Tag: donald trump

  • ಉಕ್ರೇನ್‌ನಲ್ಲಿ ಯುದ್ಧವನ್ನು ಉಲ್ಬಣಗೊಳಿಸಬೇಡಿ: ಪುಟಿನ್‌ಗೆ ಕರೆ ಮಾಡಿ ಮಾತಾಡಿದ ಟ್ರಂಪ್‌

    ಉಕ್ರೇನ್‌ನಲ್ಲಿ ಯುದ್ಧವನ್ನು ಉಲ್ಬಣಗೊಳಿಸಬೇಡಿ: ಪುಟಿನ್‌ಗೆ ಕರೆ ಮಾಡಿ ಮಾತಾಡಿದ ಟ್ರಂಪ್‌

    ನ್ಯೂಯಾರ್ಕ್‌: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಅವರೊಂದಿಗೆ ಮಾತನಾಡಿದ್ದಾರೆ. ಉಕ್ರೇನ್‌ನಲ್ಲಿ ಯುದ್ಧವನ್ನು ಉಲ್ಬಣಗೊಳಿಸದಂತೆ ಒತ್ತಾಯಿಸಿದ್ದಾರೆಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

    ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ವಿರುದ್ಧದ ಚುನಾವಣಾ ವಿಜಯದ ಕೆಲವೇ ದಿನಗಳ ನಂತರ ಟ್ರಂಪ್, ಫ್ಲೋರಿಡಾದ ಮಾರ್-ಎ-ಲಾಗೊ ಎಸ್ಟೇಟ್‌ನಿಂದ ಪುಟಿನ್‌ಗೆ ಕರೆ ಮಾಡಿದ್ದಾರೆ ಎಂದು ವರದಿಯಾಗಿದ್ದಾರೆ. ಇದನ್ನೂ ಓದಿ: ಕ್ಯೂಬಾದಲ್ಲಿ ಒಂದೇ ಗಂಟೆಯಲ್ಲಿ 2 ಪ್ರಬಲ ಭೂಕಂಪ

    ಉಕ್ರೇನ್‌ನ ಯುದ್ಧದ ನಿರ್ಣಯವನ್ನು ಶೀಘ್ರದಲ್ಲೇ ಚರ್ಚಿಸಲು ಹೆಚ್ಚಿನ ಮಾತುಕತೆಗೆ ಆಸಕ್ತಿ ಹೊಂದಿದ್ದೇವೆಂದು ಪುಟಿನ್‌ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಹೋರಾಟವನ್ನು ಶೀಘ್ರವಾಗಿ ಕೊನೆಗೊಳಿಸಬೇಕೆಂದು ಎಂಬುದು ಟ್ರಂಪ್‌ ಒತ್ತಾಯವಾಗಿತ್ತು.

    ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬುಧವಾರ ಟ್ರಂಪ್ ಅವರೊಂದಿಗೆ ಮಾತನಾಡಿದರು. ರಿಪಬ್ಲಿಕನ್ ಪಕ್ಷದ ಬಿಲಿಯನೇರ್ ಬೆಂಬಲಿಗ ಎಲೋನ್ ಮಸ್ಕ್ ಅವರು ಕರೆಯಲ್ಲಿ ಅವರೊಂದಿಗೆ ಸೇರಿಕೊಂಡಿದ್ದರು. ಇದನ್ನೂ ಓದಿ: ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಯುವಕರನ್ನ ಪ್ರಚೋದಿಸುತ್ತಿದ್ದ ಖಲಿಸ್ತಾನಿ ಉಗ್ರ ಕೆನಡಾದಲ್ಲಿ ಬಂಧನ

    ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಅವಧಿ ಮುಗಿಯುವವರೆಗೂ ಉಕ್ರೇನ್‌ಗೆ ಸಾಧ್ಯವಾದಷ್ಟು ಸಹಾಯವನ್ನು ಕಳುಹಿಸುವುದಾಗಿ ದೃಢಪಡಿಸಿದ್ದಾರೆ.

  • ಟ್ರಂಪ್‌ಗೆ `ಎಕ್ಸ್‌’ನಲ್ಲಿ ಪಾಕ್ ಪ್ರಧಾನಿ ಅಭಿನಂದನೆ – ಬ್ಯಾನ್ ಮಾಡಿದ್ದ ಸೋಶಿಯಲ್‌ ಮೀಡಿಯಾ ವೇದಿಕೆ ಬಳಸಿದ್ದಕ್ಕೆ ಜನರ ಆಕ್ಷೇಪ

    ಟ್ರಂಪ್‌ಗೆ `ಎಕ್ಸ್‌’ನಲ್ಲಿ ಪಾಕ್ ಪ್ರಧಾನಿ ಅಭಿನಂದನೆ – ಬ್ಯಾನ್ ಮಾಡಿದ್ದ ಸೋಶಿಯಲ್‌ ಮೀಡಿಯಾ ವೇದಿಕೆ ಬಳಸಿದ್ದಕ್ಕೆ ಜನರ ಆಕ್ಷೇಪ

    ಇಸ್ಲಾಮಾಬಾದ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ 2ನೇ ಬಾರಿಗೆ ಗೆಲುವು ಸಾಧಿಸಿದ ಡೊನಾಲ್ಡ್‌ ಟ್ರಂಪ್‌ (Donald Trump0 ಅವರಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ (Shehbaz Sharif) ಎಕ್ಸ್‌ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ನಿಷೇಧಿತ ಎಕ್ಸ್‌ ಖಾತೆ ಪ್ರವೇಶಿಸಲು ಪ್ರಧಾನಿಗಳು ವಿಪಿಎನ್‌ ಬಳಸಿದ್ದಾರೆ. ಇದರಿಂದ ಕಾನೂನು ಉಲ್ಲಂಘನೆಯಾಗಿದೆ ಎಂದು ಜನರಿಂಧ ಆಕ್ರೋಶ ವ್ಯಕ್ತವಾಗಿದೆ.

    ಷರೀಫ್‌ ಎಕ್ಸ್‌ನಲ್ಲಿ ಹೇಳಿದ್ದೇನು?
    ಇತ್ತೀಚೆಗೆ ಅಧ್ಯಕೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಟ್ರಂಪ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಪಾಕಿಸ್ತಾನ-ಅಮೆರಿಕದ (Pakistan – USA) ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ವಿಸ್ತರಿಸಲು ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ – 25ಕ್ಕೂ ಅಧಿಕ ಸಾವು

    ಈ ವರ್ಷಾರಂಭದಲ್ಲಿ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅತ್ತಾವುಲ್ಲಾ ತರಾರ್, ರಾಷ್ಟ್ರೀಯ ಭದ್ರತಾ ಸಮಸ್ಯೆಗಳನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ʻಎಕ್ಸ್ʼ ನಿಷೇಧಿಸುವುದಾಗಿ ಘೋಷಿಸಿದ್ದರು. ಏಕೆಂದರೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA)ಗೆ ಸೇರಿದ ಭಯೋತ್ಪಾದಕರು ದೇಶವಿರೋಧಿ ಚಟುವಟಿಕೆಗಳನ್ನು ಹರಡಲು ʻಎಕ್ಸ್‌ʼ ವೇದಿಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಇಂತಹ ಪರಿಸ್ಥಿತಿ ಇರುವಾಗ ಪಿಎಂ ಷರೀಫ್ ಅಭಿನಂದನೆ ಸಲ್ಲಿಸಲು ಎಕ್ಸ್‌ ಖಾತೆ ಬಳಸಿದ್ದು, ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡೊನಾಲ್ಡ್‌ ಟ್ರಂಪ್‌ಗೆ ರಷ್ಯಾ ಅಧ್ಯಕ್ಷ ಪುಟಿನ್‌ ವಿಶ್‌ – ಮಾತುಕತೆಗೆ ಸಿದ್ಧ ಎಂದ ನಾಯಕರು 

