Tag: donald trump

  • 2 ವರ್ಷ ಬ್ಯಾನ್ ಬಳಿಕ ಫೇಸ್‌ಬುಕ್, ಯೂಟ್ಯೂಬ್‌ಗೆ ಮರಳಿದ ಟ್ರಂಪ್

    2 ವರ್ಷ ಬ್ಯಾನ್ ಬಳಿಕ ಫೇಸ್‌ಬುಕ್, ಯೂಟ್ಯೂಬ್‌ಗೆ ಮರಳಿದ ಟ್ರಂಪ್

    ವಾಷಿಂಗ್ಟನ್: ಯೂಟ್ಯೂಬ್ (YouTube) ಹಾಗೂ ಫೇಸ್‌ಬುಕ್‌ಗಳಲ್ಲಿ (Facebook) 2 ವರ್ಷಗಳ ಕಾಲ ಬ್ಯಾನ್ (Ban) ಆಗಿದ್ದ ಅಮೆರಿಕದ (America) ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಖಾತೆಗಳು ಇದೀಗ ಮರಳಿ ಬಂದಿದೆ.

    2021ರ ಜನವರಿ 6ರಂದು ಟ್ರಂಪ್ ಬೆಂಬಲಿಗರು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡಿದ್ದರು. ಈ ಹಿಂಸಾಚಾರಕ್ಕೆ ಟ್ರಂಪ್ ಪ್ರಚೋದನೆ ನೀಡುವಂತಹ ಪೋಸ್ಟ್‌ಗಳನ್ನು ಹಾಕಿದ್ದಕ್ಕೆ ಅವರ ಯೂಟ್ಯೂಬ್ ಹಾಗೂ ಫೇಸ್‌ಬುಕ್ ಖಾತೆಗಳನ್ನು ಬ್ಯಾನ್ ಮಾಡಲಾಗಿತ್ತು. ಇದೀಗ 2 ವರ್ಷಗಳ ಬಳಿಕ ಅವರ ಖಾತೆಗಳನ್ನು ಮತ್ತೆ ಸ್ಥಾಪಿಸಲಾಗಿದೆ.

    ಫೇಸ್‌ಬುಕ್ ಹಾಗೂ ಯೂಟ್ಯೂಬ್‌ಗೆ ಮರಳುತ್ತಲೇ ಟ್ರಂಪ್ ಪೋಸ್ಟ್‌ಗಳನ್ನು ಹಾಕಿದ್ದಾರೆ. ಶುಕ್ರವಾರ ಟ್ರಂಪ್ ಪೋಸ್ಟ್ ಒಂದನ್ನು ಹಾಕಿ, ‘ಐ ಆಮ್ ಬ್ಯಾಕ್’ (ನಾನು ಮರಳಿ ಬಂದಿದ್ದೇನೆ) ಎಂದು ಬರೆದಿದ್ದಾರೆ. ಮಾತ್ರವಲ್ಲದೇ ಇಲ್ಲಿವರೆಗೆ ನಿಮ್ಮನ್ನು ಕಾಯಿಸಿರುವುದಕ್ಕೆ ಕ್ಷಮಿಸಿ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: `ಕೈ’ ಟಿಕೆಟ್ ಆಕಾಂಕ್ಷಿಯಿಂದ ಸೀರೆ, ತವಾ ವಿತರಣೆ- ಉಡುಗೊರೆ ಸಿಗದ ಮಹಿಳೆಯರು ಗರಂ

    ಯೂಟ್ಯೂಬ್ ಶುಕ್ರವಾರ ಟ್ರಂಪ್ ಅವರ ಚಾನಲ್ ಅನ್ನು ಮರಳಿಸಿದ್ದು, ಮೆಟಾ ಪ್ಲಾಟ್‌ಫಾರ್ಮ್ ಈ ವರ್ಷದ ಆರಂಭದಲ್ಲಿ ಅವರ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಮರಳಿಸಿವೆ. ಟ್ವಿಟ್ಟರ್ ಅನ್ನು ಖರೀದಿಸಿದ ಎಲೋನ್ ಮಸ್ಕ್ ಕಳೆದ ವರ್ಷ ನವೆಂಬರ್‌ನಲ್ಲಿಯೇ ಅವರ ಖಾತೆಯನ್ನು ಮರಳಿಸಿದ್ದರು. ಆದರೆ ಟ್ರಂಪ್ ಇಲ್ಲಿಯವರೆಗೆ ಟ್ವಿಟ್ಟರ್‌ನಲ್ಲಿ ಯಾವುದೇ ಪೋಸ್ಟ್‌ಗಳನ್ನು ಹಂಚಿಕೊಂಡಿಲ್ಲ.

    ಹಲವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಬ್ಯಾನ್ ಆಗಿದ್ದ ಟ್ರಂಪ್ 2021ರ ಅಂತ್ಯದ ವೇಳೆಗೆ ಟ್ರೂತ್ ಸೋಶಿಯಲ್ ಎಂಬ ತಮ್ಮದೇ ಹೊಸ ಪ್ಲಾಟ್‌ಫಾರ್ಮ್ ಅನ್ನು ಸ್ಥಾಪಿಸಿದ್ದರು. ಇದನ್ನು ಅವರು ತಮ್ಮ ಬೆಂಬಲಿಗರೊಂದಿಗೆ ಸಂವಹನ ನಡೆಸಲು ಬಳಸುತ್ತಿದ್ದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಬಾಡೂಟ ರಾಜಕೀಯಕ್ಕೆ ಬಿಸಿ- ನೀತಿ ಸಂಹಿತೆ ಉಲ್ಲಂಘನೆ ಅಡಿ ಕೇಸ್

  • ಭಾರತ ಈಗ ಕುಸಿಯುತ್ತಿದೆ: ಮೋದಿಯನ್ನು ಟೀಕಿಸಿದ ಜಾರ್ಜ್ ಸೊರಸ್ ಯಾರು?

    ಭಾರತ ಈಗ ಕುಸಿಯುತ್ತಿದೆ: ಮೋದಿಯನ್ನು ಟೀಕಿಸಿದ ಜಾರ್ಜ್ ಸೊರಸ್ ಯಾರು?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯನ್ನು (Narendra Modi) ಟೀಕಿಸಿ, ಉದ್ಯಮಿ ಗೌತಮ್ ಅದಾನಿ ಕುರಿತಾದ ಹಿಂಡನ್‍ಬರ್ಗ್ (Hindenburg) ಕುರಿತಾದ ವರದಿ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಕೋಟ್ಯಧಿಪತಿ ಜಾರ್ಜ್ ಸೊರಸ್ (George Soros) ಅವರನ್ನು ಕೇಂದ್ರ ಸರ್ಕಾರ ಇಂದು ತರಾಟೆಗೆ ತೆಗೆದುಕೊಂಡಿದೆ.

    ಜಾರ್ಜ್ ಸೊರಸ್ ಮ್ಯೂನಿಚ್ ಸೆಕ್ಯುರಿಟಿ ಕಾನ್ಫ್‍ರೆನ್ಸ್‍ನಲ್ಲಿ ಸೊರೊಸ್ ಅದಾನಿ ಕಂಪನಿಗಳ ವಂಚನೆ ಹಾಗೂ ಈ ಕುರಿತು ಪ್ರಧಾನಿ ಮೋದಿಯವರ ಮೌನದ ಕುರಿತು ಅವರು ಧ್ವನಿ ಎತ್ತಿದ್ದರು. ಮೋದಿಯವರ ಅಡಳಿತದ ಭಾರತವು ಕೆಳಮಟ್ಟಕ್ಕೆ ಕುಸಿಯುತ್ತಿದೆ. ಭಾರತ ಕ್ವಾಡ್ ದೇಶವಾಗಿದ್ದರೂ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಭಾರತದಲ್ಲಿ ಪ್ರಜಾಸತ್ತಾತ್ಮಕ ಸುಧಾರಣೆಗಳನ್ನು ನಾನು ಬಯಸುತ್ತೇನೆ ಎಂದು ಸೊರಸ್ ಅಭಿಪ್ರಾಯ ಪಟ್ಟಿದ್ದರು. ಇದನ್ನೂ ಓದಿ: ಬಜೆಟ್‌ನಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಅನುದಾನ: ಬೊಮ್ಮಾಯಿ ಭರವಸೆ

    ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani), ಭಾರತವನ್ನು ಸಹಿಸಲಾಗದೆ ವಿದೇಶಿ ಶಕ್ತಿಗಳು ದಾಳಿ ನಡೆಸುತ್ತಿವೆ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಪ್ರತಿಕ್ರಿಯಿಸುವ ಅಗತ್ಯವಿದೆ ಎಂದಿದ್ದಾರೆ.

    ಯಾರು ಈ ಸೊರಸ್?
    92 ವರ್ಷದ ಸೊರಸ್ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಯಹೂದಿ ಕುಟುಂಬದಲ್ಲಿ ಜನಿಸಿದ್ದ ಇವರು 17 ವರ್ಷದವರಿದ್ದಾಗ ನಾಝಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹಂಗೇರಿಯನ್ನು ತೊರೆದು 1947ರಲ್ಲಿ ಲಂಡನ್ ಸೇರಿದ್ದರು. ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡಿದ್ದರು.

     

    ವಿದ್ಯಾಭ್ಯಾಸದ ನಂತರ ಲಂಡನ್ ಮರ್ಚೆಂಟ್ ಬ್ಯಾಂಕ್ ಸಿಂಗರ್ ಮತ್ತು ಫ್ರೈಡ್‍ಲ್ಯಾಂಡರ್‍ಗೆ ಸೇರಿದರು. 1956ರಲ್ಲಿ ನ್ಯೂಯಾರ್ಕ್‍ಗೆ ತೆರಳಿದ ಅವರು ಯುರೋಪಿಯನ್ ಸೆಕ್ಯುರಿಟಿ ವಿಶ್ಲೇಷಕರಾಗಿ ಸೇರಿಕೊಂಡರು. 1973ರಲ್ಲಿ ಹೂಡಿಕೆ ಸಂಸ್ಥೆಯನ್ನು ಸ್ಥಾಪಿಸಿ ವಿದೇಶದ ಕಂಪನಿಗಳಲ್ಲಿ ಹಣ ಹೂಡಿ ಅದರಲ್ಲಿ ಯಶಸ್ಸು ಕಂಡರು.

    ಸೊರಸ್ 8.5 ಶತಕೋಟಿ ಡಾಲರ್ ಒಡೆಯರಾಗಿದ್ದಾರೆ. ಪ್ರಜಾಪ್ರಭುತ್ವ ಹಾಗೂ ವಾಕ್ ಸ್ವಾತಂತ್ರ್ಯವನ್ನು ಉತ್ತೇಜಿಸುವ ಸಂಘಟನೆಗಳು ಹಾಗೂ ವ್ಯಕ್ತಿಗಳಿಗೆ ಅನುದಾನ ನೀಡುವ ಓಪನ್ ಸೊಸೈಟಿ ಫೌಂಡೇಶನ್‍ಗಳನ್ನು ಅವರು ಸ್ಥಾಪಿಸಿದ್ದಾರೆ. ಭಾರತದ ಹಲವು ಮಾಧ್ಯಮ ಸಂಸ್ಥೆಗಳಿಗೆ ಓಪನ್ ಸೊಸೈಟಿ ಅನುದಾನ ನೀಡುತ್ತಿದೆ. ಇದನ್ನೂ ಓದಿ: ನಕಲು ತಡೆಗೆ ಕಠಿಣ ಕ್ರಮ – ವಾರ್ಷಿಕ ಪರೀಕ್ಷೆಯ ಮೊದಲ ದಿನವೇ 4 ಲಕ್ಷ ವಿದ್ಯಾರ್ಥಿಗಳು ಗೈರು

    ಶೀತಲ ಸಮರದ ಅಂತ್ಯದ ವೇಳೆಗೆ ಜೆಕಾಸ್ಲೋವಾಕಿಯ, ಪೋಲೆಂಡ್, ರಷ್ಯಾ ಮತ್ತು ಯುಗೊಸ್ಲಾವಿಯಾದಲ್ಲಿ ತಮ್ಮ ಸಂಸ್ಥೆಯನ್ನು ಸ್ಥಾಪಿಸಿದರು. ಇಂದು ಒಪನ್ ಸೊಸೈಟಿ ಫೌಂಡೇಶನ್ 70ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ರಾಜಕೀಯ ಚಳುವಳಿಯಲ್ಲಿ ಭಾಗವಹಿಸುವ ಅವರು ಬರಾಕ್ ಒಬಾಮ (Barack Obama), ಹಿಲರಿ ಕ್ಲಿಂಟನ್ ಮತ್ತು ಜೋ ಬೈಡನ್ (Joe Biden) ಅವರನ್ನು ಬೆಂಬಲಿಸಿದ್ದರು. ಹಾಗೆ ಚೀನಾ ಅಧ್ಯಕ್ಷ ಜಿನ್‍ಪಿಂಗ್, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಟರ್ಕಿ (Turkey) ಅಧ್ಯಕ್ಷ ಎರ್ಡೋಗನ್ ಅವರನ್ನು ವಿರೋಧಿಸಿದ್ದರು.

    ಕಳೆದ ತಿಂಗಳು ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡನ್‍ಬರ್ಗ್ ಸಂಸ್ಥೆ ಅದಾನಿ ಕಂಪನಿಯ ವಂಚನೆ ಕುರಿತಾದ ಸಂಶೋಧನ ವರದಿಯೊಂದನ್ನು ಪ್ರಕಟಿಸಿತ್ತು. ಇದಾದ ನಂತರ ಅದಾನಿ ಕಂಪನಿಯ ಷೇರುಗಳು ಕುಸಿತ ಕಂಡಿದ್ದವು. ಆದರೆ ಹಿಂಡನ್‍ಬರ್ಗ್ ವರದಿಯನ್ನು ಅದಾನಿ ಸಂಸ್ಥೆ ಅಲ್ಲಗಳೆದು ದೀರ್ಘವಾದ ಉತ್ತರ ನೀಡಿತ್ತು.

    ಸೊರಸ್ ಮೋದಿ ವಿರುದ್ಧ ಟೀಕೆ ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಹಲವು ವೇದಿಕೆಗಳಲ್ಲಿ ಬಹಿರಂಗವಾಗಿಯೇ ಟೀಕೆ ಮಾಡಿದ್ದರು. ಇದನ್ನೂ ಓದಿ: ಪಕ್ಷಾತೀತ, ಭಯರಹಿತ ಪತ್ರಿಕೋದ್ಯಮ ಮುಂದುವರಿಸುತ್ತೇವೆ – ಆರ್ಥಿಕ ಸಮೀಕ್ಷೆ ಬಳಿಕ BBC ಹೇಳಿಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎರಡು ವರ್ಷಗಳ ನಿಷೇಧದ ಬಳಿಕ ಟ್ರಂಪ್ ಫೇಸ್‍ಬುಕ್, ಇನ್‍ಸ್ಟಾಗ್ರಾಂ ಖಾತೆ ಮರುಸ್ಥಾಪನೆ

    ಎರಡು ವರ್ಷಗಳ ನಿಷೇಧದ ಬಳಿಕ ಟ್ರಂಪ್ ಫೇಸ್‍ಬುಕ್, ಇನ್‍ಸ್ಟಾಗ್ರಾಂ ಖಾತೆ ಮರುಸ್ಥಾಪನೆ

    ವಾಷಿಂಗ್ಟನ್: ಅಮೆರಿಕದ (America) ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಫೇಸ್‍ಬುಕ್ (Facebook) ಮತ್ತು ಇನ್‍ಸ್ಟಾಗ್ರಾಂ (Instagram) ಖಾತೆಯನ್ನು ಬ್ಯಾನ್ ಮಾಡಿದ್ದ ಮೇಟಾ (Meta) ಸಂಸ್ಥೆ ಇದೀಗ 2 ವರ್ಷಗಳ ನಿಷೇಧದ ಬಳಿಕ ಮರುಸ್ಥಾಪನೆಗೆ ಅವಕಾಶ ನೀಡುವುದಾಗಿ ತಿಳಿಸಿದೆ.

    ಅಮೆರಿಕ ಸಂಸತ್ ಭವನದ ಮೇಲೆ 2021ರ ಜನವರಿ 6 ರಂದು ನಡೆದ ದಂಗೆಗೆ ಸಂಬಂಧಿಸಿದಂತೆ ಟ್ರಂಪ್ ಮಾಡಿದ್ದ ಫೇಸ್‍ಬುಕ್ ಪೋಸ್ಟ್‌ಗಳು ಪ್ರಚೋದನಕಾರಿಯಾಗಿದ್ದವು ಎಂಬ ಕಾರಣಕ್ಕೆ ಫೇಸ್‍ಬುಕ್ ಸಂಸ್ಥೆ ಟ್ರಂಪ್ ಖಾತೆಯನ್ನು 2 ವರ್ಷಗಳ ಕಾಲ ಬ್ಯಾನ್ ಮಾಡಿತ್ತು. ಇದರೊಂದಿಗೆ ಇನ್‍ಸ್ಟಾಗ್ರಾಂ ಖಾತೆಯನ್ನು ಬ್ಯಾನ್ ಮಾಡಿತ್ತು. ಡೊನಾಲ್ಡ್ ಟ್ರಂಪ್ ಫೇಸ್‍ಬುಕ್ ಖಾತೆ 2 ವರ್ಷ ಬ್ಯಾನ್

    ಇದೀಗ ನಾವು ಮುಂದಿನ ಕೆಲ ದಿನಗಳಲ್ಲಿ ಟ್ರಂಪ್ ಅವರ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂ ಖಾತೆಗಳನ್ನು ಮರುಸ್ಥಾಪಿಸಲು ಅವಕಾಶ ನೀಡುತ್ತಿದ್ದೇವೆ ಎಂದು ಮೆಟಾದ ಜಾಗತಿಕ ವ್ಯವಹಾರಗಳ ಅಧ್ಯಕ್ಷ ನಿಕ್ ಕ್ಲೆಗ್ (Nick Clegg) ತಿಳಿಸಿದ್ದಾರೆ. ಪುನರಾವರ್ತಿತ ಅಪರಾಧಗಳನ್ನು ತಡೆಯಲು ಹೊಸ ಮಾನದಂಡಗಳೊಂದಿಗೆ ಖಾತೆಯನ್ನು ಮರಸ್ಥಾಪಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ತನ್ನದೇ ಹೊಸ ಸಾಮಾಜಿಕ ಮಾಧ್ಯಮ ‘TRUTH Social’ ಆರಂಭಿಸಿದ ಟ್ರಂಪ್

    ಹಿಂಸಾಚಾರಕ್ಕೆ ಪ್ರಚೋದನಕಾರಿಯಾಗಿ ಮಾಡಿದ ಪೋಸ್ಟ್‌ಗೆ ಸಂಬಂಧಿಸಿದಂತೆ ಸಂಸ್ಧೆಯು ತೆಗೆದುಕೊಂಡಿರುವ ನಿರ್ಧಾರದ ಪ್ರಕಾರ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು 2023ರ ಜನವರಿವರೆಗೆ ಬ್ಯಾನ್ ಮಾಡಲಾಗಿದೆ ಎಂದು 2 ವರ್ಷಗಳ ಹಿಂದೆ ನಿಕ್ ಕ್ಲೆಗ್ ಬ್ಲಾಗ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. ಇದೀಗ ಮತ್ತೆ ಮರುಸ್ಥಾಪಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

    ಟ್ರಂಪ್ ಅವರ ಫೇಸ್‍ಬುಕ್ ಖಾತೆಯನ್ನು 2 ವರ್ಷ ಬ್ಯಾನ್ ಮಾಡಿದ್ದರೆ, ಟ್ವಿಟ್ಟರ್ (Twitter) ಮಾತ್ರ ಶಾಶ್ವತವಾಗಿ ಖಾತೆಯನ್ನು ರದ್ದುಮಾಡಿದೆ. 88 ಮಿಲಿಯನ್ ಫಾಲೋವರ್ಸ್ ಹೊಂದಿದ ಟ್ವಿಟ್ಟರ್ ಖಾತೆ ಈಗಾಗಲೇ ಬ್ಯಾನ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತೆರಿಗೆ ವಂಚನೆ ಪ್ರಕರಣದಲ್ಲಿ ಟ್ರಂಪ್ ಕುಟುಂಬದ ಸಂಸ್ಥೆಗೆ ದಂಡ

    ತೆರಿಗೆ ವಂಚನೆ ಪ್ರಕರಣದಲ್ಲಿ ಟ್ರಂಪ್ ಕುಟುಂಬದ ಸಂಸ್ಥೆಗೆ ದಂಡ

    ವಾಷಿಂಗ್ಟನ್: ಅಮೆರಿಕದ (America)  ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕುಟುಂಬದ ಒಡೆತನದಲ್ಲಿರುವ ಸಂಸ್ಥೆಗಳು ತೆರಿಗೆ (Tax) ಕಟ್ಟದೆ ವಂಚಿಸಿದ ಆರೋಪದಡಿ ಕೋರ್ಟ್ ದಂಡ ವಿಧಿಸಿದೆ.

    ಟ್ರಂಪ್ ಆರ್ಗನೈಸೆಷನ್ ಮತ್ತು ಟ್ರಂಪ್ ಪೇರೋಲ್ ಕಾರ್ಪ್‍ಗಳು ತೆರಿಗೆ ವಂಚಿಸಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಆ ಬಳಿಕ ಕೋರ್ಟ್‍ನಲ್ಲಿ ಕೇಸ್ ದಾಖಲಾಗಿತ್ತು. ಇದೀಗ ಕೋರ್ಟ್‍ನಲ್ಲಿ ಟ್ರಂಪ್ ಕುಟುಂಬದ ಸಂಸ್ಥೆಗಳು ತೆರಿಗೆ ವಂಚನೆ ಮಾಡಿರುವುದು ಸಾಭೀತಾಗಿದೆ.

    ಮ್ಯಾನ್‍ಹ್ಯಾಟನ್ ಅಪಾರ್ಟ್‍ಮೆಂಟ್‍ಗಳು ಮತ್ತು ಐಷಾರಾಮಿ ಕಾರುಗಳು ಸೇರಿದಂತೆ ಕೆಲ ಕಂಪನಿಗಳ ಮೇಲಿನ ತೆರಿಗೆಗಳನ್ನು ತಪ್ಪಿಸಿಕೊಳ್ಳಲು ಅಧಿಕಾರಿಗಳಿಗೆ ಸಹಾಯ ಮಾಡಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್‍ರ ಕಂಪನಿ ತೆರಿಗೆ ವಂಚನೆ ಶಿಕ್ಷೆಗೊಳಗಾಗಿದೆ. ದಾಖಲೆಗಳನ್ನು ನಕಲು ಮಾಡಿರುವ ಆರೋಪಗಳನ್ನು ಒಳಗೊಂಡಂತೆ ಹಲವು ಆರೋಪಗಳು ಸಾಭೀತಾಗಿದ್ದು, ಟ್ರಂಪ್ ಸಂಸ್ಥೆಯಲ್ಲಿನ ಎರಡು ಕಾರ್ಪೋರೆಟ್‌ ಘಟಕಗಳು ತೆರಿಗೆ ವಂಚಿಸಿರುವುದಕ್ಕಾಗಿ ದಂಡ ವಿಧಿಸಿ ತೀರ್ಪು ನೀಡಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಬಿಜೆಪಿ, ಆಪ್‌ ಮಧ್ಯೆ ನೆಕ್‌ ಟು ನೆಕ್‌ ಫೈಟ್‌- ರೇಸ್‌ನಿಂದಲೇ ಕಾಂಗ್ರೆಸ್‌ ಔಟ್‌

    ಡೊನಾಲ್ಡ್ ಟ್ರಂಪ್ ಮತ್ತು ಅವರ ವ್ಯವಹಾರಗಳ ಬಗ್ಗೆ ಮೂರು ವರ್ಷಗಳಿಂದ ತನಿಖೆ ಮುಂದುವರೆದಿದೆ. ಈ ನಡುವೆ ಇದೀಗ ಟ್ರಂಪ್ ಮೇಲೆ ವೈಯಕ್ತಿಕವಾಗಿ ಆರೋಪ ಹೊರಿಸಿಲ್ಲ. ಆದರೆ ಅವರ ಹೆಸರನ್ನು ಒಳಗೊಂಡಿರುವ ರಿಯಲ್ ಎಸ್ಟೇಟ್, ಹೋಟೆಲ್ ಮತ್ತು ಗಾಲ್ಫ್ ವ್ಯವಹಾರ ನಡೆಸುತ್ತಿರುವ ಸಂಸ್ಥೆಗಳಿಗೆ ದಂಡ ವಿಧಿಸಿ ಶಿಕ್ಷೆ ನೀಡಲಾಗಿದೆ. ಇದು 2024ರ ಚುನಾವಣೆಗೆ ಸ್ಫರ್ದಿಸಲು ಬಯಸಿ ರಿಪಬ್ಲಿಕ್ ಪಕ್ಷದ ನಾಮನಿದೇರ್ಶನಕ್ಕಾಗಿ ಸಿದ್ಧತೆ ಆರಂಭಿಸಿರುವ ಟ್ರಂಪ್‍ಗೆ ಹಿನ್ನಡೆ ತಂದಿದೆ. ತೆರಿಗೆ ವಂಚನೆ ಪ್ರಕರಣ ಟ್ರಂಪ್‍ಗೆ ಇರಿಸುಮುರಿಸು ಉಂಟು ಮಾಡಿದೆ. ಇದನ್ನೂ ಓದಿ: ಕುಡುಕನಿಗೆ ಸಿಕ್ಕಿದ ಹತ್ತು ಲಕ್ಷ ರೂ. ಪೊಲೀಸರ ಪಾಲಾಯ್ತಾ? – 10 ಲಕ್ಷ, ಹತ್ತೇ ನಿಮಿಷದಲ್ಲಿ ಮಂಗಮಾಯ

    Live Tv
    [brid partner=56869869 player=32851 video=960834 autoplay=true]

  • ಮಸ್ಕ್ ಸಮೀಕ್ಷೆಯಲ್ಲಿ ಟ್ರಂಪ್ ಪಾಸ್ – ಮತ್ತೆ ಸ್ಥಾಪನೆಯಾಗಲಿದೆ ಟ್ವಿಟ್ಟರ್ ಖಾತೆ

    ಮಸ್ಕ್ ಸಮೀಕ್ಷೆಯಲ್ಲಿ ಟ್ರಂಪ್ ಪಾಸ್ – ಮತ್ತೆ ಸ್ಥಾಪನೆಯಾಗಲಿದೆ ಟ್ವಿಟ್ಟರ್ ಖಾತೆ

    ವಾಷಿಂಗ್ಟನ್: ಸಮೀಕ್ಷೆ ಟ್ರಂಪ್ ಪರ ಹೆಚ್ಚು ಜನರ ಒಲವು ವ್ಯಕ್ತವಾದ ಹಿನ್ನೆಲೆಯಲ್ಲಿ ಮಸ್ಕ್ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯ ಮರುಸ್ಥಾಪನೆಯಾಗಲಿದೆ.

    ಎಲೋನ್ ಮಸ್ಕ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಮರಳಿ ತರುವ ಬಗ್ಗೆ ಜಾಗತಿಕ ಬಳಕೆದಾರರಿಂದ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಶನಿವಾರ ಈ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿದ್ದು, ಅದರಲ್ಲಿ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಮರುಸ್ಥಾಪಿಸಬೇಕೇ ಅಥವಾ ಬೇಡವೇ ಎಂದು ಕೇಳಿದ್ದಾರೆ. ಇದಕ್ಕೆ ಹೌದು ಹಾಗೂ ಇಲ್ಲ ಎಂಬ 2 ಆಯ್ಕೆಗಳನ್ನೂ ನೀಡಿದ್ದು, ಹೆಚ್ಚಿನ ಜನರು ಟ್ರಂಪ್ ಅವರ ಖಾತೆಯನ್ನು ಮರುಸ್ಥಾಪಿಸಲು ಬೆಂಬಲ ನೀಡಿದ್ದಾರೆ.

    ಸಮೀಕ್ಷೆಯಲ್ಲಿ ಟ್ರಂಪ್ ಪರವಾಗಿ ಜನರು ಗಂಟೆಗೆ ಸುಮಾರು 10 ಸಾವಿರ ಮತಗಳನ್ನು ಹಾಕಿದ್ದಾರೆ ಎಂದು ಮಸ್ಕ್ ತಿಳಿಸಿದ್ದಾರೆ. ವಿಶ್ವಾದ್ಯಂತ 1,50,65,456 ಜನರು ಸಮೀಕ್ಷೆಯಲ್ಲಿ ವೋಟ್ ಹಾಕಿದ್ದಾರೆ. ಶೇ.51.8 ರಷ್ಟು ಜನರು ಟ್ರಂಪ್ ಪರವಾಗಿ ಹಾಗೂ ಶೇ.48.2 ರಷ್ಟು ಜನರು ಟ್ರಂಪ್ ವಿರುದ್ಧ ಮತ ಹಾಕಿದ್ದಾರೆ.

    ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆ ಈ ಹಿಂದೆ ಅಮಾನತಾಗಿದ್ದು, ಬಳಿಕ ವಿಶ್ವದ ಶ್ರೀಮಂತ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸಿದರೆ ಟ್ರಂಪ್ ಅವರ ಖಾತೆಯನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ಕೆಲವೇ ದಿನಗಳಲ್ಲಿ ಮಸ್ಕ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಮರಳಿಸಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಶೀಘ್ರ ಆಗಲಿದೆ ಕಂಡಕ್ಟರ್ ಲೆಸ್ – ಡಿಜಿಟಲ್ ತಂತ್ರಜ್ಞಾನದಿಂದ ಟಿಕೆಟ್ ಕಲೆಕ್ಷನ್

    ಅಮಾನತು ಹೇಗಾಯ್ತು?
    2021ರ ಜನವರಿಯಲ್ಲಿ ಟ್ರಂಪ್ ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಮಾಡಿದ್ದರಿಂದ ಅವರ ಬೆಂಬಲಿಗರು ಅಮೆರಿಕ ಸಂಸತ್ ಭವನದ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ್ದರು. ಈ ಕಾರಣಕ್ಕೆ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿತ್ತು.

    ಈ ವರ್ಷ ಮೇ ತಿಂಗಳಿನಲ್ಲಿ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸುವ ಯೋಜನೆಯೊಂದಿಗೆ ಟ್ರಂಪ್ ಅವರ ಖಾತೆಯನ್ನು ಮರಳಿ ತರುವುದರ ಬಗ್ಗೆಯೂ ತಿಳಿಸಿದ್ದರು. ಅದರಂತೆಯೇ ಇದೀಗ ಜನರ ಅಭಿಪ್ರಾಯ ಪಡೆದ ಮಸ್ಕ್ ಬಹುಮತ ನಿರ್ಣಯದಂತೆ ಟ್ರಂಪ್ ಅವರ ಖಾತೆಯನ್ನು ಮರಳಿ ತರುವುದಾಗಿ ತಿಳಿಸಿದ್ದಾರೆ. ಆದರೆ ಟ್ರಂಪ್ ತನ್ನ ಪರ ಹೆಚ್ಚು ಜನರು ಮತ ಚಲಾಯಿಸಿದರೂ ಟ್ವಿಟ್ಟರ್‌ಗೆ ಮರಳಲು ಆಸಕ್ತಿ ಇಲ್ಲ ಎಂದಿದ್ದಾರೆ.

    ಟ್ರಂಪ್ ಈ ವರ್ಷ ಆರಂಭದಲ್ಲಿ ಟ್ವಿಟ್ಟರ್‌ಗೆ ಬದಲಾಗಿ ತನ್ನದೇ ಸ್ವಂತ ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು. ಟ್ರುತ್ ಸೋಷಿಯಲ್ ಹೆಸರಿನ ಸ್ವಂತ ಆಪ್‌ನಲ್ಲಿ ಟ್ರಂಪ್ ಸುಮಾರು 45 ಸಾವಿರ ಅನುಯಾಯಿಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಬಲವಂತದ ಮತಾಂತರ ಹಾವಳಿ – ವಿವಾಹಿತನನ್ನು ಮತಾಂತರಗೊಳಿಸಿದ ಮುಸ್ಲಿಂ ನಾರಿ

    Live Tv
    [brid partner=56869869 player=32851 video=960834 autoplay=true]

  • ಅಧ್ಯಕ್ಷೀಯ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ: ಟ್ರಂಪ್

    ಅಧ್ಯಕ್ಷೀಯ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ: ಟ್ರಂಪ್

    ವಾಷಿಂಗ್ಟನ್: ಮುಂಬರುವ ಅಮೆರಿಕ ಅಧ್ಯಕ್ಷೀಯ (US President) ಚುನಾವಣೆಗೆ ಸ್ಪರ್ಧಿಸುವುದಾಗಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸ್ಪಷ್ಟಪಡಿಸಿದ್ದಾರೆ.

    ಅಮೆರಿಕದಲ್ಲಿ ಮುಂದಿನ ಅಧ್ಯಕ್ಷೀಯ ಚುನಾವಣೆ (Election) 2024ರಲ್ಲಿ ನಡೆಯಲಿದೆ, ಈ ಚುನಾವಣೆಗೆ ಸ್ಪರ್ಧಿಸುವುದಾಗಿ ಟ್ರಂಪ್ ಘೋಷಿಸಿದ್ದು, ಈ ಮೂಲಕ ಅಧಿಕೃತವಾಗಿ ಘೋಷಿಸಿದ ಮೊದಲ ಅಭ್ಯರ್ಥಿ ಆಗಿದ್ದಾರೆ. ಇದನ್ನೂ ಓದಿ: ನಾಯಿ ದಾಳಿಗೊಳಗಾದ ಮಹಿಳೆಗೆ 2 ಲಕ್ಷ ರೂ. ಪರಿಹಾರ

    ಅಮೆರಿಕದ ಮಧ್ಯಂತರ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಟ್ರಂಪ್ ತಮ್ಮ ಉಮೇದುವಾರಿಕೆಗೆ ನಾನು ಸಿದ್ಧ ಎಂದು ಹೇಳಿಕೆ ನೀಡಿದ್ದರು, ಈಗಿನಿಂದಲೇ ಚುನಾವಣೆಗೆ ಗೆಲ್ಲಲೇಬೇಕು ಎಂಬ ಪ್ಲಾನ್ ಹಾಕಿಕೊಂಡು ಮುನ್ನಡೆಯಲು ಮುಂದಾಗಿದ್ದಾರೆ. ಟ್ರಂಪ್ 2016ರಲ್ಲಿ ರಿಪಬ್ಲಿಕ್ ಪಕ್ಷದಿಂದ ಸ್ಪರ್ಧಿಸಿ ಅಧ್ಯಕ್ಷರಾಗಿ ನೇಮಕವಾಗಿದ್ದರು. ಆದರೆ 2020ರ ಚುನಾವಣೆಯಲ್ಲಿ ಎರನೇ ಬಾರಿಗೆ ಜೋ ಬೈಡನ್ ವಿರುದ್ಧ ಸೋಲನ್ನನುಭವಿಸಿದ್ದರು. ಇದನ್ನೂ ಓದಿ: ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ – ಇಬ್ಬರು ಸಾವಿನ ಬೆನ್ನಲ್ಲೇ ಅಮೆರಿಕ ತುರ್ತು ಸಭೆ

    Live Tv
    [brid partner=56869869 player=32851 video=960834 autoplay=true]

  • ಮೋದಿ ಉತ್ತಮ ವ್ಯಕ್ತಿ; ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ – ಟ್ರಂಪ್‌ ಬಣ್ಣನೆ

    ಮೋದಿ ಉತ್ತಮ ವ್ಯಕ್ತಿ; ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ – ಟ್ರಂಪ್‌ ಬಣ್ಣನೆ

    ವಾಷಿಂಗ್ಟನ್‌: ಮೋದಿ ಒಬ್ಬ ಉತ್ತಮ ವ್ಯಕ್ತಿ. ಅವರು ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಬಣ್ಣಿಸಿದ್ದಾರೆ.

    ಭಾರತವು ನನಗಿಂತ ಉತ್ತಮ ಸ್ನೇಹಿತನನ್ನು ಹೊಂದಲು ಸಾಧ್ಯವಿಲ್ಲ. ಮೋದಿ ಅವರು 2024ರ ಚುನಾವಣೆಯಲ್ಲೂ ಗೆಲುವು ಸಾಧಿಸಿ ಭಾರತವನ್ನು ಮುನ್ನಡೆಸಬಹುದು ಎಂದು ಟ್ರಂಪ್‌ ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ಅವಳಿ’ ಅಪ್ಪ, ಜವಳಿ ಮಕ್ಕಳು – 8 ತಿಂಗಳ ನಂತ್ರ 19ರ ಯುವತಿಯ ರಹಸ್ಯ ಬಯಲು

    ಟ್ರಂಪ್ ಅವರು ಭಾರತೀಯ ಸಮುದಾಯದಿಂದ ತನಗೆ ದೊರೆತ ಭಾರೀ ಬೆಂಬಲ ಮತ್ತು ಪ್ರಧಾನಿ ಮೋದಿಯೊಂದಿಗಿನ ಅವರ ಸಂಬಂಧದ ಬಗ್ಗೆಯೂ ಮಾತನಾಡಿ, ನನಗೆ ಭಾರತ ಮತ್ತು ಪ್ರಧಾನಿ ಮೋದಿಯವರೊಂದಿಗೆ ಉತ್ತಮ ಸಂಬಂಧವಿದೆ. ನಾವು ಸ್ನೇಹಿತರಾಗಿದ್ದೇವೆ. ಮೋದಿ ಅವರು ಉತ್ತಮ ವ್ಯಕ್ತಿ ಮತ್ತು ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದು ಹೊಗಳಿದ್ದಾರೆ.

    ನನ್ನ ಸ್ನೇಹಿತ ಹಾಗೂ ಪ್ರಧಾನಿ ಮೋದಿ ಅವರಿಂದಾಗಿ ಭಾರತವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತಕ್ಕೆ ನನಗಿಂತ ಉತ್ತಮ ಸ್ನೇಹಿತ ಎಂದಿಗೂ ಇರಲಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ರೂಪಿಸಿದ ಸಂಬಂಧಗಳಲ್ಲಿ ಇದೂ ಒಂದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಅಮೆರಿಕ ಜಿಲ್ಲಾ ನ್ಯಾಯಾಧೀಶರಾಗಿ ಭಾರತ ಮೂಲದ ಅರುಣ್ ಸುಬ್ರಮಣಿಯನ್ ನಾಮನಿರ್ದೇಶನ

    ಸೆಪ್ಟೆಂಬರ್ 2019 ರಲ್ಲಿ ಪಿಎಂ ಮೋದಿ ಮರು ಆಯ್ಕೆಯಾದ ನಂತರ, ಅವರು ಮತ್ತು ಅಧ್ಯಕ್ಷ ಟ್ರಂಪ್ ಜಂಟಿಯಾಗಿ ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಸಾವಿರಾರು ಭಾರತೀಯ ಅಮೆರಿಕನ್ನರು ಭಾಗವಹಿಸಿದ ಬೃಹತ್ ʼಹೌಡಿ ಮೋದಿʼ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಇದಾದ ಐದು ತಿಂಗಳ ನಂತರ ಟ್ರಂಪ್ ಮತ್ತು ಪಿಎಂ ಮೋದಿ ಅವರ ತವರು ಗುಜರಾತ್‌ಗೆ ಭೇಟಿ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಟ್ರಂಪ್ ನಿವಾಸದ ಮೇಲೆ ಎಫ್‍ಬಿಐ ದಾಳಿ

    ಟ್ರಂಪ್ ನಿವಾಸದ ಮೇಲೆ ಎಫ್‍ಬಿಐ ದಾಳಿ

    ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್ ಎ ಲಾಗೊ ಎಸ್ಟೇಟ್ ಮೇಲೆ ಎಫ್‍ಬಿಐ ದಾಳಿ ಮಾಡಿದೆ.

    2020ರಲ್ಲಿ ಚುನಾವಣೆಯ ಸೋಲಿನ ಬಳಿಕ ಟ್ರಂಪ್ ಶ್ವೇತಭವನವನ್ನು ತೊರೆದು, ತಮ್ಮ ಫ್ಲೊರಿಡಾ ನಿವಾಸಕ್ಕೆ ವರ್ಗೀಕೃತ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆಯೇ ಎಂಬುದನ್ನು ಅಮೆರಿಕದ ನ್ಯಾಯಾಂಗ ಇಲಾಖೆ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ವರದಿಯಾಗಿದೆ.

    ಈ ಬಗ್ಗೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ, ಇದು ನಮ್ಮ ರಾಷ್ಟ್ರಕ್ಕೆ ಕರಾಳ ಸಮಯವಾಗಿದೆ. ಏಕೆಂದರೆ ಫ್ಲೊರಿಡಾದ ಪಾಮ್ ಬೀಚ್‍ನಲ್ಲಿರುವ ನನ್ನ ಮನೆ ಮೇಲೆ ದಾಳಿ ನಡೆದಿದೆ. ಎಫ್‍ಬಿಐ ಅಧಿಕಾರಿಗಳು ಮನೆಯನ್ನು ಆಕ್ರಮಿಸಿಕೊಂಡಿದ್ದಾರೆ. ಅಮೆರಿಕದ ಅಧ್ಯಕ್ಷ ಹುದ್ದೆಯಲ್ಲಿದ್ದವರಿಗೆ ಈ ಹಿಂದೆ ಇಂತಹ ಪರಿಸ್ಥಿತಿ ಎಂದೂ ಬಂದಿರಲಿಲ್ಲ. ಸರ್ಕಾರಿ ತನಿಖಾ ಏಜೆನ್ಸಿಗಳೊಂದಿಗೆ ಸಹಕರಿಸಿದ ನಂತರವೂ, ನನ್ನ ಮನೆಯ ಮೇಲೆ ಈ ಅಘೋಷಿತ ದಾಳಿ ಅಗತ್ಯವಿರಲಿಲ್ಲ. ಹಾಗೂ ಅದು ಸೂಕ್ತ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಎಫ್‍ಬಿಐ ಅಧಿಕಾರಿಗಳು ತಮ್ಮ ಸುರಕ್ಷಿತ ನೆಲೆಯ ಬಾಗಿಲನ್ನು ಒಡೆದು ತೆರೆದಿದ್ದಾರೆ. ಈ ರೀತಿಯ ದಾಳಿ ತೃತೀಯ ಜಗತ್ತಿನ ದೇಶಗಳಲ್ಲಿ ಮಾತ್ರ ನಡೆಯುತ್ತದೆ ಎಂದ ಅವರು, ತಮ್ಮ ಮನೆಗೆ ಎಫ್‍ಬಿಐ ಮುತ್ತಿಗೆ ಹಾಕಿದೆ ಎಂದು ಕಿಡಿಕಾರಿದರು.

    ವಾಟರ್‍ಗೇಟ್ ಪ್ರಕರಣಕ್ಕೂ ಇದಕ್ಕೂ ಏನು ವ್ಯತ್ಯಾಸ? ಇಲ್ಲಿ ಡೆಮೆಕ್ರಾಟಿಕ್‍ಗಳು ಅಮೆರಿಕದ 45ನೇ ಅಧ್ಯಕ್ಷರ ಮನೆಗೆ ನುಗ್ಗಿದ್ದಾರೆ. ನಾನು 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ತಯಾರಿ ನಡೆಸುತ್ತಿದ್ದ ಸಮಯದಲ್ಲಿ ಎಫ್‍ಬಿಐ ದಾಳಿ ನಡೆದಿದೆ ಎಂದು ಟ್ರಂಪ್ ದೂರಿದ್ದಾರೆ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್‌ ಬ್ಯಾನ್‌? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?

    ಘಟನೆಗೆ ಸಂಬಂಧಿಸಿ ವಾಷಿಂಗ್ಟನ್‍ನಲ್ಲಿರುವ ಎಫ್‍ಬಿಐನ ಪ್ರಧಾನ ಕಚೇರಿ ಮತ್ತು ಮಿಯಾಮಿಯಲ್ಲಿರುವ ಅದರ ಉಪ ಕಚೇರಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಇದನ್ನೂ ಓದಿ: ಮಲೆಮಹದೇಶ್ವರನ ಭಕ್ತರಿಗೆ ಗುಡ್ ನ್ಯೂಸ್ – ಮಾದಪ್ಪನ ಬೆಟ್ಟಕ್ಕೆ ಮೆಟ್ಟಿಲುಗಳ ನಿರ್ಮಾಣ

    Live Tv
    [brid partner=56869869 player=32851 video=960834 autoplay=true]

  • ಡೋನಾಲ್ಡ್ ಟ್ರಂಪ್ ಮೊದಲ ಪತ್ನಿ ಇವಾನಾ ಟ್ರಂಪ್ ವಿಧಿವಶ

    ಡೋನಾಲ್ಡ್ ಟ್ರಂಪ್ ಮೊದಲ ಪತ್ನಿ ಇವಾನಾ ಟ್ರಂಪ್ ವಿಧಿವಶ

    ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಇವಾನಾ ಟ್ರಂಪ್(73) ಅವರು ಅವರು ನಿಧನರಾಗಿದ್ದಾರೆ.

    ನ್ಯೂಯಾರ್ಕ್ ನಗರದ ತಮ್ಮ ನಿವಾಸದಲ್ಲಿ ಮೆಟ್ಟಿಲಿನಿಂದ ಜಾರಿ ಬಿದ್ದು, ಗುರುವಾರ ಇವಾನಾ ಟ್ರಂಪ್ ಅವರು ಕೊನೆಯುಸಿರೆಳೆದಿದ್ದಾರೆ. ಈ ಕುರಿತಂತ ಮಾಹಿತಿಯನ್ನು ಡೊನಾಲ್ಡ್ ಟ್ರಂಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ: 15 ದಿನದಲ್ಲಿ ಆರೋಪ ಮುಕ್ತನಾಗಿ ಬರುತ್ತೇನೆ ಎಂದ ಈಶ್ವರಪ್ಪ – ಪಾರದರ್ಶಕ ತನಿಖೆಗೆ ರಾಜ್ಯಪಾಲರ ಮೊರೆಹೋದ ಸಂತೋಷ್ ಪಾಟೀಲ್ ಕುಟುಂಬ

    ಆಕೆ ಅದ್ಭುತ, ಸುಂದರ ಮಹಿಳೆ. ಅವಳ ಹೆಮ್ಮೆ ಮತ್ತು ಸಂತೋಷವೆಂದರೆ ಅವಳ ಮೂವರು ಮಕ್ಕಳಾದ ಡೊನಾಲ್ಡ್ ಜೂನಿಯರ್, ಇವಾಂಕಾ ಮತ್ತು ಎರಿಕ್. ಅವಳ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇತ್ತು. ಅವಳಿಗೂ ನಮ್ಮ ಬಗ್ಗೆ ತುಂಬಾ ಹೆಮ್ಮೆ ಇತ್ತು. ಅವರು ತಮ್ಮ ಮಕ್ಕಳಿಗೆ ತಾಳ್ಮೆ ಮತ್ತು ಕಠಿಣತೆ, ಸಹಾನುಭೂತಿ ಮತ್ತು ನಿರ್ಣಯದ ಬಗ್ಗೆ ಕಲಿಸಿದ್ದಾರೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ: ಬಿಬಿಎಂಪಿಯಲ್ಲಿ 243 ವಾರ್ಡ್ ಫಿಕ್ಸ್- 55ನೇ ವಾರ್ಡ್‍ಗೆ ಪುನೀತ್ ಹೆಸರು ನಾಮಕರಣ

    ಮಾಡೆಲ್ ಆಗಿದ್ದ ಇವಾನಾ 1977ರಲ್ಲಿ ಉದಯೋನ್ಮುಖ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ವಿವಾಹವಾದ್ದರು. ಈ ಜೋಡಿಗೆ ಅದೇ ವರ್ಷದಲ್ಲಿಯೇ ಮೊದಲ ಮಗು ಡೊನಾಲ್ಡ್ ಜೂನಿಯರ್ ಜನಿಸಿದರು. ನಂತರ ಇವಾಂಕಾ 1981ರಲ್ಲಿ ಮತ್ತು ಎರಿಕ್ 1984 ರಲ್ಲಿ ಜನಿಸಿದ್ದರು. 1992ರಲ್ಲಿ ವಿಚ್ಛೇದನ ಪಡೆದರು.

    Live Tv
    [brid partner=56869869 player=32851 video=960834 autoplay=true]

  • ಡೆಮಾಕ್ರಟಿಕ್ ಬೆಂಬಲಿಸಲ್ಲ, ಇನ್ನು ಮುಂದೆ ರಿಪಬ್ಲಿಕ್‌ಗೆ ಮತ ಹಾಕ್ತೀನಿ: ಮಸ್ಕ್

    ಡೆಮಾಕ್ರಟಿಕ್ ಬೆಂಬಲಿಸಲ್ಲ, ಇನ್ನು ಮುಂದೆ ರಿಪಬ್ಲಿಕ್‌ಗೆ ಮತ ಹಾಕ್ತೀನಿ: ಮಸ್ಕ್

    ವಾಷಿಂಗ್ಟನ್: ಇಲ್ಲಿಯವರೆಗೆ ನಾನು ಡೆಮಾಕ್ರಟಿಕ್ ಪರವಾಗಿ ಮತ ಹಾಕುತ್ತಿದ್ದೆ. ಇನ್ನು ಮುಂದೆ ರಿಪಬ್ಲಿಕ್ ಪರವಾಗಿ ಮತ ಹಾಕುತ್ತೇನೆ ಎಂದು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.

    ನಾನು ಇನ್ನು ರಿಪಬ್ಲಿಕ್ ಪಕ್ಷಕ್ಕೆ ಮತ ಹಾಕುತ್ತೇನೆ. ಏಕೆಂದರೆ ಅದು ತುಂಬಾ ದಯೆಯುಳ್ಳ ಪಕ್ಷ ಎಂದಿದ್ದಾರೆ. ಮಸ್ಕ್ ಅವರ ಈ ಹೇಳಿಕೆಯಿಂದ ಟೆಸ್ಲಾ ಕಂಪನಿ ಷೇರು ಮೌಲ್ಯ ಇಳಿಕೆಯಾಗಿದೆ. ಒಂದೇ ದಿನದಲ್ಲಿ ಶೇ.7.51 ರಷ್ಟು ಇಳಿಕೆಯಾಗಿದೆ. ಇದನ್ನೂ ಓದಿ: ಕೊರೊನಾ ಲಸಿಕೆಯಂತೆ ಗೋಧಿ ರಫ್ತು ಮಾಡಲಾಗುದಿಲ್ಲ: ಭಾರತ

    ಈ ಕುರಿತು ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ಈ ಹಿಂದೆ ನಾನು ಡೆಮಾಕ್ರಟಿಕ್ ಪಕ್ಷಕ್ಕೆ ಮತ ಹಾಕಿದ್ದೇನೆ. ಆಗ ಅವರು ದಯೆಯುಳ್ಳ ಪಕ್ಷವಾಗಿತ್ತು. ಈಗ ದ್ವೇಷದ ಪಕ್ಷವಾಗಿ ವಿಭಜನೆಯಾಗುತ್ತಿದೆ. ಅವರನ್ನು ಬೆಂಬಲಿಸಲು ಸಾಧ್ಯವಿಲ್ಲ. ಆದ್ದರಿಂದ ರಿಪಬ್ಲಿಕ್‌ಗೆ ಮತ ಹಾಕುತ್ತೇನೆ. ಇನ್ನು ಮುಂದೆ ನನ್ನ ವಿರುದ್ಧ ನಡೆಸುವ ಕ್ಯಾಂಪೇನ್ ತಂತ್ರಗಳು ಹಾಗೂ ರಾಜಕೀಯ ದಾಳಿಗಳನ್ನು ನೋಡಬಹುದು. ಬರುವ ಚುನಾವಣೆಯಲ್ಲಿ ನಾನು ರಿಪಬ್ಲಿಕನ್ನರಿಗೆ ಮತ ಹಾಕುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

    ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಟ್ವಿಟ್ಟರ್ ಹೇರಿದ ನಿಷೇಧವನ್ನು ರದ್ದು ಮಾಡುತ್ತೇನೆ. ನಾನು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು.