Tag: donald trump

  • ಭಾರತ-ಪಾಕ್ ಮಧ್ಯಸ್ಥಿಕೆಗೆ ಟ್ರಂಪ್ ಏನು ಹೆಡ್‌ಮಾಸ್ಟ್ರಾ? ನಾವೇನು ಸ್ಕೂಲ್ ಮಕ್ಕಳಾ?: ಕೃಷ್ಣ ಬೈರೇಗೌಡ

    ಭಾರತ-ಪಾಕ್ ಮಧ್ಯಸ್ಥಿಕೆಗೆ ಟ್ರಂಪ್ ಏನು ಹೆಡ್‌ಮಾಸ್ಟ್ರಾ? ನಾವೇನು ಸ್ಕೂಲ್ ಮಕ್ಕಳಾ?: ಕೃಷ್ಣ ಬೈರೇಗೌಡ

    ಚಿತ್ರದುರ್ಗ: ಪಾಕ್ ಮತ್ತು ಭಾರತದ ನಡುವಿನ ಕದನ ವಿರಾಮಕ್ಕೆ (Ceasefire) ಮಧ್ಯಸ್ಥಿಕೆ ವಹಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ಏನು ಹೆಡ್‌ಮಾಸ್ಟ್ರಾ? ನಾವೇನು ಸ್ಕೂಲ್ ಮಕ್ಕಳಾ? ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅಸಮಾಧಾನ ಹೊರಹಾಕಿದ್ದಾರೆ.

    ಚಿತ್ರದುರ್ಗದಲ್ಲಿ (Chitradurga) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕ್ ಹಾಗೂ ಭಾರತ ನಡುವಿನ ಕದನ ವಿರಾಮವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಸಾರ್ವಜನಿಕ ವಲಯದಲ್ಲೊಂದು ಪ್ರಶ್ನೆ ತಲೆಯೆತ್ತಿದ್ದು, ಮೊದಲು ನಾವು ಎಲ್ಲಾ ವಿಷಯವನ್ನು ಅವಲೋಕಿಸಿದ ಬಳಿಕ ಸಂಘರ್ಷ ಮಾಡಬೇಕಿತ್ತು. ಆದರೆ ಸಂಘರ್ಷ ಆರಂಭವಾದ ಮೇಲೆ ಅವರಿಗೆ ಪಾಠ ಕಲಿಸಬೇಕಾದ್ದು ನಮ್ಮ ಗುರಿಯಾಗಬೇಕಿತ್ತು. ದಿಢೀರ್ ಅಂತ ಅಮೆರಿಕ ಹೇಳಿದಾಕ್ಷಣ ಕದನ ವಿರಾಮ ಘೋಷಣೆ ಕಂಡಾಗ, ಪಾಕ್‌ಗೆ ನಾವು ನಿಜವಾಗಿಯೂ ಪಾಠ ಕಲಿಸಿದ್ದೀವಾ ಎಂಬ ಪ್ರಶ್ನೆ ನನಗೆ ಮೂಡುತ್ತಿದೆ ಎಂದರು. ಇದನ್ನೂ ಓದಿ: ಧಾರಾಕಾರ ಮಳೆಗೆ ತತ್ತರಿಸಿದ ಕೀನ್ಯಾ – ರಸ್ತೆಗಳು ಸಂಪೂರ್ಣ ಜಲಾವೃತ

    ಈ ಕದನ ವಿರಾಮದ ಬಳಿಕ ಭಾರತಕ್ಕೆ ನಾವು ಪಾಠ ಕಲಿಸಿದ್ದೇವೆ ಎಂದು ಅವರು ಹೇಳಿಕೊಳ್ಳುತ್ತಾರೆ. ಆದರೆ ಪಾಕ್‌ಗೆ ಪಾಠ ಕಲಿಸಿದ್ದೀವಿ ಎಂದು ನಾವು ಹೇಳಿಕೊಳ್ಳುತ್ತಿದ್ದೇವೆ. ಒಮ್ಮೆ ಸಂಘರ್ಷ ಆರಂಭವಾದ ಮೇಲೆ ನಮ್ಮ ಆಂತರಿಕ ವಿಚಾರದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಬೆರಳು ತೋರಿಸುವ ದುಸ್ಸಾಹಸಕ್ಕೆ ಕೈ ಹಾಕದಂತೆ ಪಾಠ ಕಲಿಸಬೇಕಿತ್ತು ಎಂದು ಹೇಳಿದರು. ಇದನ್ನೂ ಓದಿ: ಮೋದಿಗೆ ಯುದ್ಧಕ್ಕಿಂತ ಬಿಹಾರ ಚುನಾವಣೆ ಮುಖ್ಯ: ಪ್ರಿಯಾಂಕ್ ಖರ್ಗೆ ಕಿಡಿ

    ಈ ಹಿಂದೆ 1971ರಲ್ಲಿ ಕೂಡ ಈ ಪಾಕಿಸ್ತಾನ ಇದೇ ರೀತಿ ಭಾರತಕ್ಕೆ ತೊಂದರೆ ನೀಡಿದ್ದು, ಆಗಿನ ಪ್ರಧಾನಿ ಇಂದಿರಾ ಗಾಂಧಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಿದ್ದರು. ಪಾಕಿಸ್ತಾನವನ್ನೇ ಇಬ್ಭಾಗ ಮಾಡಿದ್ದು, ಸಾವಿರಾರು ಜನ ಸೈನಿಕರು ನಮಗೆ ಶರಣಾಗಿದ್ದರು. ಆಗ ಪಾಕಿಸ್ತಾನವೇ ನಾವು ಸೋತಿದ್ದೇವೆ ಎನ್ನುವ ಮಟ್ಟಕ್ಕೆ ಅವರ ವಿರುದ್ಧ ಇಂದಿರಾ ಗಾಂಧಿ ಯುದ್ಧ ಮಾಡಿದ್ದರು ಎಂದು ಅಂದಿನ ಪರಿಸ್ಥಿತಿಯನ್ನು ಸ್ಮರಿಸಿದರು. ಇದನ್ನೂ ಓದಿ: ಲಂಡನ್‌ನಲ್ಲಿ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್- ಜ್ಯೂ.ಎನ್‌ಟಿಆರ್ ಆಕ್ರೋಶ

    ಹಾಗೆಯೇ ನಾವು ಯುದ್ಧಕ್ಕೆ ಹೋದಮೇಲೆ ತಾರ್ಕಿಕ ಅಂತ್ಯ ನೀಡಬೇಕಿದ್ದು, ಮುಂದಿನ ಆಗುಹೋಗುಗಳ ಬಗ್ಗೆ ಲೆಕ್ಕ ಹಾಕಿ ಯುದ್ಧಕ್ಕೆ ಹೋಗಬೇಕಿತ್ತು. ಅದರ ಬದಲಾಗಿ ಅಮೆರಿಕ ಹೇಳಿದಾಕ್ಷಣ ನಾವು ಸಂಘರ್ಷವನ್ನು ನಿಲ್ಲಿಸಿದರೆ ಹೇಗೆ? ಈ ಕದನ ವಿರಾಮದಿಂದಾಗಿ ನಮ್ಮ ಎಲ್ಲಾ ಉದ್ದೇಶ ಈಡೇರಿದ್ಯಾ ಎಂಬುದು ನನ್ನ ಮೊದಲ ಪ್ರಶ್ನೆ. ಇಂತಹ ಪ್ರಶ್ನೆಗಳು ಭಾರತದ ಎಲ್ಲಾ ನಾಗರಿಕರ ಮನಸ್ಸಿನಲ್ಲಿಯೂ ಉದ್ಭವವಾಗಿವೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ಕೊಡಬೇಕು. ಜೊತೆಗೆ ಕಾಶ್ಮೀರ ನಮ್ಮ ಆಂತರಿಕ ವಿಷಯವೆಂದು ಪಾಕಿಸ್ತಾನವೇ ಒಪ್ಪಿಕೊಂಡಿದ್ದು, ಈ ವಿಚಾರದಲ್ಲಿ ಅಮೆರಿಕ ಮಧ್ಯಸ್ಥಿಕೆ ವಹಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪಾಕ್‌ನಲ್ಲಿರುವ ಎಲ್ಲಾ ಭಯೋತ್ಪಾದಕರು ಈಗ ಧರ್ಮಗುರುಗಳಾಗಿದ್ದಾರೆ – ಸಚಿವ ಖವಾಜಾ ಆಸಿಫ್

    ಹಾಗಾದರೆ ನಾವು ಇಷ್ಟು ದಿನ ತೆಗೆದುಕೊಂಡ ನಿಲುವು ಏನಾಯ್ತು? ನಮ್ಮ ಕಾಶ್ಮೀರದ ವಿಚಾರ ಭಾರತದ ಆಂತರಿಕ ವಿಷಯವೋ ಅಥವಾ ಅಂತಾರಾಷ್ಟ್ರೀಯ ವಿಷಯವೋ ಎಂಬ ಅನುಮಾನ ನಮಗೆ ಮೂಡಿದೆ. ಅಷ್ಟೇ ಅಲ್ಲದೇ ನಾವೇ ಎಲ್ಲೋ ಒಂದು ಕಡೆ ಕಾಶ್ಮೀರದ ವಿಚಾರವನ್ನು ಅಂತಾರಾಷ್ಟ್ರೀಯ ವಿಷಯ ಮಾಡುತ್ತಿದ್ದು, ಆಂತರಿಕ ವಿಚಾರವನ್ನು ಅಂತಾರಾಷ್ಟ್ರೀಯ ವಿಷಯ ಮಾಡುವ ಮೂಲಕ ಎಲ್ಲೆಂದರಲ್ಲಿ ಮಾತಾಡಲು ನಾವೇ ಅವಕಾಶ ಮಾಡಿಕೊಟ್ಟಂತಿದೆ ಎಂದು ಹೇಳಿದರು. ಇದನ್ನೂ ಓದಿ: ನಾನು ಅಕ್ಷರ ಕಲಿಯದಿದ್ದರೆ ಚಡ್ಡಿ ಹಾಕೊಂಡು ಕುರಿ ಕಾಯ್ತಿದ್ದೆ – ಸಿದ್ದರಾಮಯ್ಯ

    ನಮ್ಮ ಕಾಶ್ಮೀರದ ಬಗ್ಗೆ ಯಾರು ಬೇಕಾದರೂ ಮಾತನಾಡುತ್ತಾ ಉಪದೇಶ ಕೊಡುವ ಅವಕಾಶ ನೀಡಿರುವುದರಿಂದಾಗಿ ನಮಗೆ ತೀವ್ರ ನಷ್ಟವೇ ಆಗಲಿದೆ. ಹೀಗಾಗಿ ಈ ಪಾಕಿಸ್ತಾನಕ್ಕೆ ಶಾಶ್ವತ ಪಾಠ ಕಲಿಸಬೇಕೆಂಬ ಸಂಕಲ್ಪದಿಂದ ಆರಂಭವಾದ ಕದನಕ್ಕೆ ವಿರಾಮ ಮಾಡುವಾಗ ನಮ್ಮ ಉದ್ದೇಶ ಈಡೇರಿದ್ಯಾ ಎಂಬುದನ್ನು ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ:  ಟೇಕ್ವಾಂಡೋ ಸ್ಪರ್ಧೆಯಲ್ಲಿ 2 ಚಿನ್ನ ಗೆದ್ದ ಕನ್ನಡಿಗ ದಕ್ಷಿಣ್‌ ಸೂರ್ಯ

    ನಾವು ಹಾಗೂ ಪಾಕಿಸ್ತಾನದವರು ಮಾತನಾಡಿಕೊಳ್ಳುವುದು ಒಂದು ಭಾಗವಾದರೆ ಟ್ರಂಪ್ ಹೇಳಿದಾಕ್ಷಣ ನಾವು ಮಂಡಿ ಊರಿದಾಗ ನಮ್ಮ ಸಾರ್ವಭೌಮ ಏನಾಯ್ತು? ಒಂದು ವೇಳೆ ಅವರು ಹೇಳಿದ ಕೂಡಲೇ ನಾವು ಎಸ್ ಸಾರ್ ಅಂತ ಒಪ್ಪಿಕೊಂಡ್ರೆ ಹೇಗೆ? ಗುರಿ ಈಡೇರಿದ ನಂತರ ಕದನ ವಿರಾಮವನ್ನು ಒಪ್ಪಿಕೊಂಡಿದ್ದರೆ ನಮ್ಮ ಸಹಮತವಿತ್ತು. ಬದಲಾಗಿ ಪಾಕಿಸ್ತಾನ ಇನ್ನೊಮ್ಮೆ ನಮ್ಮ ವಿಚಾರದಲ್ಲಿ ಕೈ ಹಾಕದ ರೀತಿ ಬುದ್ಧಿ ಕಲಿಸದೇ, ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕ ಹೇಳಿದ ಕೂಡಲೇ ಒಪ್ಪಿಕೊಳ್ಳುವುದು ಎಷ್ಟು ಸರಿ ಎಂದು ಗುಡುಗಿದರು. ಈ ವೇಳೆ ಅವರೊಂದಿಗೆ ಸಾಂಖ್ಯಿಕ ಹಾಗು ಯೋಜನಾ ಖಾತೆ ಸಚಿವ ಡಿ.ಸುಧಾಕರ್ ಉಪಸ್ಥಿತರಿದ್ದರು. ಇದನ್ನೂ ಓದಿ:  ಇಂದು ರಾತ್ರಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಮೋದಿ

  • ಪಾಕ್‍ಗೆ ನಾವು ಹೇಗಾದ್ರೂ ಪ್ರತಿಕ್ರಿಯಿಸುತ್ತೇವೆ, ಇದನ್ನು ಟ್ರಂಪ್ ಅರ್ಥ ಮಾಡಿಕೊಳ್ಳಲಿ: ಮೋದಿ

    ಪಾಕ್‍ಗೆ ನಾವು ಹೇಗಾದ್ರೂ ಪ್ರತಿಕ್ರಿಯಿಸುತ್ತೇವೆ, ಇದನ್ನು ಟ್ರಂಪ್ ಅರ್ಥ ಮಾಡಿಕೊಳ್ಳಲಿ: ಮೋದಿ

    ನವದೆಹಲಿ: ಪಾಕಿಸ್ತಾನದ (Pakistan) ದಾಳಿಗೆ ಭಾರತ ಏನು ಬೇಕಾದರೂ, ಹೇಗೆ ಬೇಕಾದರೂ ಪ್ರತಿಕ್ರಿಯಿಸುತ್ತೇವೆ. ಇದನ್ನು ಟ್ರಂಪ್ (Donald Trump) ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ (JD Vance) ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

    ಭಾರತ ಹಾಗೂ ಪಾಕ್ ನಡುವಿನ ಉದ್ವಿಗ್ನತೆ ಹೆಚ್ಚಾದ ಬಗ್ಗೆ ಗುಪ್ತಚರ ಮಾಹಿತಿ ಪಡೆದಿದ್ದ ವ್ಯಾನ್ಸ್, ಮೇ 9ರಂದು ಮೋದಿಯವರನ್ನು ಸಂಪರ್ಕಿಸಿ ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಅಮೆರಿಕದ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ವೇಳೆ ಮೋದಿಯವರು ಪಾಕಿಸ್ತಾನದ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಲಷ್ಕರ್ ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನಾಧಿಕಾರಿಗಳು ಭಾಗಿ – ಭಾರತ ತೀವ್ರ ಆಕ್ಷೇಪ

    ಭಾರತ ಮತ್ತು ಪಾಕಿಸ್ತಾನವನ್ನ ಸಮಾನವಾಗಿ ನೋಡಲು ಸಾಧ್ಯವೇ ಇಲ್ಲ. ಪಾಕ್ ಏನಾದ್ರೂ ದಾಳಿ ಮಾಡಿದ್ರೆ ವಿನಾಶಕಾರಿ ಪ್ರತಿಕ್ರಿಯೆ ಕೊಡ್ತೀವಿ. ಇದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು ಎಂದು ಮೋದಿ ಎಚ್ಚರಿಕೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

    ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಮೇಲೆ ಭಾರತ ದಾಳಿ ಮಾಡಲಿದೆ ಎಂದು ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಗೂ ಮುನ್ನವೇ ಅಮೆರಿಕಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಸ್ಪಷ್ಟಪಡಿಸಿದ್ದರು.

    ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಮೇ 1 ರಂದು ದೂರವಾಣಿ ಕರೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರಿಗೆ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಮೇಲೆ ಭಾರತ ದಾಳಿ ಮಾಡಲಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಭಾರತ ಮತ್ತಷ್ಟು ಸೇಡು ತೀರಿಸಿಕೊಳ್ಳಬೇಕು, ಕೇಂದ್ರಕ್ಕೆ ನಮ್ಮ ಬೆಂಬಲ ಇದೆ: ಆರ್‌.ವಿ ದೇಶಪಾಂಡೆ

  • ಕದನ ವಿರಾಮ ಮೊದಲು ಘೋಷಿಸಿದ್ದು ಅಮೆರಿಕ ಅಧ್ಯಕ್ಷ – ಮೋದಿಗೆ ಪತ್ರ ಬರೆದ ರಾಹುಲ್‌ ಗಾಂಧಿ

    ಕದನ ವಿರಾಮ ಮೊದಲು ಘೋಷಿಸಿದ್ದು ಅಮೆರಿಕ ಅಧ್ಯಕ್ಷ – ಮೋದಿಗೆ ಪತ್ರ ಬರೆದ ರಾಹುಲ್‌ ಗಾಂಧಿ

    ನವದೆಹಲಿ: ಕೇಂದ್ರ ಸರ್ಕಾರ ಪಾಕಿಸ್ತಾನದೊಂದಿಗೆ (Pakistan) ಕದನ ವಿರಾಮ (Ceasefire) ಒಪ್ಪಂದ ಘೋಷಿಸಿದ ಒಂದು ದಿನದ ನಂತರ ಪ್ರಧಾನಿ ಮೋದಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ (Rahul Gandhi) ಪತ್ರ ಬರೆದಿದ್ದಾರೆ.

    ಆಪರೇಷನ್ ಸಿಂಧೂರ ಮತ್ತು ಕದನ ವಿರಾಮದ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮೊದಲು ಕದನ ವಿರಾಮವನ್ನು ಘೋಷಿಸಿದರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 300 ಕೋಟಿ ವೆಚ್ಚದ ʻಬ್ರಹ್ಮೋಸ್ʼ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟನೆ; ವಾರ್ಷಿಕ 100 ಮಿಸೈಲ್‌ ಉತ್ಪಾದನೆ ಗುರಿ

    ಪತ್ರದಲ್ಲೇನಿದೆ?
    ಆತ್ಮೀಯ ಪ್ರಧಾನ ಮಂತ್ರಿಯವರೇ, ಸಂಸತ್ತಿನ ವಿಶೇಷ ಅಧಿವೇಶನವನ್ನು ತಕ್ಷಣವೇ ಕರೆಯಬೇಕೆಂಬ ವಿರೋಧ ಪಕ್ಷದ ಸರ್ವಾನುಮತದ ವಿನಂತಿಯನ್ನು ನಾನು ಪುನರುಚ್ಚರಿಸುತ್ತೇನೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆಯಿತು. ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಯಿತು. ಆದರೆ, ಇಂದಿನ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಮೊದಲು ಘೋಷಿಸಿದರು. ಇದು ಮುಂಬರುವ ಸವಾಲುಗಳನ್ನು ಎದುರಿಸಲು ನಮ್ಮ ಸಾಮೂಹಿಕ ಸಂಕಲ್ಪವನ್ನು ಪ್ರದರ್ಶಿಸಲು ಒಂದು ಅವಕಾಶವಾಗಿದೆ. ನೀವು ಈ ಬೇಡಿಕೆಯನ್ನು ಗಂಭೀರವಾಗಿ ಮತ್ತು ತ್ವರಿತವಾಗಿ ಪರಿಗಣಿಸುತ್ತೀರಿ ಎಂದು ನಾನು ನಂಬುತ್ತೇನೆ ಎಂದು ರಾಹುಲ್‌ ಗಾಂಧಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಕಾಂಗ್ರೆಸ್ ಮುಖ್ಯಸ್ಥ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಪ್ರಧಾನಿಗೆ ಪತ್ರ ಬರೆದಿದ್ದಾರೆ. ‘ಪಹಲ್ಗಾಮ್‌ನಲ್ಲಿ ನಡೆದ ಅಮಾನವೀಯ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಸಂಸತ್ತಿನ ಎರಡೂ ಸದನಗಳ ವಿಶೇಷ ಅಧಿವೇಶನವನ್ನು ಕರೆಯಲು ಏಪ್ರಿಲ್ 28 ರಂದು ಬರೆದ ನಮ್ಮ ಪತ್ರಗಳನ್ನು ನೀವು ನೆನಪಿಸಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರ | ಲಷ್ಕರ್ ಮುಖ್ಯಸ್ಥ ಸೇರಿ 140 ಉಗ್ರರು ಉಡೀಸ್

    ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಹಲ್ಗಾಮ್ ಭಯೋತ್ಪಾದನೆ, ಆಪರೇಷನ್ ಸಿಂಧೂರ ಮತ್ತು ಮೊದಲು ವಾಷಿಂಗ್ಟನ್ ಡಿಸಿಯಿಂದ, ನಂತರ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳಿಂದ ಕದನ ವಿರಾಮ ಘೋಷಣೆಗಳ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಎಲ್ಲಾ ವಿರೋಧ ಪಕ್ಷಗಳ ಸರ್ವಾನುಮತದಿಂದ ವಿನಂತಿಸಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕರು ಈಗಾಗಲೇ ನಿಮಗೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ನಾನು ಈ ವಿನಂತಿಯನ್ನು ಬೆಂಬಲಿಸಿ ಬರೆಯುತ್ತಿದ್ದೇನೆ. ನೀವು ಒಪ್ಪುತ್ತೀರಿ ಎಂದು ನಾನು ನಂಬುತ್ತೇನೆ ಎಂದು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  • ಭಾರತ- ಪಾಕ್ ನಡುವೆ ಕದನ ವಿರಾಮ

    ಭಾರತ- ಪಾಕ್ ನಡುವೆ ಕದನ ವಿರಾಮ

    – ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿ

    ನವದೆಹಲಿ: ಪಾಕಿಸ್ತಾನದ(Pakistan) ಜೊತೆಗಿನ ಕದನ ವಿರಾಮಕ್ಕೆ ಭಾರತ(India) ಒಪ್ಪಿಕೊಂಡಿದ್ದೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿದೆ.

    ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿಯಾಗಿದೆ. ಮೇ 12ರಂದು ಉಭಯ ದೇಶಗಳು ಮಾತುಕತೆ ನಿರ್ಧರಿಸಿವೆ. ಈ ಸಭೆಗೆ ಅಮೆರಿಕಾ(America) ಮಧ್ಯಸ್ಥಿಕೆ ಇಲಾಖೆ ವಹಿಸಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿದೆ: ಪಾಕ್ ವಿದೇಶಾಂಗ ಸಚಿವ ಘೋಷಣೆ

    ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್‌ ಉಗ್ರರು(Pahalgam Terror Attack) ದಾಳಿ ಮಾಡಿ 26 ಅಮಾಯಕರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಮೇ 7ರಂದು ಭಾರತವು ʻಆಪರೇಷನ್‌ ಸಿಂಧೂರʼ(Operation Sindoor) ಹೆಸರಿನಡಿಯಲ್ಲಿ ಪಾಕ್‌ನ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿತ್ತು. ಇದನ್ನೂ ಓದಿ: ಭಾರತ-ಪಾಕಿಸ್ತಾನದಿಂದ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ: ಟ್ರಂಪ್‌ ಘೋಷಣೆ

    ಈ ದಾಳಿಗೆ ಪ್ರತಿಯಾಗಿ ಪಾಕ್‌ ಭಾರತದ ಮೇಲೆ ಡ್ರೋನ್‌ ಹಾಗೂ ಕ್ಷಿಪಣಿ ದಾಳಿ ಮಾಡಿತ್ತು. ಭಾರತೀಯ ಸೇನೆಯು ಪಾಕ್‌ನ ಡ್ರೋನ್‌ ಹಾಗೂ ಕ್ಷಿಪಣಿಗಳಿಗೆ ಹೊಡೆದುರುಳಿಸುವ ಮೂಲಕ ಪ್ರತ್ಯುತ್ತರ ನೀಡಿತ್ತು.  ಇದನ್ನೂ ಓದಿ: ಪಾಕ್‌ಗೆ ಬೆಂಬಲ ನೀಡಿದ ಟರ್ಕಿ, ಅಜೆರ್ಬೈಜಾನ್‌ಗೆ ಭಾರತ ಪೆಟ್ಟು – 2 ದೇಶಗಳಿಗೆ ಟೂರ್‌ ಪ್ಯಾಕೇಜ್‌ ಸ್ಥಗಿತ

    ಭಾರತದ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಡುತ್ತಿದ್ದಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌(Donald Trump) ಉಭಯ ರಾಷ್ಟ್ರಗಳಿಗೆ ಕದನ ವಿರಾಮ(Ceasefire) ಮಾಡುವಂತೆ ಸಲಹೆ ನೀಡಿದ್ದರು. ಆದರೆ ಇದು ಫಲಪ್ರದವಾಗಿರಲಿಲ್ಲ. ಇದೀಗ ಮತ್ತೊಮ್ಮೆ ಮಾತುಕತೆ ನಡೆಸಿ, ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ.

  • ಭಾರತ-ಪಾಕಿಸ್ತಾನದಿಂದ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ: ಟ್ರಂಪ್‌ ಘೋಷಣೆ

    ಭಾರತ-ಪಾಕಿಸ್ತಾನದಿಂದ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ: ಟ್ರಂಪ್‌ ಘೋಷಣೆ

    ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನ (India Pakistan Tension) ಪೂರ್ಣ & ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಘೋಷಿಸಿದ್ದಾರೆ.

    ಅಮೆರಿಕದ ಮಧ್ಯಸ್ಥಿಕೆ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿಕೊಂಡ ಟ್ರಂಪ್, ಬಿಕ್ಕಟ್ಟನ್ನು ಶಮನಗೊಳಿಸಲು ‘ಸಾಮಾನ್ಯ ಜ್ಞಾನ ಮತ್ತು ಉತ್ತಮ ಬುದ್ಧಿವಂತಿಕೆ’ಯನ್ನು ಬಳಸಿದ್ದಕ್ಕಾಗಿ ಎರಡೂ ದೇಶಗಳ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಭಾರತ್ ಫೋರ್ಜ್, ಮಹೀಂದ್ರಾ ಕಂಪನಿಗಳಿಗೆ ಯುದ್ಧ ಸಾಮಗ್ರಿ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಸೂಚನೆ

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಡೊನಾಲ್ಡ್‌ ಟ್ರಂಪ್‌, ಅಮೆರಿಕದ ಮಧ್ಯಸ್ಥಿಕೆಯಲ್ಲಿ ರಾತ್ರಿಯಿಡೀ ನಡೆದ ಸುದೀರ್ಘ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನಗಳು ಸಂಪೂರ್ಣ ಮತ್ತು ತಕ್ಷಣದ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಸಾಮಾನ್ಯ ಜ್ಞಾನ ಮತ್ತು ಉತ್ತಮ ಬುದ್ಧಿಮತ್ತೆಯನ್ನು ಬಳಸಿದ್ದಕ್ಕಾಗಿ ಎರಡೂ ದೇಶಗಳಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

    ಪಾಕಿಸ್ತಾನ ಮತ್ತು ಭಾರತ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಪಾಕಿಸ್ತಾನವು ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗದಂತೆ ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗಾಗಿ ಯಾವಾಗಲೂ ಶ್ರಮಿಸುತ್ತಿದೆ ಎಂಬ ಟ್ರಂಪ್ ಹೇಳಿಕೆಯನ್ನು ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಕೂಡ ಅನುಮೋದಿಸಿದ್ದಾರೆ. ಇದನ್ನೂ ಓದಿ: ಪಾಕ್ ಅಪ್ರಚೋದಿತ ಗುಂಡಿನ ದಾಳಿಗೆ ಬಾಗೇಪಲ್ಲಿ ಗಡಿಯ ಯೋಧ ಹುತಾತ್ಮ- ಕಂಬನಿ ಮಿಡಿದ ಕರುನಾಡು

    ಆದರೆ, ಕದನ ವಿರಾಮದ ಬಗ್ಗೆ ಭಾರತದಿಂದ ಈವರೆಗೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

  • ಭಾರತ-ಪಾಕ್ ಸಂಘರ್ಷ ತ್ವರಿತ ಶಮನಕ್ಕೆ ಟ್ರಂಪ್ ಒತ್ತಾಯ

    ಭಾರತ-ಪಾಕ್ ಸಂಘರ್ಷ ತ್ವರಿತ ಶಮನಕ್ಕೆ ಟ್ರಂಪ್ ಒತ್ತಾಯ

    – ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ: ಅಮೆರಿಕ ಅಧ್ಯಕ್ಷ ಸಲಹೆ

    ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ತ್ವರಿತವಾಗಿ ಶಮನಗೊಳಿಸಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒತ್ತಾಯಿಸಿದ್ದಾರೆಂದು ಶ್ವೇತಭವನ ತಿಳಿಸಿದೆ.

    ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿದ್ದ ಭಾರತ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿತು. ಈ ಬೆಳವಣಿಗೆ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತೀವ್ರಗೊಂಡಿತು. ಪರಿಸ್ಥಿತಿ ಅವಲೋಕಿಸುತ್ತಿರುವ ಅಮೆರಿಕ ಶಾಂತಿ ಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಎರಡೂ ದೇಶಗಳಿಗೆ ಸಲಹೆ ನೀಡಿದೆ.

    ಅಮೆರಿಕ ಅಧ್ಯಕ್ಷರು ಈ ಉದ್ವಿಗ್ನತೆಯನ್ನು ಆದಷ್ಟು ಬೇಗ ಶಮನಗೊಳಿಸಲು ಬಯಸುತ್ತಾರೆ ಎಂದು ಶ್ವೇತಭವನ ತಿಳಿಸಿದೆ.

    ಈಚೆಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೂಬಿಯೊ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ, ಉದ್ವಿಗ್ನತೆಯನ್ನು ಶಮಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ್ದರು. ಭಯೋತ್ಪಾದಕ ಗುಂಪುಗಳಿಗೆ ಬೆಂಬಲವನ್ನು ಕೊನೆಗೊಳಿಸಲು ಪಾಕಿಸ್ತಾನವು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು.

  • ಅಮೆರಿಕದ ಹೊರಗಡೆ ತಯಾರಾದ ಸಿನಿಮಾಗಳಿಗೆ 100% ಸುಂಕ – ಟ್ರಂಪ್ ಘೋಷಣೆ

    ಅಮೆರಿಕದ ಹೊರಗಡೆ ತಯಾರಾದ ಸಿನಿಮಾಗಳಿಗೆ 100% ಸುಂಕ – ಟ್ರಂಪ್ ಘೋಷಣೆ

    ವಾಷಿಂಗ್ಟನ್: ಅಮೆರಿಕದ (America) ಹೊರಗಡೆ ತಯಾರಾದ ಚಲನಚಿತ್ರಗಳ ಮೇಲೆ 100% ಸುಂಕ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ.

    ಚಲನಚಿತ್ರ ಉದ್ಯಮವನ್ನು ರಕ್ಷಿಸಲು ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಭರ್ಜರಿ ಪಾರ್ಟಿ ಮಾಡಿದ್ದ ಆರೋಪಿಗಳು!

    ಅಮೆರಿಕದ ಮಾರುಕಟ್ಟೆಯಲ್ಲಿ ವಿದೇಶಿ ಚಿತ್ರಗಳು ಕಡಿಮೆ ವೆಚ್ಚದಲ್ಲಿ ಸ್ಪರ್ಧಿಸುವುದರಿಂದ, ಇದು ಸ್ಥಳೀಯ ನಿರ್ಮಾಪಕರಿಗೆ ಸವಾಲಾಗಿ ಪರಿಣಮಿಸುತ್ತದೆ. ಇದರ ಜೊತೆಗೆ, ಸಾಂಸ್ಕೃತಿಕ ಮೌಲ್ಯಗಳು ಮತ್ತು ರಾಷ್ಟ್ರೀಯ ಗುರುತಿನ ಮೇಲೆ ವಿದೇಶಿ ಚಿತ್ರಗಳ ಪ್ರಭಾವ ಹೆಚ್ಚಾಗುತ್ತಿದ್ದು, ಇದನ್ನು ಕಡಿಮೆ ಮಾಡುವ ಉದ್ದೇಶವನ್ನು ಈ ನೀತಿ ಹೊಂದಿದೆ ಎಂದು ತಿಳಿಸಿದರು.

    ಸದ್ಯ ಈ ಘೋಷಣೆಯು ಚಲನಚಿತ್ರ ಉದ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ವಿಶ್ವದ ಇತರ ದೇಶಗಳಿಂದ, ವಿಶೇಷವಾಗಿ ಭಾರತ, ಚೀನಾ ಮತ್ತು ಯುರೋಪ್‌ನಿಂದ ತಯಾರಾದ ಚಿತ್ರಗಳು ಅಮೆರಿಕದಲ್ಲಿ ಜನಪ್ರಿಯವಾಗಿವೆ. ಈ ಸುಂಕ ನೀತಿಯಿಂದಾಗಿ ವಿದೇಶಿ ಸಿನಿಮಾಗಳ ಬೆಲೆ ಗಣನೀಯವಾಗಿ ಹೆಚ್ಚಾಗಬಹುದು. ಇದರಿಂದ ಅವುಗಳ ಮಾರುಕಟ್ಟೆ ಸಾಮರ್ಥ್ಯ ಕಡಿಮೆಯಾಗುವ ಸಾಧ್ಯತೆಗಳಿವೆ.

    ಈ ಕ್ರಮವು ಅಂತಾರಾಷ್ಟ್ರೀಯ ವಾಣಿಜ್ಯ ಸಂಬಂಧಗಳ ಮೇಲೆಯೂ ಪರಿಣಾಮ ಬೀರಬಹುದು. ಭಾರತದ ಬಾಲಿವುಡ್ ಚಿತ್ರಗಳು ಅಮೆರಿಕದಲ್ಲಿ ಗಮನಾರ್ಹ ಪ್ರೇಕ್ಷಕರನ್ನು ಹೊಂದಿದ್ದು, ಈ ಸುಂಕವು ಭಾರತೀಯ ನಿರ್ಮಾಪಕರಿಗೆ ಹೊಸ ಸವಾಲುಗಳನ್ನು ಸೃಷ್ಟಿಸಬಹುದು. ಇದಕ್ಕೆ ಪ್ರತಿಯಾಗಿ ಕೆಲವು ದೇಶಗಳು ಅಮೆರಿಕದ ಚಿತ್ರಗಳಿಗೆ ತಮ್ಮದೇ ಆದ ಪ್ರತಿ ಸುಂಕಗಳನ್ನು ವಿಧಿಸುವ ಸಾಧ್ಯತೆಯಿದೆ.

    ಟ್ರಂಪ್ ಈ ನಿರ್ಧಾರದ ಕುರಿತು ಸ್ಪಷ್ಟನೆ ಬೇಕಾಗಿದ್ದು, ಈ ಸುಂಕ ಯಾವಾಗಿನಿಂದ ಜಾರಿಗೆ ಬರಲಿದೆ ಮತ್ತು ಯಾವ ರೀತಿಯ ಚಿತ್ರಗಳಿಗೆ ಇದು ಅನ್ವಯವಾಗಲಿದೆ ಎಂಬುದು ತಿಳಿದುಬಂದಿಲ್ಲ. ಇದಕ್ಕೂ ಮೊದಲು ಟ್ರಂಪ್ ಭಾರತ ಸೇರಿ ಹಲವು ದೇಶಗಳ ಮೇಲೆ ಸುಂಕ ಸಮರ ನಡೆಸಿದ್ದರು.ಇದನ್ನೂ ಓದಿ: ಲಾಯರ್ ಜಗದೀಶ್ ಸಾವಿಗೆ ಟ್ಟಿಸ್ಟ್ – ಪೊಲೀಸರ ತನಿಖೆ ವೇಳೆ ರಹಸ್ಯ ಬಯಲು

  • ಪಹಲ್ಗಾಮ್‌ನಲ್ಲಿ ನಡೆದಿದ್ದು ಘೋರ ದುರಂತ – ಭಾರತ, ಪಾಕ್‌ ಉದ್ವಿಗ್ನತೆ ಬಗೆಹರಿಸಿಕೊಳ್ಳಲಿವೆ: ಟ್ರಂಪ್

    ಪಹಲ್ಗಾಮ್‌ನಲ್ಲಿ ನಡೆದಿದ್ದು ಘೋರ ದುರಂತ – ಭಾರತ, ಪಾಕ್‌ ಉದ್ವಿಗ್ನತೆ ಬಗೆಹರಿಸಿಕೊಳ್ಳಲಿವೆ: ಟ್ರಂಪ್

    ವಾಷಿಂಗ್ಟನ್‌: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ (Pahalgam Terror Attack) ಅತ್ಯಂತ ಘೋರ ಘಟನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.

    ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಗಾಗಿ ರೋಮ್‌ಗೆ ತೆರಳುವಾಗ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ನಾನು ಭಾರತ ಮತ್ತು ಪಾಕಿಸ್ತಾನ (Pakistan) ಎರಡೂ ದೇಶಕ್ಕೂ ಆಪ್ತನಾಗಿದ್ದೇನೆ. ಈ ಎರಡೂ ದೇಶಗಳ ನಡುವೆ 1,000- 1,500 ವರ್ಷಗಳಿಂದ ಉದ್ವಿಗ್ನತೆ ಇದೆ. ಈ ಉದ್ವಿಗ್ನತೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಅವರು ಬಗೆಹರಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.

    ಪಹಲ್ಗಾಮ್ ಉಗ್ರರ ದಾಳಿಯ ವಿಚಾರವಾಗಿ, ಇದು ತುಂಬಾ ಭೀಕರ ದಾಳಿಯಾಗಿದೆ. ಇಂತಹ ಉದ್ವಿಗ್ನ ಪರಿಸ್ಥಿತಿ ಭಾರತ ಪಾಕ್‌ ನಡುವೆ ಹಲವಾರು ವರ್ಷಗಳಿಂದಲೂ ಇದೆ. ಎರಡೂ ದೇಶಗಳು ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳುತ್ತಾರೆ ಎಂದಿದ್ದಾರೆ.

    ಮಂಗಳವಾರ ಪಹಲ್ಗಾಮ್ ಬಳಿಯ ಬೈಸರನ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆ ಸಾವನ್ನಪ್ಪಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದಾಗಿದೆ.

    ದಾಳಿಯ ಬಳಿಕ ಬುಧವಾರ ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ತುರ್ತು ಸಭೆ ನಡೆಸಿ ಪಾಕಿಸ್ತಾನದ ವಿರುದ್ಧ ಐದು ಕ್ರಮಗಳನ್ನು ತೆಗೆದುಕೊಂಡಿದೆ. ಅದರಲ್ಲಿ ಪ್ರಮುಖವಾಗಿ, ಸಾರ್ಕ್ ವೀಸಾ ವಿನಾಯಿತಿ ಯೋಜನೆಯಡಿಯಲ್ಲಿ ಪಾಕಿಸ್ತಾನಿ ಪ್ರಜೆಗಳು ಇನ್ನು ಮುಂದೆ ಭಾರತಕ್ಕೆ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ. ಈ ಯೋಜನೆಯಡಿಯಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ವೀಸಾಗಳನ್ನು ರದ್ದುಗೊಳಿಸಲಾಗಿದ್ದು, ಪಾಕ್‌ ಪ್ರಜೆಗಳು 48 ಗಂಟೆಗಳ ಒಳಗೆ ಭಾರತವನ್ನು ತೊರೆಯಬೇಕು. ಭಾರತ ಮತ್ತು ಪಾಕಿಸ್ತಾನದ ನಡುವಿನ ಏಕೈಕ ಭೂ ಮಾರ್ಗ ಈಗ ಮುಚ್ಚಲಾಗಿದೆ. ಅಲ್ಲದೇ ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೆ 1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದೆ.

  • 1 ಲಕ್ಷ ರೂ. ದಾಟಿದ ಚಿನ್ನದ ಬೆಲೆ – ಸಾರ್ವಕಾಲಿಕ ದಾಖಲೆ

    1 ಲಕ್ಷ ರೂ. ದಾಟಿದ ಚಿನ್ನದ ಬೆಲೆ – ಸಾರ್ವಕಾಲಿಕ ದಾಖಲೆ

    ನವದೆಹಲಿ: ಅಮೆರಿಕ-ಚೀನಾ ವ್ಯಾಪಾರ ಸಮರ ನಡೆಯುತ್ತಿರುವ ಹೊತ್ತಲ್ಲೇ 10 ಗ್ರಾಂ ಚಿನ್ನದ ಬೆಲೆ (Gold Rate) 1 ಲಕ್ಷ ರೂ. ದಾಟಿ ಸಾರ್ವಕಾಲಿಕ ದಾಖಲೆ ಬರೆದಿದೆ.

    ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ದಾಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಮಂಗಳವಾರ 1 ಗ್ರಾಂಗೆ 10,135 ರೂ. ತಲುಪಿದ್ದು, 10 ಗ್ರಾಂಗೆ 1,01,135 ರೂ.ಗೆ ಏರಿಕೆಯಾಗಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಚಿನ್ನದ ಬೆಲೆ 1 ಲಕ್ಷ ರೂ. ದಾಟಿದೆ. ಇದನ್ನೂ ಓದಿ: 4 ವರ್ಷದ ಬಳಿಕ ಬೇಲೂರು ಶ್ರೀ ಚನ್ನಕೇಶವಸ್ವಾಮಿ ವಿಗ್ರಹ ಸ್ಪರ್ಶಿಸಿದ ಸೂರ್ಯನ ರಶ್ಮಿ

    22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 9,290 ರೂ.ಗೆ ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 92,900 ರೂ. ತಲುಪಿದೆ. ಇದನ್ನೂ ಓದಿ:  Mandya | 39 ವರ್ಷ ಬಳಿಕ ನಡೆಯುತ್ತಿರುವ ಹಬ್ಬದಲ್ಲಿ ಸಿಎಂ ಭಾಗಿ

    ಇತರೆ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಸುಂಕ ವಿಧಿಸಿದ್ದೇ ಚಿನ್ನದ ಬೆಲೆ ದಾಖಲೆಯ ಏರಿಕೆಗೆ ಕಾರಣ ಎನ್ನಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಹೀಗಾಗಿ, ಸುರಕ್ಷಿತ ಹೂಡಿಕೆಗಾಗಿ ಹೂಡಿಕೆದಾರರು ಚಿನ್ನದತ್ತ ಆಕರ್ಷಿತರಾಗಿದ್ದಾರೆ. ಇದನ್ನೂ ಓದಿ: ಹೊಸ ಪೋಪ್ ಆಯ್ಕೆ ಹೇಗೆ ಮಾಡಲಾಗುತ್ತೆ? ಹೊಗೆ ಹಾಕೋದು ಯಾಕೆ?

    ಅಕ್ಷಯ ತೃತೀಯಕ್ಕೆ ಕೆಲವೇ ದಿನಗಳು ಬಾಕಿ ಇರುವ ಹೊತ್ತಲ್ಲೇ ಚಿನ್ನದ ಬೆಲೆ ಒಂದು ಲಕ್ಷ ದಾಟಿರುವುದು ಆಭರಣ ಪ್ರಿಯರಿಗೆ ನಿರಾಸೆ ಮೂಡಿಸಿದೆ. ಇದನ್ನೂ ಓದಿ: ವಿಂಗ್ ಕಮಾಂಡರ್ ಹಣೆಯಲ್ಲಿ ರಕ್ತ ಸೋರಿದ್ದು ಹೇಗೆ?

  • ಚಿನ್ನದ ಬೆಲೆ ಗಗನಕ್ಕೆ – ಮಾರುಕಟ್ಟೆ ಏರಿಳಿತದ ನಡುವೆಯೂ ನೆಚ್ಚಿನ ಹೂಡಿಕೆಯಾಗಲು ಕಾರಣವೇನು?

    ಚಿನ್ನದ ಬೆಲೆ ಗಗನಕ್ಕೆ – ಮಾರುಕಟ್ಟೆ ಏರಿಳಿತದ ನಡುವೆಯೂ ನೆಚ್ಚಿನ ಹೂಡಿಕೆಯಾಗಲು ಕಾರಣವೇನು?

    ಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಲವು ರಾಷ್ಟ್ರಗಳ ಮೇಲೆ ಪ್ರತಿಸುಂಕ ವಿಧಿಸಿದ ಬಳಿಕ ವ್ಯಾಪಾರ, ವಾಣಿಜ್ಯ ವಲಯದಲ್ಲಿ ಏರಿಳಿತ ಶುರುವಾಗಿದೆ. ಷೇರು ಮಾರುಕಟ್ಟೆಯಲ್ಲೂ ಕೂಡ ಹಾವು-ಏಣಿ ಆಟ ಮುಂದುವರಿದಿದೆ. ಜಾಗತಿಕ ಮಾರುಕಟ್ಟೆಗಳು ಯುಎಸ್ ಟ್ರೆಷರಿ ಬಿಲ್‌ಗಳ (‘ಟಿ-ಬಿಲ್’ ಯುಎಸ್ ಸರ್ಕಾರದ ಖಜಾನೆ ಇಲಾಖೆಯಿಂದ ಬೆಂಬಲಿತವಾದ ಅಲ್ಪಾವಧಿಯ ಯುಎಸ್ ಸರ್ಕಾರದ ಸಾಲದ ಬಾಧ್ಯತೆಯಾಗಿದೆ) ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಿವೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲೂ ಸಹ ಚಿನ್ನದ ಬೆಲೆ ಮಾತ್ರ ಗಗನಕ್ಕೆ ಏರುತ್ತಲೇ ಇದೆ. ಚಿನ್ನದ ಮೇಲಿನ ಹೂಡಿಕೆ ಹೆಚ್ಚು ಸುರಕ್ಷಿತ ಎಂಬುದು ಜನರ ಭಾವನೆಯಾಗಿದ್ದು, ಹೂಡಿಕೆದಾರರು ಚಿನ್ನದ ಕಡೆ ಮುಖ ಮಾಡಿದ್ದಾರೆ. ಈ ಕಲ್ಪನೆ ನಿಜವೇ? ಪ್ರಸ್ತುತ ಆರ್ಥಿಕ ಪ್ರಕ್ಷುಬ್ಧತೆಯ ಸಮಯದಲ್ಲಿ ಚಿನ್ನ ತನ್ನ ಮೌಲ್ಯ ಕಾಪಾಡಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಹೌದು.. ಎಂಬುದೇ ಉತ್ತರ.

    ಟ್ರಂಪ್ ಪ್ರತಿಸುಂಕ (Tariff) ವಿಧಿಸುವ ಮೂಲಕ ಜಾಗತಿಕ ಆರ್ಥಿಕತೆಗೆ ಚಾಟಿ ಬೀಸಿದ್ದರಿಂದ ಚಿನ್ನವು (Gold Price Hike) ಎಂದಿಗಿಂತಲೂ ಉತ್ತಮವಾಗಿದೆ ಎಂಬುದನ್ನು ಅದರ ಬೆಲೆಯೇ ಸೂಚಿಸುತ್ತಿದೆ. ಇದೇ ಮಾರ್ಚ್ 15ರ ಹೊತ್ತಿಗೆ ಮೊದಲ ಬಾರಿಗೆ ಚಿನ್ನವು ‘ಔನ್ಸ್’ಗೆ (28.34 ಗ್ರಾಂ) ಅಂದಾಜು 2,56,161 ರೂ. (3,000 ಡಾಲರ್) ಆಗಿದೆ. ಸ್ಥಳೀಯವಾಗಿ ಗಮನಿಸಿದರೆ, ಚಿನ್ನದ ಬೆಲೆಯು 10 ಗ್ರಾಂಗೆ 95,000 ರೂ.ಗೆ ಏರಿಕೆ ಕಂಡಿದೆ. ಹಳದಿ ಲೋಹದ ಹೊಳಪಿನ ಓಟವು, ಪ್ರಪಂಚದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳಿಂದ ಚಿನ್ನ ಸಂಗ್ರಹಣೆ, ಹಣದುಬ್ಬರದ ಕಾಳಜಿ ಮತ್ತು ಸಾಂಕ್ರಾಮಿಕ ನಂತರ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಮುಂದುವರಿದಿದೆ. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಶಾಕ್‌ – ಚಿನ್ನದ ಬೆಲೆ ಒಂದೇ ದಿನ 6,000 ರೂ. ಏರಿಕೆ

    ಏನಿದು ಯುಎಸ್ ಟ್ರೆಷರಿ ಬಾಂಡ್?
    ಜಗತ್ತಿನ ದೈತ್ಯ ಅಮೆರಿಕದ ಆರ್ಥಿಕತೆ ನಿಂತಿರುವುದೇ ಟ್ರೆಷರಿ ಬಾಂಡ್ ಮೇಲೆ. ಯುಎಸ್ ಸರ್ಕಾರಕ್ಕೆ ಪ್ರತಿ ವರ್ಷ ಸಾಕಷ್ಟು ಹಣ ಬೇಕು, ಸಂಬಳ ನೀಡಬೇಕು, ಸೈನ್ಯಕ್ಕೆ ಹಣ ಬೇಕು, ರಸ್ತೆ-ಆಸ್ಪತ್ರೆ ಇತರೆ ಮೂಲಸೌಕರ್ಯಗಳಿಗೂ ಸಾಲ ಮಾಡಿ ಹಣ ತರುತ್ತದೆ. ಈ ಸಾಲವನ್ನು ಟ್ರೆಷರಿ ಬಾಂಡ್‌ನಿಂದ ಅಮೆರಿಕ ಸರ್ಕಾರಕ್ಕೆ ಬರುತ್ತದೆ. ಅಮೆರಿಕ ಸರ್ಕಾರ, ಅಲ್ಪಾವಧಿ-ಮಧ್ಯಮ-ಧೀರ್ಘಾವಧಿ ಎಂದು ಮೂರು ವಿಧದಲ್ಲಿ ಬಾಂಡ್ ಬಿಡುಗಡೆ ಮಾಡುತ್ತದೆ. ಈ ಬಾಂಡನ್ನು ಸಾಮಾನ್ಯ ಜನರು, ಕಂಪನಿಗಳು ಮತ್ತು ಯಾವುದೇ ದೇಶವು ಖರೀದಿಸಲು ಅವಕಾಶ ಇದೆ. ಅಮೆರಿಕದ ಸಾಲದಲ್ಲಿ ಶೇ.30 ವಿದೇಶಿ ಹೂಡಿಕೆಗಳಿಗೆ ಮಾತ್ರ ಅವಕಾಶ ಇದೆ. ಜಗತ್ತಿನಲ್ಲಿ ವ್ಯಾಪಾರ, ವಹಿವಾಟನ್ನು ಡಾಲರ್ ಮುಖಾಂತರವೇ ನಡೆಸಲಾಗುವುದು. ಹೀಗಾಗಿ, ಬಾಂಡ್ ಮೂಲಕ ಮೀಸಲು ನಿಧಿ ಖರೀದಿಸಲು ಇತರೆ ದೇಶಗಳು ಮುಂದಾಗುತ್ತವೆ. ಯಾವ ದೇಶ ಹೆಚ್ಚು ಮೀಸಲು ನಿಧಿ ಹೊಂದಿರುತ್ತೋ ಅದು ಆರ್ಥಿಕವಾಗಿ ಸುಭದ್ರವಾಗಿರುತ್ತದೆ.

    ಟ್ಯಾರಿಫ್ ಅವ್ಯವಸ್ಥೆ ನಡುವೆ ಚಿನ್ನದ ಏರಿಕೆ
    ಎಸ್&ಪಿ 500 (ಸ್ಟಾಕ್ ಮಾರುಕಟ್ಟೆ ಸೂಚ್ಯಂಕ) ಈ ತಿಂಗಳ ಆರಂಭದಲ್ಲಿ 10.5% ಕುಸಿದಾಗ, ಮಾರುಕಟ್ಟೆ ಮೌಲ್ಯ ಕೂಡ 6.6 ಮಿಲಿಯನ್ ಡಾಲರ್‌ನಷ್ಟು ಕುಸಿತ ಕಂಡಿತು. ಇದರ ಎಫೆಕ್ಟ್‌ನಿಂದಾಗಿ ಅಮೆರಿಕ ಬಾಂಡ್ ಮೇಲೆ ಹೂಡಿಕೆ ಮಾಡುತ್ತಿರುವವರು, ಅದನ್ನು ಹಿಂತೆಗೆದುಕೊಳ್ಳಬೇಕೇ ಎಂದು ಪ್ರಶ್ನಿಸುತ್ತಿದ್ದಾರೆ. ಚಿನ್ನದ ಮೇಲಿನ ಹೂಡಿಕೆ ಕಡೆ ಮುಖ ಮಾಡಿದ್ದಾರೆ. ಎಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಚಿನ್ನದ ಬೆಲೆಯಲ್ಲಾಗಲಿ ಅಥವಾ ಅದರ ಮೇಲಿನ ಹೂಡಿಕೆಗೆ ಎಫೆಕ್ಟ್ ಆಗಲಿ ಆಗಿಲ್ಲ. ಇದನ್ನೂ ಓದಿ: ಟ್ಯಾರಿಫ್‌ ವಾರ್‌ಗೆ ತಾತ್ಕಾಲಿಕ ಬ್ರೇಕ್‌ – ಭಾರತೀಯ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ

    ‘ಚಿನ್ನ ಯಾವತ್ತೂ ಸುರಕ್ಷಿತ ಧಾಮ ಇದ್ದಂತೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಅದು ದುರ್ಬಲಗೊಂಡಿಲ್ಲ. ಆರ್ಥಿಕ ದಿವಾಳಿ ಆರಂಭದಲ್ಲಿ ಚಿನ್ನದ ಬೆಲೆ ಕುಸಿತ ಕಂಡರೂ, ನಂತರದ ದಿನಗಳಲ್ಲಿ ಅದರ ಬೆಲೆ ಏರಿಕೆಯನ್ನು ನಾವು ನೋಡುತ್ತೇವೆ. ಚಿನ್ನದ ಬೇಡಿಕೆಯಲ್ಲಿ ತೀವ್ರ ಹೆಚ್ಚಳವಾಗುತ್ತದೆ’ ಎಂದು ಗೋಲ್ಡ್‌ಮನ್ ಸ್ಯಾಚ್ಸ್‌ನ ಸರಕುಗಳ ವಿಶ್ಲೇಷಕ ಲೀನಾ ಥಾಮಸ್ ವಿಶ್ಲೇಷಿಸಿದ್ದಾರೆ. 2020ರ ಕೋವಿಡ್ ಸಂದರ್ಭದಲ್ಲೂ ಆರ್ಥಿಕತೆ ಕುಸಿತ ಕಂಡಾಗ, ಚಿನ್ನವೂ ಶೇ.5ರಷ್ಟು ಕುಸಿದಿತ್ತು. ಅಷ್ಟೇ ತ್ವರಿತವಾಗಿ ಏರಿಕೆ ಕಂಡಿತು ಎಂದು ಥಾಮಸ್ ತಿಳಿಸಿದ್ದಾರೆ.

    ‘ಸುರಕ್ಷಿತ ಧಾಮ’ ಚಿನ್ನ
    ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ಸುರಕ್ಷಿತ ಧಾಮ ಎಂಬ ಭಾವನೆ ದೀರ್ಘಕಾಲದ್ದಾಗಿದೆ. ಯುಎಸ್, ಭಾರತ, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಚಿನ್ನ ಜನಪ್ರಿಯ ಲೋಹವಾಗಿದೆ. ಮಾನವ ಇತಿಹಾಸದಲ್ಲಿ ಇದುವರೆಗೆ ಸುಮಾರು 2 ಲಕ್ಷ ಟನ್‌ಗಳಷ್ಟು ಚಿನ್ನವನ್ನು ಗಣಿಗಾರಿಕೆ ಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಮೇಲಿನ ಆಕರ್ಷಣೆಯೂ ಹೆಚ್ಚಾಗಿದೆ. ಹಿಂದೆ 28 ಗ್ರಾಂ ಚಿನ್ನದ ಬೆಲೆಯು ಅಂದಾಜು 85,387 ರೂ.ನಿಂದ 1,70,774 ಡಾಲರ್‌ಗೆ ಏರಲು ಬರೋಬ್ಬರಿ 12 ವರ್ಷಗಳನ್ನು ತೆಗೆದುಕೊಂಡಿತ್ತು. ಬಳಿಕ ಅಂದಾಜು 2,56,161 ರೂ. ಗಡಿದಾಟಲು ಕೇವಲ 5 ವರ್ಷಗಳನ್ನಷ್ಟೇ ತೆಗೆದುಕೊಂಡಿದೆ. ಇದು ಮೂರು ವರ್ಷದ ಅವಧಿಯಲ್ಲಿ 3,41,549 ರೂ.ಗೆ ಏರಬಹುದು ಎಂದು ಅಂದಾಜು 3,41,549 ರೂ.ಗೆ ಹೆಚ್ಚಬಹುದು ಎನ್ನಲಾಗಿದೆ. ಇದನ್ನೂ ಓದಿ: ‘ಆಪಲ್‌’ ಮೇಲೆ ಟ್ರಂಪ್‌ ಟ್ಯಾರಿಫ್‌ ಎಫೆಕ್ಟ್‌; ಮುಂದಿನ ಐಫೋನ್‌ ಉತ್ಪಾದನಾ ಕೇಂದ್ರವಾಗುತ್ತಾ ಭಾರತ?

    ಗೋಲ್ಡ್ಮನ್ ಸ್ಯಾಚ್ಸ್ ತನ್ನ 2025 ರ ಅಂತ್ಯದ ಚಿನ್ನದ ಬೆಲೆ ಮುನ್ಸೂಚನೆಯನ್ನು $3,300 ರಿಂದ $3,700ಗೆ, $3,650-$3,950 ರ ಯೋಜಿತ ಶ್ರೇಣಿಯೊಂದಿಗೆ ಹೆಚ್ಚಿಸಿತು. ‘ಕಳೆದ ನಾಲ್ಕು ವರ್ಷಗಳಲ್ಲಿ ಚಿನ್ನವು ವಾರ್ಷಿಕವಾಗಿ 24-25 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣೆಯ ನಂತರ, ಚಿನ್ನ ಮತ್ತಷ್ಟು ವಿಜೃಂಭಿಸುತ್ತಿದೆ. ಜಾಗತಿಕವಾಗಿ ಸೂಕ್ಷ್ಮ ಮತ್ತು ಸ್ಥೂಲ ರಂಗಗಳಲ್ಲಿ ಸುಂಕದ ಮೇಲಿನ ಅನಿಶ್ಚಿತತೆಯಿಂದಾಗಿ, ಚಿನ್ನವು ತುಂಬಾ ಪ್ರಬಲವಾಗಿ ಕಾಣುತ್ತದೆ. ಅನಿಶ್ಚಿತತೆ ಇದ್ದಾಗಲೆಲ್ಲಾ ಚಿನ್ನವು ಸುರಕ್ಷಿತ ಧಾಮ ಆಸ್ತಿ ಎಂದೇ ಪರಿಗಣಿತವಾಗಿದೆ’ ಎಂದು ಮೋತಿಲಾಲ್ ಒಸ್ವಾಲ್ ಫಿನಾಲ್ಸಿಯಲ್ ಸರ್ವಿಸಸ್‌ನ ರಿಸರ್ಚ್ ಕಮಾಡಿಟಿಸ್‌ನ ಮುಖ್ಯಸ್ಥ ನವನೀತ್ ದಮಾನಿ ಅಭಿಪ್ರಾಯಪಟ್ಟಿದ್ದಾರೆ.

    ಚಿನ್ನದತ್ತ ಕೇಂದ್ರೀಯ ಬ್ಯಾಂಕ್‌ಗಳ ಚಿತ್ತ
    ಪ್ರಪಂಚದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಮೀಸಲುಗಳಲ್ಲಿ ಅಮೆರಿಕ ಡಾಲರ್‌ಗಳ ಪಾಲನ್ನು (ಯುಎಸ್ ಮೀಸಲು ನಿಧಿ) ಕಡಿಮೆ ಮಾಡಲು ಮುಂದಾಗಿವೆ. ಬದಲಾಗಿ ಚಿನ್ನವನ್ನು ಖರೀದಿಸುತ್ತಿವೆ. ಇದು ಚಿನ್ನದ ಬೇಡಿಕೆಯನ್ನು ಹೆಚ್ಚಿಸಿದೆ. ಟ್ರಂಪ್ ಪ್ರತಿಸುಂಕ ವಿಧಿಸಿದಾಗಿನಿಂದ ಮಾರುಕಟ್ಟೆ ವಲಯದಲ್ಲಿ ಅವ್ಯವಸ್ಥೆ ಸೃಷ್ಟಿಯಾಗಿದೆ. ಹೀಗಾಗಿ, ಜಾಗತಿಕ ಹೂಡಿಕೆದಾರರು, ಯುಎಸ್ ಟ್ರೆಷರಿ ಬಿಲ್ ನಮಗೆ ಸಮಸ್ಯೆ ತಂದೊಡ್ಡದ ಆಸ್ತಿಯಾಗಿ ಅರ್ಹತೆ ಪಡೆದಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಹೂಡಿಕೆದಾರರು ಚಿನ್ನದ ಕಡೆಗೆ ಹೆಚ್ಚಿನ ಒಲವು ತೋರಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಶಾಕ್‌ – ಚಿನ್ನದ ಬೆಲೆ ಒಂದೇ ದಿನ 6,000 ರೂ. ಏರಿಕೆ

    ಈಗ ಚಿನ್ನದ ಬೆಲೆ ಎಷ್ಟಿದೆ?
    ದಿನ ಕಳೆದಂತೆ ಚಿನ್ನದ ಬೆಲೆ ಗಗನಕ್ಕೆ ಏರುತ್ತಲೇ ಇದೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 22 ಕ್ಯಾರೆಟ್ 1 ಗ್ರಾಂಗೆ 8,945 ರೂ. ಇದೆ. 24 ಕ್ಯಾರೆಟ್ 1 ಗ್ರಾಂ ಬೆಲೆ 9,758 ಕ್ಕೆ ಏರಿಕೆ ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಈಗಿನ ದರ 89,450 ರೂ. ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 97,580 ರೂ.ಗೆ ಏರಿದೆ.