Tag: Donut

  • ಮೊಟ್ಟೆ ಬಳಸದೇ ಟೇಸ್ಟಿ ಡೋನಟ್ ಹೀಗೆ ಮಾಡಿ

    ಮೊಟ್ಟೆ ಬಳಸದೇ ಟೇಸ್ಟಿ ಡೋನಟ್ ಹೀಗೆ ಮಾಡಿ

    ಬೇಕರಿಗಳಲ್ಲಿ ಮಕ್ಕಳ ಗಮನ ಸೆಳೆಯೋದು ಸಿಹಿ ಹಾಗೂ ರುಚಿಕರವಾದ ಡೋನಟ್‌ಗಳು. ಆದರೆ ಹೆಚ್ಚಿನ ಕಡೆಗಳಲ್ಲಿ ಮೊಟ್ಟೆ ಬಳಸದೇ ಡೋನಟ್ ಮಾಡೋದು ವಿರಳ. ಆದರೆ ನಾವಿಂದು ಹೇಳಿಕೊಡುತ್ತಿರುವ ಡೋನಟ್ ರೆಸಿಪಿ ಶುದ್ಧ ಸಸ್ಯಾಹಾರಿಗಳಿಗಾಗಿ. ಇಲ್ಲಿ ನಾವು ಮೊಟ್ಟೆ ಬಳಸಿಲ್ಲ. ವೆಗನ್ ಡಯಟ್‌ನಲ್ಲಿರುವವರಿಗೂ ಈ ರೆಸಿಪಿ ಸೂಕ್ತವಾಗಲಿದೆ. ಇಲ್ಲಿ ಸಾಮಾನ್ಯ ಬೆಣ್ಣೆ ಬಳಸೋ ಬದಲು ವೆಗನ್ ಬೆಣ್ಣೆಯನ್ನು ಬಳಸಿ ಈ ಡೋನಟ್ ಅನ್ನು ಮಾಡಬಹುದು. ಹಾಗಿದ್ದರೆ ಸಸ್ಯಾಹಾರಿಗಳಿಗಾಗಿ ಡೋನಟ್ ಹೇಗೆ ಮಾಡೋದು ಎಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮೈದಾ ಹಿಟ್ಟು – 2 ಕಪ್
    ಬಾದಾಮಿ ಅಥವಾ ಸೋಯಾ ಮಿಲ್ಕ್ – ಅರ್ಧ ಕಪ್
    ಆಕ್ಟಿವ್ ಒಣ ಈಸ್ಟ್ – 1 ಟೀಸ್ಪೂನ್
    ಬ್ರೌನ್ ಶುಗರ್ – 2 ಟೀಸ್ಪೂನ್
    ಬೆಣ್ಣೆ – 2 ಟೀಸ್ಪೂನ್
    ವೆನಿಲ್ಲಾ ಸಾರ – 1 ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ಎಣ್ಣೆ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ಚಾಕ್ಲೇಟ್, ಕುಂಬಳಕಾಯಿ ಕಾಂಬಿನೇಷನ್‌ನಲ್ಲಿ ಮಾಡಿ ರುಚಿಕರ ಪ್ಯಾನ್‌ಕೇಕ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಈಸ್ಟ್, ಸಕ್ಕರೆ, ಉಪ್ಪು, ಕರಗಿದ ಬೆಣ್ಣೆ, ವೆನಿಲ್ಲಾ ಸಾರ ಹಾಗೂ ಬಾದಾಮಿ ಹಾಲನ್ನು ಸೇರಿಸಿ ನಯವಾದ ಹಿಟ್ಟಿನಂತೆ ಬೆರೆಸಿಕೊಳ್ಳಿ.
