Tag: donation

  • ಭಾರತ್ ಜೋಡೋ ಯಾತ್ರೆಗೆ ದೇಣಿಗೆಯಾಗಿ 2,000 ರೂ. ಕೊಡದ ತರಕಾರಿ ವ್ಯಾಪಾರಿಗೆ ಬೆದರಿಕೆ

    ಭಾರತ್ ಜೋಡೋ ಯಾತ್ರೆಗೆ ದೇಣಿಗೆಯಾಗಿ 2,000 ರೂ. ಕೊಡದ ತರಕಾರಿ ವ್ಯಾಪಾರಿಗೆ ಬೆದರಿಕೆ

    ತಿರುವನಂತಪುರಂ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಆರಂಭಿಸಿರುವ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) 2,000 ರೂ. ದೇಣಿಗೆ (Donation) ನೀಡುವಂತೆ ತರಕಾರಿ ವ್ಯಾಪಾರಿ (Vegetable Shop) ಬಳಿ ಕಾಂಗ್ರೆಸ್ ಕಾರ್ಯಕರ್ತರು ಜಗಳವಾಡಿರುವ ಘಟನೆ ಕೇರಳದ ಕೊಲ್ಲಂ (Kerala’s Kollam) ಜಿಲ್ಲೆಯಲ್ಲಿ ನಡೆದಿದೆ.

    ಸ್ಥಳೀಯ ಪೊಲೀಸರೊಬ್ಬರು ತಿಳಿಸಿದ ಮಾಹಿತಿ ಪ್ರಕಾರ, ಕಾಂಗ್ರೆಸ್ ಕಾರ್ಯಕರ್ತರು ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಸಂಗ್ರಹಿಸುತ್ತಿದ್ದರು. ಈ ವೇಳೆ ಕೊಲ್ಲಂನ ತರಕಾರಿ ಅಂಡಿಯೊಂದಕ್ಕೆ ತೆರಳಿ ಅಂಗಡಿ ಮಾಲೀಕನೊಂದಿಗೆ 2,000 ರೂ. ದೇಣಿಗೆ ನೀಡುವಂತೆ ಕೇಳಿದ್ದಾರೆ. ಅಂಗಡಿ ಮಾಲೀಕ ನಾನು 500 ರೂ. ಕೊಡುವುದಾಗಿ ತಿಳಿಸಿದ್ದಾನೆ. ಈ ವೇಳೆ ಅಂಗಡಿ ಮಾಲೀಕ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಅಂಗಡಿಯ ತೂಕದ ಯಂತ್ರಕ್ಕೆ ಹಾನಿ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದರಲ್ಲಿ ವರದಿಯಾಗಿದೆ. ಇದನ್ನೂ ಓದಿ: ಮೊಬೈಲ್ ಕದಿಯಲು ಹೋಗಿ ಕಳ್ಳನ ಫಜೀತಿ – 10 ಕಿ.ಮೀ ಕಿಟಕಿಯಲ್ಲಿ ಜೋತಾಡ್ಕೊಂಡು ಬಂದ

    ಅಲ್ಲದೆ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ದೃಶ್ಯಾವಳಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ ಮಾಲೀಕರ ಬಳಿ ಬಂದು ದೇಣಿಯಾಗಿ 2,000 ರೂ. ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಅಂಗಡಿ ಮಾಲೀಕರು ಒಪ್ಪದೆ ತಾವು 500 ರೂ. ಕೊಡುವುದಾಗಿ ತಿಳಿಸಿದ್ದಾರೆ. ಬಳಿಕ ಜಗಳ ಆರಂಭಗೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಏರು ಧ್ವನಿಯಲ್ಲಿ ಅಂಗಡಿ ಮಾಲೀಕನಿಗೆ ದಮ್ಕಿ ಹಾಕಿದ್ದಾರೆ. ಇದನ್ನೂ ಓದಿ: ಶಸ್ತ್ರಾಸ್ತ್ರಗಳನ್ನು ತ್ಯಜಿಸಿ – ಉಗ್ರರಿಗೆ ಗುಲಾಂ ನಬಿ ಆಜಾದ್‌ ಮನವಿ

    ಘಟನೆಯ ಬಳಿಕ ಅಂಗಡಿ ಮಾಲೀಕ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಇನ್ನೊಂದು ಪ್ರತಿದೂರು ದಾಖಲಿಸಿದ್ದಾರೆ.

    ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದ್ದು, ಯಾತ್ರೆಯು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಯಾತ್ರೆಯು 3,500 ಕಿ.ಮೀ ದೂರವನ್ನು ಕ್ರಮಿಸುತ್ತಿದ್ದು 12 ರಾಜ್ಯಗಳನ್ನು ಹಾದುಹೋಗಲಿದೆ.

