ವಾಷಿಂಗ್ಟನ್: ಮಹಿಳಾ ಕ್ರೀಡೆಗಳಲ್ಲಿ ತೃತೀಯಲಿಂಗಿ ಕ್ರೀಡಾಪಟುಗಳನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ಮಹಿಳಾ ಕ್ರೀಡೆಗಳಿಂದ ಪುರುಷರನ್ನು ದೂರವಿಡುವುದು ಎಂಬ ಶೀರ್ಷಿಕೆಯ ಮೇಲೆ ಆದೇಶ ಹೊರಡಿಸಲಾಗಿದೆ. ಹುಟ್ಟಿನಿಂದ ಬಂದ ಲಿಂಗತ್ವವನ್ನು ಅಮೆರಿಕ ಸರ್ಕಾರ ಪರಿಗಣಿಸಿದೆ.
ಮಹಿಳಾ ಕ್ರೀಡೆಗಳಲ್ಲಿ ತೃತೀಯಲಿಂಗಿಗಳು ಭಾಗವಹಿಸುವುದಕ್ಕೆ ಮಹಿಳಾ ಕ್ರೀಡಾಪಟುಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಇದು ಆಡಳಿತದ ಶೀರ್ಷಿಕೆ IX ರ ವ್ಯಾಖ್ಯಾನಕ್ಕೆ ಅನುಗುಣವಾಗಿದೆ. ಹುಡುಗಿಯರು ಮತ್ತು ಮಹಿಳೆಯರ ಕ್ರೀಡೆಗಳಲ್ಲಿ ತೃತೀಯಲಿಂಗಿ ಕ್ರೀಡಾಪಟುಗಳು ಸ್ಪರ್ಧಿಸುವುದನ್ನು ನಿಷೇಧಿಸುತ್ತದೆ.
– ಟ್ರಂಪ್ ಪ್ಲ್ಯಾನ್ ಇತಿಹಾಸವನ್ನೇ ಬದಲಾಯಿಸಬಹುದು; ಇಸ್ರೇಲ್ ಪ್ರಧಾನಿ
ವಾಷಿಂಗ್ಟನ್: ಕೆಲ ದಿನಗಳ ಹಿಂದೆಯಷ್ಟೇ ಇಸ್ರೇಲ್-ಹಮಾಸ್ ನಡುವಿನ ಕದನ ವಿರಾಮದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (onald Trump) ಇದೀಗ ಗಾಜಾ ಪಟ್ಟಿಯ (Gaza Strip) ಮೇಲೆ ಕಣ್ಣಿಟ್ಟಿದ್ದಾರೆ. ಟ್ರಂಪ್ ಅವರ ಈ ಹೊಸ ಪ್ರಸ್ತಾಪ ವಿಶ್ವವನ್ನೇ ನಿಬ್ಬೆರಗಾಗುವಂತೆ ಮಾಡಿದೆ.
JUST IN: President Trump says the Gaza Strip will become the “Riviera of the Middle East” just minutes after saying the U.S. would “take over” the Strip.
“We have an opportunity to do something that could be phenomenal.”
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರ ಶ್ವೇತಭವನದ ಭೇಟಿಯ ಸಮಯದಲ್ಲಿ ಗಾಜಾವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಪ್ರಸ್ತಾವವನ್ನು ಟ್ರಂಪ್ ಮಂಡಿಸಿದ್ದಾರೆ. ಟ್ರಂಪ್ ಆವರ ಆಫರ್ ಅನ್ನು ಎರಡು ರಾಷ್ಟ್ರಗಳು ಸ್ಪಷ್ಟವಾಗಿ ತಿರಸ್ಕರಿಸಿದೆ. ಆದರೂ, ಯುದ್ದ ಪೀಡಿತ ಪ್ರದೇಶದಿಂದ ಹೊರಕ್ಕೆ ಹೋಗಬೇಕು ಮತ್ತು ಈಜಿಪ್ಟ್ ಅಥವಾ ಜೋರ್ಡಾನ್ ಮುಂತಾದ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಪ್ಯಾಲೆಸ್ತೀನಿಯನ್ನರು ಸ್ಥಳಾಂತರಗೊಳ್ಳಬೇಕು ಎಂದು ಟ್ರಂಪ್ ಒತ್ತಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದೇ ವೇಳೆ ಸ್ಫೋಟಗೊಳ್ಳದ ಬಾಂಬ್ ಗಳನ್ನು ನಿಷ್ಕಿಯಗೊಳಿಸಲಾಗುವುದು. ಯುದ್ದದಿಂದ ನೆಲಸಮವಾಗಿರುವ ಕಟ್ಟಡದ ಅವಶೇಷಗಳ ಜಾಗವನ್ನು ಸಮತಟ್ಟು ಮಾಡಲಾಗುವುದು. ಆರ್ಥಿಕತೆಯನ್ನು ಸರಿದಾರಿಗೆ ತರಲಾಗುವುದು ಮತ್ತು ಅಲ್ಲಿನ ಜನರಿಗೆ ಉದ್ಯೋಗ ಸೃಷ್ಟಿಸಲಾಗುವುದು ಎಂಬ ಆಫರ್‌ಗಳನ್ನೂ ಟ್ರಂಪ್ ನೀಡಿದ್ದಾರೆ. ಜೊತೆಗೆ ಗಾಜಾದಲ್ಲಿರುವ ಸುಮಾರು 20 ಲಕ್ಷ ನಾಗರಿಕರು ಬೇರೆ ದೇಶಕ್ಕೆ ಹೋಗಬೇಕು ಎನ್ನುವ ಷರತ್ತನ್ನೂ ವಿಧಿಸಿದ್ದಾರೆ.
ಮುಂದುವರಿದು… ನಮ್ಮ ಆಫರ್ ಸ್ವೀಕರಿಸಲು ಇವರು ಯೋಗ್ಯರಲ್ಲ, ಇವರಿಗಾಗಿ ನಾವು ಅಷ್ಟೊಂದು ಹಣ ಖರ್ಚು ಮಾಡುವುದರಲ್ಲಿ ಅರ್ಥವಿಲ್ಲ. ಅಷ್ಟೊಂದು ಅನಾಹುತ ನಡೆಯುತ್ತಿದ್ದರೂ, ತಮ್ಮ ಹಕ್ಕಿಗಾಗಿ, ತಮ್ಮ ಜೀವನಕ್ಕಾಗಿ ಇವರು ಪಣತೊಟ್ಟವರಲ್ಲ. ತಮ್ಮ ಇಂದಿನ ಶೋಚನೀಯ ಸ್ಥಿತಿಗೆ ಅವರೇ ಕಾರಣ ಎಂದು ಟ್ರಂಪ್ ಮಾರ್ಮಿಕವಾಗಿ ನುಡಿದಿದ್ದಾರೆ. ಇದನ್ನೂ ಓದಿ: ಅಮೆರಿಕದಿಂದ ಅಕ್ರಮ ವಲಸಿಗರು ಗಡಿಪಾರು – 205 ಭಾರತೀಯ ಪ್ರಯಾಣಿಕರಿಗೆ ವಿಮಾನದಲ್ಲಿ ಒಂದೇ ಟಾಯ್ಲೆಟ್
ಆದ್ರೆ ಗಾಜಾಪಟ್ಟಿಯಿಂದ ಪ್ಲ್ಯಾಲೆಸ್ತೀನಿಯನ್ನರನ್ನು ಸ್ಥಳಾಂತರಿಸುವುದರಿಂದ ಅದು ಮಧ್ಯಪ್ರಾಚ್ಯದ ಇತರ ಪ್ರದೇಶಗಳನ್ನು ಅಸ್ತಿರಗೊಳಿಸಬಹುದು. ಸಂಘರ್ಷ ಹೆಚ್ಚಿಸಬಹುದು ಹಾಗೂ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ದೀರ್ಘಕಾಲಕ್ಕೆ ಧಕ್ಕೆಯಾಗಬಹುದು ಎಂದು ಟ್ರಂಪ್‌ಗೆ ಮಿತ್ರರಾಷ್ಟ್ರದ ನಾಯಕರು ಎಚ್ಚರಿಸಿದ್ದಾರೆ.
ಇತಿಹಾಸ ಬದಲಾಯಿಸಬಹುದು:
ಇನ್ನೂ ಶ್ವೇತಭವನಕ್ಕೆ ಭೇಟಿ ನೀಡಿರುವ ನೆತನ್ಯಾಹು, ಟ್ರಂಪ್ ಪ್ರಸ್ತಾಪದ ಬಗ್ಗೆ ಮಾತನಾಡಿದ್ದಾರೆ. ಗಾಜಾ ಪಟ್ಟಿಯ ಪ್ಯಾಲೆಸ್ತೀನಿಯನ್ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಮುಂದಾಗಿರುವ ಟ್ರಂಪ್ ಅವರ ಯೋಜನೆ ʻಇತಿಹಾಸವನ್ನೇ ಬದಲಾಯಿಸಬಹುದುʼ. ಹಾಗಾಗಿ ಟ್ರಂಪ್ ಅವರ ಯೋಜನೆ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಹೇಳಿದ್ದಾರೆ.
ವಾಷಿಂಗ್ಟನ್: ಅಕ್ರಮವಾಗಿ ಅಮೆರಿಕ (America) ಪ್ರವೇಶಿಸಿದ್ದ 205 ಭಾರತೀಯರನ್ನು (Indians) ಗಡಿಪಾರು ಮಾಡಲಾಗಿದೆ. ಎಲ್ಲರನ್ನೂ ಅಮೆರಿಕ ಮಿಲಿಟರಿ ವಿಮಾನದಲ್ಲಿ ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ.
ಅಮೆರಿಕದ ಟೆಕ್ಸಾಸ್‌ನಿಂದ ವಿಮಾನ ಹೊರಟಿದೆ. ಗಡಿಪಾರು ಮಾಡಲಾದ ಎಲ್ಲಾ ಭಾರತೀಯ ಪ್ರಜೆಗಳನ್ನೂ ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದಲ್ಲಿರುವ ಅಕ್ರಮ ಭಾರತೀಯ ವಲಸಿಗರನ್ನು ಮರಳಿ ಕರೆತರುವ ಇಂತಹ ಅನೇಕ ವಿಮಾನಗಳಿದ್ದು, ಇದು ಮೊದಲನೆಯದಾಗಿದೆ. ಇದನ್ನೂ ಓದಿ: ಅಕ್ರಮವಾಗಿ ಸೆಕ್ಸ್ ಮೂವಿ ಶೂಟಿಂಗ್ – ಬಾಂಗ್ಲಾ ಮಹಿಳೆ ಸೇರಿ ಮೂವರು ಅರೆಸ್ಟ್
ಅಮೆರಿಕದ ಸಿ-17 ಮಿಲಿಟರಿ ವಿಮಾನವು ಭಾರತೀಯ ಪ್ರಜೆಗಳನ್ನು ಮನೆಗೆ ಮರಳಿ ಕರೆತರುತ್ತಿದೆ. ಯುಎಸ್ ವಾಯುಪಡೆಯ ಸಿ-17 ವಿಮಾನವು 205 ಪ್ರಯಾಣಿಕರಿಗೆ ಒಂದೇ ಒಂದು ಶೌಚಾಲಯವನ್ನು ಹೊಂದಿದೆ.
ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಅಮೆರಿಕಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ವರದಿಗಳ ಮಧ್ಯೆಯೇ ಅಕ್ರಮ ಭಾರತೀಯ ಪ್ರಜೆಗಳ ಗಡಿಪಾರು ಪ್ರಕ್ರಿಯೆ ಮೊದಲ ಹಂತದಲ್ಲಿ ಆರಂಭವಾಗಿದೆ.
ಟ್ರಂಪ್ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಮೋದಿ ಅವರ ಮೊದಲ ಭೇಟಿಯಾಗಿದೆ. ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ‘ಕಾನೂನುಬಾಹಿರವಾಗಿ’ ವಾಸಿಸುವ ಭಾರತೀಯ ಪ್ರಜೆಗಳ ಕಾನೂನುಬದ್ಧ ಮರಳುವಿಕೆಗೆ ನವದೆಹಲಿ ಮುಕ್ತವಾಗಿದೆ ಎಂದು ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಈ ಹಿಂದೆ ಸ್ಪಷ್ಟಪಡಿಸಿದ್ದರು.
ವಾಷಿಂಗ್ಟನ್: ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯ (DOGE) ಮುಖ್ಯಸ್ಥ, ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ (Elon Musk) ತಮ್ಮ ವಿಭಾಗದ ಕಠಿಣ ಕೆಲಸದ ಸಮಯವನ್ನು ಸಮರ್ಥಿಸಿಕೊಂಡಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು DOGE ವಾರಕ್ಕೆ 120 ಗಂಟೆಗಳ ಕಾಲ ಕೆಲಸ ಮಾಡುತ್ತಿದೆ. ನಮ್ಮ ಅಧಿಕಾರಶಾಹಿ ವಿರೋಧಿಗಳು ವಾರಕ್ಕೆ 40 ಗಂಟೆಗಳ ಕಾಲ ಆಶಾವಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಅವರು ಸೋಲುತ್ತಿದ್ದಾರೆ ಎಂದು ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.
ಅಧಿಕಾರ ಸ್ವೀಕರಿಸಿದ ಮೊದಲ ಎರಡು ಎರಡು ವಾರಗಳಲ್ಲಿ ಅಮೆರಿಕದ ತೆರಿಗೆ ಡಾಲರ್ ದುರುಪಯೋಗವನ್ನು ಬಹಿರಂಗಪಡಿಸುವಲ್ಲಿ DOGE ಮಾಡಿದ ಕೆಲಸವನ್ನು ಅವರು ಶ್ಲಾಘಿಸಿದ್ದಾರೆ.
DOGE is working 120 hour a week. Our bureaucratic opponents optimistically work 40 hours a week. That is why they are losing so fast. https://t.co/dXtrL5rj1K
ಅಮೆರಿಕ ಸರ್ಕಾರದ ದುಂದು ವೆಚ್ಚಗಳನ್ನು ನಿಯಂತ್ರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು DOGE ಇಲಾಖೆಯನ್ನು ಸೃಷ್ಟಿಸಿ ಮುಖ್ಯಸ್ಥರನ್ನಾಗಿ ಎಲಾನ್ ಮಸ್ಕ್ ಅವರನ್ನು ನೇಮಿಸಿದ್ದಾರೆ.
ಮಸ್ಕ್ ಅವರು ವಾರಕ್ಕೆ 120 ಗಂಟೆ ಕೆಲಸದ ವಿಷಯವನ್ನು ಪ್ರಸ್ತಾಪಿಸುತ್ತಿದ್ದಂತೆ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ವಾರಕ್ಕೆ 120 ಗಂಟೆ ಅಂದರೆ 7 ದಿನ 17 ಗಂಟೆ ಕೆಲಸ ಮಾಡಬೇಕು. ಒಂದು ದಿನ ರಜೆ ತೆಗೆದುಕೊಂಡರೂ 20 ಗಂಟೆ ಕೆಲಸ ಮಾಡಬೇಕಾಗುತ್ತದೆ. ಇಷ್ಟೊಂದು ದೀರ್ಘ ಅವಧಿ ಕೆಲಸ ಮಾಡಲು ಸಾಧ್ಯವೇ ಎಂದು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ತನ್ನನ್ನು ಮೋದಿ ಕೈಗೊಂಬೆ ಎಂದ ಡೆಮಾಕ್ರಟಿಕ್ ಸಂಸದರ ವಿರುದ್ಧ US ಗುಪ್ತಚರ ವಿಭಾಗದ ಬಾಸ್ ಕೆಂಡಾಮಂಡಲ
ಅಮೆರಿಕ ಸರ್ಕಾರ ವಿದೇಶಗಳಿಗೆ ನೀಡುತ್ತಿರುವ USAID ಅನ್ನು ಕ್ರಿಮಿನಲ್ ಸಂಘಟನೆ ಎಂದು ಮಸ್ಕ್ ಕರೆದಿದ್ದಾರೆ. ಈ ಅನುದಾನ ನಿಜವಾಗಿಯೂ ಬಡ ದೇಶಗಳಿಗೆ ತಲುಪುತ್ತಿಲ್ಲ. ಇದು ಅಮೆರಿಕ ಸರ್ಕಾರವನ್ನು ಬೆಂಬಲಿಸುವ ಸರ್ಕಾರೇತರ ಸಂಸ್ಥೆಗಳಿಗೆ ಹೋಗುತ್ತದೆ. ಈ ಎನ್‌ಜಿಒಗಳು ಆ ಹಣವನ್ನು ಸರ್ಕಾರದಲ್ಲಿರುವವರಿಗೆ ಕಳುಹಿಸುತ್ತಾರೆ. ಅಕ್ರಮ ಹಣ ವರ್ಗಾವಣೆ ಮಾಡಲು USAID ಇದನ್ನು ಬಳಸಲಾಗುತ್ತದೆ ಎಂದು ಕಿಡಿಕಾರಿದ್ದಾರೆ.
DOGE is working 120 hour a week. Our bureaucratic opponents optimistically work 40 hours a week. That is why they are losing so fast. https://t.co/dXtrL5rj1K
ನಷ್ಟದಲ್ಲಿದ್ದ ಟ್ವಿಟ್ಟರ್ (Twitter) ಕಂಪನಿಯನ್ನು ಖರೀದಿಸಿದ ಬಳಿಕ ಮಸ್ಕ್ ಮಾಡಿದ ಮೊದಲ ಕೆಲಸ ಏನೆಂದರೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಆರಂಭಿಸಿದ್ದರು. ಟ್ವಿಟ್ಟರ್ ಸಿಇಒ ಪರಾಗ್ ಅಗರ್‌ವಾಲ್ ಸೇರಿದಂತೆ ಬಳಿಕ 80% ಉದ್ಯೋಗಿಗಳನ್ನು ಕೆಲಸದಿಂದಲೇ ತೆಗೆದು ಹಾಕಿದ್ದನ್ನು ಮಸ್ಕ್ ಸಮರ್ಥಿಸಿಕೊಂಡಿದ್ದರು.
ನಾವು ಯಾವುದೇ ಕಾರ್ಯಕರ್ತರ ಸಂಘಟನೆಯನ್ನು ನಡೆಸುತ್ತಿಲ್ಲ. ಸೆನ್ಸರ್‌ಶಿಪ್ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸದಿದ್ದರೆ ಬಹಳಷ್ಟು ಜನರನ್ನು ಕೈಬಿಡಬಹುದು. ಹೀಗಾಗಿ 80% ರಷ್ಟು ಉದ್ಯೋಗವನ್ನು ಕಡಿತ (Job Cut) ಮಾಡಿದರೂ ಯಾವುದೇ ಸಮಸ್ಯೆಯಾಗಲಿಲ್ಲ ಎಂದು ಉತ್ತರಿಸಿದ್ದರು.
ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ಖರೀದಿಸಿದಾಗ ಸುಮಾರು 8 ಸಾವಿರ ಉದ್ಯೋಗಿಗಳಿದ್ದರು. ಈಗ ಉದ್ಯೋಗಿಗಳ ಸಂಖ್ಯೆ 2 ಸಾವಿರಕ್ಕೆ ಇಳಿಕೆಯಾಗಿದ್ದು 80% ರಷ್ಟು ಮಂದಿಗೆ ಗೇಟ್‌ಪಾಸ್ ನೀಡಲಾಗಿದೆ.
– ಬಜೆಟ್‌ನಲ್ಲಿ ಕಸ್ಟಮ್ಸ್ ಸುಂಕ ಇಳಿಸಿದ ನಿರ್ಮಲಾ ಸೀತಾರಾಮನ್ – ಭಾರತದ ಮೇಲೆ ನಾವು ತೆರಿಗೆ ವಿಧಿಸುತ್ತೇವೆ ಎಂದಿದ್ದ ಟ್ರಂಪ್
ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎಚ್ಚರಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ (Union Budget) ವಿದೇಶದಿಂದ ಅಮದಾಗುವ ದುಬಾರಿ ಮೋಟಾರ್‌ಸೈಕಲ್‌ಗಳು, ಕಾರುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಗಣನೀಯವಾಗಿ ಕಡಿತ ಮಾಡಿದೆ.
ಈ ಫೆಬ್ರವರಿಯಲ್ಲೇ ಪ್ರಧಾನಿ ಮೋದಿ (PM Narendra Modi) ಅವರು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ಸಮಯದಲ್ಲೇ ಸುಂಕ ಕಡಿಮೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ನಾವು ತೆರಿಗೆ ವಿಧಿಸುವುದಿಲ್ಲ. ಆದರೆ ಅಮೆರಿಕದಿಂದ ಭಾರತಕ್ಕೆ ಹೋಗುವ ವಸ್ತುಗಳ ಮೇಲೆ ಭಾರೀ ತೆರಿಗೆ ವಿಧಿಸಲಾಗುತ್ತದೆ. ಇನ್ನು ಮುಂದೆ ಈ ರೀತಿ ಆಗಲು ಬಿಡುವುದಿಲ್ಲ. ಅವರು ಎಷ್ಟು ಪ್ರಮಾಣದ ತೆರಿಗೆ ವಿಧಿಸುತ್ತಾರೋ ಅಷ್ಟೇ ಪ್ರಮಾಣದ ತೆರಿಗೆ ವಿಧಿಸಲಾಗುವುದು ಎಂದಿದ್ದರು. ಈ ಎಚ್ಚರಿಕೆಯ ಬೆನ್ನಲ್ಲೇ ಈ ಬಾರಿ ಬಜೆಟ್‌ನಲ್ಲಿ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲಾಗಿದೆ.
ಶನಿವಾರ ತಮ್ಮ ಬಜೆಟ್ ಭಾಷಣದಲ್ಲಿ ಸೀತಾರಾಮನ್ (Nirmala sSitharaman) ಅವರು 1,600 ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯ ಹೊಂದಿರುವ, ಸಂಪೂರ್ಣವಾಗಿ ಬಿಲ್ಟ್-ಅಪ್ (ಸಿಬಿಯು) ಯೂನಿಟ್‌ಗಳಾಗಿ ಆಮದು ಮಾಡಿಕೊಳ್ಳುವ ಹೈ-ಎಂಡ್ ಮೋಟಾರ್‌ಸೈಕಲ್‌ಗಳ ಆಮದು ಸುಂಕವನ್ನು ಹಿಂದಿನ 50% ಬದಲು 10% ಕಡಿತಗೊಳಿಸಿ 40% ವಿಧಿಸಲಾಗುವುದು ಎಂದು ಘೋಷಿಸಿದ್ದರು.
40 ಸಾವಿರ ಡಾಲರ್(34.82 ಲಕ್ಷ ರೂ.) ಬೆಲೆಯ ಸ್ಟೇಷನ್ ವ್ಯಾಗನ್‌ಗಳು ಮತ್ತು ರೇಸ್‌ಕಾರ್‌ಗಳು ಸೇರಿದಂತೆ ಐಷಾರಾಮಿ ಕಾರುಗಳ ಮೇಲಿನ 125% ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಈಗ ಈ ತೆರಿಗೆಯನ್ನು 70% ಇಳಿಸಲಾಗಿದೆ. ಅಷ್ಟೇ ಅಲ್ಲದೇ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬಳಸುವ ಲಿಥಿಯಂ-ಐಯಾನ್ ಬ್ಯಾಟರಿಗಳ ಮೂಲ ಕಸ್ಟಮ್ಸ್ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಅವರು ಪ್ರಕಟಿಸಿದ್ದಾರೆ. ಇದನ್ನೂ ಓದಿ: ಅವರು ತೆರಿಗೆ ವಿಧಿಸಿದ್ರೆ ನಾವು ಅವರ ಮೇಲೆ ಅಷ್ಟೇ ತೆರಿಗೆ ಹಾಕ್ತೀವಿ: ಭಾರತಕ್ಕೆ ಟ್ರಂಪ್ ಬೆದರಿಕೆ
ಕೇಂದ್ರದ ಈ ನಿರ್ಧಾರದಿಂದ ಅಮೆರಿದಕಿಂದ ಆಮದಾಗುವ ಹಾರ್ಲೆ ಡೇವಿಡ್ಸನ್ ಬೈಕ್ ಮತ್ತು ಟೆಸ್ಲಾ ಕಾರುಗಳ ಬೆಲೆ ಭಾರತದಲ್ಲಿ ಕಡಿಮೆಯಾಗಲಿದೆ.
ಟ್ರಂಪ್ ಸುಂಕ ಸಮರ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಗಿದ್ಯಾ ಎಂಬ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್, ನಮ್ಮ ಆರ್ಥಿಕತೆಯನ್ನು ಬಲಗೊಳಿಸುವುದು ನಮ್ಮ ಗುರಿ. ಭಾರತವನ್ನು ಉತ್ಪಾದನಾ ಕೇಂದ್ರವಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಹಾರ್ಲೆ ಡೇವಿಡ್ಸನ್ ಬೈಕಿನ ಮೇಲೆ ಹೆಚ್ಚು ಆಮದು ಸುಂಕ ಹೇರಿದ್ದ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಕಿಡಿಕಾರಿದ್ದರು. ನಾವು ಹಾರ್ಲೆಯನ್ನು ಭಾರತಕ್ಕೆ ಕಳುಹಿಸಿದರೆ ಅವರು 100% ತೆರಿಗೆ ವಿಧಿಸುತ್ತಾರೆ. ಭಾರತದವರು ಸಾಕಷ್ಟು ಸಂಖ್ಯೆಯ ಮೋಟಾರ್ ಸೈಕಲ್ ತಯಾರಿಸಿ ನಮಗೆ ಕಳುಹಿಸಿದಾಗ ಯಾವುದೇ ತೆರಿಗೆ ಇಲ್ಲ. ನಾನು ಮೋದಿ ಅವರಿಗೆ ಕರೆ ಮಾಡಿ ಈ ವಿಚಾರದ ಬಗ್ಗೆ ತಿಳಿಸಿದ್ದೆ. ಆದರೆ ಅವರು ಸ್ವಲ್ಪ ತೆರಿಗೆ ಕಡಿಮೆ ಮಾಡಿದ್ದರು ಎಂದು ಹೇಳಿದ್ದರು.
ಸದ್ಯ ಟ್ರಂಪ್ ಪರ ಗುರುತಿಸಿಕೊಂಡಿರುವ ಎಲಾನ್ ಮಸ್ಕ್ ಭಾರತದಲ್ಲಿ ಟೆಸ್ಲಾ ಕಾರು ಮಾರಾಟಕ್ಕೆ ಭಾರೀ ಪ್ರಯತ್ನ ಪಡುತ್ತಿದ್ದಾರೆ. ಮುಖ್ಯವಾಗಿ ಚೀನಾದಲ್ಲಿ ಉತ್ಪಾದನೆಯಾದ ಕಾರುಗಳನ್ನು ಮಾರಾಟ ಮಾಡಲು ಬಹಳ ಪ್ರಯತ್ನ ಪಟ್ಟಿದ್ದರು. ಆದರೆ ಭಾರತ ಸರ್ಕಾರ ಮಸ್ಕ್‌ಗೆ ಭಾರತದಲ್ಲೇ ಕಾರು ಉತ್ಪಾದನೆ ಮಾಡಿ ಎಂದು ತಿಳಿಸಿತ್ತು.
ಪ್ರಸ್ತುತ ಮಸ್ಕ್ ಮತ್ತು ಭಾರತ ಸರ್ಕಾರದ ಮಧ್ಯೆ ಅಮದು ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದೆ. ವಿದೇಶದಿಂದ ಭಾರತಕ್ಕೆ ಬರುವ 40 ಲಕ್ಷ ಡಾಲರ್(ಅಂದಾಜು 30 ಲಕ್ಷ ರೂ.) ಮೌಲ್ಯದ ಎಲೆಕ್ಟ್ರಿಕ್ ವಾಹನಕ್ಕೆ 60% ರಷ್ಟು ತೆರಿಗೆ ವಿಧಿಸಲಾಗುತ್ತದೆ. 40 ಲಕ್ಷ ಡಾಲರ್‌ಗಿಂದ ಹೆಚ್ಚಿನ ಮೌಲ್ಯದ ಎಲೆಕ್ಟ್ರಿಕ್ ವಾಹನಗಳಿಗೆ 100% ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಈ ಹಿಂದೆ 2022ರ ಜನವರಿಯಲ್ಲಿ ಭಾರತೀಯ ಟ್ವಿಟ್ಟರ್ ಬಳಕೆದಾರನೊಬ್ಬನ ಪ್ರಶ್ನೆಗೆ ಎಲೋನ್ ಮಸ್ಕ್ ಪ್ರತಿಕ್ರಿಯೆ ನೀಡುವ ಮೂಲಕ ಟೆಸ್ಲಾ ಕಾರುಗಳನ್ನು ಮಾರಾಟ ಮಾಡುವ ಬಗ್ಗೆ ಅಪ್‍ಡೇಟ್ ನೀಡಿದ್ದರು. ಟೆಸ್ಲಾ ಕಂಪನಿ ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಕಂಪನಿ ಈ ಯೋಜನೆಯ ಕುರಿತಾಗಿ ಸರ್ಕಾರದೊಂದಿಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದರು.
ಫಿಲಡೆಲ್ಫಿಯಾ: ಪೆನ್ಸಿಲ್ವೆನಿಯಾದ ಅತಿದೊಡ್ಡ ನಗರವಾದ ಫಿಲಡೆಲ್ಫಿಯಾದಲ್ಲಿ ಲಘು ವಿಮಾನ ಪತನಗೊಂಡಿದ್ದು (Philadelphia Plane Crashes) ಕನಿಷ್ಠ 6 ಮಂದಿ ಸಾವಪ್ಪಿದ್ದಾರೆ ಎಂದು ವರದಿಯಾಗಿದೆ. ಈ ದುರಂತದಲ್ಲಿ ಸ್ಥಳೀಯರೂ ಸಾವನ್ನಪ್ಪಿದ್ದು ಹೆಚ್ಚಿನ ಸಾವುನೋವುಗಳಾಗಿರುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.
ಲಘು ವಿಮಾನವು ಈಶಾನ್ಯ ಫಿಲಡೆಲ್ಫಿಯಾ ವಿಮಾನ ನಿಲ್ದಾಣದಿಂದ (Philadelphia Airport) ಮಿಸೌರಿಯ ಸ್ಪ್ರಿಂಗ್‌ಫೀಲ್ಡ್-ಬ್ರಾನ್ಸನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೊರಟಿತ್ತು. ಆದ್ರೆ ಈಶಾನ್ಯ ಫಿಲಡೆಲ್ಫಿಯಾ ವಿಮಾನ ನಿಲ್ದಾಣದಿಂದ 3 ಮೈಲಿ ದೂರದಲ್ಲಿ ವಿಮಾನ ಟೇಕಾಫ್ ಆದ ಕೇವಲ 30 ಸೆಕೆಂಡುಗಳಲ್ಲಿ ಪತಗೊಂಡಿದೆ. ಈ ವೇಳೆ ಬೆಂಕಿ ಉಂಡೆಗಳು ಚಿಮ್ಮಿದ್ದು ಹತ್ತಿರದ ಮನೆಗಳಿಗೂ ಹಾನಿಯಾಗಿದೆ.
Why are there all these plane crashes under President Trump? Another one just went down in Philadelphia!
America definitely isn’t safer. My heart goes out to the victims and their families. pic.twitter.com/iFs21yvpRi
ಘಟನೆಗೆ ಪೆನ್ಸಿಲ್ವೇನಿಯಾ ಗವರ್ನರ್ ಜೋಶ್ ಶಪಿರೊ ಕಂಬನಿ ಮಿಡಿದಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ʻಫಿಲಡೆಲ್ಫಿಯಾದಲ್ಲಿ ವಿಮಾನವು ಪತನಗೊಂಡಿರುವುದು ನೋಡಿ ತುಂಬಾ ದುಃಖವಾಗಿದೆ, ಮುಗ್ಧ ಜೀವಗಳು ಬಲಿಯಾಗಿವೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆಯಷ್ಟೇ ವಾಷಿಂಗ್ಟನ್ ಡಿಸಿಯಲ್ಲಿ ಸೇನಾ ಹೆಲಿಕಾಪ್ಟರ್ – ಅಮೆರಿಕರ ವಿಮಾನದ ನಡುವಿನ ದುರಂತದಲ್ಲಿ (Plane Helicopter Collision) 67 ಮಂದಿ ದುರ್ಮರಣಕ್ಕೀಡಾದ ಘಟನೆ ನಡೆಸಿತ್ತು. ಈ ಬೆನ್ನಲ್ಲೇ ಅಮೆರಿಕದ ರಾಷ್ಟ್ರವಾಗಿರುವ ಪೆನ್ಸಿಲ್ವೆನಿಯಾದಲ್ಲಿ ಮತ್ತೊಂದು ದುರಂತವಾಗಿದೆ.
– ಮಾನಸಿಕ ಸಮಸ್ಯೆಗಳನ್ನು ಹೊಂದಿರುವ ಅನರ್ಹ ವ್ಯಕ್ತಿಗಳ ನೇಮಕ
ವಾಷಿಂಗ್ಟನ್: ಒಬಾಮಾ (Barack Obama) ಮತ್ತು ಬೈಡನ್ (Joe Biden) ಆಡಳಿತದ ಅವಧಿಯಲ್ಲಿ ಜಾರಿಗೆ ತರಲಾದ ನೀತಿಗಳು ವಾಯು ಸುರಕ್ಷತಾ ಮಾನದಂಡಗಳಲ್ಲಿ ರಾಜಿ ಮಾಡಿಕೊಂಡಿವೆ ಎಂದು ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕನ್ ಏರ್ಲೈನ್ಸ್ ಪ್ಯಾಸೆಂಜರ್ ಜೆಟ್ ಮತ್ತು ಯುಎಸ್ ಆರ್ಮಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಡುವಿನ ಡಿಕ್ಕಿಯ (Chopper-Plane Crash) ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಟ್ರಂಪ್ ಅವರ ಹೇಳಿಕೆಯಿಂದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ನೇಮಕಾತಿ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ.
ಆ ಅವಧಿಯ ನೀತಿಗಳು ಸುರಕ್ಷತೆಗಿಂತ ನೀತಿಗೆ ಹೆಚ್ಚು ಆದ್ಯತೆ ನೀಡಿವೆ. ನಾನು ಸುರಕ್ಷತೆಗೆ ಮೊದಲ ಸ್ಥಾನ ನೀಡುತ್ತೇನೆ. ಈ ಮೂಲಕ ಸಮರ್ಥ ಜನರನ್ನು ಬಯಸುತ್ತೇನೆ. ಮಾಜಿ ಸಾರಿಗೆ ಕಾರ್ಯದರ್ಶಿ ಪೀಟ್ ಬುಟ್ಟಿಗೀಗ್ ಅವರನ್ನು ಗುರಿಯಾಗಿಸಿ, ಅವರು ವಾಯು ಸಂಚಾರ ನಿಯಂತ್ರಣ ಹುದ್ದೆಗಳಿಗೆ ಅಂಗವೈಕಲ್ಯ ಮತ್ತು ಮಾನಸಿಕ ಸಮಸ್ಯೆಗಳನ್ನು ಹೊಂದಿರುವ ಅನರ್ಹ ವ್ಯಕ್ತಿಗಳನ್ನು ನೇಮಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಏಜೆನ್ಸಿಯ ನೇಮಕಾತಿ ಅಭ್ಯಾಸಗಳು ಮತ್ತು ಸುರಕ್ಷತಾ ಮಾನದಂಡಗಳು ಮುಂಬರುವ ದಿನಗಳಲ್ಲಿ ತೀವ್ರ ಪರಿಶೀಲನೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಒಬಾಮಾ ಆಡಳಿತದ ಸಮಯದಲ್ಲಿ FAA ಯ ನೇಮಕಾತಿಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಈ ಕ್ರಮವು ವಾಯು ಸಂಚಾರ ನಿಯಂತ್ರಕರಲ್ಲಿ ವೈವಿಧ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿತ್ತು. ಆ ಸಮಯದಲ್ಲಿ ಕೆಲವರು ಈ ವಿಧಾನವನ್ನು ಟೀಕಿಸಿದ್ದರು.
ಅಮೆರಿಕದ ಅರ್ಲಿಂಗ್ಟನ್ ಬಳಿ ಬುಧವಾರ ರಾತ್ರಿ ಲ್ಯಾಂಡಿಂಗ್ ಆಗುವಾಗ ಸೇನಾ ಕಾಪ್ಟರ್‌ಗೆ ವಿಮಾನ ಡಿಕ್ಕಿಯಾಗಿ, ನದಿಗೆ ಬಿದ್ದಿದ್ದವು. ಈ ದುರಂತದಲ್ಲಿ 67 ಮಂದಿ ಸಾವಿಗೀಡಾಗಿದ್ದರು. ಈವರೆಗೂ 30 ಶವಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ನವದೆಹಲಿ/ವಾಷಿಂಗ್ಟನ್: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ವಾಪಸ್ ಕರೆತರುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾಗಿದ್ದನ್ನು ಮಾಡುತ್ತಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಫ್ಲೋರಿಡಾದಿಂದ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ಗೆ ಟ್ರಂಪ್ ಹಿಂದಿರುಗುತ್ತಿದ್ದಾಗ ಏರ್‌ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರು ಟ್ರಂಪ್ ಅವರನ್ನು ಅಕ್ರಮ ವಲಸಿಗರನ್ನು ತೆಗೆದುಕೊಳ್ಳಲು ಮೋದಿ ಒಪ್ಪಿಕೊಂಡಿದ್ದಾರೆಯೇ ಎಂದು ಕೇಳಿದಾಗ ಅವರು ಇದಕ್ಕೆ ಉತ್ತರಿಸಿದ್ದಾರೆ.
ದೂರವಾಣಿ ಸಂಭಾಷಣೆಯಲ್ಲಿ ನಾವು ಚರ್ಚಿಸುತ್ತಿದ್ದೇವೆ. ಬೆಳಗ್ಗೆ ಮೋದಿಯವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದೇನೆ. ಅವರು ಮುಂದಿನ ತಿಂಗಳು ಶ್ವೇತಭವನಕ್ಕೆ ಬರಲಿದ್ದಾರೆ. ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಮೋದಿ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಟ್ರಂಪ್ ಹೇಳಿದರು.
ಇದಲ್ಲದೇ ಉಭಯ ನಾಯಕರು ಇಂಡೋ-ಪೆಸಿಫಿಕ್, ಮಧ್ಯಪ್ರಾಚ್ಯ ಮತ್ತು ಯುರೋಪ್‌ನಲ್ಲಿ ಭದ್ರತೆ ಸೇರಿದಂತೆ ಹಲವಾರು ಪ್ರಾದೇಶಿಕ ವಿಷಯಗಳ ಕುರಿತು ಚರ್ಚಿಸಿದರು. ಯುಎಸ್ ನಿರ್ಮಿತ ಭದ್ರತಾ ಉಪಕರಣಗಳ ಭಾರತದ ಖರೀದಿಯನ್ನು ಹೆಚ್ಚಿಸುವ ಮತ್ತು ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವ ಮಹತ್ವವನ್ನು ಅಧ್ಯಕ್ಷ ಟ್ರಂಪ್ ಒತ್ತಿ ಹೇಳಿದರು. ಈ ವರ್ಷದ ಕೊನೆಯಲ್ಲಿ ಭಾರತವು ಮೊದಲ ಬಾರಿಗೆ ಕ್ವಾಡ್ ನಾಯಕರಿಗೆ ಆತಿಥ್ಯ ನೀಡಲಿದೆ ಎಂದು ಶ್ವೇತಭವನವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಬಗ್ಗೆ ಮಾತನಾಡಿದ್ದು, ಭಾರತ-ಅಮೆರಿಕ ಸಂಬಂಧಗಳು ಬಹಳ ಬಲವಾದವು. ಬಹು ಆಯಾಮದವು ಎಂದು ಹೇಳಿದ್ದರು. ಅದೇ ಸಮಯದಲ್ಲಿ ಎರಡು ದೇಶಗಳ ಆರ್ಥಿಕ ಸಂಬಂಧಗಳು ಬಹಳ ವಿಶೇಷವಾಗಿವೆ. ಯಾವುದೇ ವ್ಯಾಪಾರ ಸಂಬಂಧಿತ ವಿಷಯಗಳನ್ನು ಚರ್ಚಿಸಲು ನಾವು ಅಮೆರಿಕ ಮತ್ತು ಭಾರತದ ನಡುವೆ ಕಾರ್ಯವಿಧಾನಗಳನ್ನು ಸ್ಥಾಪಿಸಿದ್ದೇವೆ. ಈ ವಿಚಾರದ ಬಗ್ಗೆಯೂ ನಿಗಾ ಇಡುತ್ತಿದ್ದೇವೆ ಎಂದು ಹೇಳಿದರು.
ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಅಕ್ರಮ ವಲಸೆಯನ್ನು ನಾವು ವಿರೋಧಿಸುತ್ತೇವೆ. ಯಾವುದೇ ಕಾನೂನುಬಾಹಿರ ಕೆಲಸ ಮಾಡಿದಾಗ, ಅದರೊಂದಿಗೆ ಇತರ ಅನೇಕ ಕಾನೂನುಬಾಹಿರ ಚಟುವಟಿಕೆಗಳು ಸಹ ಸೇರಿಕೊಂಡಿರುತ್ತವೆ. ಇದು ಖಂಡಿತವಾಗಿಯೂ ಒಳ್ಳೆಯದಲ್ಲ. ನಮ್ಮ ನಾಗರಿಕರಲ್ಲಿ ಯಾರಾದರೂ ಅಕ್ರಮವಾಗಿ ಇದ್ದರೆ ಮತ್ತು ಅವರು ನಮ್ಮ ಪ್ರಜೆಗಳು ಎಂದು ನಮಗೆ ಖಚಿತವಾಗಿದ್ದರೆ, ಅವರು ಭಾರತಕ್ಕೆ ಕಾನೂನುಬದ್ಧವಾಗಿ ಮರಳಲು ನಾವು ಯಾವಾಗಲೂ ಸಿದ್ಧರಿದ್ದೇವೆ. ಭಾರತಕ್ಕೆ ಯಾರನ್ನು ಕಳುಹಿಸಬಹುದು ಎಂದು ಹೇಳಿದರು.
1.80 ಲಕ್ಷ ಭಾರತೀಯರನ್ನು ಭಾರತದಿಂದ ಗಡಿಪಾರು ಮಾಡಲು ಅಮೆರಿಕ ಮುಂದಾಗಿದೆ. ಅಲ್ಲಿ ಅಕ್ರಮವಾಗಿ ಅಥವಾ ವೀಸಾ ಅವಧಿ ಮುಗಿದ ನಂತರವೂ ಅನೇಕ ಭಾರತೀಯರು ಅಲ್ಲಿ ವಾಸಿಸುತ್ತಿದ್ದಾರೆ. ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು 2022 ರಲ್ಲಿ ಅಮೆರಿಕದಲ್ಲಿ ಸುಮಾರು 11 ಮಿಲಿಯನ್ ಅಕ್ರಮ ವಲಸಿಗರು ಎಂದು ಹೇಳಿತು. 4.81 ಮಿಲಿಯನ್ ಅಕ್ರಮ ವಲಸಿಗರೊಂದಿಗೆ ಮೆಕ್ಸಿಕೋ ಅಗ್ರಸ್ಥಾನದಲ್ಲಿದೆ. ಗ್ವಾಟೆಮಾಲಾದಿಂದ 7.5 ಲಕ್ಷ, ಎಲ್ ಸಾಲ್ವಡಾರ್‌ನಿಂದ 7.1 ಲಕ್ಷ, ಹೊಂಡುರಾಸ್‌ನಿಂದ 5.6 ಲಕ್ಷ, ಫಿಲಿಪೈನ್ಸ್‌ನಿಂದ 3.5 ಲಕ್ಷ, ವೆನೆಜುವೆಲಾದಿಂದ 3.2 ಲಕ್ಷ, ಕೊಲಂಬಿಯಾ ಮತ್ತು ಬ್ರೆಜಿಲ್‌ನಿಂದ 2.3 ಲಕ್ಷ ವಲಸಿಗರು ಸೇರಿದ್ದಾರೆ. 2018 ಮತ್ತು 2022 ರ ನಡುವೆ ಭಾರತದಿಂದ ಅಕ್ರಮ ವಲಸಿಗರ ಸಂಖ್ಯೆ ಕಡಿಮೆಯಾಗಿದೆ ಎಂದು ಹೋಮ್ಲ್ಯಾಂಡ್ ಹೇಳಿದೆ.
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಫೆಬ್ರವರಿಯಲ್ಲಿ ಶ್ವೇತಭವನಕ್ಕೆ ಭೇಟಿ ನೀಡಿ ತಮ್ಮೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
ನಾನು ಅವರೊಂದಿಗೆ ದೀರ್ಘ ಮಾತುಕತೆ ನಡೆಸಿದೆ. ಅವರು ಮುಂದಿನ ತಿಂಗಳು, ಬಹುಶಃ ಫೆಬ್ರವರಿಯಲ್ಲಿ ಶ್ವೇತಭವನಕ್ಕೆ ಬರಲಿದ್ದಾರೆ. ಭಾರತದೊಂದಿಗೆ ನಮಗೆ ಉತ್ತಮ ಸಂಬಂಧವಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಭಾರತಕ್ಕೆ ಕೊನೆಯ ವಿದೇಶ ಪ್ರವಾಸ ಕೈಗೊಂಡಿದ್ದರು. ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ. ಇಬ್ಬರೂ 2019ರ ಸೆಪ್ಟೆಂಬರ್‌ನಲ್ಲಿ ಹೂಸ್ಟನ್‌ನಲ್ಲಿ ಮತ್ತು 2020ರ ಫೆಬ್ರವರಿಯಲ್ಲಿ ಅಹಮದಾಬಾದ್‌ನಲ್ಲಿ ಎರಡು ರ‍್ಯಾಲಿಗಳಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಇದನ್ನೂ ಓದಿ: My Dear Friend – ಟ್ರಂಪ್ ಜೊತೆಗೆ ಮೋದಿ ದೂರವಾಣಿ ಸಂಭಾಷಣೆ
2024ರ ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರು ಐತಿಹಾಸಿಕ ಗೆಲುವು ದಾಖಲಿಸಿದರು. ಟ್ರಂಪ್‌ಗೆ ಪ್ರಧಾನಿ ಮೋದಿ ವಿಶ್ ಮಾಡಿದ್ದರು.
ಇತ್ತೀಚೆಗೆ ವಿಶ್ವದ ದೊಡ್ಡಣ್ಣ ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ (Donald Trump) ತನ್ನ ದೇಶದ ಏಳಿಗೆಗಾಗಿ ವಿದೇಶಗಳಿಗೆ ತೆರಿಗೆ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಈ ಬೆನ್ನಲ್ಲೇ ಅಮೆರಿಕನ್ನು ಕುಗ್ಗಿಸಲು ಬ್ರಿಕ್ಸ್ ರಾಷ್ಟ್ರಗಳ ಒಕ್ಕೂಟ ಪ್ಲ್ಯಾನ್ ಮಾಡಿವೆ.
ಹೌದು. ಕಳೆದ ಅಕ್ಟೋಬರ್ 22 ರಿಂದ 24 ರವರೆಗೆ ರಷ್ಯಾದಲ್ಲಿ ನಡೆದ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಹಲವು ದೇಶಗಳ ಮಧ್ಯೆ ಹಲವು ಒಪ್ಪಂದಗಳಿಗೆ ಮಾತುಕತೆ ನಡೆದಿತ್ತು. ಈ ಎಲ್ಲಾ ಒಪ್ಪಂದಗಳ ಮಧ್ಯೆ ಹೆಚ್ಚು ಗಮನ ಸೆಳೆದ ವಿಚಾರ ಯಾವುದು ಎಂದರೆ ʻಡಿ ಡಾಲರೈಸೇಶನ್ʼ. ಡಾಲರ್ ಅಂದರೆ ಅಮೆರಿಕದ ಕರೆನ್ಸಿ ಎಂದು ಎಲ್ಲರಿಗೂ ಗೊತ್ತಿದೆ, ಅದು ವಿಶ್ವದ ಕರೆನ್ಸಿಯೂ ಆಗಿದೆ. ವಿಶ್ವದ ಎಲ್ಲಾ ವ್ಯವಹಾರಗಳು ಡಾಲರ್‌ನಲ್ಲೇ ನಡೆಯುತ್ತಿದೆ. ಹಾಗಾಗಿ ಡಾಲರ್ ಮಾನ್ಯತೆ ತಗ್ಗಿಸುವ ಪ್ರಯತ್ನಕ್ಕೆ ಬಿಕ್ಸ್ ಒಕ್ಕೂಟ ಮುಂದಾಗಿವೆ. ಹಾಗಾಗಿ ಭಾರತ, ರಷ್ಯಾ ಮತ್ತಿತರ ಬ್ರಿಕ್ಸ್ ರಾಷ್ಟ್ರಗಳು ವ್ಯವಹಾರಗಳಲ್ಲಿ ಸ್ಥಳೀಯ ಕರೆನ್ಸಿಗಳನ್ನೇ ಬಳಸಲು ಈ ಶೃಂಗಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅಷ್ಟೇ ಅಲ್ಲದೇ ಬ್ರಿಕ್ಸ್ ಕರೆನ್ಸಿಯೊಂದನ್ನು (BRICS currency) ತರಲು ಸಿದ್ಧತೆ ಕೂಡ ನಡೆದಿತ್ತು.
ಬ್ರಿಕ್ಸ್ ಒಕ್ಕೂಟ ಡಾಲರ್‌ಗೆ ಸೆಡ್ಡು ಹೊಡೆಯಲು ಯೋಜನೆ ರೂಪಿಸಿದ ಬೆನ್ನಲ್ಲೇ ಟ್ರಂಪ್ ವಿದೇಶಗಳಿಗೆ ಶೇ.100 ರಷ್ಟು ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಡಾಲರ್‌ಗೆ ಪ್ರತಿಯಾಗಿ ಯಾವುದೇ ಕರೆನ್ಸಿ ತರಲು ʻಬ್ರಿಕ್ಸ್ʼ ಸಿದ್ಧವಾಗಿಲ್ಲ ಎಂದು ಹೇಳಿದ್ದರು. ಟ್ರಂಪ್ ವಿದೇಶಗಳಿಗೆ ತೆರಿಗೆ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕುತ್ತಿದ್ದಂತೆ ಮತ್ತೆ ʻಡಿ ಡಾಲರೈಸೇಷನ್ʼ ವಿಚಾರ ಮುನ್ನೆಲೆಗೆ ಬಂದಿದೆ.
ಎಲ್ಲದಕ್ಕಿಂತ ಮುಖ್ಯವಾಗಿ ಅಮೆರಿಕವನ್ನು ಮಣಿಸಲು ಎದುರುನೋಡುತ್ತಿರುವ ಚೀನಾ ಈ ವಿಚಾರದಲ್ಲಿ ಹೆಚ್ಚು ಉತ್ಸುಕವಾಗಿದೆ. ಅದಕ್ಕಾಗಿ ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಹಾಗೂ ರಷ್ಯಾ ಜೊತೆಗೂ ಮಾತುಕತೆ ನಡೆಸಿದೆ. ಭಿನ್ನಾಭಿಪ್ರಾಯಗಳನ್ನು ಸೌಹಾರ್ಧಯುತವಾಗಿ ಕೆಲಸ ಮಾಡಲು ಚೀನಾ ʻಬ್ರಿಕ್ಸ್ʼಗೆ ಕರೆ ನೀಡಿದೆ ಎಂಬುದಾಗಿ ಫೆಡರೇಶನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಸೇಶನ್ಸ್ (FIEO) ನ ಮಹಾನಿರ್ದೇಶಕ ಮತ್ತು ಸಿಇಒ ಅಜಯ್ ಸಹಾಯ್ ಹೇಳಿದ್ದಾರೆ. ಅಷ್ಟಕ್ಕೂ ಇಲ್ಲಿ ಡಿ-ಡಾಲರೈಸೇಶನ್ ಬಂದಿದ್ದು ಯಾಕೆ? ಡಿ- ಡಾಲರೈಸೇಶನ್‌ನಿಂದ ಜಾಗತಿಕ ಆರ್ಥಿಕತೆಯಲ್ಲಾಗುವ ಬದಲಾವಣೆಯೇನು? ಭಾರತಕ್ಕೆ ಆಗುವ ಲಾಭ ಮತ್ತು ನಷ್ಟಗಳೇನು? ಎಂಬುದನ್ನು ತಿಳಿಯಲು ಮುಂದೆ ಓದಿ….
ಏನಿದು ಬ್ರಿಕ್ಸ್?
ಬ್ರಿಕ್ಸ್’ (BRICS) ಎಂಬುದು ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಎಂಬುದರ ಸಂಕ್ಷಿಪ್ತ ರೂಪ. ಜಾಗತಿಕವಾದ ಆರ್ಥಿಕ ಅಭಿವೃದ್ಧಿ ಮತ್ತು ಸಹಕಾರಗಳಿಗೆ ಸಂಬಂಧಿಸಿದಂತೆ ಬೆಳೆಯುತ್ತಿರುವ ಆರ್ಥಿಕ ಶಕ್ತಿಗಳ ನಡುವಿನ ಮೈತ್ರಿಕೂಟವನ್ನು ಇದು ಪ್ರತಿನಿಧಿಸುತ್ತದೆ. ಮೊದಲ ಶೃಂಗಸಭೆಯು 2009 ರಲ್ಲಿ ರಷ್ಯಾದ ಒಕ್ಕೂಟದಲ್ಲಿ ನಡೆದಿತ್ತು. ಆಗ ಜಗತ್ತಿನಾದ್ಯಂತ 20ಕ್ಕೂ ಹೆಚ್ಚು ರಾಷ್ಟ್ರಗಳು ಬ್ರಿಕ್ಸ್‌ನ ಸದಸ್ಯತ್ವವನ್ನು ಕೋರಿ ಅರ್ಜಿಗಳನ್ನು ಸಲ್ಲಿಸಿದ್ದರೆ, ಇತರ 15ಕ್ಕೂ ಹೆಚ್ಚು ದೇಶಗಳು ಬ್ರಿಕ್ಸ್‌ನ ಭಾಗವಾಗುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದವು.
ಡಾಲರ್ ವಿಶ್ವದ ಕರೆನ್ಸಿಯಾಗಿದ್ದು ಹೇಗೆ?
ʻಡಿ-ಡಾಲರೈಸೇಶನ್ʼ ಬಗ್ಗೆ ತಿಳಿದುಕೊಳ್ಳುವ ಮೊದಲು ಡಾಲರ್ ವಿಶ್ವದ ಕರೆನ್ಸಿಯಾಗಿದ್ದು ಹೇಗೆ ಅಂತ ನೋಡೋಣ… ಡಾಲರ್ ವಿಶ್ವದ ಕರೆನ್ಸಿಯಾಗಿ ಹೊರ ಹೊಮ್ಮಿದ್ದು ಹೇಗೆ ಎನ್ನುವುದಕ್ಕೆ ಮೂರು ಪ್ರಮುಖ ಕಾರಣ ನೀಡಬಹುದು.
1. 2ನೇ ಮಹಾಯುದ್ಧದ ಸಮಯದಲ್ಲಿ ವಿಶ್ವದಲ್ಲೇ ಅಮೆರಿಕದಲ್ಲಿ ಚಿನ್ನ ಸಂಗ್ರಹ ಜಾಸ್ತಿ ಇತ್ತು. ಅಷ್ಟೇ ಅಲ್ಲದೇ ಆರ್ಥಿಕವಾಗಿಯೂ, ಮಿಲಿಟರಿ ಎಲ್ಲಾ ಕ್ಷೇತ್ರದಲ್ಲಿ ಅಮೆರಿಕ ಪವರ್‌ಫುಲ್ ದೇಶವಾಗಿ ಹೊರಹೊಮ್ಮಿತ್ತು. ಈ ಕಾರಣಕ್ಕೆ 1944 ರಲ್ಲಿ Bretton Woods ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮ ಡಾಲರ್‌ನಲ್ಲೇ ವ್ಯವಹಾರ ನಡೆಸಲು ಅಮೆರಿಕದ ಮಿತ್ರ ಪಡೆಗಳು ಒಪ್ಪಿಕೊಂಡಿದ್ದವು.
2. ಎರಡನೇ ಕಾರಣ ಕಚ್ಚಾ ತೈಲದ ಜೊತೆಗಿನ ಡಾಲರ್ ಒಪ್ಪಂದ. 2ನೇ ಮಹಾಯುದ್ಧದ ಬಳಿಕ ತನ್ನಲ್ಲಿರುವ ತೈಲ ಬಾವಿಗಳ ಮೇಲೆ ಬಾಂಬ್ ದಾಳಿಯಾಗಬಹುದು ಎಂಬ ಹೆದರಿಕೆ ಸೌದಿ ಅರೇಬಿಯಾಗಿ ಆಯ್ತು. ಈ ವೇಳೆ ಸೌದಿ ಸಹಾಯಕ್ಕೆ ಅಮೆರಿಕ ಬಂತು. ನಿಮ್ಮ ಎಲ್ಲಾ ಕಚ್ಚಾ ತೈಲ ಘಟಕಗಳಿಗೆ ನಾವು ರಕ್ಷಣೆ ನೀಡುತ್ತೇವೆ, ಆದರೆ ವ್ಯವಹಾರವನ್ನು ಡಾಲರ್‌ನಲ್ಲೇ ಮಾಡಬೇಕು ಎಂದು ಷರತ್ತು ವಿಧಿಸಿತು. ಈ ಷರತ್ತಿಗೆ ಸೌದಿ ಒಪ್ಪಿ 1974ರಲ್ಲಿ ಸಹಿ ಹಾಕಿತು. ಇದರ ಪರಿಣಾಮ ಈಗಲೂ ಕಚ್ಚಾ ತೈಲ ವ್ಯವಹಾರ ಡಾಲರ್‌ನಲ್ಲೇ ನಡೆಯುತ್ತಿದೆ.
3. ಮೂರನೇ ಕಾರಣ ಸ್ವಿಫ್ಟ್ ಬ್ಯಾಂಕ್ ನೆಟ್‌ವರ್ಕ್. Bretton Woods ಒಪ್ಪಂದವನ್ನು ಅಮೆರಿಕ ರದ್ದುಗೊಳಿಸಿದ ನಂತರ 1973ರಲ್ಲಿ ಬೆಲ್ಜಿಯಂನಲ್ಲಿ Society for Worldwide Interbank Financial Telecommunications ಅಥವಾ SWIFT ಜನ್ಮ ತಾಳಿತು. ಇದು ಅಂತಾರಾಷ್ಟ್ರೀಯ ನಗದು ವ್ಯವಹಾರಗಳ ಸಂಸ್ಥೆಯಾಗಿದ್ದು, ವಿವಿಧ ದೇಶಗಳ ನಡುವೆ ವೇಗವಾಗಿ ನಗದು ವ್ಯವಹಾರ ನಡೆಯಲು ನೆರವಾಗುವಂತಹ ವ್ಯವಸ್ಥೆ ಸ್ವಿಫ್ಟ್‌ನಲ್ಲಿದೆ.
ಇಲ್ಲೂ ಡಾಲರನ್ನೇ ಯಾಕೆ ಪರಿಗಣಿಸಿಲಾಯಿತು ಎನ್ನುವುದಕ್ಕೂ ಕಾರಣವಿದೆ. ಈ ಸಂದರ್ಭದಲ್ಲಿ ಅಮೆರಿಕ ಮತ್ತು ರಷ್ಯಾ ಮಧ್ಯೆ ಶೀತಲ ಸಮರ ನಡೆಯುತ್ತಿತ್ತು. ಭವಿಷ್ಯದಲ್ಲಿ ಯುರೋಪ್ ದೇಶಗಳ ಮೇಲೆ ಯಾರೇ ಆಕ್ರಮಣ ಮಾಡಿದರೂ ನಾನು ರಕ್ಷಣೆ ನೀಡುತ್ತೇನೆ ಎಂದು ಅಮೆರಿಕ ಭರವಸೆ ನೀಡಿತ್ತು. ಈ ಕಾರಣಕ್ಕೆ ಯುರೋಪ್ ರಾಷ್ಟ್ರಗಳು ಸ್ವಿಫ್ಟ್ ನೀತಿಯನ್ನು ಒಪ್ಪಿಕೊಂಡವು. ಈ ಎಲ್ಲಾ ಕಾರಣದಿಂದ ಏನೂ ಮಾಡದೇ ರಾಜತಾಂತ್ರಿಕ ಪ್ರಭಾವ ಬಳಸಿ ಮೀಸಲು ನಿಧಿಯಿಂದಾಗಿ ಅಮೆರಿಕ ವಿಶ್ವದಲ್ಲೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಹೊರಹೊಮ್ಮಿತ್ತು.
ಡಿ-ಡಾಲರೈಸೇಶನ್ ಬಂದಿದ್ದು ಯಾಕೆ?
ಡಿ-ಡಾಲರೈಸೇಶನ್ ಬಂದಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ʻರಷ್ಯಾ-ಉಕ್ರೇನ್ ಯುದ್ಧʼ. ಉಕ್ರೇನ್ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕ ಮತ್ತು ಯುರೋಪ್ ರಷ್ಯಾವನ್ನು ಸ್ವಿಫ್ಟ್ ಬ್ಯಾಂಕ್ ನೆಟ್‌ವರ್ಕ್‌ನಿಂದ ಹೊರಗಿಟ್ಟಿತು. ಅಮೆರಿಕ ರಷ್ಯಾದ ಡಾಲರ್ ಖಾತೆಯನ್ನು ಫ್ರೀಜ್ ಮಾಡಿತು. ಪರಿಣಾಮ ರಷ್ಯಾಗೆ ಡಾಲರ್‌ನಲ್ಲಿ ಆಮದು ಮತ್ತು ರಫ್ತು ಮಾಡಲು ಸಾಧ್ಯವಾಗಲಿಲ್ಲ. ದಿಢೀರ್ ನೀಡಿದ ಶಾಕ್‌ನಿಂದ ರಷ್ಯಾಗೆ ಬಹಳ ಸಮಸ್ಯೆಯಾಯಿತು. ಯಾವಾಗ ರಷ್ಯಾವನ್ನು ಸ್ವಿಫ್ಟ್ ಬ್ಯಾಂಕ್‌ನಿಂದ ಹೊರಗಡೆ ಇಡಲಾಯಿತೋ ಆವಾಗ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ತಮ್ಮದೇ ಕರೆನ್ಸಿಯಲ್ಲಿ ವ್ಯವಹಾರ ನಡೆಸಲು ಆಸಕ್ತಿ ತೋರಿಸಿದವು. ಯಾಕೆಂದರೆ ಮುಂದೊಮ್ಮೆ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳ ವಿರೋಧ ಕಟ್ಟಿಕೊಂಡರೆ ನಮ್ಮ ರಾಷ್ಟ್ರವನ್ನು ಸ್ವಿಫ್ಟ್ ಬ್ಯಾಂಕ್ ನೆಟ್‌ವರ್ಕ್‌ನಿಂದ ಹೊರಗಡೆ ಇಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು? ಈ ಕಾರಣಕ್ಕೆ ಈಗ ಬ್ರಿಕ್ಸ್ ಕರೆನ್ಸಿ ತರಲು ಮಾತುಕತೆ ನಡೆಸುತ್ತಿದೆ.
ಬ್ರಿಕ್ಸ್ ಕರೆನ್ಸಿ ಹೇಗಿರುತ್ತೆ?
ಬ್ರಿಕ್ಸ್ ಕರೆನ್ಸಿಯ ಪ್ರಸ್ತಾಪವನ್ನು 2022ರ ಶೃಂಗಸಭೆಯಲ್ಲಿ ರಷ್ಯಾ ಮೊದಲು ಪ್ರಸ್ತಾಪಿಸಲಾಗಿತ್ತು. ನಂತರದ ದಿನಗಳಲ್ಲಿ ಡಾಲರ್ ಯಾಕೆ ವಿಶ್ವದ ಕರೆನ್ಸಿಯಾಗಬೇಕು ಎಂಬ ವಿಚಾರಗಳು ಚರ್ಚೆಗೆ ಬಂತು. ನಂತರ ಭಾರತ ರಷ್ಯಾ, ಚೀನಾ, ಬ್ರೆಜಿಲ್‌ಗಳು ರಷ್ಯಾದ ಜೊತೆ ಸ್ಥಳೀಯ ಕರೆನ್ಸಿಯಲ್ಲೇ ವ್ಯವಹಾರ ನಡೆಸುತ್ತಿದೆ. ಇತ್ತೀಚೆಗೆ ಕಾಜಾನ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬ್ರಿಕ್ಸ್ ನೋಟ್ ಹಿಡಿದುಕೊಂಡಿದ್ದರು. ಈ ನೋಟು ದೊಡ್ಡ ಸುದ್ದಿಯಾಗುತ್ತಿದ್ದಂತೆ ಬ್ರಿಕ್ಸ್ ಕರೆನ್ಸಿಯ ಬಗ್ಗೆ ಚರ್ಚೆ ಹೆಚ್ಚಾಯಿತು. ಆ ಬಳಿಕ ಕಳವಳಗೊಂಡಿದ್ದ ಟ್ರಂಪ್ ಅಧಿಕಾರ ಸ್ವೀಕಾರಕ್ಕೂ ಮೊದಲೇ 100% ಸುಂಕ ವಿಧಿಸುವ ಎಚ್ಚರಿಕೆ ಕೊಟ್ಟಿದ್ದರು.
ಈಗ ಚರ್ಚೆ ಆಗುತ್ತಿರುವ ಬ್ರಿಕ್ಸ್ ಕರೆನ್ಸಿ ಡಿಜಿಟಲ್ ಕರೆನ್ಸಿ ಆಗಿದ್ದು ಬ್ಲಾಕ್‌ಚೈನ್ ಆಧಾರಿತ ಪಾವತಿ ವ್ಯವಸ್ಥೆ ಇರಲಿದೆ ಎಂದು ವರದಿಯಾಗಿದೆ. ಸದ್ಯ ಈಗ ಇಂಟರ್‌ನ್ಯಾಷನ್ ಹಣಕಾಸಿನ ಗೇಟ್‌ವೇ ಯಾವುದು ಅಂದರೆ ಸಿಫ್ಟ್ ಬ್ಯಾಂಕಿಂಗ್ ನೆಟ್‌ವರ್ಕ್. ಇದೇ ರೀತಿಯ ನೆಟ್‌ವರ್ಕ್ ಒಂದನ್ನು ಸ್ಥಾಪಿಸಲು ಬ್ರಿಕ್ಸ್ ರಾಷ್ಟ್ರಗಳು ಮುಂದಾಗುತ್ತಿವೆ. ಸದ್ಯಕ್ಕೆ ಈ ಬ್ರಿಕ್ಸ್ ಕರೆನ್ಸಿ ಮಾತುಕತೆಯ ಹಂತದಲ್ಲಿದೆ ಅಷ್ಟೇ. ಟ್ರಂಪ್ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ ನಂತರ ಚೀನಾ ಈ ವಿಚಾರದಲ್ಲಿ ಹೆಚ್ಚು ಉತ್ಸುಕವಾಗಿದೆ.
ಸದ್ಯ ಒಂದೊಂದು ದೇಶಗಳಲ್ಲಿ ಒಂದೊಂದು ಕರೆನ್ಸಿ ಇದೆ. ಬ್ರೆಜಿಲ್‌ನಲ್ಲಿ ʻರಿಯಾಲ್ʼ, ರಷ್ಯಾದಲ್ಲಿ ʻರುಬೆಲ್ʼ, ಭಾರತದಲ್ಲಿ ʻರೂಪಾಯಿʼ, ಚೀನಾದಲ್ಲಿ ʻಯುವಾನ್ʼ, ದಕ್ಷಿಣ ಆಫ್ರಿಕಾದಲ್ಲಿ ʻರಾಂಡ್ʼ ಇದೆ. ಒಂದೊಂದು ದೇಶದಲ್ಲಿ ಒಂದೊಂದು ಕರೆನ್ಸಿ ಇರುವ ಕಾರಣ ಎಲ್ಲ ದೇಶಗಳಿಗೆ ಒಂದು ದೇಶದ ಕರೆನ್ಸಿಯನ್ನು ಅಪ್ಲೈ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಹೊಸ ಕರೆನ್ಸಿ ಬರಬೇಕು. ಇದಕ್ಕಾಗಿ ʻಬ್ರಿಕ್ಸ್ʼ ಮುಂದಾಗಿದೆ. ಆದ್ರೆ ಬ್ರಿಕ್ಸ್ ಕರೆನ್ಸಿ ಹೇಗಿರಲಿದೆ ಅನ್ನೋದು ಇಲ್ಲಿಯವರೆಗೆ ಅಧಿಕೃತವಾಗಿ ತಿಳಿದುಬಂದಿಲ್ಲ.
ಭಾರತಕ್ಕೆ ಏನು ಲಾಭ?
ಸದ್ಯ ಈಗ ವಿಶ್ವದಲ್ಲಿ ಎಲ್ಲಿಯಾದರೂ ಯುದ್ಧ, ಅಮೆರಿಕದ ಫೆಡರಲ್ ರಿಸರ್ವ್ ಕೈಗೊಳ್ಳುವ ನಿರ್ಧಾರದಿಂದ ಡಾಲರ್ ಮೌಲ್ಯ ಏರಿಳಿತವಾಗುತ್ತದೆ. ಡಾಲರ್ ಮೌಲ್ಯ ಏರಿಕೆಯಾದರೆ ಭಾರತ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ. ಇದರ ನೇರ ಪರಿಣಾಮ ಗ್ರಾಹಕರಿಗೆ ತಟ್ಟುತ್ತದೆ. ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಭಾರತ ಸದ್ಯ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ವಸ್ತು ಯಾವುದು ಎಂದರೆ ಕಚ್ಚಾ ತೈಲ. ಕಚ್ಚಾ ತೈಲವನ್ನು ಪೂರೈಸುವ 3 ದೊಡ್ಡ ರಾಷ್ಟ್ರಗಳಾದ ರಷ್ಯಾ, ಯುಎಇ, ಇರಾನ್ ಬ್ರಿಕ್ಸ್ ಸದಸ್ಯ ದೇಶಗಳಾಗಿವೆ. ಹೀಗಾಗಿ ಡಾಲರ್ ಬದಲು ಬ್ರಿಕ್ಸ್ ಕರೆನ್ಸಿಯಲ್ಲಿ ವ್ಯವಹಾರ ನಡೆಸಿದರೆ ಅಗ್ಗದಲ್ಲಿ ತೈಲ ಸಿಗಲಿದೆ.
ಅಮೆರಿಕ, ಪಾಶ್ಚಿಮಾತ್ಯ ದೇಶಗಳಿಗೆ ಬೀಳುತ್ತಾ ಗುದ್ದು?
2ನೇ ಮಹಾಯುದ್ಧದ ನಂತರ ಯುಎಸ್‌ಎಸ್‌ಆರ್ ಮತ್ತು ಯುಎಸ್‌ಎ ಮಧ್ಯೆ ಶೀತಲ ಸಮರ ಆರಂಭವಾಯಿತು. ಈ ನಡುವೆ ಪಾಶ್ಚಿಮಾತ್ಯ ದೇಶಗಳು ಅಭಿವೃದ್ಧಿಯಾದವು. ಇದೆಲ್ಲದರ ಪರಿಣಾಮ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಏಷ್ಯಾ, ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ಮೇಲೆ ತಮ್ಮ ಪ್ರಭಾವ ಬೀರಲು ಆರಂಭಿಸಿದವು. ಅವರಿಗೆ ಏನಾದರೂ ಸಮಸ್ಯೆಯಾದರೆ ಅದು ಜಾಗತಿಕ ಸಮಸ್ಯೆ ಆಗುತ್ತದೆ. ಅದೇ ಬೇರೆ ದೇಶಗಳಲ್ಲಿ ಯಾವುದಾದರೂ ಸಮಸ್ಯೆಯಾದರೆ ಅದು ಸಮಸ್ಯೆ ಅಲ್ಲ ಎಂದು ಭಾವಿಸುತ್ತದೆ. ಬಹುತೇಕ ಸಂದರ್ಭದಲ್ಲಿ ಅಮೆರಿಕದ ಹೇಳಿದ ಮಾತುಗಳೇ ಫೈನಲ್ ಆಗುತ್ತವೆ. ಬೇರೆ ದೇಶಗಳು ತಿರುಗಿ ಬಿದ್ದರೆ ಅವುಗಳ ಮೇಲೆ ನಿರ್ಬಂಧ ಹೇರುತ್ತವೆ. ಇಲ್ಲಿಯವರೆಗೆ ಈ ರೀತಿ ಮಾಡಿಯೇ ಬೆದರಿಸುತ್ತಿದ್ದವು. ಆದರೆ ಇನ್ನು ಮುಂದೆ ಈ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಬ್ರಿಕ್ಸ್ ದೇಶಗಳು ಸಂದೇಶ ಸಾರಿವೆ.
ಸದ್ಯ ಹೊಸ ಕರೆನ್ಸಿ ವಿಚಾರದಲ್ಲಿ ಈಗಾಗಲೇ ರಷ್ಯಾ, ಬ್ರೆಜಿಲ್, ದಕ್ಷಿಣಾ ಆಫ್ರಿಕಾದ ಒಪ್ಪಿಗೆ ಸೂಚಿಸಿದ್ದು, ಭಾರತದ ನಿಲುವಿಗಾಗಿ ಚೀನಾ ಕಾಯುತ್ತಿದೆ. ಒಟ್ಟಿನಲ್ಲಿ ಬ್ರಿಕ್ಸ್ ಒಕ್ಕೂಟ ಮತ್ತಷ್ಟು ಬಲಗೊಂಡರೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಏಕಸ್ವಾಮ್ಯಕ್ಕೆ ಪೆಟ್ಟು ಬೀಳುವುದು ನಿಶ್ಚಿತ.