ನವದೆಹಲಿ/ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿ (Narendra Modi) ಮೊದಲಬಾರಿಗೆ ಟ್ರಂಪ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಅಧ್ಯಕ್ಷ ಗಾದಿಗೆ ಏರಿದ ಟ್ರಂಪ್ ಅವರಿಗೆ ಶುಭ ಕೋರಿದ್ದಾರೆ. ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್ (Donald Trump), ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.
Delighted to speak with my dear friend President @realDonaldTrump@POTUS. Congratulated him on his historic second term. We are committed to a mutually beneficial and trusted partnership. We will work together for the welfare of our people and towards global peace, prosperity,…
ಈ ಮಾಹಿತಿಯನ್ನು ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ʻನನ್ನ ಆತ್ಮೀಯ ಸ್ನೇಹಿತ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸಂತೋಷವಾಯಿತು. ಟ್ರಂಪ್ ಅವರ ಐತಿಹಾಸಿಕ 2ನೇ ಅವಧಿಗೆ ಅಭಿನಂದನೆ ಸಲ್ಲಿಸಿದ್ದು, ಭಾರತ-ಅಮೆರಿಕ ನಡುವಿನ ಪರಸ್ಪರ ಲಾಭದಾಯಕ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಗೆ ಬದ್ಧತೆಯನ್ನು ಪುನರುಚ್ಛಿಸಿದ್ದೇನೆ. ನಮ್ಮ ಜನರ ಕಲ್ಯಾಣಕ್ಕಾಗಿ ಮತ್ತು ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಭದ್ರತೆಗಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆʼ ಎಂದು ಹೇಳಿದ್ದಾರೆ.
ಭಾರತ-ಅಮೆರಿಕ ನಡುವಿನ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧವು ಐತಿಹಾಸಿಕ ಘಟ್ಟ ತಲುಪಿದ್ದು, ಉಭಯ ರಾಷ್ಟ್ರಗಳು ಪರಸ್ಪರ ಸಹಕಾರದ ಮೂಲಕ ಒಟ್ಟಿಗೆ ಹೆಜ್ಜೆ ಹಾಕುತ್ತಿವೆ. ನಮ್ಮ ಸಂಬಂಧ ಜಾಗತಿಕ ಒಳಿತಿಗಾಗಿ ಅತ್ಯಂತ ಮಹತ್ವದ್ದಾಗಿದೆ ಎಂದೂ ಸಹ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಪ್ರಧಾನಿ ಮೋದಿ ಅವರ ಫೋನ್ ಕರೆಗೆ ಧನ್ಯವಾದ ಅರ್ಪಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ತಮ್ಮ ಭೇಟಿಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ಉಭಯ ರಾಷ್ಟ್ರಗಳ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳು ಜಾಗತಿಕ ಪರಿಣಾಮ ಬೀರುತ್ತಿದ್ದು, ಉತ್ತಮ ಜಗತ್ತಿನ ನಿರ್ಮಾಣದಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.
ತಮ್ಮ ಪೌರರ ಕೈಗೆ ಕೋಳ ತೊಡಿಸಿ ವಾಪಸ್ ಕರೆತರುತ್ತಿರುವುದನ್ನು ಬ್ರೆಜಿಲ್ ಖಂಡಿಸಿದೆ. ಇನ್ನೂ ಕೊಲಂಬಿಯಾ ಸಹ ಮೊದಲಿಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ವಲಸಿಗರನ್ನು ಕರೆತರುವ ಅಮೆರಿಕಾ ವಿಮಾನಗಳನ್ನು ನಮ್ಮ ದೇಶಕ್ಕೆ ಬಿಟ್ಟುಕೊಳ್ಳಲ್ಲ ಎಂದಿತ್ತು. ಗೌರವದಿಂದ ಕಳಿಸಿಕೊಟ್ಟರೆ ಮಾತ್ರ ಒಪ್ಪುತ್ತೇವೆ ಎಂದಿತ್ತು.
ಇದಕ್ಕೆ ಗರಂ ಆದ ಟ್ರಂಪ್, ಕೊಲಂಬಿಯಾ ಉತ್ಪನ್ನಗಳ ಮೇಲೆ ಶೇಕಡಾ 50 ಸುಂಕ ಹೆಚ್ಚಿಸುವ ಘೋಷಣೆ ಮಾಡಿದ್ದರು. ಅಲ್ಲದೇ, ಕೊಲಂಬಿಯಾ ಅಧಿಕಾರಿಗಳ ವೀಸಾ ರದ್ದು ಮಾಡುವ ಬೆದರಿಕೆ ಹಾಕಿದ್ದರು. ಈ ಬೆನ್ನಲ್ಲೇ ಕೊಲಂಬಿಯಾ ಅಧ್ಯಕ್ಷರು ಉಲ್ಟಾ ಹೊಡೆದರು. ಸ್ವದೇಶಕ್ಕೆ ವಾಪಸ್ ಆಗುವ ಅಕ್ರಮ ವಲಸಿಗರನ್ನು ಬಿಟ್ಟುಕೊಳ್ಳುವುದಾಗಿ ತಿಳಿಸಿದರು. ತಕ್ಷಣವೇ ಟ್ರಂಪ್ ಸಹ ತಮ್ಮ ಘೋಷಣೆಯನ್ನು ಹಿಂಪಡೆದರು. ಈ ಮಧ್ಯೆ, ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಪೊಲೀಸರು ನ್ಯೂಯಾರ್ಕ್, ನ್ಯೂಜೆರ್ಸಿಯ ಗುರುದ್ವಾರಗಳಿಗೆ ನುಗ್ಗಿದ್ದಾರೆ. ಇದಕ್ಕೆ ಸಿಖ್ಖರಿಂದ ಭಾರೀ ವಿರೋಧ ವ್ಯಕ್ತವಾಗ್ತಿದೆ.ಇದನ್ನೂ ಓದಿ: ತುಂಗಭದ್ರಾ ಎಡದಂಡೆ ಅಚ್ಚುಕಟ್ಟು ರೈತರಿಗೆ ಸಂಕಷ್ಟ – ಮಾ.31ರ ವರೆಗೆ ಮಾತ್ರ ಕಾಲುವೆಗೆ ನೀರು ಸಾಧ್ಯತೆ
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೀಡಿದ ಶಾಕ್‌ಗೆ ಬೆದರಿದ ಕೊಲಂಬಿಯಾ (Columbia) ತನ್ನ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ವಿಮಾನ (Plane) ಕಳುಹಿಸುವುದಾಗಿ ಹೇಳಿದೆ.
ಅಕ್ರಮ ವಲಸಿಗರನ್ನು ಹೊರದಬ್ಬುವ ಭಾಗವಾಗಿ ಅಮೆರಿಕ ಕೊಲಂಬಿಯಾ ಪ್ರಜೆಗಳನ್ನು ಗಡಿಪಾರು ಮಾಡಲು ಮುಂದಾಗಿತ್ತು. ಅಮೆರಿಕದ ನಿರ್ಧಾರಕ್ಕೆ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ (Gustavo Petro) ಆಕ್ಷೇಪ ವ್ಯಕ್ತಪಡಿಸಿದ್ದರು.