    Live Tv
    [brid partner=56869869 player=32851 video=960834 autoplay=true]

  • ತಂದೆಯ ಹುಟ್ಟು ಹಬ್ಬದ ನೆನಪಿಗೆ ಹುಟ್ಟೂರಿನ ಆಸ್ಪತ್ರೆಗೆ 50 ಲಕ್ಷ ರೂ. ನೀಡಿದ ಪ್ರಶಾಂತ್ ನೀಲ್

    ತಂದೆಯ ಹುಟ್ಟು ಹಬ್ಬದ ನೆನಪಿಗೆ ಹುಟ್ಟೂರಿನ ಆಸ್ಪತ್ರೆಗೆ 50 ಲಕ್ಷ ರೂ. ನೀಡಿದ ಪ್ರಶಾಂತ್ ನೀಲ್

    ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ದೇಶಕ ಪ್ರಶಾಂತ್ ನೀಲ್, ಕೇವಲ ಸಿನಿಮಾಗಳಿಂದ ಮಾತ್ರ ಗಮನ ಸೆಳೆಯುತ್ತಿಲ್ಲ. ಅವರ ಸಮಾಜಮುಖಿ ಕೆಲಸಗಳು ಕೂಡ ಅವರನ್ನು ಗೌರವದಿಂದ ಕಾಣುವಂತೆ ಮಾಡುತ್ತಿವೆ. ಸಿನಿಮಾಗಳಿಂದ ಪ್ರಶಾಂತ್ ಫೇಮಸ್ ಆಗಿದ್ದರೂ, ಇದೀಗ ಅವರು ತಾವು ಹುಟ್ಟಿದ ಊರಿನಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಿನ ಆಸ್ಪತ್ರೆಗೆ ಐವತ್ತು ಲಕ್ಷ ರೂಪಾಯಿಯನ್ನು ಕೊಡುವ ಮೂಲಕ ಮತ್ತೆ ಸದ್ದು ಮಾಡಿದ್ದಾರೆ.

    ಪ್ರಶಾಂತ್ ನೀಲ್ ಮೂಲತಃ ಆಂಧ್ರ ಪ್ರದೇಶದ ನೀಲಕಂಠಪುರಂ ನವರು. ಅವರ ಪೂರ್ಣ ಹೆಸರು ಪ್ರಶಾಂತ್ ನೀಲಕಂಠಪುರಂ, ಅದನ್ನೇ ಅವರು ಪ್ರಶಾಂತ್ ನೀಲ್ ಅಂತ ಬದಲಾಯಿಸಿಕೊಂಡಿದ್ದಾರೆ. ಈ ಊರಿನಲ್ಲಿ ಕಣ್ಣಿಗೆ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದ್ದು, ತಮ್ಮ ತಂದೆಯ 75ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಹೆಸರಿನಲ್ಲೇ 50 ಲಕ್ಷ ರೂಪಾಯಿಯನ್ನು ನೀಡಿದ್ದಾರೆ. ಇದನ್ನೂ ಓದಿ:Bigg Boss: ಗರ್ಲ್‌ಫ್ರೆಂಡ್ ವಿಚಾರಕ್ಕೆ ಬಂದ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಿಡಿಕಾರಿದ ಜಶ್ವಂತ್

    ಪ್ರಶಾಂತ್ ನೀಡಿರುವ ದೇಣಿಗೆಯನ್ನು ಬಹಿರಂಗ ಪಡಿಸಿದ್ದು, ಸ್ವತಃ ಅವರ ಚಿಕ್ಕಪ್ಪ, ಆಂಧ್ರ ಪ್ರದೇಶ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ, ಮಾಜಿ ಸಚಿವ ಡಾ. ಎನ್. ರಘುವೀರ ರೆಡ್ಡಿ ಅವರು. ಈ ವಿಷಯವನ್ನು ಟ್ವಿಟ್ ಮಾಡಿ, ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹಣದಿಂದ ಎಸ್.ವಿ. ಪ್ರಸಾದ್ ಕಣ್ಣಿನ ಆಸ್ಪತ್ರೆ ಹಲವರಿಗೆ ಬೆಳಕಾಗಲಿದೆ ಎಂದು ಅವರು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿನ್ ಲಾಡೆನ್ ಕುಟುಂಬದಿಂದ ಪ್ರಿನ್ಸ್ ಚಾರ್ಲ್ಸ್ ಚಾರಿಟಿಗೆ ಭಾರೀ ಮೊತ್ತದ ದೇಣಿಗೆ

