ನ್ಯೂಯಾರ್ಕ್: ಭಾರಿ ಕುತೂಹಲ ಮೂಡಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ನ ಡೊನಾಲ್ಡ್ ಟ್ರಂಪ್ ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ. ಅಮೆರಿಕದ 47ನೇ ಅಧ್ಯಕ್ಷರಾಗಲು ಸಜ್ಜಾಗಿರುವ ಟ್ರಂಪ್, ವಿಶ್ವದ ದೊಡ್ಡಣ್ಣ ರಾಷ್ಟ್ರದಲ್ಲಿ 2ನೇ ಬಾರಿಗೆ ಚುಕ್ಕಾಣಿ ಹಿಡಿದು ಇತಿಹಾಸ ಸೃಷ್ಟಿಸಲಿದ್ದಾರೆ.
ಈ ಚುನಾವಣೆಯಲ್ಲಿ ವಿಜೇತರನ್ನು ನಿರ್ಧರಿಸುವ ಎಲೆಕ್ಟೋರಲ್ ಕಾಲೇಜ್ (ಚುನಾಯಿತರ ಕೂಟ) ಸಂಖ್ಯೆಗಳಿಗೆ ಸಂಬಂಧಿಸಿದಂತೆ, ಟ್ರಂಪ್ 267 ರೊಂದಿಗೆ ಮುನ್ನಡೆಯಲ್ಲಿದ್ದು, ಪ್ರಚಂಡ ಗೆಲುವಿನ ಅಂಚಿನಲ್ಲಿದ್ದಾರೆ. ಆದರೆ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ 214 ಮತಗಳೊಂದಿಗೆ ಹಿನ್ನಡೆ ಅನುಭವಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಿರ್ಣಾಯಕವೇ ಆಗಿರುವ 7 ಸ್ವಿಂಗ್ ರಾಜ್ಯಗಳ ಪೈಕಿ ನಾಲ್ಕರಲ್ಲಿ ಟ್ರಂಪ್ ಜಯಭೇರಿ ಬಾರಿಸಿದ್ದಾರೆ.
ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾ, ಜಾರ್ಜಿಯಾ, ನಾರ್ತ್ ಕೆರೊಲಿನಾ, ಟೆಕ್ಸಾಸ್, ಫ್ಲೋರಿಡಾ, ಇಂಡಿಯಾನಾ, ಕೆಂಟುಕಿ ಒಳಗೊಂಡಂತೆ 30 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಕೇವಲ 20 ರಾಜ್ಯಗಳಲ್ಲಿ ಜಯಗಳಿಸಿದ್ದಾರೆ.
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ನ ಡೊನಾಲ್ಡ್ ಟ್ರಂಪ್ ಐತಿಹಾಸಿಕ ಗೆಲುವು ದಾಖಲಿಸುವ ಸನಿಹದಲ್ಲಿದ್ದಾರೆ. ಚುನಾವಣೆಯಲ್ಲಿ ಹಿನ್ನಡೆಯಾಗುತ್ತಿದ್ದಂತೆ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ತಮ್ಮ ಚುನಾವಣಾ ರಾತ್ರಿ ಭಾಷಣವನ್ನು ರದ್ದುಗೊಳಿಸಿದ್ದಾರೆ.
ಟ್ರಂಪ್ ಅವರು ಎಲ್ಲಾ ಏಳು ಸ್ವಿಂಗ್ ರಾಜ್ಯಗಳಲ್ಲಿ ತಮ್ಮ ಎದುರಾಳಿ ಕಮಲಾ ಹ್ಯಾರಿಸ್ ಅವರಿಗಿಂತ ಮುಂದಿದ್ದಾರೆ. ಉತ್ತರ ಕೆರೊಲಿನಾ ಮತ್ತು ಜಾರ್ಜಿಯಾವನ್ನು ಟ್ರಂಪ್ ಗೆದ್ದಿದ್ದಾರೆ. ಅರಿಜೋನಾ, ಮಿಚಿಗನ್, ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್ ಮತ್ತು ನೆವಾಡಾದಲ್ಲಿಯೂ ಮುಂದಿದ್ದಾರೆ.
ತವರಿನಲ್ಲಿ ಟ್ರಂಪ್‌ಗೆ ಮುಖಭಂಗ
ನ್ಯೂಯಾರ್ಕ್‌ನಲ್ಲಿ ಕಮಲಾ ಹ್ಯಾರಿಸ್ ರಾಜ್ಯದ 28 ಚುನಾವಣಾ ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ನ್ಯೂಯಾರ್ಕ್ 1984ರ ಚುನಾವಣೆಯಲ್ಲಿ ರೊನಾಲ್ಡ್ ರೇಗನ್ ಅವರಿಗೆ ಅನುಮೋದನೆ ನೀಡಿತ್ತು. ನಂತರದ ಪ್ರತಿ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಡೆಮಾಕ್ರಟಿಕ್‌ಗೆ ಮತ ನೀಡಿದೆ. ನ್ಯೂಯಾರ್ಕ್ ಡೊನಾಲ್ಡ್ ಟ್ರಂಪ್ ಅವರ ತವರು ರಾಜ್ಯ. ತವರಲ್ಲಿ ಗೆಲುವು ಸಾಧಿಸಲು ಸತತವಾಗಿ ಹೆಣಗಾಡುತ್ತಿದ್ದಾರೆ. ಈವರೆಗೆ ಸ್ಪರ್ಧಿಸಿದ ಮೂರು ಚುನಾವಣೆಯಲ್ಲೂ ನ್ಯೂಯಾರ್ಕ್‌ನಲ್ಲಿ ಸೋಲು ಅನುಭವಿಸಿದ್ದಾರೆ.
ನ್ಯೂಯಾರ್ಕ್: ಕುತೂಹಲ ಮೂಡಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ (US Presidential Election) ಮತದಾನ ಇಂದು ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 11:30 ಕ್ಕೆ ಅಂತ್ಯವಾಗಲಿದೆ. ಇಲ್ಲಿವರೆಗೆ ಲಭ್ಯವಿರುವ ಮಾಹಿತಿ ಪ್ರಕಾರ, ರಿಪಬ್ಲಿಕನ್‌ನ ಡೊನಾಲ್ಡ್ ಟ್ರಂಪ್ (Donald Trump) 10 ರಾಜ್ಯಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್‌ನ ಕಮಲಾ ಹ್ಯಾರಿಸ್ ಅವರು 7 ಸ್ವಿಂಗ್ ರಾಜ್ಯಗಳಲ್ಲಿ ತಲಾ ಎರಡು ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅರಿಜೋನಾ, ಜಾರ್ಜಿಯಾ, ಮಿಚಿಗನ್, ನೆವಾಡಾ, ಉತ್ತರ ಕೆರೊಲಿನಾ, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ರಾಜ್ಯಗಳಲ್ಲಿನ ಗೆಲುವೇ ನಿರ್ಣಾಯಕವಾಗಿದೆ.
ಡೊನಾಲ್ಡ್ ಟ್ರಂಪ್ 177 ಸ್ಥಾನಗಳಲ್ಲಿ ಮುಂದಿದ್ದರೆ, ಕಮಲಾ ಹ್ಯಾರಿಸ್ (Kamala Harris) 99 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪಶ್ಚಿಮ ವರ್ಜೀನಿಯಾದಲ್ಲಿ ಟ್ರಂಪ್ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಮಿಸ್ಸಿಸ್ಸಿಪ್ಪಿ, ಅಲಬಾಮಾ, ಒಕ್ಲಹೋಮ, ಟೆನ್ನೆಸ್ಸೀ, ದಕ್ಷಿಣ ಕೆರೊಲಿನಾ ಮತ್ತು ಅರ್ಕಾನ್ಸಾಸ್‌ನಲ್ಲಿ ಟ್ರಂಪ್ ಜಯಗಳಿಸಿದ್ದಾರೆ. ಇದನ್ನೂ ಓದಿ: Kamala, you’re fired – ಮಧ್ಯರಾತ್ರಿ 2:15 ಕ್ಕೆ ಕೊನೆಯ ಪ್ರಚಾರದಲ್ಲಿ ಗುಡುಗಿದ ಟ್ರಂಪ್
ವಾಷಿಂಗ್ಟನ್: ಇಡೀ ಜಗತ್ತೇ ಕುತೂಹಲದಿಂದ ನೋಡುತ್ತಿರುವ ಅಮೆರಿಕಅಧ್ಯಕ್ಷೀಯ ಚುನಾವಣೆಯಲ್ಲಿ (US Presidential Election) ಮತದಾನ ಬಿರುಸಿನಿಂದ ಸಾಗಿದೆ. ಮತದಾನ ಶುರುವಾದ ಕೆಲವೇ ಗಂಟೆಗಳಲ್ಲಿ ಸಣ್ಣ ಸಣ್ಣ ಕೌಂಟಿಗಳಲ್ಲಿ ಮತದಾನ ಪೂರ್ಣಗೊಂಡಿದ್ದು ಫಲಿತಾಂಶವೂ ಹೊರಬಿದ್ದಿದೆ.
ನ್ಯೂ ಹ್ಯಾಂಪ್‌ಶೈರ್‌ನ ಡಿಕ್ಸ್ವಿಲ್ಲೆ ನಾಚ್‌ನಲ್ಲಿ (New Hampshire’s Dixville Notch) ಮೊದಲ ಫಲಿತಾಂಶ ಬಂದಿದೆ. ಅಲ್ಲಿನ ಒಟ್ಟು ಆರು ಮತಗಳಲ್ಲಿ ತಲಾ ಮೂರು ಮತಗಳು ಟ್ರಂಪ್ (Donald Trump) ಮತ್ತು ಹ್ಯಾರಿಸ್‌ಗೆ (Kamala Harris) ಬಿದ್ದಿವೆ. 2020ರಲ್ಲಿ ಇಲ್ಲಿನ ಬೈಡನ್ (Joe Biden) ಪರ 5 ಮಂದಿ ಮತ ಹಾಕಿದ್ದರೆ ಟ್ರಂಪ್ 0 ಮತ ಪಡೆದಿದ್ದರು. ಇದನ್ನೂ ಓದಿ: Kamala, you’re fired – ಮಧ್ಯರಾತ್ರಿ 2:15 ಕ್ಕೆ ಕೊನೆಯ ಪ್ರಚಾರದಲ್ಲಿ ಗುಡುಗಿದ ಟ್ರಂಪ್
The first election result is in, and it’s a Trump-Harris tie. Polls in Dixville Notch, New Hampshire, opened at midnight and closed shortly after the town’s six residents cast their ballots.
ಕೆಲ ಸಮೀಕ್ಷೆಗಳು ಟ್ರಂಪ್ ಗೆಲ್ಲುತ್ತಾರೆ ಎಂದರೆ ಕೆಲ ಸಮೀಕ್ಷೆಗಳು ಕಮಲಾ ಗೆಲ್ಲಬಹುದು ಎಂದು ಹೇಳಿವೆ. ಇಬ್ಬರ ಮಧ್ಯೆ ನೇರಾನೇರ ಪೈಪೋಟಿ ಇದ್ದು ಸೋಲಿನ ಅಂತರ ಬಹಳ ಕಡಿಮೆ ಇರಬಹುದು ಎಂದು ಸಮೀಕ್ಷೆಗಳು ಹೇಳಿವೆ. ಭಾರತೀಯ ಕಾಲಮಾನ ಬುಧವಾರ ಸಂಜೆ ಮುಂದಿನ ಅಮೆರಿದ ಅಧ್ಯಕ್ಷರು ಯಾರಾಗ್ತಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ. ಇದನ್ನೂ ಓದಿ: US Election 2024 | 7 ಕೋಟಿಗೂ ಹೆಚ್ಚು ಜನರಿಂದ ಮೊದಲೇ ಮತದಾನ – Swing ರಾಜ್ಯಗಳಲ್ಲಿ ಟ್ರಂಪ್ ಮುನ್ನಡೆ
ಮಧ್ಯರಾತ್ರಿ ಮತದಾನ:
ನ್ಯೂ ಹ್ಯಾಂಪ್‌ಶೈರ್‌ನ ಡಿಕ್ಸ್ವಿಲ್ಲೆ ನಾಚ್‌ನಲ್ಲಿ ಮಧ್ಯರಾತ್ರಿಯೇ ಚುನಾವಣೆ ನಡೆದಿದೆ. ಬೇರೆ ಕಡೆಗಳಲ್ಲಿ ಬೆಳಗ್ಗೆ ಚುನಾವಣೆ ನಡೆದರೆ ಇಲ್ಲಿ ಮಧ್ಯರಾತ್ರಿ ಚುನಾವಣೆ ನಡೆಯುವುದು ವಿಶೇಷ. 1960 ರ ನಂತರ ಇಲ್ಲಿ ಮಧ್ಯರಾತ್ರಿ ಚುನಾವಣೆ ನಡೆಯುತ್ತಿದೆ. ಈ ಭಾಗದಲ್ಲಿ ಹಿಂದೆ ರೈಲ್ವೇ ಕೆಲಸಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬೆಳಗ್ಗೆ ಚುನಾವಣೆ ನಡೆದರೆ ಕೆಲಸಕ್ಕೆ ಸಮಸ್ಯೆ ಆಗುತ್ತೆ ಎಂಬ ಕಾರಣಕ್ಕೆ ರಾತ್ರಿ ಮತದಾನ ಮಾಡುವ ಸಂಪ್ರದಾಯ ಆರಂಭಿಸಿದ್ದರು. ಈ ಸಂಪ್ರದಾಯ ಈಗಲೂ ಮುಂದುವರಿಯುತ್ತಿದೆ.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ (US Presidential Election 2024) ಮತದಾನ ಆರಂಭವಾಗಿದ್ದು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (Donald Trump) ಮಧ್ಯರಾತ್ರಿ ಮಿಷಿಗನ್ ರಾಜ್ಯದಲ್ಲಿ ತಮ್ಮ ಕೊನೆಯ ಚುನಾವಣಾ ಪ್ರಚಾರ ಮುಗಿಸಿದರು.
ಅಮೆರಿಕ ಕಾಲಮಾನ ಸೋಮವಾರ ಮಧ್ಯರಾತ್ರಿ 2:15 ಟ್ರಂಪ್ ಕೊನೆಯ ಬಾರಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ “Kamala, you’re fired. Get the hell out of here.” ಎಂದು ಗುಡುಗಿದರು.
“Kamala, you’re fired. Get the hell out of here.”
Donald Trump speaks at his final rally in Michigan. He adds: ‘Kamala, you’re horrible at your job… You’re a low IQ individual’https://t.co/GIL7LtrHnh
ತಮ್ಮ ಭಾಷಣದಲ್ಲಿ ಅಮೆರಿಕದ ಆರ್ಥಿಕತೆ ಕುಸಿಯಲು ಕಮಲಾ ಅವರ ಆಡಳಿತವೇ ಕಾರಣ. ಇಂದಿಗೆ ಕಮಲಾ ಅವಧಿ ಅಂತ್ಯಗೊಂಡಿದೆ. ಉತ್ತಮ ಅಮೆರಿಕ ನಿರ್ಮಿಸಲು ನನಗೆ ಮತ ಚಲಾಯಿಸಿ ಎಂದು ಕೇಳಿಕೊಂಡರು.
ಅಮೆರಿಕ ಅಧ್ಯಕ್ಷೀಯ ಚುನಾವಣೆ (US Presidential Election) ಅಂತಿಮ ಘಟ್ಟ ತಲುಪಿದೆ. ಇಡೀ ಜಗತ್ತೇ ಕುತೂಹಲದಿಂದ ಎದುರು ನೋಡ್ತಿರುವ ಮತದಾನ ಇಂದು ನಡೆಯಲಿದೆ. ಭಾರತೀಯ ಕಾಲಮಾನ ಇಂದು ರಾತ್ರಿಯಿಂದ ನಾಳೆಯವರೆಗೆ ಮತದಾನ ನಡೆಯಲಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ (Kamala Harris), ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಾನಾ ನೀನಾ ಎನ್ನುವಂತೆ ಫೈಟ್ ಮಾಡ್ತಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡೋದು 7 ರಾಜ್ಯದ ಜನತೆ! – ಏನಿದು Swing States? ಯಾಕೆ ಇಷ್ಟೊಂದು ಮಹತ್ವ?
The last dance of the Trump campaign at 2:15 am in Michigan. We landed in FL at 5:35 & @realDonaldTrump is still going strong. If that man at 78 can do 4 rallies & pull an all nighter for America we can all
GET OUT & VOTE & STAY IN LINE TILL IT’S DONE. Now it’s on you America???????? pic.twitter.com/CETaR0s6uS
ಈಗಾಗಲೇ ಸುಮಾರು 7.7 ಕೋಟಿ ಜನ ಮತದಾನ (Early Voting) ಮಾಡಿದ್ದಾರೆ. ಅಮೆರಿಕದಲ್ಲಿ ಸುಮಾರು ಎರಡು ವಾರಗಳ ಮೊದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಅದರಲ್ಲೂ ಈ ಬಾರಿ ಭಾರೀ ಪ್ರಮಾಣದಲ್ಲಿ ಮೊದಲೇ ಮತದಾನ ಮಾಡಲು ಜನರು ಆಸಕ್ತಿ ತೋರಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಕಮಲಾ ಹ್ಯಾರಿಸ್ (Kamala Harris) ಮಧ್ಯೆ ನೇರಾನೇರ ಸ್ಪರ್ಧೆ ಇದ್ದು ಸೋಲಿನ ಅಂತರ ಬಹಳ ಕಡಿಮೆ ಇರಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆ (US Presidential Election) ಅಂತಿಮ ಘಟ್ಟ ತಲುಪಿದೆ. ಇಡೀ ಜಗತ್ತೇ ಕುತೂಹಲದಿಂದ ಎದುರು ನೋಡ್ತಿರುವ ಮತದಾನ ಇಂದು ನಡೆಯಲಿದೆ. ಭಾರತೀಯ ಕಾಲಮಾನ ಇಂದು ರಾತ್ರಿಯಿಂದ ನಾಳೆಯವರೆಗೆ ಮತದಾನ ನಡೆಯಲಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಾನಾ ನೀನಾ ಎನ್ನುವಂತೆ ಫೈಟ್ ಮಾಡ್ತಿದ್ದಾರೆ.
ಅಮೆರಿಕಾದ 50 ರಾಜ್ಯಗಳ ಪೈಕಿ ಬಹುತೇಕ ರಾಜ್ಯಗಳು ಯಾವ ಪಕ್ಷವನ್ನು ಬೆಂಬಲಿಸುತ್ತವೆ ಎಂಬ ಬಗ್ಗೆ ಸ್ಪಷ್ಟತೆ ಇದೆ. ಆದರೆ, ಪೆನ್ಸಿಲ್ವೇನಿಯಾ, ಮಿಚಿಗನ್, ನಾರ್ತ್ ಕರೋಲಿನಾ, ಜಾರ್ಜಿಯಾ, ನೆವಡಾ, ಅರಿಜೋನ ಸೇರಿ ಏಳು ರಾಜ್ಯಗಳ ಮೂಡ್ ಮಾತ್ರ ಯಾವ ಪಕ್ಷದತ್ತ ಇರುತ್ತೆ ಎನ್ನುವುದು ಗೊತ್ತಾಗಲ್ಲ. ಈ ರಾಜ್ಯಗಳಲ್ಲಿ ಪ್ರಚಾರಕ್ಕೆ ಅಭ್ಯರ್ಥಿಗಳು ಹೆಚ್ಚು ಆದ್ಯತೆ ನೀಡ್ತಾರೆ. ಈ ರಾಜ್ಯಗಳ ಎಲೆಕ್ಟೋರಲ್ ಮತಗಳ ಸಂಖ್ಯೆ 93. ಈ ಪೈಕಿ ಹೆಚ್ಚು ಮತ ಗಳಿಸುವ ಅಭ್ಯರ್ಥಿಗಳು ಅಧ್ಯಕ್ಷ ಪೀಠವನ್ನು ಏರುತ್ತಾರೆ. ಅಂದ ಹಾಗೇ, ಈಗಾಗಲೇ 6.8 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
538 ಎಲೆಕ್ಚರ್ಸ್ ಅಮೆರಿಕಾದ ಅಧ್ಯಕ್ಷರ ಭವಿಷ್ಯ ನಿರ್ಧರಿಸಲಿವೆ. ಅಮೆರಿಕ ಅಧ್ಯಕ್ಷರಾಗಲು ಕನಿಷ್ಠ 270 ಮತಗಳ ಅಗತ್ಯವಿದೆ. ಜನರು ಇಲ್ಲಿ ನೇರವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ. ಪ್ರತಿಯೊಂದು ರಾಜ್ಯವು ಜನ ಸಂಖ್ಯೆಗೆ ಅನುಗುಣವಾಗಿ ನಿರ್ದಿಷ್ಟ ಸಂಖ್ಯೆಯ ಜನಪ್ರತನಿಧಿಗಳನ್ನು ಒಳಗೊಂಡಿದೆ. ಕ್ಯಾಲಿಫೋರ್ನಿಯಾ 54 ಸ್ಥಾನಗಳೊಂದಿಗೆ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಹೊಂದಿದೆ. ನಂತರ ಟೆಕ್ಸಾಸ್ (40) ಮತ್ತು ಫ್ಲೋರಿಡಾ (30). ಮತ್ತೊಂದೆಡೆ, ಉತ್ತರ ಡಕೋಟಾ, ದಕ್ಷಿಣ ಡಕೋಟಾ, ಡೆಲವೇರ್ ಮತ್ತು ವರ್ಮೊಂಟ್‌ನಂತಹ ರಾಜ್ಯಗಳು ಕನಿಷ್ಠ 3 ಸ್ಥಾನಗಳನ್ನು ಹೊಂದಿವೆ. ಇದನ್ನೂ ಓದಿ: US Election 2024 | ಮತ ಎಣಿಕೆ ಯಾವಾಗ? ಸಂಖ್ಯೆ 270ಕ್ಕೆ ಯಾಕೆ ಮಹತ್ವ?
ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಲಿ ಡೆಮಾಕ್ರಟಿಕ್ ಪಕ್ಷದಿಂದ ಅಭ್ಯರ್ಥಿಯಾಗಿದ್ದು, ಅವರು ಯುಎಸ್‌ನ ಮೊದಲ ಮಹಿಳೆ ಎಂಬ ಇತಿಹಾಸವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದಾರೆ. ಅವರು ಆಯ್ಕೆಯಾದರೆ, ಯುನೈಟೆಡ್ ಸ್ಟೇಟ್ಸ್‌ನ ಮೊದಲ ಭಾರತೀಯ ಮೂಲದ ಅಧ್ಯಕ್ಷರೂ ಆಗುತ್ತಾರೆ. ಮತ್ತೊಂದೆಡೆ, ರಿಪಬ್ಲಿಕನ್ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020 ರಲ್ಲಿ ಕಹಿ ನಿರ್ಗಮನದ ನಂತರ ಶ್ವೇತಭವನಕ್ಕೆ ಐತಿಹಾಸಿಕ ಪುನರಾಗಮನವನ್ನು ಬಯಸಿದ್ದಾರೆ.
ಮತದಾನದ ಸಮಯದಲ್ಲಿ ಪ್ರತಿ ರಾಜ್ಯಕ್ಕೂ ಸಮಯದಲ್ಲಿ ಬದಲಾವಣೆ ಇರುತ್ತದೆ. ಅಮೆರಿಕ ಕಾಲಮಾನದ ಪ್ರಕಾರ, ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆ ವರೆಗೆ ಮತದಾನ ನಡೆಯುತ್ತದೆ.
ಮೊದಲ ಮತದಾನವು ಜಾರ್ಜಿಯಾ ಸೇರಿದಂತೆ ಆರು ರಾಜ್ಯಗಳಲ್ಲಿ ಸುಮಾರು 7 pm ET (5:30 am ಭಾರತೀಯ ಸಮಯ) ಕ್ಕೆ ಮುಕ್ತಾಯಗೊಳ್ಳಲಿದೆ. ಅಂತಿಮ ಮತದಾನವು ನೀಲಿ ರಾಜ್ಯವಾದ ಹವಾಯಿಯಲ್ಲಿ ಮತ್ತು ಕೆಂಪು ರಾಜ್ಯವಾದ ಅಲಾಸ್ಕಾದಲ್ಲಿ 12 am ET (10:30 am ಭಾರತೀಯ ಕಾಲಮಾನ) ಕ್ಕೆ ಮುಕ್ತಾಯಗೊಳ್ಳುತ್ತದೆ. 1 pm ET (11:30 am ಭಾರತೀಯ ಕಾಲಮಾನ) ಕ್ಕೆ ಮತದಾನ ಮುಕ್ತಾಯಗೊಳ್ಳಲಿದ್ದು, ನಂತರ ಮತ ಎಣಿಕೆ ಪ್ರಾರಂಭವಾಗಲಿದೆ. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲೂ ಹಿಂದೂ ಅಸ್ತ್ರ ಪ್ರಯೋಗ – ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಟ್ರಂಪ್
ಸ್ವಿಂಗ್ ರಾಜ್ಯಗಳೇ ನಿರ್ಣಾಯಕ
ಅಮೆರಿಕ ಅಧ್ಯಕ್ಷ ಭವಿಷ್ಯವನ್ನು ಸ್ವಿಂಗ್ ರಾಜ್ಯಗಳು ನಿರ್ಧರಿಸಲಿವೆ. ಒಟ್ಟು 50 ರಾಜ್ಯಗಳಿದ್ದರೂ ಈ ಏಳು ರಾಜ್ಯಗಳ ಮೇಲೆಯೇ ಸ್ಪರ್ಧಿಗಳ ಕಣ್ಣಿರುತ್ತದೆ. ಏಳು ರಾಜ್ಯಗಳು ಹೊರತುಪಡಿಸಿ ಬಾಕಿ ರಾಜ್ಯಗಳಲ್ಲಿ ಎರಡು ಪಕ್ಷಗಳಿಗೆ ಸಾಂಪ್ರದಾಯಿಕ ಮತಗಳು ಇವೆ. ಉತ್ತರ ಕೆರೊಲಿನಾ, ಅರಿಜೋನಾ, ಜಾರ್ಜಿಯಾ, ನೆವಾಡಾ, ಮಿಷಿಗನ್, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ನಿರ್ಣಾಯಕ ರಾಜ್ಯಗಳಾಗಿವೆ. ಪ್ರತಿ ಬಾರಿಯೂ ಇಲ್ಲಿ ಜನರು ಪಕ್ಷದ ಆಯ್ಕೆ ಬದಲಿಸುತ್ತಾರೆ. ಈ ರಾಜ್ಯಗಳನ್ನು ಯಾರು ಗೆಲ್ಲುತ್ತಾರೋ ಅವರು ಅಧ್ಯಕ್ಷ ಸ್ಥಾನಕ್ಕೇರಲಿದ್ದಾರೆ.
ವಾಷಿಂಗ್ಟನ್: ಅಮೆರಿಕ ಚುನಾವಣೆಗೆ (US Election) ಇನ್ನು ಒಂದು ದಿನ ಬಾಕಿಯಿದೆ. ಆದರೆ ಈಗಾಗಲೇ ಸುಮಾರು 7.7 ಕೋಟಿ ಜನ ಮತದಾನ (Early Voting) ಮಾಡಿದ್ದಾರೆ.
ಹೌದು. ಮಂಗಳವಾರ ಅಮೆರಿಕದಲ್ಲಿ ಚುನಾವಣೆ ನಡೆಯಲಿದೆ. ಆದರೆ ಅಮೆರಿಕದಲ್ಲಿ ಸುಮಾರು ಎರಡು ವಾರಗಳ ಮೊದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಅದರಲ್ಲೂ ಈ ಬಾರಿ ಭಾರೀ ಪ್ರಮಾಣದಲ್ಲಿ ಮೊದಲೇ ಮತದಾನ ಮಾಡಲು ಜನರು ಆಸಕ್ತಿ ತೋರಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಕಮಲಾ ಹ್ಯಾರಿಸ್ (Kamala Harris) ಮಧ್ಯೆ ನೇರಾನೇರ ಸ್ಪರ್ಧೆ ಇದ್ದು ಸೋಲಿನ ಅಂತರ ಬಹಳ ಕಡಿಮೆ ಇರಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ಕಳೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ರಿಪಬ್ಲಿಕನ್ ಪಕ್ಷ (Republican Party) ಆರೋಪಿಸಿತ್ತು. ನಂತರ ಸಂಸತ್ ಮೇಲೆ ದಾಳಿ ನಡೆದಿತ್ತು. ಹೀಗಾಗಿ ಟ್ರಂಪ್ ಅವರು ಈ ಬಾರಿಯ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಮೊದಲೇ ಮತದಾನ ಮಾಡುವಂತೆ ಬೆಂಬಲಿಗರಿಗೆ ಮನವಿ ಮಾಡುತ್ತಿದ್ದರು. ಈ ಕಾರಣಕ್ಕೆ ಈ ಬಾರಿ ಭಾರೀ ಪ್ರಮಾಣದಲ್ಲಿ ಮೊದಲೇ ಮತದಾನ ನಡೆದಿದೆ. ಅದಲ್ಲೂ ರಿಪಬ್ಲಿಕನ್ ಪಕ್ಷದ ಬೆಂಬಲಿಗರೇ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲೂ ಹಿಂದೂ ಅಸ್ತ್ರ ಪ್ರಯೋಗ – ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಟ್ರಂಪ್
ಮೊದಲೇ ಮತದಾನ ಮಾಡಿದ್ದರಿಂದ ಚುನಾವಣಾ ಸಮೀಕ್ಷೆಗಳಿಗೆ ನಿಖರ ಫಲಿತಾಂಶವನ್ನು ಊಹಿಸಲು ಸಹಾಯವಾಗುತ್ತದೆ.
ATLAS POLL – SWING STATES
Trump leads in the swing states, with particularly significant margins in Arizona and Nevada. The race remains tight in the key states of the Rust Belt (MI, WI, and PA). pic.twitter.com/UFStAWretz
ನಿರ್ಣಾಯಕ ರಾಜ್ಯಗಳು:
ಅಮೆರಿಕ ಚುನಾವಣೆ ನಾರ್ಥ್ ಕೆರೊಲಿನಾ, ಅರಿಜೋನಾ, ಜಾರ್ಜಿಯಾ, ನೆವಾಡಾ, ಮಿಷಿಗನ್, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ನಿರ್ಣಾಯಕ ರಾಜ್ಯಗಳಾಗಿವೆ. ಈ ರಾಜ್ಯಗಳನ್ನು ಯಾರು ಗೆಲ್ಲುತ್ತಾರೋ ಅವರು ಅಧ್ಯಕ್ಷ ಸ್ಥಾನ ಅಲಂಕರಿಸುತ್ತಾರೆ.
ಈ ರಾಜ್ಯದ ಜನತೆ ಒಂದು ಬಾರಿ ರಿಪಬ್ಲಿಕನ್ ಅಭ್ಯರ್ಥಿಗೆ ಮತ ಹಾಕಿದರೆ ಇನ್ನೊಂದು ಬಾರಿ ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸುತ್ತಾರೆ. ಹೀಗಾಗಿ ಅಧಿಕೃತವಾಗಿ ಒಂದೇ ಪಕ್ಷವನ್ನು ಬೆಂಬಲಿಸುತ್ತಾರೆ ಎನ್ನುವುದಕ್ಕೆ ಗ್ಯಾರಂಟಿ ಇಲ್ಲ. ಈ ಕಾರಣಕ್ಕೆ ಚುನಾವಣಾ ಫಲಿತಾಂಶವನ್ನೇ ಬದಲಿಸಬಲ್ಲ ಈ ರಾಜ್ಯಗಳನ್ನು ʼSwing States’ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೇ ಈ ರಾಜ್ಯಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರ ಬಹಳ ಕಡಿಮೆ ಇರುತ್ತದೆ. ಇದನ್ನೂ ಓದಿ: US Election 2024 | ಮತ ಎಣಿಕೆ ಯಾವಾಗ? ಸಂಖ್ಯೆ 270ಕ್ಕೆ ಯಾಕೆ ಮಹತ್ವ?
ATLAS POLL – AMERICAN ELECTIONS
Kamala Harris’s support remains stable since the launch of her campaign. Trump shows a slight fluctuation, reaching 49% in voting intention.
2016ರಲ್ಲಿ ಹಿಲರಿ ಕ್ಲಿಂಟನ್ ಅವರನ್ನು ಸೋಲಿಸಿ ಟ್ರಂಪ್ ಅಧಿಕಾರಕ್ಕೆ ಏರಲು ಮತ್ತು 2020ರಲ್ಲಿ ಟ್ರಂಪ್ ಅವರನ್ನು ಸೋಲಿಸಿ ಜೋ ಬೈಡೆನ್ ಅವರು ಅಧ್ಯಕ್ಷ ಸ್ಥಾನಕ್ಕೆ ಏರಲು ಈ ರಾಜ್ಯಗಳೇ ನಿರ್ಣಾಯವಾಗಿದ್ದವು. ಹೀಗಾಗಿ ಈ 7 ರಾಜ್ಯಗಳಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ. ಆದರೆ ಸದ್ಯ ಈ ರಾಜ್ಯಗಳಲ್ಲಿ ಡೊನಾಲ್ಡ್ ಟ್ರಂಪ್ ಮುನ್ನಡೆಯಲ್ಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ.
ವಾಷಿಂಗ್ಟನ್: ಅಮೆರಿಕ ಚುನಾವಣೆಗೆ ಇನ್ನು ಎರಡು ದಿನ ಬಾಕಿಯಿದೆ. ಚುನಾವಣಾ ದಿನಾಂಕ ಹತ್ತಿರ ಬರುತ್ತಿದ್ದಂತೆ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ (Kamala Harris) ಮಧ್ಯೆ ನೇರಾನೇರ ಸ್ಪರ್ಧೆಯಿದೆ. ನೇರಾನೇರ ಸ್ಪರ್ಧೆಯಿದ್ದರೂ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು 7 ರಾಜ್ಯದ ಜನತೆ.
ಹೌದು. ಅಮೆರಿಕದಲ್ಲಿ ನೇರವಾಗಿ ಅಧ್ಯಕ್ಷ ಅಭ್ಯರ್ಥಿಗಳಿಗೆ ಜನರು ಮತವನ್ನು ಹಾಕುವುದಿಲ್ಲ. ಅದರ ಬದಲು ʼಎಲೆಕ್ಟರ್ಸ್ʼಗೆ ಮತವನ್ನು ಹಾಕುತ್ತಾರೆ. ಜನಸಂಖ್ಯೆಯ ಆಧಾರದಲ್ಲಿ ಪ್ರತಿಯೊಂದು ರಾಜ್ಯವು ಸಂಸತ್ತಿನಲ್ಲಿ ಹೊಂದಿರುವ ಸ್ಥಾನಗಳನ್ನು ವಿಂಗಡಿಸಲಾಗಿದೆ.
ATLAS POLL – AMERICAN ELECTIONS
Kamala Harris’s support remains stable since the launch of her campaign. Trump shows a slight fluctuation, reaching 49% in voting intention.
55 ಎಲೆಕ್ಟೋರಲ್ ವೋಟ್ಗಳೊಂದಿಗೆ ಕ್ಯಾಲಿಫೋರ್ನಿಯಾ ಮೊದಲ ಸ್ಥಾನದಲ್ಲಿದ್ದರೆ 38 ವೋಟ್ಗಳೊಂದಿಗೆ ಟೆಕ್ಸಾಸ್, ನ್ಯೂಯಾರ್ಕ್ ಮತ್ತು ಫ್ಲೋರಿಡಾ ತಲಾ 29, ಇಲಿನಾಯ್ಸ್ ಮತ್ತು ಪೆನ್ಸಿಲ್ವೇನಿಯಾ ತಲಾ 19, ಓಹಿಯೊ 18, ಜಾರ್ಜಿಯಾ ಮತ್ತು ಮಿಷಿಗನ್ ತಲಾ 16 ಹಾಗೂ ನಾರ್ತ್ ಕರೊಲಿನಾ 15 ಎಲೆಕ್ಟೋರಲ್ ಮತಗಳನ್ನು ಹೊಂದಿವೆ.
ಅಮೆರಿಕದಲ್ಲಿ ಒಟ್ಟು 538 ಎಲೆಕ್ಟೋರಲ್ ಮತಗಳು ಇದೆ. ಈ ಪೈಕಿ 270 ಮತ ಪಡೆದವರು ವಿಜಯಿ ಎಂದು ಘೋಷಿಸಲಾಗುತ್ತದೆ. ಈ ಮತದಾರರು ನಂತರ ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ನೇರ ಮತಗಳನ್ನು ಹಾಕುತ್ತಾರೆ. ಅದನ್ನು ಚುನಾವಣಾ ಮತಗಳು ಎಂದು ಕರೆಯಲಾಗುತ್ತದೆ.
ಮೊದಲೇ ಹೇಳಿದಂತೆ 7 ರಾಜ್ಯದ ಜನತೆ ಯಾವ ಪಕ್ಷಕ್ಕೆ ಹೆಚ್ಚು ಮತಗಳನ್ನು ಹಾಕುತ್ತಾರೋ ಅವರು ಆಯ್ಕೆ ಆಗುತ್ತಾರೆ. ಆದರೆ ಜನತೆ ಮತ ಮಾಡುವಾಗ ಅಭ್ಯರ್ಥಿ ಮತ್ತು ಪಕ್ಷವನ್ನು ನೋಡಿಕೊಂಡೇ ಮತವನ್ನು ಹಾಕುತ್ತಾರೆ. ಹೀಗಾಗಿ ಎಲೆಕ್ಟರ್ಸ್‌ಗೆ ಮತ ಹಾಕಿದರೂ ಅದು ಅಧ್ಯಕ್ಷನಿಗೆ ಬಿದ್ದ ಮತ ಎಂದೇ ಪರಿಗಣಿಸಲಾಗುತ್ತದೆ.
ನಿರ್ಣಾಯಕ ರಾಜ್ಯಗಳು:
ಅಮೆರಿಕ ಚುನಾವಣೆ ನಾರ್ಥ್ ಕೆರೊಲಿನಾ, ಅರಿಜೋನಾ, ಜಾರ್ಜಿಯಾ, ನೆವಾಡಾ, ಮಿಷಿಗನ್, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ನಿರ್ಣಾಯಕ ರಾಜ್ಯಗಳಾಗಿವೆ. ಈ ರಾಜ್ಯಗಳನ್ನು ಯಾರು ಗೆಲ್ಲುತ್ತಾರೋ ಅವರು ಅಧ್ಯಕ್ಷ ಸ್ಥಾನ ಅಲಂಕರಿಸುತ್ತಾರೆ.
ಈ ರಾಜ್ಯದ ಜನತೆ ಒಂದು ಬಾರಿ ರಿಪಬ್ಲಿಕನ್ ಅಭ್ಯರ್ಥಿಗೆ ಮತ ಹಾಕಿದರೆ ಇನ್ನೊಂದು ಬಾರಿ ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸುತ್ತಾರೆ. ಹೀಗಾಗಿ ಅಧಿಕೃತವಾಗಿ ಒಂದೇ ಪಕ್ಷವನ್ನು ಬೆಂಬಲಿಸುತ್ತಾರೆ ಎನ್ನುವುದಕ್ಕೆ ಗ್ಯಾರಂಟಿ ಇಲ್ಲ. ಈ ಕಾರಣಕ್ಕೆ ಚುನಾವಣಾ ಫಲಿತಾಂಶವನ್ನೇ ಬದಲಿಸಬಲ್ಲ ಈ ರಾಜ್ಯಗಳನ್ನು ʼSwing States’ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೇ ಈ ರಾಜ್ಯಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರ ಬಹಳ ಕಡಿಮೆ ಇರುತ್ತದೆ.
ATLAS POLL – SWING STATES
Trump leads in the swing states, with particularly significant margins in Arizona and Nevada. The race remains tight in the key states of the Rust Belt (MI, WI, and PA). pic.twitter.com/UFStAWretz
ಮುನ್ನಡೆಯಲ್ಲಿ ಟ್ರಂಪ್:
2016ರಲ್ಲಿ ಹಿಲರಿ ಕ್ಲಿಂಟನ್ ಅವರನ್ನು ಸೋಲಿಸಿ ಟ್ರಂಪ್ ಅಧಿಕಾರಕ್ಕೆ ಏರಲು ಮತ್ತು 2020ರಲ್ಲಿ ಟ್ರಂಪ್ ಅವರನ್ನು ಸೋಲಿಸಿ ಜೋ ಬೈಡೆನ್ ಅವರು ಅಧ್ಯಕ್ಷ ಸ್ಥಾನಕ್ಕೆ ಏರಲು ಈ ರಾಜ್ಯಗಳೇ ನಿರ್ಣಾಯವಾಗಿದ್ದವು. ಹೀಗಾಗಿ ಈ 7 ರಾಜ್ಯಗಳಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ. ಆದರೆ ಸದ್ಯ ಈ ರಾಜ್ಯಗಳಲ್ಲಿ ಡೊನಾಲ್ಡ್ ಟ್ರಂಪ್ ಮುನ್ನಡೆಯಲ್ಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ.
ಯಾವ ರಾಜ್ಯದಲ್ಲಿ ಎಷ್ಟು ವೋಟ್? ನಾರ್ಥ್ ಕೆರೊಲಿನಾ (16 ಎಲೆಕ್ಟ್ರೋರಲ್ ವೋಟ್ಸ್)
2016 – ಟ್ರಂಪ್‌ಗೆ ಜಯ (ಟ್ರಂಪ್ 50.5%, ಕ್ಲಿಂಟನ್ 46.8%)
2020 – ಟ್ರಂಪ್‌ಗೆ ಜಯ (ಟ್ರಂಪ್ 50.1%, ಕ್ಲಿಂಟನ್ 48.7%)
ಅರಿಜೋನಾ (11 ಎಲೆಕ್ಟ್ರೋರಲ್ ವೋಟ್ಸ್)
2016 – ಟ್ರಂಪ್‌ಗೆ ಜಯ (ಟ್ರಂಪ್ 49%, ಕ್ಲಿಂಟನ್ 45.5%)
2020 – ಬೈಡನ್‌ಗೆ ಜಯ (ಬೈಡನ್ 49.4%, ಟ್ರಂಪ್ 49.1%)
ನೆವಾಡ (6 ಎಲೆಕ್ಟ್ರೋರಲ್ ವೋಟ್ಸ್)
2016 – ಕ್ಲಿಂಟನ್‌ಗೆ ಜಯ (ಕ್ಲಿಂಟನ್ 47.9%, ಟ್ರಂಪ್ 45.5%)
2020 – ಬೈಡನ್‌ಗೆ ಜಯ (ಬೈಡನ್ 50.1%, ಟ್ರಂಪ್ 47.7%)
ಜಾರ್ಜಿಯಾ (16 ಎಲೆಕ್ಟ್ರೋರಲ್ ವೋಟ್ಸ್)
2016 – ಟ್ರಂಪ್‌ಗೆ ಗೆಲುವು (ಟ್ರಂಪ್ 51%, ಕ್ಲಿಂಟನ್ 45.9%)
2020 – ಬೈಡನ್‌ಗೆ ಗೆಲುವು (ಬೈಡನ್ 49.5%, ಟ್ರಂಪ್ 49.3%)
ಮಿಷಿಗನ್ (15 ಎಲೆಕ್ಟ್ರೋರಲ್ ವೋಟ್ಸ್)
2016 – ಟ್ರಂಪ್‌ಗೆ ಗೆಲುವು (ಟ್ರಂಪ್ 47.6%, ಕ್ಲಿಂಟನ್ 47.4%)
2020- ಬೈಡನ್‌ಗೆ ಗೆಲುವು (ಬೈಡನ್ 50.6%, ಟ್ರಂಪ್ 47.8%
ವಿಸ್ಕಾನ್ಸಿನ್(10 ಎಲೆಕ್ಟ್ರೋರಲ್ ವೋಟ್ಸ್)
2016 – ಟ್ರಂಪ್‌ಗೆ ಗೆಲುವು (ಟ್ರಂಪ್ 47.8%, ಕ್ಲಿಂಟನ್ 47%)
2020 – ಬೈಡನ್‌ಗೆ ಗೆಲುವು (ಬೈಡಬ್ 49.6%, ಟ್ರಂಪ್ 48.9%)
ELECTORAL COLLEGE PROJECTION
With these results, Trump would win the Electoral College, with 287 votes against Harris’ 226. The Vice-President would have to overcome the Republican’s lead in Pennsylvania in order to have a chance of victory. pic.twitter.com/MphEu7k1k5
ವಾಷಿಂಗ್ಟನ್: ಇಡೀ ವಿಶ್ವವೇ ಗಮನಿಸುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್ 5 ರಂದು ನಡೆಯಲಿದೆ. ಚುನಾವಣಾ ದಿನಾಂಕ ಹತ್ತಿರ ಬರುತ್ತಿದ್ದಂತೆ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ (Kamala Harris) ಮಧ್ಯೆ ನೇರಾನೇರ ಸ್ಪರ್ಧೆಯಿದ್ದು ಈ ಬಾರಿ ಅಧ್ಯಕ್ಷರಾಗಿ ಯಾರು ಆಯ್ಕೆ ಆಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಹಾಲಿ ಅಧ್ಯಕ್ಷ ಜೋ ಬೈಡೆನ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆ ಎಂದಾಗ ಟ್ರಂಪ್ ಗ್ರಾಫ್ ಏರಿತ್ತು. ನಂತರ ಜೋ ಬೈಡನ್ ರೇಸ್‌ನಿಂದ ಹಿಂದಕ್ಕೆ ಸರಿದು ಕಮಲಾ ಹ್ಯಾರಿಸ್ ಸ್ಪರ್ಧೆಗೆ ಇಳಿದಾಗ ಟಂಪ್ ಗ್ರಾಫ್ ಸ್ವಲ್ಪ ಇಳಿಕೆಯಾಗಿತ್ತು. ಆದರೆ ಅಕ್ಟೋಬರ್ ಕೊನೆಯ ವಾರದಲ್ಲಿ ಇಬ್ಬರ ಮಧ್ಯೆ ಭಾರೀ ಸ್ಪರ್ಧೆ ಇರುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ನವೆಂಬರ್ 5 ಯಾಕೆ?
ಅಮೆರಿಕದಲ್ಲಿ ಈ ಬಾರಿ ನವೆಂಬರ್ 5 ರಂದು ಚುನಾವಣೆ ನಡೆಯುತ್ತದೆ. ನ.5 ರಂದು ಚುನಾವಣೆ ನಡೆಯಲು ಕಾರಣ ಇದೆ. ಅಮೆರಿಕದಲ್ಲಿ ಪ್ರತಿ 4 ವರ್ಷಗಳಿಗೊಮ್ಮೆ ಚುನಾವಣೆ ನಡೆಯಲಿದೆ. ಅಲ್ಲಿನ ಸಂವಿಧಾನದ ಪ್ರಕಾರ ನವೆಂಬರ್ ತಿಂಗಳ ಮೊದಲ ಮಂಗಳವಾರ ಚುನಾವಣೆ ನಡೆಯಬೇಕು. ಹೀಗಾಗಿ ಪ್ರತಿ ಬಾರಿ ನವೆಂಬರ್‌ನಲ್ಲೇ ಚುನಾವಣೆ ನಡೆಯುತ್ತಾ ಬಂದಿದೆ. ಅಮರಿಕದ ಕಾಲಮಾನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲೂ ಹಿಂದೂ ಅಸ್ತ್ರ ಪ್ರಯೋಗ – ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಟ್ರಂಪ್
ಚುನಾವಣೆ ಹೇಗೆ ನಡೆಯುತ್ತದೆ?
ಅಮೆರಿಕದಲ್ಲಿ ನೇರವಾಗಿ ಅಧ್ಯಕ್ಷ ಅಭ್ಯರ್ಥಿಗಳಿಗೆ ಜನರು ಮತವನ್ನು ಹಾಕುವುದಿಲ್ಲ. ಅದರ ಬದಲು ʼಎಲೆಕ್ಟರ್ಸ್ʼಗೆ ಮತವನ್ನು ಹಾಕುತ್ತಾರೆ. ಜನ ಸಂಖ್ಯೆಯ ಆಧಾರದಲ್ಲಿ ಪ್ರತಿಯೊಂದು ರಾಜ್ಯವು ಸಂಸತ್ತಿನಲ್ಲಿ ಹೊಂದಿರುವ ಸ್ಥಾನಗಳನ್ನು ವಿಂಗಡಿಸಲಾಗಿದೆ. ಇದನ್ನೂ ಓದಿ: ಕಮಲಾಗೆ ಶಾಕ್ – ಟ್ರಂಪ್ ಪರ ಅನಿವಾಸಿ ಭಾರತೀಯರ ಒಲವು ಏರಿಕೆ
55 ಎಲೆಕ್ಟೋರಲ್ ವೋಟ್ಗಳೊಂದಿಗೆ ಕ್ಯಾಲಿಫೋರ್ನಿಯಾ ಮೊದಲ ಸ್ಥಾನದಲ್ಲಿದ್ದರೆ 38 ವೋಟ್ಗಳೊಂದಿಗೆ ಟೆಕ್ಸಾಸ್, ನ್ಯೂಯಾರ್ಕ್ ಮತ್ತು ಫ್ಲೋರಿಡಾ ತಲಾ 29, ಇಲಿನಾಯ್ಸ್ ಮತ್ತು ಪೆನ್ಸಿಲ್ವೇನಿಯಾ ತಲಾ 20, ಓಹಿಯೊ 18, ಜಾರ್ಜಿಯಾ ಮತ್ತು ಮಿಚಿಗನ್ ತಲಾ 16 ಹಾಗೂ ನಾರ್ತ್ ಕರೊಲಿನಾ 15 ಎಲೆಕ್ಟೋರಲ್ ಮತಗಳನ್ನು ಹೊಂದಿವೆ.
ಅಮೆರಿಕದಲ್ಲಿ ಒಟ್ಟು 538 ಎಲೆಕ್ಟೋರಲ್ ಮತಗಳು ಇದೆ. ಈ ಪೈಕಿ 270 ಮತ ಪಡೆದವರು ವಿಜಯಿ ಎಂದು ಘೋಷಿಸಲಾಗುತ್ತದೆ. ಈ ಮತದಾರರು ನಂತರ ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ನೇರ ಮತಗಳನ್ನು ಹಾಕುತ್ತಾರೆ. ಅದನ್ನು ಚುನಾವಣಾ ಮತಗಳು ಎಂದು ಕರೆಯಲಾಗುತ್ತದೆ.
ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸಲು ಜಾರ್ಜಿಯಾ, ಮಿಷಿಗನ್, ಅರಿಝೋನಾ, ಪೆನ್ಸಿಲ್ವೇನಿಯಾ, ನಾರ್ತ್ ಕೆರೊಲಿನಾ, ವಿಸ್ಕಾನ್ಸಿನ್ ಮತ್ತು ನೆವಾಡಾ ಈ ಏಳು ರಾಜ್ಯಗಳು ನಿರ್ಣಾಯಕ ಎನಿಸಿವೆ. ಈ ಕಾರಣಕ್ಕೆ ಟ್ರಂಪ್ ಮತ್ತು ಹ್ಯಾರಿಸ್ ಈ ರಾಜ್ಯಗಳಲ್ಲಿ ಹೆಚ್ಚಿನ ಪ್ರಚಾರಗಳನ್ನು ನಡೆಸಿದ್ದಾರೆ. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲಿ ಈಗ ʼಕಸʼ ಪಾಲಿಟಿಕ್ಸ್ – ಕಸದ ಲಾರಿ ಚಲಾಯಿಸಿ ಬೈಡನ್‌ಗೆ ಟ್ರಂಪ್ ಟಾಂಗ್
ಮತ ಎಣಿಕೆ ಯಾವಾಗ?
ಈಗಾಗಲೇ ಸುಮಾರು 6.83 ಕೋಟಿ ಜನ ಮೊದಲೇ ಮತದಾನ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಚುನಾವಣೆ ನಡೆದ ದಿನವಾದ ನ.5 ರಂದೇ ಮತ ಎಣಿಕೆ ಆರಂಭವಾಗುತ್ತದೆ. ಈ ಮತ ಎಣಿಕೆ ಫಲಿತಾಂಶ ಪ್ರಕಟವಾಗಲು ಹಲವು ದಿನಗಳನ್ನು ತೆಗೆದುಕೊಳ್ಳುತ್ತದೆ. ಕಳೆದ ಬಾರಿ ಜೋ ಬೈಡೆನ್ ಫಲಿತಾಂಶ ಮತ ಎಣಿಕೆ ಆರಂಭವಾದ 4 ದಿನಗಳ ನಂತರ ಪ್ರಕಟವಾಗಿತ್ತು. 2016 ರಲ್ಲಿ ಚುನಾವಣೆ ಕಳೆದ ಮರುದಿನವೇ ಫಲಿತಾಂಶ ಪ್ರಕಟವಾಗಿತ್ತು.
ಡಿ.17 ರಂದು ಮತದಾನ
ಎಲೆಕ್ಟರ್ಸ್ ಡಿ.17 ರಂದು ಅಮೆರಿಕದ ಕಾಂಗ್ರೆಸ್(ಸಂಸತ್‌ನಲ್ಲಿ) ಅಧ್ಯಕ್ಷ ಚುನಾಣೆಯ ಅಭ್ಯರ್ಥಿಗಳಿಗೆ ಮತವನ್ನು ಹಾಕುತ್ತಾರೆ. ಜ.06 ರಂದು ಸಂಸತ್ತಿನ ಜಂಟಿ ಅಧಿವೇಶನ ನಡೆಯುವ ಮತ ಎಣಿಕೆ ನಡೆಯುತ್ತದೆ. ಇಲ್ಲಿ ಯಾರು 270 ಮತಗಳನ್ನು ಪಡೆಯುತ್ತಾರೋ ಅವರನ್ನು ಅಧಿಕೃತವಾಗಿ ವಿಜಯಿ ಎಂದು ಘೋಷಿಸಲಾಗುತ್ತದೆ. ಜನವರಿ 20 ರಂದು ಅಮೆರಿಕ ಅಧ್ಯಕ್ಷರ ಪ್ರಮಾಣವಚನ ನಡೆಯಲಿದೆ.
ಮೊದಲೇ ಫಲಿತಾಂಶ ಪ್ರಕಟ:
ಅಧಿಕೃತ ಫಲಿತಾಂಶ ಪ್ರಕಟಗೊಳ್ಳಲು ಹಲವು ದಿನಗಳನ್ನು ತೆಗೆದುಕೊಂಡೂ ಅಮೆರಿಕದ ಮಾಧ್ಯಮಗಳು ಚುನಾವಣೆ ಮುಕ್ತಾಯಗೊಂಡು ಮತ ಎಣಿಕೆ ನಡೆಯುವ ಸಮಯದಲ್ಲೇ ಫಲಿತಾಂಶವನ್ನು ಪ್ರಕಟಿಸುತ್ತವೆ.
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಿಂದೂ ಅಸ್ತ್ರ ಪ್ರಯೋಗಿಸಿದ್ದಾರೆ.
ಅಮೆರಿಕಾದ ಹಿಂದೂಗಳಿಗೆ ದೀಪಾವಳಿ ಶುಭಾಶಯ ತಿಳಿಸಿದ ಟ್ರಂಪ್, ಇತ್ತೀಚಿಗೆ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ. ತಾನು ಅಧ್ಯಕ್ಷನಾದ್ರೆ ಭಾರತದ ಜೊತೆಗಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ಭರವಸೆ ನೀಡಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಹಿಂದೂಗಳ ಬಗ್ಗೆ ಕಾಳಜಿ ಇಲ್ಲ ಎಂದು ಟ್ರಂಪ್ ಟೀಕಿಸಿದ್ದಾರೆ. ಅಂದಹಾಗೇ, ಅಮೆರಿಕಾದಲ್ಲಿ ಈವರೆಗೂ 6.1 ಕೋಟಿ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.