    * ಒಂದು ಪಾತ್ರೆಗೆ ಎಣ್ಣೆ ಸವರಿ, ಅದರಲ್ಲಿ ಹಿಟ್ಟನ್ನು ಇಟ್ಟು, ಒಂದು ಶುಭ್ರವಾದ ಬಟ್ಟೆಯಿಂದ ಮುಚ್ಚಿ 1 ಗಂಟೆ ಬೆಚ್ಚಗಿನ ಸ್ಥಳದಲ್ಲಿ ಇಡಿ. ಈ ವೇಳೆ ಹಿಟ್ಟು ಉಬ್ಬಿಕೊಳ್ಳುತ್ತದೆ.
    * ಈಗ ಹಿಟ್ಟನ್ನು ಲಟ್ಟಣಿಗೆಯಿಂದ ಸುಮಾರು 4 ಇಂಚು ದಪ್ಪವಿರುವಂತೆ ಸುತ್ತಿಕೊಳ್ಳಿ. ಡೋನಟ್ ಕಟರ್ ಸಹಾಯದಿಂದ ಅದಕ್ಕೆ ಡೋನಟ್ ಆಕಾರ ನೀಡಿ. ಈ ಹಿಟ್ಟಿನಲ್ಲಿ ಸಾಮಾನ್ಯ ಗಾತ್ರದ ಸುಮಾರು 7-8 ಡೋನಟ್‌ಗಳಾಗುತ್ತವೆ.
    * ಈಗ ಬೇಕಿಂಗ್ ಟ್ರೇಯಲ್ಲಿ ಡೋನಟ್‌ಗಳನ್ನು ಇರಿಸಿ, ಅದನ್ನು ಮತ್ತೆ ಶುಭ್ರ ಬಟ್ಟೆಯಿಂದ ಮುಚ್ಚಿ, ಇನ್ನೊಂದು ಗಂಟೆ ಬೆಚ್ಚಗಿನ ಸ್ಥಳದಲ್ಲಿ ಉಬ್ಬಲು ಬಿಡಿ.
    * ಈಗ ಒಂದು ದೊಡ್ಡ ಪ್ಯಾನ್ ತೆಗೆದುಕೊಂಡು ಅದರಲ್ಲಿ 2 ಇಂಚಿನಷ್ಟು ಎತ್ತರಕ್ಕೆ ಎಣ್ಣೆ ಸುರಿದು ಮಧ್ಯಮ ಉರಿಯಲ್ಲಿ ಬಿಸಿಗೆ ಇಡಿ. ಬಳಿಕ ಒಂದೊಂದೇ ಡೋನಟ್‌ಗಳನ್ನು ಎಣ್ಣೆಯಲ್ಲಿ ಹಾಕಿ, ಎರಡೂ ಬದಿ ಗೋಲ್ಡನ್ ಬ್ರೌನ್ ಬಣ್ಣ ಹಾಗೂ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ.
    * ಬಳಿಕ ಡೋನಟ್‌ಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ ಹಾಗೂ ತಣ್ಣಗಾಗಲು ಬಿಡಿ.
