Tag: donald trump

  • ಜನರು ಕಡಿಮೆ ನಾಟಕವನ್ನು ಬಯಸಿದ್ದರಿಂದ ಬೈಡನ್ ಆಯ್ಕೆಯಾದರು: ಟ್ರಂಪ್‌ ಕಾಲೆಳೆದ ಮಸ್ಕ್

    ಜನರು ಕಡಿಮೆ ನಾಟಕವನ್ನು ಬಯಸಿದ್ದರಿಂದ ಬೈಡನ್ ಆಯ್ಕೆಯಾದರು: ಟ್ರಂಪ್‌ ಕಾಲೆಳೆದ ಮಸ್ಕ್

    ವಾಷಿಂಗ್ಟನ್: ಟೆಸ್ಲಾ ಸಿಇಒ ಮತ್ತು ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಶುಕ್ರವಾರ, ಜೋ ಬೈಡೆನ್ ಅಮೆರಿಕದ ಅಧ್ಯಕ್ಷರಾಗಿ ಯಾಕೆ ಆಯ್ಕೆಯಾದರು ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಮಸ್ಕ್ ಅವರು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಗ್ಗೆಯೂ ಟ್ವೀಟ್ ಮಾಡುವ ಮೂಲಕ ಸುದ್ದಿಯಾಗಿದ್ದು ಮತ್ತೆ, ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರ ಬಗ್ಗೆ ಬರೆದುಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮಸ್ಕ್ ಟ್ರಂಪ್ ಕಾಲೆಳೆದಿದ್ದಾರೆ. ಟ್ವೀಟ್‍ನಲ್ಲಿ ಅವರು, ಬೈಡನ್ ಅವರು ತಮ್ಮನ್ನು ಜನರು ಆಯ್ಕೆ ಮಾಡಿರುವುದು ದೇಶವನ್ನು ಪರಿವರ್ತಿಸಲು ಎಂದು ತಪ್ಪಾಗಿ ಭಾವಿಸಿದ್ದಾರೆ. ಆದರೆ ವಾಸ್ತವವಾಗಿ ಪ್ರತಿಯೊಬ್ಬರೂ ಕಡಿಮೆ ನಾಟಕವನ್ನು ಬಯಸುತ್ತಾರೆ. ಅದಕ್ಕೆ ಜನರು ಬೈಡನ್‍ನನ್ನು ಆಯ್ಕೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ನಿರ್ಬಂಧ ಖಂಡಿಸಿದ G7 

    2024 ರಲ್ಲಿ ಕಡಿಮೆ ಅಭ್ಯರ್ಥಿಗಳು ಇದ್ರೆ ಉತ್ತಮ ಎಂದು ನಾನು ಭಾವಿಸಿದರೂ, ಟ್ರಂಪ್ ಅವರು ಟ್ವಿಟ್ಟರ್ ಮರುಸ್ಥಾಪಿಸಬೇಕು ಎಂದು ನಾನು ಭಾವಿಸುತ್ತೇನೆ. ಇನ್ನೊಂದು ಟ್ವೀಟ್ ಮಾಡಿದ್ದಾರೆ.

    ಮಸ್ಕ್ ಟ್ವಿಟ್ಟರ್ ಖರೀದಿಸುತ್ತಿದ್ದಾರೆ ಎಂದು ತಿಳಿದ ಮೇಲೆ, ಮಂಗಳವಾರ ಟ್ರಂಪ್, ತಮ್ಮ ಟ್ವಿಟ್ಟರ್ ಖಾತೆಯ ಮೇಲಿನ ಶಾಶ್ವತ ನಿಷೇಧವನ್ನು ಹೇರುವುದಾಗಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಸ್ಕ್, ಟ್ರಂಪ್ ಟ್ವಿಟ್ಟರ್ ಖಾತೆಯನ್ನು ನಿಷೇಧಿಸುವುದು ‘ನೈತಿಕವಾಗಿ ತಪ್ಪು ಮತ್ತು ಅವಿವೇಕಿ ಎಂದು ಟೀಕಿಸಿದ್ದರು. ಇದನ್ನೂ ಓದಿ:  ಜಮ್ಮು-ಕಾಶ್ಮಿರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮುಂದುವರಿಯುತ್ತಿದೆ: ಒಮರ್ ಅಬ್ದುಲ್ಲಾ

  • ನಾನು ಮತ್ತೆ ಅಧ್ಯಕ್ಷನಾಗಿದ್ದರೆ ರಷ್ಯಾ-ಉಕ್ರೇನ್‌ ಯುದ್ಧ ನಡೆಯುತ್ತಿರಲಿಲ್ಲ: ಟ್ರಂಪ್‌

    ನಾನು ಮತ್ತೆ ಅಧ್ಯಕ್ಷನಾಗಿದ್ದರೆ ರಷ್ಯಾ-ಉಕ್ರೇನ್‌ ಯುದ್ಧ ನಡೆಯುತ್ತಿರಲಿಲ್ಲ: ಟ್ರಂಪ್‌

    ವಾಷಿಂಗ್ಟನ್‌: ನಾನು ಮತ್ತೆ ಅಮೆರಿಕ ಅಧ್ಯಕ್ಷನಾಗಿದ್ದರೆ ರಷ್ಯಾ-ಉಕ್ರೇನ್‌ ಯುದ್ಧ ಸಂಭವಿಸುತ್ತಿರಲಿಲ್ಲ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ.