I was just informed that two repatriation flights from the United States, with a large number of Illegal Criminals, were not allowed to land in Colombia. This order was given by Colombia’s Socialist President Gustavo Petro, who is already very unpopular amongst his people.…
— Donald J. Trump Posts From His Truth Social (@TrumpDailyPosts) January 26, 2025
ಕೊಲಂಬಿಯಾದ ಪ್ರಜೆಗಳನ್ನು ಹೊತ್ತುಕೊಂಡು ಬರುವ ಅಮೆರಿಕ ವಾಯುಪಡೆಯ ಎರಡು ವಿಮಾನಗಳ ಲ್ಯಾಂಡಿಂಗ್ ಅನುಮತಿ ನೀಡುವುದಿಲ್ಲ ಎಂದು ಗುಸ್ಟಾವೊ ಪೆಟ್ರೋ ಘೋಷಣೆ ಮಾಡಿದ್ದರು.
ಪೆಟ್ರೋ ನಿರ್ಧಾರದಿಂದ ಕೆಂಡಾಮಂಡಲವಾದ ಡೊನಾಲ್ಡ್ ಟ್ರಂಪ್ ತನ್ನ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳದ್ದಕ್ಕೆ ಕೊಲಂಬಿಯಾ ಮೇಲೆ ತುರ್ತು 25 ಪ್ರತಿಶತ ಪ್ರತೀಕಾರದ ಸುಂಕ ವಿಧಿಸುವುದಾಗಿ ದಿಢೀರ್ ನಿರ್ಧಾರ ತೆಗೆದುಕೊಂಡರು. ಇದನ್ನೂ ಓದಿ: ನಾಲ್ವರು ಇಸ್ರೇಲ್ ಮಹಿಳಾ ಸೈನಿಕರನ್ನು ಬಿಡುಗಡೆ ಮಾಡಿದ ಹಮಾಸ್ ಉಗ್ರರು
Trump, a mi no me gusta mucho viajar a los EEUU, es un poco aburridor, pero confieso que hay cosas meritorias, me gusta ir a los barrios negros de Washington, allí ví una lucha entera en la capital de los EEUU entre negros y latinos con barricadas, que me pareció una pendejada,…
ಒಂದು ವಾರದ ಬಳಿಕ ಸುಂಕ ಪ್ರಮಾಣವನ್ನು 50% ಏರಿಕೆ ಮಾಡಲಾಗುವುದು. ಕೊಲಂಬಿಯಾದ ಸರ್ಕಾರಿ ಅಧಿಕಾರಿಗಳು ಮತ್ತು ಎಲ್ಲಾ ಮಿತ್ರರಾಷ್ಟ್ರಗಳು ಮತ್ತು ಬೆಂಬಲಿಗರ ಮೇಲೆ ಪ್ರಯಾಣ ನಿಷೇಧ ಮತ್ತು ತಕ್ಷಣದಿಂದಲೇ ವೀಸಾ ರದ್ದು ಮಾಡಲಾಗುವುದು. ಕೊಲಂಬಿಯಾದ ಸರ್ಕಾರದ ಎಲ್ಲಾ ಪಕ್ಷದ ಸದಸ್ಯರು, ಕುಟುಂಬ ಸದಸ್ಯರು ಮತ್ತು ಬೆಂಬಲಿಗರ ವೀಸಾ ನಿರ್ಬಂಧಿಸುತ್ತೇವೆ. ಬ್ಯಾಂಕಿಂಗ್ ಮತ್ತು ಹಣಕಾಸು ನಿರ್ಬಂಧಗಳನ್ನು ಸಂಪೂರ್ಣವಾಗಿ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಟ್ರಂಪ್ ನೀಡಿದ ಶಾಕ್‌ಗೆ ಕಕ್ಕಾಬಿಕ್ಕಿಯಾದ ಪೆಟ್ರೋ ಗಡಿಪಾರಾದ ಕೊಲಂಬಿಯಾದ ಪ್ರಜೆಗಳನ್ನು ಗೌರವಯುತವಾಗಿ ವಾಪಸ್ ಕರೆಸಿಕೊಳ್ಳಲು ನಾವೇ ವಿಮಾನವನ್ನು ವ್ಯವಸ್ಥೆ ಮಾಡುವುದಾಗಿ ಈಗ ಹೇಳಿದ್ದಾರೆ.
ಕೊಲಂಬಿಯಾದ ನಿರ್ಧಾರದ ನಂತರ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಹೇಳಿಕೆ ಬಿಡುಗಡೆ ಮಾಡಿ ಕೊಲಂಬಿಯಾದ ಮೇಲೆ ನಿರ್ಬಂಧ ಮತ್ತು ಸುಂಕಗಳನ್ನು ವಿಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ (Donald Trump) ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಈ ಪೈಕಿ ಕೆಲವು ನಿರ್ಧಾರಗಳು ವಿವಾದವನ್ನು ಸೃಷ್ಟಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಹಿಂದೆ ಸರಿಯುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದು, ಜಾಗತಿಕ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ಡಬ್ಲ್ಯೂಹೆಚ್‌ಒದಿಂದ ಹಿಂದೆ ಸರಿಯುವುದಕ್ಕೆ ಟ್ರಂಪ್ ಕೋವಿಡ್ ಸೇರಿದಂತೆ ಅನೇಕ ಬಲವಾದ ಕಾರಣಗಳನ್ನು ನೀಡಿದ್ದಾರೆ. ಜಾಗತಿಕ ಆರೋಗ್ಯ ವಿಚಾರದಲ್ಲಿ ಸಂಸ್ಥೆಯ ನಡೆಯನ್ನು ಪ್ರಶ್ನಿಸಿದ್ದಾರೆ. ಅವರ ನಿರ್ಧಾರದ ಹಿಂದೆ ಚೀನಾ ಕೂಡ ಟಾರ್ಗೆಟ್ ಆಗಿದೆ.
ಸಾಂಕ್ರಾಮಿಕ ರೋಗಗಳು, ಹವಾಮಾನ-ಸಂಬಂಧಿತ ಕಾಯಿಲೆಗಳು ಮತ್ತು ತುರ್ತು ಆರೋಗ್ಯ ಸವಾಲುಗಳೊಂದಿಗೆ ಜಗತ್ತು ಹಿಡಿತ ಸಾಧಿಸುತ್ತಿರುವ ಹೊತ್ತಿನಲ್ಲಿ ಅಮೆರಿಕ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಡಬ್ಲ್ಯೂಹೆಚ್‌ಒಗೆ ಅಮೆರಿಕ ಅತಿದೊಡ್ಡ ದಾನಿ. ಆ ದೇಶವೇ ಸಂಸ್ಥೆಯಿಂದ ಹೊರನಡೆದಿರುವುದು ಸಹಜವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟçಗಳಲ್ಲಿ ಆತಂಕ ಮೂಡಿಸಿದೆ. ಇದರಿಂದ ಜಾಗತಿಕ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಭಾರತದ ಆರೋಗ್ಯ ಕ್ಷೇತ್ರದ ಮೇಲಾಗುವ ಎಫೆಕ್ಟ್ ಏನು? ಡಬ್ಲ್ಯೂಹೆಚ್‌ಒಗೆ ಚೀನಾ ಬೆಂಬಲವಾಗಿ ನಿಲ್ಲುತ್ತಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಡಬ್ಲ್ಯೂಹೆಚ್‌ಒ ಜಾಗತಿಕ ಆರೋಗ್ಯದ ಮೇಲೆ ಕೆಲಸ ಮಾಡುವ ಯುಎನ್ ಸಂಸ್ಥೆಯಾಗಿದೆ. ತಮ್ಮ ಪ್ರಾಥಮಿಕ ಆರೋಗ್ಯ ರಕ್ಷಣೆಯನ್ನು ಬಲಪಡಿಸಲು ಜಾಗತಿಕ ದೇಶಗಳೊಂದಿಗೆ ಇದು ಕೆಲಸ ಮಾಡುತ್ತದೆ. ಡಬ್ಲ್ಯೂಹೆಚ್‌ಒ ಮಾರ್ಗಸೂಚಿಗಳು ಸರ್ಕಾರದ ನೀತಿಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ನಿರ್ದಿಷ್ಟ ರೋಗಗಳನ್ನು ನಿಭಾಯಿಸಲು ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರ ನೀಡುತ್ತದೆ.
ಟ್ರಂಪ್ ಹೇಳಿದ್ದೇನು?
ಕೊರೊನಾ ಸಾಂಕ್ರಾಮಿಕ ಸೇರಿ ಇತರ ಅಂತರರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟುಗಳ ನಿರ್ವಹಣೆಯಲ್ಲಿ ಡಬ್ಲ್ಯೂಹೆಚ್‌ಒ ವಿಫಲವಾಗಿದೆ. ಇದು ನಮ್ಮನ್ನು (ಅಮೆರಿಕ) ಅಳಿಸಿ ಹಾಕಲು ನೋಡಿತ್ತು. ಎಲ್ಲರೂ ನಮ್ಮನ್ನು ತುಳಿಯಲು ನೋಡಿದ್ದರು. ಆದರೆ, ಇನ್ಮುಂದೆ ಇದು ನಡೆಯುವುದಿಲ್ಲ. ಮುಂದಿನ 12 ತಿಂಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರಬರಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದ ಇತಿಹಾಸದಲ್ಲೇ ಬೃಹತ್ ಗಡಿಪಾರು ಕಾರ್ಯಾಚರಣೆ – 538 ಅಕ್ರಮ ವಲಸಿಗರು ಅರೆಸ್ಟ್, ನೂರಾರು ಮಂದಿ ಗಡಿಪಾರು
ಟ್ರಂಪ್ ಕಾರ್ಯಕಾರಿ ಆದೇಶದಲ್ಲೇನಿದೆ?
* ಡಬ್ಲ್ಯೂಹೆಚ್‌ಒ ನೀಡುತ್ತಿದ್ದ ಆರ್ಥಿಕ ನೆರವನ್ನು ಅಮೆರಿಕ ನಿಲ್ಲಿಸಲಿದೆ. (ಯುಎಸ್ ನಿಧಿಗಳು ಮತ್ತು ಸಂಪನ್ಮೂಲಗಳ ಯಾವುದೇ ವರ್ಗಾವಣೆ ಇರಲ್ಲ)
* ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೆಲಸ ಮಾಡುವ ಅಮೆರಿಕದ ಸರ್ಕಾರಿ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವುದು.
* ಡಬ್ಲ್ಯೂಹೆಚ್‌ಒ ಜೊತೆ ಅಗತ್ಯ ಮಾತುಕತೆ ನಡೆಸಲು ಪಾಲುದಾರರನ್ನು ಮರು ನೇಮಕ ಮಾಡುವುದು.
* ಸಾಂಕ್ರಾಮಿಕ ರೋಗಗಳ ನಿರ್ವಹಣೆ ಒಪ್ಪಂದ ಮಾತುಕತೆಗಳು ನಿಲ್ಲಿಸಲಿದೆ. (ಸಾಂಕ್ರಾಮಿಕ ರೋಗಗಳಿಗೆ ಪ್ರತಿರೋಧ ಒಡ್ಡಲು ದೇಶಗಳನ್ನು ಸಜ್ಜುಗೊಳಿಸುವುದು. ಸಾಂಕ್ರಾಮಿಕ ರೋಗ ಸಂಭವಿಸಿದರೆ ಜಾಗತಿಕ ಸಹಕಾರಕ್ಕಾಗಿ ಚೌಕಟ್ಟನ್ನು ರಚಿಸುವುದು. ಔಷಧಗಳು ಮತ್ತು ಲಸಿಕೆಗಳಂತಹ ವೈದ್ಯಕೀಯ ಸಹಕಾರ ನೀಡುವ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುವುದು ಒಪ್ಪಂದದ ಗುರಿಯಾಗಿತ್ತು.)
ಅತಿ ದೊಡ್ಡ ದಾನಿ ಅಮೆರಿಕ
ಅಮೆರಿಕವು ಡಬ್ಲ್ಯೂಹೆಚ್‌ಒಗೆ ಅತಿ ದೊಡ್ಡ ದಾನಿಯಾಗಿತ್ತು. ಹೆಚ್ಚಿನ ಆರ್ಥಿಕ ಬೆಂಬಲ ಯುಎಸ್‌ನಿಂದಲೇ ಸಿಗುತ್ತಿತ್ತು. ವಿಶ್ವ ಆರೋಗ್ಯ ಸಂಸ್ಥೆ ಒಟ್ಟು ನಿಧಿಯ 18% ನೆರವನ್ನು ಅಮೆರಿಕ ನೀಡುತ್ತಿತ್ತು. ಹೀಗಿರುವಾಗ, ಅಮೆರಿಕ ಹೊರನಡೆಯುವುದು ಡಬ್ಲ್ಯೂಹೆಚ್‌ಒ ಮೇಲೆ ಭಾರಿ ಆರ್ಥಿಕ ಪರಿಣಾಮ ಬೀರುತ್ತದೆ. 140 ಕೋಟಿ ಜನಸಂಖ್ಯೆ ಹೊಂದಿರುವ ದೇಶ ಚೀನಾ. ಅಮೆರಿಕ 300% ನಷ್ಟು ಜನಸಂಖ್ಯೆಯನ್ನು ಈ ದೇಶ ಹೊಂದಿದೆ. ಆದರೆ, ಡಬ್ಲ್ಯೂಹೆಚ್‌ಒ ಸುಮಾರು 90% ನಷ್ಟು ಕಡಿಮೆ ಆರ್ಥಿಕ ನೆರವು ನೀಡುತ್ತದೆ ಎಂಬುದು ಟ್ರಂಪ್ ಕಾರ್ಯಕಾರಿ ಆದೇಶದ ವಾದ.
ನಿಧಿಗೆ ಹಣ ಹೇಗೆ ಬರುತ್ತೆ?
ಆರೋಗ್ಯ ಸಂಸ್ಥೆಯ ನಿಧಿಯು ಮೂಲಭೂತವಾಗಿ ಎರಡು ರೀತಿಯಲ್ಲಿ ಬರುತ್ತದೆ. ಒಂದು- ಅದರ ಎಲ್ಲಾ ಸದಸ್ಯ ರಾಷ್ಟ್ರಗಳಿಂದ ಕಡ್ಡಾಯವಾಗಿ ನಿಧಿ ಸಂಗ್ರಹವಾಗುತ್ತದೆ. ಎರಡು- ವಿವಿಧ ದೇಶಗಳು ಮತ್ತು ಸಂಸ್ಥೆಗಳು ಸ್ವಯಂಪ್ರೇರಿತ ಕೊಡುಗೆಗಳನ್ನು ನೀಡುತ್ತವೆ. ಅತಿದೊಡ್ಡ ಪಾವತಿದಾರನಾಗಿರುವ ಅಮೆರಿಕ 22.05% ಕೊಡುಗೆ ನೀಡುತ್ತದೆ. ಚೀನಾ 15% ಆರ್ಥಿಕ ನೆರವು ಕೊಡುತ್ತದೆ. ಆರೋಗ್ಯ ಸಂಸ್ಥೆಗೆ ಹರಿದು ಬರುವ ಒಟ್ಟು 578 ಮಿಲಿಯನ್ ಯುಎಸ್ ಡಾಲರ್‌ನಲ್ಲಿ ಅಮೆರಿಕವೇ ಸರಿಸುಮಾರು 138 ಮಿಲಿಯನ್ ಡಾಲರ್ ನೆರವು ನೀಡುತ್ತಿದೆ. ಚೀನಾ 87.6 ಮಿಲಿಯನ್ ಡಾಲರ್ ಕೊಡುಗೆ ಕೊಡುತ್ತಿದೆ. ಸ್ವಯಂಪ್ರೇರಿತ ಕೊಡುಗೆಗಳಲ್ಲಿಯೂ ಅಮೆರಿಕವೇ ದೊಡ್ಡ ದಾನಿಯಾಗಿದ್ದು, 2023 ರಲ್ಲಿ ಒಟ್ಟು ಕೊಡುಗೆಗಳಲ್ಲಿ ಸುಮಾರು 13% (356.3 ಮಿಲಿಯನ್ ಡಾಲರ್) ಪಾಲನ್ನು ಹೊಂದಿದೆ. ಚೀನಾ ಒಟ್ಟು ಕೊಡುಗೆಗಳು 0.14% (3.9 ಮಿಲಿಯನ್ ಡಾಲರ್) ಮಾತ್ರ. ಎರಡನೆಯ ಅತಿ ದೊಡ್ಡ ಸ್ವಯಂಪ್ರೇರಿತ ಕೊಡುಗೆದಾರರೆಂದರೆ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್.
ಯುಎಸ್ ಅಧ್ಯಕ್ಷೀಯ ಚುನಾವಣೆಗಳ ಕಾರಣ ಅನಿಶ್ಚಿತತೆಯಿಂದ ಕಳೆದ ವರ್ಷ ಡಬ್ಲ್ಯೂಹೆಚ್‌ಒ ಹೆಚ್ಚು ಸ್ವಯಂಪ್ರೇರಿತ ಕೊಡುಗೆಗಳನ್ನು ಸ್ವೀಕರಿಸಲು ಕಾರಣವಾಯಿತು. ನವೆಂಬರ್‌ನಲ್ಲಿ ಕೊನೆಗೊಂಡ 2024 ರ ಫಂಡಿಂಗ್ ಸುತ್ತಿನಲ್ಲಿ, ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಸ್ಪೇನ್ 1.7 ಬಿಲಿಯನ್ ಡಾಲರ್ ನೀಡುವುದಾಗಿ ವಾಗ್ದಾನ ಮಾಡಿದ್ದವು. ಇದು 2025-28 ರ ನಡುವೆ ಕಾರ್ಯಕ್ರಮದ ಅನುಷ್ಠಾನಕ್ಕೆ ಅಗತ್ಯವಿರುವ 7.1 ಡಾಲರ್ ಶತಕೋಟಿಯ 53% ಅನ್ನು ಡಬ್ಲ್ಯೂಹೆಚ್‌ಒ ಪಡೆಯಲು ಕಾರಣವಾಯಿತು. ಇದು 2020 ರಲ್ಲಿ ಅದರ ಹಿಂದಿನ ನಾಲ್ಕು ವರ್ಷಗಳ ಅವಧಿಗೆ ಪಡೆದುಕೊಂಡ 17% ಕ್ಕಿಂತ ಹೆಚ್ಚಾಗಿದೆ.
ಡಬ್ಲ್ಯೂಹೆಚ್‌ಒ ಪ್ರತಿಕ್ರಿಯೆ ಏನು?
ಅಮೆರಿಕದ ಈ ನಿರ್ಧಾರಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ವಿಷಾದಿಸಿದೆ. ಯುಎಸ್ ತನ್ನ ನಿಲುವನ್ನು ಪುನರ್‌ವಿಮರ್ಶೆಗೆ ಒಳಪಡಿಸುತ್ತದೆ ಎಂದು ನಂಬಿದ್ದೇವೆ. ಅಮೆರಿಕನ್ನರು ಸೇರಿದಂತೆ ವಿಶ್ವದ ಜನರ ಆರೋಗ್ಯ ಮತ್ತು ಸುರಕ್ಷತೆಯನ್ನು ರಕ್ಷಿಸುವಲ್ಲಿ ಡಬ್ಲ್ಯೂಹೆಚ್‌ಒ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಯುಎಸ್ ಮತ್ತು ಇತರೆ ಸದಸ್ಯ ರಾಷ್ಟ್ರಗಳ ಭಾಗವಹಿಸುವಿಕೆಯಿಂದ ಡಬ್ಲ್ಯೂಹೆಚ್‌ಒ ಕಳೆದ 7 ವರ್ಷಗಳಲ್ಲಿ ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ಹೇಳಿಕೊಂಡಿದೆ.
ಭಾರತದ ಮೇಲೆ ಬೀಳುತ್ತಾ ಎಫೆಕ್ಟ್?
ಡಬ್ಲ್ಯೂಹೆಚ್‌ಒ ತನ್ನ ನಿಧಿಯ ಗಮನಾರ್ಹ ಪ್ರಮಾಣವನ್ನು ಕಳೆದುಕೊಳ್ಳುವುದರಿಂದ, ಭಾರತ ಸೇರಿದಂತೆ ಅನೇಕ ದೇಶಗಳ ಆರೋಗ್ಯ ವಲಯದಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ. ಹೆಚ್‌ಐವಿ-ಮಲೇರಿಯಾ-ಕ್ಷಯರೋಗ, ಸೂಕ್ಷ್ಮಾಣುಜೀವಿಗಳ ವಿರುದ್ಧದ ಪ್ರತಿರೋಧ ಮೊದಲಾದ ಭಾರತ ಸರ್ಕಾರದ ಹಲವಾರು ಆರೋಗ್ಯ ಕಾರ್ಯಕ್ರಮಗಳಲ್ಲಿ ಡಬ್ಲ್ಯೂಹೆಚ್‌ಒ ಭಾಗವಹಿಸುತ್ತದೆ. ಮುಖ್ಯವಾಗಿ, ಇದು ದೇಶದ ಪ್ರತಿರಕ್ಷಣೆ ಕಾರ್ಯಕ್ರಮದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಂಸ್ಥೆಯ ತಂಡಗಳು ಲಸಿಕೆ ವ್ಯಾಪ್ತಿಯನ್ನು ಸಹ ಮೇಲ್ವಿಚಾರಣೆ ಮಾಡುತ್ತವೆ. ಅಷ್ಟೇ ಅಲ್ಲ, ಡಬ್ಲ್ಯೂಹೆಚ್‌ಒ ಪ್ರಪಂಚದಾದ್ಯಂತದ ದೇಶಗಳ ಆರೋಗ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತದೆ. ನಿಧಿ ಕಡಿತವು ಈ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಸಂಸ್ಥೆಗೆ ಸಾಧ್ಯವಾಗುವುದಿಲ್ಲ ಎಂದು ಭಾರತದ ಸಾರ್ವಜನಿಕ ಆರೋಗ್ಯ ತಜ್ಞರು ವಿಶ್ಲೇಷಿಸಿದ್ದಾರೆ.
ಅಮೆರಿಕ ತಜ್ಞರು ಹೊರಕ್ಕೆ?
ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಮೆರಿಕ ತಜ್ಞರು ಹೊರನಡೆಯುವ ಸಾಧ್ಯತೆ ಕೂಡ ಇದೆ. ಯುಎಸ್ ಪರಿಣಿತರ ನಷ್ಟವು ಡಬ್ಲ್ಯೂಹೆಚ್‌ಒ ಪಾತ್ರದ ಮೇಲೆ ಪರಿಣಾಮ ಬೀರಲಿದೆ. ವೈರಸ್, ದೀರ್ಘ ಕಾಯಿಲೆ, ಸಾಂಕ್ರಾಮಿಕ ರೋಗಗಳು ಮೊದಲಾದವುಗಳಿಗೆ ಸಂಬಂಧಿಸಿದಂತೆ ಡಬ್ಲ್ಯೂಹೆಚ್‌ಒ ಮಾರ್ಗಸೂಚಿಗಳನ್ನು ಒದಗಿಸುತ್ತದೆ. ಅದನ್ನು ಜಾಗತಿಕ ದೇಶಗಳು ತಮ್ಮ ಸ್ಥಳೀಯ ಕಾರ್ಯಕ್ರಮಗಳಿಗೆ (ಆರೋಗ್ಯಕ್ಕೆ ಸಂಬಂಧಿಸಿ) ಬಳಸಿಕೊಳ್ಳುತ್ತವೆ. ಈ ಮಾರ್ಗಸೂಚಿಗಳನ್ನು ಸಾಮಾನ್ಯವಾಗಿ ಎಲ್ಲಾ ಪ್ರಕಟಿತ ಪುರಾವೆಗಳನ್ನು ಸಂಗ್ರಹಿಸಿ, ಅವುಗಳನ್ನು ಶ್ರೇಣೀಕರಿಸಿ ನಂತರ ತಜ್ಞರ ಸಮಿತಿಗಳಲ್ಲಿಟ್ಟು ಚರ್ಚಿಸುವ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ. ರೋಗ ಸ್ಥಳೀಯತೆ ಮತ್ತು ಅಲ್ಲಿ ನಡೆಸುವ ಸಂಶೋಧನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸಮಿತಿಗಳನ್ನು ರಚಿಸಲಾಗುತ್ತದೆ. ಬೇರೆ ಬೇರೆ ದೇಶಗಳ ಪ್ರತಿನಿಧಿಗಳೂ ಆ ಸಮಿತಿಯಲ್ಲಿರುತ್ತದೆ. ಯುಎಸ್ ತಜ್ಞರು ಅಂತಹ ಹಲವಾರು ಸಮಿತಿಗಳ ಭಾಗವಾಗಿದ್ದಾರೆ. ಅವರನ್ನು ಹೊರತೆಗೆದರೆ ಡಬ್ಲ್ಯೂಹೆಚ್‌ಒ ಕೆಲಸದ ಮೇಲೆ ಪರಿಣಾಮ ಬೀರುತ್ತದೆ.
ಸದಸ್ಯ ರಾಷ್ಟ್ರಗಳು ಹೊರಬರಬಹುದೇ?
ಡಬ್ಲ್ಯೂಹೆಚ್‌ಒನ ಸಂವಿಧಾನದಲ್ಲಿ ಸದಸ್ಯ ರಾಷ್ಟ್ರಗಳು ಹೊರಬರುವುದಕ್ಕೆ ಯಾವುದೇ ಅವಕಾಶವಿಲ್ಲ. ಆದಾಗ್ಯೂ, 1948 ರಲ್ಲಿ ಸಂಸ್ಥೆಗೆ ಸೇರುವ ಸಮಯದಲ್ಲಿ ಯುಎಸ್ ಕಾಂಗ್ರೆಸ್ ಒಂದು ಷರತ್ತನ್ನು ಹಾಕಿತು. ಒಂದು ವರ್ಷದ ಸೂಚನೆಯನ್ನು ನೀಡಿದ ನಂತರ ಮತ್ತು ಪ್ರಸಕ್ತ ವರ್ಷದ ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಿದ ನಂತರ ದೇಶವು ಸಂಸ್ಥೆಯಿAದ ಹೊರನಡೆಯಬಹುದು. ಹೊರನಡೆಯುವ ಪ್ರಕ್ರಿಯೆ ಕೂಡ ತಕ್ಷಣಕ್ಕೆ ಆಗುವುದಿಲ್ಲ. ಒಂದು ವರ್ಷದವರೆಗಿನ ಅವಧಿ ಇರುತ್ತದೆ. ಈ ಅವಧಿಯಲ್ಲಿ ಯುಎಸ್‌ನ ನಿರ್ಧಾರದ ಮರುಪರಿಶೀಲನೆಗೆ ಅವಕಾಶವೂ ಇರುತ್ತದೆ.
ಅಮೆರಿಕ ಎಷ್ಟು ಮುಖ್ಯ?
1948 ರಲ್ಲಿ ಸ್ಥಾಪನೆಯಾದಾಗಿನಿಂದ ಡಬ್ಲ್ಯೂಹೆಚ್‌ಒಗೆ ಮೂಲಾಧಾರವಾಗಿ ವಾಷಿಂಗ್ಟನ್ ಸೇವೆ ಸಲ್ಲಿಸಿದೆ. ಸಂಸ್ಥೆಯ ಅತಿದೊಡ್ಡ ಏಕೈಕ ದಾನಿಯಾಗಿದೆ. ಸಂಸ್ಥೆಯ 2023 ಬಜೆಟ್‌ನ 18% ರಷ್ಟು ಕೊಡುಗೆಯನ್ನು ಅಮೆರಿಕ ನೀಡಿತು. ಇದು ವಾರ್ಷಿಕವಾಗಿ ನೂರಾರು ಮಿಲಿಯನ್ ಡಾಲರ್‌ಗಳಷ್ಟಿದೆ. ಈ ನಿಧಿಗಳು ರೋಗಗಳನ್ನು ನಿರ್ಮೂಲನೆ ಮಾಡುವುದರಿಂದ ಹಿಡಿದು ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ತುರ್ತುಸ್ಥಿತಿಗಳಿಗೆ ಸ್ಪಂದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. 2024-2025ರಲ್ಲಿ ಡಬ್ಲೂö್ಯಹೆಚ್‌ಒನ ಬಜೆಟ್ 6.8 ಶತಕೋಟಿ ಡಾಲರ್‌ನಷ್ಟಿದೆ. ಅದರಲ್ಲಿ ಯುಎಸ್ ಕೊಡುಗೆಗಳು 22% ಕಡ್ಡಾಯ ನಿಧಿಯನ್ನು ಹೊಂದಿವೆ. ಈ ಪ್ರಮಾಣದ ಆರ್ಥಿಕ ಬೆಂಬಲವನ್ನು ಜಗತ್ತಿನ ಯಾವ ದೇಶವೂ ನೀಡಿಲ್ಲ.
ಡಬ್ಲ್ಯೂಹೆಚ್‌ಒ ಕೈ ಹಿಡಿಯುತ್ತ ಭಾರತ, ದಕ್ಷಿಣ ದೇಶಗಳು?
ಯುನೈಟೆಡ್ ಸ್ಟೇಟ್ಸ್ ಸೃಷ್ಟಿಸಿದ ನಿರ್ವಾತವನ್ನು ಚೀನಾ (China) ಮತ್ತು ಭಾರತ (India) ಸೇರಿದಂತೆ ಜಾಗತಿಕ ದಕ್ಷಿಣದ ದೇಶಗಳು ತುಂಬುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ‘ಪ್ರಧಾನಿ ಮೋದಿ ಅವರು ಜನರಿಗಾಗಿ ಸಮಗ್ರ ಆರೋಗ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಉದಾಹರಣೆಯನ್ನು ನೀಡುತ್ತಿದ್ದಾರೆ. ಜಾಗತಿಕ ದಕ್ಷಿಣದ ಧ್ವನಿಯಾಗಿ ಭಾರತವು ಅಗ್ರಸ್ಥಾನದಲ್ಲಿದೆ. ಹೊಸ ಜಾಗತಿಕ ಕ್ರಮದಲ್ಲಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ಇತರರ ದೇಶಗಳು ನಮಗೆ ಬೇಕು. ಅವರ ಜೊತೆಗೆ ಇತರೆ ದೇಶಗಳನ್ನು ಮೇಲೆತ್ತುವ ಕಾರ್ಯ ಆಗಬೇಕಿದೆ’ ಎಂದು ತಜ್ಞರಾದ ಡಾ. ಅಲಕಿಜಾ ಅಭಿಪ್ರಾಯಪಟ್ಟಿದ್ದಾರೆ.
ವಾಷಿಂಗ್ಟನ್: ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ (Donald Trump) ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅಮೆರಿಕದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಅಕ್ರಮ ವಲಸಿಗರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಅದರಂತೆ ಬೃಹತ್ ಕಾರ್ಯಾಚರಣೆಯೊಂದರಲ್ಲಿ 500ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು (Illegal Immigrants) ಬಂಧಿಸಿದ್ದು, ನೂರಾರು ಮಂದಿಯನ್ನ ಗಡಿಪಾರು ಮಾಡಲಾಗಿದೆ.
????DAILY IMMIGRATION ENFORCEMENT REPORTING FROM ICE????
538 Total Arrests
373 Detainers Lodged
Examples of the criminals arrested below ????????????
ಈ ಕುರಿತು ಶ್ವೇತಭವನದ (White House) ಮಾಧ್ಯಮ ಕಾರ್ಯದರ್ಶಿ ಕರೋಲಿನ್ ಲೀವಿಟ್ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಯುಎಸ್‌ನ ಅಧಿಕಾರಿಗಳು ಸುಮಾರು 538 ಅಕ್ರಮ ವಲಸಿಗರನ್ನು ಬಂಧಿಸಿದ್ದು, ಮಿಲಿಟರಿ ವಿಮಾನಗಳನ್ನು ಬಳಸಿಕೊಂಡು ನೂರಾರು ಮಂದಿಯನ್ನ ಗಡಿಪಾರು (Deported) ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುದ್ಧವನ್ನು ಕೊನೆಗೊಳಿಸದಿದ್ದರೆ ಮತ್ತಷ್ಟು ನಿರ್ಬಂಧ, ಸುಂಕ – ಪುಟಿನ್‌ಗೆ ಟ್ರಂಪ್ ಬೆದರಿಕೆ
ಶಂಕಿತ ಭಯೋತ್ಪಾದಕರು, ಟ್ರೆನ್ ಡಿ ಅರಗುವಾ ಗ್ಯಾಂಗ್‌ನ ನಾಲ್ವರು ಸದಸ್ಯರು ಹಾಗೂ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ಕೃತ್ಯ ಎಸಗಿ ಶಿಕ್ಷೆಗೊಳಾದವರು ಸೇರಿದಂತೆ 538 ಮಂದಿಯನ್ನು ಬಂಧಿಸಲಾಗಿದೆ. ಬಳಿಕ ಮಿಲಿಟರಿ ವಿಮಾನದ ಮೂಲಕ ನೂರಾರು ಮಂದಿಯನ್ನ ಗಡಿಪಾರು ಮಾಡಲಾಗಿದೆ. ಇದು ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಗರಿಪಾರು ಕಾರ್ಯಾಚರಣೆ ಆಗಿದೆ. ಈ ಮೂಲಕ ಅಮೆರಿಕದ ನೂತನ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಎಂದು ಬೀಗಿದ್ದಾರೆ.
ವಾಷಿಂಗ್ಟನ್: ಟ್ರಂಪ್ ಅಧಿಕಾರಕ್ಕೇರಿದ ಕೂಡಲೇ ಕ್ಯಾಪಿಟಲ್ ಭವನದ ಮೇಲೆ ದಾಳಿ ನಡೆಸಿದ್ದ 1,600 ಮಂದಿಗೆ ಕ್ಷಮಾದಾನ ನೀಡಿರುವುದು ಭಾರೀ ವಿವಾದ ಸೃಷ್ಟಿಸಿದೆ. ಮೂವರು ಫೆಡರಲ್ ನ್ಯಾಯಮೂರ್ತಿಗಳು ಬಹಿರಂಗವಾಗಿಯೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಖಂಡಿಸಿದ್ದಾರೆ.
‘ಒಂದು ಕಹಿ ಘಟನೆಯನ್ನು ಕ್ಷಮೆ ಬದಲಿಸಲಾಗದು.. ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ನಡೆದ ಉಲ್ಲಂಘನೆಗಳನ್ನು ಸರಿ ಮಾಡಲಾಗದು’ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಟ್ರಂಪ್ ಮಾತ್ರ ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಕ್ಯಾಪಿಟಲ್ ಭವನದ ಮೇಲೆ ದಾಳಿ ನಡೆಸಿದ್ದವರನ್ನು ಟ್ರಂಪ್ ದೇಶಭಕ್ತರಿಗೆ ಹೋಲಿಕೆ ಮಾಡಿದ್ದಾರೆ.
ಈ ಮಧ್ಯೆ, ಅಕ್ರಮ ವಲಸಿಗರ ಬಹಿಷ್ಕರಣೆಗೆ ಸಂಬಂಧಿಸಿದ ಮಸೂದೆಗೆ ಅಮೆರಿಕಾ ಕಾಂಗ್ರೆಸ್ ಅನುಮೋದನೆ ನೀಡಿದೆ. ಈ ವಿಚಾರದಲ್ಲಿ ಟ್ರಂಪ್ ನಿಲುವನ್ನು ಅಮೆರಿಕಾ ಕಾಂಗ್ರೆಸ್ ಬೆಂಬಲಿಸಿದೆ. ಅಮೆರಿಕಾದಲ್ಲಿ ಯಾವುದೇ ಕ್ಷಣದಲ್ಲಿ ಗಡಿಪಾರು ಪ್ರಕ್ರಿಯೆ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಮೆಕ್ಸಿಕೋ ದೇಶ ತನ್ನ ಗಡಿಯಲ್ಲಿನ ಶರಣಾರ್ಥಿಗಳಿಗಾಗಿ ಶಿಬಿರವನ್ನು ತೆರೆಯುತ್ತಿದೆ.
ಇನ್ನು, ಭಾರತದಿಂದ ಅಕ್ರಮವಾಗಿ ಅಮೆರಿಕಾಗೆ ವಲಸೆ ಹೋದವರನ್ನು ಮತ್ತೆ ದೇಶಕ್ಕೆ ಕರೆದುಕೊಳ್ಳಲು ವಿದೇಶಾಂಗ ಮಂತ್ರಿ ಜೈಶಂಕರ್ ಒಪ್ಪಿಗೆ ಸೂಚಿಸಿದ್ದಾರೆ.
ವಾಷಿಂಗ್ಟನ್: ಹುಟ್ಟಿನಿಂದ ಸಿಗುವ ಪೌರತ್ವ ಹಕ್ಕು ರದ್ದುಗೊಂಡ ಭೀತಿ ಅಮೆರಿಕದಲ್ಲಿರುವ ವಲಸಿಗರಲ್ಲಿ ಹುಟ್ಟಿಕೊಂಡಿದೆ. ಕಾಯ್ದೆ ಜಾರಿಗೆ ಬರುವ ಮುನ್ನವೇ ಹೆರಿಗೆ ಮಾಡಿಸಿಕೊಳ್ಳಲು ಗರ್ಭಿಣಿಯರು ಆಸ್ಪತ್ರೆಗಳಿಗೆ ದಾಂಗುಡಿ ಇಟ್ಟಿದ್ದಾರೆ. ಇವರ ಪೈಕಿ ಅನೇಕ ಭಾರತೀಯರು ಇದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಫೆ.20 ರ ಒಳಗೆ ಸಿಸೇರಿಯನ್ ಮೂಲಕ ಹೆರಿಗೆಗಾಗಿ ಅಮೆರಿಕದ ಹೆರಿಗೆ ಆಸ್ಪತ್ರೆಗಳಿಗೆ (ಮೆಟರ್ನಿಟಿ ಕ್ಲಿನಿಕ್) ಗರ್ಭಿಣಿಯರು ಧಾವಿಸುತ್ತಿದ್ದಾರೆ. ಸುಮಾರು 20 ಭಾರತೀಯ ದಂಪತಿಗಳು ಸಿಸೇರಿಯನ್‌ಗೆ ಫೋನ್ ಕರೆ ಮಾಡಿದ್ದಾರೆಂದು ಭಾರತೀಯ ಮೂಲದ ಸ್ತ್ರೀರೋಗ ತಜ್ಞರೊಬ್ಬರು ತಿಳಿಸಿದ್ದಾರೆ.
ಫೆಬ್ರವರಿ 20 ಏಕೆ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶದ ಅಡಿಯಲ್ಲಿ ಜನ್ಮದತ್ತ ಪೌರತ್ವ ಫೆ.20 ರಂದು ರದ್ದುಗೊಳ್ಳಲಿದೆ. ಅಲ್ಲಿಂದಾಚೆಗೆ ಹೊಸ ಕಾಯ್ದೆ ಜಾರಿಗೆ ಬರುವ ಸಾಧ್ಯತೆ ಇದೆ.
ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಟ್ರಂಪ್ ಸಹಿ ಮಾಡಿದ ಕಾರ್ಯಕಾರಿ ಆದೇಶಗಳಲ್ಲಿ ಒಂದು ಅಮೆರಿಕದಲ್ಲಿ ಜನ್ಮದತ್ತ ಪೌರತ್ವ ಕೊನೆಗೊಳಿಸುವುದು. ಆದ್ದರಿಂದ, ಫೆ.19 ರವರೆಗೆ ಅಮೆರಿಕದ ನಾಗರಿಕರಲ್ಲದ ದಂಪತಿಗೆ ಜನಿಸಿದ ಮಕ್ಕಳು ಅಮೆರಿಕದ ಪ್ರಜೆಗಳಾಗುತ್ತಾರೆ. ನಂತರದ ದಿನಗಳಲ್ಲಿ ಜನಿಸುವ ಮಕ್ಕಳು ಅಮೆರಿಕದ ಪ್ರಜೆಯಾಗುವುದಿಲ್ಲ.
ಅಮೆರಿಕದಲ್ಲಿ ತಾತ್ಕಾಲಿಕ H-1B ಮತ್ತು L1 ವೀಸಾಗಳ ಮೇಲೆ ಕೆಲಸ ಮಾಡುತ್ತಿರುವ ಭಾರತೀಯರಿದ್ದಾರೆ. ಅವರು ಅಮೆರಿಕದಲ್ಲಿ ಶಾಶ್ವತ ನಿವಾಸವನ್ನು ನೀಡುವ ಗ್ರೀನ್ ಕಾರ್ಡ್‌ಗಳಿಗೂ ಕಾಯುತ್ತಿದ್ದಾರೆ. ಅಮೆರಿಕದ ನಾಗರಿಕರು ಅಥವಾ ಗ್ರೀನ್ ಕಾರ್ಡ್ ಹೊಂದದ ದಂಪತಿಗೆ ಜನಿಸಿದ ಮಕ್ಕಳು ಹುಟ್ಟಿನಿಂದಲೇ ಅಮೆರಿಕದ ನಾಗರಿಕರಾಗುವುದಿಲ್ಲ ಎಂಬುದು ಹೊಸ ಕಾಯ್ದೆಯಲ್ಲಿ ಅಡಕವಾಗಿದೆ.
ಹುಟ್ಟಿನಿಂದ ಸಿಗುವ ಪೌರತ್ವ ಎಂದರೇನು?
ಯಾರಾದರೂ ಅಮೆರಿಕದಲ್ಲಿ ಜನಿಸಿದರೆ ಅವರು ಅಮೆರಿಕದ ಪ್ರಜೆ. ಇಲ್ಲಿ ಪೋಷಕರ ವಲಸೆ ಸ್ಥಿತಿಗತಿಯನ್ನು ಪರಿಗಣಿಸಲಾಗುವುದಿಲ್ಲ. ಉದಾಹರಣೆಗೆ, ಪ್ರವಾಸಿ ವೀಸಾ ಅಥವಾ ಇನ್ಯಾವುದೇ ರೀತಿಯ ವೀಸಾ ಇರುವ ಭಾರತೀಯ ದಂಪತಿ ಅಮೆರಿಕದಲ್ಲಿ ಮಗುವಿಗೆ ಜನ್ಮ ನೀಡಿದರೆ, ಆ ಮಗು ಅಧಿಕೃತವಾಗಿ ಅಮೆರಿಕದ ಪ್ರಜೆ.
ವಾಷಿಂಗ್ಟನ್: ಅಮೆರಿಕ (USA) ಸೇರಿದಂತೆ ವಿದೇಶಗಳಲ್ಲಿ ಕಾನೂನು ಬಾಹಿರವಾಗಿ ವಾಸಿಸುತ್ತಿರುವ ಭಾರತೀಯರ ಕಾನೂನು ಬದ್ಧ ವಾಪಸಾತಿಗೆ ನವದೆಹಲಿ ಮುಕ್ತವಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ (S Jaishankar) ಹೇಳಿದ್ದಾರೆ.
ಈ ಕುರಿತು ವಾಷಿಂಗ್ಟನ್ (Washington) ಡಿಸಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜೈಶಂಕರ್, ಕಾನೂನು ಬಾಹಿರವಾಗಿ ಯಾರಾದ್ರೂ ಇದ್ದರೆ, ಅವರು ನಮ್ಮ ದೇಶದ ಪ್ರಜೆಗಳೆಂದು ಖಚಿತವಾಗಿದ್ದರೆ, ಭಾರತಕ್ಕೆ ಮರಳಬಹುದು. ಅದಕ್ಕೆ ದೆಹಲಿ ಮುಕ್ತವಾಗಿರುತ್ತದೆ. ಈ ಬಗ್ಗೆ ಭಾರತದ ನಿಲುವು ಸ್ಪಷ್ಟ ಎಂದಿದ್ದಾರೆ. ಈ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಯುದ್ಧವನ್ನು ಕೊನೆಗೊಳಿಸದಿದ್ದರೆ ಮತ್ತಷ್ಟು ನಿರ್ಬಂಧ, ಸುಂಕ – ಪುಟಿನ್‌ಗೆ ಟ್ರಂಪ್ ಬೆದರಿಕೆ
ಭಾರತವು ತನ್ನ ದೇಶದ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಹೆಚ್ಚು ಅವಕಾಶ ಹೊಂದಬೇಕೆಂದು ಬಯಸುತ್ತದೆ. ಅದೇ ಸಮಯದಲ್ಲಿ ಅಕ್ರಮ ವಲಸೆಯನ್ನು ದೃಢವಾಗಿ ವಿರೋಧಿಸುತ್ತದೆ. ಏಕೆಂದರೆ ಅಕ್ರಮ ವಲಸೆಯು ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆಗಳೂ ಇರುತ್ತವೆ ಎಂದು ಜೈಶಂಕರ್ ಹೇಳಿದ್ದಾರೆ. ಇದನ್ನೂ ಓದಿ: ಜನ್ಮತಃ ಪೌರತ್ವ ಕಾಯ್ದೆ ರದ್ದತಿಗೆ ಅಮೆರಿಕದಲ್ಲೇ ಆಕ್ರೋಶ – 18,000 ಭಾರತೀಯರು ಗಡಿಪಾರಾಗ್ತಾರಾ?
ವಾಷಿಂಗ್ಟನ್: ಉಕ್ರೇನ್ (Ukraine) ವಿರುದ್ಧ ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸದೇ ಇದ್ದರೆ ರಷ್ಯಾದ (Russia) ಮೇಲೆ ಹೆಚ್ಚಿನ ನಿರ್ಬಂಧ ಮತ್ತು ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬೆದರಿಕೆ ಹಾಕಿದ್ದಾರೆ
ಅಧ್ಯಕ್ಷ ಪದವಿ ಸ್ವೀಕರಿಸಿದ ಮೂರನೇ ದಿನವೇ ತಮ್ಮ ಸಾಮಾಜಿಕ ಜಾಲತಾಣ ಮಾಧ್ಯಮ ಟ್ರುಥ್‌ನಲ್ಲಿ ಟ್ರಂಪ್ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಹೆಸರನ್ನು ಉಲ್ಲೇಖಿಸಿಯೇ ಪೋಸ್ಟ್ ಮಾಡಿದ್ದಾರೆ.
ನಾವು ಒಪ್ಪಂದ ಮಾಡಿಕೊಳ್ಳದಿದ್ದರೆ ಶೀಘ್ರವೇ ಅಮೆರಿಕ ಮತ್ತು ಇತರ ದೇಶಗಳಿಗೆ ಮಾರಾಟ ಮಾಡುವ ರಷ್ಯಾದ ಯಾವುದೇ ವಸ್ತುವಿನ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ ಎಂದು ಬರೆದಿದ್ದಾರೆ.
ನಾನು ರಷ್ಯಾವನ್ನು ನೋಯಿಸಲು ಬಯಸುವುದಿಲ್ಲ. ನಾನು ರಷ್ಯಾದ ಜನರನ್ನು ಪ್ರೀತಿಸುತ್ತೇನೆ ಮತ್ತು ಅಧ್ಯಕ್ಷ ಪುಟಿನ್ ಅವರೊಂದಿಗೆ ಯಾವಾಗಲೂ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಎರಡನೇ ಮಹಾಯುದ್ಧವನ್ನು ಗೆಲ್ಲಲು ರಷ್ಯಾ ನಮಗೆ ಸಹಾಯ ಮಾಡಿತ್ತು. ಈ ಯುದ್ಧದಲ್ಲಿ ಸುಮಾರು 6 ಕೋಟಿ ಜನರು ಪ್ರಾಣಕಳೆದುಕೊಂಡರು ಎಂಬುದನ್ನು ಮರೆಯಬಾರದು ಎಂದರು.
ನಾನು ಚುನಾವಣೆಯಲ್ಲಿ ಗೆದ್ದರೆ ರಷ್ಯಾ ಉಕ್ರೇನ್ ಯುದ್ಧವನ್ನು ಕೊನೆಗೊಳಿಸುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ಪದೇ ಪದೇ ಹೇಳುತ್ತಿದ್ದರು.
ವಾಷಿಂಗ್ಟನ್: ಅಮೆರಿಕ (America) ಅಧ್ಯಕ್ಷರಾದ ತಕ್ಷಣ ಟ್ರಂಪ್ (Donald Trump) ತೆಗೆದುಕೊಂಡ ನಿರ್ಣಯಗಳು ನಿರೀಕ್ಷೆಯಂತೆ ವಿವಾದ ಹುಟ್ಟು ಹಾಕಿವೆ. ಜನ್ಮತಃ ಪೌರತ್ವ ಕಾಯ್ದೆ (Birthright Citizenship) ರದ್ದು ಮಾಡಿದ ಟ್ರಂಪ್ ವಿರುದ್ಧ ಅಮೆರಿಕದಲ್ಲೇ ಭಾರೀ ಆಕ್ರೋಶ ವ್ಯಕ್ತವಾಗಿದೆ..
ಡೆಮಾಕ್ರೆಟಿಕ್ ಆಡಳಿತ ಇರುವ 22 ರಾಜ್ಯಗಳು ಕಾನೂನು ಸಮರಕ್ಕೆ ಮುಂದಾಗಿವೆ. ಅಧ್ಯಕ್ಷ ಟ್ರಂಪ್ ನಿರ್ಣಯ ಸಂವಿಧಾನ ವಿರೋಧಿ ಎನ್ನುತ್ತಾ ಪ್ರತ್ಯೇಕವಾಗಿ ಕೋರ್ಟ್ ಮೆಟ್ಟಿಲೇರಿವೆ. ಟ್ರಂಪ್ ಆದೇಶ ಜಾರಿಯಾಗುವ ಮುನ್ನವೇ ತಡೆಯಬೇಕು ಎಂದು ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಕೋರ್ಟನ್ನು ಕೋರಿದ್ದಾರೆ. ಸರಿಯಾದ ದಾಖಲೆ ಪತ್ರಗಳು ಇಲ್ಲದೇ ಅಮೆರಿಕದಲ್ಲಿ 1.40 ಕೋಟಿ ಮಂದಿ ನೆಲೆಸಿದ್ದು, ಇದರಲ್ಲಿ ಭಾರತೀಯರ ಸಂಖ್ಯೆ 7.25 ಲಕ್ಷ ಇದೆ. ಈ ಪೈಕಿ 18,000 ಭಾರತೀಯರನ್ನು ಗಡಿಪಾರು ಮಾಡಲು ಅಮೆರಿಕ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಇದನ್ನೂ ಓದಿ: Champions Trophy: ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ಹೋಗಲ್ಲ – ಬಿಸಿಸಿಐ ಸ್ಪಷ್ಟ ಸಂದೇಶ
ಈ ಮಧ್ಯೆ, ಮೆಕ್ಸಿಕೋ ಕೆನಡಾ ಬೆನ್ನಲ್ಲೇ ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲು ಟ್ರಂಪ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಫೆಬ್ರವರಿ 1ರಿಂದ ಚೀನಾ ಉತ್ಪನ್ನಗಳ ಮೇಲೆ ಶೇಕಡಾ 10ರಷ್ಟು ಸುಂಕ ವಿಧಿಸುವ ಸಾಧ್ಯತೆ ಇದೆ. ಇದು ಚೀನಾ ಆತಂಕಕ್ಕೆ ಕಾರಣವಾಗಿದೆ. ಪುಟಿನ್ ಚರ್ಚೆಗೆ ಬಂದಿಲ್ಲ ಅಂದರೆ ರಷ್ಯಾ ಮೇಲೆ ದಿಗ್ಬಂಧನ ವಿಧಿಸುವ ಎಚ್ಚರಿಕೆಯನ್ನು ಟ್ರಂಪ್ ನೀಡಿದ್ದಾರೆ. ಇದನ್ನೂ ಓದಿ: ಮೀಸಲಾತಿ ಹೆಸರಲ್ಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನ – ರಾಜಕೀಯಕ್ಕೆ ಧುಮುಕ್ತಾರಾ ಕೂಡಲಸಂಗಮ ಸ್ವಾಮೀಜಿ?