Tag: donald trump

  • Black Monday| ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ – ಕರಗಿತು ಹೂಡಿಕೆದಾರರ 19 ಲಕ್ಷ ಕೋಟಿ

    Black Monday| ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ – ಕರಗಿತು ಹೂಡಿಕೆದಾರರ 19 ಲಕ್ಷ ಕೋಟಿ

    ಮುಂಬೈ/ ವಾಷಿಂಗ್ಟನ್‌:  ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಆರಂಭಿಸಿದ ತೆರಿಗೆ ಸಮರದಿಂದ ಷೇರು ಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗಿದ್ದು, ಇಂದು ಒಂದೇ ದಿನ ಹೂಡಿಕೆದಾರರಿಗೆ 19 ಲಕ್ಷ ಕೋಟಿ ರೂ. ನಷ್ಟವಾಗಿದೆ.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರೀ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂದಕ್ಕೆ ಪಡೆದ ಕಾರಣ ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಭಾರೀ ಇಳಿಕೆ ಕಂಡಿದೆ.

    ಸೆನ್ಸೆಕ್ಸ್‌ ಆರಂಭದಲ್ಲಿ 4 ಸಾವಿರ ಅಂಕ ಪತನಗೊಂಡು ನಂತರ ಚೇತರಿಕೆ ಕಂಡಿತ್ತು. ಬೆಳಗ್ಗೆ 11 ಗಂಟೆಯ ವೇಳೆಗೆ 2,900 ಅಂಕ ಚೇತರಿಕೆಯಾಗಿ 72,423.48 ರಲ್ಲಿ ವ್ಯವಹಾರ ನಡೆಸುತ್ತಿತ್ತು. ನಿಫ್ಟಿ 900 ಅಂಕ ಇಳಿಕೆಯಾಗಿ 21,960.80 ರಲ್ಲಿ ವ್ಯವಹಾರ ನಡೆಸುತ್ತಿದೆ. ರಿಯಾಲ್ಟಿ, ಐಟಿ, ಆಟೋ ಮತ್ತು ಲೋಹ ಮುಂತಾದ ಕ್ಷೇತ್ರಗಳ ಷೇರುಗಳು ಮೌಲ್ಯ ಇಳಿಕೆಯಾಗಿದೆ.

    ಸೋಮವಾರ ಬೆಳಿಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಏಷ್ಯಾದ ಎಲ್ಲ ಮಾರುಕಟ್ಟೆಗಳಲ್ಲಿ ಭಾರೀ ಇಳಿಕೆಯಾಗಿತ್ತು. ಗಿಫ್ಟ್‌ ನಿಫ್ಟಿಯೂ ಅಂಕ ಇಳಿಕೆಯಾಗುತ್ತಿದ್ದಂತೆ ಭಾರತದಲ್ಲೂ ಪರಿಣಾಮ ಬೀಳುವುದು ಖಚಿತವಾಗಿತ್ತು. ಬೆಳಗ್ಗೆಯವರೆಗೆ 19 ಲಕ್ಷ ಕೋಟಿ ನಷ್ಟ ಸಂಭವಿಸಿದ್ದು  ನಿಫ್ಟಿ ಮತ್ತು ಸೆನ್ಸೆಕ್ಸ್‌ ಮತ್ತಷ್ಟು ಕುಸಿದರೆ  ನಷ್ಟದ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ.

    ಗಿಫ್ಟಿ ನಿಫ್ಟಿ 888, ಜಪಾನ್‌ನ ನಿಕ್ಕಿ 225 2,302 ಅಂಕ, ತೈವಾನ್‌ನ ವೈಯ್ಟೆಡ್ ಸೂಚ್ಯಂಕವೂ 2063 ಅಂಶ ಕುಸಿಯಿತು. ಹಾಂಕಾಂಗ್‌ನ ಹ್ಯಾಂಗ್‌ಸೆನ್‌ 2,677 ಅಂಕ ಕುಸಿದಿದೆ.

    ಶುಕ್ರವಾರದಿಂದಲೇ ಅಮೆರಿಕ ಮಾಧ್ಯಮಗಳು Black Monday ಹೆಸರಿನಲ್ಲಿ ಸೋಮವಾರ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಲಿದೆ ಎಂದು ವರದಿಗಳು ಬಿತ್ತರಿಸುತ್ತಿದ್ದವು. ನಿರೀಕ್ಷೆಯಂತೆ ಸೋಮವಾರ ವಿಶ್ವದ ಮಾರುಕಟ್ಟೆಯಲ್ಲಿ ರಕ್ತಪಾತವಾಗಿದ್ದು ಹೂಡಿಕೆದಾರರಿಗೆ ಭಾರೀ ನಷ್ಟವಾಗಿದೆ.

  • ಸುಂಕ ನೀತಿಗೆ ವ್ಯಾಪಕ ವಿರೋಧ, ಟ್ರಂಪ್‌ ವಿರುದ್ಧ ತಿರುಗಿಬಿದ್ದ ಜನ – ಅಮೆರಿಕದ 1,200 ಸ್ಥಳಗಳಲ್ಲಿ‌ ಬೃಹತ್‌ ಪ್ರತಿಭಟನೆ

    ಸುಂಕ ನೀತಿಗೆ ವ್ಯಾಪಕ ವಿರೋಧ, ಟ್ರಂಪ್‌ ವಿರುದ್ಧ ತಿರುಗಿಬಿದ್ದ ಜನ – ಅಮೆರಿಕದ 1,200 ಸ್ಥಳಗಳಲ್ಲಿ‌ ಬೃಹತ್‌ ಪ್ರತಿಭಟನೆ

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹಾಗೂ ಡಾಜ್‌ ಮುಖ್ಯಸ್ಥ ಎಲಾನ್‌ ಮಸ್ಕ್‌ (Elon Musk) ವಿರುದ್ಧ ಅಮೆರಿಕದ ಜನ ಬೀದಿಗಿಳಿದಿದ್ದಾರೆ. ಸರ್ಕಾರಿ ಸಿಬ್ಬಂದಿ ಕಡಿತ ಹಾಗೂ ಸುಂಕ ಹೆಚ್ಚಳ ಸೇರಿದಂತೆ ಹಲವು ನೀತಿಗಳನ್ನು ವಿರೋಧಿಸಿ ಬೀದಿಗಿಳಿದು ದೇಶಾದ್ಯಂತ ಪ್ರತಿಭಟನೆ (US Protest) ನಡೆಸುತ್ತಿದ್ದಾರೆ.

    ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಕಡಿತ, ವಿವಿಧ ದೇಶಗಳ ಮೇಲೆ ಪ್ರತಿ ಸುಂಕ ಹೆಚ್ಚಳ ಮತ್ತು ನಾಗರೀಕ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಿ ಅಮೆರಿಕದ ರಾಜಧಾನಿ ವಾಷಿಂಗ್ಟನ್‌ ಡಿಸಿ, ನ್ಯೂಯಾರ್ಕ್, ಹೂಸ್ಟನ್, ಫ್ಲೋರಿಡಾ, ಕೊಲೊರಾಡೋ ಮತ್ತು ಲಾಸ್ ಏಂಜಲೀಸ್ ಸೇರಿ ಹಲವು ಪ್ರಮುಖ ನಗರಗಳಲ್ಲಿ ಜನ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ ಇಂದು ಉದ್ಘಾಟನೆ

    ಟ್ರಂಪ್‌ ಸರ್ಕಾರವು ಸಾವಿರಾರು ಫೆಡರಲ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ಸಾಮಾಜಿಕ ಭದ್ರತಾ ಕಚೇರಿಗಳನ್ನು ಮುಚ್ಚುತ್ತಿದೆ. ವಲಸಿಗರನ್ನು ಗಡೀಪಾರು ಮಾಡಲು ಪ್ರಯತ್ನಿಸುತ್ತಿದೆ ಜೊತೆಗೆ ತೃತೀಯ ಲಿಂಗಿ ಸಮುದಾಯಕ್ಕೆ ನೀಡುತ್ತಿದ್ದ ರಕ್ಷಣೆಯನ್ನು ಕಡಿಮೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿ ಧಿಕ್ಕಾರ ಹಾಕಿದ್ದಾರೆ. ಇದನ್ನೂ ಓದಿ: ಕಟೀಲ್‌ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ: ಮಧೂರು ದೇವಸ್ಥಾನದಲ್ಲಿ ಡಿಕೆಶಿ ಪ್ರಾರ್ಥನೆ

    ಇನ್ನೂ ನ್ಯೂಯಾರ್ಕ್‌ನಿಂದ ಹಿಡಿದು ಲಾಸ್ ಏಂಜಲೀಸ್‌ವರೆಗೂ 50 ರಾಜ್ಯಗಳ 1,200ಕ್ಕೂ ಹೆಚ್ಚು ಸ್ಥಳಗಳಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ʻಹ್ಯಾಂಡ್ಸ್‌ ಆಫ್‌ʼ ಎಂಬ ಅಭಿಯಾನ ನಡೆಸಿರುವ ಪ್ರತಿಭಟನಾಕಾರರು ಟ್ರಂಪ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಟ್ರಂಪ್‌ ಹೇರುತ್ತಿರುವ ಸುಂಕಗಳು ನಮ್ಮ ದೇಶವನ್ನು ನಾಶ ಮಾಡುವ ಶಸ್ತ್ರಗಳಾಗಿವೆ ಎಂದು ಕೂಡ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆ ಮಾಡಿದ ಮೋದಿ – ಈ ಸೇತುವೆ ವಿಶೇಷತೆ ಏನು?

  • ಏ.10ರಿಂದ ಅಮೆರಿಕದ ಸರಕುಗಳ ಮೇಲೆ 34% ಆಮದು ಸುಂಕ – ಚೀನಾ ಪ್ರತೀಕಾರದ ಸುಂಕಕ್ಕೆ ದೊಡ್ಡಣ್ಣ ಗರಂ

    ಏ.10ರಿಂದ ಅಮೆರಿಕದ ಸರಕುಗಳ ಮೇಲೆ 34% ಆಮದು ಸುಂಕ – ಚೀನಾ ಪ್ರತೀಕಾರದ ಸುಂಕಕ್ಕೆ ದೊಡ್ಡಣ್ಣ ಗರಂ

    ಬೀಜಿಂಗ್‌/ವಾಷಿಂಗ್ಟನ್‌: ಅಮೆರಿಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿ ಸುಂಕ (China imposes tariffs) ವಿಧಿಸಿದ ಬೆನ್ನಲ್ಲೇ ವಿಶ್ವ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಉಂಟಾಗಿದೆ. ಇದರ ಬೆನ್ನಲ್ಲೇ ಚೀನಾ ಕೂಡ ಅಮೆರಿಕಕ್ಕೆ ಪ್ರತಿ ಸುಂಕ ವಿಧಿಸಿದೆ.

    ಇದೇ ಏಪ್ರಿಲ್‌ 10ರಿಂದಲೇ ಅಮೆರಿಕದ (USA) ಎಲ್ಲಾ ಆಮದುಗಳ ಮೇಲೆ 34% ಪ್ರತಿ ಸುಂಕ ವಿಧಿಸುವುದಾಗಿ ಚೀನಾ ಘೋಷಿಸಿದೆ. ಟ್ರಂಪ್‌ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಚೀನಿ ವಸ್ತುಗಳ ಮೇಲೆ ಶೇ.34 ಸುಂಕ ವಿಧಿಸಿದ ಬಳಿಕ ಚೀನಾದ ನಿರ್ಧಾರ ಹೊರಬಿದ್ದಿದೆ. ಈ ಮೂಲಕ ಅಮೆರಿಕದ ಬಳಿಕೆ ತೆರಿಗೆ ಹೆಚ್ಚಳ ಮಾಡಿದ ಮೊದಲ ದೇಶವಾಗಿದೆ. ಇದನ್ನೂ ಓದಿ: ಇದೇ ನೋಡಿ ಅಮೆರಿಕ ಪೌರತ್ವದ ಗೋಲ್ಡನ್ ಕಾರ್ಡ್ – 43 ಕೋಟಿ ರೂ. ಗೋಲ್ಡ್ ಕಾರ್ಡ್ ಫಸ್ಟ್ ಲುಕ್ ರಿಲೀಸ್

    Narendra Modi great friend of mine Donald Trump Announces 26 percentage Discounted Reciprocal Tariff On India

    ಇನ್ನು ಅಮೆರಿಕ ಮತ್ತು ಚೀನಾ ದೇಶಗಳ ತೆರಿಗೆ ಏರಿಕೆಯು ಜಾಗತಿಕ ವ್ಯಾಪಾರ ಯುದ್ಧವು ಮಾರುಕಟ್ಟೆಗಳನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಈಗಾಗಲೇ ಅಂದರೆ ಟ್ರಂಪ್ ಹೊಸ ತೆರಿಗೆ ಘೋಷಣೆ ಬೆನ್ನಲ್ಲೇ ಜಗತ್ತಿನಾದ್ಯಂತ ಷೇರುಮಾರುಕಟ್ಟೆಗಳು ತಲ್ಲಣಗೊಂಡಿವೆ. ಇದೀಗ ಚೀನಾ ಕೂಡ ಹೊಸ ಸುಂಕ ಘೋಷಣೆ ಮೂಲಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ಚೀನಾ ಪ್ರತಿ ಸುಂಕ ಘೋಷಣೆ ಬೆನ್ನಲ್ಲೇ ಯೂರೋಪಿಯನ್ ಒಕ್ಕೂಟ ಕೂಡ ತನ್ನ ತೆರಿಗೆ ಪರಿಷ್ಕರಣೆ ಮಾಡುವ ಕುರಿತು ಗಂಭೀರ ಚಿಂತನೆಯಲ್ಲಿದೆ ಎಂದು ವರದಿಗಳು ತಿಳಿಸಿವೆ.

    ಇನ್ನೂ ಚೀನಾ ವಿಧಿಸಿರುವ ಸುಂಕದ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್‌, ಚೀನಾ ಹೆದರಿದೆ, ಅದಕ್ಕಾಘಿ ತಪ್ಪಾಗಿ ಆಡುತ್ತಿದೆ ಎಂದು ಟ್ರಂಪ್‌ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ನನ್ನ ಫ್ರೆಂಡ್‌ ಎನ್ನುತ್ತಲೇ ಭಾರತದ ವಸ್ತುಗಳಿಗೆ 26% ಪ್ರತಿ ಸುಂಕ ಘೋಷಿಸಿದ ಟ್ರಂಪ್‌

    ಕಳೆದ ಜನವರಿ 20 ರಂದು ಟ್ರಂಪ್‌ 2ನೇ ಬಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಚೀನಿ ಆಮದು ವಸ್ತುಗಳ ಮೇಲೆ ಶೇ.10 ರಷ್ಟು ಪ್ರತಿಸುಂಕವನ್ನು 2 ಬಾರಿ ಹೆಚ್ಚಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಅಮೆರಿಕ ಶಾಕ್ – ಔಷಧ, ತಾಮ್ರ, ಸೆಮಿಕಂಡಕ್ಟರ್‌ಗಳಿಗೆ ವಿನಾಯ್ತಿ, ಆಟೋಮೊಬೈಲ್, ಸ್ಟೀಲ್, ಚಿನ್ನಾಭರಣಗಳಿಗೆ ಬರೆ

  • ಇದೇ ನೋಡಿ ಅಮೆರಿಕ ಪೌರತ್ವದ ಗೋಲ್ಡನ್ ಕಾರ್ಡ್ – 43 ಕೋಟಿ ರೂ. ಗೋಲ್ಡ್ ಕಾರ್ಡ್ ಫಸ್ಟ್ ಲುಕ್ ರಿಲೀಸ್

    ಇದೇ ನೋಡಿ ಅಮೆರಿಕ ಪೌರತ್ವದ ಗೋಲ್ಡನ್ ಕಾರ್ಡ್ – 43 ಕೋಟಿ ರೂ. ಗೋಲ್ಡ್ ಕಾರ್ಡ್ ಫಸ್ಟ್ ಲುಕ್ ರಿಲೀಸ್

    – ನಾನೇ ಮೊದಲ ಗೋಲ್ಡ್‌ ಕಾರ್ಡ್‌ ಖರೀದಿದಾರ ಎಂದ ಟ್ರಂಪ್‌

    ವಾಷಿಂಗ್ಟನ್: ಅಮೆರಿಕದ ಪೌರತ್ವ ನೀಡುವ ‘ಗೋಲ್ಡ್ ಕಾರ್ಡ್’ (Gold Card) ಫಸ್ಟ್ ಲುಕ್‌ನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ರಿಲೀಸ್ ಮಾಡಿದ್ದಾರೆ.

    ಶ್ರೀಮಂತ ವಲಸಿಗರು ಅಮೆರಿಕ ಪೌರತ್ವವನ್ನು ಸುಲಭವಾಗಿ ಪಡೆಯಲಿ ಎಂಬ ಉದ್ದೇಶದಿಂದ ಗೋಲ್ಡ್ ಕಾರ್ಡ್ ಪರಿಚಯಿಸುವುದಾಗಿ ಟ್ರಂಪ್ ಈ ಹಿಂದೆ ಹೇಳಿದ್ದರು. ಶ್ರೀಮಂತ ವಲಸಿಗರು ಅಂದಾಜು 43 ಕೋಟಿ ರೂ. (5 ಮಿಲಿಯನ್ ಡಾಲರ್) ನೀಡಿ ಈ ಗೋಲ್ಡ್ ಕಾರ್ಡ್ ಖರೀದಿಸಬಹುದಾಗಿದೆ. ಇದನ್ನೂ ಓದಿ: 43 ಕೋಟಿ ಕೊಟ್ರೆ ಅಮೆರಿಕದ ʻಗೋಲ್ಡ್‌ ಕಾರ್ಡ್‌ʼ – ಪೌರತ್ವ ಪಡೆಯಲು ಶ್ರೀಮಂತ ವಲಸಿಗರಿಗೆ ಟ್ರಂಪ್‌ ಆಫರ್‌

    ಟ್ರಂಪ್ ಫೋಟೋ ಒಳಗೊಂಡ ಗೋಲ್ಡ್ ಕಾರ್ಡ್ ರಿಲೀಸ್ ಆಗಿದೆ. ನಾನೇ ಗೋಲ್ಡ್ ಕಾರ್ಡ್ ಮೊದಲ ಖರೀದಿದಾರ, ಎರಡನೇಯವರು ಯಾರು ಗೊತ್ತಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇನ್ನೆರಡು ವಾರದಲ್ಲಿ ಕಾರ್ಡ್ ಸಿಗಲಿದೆ.

    ‘ಗೋಲ್ಡ್ ಕಾರ್ಡ್’ ಎಂಬ ಯುಎಸ್ ವೀಸಾ ಚಿನ್ನದ ಬಣ್ಣದಿಂದ ಕೂಡಿದೆ. ಅದರ ಮೇಲೆ ಡೊನಾಲ್ಡ್ ಟ್ರಂಪ್ ಅವರ ಚಿತ್ರವಿದೆ. ಇದು ‘ದಿ ಟ್ರಂಪ್ ಕಾರ್ಡ್’ ಎಂಬ ಇನ್ನೊಂದು ಹೆಸರನ್ನು ಸಹ ಹೊಂದಿದೆ. ಇದು 5 ಮಿಲಿಯನ್ ಡಾಲರ್ (ಅಂದಾಜು 43 ಕೋಟಿ ರೂ.) ಮೌಲ್ಯದ್ದಾಗಿದೆ. ಇದನ್ನೂ ಓದಿ: ಭಾರತಕ್ಕೆ ಅಮೆರಿಕ ಶಾಕ್ – ಔಷಧ, ತಾಮ್ರ, ಸೆಮಿಕಂಡಕ್ಟರ್‌ಗಳಿಗೆ ವಿನಾಯ್ತಿ, ಆಟೋಮೊಬೈಲ್, ಸ್ಟೀಲ್, ಚಿನ್ನಾಭರಣಗಳಿಗೆ ಬರೆ

  • ಏರಿಕೆಯಾಗುತ್ತಿದ್ದ ಚಿನ್ನ, ಬೆಳ್ಳಿ ದರ ಭಾರೀ ಇಳಿಕೆ

    ಏರಿಕೆಯಾಗುತ್ತಿದ್ದ ಚಿನ್ನ, ಬೆಳ್ಳಿ ದರ ಭಾರೀ ಇಳಿಕೆ

    ನವದೆಹಲಿ: ಕೆಲ ದಿನಗಳಿಂದ ಭಾರೀ ಏರಿಕೆ ಕಾಣುತ್ತಿದ್ದ ಚಿನ್ನದ (Gold) ಮತ್ತು ಬೆಳ್ಳಿಯ ದರ ಈಗ ದಿಢೀರ್‌ ಇಳಿಕೆಯಾಗಿದೆ.

    ಇಂದು 24 ಕ್ಯಾರೆಟ್ ಚಿನ್ನದ ಬೆಲೆ 1,740 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 1,600 ರೂ. ಕಡಿಮೆಯಾಗಿದೆ.  ಶುಕ್ರವಾರ ಬೆಂಗಳೂರಿನಲ್ಲಿ  10 ಗ್ರಾಂ 24 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ 91,640 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 84,000 ರೂ.ಗೆ ಇಳಿಕೆಯಾಗಿದೆ.

    ಗುರುವಾರ 10 ಗ್ರಾಂ 24 ಕ್ಯಾರೆಟ್ ಬೆಲೆ 93,380 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 85,600 ರೂ. ಆಗಿತ್ತು. ಇದನ್ನೂ ಓದಿ: ಭಾರತಕ್ಕೆ ಅಮೆರಿಕ ಶಾಕ್ – ಔಷಧ, ತಾಮ್ರ, ಸೆಮಿಕಂಡಕ್ಟರ್‌ಗಳಿಗೆ ವಿನಾಯ್ತಿ, ಆಟೋಮೊಬೈಲ್, ಸ್ಟೀಲ್, ಚಿನ್ನಾಭರಣಗಳಿಗೆ ಬರೆ

    ಪ್ರತಿ ಕೆಜಿ ಬೆಳ್ಳಿಯ (Silver) ಬೆಲೆ 4,000 ರೂ.ಗಳಷ್ಟು ಕಡಿಮೆಯಾಗಿದ್ದು 1 ಕೆಜಿ ಬೆಳ್ಳಿಗೆ 99,900 ರೂ. ದರವಿದೆ.

    ದರ ಇಳಿಕೆ ಯಾಕೆ?
    ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ತೆರಿಗೆ ಸಮರ (Tax War) ಆರಂಭಿಸಿದ ಬಳಿಕ ಹೂಡಿಕೆದಾರರಿಗೆ ಭಾರೀ ನಷ್ಟವಾಗುತ್ತಿದೆ. ಹೀಗಾಗಿ ಈ ನಷ್ಟವನ್ನು ಸರಿದೂಗಿಸಲು ಚಿನ್ನದ ಮೇಲೆ ಹೂಡಿಕೆ ಮಾಡಿರುವ ಹೂಡಿಕೆದಾರರು ಹೂಡಿಕೆಯನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ʼರಾಜ್ಯʼದಲ್ಲೂ ಗೆದ್ದ ಮೋದಿ ಸರ್ಕಾರ – ವಕ್ಫ್ ಬಿಲ್ ಜಾರಿಗೆ ಇನ್ನೊಂದೇ ಹೆಜ್ಜೆ ಮಾತ್ರ ಬಾಕಿ

    ಅಂತರರಾಷ್ಟ್ರೀಯ ಮಾರುಕಟ್ಟೆ ದರಗಳು, ಆಮದು ಸುಂಕಗಳು, ತೆರಿಗೆಗಳು ಮತ್ತು ವಿನಿಮಯ ದರಗಳಲ್ಲಿನ ಏರಿಳಿತಗಳು ಪ್ರಾಥಮಿಕವಾಗಿ ಭಾರತದಲ್ಲಿ ಚಿನ್ನದ ಬೆಲೆಗಳ ಮೇಲೆ ಪ್ರಭಾವ ಬೀರುತ್ತವೆ. ಈ ಅಂಶಗಳು ಒಟ್ಟಾಗಿ ದೇಶಾದ್ಯಂತ ದೈನಂದಿನ ಚಿನ್ನದ ದರಗಳನ್ನು ನಿರ್ಧರಿಸುತ್ತವೆ.

     

  • ಚೀನಿಯರ ಜೊತೆ ಅಮೆರಿಕದ ನೌಕರರು ಲವ್‌, ಡೇಟ್‌ ಮಾಡಿದ್ರೆ ಹುಷಾರ್‌!

    ಚೀನಿಯರ ಜೊತೆ ಅಮೆರಿಕದ ನೌಕರರು ಲವ್‌, ಡೇಟ್‌ ಮಾಡಿದ್ರೆ ಹುಷಾರ್‌!

    ವಾಷಿಂಗ್ಟನ್‌: ಅಮೆರಿಕದ (America) ನೌಕರರು ಚೀನಿಯರ ಜೊತೆ ಯಾವುದೇ ರೀತಿಯ ಲವ್‌, ಲೈಂಗಿಕ ಸಂಬಂಧ ಹೊಂದುವುದನ್ನು ಅಮೆರಿಕ ಸರ್ಕಾರ ನಿಷೇಧಿಸಿದೆ. ಭದ್ರತಾ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಚೀನಾದಲ್ಲಿರುವ (China) ಅಮೆರಿಕದ ನೌಕರರು ಚೀನಿಯರೊಂದಿಗೆ ಲವ್‌, ಡೇಟ್‌, ಲೈಂಗಿಕ ಸಂಬಂಧ ಇಟ್ಟುಕೊಳ್ಳುವಂತಿಲ್ಲ ಎಂದು ಟ್ರಂಪ್‌ ಸರ್ಕಾರ ಆದೇಶಿಸಿದೆ. ರಾಜತಾಂತ್ರಿಕರು ಮತ್ತು ಅವರ ಕುಟುಂಬ ಸದಸ್ಯರು, ಭದ್ರತಾ ಅನುಮತಿಗಳನ್ನು ಹೊಂದಿರುವ ಗುತ್ತಿಗೆದಾರರಿಗೂ ಇದು ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಚೀನಾದಿಂದ ನಿರ್ಗಮಿಸುವ ಮೊದಲು ಯುಎಸ್ ರಾಯಭಾರಿಯಾಗಿದ್ದ ನಿಕೋಲಸ್ ಬರ್ನ್ಸ್ ಅವರು ಜನವರಿಯಲ್ಲಿ ಈ ಆದೇಶವನ್ನು ಜಾರಿಗೆ ತಂದಿದ್ದಾರೆ ಎನ್ನಲಾಗಿದೆ.

    ಬೀಜಿಂಗ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು ಗುವಾಂಗ್‌ಝೌ, ಶಾಂಘೈ, ಶೆನ್ಯಾಂಗ್ ಮತ್ತು ವುಹಾನ್‌ನಲ್ಲಿರುವ ಕಾನ್ಸುಲೇಟ್‌ಗಳು ಹಾಗೂ ಹಾಂಗ್ ಕಾಂಗ್‌ನಲ್ಲಿರುವ ಕಾನ್ಸುಲೇಟ್‌ಗಳ ಸಿಬ್ಬಂದಿಗೆ ಈ ನೀತಿ ಅನ್ವಯಿಸುತ್ತದೆ. ಚೀನಾದ ಹೊರಗೆ ಬೀಡುಬಿಟ್ಟಿರುವ ಅಮೆರಿಕದ ಸಿಬ್ಬಂದಿ ಅಥವಾ ಈಗಾಗಲೇ ಚೀನಾದ ನಾಗರಿಕರೊಂದಿಗೆ ಸಂಬಂಧ ಹೊಂದಿರುವವರಿಗೆ ವಿನಾಯಿತಿ ನೀಡಬಹುದು ಎಂದು ವರದಿ ತಿಳಿಸಿದೆ.

    ವಿನಾಯಿತಿ ನೀಡಲು ಸಾಧ್ಯವಾಗದ ಪ್ರಕರಣಗಳಿದ್ದರೆ, ಅಂತಹವರು ತಮ್ಮ ಸಂಬಂಧವನ್ನು ಕೊನೆಗೊಳಿಸಬೇಕು. ಇಲ್ಲವೇ ತಮ್ಮ ಸ್ಥಾನವನ್ನು ತೊರೆಯಬೇಕು. ನಿಯಮವನ್ನು ಉಲ್ಲಂಘಿಸಿದರೆ ಅವರನ್ನು ತಕ್ಷಣವೇ ಚೀನಾ ತೊರೆಯುವಂತೆ ಆದೇಶಿಸಲಾಗುವುದು ಎನ್ನಲಾಗಿದೆ.

    ವ್ಯಾಪಾರ, ತಂತ್ರಜ್ಞಾನ, ಜಾಗತಿಕ ಪ್ರಭಾವದ ವಿಚಾರದಲ್ಲಿ ಚೀನಾ ಮತ್ತು ಅಮೆರಿಕ ನಡುವೆ ಪೈಪೋಟಿ ಇದೆ. ಎರಡೂ ದೇಶಗಳ ನಡುವಿನ ಹದಗೆಟ್ಟ ಸಂಬಂಧದ ಬಗ್ಗೆ ಈ ಆದೇಶ ಒತ್ತಿ ಹೇಳುತ್ತದೆ.

  • ಮೋದಿ ನನ್ನ ಫ್ರೆಂಡ್‌ ಎನ್ನುತ್ತಲೇ ಭಾರತದ ವಸ್ತುಗಳಿಗೆ 26% ಪ್ರತಿ ಸುಂಕ ಘೋಷಿಸಿದ ಟ್ರಂಪ್‌

    ಮೋದಿ ನನ್ನ ಫ್ರೆಂಡ್‌ ಎನ್ನುತ್ತಲೇ ಭಾರತದ ವಸ್ತುಗಳಿಗೆ 26% ಪ್ರತಿ ಸುಂಕ ಘೋಷಿಸಿದ ಟ್ರಂಪ್‌

    ವಾಷಿಂಗ್ಟನ್‌: Make America Great Again (MAGA) ಮಾಡುವ ಕನಸು ಕಾಣುತ್ತಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಭಾರತ (India) ಸೇರಿದಂತೆ ವಿವಿಧ ದೇಶಗಳಿಂದ ಅಮೆರಿಕಕ್ಕೆ (USA) ಆಮದಾಗುತ್ತಿರುವ ಸರಕುಗಳಿಗೆ ಸುಂಕ ವಿಧಿಸುವ ‘ಪ್ರತಿ ಸುಂಕ’ ನೀತಿಯನ್ನು ಘೋಷಿಸಿದ್ದಾರೆ.

    ಶ್ವೇತಭವನದ ರೋಸ್‌ ಗಾರ್ಡನ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಟ್ರಂಪ್‌ ಪ್ರತಿ ಸುಂಕ (Reciprocal Tariff) ನೀತಿಯ ವಿವರಗಳನ್ನು ತಿಳಿಸಿದರು. ಭಾರತ ಮತ್ತು ಚೀನಾ ನಮಗೆ ವಿಧಿಸುವ ತೆರಿಗೆ ಪೈಕಿ ನಾವು ಅರ್ಧದಷ್ಟು ವಿಧಿಸುವ ಮೂಲಕ ದಯೆ ತೋರುತ್ತಿದ್ದೇವೆ. ಅಮೆರಿಕವು ಭಾರತದ ಮೇಲೆ 26% ಮತ್ತು ಚೀನಾದ ಮೇಲೆ 34% ರಷ್ಟು ಆಮದು ಸುಂಕವನ್ನು ವಿಧಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಶೀಘ್ರದಲ್ಲೇ ಟ್ರಂಪ್‌ ಸಂಪುಟದಿಂದ ಎಲಾನ್‌ ಮಸ್ಕ್‌ ಹೊರಕ್ಕೆ?

     

     

    ಪ್ರಧಾನಿ ನರೇಂದ್ರ ಮೋದಿ (Narendra Modi) ಇತ್ತೀಚಿಗೆ ಅಮೆರಿಕಕ್ಕೆ ಆಗಮಿಸಿದ್ದರು. ಅವರು ನನ್ನ ಉತ್ತಮ ಸ್ನೇಹಿತ. ಆದರೆ ನಾನು ಅವರಲ್ಲಿ ನೀವು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದೇನೆ. ಭಾರತ ನಮಗೆ 52% ರಷ್ಟು ಸುಂಕ ವಿಧಿಸುತ್ತದೆ. ಆದ್ದರಿಂದ ನಾವು ಅವರಿಗೆ ಅದರ ಅರ್ಧದಷ್ಟು ಅಂದರೆ 26% ಪ್ರತಿಶತ ಸುಂಕವನ್ನು ವಿಧಿಸುತ್ತೇವೆ ಎಂದರು.

    ಬಹಳ ಸಮಯದಿಂದ ಇತರ ದೇಶಗಳು ನಮ್ಮ ನೀತಿಗಳ ಲಾಭವನ್ನು ಪಡೆದುಕೊಂಡು ನಮ್ಮನ್ನು ಲೂಟಿ ಮಾಡಿವೆ. ಆದರೆ ಇನ್ನು ಮುಂದೆ ಈ ರೀತಿ ಲೂಟಿ ಮಾಡಲು ಬಿಡುವುದಿಲ್ಲ. ಏ.2 ಅಮೆರಿಕ ತನ್ನ ಕೈಗಾರಿಕೆಗಳನ್ನು ಮರಳಿ ಪಡೆದ ದಿನ. ಇನ್ನು ಮುಂದೆ ನಾವು ಅವರು ವಿಧಿಸುವಷ್ಟೇ ಸುಂಕ ವಿಧಿಸುತ್ತೇವೆ ಇದು ಬಹಳ ಸರಳ. ಅವರು ಎಷ್ಟು ವಿಧಿಸುತ್ತಾರೋ ಅಷ್ಟೇ ನಾವು ಅವರಿಗೆ ವಿಧಿಸುತ್ತೇವೆ ಎಂದು ತಿಳಿಸಿದರು.

     

    ಈ ನಿರ್ಧಾರದಿಂದ ನಾವು ನಮ್ಮ ಉದ್ಯೋಗಗಳನ್ನು ಮರಳಿ ಪಡೆಯುತ್ತೇವೆ. ನಮ್ಮ ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯವಹಾರಗಳನ್ನು ಮರಳಿ ಪಡೆಯುತ್ತೇವೆ. ಅಮೆರಿಕವನ್ನು ಮತ್ತೆ ಶ್ರೀಮಂತಗೊಳಿಸುತ್ತೇವೆ.

  • ಶೀಘ್ರದಲ್ಲೇ ಟ್ರಂಪ್‌ ಸಂಪುಟದಿಂದ ಎಲಾನ್‌ ಮಸ್ಕ್‌ ಹೊರಕ್ಕೆ?

    ಶೀಘ್ರದಲ್ಲೇ ಟ್ರಂಪ್‌ ಸಂಪುಟದಿಂದ ಎಲಾನ್‌ ಮಸ್ಕ್‌ ಹೊರಕ್ಕೆ?

    ವಾಷಿಂಗ್ಟನ್‌: ವಿಶ್ವದ ನಂ.1 ಶ್ರೀಮಂತನೂ ಆಗಿರುವ ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್‌ (Elon Musk) ಅವರು ಶೀಘ್ರದಲ್ಲೇ ಟ್ರಂಪ್‌ ಸಂಪುಟದಿಂದ ಹೊರನಡೆಯಲಿದ್ದಾರೆ. ಈ ವಿಷಯವನ್ನು ಖುದ್ದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಕ್ಯಾಬಿನೆಟ್ ಸದಸ್ಯರು ಮತ್ತು ನಿಕಟವರ್ತಿಗಳಿಗೆ ತಿಳಿಸಿರುವುದಾಗಿ ವರದಿಯಾಗಿದೆ.

    ಹೌದು. ಅಮೆರಿಕದ ಅಧ್ಯಕ್ಷನಾಗಿ 2ನೇ ಬಾರಿಗೆ ಅಧಿಕರವಹಿಸಿಕೊಂಡ ಬಳಿಕ ಟ್ರಂಪ್ (Donald Trump) ಹಲವು ಆಪ್ತರಿಗೆ ಸರ್ಕಾರದಲ್ಲಿ ಮಹತ್ತರ ಜವಾಬ್ದಾರಿ ನೀಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಟ್ರಂಪ್ ಆತ್ಮೀಯ ಎಲಾನ್ ಮಸ್ಕ್‌ಗೆ DOGE ಮುಖ್ಯಸ್ಥನಾಗಿ ನೇಮಕ ಮಾಡಿದ್ದರು. ಆದರೆ ಇದೀಗ DOGE ಸ್ಥಾನದಿಂದ ಮಸ್ಕ್‌ ಹೊರಗುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

    elon musk and donald trump

    ಎಲಾನ್ ಮಸ್ಕ್ ಟ್ರಂಪ್ ಸರ್ಕಾರದ ಭಾಗವಾಗಿ ಹೆಚ್ಚು ದಿನ ಇರುವುದಿಲ್ಲ ಎಂದಿದೆ. ಶೀಘ್ರದಲ್ಲೇ ಎಲಾನ್ ಮಸ್ಕ್ ತಮ್ಮ ಉದ್ಯಮಕ್ಕೆ ಮರಳಲಿದ್ದಾರೆ ಎಂದಿದೆ. ಆದರೆ ಯಾವಾಗ ಅಥವಾ ನಿಖರ ಕಾರಣಗಳನ್ನು ಉಲ್ಲೇಖಿಸಿಲ್ಲ ಎಂದು ಅಮೆರಿಕದ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

    ಅಮೆರಿಕ ಸರ್ಕಾರ ಅನಗತ್ಯವಾಗಿ ಖರ್ಚು ಮಾಡುತ್ತಿದ್ದ ಹಣವನ್ನು ಉಳಿಸಲು, ಅನಗತ್ಯ ಯೋಜನೆಗಳನ್ನು ಕಡಿತಗೊಳಿಸಲು, ಸರ್ಕಾರದ ಅನಗತ್ಯ ಉದ್ಯೋಗ-ಹುದ್ದೆ ಕಡಿತಗೊಳಿಸುವಿಕೆ, ಕೆಲ ಅನಗತ್ಯ ಏಜೆನ್ಸಿಗಳ ಸೇವೆ ಅಂತ್ಯಗೊಳಿಸಲು ಮಸ್ಕ್‌ ಅವರಿಗೆ ಡಾಜ್‌ ಹೊಣೆ ನೀಡಲಾಗಿತ್ತಯ. ಅದರಂತೆ ಮಸ್ಕ್‌ ಈ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದರು.

    ಅಲ್ಲದೇ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು, DOGE ವಾರಕ್ಕೆ 120 ಗಂಟೆಗಳ ಕಾಲ ಕೆಲಸ ಮಾಡುತ್ತಿದೆ. ನಮ್ಮ ಅಧಿಕಾರಶಾಹಿ ವಿರೋಧಿಗಳು ವಾರಕ್ಕೆ 40 ಗಂಟೆಗಳ ಕಾಲ ಆಶಾವಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಅವರು ಸೋಲುತ್ತಿದ್ದಾರೆ ಎಂದು ಎಕ್ಸ್‌ನಲ್ಲಿ ಹೇಳಿಕೊಂಡಿದ್ದರು.

  • ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಲು ಭಾರತ ನಿರ್ಧರಿಸಿದೆ: ಟ್ರಂಪ್‌

    ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಲು ಭಾರತ ನಿರ್ಧರಿಸಿದೆ: ಟ್ರಂಪ್‌

    – ನಾಳೆ ಪರಸ್ಪರ ಸುಂಕ ನೀತಿ ಘೋಷಿಸಲಿರುವ ಅಮೆರಿಕ ಅಧ್ಯಕ್ಷ

    ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನಾಳೆ ಹೊಸ ಪರಸ್ಪರ ಸುಂಕ ನೀತಿಯನ್ನು (ರೆಸಿಪ್ರೊಕಲ್ ಟ್ಯಾರಿಫ್ ಪಾಲಿಸಿ) ಘೋಷಣೆ ಮಾಡಲಿದ್ದಾರೆ. ಈ ಹೊಸ ನೀತಿಯ ಪ್ರಕಾರ, ಅಮೆರಿಕದ ಉತ್ಪನ್ನಗಳ ಮೇಲೆ ಯಾವ ದೇಶವು ಎಷ್ಟು ಶೇಕಡಾ ಸುಂಕವನ್ನು ವಿಧಿಸುತ್ತದೆಯೋ, ಅದೇ ಪ್ರಮಾಣದಲ್ಲಿ ಆ ದೇಶದ ಆಮದುಗಳ ಮೇಲೆ ಅಮೆರಿಕವು (US) ಸುಂಕ ವಿಧಿಸಲಿದೆ.

    ಈ ಪರಸ್ಪರ ಸುಂಕ (Tarrif) ವ್ಯವಸ್ಥೆಯು ಚೀನಾ, ಕೆನಡಾ, ಮೆಕ್ಸಿಕೊ ಮತ್ತು ಯುರೋಪಿಯನ್ ಯೂನಿಯನ್‌ನಂತಹ ಪ್ರಮುಖ ವ್ಯಾಪಾರ ಪಾಲುದಾರರನ್ನು ಗುರಿಯಾಗಿಸಲಿದೆ. ಇದರ ಜೊತೆಗೆ, ತೆರಿಗೆ ಸಂಗ್ರಹಣೆಯಲ್ಲಿ ಇತರ ಅಂಶಗಳಾದ ಮೌಲ್ಯವರ್ಧಿತ ತೆರಿಗೆ (VAT), ಸಬ್ಸಿಡಿಗಳು, ಮತ್ತು ವಿನಿಮಯ ದರಗಳನ್ನೂ ಪರಿಗಣಿಸಲಾಗುತ್ತಿದೆ. ಇದನ್ನೂ ಓದಿ: ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಪ್ಲ್ಯಾನ್‌ – ದೈತ್ಯ ಮಿಸೈಲ್‌ ಸಿದ್ಧಪಡಿಸಿದ ಇರಾನ್‌

    ಈಗಾಗಲೇ ಟ್ರಂಪ್ ಮಾರ್ಚ್‌ನಲ್ಲಿ ಚೀನಾದಿಂದ ಆಮದಾಗುವ ಎಲ್ಲಾ ಸರಕುಗಳ ಮೇಲೆ 20% ಸುಂಕವನ್ನು ವಿಧಿಸಿದ್ದಾರೆ. ಕೆನಡಾ ಹಾಗೂ ಮೆಕ್ಸಿಕೊದಿಂದ ಆಮದಾಗುವ ಹೆಚ್ಚಿನ ಸರಕುಗಳ ಮೇಲೆ 25% ಸುಂಕವನ್ನು ಘೋಷಿಸಿದ್ದಾರೆ. ಆದರೆ USMCA-ಅನುಗುಣವಾದ ಸರಕುಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ. ಏಪ್ರಿಲ್ 2 ರಿಂದ ಈ ತೆರಿಗೆಗಳು ಎಲ್ಲಾ ದೇಶಗಳಿಗೆ ವಿಸ್ತರಿಸಲ್ಪಡಲಿದೆ.

    ಈ ಬಗ್ಗೆ ಮಾತನಾಡಿರುವ ಟ್ರಂಪ್, ಏ.2 ರಿಂದ ನಾವು ಎಲ್ಲಾ ದೇಶಗಳೊಂದಿಗೆ ಪರಸ್ಪರ ಸುಂಕಗಳನ್ನು ಪ್ರಾರಂಭಿಸುತ್ತೇವೆ. ಇದು ಎಲ್ಲರಿಗೂ ಸಮಾನವಾಗಿ ಇರುತ್ತದೆ. ತೀವ್ರ ವ್ಯಾಪಾರ ಅಸಮತೋಲನ ಹೊಂದಿರುವ 15 ದೇಶಗಳು ಮೇಲೆ ಮಾತ್ರ ಗಮನ ಹರಿಸದೇ ಎಲ್ಲಾ ವ್ಯಾಪಾರ ಪಾಲುದಾರರನ್ನು ಗುರಿಯಾಗಿಸುವ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇನೆ: ಟ್ರಂಪ್ ಬೆದರಿಕೆ

    ನಾವು ತುಂಬಾ ಒಳ್ಳೆಯವರಾಗಿರುತ್ತೇವೆ. ತುಲನಾತ್ಮಕವಾಗಿ ಹೇಳುವುದಾದರೆ, ನಾವು ತುಂಬಾ ದಯೆಯಿಂದ ಇರುತ್ತೇವೆ. ನೀವು ಎರಡು ದಿನಗಳಲ್ಲಿ ನೋಡಲಿದ್ದೀರಿ. ಅದು ಬಹುಶಃ ನಾಳೆ ರಾತ್ರಿ ಅಥವಾ ಬಹುಶಃ ಬುಧವಾರ ಆಗಿರಬಹುದು. ಏಪ್ರಿಲ್ 2 ರ ಪರಸ್ಪರ ಸುಂಕದ ಗಡುವಿಗೆ ಮುಂಚಿತವಾಗಿ ಭಾರತವು ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಲು ನಿರ್ಧರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

  • ಹೌತಿ ಉಗ್ರರ ದಾಳಿಗೆ ನಡೆದಿದ್ದ ಮಹಾ ಪ್ಲ್ಯಾನ್‌ ಲೀಕ್‌ ಆಗಿದ್ದು ಹೇಗೆ? – ಟ್ರಂಪ್‌ ಟೀಂ ಬಳಸಿದ್ದ ʻಸಿಗ್ನಲ್‌ʼ ಎಷ್ಟು ಸೇಫ್‌?

    ಹೌತಿ ಉಗ್ರರ ದಾಳಿಗೆ ನಡೆದಿದ್ದ ಮಹಾ ಪ್ಲ್ಯಾನ್‌ ಲೀಕ್‌ ಆಗಿದ್ದು ಹೇಗೆ? – ಟ್ರಂಪ್‌ ಟೀಂ ಬಳಸಿದ್ದ ʻಸಿಗ್ನಲ್‌ʼ ಎಷ್ಟು ಸೇಫ್‌?

    ಅಮೆರಿಕದಂಥ ಮುಂದುವರಿದ ರಾಷ್ಟ್ರಗಳು ಸೀಕ್ರೆಟ್‌ ಆಪರೇಷನ್ ಮಾಡೋವಾಗ ಹೇಗೆ ಸಂದೇಶ ಹಂಚಿಕೊಳ್ತಾರೆ? ಈ ಸಿನಿಮಾಗಳಲ್ಲಿ ನೋಡಿರೋ ಹಾಗೇ ಸ್ಯಾಟಲೈಟ್‌ ಫೋನ್‌ ಬಳಸ್ತಾರಾ? ಅಥವಾ ಪ್ರತ್ಯೇಕ ಅಪ್ಲಿಕೇಷನ್‌ ಬಳಸಿಕೊಳ್ತಾರಾ? ಒಂದು ವೇಳೆ ನಾವು ಬಳಸುವ ತಂತ್ರಾಂಶವನ್ನ ಯಾರಿಂದಲೂ ಹ್ಯಾಕ್‌ ಮಾಡೋಕೆ ಆಗಲ್ವ? ಬಹುಶಃ ಇದೆಲ್ಲವೂ ಹಾಲಿವುಡ್‌ನ ಥ್ರಿಲ್ಲರ್‌ ಸಿನಿಮಾಗಳಲ್ಲಿ ನಡೆಯುತ್ತೆ. ವಾಸ್ತವದಲ್ಲಿ ಅಮೆರಿಕದ (America) ಭದ್ರತಾ ಅಧಿಕಾರಿಗಳು ವಿದೇಶಿ ನೆಲದಲ್ಲಿ ನಡೆಸೋಕೆ ಹೊರಟಿದ್ದ ಕಾರ್ಯಾಚರಣೆಗಳ ಬಗ್ಗೆ ʻಸಿಗ್ನಲ್‌ʼ (Signal App) ಅನ್ನೋ ಮೆಸೇಜಿಂಗ್‌ ಆ್ಯಪ್‌ನಲ್ಲಿ ಚರ್ಚೆ ಮಾಡ್ಕೊಂಡಿದ್ದಾರೆ. ಅಂಥದ್ದೇ ಒಂದು ಚರ್ಚೆ ಲೀಕ್‌ ಆಗಿರೋದು ಅಮೆರಿಕದ ಭದ್ರತಾ ಅಧಿಕಾರಿಗಳು, ಮುಖ್ಯಸ್ಥರನ್ನು ತಲೆ ತಗ್ಗಿಸುವಂತೆ ಮಾಡಿದೆ.

    ಈಗ ಜಗತ್ತಿನಾದ್ಯಂತ ಚರ್ಚೆಯ ಕೇಂದ್ರ ವಸ್ತು ಆಗಿರೋದು ‘ಸಿಗ್ನಲ್‌’ ಮೆಸೆಜಿಂಗ್‌ ಆ್ಯಪ್‌. ವಾಟ್ಸಪ್‌, ಟೆಲಿಗ್ರಾಂ ರೀತಿನೇ ಇದೇ ಕೂಡ ಒಂದು ಮೆಸೆಜಿಂಗ್‌ ಅಪ್ಲಿಕೇಷನ್‌. ಆದ್ರೆ, ಇದರಲ್ಲಿ ಖಾಸಗಿತನಕ್ಕೆ ಧಕ್ಕೆಯಿಲ್ಲ ಎನ್ನುತ್ತಾರೆ. ಬಹುಶಃ ಇದೇ ಕಾರಣಕ್ಕೆ ಅಮೆರಿಕದ ಭದ್ರತಾ ಅಧಿಕಾರಿಗಳನ್ನು ಅಷ್ಟೊಂದು ನಂಬಿದ್ದು ಅನಿಸುತ್ತೆ. ಆದಾಗ್ಯೂ ದೊಡ್ಡ ದಾಳಿಯ ಮಾಹಿತಿ ಲೀಕ್‌ ಆಗಿದ್ದು ಹೇಗೆ ಅನ್ನೋದ್ರ ಬಗ್ಗೆ ಸ್ವಲ್ಪ ಗಮನಿಸಬೇಕು.

    USA launches multiple strikes against Houthi Yemen Red Sea

    ಹೌತಿ ಉಗ್ರರ ನೆಲೆ ಉಡೀಸ್‌ ಮಾಡಿದ್ದ ಅಮೆರಿಕ:
    ಮಾರ್ಚ್‌ 13ರಂದು ಅಮೆರಿಕದ ನೌಕಾಪಡೆ ಮತ್ತು ಏರ್‌ಫೋರ್ಸ್‌ ಜೊತೆಯಾಗಿ ಯೆಮೆನ್‌ನಲ್ಲಿ ದೊಡ್ಡ ಕಾರ್ಯಾಚರಣೆ ನಡೆಸಿತ್ತು. ಹೌತಿ ಉಗ್ರ ಸಂಘಟನೆಯ ಜಾಗಗಳನ್ನು ಟಾರ್ಗೆಟ್‌ ಮಾಡಿ ಬಾಂಬ್‌ಗಳ ದಾಳಿ ನಡೆಸಿದವು. ಈ ದಾಳಿ ನಡೆದು ಒಂದೂವರೆ ದಿನ ಆದ್ಮೇಲೆನೆ ಜಗತ್ತಿಗೆ ಅಂಥದ್ದೊಂದು ಕಾರ್ಯಾಚರಣೆ ನಡೆದಿರೊ ವಿಚಾರ ಬಹಿರಂಗ ಆಗಿದ್ದು. ಆದ್ರೆ, ಅಮೆರಿಕದ ಫೈಟರ್‌ ಜೆಟ್‌ಗಳು ಹೌತಿ (Houthi Rebels) ನೆಲೆಗಳ ಮೇಲೆ ಏರ್‌ಸ್ಟ್ರೈಕ್‌ ಮಾಡಿತ್ತು. ಆದ್ರೆ ಈ ದಾಳಿ ಮಾಡುವ 2 ಗಂಟೆಗೂ ಮುಂಚೆಯೇ ಅಮೆರಿಕದ ಪತ್ರಕರ್ತರೊಬ್ಬರಿಗೆ ಅದರ ಎಲ್ಲ ಮಾಹಿತಿಯು ಲಭ್ಯವಾಗಿತ್ತು.

    Chilling video Moment Yemens Houthis used chopper to hijack India bound ship in Red Sea 1

    ಯಾವೆಲ್ಲ ಶಸ್ತ್ರಾಸ್ತ್ರಗಳು ಬಳಕೆ ಮಾಡಲಾಗ್ತಿದೆ, ಟಾರ್ಗೆಟ್‌ ಎಲ್ಲಿ, ದಾಳಿ ಮಾಡೋ ಟೈಮ್‌ ಯಾವುದು, ಈ ಎಲ್ಲದರ ಸಂಪೂರ್ಣ ಪ್ಲ್ಯಾನ್‌ ಅಮೆರಿಕದ ‘ದಿ ಅಟ್ಲಾಂಟಿಕ್’ ಮ್ಯಾಗ್‌ಜೀನ್‌ ಎಡಿಟರ್‌ ಜೆಫ್ರಿ ಗೋಲ್ಡ್‌ಬರ್ಗ್‌ ಅವರಿಗೆ ಗೊತ್ತಾಗಿತ್ತು. ಇಲ್ಲಿ ಮತ್ತೊಂದು ಟ್ವಿಸ್ಟ್‌ ಅಂದ್ರೆ, ಆ ಎಡಿಟರ್‌ಗೆ ಇಷ್ಟೆಲ್ಲ ಮಾಹಿತಿ ಸಿಗೋಕೆ ಕಾರಣ ರಕ್ಷಣಾ ಇಲಾಖೆ ಕಾರ್ಯದರ್ಶಿ ಪೀಟ್‌ ಹೆಗ್ಸೆಥ್‌. ಅವರೇ ಆ ಎಲ್ಲ ಮಾಹಿತಿಯನ್ನು ಗ್ರೂಪ್‌ ಚಾಟ್‌ನಲ್ಲಿ ಹಂಚಿಕೊಂಡಿದ್ರು. ಅದಾದ ಮೇಲೆ ಹೌತಿಗಳ ವಿಚಾರ ಚರ್ಚಿಸೋ ಒಂದು ಗ್ರೂಪ್‌ ಕ್ರಿಯೇಟ್‌ ಆಗಿತ್ತು. ಅದರಲ್ಲಿ ಎಡಿಟರ್‌ ಅನ್ನೂ ಕೂಡ ಸೇರಿಸಲಾಗಿತ್ತು. ಅಲ್ಲಿ ಇಡೀ ಅಮೆರಿಕದ ಭದ್ರತೆಗೆ ಸಂಬಂಧಿಸಿದ ಉನ್ನತ ಅಧಿಕಾರಿಗಳಿಂದ ಹಿಡಿದು ಅಮೆರಿಕ ಉಪಾಧ್ಯಕ್ಷರ ವರೆಗೂ ಎಲ್ಲರೂ ಇದ್ರು. ರಕ್ಷಣಾ ಇಲಾಖೆ, ಗುಪ್ತಚರ ಇಲಾಖೆ, ರಾಷ್ಟ್ರೀಯ ಭದ್ರತೆ ಹಾಗೂ ಅಮೆರಿಕದ ಆಡಳಿತ ಎಲ್ಲರ ನಡುವೆ ಸಂವಹನ ಮಾಡಿಕೊಂಡು ಯೆಮೆನ್‌ನಲ್ಲಿ ಹೌತಿಗಳ ಮೇಲೆ ದಾಳಿಯ ಪ್ಲ್ಯಾನ್‌ ಅದೇ ಗ್ರೂಪ್‌ನಲ್ಲಿ ಆಗಿತ್ತು. ಅದರ ಪಿನ್‌ ಟು ಪಿನ್‌ ಮಾಹಿತಿ ಎಡಿಟರ್‌ ಜೆಫ್ರಿ ಗೋಲ್ಡ್‌ಬರ್ಗ್‌ಗೂ ಗೊತ್ತಾಗ್ತಿತ್ತು. ಆದ್ರೆ, ಅದೆಲ್ಲವೂ ನಿಜ ಅನ್ನೋದು ಗೊತ್ತಾಗಿದ್ದು, ಅಮೆರಿಕ ಹೌತಿಗಳ ಮೇಲೆ ಬಾಂಬ್‌ ಹಾಕಿದ್ಮೇಲೆನೆ. ಇದೆಲ್ಲವೂ ಈಗ ಗುಟ್ಟಾಗಿ ಉಳಿದಿಲ್ಲ. ಆ ಎಡಿಟರ್‌, ನನಗೆ ಆಕಸ್ಮಿಕವಾಗಿ ಇದೆಲ್ಲ ಗೊತ್ತಾಯ್ತು ಅಂತ ವಿವರವಾದ ಆರ್ಟಿಕಲ್‌ ಬರೆದಿದ್ದಾರೆ. ಇನ್ನು ಭದ್ರತಾ ಅಧಿಕಾರಿಗಳಿಗೆ ಈ ಬೆಳವಣಿಗೆ ಬೆಂಕಿಯಲ್ಲಿ ತಾವೇ ಕೈಯಿಟ್ಟು ಸುಟ್ಟುಕೊಂಡ ಹಾಗೇ ಆಗಿದೆ.

    Who are the Houthis and why are they attacking Red Sea ships U.S. launches multiple strikes against Houthi

    ಸಿಗ್ನಲ್‌ ಮೆಸೆಜಿಂಗ್‌ ಆಪ್‌ನಲ್ಲಿ ‘ಹೌತಿ ಪಿಸಿ ಸ್ಮಾಲ್‌ ಗ್ರೂಪ್‌’ ಹೆಸರಿನ ಗ್ರೂಪ್‌ನಲ್ಲಿ ದಾಳಿಯ ಬಗ್ಗೆ ಚರ್ಚೆ ಮಾಡಲಾಗಿತ್ತು. ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಸೇರಿದಂತೆ 18 ಮಂದಿ ಆ ಗ್ರೂಪ್‌ನಲ್ಲಿದ್ರು. ಅಮೆರಿಕ ನಡೆಸೋ ದಾಳಿಯ ವಿಚಾರ ಅತ್ಯಂತ ಗೋಪ್ಯವಾದುದು, ಇಲ್ಲಿ ರಾಷ್ಟ್ರೀಯ ಭದ್ರತೆಯ ಲೋಪ ಆಗಿದೆ ಅನ್ನೋ ಆರೋಪಗಳು ಟ್ರಂಪ್‌ ಆಡಳಿತಕ್ಕೆ ತಲೆ ನೋವಾಗಿದೆ. ತುಳಸಿ ಗಬಾರ್ಡ್‌, ಮೈಕೆಲ್‌ ವಾಲ್ಟ್ಜ್ ಸೇರಿದಂತೆ ಉನ್ನತ ಅಧಿಕಾರಿಗಳನ್ನು ಸ್ಥಾನದಿಂದ ಕಿತ್ತು ಹಾಕಿ ಅನ್ನೋ ಒತ್ತಾಯ ಕೇಳಿಬಂದಿದೆ. ಆದ್ರೆ, ಟ್ರಂಪ್‌ ಅಧಿಕಾರಿಗಳನ್ನು ಕಿತ್ತು ಹಾಕೋ ಕೂಗನ್ನು ನಿರಾಕರಿಸಿದ್ದಾರೆ.

    ಇನ್ನು ಅಮೆರಿಕ ಈ ದಾಳಿಯನ್ನು ಪ್ಲ್ಯಾನ್‌ ಮಾಡೋಕೆ ಕಾರಣ, ಕೆಂಪು ಸಮುದ್ರ ಮತ್ತು ಗಲ್ಫ್‌ ಆಫ್‌ ಅಡೆನ್‌ನಲ್ಲಿ ಹೌತಿ ಉಗ್ರರು ಸರಕು ಸಾಗಣೆ ಹಡಗುಗಳ ಮೇಲೆ ನಡೆಸ್ತಿದ್ದ ಅಟ್ಯಾಕ್‌. ಅಷ್ಟೇ ಅಲ್ಲದೇ ಹೌತಿಗಳು ಹಮಾಸ್‌ ಅನ್ನು ಬೆಂಬಲಿಸಿ ಇಸ್ರೇಲ್‌ ಮೇಲೂ ದಾಳಿ ಶುರು ಮಾಡಿದ್ದರು. ಅಮೆರಿಕದ ಯುದ್ಧ ನೌಕೆಗಳ ಮೇಲೆ ಹಲವು ಬಾರಿ ಹೌತಿಗಳು ದಾಳಿ ಮಾಡಿದ್ದರು. ಕೆಂಪು ಸಮುದ್ರ ಮಾರ್ಗದಲ್ಲಿ ಸರಕು ಸಾಗಣೆ ಹಡಗು ಸಂಚಾರಕ್ಕೆ ಅವರು ಅಡ್ಡಿ ಪಡಿಸ್ತಿದ್ರು. ಇದೆಲ್ಲವನ್ನೂ ಸರಿಪಡಿಸೋಕೆ ಅಮೆರಿಕ ಹೌತಿ ನೆಲೆಗಳ ಮೇಲೆ ಕಾರ್ಯಾಚರಣೆ ನಡೆಸಿದೆ. ಆ ಕಾರ್ಯಾಚರಣೆಯ ಮೊದಲ ಪ್ಲ್ಯಾನ್‌ ಲೀಕ್‌ ಆಗಿತ್ತು.

    UK Strike

    ಹೌತಿ ಉಗ್ರರು ಯಾರು?
    1990ರಲ್ಲಿ ಯೆಮೆನ್‌ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ವಿರುದ್ಧ ಭ್ರಷ್ಟಾಚಾರದ ಆರೋಪ ಬರುತ್ತದೆ. ಈ ವೇಳೆ ಧಾರ್ಮಿಕ ನಾಯಕ ಹುಸೇನ್‌ ಅಲಿ ಹೌತಿ ನೇತೃತ್ವದಲ್ಲಿ ಒಂದು ಚಳುವಳಿ ಆರಂಭವಾಗುತ್ತದೆ. ಈ ಚಳುವಳಿ ಈಗ ಹೌತಿ ಉಗ್ರ ಸಂಘಟನೆಯಾಗಿ ಮಾರ್ಪಾಡಾಗಿದೆ. ರಷ್ಯಾದ (Russia) ವಿರುದ್ಧ ಹೋರಾಡಲು ಅಮೆರಿಕ ತಾಲಿಬಾನ್‌ ಹೇಗೆ ಬೆಳೆಸಿತೋ ಅದೇ ರೀತಿ ಇರಾನ್‌ ತನ್ನ ವಿರುದ್ಧ ಇರುವ ದೇಶಗಳ ವಿರುದ್ಧ ಹೋರಾಡಲು ಹೌತಿ ಬಂಡುಕೋರರಿಗೆ ಸಹಾಯ ನೀಡುತ್ತದೆ. ಈಗ ಯೆಮೆನ್‌ನ ಒಂದು ಕಡೆ ಸೌದಿ ಅರೇಬಿಯಾ ಮತ್ತು ಅಮೆರಿಕದ ಬೆಂಬಲ ಇರುವ ಒಂದು ಸರ್ಕಾರ ಇದ್ದರೆ ಇನ್ನೊಂದು ಕಡೆ ಇರಾನ್‌ ಬೆಂಬಲಿತ ಹೌತಿ ಉಗ್ರರು ಇದ್ದಾರೆ. ಅಮೆರಿಕ, ಇಸ್ರೇಲ್‌, ಸೌದಿ ಅರೇಬಿಯಾ ಮತ್ತು ಪಾಶ್ಚಿಮಾತ್ಯ ದೇಶಗಳೇ ಹೌತಿ ಉಗ್ರರ ಶತ್ರುಗಳು.

    ಸಾಂದರ್ಭಿಕ ಚಿತ್ರ

    ಅಮೆರಿಕ ದಾಳಿ ನಡೆಸಿದ್ದು ಯಾಕೆ?
    2023 ರ ಅಂತ್ಯದಿಂದ ಹೌತಿಗಳು ಕೆಂಪು ಸಮುದ್ರ, ಅಡೆನ್ ಕೊಲ್ಲಿ ಮತ್ತು ಇತರ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ವಾಣಿಜ್ಯ ಮತ್ತು ಮಿಲಿಟರಿ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಈಗ ಗಾಜಾದಲ್ಲಿ ಕದನ ವಿರಾಮದ ಹೊರತಾಗಿಯೂ ಹೌತಿಗಳು ಇತ್ತೀಚೆಗೆ ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ದಾಳಿಗಳನ್ನು ಪುನರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಕ್ಕೆ ಅಮೆರಿಕ ಈಗ ಯುದ್ಧ ವಿಮಾನಗಳನ್ನು ಬಳಸಿ ಬಾಂಬ್‌ ದಾಳಿ ನಡೆಸಿದೆ. ಪ್ರಸಿದ್ಧ ಮಿಲಿಟರಿ ತಾಣವಾದ ಸನಾ ವಿಮಾನ ನಿಲ್ದಾಣ ಸಂಕೀರ್ಣ, ಸೌದಿ ಗಡಿಯ ಬಳಿ ಹೌತಿಗಳ ಉತ್ತರದ ಭದ್ರಕೋಟೆಯಾದ ಸಾದಾ, ನೈಋತ್ಯ ಪ್ರದೇಶದಲ್ಲಿರುವ ಧಮರ್ ಮತ್ತು ಅಬ್ಸ್, ಹೌತಿ ಮಿಲಿಟರಿ ಸೌಲಭ್ಯಗಳ ನೆಲೆಯಾಗಿರುವ ಗೆರಾಫ್ ಮೇಲೆ ಅಮೆರಿಕ ಏರ್‌ಸ್ಟ್ರೈಕ್‌ ಮಾಡಿದೆ.

    ʻಸಿಗ್ನಲ್‌ʼ ವಿಶೇಷತೆ ಏನು?
    ಸಿಗ್ನಲ್‌ ಆಪ್‌ ಇದೊಂದು ಓಪನ್‌ ಸೋರ್ಸ್ ಮೆಸೆಜಿಂಗ್‌ ಅಪ್ಲಿಕೇಷನ್‌. 2012ರಲ್ಲಿ ಬಿಡುಗಡೆಯಾಗಿರುವ ಆಪ್‌, ಆಂಡ್ರಾಯ್ಡ್‌ ಮತ್ತು ಆಪಲ್‌ ಎರಡೂ ಪ್ಲಾಟ್‌ಫಾರ್ಮ್‌ನಲ್ಲಿ ವರ್ಕ್ ಆಗುತ್ತೆ. ಜಗತ್ತಿನಾದ್ಯಂತ 7 ಕೋಟಿಗೂ ಅಧಿಕ ಜನ ಇದನ್ನು ಬಳಸುತ್ತಿದ್ದಾರೆ. ಇದು ಲಾಭಕ್ಕಾಗಿ ಕ್ರಿಯೇಟ್‌ ಆಗಿರುವ ಪ್ಲಾಟ್‌ಫಾರ್ಮ್‌ ಅಲ್ಲ ಎನ್ನಲಾಗಿದೆ. ಸುರಕ್ಷಿತ ಸಂದೇಶ ರವಾನೆಯು ಇದರ ಮುಖ್ಯ ಉದ್ದೇಶ ಸಿಗ್ನಲ್‌ ಬಣ್ಣಿಸಿಕೊಂಡಿದೆ.

    Chilling video Moment Yemens Houthis used chopper to hijack India bound ship in Red Sea 2

    ಇದರಲ್ಲಿ ಮಾಡೋ ಸಂದೇಶಗಳು ಎಂಡ್‌ ಟು ಎಂಡ್‌ ಎನ್ಕ್ರಿಪ್ಟ್‌ ಆಗಿರೋದ್ರಿಂದ ಮಧ್ಯದಲ್ಲಿ ಹ್ಯಾಕ್‌ ಮಾಡಿ, ಅದನ್ನು ಓದೋಕೆ ಸಾಧ್ಯವಾಗೋದಿಲ್ಲ. ಹಾಗೇ ಬೇರೆ ಮೆಸೆಜಿಂಗ್‌ ಆಪ್‌ಗಳ ರೀತಿ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿಕೊಂಡು, ಸರ್ವರ್‌ನಲ್ಲಿ ಅದನ್ನು ಉಳಿಸುವ ವ್ಯವಸ್ಥೆ ಸಿಗ್ನಲ್‌ನಲ್ಲಿ ಇಲ್ಲ. ಯಾವುದೇ ಖಾಸಗಿ ಮಾಹಿತಿಯನ್ನೂ ಸಿಗ್ನಲ್‌ ಕೇಳುವುದು-ಸಂಗ್ರಹಿಸುವುದನ್ನು ಮಾಡೋದಿಲ್ಲ. ಇದೇ ಕಾರಣಕ್ಕೆ ಬಹಳಷ್ಟು ಮಂದಿ ಸುರಕ್ಷಿತ ಸಂವಹನಕ್ಕೆ ಇದೇ ಆಪ್‌ ಬಳಸ್ತಿದ್ದಾರೆ.

    ʻಸಿಗ್ನಲ್‌ʼ ಹ್ಯಾಕ್‌ ಮಾಡಬಹುದೇ?
    ಸಿಗ್ನಲ್‌ ಆಪ್‌ ಹ್ಯಾಕ್‌ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ರೂ, ಈ ಹಿಂದೆ ರಷ್ಯಾ – ಉಕ್ರೇನ್‌ ಯುದ್ಧದ ಸಂದರ್ಭದಲ್ಲಿ ಹ್ಯಾಕಿಂಗ್‌ಗೆ ಯತ್ನ ನಡೆದಿತ್ತು ಎಂಬ ವರದಿಗಳು ಕಂಡುಬಂದಿವೆ. ರಷ್ಯಾ ವಿರುದ್ಧ ರೂಪಿಸುವ ಯುದ್ಧ ತಂತ್ರಗಳನ್ನು ತಿಳಿಯಲು ಉಕ್ರೇನ್‌ ಮಿಲಿಟರಿ ಅಧಿಕಾರಿಗಳ ಸಿಗ್ನಲ್‌ ಖಾತೆಗಳನ್ನು ಹ್ಯಾಕ್‌ ಮಾಡಲು ಪ್ರಯತ್ನ ನಡೆದಿತ್ತು. ಇದರ ಹೊರತಾಗಿ ಡೆಸ್ಕ್‌ ಟಾಪ್‌ ಅಪ್ಲಿಕೇಷನ್‌ಗೆ ಲಿಂಕ್‌ ಮಾಡುವ ಮೂಲಕ ಇದರಲ್ಲಿನ ಮಾಹಿತಿಯನ್ನು ಸೋರಿಕೆ ಮಾಡಬಹುದು. ಉಳಿದಂತೆ ಹ್ಯಾಕಿಂಗ್‌ ಮೂಲಕ ಮಾಹಿತಿ ಕದ್ದಿರುವುದಕ್ಕೆ ಸ್ಪಷ್ಟ ನಿದರ್ಶನಗಳಿಲ್ಲ ಎನ್ನುತ್ತವೆ ವರದಿಗಳು.

    ಒಟ್ಟಿನಲ್ಲಿ ಅತಿ ಸುರಕ್ಷಿತ ಎಂದು ಭಾವಿಸಿದ್ದ ಆಪ್‌ನಲ್ಲಿ ಅಮೆರಿಕದಂತ ದೇಶದ ಭದ್ರತಾ ವಿಚಾರಗಳು ಹಂಚಿಹೋಗಿರೋದು ವಿಪರ್ಯಾಸವೇ ಸರಿ. ಟ್ರಂಪ್‌ ಆಡಳಿತ ಇದರ ಬಗ್ಗೆ ಎಂಥ ಕ್ರಮಕೈಗೊಳ್ಳುತ್ತೆ ಕಾದು ನೋಡಬೇಕಿದೆ.