Tag: Donne Biryani Palace

  • ಶ್ರುತಿಯನ್ನು ಲೈಫ್ ಸೂಪರ್ ಸ್ಟಾರ್ ಎಂದ ಚಂದನ್

    ಶ್ರುತಿಯನ್ನು ಲೈಫ್ ಸೂಪರ್ ಸ್ಟಾರ್ ಎಂದ ಚಂದನ್

    ಬೆಂಗಳೂರು: ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದನ್, ಹಲವು ಸಿನಿಮಾ ಹಾಗೂ ಸೀರಿಯಲ್‍ಗಳಲ್ಲಿ ಬ್ಯುಸಿಯಾಗಿದ್ದು, ಇದೆಲ್ಲದರ ಜೊತೆಗೆ ಇದೀಗ ತಮ್ಮದೆಯಾದ ಹೊಸ ಬ್ಯುಸಿನೆಸ್ ಪ್ರಾರಂಭಿಸಿದ್ದಾರೆ. ಈ ವೇಳೆ ನಟಿ ಶ್ರುತಿಯವರನ್ನು ಹಾಡಿ ಹೊಗಳಿದ್ದಾರೆ.

    ನಟ ಚಂದನ್ ಕುಮಾರ್ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ತಮ್ಮದೇಯಾದ ಸ್ವಂತ ಬ್ಯುಸಿನೆಸ್ ಪ್ರಾರಂಭಿಸಿದ್ದು, ಬಿರಿಯಾನಿ ರೆಸ್ಟೋರೆಂಟ್‍ನ್ನು ಆರಂಭಿಸಿದ್ದು, ಇದಕ್ಕೆ ‘ದೊನ್ನೆ ಬಿರಿಯಾನಿ ಪ್ಯಾಲೆಸ್’ ಎಂದು ಹೆಸರಿಟ್ಟಿದ್ದಾರೆ. ಇತ್ತೀಚೆಗಷ್ಟೇ ರೆಸ್ಟೋರೆಂಟ್ ಉದ್ಘಾಟನಾ ಕಾರ್ಯಕ್ರಮ ಮಾಡಿದ್ದು, ನಟ ಶಿವರಾಜ್ ಕುಮಾರ್ ಹಾಗೂ ನಟಿ ಶ್ರುತಿ ಅವರು ಓಪನಿಂಗ್ ಸೆರೆಮನಿಯಲ್ಲಿ ಭಾಗವಹಿಸಿದ್ದರು.

    ಈ ವೇಳೆ ತೆಗೆದ ಚಿತ್ರಗಳನ್ನು ಚಂದನ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಶ್ರುತಿ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ. ನಾನು ಕಂಡ ಅದ್ಭುತ ಶಿಕ್ಷಕಿಯರಲ್ಲಿ ಮದರ್ ಇಂಡಿಯಾ ಶೃತಿ ಮೇಡಮ್ ಸಹ ಒಬ್ಬರು. ನನ್ನ ಜೀವನದಲ್ಲಿ ತುಂಬಾ ಸಲ ಹಾದು ಹೋಗುವವರು. ಇವರು ಜೀವನದ ನೈಜ ಸೂಪರ್ ಸ್ಟಾರ್. ಬಿಗ್ ಬಾಸ್ ದಿನಗಳಿಂದ ನಾನು ಅವರನ್ನು ಉತ್ತಮ ಮಾರ್ಗದರ್ಶಕಿ ಹಾಗೂ ಗೌರವಾನ್ವಿತ ಮಹಿಳೆ ಎಂದು ಯಾವಾಗಲೂ ಮೆಚ್ಚುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಬಿಗ್ ಬಾಸ್ ಶೋ ಬಳಿಕವೂ ನಾವು ಅದೇ ರೀತಿಯಾಗಿದ್ದೇವೆ. ಮುಂದೆಯೂ ಇದೇ ರೀತಿಯಾಗಿ ಇರುತ್ತೇವೆ. ನನ್ನ ಜೀವನದ ಅತ್ಯಂತ ನಂಬಲಾಗದ ದಿನದ ಭಾಗವಾಗಿದ್ದಕ್ಕೆ ಧನ್ಯವಾದಗಳು ಶ್ರುತಿ ಮಾ, ಲೋಡ್ಸ್ ಆಫ್ ಲವ್ ಎಂದು ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ.

    ಚಂದನ್ ಕುಮಾರ್ ಮಾಲೀಕತ್ವದ ದೊನ್ನೆ ಬಿರಿಯಾನಿ ಪ್ಯಾಲೆಸ್‍ನ 6ನೇ ಶಾಖೆ ಇದಾಗಿದ್ದು, ಬೆಂಗಳೂರಿನ ಸಹಕಾರ ನಗರದಲ್ಲಿ ತೆರೆಯಲಾಗಿದೆ. ನಟ ಶಿವರಾಜ್ ಕುಮಾರ್ ಹಾಗೂ ಶ್ರುತಿ ಉದ್ಘಾಟಿಸಿದ್ದಾರೆ. ಈ ಫೋಟೋಗಳು ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಪ್ರೇಮ ಬರಹ ಸಿನಿಮಾ ಮೂಲಕ ಗುರುತಿಸಿಕೊಂಡಿದ್ದ ಚಂದನ್, ಬಳಿಕ ಸೀರಿಯಲ್‍ಗಳಲ್ಲಿ ಬ್ಯುಸಿಯಾಗಿದ್ದರು. ಇದೀಗ ಡಾರ್ಲಿಂಗ್ ಕೃಷ್ಣ ಹಾಗೂ ಭಾವನಾ ಮೆನನ್ ಅಭಿನಯದ ಕೃಷ್ಣಎಟ್‍ಜೀಮೇಲ್ ಡಾಟ್ ಕಾಂ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಸಿನಿ ಜರ್ನಿಯಲ್ಲಿ ಮತ್ತೊಂದು ಬ್ರೇಕ್‍ಗಾಗಿ ಕಾಯುತ್ತಿದ್ದಾರೆ.