Tag: donald trump

  • ಟ್ರಂಪ್‌ Vs ಕ್ಸಿ ಜಿನ್‌ಪಿಂಗ್‌ – ಈಗ ಅಮೆರಿಕದ ವಸ್ತುಗಳಿಗೆ 125% ತೆರಿಗೆ ಹಾಕಿದ ಚೀನಾ

    ಟ್ರಂಪ್‌ Vs ಕ್ಸಿ ಜಿನ್‌ಪಿಂಗ್‌ – ಈಗ ಅಮೆರಿಕದ ವಸ್ತುಗಳಿಗೆ 125% ತೆರಿಗೆ ಹಾಕಿದ ಚೀನಾ

    ಬೀಜಿಂಗ್‌: ವಿಶ್ವದ ಬಲಾಢ್ಯ ಆರ್ಥಿಕತೆಯನ್ನು ಹೊಂದಿರುವ ಅಮೆರಿಕ (USA) ಮತ್ತು ಚೀನಾ (China) ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರ (Tariff War) ಮತ್ತಷ್ಟು ಜೋರಾಗಿದೆ. ಅಮೆರಿಕ ವಿಧಿಸಿದ್ದ 145% ತೆರಿಗೆಗೆ ಪ್ರತಿಯಾಗಿ ಈಗ ಚೀನಾ ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ 125% ತೆರಿಗೆ ವಿಧಿಸುವುದಾಗಿ ಪ್ರಕಟಿಸಿದೆ.

    ಹೊಸ ತೆರಿಗೆ ಶನಿವಾರದಿಂದ ಜಾರಿಗೆ ಬರಲಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಅವರು ಅಮೆರಿಕ ಆರಂಭಿಸಿದ ತೆರಿಗೆ ಸಮರದ ವಿರುದ್ಧ ಕೈ ಜೋಡಿಸುವಂತೆ ಯುರೋಪಿಯನ್ ಒಕ್ಕೂಟಕ್ಕೆ (EU) ಮನವಿ ಮಾಡಿದ ಕೆಲವೇ ಗಂಟೆಗಳಲ್ಲಿ ಚೀನಾದ ನಿರ್ಧಾರ ಪ್ರಕಟವಾಗಿದೆ.

    ಚೀನಾದ ಮೇಲೆ ಅಮೆರಿಕವು ಅಸಹಜವಾಗಿ ಹೆಚ್ಚಿನ ಸುಂಕಗಳನ್ನು ವಿಧಿಸುವುದು ಅಂತರರಾಷ್ಟ್ರೀಯ ವ್ಯಾಪಾರ ನಿಯಮಗಳು, ಮೂಲಭೂತ ಆರ್ಥಿಕ ಕಾನೂನುಗಳು ಗಂಭೀರವಾಗಿ ಉಲ್ಲಂಘಿಸುತ್ತದೆ ಎಂದು ಚೀನಾ ಹಣಕಾಸು ಸಚಿವಾಲಯ ಹೇಳಿದೆ. ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಭಾರೀ ಇಳಿಕೆಯಾಗಲಿದೆ ಟಿವಿ, ಫ್ರಿಡ್ಜ್‌, ಮೊಬೈಲ್‌ ಬೆಲೆ!

    ಅಧ್ಯಕ್ಷ ಟ್ರಂಪ್ (Donald Trump) ಅವರ ಸುಂಕ ನೀತಿಯಿಂದ ಉಂಟಾದ ಜಾಗತಿಕ ಆರ್ಥಿಕ ಪ್ರಕ್ಷುಬ್ಧತೆಗೆ ಅಮೆರಿಕವೇ ಪೂರ್ಣ ಜವಾಬ್ದಾರಿಯನ್ನು ಹೊರಬೇಕು ಎಂದು ಚೀನಾ ಹೇಳಿದೆ.

    ಸುಂಕ ಸಮರ ಆರಂಭಿಸುವ ಮೊದಲು ಚೀನಾ ಅಮೆರಿಕದ ವಸ್ತುಗಳಿಗೆ 67% ತೆರಿಗೆ ವಿಧಿಸುತ್ತಿತ್ತು. ಟ್ರಂಪ್‌ ಅವರು ಏ.2 ರಂದು ಚೀನಾ ವಸ್ತುಗಳಿಗೆ 34% ತೆರಿಗೆ ಹಾಕುವುದಾಗಿ ಘೋಷಣೆ ಮಾಡಿದ್ದರು. ಇದರಿಂದಾಗಿ ಮೊದಲಿದ್ದ 20% ಸೇರಿ 54% ತೆರಿಗೆ ಏರಿಕೆಯಾಗಿತ್ತು. ಇದನ್ನೂ ಓದಿ: 75 ದೇಶಗಳಿಗೆ 90 ದಿನ ಬ್ರೇಕ್‌ – ಚೀನಾಗೆ 125% ಟ್ಯಾಕ್ಸ್‌ ಸಮರ

    ಅಮೆರಿಕದ ನಿರ್ಧಾರದಿಂದ ಸಿಟ್ಟಾದ ಚೀನಾ ಮತ್ತೆ 34% ಏರಿಕೆ ಮಾಡಿತ್ತು. ಇದಕ್ಕೆ ಸಿಟ್ಟಾದ ಟ್ರಂಪ್‌ ತೆರಿಗೆಯನ್ನು 104% ಏರಿಕೆ ಮಾಡಿದ್ದರು. ಅಮೆರಿಕದ ನಿರ್ಧಾರದಿಂದ ಮತ್ತೆ ಸಿಟ್ಟಾದ ಚೀನಾ ಅಮೆರಿಕದ ವಸ್ತುಗಳ ಮೇಲೆ 84% ತೆರಿಗೆ ಹಾಕಿತು. ಚೀನಾ ನಿರ್ಧಾರದಿಂದ ಆಕ್ರೋಶಗೊಂಡ ಟ್ರಂಪ್‌ ಈಗ ಚೀನಾದ ವಸ್ತುಗಳ ಮೇಲೆ 125% ತೆರಿಗೆ ಹಾಕುವ ಮೂಲಕ ಒಟ್ಟು 145% ತೆರಿಗೆ ಏರಿಸಿದ್ದರು. ಈಗ ಚೀನಾ 125% ತೆರಿಗೆ ಹಾಕುವುದಾಗಿ ಘೋಷಿಸಿದೆ.

  • ಮುಂದಿನ ದಿನಗಳಲ್ಲಿ ಭಾರೀ ಇಳಿಕೆಯಾಗಲಿದೆ ಟಿವಿ, ಫ್ರಿಡ್ಜ್‌, ಮೊಬೈಲ್‌ ಬೆಲೆ!

    ಮುಂದಿನ ದಿನಗಳಲ್ಲಿ ಭಾರೀ ಇಳಿಕೆಯಾಗಲಿದೆ ಟಿವಿ, ಫ್ರಿಡ್ಜ್‌, ಮೊಬೈಲ್‌ ಬೆಲೆ!

    ನವದೆಹಲಿ: ಮುಂದಿನ ದಿನಗಳಲ್ಲಿ ಮೊಬೈಲ್‌, ಟಿವಿ, ಫ್ರಿಡ್ಜ್‌ ಸೇರಿದಂತೆ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಬೆಲೆ ಭಾರತದಲ್ಲಿ (India) ಭಾರೀ ಇಳಿಕೆಯಾಗುವ ಸಾಧ್ಯತೆಯಿದೆ.

    ಹೌದು. ಡೊನಾಲ್ಡ್‌ ಟ್ರಂಪ್‌ (Donald Trump) ಆರಂಭಿಸಿದ ಸುಂಕ ಸಮರ ಚೀನಾದ (China) ಮೇಲೆ ಭಾರೀ ಪರಿಣಾಮ ಬೀಳಲಿದೆ. ವ್ಯಾಪಾರ ಉದ್ವಿಗ್ನತೆ ಹೆಚ್ಚುತ್ತಿರುವಂತೆ ಹಲವಾರು ಚೀನೀ ಎಲೆಕ್ಟ್ರಾನಿಕ್ (China Electronics) ಘಟಕ ತಯಾರಕರು ಭಾರತೀಯ ಕಂಪನಿಗಳಿಗೆ 5% ರಷ್ಟು ರಿಯಾಯಿತಿಗಳನ್ನು ನೀಡಲು ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ದೇಶ ತೊರೆಯಿರಿ ಅಥವಾ ಜೈಲು ಶಿಕ್ಷೆ ಅನುಭವಿಸಿ: ವಿದೇಶಿ ಭಯೋತ್ಪಾದಕರಿಗೆ ಅಮೆರಿಕ ಎಚ್ಚರಿಕೆ

    ಚೀನಾ ತಯಾರಕರು ಹೆಚ್ಚುವರಿ ದಾಸ್ತಾನುಗಳನ್ನು ಹೊಂದಿದ್ದಾರೆ. ಆ ಉತ್ಪನ್ನಗಳನ್ನು ಮಾರಾಟ ಮಾಡಲು ಚೀನಾ ರಿಯಾಯಿತಿ ನೀಡಲು ಮುಂದಾಗಿದೆ. ಈ ನಿರ್ಧಾರದಿಂದ ಭಾರತದಲ್ಲಿ ಫೋನ್‌, ಟಿವಿ, ಗ್ರಾಹಕ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಬೆಲೆ ಬಹಳ ಕಡಿಮೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: 75 ದೇಶಗಳಿಗೆ 90 ದಿನ ಬ್ರೇಕ್‌ – ಚೀನಾಗೆ 125% ಟ್ಯಾಕ್ಸ್‌ ಸಮರ

    ಸುಂಕ ಸಮರ ಆರಂಭಿಸುವ ಮೊದಲು ಚೀನಾ ಅಮೆರಿಕದ ವಸ್ತುಗಳಿಗೆ 67% ತೆರಿಗೆ ವಿಧಿಸುತ್ತಿತ್ತು. ಟ್ರಂಪ್‌ ಅವರು ಏ.2 ರಂದು ಚೀನಾ ವಸ್ತುಗಳಿಗೆ 34% ತೆರಿಗೆ ಹಾಕುವುದಾಗಿ ಘೋಷಣೆ ಮಾಡಿದ್ದರು. ಇದರಿಂದಾಗಿ ಮೊದಲಿದ್ದ 20% ಸೇರಿ 54% ತೆರಿಗೆ ಏರಿಕೆಯಾಗಿತ್ತು.

    ಅಮೆರಿಕದ ನಿರ್ಧಾರದಿಂದ ಸಿಟ್ಟಾದ ಚೀನಾ ಮತ್ತೆ 34% ಏರಿಕೆ ಮಾಡಿತ್ತು. ಇದಕ್ಕೆ ಸಿಟ್ಟಾದ ಟ್ರಂಪ್‌ ತೆರಿಗೆಯನ್ನು 104% ಏರಿಕೆ ಮಾಡುತ್ತಾರೆ. ಅಮೆರಿಕದ ನಿರ್ಧಾರದಿಂದ ಮತ್ತೆ ಸಿಟ್ಟಾದ ಚೀನಾ ಅಮೆರಿಕದ ವಸ್ತುಗಳ ಮೇಲೆ 84% ತೆರಿಗೆ ಹಾಕಿತು. ಚೀನಾ ನಿರ್ಧಾರದಿಂದ ಆಕ್ರೋಶಗೊಂಡ ಟ್ರಂಪ್‌ ಈಗ ಚೀನಾದ ವಸ್ತುಗಳ ಮೇಲೆ 125% ತೆರಿಗೆ ಹಾಕಿದ್ದಾರೆ.

  • 75 ದೇಶಗಳಿಗೆ 90 ದಿನ ಬ್ರೇಕ್‌ – ಚೀನಾಗೆ 125% ಟ್ಯಾಕ್ಸ್‌ ಸಮರ

    75 ದೇಶಗಳಿಗೆ 90 ದಿನ ಬ್ರೇಕ್‌ – ಚೀನಾಗೆ 125% ಟ್ಯಾಕ್ಸ್‌ ಸಮರ

    ವಾಷಿಂಗ್ಟನ್‌: ಅಮೆರಿಕಕ್ಕೆ (USA) ಆಮದಾಗುವ ವಸ್ತುಗಳ ಮೇಲೆ ಸುಂಕ ಸಮರ (Tariff War) ಆರಂಭಿಸಿದ್ದ ಡೊನಾಲ್ಡ್‌ ಟ್ರಂಪ್‌ (Donald Trump) ಸುಮಾರು 75 ದೇಶಗಳ ಮೇಲೆ ಹೇರಿದ್ದ ತೆರಿಗೆಗೆ 90 ದಿನಗಳ ಮಟ್ಟಿಗೆ ತಡೆ ನೀಡುವುದಾಗಿ ಘೋಷಿಸಿದ್ದಾರೆ.

    ವಿದೇಶಿ ಉತ್ಪನ್ನಗಳ ಮೇಲೆ ಭಾರೀ ತೆರಿಗೆ ವಿಧಿಸಿ ಇಡೀ ವಿಶ್ವಕ್ಕೇ ಶಾಕ್‌ ನೀಡಿದ್ದ ಟ್ರಂಪ್‌ ಈಗ 75 ದೇಶಗಳಿಗೆ ಸ್ವಲ್ಪ ರಿಲೀಫ್‌ ನೀಡಿದರೂ ಚೀನಾದ ಮೇಲಿನ ತೆರಿಗೆಯನ್ನು 104% ರಿಂದ 125%ಕ್ಕೆ ಏರಿಸಿ ಮತ್ತೆ ದೊಡ್ಡ ಹೊಡೆತ ನೀಡಿದ್ದಾರೆ. ಇದನ್ನೂ ಓದಿ: ದೇಶ ತೊರೆಯಿರಿ ಅಥವಾ ಜೈಲು ಶಿಕ್ಷೆ ಅನುಭವಿಸಿ: ವಿದೇಶಿ ಭಯೋತ್ಪಾದಕರಿಗೆ ಅಮೆರಿಕ ಎಚ್ಚರಿಕೆ

    ತೆರಿಗೆ ಹೊಡೆತದಿಂದ ಯಾವೆಲ್ಲ ದೇಶಗಳು ಪಾರಾಗಿದೆ ಎಂಬ ವಿವರವನ್ನು ಟ್ರಂಪ್‌ ತಿಳಿಸಿಲ್ಲ. ಆದರೆ ಈ ಪಟ್ಟಿಯಲ್ಲಿ ಭಾರತವೂ (India) ಇರಬಹುದು ಎಂದು ಭಾವಿಸಲಾಗುತ್ತಿದೆ. ಭಾರತದ ಮೇಲೆ ಟ್ರಂಪ್‌ 26% ಪ್ರತಿ ತೆರಿಗೆ ಘೋಷಿಸಿದ್ದರು. ಟ್ರಂಪ್‌ ತೆರಿಗೆ ಸಮರ ಆರಂಭಿಸುವ ಮೊದಲೇ ಭಾರತ ಸರ್ಕಾರ ಅಮೆರಿಕದ ಜೊತೆ ವ್ಯಾಪಾರ ಸಂಬಂಧ ಮಾತುಕತೆ ನಡೆಸಿತ್ತು.

    ಸಾಮಾಜಿಕ ಜಾಲತಾಣದಲ್ಲಿ ಪ್ರತ್ರಿಕ್ರಿಯಿಸಿದ ಟ್ರಂಪ್‌, ನಾವು ತೆರಿಗೆ ವಿಧಿಸಿದ ಬಳಿಕ ಸುಮಾರು 75 ದೇಶಗಳು ತಮ್ಮ ತಪ್ಪು ಸರಿಪಡಿಸಿಕೊಂಡು ಪ್ರತಿ ತೆರಿಗೆ ಹಾಕದೇ ನಮ್ಮ ಜೊತೆಗೆ ಸಂಧಾನಕ್ಕೆ ಬಂದಿವೆ. ಹೀಗಾಗಿ ನಾನು ಅವುಗಳ ಮೇಲೆ ಹೇರಿದ್ದ ತೆರಿಗೆಯನ್ನು 90 ದಿನ ಮುಂದೂಡಲು ನಿರ್ಧರಿಸಿದ್ದೇನೆ. ಹೀಗಾಗಿ ಅವುಗಳ ಮೇಲೆ 10% ತೆರಿಗೆ ಮಾತ್ರ ಮುಂದುವರಿಯಲಿದೆ ಎಂದು ತಿಳಿಸಿದರು.

    ಅಮೆರಿಕದ ಉತ್ಪನ್ನಗಳಿಗೆ ಚೀನಾ 84% ತೆರಿಗೆ ಹಾಕಿದ ವಿಚಾರವನ್ನು ಪ್ರಸ್ತಾಪಿಸಿದ ಅವರು, ಹಲವು ದೇಶಗಳು ನಮ್ಮ ಜೊತೆ ಸಂಧಾನಕ್ಕೆ ಬಂದರೆ ಚೀನಾ ನಮ್ಮ ಮೇಲೆ ಪ್ರತಿ ತೆರಿಗೆಯನ್ನು ಹಾಕಿದೆ. ಹೀಗಾಗಿ ಕೂಡಲೇ ಜಾರಿಗೆ ಬರುವಂತೆ ಚೀನಾದಿಂದ ಆಮದಾಗುವ ವಸ್ತುಗಳಿಗೆ 125% ತೆರಿಗೆಯನ್ನು ಹೆಚ್ಚಿಸುತ್ತೇನೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಮ್ಮ ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ಸರಕುಗಳ ಮೇಲಿನ ಟ್ಯಾರಿಫ್‌ 84%ಗೆ ಹೆಚ್ಚಿಸಿದ ಚೀನಾ

     

     ತೆರಿಗೆ ಸಮರಕ್ಕೆ ಟ್ರಂಪ್‌ 90 ದಿನ ಬ್ರೇಕ್‌ ಹಾಕುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ವರದಿಯನ್ನು ಶ್ವೇತ ಭವನ (White House) ನಿರಾಕರಿಸಿತ್ತು. ಟ್ರಂಪ್‌ ಅವರು ನಾನು ಈ ನಿರ್ಧಾರದಿಂದ ಹಿಂಕ್ಕೆ ಸರಿಯಲ್ಲ ಎಂದಿದ್ದರು. ಆದರೆ ಈಗ ಟ್ರಂಪ್‌ ಅವರು ಯೂಟರ್ನ್‌ ಹೊಡೆದಿದ್ದಾರೆ.

    ಜಗತ್ತಿನ ನಂಬರ್‌ 1 ಆರ್ಥಿಕತೆ ಹೊಂದಿರುವ ಅಮೆರಿಕ ಮತ್ತು ನಂಬರ್‌ 2 ಆರ್ಥಿಕತೆ ಹೊಂದಿರುವ ಚೀನಾದ ಮಧ್ಯೆ ವಾಣಿಜ್ಯ ಸಮರಕ್ಕೆ ವಿಶ್ವವೇ ತಲ್ಲಣಗೊಂಡಿತ್ತು. ಬುಧ​ವಾ​ರ​ದಿಂದಲೇ ಅನ್ವ​ಯ ಆಗು​ವಂತೆ ಪರಿ​ಷ್ಕೃತ ತೆರಿ​ಗೆ​ಗಳು ವಿಶ್ವಾ​ದ್ಯಂತ ಜಾರಿಯಾಗಿದ್ದರಿಂದ ಮಂಗಳವಾರ ವಿಶ್ವದ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿತ್ತು.

     

  • ಅಮೆರಿಕದ ಸರಕುಗಳ ಮೇಲಿನ ಟ್ಯಾರಿಫ್‌ 84%ಗೆ ಹೆಚ್ಚಿಸಿದ ಚೀನಾ

    ಅಮೆರಿಕದ ಸರಕುಗಳ ಮೇಲಿನ ಟ್ಯಾರಿಫ್‌ 84%ಗೆ ಹೆಚ್ಚಿಸಿದ ಚೀನಾ

    * 104% ಪ್ರತಿಸುಂಕ ವಿಧಿಸಿದ ಟ್ರಂಪ್‌ ವಿರುದ್ಧ ಜಿನ್‌ಪಿಂಗ್‌ ಪ್ರತ್ಯಾಸ್ತ್ರ

    ಬೀಜಿಂಗ್‌: ಜಗತ್ತಿನ ದೈತ್ಯ ಆರ್ಥಿಕ ದೇಶಗಳಾದ ಅಮೆರಿಕ (America) ಮತ್ತು ಚೀನಾ (China) ನಡುವೆ ವಾಣಿಜ್ಯ ಯುದ್ಧ ಜೋರಾಗಿದೆ. ಅಮೆರಿಕ 104% ಪ್ರತಿಸುಂಕ ವಿಧಿಸಿದ ಬೆನ್ನಲ್ಲೇ, ಚೀನಾವೂ ಟ್ಯಾರಿಫ್‌ (Tariff) ಅಸ್ತ್ರ ಪ್ರಯೋಗಿಸಿದೆ.

    ಚೀನಾದ ಹಣಕಾಸು ಸಚಿವಾಲಯವು ಗುರುವಾರದಿಂದ ಎಲ್ಲಾ ಅಮೆರಿಕನ್ ಸರಕುಗಳ ಮೇಲೆ 84% ರಷ್ಟು ಪ್ರತಿಸುಂಕವನ್ನು ವಿಧಿಸುವುದಾಗಿ ಘೋಷಿಸಿದೆ. ಇದು ಹಿಂದೆ ಘೋಷಿಸಲಾದ 34% ಗಿಂತ ಹೆಚ್ಚಾಗಿದೆ. ಈ ಹೊಸ ಶುಲ್ಕಗಳು ಏ.10 ರಿಂದ ಜಾರಿಗೆ ಬರಲಿವೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್‌ ಅನ್ನು 104% ಹೆಚ್ಚಿಸಿದ ಅಮೆರಿಕ

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಸರಕುಗಳ ಮೇಲೆ 104% ರಷ್ಟು ಟ್ಯಾರಿಫ್‌ ವಿಧಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಟ್ರಂಪ್ ಅವರ 104% ರಷ್ಟು ಟ್ಯಾರಿಫ್‌ ಜಾರಿಗೆ ಬಂದ ನಂತರ ಚೀನಾ, ಅಮೆರಿಕದ್ದು ದುರಹಂಕಾರ ಮತ್ತು ಬೆದರಿಸುವ ನಡವಳಿಕೆ ಎಂದು ಜರಿದಿತ್ತು.

    ಕಳೆದ ಶುಕ್ರವಾರ, ಟ್ರಂಪ್ ಅವರ ‘ವಿಮೋಚನಾ ದಿನ’ ಸುಂಕಗಳಿಗೆ ಪ್ರತಿಯಾಗಿ, ಚೀನಾ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಎಲ್ಲಾ ಸರಕುಗಳ ಮೇಲೆ 34% ರಷ್ಟು ಸುಂಕವನ್ನು ಘೋಷಿಸಿತು. ಅಪರೂಪದ ಭೂಮಿಯ ಖನಿಜಗಳ ಮೇಲಿನ ರಫ್ತು ನಿಯಂತ್ರಣಗಳನ್ನು ಹೊರತುಪಡಿಸಿ ಇತರ ಕ್ರಮಗಳನ್ನು ಘೋಷಿಸಿತು. ಅದರ ನಂತರ ಟ್ರಂಪ್ ಚೀನಾದ ಮೇಲೆ 50% ರಷ್ಟು ಸುಂಕವನ್ನು ಹೆಚ್ಚಿಸಿದ್ದಾರೆ. ಅವರೊಂದಿಗೆ ಮಾತುಕತೆ ಕೊನೆಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕ ಸುಂಕ ನೀತಿಯಿಂದಾಗುವ ತೊಂದರೆ ತಪ್ಪಿಸಲು ಭಾರತ-ಚೀನಾ ಒಟ್ಟಾಗಿ ನಿಲ್ಲಬೇಕು: ಚೀನಾ ವಕ್ತಾರೆ

  • ದೇಶ ತೊರೆಯಿರಿ ಅಥವಾ ಜೈಲು ಶಿಕ್ಷೆ ಅನುಭವಿಸಿ: ವಿದೇಶಿ ಭಯೋತ್ಪಾದಕರಿಗೆ ಅಮೆರಿಕ ಎಚ್ಚರಿಕೆ

    ದೇಶ ತೊರೆಯಿರಿ ಅಥವಾ ಜೈಲು ಶಿಕ್ಷೆ ಅನುಭವಿಸಿ: ವಿದೇಶಿ ಭಯೋತ್ಪಾದಕರಿಗೆ ಅಮೆರಿಕ ಎಚ್ಚರಿಕೆ

    ವಾಷಿಂಗ್ಟನ್‌: ನೀವೇ ದೇಶವನ್ನು ತೊರೆಯಿರಿ ಅಥವಾ ಜೈಲು ಶಿಕ್ಷೆಯನ್ನು ಅನುಭವಿಸಿ ಎಂದು ಅಮೆರಿಕ (USA) ವಿದೇಶಿ ಉಗ್ರರಿಗೆ ಎಚ್ಚರಿಕೆ ನೀಡಿದೆ.

    ಟ್ರಂಪ್ (Donald Trump) ಆಡಳಿತವು ಏಲಿಯನ್ ಎನಿಮೀಸ್ ಆಕ್ಟ್ (AEA) ಬಳಸಿ ಗಡಿಪಾರು ಮಾಡುವುದನ್ನು ತಾತ್ಕಾಲಿಕವಾಗಿ ತಡೆಯುವ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಯುಎಸ್ ಸುಪ್ರೀಂ ಕೋರ್ಟ್ (Supreme Court) ರದ್ದುಗೊಳಿಸಿದ ಬೆನ್ನಲ್ಲೇ ಶ್ವೇತ ಭವನ (White House) ವಿದೇಶಿ ಉಗ್ರರಿಗೆ ವಾರ್ನಿಂಗ್‌ ನೀಡಿದೆ.

    ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ (Karoline Leavitt) ಮಾತನಾಡಿ, ಸುಪ್ರೀಂ ಕೋರ್ಟ್ ಟ್ರಂಪ್ ಆಡಳಿತಕ್ಕೆ ಭಾರಿ ಕಾನೂನು ಜಯವನ್ನು ನೀಡಿದೆ. ಏಲಿಯನ್ ಎನಿಮೀಸ್ ಆಕ್ಟ್ ಅಡಿಯಲ್ಲಿ ವಿದೇಶಿ ಭಯೋತ್ಪಾದಕರನ್ನು ದೇಶದಿಂದ ಹೊರ ಹಾಕಲು ನಮಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ರಾಕ್ಷಸ, ಎಡಪಂಥೀಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುಂಬೈ ದಾಳಿಕೋರ ಅಮೆರಿಕದಿಂದ ಗಡಿಪಾರು – ನಾಳೆ ಬೆಳಗ್ಗೆ ಭಾರತಕ್ಕೆ ರಾಣಾ

    ಅಮೆರಿಕದಲ್ಲಿ ನೆಲೆಸಿರುವ ಉಗ್ರರು ಅವರಾಗಿಯೇ ದೇಶ ತೊರೆಯಬೇಕು. ಇಲ್ಲದಿದ್ದರೆ ಬಂಧಿಸಿ ಅವರ ದೇಶಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಕ್ಯಾರೋಲಿನ್ ಲೀವಿಟ್ ಕಟು ಪದಗಳಿಂದ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಸತತ 2ನೇ ಬಾರಿ ರೆಪೋ ದರ ಕಡಿತ – ಇಳಿಕೆಯಾಗಲಿದೆ ಗೃಹ ಸಾಲ, ಇಎಂಐ

    ವೆನೆಜುವೆಲಾದ ಜನರನ್ನು ಗಡೀಪಾರು ಮಾಡಲು ಟ್ರಂಪ್ ಆಡಳಿತವು ಏಲಿಯನ್ ಎನಿಮೀಸ್ ಆಕ್ಟ್ (ಎಇಎ) ಬಳಸಿತ್ತು. ಆದರೆ ಜಿಲ್ಲಾ ನ್ಯಾಯಾಲಯ ಟ್ರಂಪ್‌ ಸರ್ಕಾರದ ಆದೇಶವನ್ನು ತಾತ್ಕಾಲಿಕವಾಗಿ ತಡೆ ಹಿಡಿದಿತ್ತು.

     

  • ಚೀನಾ ಮೇಲಿನ ಟ್ಯಾರಿಫ್‌ ಅನ್ನು 104% ಹೆಚ್ಚಿಸಿದ ಅಮೆರಿಕ

    ಚೀನಾ ಮೇಲಿನ ಟ್ಯಾರಿಫ್‌ ಅನ್ನು 104% ಹೆಚ್ಚಿಸಿದ ಅಮೆರಿಕ

    ವಾಷಿಂಗ್ಟನ್‌: ಚೀನಾ ಮೇಲೆ ವಿಧಿಸಿದ್ದ ಟ್ಯಾರಿಫ್‌ ಅನ್ನು ದಿಢೀರ್‌ ಎಂದು 104% ಹೆಚ್ಚಿಸುವ ಮೂಲಕ ಅಮೆರಿಕ ಆಘಾತ ನೀಡಿದೆ. ಚೀನಾದ ಮೇಲಿನ ಅಮೆರಿಕದ ಹೊಸ ಪ್ರತಿಸುಂಕವು ನಾಳೆಯಿಂದಲೇ ಜಾರಿಯಾಗಲಿದೆ ಎಂದು ಶ್ವೇತ ಭವನ ತಿಳಿಸಿದೆ.

    ಬುಧವಾರದಿಂದ ಚೀನಾದ ಮೇಲೆ 50% ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಚೀನಾದ ಮೇಲಿನ ಅಮೆರಿಕದ ಪ್ರತಿಸುಂಕವನ್ನು 104 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ ಎಂದು ಶ್ವೇತಭವನ ಘೋಷಿಸಿದೆ.

    ಕಳೆದ ತಿಂಗಳವರೆಗೆ ಅಮೆರಿಕ ಚೀನಾದ ಮೇಲೆ ಶೇಕಡಾ 10 ರಷ್ಟು ಸುಂಕ ವಿಧಿಸುತ್ತಿತ್ತು. ಪ್ರತಿಸುಂಕ ನಿರ್ಧಾರ ಘೋಷಿಸಿದ ಮೇಲೆ ಚೀನಾ ಮೇಲೆ 50%ಗೆ ಹೆಚ್ಚಿಸುವುದಾಗಿ ಟ್ರಂಪ್‌ ಹೇಳಿದ್ದರು. ಆದರೆ, ಟ್ಯಾರಿಫ್‌ ಅನ್ನು 104%ಗೆ ಹೆಚ್ಚಿಸಿ ಆದೇಶಿಸಲಾಗಿದೆ.

  • ಅಮೆರಿಕ ಸುಂಕ ನೀತಿಯಿಂದಾಗುವ ತೊಂದರೆ ತಪ್ಪಿಸಲು ಭಾರತ-ಚೀನಾ ಒಟ್ಟಾಗಿ ನಿಲ್ಲಬೇಕು: ಚೀನಾ ವಕ್ತಾರೆ

    ಅಮೆರಿಕ ಸುಂಕ ನೀತಿಯಿಂದಾಗುವ ತೊಂದರೆ ತಪ್ಪಿಸಲು ಭಾರತ-ಚೀನಾ ಒಟ್ಟಾಗಿ ನಿಲ್ಲಬೇಕು: ಚೀನಾ ವಕ್ತಾರೆ

    ನವದೆಹಲಿ/ಬೀಜಿಂಗ್‌: ಅಮೆರಿಕದ ಪ್ರತಿಸುಂಕಕ್ಕೆ (US tariffs) ವಿರುದ್ಧವಾಗಿ ಚೀನಾ ಸಹ ಸುಂಕ ವಿಧಿಸಿರೋದು ದೊಡ್ಡಮಟ್ಟದ ವಾಣಿಜ್ಯ ಯುದ್ಧಕ್ಕೆ ಕಾರಣವಾಗಬಹುದು ಎಂಬ ಆತಂಕ ಮೂಡಿಸಿದೆ. ಈ ನಡುವೆ ಟ್ರಂಪ್‌ ಆಡಳಿತ ವಿಧಿಸಿರುವ ಸುಂಕ ನೀತಿಗಳಿಂದಾಗುವ ತೊಂದರೆಗಳನ್ನು ನಿವಾರಿಸಲು ಭಾರತ ಮತ್ತು ಚೀನಾ ಒಟ್ಟಾಗಿ ನಿಲ್ಲಬೇಕು ಎಂದು ಭಾರತದಲ್ಲಿನ ಚೀನಾ ರಾಯಭಾರ ಕಚೇರಿ (Chinese embassy) ವಕ್ತಾರರು ಮಂಗಳವಾರ ಕರೆ ನೀಡಿದ್ದಾರೆ.

    ಚೀನಾ ರಾಯಭಾರ ಕಚೇರಿ ವಕ್ತಾರೆ ಯು ಜಿಂಗ್ (Yu Jing), ಸುಂಕದ ಕುರಿತು ಸುದೀರ್ಘ ಸಂದೇಶವೊಂದನ್ನ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಚೀನಾ ಮತ್ತು ಭಾರತದ ನಡುವಿನ ಆರ್ಥಿಕ ಮತ್ತು ವ್ಯಾಪಾರ ಸಂಬಂಧವು ಉತ್ತಮವಾಗಿದ್ದು, ಪರಸ್ಪರ ಲಾಭವನ್ನು ಆಧರಿಸಿದೆ. ಆದ್ರೆ ಅಮೆರಿಕದ ಸುಂಕ ಇದಕ್ಕೆ ಪೆಟ್ಟು ನೀಡುವಂತಿದೆ. ಹಾಗಾಗಿ ಎರಡು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳು ಸುಂಕದಿಂದ ಆಗುವ ತೊಂದರೆಗಳನ್ನು ನಿವಾರಿಸಲು ಒಟ್ಟಾಗಿ ನಿಲ್ಲಬೇಕು ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಚೀನಾದ ಆರ್ಥಿಕತೆಯು ಸ್ಥಿರ ಬೆಳವಣಿಗೆಯನ್ನು ಖಾತ್ರಿಪಡಿಸುತ್ತದೆ. ಏಕೆಂದರೆ ಚೀನಾದ ಉತ್ಪಾದನೆಯು ಸಂಪೂರ್ಣ ಮತ್ತು ನಿರಂತರವಾಗಿ ನವೀಕರಿಸುವ ಕೈಗಾರಿಕಾ ವ್ಯವಸ್ಥೆಯನ್ನ ಒಳಗೊಂಡಿದೆ. ಆರ್‌ & ಡಿಯಲ್ಲಿ ನಿರಂತರ ಹೂಡಿಕೆ ಮತ್ತು ನಾವಿನ್ಯತೆಯ ಮೇಲೆ ಗಮನ ಸೆಳೆಯುತ್ತದೆ. ಇಡೀ ವಿಶ್ವದ ಆರ್ಥಿಕತೆಯ ಮೇಲೆ ಪ್ರಭಾವ ಬೀರಿದ್ದು, ವಾರ್ಷಿಕವಾಗಿ 30 ಪ್ರತಿಶತದಷ್ಟು ಜಾಗತಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ, ಜೊತೆಗೆ ವಿಶ್ವ ವ್ಯಾಪಾರ ಸಂಸ್ಥೆ (WTO) ಜೊತೆಗೆ ಬಹುಪಕ್ಷೀಯ ವ್ಯವಸ್ಥೆಯನ್ನು ರಕ್ಷಿಸಲು ಬೇರೆ ಬೇರೆ ದೇಶಗಳೊಂದಿಗೆ ಕೆಲಸ ಮಾಡುತ್ತಿದೆ. ಅದನ್ನು ಮುಂದುವರಿಸುತ್ತದೆ ಕೂಡ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಟ್ರಂಪ್ ಟ್ಯಾರಿಫ್ ಎಫೆಕ್ಟ್ – ಹಾಲಿವುಡ್ ಸಿನಿಮಾ ಬ್ಯಾನ್ ಮಾಡುತ್ತಾ ಚೀನಾ?

    ಅಮೆರಿಕದ ಸುಂಕ ನೀತಿಯು ಆರ್ಥಿಕತೆಯ ಬೆಳವಣಿಗೆಯ ಉದ್ದೇಶವನ್ನು ಒಳಗೊಂಡಿಲ್ಲ. ಹಾಗಾಗಿ ಅಮೆರಿಕದ ಏಕಪಕ್ಷೀಯ ವಾದವನ್ನು ಎಲ್ಲಾ ರಾಷ್ಟ್ರಗಳು ಒಟ್ಟಾಗಿ ವಿರೋಧಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಭಾರತೀಯ ಷೇರುಪೇಟೆಯಲ್ಲಿ ಚೇತರಿಕೆ – ಜಾಗತಿಕ ಮಾರುಕಟ್ಟೆಯಲ್ಲೂ ಕಡಿಮೆಯಾದ ಒತ್ತಡ

    ಚೀನಾಗೆ 50% ಸುಂಕದ ಎಚ್ಚರಿಕೆ ಕೊಟ್ಟ ಟ್ರಂಪ್‌:
    ಅಮೆರಿಕ ಉತ್ಪನ್ನಗಳ ಮೇಲೆ ಚೀನಾ ಹೆಚ್ಚುವರಿಯಾಗಿ ವಿಧಿಸಿದ 34% ಸುಂಕವನ್ನು ವಾಪಸ್ ಪಡೆಯದಿದ್ರೆ, ಶೇ.50ರಷ್ಟು ಪ್ರತಿ ಸುಂಕ ವಿಧಿಸೋದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಚೀನಾ ಡೋಂಟ್‌ಕೇರ್ ಎಂದಿದೆ. ಟ್ರಂಪ್ ತಪ್ಪು ಮೇಲೆ ತಪ್ಪು ಮಾಡ್ತಿದ್ದಾರೆ. ನಿಮ್ಮ ಬ್ಲಾಕ್‌ಮೇಲ್‌ ಎಲ್ಲಾ ನಮ್ಮತ್ರ ನಡೆಯಲ್ಲ. ತಮ್ಮ ಹಾದಿಗೆ ಎಲ್ರೂ ಬರಬೇಕು ಎಂದು ಅಮೆರಿಕ ಪಟ್ಟುಹಿಡಿದ್ರೆ ನಾವು ಸುಮ್ನಿರಲ್ಲ. ಕೊನೆವರೆಗೂ ಹೋರಾಡ್ತೇವೆ ಎಂದು ಬೀಜಿಂಗ್ ಗುಟುರು ಹಾಕಿದೆ. ಇದನ್ನೂ ಓದಿ: Black Monday| ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ – ಕರಗಿತು ಹೂಡಿಕೆದಾರರ 19 ಲಕ್ಷ ಕೋಟಿ

     

  • ಗೋಲ್ಡ್ ಪ್ರಿಯರಿಗೆ ಗುಡ್‌ನ್ಯೂಸ್ – ಚಿನ್ನದ ದರ ಇಳಿಕೆ!

    ಗೋಲ್ಡ್ ಪ್ರಿಯರಿಗೆ ಗುಡ್‌ನ್ಯೂಸ್ – ಚಿನ್ನದ ದರ ಇಳಿಕೆ!

    ಬೆಂಗಳೂರು: ಡೊನಾಲ್ಡ್ ಟ್ರಂಪ್ (Donald Trump) ಪ್ರತಿಸುಂಕದ ಪ್ರಭಾವ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದೆ. ಇದರ ಮಧ್ಯೆ ಚಿನ್ನದ ದರ (Gold Rate) ಇಳಿಕೆಯಾಗಿದ್ದು, ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.

    ಶರವೇಗದಲ್ಲಿ ಚಿನ್ನದ ದರ ಏರಿಕೆ ಕಂಡಿತ್ತು. ಜನ ಸಾಮಾನ್ಯರು ಚಿನ್ನ ಮುಟ್ಟಿದ್ರೇ ಶಾಕ್ ಎಂಬ ಪರಿಸ್ಥಿತಿ ಉದ್ಭವವಾಗಿತ್ತು. ಆದರೀಗ ಟ್ರಂಪ್ ಸುಂಕ ನೀತಿಯಿಂದ ಚಿನ್ನದ ದರ ಇಳಿಕೆ ಕಂಡಿದೆ. ಇದನ್ನೂ ಓದಿ: ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವ ಸಂಪನ್ನ

    ಎಷ್ಟು ದರ ಇಳಿಕೆ?
    *ಚಿನ್ನದ ದರ ಕಳೆದ 3 ದಿನದಿಂದ ಇಳಿಯುತ್ತಿದೆ
    *22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 8,285 ರೂಪಾಯಿ ಆಗಿದೆ.
    *24 ಕ್ಯಾರೆಟ್ ಚಿನ್ನದ ದರ 9,038 ರೂಪಾಯಿ ಆಗಿದೆ.
    *22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂ. ಕಡಿಮೆ ಆಗಿದೆ.

    ಟ್ರಂಪ್ ಸುಂಕ ನೀತಿಯಿಂದ ಚಿನ್ನದ ದರ ದಿಢೀರ್ ಇಳಿಕೆ ಕಂಡಿದೆ. ಮುಂದಿನ ದಿನದಲ್ಲಿ ಪ್ರತಿ ಗ್ರಾಂಗೆ 7,500 ರೂ. ಆಗಬಹುದು ಎನ್ನುವ ಲೆಕ್ಕಾಚಾರ ವನ್ನು ತಜ್ಞರು ಮಾಡುತ್ತಿದ್ದಾರೆ. ಒಂದು ಲಕ್ಷದ ಗಡಿಗೆ ತಲುಪಿದ್ದ ಚಿನ್ನದ ದರ ಇಳಿಕೆ ಈಗ ಜನರಿಗೆ ಕೊಂಚ ರಿಲೀಫ್ ಮೂಡಿಸಿದೆ. ಇದನ್ನೂ ಓದಿ: ಆರ್‌ಸಿಬಿ ಗೆದ್ದ ಮೂರು ಗೆಲುವು ಸಾಮಾನ್ಯ ಗೆಲುವಲ್ಲ!

  • ಸೇಡಿನ ಯೋಜನೆ ಬಿಡದಿದ್ದರೆ ಚೀನಾದ ಮೇಲೆ 50% ರಷ್ಟು ಸುಂಕ: ಟ್ರಂಪ್ ಎಚ್ಚರಿಕೆ

    ಸೇಡಿನ ಯೋಜನೆ ಬಿಡದಿದ್ದರೆ ಚೀನಾದ ಮೇಲೆ 50% ರಷ್ಟು ಸುಂಕ: ಟ್ರಂಪ್ ಎಚ್ಚರಿಕೆ

    ವಾಷಿಂಗ್ಟನ್: ಚೀನಾ ಪ್ರತೀಕಾರದ ತೆರಿಗೆ ಹಿಂಪಡೆಯದಿದ್ದರೆ ಅಲ್ಲಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

    ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಅವರು, ಏ.8ರೊಳಗೆ ಚೀನಾವು 34% ರಷ್ಟು ತೆರಿಗೆಯನ್ನು ಹಿಂತೆಗೆದುಕೊಳ್ಳದಿದ್ದರೆ, ಅಮೆರಿಕ ಚೀನಾದ ಮೇಲೆ 50% ರಷ್ಟು ಹೆಚ್ಚುವರಿ ಸುಂಕಗಳನ್ನು ವಿಧಿಸುತ್ತೇವೆ. ಇದು ಏಪ್ರಿಲ್ 9 ರಿಂದ ಜಾರಿಗೆ ಬರುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

    ಕಳೆದ ವಾರ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಸರಕುಗಳ ಮೇಲೆ ಟ್ರಂಪ್ ಸುಂಕ ಹೆಚ್ಚಳವನ್ನು ಘೋಷಿಸಿದ ನಂತರ ಚೀನಾ ಈ ಕ್ರಮ ತೆಗೆದುಕೊಂಡಿತ್ತು.

    ಎರಡನೇ ಬಾರಿಗೆ ಅಧ್ಯಕ್ಷರಾದ ಬಳಿಕ ಚೀನಾದಿಂದ ಆಮದಾಗುವ ಸರಕುಗಳ ಮೇಲೆ 20% ರಷ್ಟು ಸುಂಕವನ್ನು ಟ್ರಂಪ್‌ ಘೋಷಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಚೀನಾ ಕೂಡಾ ಅಮೆರಿಕ ಸರಕುಗಳ ಮೇಲೆ ತೆರಿಗೆ ವಿಧಿಸಿದೆ. ಏ.10 ರಂದು ತೆರಿಗೆ ನೀತಿ ಜಾರಿಗೆ ತರಲು ನಿರ್ಧರಿಸಿದೆ.

  • 2008ರ ಮುಂಬೈ ದಾಳಿ ಆರೋಪಿ ಭಾರತ ಹಸ್ತಾಂತರ ತಡೆ ಅರ್ಜಿ ತಿರಸ್ಕರಿಸಿದ ಯುಎಸ್‌ ಸುಪ್ರೀಂ ಕೋರ್ಟ್

    2008ರ ಮುಂಬೈ ದಾಳಿ ಆರೋಪಿ ಭಾರತ ಹಸ್ತಾಂತರ ತಡೆ ಅರ್ಜಿ ತಿರಸ್ಕರಿಸಿದ ಯುಎಸ್‌ ಸುಪ್ರೀಂ ಕೋರ್ಟ್

    ವಾಷಿಂಗ್ಟನ್‌: 2008ರ ಮುಂಬೈ ಭಯೋತ್ಪಾದಕ ದಾಳಿಯ (Mumbai Terror Attack) ಆರೋಪಿ ತಹವ್ವೂರ್‌ ರಾಣಾಗೆ ದೊಡ್ಡ ಹಿನ್ನಡೆಯಾಗಿದೆ. ತನ್ನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ತಡೆ ನೀಡುವಂತೆ ಸಲ್ಲಿಸಿದ್ದ ಕೊನೆಯ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್‌ ಸೋಮವಾರ ತಿರಸ್ಕರಿಸಿದೆ.

    ಪಾಕಿಸಾನ ಮೂಲದ ಕೆನಡಾ ಪ್ರಜೆಯಾದ ರಾಣಾನನ್ನ ಸದ್ಯ ಅಮೆರಿಕದ ಲಾಸ್‌ ಏಂಜಲೀಸ್‌ನ ಮೆಟ್ರೋಪಾಲಿಟನ್‌ ಡಿಟೆನ್ಶನ್‌ ಸೆಂಟರ್‌ನಲ್ಲಿ ಇರಿಸಲಾಗಿದೆ. ಇದನ್ನೂ ಓದಿ: Black Monday| ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ – ಕರಗಿತು ಹೂಡಿಕೆದಾರರ 19 ಲಕ್ಷ ಕೋಟಿ 

    PM Modi Mumbai Attack

    2009ರಿಂದಲೂ ರಾಣಾನನ್ನ ಭಾರತಕ್ಕೆ ಕರೆತರಲು ಭಾರತ ಹೋರಾಡುತ್ತಿದೆ. ಇತ್ತೀಚೆಗೆ ಮೋದಿ ಅಮೆರಿಕಕ್ಕೆ ಭೇಟಿ ನೀಡಿದಾಗ ಟ್ರಂಪ್‌ ಮೋದಿ ಎದುರಲ್ಲೇ ಭಾರತಕ್ಕೆ ರಾಣಾನನ್ನ ಹಸ್ತಾಂತರಿಸುವುದಾಗಿ ಘೋಷಣೆ ಮಾಡಿದ್ದರು. ಇದೀಗ ಯುಎಸ್‌ ಸುಪ್ರೀಂ ಕೋರ್ಟ್‌ ನಡೆ ಇದಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ. ಇದನ್ನೂ ಓದಿ: ಕಚ್ಚಾ ತೈಲ ದರ ಭಾರೀ ಇಳಿಕೆ- ಭಾರತದಲ್ಲೂ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಯಾಗುತ್ತಾ?

    ಮುಂಬೈ ದಾಳಿ ಬಳಿಕ ಪಾಕ್‌ನಿಂದ ಫಲಾಯನ ಮಾಡಿದ್ದ ರಾಣಾ, ಡೆನ್ಮಾರ್ಕ್‌ನಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದಕ್ಕಾಗಿ ಆತನನ್ನ ಅಮೆರಿಕದಲ್ಲಿ ಬಂಧಿಸಲಾಗಿತ್ತು. ಕಳೆದ ಫೆಬ್ರವರಿ 27ರಂದು ರಾಣಾ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಕಳೆದ ತಿಂಗಳ ಆರಂಭದಲ್ಲಿ ನ್ಯಾಯಾಧೀಶರು ಈ ಅರ್ಜಿಯನ್ನು ತಿರಸ್ಕರಿಸಿದ್ದರು. ಬಳಿಕ ಮುಖ್ಯ ನ್ಯಾಯಮೂರ್ತಿ ರಾಬರ್ಟ್ಸ್‌ ಅವರಿಗೆ ಮೇಲ್ಮನವಿ ಸಲ್ಲಿಸಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್‌ ರಾಣಾ ಅರ್ಜಿಯನ್ನು ತಿರಸ್ಕರಿಸಿತು.

    ನೆನಪಿದೆಯಾ ಆ ಕರಾಳ ದಿನ..?
    2008ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. 60 ಗಂಟೆಗಳಿಗೂ ಹೆಚ್ಚು ಕಾಲ ಮುತ್ತಿಗೆ ಹಾಕಿ, ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನ ನಡೆಸಿ 166 ಜನರನ್ನು ಹತ್ಯೆಗೈದಿದ್ದರು. 300ಕ್ಕೂ ಹೆಚ್ಚು ಜನರನ್ನ ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ರಾಣಾ ಪಾತ್ರವಿದೆ ಎಂದು ಭಾರತ ಆರೋಪಿಸಿತ್ತು.

    pm modi donald trump

    ಇದಕ್ಕೂ ಮುನ್ನ ಜನವರಿ ತಿಂಗಳಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್, ತಹವ್ವೂರ್ ರಾಣಾನ ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿ, ಆತನನ್ನು ಭಾರತಕ್ಕೆ ಗಡೀಪಾರು ಮಾಡಲು ದಾರಿ ಮಾಡಿಕೊಟ್ಟಿತು. ಇದನ್ನೂ ಓದಿ: ಸಮುದ್ರದಲ್ಲಿ ಪಾಕ್‌ ವ್ಯಕ್ತಿಗೆ ಎದುರಾದ ಸಂಕಷ್ಟ – 3 ಗಂಟೆ ಕಾಲ ಶಸ್ತ್ರಚಿಕಿತ್ಸೆ ನೀಡಿ ಜೀವ ಉಳಿಸಿದ ಭಾರತೀಯ ನೌಕಾಪಡೆ ಸಿಬ್ಬಂದಿ