Tag: donald trump

  • ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಪ್ಲ್ಯಾನ್‌ – ದೈತ್ಯ ಮಿಸೈಲ್‌ ಸಿದ್ಧಪಡಿಸಿದ ಇರಾನ್‌

    ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಪ್ಲ್ಯಾನ್‌ – ದೈತ್ಯ ಮಿಸೈಲ್‌ ಸಿದ್ಧಪಡಿಸಿದ ಇರಾನ್‌

    ವಾಷಿಂಗ್ಟನ್‌: ಇರಾನ್‌ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್‌ ದಾಳಿ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಎಚ್ಚರಿಕೆ ನೀಡಿದ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಇರಾನ್‌ ಪ್ಲ್ಯಾನ್‌ ಮಾಡಿದೆ. ದೇಶದಲ್ಲಿನ ಸಶಸ್ತ್ರ ಪಡೆಗಳು ಉಡಾವಣೆಗಾಗಿ ದೈತ್ಯ ಕ್ಷಿಪಣಿಗಳನ್ನು (Missiles) ಸಿದ್ಧಪಡಿಸಿದೆ ಎಂದು ವರದಿಗಳು ತಿಳಿಸಿವೆ.

    ಮೂಲಗಳ ಪ್ರಕಾರ, ಅಮೆರಿಕ ವಿರುದ್ಧ ಬೃಹತ್‌ ಮಟ್ಟದಲ್ಲಿ ವಾಯುದಾಳಿ ನಡೆಸಲು ಇರಾನ್‌ (Iran) ಪ್ಲ್ಯಾನ್‌ ಮಾಡಿದೆ. ಅದಕ್ಕಾಗಿ ಸಿದ್ಧಪಡಿಸಲಾದ ದೈತ್ಯ ಕ್ಷಿಪಣಿಗಳನ್ನು ತನ್ನ ದೇಶಾದ್ಯಂತ ಇರುವ ಭೂಗತ ನೆಲೆಗಳಲ್ಲಿ ಅಡಗಿಸಿಟ್ಟಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಅಮೆರಿಕ ಬಾಂಬ್‌ ದಾಳಿಗೆ (Bomb Attack) ಮುಂದಾದ್ರೆ, ಇರಾನ್‌ ಸಹ ಪ್ರತಿದಾಳಿ ನಡೆಸಲು ಸಿದ್ಧವಾಗಿದೆ ಎನ್ನುವ ಸಂದೇಶ ಈ ಮೂಲಕ ರವಾನೆಯಾಗಿದೆ. ಇದನ್ನೂ ಓದಿ: ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇನೆ: ಟ್ರಂಪ್ ಬೆದರಿಕೆ

    ಸಾಂದರ್ಭಿಕ ಚಿತ್ರ

    ಟ್ರಂಪ್‌ ಹೇಳಿದ್ದೇನು?
    ಇರಾನ್‌ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್‌ ದಾಳಿ ಮತ್ತು ಎರಡು ಪಟ್ಟು ಸುಂಕಗಳನ್ನು ವಿಧಿಸಲಾಗುವುದು. ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ ಬಾಂಬ್ ದಾಳಿ ನಡೆಯುತ್ತದೆ. ಅಲ್ಲದೇ 4 ವರ್ಷಗಳ ಹಿಂದೆ ಮಾಡಿದಂತೆ ನಾನು ಅವರ ಮೇಲೆ ಎರಡು ಪಟ್ಟು ಸುಂಕಗಳನ್ನು ವಿಧಿಸುವ ಅವಕಾಶವಿದೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ – ಟ್ರಂಪ್‌ ಮತ್ತೆ ಹೊಸ ಬಾಂಬ್‌

    2017-21ರ ಮೊದಲ ಅವಧಿಯಲ್ಲಿ ಟ್ರಂಪ್ ಅವರು ಇರಾನ್ ಮತ್ತು ವಿಶ್ವ ಶಕ್ತಿಗಳ ನಡುವಿನ 2015ರ ಒಪ್ಪಂದದಿಂದ ಅಮೆರಿಕವನ್ನು ಹಿಂತೆಗೆದುಕೊಂಡಿದ್ದರು. ಅದು ನಿರ್ಬಂಧಗಳ ಪರಿಹಾರಕ್ಕೆ ಬದಲಾಗಿ ಟೆಹ್ರಾನ್‌ನ ವಿವಾದಿತ ಪರಮಾಣು ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ಮಿತಿಗಳನ್ನು ವಿಧಿಸಿತ್ತು. ಟ್ರಂಪ್ ಅಮೆರಿಕದ ನಿರ್ಬಂಧಗಳನ್ನು ಪುನಃ ಹೇರಿದರು. ಅಂದಿನಿಂದ ಇಸ್ಲಾಮಿಕ್ ಗಣರಾಜ್ಯವು ತನ್ನ ಯುರೇನಿಯಂ ಪುಷ್ಟೀಕರಣ ಕಾರ್ಯಕ್ರಮವನ್ನು ಹೆಚ್ಚಿಸುವಲ್ಲಿ ಒಪ್ಪಿದ ಮಿತಿಗಳನ್ನು ಮೀರಿದೆ. ಒಪ್ಪಂದ ಮಾಡಿಕೊಳ್ಳಿ, ಇಲ್ಲವೇ ಮಿಲಿಟರಿ ಪರಿಣಾಮಗಳನ್ನು ಎದುರಿಸಿ ಎಂಬ ಟ್ರಂಪ್ ಎಚ್ಚರಿಕೆಯನ್ನು ಟೆಹ್ರಾನ್ ಇಲ್ಲಿಯವರೆಗೆ ನಿರ್ಲಕ್ಷಿಸಿದೆ. ಇದನ್ನೂ ಓದಿ: ಅಮೆರಿಕ ಜೊತೆಗಿನ ಹಳೆಯ ಸಂಬಂಧಗಳು ಮುಗಿದಿವೆ – ಸುಂಕದ ಬರೆ ಬೆನ್ನಲ್ಲೇ ಕೆನಡಾ ಪ್ರಧಾನಿ ಹೇಳಿಕೆ

    ಹೊಸ ಪರಮಾಣು ಒಪ್ಪಂದ ಮಾಡಿಕೊಳ್ಳುವಂತೆ ಟೆಹ್ರಾನ್‌ಗೆ ಒತ್ತಾಯಿಸಿ ಟ್ರಂಪ್ ಬರೆದ ಪತ್ರಕ್ಕೆ ಇರಾನ್, ಒಮಾನ್ ಮೂಲಕ ಪ್ರತಿಕ್ರಿಯೆ ಕಳುಹಿಸಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ತಿಳಿಸಿದ್ದಾರೆ. ಇದನ್ನೂ ಓದಿ: Modi Very Smart Man, ಶ್ರೇಷ್ಠ ಪ್ರಧಾನಿ – ಸುಂಕ ಘರ್ಷಣೆ ನಡುವೆ ಮೋದಿ ಗುಣಗಾನ ಮಾಡಿದ ಟ್ರಂಪ್‌

  • ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇನೆ: ಟ್ರಂಪ್ ಬೆದರಿಕೆ

    ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇನೆ: ಟ್ರಂಪ್ ಬೆದರಿಕೆ

    ವಾಷಿಂಗ್ಟನ್‌: ಇರಾನ್‌ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್‌ ದಾಳಿ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

    ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಕುರಿತು ವಾಷಿಂಗ್ಟನ್‌ನೊಂದಿಗೆ ಒಪ್ಪಂದಕ್ಕೆ ಬರದಿದ್ದರೆ ಬಾಂಬ್ ದಾಳಿ ಮತ್ತು ಎರಡು ಪಟ್ಟು ಸುಂಕಗಳನ್ನು ವಿಧಿಸುವುದಾಗಿ ಟ್ರಂಪ್‌ ಬೆದರಿಕೆ ಹಾಕಿದ್ದಾರೆ.

    ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ ಬಾಂಬ್ ದಾಳಿ ನಡೆಯುತ್ತದೆ. ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ, ನಾಲ್ಕು ವರ್ಷಗಳ ಹಿಂದೆ ಮಾಡಿದಂತೆ ನಾನು ಅವರ ಮೇಲೆ ಎರಡು ಪಟ್ಟು ಸುಂಕಗಳನ್ನು ವಿಧಿಸುವ ಅವಕಾಶವಿದೆ ಎಂದು ತಿಳಿಸಿದ್ದಾರೆ.

    2017-21ರ ಮೊದಲ ಅವಧಿಯಲ್ಲಿ ಟ್ರಂಪ್ ಅವರು ಇರಾನ್ ಮತ್ತು ವಿಶ್ವ ಶಕ್ತಿಗಳ ನಡುವಿನ 2015 ರ ಒಪ್ಪಂದದಿಂದ ಅಮೆರಿಕವನ್ನು ಹಿಂತೆಗೆದುಕೊಂಡಿದ್ದರು. ಅದು ನಿರ್ಬಂಧಗಳ ಪರಿಹಾರಕ್ಕೆ ಬದಲಾಗಿ ಟೆಹ್ರಾನ್‌ನ ವಿವಾದಿತ ಪರಮಾಣು ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ಮಿತಿಗಳನ್ನು ವಿಧಿಸಿತ್ತು.

    ಟ್ರಂಪ್ ಅಮೆರಿಕದ ನಿರ್ಬಂಧಗಳನ್ನು ಪುನಃ ಹೇರಿದರು. ಅಂದಿನಿಂದ ಇಸ್ಲಾಮಿಕ್ ಗಣರಾಜ್ಯವು ತನ್ನ ಯುರೇನಿಯಂ ಪುಷ್ಟೀಕರಣ ಕಾರ್ಯಕ್ರಮವನ್ನು ಹೆಚ್ಚಿಸುವಲ್ಲಿ ಒಪ್ಪಿದ ಮಿತಿಗಳನ್ನು ಮೀರಿದೆ. ಒಪ್ಪಂದ ಮಾಡಿಕೊಳ್ಳಿ, ಇಲ್ಲವೇ ಮಿಲಿಟರಿ ಪರಿಣಾಮಗಳನ್ನು ಎದುರಿಸಿ ಎಂಬ ಟ್ರಂಪ್ ಎಚ್ಚರಿಕೆಯನ್ನು ಟೆಹ್ರಾನ್ ಇಲ್ಲಿಯವರೆಗೆ ನಿರ್ಲಕ್ಷಿಸಿದೆ.

    ಹೊಸ ಪರಮಾಣು ಒಪ್ಪಂದ ಮಾಡಿಕೊಳ್ಳುವಂತೆ ಟೆಹ್ರಾನ್‌ಗೆ ಒತ್ತಾಯಿಸಿ ಟ್ರಂಪ್ ಬರೆದ ಪತ್ರಕ್ಕೆ ಇರಾನ್, ಒಮಾನ್ ಮೂಲಕ ಪ್ರತಿಕ್ರಿಯೆ ಕಳುಹಿಸಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ತಿಳಿಸಿದ್ದಾರೆ.

  • Modi Very Smart Man, ಶ್ರೇಷ್ಠ ಪ್ರಧಾನಿ – ಸುಂಕ ಘರ್ಷಣೆ ನಡುವೆ ಮೋದಿ ಗುಣಗಾನ ಮಾಡಿದ ಟ್ರಂಪ್‌

    Modi Very Smart Man, ಶ್ರೇಷ್ಠ ಪ್ರಧಾನಿ – ಸುಂಕ ಘರ್ಷಣೆ ನಡುವೆ ಮೋದಿ ಗುಣಗಾನ ಮಾಡಿದ ಟ್ರಂಪ್‌

    – ಏ.2ರಿಂದ ವಾಹನಗಳ ಆಮದು ಸುಂಕ ಶೇ.25 ರಷ್ಟು ಹೆಚ್ಚಳ

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿಗೆ ಟ್ರಂಪ್‌ (Donald Trump) ಅಧಿಕಾರಕ್ಕೆ ಏರಿದ ದಿನದಿಂದಲೂ ಭಾರತದೊಂದಿಗೆ‌ ಸುಂಕ ಹೆಚ್ಚಳ ವಿಚಾರದಲ್ಲಿ ಘರ್ಷಣೆ ನಡೆಯುತ್ತಲೇ ಇದೆ. ಆದ್ರೆ ಈಗ ಅಚ್ಚರಿ ಎನ್ನುವಂತೆ ಟ್ರಂಪ್‌, ಭಾರತದ ಪ್ರಧಾನಿ ಮೋದಿ (Narendra Modi) ಅವರ ಗುಣಗಾನ ಮಾಡಿರುವುದು ಅಚ್ಚರಿವುಂಟುಮಾಡಿದೆ.

    ಮೋದಿ, ತುಂಬಾ ಸ್ಮಾರ್ಟ್ ಮ್ಯಾನ್, ನನ್ನ ಒಳ್ಳೇ ಸ್ನೇಹಿತ ಕೂಡ ಹೌದು. ಇತ್ತೀಚೆಗೆ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ನಾವು ತುಂಬಾ ಒಳ್ಳೆಯ ಚರ್ಚೆ ನಡೆಸಿದ್ದೇವೆ. ಇದು ಭಾರತ ಮತ್ತು ನಮ್ಮ ದೇಶದ ನಡುವೆ ಉತ್ತಮ ಬಾಂಧವ್ಯಕ್ಕೆ ಕಾರಣವಾಗಲಿದೆ ಎಂದು ನಾನು ಭಾವಿಸುತ್ತೇನೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಭಾರತ ಒಬ್ಬ ಶ್ರೇಷ್ಠ ಪ್ರಧಾನಿಯನ್ನು ಹೊಂದಿದೆ ಎಂದು ಬಣ್ಣಿಸಿದ್ದಾರೆ.

    ಏಪ್ರಿಲ್ 2ರಿಂದ ಭಾರತ ಸೇರಿದಂತೆ ವಿವಿಧ ದೇಶಗಳ ವಿರುದ್ಧ ಪ್ರತೀಕಾರಾತ್ಮಕ ಸುಂಕವನ್ನು ಹೇರಲು ಅಮೆರಿಕ ಸಿದ್ಧತೆ ನಡೆಸುತ್ತಿದೆ. ಭಾರತದ ವ್ಯಾಪಾರ ನೀತಿಗಳನ್ನು ನಿರಂತರವಾಗಿ ಟ್ರಂಪ್ ಟೀಕಿಸುತ್ತಾ ಬಂದಿದ್ದು, ಭಾರತದ ಆಮದು ಸುಂಕಗಳು (Tariffs) ಅತ್ಯಂತ ನ್ಯಾಯಸಮ್ಮತವಲ್ಲದ್ದು ಹಾಗೂ ಪ್ರಬಲ ಎಂದಿದ್ದಾರೆ. ಜೊತೆಗೆ ಭಾರತವನ್ನು ‘ಸುಂಕದ ರಾಜ’ ಎಂದು ಕರೆದಿದ್ದರು.

    ಭಾರತದ ಜೊತೆ ನನಗೆ ಒಳ್ಳೆಯ ಸಂಬಂಧ ಇದೆ. ಆದರೆ ಏಕೈಕ ಸಮಸ್ಯೆಯೆಂದರೆ, ಅದು ವಿಶ್ವದಲ್ಲೇ ಅತ್ಯಧಿಕ ಸುಂಕ ವಿಧಿಸುವ ದೇಶ. ಸುಸ್ಥಿರತೆಯನ್ನು ಕಾಪಾಡುವ ಸಲುವಾಗಿ ಸುಂಕವನ್ನು ಭಾರತ ಕಡಿಮೆ ಮಾಡುತ್ತದೆ ಎಂಬ ನಿರೀಕ್ಷೆ ನನ್ನದು. ಆದರೆ ಏಪ್ರಿಲ್ 2ರಂದು ನಮ್ಮ ಮೇಲೆ ಅವರು ವಿಧಿಸುವಷ್ಟೇ ಸುಂಕವನ್ನು ನಾವೂ ಹೇರಲಿದ್ದೇವೆ ಎಂದು ಈ ಮೊದಲು ಹೇಳಿಕೆ ನೀಡಿದ್ದರು.

    ಕೆಲ ದಿನಗಳ ಹಿಂದೆಯಷ್ಟೇ ಟ್ರಂಪ್‌, ಭಾರತವು ಅಮೆರಿಕ ಆಮದು ಉತ್ಪನ್ನಗಳ ಮೇಲಿನ ಸುಂಕ ಕಡಿಮೆ ಮಾಡಲಿದೆ ಎಂದು ಹೇಳಿಕೊಂಡಿದ್ದರು. ಆದ್ರೆ ಆ ರೀತಿಯ ಯಾವುದೇ ಪ್ರಸ್ತಾವನೆ ಇಲ್ಲವೆಂದು ಭಾರತ ಘೋಷಿಸಿತ್ತು.

  • ಆಟೋ ಕಂಪನಿಗಳಿಗೆ ಟ್ರಂಪ್‌ ತೆರಿಗೆ ಶಾಕ್‌ – ಭಾರತದ ಯಾವೆಲ್ಲ ಕಂಪನಿಗಳಿಗೆ ಬಿಸಿ ತಟ್ಟಬಹುದು?

    ಆಟೋ ಕಂಪನಿಗಳಿಗೆ ಟ್ರಂಪ್‌ ತೆರಿಗೆ ಶಾಕ್‌ – ಭಾರತದ ಯಾವೆಲ್ಲ ಕಂಪನಿಗಳಿಗೆ ಬಿಸಿ ತಟ್ಟಬಹುದು?

    ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಮದಾಗುವ ವಿದೇಶಿ ವಾಹನಗಳು ಮತ್ತು ಬಿಡಿ ಭಾಗಗಳ ಮೇಲೆ 25%ರಷ್ಟು ಸುಂಕವನ್ನು (Auto Tariff) ಘೋಷಿಸಿದ್ದು ಭಾರತದ(India) ಹಲವು ಅಟೋ ಕಂಪನಿಗಳ ಮೇಲೆ ಪರಿಣಾಮ ಬೀಳಲಿದೆ.

    ಟಾಟಾ ಮೋಟಾರ್ಸ್, ಐಷರ್ ಮೋಟಾರ್ಸ್, ಸೋನಾ ಬಿಎಲ್‌ಡಬ್ಲ್ಯೂ ಮತ್ತು ಸಂವರ್ಧನ ಮದರ್‌ಸನ್‌ನಂತಹ ಭಾರತೀಯ ಕಂಪನಿಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಈ ಕಂಪನಿಗಳು ಅಮೆರಿಕ, ಯುರೋಪ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಚೀನಾಗಳಿಗೆ ಆಟೋ ಘಟಕಗಳನ್ನು ರಫ್ತು ಮಾಡುತ್ತಿವೆ.

    ಟಾಟಾ ಮೋಟಾರ್ಸ್‌ ನೇರವಾಗಿ ಅಮೆರಿಕಕ್ಕೆ ವಾಹನಗಳನ್ನು ರಫ್ತು ಮಾಡುತ್ತಿಲ್ಲ. ಆದರೆ ಅದರ ಅಂಗಸಂಸ್ಥೆಯಾದ ಜಾಗ್ವಾರ್ ಲ್ಯಾಂಡ್ ರೋವರ್ (JLR) 2024ರ ಹಣಕಾಸು ವರದಿಯ ಪ್ರಕಾರ ಒಟ್ಟಾರೆ ಮಾರಾಟದ ಶೇ.22 ರಷ್ಟನ್ನು ಹೊಂದಿದೆ. 2024 ರ ಹಣಕಾಸು ವರ್ಷದಲ್ಲಿ ಜೆಎಲ್‌ಆರ್ ವಿಶ್ವಾದ್ಯಂತ ಸುಮಾರು 4 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಅಮೆರಿಕ ಜೆಎಲ್‌ಆರ್‌ನ ಪ್ರಮುಖ ಮಾರುಕಟ್ಟೆಯಲ್ಲಿ ಒಂದಾಗಿದೆ. ಅಮೆರಿಕದಲ್ಲಿ ಮಾರಾಟವಾಗುವ ಕಂಪನಿಯ ವಾಹನಗಳನ್ನು ಯುಕೆ ಮತ್ತು ಇತರ ಅಂತರಾಷ್ಟ್ರೀಯ ಘಟಕಗಳಲ್ಲಿ ತಯಾರಿಸಲಾಗುತ್ತದೆ. ಇದನ್ನೂ ಓದಿ: ಓಲಾ, ಊಬರ್ ಕ್ಯಾಬ್‍ಗಳಿಗೆ ಕೇಂದ್ರ ಸರ್ಕಾರದಿಂದ ಶಾಕ್ – ಸಹಕಾರ್ ಟ್ಯಾಕ್ಸಿ ಲೋಕಾರ್ಪಣೆಗೆ ಸಿದ್ಧತೆ

    ರಾಯಲ್ ಎನ್‌ಫೀಲ್ಡ್ (Royal Enfield) ಮೋಟಾರ್‌ಸೈಕಲ್‌ಗಳ ತಯಾರಕರಾದ ಐಷರ್ ಮೋಟಾರ್ಸ್ (Eicher Motors) ಮೇಲೂ ಸುಂಕ ಪೆಟ್ಟು ಬೀಳಲಿದೆ. ರಾಯಲ್‌ ಎನ್‌ಫೀಲ್ಡ್‌ ಅಮೆರಿಕಕ್ಕೆ 650 ಸಿಸಿ ಬೈಕ್‌ಗಳನ್ನು ರಫ್ತು ಮಾಡುತ್ತಿದೆ. ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ AI ಮೊರೆ – ಏನಿದು VAC?

    ಭಾರತದ ಪ್ರಮುಖ ಆಟೋ ಬಿಡಿಭಾಗ ತಯಾರಕರಲ್ಲಿ ಒಂದಾದ ಸಂವರ್ಧನ ಮದರ್‌ಸನ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಯುರೋಪ್ ಮತ್ತು ಅಮೆರಿಕದಲ್ಲಿ ಬಲವಾದ ಮಾರುಕಟ್ಟೆಯನ್ನು ಹೊಂದಿದೆ. ಇದು ಟೆಸ್ಲಾ ಮತ್ತು ಫೋರ್ಡ್ ಸೇರಿದಂತೆ ಪ್ರಮುಖ ಅಮೇರಿಕನ್ ವಾಹನ ತಯಾರಕರಿಗೆ ಬಿಡಿ ಭಾಗಗಳನ್ನು ಪೂರೈಸುತ್ತದೆ.

