Tag: donation

  • ಪುತ್ರಿ ಮದುವೆ ಊಟ ರದ್ದು ಮಾಡಿ 11 ಲಕ್ಷ ರೂ. ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ಉದ್ಯಮಿ

    ಪುತ್ರಿ ಮದುವೆ ಊಟ ರದ್ದು ಮಾಡಿ 11 ಲಕ್ಷ ರೂ. ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ಉದ್ಯಮಿ

    ಗಾಂಧಿನಗರ: ವಜ್ರದ ಉದ್ಯಮಿಯೊಬ್ಬರು ತಮ್ಮ ಪುತ್ರಿಯ ಮದುವೆ ಸಮಾರಂಭದ ಊಟವನ್ನು ರದ್ದು ಮಾಡಿ ಸುಮಾರು 11 ಲಕ್ಷ ರೂ. ಹಣವನ್ನು ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೀಡಿದ್ದಾರೆ.

    ಸೂರತ್‍ನ ವಜ್ರದ ಉದ್ಯಮಿ ದೆವಾಶಿ ಮಾನಿಕ್ ಅವರು ತನ್ನ ಪುತ್ರಿ ಅಮಿ ಮದುವೆ ಸಮಾರಂಭದಲ್ಲಿ ಆಯೋಜಿಸಿದ್ದ ಊಟವನ್ನು ರದ್ದು ಮಾಡಿ, ಊಟಕ್ಕೆ ಮೀಸಲಿಟ್ಟ ಹಣವನ್ನು ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಕುಟುಂಬಸ್ಥರಿಗೆ ನೀಡಿದ್ದಾರೆ. ಅಲ್ಲದೇ ಸೇವಾ ಸಂಸ್ಥೆಗಳಿಗೆ 5 ಲಕ್ಷ ರೂ. ಧನ ಸಹಾಯ ಮಾಡಿದ್ದಾರೆ.

    ಶುಕ್ರವಾರದಂದು ಮಾನಿಕ್ ಅವರ ಪುತ್ರಿಯ ಮದುವೆ ನಿಶ್ಚಯವಾಗಿತ್ತು. ಅಲ್ಲದೆ ಈ ಸಮಾರಂಭದಲ್ಲಿ ಭರ್ಜರಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಗುರುವಾರದಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಗೆ 44 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ ಸುದ್ದಿ ತಿಳಿದು ಪುತ್ರಿ ಮದುವೆಗೆಂದು ಏರ್ಪಡಿಸಿದ್ದ ಊಟವನ್ನು ಉದ್ಯಮಿ ರದ್ದುಗೊಳಿಸಿದ್ದಾರೆ. ಹಾಗೆಯೇ ಹುತಾತ್ಮ ಯೋಧರ ಕುಟುಂಬಕ್ಕೆ ಹಾಗೂ ಸೇವಾ ಸಂಸ್ಥೆಗಳಿಗೆ ಧನ ಸಹಾಯ ಮಾಡಿ ದೇಶಭಕ್ತಿ ಮೆರೆದಿದ್ದಾರೆ.

    ಜಮ್ಮು-ಕಾಶ್ಮೀರದ ಅವಂತಿಪೋರಾದಲ್ಲಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಉಗ್ರನೊಬ್ಬ ಆತ್ಮಹತ್ಯಾ ದಾಳಿ ನಡೆಸಿದ್ದ. ಸ್ಫೋಟಕ ತುಂಬಿದ್ದ ಕಾರನ್ನು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ 44 ಸಿಆರ್‌ಪಿಎಫ್‌ ಯೋಧರು ವೀರ ಮರಣವನ್ನು ಅಪ್ಪಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತಿಯ ಸಾವಿನಲ್ಲಿಯೂ ಸಾರ್ಥಕತೆ ಮೆರೆದ 8 ತಿಂಗಳ ಗರ್ಭಿಣಿ