    ಬಿನ್ ಲಾಡೆನ್ ಕುಟುಂಬದಿಂದ ಪ್ರಿನ್ಸ್ ಚಾರ್ಲ್ಸ್ ಚಾರಿಟಿಗೆ ಭಾರೀ ಮೊತ್ತದ ದೇಣಿಗೆ

    ಲಂಡನ್: ಬ್ರಿಟನ್ ರಾಜಮನೆತನದ ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ ಅವರ ದತ್ತಿ ಟ್ರಸ್ಟ್‌ಗೆ ಇಸ್ಲಾಮಿಕ್ ಉಗ್ರ ಸಂಘಟನೆ ಅಲ್-ಖೈದಾ ಸ್ಥಾಪಕ ಒಸಾಮಾ ಬಿನ್ ಲಾಡೆನ್‌ನ ಕುಟುಂಬ ಭಾರೀ ಮೊತ್ತದ ದೇಣಿಗೆ ನೀಡಿದೆ. ಪ್ರಿನ್ಸ್ ಚಾರ್ಲ್ಸ್‌ನ ಚಾರಿಟೆಬಲ್ ಟ್ರಸ್ಟ್ 1 ಮಿಲಿಯನ್ ಪೌಂಡ್(ಸುಮಾರು 9 ಕೋಟಿ ರೂ.) ದೇಣಿಗೆಯನ್ನು ಪಡೆದಿದೆ ಎಂದು ವರದಿಯಾಗಿದೆ.

    ಬಿನ್ ಲಾಡೆನ್ ಕುಟುಂಬದ ಸದಸ್ಯರು ಯಾವುದೇ ತಪ್ಪು ಮಾಡಿಲ್ಲ ಎಂಬ ಸಲಹೆ ಇಲ್ಲದಿದ್ದರೂ ಇದೀಗ 73 ವರ್ಷಗಳ ಪ್ರಿನ್ಸ್ ಚಾರಿಟಿ ಸಂಸ್ಥೆ ದೇಣಿಗೆಯನ್ನು ಪಡೆದು, ಕ್ರಿಮಿನಲ್ ಅಪರಾಧಗಳ ಆರೋಪದ ಮೇಲೆ ಪರಿಶೀಲನೆಗೆ ಒಳಗಾಗಿದೆ. ಪ್ರಿನ್ಸ್ ಚಾರ್ಲ್ಸ್‌ನ ಸಲಹೆಗಾರರು, ಒಸಾಮಾ ಬಿನ್ ಲಾಡೆನ್‌ಗೆ ಸಂಬಂಧಿಸಿದ ಯಾರಿಂದಲೂ ಹಣ ಪಡೆಯದಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ನರೇಂದ್ರ ಮೋದಿಯಿಂದಾಗಿ ನೀವೆಲ್ಲರೂ ಬದುಕಿದ್ದೀರಿ – ಲಸಿಕೆ ಪಡೆದ ಜನತೆಗೆ ಬಿಹಾರ ಸಚಿವ ಮಾತು

    2013ರಲ್ಲಿ ಚಾರ್ಲ್ಸ್ ಒಸಾಮಾಗೆ ಸಂಬಂಧಿಸಿದವರನ್ನು ಭೇಟಿಯಾಗಿದ್ದಾಗ ಪ್ರಿನ್ಸ್ ಆಫ್ ವ್ಹೇಲ್ಸ್ ಚಾರಿಟೆಬಲ್ ಫಂಡ್(ಪಿಡಬ್ಲ್ಯುಸಿಎಫ್)ಗೆ ಹಣ ಸ್ವೀಕರಿಸಲು ಒಪ್ಪಿಗೆ ಸೂಚಿಸಿದ್ದರು. ಆಗಿನ 5 ಟ್ರಸ್ಟಿಗಳು ದತ್ತಿ ಸ್ವೀಕರಿಸುವುದಕ್ಕೆ ಒಪ್ಪಿಗೆ ನೀಡಿದ್ದರು ಎಂದು ಪಿಡಬ್ಲ್ಯುಸಿಎಫ್ ಅಧ್ಯಕ್ಷರು ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಿರ್ಬಂಧ ಇನ್ನೆರಡು ದಿನ ವಿಸ್ತರಣೆ

    Live Tv
    [brid partner=56869869 player=32851 video=960834 autoplay=true]