    ಪಾಕ್‌ ಮತ್ತು ಯುಎಸ್‌ ಹಳೆಯ ಸ್ನೇಹಿತರು:
    ಪ್ರಧಾನಿ ಶೆಹಬಾಜ್‌ ಷರೀಫ್‌ ಅವರ ಎಕ್ಸ್‌ ವಿವಾದ ನಡುವೆ ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಮಾತನಾಡಿ, ಪಾಕಿಸ್ತಾನ ಮತ್ತು ಯುಎಸ್ ಹಳೆಯ ಸ್ನೇಹಿತರು ಮತ್ತು ಪಾಲುದಾರರು. ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ನಮ್ಮ ಸಂಬಂಧವು ದಶಕಗಳಷ್ಟು ಹಳೆಯದಾಗಿದೆ. ಟ್ರಂಪ್ ಅವರ 2ನೇ ಅವಧಿಯು ಇಸ್ಲಾಮಾಬಾದ್‌-ಚೀನಾ ಜೊತೆಗಿನ ಸಂಬಂಧದ ಮೇಲೆ ಪರಿಣಾಮ ಬೀರಲ್ಲ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಮುಂದಿನ ವರ್ಷದ ಚುನಾವಣೆಯಲ್ಲಿ ಕೆನಡಾ ಪ್ರಧಾನಿ ಟ್ರುಡೋಗೆ ಸೋಲು : ಮಸ್ಕ್‌ ಭವಿಷ್ಯ

  • ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಟ್ರಂಪ್‌, ಸೋತ ಹ್ಯಾರಿಸ್‌ಗೆ ರಾಹುಲ್‌ ಗಾಂಧಿ ಪತ್ರ

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಟ್ರಂಪ್‌, ಸೋತ ಹ್ಯಾರಿಸ್‌ಗೆ ರಾಹುಲ್‌ ಗಾಂಧಿ ಪತ್ರ

    ನವದೆಹಲಿ: ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್‌ ಟ್ರಂಪ್‌ ಹಾಗೂ ಸೋಲನುಭವಿಸಿದ ಕಮಲಾ ಹ್ಯಾರಿಸ್‌ ಇಬ್ಬರಿಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಪತ್ರ ಬರೆದಿದ್ದಾರೆ.

    ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಿಮಗೆ ಅಭಿನಂದನೆಗಳು. ಅಮೆರಿಕಾದ ಜನರು ನಿಮ್ಮ ಮೇಲೆ ನಂಬಿಕೆ ಇರಿಸಿದ್ದಾರೆ. ಭಾರತ ಮತ್ತು ಅಮೆರಿಕ ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ಬದ್ದತೆ ಇಟ್ಟುಕೊಂಡಿರುವ ದೇಶಗಳು. ನಮ್ಮ ರಾಷ್ಟ್ರಗಳು ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಆಳಗೊಳಿಸುತ್ತವೆ ಎಂಬ ವಿಶ್ವಾಸ ನಮಗಿದೆ. ಭಾರತೀಯರು ಮತ್ತು ಅಮೆರಿಕನ್ನರಿಬ್ಬರಿಗೂ ಮಾರ್ಗಗಳು ಮತ್ತು ಅವಕಾಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್‌ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಎಲೆಕ್ಷನ್ ವಿಕ್ಟರಿ ಫೋಟೋ ಸೆಷನ್‌ನಲ್ಲಿ ಕಾಣಿಸಿಕೊಂಡ ಮಸ್ಕ್ – ಟ್ರಂಪ್ ಪತ್ನಿ ಮೆಲಾನಿಯಾ ಮಿಸ್ಸಿಂಗ್

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಕಮಲಾ ಹ್ಯಾರಿಸ್‌ಗೂ ಪತ್ರ ಬರೆದಿದ್ದು, ನಿಮ್ಮ ಉತ್ಸಾಹಭರಿತ ಅಧ್ಯಕ್ಷೀಯ ಪ್ರಚಾರಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ನಿಮ್ಮ ಒಗ್ಗೂಡಿಸುವ ಭರವಸೆಯ ಸಂದೇಶವು ಅನೇಕರನ್ನು ಪ್ರೇರೇಪಿಸುತ್ತದೆ. ಜೋ ಬೈಡೆನ್ ಆಡಳಿತದಲ್ಲಿ ಭಾರತ ಮತ್ತು ಅಮೆರಿಕ ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಬಗ್ಗೆ ಆಳವಾದ ಸಹಕಾರವನ್ನು ಹೊಂದಿವೆ. ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ನಮ್ಮ ಹಂಚಿಕೆಯ ಬದ್ಧತೆಯು ನಮ್ಮ ಸ್ನೇಹಕ್ಕೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತದೆ ಎಂದು ಧೈರ್ಯ ತುಂಬಿದ್ದಾರೆ.

    ಉಪಾಧ್ಯಕ್ಷರಾಗಿ ಜನರನ್ನು ಒಟ್ಟುಗೂಡಿಸುವ ಮತ್ತು ಸಾಮಾನ್ಯ ನೆಲೆಯನ್ನು ಕಂಡುಕೊಳ್ಳುವ ನಿಮ್ಮ ಸಂಕಲ್ಪವನ್ನು ನೆನಪಿಸಿಕೊಳ್ಳಲಾಗುತ್ತದೆ. ನಿಮ್ಮ ಮುಂದಿನ ಪ್ರಯತ್ನಗಳಲ್ಲಿ ನಾನು ನಿಮಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಬ್ರೇಕ್‌ ಹಾಕಲು ಮುಂದಾದ ಟ್ರಂಪ್‌

  • ಡೊನಾಲ್ಡ್‌ ಟ್ರಂಪ್‌ಗೆ ರಷ್ಯಾ ಅಧ್ಯಕ್ಷ ಪುಟಿನ್‌ ವಿಶ್‌ – ಮಾತುಕತೆಗೆ ಸಿದ್ಧ ಎಂದ ನಾಯಕರು

    ಡೊನಾಲ್ಡ್‌ ಟ್ರಂಪ್‌ಗೆ ರಷ್ಯಾ ಅಧ್ಯಕ್ಷ ಪುಟಿನ್‌ ವಿಶ್‌ – ಮಾತುಕತೆಗೆ ಸಿದ್ಧ ಎಂದ ನಾಯಕರು

    ಮಾಸ್ಕೋ: ಎರಡನೇ ಬಾರಿಗೆ ಅಮೆರಿಕದ ಶ್ವೇತಭವನದ ಗದ್ದುಗೆ ಏರಿದ ಡೊನಾಲ್ಡ್‌ ಟ್ರಂಪ್‌ಗೆ (Donald Trump) ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಶುಭಾಶಯ ತಿಳಿಸಿದ್ದಾರೆ.

    ಮಂಗಳವಾರದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಟ್ರಂಪ್ ಸೋಲಿಸಿದ ನಂತರ ದಕ್ಷಿಣ ನಗರವಾದ ಸೋಚಿಯಲ್ಲಿ ವಾಲ್ಡೈ ಫೋರಂಗೆ ನೀಡಿದ ಹೇಳಿಕೆಯಲ್ಲಿ, ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಪುಟಿನ್ ಹೇಳಿದ್ದಾರೆ. ಇದನ್ನೂ ಓದಿ: ಎಲೆಕ್ಷನ್ ವಿಕ್ಟರಿ ಫೋಟೋ ಸೆಷನ್‌ನಲ್ಲಿ ಕಾಣಿಸಿಕೊಂಡ ಮಸ್ಕ್ – ಟ್ರಂಪ್ ಪತ್ನಿ ಮೆಲಾನಿಯಾ ಮಿಸ್ಸಿಂಗ್

    ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲು ನೀವು ಮುಕ್ತರಾಗಿದ್ದೀರಾ ಎಂಬ ಪ್ರಶ್ನೆಗೆ, ರಷ್ಯಾದ ನಾಯಕ ‘ಹೌದು, ನಾನು ಸಿದ್ಧ’ ಎಂದು ಉತ್ತರಿಸಿದ್ದಾರೆ.

    ಬುಧವಾರ ಬೆಳಗ್ಗೆಯಿಂದ ಬಹುಶಃ 70 ವಿಶ್ವ ನಾಯಕರೊಂದಿಗೆ ಮಾತನಾಡಿದ್ದೇನೆ. ಆದರೆ, ಪುಟಿನ್ ಅವರೊಂದಿಗೆ ಮಾತನಾಡಲಿಲ್ಲ. ಅವರು ಹ್ಯಾರಿಸ್ ಗೆಲ್ಲಲು ಬಯಸುತ್ತಾರೆ ಎಂದು ನಗು ಬೀರುತ್ತಾ ಟ್ರಂಪ್‌ ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಬ್ರೇಕ್‌ ಹಾಕಲು ಮುಂದಾದ ಟ್ರಂಪ್‌

    ಅಮೆರಿಕದ ತನಿಖಾ ವರದಿಗಾರ ಬಾಬ್ ವುಡ್‌ವರ್ಡ್ ಅವರ ಹೊಸ ಪುಸ್ತಕದಲ್ಲಿ, ಜೋ ಬೈಡೆನ್ ಅವರ ಅಧ್ಯಕ್ಷತೆಯಲ್ಲಿ ಟ್ರಂಪ್ ಮತ್ತು ಪುಟಿನ್ ಏಳು ಬಾರಿ ಮಾತನಾಡಿರಬಹುದು ಎಂದು ಪ್ರತಿಪಾದಿಸಿದ್ದಾರೆ. ಹಿಲರಿ ಕ್ಲಿಂಟನ್ ವಿರುದ್ಧ ಟ್ರಂಪ್ ಪ್ರಚಾರವನ್ನು ಹೆಚ್ಚಿಸಲು ಮಾಸ್ಕೋ 2016 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮಧ್ಯಪ್ರವೇಶಿಸಿತ್ತು ಎಂಬ ಆರೋಪಗಳೂ ಇವೆ.

  • ಎಲೆಕ್ಷನ್ ವಿಕ್ಟರಿ ಫೋಟೋ ಸೆಷನ್‌ನಲ್ಲಿ ಕಾಣಿಸಿಕೊಂಡ ಮಸ್ಕ್ – ಟ್ರಂಪ್ ಪತ್ನಿ ಮೆಲಾನಿಯಾ ಮಿಸ್ಸಿಂಗ್

    ಎಲೆಕ್ಷನ್ ವಿಕ್ಟರಿ ಫೋಟೋ ಸೆಷನ್‌ನಲ್ಲಿ ಕಾಣಿಸಿಕೊಂಡ ಮಸ್ಕ್ – ಟ್ರಂಪ್ ಪತ್ನಿ ಮೆಲಾನಿಯಾ ಮಿಸ್ಸಿಂಗ್

    ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಡೊನಾಲ್ಡ್ ಟ್ರಂಪ್ (Donald Trump) ಅವರ ಎಲೆಕ್ಷನ್ ವಿಕ್ಟರಿ ಫೋಟೋ ಸೆಷನ್‌ನಲ್ಲಿ ಎಲಾನ್ ಮಸ್ಕ್ ಕಾಣಿಸಿಕೊಂಡಿದ್ದು, ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ (Melania Trump) ಫೋಟೋದಲ್ಲಿ ಇಲ್ಲದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ (America Presidential Election) ಐತಿಹಾಸಿಕ ಗೆಲುವು ಸಾಧಿಸಿದ ಡೊನಾಲ್ಡ್ ಟ್ರಂಪ್ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿ, 2ನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಈ ಹಿನ್ನೆಲೆ ವಿಜಯದ ಸಂಭ್ರಮಾಚರಣೆಯಲ್ಲಿ ಫೋಟೋ ಸೆಷನ್ ನಡೆಸಿದ್ದು, ಎಲಾನ್ ಮಸ್ಕ್ (Elon Musk) ಕಾಣಿಸಿಕೊಂಡಿದ್ದಾರೆ. ಇನ್ನೂ ಟ್ರಂಪ್ ಪತ್ನಿ ಮೆಲಾನಿಯಾ ಫೋಟೋದಲ್ಲಿ ಕಾಣಿಸಿದೇ ಇರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಆಸ್ಪದ ನೀಡಿದೆ.ಇದನ್ನೂ ಓದಿ: ಜೈಶಂಕರ್‌ ಸುದ್ದಿಗೋಷ್ಠಿ ಪ್ರಸಾರ – ಕೆನಡಾದಲ್ಲಿ ಆಸ್ಟ್ರೇಲಿಯಾ ಟುಡೇ ಬ್ಯಾನ್‌

    ವಿಜಯದ ಸಂಭ್ರಮದಲ್ಲಿ ಕುಟುಂಬಸ್ಥರೊಂದಿಗಿದ್ದ ಫೋಟೋವನ್ನು ಟ್ರಂಪ್ ಮೊಮ್ಮಗಳಾದ ಕೈ ಟ್ರಂಪ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸ್ಕ್ವ್ಯಾಡ್‌ ಎಂದು ಬರೆದುಕೊಂಡಿದ್ದಾರೆ. ಎಲಾನ್ ಮಸ್ಕ್ ಕಾಣಿಸಿಕೊಂಡಿರುವುದು ಹಾಗೂ ಮೆಲಾನಿಯಾ ಟ್ರಂಪ್ ಕಾಣಿಸದೇ ಇರುವುದು ಭಾರೀ ಗಮನ ಸೆಳೆದಿದೆ.

    ಪೋಸ್ಟ್ಗೆ ಹಲವರು ಕಮೆಂಟ್ ಮಾಡಿದ್ದು, ಎಲಾನ್ ಮಸ್ಕ್ ಈಗ ಟ್ರಂಪ್ ಕುಟುಂಬದ ಭಾಗವಾಗಿದ್ದಾರೆ. ಮೆಲಾನಿಯಾ ಎಲ್ಲಿ? ಎಂದು ಬರೆದುಕೊಂಡಿದ್ದಾರೆ. ಆದರೆ ತಮ್ಮ ವಿಜಯೋತ್ಸವ ಭಾಷಣದ ವೇಳೆ ಟ್ರಂಪ್ ಒಮ್ಮೆ ಭಾಷಣವನ್ನು ನಿಲ್ಲಿಸಿ ಪತ್ನಿಯನ್ನು ಚುಂಬಿಸಿ ನಂತರ ಮಾತನ್ನು ಮುಂದುವರಿಸಿದ್ದರು.ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಡಿ.ರೂಪಾಗೆ ಹಿನ್ನಡೆ

  • ಅಮೆರಿಕ ಉಪಾಧ್ಯಕ್ಷನಾಗಿ ಜೆಡಿ ವ್ಯಾನ್ಸ್ ಆಯ್ಕೆ – ಆಂಧ್ರದ ವಡ್ಲೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ಅಮೆರಿಕ ಉಪಾಧ್ಯಕ್ಷನಾಗಿ ಜೆಡಿ ವ್ಯಾನ್ಸ್ ಆಯ್ಕೆ – ಆಂಧ್ರದ ವಡ್ಲೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    – ಭಾರತೀಯ ಮೂಲದ ಉಷಾ ಅವರ ಪತಿ ಜೆಡಿ ವ್ಯಾನ್ಸ್

    ಹೈದರಾಬಾದ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಡೊನಾಲ್ಡ್ ಟ್ರಂಪ್ (Donald Trump) ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಜೆಡಿ ವ್ಯಾನ್ಸ್ (JD Vance) ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಈ ಹಿನ್ನೆಲೆ ಆಂಧ್ರಪ್ರದೇಶದ (Andhra Pradesh) ವಡ್ಲೂರಿನಲ್ಲಿ (Vadluru) ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ನ ಡೊನಾಲ್ಡ್ ಟ್ರಂಪ್ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅಮೆರಿಕದ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, 2ನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಜೊತೆಗೆ ಜೆಡಿ ವ್ಯಾನ್ಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಪುಸ್ತಕ ತೆರೆದ್ರೆ ಬರೀ ಕಪ್ಪು ಕಾಣಿಸ್ತದೆ, ಅಧಿಕಾರಿಗಳು ಕಾಂಗ್ರೆಸ್ ಪರ ಕೆಲಸ: ಅಶೋಕ್

    ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಜೆಡಿ ವ್ಯಾನ್ಸ್ ಆಂಧ್ರಪ್ರದೇಶದ ವಡ್ಲೂರ ಗ್ರಾಮದ ಅಳಿಯ. ಹೌದು ವಡ್ಲೂರಿನ ಉಷಾ ಅವರನ್ನು ಜೆಡಿ ವ್ಯಾನ್ಸ್ ವಿವಾಹವಾಗಿದ್ದಾರೆ.

    ಉಷಾ ಹಿನ್ನೆಲೆ ಏನು?
    ಆಂಧ್ರಪ್ರದೇಶದ ವಡ್ಲೂರಿನಲ್ಲಿದ್ದ ಉಷಾ ಪೋಷಕರು 1986ರಲ್ಲಿ ಆಂಧ್ರಪ್ರದೇಶದಿಂದ ಅಮೆರಿಕಕ್ಕೆ ತೆರಳಿದರು. ಆಗ ಆ ದಂಪತಿಗೆ ಜನಿಸಿದ ಮಗು ಉಷಾ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ತಮ್ಮ ಬಾಲ್ಯವನ್ನು ಕಳೆದರು.

    ಯೇಲ್ ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ ಪದವಿಯನ್ನು ಪಡೆದು, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ (University of Cambridge) ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಯೇಲ್ ಜರ್ನಲ್ ಆಫ್ ಲಾ, ಟೆಕ್ನಾಲಜಿ ಮತ್ತು ದಿ ಯೇಲ್ ಲಾ ಜರ್ನಲ್‌ನಲ್ಲಿ ವ್ಯವಸ್ಥಾಪಕ ಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.

    ಯೇಲ್ ಲಾ ಸ್ಕೂಲ್‌ನಲ್ಲಿ ಉಷಾ ಹಾಗೂ ಜೆಡಿ ವ್ಯಾನ್ಸ್ ಮೊದಲ ಬಾರಿಗೆ ಭೇಟಿಯಾದರು. ಇದಾದ ಬಳಿಕ 2014ರಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದು, ಈಗ ಮೂರು ಮಕ್ಕಳನ್ನು ಹೊಂದಿದ್ದಾರೆ. ಜೆಡಿ ವ್ಯಾನ್ಸ್ ಅವರ ರಾಜಕೀಯ ವೃತ್ತಿಜೀವನದುದ್ದಕ್ಕೂ ಉಷಾ ಬೆಂಬಲ ನೀಡಿದ್ದಾರೆ. ಭಾರತೀಯ ಮೂಲದ ಮಹಿಳೆಯಾಗಿರುವ ಉಷಾ ಅವರ ಪತಿ ಇದೀಗ ಅಮೆರಿಕದ ಉಪಾಧ್ಯಕ್ಷರಾಗಿದ್ದು, ಆಂಧ್ರಪ್ರದೇಶದ ವಡ್ಲೂರಿನಲ್ಲಿ ಸಂಭ್ರಮ ಮನೆ ಮಾಡಿದೆ.ಇದನ್ನೂ ಓದಿ: ತೆಲುಗಿಗೆ ರಿಮೇಕ್ ಆಗಲಿದೆ ‘ಆವೇಶಂ’ ಸಿನಿಮಾ- ಹೀರೋ ಯಾರು?

  • 47ನೇ ಅಧ್ಯಕ್ಷರಾಗಿ ಇತಿಹಾಸ ಸೃಷ್ಟಿಸಿದ ಟ್ರಂಪ್‌ – ದೋಷಿ ಆಗಿದ್ದು ಏಕೆ?

    47ನೇ ಅಧ್ಯಕ್ಷರಾಗಿ ಇತಿಹಾಸ ಸೃಷ್ಟಿಸಿದ ಟ್ರಂಪ್‌ – ದೋಷಿ ಆಗಿದ್ದು ಏಕೆ?

    ವಾಷಿಂಗ್ಟನ್‌: ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ (Donald Trump) ಗೆದ್ದು ಬೀಗಿದ್ದಾರೆ. ಶ್ವೇತಭವನದಲ್ಲಿ ಮೊದಲ ಮಹಿಳಾ ಅಧ್ಯಕ್ಷರನ್ನು ಹೊಂದುವ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ (Kamala Harris) ಅವರ ಕನಸನ್ನು ಭಗ್ನಗೊಳಿಸಿ, 78 ವರ್ಷ ವಯಸ್ಸಿನ ಟ್ರಂಪ್‌ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಯುಎಸ್‌ ಇತಿಹಾಸದಲ್ಲಿ ಅಧ್ಯಕ್ಷರು ಎನಿಸಿಕೊಂಡಿದ್ದಾರೆ.

    ಅಷ್ಟೇ ಅಲ್ಲ ಟ್ರಂಪ್‌, ಉದ್ಯಮಿ, ರಿಯಾಲಿಟಿ ಶೋ ಟಿವಿ ಸ್ಟಾರ್‌ (Reality TV Star) ಮಾತ್ರವಲ್ಲದೇ ಅಪರಾಧಿ ಎಂದು ಘೋಷಿಸಲ್ಪಟ್ಟು ದೇಶದ ಅಧ್ಯಕ್ಷರಾಗಿದ್ದು ಇದೇ ಮೊದಲು ಎಂದು ವರದಿಗಳು ಉಲ್ಲೇಖಿಸಿವೆ. ಕಳೆದ ವರ್ಷ ನೀಲಿತಾರೆ ಸ್ಟಾರ್ಮಿ ಡೇನಿಯಲ್ಸ್‌ (Stormy Daniels) ಹಾಗೂ ಟ್ರಂಪ್ ನಡುವಿನ ಸಂಬಂಧ ಮರೆಮಾಚಲು ಆಕೆಗೆ ಹಣ ಪಾವತಿಸಲಾಗಿತ್ತು ಎಂಬ ಪ್ರಕರಣದಲ್ಲಿ ಬಂಧಿಸಿ, ವಿಚಾರಣೆ ಬಳಿಕ ಬಿಡುಗಡೆ ಟ್ರಂಪ್‌ ಅವರನ್ನ ಬಿಡುಗಡೆ ಮಾಡಲಾಗಿತ್ತು. ಇದನ್ನೂ ಓದಿ: ಶ್ವೇತ ಭವನದಿಂದ ಅವಮಾನವಾಗಿದ್ದಕ್ಕೆ ಕೊನೆಗೂ ಸೇಡು ತೀರಿಸಿಕೊಂಡ ಮಸ್ಕ್‌!

    ಏನಿದು ಕಳ್ಳ ಸಂಬಂಧ ಕೇಸ್?
    ಟ್ರಂಪ್ ಅವರು ಈ ಹಿಂದೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್‌ (ನಿಜವಾದ ಹೆಸರು ಸ್ಟೆಫನಿ ಕ್ಲಿಫರ್ಡ್) ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿತ್ತು. 2016ರ ಚುನಾವಣೆ ವೇಳೆ ಈ ಸಂಬಂಧ ಬಹಿರಂಗಪಡಿಸುವುದನ್ನು ತಡೆಯಲು ಟ್ರಂಪ್ ಆಕೆಗೆ 1,30,000 ಡಾಲರ್ (ಸುಮಾರು 1,07,00,000 ರೂ.) ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಟ್ರಂಪ್‌ ಅವರನ್ನು ಬಂಧಿಸಲಾಗಿತ್ತು.

    ವಿಚಾರಣೆ ನಡೆಸಿದ್ದ ನ್ಯೂಯಾರ್ಕ್‌ ನ್ಯಾಯಾಲಯ ಹಷ್‌ ಮನಿ (Hush Money Case) ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 34 ಆರೋಪಗಳಲ್ಲಿಯೂ ಟ್ರಂಪ್‌ ದೋಷಿ ಎಂದು ಘೋಷಿಸಿದ್ದು, ಶಿಕ್ಷೆಯ ಪ್ರಮಾಣವನ್ನು ನವೆಂಬರ್‌ 26ರಂದು ಪ್ರಕಟಿಸುವುದಾಗಿ ಹೇಳಿದೆ. ಈ ಬಗ್ಗೆ ಟ್ರಂಪ್‌ ಮುಂದಿನ ನಡೆ ಏನು ಎಂಬುದನ್ನು ಕಾದುನೋಡಬೇಕಿದೆ.

    ಯಶಸ್ವಿ ಉದ್ಯಮಿ ಟ್ರಂಪ್‌:
    ಉದ್ಯಮಿ ಮೇರಿ ಮತ್ತು ಫ್ರೆಡ್ ಟ್ರಂಪ್‌ ದಂಪತಿಯ ಐವರು ಮಕ್ಕಳಲ್ಲಿ 4ನೇಯವರಾಗಿ 1946ರ ಜೂನ್‌ 14ರಂದು ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿ ಟ್ರಂಪ್‌ ಜನಿಸಿದರು. ನಂತರ 1968ರ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ವಾರ್ಟನ್ ಸ್ಕೂಲ್ ಆಫ್ ಫೈನಾನ್ಸ್ ಮತ್ತು ಕಾಮರ್ಸ್‌ನಿಂದ ಹಣಕಾಸು ವಿಷಯದಲ್ಲಿ ಪದವಿ ಪಡೆದರು. ಇದನ್ನೂ ಓದಿ: ಎರಡನೇ ಬಾರಿ ಅಧ್ಯಕ್ಷರಾಗಿ ಟ್ರಂಪ್‌ ಕಮಾಲ್‌ – ಭಾರತಕ್ಕೆ ಏನು ಲಾಭ?

    1971ರಲ್ಲಿ ತನ್ನ ತಂದೆಯ ಕಂಪನಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ನಂತರ ಅದನ್ನು ಟ್ರಂಪ್‌ ಸಂಸ್ಥೆ ಎಂದು ಮರುನಾಮಕರಣ ಮಾಡಿದರು. ಇದರೊಂದಿಗೆ ಹೋಟೆಲ್‌, ರೆಸಾರ್ಟ್‌, ವಸತಿ ಮತ್ತು ವಾಣಿಜ್ಯ ಕಟ್ಟಡಗಳು, ಕ್ಯಾಸಿನೊಗಳು ಹಾಗೂ ಗಾಲ್ಫ್‌ ಕೋರ್ಸ್‌ಗಳನ್ನು ಆರಂಭಿಸಿದರು. 2004ರಲ್ಲಿ ಅಪ್ರೆಂಟೀಸ್‌ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವ ಮೂಲಕ ಇಡೀ ಅಮೆರಿಕದ ಜನರನ್ನ ತಲುಪಿದರು.

    ಯಶಸ್ವಿ ಉದ್ಯಮಿ, ರಿಯಾಲಿಟಿ ಶೋ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದ ಟ್ರಂಪ್‌, ಜೆಕ್ ಅಥ್ಲೀಟ್ ಮತ್ತು ಮಾಡೆಲ್ ಇವಾನಾ ಜೆಲ್ನಿಕೋವಾರನ್ನ ವರಿಸಿದರು. ಆದ್ರೆ 1990ರಲ್ಲಿ ವಿಚ್ಛೇದನ ಪಡೆದರು. ದಂಪತಿಗೆ ಡೊನಾಲ್ಡ್ ಜೂನಿಯರ್, ಇವಾಂಕಾ ಮತ್ತು ಎರಿಕ್ ಎಂಬ ಮೂವರು ಮಕ್ಕಳಿದ್ದಾರೆ. ನಂತರ 1993 ರಲ್ಲಿ ನಟಿ ಮಾರ್ಲಾ ಮ್ಯಾಪಲ್ಸ್‌ರನ್ನ ವಿವಾಹವಾಗಿ 1999 ರಲ್ಲಿ ವಿಚ್ಛೇದನ ಪಡೆದರು. ಅವರಿಗೆ ಟಿಫಾನಿ ಎಂಬ ಗಂಡು ಮಗುವಿದೆ. ಇದಾದ ಬಳಿಕ ಟ್ರಂಪ್‌ ಅಂದು ಸ್ಲೋವೇನಿಯನ್ ಮಾಡೆಲ್ ಆಗಿದ್ದ ಮೆಲಾನಿಯಾ ಅವರನ್ನ 2005ರಲ್ಲಿ ವಿವಾಹವಾದರು.

    2016ರಲ್ಲಿ ಅಧ್ಯಕ್ಷೀಯ ಚುನಾವಣಾ ರೇಸ್‌ನಲ್ಲಿ ರಿಪಬ್ಲಿಕನ್ ಅಭ್ಯರ್ಥಿಯಾಗಿದ್ದ ಟ್ರಂಪ್‌ ಹಿಲರಿ ಕ್ಲಿಂಟನ್‌ ವಿರುದ್ಧ ಗೆದ್ದಿದ್ದರು. ಆದ್ರೆ 2020ರಲ್ಲಿ ಜೋ ಬೈಡನ್‌ ವಿರುದ್ಧ ಸೋಲು ಎದುರಿಸಬೇಕಾಯಿತು. ಇದೀಗ ಮತ್ತೆ ಅಧ್ಯಕ್ಷರಾಗಿ 2ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: US Election: ಗೆಲುವಿನ ಸನಿಹದಲ್ಲಿ ಟ್ರಂಪ್‌ – ಸ್ವಿಂಗ್‌ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್‌ಗೆ ಹಿನ್ನಡೆ

    20 ವರ್ಷಗಳಲ್ಲಿ ಮೊದಲ ರಿಪಬ್ಲಿಕನ್‌:
    ಡೊನಾಲ್ಡ್ ಟ್ರಂಪ್ ಎರಡು ದಶಕಗಳಲ್ಲಿ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜನಪ್ರಿಯ ಮತ (ಪಾಪ್ಯುಲರ್‌ ವೋಟ್‌) ಗಳಿಸಿದ ಮೊದಲ ರಿಪಬ್ಲಿಕನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 2004 ರಲ್ಲಿ ಜಾರ್ಜ್ ಡಬ್ಲ್ಯೂ ಬುಷ್ ನಂತರ ಜನಪ್ರಿಯ ಮತ ಗಳಿಸಿದ ಮೊದಲ ರಿಪಬ್ಲಿಕನ್ ಎನಿಸಿಕೊಂಡಿದ್ದಾರೆ. 2004ರಲ್ಲಿ ಬುಷ್‌ 62,040,610 ಮತಗಳನ್ನು ಮತ್ತು 286 ಚುನಾವಣಾ ಮತಗಳನ್ನು ಪಡೆದಿದ್ದರು.

    ಇದಾದ ಬಳಿಕ ಡೆಮಾಕ್ರಟಿಕ್‌ ಪಕ್ಷದಿಂದ ಸ್ಪರ್ಧಿಸಿದ್ದ ಬರಾಕ್‌ ಒಬಾಮಾ, 365 ಎಲೆಕ್ಟ್ರೋಲ್‌ ವೋಟ್‌ಗಳೊಂದಿಗೆ ಅತಿದೊಡ್ಡ ಗೆಲುವು ಸಾಧಿಸಿದರು, 2012ರಲ್ಲಿ 2ನೇ ಅವಧಿಗೆ ಒಬಾಮಾ ಆಯ್ಕೆಯಾಗಿದ್ದರು. ಆದ್ರೆ 2016ರಲ್ಲಿ ಮೊದಲ ಬಾರಿಗೆ ಟ್ರಂಪ್‌ ಆಯ್ಕೆಯಾಗಿದ್ದಾಗ 304 ಎಲೆಕ್ಟ್ರೋಲ್‌ ವೋಟ್‌ಗಳನ್ನು, ಶೇ.46.1 ರಷ್ಟು ಜನಪ್ರಿಯ ಮತಗಳನ್ನು ಗಳಿಸಿದ್ದರು. ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್‌ 48.2 ರಷ್ಟು ಜನಪ್ರಿಯ ಮತ ಗಳಿಸಿದ್ದರು. 2020ರಲ್ಲಿ ಜೋ ಬೈಡನ್‌ 51.3% ಜನಪ್ರಿಯ ಮತಗಳು ಹಾಗೂ 306 ಎಲೆಕ್ಟ್ರೋಲ್‌ ವೋಟ್‌ ಪಡೆದು ಟ್ರಂಪ್‌ ಅವರನ್ನು ಸೋಲಿಸಿದ್ದರು. 2024ರ ಈ ಚುನಾವಣೆಯಲ್ಲಿ ಟ್ರಂಪ್‌ 277 ಎಲೆಕ್ಟ್ರೋಲ್‌ ಮತಗಳನ್ನು ಪಡೆಯುವ ಮೂಲಕ ಕಮಲಾ ಹ್ಯಾರಿಸ್‌ ವಿರುದ್ಧ ಗೆಲುವು ಸಾಧಿಸಿದ್ದಾರೆ.

    50 ರಾಜ್ಯಗಳಿರುವ ಅಮೆರಿಕದಲ್ಲಿ 538 ಎಲೆಕ್ಟೋರಲ್ ಮತಗಳಿವೆ. ಬಹುಮತಕ್ಕೆ 270 ಮತಗಳ ಅಗತ್ಯವಿತ್ತು. ಸದ್ಯದ ಫಲಿತಾಂಶದ ಪ್ರಕಾರ ಟ್ರಂಪ್‌ 277 ಮತಗಳನ್ನು ಪಡೆದರೆ ಕಮಲಾ ಹ್ಯಾರಿಸ್‌ 226 ಮತಗಳನ್ನು ಪಡೆದಿದ್ದಾರೆ.

  • ಎರಡನೇ ಬಾರಿ ಅಧ್ಯಕ್ಷರಾಗಿ ಟ್ರಂಪ್‌ ಕಮಾಲ್‌ – ಭಾರತಕ್ಕೆ ಏನು ಲಾಭ?

    ಎರಡನೇ ಬಾರಿ ಅಧ್ಯಕ್ಷರಾಗಿ ಟ್ರಂಪ್‌ ಕಮಾಲ್‌ – ಭಾರತಕ್ಕೆ ಏನು ಲಾಭ?

    ವಾಷ್ಟಿಂಗನ್‌/ ನವದೆಹಲಿ: ಭಾರತೀಯ ಮೂಲ ಇರುವ ಕಮಲಾ ಹ್ಯಾರೀಸ್ (Kamala Harris) ಈ ಚುನಾವಣೆಯನ್ನು (US Election 2024) ಸೋತಿರಬಹುದು ಹಾಗಂತಾ ಭಾರತೀಯರು ನಿರಾಸೆ ಪಡಬೇಕಿಲ್ಲ. ಉಪಾಧ್ಯಕ್ಷರಾಗಿ ಆಯ್ಕೆಯಾದ ಜೆಡಿ ವಾನ್ಸ್ ಪತ್ನಿ ಉಷಾ ಭಾರತದ ಮೂಲದವರೇ ಆಗಿದ್ದಾರೆ.

    ಭಾರತ ಮೂಲದ 6 ಮಂದಿ ಗೆಲುವು ಸಾಧಿಸಿದ್ದಾರೆ. ಇಲಿನಾಯ್ಸ್‌ನಲ್ಲಿ ಡೆಮಕ್ರಟಿಕ್ ಪಕ್ಷದ ರಾಜಾ ಕೃಷ್ಣಮೂರ್ತಿ, ಕ್ಯಾಲಿಫೋರ್ನಿಯಾದಲ್ಲಿ ಡಾಕ್ಟರ್ ಅಮಿಬೇರಾ ಮತ್ತು ರೋ ಖನ್ನಾ, ವಾಷಿಂಗ್ಟನ್‌ನಲ್ಲಿ ಪ್ರಮೀಳಾ ಜಯಪಾಲ್, ಮಿಷಿಗನ್‌ನಲ್ಲಿ ಶ್ರೀತಾನೆದಾರ್ ಮತ್ತೊಮ್ಮೆ ಗೆಲುವು ಸಾಧಿಸಿ ಹೌಸ್ ಆಫ್ ರೆಪ್ರೆಸಂಟೇಟಿವ್ಸ್ಗೆ ಆಯ್ಕೆ ಆಗಿದ್ದಾರೆ.

    ಅದೇ ರೀತಿ ವರ್ಜಿನಿಯಾದಿಂದ ಮೊದಲ ಬಾರಿ ಸುಹಾಸ್ ಸುಬ್ರಹ್ಮಣ್ಯನ್ ಗೆಲುವು ಸಾಧಿಸಿದ್ದಾರೆ.. ಡೆಮಕ್ರಟಿಕ್ ಪಕ್ಷದ ನಾಯಕಿ ನ್ಯಾನ್ಸಿ ಪೆಲೋಸಿ ಕ್ಯಾಲಿಫೋರ್ನಿಯಾದಲ್ಲಿ ದಾಖಲೆಯ ಸತತ 20ನೇ ಬಾರಿ ಗೆದ್ದು ಬೀಗಿದ್ದಾರೆ. ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷ ಸೆನೆಟ್ ಮೇಲೆಯೂ ಹಿಡಿತ ಸಾಧಿಸಿದೆ. ಬಹುಮತನಕ್ಕೆ ಅಗತ್ಯವಾದ ಸೀಟುಗಳು ಲಭಿಸಿವೆ. 100 ಸ್ಥಾನಗಳ ಸೆನಟ್‌ನಲ್ಲಿ 34 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

    ಭಾರತಕ್ಕೇನು ಲಾಭ?
    ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಟ್ರಂಪ್ (Donald Trump) ಉತ್ತಮ ಸ್ನೇಹಿತರಾಗಿದ್ದಾರೆ. ಈ ಚುನಾವಣೆಯ ಸಂದರ್ಭದಲ್ಲೂ ಮೋದಿ ನನ್ನ ಉತ್ತಮ ಸ್ನೇಹಿತ ಎಂದು ಬಣ್ಣಿಸಿದ್ದರು. ಹೀಗಾಗಿ ಭಾರತ-ಅಮೆರಿಕ ಸಂಬಂಧಕ್ಕೆ ಇನ್ನಷ್ಟು ಬಲ ಸಿಗಲಿದೆ. ಇದನ್ನೂ ಓದಿ: 132 ವರ್ಷ ದಾಖಲೆ ಸರಿಗಟ್ಟಿದ ಟ್ರಂಪ್‌ – ಗೆದ್ದಿದ್ದು ಹೇಗೆ?

    ಕೆನಡಾದಲ್ಲಿ ಮಾಡುತ್ತಿರುವ ಖಲಿಸ್ತಾನಿಗಳ ಆಟಾಟೋಪಕ್ಕೆ ಬ್ರೇಕ್ ಬೀಳುವ ಸಾಧ್ಯತೆ. ಮೊದಲ ಅವಧಿಯಲ್ಲಿ ಟ್ರಂಪ್‌ ಚೀನಾದ ಕಡು ವಿರೋಧಿಯಾಗಿದ್ದರು. ಈ ಕಾರಣ ಭಾರತದ ಉತ್ಪಾದನಾ ವಲಯದ ಮೇಲೆ ಅಮೆರಿಕ ಹೆಚ್ಚು ಪ್ರಭಾವ ಬೀರುವುದಿಲ್ಲ ಎಂದು ವಿಶ್ಲೇಷಿಸಲಾಗುತ್ತದೆ.

     

    ತಮ್ಮ ಪ್ರಚಾರದಲ್ಲಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ಅಂತ್ಯ ಹಾಡುತ್ತೇನೆ ಎಂದು ಹೇಳಿದ್ದರು. ಇದು ಪರೋಕ್ಷವಾಗಿ ಇದು ಭಾರತಕ್ಕೆ ಅನುಕೂಲವಾಗಲಿದೆ. ಇಂಧನ ಬೆಲೆಯಲ್ಲಿ ಕೊಂಚ ಇಳಿಕೆ ಆಗಬಹುದು. ಇದಕ್ಕೆ ಪೂರಕ ಎಂಬಂತೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬುಧವಾರ ಕಚ್ಚಾ ತೈಲ ದರ ಇಳಿಕೆಯಾಗಿದೆ.

    ಬಹಳ ಮುಖ್ಯವಾಗಿ ಅಮೆರಿಕಕ್ಕೆ ತೆರಳಿ ಉದ್ಯೋಗ ಮಾಡಬೇಕೆಂದು ಕನಸು ಕಾಣುತ್ತಿದ್ದ ಭಾರತೀಯರಿಗೆ ವೀಸಾ ಸಿಗುವುದು ಕಷ್ಟವಾಗಬಹುದು. ವಲಸೆ ನೀತಿಯನ್ನು ನಾನು ಬಿಗಿಗೊಳಿಸುತ್ತೇನೆ ಎಂದು ಟ್ರಂಪ್‌ ಹೇಳಿದ್ದರು. ಅಷ್ಟೇ ಅಲ್ಲದೇ ಅಮೆರಿಕದವರಿಗೆ ಉದ್ಯೋಗ ನೀಡುವುದು ನನ್ನ ಮೊದಲ ಆದ್ಯತೆ ಎಂದಿದ್ದರು. ಅಮೆರಿಕಕ್ಕೆ ಜನ ಉದ್ಯೋಗಕ್ಕೆ ತೆರಳದೇ ಇದ್ದರೂ ಹೊರಗುತ್ತಿಗೆ ಕೆಲಸ ಜಾಸ್ತಿಯಾಗಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

  • 132 ವರ್ಷ ದಾಖಲೆ ಸರಿಗಟ್ಟಿದ ಟ್ರಂಪ್‌ – ಗೆದ್ದಿದ್ದು ಹೇಗೆ?

    132 ವರ್ಷ ದಾಖಲೆ ಸರಿಗಟ್ಟಿದ ಟ್ರಂಪ್‌ – ಗೆದ್ದಿದ್ದು ಹೇಗೆ?

    ವಾಷಿಂಗ್ಟನ್‌: ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ (US Presidential Election) ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ (Donald Trump) ಗೆದ್ದು ಬೀಗಿದ್ದಾರೆ. ಆಡಳಿತರೂಢ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲ ಹ್ಯಾರಿಸ್ (Kamala Harris) ವಿರುದ್ಧದ ತುರುಸಿನ ಹೋರಾಟದಲ್ಲಿ ಟ್ರಂಪ್ ಜಯಶಾಲಿ ಆಗಿ 47ನೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ 132 ವರ್ಷ ದಾಖಲೆ ಸರಿಗಟ್ಟಿದ್ದಾರೆ.

    ಕಮಲ ಹ್ಯಾರಿಸ್ ತೀವ್ರ ಪೈಪೋಟಿ ನೀಡಿದರೂ ಸ್ವಿಂಗ್ ಸ್ಟೇಟ್ಸ್ ಕ್ಲೀನ್ ಸ್ವೀಪ್ ಕಾರಣ ಅಮೆರಿಕ ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ವಶವಾಗಿದೆ. ಜೈಲು, ಟೀಕೆ, ಹತ್ಯೆ ಯತ್ನ, ಅಪಮಾನ, ಸಮೀಕ್ಷೆ.. ಹೀಗೆ ಎಲ್ಲವನ್ನು ಮೀರಿ ಟ್ರಂಪ್ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ.

    ಮೇಕ್ ಅಮೆರಿಕಾ ಗ್ರೇಟ್ ಎಗೈನ್ (MAGA) ಎಂಬ ನಿನಾದಕ್ಕೆ ಅಮೆರಿಕನ್ನರು ಜೈ ಎಂದಿದ್ದಾರೆ. ಈ ಮೂಲಕ ಜಮೈಕ-ಭಾರತ ಮೂಲದ ಕಮಲಾ ಹ್ಯಾರೀಸ್‌ರನ್ನು ಅಮೆರಿಕನ್ನರು ತಿರಸ್ಕರಿಸಿದ್ದಾರೆ.. ಮೇಡಂ ಪ್ರೆಸಿಡೆಂಟ್ ಎಂದು ಕರೆಯಲು ಅಮೆರಿಕಾ ನಿರಾಕರಿಸಿದೆ..ಇಂತಹ ಗೆಲುವನ್ನು ಅಮೆರಿಕಾ ಹಿಂದೆಂದೂ ಕಂಡಿರಲಿಲ್ಲ, ಅಮೆರಿಕನ್ನರಿಗೆ ಸ್ವರ್ಣಯುಗ ಬರಲಿದೆ ಎಂದು ಟ್ರಂಪ್‌ ಬಣ್ಣಿಸಿದ್ದಾರೆ.

    ಐತಿಹಾಸಿಕ ಗೆಲುವು ಕಂಡ ಟ್ರಂಪ್‌ಗೆ ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿ ನೆತನ್ಯಾಹು ಸೇರಿ ವಿಶ್ವ ನಾಯಕರು ಅಭಿನಂದಿಸಿದ್ದಾರೆ. ಅಮೆರಿಕಾದಲ್ಲಿ ರಿಪಬ್ಲಿಕನ್ನರು ಸಂಭ್ರಮದಲ್ಲಿ ಮುಳುಗಿದ್ದಾರೆ. ಡೆಮಕ್ರಟಿಕ್ ಪಕ್ಷದ ಬೆಂಬಲಿಗರು ನಿರಾಸೆಯ ಮಡುವಲ್ಲಿ ಮುಳುಗಿದ್ದಾರೆ ಇದನ್ನೂ ಓದಿ: ಜಾಗತಿಕ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡೋಣ – ಟ್ರಂಪ್‌ಗೆ ಮೋದಿ ಅಭಿನಂದನೆ

    50 ರಾಜ್ಯಗಳಿರುವ ಅಮೆರಿಕದಲ್ಲಿ 538 ಎಲೆಕ್ಟೋರಲ್ ಮತಗಳಿವೆ. ಬಹುಮತಕ್ಕೆ 270 ಮತಗಳ ಅಗತ್ಯವಿದ್ದು ಈಗ ಬಂದಿರುವ ಫಲಿತಾಂಶದ ಪ್ರಕಾರ ಟ್ರಂಪ್‌ 277 ಮತಗಳನ್ನು ಪಡೆದರೆ ಕಮಲಾ ಹ್ಯಾರಿಸ್‌ 226 ಮತಗಳನ್ನು ಪಡೆದಿದ್ದಾರೆ.

    ಎರಡನೇ ವ್ಯಕ್ತಿ ಟ್ರಂಪ್‌:
    ಒಮ್ಮೆ ಗೆದ್ದು ನಂತರ ಸೋತು. ಮತ್ತೊಮ್ಮೆ ಗೆದ್ದ ಎರಡನೇ ವ್ಯಕ್ತಿ ಟ್ರಂಪ್ (2016, 2020,2024) ಆಗಿದ್ದಾರೆ. 1892ರಲ್ಲಿ ಗ್ರೋವರ್ ಕ್ಲೀವ್‌ಲ್ಯಾಂಡ್ (1884, 1888,1892) ಈ ಅಪರೂಪದ ಸಾಧನೆ ಮಾಡಿದ್ದರು,

    ಟ್ರಂಪ್ ಗೆಲುವಿಗೆ ಕಾರಣಗಳು
    * ಮೇಕ್ ಅಮೆರಿಕಾ ಗ್ರೇಟ್ ಎಗೈನ್ ನಿನಾದ
    * ಗುಂಡೇಟಿನಿಂದ ಪಾರು, ಮತದಾರರ ಮೇಲೆ ಅನುಕಂಪ
    * ಅಕ್ರಮ ವಲಸಿಗರ ವಿರುದ್ಧ ಬಳಸಿದ ಟ್ರಂಪ್‌ಕಾರ್ಡ್
    * ಯುದ್ಧ ನಿಲ್ಲಿಸುವ ಭರವಸೆ. ಟ್ರಂಪ್ ಕಡೆ ವಾಲಿದ ಮುಸ್ಲಿಮರು
    * ಟ್ರಂಪ್‌ಗೆ ಡೆಮೊಗ್ರಾಫಿಕ್ ಗ್ರೂಪ್‌ಗಳ ಬೆಂಬಲ
    * ಟ್ರಂಪ್ ಕಡೆ ಯುವ ಸಮೂಹದ ಸೆಳೆತ
    * ಸೋಷಿಯಲ್ ಮೀಡಿಯಾ ಪ್ರಭಾವ. ಮಸ್ಕ್ ಬಹಿರಂಗ ಪ್ರಚಾರ
    * ಟ್ರಂಪ್‌ಗೆ ಏಳು ಸ್ವಿಂಗ್ ಸ್ಟೇಟ್‌ಗಳ ಬೆಂಬಲ

  • ಜಾಗತಿಕ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡೋಣ – ಟ್ರಂಪ್‌ಗೆ ಮೋದಿ ಅಭಿನಂದನೆ

    ಜಾಗತಿಕ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡೋಣ – ಟ್ರಂಪ್‌ಗೆ ಮೋದಿ ಅಭಿನಂದನೆ

    ನವದೆಹಲಿ: ಅಮೆರಿಕದ 47ನೇ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್‌ ಟ್ರಂಪ್‌ (Donald Trump) ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂಧಿಸಿದ್ದಾರೆ.

    ಈ ಸಂಬಂಧ ಭಾರತ-ಅಮೆರಿಕ ಸಮಗ್ರ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.


    ಜನರ ಸುಧಾರಣೆಗಾಗಿ ಮತ್ತು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದ್ದಾರೆ.

    ಡೊನಾಲ್ಡ್‌ ಟ್ರಂಪ್‌ 31 ರಾಜ್ಯಗಳಲ್ಲಿ ಜಯಗಳಿಸಿದರೆ ಕಮಲಾ ಹ್ಯಾರಿಸ್‌ (Kamala Harris) 19 ರಾಜ್ಯಗಳಲ್ಲಿ ಜಯಗಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ; ಟ್ರಂಪ್‌ಗೆ ಐತಿಹಾಸಿಕ ಗೆಲುವು

    2020ರಲ್ಲಿ ಅಮೆರಿಕ ಚುನಾವಣೆ ನಡೆಯುವ ಎರಡು ತಿಂಗಳ ಮೊದಲು ಮೋದಿ ಅವರು ʼಹೌಡಿ ಮೋದಿʼ ಕಾಯಕ್ರಮದಲ್ಲಿ ಭಾಗಿಯಾಗಿ ಟ್ರಂಪ್‌ ಪರ ಬ್ಯಾಟ್‌ ಬೀಸಿದ್ದರು. ಹ್ಯೂಸ್ಟನ್ ನಗರದಲ್ಲಿ ಸೆ.22 ರಂದು ಭಾರತೀಯ ಸಮುದಾಯ ಆಯೋಜಿಸಿದ್ದ ಈ ಕಾರ್ಯಕ್ರಮ ಅಮೆರಿಕ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿತ್ತು.