    ಪತಿಯ ಸಾವಿನಲ್ಲಿಯೂ ಸಾರ್ಥಕತೆ ಮೆರೆದ 8 ತಿಂಗಳ ಗರ್ಭಿಣಿ

    ಬೆಂಗಳೂರು: ಪತಿಯ ಸಾವಿನಲ್ಲಿಯೂ 8 ತಿಂಗಳ ಗರ್ಭಿಣಿಯೊಬ್ಬರು ಸಾರ್ಥಕತೆ ಮೆರೆದಿದ್ದಾರೆ. ಹೌದು, ಮಗುವಿನ ಜನನದ ಕನಸು ಕಂಡವಳಿಗೆ ಗಂಡನ ಸಾವಿನ ಸುದ್ದಿ ಭರಸಿಡಿಲು ಬಡಿದಂತಾಗಿತ್ತು. ಇಂತಹ ಆಘಾತದಲ್ಲಿಯೂ ಪತ್ನಿ ಪತಿಯ ಕಿಡ್ನಿ, ಹೃದಯ ಹಾಗೂ ಕಣ್ಣುಗಳನ್ನು ದಾನ ಮಾಡಿದ್ದಾರೆ.

    ಗರ್ಭಿಣಿಯ ಪತಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಯಶವಂತಪುರದ ಸ್ಪರ್ಶ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತಿ ಬದುಕಿ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿಯೇ ಅವರು ದಿನ ದೂಡುತ್ತಿದ್ದರು. ಆದರೆ ಶನಿವಾರ ನಿರೀಕ್ಷೆ ಹುಸಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರ ಪತಿ ಮೃತಪಟ್ಟಿದ್ದಾರೆ.

    ಪತಿಯ ಸಾವಿನ ಸುದ್ದಿ ಕೇಳಿದ್ದ ಪತ್ನಿಗೆ ಶಾಕ್ ಆಗಿತ್ತು. ಕೆಲವೇ ತಿಂಗಳಿಗೆ ಮಗುವಿಗೆ ಜನ್ಮ ನೀಡಲಿರುವ ಅವರಿಗೆ ಪತಿಯ ಅಗಲಿಕೆ ಭಾರೀ ನೋವು ತಂದಿತ್ತು. ನೋವಿಗೆ ಎದೆಗುಂದದೆ ಪತಿಯ ಕಿಡ್ನಿ, ಹೃದಯ ಹಾಗೂ ಕಣ್ಣಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಅವರ ನಿರ್ಧಾರಿಂದಾಗಿ ಇಂದು ನಾಲ್ಕೈದು ಜನರಿಗೆ ಮರು ಜೀವ ಸಿಕ್ಕಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಿರುಮಲ ತಿಮಪ್ಪನಿಗೆ 13.5 ಕೋಟಿ ರೂ. ದೇಣಿಗೆ ನೀಡಿದ ಎನ್‌ಆರ್‌ಐ  ಭಕ್ತರು

    ತಿರುಮಲ ತಿಮಪ್ಪನಿಗೆ 13.5 ಕೋಟಿ ರೂ. ದೇಣಿಗೆ ನೀಡಿದ ಎನ್‌ಆರ್‌ಐ ಭಕ್ತರು

    ಹೈದರಾಬಾದ್: ದೇಶದ ಶ್ರೀಮಂತ ದೇವರು ಎಂಬ ಹೆಗ್ಗಳಿಕೆ ಪಡೆದಿರುವ ತಿರುಮಲ ದೇವಾಲಯಕ್ಕೆ ಎನ್‌ಆರ್‌ಐ ಭಕ್ತರಿಬ್ಬರು ಬರೋಬ್ಬರಿ 13.5 ಕೋಟಿ ರೂ. ದೇಣಿಗೆ ನೀಡಿದ್ದಾರೆ.

    ಅಮೆರಿಕದಲ್ಲಿ ವಾಸಿಸುತ್ತಿರುವ ಆಂಧ್ರಪ್ರದೇಶ ಮೂಲದ ರವಿ ಮತ್ತು ಶ್ರೀನಿವಾಸ್ ಎಂಬವರು ಟಿಟಿಡಿ ಸಮಿತಿಗೆ ಈ ಹಣವನ್ನು ಹಸ್ತಾಂತರ ಮಾಡಿದ್ದಾರೆ. ಟಿಟಿಡಿ ಸಮಿತಿ ವಿಶ್ವದಲ್ಲೇ ಅತೀ ಹೆಚ್ಚು ದೇಣಿಗೆ ಹಣ ಪಡೆಯುವ ಹಾಗೂ ಹೆಚ್ಚು ಭಕ್ತರು ಭೇಟಿ ನೀಡುವ ಎರಡನೇ ಬಹುದೊಡ್ಡ ಧಾರ್ಮಿಕ ಕೇಂದ್ರ ಎಂಬ ಹೆಗ್ಗಳಿಕೆ ಪಡೆದಿದೆ.

