನಾಯಕಿ ಮತ್ತು ನಾಯಕನ ಪಾತ್ರಗಳನ್ನು ಹೊರತುಪಡಿಸಿ ಉಳಿದ ತಾರಾಗಣದ ಪರಿಚಯ ಮಾಡಿಸದೇ ಬಂದಿದ್ದ ಸಿನೆಮಾ ತಂಡ ಈಗ ಉಳಿದ ಪಾತ್ರಗಳ ಪರಿಚಯ ಆರಂಭಿಸಿದ್ದಾರೆ. ಅದರಲ್ಲಿ ಮೊದಲ ಪಾತ್ರ ಗೌರಿ. ಈ ಪಾತ್ರದಲ್ಲಿ ನಟಿಸಿರುವವರು ಕನ್ನಡದ ಖ್ಯಾತ ನಟಿ ಶೃತಿ ಹರಿಹರನ್.

    ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಸಿನೆಮಾ “ನಾತಿಚರಾಮಿ”. ಮಂಸೋರೆ ನಿರ್ದೇಶನ ಮಾಡಿದ್ದ ಈ ಸಿನೆಮಾ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದೇ ಸಿನೆಮಾಗೆ ಐದು ರಾಷ್ಟ್ರ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿತ್ತು. ಇದು ಕೇವಲ ಪ್ರಶಸ್ತಿಯ ಕಾರಣಕಷ್ಟೇ ಅಲ್ಲದೇ ಈ ಸಿನೆಮಾದ ಕಥಾ ವಸ್ತುವೂ ಹೆಚ್ಚು ಚರ್ಚಿತವಾಗಿ, ನೆಟ್ ಫ್ಲಿಕ್ಸ್ ಮೂಲಕ ದೇಶ ವಿದೇಶದ ಸಿನಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನೆಮಾದಲ್ಲಿ ಗೌರಿ ಪಾತ್ರ ಮಾಡಿದ್ದ ಶೃತಿ ಹರಿಹರನ್ (Sruthi Hariharan) ಮತ್ತೆ ಮಂಸೋರೆ ಅವರ ಹೊಸ ಸಿನೆಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ಅವರ ಪಾತ್ರ ಪರಿಚಯದ ವಿಡಿಯೋ ಒಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.

    ನಾತಿಚರಾಮಿಯ ದಿಟ್ಟ ಮಹಿಳೆ ‘ಗೌರಿ’ ಕನ್ನಡ ಚಿತ್ರರಂಗದಲ್ಲೇ ಒಂದು ಐಕಾನಿಕ್ ಪಾತ್ರ . ಕನ್ನಡ ಸಿನೆಮಾಗಳಲ್ಲಿ ನಿರ್ದೇಶಕರು ತಮ್ಮದೇ ಸಿನೆಮಾದ ಪಾತ್ರಗಳನ್ನು ಮತ್ತೊಂದು ಸಿನೆಮಾದಲ್ಲಿ ತರುವುದರ ಮೂಲಕ ತಮ್ಮದೇ ಆದ ಸಿನೆಮಾ ಪ್ರಪಂಚವನ್ನು ಸೃಷ್ಟಿಸಿರುವುದು ಅಪರೂಪ. ಅಂತಹ ಅಪರೂಪದ ಜಗತ್ತನ್ನು ಮಂಸೋರೆಯವರು ತಮ್ಮ ದೂರ ತೀರ ಯಾನದಲ್ಲಿ ಸೃಷ್ಟಿರುವ ಪ್ರಯತ್ನವನ್ನು ಈ ವಿಡಿಯೋದಲ್ಲಿ ಕಾಣಬಹುದು. ಇಂತಹ ಅಚ್ಚರಿ ನೀಡಿರುವ ಮಂಸೋರೆ ಮತ್ತು ಗೌರಿ ಕಾಂಬಿನೇಶನ್ ತೆರೆಯ ಮೇಲೆ ಯಾವ ರೀತಿ ಮ್ಯಾಜಿಕ್ ಮಾಡಲಿದ್ದಾರೆ ಎಂಬ ಕುತೂಹಲ ಅವರ ಪ್ರೇಕ್ಷಕ ವರ್ಗದಲ್ಲಿ ದೂರ ತೀರ ಯಾನ ಸಿನೆಮಾದ ಬಗ್ಗೆ ಕುತೂಹಲ ಹೆಚ್ಚಿಸುವಂತೆ ಮಾಡಿದೆ.

    ದೂರ ತೀರ ಯಾನ ಸಿನೆಮಾ ಸೆನ್ಸಾರ್ ಪೂರ್ಣಗೊಳಿಸಿ ಯು/ಎ ಪ್ರಮಾಣ ಪತ್ರವನ್ನು ಪಡೆದಿದ್ದು ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ, ಕನ್ನಡದ ಖ್ಯಾತ ನಟರಾದ ಕಿಚ್ಚ ಸುದೀಪ್ ರವರು ಜೂನ್ 28 ಶನಿವಾರ, ಬೆಳಗ್ಗೆ 11 ಗಂಟೆಗೆ ಡಿಜಿಟಲ್ ಮೂಲಕ ಸಿನೆಮಾದ ಟ್ರೈಲರ್ ಅನಾವರಣಗೊಳಿಸಲಿದ್ದಾರೆ.

  • ‘ದೂರ ತೀರ ಯಾನ’ ಚಿತ್ರದ ಮೊದಲ ಪ್ರೇಮಗೀತೆಗೆ ಅಭಿಮಾನಿಗಳ ಮೆಚ್ಚುಗೆಯ ಸುರಿಮಳೆ

    ‘ದೂರ ತೀರ ಯಾನ’ ಚಿತ್ರದ ಮೊದಲ ಪ್ರೇಮಗೀತೆಗೆ ಅಭಿಮಾನಿಗಳ ಮೆಚ್ಚುಗೆಯ ಸುರಿಮಳೆ

    ಟ ವಿಜಯ್ ಕೃಷ್ಣ (Vijay Krishna) ಹಾಗೂ ಪ್ರಿಯಾಂಕ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ದೂರ ತೀರ ಯಾನ’ (Doora Theera Yaana) ಸಿನಿಮಾದ ‘ಇದೇನಿದು ಸೂಚನೆ’ ಮೊದಲ ಪ್ರೇಮಗೀತೆಗೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಕವಿರಾಜ್ ಅವರು ಬರೆದಿರುವ ಸಾಹಿತ್ಯಕ್ಕೆ, ಬಕ್ಕೇಶ್ ಹಾಗೂ ಕಾರ್ತಿಕ್ ಸಂಗೀತ ಸಂಯೋಜನೆ ಮಾಡಿದ್ದು, ಖ್ಯಾತ ಗಾಯಕರಾದ ಅರ್ಮಾನ್ ಮಲಿಕ್ ಹಾಡಿದ್ದಾರೆ. ಇದನ್ನೂ ಓದಿ:ಗಾಯಕಿ ಪೃಥ್ವಿ ಭಟ್ ಪ್ರೇಮವಿವಾಹ: ‘ಸರಿಗಮಪ’ ಜ್ಯೂರಿ ಮೇಲೆ ಆರೋಪ

    ಮಂಸೋರೆ ಬರೆದಿರುವ ಕಥೆಗೆ ಚೇತನಾ ತೀರ್ಥಹಳ್ಳಿ ಸಂಭಾಷಣೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿದ್ದು, ಬಕ್ಕೇಶ್ ಹಾಗೂ ಕಾರ್ತೀಕ್ ಹಾಡುಗಳನ್ನು ಸಂಯೋಜಿಸಿದ್ದಾರೆ. ಜಯಂತ್ ಕಾಯ್ಕಿಣಿ, ಕವಿರಾಜ್, ಪ್ರಮೋದ್ ಮರವಂತೆ ಹಾಗೂ ಕಿರಣ್ ಕಾವೇರಪ್ಪ ಹಾಡುಗಳನ್ನು ಬರೆದಿದ್ದಾರೆ. ಸಿನಿಮಾದ ಶೀರ್ಷಿಕೆ ಗೀತೆಯನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಮಂಸೋರೆ ತಿಳಿಸಿದ್ದಾರೆ. ಆ ಹಾಡನ್ನು ವಿಶೇಷವಾಗಿ ಪ್ರೇಕ್ಷಕರಿಂದಲೇ ಬಿಡುಗಡೆ ಮಾಡಿಸುವ ಆಲೋಚನೆ ಇದ್ದು, ರಾಜ್ಯದ ಪ್ರಮುಖ ನಗರವೊಂದರಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ನಗದಿನ ಮೂಲಕ ಸಂಭಾವನೆ – ಮಹೇಶ್‌ ಬಾಬುಗೆ ಇಡಿ ನೋಟಿಸ್‌

     

    View this post on Instagram

     

    A post shared by MRT Music (@mrtmusicofficial)

    ಮಂಸೋರೆ ನಿರ್ದೇಶನ ಮಾಡಿರುವ ಈ ಸಿನಿಮಾ ಬೆಂಗಳೂರು, ಉಡುಪಿ, ಕುಂದಾಪುರ, ಗೋಕರ್ಣ, ಮುರುಡೇಶ್ವರ, ಕಾರವಾರ, ಯಲ್ಲಾಪುರ, ದಾಂಡೇಲಿ, ಗೋವಾದಲ್ಲಿ 40 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು, ಸಿನಿಮಾ ಡಬ್ಬಿಂಗ್ ಕೆಲಸಗಳು ಭರದಿಂದ ಸಾಗಿದೆ. ಸದ್ಯದಲ್ಲೇ ರಿಲೀಸ್‌ ಕುರಿತು ಅಪ್‌ಡೇಟ್‌ ಹೇಳೋದಾಗಿ ನಿರ್ಮಾಪಕರಾದ ದೇವರಾಜ್ ಆರ್. ಅವರು ತಿಳಿಸಿದ್ದಾರೆ.

    ಇದೊಂದು ಪ್ರೇಮಕಥೆ ಆಧರಿಸಿದ ಸಿನಿಮಾ ಆಗಿದೆ. ಹರೆಯದ ಇಬ್ಬರು ಪ್ರೇಮಿಗಳು ಬೆಂಗಳೂರಿನಿಂದ ಗೋವಾಗೆ ಪಯಣ ಆರಂಭಿಸುತ್ತಾರೆ. ಆ ಪ್ರಯಾಣದಲ್ಲಿ ತಮ್ಮ ಪ್ರೀತಿಯ ಅರ್ಥ ಹುಡುಕಿಕೊಳ್ಳುವುದು ಮೂಲಕಥೆಯಾಗಿದೆ. ಈ ಸಿನಿಮಾಗೆ ಸರವಣ ಕುಮಾರ್ ಅವರ ಕಲಾನಿರ್ದೇಶನವಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತರಾದ ನಾಗೇಂದ್ರ ಕೆ ಉಜ್ಜನಿ ಅವರು ಸಂಕಲನ ಮಾಡಿದ್ದಾರೆ.