  • ಪ್ರವೀಣ್ ಕುಟುಂಬಕ್ಕೆ ಸಹಾಯದ ನೆಪದಲ್ಲಿ ಹಣ ವಸೂಲಿ: ಚಕ್ರವರ್ತಿ ಸೂಲಿಬೆಲೆ ಗಂಭೀರ ಆರೋಪ

    ಪ್ರವೀಣ್ ಕುಟುಂಬಕ್ಕೆ ಸಹಾಯದ ನೆಪದಲ್ಲಿ ಹಣ ವಸೂಲಿ: ಚಕ್ರವರ್ತಿ ಸೂಲಿಬೆಲೆ ಗಂಭೀರ ಆರೋಪ

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಯಾದ ಬಿಜೆಪಿ ಯುವ ಮೋರ್ಚ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಹಾಯ ಮಾಡುವ ನೆಪದಲ್ಲಿ ಬಿಜೆಪಿ ಯುವ ಮೋರ್ಚದ ಸದಸ್ಯರು ಜನರಿಂದ ಹಣ ವಸೂಲಿ ಮಾಡಲು ಮುಂದಾಗಿದ್ದಾರೆ ಎಂದು ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಗಂಭೀರ ಆರೋಪ ಮಾಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸೂಲಿಬೆಲೆ, ಸ್ಥಳೀಯರು ಸ್ವಂತ ಖಾತೆಯ ವಿವರ ನೀಡಿ ಜನರ ಹಣ ವಸೂಲಿ ಮಾಡುತ್ತಿದ್ದಾರೆ. ಒಬ್ಬ ನಾಯಕ ಈ ರೀತಿ ವಂಚನೆಯ ಸಂದೇಶವನ್ನು ಕಳುಹಿಸಿದ್ದು, ಅದಕ್ಕೆ ಆತ ಸೂಕ್ತವಾದ ಉತ್ತರವನ್ನು ಪಡೆದಿದ್ದಾನೆ. ನೀವು ನಮ್ಮಿಂದ ಹಣವನ್ನು ಸಂಗ್ರಹಿಸುತ್ತೀರಿ ಹಾಗೂ ನಿಮ್ಮ ಮಂತ್ರಿಗಳು ಬಳಿಕ ನಿಮ್ಮಿಂದ ಆ ಹಣವನ್ನು ಲೂಟಿ ಮಾಡುತ್ತಾರೆ ಎಂದು ಉತ್ತರಿಸಿದ್ದಾರೆ. ಈ ರೀತಿ ವಂಚಿಸುವುದಕ್ಕೆ ಶಭಾಷ್ ಎಂದು ಸೂಲಿಬೆಲೆ ಟೀಕಿಸಿದ್ದಾರೆ.

    ಈ ಬಗ್ಗೆ ಪತ್ರವೂ ಬರೆದಿರುವ ಸೂಲಿಬೆಲೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಭಯೋತ್ಪಾದಕರು ಭೀಕರ ಹತ್ಯೆ ಮಾಡಿರುವುದು ಖಂಡನೀಯ. ನಮ್ಮ ಕಾರ್ಯಕರ್ತನಾದ ಪ್ರವೀಣ್ ಕುಟುಂಬಕ್ಕೆ ಪಕ್ಷವು ಈಗಾಗಲೇ ಮೊದಲ ಹಂತದ ನೆರವು ನೀಡಿದೆ. ಮುಂದೆಯೂ ಸರ್ಕಾರ ಮತ್ತು ಪಕ್ಷ ಅವರ ಜೊತೆಗಿರಲಿದೆ ಎಂದಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತ್ನಿ ಹೇಳಿಕೆ ವಿವಾದ – ದ್ರೌಪದಿ ಮುರ್ಮುಗೆ ಪತ್ರ ಬರೆದು ಕ್ಷಮೆಯಾಚಿಸಿದ ಅಧೀರ್

    ನೊಂದ ಕುಟುಂಬಕ್ಕೆ ಅಲ್ಲಲ್ಲಿ ಪಕ್ಷದ ಹೆಸರಿನಲ್ಲಿ ಖಾಸಗಿ ಧನ ಸಂಗ್ರಹ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಪಕ್ಷದ ಹೆಸರಿನಲ್ಲಿ ಯಾವುದೇ ರೀತಿಯ ಖಾಸಗಿ ಧನ ಸಂಗ್ರಹ ಮಾಡಬಾರದು ಎಂದು ಸೂಲಿಬೆಲೆ ತಿಳಿಸಿದ್ದು, ವಂಚನೆಗೊಳಗಾಗದಂತೆ ಜನರಿಗೂ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ವೀರೇಂದ್ರ ಹೆಗ್ಗಡೆ ಅವರನ್ನ ಭೇಟಿಯಾದ ಕಿಚ್ಚ ಸುದೀಪ್ ದಂಪತಿ

    Live Tv
    [brid partner=56869869 player=32851 video=960834 autoplay=true]

  • ಬೌರಿಂಗ್, ಲೇಡಿ ಕರ್ಜನ್ ಆಸ್ಪತ್ರೆಗೆ ವಕ್ಫ್ ಮಹಿಳಾ ಪರಿಷತ್ತಿನಿಂದ 5 ಲಕ್ಷ ಸಹಾಯಧನ

    ಬೌರಿಂಗ್, ಲೇಡಿ ಕರ್ಜನ್ ಆಸ್ಪತ್ರೆಗೆ ವಕ್ಫ್ ಮಹಿಳಾ ಪರಿಷತ್ತಿನಿಂದ 5 ಲಕ್ಷ ಸಹಾಯಧನ

    ಬೆಂಗಳೂರು: ಅಲ್ಪಸಂಖ್ಯಾತ ಮಹಿಳೆಯರು ಹಾಗೂ ಬಡ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ರಿಜಿಡ್ ನೆಪ್ರೋಸ್ಕೋಪ್ ಖರೀದಿಸಲು ಕರ್ನಾಟಕ ಸ್ಟೇಟ್ ವಕ್ಫ್ ಫೌಂಡೇಷನ್ ಫಾರ್ ವುಮೆನ್ ಡೆವಲಪ್‌ಮೆಂಟ್ ವತಿಯಿಂದ 5 ಲಕ್ಷ ರೂ. ಸಹಾಯಧನದ ಚೆಕ್ ಅನ್ನು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹಸ್ತಾಂತರಿಸಿದರು. ಇದನ್ನೂ ಓದಿ: ನಾಳೆ ಬೆಂಗ್ಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗಿಲ್ಲ ಅವಕಾಶ – ಯಾವೆಲ್ಲ ರಸ್ತೆಗಳು?

    ಶನಿವಾರ ವಿಕಾಸಸೌಧದಲ್ಲಿ ಚೆಕ್ ಅನ್ನು ಹಸ್ತಾಂತರಿಸಿ ಮಾತನಾಡಿದ ಸಚಿವೆ, ಕರ್ನಾಟಕ ಸ್ಟೇಟ್ ವಕ್ಫ್ ಫೌಂಡೇಷನ್ ಫಾರ್ ವುಮೆನ್ ಡೆವಲಪ್‌ಮೆಂಟ್ ವತಿಯಿಂದ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರ ಚಿಕಿತ್ಸೆಗಾಗುವ ಖರ್ಚನ್ನು ಭರಿಸಲಾಗುತ್ತಿದೆ. ಶಿವಾಜಿನಗರದಲ್ಲಿರುವ ಸರ್ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸಿಟ್ಯೂಟ್ ಸಂಸ್ಥೆಯ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಮತ್ತು ಬಡ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಈ ಸಂಸ್ಥೆಯ ಮನವಿಯಂತೆ ರಿಜಿಡ್ ನೆಪ್ರೋಸ್ಕೋಪ್(Rigid Neproscope) ಉಪಕರಣ ಖರೀದಿಸಲು 5 ಲಕ್ಷ ರೂ. ಸಹಾಯಧನವನ್ನು ನೀಡಲಾಗಿದೆ. ಎಲ್ಲರಿಗೂ ಉತ್ತಮ ಚಿಕಿತ್ಸೆ ದೊರೆಯಲಿ ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಸ್ಥಳ ಪರಿಶೀಲನೆ ಮಾಡಿದ ಸಿಎಂ

    ಬೌರಿಂಗ್ ಆಸ್ಪತ್ರೆಯ ವೈದ್ಯರಾದ ಡಾ. ಶ್ರೀಕಾಂತ್, ಡಾ. ಅಭಿಜಿತ್, ಡಾ. ಜಹೀರ್ ಮತ್ತು ಆಹಾರ ತಜ್ಞರಾದ ಮೇಘಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    Live Tv

  • ಅಪಘಾತದಲ್ಲಿ ಯುವಕ ಸಾವು- ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

    ಅಪಘಾತದಲ್ಲಿ ಯುವಕ ಸಾವು- ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

    ಮಡಿಕೇರಿ: ಕಳೆದ 5 ದಿನಗಳ ಹಿಂದೆ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ, ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತನ ಕುಟುಂಬಸ್ಥರು ಆತನ ಅಂಗಾಂಗ ದಾನ ಮಾಡುವ ಮೂಲಕ  ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

    ಪ್ರಜ್ವಲ್ (22) ಸಾವಿಗೀಡಾದ ಯುವಕ. ಈತ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ರೈತ ಸುರೇಶ್ ಅವರ ಮಗನಾಗಿದ್ದನು. ಪ್ರಜ್ವಲ್ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದ.

    ಕೂಡ್ಲೂರು ಕೈಗಾರಿಕಾ ಕಾಫಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಜ್ವಲ್, ಭಾನುವಾರ ರಾತ್ರಿ ಕೂಡ್ಲೂರ್ ಕಡೆಯಿಂದ ಕೂಡಿಗೆಗೆ ಹೋಗುತ್ತಿದ್ದ. ಈ ಸಂದರ್ಭ ಕೂಡುಮಂಗಳೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಬೈಕ್ ಡಿಕ್ಕಿಯಾಗಿತ್ತು. ಪರಿಣಾಮ ಪ್ರಜ್ವಲ್ ತಲೆ ಭಾಗಕ್ಕೆ ಭಾರೀ ಪೆಟ್ಟು ಬಿದ್ದಿತ್ತು. ಗಾಯಾಳುವಿಗೆ ಕುಶಾಲನಗರ ಅರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮೈಸೂರು ಅಪೋಲೋ ಆಸ್ಪತ್ರೆಗೆ ಸಾಗಿಸಲಾಗಿತ್ತು. ಪ್ರಜ್ವಲ್ ಬದುಕುವುದು ಕಷ್ಟ ಎಂದು ವೈದ್ಯರು ತಿಳಿಸುತ್ತಾರೆ. ಬಳಿಕ ಪ್ರಜ್ವಲ್ ತಂದೆ ತಾಯಿ ಹಾಗೂ ಚಿಕ್ಕಪ್ಪ ಮತ್ತು ಕುಟುಂಬಸ್ಥರು ಪ್ರಜ್ವಲ್‍ನ ಅಂಗಾಂಗ ದಾನ ಮಾಡಲು ನಿರ್ಧರಿಸಿ ಪ್ರಜ್ವಲ್‍ನ ಹೃದಯ ,ಕಣ್ಣು, ಕಿಡ್ನಿ ದಾನ ಮಾಡಿದ್ದಾರೆ. ಇದನ್ನೂ ಓದಿ: IPL Auction -15.25 ಕೋಟಿಗೆ ಇಶಾನ್ ಕಿಶನ್ ಸೇಲ್‌