    ಅಮೆರಿಕದ ಬೋಸ್ಟನ್ ನಲ್ಲಿ ಔಷಧಿ ಕಂಪೆನಿಯೊಂದರ ಸಿಇಒ ಆಗಿ ರವಿ ಕಾರ್ಯನಿರ್ವಹಿಸುತ್ತಿದ್ದು, 10 ಕೋಟಿ ರೂ. ದೇಣಿಗೆ ಹಣವನ್ನು ನೀಡಿದ್ದಾರೆ. ಉಳಿದಂತೆ ಶ್ರೀನಿವಾಸ್ ಅವರು ಜೆಸಿಜಿ ಟೆಕ್ನಾಲಜೀಸ್ ಎಂಬ ಸಂಸ್ಥೆಯನ್ನು ಹೊಂದಿದ್ದು, 3.50 ಕೋಟಿ ರೂ, ದೇಣಿಗೆಯನ್ನು ನೀಡಿದ್ದಾರೆ.

    ಟಿಟಿಡಿಗೆ ದೇಣಿಗೆ ಹಣ ನೀಡುವ ವೇಳೆ ಆಂಧ್ರಪ್ರದೇಶ ಸಚಿವ ಅಮರನಾಥ್ ರೆಡ್ಡಿ, ಹಿರಿಯ ಸಿನಿಮಾ ನಿರ್ದೇಶಕ ರಾಘವೇಂದ್ರ ರಾವ್ ಸೇರಿದಂತೆ ಟ್ರಸ್ಟ್ ನ ಸದಸ್ಯರು ಹಾಜರಿದ್ದರು. ಸದ್ಯ ಭಕ್ತರು ನೀಡಿರುವ ದೇಣಿಗೆ ಹಣವನ್ನು ಟಿಟಿಡಿ ಸಮಿತಿ ತಿರುಮಲದಲ್ಲಿ ನಿರ್ವಹಿಸುವ ಅನ್ನದಾನ, ಆಸ್ಪತ್ರೆ ಹಾಗೂ ಅನಾಥ ಮಕ್ಕಳ ಆಶ್ರಮದ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

  • ಸಿಲಿಕಾನ್ ಸಿಟಿ ಮಹಿಳೆಯರೇ ಎಚ್ಚರ – ದೇಣಿಗೆ ಕೇಳೋ ನೆಪದಲ್ಲಿ ಬರ್ತಾರೆ ಕಳ್ಳರು!

    ಸಿಲಿಕಾನ್ ಸಿಟಿ ಮಹಿಳೆಯರೇ ಎಚ್ಚರ – ದೇಣಿಗೆ ಕೇಳೋ ನೆಪದಲ್ಲಿ ಬರ್ತಾರೆ ಕಳ್ಳರು!

    ಬೆಂಗಳೂರು: ದೇಣಿಗೆ ಕೇಳೋ ನೆಪದಲ್ಲಿ ಕಳ್ಳರು ದರೋಡೆ ಮಾಡುತ್ತಿರುವ ಹಲವು ಪ್ರಕರಣಗಳು ಎಚ್ಎಎಲ್ ಬಡಾವಣೆಯಲ್ಲಿ ನಡೆದಿದೆ.

    ದಿನೇ ದಿನೇ ಕಳ್ಳರು ಹೊಸ ಹೊಸ ಯೋಜನೆ ಹಾಕಿಕೊಂಡು ದರೋಡೆ ನಡೆಸುತ್ತಿರುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ದೇಣಿಗೆ ಕೇಳುವ ನೆಪದಲ್ಲಿ ಒಂಟಿ ಮಹಿಳೆಯರು ಇರುವ ಮನೆಗೆ ನುಗ್ಗಿ ದರೋಡೆ ಮಾಡುತ್ತಿರುವ ಪ್ರಕರಣಗಳು ನಗರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

    ಎಚ್ಎಎಲ್ ಬಡಾವಣೆಯಲ್ಲಿ ಇಬ್ಬರು ದರೋಡೆಕೋರರು ಗುರುದ್ವಾರಕ್ಕೆ ದೇಣಿಗೆ ನೀಡುವಂತೆ ಮನೆಗೆ ಬಂದಿದ್ದಾರೆ. ಇದೇ ವೇಳೆ ಮಹಿಳೆಯ ಗಮನ ಬೇರೆಡೆ ಸೆಳೆದು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆ ಕುರಿತು ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ದೇಣಿಗೆ ಕೇಳುವ ನೆಪದಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸದರಿ ಇಬ್ಬರ ಕಳ್ಳರ ಮೇಲೆ ನಗರದ ವಿವಿಧೆಡೆ ಇಂತದ್ದೇ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಕಳ್ಳರ ಪತ್ತೆಗೆ ಬಲೆ ಬೀಸಿ ತೀವ್ರ ಶೋಧ ನಡೆಸುತ್ತಿದೆ ಎಂದು ಹೇಳಿದ್ದಾರೆ.

    ಒಂಟಿ ಮಹಿಳೆಯರೇ ಇರುವ ಮನೆಗಳೇ ಇವರ ಗುರಿಯಾಗಿದ್ದು, ಮಹಿಳೆಯರು ಎಚ್ಚರಿಕೆ ವಹಿಸಬೇಕೆಂದು ತಿಳಿಸಿದ್ದಾರೆ. ಯಾರಾದರೂ ದೇಣಿಗೆ ಸಂಗ್ರಹಿಸುವ ನೆಪದಲ್ಲಿ ಬಂದರೆ ಕೂಡಲೇ ಪೊಲೀಸರಿಗೆ ತಿಳಿಸುವಂತೆ ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ.

  • 100 ಕೋಟಿಯ ಆಸ್ತಿಯನ್ನು ದಾನ ಮಾಡಲಿದ್ದಾರೆ ಕರೀಂಲಾಲ್ ತೆಲಗಿ ಪತ್ನಿ

    100 ಕೋಟಿಯ ಆಸ್ತಿಯನ್ನು ದಾನ ಮಾಡಲಿದ್ದಾರೆ ಕರೀಂಲಾಲ್ ತೆಲಗಿ ಪತ್ನಿ

    ಮುಂಬೈ: ನಕಲಿ ಛಾಪಾಕಾಗದ ಹಗರಣದ ಮಾಸ್ಟರ್ ಮೈಂಡ್ ಅಬ್ದುಲ್ ಕರೀಂಲಾಲ್ ತೆಲಗಿ ಪತ್ನಿ ಶಹಿದಾ ತಮ್ಮ ಬಳಿಯಿರುವ 100 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡಲು ಮುಂದಾಗಿದ್ದಾರೆ.

    ಪುಣೆ ಸೆಷನ್ ಕೋರ್ಟ್ ನಲ್ಲಿ ಕೇಸ್ ಫೈಲ್ ಮಾಡುವ ಮುಂಚೆಯೇ ಸ್ವಪ್ರೇರಿತವಾಗಿ 100 ಕೋಟಿಯ ಆಸ್ತಿಯನ್ನು ಸರ್ಕಾರದ ವಶಕ್ಕೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಶಹಿದಾ ಅವರು ದಾನ ನೀಡಲಿರುವ ಆಸ್ತಿಗಳಲ್ಲಿ 9 ಪ್ರಾಪರ್ಟಿಗಳು ಕರ್ನಾಟಕದಲ್ಲಿವೆ.

    ಕೋಟ್ಯಾಂತರ ರೂಪಾಯಿ ಮೌಲ್ಯದ ಛಾಪಾಕಾಗದ ಹಗರಣದಲ್ಲಿ ಸಿಬಿಐ, ತೆಲಗಿಯ ಕೋಟ್ಯಾಂತರ ರೂ. ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಆದರೆ ಕರ್ನಾಟಕದಲ್ಲಿರುವ 9 ಪ್ರಾಪರ್ಟಿಗಳು ಶಹಿದಾ ಒಡೆತನದಲ್ಲಿದ್ದು, ಪೊಲೀಸರು ಅವುಗಳನ್ನು ವಶಪಡಿಸಿಕೊಂಡಿಲ್ಲ. ಕೃಷಿ ಭೂಮಿ, ವಾಣಿಜ್ಯ ಮಳಿಗೆಗಳು, ಫ್ಲ್ಯಾಟ್ ಗಳು ಸೇರಿದಂತೆ ಒಟ್ಟು 9 ಆಸ್ತಿಗಳು ಕರ್ನಾಟಕದಲ್ಲಿವೆ.

    ದಾನ ಮಾಡುತ್ತಿರುವುದು ಏಕೆ?: ನನಗೆ ಇರುವುದು ಒಬ್ಬಳೇ ಮಗಳು. ಆದರೆ ಆಕೆಗೆ ಮದುವೆಯಾಗಿದ್ದು, ಹಗರಣದಿಂದ ಗಳಿಸಿರುವ ಆಸ್ತಿ ನಮಗೆ ಬೇಡ ಎಂದು ಮಗಳ ಮನೆಯವರು ಹೇಳಿದ್ದಾರೆ. ಹಾಗಾಗಿ ಆಸ್ತಿಯನ್ನು ಸರ್ಕಾರದ ವಶಕ್ಕೆ ನೀಡಲು ಇಚ್ಚಿಸಿದ್ದೇನೆ ಎಂದು ಶಾಹಿದಾ ತಿಳಿಸಿದ್ದಾರೆ.

    ಸಿಬಿಐ ಕೆಲವು ದಿನಗಳಲ್ಲಿ ಶಹಿದಾರ ಒಡೆತನದಲ್ಲಿರುವ ಆಸ್ತಿಯನ್ನು ವಶಕ್ಕೆ ಪಡೆದುಕೊಳ್ಳಲಿತ್ತು. ಆದರೆ ಅದಕ್ಕೂ ಮುಂಚೆಯೇ ಶಾಹಿದಾ ಆಸ್ತಿಯನ್ನು ಸರ್ಕಾರಕ್ಕೆ ನೀಡಲು ಒಪ್ಪಿದ್ದಾರೆ.

    ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತೆಲಗಿ ಆಕ್ಟೋಬರ್ 26ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು. 2006ರ ಜನವರಿ 17ರಂದು ನಕಲಿ ಛಾಪಾ ಕಾಗದ ಹಗರಣದಲ್ಲಿ ತೆಲಗಿಗೆ 30 ವರ್ಷ ಕಠಿಣ ಜೈಲು ಶಿಕ್ಷೆ ಲಭಿಸಿತ್ತು. ಅಲ್ಲದೇ ಇನ್ನೊಂದು ಪ್ರಕರಣದಲ್ಲಿ ತೆಲಗಿಗೆ 2007ರ ಜೂನ್ 28ರಂದು 13 ವರ್ಷ ಶಿಕ್ಷೆಯಾಗಿತ್ತು.

     

  • ರಾಜಸ್ಥಾನದ ದೇವಾಲಯಗಳಿಂದ ಪಾಕ್ ಉಗ್ರರಿಗೆ ಹಣ ರವಾನೆ!

    ರಾಜಸ್ಥಾನದ ದೇವಾಲಯಗಳಿಂದ ಪಾಕ್ ಉಗ್ರರಿಗೆ ಹಣ ರವಾನೆ!

    – ಜನರ ನಂಬಿಕೆಯ ಜೊತೆ ಪಾಕ್ ಐಎಸ್‍ಐ ಆಟ
    – ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾದ ಹಣ ಉಗ್ರರಿಗೆ ಸಂದಾಯ

    ಜೈಪುರ: ರಾಜಸ್ಥಾನ ಹೆಸರು ಕೇಳಿದರೆ ಸಾಕು, ಎಲ್ಲರಿಗೂ ನೆನಪಾಗುವುದು ಅಲ್ಲಿನ ಅರಮನೆಗಳು ಮತ್ತು ಮನಮೋಹಕ ಸಂಸ್ಕೃತಿ ವಿಚಾರಗಳು. ಆದರೆ ಈಗ ಅಲ್ಲಿನ ಗ್ರಾಮಗಳ ದೇವಾಲಯಗಳಿಂದ ಪಾಕಿಸ್ತಾನದ ಉಗ್ರರಿಗೆ ಹಣ ರವಾನೆಯಾಗುತ್ತಿರುವ ಶಾಕಿಂಗ್ ವಿಚಾರ ಕೇಳಿಬಂದಿದೆ.

    ಪಾಕಿಸ್ತಾನದಲ್ಲಿನ ಭಯೋತ್ಪಾದಕರಿಗೆ ರಾಜಸ್ಥಾನ ಗಡಿ ಭಾಗದ ಹಳ್ಳಿಗಳ ದೇವಾಲಯಗಳಿಂದ ಹಣ ಸಂಗ್ರಹವಾಗುತ್ತಿದೆ ಎಂಬ ಮಾಹಿತಿ ಈಗ ಗುಪ್ತಚರ ಇಲಾಖೆಯಿಂದ ಬಹಿರಂಗವಾಗಿದೆ.

    ಭಕ್ತರು ದೇವಾಲಯಗಳಲ್ಲಿ ಕಾಣಿಕೆ ಹಾಕುತ್ತಾರೆ ಎನ್ನುವುದು ಎಲ್ಲಿರಿಗೂ ತಿಳಿದಿರುವ ವಿಚಾರ. ಈಗ ಭಕ್ತರ ನಂಬಿಕೆಯ ಮೇಲೆ ಪಾಕಿಸ್ತಾನ ಗೂಢಚರ್ಯೆ ಸಂಸ್ಥೆ ಐಎಸ್‍ಐ ಆಟವಾಡುತ್ತಿದ್ದು, ಐಎಸ್‍ಐನ ಏಜೆಂಟ್ ಗಳು ರಾಜಸ್ಥಾನದ ಗಡಿಯಲ್ಲಿರುವ ಕೆಲವು ಹಳ್ಳಿಗಳ ದೇವಾಲಯಗಳಲ್ಲಿ ಕಾಣಕೆ ಹುಂಡಿಯನ್ನು ಇರಿಸಿದ್ದಾರೆ. ಇಲ್ಲಿ ಸಂಗ್ರಹವಾದ ಹಣ ನೇರವಾಗಿ ಉಗ್ರರ ಕೈ ಸೇರುತ್ತಿದೆ ಎನ್ನುವ ಅಂಶವನ್ನು ರಾಜಸ್ಥಾನ ಗುಪ್ತಚರ ಇಲಾಖೆ ತಿಳಿಸಿದೆ.

    ಪತ್ತೆಯಾಗಿದ್ದು ಹೇಗೆ?
    ಕಳೆದ ವಾರ ಬಾರ್ಮರ್ ಜಿಲ್ಲೆಯ ಗಡಿಭಾಗದ ಗ್ರಾಮವೊಂದರಲ್ಲಿ ಐಎಸ್‍ಐ ಎಜೆಂಟ್ ದೀನಾ ಖಾನ್ ಎಂಬಾತನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆ ವೇಳೆ ಚೋತನ್ ಎಂಬ ಹಳ್ಳಿಯಲ್ಲಿ ಸುಮಾರು 3.5 ಲಕ್ಷ ರೂ. ಕಾಣಿಕೆ ಹುಂಡಿಯಿಂದ ದೇಣಿಗೆ ಸಂಗ್ರಹ ಮಾಡಿ ನಾನು ಹಂಚಿದ್ದೇನೆ ಎಂದು ಹೇಳಿದ್ದಾನೆ.

    ದೀನಾ ಖಾನ್‍ನನ್ನು ನಿಯಂತ್ರಿಸುತ್ತಿದ್ದ ವ್ಯಕ್ತಿಗಳು ಆತನಿಗೆ ಕರೆ ಮಾಡಿ ಹಣವನ್ನು ಹಂಚುವುಂತೆ ನಿರ್ದೇಶಿಸಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಾಣಿಕೆ ಹುಂಡಿಯೇ ಯಾಕೆ?
    ಹವಾಲಾ ಮೂಲಕ ಹಣ ಸಾಗಿಸಲು ಈಗ ತುಂಬಾ ಕಷ್ಟವಾಗಿದೆ. ಅಲ್ಲದೇ ಇದರಿಂದ ಸಿಕ್ಕಿಬೀಳುವ ಅಪಾಯ ಹೆಚ್ಚು. ಹೀಗಾಗಿ ಸುಲಭವಾಗಿ ಹಣ ಸಂಗ್ರಹ ಮಾಡಲು ಕಾಣಿಕೆ ಹುಂಡಿಗಳನ್ನು ಇಡುತ್ತಿದ್ದೇವೆ ಎಂದು ಆತ ತಿಳಿಸಿದ್ದಾನೆ.

    ರಾಜಸ್ಥಾನ ಗಡಿ ಭಾಗದಲ್ಲಿರುವ ಹಲವು ದೇವಾಲಯಗಳಲ್ಲಿ ಉಗ್ರರಿಗೆ ಹಣವನ್ನು ಸಂದಾಯ ಮಾಡಲು ಕಾಣಿಕೆ ಡಬ್ಬಿಗಳನ್ನು ಇಟ್ಟಿದ್ದಾರೆ ಎನ್ನುವ ಶಂಕೆಯನ್ನು ಗುಪ್ತಚರ ಇಲಾಖೆ ವ್ಯಕ್ತಪಡಿಸಿದೆ.

  • ಡೈರಿ ಡೈನಮೈಟ್ ಸ್ಫೋಟಕ್ಕೆ ಊಹಿಸಲಸಾಧ್ಯ ಟ್ವಿಸ್ಟ್: ಗೋವಿಂದರಾಜು ಹೇಳಿಕೆಯಿಂದಲೇ ಸರ್ಕಾರಕ್ಕೆ ಕಂಟಕ!

    ಡೈರಿ ಡೈನಮೈಟ್ ಸ್ಫೋಟಕ್ಕೆ ಊಹಿಸಲಸಾಧ್ಯ ಟ್ವಿಸ್ಟ್: ಗೋವಿಂದರಾಜು ಹೇಳಿಕೆಯಿಂದಲೇ ಸರ್ಕಾರಕ್ಕೆ ಕಂಟಕ!

    ಬೆಂಗಳೂರು: ಡೈರಿ ಡೈನಮೈಟ್ ಸ್ಫೋಟಕ್ಕೆ ಊಹಿಸಲಸಾಧ್ಯ ಟ್ವಿಸ್ಟ್ ಸಿಕ್ಕಿದೆ. ಐಟಿ ವಿಚಾರಣೆ ವೇಳೆ ಗೋವಿಂದ ರಾಜು ನೀಡಿದ್ದ ಹೇಳಿಕೆಯಿಂದಲೇ ಸಿದ್ದು ಸರ್ಕಾರಕ್ಕೆ ಕಂಟಕ ಎದುರಾಗಿದೆ.

    ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಎಂಎಲ್‍ಸಿ ಗೋವಿಂದರಾಜು ನಿವಾಸದಲ್ಲಿ ಸಿಕ್ಕಿದೆ ಎನ್ನಲಾದ ಡೈರಿಯ ಒಳಗಡೆ ಇರುವ ಮಾಹಿತಿ ಗುರುವಾರ ಸ್ಫೋಟಗೊಂಡಿತ್ತು. ಈಗ ಈ ಐಟಿ ದಾಳಿಯ ತನಿಖೆ ನಿರ್ಣಾಯಕ ಹಂತ ತಲುಪಿದ್ದು, ಇನ್ನೊಂದು ತಿಂಗಳಿನಲ್ಲಿ ಗೋವಿಂದರಾಜು ಜನ್ಮ ಜಾತಕ ಸಂಪೂರ್ಣ ಬಯಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

    ಡೈರಿ ನನ್ನದಲ್ಲ ಸಂಚು ರೂಪಿಸಿ ನನ್ನ ಮನೆಯಲ್ಲಿ ಯಾರೋ ಇಟ್ಟು ಹೋಗಿದ್ದಾರೆ ಎಂದು ಕಳೆದ ವರ್ಷದ ಮಾರ್ಚ್ 15ರಂದು ಐಟಿ ಮುಂದೆ ಗೋವಿಂದರಾಜು ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಈ ಡೈರಿ ಯಾರದ್ದು? ಅಲ್ಲಿರೋ ಸಂಕೇತಾಕ್ಷರ ಯಾರದ್ದು ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಕಳೆದ ಮಾರ್ಚ್ 13ರಂದು ಐಟಿ ವಿಚಾರಣೆ ಆರಂಭವಾಗಿದ್ದು, ಗೋವಿಂದರಾಜು ಆದಾಯದ ಪಕ್ಕಾ ಲೆಕ್ಕವನ್ನು ಐಟಿ ಅಧಿಕಾರಿಗಳು ಹಾಕುತ್ತಿದ್ದಾರೆ. ಸಕ್ರಮ ಹಾಗೂ ಅಕ್ರಮ ಮೂಲಗಳಿಂದ ಬಂದ ಆದಾಯವೆಷ್ಟು ಎನ್ನುವುದನ್ನು ಲೆಕ್ಕ ಹಾಕುತ್ತಿದ್ದಾರೆ. ಅಕ್ರಮ ಮೂಲ ಸಾಬೀತಾದರೆ ಗೋವಿಂದರಾಜುಗೆ ಅವರ ಮೇಲೆ ಜಾರಿ ನಿರ್ದೇಶನಾಲಯ ಮೂಲಕ ಅಕ್ರಮ ಹಣ ವಿನಿಯಮ ಕೇಸ್ ಬೀಳಲಿದೆ.

    ಅಕ್ರಮ ಹಣ ವಿನಿಯಮ ಕೇಸು ಬಿದ್ದರೆ ಗೋವಿಂದರಾಜು ಬಂಧನ ಖಚಿತವಾಗಿದ್ದು, ಗೋವಿಂದರಾಜು ಗ್ಯಾಂಗ್‍ಗೆ ಗಂಡಾಂತರ ಆರಂಭವಾಗಲಿದೆ. ಡೈರಿಯಲ್ಲಿ ನಮೂದಾಗಿರೋ ಶಂಕಿತ ಪ್ರಭಾವಿಗಳಾಗಿರುವ ಕೆಜೆಜಿ, ಎಂಬಿಪಿ, ಆರ್‍ಜಿ ಕಚೇರಿ, ಎಸ್‍ಜಿ ಕಚೇರಿ, ಡಿಜಿವಿಎಸ್, ಎಚ್.ಕಾಂ,ಎಚ್‍ಸಿಎಂ, ಡಿಕೆಎಸ್, ಆರ್‍ಎಲ್‍ಆರ್, ಆರ್‍ವಿಡಿ, ಕೆಂಪ್, ರಘು, ಎಸ್‍ಬಿ, ಎಂ.ವೋರ, ಎಪಿ ಎಲ್ಲರಿಗೂ ಅಪಾಯವಾಗಲಿದೆ.

    ಸಿಬಿಐ ಮೊರೆ: ಹಸ್ತಲಿಪಿಯ ತನಿಖೆ ನಡೆಸುವ ಅಧಿಕಾರ ಐಟಿ ಇಲಾಖೆಗೆ ಇಲ್ಲದ ಕಾರಣ ಬರವಣಿಗೆ ರಹಸ್ಯ ತಿಳಿಯಲು ಸಿಬಿಐ ಮೊರೆ ಹೋಗಲಿದೆ ಎಂದು ಹೇಳಲಾಗುತ್ತಿದೆ. ಸಿಬಿಐಗೆ ಮಾತ್ರ ಈ ಬಗ್ಗೆ ವಿಚಾರಣೆ ನಡೆಸುವ ಅಧಿಕಾರವಿದ್ದು, ಒಂದು ವೇಳೆ ತನಿಖೆ ಆರಂಭವಾದರೆ ಡೈರಿ ಸಿಕ್ಕಿದ ಗೋವಿಂದರಾಜು ಶಯನಗೃಹದಿಂದಲೇ ಆರಂಭವಾಗಲಿದೆ.