    ರಷ್ಯಾ-ಉಕ್ರೇನ್ ಯುದ್ಧದ ಬೆಳವಣಿಗೆಗಳನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸಂತೋಷದಿಂದ ವೀಕ್ಷಿಸುತ್ತಿದ್ದಾರೆ. ತೈವಾನ್ ಅನ್ನು ಮುಂದೆ ಚೀನಾ ಆಕ್ರಮಿಸಲಿದೆ. ಪ್ರಸ್ತುತ ಉಕ್ರೇನ್‌ಗೆ ತಲೆದೋರಿರುವ ಸಂಕಷ್ಟ ಮುಂದೆ ತೈವಾನ್‌ಗೆ ಎದುರಾಗಲಿದೆ. ಯುನೈಟೆಡ್ ಸ್ಟೇಟ್ಸ್ ಎಷ್ಟು ಮೂರ್ಖ ಎಂಬುದನ್ನು ಚೀನಾ ಗಮನಿಸುತ್ತಿದೆ. ಖಂಡಿತವಾಗಿಯೂ ಚೀನಾ ಆಕ್ರಮಣಕ್ಕೆ ಸಜ್ಜಾಗಿದೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ

    ರಷ್ಯಾ-ಉಕ್ರೇನ್‌ ವಿಚಾರವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ತಳೆದಿರುವ ಧೋರಣೆ ವಿರುದ್ಧ ಹರಿಹಾಯ್ದಿರುವ ಟ್ರಂಪ್‌, ಅಧ್ಯಕ್ಷ ಕ್ಸಿ ಉನ್ನತ ಮಟ್ಟದ ಬುದ್ಧಿವಂತಿಕೆಯನ್ನು ಹೊಂದಿರುವ ವ್ಯಕ್ತಿ. ಅಫ್ಘಾನಿಸ್ತಾನದಲ್ಲಿ ಏನಾಯಿತು ಎಂದು ಅವರು ನೋಡಿದ್ದಾರೆ. ನಾವು ಅಫ್ಘಾನಿಸ್ತಾನವನ್ನು ತೊರೆದ ಮಾರ್ಗವನ್ನು ಅವರು ಗಮನಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಅಮೆರಿಕ ಸೇನಾ ಪಡೆ ವಾಪಸ್‌ ಬರುವಾಗ, ಎಷ್ಟೋ ಮಂದಿ ಅಮೆರಿಕ ನಾಗರಿಕರು ಅಲ್ಲಿಯೇ ಸಿಲುಕಿದ್ದಾರೆ. ಈಗಲೂ ಹೊರಬರಲು ಅವರು ಪ್ರಯತ್ನಿಸುತ್ತಿದ್ದಾರೆ. ಇದೆಲ್ಲವನ್ನೂ ಕ್ಸಿ ಜಿನ್‌ಪಿಂಗ್‌ ಗಮನಿಸಿದ್ದಾರೆ. ತನಗೆ ಅನಿಸಿದ್ದನ್ನು ಮಾಡಲು ಇದು ಅವರಿಗೆ ಅವಕಾಶ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಂದು ವಾರದೊಳಗೆ 1 ಮಿಲಿಯನ್ ಜನ ಉಕ್ರೇನ್‍ನಿಂದ ಪಲಾಯನ: ವಿಶ್ವಸಂಸ್ಥೆ

    ಯುದ್ಧದಲ್ಲಿ ಅನೇಕ ಜನರು ಸಾಯುತ್ತಿದ್ದಾರೆ. ಆದರೆ ನಾವು (ಅಮೆರಿಕ) ಇದನ್ನು ಅನುಮತಿಸುತ್ತಿದ್ದೇವೆ. ನಾನು ಮತ್ತೆ ಅಧ್ಯಕ್ಷನಾಗಿದ್ದರೆ ಇದು ಎಂದಿಗೂ ಸಂಭವಿಸುತ್ತಿರಲಿಲ್ಲ. ಇದು ಎಂದಿಗೂ ಸಂಭವಿಸಬಾರದು. ಪುಟಿನ್ ಈ ರೀತಿ ಮಾಡುತ್ತಿರಲಿಲ್ಲ ಎಂದು ಟ್ರಂಪ್‌ ಮಾತನಾಡಿದ್ದಾರೆ.

  • ಬೈಡನ್ ದೌರ್ಬಲ್ಯದಿಂದಲೇ ಈ ಅನಾಹುತವಾಗಿದೆ: ಟ್ರಂಪ್

    ಬೈಡನ್ ದೌರ್ಬಲ್ಯದಿಂದಲೇ ಈ ಅನಾಹುತವಾಗಿದೆ: ಟ್ರಂಪ್

    ವಾಷಿಂಗ್ಟನ್: ರಷ್ಯಾ ಹಾಗೂ ಉಕ್ರೇನ್ ಯುದ್ಧ ಹಿನ್ನೆಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ಪುಟಿನ್‍ನ ಬುದ್ಧಿವಂತಿಕೆಯಿಂದ ಸಮಸ್ಯೆಯಾಗುತ್ತಿಲ್ಲ. ಆದರೆ ಅಮೆರಿಕ ಅಧ್ಯಕ್ಷ ದೌರ್ಬಲ್ಯವೇ ಈ ಅನಾಹುತಕ್ಕೆ ಕಾರಣವಾಗಿದೆ ಸಮಸ್ಯೆಯಾಗಿದೆ ಎಂದು ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ತಿಳಿದಿರುವಂತೆ ನಮ್ಮ ಚುನಾವಣೆಯನ್ನು ಸರಿಯಾಗಿ ನಡೆಸಿದ್ದರೆ ಮತ್ತು ನಾನು ಅಧ್ಯಕ್ಷನಾಗಿದ್ದರೆ ಈ ದುರಂತ ಎಂದಿಗೂ ಸಂಭವಿಸುತ್ತಿರಲಿಲ್ಲ ಎಂದರು.

    Joe Biden

    ಅಮೆರಿಕವು ಪ್ರಬಲ ಅಧ್ಯಕ್ಷರನ್ನು ಹೊಂದಿದ್ದರೆ ಜಗತ್ತು ಯಾವಾಗಲೂ ಸುರಕ್ಷಿತವಾಗಿರುತ್ತದೆ. ದುರ್ಬಲ ಅಮೆರಿಕದ ಅಧ್ಯಕ್ಷರಿಂದ ಜಗತ್ತು ಯಾವಾಗಲೂ ಅಪಾಯದಲ್ಲಿದೆ. ಉಕ್ರೇನ್ ರಾಜಧಾನಿ ಕೀವ್‍ನ ಮೇಲೆ ರಷ್ಯಾ ನಡೆಸಿದ ದಾಳಿಯಿಂದಾಗಿ ಬಿಡೆನ್‍ನ ದೌರ್ಬಲ್ಯ ತೋರುತ್ತಿದೆ ಎಂದು ಬಿಡನ್ ವಿರುದ್ಧ ವಾಗ್ದಾಳಿ ನಡೆಸಿದರು.

    ಅಫ್ಘಾನಿಸ್ತಾನದಿಂದ ಸ್ಥಿತಿಯನ್ನು ನೋಡಿದ ನಂತರವೂ ಪುಟಿನ್ ಅವರು ನಿರ್ದಯವಾಗಿ ಉಕ್ರೇನ್ ಮೇಲೆ ಆಕ್ರಮಣ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ ಎಂದ ಅವರು ಪುಟಿನ್ ಅವರು ಬುದ್ಧಿವಂತದಾಗಿದ್ದಾರೆ. ಆದರೆ ಸಮಸ್ಯೆ ಅವರ ಬುದ್ಧಿವಂತಿಕೆಯಲ್ಲ, ನಮ್ಮ ನಾಯಕರ ದೌರ್ಬಲ್ಯವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿರುವ ಕಟ್ಟ ಕಡೆಯ ವಿದ್ಯಾರ್ಥಿಯನ್ನು ಸುರಕ್ಷಿತವಾಗಿ ಕರೆತರುವ ತನಕ ಆಪರೇಷನ್ ನಿಲ್ಲದು: ಆರ್.ಅಶೋಕ್

    ಇದೇ ವೇಳೆ ರಷ್ಯಾದ ದಾಳಿಯನ್ನು ಖಂಡಿಸಿದ ಅವರು, ಉಕ್ರೇನ್ ಮೇಲೆ ರಷ್ಯಾದ ದಾಳಿ ಭಯಾನಕವಾಗಿದೆ. ಇದು ಎಂದಿಗೂ ಸಂಭವಿಸದ ದೌರ್ಜನ್ಯವಾಗಿದೆ. ಉಕ್ರೇನ್‍ನ ಜನರ ಸುರಕ್ಷತೆಗಾಗಿ ನಾವು ಪ್ರಾರ್ಥಿಸುತ್ತೇವೆ ಎಂದ ಅವರು, ಉಕ್ರೇನಿಯನ್ ಅಧ್ಯಕ್ಷ ವೊಲೊಡ್ಮಿರ್ ಝೆಲೆನ್ಸ್ಕಿ ಹೋರಾಟವನ್ನು ಶ್ಲಾಘಿಸಿದರು. ಇದನ್ನೂ ಓದಿ: ಮುದ್ದಿನ ನಾಯಿ ಇಲ್ಲದೆ ಬರುವುದಿಲ್ಲ- ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿ

  • ಸ್ವಂತ ಸಾಮಾಜಿಕ ಮಾಧ್ಯಮ ಆ್ಯಪ್ ಬಿಡುಗಡೆ ಮಾಡಿದ ಟ್ರಂಪ್

    ಸ್ವಂತ ಸಾಮಾಜಿಕ ಮಾಧ್ಯಮ ಆ್ಯಪ್ ಬಿಡುಗಡೆ ಮಾಡಿದ ಟ್ರಂಪ್

    ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಮೊಟ್ಟ ಮೊದಲ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಟ್ರಂಪ್ ವರ್ಷದ ಬಳಿಕ ಸಾಮಾಜಿಕ ಮಾಧ್ಯಮ ಜಗತ್ತಿಗೆ ಕಾಲಿಟ್ಟಿದ್ದಾರೆ.

    ಟ್ರಂಪ್ ಬಿಡುಗಡೆ ಮಾಡಿರುವ ಟ್ರೂಥ್ ಸೋಶಿಯಲ್ ಆ್ಯಪ್ ಹೆಸರೇ ಹೇಳುವಂತೆ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಆಗಿದೆ. ಹೊಸದಾಗಿ ಬಿಡುಗಡೆಯಾಗಿರುವ ಆ್ಯಪ್ ಆ್ಯಪಲ್‍ನ ಆ್ಯಪ್ ಸ್ಟೋರ್‍ನಲ್ಲಿ ಡೌನ್‍ಲೋಡ್‍ಗೆ ಲಭ್ಯವಿದೆ.

    ಹಿಂಸಾಚಾರ ಪ್ರಚೋದನೆಯ ಸಂದೇಶಗಳನ್ನು ಹಂಚಿಕೊಂಡಿದ್ದ ಆರೋಪದ ಮೇಲೆ ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಅಮೆರಿಕ ಮಾಜಿ ಅಧ್ಯಕ್ಷನ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಖಾತೆಗಳನ್ನು ನಿರ್ಬಂಧಿಸಲಾಗಿತ್ತು. ಇದೀಗ ತನ್ನದೇ ಸ್ವಂತ ಅಪ್ಲಿಕೇಶನ್ ಅನ್ನು ಹೊರತರುವ ಮೂಲಕ ಸಾಮಾಜಿಕ ಮಾಧ್ಯಮ ಲೋಕಕ್ಕೆ ಮತ್ತೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಭಾರತದ UPI ವ್ಯವಸ್ಥೆ ಅಳವಡಿಸಿಕೊಂಡ ನೇಪಾಳ

    ಟ್ರೂಥ್ ಸೋಶಿಯಲ್ ಆ್ಯಪ್ ಬಿಡುಗಡೆ ಬಗ್ಗೆ 2021ರ ಅಕ್ಟೋಬರ್‍ನಲ್ಲೇ ಸುದ್ದಿಯಾಗಿತ್ತು. ಇದೀಗ ಆ್ಯಪ್ ಕೊನೆಗೂ ಡೌನ್‍ಲೋಡ್ ಮಾಡಲು ಲಭ್ಯವಾಗಿದೆ. ಆಂಡ್ರಾಯ್ಡ್‍ಗೆ ಆ್ಯಪ್ ಸದ್ಯ ಲಭ್ಯವಾಗಿಲ್ಲವಾದರೂ ಐಒಎಸ್ ಬಳಕೆದಾರರು ಆ್ಯಪ್ ಅನ್ನು ಆ್ಯಪ್ ಸ್ಟೋರ್‍ನಲ್ಲಿ ಡೌನ್‍ಲೋಡ್ ಮಾಡಬಹುದು.

    ಟ್ರೂಥ್ ಸೋಶಿಯಲ್‍ನ ಫೀಚರ್‍ಗಳೇನು?
    ಟ್ರೂಥ್ ಸೋಶಿಯಲ್ ಆ್ಯಪ್ ರಾಜಕೀgಯ ತಾರತಮ್ಯ ಮುಕ್ತವಾಗಿದೆ. ಈ ಆ್ಯಪ್‍ಗೆ ಯಾರು ಬೇಕಾದರೂ ಪ್ರವೇಶಿಸಬಹುದು ಹಾಗೂ ಜನರು ತಮ್ಮ ಅಭಿಪ್ರಾಯ, ಫೋಟೋ, ಸುದ್ದಿ, ವೀಡಿಯೋ ಲಿಂಕ್‍ಗಳನ್ನು ಇದರಲ್ಲಿ ಹಂಚಿಕೊಳ್ಳಬಹುದು.

    ಆ್ಯಪ್ ಸ್ಟೊರ್‍ನಲ್ಲಿ ನೀಡಿರುವ ವಿವರಣೆ(ಡಿಸ್ಕ್ರಿಪ್‍ಶನ್) ಪ್ರಕಾರ ನಿಮ್ಮ ಪ್ರೊಫೈಲ್‍ನಲ್ಲಿ ನಿಮ್ಮನ್ನು ಫಾಲೋ ಮಾಡುವವರ ಹಾಗೂ ನೀವು ಫಾಲೋ ಮಾಡುತ್ತಿರುವವರ ಪಟ್ಟಿಯನ್ನು ನೋಡಬಹುದು. ನಿಮ್ಮ ಪೋಸ್ಟ್ ಹಾಗೂ ಲೈಕ್ಸ್‍ಗಳ ಇತಿಹಾಸವನ್ನೂ ಇದು ತೋರಿಸುತ್ತದೆ. ಇದನ್ನೂ ಓದಿ: ಹೊಸ ಗೆಳತಿಯನ್ನು ಪರಿಚಯಿಸಿದ ಮಸ್ಕ್

    ಆ್ಯಪ್‍ನ ಫೀಡ್ ಸೆಕ್ಷನ್‍ನಲ್ಲಿ ನೀವು ಫಾಲೋ ಮಾಡುವ ವ್ಯಕ್ತಿಗಳ ಪೋಸ್ಟ್‍ಗಳು ಕಾಣಿಸುತ್ತವೆ ಹಾಗೆಯೇ ನಿಮ್ಮ ಆಸಕ್ತಿಕರ ವಿಷಯಗಳ ಬಗೆಗಿನ ಲೇಟೆಸ್ಟ್ ವಿಷಯಗಳನ್ನೂ ಇದು ತೋರಿಸುತ್ತದೆ.

  • ಡೊನಾಲ್ಡ್ ಟ್ರಂಪ್‍ರನ್ನು ಭೇಟಿಯಾದ ಡಾ.ಪ್ರಭಾಕರ್ ಕೋರೆ

    ಡೊನಾಲ್ಡ್ ಟ್ರಂಪ್‍ರನ್ನು ಭೇಟಿಯಾದ ಡಾ.ಪ್ರಭಾಕರ್ ಕೋರೆ

    ವಾಷಿಂಗ್ಟನ್/ಚಿಕ್ಕೋಡಿ: ಇತ್ತೀಚಿಗೆ ಕೆಎಲ್‍ಇ ಸಂಸ್ಥೆಯ ಕಾರ್ಯಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ ಅವರು ಅಮೆರಿಕ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೌಹಾರ್ದಯುತವಾಗಿ ಭೇಟಿಯಾದರು.

    ಉದ್ಯಮಿ ರವಿಶಂಕರ್ ಭೂಪಲಾಪೂರ್ ದಂಪತಿಯ ಮಗಳಾದ ಡಾ.ಮನಾಲಿ ಮತ್ತು ಅಂಕಿತ್ ಅವರ ಮದುವೆಯ ಸಮಾರಂಭದಲ್ಲಿ ಟ್ರಂಪ್ ಅವರನ್ನು ಭೇಟಿಯಾದರು. ಇದನ್ನೂ ಓದಿ:  ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಇಲ್ಲ, ವದಂತಿ ಹಬ್ಬಿಸಿದ್ರೆ ಕಠಿಣ ಕ್ರಮ: ಡಾ. ಕೆ. ಸುಧಾಕರ್

    ಕುಶಲೋಪರಿಯಾಗಿ ಟ್ರಂಪ್ ಅವರೊಂದಿಗೆ ಮಾತನಾಡಿದ ಕೋರೆ ಅವರು, ಪ್ರಸ್ತುತ ಜಾಗತಿಕ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳ ಕುರಿತು ವಿಚಾರಗಳನ್ನು ಹಂಚಿಕೊಂಡರು. ಟ್ರಂಪ್ ಭೇಟಿಗೆ ಕೋರೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ರವಿಶಂಕರ್ ಭೂಪಲಾಪೂರ್ ಅವರು ಜೊತೆಗಿದ್ದರು.

  • ತನ್ನದೇ ಹೊಸ ಸಾಮಾಜಿಕ ಮಾಧ್ಯಮ ‘TRUTH Social’ ಆರಂಭಿಸಿದ ಟ್ರಂಪ್

    ತನ್ನದೇ ಹೊಸ ಸಾಮಾಜಿಕ ಮಾಧ್ಯಮ ‘TRUTH Social’ ಆರಂಭಿಸಿದ ಟ್ರಂಪ್

    ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಮತ್ತು ಟ್ವಿಟ್ಟರ್ ಖಾತೆಗಳನ್ನು ಬ್ಯಾನ್ ಮಾಡಿದ ಬಳಿಕ ಇದೀಗ ಇದಕ್ಕೆ ಸೆಡ್ಡು ಹೊಡೆಯಲು ತನ್ನದೇ ಹೊಸ ಸಾಮಾಜಿಕ ಮಾಧ್ಯಮ ‘TRUTH Social’ ಪ್ಲಾಟ್ ಫಾರ್ಮ್ ಆರಂಭಿಸಿದ್ದಾರೆ.

    ಅಮೆರಿಕ ಸಂಸತ್ ಭವನದ ಮೇಲೆ ನಡೆದ ದಂಗೆಗೆ ಸಂಬಂಧಿಸಿದಂತೆ ಟ್ರಂಪ್ ಮಾಡಿದ್ದ ಫೇಸ್‍ಬುಕ್ ಫೋಸ್ಟ್‍ಗಳು ಪ್ರಚೋದನಕಾಯಾಗಿದ್ದವು ಎಂಬ ಕಾರಣಕ್ಕೆ ಫೇಸ್‍ಬುಕ್ ಟ್ರಂಪ್ ಖಾತೆಯನ್ನು 2 ವರ್ಷಗಳ ಕಾಲ ಮತ್ತು ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಬ್ಯಾನ್ ಮಾಡಲಾಗಿತ್ತು. ಇದಕ್ಕೆ ಪ್ರತಿಕಾರ ಎಂಬಂತೆ ಟ್ರಂಪ್ ತನ್ನದೆ ಸಾಮಾಜಿಕ ಮಾಧ್ಯಮ ವೇದಿಕೆ ಆರಂಭಿಸಿ ಬಳಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಫೇಸ್‍ಬುಕ್ ಖಾತೆ 2 ವರ್ಷ ಬ್ಯಾನ್ 

    ಟ್ರಂಪ್ ಮೀಡಿಯಾ ಆ್ಯಂಡ್ ಟೆಕ್ನಾಲಜಿ ಗ್ರೂಪ್(ಟಿಎಂಟಿಜಿ) ಸಂಸ್ಥೆ ಟ್ರೂಥ್ ಸೋಶಿಯಲ್ ಎಂಬ ಸಾಮಾಜಿಕ ಮಾಧ್ಯಮವನ್ನು ಅಭಿವೃದ್ಧಿ ಪಡಿಸಿದ್ದು, ಇದರಲ್ಲಿ ಮನರಂಜನೆ ಕಾರ್ಯಕ್ರಮಗಳೊಂದಿಗೆ ವೀಡಿಯೋ ಸುದ್ದಿ ಹಾಗೂ ಪಾಡ್‍ಕಾಸ್ಟ್ ಸೇವೆಯನ್ನು ಆರಂಭಿಸಿ ಬಳಕೆಗೆ ಸಿದ್ಧತೆ ಮಾಡಿಕೊಂಡಿದೆ. ಮುಂದಿನ ತಿಂಗಳು ಆಯ್ದ ಅತಿಥಿ ಬೀಟಾ ಆವೃತ್ತಿ ಸಿಗಲಿದೆ. ಇದನ್ನೂ ಓದಿ: ಮತ್ತೊಂದು ಕುಖ್ಯಾತಿಗೆ ಪಾತ್ರವಾದ ಡೊನಾಲ್ಡ್‌ ಟ್ರಂಪ್‌

    ಈ ಬಗ್ಗೆ ಮಾತನಾಡಿರುವ ಟ್ರಂಪ್, ಬೃಹತ್ ಟೆಕ್ ಕಂಪನಿಗಳ ದಬ್ಬಾಳಿಕೆಗೆ ಸೆಡ್ಡು ಹೊಡೆಯಲು ನಾನು ಟ್ರೂಥ್ ಸೋಶಿಯಲ್ ಎಂಬ ಸಾಮಾಜಿಕ ಮಾಧ್ಯಮವನ್ನು ಆರಂಭಿಸಿದ್ದೇನೆ, ಟ್ವಿಟ್ಟರ್‍ ನಲ್ಲಿ ಬಹಳಷ್ಟು ತಾಲಿಬಾನ್ ಇರುವಿಕೆ ಇದೆ. ಆದರೂ ನಿಮ್ಮ ನೆಚ್ಚಿನ ಅಮೆರಿಕದ ಅಧ್ಯಕ್ಷರು ಮೌನವಾಗಿದ್ದರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಈ ನಿರ್ಧಾರದೊಂದಿಗೆ ಮುಂದುವರಿಯುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಸಂಸ್ಥೆಯಿಂದ ಟ್ರಂಪ್ ಖಾತೆ ಶಾಶ್ವತ ರದ್ದು

    ಅಮೆರಿಕ ಅಧ್ಯಕ್ಷ ಚುನಾವಣೆ ಬಳಿಕ ಟ್ರಂಪ್ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಬ್ಯಾನ್ ಮಾಡಲಾಗಿತ್ತು. ಈ ವೇಳೆ ಟ್ರಂಪ್ ತಮ್ಮದೇ ಸ್ವಂತ ಸಾಮಾಜಿಕ ಜಾಲತಾಣ ಆರಂಭಿಸುವುದಾಗಿ ಹೇಳಿದ್ದರು. ಇದೀಗ ತಮ್ಮದೆ ಸ್ವಂತ ಸಾಮಾಜಿಕ ಮಾಧ್ಯಮ ಬಳಕೆಗೆ ಸಿದ್ಧವಾಗಿದ್ದು ಮುಂದಿನ ತಿಂಗಳು ಬೀಟಾ (ಪರೀಕ್ಷಾರ್ಥ ಸೇವೆ) ಬಳಿಕ ಈ ಹೊಸ ಮಾಧ್ಯಮ ಬಳಕೆಗೆ ಸಿಗಬಹುದು.

  • ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದಿದ್ದು ಅಮೆರಿಕಾ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ

    ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದಿದ್ದು ಅಮೆರಿಕಾ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ

    ವಾಷಿಂಗ್ಟನ್: ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದುಕೊಂಡ ಅಧ್ಯಕ್ಷ ಜೋ ಬೈಡನ್ ನಿರ್ಧಾರ ಅಮೆರಿಕಾ ಇತಿಹಾಸದಲ್ಲಿ ದೊಡ್ಡ ಕಪ್ಪು ಚುಕ್ಕೆ ಆಗಲಿದೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.

    ಜೋ ಬೈಡನ್ ಸಮರ್ಥನೆ:
    ಅಫ್ಘಾನಿಸ್ತಾನ ಸೇನೆಯೇ ಹೋರಾಟ ಮಾಡದಿರುವಾಗ ನಮ್ಮ ಸೈನಿಕರು ಅಲ್ಲಿ ಬಲಿ ಆಗುವುದರಲ್ಲಿ ಅರ್ಥ ಇಲ್ಲ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಪೂರ್ಣ ಕೈವಶ ಮಾಡಿಕೊಡ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಸೇನೆ ಹಿಂಪಡೆಯುವ ಬಗ್ಗೆ ಟ್ರಂಪ್ ಅವಧಿಯಲ್ಲಿ ಒಪ್ಪಂದ ಆಗಿತ್ತು. ಆ ಒಪ್ಪಂದವನ್ನು ಜಾರಿಗೊಳಿಸುತ್ತಿದ್ದೇನೆ ಎಂದು ಹೇಳಿದ್ದರು.

    ಈ ಹಿಂದೆ ಮಾತುಕತೆ ವೇಳೆ ಅಫ್ಘಾನಿಸ್ತಾನ ಸೇನೆ ಹೋರಾಟ ಮಾಡುವುದಾಗಿ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದರು. ಆದರೆ ಅವರೇ ಓಡಿಹೋಗಿದ್ದಾರೆ. ಅಫ್ಘಾನ್ ಸೇನೆಯೇ ಹೋರಾಟ ಮಾಡದಿರುವಾಗ ನಮ್ಮ ಸೈನಿಕರು ಅಲ್ಲಿ ಬಲಿ ಆಗುವುದರಲ್ಲಿ ಅರ್ಥ ಇಲ್ಲ. ಈ ಹಿಂದೆ ಮಾಡಿದ ತಪ್ಪುಗಳನ್ನೇ ಮತ್ತೆ ಮಾಡುವುದಿಲ್ಲ. ಈಗಾಗಲೇ ನಾವು 3 ಶತಕೋಟಿ ಡಾಲರ್ ಹಣವನ್ನು ಖರ್ಚು ಮಾಡಿದ್ದೇವೆ. ಈ ಯುದ್ಧದಲ್ಲಿ ಇನ್ನೂ ಎಷ್ಟು ತಲೆಮಾರಿನವರೆಗೆ ಅಮೇರಿಕದ ಗಂಡು ಮತ್ತು ಹೆಣ್ಣು ಮಕ್ಕಳು ತಮ್ಮ ಜೀವವನ್ನು ಕಳೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

    ತಾಲಿಬಾನ್ ಕುರಿತು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಎಂಪಿಎಲ್‍ಬಿ)ನ ವಕ್ತಾರ ನೋಮಾನಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಾಲಿಬಾನಿಗಳಿಗೆ ಶುಭಕೋರಿರುವ ನೋಮಾನಿ, ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿದ್ದನು ಸಮರ್ಥಿಸಿಕೊಂಡು, ನಿಮಗೆ ಹಿಂದು ಮುಸ್ಲಿಮರು ಸಲಾಮ್ ಹೇಳುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ

    ಇತ್ತ ಬ್ರಿಟನ್ 20 ಸಾವಿರ ಶರಣಾರ್ಥಿ ಅಫ್ಗನರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದೆ. ಇದರಲ್ಲಿ ಮಹಿಳೆ ಮತ್ತು ಧರ್ಮದ ಆಧಾರದಲ್ಲಿ ಅಲ್ಪಸಂಖ್ಯಾತರಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ತಾಲಿಬಾನಿಗಳಿಗೆ ಹೆದರಿ 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನ

    https://www.youtube.com/watch?v=q1d3GWb66jQ

  • ಡೊನಾಲ್ಡ್ ಟ್ರಂಪ್ ಫೇಸ್‍ಬುಕ್ ಖಾತೆ 2 ವರ್ಷ ಬ್ಯಾನ್

    ಡೊನಾಲ್ಡ್ ಟ್ರಂಪ್ ಫೇಸ್‍ಬುಕ್ ಖಾತೆ 2 ವರ್ಷ ಬ್ಯಾನ್

    ವಾಷಿಂಗ್ಟನ್: ಅಮೆರಿಕ ಸಂಸತ್ ಭವನದ ಮೇಲೆ ಜನವರಿ 6ರಂದು ನಡೆದ ದಂಗೆಗೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದ ಫೇಸ್‍ಬುಕ್ ಪೋಸ್ಟ್ ಗಳು ಪ್ರಚೋದನಕಾರಿಯಾಗಿದ್ದವು ಎಂಬ ಕಾರಣಕ್ಕೆ ಫೇಸ್‍ಬುಕ್ ಸಂಸ್ಥೆ ಟ್ರಂಪ್ ಖಾತೆಯನ್ನು ಮುಂದಿನ 2 ವರ್ಷಗಳ ಕಾಲ ಬ್ಯಾನ್ ಮಾಡಿದೆ.

    ಸಂಸತ್ ಭವನ ಕ್ಯಾಪಿಟಲ್ ಹಿಲ್‍ನಲ್ಲಿ ನಡೆದ ಹಿಂಸಾಚಾರದ ಬಳಿಕ ಜನವರಿ 7ರಂದು ಟ್ರಂಪ್ ಅವರ ಫೇಸ್‍ಬುಕ್ ಖಾತೆಯನ್ನು ರದ್ದು ಮಾಡಲಾಗಿತ್ತು. ಈ ಸಂದರ್ಭ ಟ್ರಂಪ್ ಇದು ಅಮೆರಿಕದವರಿಗೆ ಫೇಸ್‍ಬುಕ್ ಮಾಡಿದ ಅವಮಾನ ಎಂದಿದ್ದರು.ಇದನ್ನೂ ಓದಿ: ಅಮೆರಿಕ ಸಂಸತ್‌ ಕಟ್ಟಡಕ್ಕೆ ಟ್ರಂಪ್‌ ಬೆಂಬಲಿಗರಿಂದ ಬೆಂಕಿ

    ಇದೀಗ ಫೇಸ್‍ಬುಕ್ ಸಂಸ್ಥೆ ತಿಳಿಸಿರುವಂತೆ ಡೊನಾಲ್ಡ್ ಟ್ರಂಪ್ ಅವರ ವರ್ತನೆ ಫೇಸ್‍ಬುಕ್ ಸಂಸ್ಥೆಯ ಹೊಸ ನಿಯಮಾವಳಿಗಳನ್ನು ಮುರಿದಿದೆ. ಹಿಂಸಾಚಾರಕ್ಕೆ ಪ್ರಚೋದನಕಾರಿಯಾಗಿ ಮಾಡಿದ ಪೋಸ್ಟ್ ಗೆ ಸಂಬಂಧಿಸಿದಂತೆ ಸಂಸ್ಧೆಯು ತೆಗೆದುಕೊಂಡಿರುವ ನಿರ್ಧಾರದ ಪ್ರಕಾರ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು 2023ರ ಜನವರಿವರೆಗೆ ಬ್ಯಾನ್ ಮಾಡಲಾಗಿದೆ ಎಂದು ಫೇಸ್‍ಬುಕ್‍ನ ಜಾಗತಿಕ ವ್ಯವಹಾರಗಳ ಉಪಾಧ್ಯಕ್ಷ ನಿಕ್ ಕ್ಲೆಗ್ ಬ್ಲಾಗ್ ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಫೇಸ್‍ಬುಕ್‍ನಲ್ಲಿ ಟ್ರಂಪ್ ಅವರ ಖಾತೆ ಬ್ಯಾನ್ ಆಗಿದ್ದರೂ ಕೂಡ ಅವರ ಇತರರು ಹಿಂದಿನ ಪೋಸ್ಟ್ ಗಳನ್ನು ಓದಬಹುದು ಮತ್ತು ಕಾಮೆಂಟ್ ಮಾಡಬಹುದು. ಆದರೆ ಹೊಸ ವಿಷಯಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಸಂಸ್ಥೆಯಿಂದ ಟ್ರಂಪ್ ಖಾತೆ ಶಾಶ್ವತ ರದ್ದು

    ಟ್ರಂಪ್ ಖಾತೆಯನ್ನು ಅಮಾನತು ಮಾಡಿರುವ ಫೇಸ್‍ಬುಕ್‍ನ ನಡೆಯನ್ನು ಹಲವರು ಸ್ವಾಗತಿಸಿದ್ದಾರೆ. ಆದರೆ ರಿಪಬ್ಲಿಕನ್ ಶಾಸಕರು, ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆಯಾಗಿದೆ ಎಂದು ಟ್ರಂಪ್ ಖಾತೆ ಮೇಲಿನ ನಿರ್ಬಂಧವನ್ನು ವಿರೋಧಿಸಿದ್ದಾರೆ.

    ಫೇಸ್ ಬುಕ್ ಟ್ರಂಪ್ ಖಾತೆಯನ್ನು 2 ವರ್ಷ ಬ್ಯಾನ್ ಮಾಡಿದ್ದರೆ, ಟ್ವಿಟ್ಟರ್ ಮಾತ್ರ ಶಾಶ್ವತವಾಗಿ ಅವರ ಖಾತೆಯನ್ನು ರದ್ದುಮಾಡಿದೆ. 88 ಮಿಲಿಯನ್ ಫಾಲೋವರ್ಸ್ ಹೊಂದಿದ ಟ್ವಿಟ್ಟರ್ ಖಾತೆ ಈಗಾಗಲೇ ಬ್ಯಾನ್ ಆಗಿದೆ. ಇದನ್ನೂ ಓದಿ: ಮತ್ತೊಂದು ಕುಖ್ಯಾತಿಗೆ ಪಾತ್ರವಾದ ಡೊನಾಲ್ಡ್‌ ಟ್ರಂಪ್‌

  • ಮತ್ತೊಂದು ಕುಖ್ಯಾತಿಗೆ ಪಾತ್ರವಾದ ಡೊನಾಲ್ಡ್‌ ಟ್ರಂಪ್‌

    ಮತ್ತೊಂದು ಕುಖ್ಯಾತಿಗೆ ಪಾತ್ರವಾದ ಡೊನಾಲ್ಡ್‌ ಟ್ರಂಪ್‌

    ವಾಷಿಂಗ್ಟನ್‌: ಇನ್ನೊಂದು ವಾರದಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿರುವ ಡೊನಾಲ್ಡ್ ಟ್ರಂಪ್ ಮತ್ತೊಂದು ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಕ್ಯಾಪಿಟೊಲ್ ಮೇಲಿನ ದಾಳಿಗೆ ಟ್ರಂಪ್ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಡೆಮಾಕ್ರಟೆಕ್‌ ಮಂಡಿಸಿದ ವಾಗ್ದಂಡನೆಗೆ ಜನಪ್ರತಿನಿಧಿಗಳ ಸಭೆ ಅನುಮೋದನೆ ನೀಡಿದೆ.

    232-197 ಮತಗಳ ಅಂತರದಲ್ಲಿ ಜನಪ್ರತಿನಿಧಿಗಳ ಸಭೆ ವಾಗ್ದಂಡನೆ ನಿಲುವಳಿಗೆ ಅಂಗೀಕಾರ ನೀಡಿತು. ಈ ಹಿನ್ನೆಲೆಯಲ್ಲಿ ಅಮೆರಿಕ ಇತಿಹಾಸದಲ್ಲಿಯೇ ಜನಪ್ರತಿನಿಧಿಗಳ ಸಭೆಯಲ್ಲಿ ಎರಡು ಬಾರಿ ವಾಗ್ದಂಡನೆಗೆ ಗುರಿಯಾದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್ ಪಾತ್ರರಾದರು.

     

    ವಾಗ್ದಂಡನೆಯ ಗ್ಗೆ ಸೆನೆಟ್‍ನಲ್ಲಿ ಚರ್ಚೆ ನಡೆಯಲಿದೆ. ಜನವರಿ 19ಕ್ಕೆ ಸೆನೆಟ್ ಸಭೆ ಸೇರಲಿದೆ. ಸೆನೆಟ್‍ನಲ್ಲಿ ವಾಗ್ದಂಡನೆ ನಿಲುವಳಿ ಅನುಮೋದನೆ ಹೊಂದಲು ಡೆಮೆಕ್ರಾಟಿಕ್‌ಗೆ 17 ಮತಗಳ ಕೊರತೆ ಇದೆ. ರಿಪಬ್ಲಿಕನ್ ಪಕ್ಷದ ಕೆಲವರು ಈ ನಿಲುವಳಿಯನ್ನು ಬೆಂಬಲಿಸುವ ಸುಳಿವು ನೀಡಿದ್ದಾರೆ. ಜನವರಿ 20ಕ್ಕೆ ಬೈಡನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಟ್ರಂಪ್ ವಿಚಾರಣೆ ನಡೆಯುವ ಸಂಭವ ಇದೆ.

    ಟ್ರಂಪ್ ಟ್ವಿಟ್ಟರ್ ಖಾತೆಯನ್ನು ತೊಲಗಿಸಿದ ಕ್ರಮ ಸರಿಯಾದುದ್ದೇ ಎಂದು ಟ್ವಿಟ್ಟರ್ ಸಿಇಓ ಜಾಕ್ ಡೋರ್ಸೇ ಸಮರ್ಥಿಸಿಕೊಂಡಿದ್ದಾರೆ.