    ಅಂಗಾಗಗಳನ್ನು ದಾನವಾಗಿ ನೀಡಿದ ಬಳಿಕ ಕೂಡಿಗೆಗೆ ಆಗಮಿಸಿದ ಪ್ರಜ್ವಲ್ ಪಾರ್ಥೀವ ಶರೀರಕ್ಕೆ ಗೌರವ ನಮನ ಸಲ್ಲಿಸಲಾಯಿತು. ಸ್ಥಳೀಯ ಗ್ರಾಪಂ ಜನಪ್ರತಿನಿಧಿಗಳು, ಆಟೋ ಚಾಲಕರುಗಳು, ನೂರಾರು ಮಂದಿ ಯುವಕರು ಮೃತದೇಹ ಬರಮಾಡಿಕೊಂಡು ಪುಷ್ಪಾರ್ಚನೆ ಮಾಡಿ ಅಂತಿಮ ನಮನ ಸಲ್ಲಿಸಿದರು.

  • ವೃದ್ಧೆಯಿಂದ ಅನಾಥಾಶ್ರಮಕ್ಕೆ ಲಕ್ಷಾಂತರ ಬೆಲೆ ಬಾಳುವ ಜಾಗ ದಾನ

    ವೃದ್ಧೆಯಿಂದ ಅನಾಥಾಶ್ರಮಕ್ಕೆ ಲಕ್ಷಾಂತರ ಬೆಲೆ ಬಾಳುವ ಜಾಗ ದಾನ

    ಮಡಿಕೇರಿ: ಕೋಟ್ಯಂತರ ರೂಪಾಯಿಯ ಆಸ್ತಿ ಇದ್ದರೂ ಇತ್ತೀಚಿನ ದಿನಗಳಲ್ಲಿ ದಾನ ನೀಡುವವರ ಸಂಖ್ಯೆ ತೀರಾ ವಿರಳ. ಆದರೆ ಇಳಿ ವಯಸ್ಸಿನ ವೃದ್ಧೆ ಲಕ್ಷಾಂತರ ರೂ. ಬೆಲೆ ಬಾಳುವ ತಮ್ಮ ಜಾಗವನ್ನು ವಿಕಾಸ್ ಜನ ಸೇವಾ ಟ್ರಸ್ಟ್‌ ಅನಾಥಶ್ರಮಕ್ಕೆ ದಾನ ನೀಡಿ ಮಾದರಿಯಾಗಿದ್ದಾರೆ.

    ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಏಳನೇ ಹೊಸಕೋಟೆಯ ನಿವಾಸಿ ಬೋಳ್ಳಮ್ಮ (82) ಅವರು ತಮಗೆ ಇರುವ ಅಲ್ಪಸ್ವಲ್ಪ ಆಸ್ತಿಯಲ್ಲಿ 30 ಸೆಂಟ್ ಜಾಗವನ್ನು ವಿಕಾಸ್ ಜನ ಸೇವಾ ಟ್ರಸ್ಟ್‌ ಅನಾಥಾಶ್ರಮಕ್ಕೆ ದಾನವಾಗಿ ನೀಡಿದ್ದಾರೆ. ಸುಂಟಿಕೊಪ್ಪ ಸಮೀಪ ಇರುವ ಅಶ್ರಮದ ಮಾಲೀಕ ರಮೇಶ್ ಅವರು ಸರ್ಕಾರ ಯಾವುದೇ ಯೋಜನೆಯ ಸಹಾಯ ಪಡೆಯದೆ, ಬಾಡಿಗೆ ಮನೆ ಮಾಡಿಕೊಂಡು ಪ್ರಸ್ತುತ 28 ಅನಾಥರಿಗೆ ಆಶ್ರಯ ನೀಡಿದ್ದಾರೆ.