    * ಇದೀಗ ಮೊಟ್ಟೆ ಬಳಸದ ಟೇಸ್ಟಿ ಡೋನಟ್ ತಯಾರಾಗಿದೆ. ನೀವು ಬೇಕೆಂದರೆ ನಿಮ್ಮಿಷ್ಟದ ವೈಟ್ ಅಥವಾ ನಾರ್ಮಲ್ ಚಾಕ್ಲೆಟ್‌ನಲ್ಲಿ ಅರ್ಧಕ್ಕೆ ಡಿಪ್ ಮಾಡಿ ಚಾಕ್ಲೆಟ್ ಚಿಪ್ಸ್‌ನಿಂದ ಅಲಂಕರಿಸಿ ಸವಿಯಬಹುದು. ಇದನ್ನೂ ಓದಿ: ಹೀಗೆ ಮಾಡಿ ಇನ್ಸ್ಟೆಂಟ್ ಮಗ್ ಬ್ರೌನಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೇಕರಿಯಲ್ಲಿ ಸಿಗುವ ಡೋನಟ್ ಮನೆಯಲ್ಲೂ ಮಾಡ್ಬೋದು ತುಂಬಾ ಸುಲಭವಾಗಿ

    ಬೇಕರಿಯಲ್ಲಿ ಸಿಗುವ ಡೋನಟ್ ಮನೆಯಲ್ಲೂ ಮಾಡ್ಬೋದು ತುಂಬಾ ಸುಲಭವಾಗಿ

    ನಾವು ಬೇಕರಿ, ಮಾಲ್‌ಗಳಿಗೆ ಹೋದಾಗ ಗಮನ ಸೆಳೆಯುವ ರುಚಿಕರ ಡೋನಟ್‌ಗಳನ್ನು ಸುಲಭವಾಗಿ ಮನೆಯಲ್ಲೂ ಮಾಡ್ಬೋದು ಎಂಬುದು ನಿಮಗೆ ತಿಳಿದಿದ್ಯಾ? ಇಲ್ಲ ಎಂದರೆ ನಾವು ಈ ಒಂದು ರೆಸಿಪಿಯನ್ನು ಹೇಗೆ ಮಾಡಬಹುದು ಎಂದು ಹೇಳಿಕೊಡುತ್ತೇವೆ. ಮೊಟ್ಟೆ ಬಳಸದೇ ಮಾಗಿದ ಬಾಳೆಹಣ್ಣಿನಿಂದ ಡೋನಟ್‌ಗಳನ್ನು (Banana Donut) ತಯಾರಿಸುವುದು ಈ ರೆಸಿಪಿಯ ಇನ್ನೊಂದು ವಿಶೇಷತೆ. ಹಾಗಾದ್ರೆ, ಈ ಕೂಡಲೆ ನೀವೂ ಮನೆಯಲ್ಲಿ ಡೋನಟ್ ಮಾಡೋದನ್ನು ಕಲಿತುಕೊಳ್ಳಿ.

    ಬೇಕಾಗುವ ಪದಾರ್ಥಗಳು:
    ಬೆಣ್ಣೆ – ಕಾಲು ಕಪ್
    ಮಾಗಿದ ಬಾಳೆಹಣ್ಣು – 3
    ಕಂದು ಸಕ್ಕರೆ – ಅರ್ಧ ಕಪ್
    ವೆನಿಲ್ಲಾ ಸಾರ – ಅರ್ಧ ಟೀಸ್ಪೂನ್
    ಮೈದಾ ಹಿಟ್ಟು – ಮುಕ್ಕಾಲು ಕಪ್
    ಓಟ್ಸ್ ಹಿಟ್ಟು – ಕಾಲು ಕಪ್
    ಬೇಕಿಂಗ್ ಪೌಡರ್ – ಒಂದೂವರೆ ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ನೀರು – ಕಾಲು ಕಪ್
    ವಿನೆಗರ್ – ಅರ್ಧ ಟೀಸ್ಪೂನ್
    ಚಾಕೋಲೇಟ್ ಐಸಿಂಗ್‌ಗೆ:
    ಬೆಣ್ಣೆ – 2 ಟೀಸ್ಪೂನ್
    ಸಕ್ಕರೆ ಪುಡಿ – 1 ಕಪ್
    ಕೋಕೋ ಪೌಡರ್ – ಕಾಲು ಕಪ್
    ನೀರು – 2 ಟೀಸ್ಪೂನ್ ಇದನ್ನೂ ಓದಿ: ದೇಸೀ ಸಿಹಿಯ ಟಚ್ ನೀಡಿ ಚಾಕ್ಲೇಟ್ ಶೀರಾ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 350 ಡಿಗ್ರಿಗಳಿಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
    * ಡೋನಟ್ ಪ್ಯಾನ್‌ಗೆ ಬೆಣ್ಣೆಯನ್ನು ಗ್ರೀಸ್ ಮಾಡಿ, ಸ್ವಲ್ಪ ಮೈದಾ ಹಿಟ್ಟನ್ನು ಡಸ್ಟ್ ಮಾಡಿ ಇಟ್ಟುಕೊಳ್ಳಿ.
    * ಈಗ ಒಂದು ಬೌಲ್‌ಗೆ ಮಾಗಿದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಹಾಕಿಕೊಳ್ಳಿ. ಅದಕ್ಕೆ ಕರಗಿಸಿದ ಬೆಣ್ಣೆ, ಕಂದು ಸಕ್ಕರೆ, ವೆನಿಲ್ಲಾ ಸಾರವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ಅದಕ್ಕೆ ಮೈದಾ ಹಿಟ್ಟು, ಓಟ್ಸ್ ಹಿಟ್ಟು, ಬೇಕಿಂಗ್ ಪೌಡರ್, ಉಪ್ಪು, ನೀರು ಹಾಗೂ ವಿನೆಗರ್ ಸೇರಿಸಿ, ನಯವಾದ ಹಿಟ್ಟಾಗುವವರೆಗೆ ಮಿಶ್ರಣ ಮಾಡಿ.
    * ಈಗ ಡೋನಟ್ ಪ್ಯಾನ್‌ಗೆ ಈ ಹಿಟ್ಟನ್ನು ಹಾಕಿಕೊಂಡು 15 ನಿಮಿಷಗಳ ಕಾಲ 350 ಡಿಗ್ರಿ ಬಿಸಿಯಲ್ಲಿ ಓವನ್‌ನಲ್ಲಿಟ್ಟು ಬೇಯಿಸಿಕೊಳ್ಳಿ.
    * ಬಳಿಕ ಅದನ್ನು ಹೊರ ತೆಗೆದು, 10 ನಿಮಿಷ ತಣ್ಣಗಾಗಲು ಬಿಡಿ. ಬಳಿಕ ಪ್ಯಾನ್ ಅನ್ನು ಮಗುಚಿ ಹಾಕಿ ಡೋನಟ್‌ಗಳನ್ನು ಪ್ಯಾನ್‌ಗಳಿಂದ ಬೇರ್ಪಡಿಸಿ.
    * ಈಗ ಐಸಿಂಗ್ ತಯಾರಿಸಲು ಒಂದು ಬಟ್ಟಲಿನಲ್ಲಿ ಕರಗಿಸಿದ ಬೆಣ್ಣೆ ಹಾಕಿ, ಪುಡಿ ಮಾಡಿದ ಸಕ್ಕರೆ ಹಾಗೂ ಕೋಕೋ ಪೌಡರ್ ಸೇರಿಸಿ ಸ್ವಲ್ಪ ನೀರು ಚಿಮುಕಿಸಿ ಮಿಶ್ರಣ ಮಾಡಿ.
    * ಸ್ಥಿರತೆ ನೋಡಿಕೊಂಡು ನೀವು ಬೇಕೆಂದರೆ ಇನ್ನಷ್ಟು ನೀರು ಸೇರಿಸಬಹುದು.
    * ಈಗ ತಣ್ಣದಾದ ಡೋನಟ್‌ಗಳನ್ನು ಅರ್ಧದಷ್ಟು ಕೋಕೋ ಪೌಡರ್ ಮಿಶ್ರಣದಲ್ಲಿ ಅದ್ದಿ, ತೆಗೆಯಿರಿ. ಐಸಿಂಗ್ ಡೋನಟ್ ಮೇಲೆ ಸೆಟ್ ಆಗಲು ಸ್ವಲ್ಪ ಸಮಯ ನೀಡಿ.
    * ಡೋನಟ್ ಐಸಿಂಗ್ ಗಟ್ಟಿಯಾದ ಬಳಿಕ ಬೇಕರಿಯಲ್ಲಿ ಸಿಗುವಂತಹ ಡೋನಟ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಬ್ರೆಡ್ ಇಲ್ಲದೇ ಮಾಡಿ ರುಚಿರುಚಿಯಾದ ಆಲೂ ಚಿಲ್ಲಾ ಸ್ಯಾಂಡ್‌ವಿಚ್