    ಸೋನಾ ಕಾಮ್‌ಸ್ಟಾರ್ ಗೇರ್‌ಗಳು ಮತ್ತು ಸ್ಟಾರ್ಟರ್ ಮೋಟಾರ್‌ಗಳು ಸೇರಿದಂತೆ ಆಟೋಮೋಟಿವ್ ಸಿಸ್ಟಮ್‌ಗಳು ಮತ್ತು ಘಟಕಗಳನ್ನು ತಯಾರಿಸುತ್ತದೆ. ಕಂಪನಿಯು ತನ್ನ ಆದಾಯದ ಸುಮಾರು 66 ಪ್ರತಿಶತವನ್ನು ಅಮೆರಿಕ ಮತ್ತು ಯುರೋಪಿಯನ್ ಮಾರುಕಟ್ಟೆಗಳಿಂದ ಪಡೆಯತ್ತಿದೆ.

    ಅಮೆರಿಕ, ಯುರೋಪ್‌ ಅಲ್ಲದೇ ಸೋನಾ ಬಿಎಲ್‌ಡಬ್ಲ್ಯೂ ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾಕ್ಕೆ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದ್ದರಿಂದ ಗಂಭೀರವಾದ ಪೆಟ್ಟು ಬೀಳಲಾರದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ಭಾರತ್ ಫೋರ್ಜ್, ಸನ್ಸೆರಾ ಎಂಜಿನಿಯರಿಂಗ್ ಲಿಮಿಟೆಡ್, ಸುಪ್ರಜಿತ್ ಎಂಜಿನಿಯರಿಂಗ್ ಮತ್ತು ಬಾಲಕೃಷ್ಣ ಇಂಡಸ್ಟ್ರೀಸ್ ಅಮೆರಿಕಕ್ಕೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.

    2024 ರ ಆರ್ಥಿಕ ವರ್ಷದಲ್ಲಿ ಭಾರತವು 21.2 ಶತಕೋಟಿ ಡಾಲರ್ ಮೌಲ್ಯದ ಆಟೋ ಘಟಕಗಳನ್ನು ರಫ್ತು ಮಾಡಿದೆ. ಅಮೆರಿಕ ಮತ್ತು ಯರೋಪ್‌ ವಿಶ್ವದಲ್ಲೇ ಅತಿ ಹೆಚ್ಚು ಪ್ರಮಾಣದ ಅಟೋ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದೆ.

  • ರಂಜಾನ್‌ ಪ್ರಯುಕ್ತ ಶ್ವೇತಭವನದಲ್ಲಿ ಇಫ್ತಾರ್ ಕೂಟ – ಟ್ರಂಪ್ ವಿರುದ್ಧ ಅಮೆರಿಕನ್‌ ಮುಸ್ಲಿಮರ ಆಕ್ರೋಶ

    ರಂಜಾನ್‌ ಪ್ರಯುಕ್ತ ಶ್ವೇತಭವನದಲ್ಲಿ ಇಫ್ತಾರ್ ಕೂಟ – ಟ್ರಂಪ್ ವಿರುದ್ಧ ಅಮೆರಿಕನ್‌ ಮುಸ್ಲಿಮರ ಆಕ್ರೋಶ

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷರಾದ ಬಳಿಕ ಡೊನಾಲ್ಡ್‌ ಟ್ರಂಪ್‌ (Donald Trump) ಮೊದಲ ಬಾರಿಗೆ ರಂಜಾನ್‌ ಹಬ್ಬದ ಪ್ರಯುಕ್ತ ಇಫ್ತಾರ್‌ ಕೂಟ ಆಯೋಜಿಸಿದ್ದರು. ಆದ್ರೆ ಇಫ್ತಾರ್‌ ಕೂಟಗಳಲ್ಲಿ ಅಮೆರಿಕನ್‌ ಮುಸ್ಲಿಂ ಸಂಸದರು ಹಾಗೂ ಸಮುದಾಯದ ಮುಖಂಡರಿಗೆ ಆಹ್ವಾನ ನೀಡಿಲ್ಲ ಎಂದು ಟ್ರಂಪ್‌ ವಿರುದ್ಧ ಅಮೆರಿಕದ ಮುಸ್ಲಿಮರು (US Muslims) ಆಕ್ರೋಶ ಹೊರಹಾಕಿದ್ದಾರೆ.

    ಶ್ವೇತಭವನದಲ್ಲಿ ಇಫ್ತಾರ್‌ ಕೂಟ ಆಯೋಜಿಸಿದ್ದ ಟ್ರಂಪ್‌, ಇಸ್ಲಾಂ ಧರ್ಮದ ಪವಿತ್ರ ತಿಂಗಳು ರಂಜಾನ್ ಅನ್ನು ಆಚರಿಸುತ್ತಾ ಬಂದಿದ್ದೇವೆ. ಇದು ವಿಶ್ವದಾದ್ಯಂತ ಮುಸ್ಲಿಂ ಬಾಂಧವರಿಗೆ ಪುಣ್ಯ ಸಂಪಾದಿಸುವ ಮಾಸವಾಗಿದೆ. ಅದಕ್ಕಾಗಿ ವಿಶ್ವದ ಅತ್ಯುತ್ತಮ ಧರ್ಮಗಳಲ್ಲಿ ಒಂದಾಗಿರುವ ಮುಸ್ಲಿಂ ಧರ್ಮವನ್ನು ಗೌರವಿಸುತ್ತೇವೆ ಎಂದರಲ್ಲದೇ ಮುಸ್ಲಿಮರಿಗೆ ರಂಜಾನ್‌ ಪ್ರಯುಕ್ತ ಶುಭ ಕೋರಿದ್ದಾರೆ. ಇದನ್ನೂ ಓದಿ: ಅಮೆರಿಕ ಜೊತೆಗಿನ ಹಳೆಯ ಸಂಬಂಧಗಳು ಮುಗಿದಿವೆ – ಸುಂಕದ ಬರೆ ಬೆನ್ನಲ್ಲೇ ಕೆನಡಾ ಪ್ರಧಾನಿ ಹೇಳಿಕೆ

    ಶ್ವೇತಭವನದಲ್ಲಿ ಇಫ್ತಾರ್ ಕೂಟ ಆಯೋಜಿಸುವುದಕ್ಕೆ ಎರಡು ದಶಕಗಳ ಹಿಂದಿನ ಸಂಪ್ರದಾಯವಿದೆ. ಈ ಬಾರಿ ಆಯೋಜಿಸಿದ್ದ ಇಫ್ತಾರ್‌ ಕೂಟ ವಿವಾದಕ್ಕೆ ಕಾರಣವಾಗಿದೆ. ಕೂಟದಲ್ಲಿ ಅಮೆರಿಕನ್‌ ಮುಸ್ಲಿಂ ಸಂಸದರು, ಸಮುದಾಯಕ್ಕೆ ಸಂಬಂಧಿಸಿದ ಮುಖಂಡರನ್ನು ಆಹ್ವಾನಿಸಿಲ್ಲ. ಬದಲಾಗಿ ಮುಸ್ಲಿಂ ರಾಷ್ಟ್ರಗಳ ವಿದೇಶಿ ರಾಯಭಾರಿಗಳನ್ನು ಇಫ್ತಾರ್‌ ಕೂಟಕ್ಕೆ ಆಹ್ವಾನಿಸಲಾಗಿತ್ತು ಎಂದು ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ – ಟ್ರಂಪ್‌ ಮತ್ತೆ ಹೊಸ ಬಾಂಬ್‌

    ಇಲ್ಲಿನ ಮುಸ್ಲಿಂ ನಾಗರಿಕ ಹಕ್ಕುಗಳ ಗುಂಪುಗಳು ಶ್ವೇತಭವನದ ಎದುರು ಪ್ರತಿಭಟನೆ ನಡೆಸಿದ್ದು ತೀವ್ರ ಅಸಮಾಧಾನ ಹೊರಹಾಕಿವೆ. ಇದು ಟ್ರಂಪ್‌ ಅವರ ಬೂಟಾಟಿಕೆ. ಒಂದೆಡೆ ಮಸ್ಲಿಂ ದೇಶಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಮತ್ತೊಂದೆಡೆ ಇಫ್ತಾರ್‌ ಕೂಟ ಆಯೋಜಿಸುತ್ತಾರೆ ಎಂದು ಕಿಡಿ ಕಾರಿವೆ. ಇದನ್ನೂ ಓದಿ: ಭಾರತಕ್ಕಿಂತಲೂ ನಾವು ಹಿಂದಿದ್ದೇವೆ – ಚುನಾವಣಾ ವ್ಯವಸ್ಥೆಯನ್ನೇ ಬದಲಿಸಲು ಮುಂದಾದ ಟ್ರಂಪ್‌

    1996 ರಲ್ಲಿ ಅಂದಿನ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಅಧಿಕಾರಾವಧಿಯಲ್ಲಿ, ಶ್ವೇತಭವನದಲ್ಲಿ ಇಫ್ತಾರ್ ಕೂಟ ಪ್ರಾರಂಭಿಸಲಾಯಿತು, ಇದನ್ನು ನಂತರದ ಅಧ್ಯಕ್ಷರಾದ ಜಾರ್ಜ್ ಬುಷ್ ಮತ್ತು ಬರಾಕ್ ಒಬಾಮಾ ಕೂಡ ಮುಂದುವರಿಸಿದ್ದರು. ಈ ಇಫ್ತಾರ್ ಕೂಟದಲ್ಲಿ ಮುಸ್ಲಿಂ ಸಮುದಾಯದ ಗಣ್ಯರು ಹಾಗೂ ಮುಸ್ಲಿಂ ರಾಷ್ಟ್ರಗಳ ರಾಜತಾಂತ್ರಿಕರು ಮತ್ತು ಸೆನೆಟರ್‌ಗಳು ಭಾಗವಹಿಸುವುದು ಪದ್ಧತಿ. ಆದ್ರೆ ಟ್ರಂಪ್‌ ತಮ್ಮ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ 2017ರಲ್ಲಿ ಶ್ವೇತಭವನದ ಇಫ್ತಾರ್‌ ಕೂಟವನ್ನು ರದ್ದುಗೊಳಿಸಿದ್ದರು. ಇದೀಗ ಮತ್ತೆ ಆಯೋಜಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಬಾಂಗ್ಲಾ ವಿಮೋಚನಾ ದಿನ – 1971ರ ಯುದ್ಧ ನೆನಪಿಸಿ ಯೂನುಸ್‌ಗೆ ಪತ್ರ ಬರೆದ ಪ್ರಧಾನಿ ಮೋದಿ

  • ಅಮೆರಿಕ ಜೊತೆಗಿನ ಹಳೆಯ ಸಂಬಂಧಗಳು ಮುಗಿದಿವೆ – ಸುಂಕದ ಬರೆ ಬೆನ್ನಲ್ಲೇ ಕೆನಡಾ ಪ್ರಧಾನಿ ಹೇಳಿಕೆ

    ಅಮೆರಿಕ ಜೊತೆಗಿನ ಹಳೆಯ ಸಂಬಂಧಗಳು ಮುಗಿದಿವೆ – ಸುಂಕದ ಬರೆ ಬೆನ್ನಲ್ಲೇ ಕೆನಡಾ ಪ್ರಧಾನಿ ಹೇಳಿಕೆ

    ಒಟ್ಟಾವಾ: ಅಮೆರಿಕ ದೇಶಗಳಿಗೆ ಆಮದಾಗುವ ವಾಹನಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ ಬೆನ್ನಲ್ಲೇ, ಅಮೆರಿಕ ಜೊತೆಗಿನ ಹಳೆಯ ಆರ್ಥಿಕ ಮತ್ತು ರಕ್ಷಣಾ ಸಂಬಂಧಗಳು ಕೊನೆಗೊಂಡಿದೆ ಎಂದು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ (Mark Carney) ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

    ಈ ಕುರಿತು ಮಾತನಾಡಿದ ಅವರು, ಅಮೆರಿಕದ ಸುಂಕ (US Tariff) ವಿಧಿಸುವ ಕ್ರಮವು ಕೆನಡಾದ ಆರ್ಥಿಕತೆಯ ಮೇಲಿನ ನೇರ ದಾಳಿಯಾಗಿದೆ. ಇದು ಕೆನಡಾದ 5 ಲಕ್ಷ ಆಟೋಮೊಬೈಲ್‌ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಭದ್ರತೆ ಮತ್ತು ವ್ಯಾಪಾರ ಸಂಬಂಧಗಳ ಮಾತುಕತೆಗೆ ಮತ್ತೆ ಸಮಯ ಬರುತ್ತದೆ ಎಂದು ಕಾರ್ನಿ ಹೇಳಿದ್ದಾರೆ. ಇದನ್ನೂ ಓದಿ: ಮೂರು ವರ್ಷಗಳಿಂದ ಪಾಕ್‌ ಜೈಲಲ್ಲಿದ್ದ ಭಾರತದ ಮೀನುಗಾರ ನೇಣಿಗೆ ಶರಣು

    ಟ್ರಂಪ್‌ ಅವರ ಸುಂಕ ವಿಧಿಸುವ ಕ್ರಮವು ಅನ್ಯಾಯದ ಕ್ರಮ. ಈ ಮೂಲಕ ಟ್ರಂಪ್ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ವ್ಯಾಪಾರ ಒಪ್ಪಂದಗಳನ್ನು ಉಲ್ಲಂಘಿಸುತ್ತಿದ್ದಾರೆ. ಯುನೈಟೆಡ್‌ ಸ್ಟೇಟ್ಸ್‌ನೊಂದಿಗಿನ ಸಂಬಂಧವನ್ನು ಶಾಶ್ವತವಾಗಿ ಬದಲಾಯಿಸುತ್ತಿದ್ದಾರೆ. ಭವಿಷ್ಯದ ವ್ಯಾಪಾರ ಸಂಬಂಧಗಳನ್ನು ಲೆಕ್ಕಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತಕ್ಕಿಂತಲೂ ನಾವು ಹಿಂದಿದ್ದೇವೆ – ಚುನಾವಣಾ ವ್ಯವಸ್ಥೆಯನ್ನೇ ಬದಲಿಸಲು ಮುಂದಾದ ಟ್ರಂಪ್‌

    ನಮ್ಮ ಆರ್ಥಿಕತೆ, ಮಿಟರಿ ಸಹಕಾರ ಮತ್ತು ಭದ್ರತೆಯ ಆಧಾರದ ಮೇಲೆ ಅಮೆರಿಕದ ಜೊತೆಗಿನ ಹಳೆಯ ಸಂಬಂಧಗಳನ್ನು ಮುಗಿಸುತ್ತಿದ್ದೇವೆ. ಟ್ರಂಪ್‌ ಸುಂಕದ ವಿರುದ್ಧ ಹೋರಾಡುವುದು ಆರ್ಥಿಕತೆ ರಕ್ಷಿಸುವುದು ನಮ್ಮ ಮುಂದಿನ ಉದ್ದೇಶ. ಪ್ರತೀಕಾರದ ವ್ಯಾಪಾರ ಕ್ರಮಗಳೊಂದಿಗೆ ಹೋರಾಡುತ್ತೇವೆ, ಇದರಿಂದ ಹೆಚ್ಚು ಪರಿಣಾಮ ಬೀರುವುದು ಅಮೆರಿಕದ ಮೇಲೆಯೇ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕ ಆಮದು ಮೇಲಿನ ಸುಂಕ ಕಡಿತ – ಭಾರತದಿಂದ ಮೊದಲ ಹಂತದ ವ್ಯಾಪಾರ ಒಪ್ಪಂದ

  • ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ – ಟ್ರಂಪ್‌ ಮತ್ತೆ ಹೊಸ ಬಾಂಬ್‌

    ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ – ಟ್ರಂಪ್‌ ಮತ್ತೆ ಹೊಸ ಬಾಂಬ್‌

    ವಾಷಿಂಗ್ಟನ್‌: ಅಮೆರಿಕಕ್ಕೆ (USA) ಆಮದು ಮಾಡಿಕೊಳ್ಳುವ ಎಲ್ಲಾ ವಿದೇಶಿ ಕಾರು ಹಾಗೂ ಇತರೇ ವಾಹನಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಘೋಷಣೆ ಮಾಡಿದ್ದಾರೆ. ಅಲ್ಲದೇ ಈ ಸುಂಕ ನಿರ್ಧಾರ ಶಾಶ್ವತವಾಗಿರಲಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

    ಓವಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್‌, ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ಕಾರು, ವಾಹನಗಳ ಮೇಲೆ 25% ಸುಂಕ (25 per cent Tariff) ವಿಧಿಸಲಾಗುತ್ತದೆ. ಅಮೆರಿಕದಲ್ಲೇ ತಯಾರು ಮಾಡಿದ್ರೆ ಅದಕ್ಕೆ ಯಾವುದೇ ಸುಂಕ ವಿಧಿಸುವುದಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕ ಆಮದು ಮೇಲಿನ ಸುಂಕ ಕಡಿತ – ಭಾರತದಿಂದ ಮೊದಲ ಹಂತದ ವ್ಯಾಪಾರ ಒಪ್ಪಂದ

    ಏಪ್ರಿಲ್‌ 2ರಿಂದ ಸುಂಕ ನೀತಿ ಜಾರಿಯಾಗಲಿದ್ದು, ಏಪ್ರಿಲ್‌ 3ರಿಂದ ಸಂಗ್ರಹ ಪ್ರಾರಂಭವಾಗಲಿದೆ. ಅಮೆರಿಕದ ಈ ನೀತಿಯು ದೇಶಿಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಜೊತೆಗೆ ವಾಹನ ತಯಾರಕರ ಪೂರೈಕೆ ಸರಪಳಿ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಹೇಳಿದ್ದಾರೆ. ಆದ್ರೆ ಟ್ರಂಪ್‌ ಅವರ ಈ ನಿರ್ಧಾರದಿಂದ ಅಮೆರಿಕದ ಗ್ರಾಹಕರು ಹಣದುಬ್ಬರ ಎದುರಿಸಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಅಮೆರಿಕದ 16 ವಯಸ್ಸಿನ ಟಿಕ್‌ಟಾಕ್‌ ಸ್ಟಾರ್‌ ಸಾವು

    ಟ್ರಂಪ್ ನಿರ್ಧಾರದಲ್ಲಿ ಮಸ್ಕ್ ಪಾತ್ರ ಇದೆಯೇ?
    ಟ್ರಂಪ್‌ ಅವರ ಈ ನಿರ್ಧಾರದ ಹಿಂದೆ ಟೆಸ್ಲಾ ಸಿಇಒ ಎಲಾನ್‌ ಮಸ್ಕ್ (Elon Musk) ಪಾತ್ರ ಇದೆಯೇ ಎನ್ನುವ ವದಂತಿ ಕೇಳಿಬರುತ್ತಿದ್ದಂತೆ, ಆ ರೀತಿ ಯಾವುದೇ ಪಾತ್ರ ಇಲ್ಲ ಎಂದು ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ. ಸುಂಕದ ಬಗ್ಗೆ ಮಸ್ಕ್ ಯಾವುದೇ ಸಲಹೆ ನೀಡಿಲ್ಲ ಎಂದು ಹೇಳಿದ್ದಾರೆ.

    ಈ ನೀತಿಯನ್ನು ಪ್ರಮುಖ ವಾಹನ ತಯಾರಕರೊಂದಿಗೆ ಚರ್ಚಿಸಿದ್ದೇನೆ ಮತ್ತು ಈ ಸುಂಕಗಳು ಒಟ್ಟಾರೆಯಾಗಿ ಸಮತೋಲಿತವಾಗಿರುತ್ತವೆ. ಟೆಸ್ಲಾಗೂ ಇದು ಪ್ರಯೋಜನಕಾರಿಯಾಗಬಹುದು ಎಂದಿದ್ದಾರೆ. ಇದನ್ನೂ ಓದಿ: ಭಾರತಕ್ಕಿಂತಲೂ ನಾವು ಹಿಂದಿದ್ದೇವೆ – ಚುನಾವಣಾ ವ್ಯವಸ್ಥೆಯನ್ನೇ ಬದಲಿಸಲು ಮುಂದಾದ ಟ್ರಂಪ್‌

  • ಭಾರತಕ್ಕಿಂತಲೂ ನಾವು ಹಿಂದಿದ್ದೇವೆ – ಚುನಾವಣಾ ವ್ಯವಸ್ಥೆಯನ್ನೇ ಬದಲಿಸಲು ಮುಂದಾದ ಟ್ರಂಪ್‌

    ಭಾರತಕ್ಕಿಂತಲೂ ನಾವು ಹಿಂದಿದ್ದೇವೆ – ಚುನಾವಣಾ ವ್ಯವಸ್ಥೆಯನ್ನೇ ಬದಲಿಸಲು ಮುಂದಾದ ಟ್ರಂಪ್‌

    ವಾಷಿಂಗ್ಟನ್‌: ದಿನಕ್ಕೊಂದು ನಿರ್ಣಯದ ಮೂಲಕ ಸಂಚಲನ ಮೂಡಿಸುತ್ತಿರುವ ಅಮೆರಿಕ (USA) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇದೀಗ ಚುನಾವಣಾ ವ್ಯವಸ್ಥೆಯನ್ನೇ ಬದಲಿಸಲು ಮುಂದಾಗಿದ್ದಾರೆ. ಅಮೆರಿಕದಲ್ಲಿ ಇನ್ನು ಮುಂದೆ ಮತ ಚಲಾವಣೆ ಮಾಡುವವರು ಪೌರತ್ವದ ಸಾಕ್ಷ್ಯವನ್ನು ತೋರಿಸುವುದನ್ನು ಕಡ್ಡಾಯ ಮಾಡಿದ್ದಾರೆ.

    ಸ್ವಯಂ ಆಡಳಿತಕ್ಕೆ ನಾವು ಅನೇಕರಿಗೆ ದಾರಿದೀಪವಾಗಿದ್ದರೂ ಚುನಾವಣೆಯಲ್ಲಿ ಅತ್ಯಗತ್ಯವಾಗಿ ಇರಬೇಕಿದ್ದ ಪ್ರಾಥಮಿಕ ನಿಯಮಗಳನ್ನು ಜಾರಿ ಮಾಡಲು ನಾವು ವಿಫಲವಾಗಿದ್ದೇವೆ. ಭಾರತ (India) ಬ್ರೆಜಿಲ್‌ನಂತಹ ದೇಶಗಳೂ ಮತಚೀಟಿಗೆ ಬಯೋಮೆಟ್ರಿಕ್ ಡೇಟಾಬೇಸ್ (Biometric Database) ಲಿಂಕ್‌ ಮಾಡುತ್ತಿವೆ ಎಂದಿದ್ದಾರೆ.  ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ಕಾಡ್ಗಿಚ್ಚು – 24 ಸಾವು, 27 ಸಾವಿರ ಜನರ ಸ್ಥಳಾಂತರ

    ಚುನಾವಣಾ ವಿಚಾರದಲ್ಲಿ ಅಮೆರಿಕ ಹಿಂದೆ ಉಳಿದಿದೆ. ಅಮೆರಿಕ ಚುನಾವಣಾ (US Election) ಪ್ರಕ್ರಿಯೆಯಲ್ಲಿ ಮಾತ್ರ ಸಾಕಷ್ಟು ಲೋಪಗಳಿವೆ ಎಂದು ಟ್ರಂಪ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

    ಚುನಾವಣೆ ಪ್ರಚಾರದ ವೇಳೆ ಅಮೆರಿಕಾ ಪೌರರಲ್ಲದವರಿಂದ ದೇಣಿಗೆ ಸ್ವೀಕರಿಸುವಂತಿಲ್ಲ ಎಂಬ ಹೊಸ ನಿಯಮವನ್ನು ಟ್ರಂಪ್‌ ತರುತ್ತಿದ್ದಾರೆ.

  • ಅಮೆರಿಕದ ಶಿಕ್ಷಣ ಇಲಾಖೆಯೇ ಬಂದ್‌ – ಮಕ್ಕಳ ಮುಂದೆಯೇ ಆದೇಶಕ್ಕೆ ಟ್ರಂಪ್‌ ಸಹಿ

    ಅಮೆರಿಕದ ಶಿಕ್ಷಣ ಇಲಾಖೆಯೇ ಬಂದ್‌ – ಮಕ್ಕಳ ಮುಂದೆಯೇ ಆದೇಶಕ್ಕೆ ಟ್ರಂಪ್‌ ಸಹಿ

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಸರ್ಕಾರದ ಶಿಕ್ಷಣ ಇಲಾಖೆಯನ್ನು (Department of Education) ಬಂದ್‌ ಮಾಡಿದ್ದಾರೆ.

    ಅಮೆರಿಕ ಚುನಾವಣೆಯ (USA Election) ಸಮಯದಲ್ಲಿ ಟ್ರಂಪ್‌ ಅವರು ಶಿಕ್ಷಣ ಇಲಾಖೆಯನ್ನು ಮುಚ್ಚುವುದಾಗಿ ಭರವಸೆ ನೀಡಿದ್ದರು. ಈ ಭರವಸೆಯಂತೆ ಈಗ ಅವರು ಶಿಕ್ಷಣ ಇಲಾಖೆಯನ್ನು ಮುಚ್ಚುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಟ್ರಂಪ್‌ ಅವರು ಪುಟಾಣಿ ಮಕ್ಕಳನ್ನು ಕುಳ್ಳಿರಿಸಿ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.

    ಶಿಕ್ಷಣ ಇಲಾಖೆ ಬಂದ್‌ ಮಾಡಿ ಶಾಲಾ ನೀತಿಯನ್ನು ಸಂಪೂರ್ಣವಾಗಿ ರಾಜ್ಯಗಳಿಗೆ ನೀಡುತ್ತೇನೆ ಎಂದು ಟ್ರಂಪ್‌ ಈ ಹಿಂದೆ ಹೇಳಿದ್ದರು. ಈ ಭರವಸೆಯಂತೆ ಶಿಕ್ಷಣ ಇಲಾಖೆಯ ಟ್ರಂಪ್‌ ಮುಚ್ಚಿದ್ದರಿಂದ ಇನ್ನು ಮುಂದೆ ಶಿಕ್ಷಣದಲ್ಲಿ ಅಮೆರಿಕ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ. ಸಂಪೂರ್ಣವಾಗಿ ರಾಜ್ಯಗಳಿಗೆ ಅಧಿಕಾರ ಇರಲಿದೆ.

     

    ಶಿಕ್ಷಣ ರಾಜ್ಯಗಳಿಗೆ ಸೇರಬೇಕಿತ್ತು. ನಾವು ಮರಳಿ ಶಿಕ್ಷಣವನ್ನು ರಾಜ್ಯಗಳಿಗೆ ನೀಡಿದ್ದೇವೆ ಎಂದು ಪ್ರಕಟಿಸಿದರು. ಕಳೆದ ವಾರ ಇಲಾಖೆಯು ತನ್ನ ಅರ್ಧದಷ್ಟು ಸಿಬ್ಬಂದಿಯನ್ನು ವಜಾಗೊಳಿಸುವುದಾಗಿ ಟ್ರಂಪ್‌ ಘೋಷಣೆ ಮಾಡಿದ್ದರು.

    ಶಿಕ್ಷಣ ಇಲಾಖೆಯು ಅಮೇರಿಕನ್ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ವಿಫಲವಾಗಿದೆ. 1979 ರಲ್ಲಿ ಇಲಾಖೆಯ ರಚನೆಗೆ ರಿಪಬ್ಲಿಕನ್ನರಿಂದ ಮಾತ್ರವಲ್ಲದೇ ಆಗಿನ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ಸ್ವಂತ ಸಂಪುಟದ ಸದಸ್ಯರಿಂದ ಕೂಡ ಪ್ರತಿರೋಧ ವ್ಯಕ್ತವಾಗಿತ್ತು ಎಂದು ತಿಳಿಸಿದರು.

    ಇಲಾಖೆಯನ್ನು ಮುಚ್ಚಿದ್ದು ಯಾಕೆ?
    ಟ್ರಂಪ್‌ ಆಗಾಗ ಶಿಕ್ಷಣ ಇಲಾಖೆಯ ವಿರುದ್ಧ ಕಿಡಿಕಾರುತ್ತಿದ್ದರು. ಎಡಪಂಥಿಯವಾದಿಗಳು ತಮಗೆ ಬೇಕಾದಂತೆ ಶಿಕ್ಷಣವನ್ನು ರೂಪಿಸಿದ್ದಾರೆ. ತಮ್ಮ ಸಿದ್ಧಾಂತಕ್ಕೆ ಪೂರಕವಾಗಿರುವ ಶಿಕ್ಷಣ ಸಂಸ್ಥೆಗಳಿಗೆ ಅನುದಾನವನ್ನು ನೀಡಲಾಗುತ್ತಿದೆ. ಶಿಕ್ಷಣಕ್ಕಿಂತ ಮುಖ್ಯವಾಗಿ ತಮ್ಮ ಸಿದ್ಧಾಂತವನ್ನು ಪ್ರಚಾರ ಪಡಿಸಲು ಈ ಸಂಸ್ಥೆಯನ್ನು ಬಳಕೆ ಮಾಡಲಾಗುತ್ತಿದೆ. ಟ್ರಾನ್ಸ್‌ಜೆಂಡರ್ ವಿದ್ಯಾರ್ಥಿಗಳನ್ನು ಬೆಂಬಲಿಸುವ ನೀತಿಗಳನ್ನು ಸೇರಿಸಲಾಗಿದೆ. ಸಾರ್ವಜನಿಕ ಶಿಕ್ಷಣ ವಿದ್ಯಾರ್ಥಿಗಳನ್ನು ಧರ್ಮಬೋಧನೆ ಮಾಡುವ ದೊಡ್ಡ ಮಾರ್ಕ್ಸ್‌ವಾದಿ ಪಿತೂರಿಯ ಭಾಗವಾಗಿದೆ. ವಿದೇಶಗಳಲ್ಲೂ ಎಡ ಚಿಂತನೆಯ ಅಧ್ಯಯನಕ್ಕೆ ಅಮೆರಿಕ ಜನರ ತೆರಿಗೆ ದುಡ್ಡನ್ನು ಅನುದಾನವಾಗಿ ನೀಡಲಾಗುತ್ತದೆ ಎಂದು ದೂರಿದ್ದರು.

    ಶ್ವೇತಭವನದ (White House) ದಾಖಲೆಯ ಪ್ರಕಾರ 1979 ರಿಂದ ಶಿಕ್ಷಣ ಇಲಾಖೆ 3 ಲಕ್ಷ ಕೋಟಿ ಡಾಲರ್‌ ಹಣವನ್ನು ಖರ್ಚು ಮಾಡಿದೆ. ಪ್ರತಿ ವಿದ್ಯಾರ್ಥಿಯ ಮೇಲೆ 245% ಗಿಂತ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಆದರೆ ಈ ಖರ್ಚುಗಳನ್ನು ತೋರಿಸಲು ಯಾವುದೇ ದಾಖಲೆಗಳಿಲ್ಲ.

    13 ವರ್ಷ ವಯಸ್ಸಿನ ಮಕ್ಕಳ ಗಣಿತ ಮತ್ತು ಕಲಿಕಾ ಗುಣಮಟ್ಟ ದಶಕಗಳಲ್ಲಿ ಅತ್ಯಂತ ಕಡಿಮೆ ಮಟ್ಟದಲ್ಲಿವೆ ಎಂದು ಶ್ವೇತಭವನದ ದತ್ತಾಂಶವು ತೋರಿಸುತ್ತದೆ. ನಾಲ್ಕನೇ ತರಗತಿಯ ಹತ್ತರಲ್ಲಿ ಆರು ಮತ್ತು ಎಂಟನೇ ತರಗತಿಯ ಮುಕ್ಕಾಲು ಭಾಗದಷ್ಟು ವಿದ್ಯಾರ್ಥಿಗಳು ಗಣಿತದಲ್ಲಿ ಹಿಂದಿದ್ದಾರೆ. ನಾಲ್ಕನೇ ಮತ್ತು ಎಂಟನೇ ತರಗತಿಯ ಹತ್ತರಲ್ಲಿ ಏಳು ವಿದ್ಯಾರ್ಥಿಗಳು ಓದುವಲ್ಲಿ ಪ್ರವೀಣರಾಗಿಲ್ಲ. ನಾಲ್ಕನೇ ತರಗತಿಯ 40% ರಷ್ಟು ವಿದ್ಯಾರ್ಥಿಗಳು ಓದುವುದರಲ್ಲಿ  ಹಿಂದಿದ್ದಾರೆ ಎಂದು ತಿಳಿಸಿದೆ.

  • ಏಪ್ರಿಲ್ 2ರಿಂದಲೇ ಭಾರತದ ಮೇಲಿನ ಉತ್ಪನ್ನಗಳಿಗೆ ಸುಂಕ: ಟ್ರಂಪ್

    ಏಪ್ರಿಲ್ 2ರಿಂದಲೇ ಭಾರತದ ಮೇಲಿನ ಉತ್ಪನ್ನಗಳಿಗೆ ಸುಂಕ: ಟ್ರಂಪ್

    – ಭಾರತ ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕ ಕಡಿತ ಮಾಡುವ ನಿರೀಕ್ಷೆಯಿದೆ ಎಂದ ಟ್ರಂಪ್

    ವಾಷಿಂಗ್ಟನ್: ಸುಂಕದ (Tarrif) ನೆಪದಲ್ಲಿ ಟ್ರಂಪ್ (Donald Trump) ಒತ್ತಡ ತಂತ್ರ ಅನುಸರಿಸುತ್ತಿರುವಂತೆ ಕಾಣಿಸುತ್ತಿದೆ. ಈ ಮೊದಲು ಸುಂಕ ಕಡಿತಕ್ಕೆ ಭಾರತ ಒಪ್ಪಿದೆ ಎಂದಿದ್ದ ಟ್ರಂಪ್ ಈಗ ಸ್ವರ ಬದಲಿಸಿದ್ದಾರೆ. ಭಾರತ ಗಣನೀಯವಾಗಿ ಸುಂಕ ಕಡಿತ ಮಾಡುತ್ತೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.

    ಭಾರತ (India) ಎಂದಿಗೂ ನಮ್ಮ ಉತ್ತಮ ಗೆಳೆಯ. ಆದರೆ ಸುಂಕದ ವಿಚಾರದಲ್ಲಿ ಭಾರತವನ್ನು ಒಪ್ಪಲ್ಲ. ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ದೇಶ ಭಾರತ ಎಂಬುದಷ್ಟೇ ನನ್ನ ಸಮಸ್ಯೆ. ಏ.2ರಿಂದ ಜಾರಿಗೆ ಬರುವಂತೆ ಭಾರತ ವಿಧಿಸಲಿರುವ ಸುಂಕಕ್ಕೆ ಅನುಗುಣವಾಗಿ ಅಮೆರಿಕ ಭಾರತದ ಉತ್ಪನ್ನಗಳಿಗೆ ಸುಂಕ ವಿಧಿಸುತ್ತದೆ ಎಂದು ಪುನರುಚ್ಚರಿಸಿದರು. ಇದನ್ನೂ ಓದಿ: ಕ್ರಿಕೆಟಿಗ ಚಾಹಲ್‌, ಧನಶ್ರೀ ವರ್ಮಾಗೆ ವಿಚ್ಛೇದನ ಮಂಜೂರು

    ಈ ಮಧ್ಯೆ, ವೆಚ್ಚ ಕಡಿತದ ಭಾಗವಾಗಿ ಶಿಕ್ಷಣ ಇಲಾಖೆಯನ್ನೇ ಬಂದ್ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಟ್ರಂಪ್ ಸೂಚನೆ ನೀಡಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ ಅಮೆರಿಕ ಸಂಸತ್‌ನ ಅನುಮೋದನೆ ಇಲ್ಲದೇ ಶಿಕ್ಷಣ ಇಲಾಖೆಯನ್ನು ಬಂದ್ ಮಾಡೋಕೆ ಆಗಲ್ಲ ಎನ್ನಲಾಗುತ್ತಿದೆ.  ಇದನ್ನೂ ಓದಿ: ನಾನೇನು ಶ್ರೀರಾಮಚಂದ್ರ ಅಲ್ಲ – ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಕೆ.ಎನ್‌ ರಾಜಣ್ಣ ಆಗ್ರಹ