    ಸಂಕಷ್ಟದಲ್ಲಿ ಆಶ್ರಮ ನಡೆಸುತ್ತಿರುವುದನ್ನು ಗಮನಿಸಿದ ವೃದ್ಧೆ, ತಮಗೆ ಇರುವ ಸ್ವಲ್ಪ ಜಾಗವನ್ನೇ ಅನಾಥಶ್ರಮಕ್ಕೆ ದಾನ ನೀಡಿ ಮಾನವೀಯತೆ ಮೇರೆದಿದ್ದಾರೆ. ಇಂದು ನಾಗರಪಂಚಮಿ ಹಬ್ಬ ಆಗಿರುವುದರಿಂದ ಶಾಸಕ ಅಪ್ಪಚ್ಚು ರಂಜನ್ ಮೂಲಕ ಜಾಗ ದಾನದ ಪತ್ರವನ್ನು ನೀಡಿದರು. ಇದೇ ಸಂದರ್ಭದಲ್ಲಿ ಮಾತಾನಾಡಿದ ಶಾಸಕ ಅಪ್ಪಚ್ಚು ರಂಜನ್, ಅನಾಥಾಶ್ರಮಕ್ಕೆ ಇನ್ನಷ್ಟು ಜಾಗದ ಅವಶ್ಯಕತೆ ಇರುವುದರಿಂದ ವಯಕ್ತಿಕವಾಗಿ ಇನ್ನೂ 70 ಸೆಂಟ್ ಜಾಗ ಖರೀದಿಸಿ, ಒಟ್ಟು ಒಂದು ಎಕರೆ ಜಾಗದಲ್ಲಿ ಒಳ್ಳೆಯ ಅಶ್ರಮ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

  • ಉಪ್ಪಿ ಫೌಂಡೇಷನ್‍ಗೆ ದೇಣಿಗೆ ನೀಡಿದ ಬಾಲ ನಟ

    ಉಪ್ಪಿ ಫೌಂಡೇಷನ್‍ಗೆ ದೇಣಿಗೆ ನೀಡಿದ ಬಾಲ ನಟ

    ಬೆಂಗಳೂರು: ಉತ್ತಮ ಪ್ರಜಾಕೀಯ ಪಕ್ಷದ ನಾಯಕ ಮತ್ತು ಸ್ಯಾಂಡಲ್‍ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರರವರ ಉಪ್ಪಿ ಫೌಂಡೇಶನ್‍ಗೆ ಬಾಲ ನಟನೊಬ್ಬ 10,000ರೂ ದೇಣಿಗೆ ನೀಡಿದ್ದಾನೆ. ಈ ಬಗ್ಗೆ ನಟ ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಕೊರೊನಾದ ಸಂಕಷ್ಟದಲ್ಲಿರುವ ಜನರಿಗೆ ಹಲವಾರು ಸೆಲೆಬ್ರೆಟಿಗಳು ಸಹಾಯ ಮಾಡುತ್ತಿದ್ದಾರೆ. ಉಪೇಂದ್ರರವರು ಕೂಡ ಉಪ್ಪಿ ಫೌಂಡೇಷನ್ ಮೂಲಕ ದೇಣಿಗೆ ಸಂಗ್ರಹಿಸುತ್ತಿದ್ದು, ಬಾಲ ನಟ ಅನೀಶ್ ಸಾಗರ್ 10 ಸಾವಿರ ರೂ. ಸಹಾಯ ಮಾಡಿದ್ದಾರೆ.

    ಈ ಬಗ್ಗೆ ಉಪೇಂದ್ರರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಜೀವನಾನೆ ನಾಟಕ ಸ್ವಾಮಿ ಮತ್ತು ಸಾಲುಗಾರ ಎಂಬ ಶಾರ್ಟ್ ಮೂವಿಯಲ್ಲಿ ನಟಿಸಿದ್ದ ಮಾಸ್ಟರ್ ಅನೀಶ್ ಸಾಗರ್ ನಾಯ್ಡು ತನಗೆ ಬಂದ ಸಂಭಾವನೆಯಲ್ಲಿ 10,000ರೂ.ವನ್ನು ಕೊರೊನಾ ಸಂಕಷ್ಟದಲ್ಲಿರುವವರಿಗೆ ದಾನ ಮಾಡಿದ್ದಾನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದಿದ್ದಾರೆ.

  • ಸಿದ್ಧಾರೂಢ ಮಠದಲ್ಲಿ 35 ದಿನಗಳಲ್ಲಿ 18.63 ಲಕ್ಷ ದೇಣಿಗೆ ಸಂಗ್ರಹ

    ಸಿದ್ಧಾರೂಢ ಮಠದಲ್ಲಿ 35 ದಿನಗಳಲ್ಲಿ 18.63 ಲಕ್ಷ ದೇಣಿಗೆ ಸಂಗ್ರಹ

    ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರಾಧ್ಯದೈವ ವಾಣಿಜ್ಯ ನಗರಿಯ ಸದ್ಗುರು ಶ್ರೀ ಸಿದ್ಧಾರೂಢರ ಮಠದಲ್ಲಿ ಮಾರ್ಚ್ 18 ರಿಂದ ಏಪ್ರಿಲ್ 22ರ ವರೆಗೆ 18,63,527 ರೂಪಾಯಿ ದೇಣಿಗೆ ಸಂಗ್ರಹವಾಗಿದೆ.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಶ್ರೀ ಸಿದ್ಧಾರೂಢ ಸ್ವಾಮಿ ಟ್ರಸ್ಟ್ ಕಮಿಟಿಯ ನೇತೃತ್ವದಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ತೆರದು ಏಣಿಕೆ ಮಾಡಲಾಗಿದ್ದು, 35 ದಿನಗಳಲ್ಲಿ 18,63,527 ರೂಪಾಯಿ ದೇಣಿಗೆ ಸಂಗ್ರಹವಾಗಿದೆ. ವಾಣಿಜ್ಯ ನಗರಿ ಮಾತ್ರವಲ್ಲದೆ ಧಾರವಾಡ, ಗದಗ, ಹಾವೇರಿ, ಬೆಳಗಾವಿ ಸೇರಿದಂತೆ ರಾಜ್ಯ ಅಂತರರಾಜ್ಯದಲ್ಲಿ ಕೂಡ ಶ್ರೀ ಸಿದ್ಧಾರೂಢರ ಭಕ್ತರಿದ್ದು, ಈ ಬಾರಿ ಕೊರೊನಾ ಸಮಯದಲ್ಲಿಯೂ ದೊಡ್ಡ ಮಟ್ಟದಲ್ಲಿ ದೇಣಿಗೆ ಸಂಗ್ರಹವಾಗಿದೆ.

    ಎಣಿಕೆ ಮೇಲ್ವಿಚಾರಣೆಯನ್ನು ಟ್ರಸ್ಟ್ ಅಧ್ಯಕ್ಷರಾದ ಡಿ.ಡಿ.ಮಾಳಗಿ, ಉಪಾಧ್ಯಕ್ಷ ಜಗದೀಶ್ ಮಗಜಿಕೊಂಡಿ ಸೇರಿದಂತೆ ಟ್ರಸ್ಟ್ ಸದಸ್ಯರು ವಹಿಸಿಕೊಂಡಿದ್ದರು.

  • ದೇಶ, ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ – ಎಚ್‌ಡಿಕೆಗೆ ರಾಮದಾಸ್‌ ತಿರುಗೇಟು

    ದೇಶ, ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ – ಎಚ್‌ಡಿಕೆಗೆ ರಾಮದಾಸ್‌ ತಿರುಗೇಟು

    ಬೆಂಗಳೂರು: ದೇಶವನ್ನು, ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ರಾಮದಾಸ್‌ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

    ರಾಮ ಮಂದಿರ ನಿಧಿ ಸಂಗ್ರಹಣಾ ಅಭಿಯಾನದಲ್ಲಿ ಹಿಂದೂಗಳು ಮಾತ್ರವಲ್ಲದೇ, ಮುಸಲ್ಮಾನ, ಕ್ರೈಸ್ತರೂ ಸಹ ದೇಣಿಗೆಯನ್ನು ರಾಮನ ಚರಣಕ್ಕೆ ಅರ್ಪಿಸಿದ್ದಾರೆ. ಇದನ್ನೊಂದು ಬಾರಿ ತಿಳಿಯುವ ಪ್ರಯತ್ನ ಮಾಡಿ. ಯಾರ ಮನಸ್ಸಲ್ಲೂ ಇಲ್ಲದ ವಿಷ ಬೀಜ ಬಿತ್ತುವ ಕೆಲಸ ಮಾಡಬೇಡಿ ಎಂದು ಟ್ವೀಟ್‌ ಮಾಡಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?
    ಕುಮಾರಸ್ವಾಮಿ ಅವರೇ ನೀವು ಅಂತಃಕರಣದಿಂದ ಮಾತನಾಡಿ, ನೀವು, ನಿಮ್ಮ ಸಹೋದರ ಹಾಗೂ ನಿಮ್ಮ ಪಿತಾಶ್ರೀ ಅವರು ತಿಂಗಳಲ್ಲಿ ಹೆಚ್ಚಿನ ದಿನ ಪೂಜೆ, ಹೋಮಗಳಲ್ಲೇ ತೊಡಗುತ್ತೀರಿ ಎಂಬುದು ಜನತೆಗೆ ಗೊತ್ತಿರುವ ವಿಷಯ.

    ಮಹಾತ್ಮಾ ಗಾಂಧೀಜಿ, ನೆಹರೂ, ಅಂಬೇಡ್ಕರ್ ಸಹ ಆರ್‌ಎಸ್‌ಎಸ್‌ ಕಾರ್ಯದ ಬಗ್ಗೆ ಶ್ಲಾಘಿಸಿದ್ದಾರೆ. ಆರ್‌ಎಸ್‌ಎಸ್‌ ಬಗ್ಗೆ ಜನತೆಗೆ ಧೈರ್ಯದ ಭಾವನೆ ಇದೆಯೇ ಹೊರತು ಹೆದರಿಕೆಯ ಭಾವನೆ ಇಲ್ಲ. ಇವನ್ನೆಲ್ಲಾ ತಿಳಿದು ಇನ್ನಾದರೂ ದೇಶವನ್ನು, ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ.