Tag: donald trump

  • ಕಮಲಾಗೆ ಶಾಕ್‌ – ಟ್ರಂಪ್‌ ಪರ ಅನಿವಾಸಿ ಭಾರತೀಯರ ಒಲವು ಏರಿಕೆ

    ಕಮಲಾಗೆ ಶಾಕ್‌ – ಟ್ರಂಪ್‌ ಪರ ಅನಿವಾಸಿ ಭಾರತೀಯರ ಒಲವು ಏರಿಕೆ

    ವಾಷಿಂಗ್ಟನ್: ಅಮೆರಿಕ ಚುನಾವಣೆಗೆ (USA Election) ದಿನಗಣನೆ ಆರಂಭವಾಗುತ್ತಿದ್ದಂತೆ ಕಮಲಾ ಹ್ಯಾರಿಸ್‌ಗೆ (Kamala Harris) ಅನಿವಾಸಿ ಭಾರತೀಯರು (NRI) ಶಾಕ್‌ ನೀಡುವ ಸಾಧ್ಯತೆ ಹೆಚ್ಚಿದೆ.

    ಹೌದು. ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಡೆಮಾಕ್ರಟಿಕ್ (Democratic) ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಅನಿವಾಸಿ ಭಾರತೀಯರ ಒಲವು ರಿಪಬ್ಲಿಕನ್‌ (Republican) ಪಕ್ಷದ ಕಡೆಗೆ ವಾಲಿದೆ. ಹೀಗಿದ್ದರೂ ಒಟ್ಟಾರೆ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್‌ಗೆ ಮತ ಹಾಕುವುದಾಗಿ ತಿಳಿಸಿದ್ದಾರೆ.

    ಭಾರತೀಯ ಅಮೆರಿಕರನ್ನು ಗುರಿಯಾಗಿಸಿ ಕಾರ್ನೆಗೀ ಎಂಡೋಮೆಂಟ್‌ ಫಾರ್‌ ಇಂಟರ್‌ನ್ಯಾಷನಲ್ ಪೀಸ್‌’ ಸಂಸ್ಥೆ ನಡೆಸಿದ ಅನ್‌ಲೈನ್ ಸಮೀಕ್ಷೆಯಲ್ಲಿ 61%ರಷ್ಟು ಮಂದಿ ಡೆಮಾಕ್ರಟಿಕ್ ಪಕ್ಷಕ್ಕೆ ಬೆಂಬಲ ನೀಡಿದರೆ 32% ಜನರು ರಿಪಬ್ಲಿಕನ್ ಪಕ್ಷದ ಪರ ಒಲವು ತೋರಿದ್ದಾರೆ.

    2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳ ಕಡೆಗೆ ಭಾರತೀಯರು ಚಲಾಯಿಸಿದ್ದ ಮತಗಳನ್ನು ಲೆಕ್ಕ ಹಾಕಿದಾಗ ಈ ಬಾರಿ ಕಮಲಾ ಹ್ಯಾರಿಸ್ ಪಕ್ಷದ ಪರ ಒಲವು ಸ್ವಲ್ಪ ಇಳಿದಿದ್ದು, ಟ್ರಂಪ್ (Donald Trump) ಪರ ಹೆಚ್ಚು ಮತಗಳು ಬೀಳಬಹುದು ಎಂದು ಸಮೀಕ್ಷೆ ತಿಳಿಸಿದೆ.

    ಸೆಪ್ಟೆಂಬರ್‌ 18ರಿಂದ ಅಕ್ಟೋಬರ್‌ 15ರ ನಡುವೆ 714  ಅನಿವಾಸಿ ಭಾರತೀಯರು ಆನ್‌ಲೈನ್‌ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು.

    ಅಮೆರಿಕದಲ್ಲಿ ಭಾರತ ಮೂಲದ 52 ಲಕ್ಷ ಜನ ವಾಸವಾಗಿದ್ದು, ಈ ಪೈಕಿ 39 ಲಕ್ಷ ಜನರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಅನಿವಾಸಿ ಭಾರತೀಯರು ಅಮೆರಿಕದಲ್ಲಿ ನೆಲೆಸಿರುವ ಎರಡನೇ ಅತಿ ದೊಡ್ಡ ವಲಸಿಗರ ಗುಂಪಿಗೆ ಸೇರಿದ್ದಾರೆ.

    ನವೆಂಬರ್‌ 5 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ 96% ರಷ್ಟು ಅನಿವಾಸಿ ಭಾರತೀಯರು ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ.

     

  • US Presidential Election 2024 | ಬೆಟ್ಟಿಂಗ್‌ ಮಾರುಕಟ್ಟೆಯಲ್ಲಿ ಟ್ರಂಪ್‌ಗೆ ಮುನ್ನಡೆ

    US Presidential Election 2024 | ಬೆಟ್ಟಿಂಗ್‌ ಮಾರುಕಟ್ಟೆಯಲ್ಲಿ ಟ್ರಂಪ್‌ಗೆ ಮುನ್ನಡೆ

    ವಾಷಿಂಗ್ಟನ್‌: ಅಮೆರಿಕದ ಚುನಾವಣೆ (US Election) ದಿನಾಂಕ ಹತ್ತಿರ ಬರುತ್ತಿದ್ದಂತೆ ಬೆಟ್ಟಿಂಗ್‌ ಮಾರುಕಟ್ಟೆಯಲ್ಲಿ (Betting Market) ಮಾಜಿ ಅಧ್ಯಕ್ಷ, ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ಮುಂದಿದ್ದಾರೆ.

    ಕೆಲವು ಸಮೀಕ್ಷೆಗಳು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ (Kamala Harris) ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಬಿರುಸಿನ ಸ್ಪರ್ಧೆ ಇದೆ ಎಂದು ತೋರಿಸುತ್ತಿದ್ದರೂ, ಕ್ರಿಪ್ಟೋ ಆಧಾರಿತ ಪಾಲಿಮಾರ್ಕೆಟ್ 60 ಪ್ರತಿಶತ ಗೆಲ್ಲುವ ಅವಕಾಶದೊಂದಿಗೆ ಟ್ರಂಪ್ ಅವರು ಮುನ್ನಡೆಯಲ್ಲಿದ್ದಾರೆ ಎಂದು ಹೇಳಿದೆ.  ಇದನ್ನೂ ಓದಿ: ಆರ್‌ಸಿಬಿ ಸೇರುವಂತೆ ರೋಹಿತ್‌ಗೆ ಆಫರ್‌ – ಹಿಟ್‌ಮ್ಯಾನ್‌ಗೆ ಆಫರ್‌ ಕೊಟ್ಟಿದ್ಯಾರು?

    ನವೆಂಬರ್‌ 5 ರಂದು ಚುನಾವಣೆ ನಡೆಯಲಿದ್ದು ಅಮೆರಿಕದ ಮಾಧ್ಯಮಗಳು ನಡೆಸುವ ಬಹುತೇಕ ಸಮೀಕ್ಷೆಯಲ್ಲಿ ಇಬ್ಬರ ಗ್ರಾಫ್‌ ಏರಿಳಿತವಾಗುತ್ತಿದೆ.

    projects.fivethirtyeight ಎಲ್ಲಾ ಸಮೀಕ್ಷೆಗಳನ್ನು ಕ್ರೋಢಿಕರಿಸಿ ಅಪ್‌ಡೇಟ್‌ ನೀಡುತ್ತಿದೆ. ಸದ್ಯದ ಟ್ರೆಂಡ್‌ ಪ್ರಕಾರ ಕಮಲಾ ಹ್ಯಾರಿಸ್‌ ಅವರನ್ನು 48.4% ಜನ ಬೆಂಬಲಿಸಿದ್ದರೆ ಟ್ರಂಪ್‌ ಅವರನ್ನು 46.3% ಮಂದಿ ಬೆಂಬಲಿಸುತ್ತಿದ್ದಾರೆ.

     

  • ಟ್ರಂಪ್‌ಗಿಂತಲೂ ಕಮಲಾ ಹ್ಯಾರಿಸ್‌ಗೆ ಹೆಚ್ಚಿನ ಕೋಟ್ಯಧಿಪತಿಗಳ ಬೆಂಬಲ – ಇಲ್ಲಿದೆ ಬಿಲಿಯನೇರ್ಸ್‌ ಲಿಸ್ಟ್‌

    ಟ್ರಂಪ್‌ಗಿಂತಲೂ ಕಮಲಾ ಹ್ಯಾರಿಸ್‌ಗೆ ಹೆಚ್ಚಿನ ಕೋಟ್ಯಧಿಪತಿಗಳ ಬೆಂಬಲ – ಇಲ್ಲಿದೆ ಬಿಲಿಯನೇರ್ಸ್‌ ಲಿಸ್ಟ್‌

    ವಾಷಿಂಗ್ಟನ್‌: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ತಯಾರಿ ಭರದಿಂದ ಸಾಗುತ್ತಿದ್ದು, ದೇಶಾದ್ಯಂತ ಬಿಲಿಯನೇರ್‌ಗಳು (Billionaires) ಸದ್ದಿಲ್ಲದೇ ತಮ್ಮ ನೆಚ್ಚಿನ ರಾಜಕೀಯ ನಾಯಕರನ್ನ ಬೆಂಬಲಿಸುತ್ತಿದ್ದಾರೆ. ಚುನಾವಣಾ ಅಖಾಡಲ್ಲಿರುವ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ (Kamala Harris) ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಗಮನಾರ್ಹ ಆರ್ಥಿಕ ಬೆಂಬಲ ಒದಗಿಸುತ್ತಿದ್ದಾರೆ.

    ಫೋರ್ಬ್ಸ್ ಪ್ರಕಾರ, 76 ಬಿಲಿಯನೇರ್‌ಗಳು ಕಮಲಾ ಹ್ಯಾರಿಸ್‌ಗೆ ಬೆಂಬಲ ನೀಡಿದ್ದರೆ, 49 ಬಿಲಿಯನೇರ್‌ಗಳು ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಬೆಂಬಲಿಸಿದ್ದಾರೆ. ಇನ್ನೂ ಕೆಲ ಬಿಲಿನೇರ್‌ಗಳ ಕೊಡುಗೆಗಳನ್ನು ಚುನಾವಣೆಯ ನಂತರ ಡಿಸೆಂಬರ್‌ನಲ್ಲಿ ಅಂತಿಮ ಫೆಡರಲ್ ಚುನಾವಣಾ ಆಯೋಗದ ವರದಿಗಳನ್ನು ಬಿಡುಗಡೆ ಮಾಡುವವರೆಗೆ ಸಾರ್ವಜನಿಕಗೊಳಿಸಲಾಗುವುದಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಸೇನಾ ನೆಲೆಯ ಮೇಲೆ ಹಿಜ್ಬುಲ್ಲಾ ಡ್ರೋನ್ ಅಟ್ಯಾಕ್‌ – 4 ಇಸ್ರೇಲ್‌ ಸೈನಿಕರು ಬಲಿ

    ಹ್ಯಾರಿಸ್‌ ಕಡೆಗೆ ವಾಲಿದ ಕೋಟ್ಯಧಿಪತಿಗಳು:
    ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಗಳ ಜಟಾಪಟಿ ಜೋರಾಗುತ್ತಿದ್ದು, ಕಮಲಾ ಹ್ಯಾರಿಸ್‌ಗೆ ಹೆಚ್ಚಿನ ಬಿಲಿಯನೇರ್‌ಗಳ ಬೆಂಬಲ ಸಿಕ್ಕಿದೆ. ಹ್ಯಾರಿಸ್ ಅವರ ಅಧ್ಯಕ್ಷತೆಯಲ್ಲಿ ತಂತ್ರಜ್ಞಾನ, ಆರೋಗ್ಯ ಮತ್ತು ಸುಸ್ಥಿರತೆಯಂತಹ ಕ್ಷೇತ್ರಗಳು ಅಭಿವೃದ್ಧಿ ಹೊಂದುತ್ತವೆ ಎಂದು ಇತ್ತೀಚಿನ ಸಮೀಕ್ಷೆಯು ಬಹಿರಂಗಪಡಿಸಿದೆ. ಈ ಹಿನ್ನೆಲೆಯಲ್ಲಿ ಕೋಟ್ಯಧಿಪತಿಗಳು ಹ್ಯಾರಿಸ್‌ರನ್ನ ಬೆಂಬಲಿಸಲು ಶುರು ಮಾಡಿದ್ದಾರೆ.

    ಹ್ಯಾರಿಸ್‌ಗೆ ಬೆಂಬಲ ಸೂಚಿಸಿರುವ 76 ಬಿಲಿಯನೇರ್‌ಗಳಲ್ಲಿ, 28 ಜನರು ಆಕೆಯನ್ನು ಬೆಂಬಲಿಸುವ ಗುಂಪುಗಳಿಗೆ 1 ಮಿಲಿಯನ್ ಡಾಲರ್‌ (ಸುಮಾರು 8 ಕೋಟಿ) ಅಥವಾ ಅದಕ್ಕಿಂತ ಹೆಚ್ಚಿನ ಹಣ ನೀಡಿದ್ದಾರೆ. ಜೊತೆಗೆ, 36 ಬಿಲಿಯನೇರ್‌ಗಳು 50,000 ಡಾಲರ್‌ನಿಂದ 999,999 ಡಾಲರ್‌ ವರೆಗೆ ಕೊಡುಗೆ ನೀಡಿದ್ದಾರೆ. ಇದನ್ನೂ ಓದಿ: ಸಹರಾ ಮರುಭೂಮಿಯಲ್ಲಿ ಭಾರೀ ಮಳೆ – 50 ವರ್ಷದ ನಂತರ ಕೆರೆಗಳು ಭರ್ತಿ

    ಹ್ಯಾರಿಸ್‌ ಬೆಂಬಲಿತ ಬಿಲಿಯನೇರ್‌ಗಳು ಯಾರು?
    * ಮೈಕೆಲ್ ಬ್ಲೂಮ್‌ಬರ್ಗ್ (ಮಾಜಿ ನ್ಯೂಯಾರ್ಕ್ ಮೇಯರ್, ಬ್ಲೂಮ್‌ಬರ್ಗ್)
    * ಆರ್ಥರ್ ಬ್ಲಾಂಕ್ (ಅಟ್ಲಾಂಟಾ ಫಾಲ್ಕನ್ಸ್)
    * ರೀಡ್ ಹಾಫ್‌ಮನ್ (ಲಿಂಕ್ಡ್‌ಇನ್)
    * ವಿನೋದ್ ಖೋಸ್ಲಾ (ಖೋಸ್ಲಾ ವೆಂಚರ್ಸ್)
    * ಡಸ್ಟಿನ್ ಮಾಸ್ಕೋವಿಟ್ಜ್ (ಫೇಸ್‌ಬುಕ್)
    * ಸ್ಟೀವನ್ ಸ್ಪೀಲ್ಬರ್ಗ್ (ಹಾಲಿವುಡ್ ನಿರ್ದೇಶಕ)
    ಇವುಗಳಲ್ಲಿ ಕೆಲವು ಸೇರಿವೆ:

    50,000 ದಿಂದ 999,999 ಡಾಲರ್‌ ವರೆಗೆ ಕೊಡುಗೆ ನೀಡಿದ ಬಿಲಿಯನೇರ್ಸ್‌:
    * ಟೋರಿ ಬರ್ಚ್ (ಫ್ಯಾಶನ್ ಡಿಸೈನರ್)
    * ರೀಡ್ ಹೇಸ್ಟಿಂಗ್ಸ್ (ನೆಟ್‌ಫ್ಲಿಕ್ಸ್)
    * ಕ್ರಿಸ್ ಲಾರ್ಸೆನ್ (ರಿಪಲ್)
    * ಲಾರೆನ್ ಪೊವೆಲ್ ಜಾಬ್ಸ್ (ಆಪಲ್)

    ಡೊನಾಲ್ಡ್ ಟ್ರಂಪ್ ಬೆಂಬಲಿತ ಬಿಲಿಯನೇರ್
    ಅತ್ಯಂತ ಶ್ರೀಮಂತ ಮತ್ತು ಕಾರ್ಮಿಕ ವರ್ಗದ ಚಾಂಪಿಯನ್ ಆಗಿ ತನ್ನನ್ನು ತಾನು ಗುರುತಿಸಿಕೊಂಡಿರುವ ಟ್ರಂಪ್, 49 ಬಿಲಿಯನೇರ್‌ಗಳಿಂದ ಗಮನಾರ್ಹ ಬೆಂಬಲ ಗಳಿಸಿದ್ದಾರೆ.
    * ಮಿರಿಯಮ್ ಅಡೆಲ್ಸನ್ (ಲಾಸ್ ವೇಗಾಸ್ ಸ್ಯಾಂಡ್ಸ್ ಕಾರ್ಪೊರೇಷನ್)
    * ಡಾನ್ ಅಹೆರ್ನ್ (ಲಾಸ್ ವೇಗಾಸ್ ನಿರ್ಮಾಣ)
    * ಡಯೇನ್ ಹೆಂಡ್ರಿಕ್ಸ್ (ಎಬಿಸಿ ಪೂರೈಕೆ)
    * ಲಿಂಡಾ ಮೆಕ್ ಮಹೊನ್ (WWE)
    * ಸ್ಟೀವ್ ವೈನ್ (ವೈನ್ ರೆಸಾರ್ಟ್ಸ್)

    50,000 ದಿಂದ 999,999 ಡಾಲರ್‌ ವರೆಗೆ ಕೊಡುಗೆ ನೀಡಿದ ಬಿಲಿಯನೇರ್ಸ್‌:
    * ಟಿಲ್ಮನ್ ಫೆರ್ಟಿಟ್ಟಾ (ಹೂಸ್ಟನ್ ರಾಕೆಟ್ಸ್)
    * ಜಾನ್ ಪಾಲ್ಸನ್ (ಪಾಲ್ಸನ್ & ಕಂ.)
    * ಥಾಮಸ್ ಸೀಬೆಲ್ (ಸೀಬೆಲ್ ಸಿಸ್ಟಮ್ಸ್)

  • ಕಮಲಾಗೆ ಗೂಗಲ್‌, ಮೈಕ್ರೋಸಾಫ್ಟ್‌ ಭಾರೀ ದೇಣಿಗೆ – ಟ್ರಂಪ್‌ಗೆ ಅಮೆರಿಕನ್‌ ಏರ್‌ಲೈನ್ಸ್‌, ವಾಲ್‌ಮಾರ್ಟ್‌ ಸಹಾಯ

    ಕಮಲಾಗೆ ಗೂಗಲ್‌, ಮೈಕ್ರೋಸಾಫ್ಟ್‌ ಭಾರೀ ದೇಣಿಗೆ – ಟ್ರಂಪ್‌ಗೆ ಅಮೆರಿಕನ್‌ ಏರ್‌ಲೈನ್ಸ್‌, ವಾಲ್‌ಮಾರ್ಟ್‌ ಸಹಾಯ

    ವಾಷಿಂಗ್ಟನ್‌: ಅಮೆರಿಕದ ಚುನಾವಣೆ (US Presidential Election) ಕಾವೇರುತ್ತಿದ್ದು ಕಂಪನಿಗಳೇ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ದೇಣಿಗೆ ನೀಡಿವೆ.

    ಗೂಗಲ್‌ ಮತ್ತು ಮೈಕ್ರೋಸಾಫ್ಟ್‌ ಕಂಪನಿ ಕಮಲಾ ಹ್ಯಾರಿಸ್‌ (Kamala Harris) ಭಾರೀ ಮೊತ್ತದ ದೇಣಿಗೆ ನೀಡಿದರೆ ಡೊನಾಲ್ಡ್‌ ಟ್ರಂಪ್‌ಗೆ (Donald Trump) ಅಮೆರಿನ್‌ ಏರ್‌ಲೈನ್ಸ್‌, ವಾಲ್‌ಮಾರ್ಟ್‌ ಹಣಕಾಸಿನ ಸಹಾಯ ನೀಡಿದೆ. ಇದನ್ನೂ ಓದಿ: ಇಸ್ರೇಲ್‌ ರಾಕೆಟ್‌ ದಾಳಿಗೆ ಲೆಬನಾನ್‌ ಛಿದ್ರ ಛಿದ್ರ – ಸಾವಿನ ಸಂಖ್ಯೆ 492ಕ್ಕೆ ಏರಿಕೆ!


    ಯಾರಿಗೆ ಎಷ್ಟು?
    ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಗೂಗಲ್‌ 14,64,292 ಡಾಲರ್‌, ಮೈಕ್ರೋಸಾಫ್ಟ್‌ 7,43,045 ಡಾಲರ್‌, ಬ್ರೌನ್‌ ಆಂಡ್‌ ಬ್ರೌನ್‌ 3,24,568 ಡಾಲರ್‌ ನೀಡಿದೆ.

    ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರಿಗೆ ಅಮೆರಿಕನ್‌ ಏರ್‌ಲೈನ್ಸ್‌ 1,34,174 ಡಾಲರ್‌, ವಾಲ್‌ಮಾರ್ಟ್‌ 83,908 ಡಾಲರ್‌, ಬೋಯಿಂಗ್‌ 82,761 ಡಾಲರ್‌ ನೀಡಿದೆ.

    ಈ ವಿಚಾರವನ್ನು ಎಕ್ಸ್‌ ಮುಖ್ಯಸ್ಥ ಎಲೋನ್‌ ಮಸ್ಕ್ (Elon Musk) ಪ್ರಸ್ತಾಪಿಸಿ, ಗೂಗಲ್ ಮತ್ತು ಮೈಕ್ರೋಸಾಫ್ಟ್ ಡೆಮಾಕ್ರಟಿಕ್ ಪಕ್ಷಕ್ಕೆ ಭಾರೀ ದೇಣಿಗೆ ನೀಡಿವೆ. ಈ ಎರಡೂ ಕಂಪನಿಗಳು ಸುಮಾರು 100%  ಹುಡುಕಾಟವನ್ನು ನಿಯಂತ್ರಿಸುತ್ತವೆ. ಇವರು ಸಹಾಯ ಮಾಡದೇ ಇದ್ದರೂ ಪಕ್ಷಪಾತವನ್ನು ಪರಿಚಯಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     

  • ಮೋದಿ ಅದ್ಭುತ ವ್ಯಕ್ತಿ, ಮುಂದಿನ ವಾರ ಅವರನ್ನ ಭೇಟಿಯಾಗ್ತೀನಿ: ಟ್ರಂಪ್‌

    ಮೋದಿ ಅದ್ಭುತ ವ್ಯಕ್ತಿ, ಮುಂದಿನ ವಾರ ಅವರನ್ನ ಭೇಟಿಯಾಗ್ತೀನಿ: ಟ್ರಂಪ್‌

    ವಾಷಿಂಗ್ಟನ್‌: ಮುಂದಿನ ವಾರ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಿಳಿಸಿದ್ದಾರೆ.

    ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್‌ ಮಿಚಿಗನ್‌ನಲ್ಲಿ ಪ್ರಚಾರ ಮಾಡುವಾಗ ಈ ವಿಚಾರ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅದ್ಭುತ ವ್ಯಕ್ತಿ ಎಂದು ಟ್ರಂಪ್ ಬಣ್ಣಿಸಿದ್ದಾರೆ. ಇದನ್ನೂ ಓದಿ: ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಸದಸ್ಯರ ಮೇಲೆ ದಾಳಿ, ಸಾವಿರಾರು ಪೇಜರ್‌ ಸ್ಫೋಟ – 8 ಸಾವು, 2 ಸಾವಿರಕ್ಕೂ ಹೆಚ್ಚು ಮಂದಿ ಗಂಭೀರ ಗಾಯ

    ಮೋದಿ ಅವರು ಮುಂದಿನ ವಾರ ನನ್ನನ್ನು ಭೇಟಿಯಾಗಲು ಬರುತ್ತಾರೆ ಎಂದು ಹೇಳಿದ್ದಾರೆ. ಆದರೆ ಅವರ ಭೇಟಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.

    ಪ್ರಧಾನಿ ಮೋದಿ ಅವರು ಸೆ.21 ರಿಂದ 23 ರವರೆಗೆ ಯುನೈಟೆಡ್ ಸ್ಟೇಟ್ಸ್‌ಗೆ ಭೇಟಿ ನೀಡಲಿದ್ದು, ಈ ಸಮಯದಲ್ಲಿ ಅವರು ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆ. ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಭವಿಷ್ಯದ ಶೃಂಗಸಭೆ’ಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸ

    ಇದು ನಾಲ್ಕನೇ ಕ್ವಾಡ್ ಲೀಡರ್ಸ್ ಶೃಂಗಸಭೆಯಾಗಿದೆ. ಇದು ವಿಲ್ಮಿಂಗ್ಟನ್, ಡೆಲವೇರ್ನಲ್ಲಿ US ಅಧ್ಯಕ್ಷ ಜೋ ಬೈಡೆನ್ ಭಾಗವಹಿಸಲಿದ್ದಾರೆ. ಅವರು ಭಾನುವಾರ ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯದ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಎಐ, ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡಕ್ಟರ್‌ಗಳು ಮತ್ತು ಜೈವಿಕ ತಂತ್ರಜ್ಞಾನದ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವೆ ಹೆಚ್ಚಿನ ಸಹಯೋಗವನ್ನು ಬೆಳೆಸಲು ಪ್ರಧಾನ ಮಂತ್ರಿ ಯುಎಸ್ ಮೂಲದ ಪ್ರಮುಖ ಕಂಪನಿಗಳ ಸಿಇಒಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

    ಪಿಎಂ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಕೊನೆಯ ಬಾರಿಗೆ 2020 ರ ಫೆಬ್ರವರಿಯಲ್ಲಿ ಭೇಟಿಯಾಗಿದ್ದರು. ಆಗ ಯುಎಸ್ ಅಧ್ಯಕ್ಷರಾಗಿದ್ದ ಟ್ರಂಪ್‌ ಭಾರತಕ್ಕೆ ಭೇಟಿ ನೀಡಿದ್ದರು.

  • ಟ್ರಂಪ್‌ ಮೇಲೆ ಮತ್ತೆ ಗುಂಡಿನ ದಾಳಿ – ಆತಂಕ ಹೆಚ್ಚಿಸಿದ ಆ ಒಂದು ರೈಫಲ್‌, ದಾಳಿಕೋರ ಸಿಕ್ಕಿದ್ದು ಹೇಗೆ?

    ಟ್ರಂಪ್‌ ಮೇಲೆ ಮತ್ತೆ ಗುಂಡಿನ ದಾಳಿ – ಆತಂಕ ಹೆಚ್ಚಿಸಿದ ಆ ಒಂದು ರೈಫಲ್‌, ದಾಳಿಕೋರ ಸಿಕ್ಕಿದ್ದು ಹೇಗೆ?

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿತಾಗಿರುವ ಡೊನಾಲ್ಡ್ ಟ್ರಂಪ್ (Donald Trump) ಅವರ ಮೇಲೆ ಮತ್ತೆ ಗುಂಡಿನ ದಾಳಿ ನಡೆದಿದೆ. ಫ್ಲೋರಿಡಾದ (Florida) ಗಾಲ್ಫ್ ಕ್ಲಬ್ ನಲ್ಲಿದ್ದ ಟ್ರಂಪ್ ಮೇಲೆ ಅಜ್ಞಾತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಆದರೆ, ಟ್ರಂಪ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಇದೇ ವರ್ಷ ಜುಲೈ 13ರಂದು ಅವರ ಮೇಲೆ ಅಮೆರಿಕದ (USA) ಪೆನ್ಸಿಲ್ವೇನಿಯಾದಲ್ಲಿರುವ ಬಟ್ಲರ್ ಎಂಬಲ್ಲಿ ಗುಂಡಿನ ದಾಳಿಯಾಗಿತ್ತು. ಅಂದು ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಟ್ರಂಪ್ ಅವರ ಮೇಲೆ ಸುಮಾರು 442 ಅಡಿಗಷ್ಟು ದೂರದಿಂದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಅಂದು ಹಾರಿದ ಗುಂಡು ಅವರ ಬಲಕಿವಿಯ ತುದಿಗೆ ತಾಕಿ ರಕ್ತ ಸೋರಿಕೆಯಾಗಿತ್ತು, ಕೂದಲೆಳೆ ಅಂತರದಲ್ಲಿ ಟ್ರಂಪ್‌ ಪಾರಾಗಿದ್ದರು. ಇದಾದ ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿರುವುದು ಟ್ರಂಪ್‌ ಬೆಂಬಲಿಗರ ಆತಂಕಕ್ಕೆ ಕಾರಣವಾಗಿದೆ.

    ದಾಳಿ ನಡೆದಿದ್ದು ಎಲ್ಲಿ? ಹೇಗೆ?
    ಫ್ಲೋರಿಡಾದ ಸ್ಥಳೀಯ ಕಾಲಮಾನ ಸೆ. 15ರಂದು ಸಂಜೆಯಲ್ಲಿ ಫ್ಲೋರಿಡಾದಲ್ಲಿರುವ ವೆಸ್ಟ್ ಪಾಮ್ ಬೀಚ್ ನಲ್ಲಿರುವ ತಮ್ಮದೇ ಗಾಲ್ಫ್ ಕ್ಲಬ್ ಆದ ಟ್ರಂಪ್ ಇಂಟರ್ ನ್ಯಾಷನಲ್ ಗಾಲ್ಫ್ ಕ್ಲಬ್‌ಗೆ (Golf Club) ಟ್ರಂಪ್ ಆಗಮಿಸಿದ್ದರು. ವಾರಾಂತ್ಯದಲ್ಲಿ ಗಾಲ್ಫ್ ಆಡುವುದು ಅವರ ಅಚ್ಚುಮೆಚ್ಚಿನ ಹವ್ಯಾಸವಾಗಿದ್ದರಿಂದ ಅವರು ಎಲ್ಲಿರುತ್ತಾರೋ ಅವರಿರುವ ಹತ್ತಿರದ ಯಾವುದೇ ಗಾಲ್ಫ್ ಕ್ಲಬ್ ಗೆ ಅವರು ಹೋಗುತ್ತಾರೆ. ಸೆ.15ರಂದು ಅವರು ಫ್ಲೋರಿಡಾದಲ್ಲೇ ಇದ್ದಿದ್ದರಿಂದ ತಮ್ಮ ಸ್ವಂತ ಗಾಲ್ಫ್ ಕ್ಲಬ್‌ಗೆ ಹೋಗಿದ್ದರು. ಗಾಲ್ಫ್ ಆಟ ಮುಗಿಸಿ ಇನ್ನೇನು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆದಿದೆ.

    AK-47 ರೈಫಲ್‌ ಪತ್ತೆ:
    ಫ್ಲೋರಿಡಾದ ಗಾಲ್ಫ್ ಕ್ಲಬ್‌ನ ಅಕ್ಕಪಕ್ಕದಲ್ಲಿ ಒಂದು ಎಕೆ-47 ರೈಫಲ್, ಟ್ರೆಕ್ಕಿಂಗ್ ಮಾಡುವವರು ಅಥವಾ ವ್ಲಾಗರ್‌ಗಳು ಬಳಸುವ ಗೋ ಪ್ರೋ ಕ್ಯಾಮೆರಾ, ಎರಡು ಬ್ಯಾಕ್ ಪ್ಯಾಕ್ (ಬ್ಯಾಗ್) ಸಿಕ್ಕಿವೆ. ಇದಲ್ಲದೇ, ಗಾಲ್ಫ್ ಕ್ಲಬ್ ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬ ಟ್ರಂಪ್ ಕಾರಿನ ಫೋಟೋ ತೆಗೆದುಕೊಳ್ಳುತ್ತಿದ್ದುದನ್ನು ತಾವು ನೋಡಿದ್ದಾಗಿ ತಿಳಿಸಿದ್ದಾರೆ. ಇಷ್ಟು ಮಾಹಿತಿ ಸಂಗ್ರಹಿಸಿದ ಎಫ್‌ಬಿಐ ಏಜೆಂಟ್‌ಗಳು ಶಂಕಿತ ದಾಳಿಕೋರನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಶಂಕಿತ ದಾಳಿಕೋರನ ಸೆರೆ:
    ಗುಂಡಿನ ದಾಳಿ ನಡೆಸಿ ಓಡಿಹೋಗಿದ್ದ ವ್ಯಕ್ತಿಯನ್ನು ಇಂಟರ್ ಸ್ಟೇಟ್ ಹೈವೇ 75ರಲ್ಲಿ ಹಿಡಿಯಲಾಗಿದೆ ಎಂದು ಫ್ಲೋರಿಡಾದ ನಗರಾಡಳಿತದ ಮುಖ್ಯಸ್ಥರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಘಟನೆ ನಡೆದ ಕೂಡಲೇ ಗಾಲ್ಫ್ ಕ್ಲಬ್ ಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿದ್ದ ಎಪ್‌ಬಿಐ ಸಿಬ್ಬಂದಿ, ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾರಂಭಿಸಿದ್ದರು. ಇದೇ ವೇಳೆ, ರಾಜ್ಯ ಹೆದ್ದಾರಿ 714ರ ಬಳಿಯೇ ಸಾಗುವ ಇಂಟರ್ ಸ್ಟೇಟ್ ಹೆದ್ದಾರಿ 75ರಲ್ಲಿ ವೇಗವಾಗಿ ಬರುತ್ತಿದ್ದ ಕಾರನ್ನು ತಡೆದು ಪರಿಶೀಲಿಸಿದಾಗ ಶಂಕಿತ ದಾಳಿಕೋರ ಅದರಲ್ಲಿದ್ದುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಮ್ಮ ದೇಶದಲ್ಲಿ ರಾಜಕೀಯ ಹಿಂಸಾಚಾರ ಅಥವಾ ಯಾವುದೇ ಹಿಂಸಾಚಾರಕ್ಕೆ ಯಾವುದೇ ಸ್ಥಳವಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.

  • ಟ್ರಂಪ್‌ ಜೊತೆ ಚರ್ಚೆ ವೇಳೆ ಕಮಲಾ ಹ್ಯಾರಿಸ್‌ ಬ್ಲೂಟೂತ್‌ ಸಾಧನ ಬಳಸಿದ್ರಾ?

    ಟ್ರಂಪ್‌ ಜೊತೆ ಚರ್ಚೆ ವೇಳೆ ಕಮಲಾ ಹ್ಯಾರಿಸ್‌ ಬ್ಲೂಟೂತ್‌ ಸಾಧನ ಬಳಸಿದ್ರಾ?

    ವಾಷಿಂಗ್ಟನ್‌: ಡೊನಾಲ್ಡ್‌ ಟ್ರಂಪ್‌ (Donald Trump) ಜೊತೆಗಿನ ಬಹಿರಂಗ ಚರ್ಚೆಯ ವೇಳೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ (Kamala Harris) ಬ್ಲೂಟೂತ್‌ ಸಾಧನ ಬಳಸಿದ್ರಾ ಹೀಗೊಂದು ಪ್ರಶ್ನೆ ಎದ್ದಿದೆ.

    ಹೌದು. ಕಮಲಾ ಹ್ಯಾರಿಸ್‌ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಿವಿಯಲ್ಲಿ ಓಲೆ ಧರಿಸಿದ್ದರು. ಆದರೆ ಅದು ಓಲೆಯಲ್ಲ. ಅದು ನೋವಾ ಕಂಪನಿಯ ಬ್ಲೂಟೂತ್‌ ಆಡಿಯೋ ಹೆಡ್‌ಫೋನ್‌ ಎಂದು ಟ್ರಂಪ್‌ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ.

    ಟ್ರಂಪ್‌ ಅಭಿಮಾನಿಗಳ ಆರೋಪಕ್ಕೆ ಕಮಲಾ ಹ್ಯಾರಿಸ್‌ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಕಮಲಾ ಹ್ಯಾರಿಸ್‌ ಕಿವಿಯೋಲೆ ಧರಿಸಿದ್ದಾರೆ. ಯಾವುದೇ ಬ್ಲೂ ಟೂತ್‌ ಸಾಧನ ಧರಿಸಿಲ್ಲ ಎಂದಿದ್ದಾರೆ.

    ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಚರ್ಚೆ ವೇಳೆ ಈ ರೀತಿಯ ಆರೋಪ ಬರುವುದು ಹೊಸದೆನಲ್ಲ 2016 ರಲ್ಲಿ ಹಿಲರಿ ಕ್ಲಿಂಟನ್‌, 2020 ರಲ್ಲಿ ಜೋ ಬೈಡನ್‌ ಬ್ಲೂಟೂತ್‌ ಸಾಧನ ಬಳಸಿದ್ದಾರೆ ಎಂಬ ವಿಷಯ ಚರ್ಚೆಯಾಗಿತ್ತು. ಇದನ್ನೂ ಓದಿ: US Presidential Debate| ಮೊದಲ ಬಾರಿಗೆ ಟ್ರಂಪ್‌, ಕಮಲಾ ಮುಖಾಮುಖಿ: ಆರ್ಥಿಕತೆ, ವಲಸೆ ಬಗ್ಗೆ ಚರ್ಚೆ

    ಅಮೆರಿಕ ಅಧ್ಯಕ್ಷೀಯ ಚುನಾವಣೆ (USA Presidential Election) ರಂಗೇರಿದ್ದು ಮಾಜಿ ಅಧ್ಯಕ್ಷ, ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ಮತ್ತು ಹಾಲಿ ಉಪಾಧ್ಯಕ್ಷೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಮೊದಲ ಬಾರಿಗೆ ಸೆ.10 ರಂದು ಮುಖಾಮುಖಿಯಾಗಿದ್ದರು. ಪೆನ್ಸಿಲ್ವೇನಿಯಾದಲ್ಲಿ ಎಬಿಸಿ ವಾಹಿನಿ ಆಯೋಜಿಸಿದ್ದ ಬಹಿರಂಗ ಚರ್ಚೆಯಲ್ಲಿ ಬಹಿರಂಗ ಚರ್ಚೆಯಲ್ಲಿ ಆರ್ಥಿಕತೆ, ವಲಸೆ ನೀತಿ, ಕ್ಯಾಪಿಟಲ್‌ ಹಿಲ್‌ ಗಲಭೆ ಇತ್ಯಾದಿ ವಿಚಾರಗಳ ಬಗ್ಗೆ ಇಬ್ಬರು ನಾಯಕರು ಮಾತನಾಡಿದ್ದರು.

     

  • US Presidential Debate| ಮೊದಲ ಬಾರಿಗೆ ಟ್ರಂಪ್‌, ಕಮಲಾ ಮುಖಾಮುಖಿ: ಆರ್ಥಿಕತೆ, ವಲಸೆ ಬಗ್ಗೆ ಚರ್ಚೆ

    US Presidential Debate| ಮೊದಲ ಬಾರಿಗೆ ಟ್ರಂಪ್‌, ಕಮಲಾ ಮುಖಾಮುಖಿ: ಆರ್ಥಿಕತೆ, ವಲಸೆ ಬಗ್ಗೆ ಚರ್ಚೆ

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ (USA Presidential Election) ರಂಗೇರಿದ್ದು ಮಾಜಿ ಅಧ್ಯಕ್ಷ, ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತು ಹಾಲಿ ಉಪಾಧ್ಯಕ್ಷೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ (Kamala Harris) ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾರೆ.

    ಪೆನ್ಸಿಲ್ವೇನಿಯಾದಲ್ಲಿ ಎಬಿಸಿ ವಾಹಿನಿ  ಆಯೋಜಿಸಿದ್ದ  ಬಹಿರಂಗ ಚರ್ಚೆಯಲ್ಲಿ  ಬಹಿರಂಗ ಚರ್ಚೆಯಲ್ಲಿ ಆರ್ಥಿಕತೆ, ವಲಸೆ ನೀತಿ, ಕ್ಯಾಪಿಟಲ್‌ ಹಿಲ್‌ ಗಲಭೆ ಇತ್ಯಾದಿ ವಿಚಾರಗಳ ಬಗ್ಗೆ ಇಬ್ಬರು ನಾಯಕರು ಮಾತನಾಡಿದರು.

    ಕಮಲಾ ಹ್ಯಾರಿಸ್‌ ಮಾರ್ಕ್ಸ್‌ವಾದಿಯಾಗಿದ್ದಾರೆ. ಅವರ ತಂದೆ ಮಾರ್ಕ್ಸ್‌ವಾದವನ್ನು ಕಲಿಸಿಕೊಟ್ಟಿದ್ದಾರೆ. ಅವರ ಹುಚ್ಚು ನೀತಿಯಿಂದ ದೇಶ ನಾಶವಾಗಿದೆ ಎಂದು ಟ್ರಂಪ್‌ ಟೀಕಿಸಿದರು.

    ಡೊನಾಲ್ಡ್ ಟ್ರಂಪ್ ಲಕ್ಷಾಂತರ ಜನರನ್ನು ವಜಾಗೊಳಿಸಿದ್ದಾರೆ. ಕೆಟ್ಟ ಉದ್ಯೋಗ ನೀತಿಯಿಂದ ದೇಶ ಸಮಸ್ಯೆಗೆ ಸಿಲುಕಿತ್ತು. ಟ್ರಂಪ್‌ ಅವಧಿಯಲ್ಲಿ ಆಗಿದ್ದ ಅವ್ಯವಸ್ಥೆಯನ್ನು ನಮ್ಮ ಅವಧಿಯಲ್ಲಿ ನಾವು ಸ್ವಚ್ಛ ಮಾಡಿದ್ದೇವೆ ಎಂದು ಹ್ಯಾರಿಸ್‌ ತಿರುಗೇಟು ನೀಡಿದರು.

     

    ಟ್ರಂಪ್‌ ವಾದ ಏನು?
    ಕಮಲಾ ಹ್ಯಾರಿಸ್‌ ಅಧಿಕಾರಕ್ಕೆ ಬಂದರೆ ಅಮೆರಿಕ ವೆನೆಜುವೆಲಾ ಆಗಲಿದೆ. ನನ್ನ ಯೋಜನೆ ಉತ್ತಮ ಯೋಜನೆಯಾಗಿದೆ. ಅವರ ಬಳಿ ಯಾವುದೇ ಯಾವುದೇ ಯೋಜನೆ ಇಲ್ಲ ಮತ್ತು ಬೈಡೆನ್ ಅವರ ಯೋಜನೆಯನ್ನು ನಕಲು ಮಾಡಿದ್ದಾರೆ.

     

    ಸಾಕುಪ್ರಾಣಿಗಳನ್ನು ಸೇವಿಸುವ ಹೈಟಿ ವಲಸಿಗರು ಅಮೆರಿಕ ಜನರು ಸಾಕಿದ್ದ ನಾಯಿ, ಬೆಕ್ಕುಗಳನ್ನು ತಿನ್ನುತ್ತಿದ್ದಾರೆ. ಬೈಡನ್‌ ಅವಧಿಯಲ್ಲಿ ಲಕ್ಷಾಂತರ ಕ್ರಿಮಿನಲ್‌ಗಳಿಗೆ ದೇಶಕ್ಕೆ ಬರಲು ಅವಕಾಶ ಸಿಕ್ಕಿದೆ. ಭಯೋತ್ಪಾದಕರು, ಡ್ರಗ್ ಡೀಲರ್‌ಗಳಿಗೆ ಬರಲು ಅವಕಾಶ ನೀಡಿ ಅವರ ಮತಗಳನ್ನು ಪಡೆಯುತ್ತಿದ್ದಾರೆ. ಅಕ್ರಮ ವಲಸಿಗರಿಂದ ದೇಶ ನಾಶವಾಗಲಿದೆ.

    ನಾವು ಭಯಾನಕ ಆರ್ಥಿಕತೆಯನ್ನು ಹೊಂದಿದ್ದೇವೆ. ಹಣದುಬ್ಬರ ವಿಪರೀತ ಏರಿಕೆಯಾಗಿದೆ. ಬಹುಶಃ ಅಮರಿಕದ ಇತಿಹಾಸದಲ್ಲಿ ಇಷ್ಟೊಂದು ಕೆಟ್ಟ ಆರ್ಥಿಕತೆ ನೋಡೇ ಇಲ್ಲ. ನಾನು ಕ್ಯಾಪಿಟಲ್‌ ಹಿಲ್‌ ಮೇಲೆ ದಾಳಿಗೆ ಯಾವುದೇ ಪ್ರಚೋದನೆ ನೀಡಿಲ್ಲ. ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾತ್ರ ಮಾಡಿದ್ದೇನೆ.

     

    ಕಮಲಾ ಹ್ಯಾರಿಸ್‌ ಹೇಳಿದ್ದೇನು?
    ಟ್ರಂಪ್‌ ಪ್ರಚಾರ ಸಭೆಗೆ ಆಗಮಿಸುತ್ತಿರುವ ಜನರು ಕಾರ್ಯಕ್ರಮದ ಮಧ್ಯೆ ಬೇಸರದಿಂದ ತೊರೆಯುತ್ತಿದ್ದಾರೆ. ಇದನ್ನು ನೋಡಿದಾಗಲೇ ಜನರಿಗೆ ಅವರ ಮೇಲೆ ಇರುವ ನಂಬಿಕೆ ಏನು ಎನ್ನುವುದು ತಿಳಿಯುತ್ತೆ. ಟ್ರಂಪ್‌ ಯಾವುದೇ ಯೋಜನೆಯನ್ನು ಹೊಂದಿಲ್ಲ. ಸಮರ್ಥಿಸಿಕೊಳ್ಳಲು ಯೋಜನೆ ಬಗ್ಗೆ ಮಾತನಾಡುತ್ತಾರೆ.

    ದೇಶದ ರಾಜಧಾನಿಯಲ್ಲಿ ಗಲಾಟೆ ನಡೆಸಲು ಟ್ರಂಪ್‌ ಭಾಷಣ ಮಾಡಿ ಹಿಂಸಾತ್ಮಕ ಗುಂಪನ್ನು ಪ್ರಚೋದಿಸಿದರು. ಟ್ರಂಪ್‌ಗೆ ರಿಪಬ್ಲಿಕನ್‌ ಪಕ್ಷದಲ್ಲೇ ಬೆಂಬಲ ಸಿಗುತ್ತಿಲ್ಲ. ಟ್ರಂಪ್‌ ಅವಧಿಯಲ್ಲಿ ಕೆಲಸ ಮಾಡಿದ 200 ಕ್ಕೂ ಹೆಚ್ಚು ರಿಪಬ್ಲಿಕನ್‌ಗಳು ನನ್ನನ್ನು ಬೆಂಬಲಿಸಿದ್ದಾರೆ. ವಿಶ್ವದ ನಾಯಕರು ಟ್ರಂಪ್‌ ನೋಡಿ ನಗುತ್ತಿದ್ದಾರೆ. ಟ್ರಂಪ್‌ 81 ಮಿಲಿಯನ್‌ ಜನರನ್ನು ತೆಗೆದು ಹಾಕಿ ದೇಶದ ಆರ್ಥಿಕತೆಯನ್ನು ಹಾಳು ಮಾಡಿದ್ದಾರೆ.

     

  • ಟ್ರಂಪ್ ದೇಶಕ್ಕೆ ಡೇಂಜರಸ್, ನಾವು ಮೊದಲೇ ಸಿನೆಮಾ ನೋಡಿದ್ದೇವೆ: ಬರಾಕ್ ಒಬಾಮ

    ಟ್ರಂಪ್ ದೇಶಕ್ಕೆ ಡೇಂಜರಸ್, ನಾವು ಮೊದಲೇ ಸಿನೆಮಾ ನೋಡಿದ್ದೇವೆ: ಬರಾಕ್ ಒಬಾಮ

    ಚಿಕಾಗೋ: ಟ್ರಂಪ್‌ರವರು ( Donald Trump) ದೇಶಕ್ಕೆ ‘ಅಪಾಯ’ ಎಂದು ಡೆಮೊಕ್ರಾಟಿಕ್ (Democratic) ನ್ಯಾಶನಲ್ ಕನ್ವೆನ್ಷನ್ ಭಾಷಣದಲ್ಲಿ ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ (Barack Obama) ಹೇಳಿದರು.

    ಚಿಕಾಗೋ ಸಮಾವೇಶದಲ್ಲಿ ಮಾತನಾಡಿದ ಅವರು, ಟ್ರಂಪ್ ಅಧಿಕಾರವನ್ನು ಒಂದು ಸಾಧನವಾಗಿ ನೋಡುತ್ತಾರೆ. ನಾವು ಆ ಚಲನಚಿತ್ರವನ್ನು ಮೊದಲೇ ನೋಡಿದ್ದೇವೆ. ಟ್ರಂಪ್ ಅವರು ಹ್ಯಾರಿಸ್ (Kamala Harris) ವಿರುದ್ಧ ಸೋಲುವ ಭಯದಲ್ಲಿರುತ್ತಾರೆ ಮತ್ತು ಅವರು ಪಿತೂರಿಯ ಸಿದ್ಧಾಂತವನ್ನು ಹರಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಿಜಯೇಂದ್ರ ಟಿಕೆಟ್ ಕೊಡಿಸುವ ಮಾತು ಕೊಟ್ಟಿದ್ದಾರೆ, ನನ್ನ ಸ್ಪರ್ಧೆ ಖಚಿತ: ಸಿ.ಪಿ ಯೋಗೇಶ್ವರ್

    ಕಮಲಾ ಹ್ಯಾರಿಸ್ ದೇಶಕ್ಕಾಗಿ ಹೋರಾಡುತ್ತಾರೆ, ಹ್ಯಾರಿಸ್ ದೇಶದ ಬಗ್ಗೆ ಚಿಂತಿಸುತ್ತಾರೆ ಎಂದರು. ಇದನ್ನೂ ಓದಿ: ದಾಖಲಾತಿ ತಿದ್ದುವ ಪರಿಸ್ಥಿತಿ ನಮಗೆ ಬಂದಿಲ್ಲ, ಸಿಎಂ ಪತ್ನಿ ಅವರ ಪತ್ರ ತಿದ್ದುಪಡಿ ಆಗಿಲ್ಲ: ಬೈರತಿ ಸುರೇಶ

    ಮಾಜಿ ಅಧ್ಯಕ್ಷರನ್ನು ಉಲ್ಲೇಖಿಸಿ, 78 ವರ್ಷದ ಬಿಲಿಯನೇರ್ ಒಂಬತ್ತು ವರ್ಷಗಳ ಹಿಂದೆ ತನ್ನ “ಗೋಲ್ಡನ್ ಎಸ್ಕಲೇಟರ್” ಕೆಳಗೆ ಸವಾರಿ ಮಾಡಿದಾಗಿನಿಂದ ತನ್ನ ಸಮಸ್ಯೆಗಳ ಬಗ್ಗೆ ಕೊರಗುವುದನ್ನು ನಿಲ್ಲಿಸಲಿಲ್ಲ. ಟ್ರಂಪ್ ತಮ್ಮನ್ನು ನೆರೆಹೊರೆಯವರೊಂದಿಗೆ ಹೋಲಿಸಿಕೊಳ್ಳುವುದನ್ನು ನಾನು ಹಿಂದೊಮ್ಮೆ ಕೇಳಿದ್ದೆ ಎಂದು ಒಬಾಮಾ ಹೇಳಿದರು. . ಇದನ್ನೂ ಓದಿ: Karnataka Rain Alert | ಮುಂದಿನ 6 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯ ಮನ್ಸೂಚನೆ

    ಟ್ರಂಪ್ ಅವರ 4 ವರ್ಷ ಅವ್ಯವಸ್ಥೆಯನ್ನು ನಾವು ನೋಡಿದ್ದೇವೆ. ಮತ್ತೆ ನಮಗೆ ನಾಲ್ಕು ವರ್ಷಗಳ ಅವ್ಯವಸ್ಥೆಯ ಅಗತ್ಯವಿಲ್ಲ ಎಂದು ಒಬಾಮಾ ನುಡಿದರು.  ಇದನ್ನೂ ಓದಿ: Karnataka Rain Alert | ಮುಂದಿನ 6 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯ ಮನ್ಸೂಚನೆ

  • ತೀವ್ರಗಾಮಿ ಎಡಪಂಥೀಯ ಮನೋಸ್ಥಿತಿಯ ಹ್ಯಾರಿಸ್‌ ಆಡಳಿತಕ್ಕೆ ಅನರ್ಹ: ಟ್ರಂಪ್‌

    ತೀವ್ರಗಾಮಿ ಎಡಪಂಥೀಯ ಮನೋಸ್ಥಿತಿಯ ಹ್ಯಾರಿಸ್‌ ಆಡಳಿತಕ್ಕೆ ಅನರ್ಹ: ಟ್ರಂಪ್‌

    ವಾಷಿಂಗ್ಟನ್‌: ಕಮಲಾ ಹ್ಯಾರಿಸ್ (Kamala Harris) ಆಡಳಿತ ನಡೆಸಲು ಅನರ್ಹರಾಗಿದ್ದು, ತೀವ್ರಗಾಮಿ ಎಡಪಂಥೀಯ ಮನೋಸ್ಥಿತಿಯವರು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಹಾಲಿ ರಿಪಬ್ಲಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ವಾಗ್ದಾಳಿ ನಡೆಸಿದ್ದಾರೆ.

    ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೂರುವರೆ ವರ್ಷಗಳಿಂದ ಕಮಲಾ ಹ್ಯಾರಿಸ್‌ ಅವರು ಜೋ ಬೈಡೆನ್‌ (Joe Biden) ಮಾಡಿದ ದುರಂತದ ಚಾಲನಾ ಶಕ್ತಿಯಾಗಿದ್ದಾರೆ. ಅವರೆನಾದರೂ ಅಧಿಕಾರಕ್ಕೆ ಏರಿದರೆ ನಮ್ಮ ದೇಶವನ್ನು ದೇಶವನ್ನು ನಾಶಮಾಡುತ್ತಾರೆ. ಅಮೆರಿಕವನ್ನು (USA) ನಾಶ ಮಾಡಲು ನಾವು ಬಿಡುವುದಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಮೋದಿಯನ್ನು ಭೇಟಿಯಾದ ಹೆಚ್‌ಡಿಡಿ, ಹೆಚ್‌ಡಿಕೆ – ಮಹತ್ವದ ವಿಚಾರಗಳ ಕುರಿತು ಚರ್ಚೆ

    ಹ್ಯಾರಿಸ್‌ಗೆ ಹಾಕುವ ಒಂದು ಮತ ಇನ್ನೂ ನಾಲ್ಕು ವರ್ಷಗಳ ಅಪ್ರಾಮಾಣಿಕತೆ, ಅಸಮರ್ಥತೆ, ದೌರ್ಬಲ್ಯ ಮತ್ತು ವೈಫಲ್ಯಕ್ಕೆ ಹಾಕುವ ಮತವಾಗುತ್ತದೆ ಎಂದು ಟ್ರಂಪ್‌ ಹೇಳಿದರು. ಇದನ್ನೂ ಓದಿ: 2 ವರ್ಷಗಳ ಬಳಿಕ ಭಾರೀ ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್‌ ಮುಕ್ತ – ಈ ಷರತ್ತು ಅನ್ವಯ

    ಕಮಲಾ ಹ್ಯಾರಿಸ್‌ ಮುಟ್ಟಿದ್ದೆಲ್ಲವೂ ದುರಂತವಾಗುತ್ತದೆ ಎಂದು ಆರೋಪಿಸಿದ ಅವರು, ಉಕ್ರೇನ್‌ ದಾಳಿ ಮಾಡದಂತೆ ರಷ್ಯಾವನ್ನು ತಡೆಯಲು ಕಮಲಾ ಹ್ಯಾರಿಸ್ ಅವರನ್ನು ಯುರೋಪ್‌ಗೆ ಕಳುಹಿಸಿದಾಗ ಏನಾಯ್ತು? ಅವರು ತೆರಳಿದ ಐದು ದಿನಗಳ ನಂತರ ರಷ್ಯಾ ದಾಳಿ ಮಾಡುವ ಮೂಲಕ ಉತ್ತರಿಸಿತು. ಪುಟಿನ್ ಏನಿಲ್ಲವೆಂಬಂತೆ ಅವರನ್ನು ನೋಡಿ ನಕ್ಕರು. ಕಮಲಾ ಮುಟ್ಟಿದ್ದೆಲ್ಲವೂ ಸಂಪೂರ್ಣ ವಿಪತ್ತಿಗೆ ಕಾರಣವಾಗುತ್ತದೆ  ಎಂದು ವಾಗ್ದಾಳಿ ನಡೆಸಿದರು.