Tag: donald trump

  • H-1ಬಿ ವೀಸಾ ಶುಲ್ಕ ಹೆಚ್ಚಳ – ವಾಸ್ತವ್ಯ ಅವಧಿ ವಿಸ್ತರಣೆ ಕೋರಿದ ಅರ್ಜಿಗಳಿಗೆ ಅನ್ವಯಿಸಲ್ಲ

    H-1ಬಿ ವೀಸಾ ಶುಲ್ಕ ಹೆಚ್ಚಳ – ವಾಸ್ತವ್ಯ ಅವಧಿ ವಿಸ್ತರಣೆ ಕೋರಿದ ಅರ್ಜಿಗಳಿಗೆ ಅನ್ವಯಿಸಲ್ಲ

    ನ್ಯೂಯಾರ್ಕ್: ಹೆಚ್-1ಬಿ ವೀಸಾಕ್ಕೆ (US H1B Visa) ಹೊಸದಾಗಿ ಸಲ್ಲಿಕೆಯಾಗುವ ಅರ್ಜಿಗಳ ಶುಲ್ಕ ಹೆಚ್ಚಳ ವಾಸ್ತವ್ಯ ಅವಧಿಯ ವಿಸ್ತರಣೆ ಕೋರಿದ ಅರ್ಜಿಗಳಿಗೆ ಅನ್ವಯಿಸುವುದಿಲ್ಲ. ಅಮೆರಿಕ ಪೌರತ್ವ ಹಾಗೂ ವಲಸೆ ಸೇವೆಗಳ (ಯುಎಸ್‌ಸಿಐಎಸ್) ಇಲಾಖೆ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಈ ವಿಚಾರ ತಿಳಿಸಲಾಗಿದೆ.

    ಹೊಸ ಶುಲ್ಕ ನೀತಿ ಪ್ರಶ್ನಿಸಿ ಅಮೆರಿಕ ವಾಣಿಜ್ಯ ಮಂಡಳಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದರ ಬೆನ್ನಲ್ಲೇ, ಈ ಹೊಸ ಮಾರ್ಗಸೂಚಿಯನ್ನು ಯುಎಸ್‌ಸಿಐಎಸ್ ಬಿಡುಗಡೆ ಮಾಡಿದೆ. ಇನ್ನೂ ಹೆಚ್-1ಬಿ ವೀಸಾ ಹೊಂದಿರುವವರು ಅಮೆರಿಕಕ್ಕೆ ಬರಲು, ಇತರ ದೇಶಗಳಿಗೆ ಸಂಚರಿಸುವುದಕ್ಕೆ ಕೂಡ ಈ ಆದೇಶ ನಿರ್ಬಂಧ ಹೇರುವುದಿಲ್ಲ ಎಂದು ತಿಳಿಸಲಾಗಿದೆ.

    ಹೆಚ್-1ಬಿ ವೀಸಾಕ್ಕಾಗಿ ಹೊಸದಾಗಿ ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿದ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (88 ಲಕ್ಷ ರೂ.) ಹೆಚ್ಚಿಸಿ ಅಮೆರಿಕ ಅಧ್ಯಕ್ಷ ಟ್ರಂಪ್ ಸೆ.19ರಂದು ಆದೇಶಿಸಿದ್ದರು.

  • ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಭಾರೀ ಸುಂಕ ಹಾಕ್ತೇವೆ: ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

    ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಭಾರೀ ಸುಂಕ ಹಾಕ್ತೇವೆ: ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

    ವಾಷಿಂಗ್ಟನ್‌: ರಷ್ಯಾದಿಂದ (Russia) ಭಾರತ (India) ತೈಲ ಖರೀದಿ ನಿಲ್ಲಿಸದೇ ಇದ್ದರೆ ಮುಂದೆ ಭಾರಿ ಸುಂಕಗಳನ್ನು ಎದುರಿಸಬೇಕಾಗುತ್ತದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಎಚ್ಚರಿಕೆ ನೀಡಿದ್ದಾರೆ.

    ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ನಾನು ರಷ್ಯಾದ ತೈಲ ಖರೀದಿ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ (Narendra Modi) ನನಗೆ ವೈಯಕ್ತಿಕವಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಅವರು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದರೆ ಭಾರೀ ಸುಂಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದರು.  ಇದನ್ನೂ ಓದಿ:  ಪಾಕಿಸ್ತಾನ-ಅಫ್ಘಾನಿಸ್ತಾನದ ನಡುವೆ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಗೆ

    ಟ್ರಂಪ್‌ ಮತ್ತು ಪ್ರಧಾನಿ ಮೋದಿ ನಡುವಿನ ಯಾವುದೇ ಇತ್ತೀಚಿನ ಸಂಭಾಷಣೆಯ ಬಗ್ಗೆ ತಿಳಿದಿಲ್ಲ ಎಂಬ ಭಾರತ ಸರ್ಕಾರದ ಪ್ರತಿಕ್ರಿಯೆಯ ಬಗ್ಗೆ ಕೇಳಿದ್ದಕ್ಕೆ, ಅವರು ಹಾಗೆ ಹೇಳಲು ಬಯಸಿದರೆ ಮುಂದೆ ಅವರು ಬೃಹತ್ ಸುಂಕಗಳನ್ನು ಪಾವತಿಸುವುದನ್ನು ಮುಂದುವರಿಸಬೇಕಾಗುತ್ತದೆ ಎಂದರು.

    ಡೊನಾಲ್ಡ್‌ ಟ್ರಂಪ್‌ ಆರಂಭದಲ್ಲಿ ಭಾರತದ ಮೇಲೆ 25% ಸುಂಕವನ್ನು ಹೇರಿದ್ದರು. ನಂತರ ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ಸುಂಕ ಹಾಕಿದ್ದಾರೆ. ಇದರ ಪರಿಣಾಮ ಈಗ ಭಾರತದಿಂದ ಅಮೆರಿಕ್ಕೆ ಆಮದಾಗುವ ವಸ್ತುಗಳ ಮೇಲೆ 50% ಸುಂಕ ಹೇರಲಾಗಿದೆ.

    ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕೆ ಚೀನಾ ಮೇಲೆ 100% ಸುಂಕವನ್ನು ಟ್ರಂಪ್‌ ಘೋಷಿಸಿದ್ದಾರೆ. ಹೊಸ ಸುಂಕ ನೀತಿಗಳು ನ.1 ರಿಂದ ಜಾರಿಗೆ ಬರಲಿದೆ.

  • ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ – ಮೋದಿ ಭರವಸೆ ಕೊಟ್ಟಿದ್ದಾರೆ ಎಂದ ಟ್ರಂಪ್‌ಗೆ ತಿರುಗೇಟು

    ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ – ಮೋದಿ ಭರವಸೆ ಕೊಟ್ಟಿದ್ದಾರೆ ಎಂದ ಟ್ರಂಪ್‌ಗೆ ತಿರುಗೇಟು

    * ಮೋದಿ-ಟ್ರಂಪ್ ಮಧ್ಯೆ ದೂರವಾಣಿ ಸಂಭಾಷಣೆ ನಡೆದಿಲ್ಲ: ವಿದೇಶಾಂಗ ಸಚಿವಾಲಯ ಸ್ಪಷ್ಟನೆ

    ನವದೆಹಲಿ: ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ ಅಂತ ಪ್ರಧಾನಿ ಮೋದಿ (PM Modi) ಭರವಸೆ ಕೊಟ್ಟಿದ್ದಾರೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿಕೆಗೆ ಭಾರತ ತಿರುಗೇಟು ನೀಡಿದೆ.

    ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ ಅಂತ ಮೋದಿ ಭರವಸೆ ಕೊಟ್ಟಿದ್ದಾರೆ. ಇದೊಂದು ದೊಡ್ಡ ಹೆಜ್ಜೆಯಾಗಿದೆ ಎಂದಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಮೋದಿ-ಟ್ರಂಪ್ ಮಧ್ಯೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಭಾರತದ ಆರ್ಥಿಕತೆಗೆ ರಷ್ಯಾದ ತೈಲ ಮುಖ್ಯ, ನಮ್ಮ ಸಂಬಂಧ ನಂಬಿಕೆ ಮೇಲೆ ಕಟ್ಟಿರುವ ಸೇತುವೆ: ರಷ್ಯಾ

    ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯೆ ನೀಡಿದ್ದು, ಭಾರತದ ಆಮದು ನೀತಿಗಳು ದೇಶದ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಮಾರ್ಗದರ್ಶಿಸಲ್ಪಡುತ್ತವೆ. ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ಸರ್ಕಾರದ ಸ್ಥಿರ ಆದ್ಯತೆಯಾಗಿದೆ ಎಂದಿದ್ದಾರೆ.

    ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಪ್ರತಿಕ್ರಿಯಿಸಿ, ಮಾಸ್ಕೋ ಜೊತೆಗಿನ ಭಾರತದ ಇಂಧನ ಸಹಕಾರವು ಅದರ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅನುಗುಣವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ, ಮೋದಿ ನನಗೆ ಭರವಸೆ ನೀಡಿದ್ದಾರೆ: ಟ್ರಂಪ್‌

    ಈ ಮಧ್ಯೆ, ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಹೆದರುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಟ್ರಂಪ್‌ಗೆ ಭರವಸೆ ನೀಡಿದ್ದಕ್ಕೆ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದು, ಟ್ರಂಪ್ ಹೇಳಿಕೆಗಳಿಗೆ ಮೋದಿ ಏಕೆ ಖಂಡನೆ ವ್ಯಕ್ತಪಡಿಸುವುದಿಲ್ಲ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.

  • ಭಾರತದ ಆರ್ಥಿಕತೆಗೆ ರಷ್ಯಾದ ತೈಲ ಮುಖ್ಯ, ನಮ್ಮ ಸಂಬಂಧ ನಂಬಿಕೆ ಮೇಲೆ ಕಟ್ಟಿರುವ ಸೇತುವೆ: ರಷ್ಯಾ

    ಭಾರತದ ಆರ್ಥಿಕತೆಗೆ ರಷ್ಯಾದ ತೈಲ ಮುಖ್ಯ, ನಮ್ಮ ಸಂಬಂಧ ನಂಬಿಕೆ ಮೇಲೆ ಕಟ್ಟಿರುವ ಸೇತುವೆ: ರಷ್ಯಾ

    ಮಾಸ್ಕೋ: ಭಾರತ ಮತ್ತು ರಷ್ಯಾ ಸಂಬಂಧವು ನಂಬಿಕೆಯ ಮೇಲೆ ಕಟ್ಟಿರುವ ಸೇತುವೆ, ಘನವಾದ ಅಡಿಪಾಯ ಹೊಂದಿದೆ. ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ರಷ್ಯಾದ ತೈಲ (Russian Oil) ಪೂರೈಕೆಯು ಭಾರತದ ಆರ್ಥಿಕತೆಗೆ ಮುಖ್ಯವಾಗಿದೆ ಎಂದು ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ (Denis Alipov) ಹೇಳಿದ್ದಾರೆ.

    ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ ಅಂತ ಮೋದಿ (Narendra Modi) ನನಗೆ ಭರವಸೆ ನೀಡಿದ್ದಾರೆ ಎಂಬ ಟ್ರಂಪ್‌ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ. ನಮ್ಮ ಸರ್ಕಾರವು ಭಾರತದ ಹಿತಾಸಕ್ತಿಗೆ ಅನುಗುಣವಾಗಿದೆ. ಏಕೆಂದ್ರೆ ರಷ್ಯಾ ತೈಲ ಪೂರೈಕೆಯು ಭಾರತದ ಆರ್ಥಿಕತೆಗೆ (Indian Economy) ಪ್ರಯೋಜನಕಾರಿಯಾಗಿದೆ. ನಮ್ಮ ನಡುವಿನ ಕಾರ್ಯತಂತ್ರ ಹಾಗೂ ಪಾಲುದಾರಿಕೆಯು ಜಾಗತಿಕ ವ್ಯವಹಾರ ಸ್ಥಿರಗೊಳಿಸುವ ಶಕ್ತಿಯಾಗಿ ಪರಿಣಮಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಭಾರತ ಹೇಳಿದ್ದೇನು?
    ಇನ್ನೂ ಟ್ರಂಪ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತ, ದೇಶದ ಗ್ರಾಹಕರ ಹಿತಾಸಕ್ತಿ ಕಾಪಾಡುವುದು ಭಾರತ ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದೆ.

    ಟ್ರಂಪ್‌ ಹೇಳಿದ್ದೇನು?
    ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿರುವುದಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ನನಗೆ ಭರವಸೆ ನೀಡಿದ್ದಾರೆ. ಇದು ನಿಜಕ್ಕೂ ಒಂದು ಪ್ರಮುಖ ಹೆಜ್ಜೆ. ರಷ್ಯಾ-ಉಕ್ರೇನ್ ಯುದ್ಧ ತಡೆಯುವ ನಮ್ಮ ಪ್ರಯತ್ನಗಳ ಭಾಗವೂ ಆಗಿದೆ. ಚೀನಾಗೂ ಸಹ ಅದೇ ರೀತಿ ಮಾಡುವಂತೆ ನಾವು ಹೇಳಬೇಕಾಗಿದೆ ಎಂದು ಹೇಳಿದ್ದರು.

    ಅಮೆರಿಕದ ಆರೋಪ ಏನಿದೆ?
    ಭಾರತವು ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಣಕಾಸಿನ ನೆರವು ನೀಡುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಅವರ ಬಲವಾದ ನಂಬಿಕೆ. ಅಮೆರಿಕದ ಕೆಲ ಅಧಿಕಾರಿಗಳೂ ಟ್ರಂಪ್ ಹೇಳಿಕೆಯನ್ನ ಉಲ್ಲೇಖಿಸಿ ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದ್ದರು. ಆದ್ರೆ ರಷ್ಯಾದ ಸಂಬಂಧ ಬಿಟ್ಟುಕೊಡದ ಭಾರತ ತೈಲ ಖರೀದಿ ಮುಂದುವರಿಸಿದೆ.

  • ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ, ಮೋದಿ ನನಗೆ ಭರವಸೆ ನೀಡಿದ್ದಾರೆ: ಟ್ರಂಪ್‌

    ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ, ಮೋದಿ ನನಗೆ ಭರವಸೆ ನೀಡಿದ್ದಾರೆ: ಟ್ರಂಪ್‌

    – ಚೀನಾಗೂ ತೈಲ ಖರೀದಿ ನಿಲ್ಲಿಸುವಂತೆ ಹೇಳಬೇಕು

    ವಾಷಿಂಗ್ಟನ್‌: ಭಾರತ (India) ಇನ್ಮುಂದೆ ರಷ್ಯಾದಿಂದ ತೈಲ ಖರೀದಿರುವುದಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ನನಗೆ ಭರವಸೆ ನೀಡಿದ್ದಾರೆ. ಇದು ನಿಜಕ್ಕೂ ಒಂದು ಪ್ರಮುಖ ಹೆಜ್ಜೆ. ರಷ್ಯಾ-ಉಕ್ರೇನ್‌ ಯುದ್ಧ ತಡೆಯುವ ನಮ್ಮ ಪ್ರಯತ್ನಗಳ ಭಾಗವೂ ಆಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದರು.

    ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಭಾರತ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಹಣಕಾಸಿನ ನೆರವು ನೀಡುತ್ತಿದೆ ಎಂಬ ಅಮೆರಿಕದ ಅಭಿಪ್ರಾಯಕ್ಕೆ ಮೋದಿ (PM Modi) ಕಳವಳ ವ್ಯಕ್ತಪಡಿಸಿದ್ದಾರೆ. ಭಾರತ ತೈಲ ಖರೀದಿಸುವುದು ನಮಗೂ ತೃಪ್ತಿದಾಯಕವಾಗಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಅಮೆರಿಕದ ರಹಸ್ಯ ದಾಖಲೆಗಳ ಸಂಗ್ರಹ ಆರೋಪ – ಭಾರತ ಮೂಲದ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್ ಅರೆಸ್ಟ್‌

    ಈ ಎಲ್ಲ ಕಾರಣಗಳಿಂದ ಮೋದಿ ಅವರು ರಷ್ಯಾದಿಂದ ತೈಲ (Russian Oil) ಖರೀದಿಸುವುದಿಲ್ಲ ಎಂದು ಭರವಸೆ ನೀಡಿದರು. ಚೀನಾಗೂ ಸಹ ಅದೇ ರೀತಿ ಮಾಡುವಂತೆ ನಾವು ಹೇಳಬೇಕಾಗಿದೆ ಎಂದು ಹೇಳಿದರಲ್ಲದೇ ಇಂಧನ ನೀತಿಯಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಪ್ರಧಾನಿ ಮೋದಿ ನನ್ನ ಆಪ್ತ ಮಿತ್ರ ಎಂದರು.

    ಇನ್ನೂ ಚೀನಾದೊಂದಿಗಿನ ಉದ್ವಿಗ್ನತೆ ನಡುವೆ ಭಾರತವನ್ನ ವಿಶ್ವಾಸಾರ್ಹ ಪಾಲುದಾರ ಎಂದು ನೀವು ಪರಿಗಣಿಸುತ್ತೀರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್‌, ಮೋದಿ ನನ್ನ ಸ್ನೇಹಿತ, ಭಾರತದೊಂದಿಗೆ ಉತ್ತಮ ಸಂಬಂಧವಿದೆ ಎಂದು ಹೇಳಿದರು. ಆದ್ರೆ ಟ್ರಂಪ್‌ ಹೇಳಿಕೆ ಬಗ್ಗೆ ಈವರೆಗೆ ಭಾರತ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದನ್ನೂ ಓದಿ: ಭಾರತ ಅದ್ಭುತ ದೇಶ, ನನ್ನ ಒಳ್ಳೆಯ ಫ್ರೆಂಡ್‌ – ಪಾಕ್‌ ಪ್ರಧಾನಿ ಎದುರೇ ಮೋದಿಯನ್ನ ಹಾಡಿಹೊಗಳಿದ ಟ್ರಂಪ್‌

    ಅಮೆರಿಕದ ಆರೋಪ ಏನು?
    ಭಾರತವು ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಹಣಕಾಸಿನ ನೆರವು ನೀಡುತ್ತಿದೆ ಎಂದು ಡೊನಾಲ್ಡ್‌ ಟ್ರಂಪ್‌ ಅವರ ಬಲವಾದ ನಂಬಿಕೆ. ಅಮೆರಿಕದ ಕೆಲ ಅಧಿಕಾರಿಗಳೂ ಟ್ರಂಪ್‌ ಹೇಳಿಕೆಯನ್ನ ಉಲ್ಲೇಖಿಸಿ ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದ್ದರು. ಆದ್ರೆ ರಷ್ಯಾದ ಸಂಬಂಧ ಬಿಟ್ಟುಕೊಡದ ಭಾರತ ತೈಲ ಖರೀದಿ ಮುಂದುವರಿಸಿದೆ. ಇದನ್ನೂ ಓದಿ: ಟ್ರಂಪ್‌ ಇಲ್ಲದಿದ್ರೆ ಭಾರತ-ಪಾಕ್‌ ಪರಮಾಣು ಸಂಘರ್ಷದಲ್ಲಿ ಯಾರೋಬ್ಬರೂ ಉಳಿಯುತ್ತಿರಲಿಲ್ಲವೇನೋ: ಪಾಕ್‌ ಪಿಎಂ

  • ಭಾರತ ಅದ್ಭುತ ದೇಶ, ನನ್ನ ಒಳ್ಳೆಯ ಫ್ರೆಂಡ್‌ – ಪಾಕ್‌ ಪ್ರಧಾನಿ ಎದುರೇ ಮೋದಿಯನ್ನ ಹಾಡಿಹೊಗಳಿದ ಟ್ರಂಪ್‌

    ಭಾರತ ಅದ್ಭುತ ದೇಶ, ನನ್ನ ಒಳ್ಳೆಯ ಫ್ರೆಂಡ್‌ – ಪಾಕ್‌ ಪ್ರಧಾನಿ ಎದುರೇ ಮೋದಿಯನ್ನ ಹಾಡಿಹೊಗಳಿದ ಟ್ರಂಪ್‌

    – ಈಗ ಭಾರತ -ಪಾಕ್‌ ಚೆನ್ನಾಗಿ ಹೊಂದಿಕೊಳ್ಳುತ್ತವೆ ಅಲ್ಲವೇ? – ಟ್ರಂಪ್‌ ಪ್ರಶ್ನೆ
    – ಅಧ್ಯಕ್ಷರ ಮಾತಿಗೆ ಹೌದು ಎನ್ನುತ್ತಾ ತಲೆಯಾಡಿಸಿದ ಶೆಹಬಾಜ್ ಷರೀಫ್

    ವಾಷಿಂಗ್ಟನ್‌/ಕೈರೋ: ಭಾರತ ಒಂದು ಅದ್ಭುತ ದೇಶ, ನನ್ನ ಒಳ್ಳೆಯ ಸ್ನೇಹಿತ ಕೂಡ ಹೌದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಎದುರಲ್ಲೇ ಭಾರತ & ಮೋದಿ ಅವರನ್ನ ಹಾಡಿಹೊಗಳಿದ್ದಾರೆ.

    ಈಜಿಪ್ಟ್‌ನಲ್ಲಿ ಸೋಮವಾರ ನಡೆದ ಗಾಜಾ ಶಾಂತಿ ಸಮ್ಮೇಳದಲ್ಲಿ ಮಾತನಾಡಿದ ಟ್ರಂಪ್‌, ಭಾರತ ಹಾಗೂ ಪ್ರಧಾನಿ ಮೋದಿ ಅವರನ್ನ ಹೊಗಳಿದ್ರು. ಈಗ ಭಾರತ ಮತ್ತು ಪಾಕಿಸ್ತಾನ ಚೆನ್ನಾಗಿ ಹೊಂದಿಕೊಳ್ಳುತ್ತವೇ ಅಲ್ಲವೇ ಎಂದೂ ಶೆಹಬಾಜ್ ಷರೀಫ್ (Shehbaz Sharif) ಕಡೆಗೆ ತಿರುಗಿ ಕೇಳಿದರು. ಇದಕ್ಕೆ ಪಾಕ್‌ ಪ್ರಧಾನಿ (Pak PM) ಹೌದು ಎನ್ನುತ್ತಲೇ ಸಕಾರಾತ್ಮಕವಾಗಿ ತಲೆಯಾಡಿಸಿದ್ರು. ಈ ವಿಡಿಯೋ ತುಣುಕುಗಳೀಗ ಸೋಷಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗ್ತಿವೆ.

    ಭಾಷಣದ ವೇಳೆ ಮುಗುಳುನಗೆ ಬೀರಿ ಮಾತನಾಡಿದ ಟ್ರಂಪ್‌, ಭಾರತವು (India) ಒಂದು ಅದ್ಭುತ ದೇಶ, ನನ್ನ ಇಳ್ಳೆಯ ಸ್ನೇಹಿತನ ನೇತೃತ್ವದಲ್ಲಿ ಅದ್ಭುತ ಕೆಲಸಗಳನ್ನ ಮಾಡುತ್ತಿದೆ. ಭಾರತ ಮತ್ತು ಪಾಕಿಸ್ತಾನ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ ಎಂದರು.

    ಪಾಕ್‌ ಮಿಲಿಟರಿ ನಾಯಕತ್ವ ಶ್ಲಾಘನೆ
    ಇನ್ನೂ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರೊಂದಿಗೆ ಗಾಜಾ ಶಾಂತಿ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿದ್ದ ಟ್ರಂಪ್, ಪಾಕಿಸ್ತಾನದ ಮಿಲಿಟರಿ ನಾಯಕತ್ವವನ್ನು ಶ್ಲಾಘಿಸಿದರು. ಉತ್ತಮ ಸ್ನೇಹಿತರು ಒಟ್ಟಾಗಿ ಕೆಲಸ ಮಾಡುವುದರಿಂದ ಶಾಂತಿ ನೆಲೆಸುತ್ತದೆ ಎಂದು ಭಾರತ-ಪಾಕ್‌ ಒಂದಾಗುವಂತೆ ಪರೋಕ್ಷವಾಗಿ ಹೇಳಿದರು. ಇದೇ ವೇಳೆ ತಮ್ಮ ಹಿಂದೆ ನಿಂತಿದ್ದ ಶಹಬಾಜ್ ಷರೀಫ್ ಅವರನ್ನ ತೋರಿಸುತ್ತಾ, ಇದನ್ನ ಸಾಧ್ಯವಾಗಿಸಲು ಸಹಕರಿಸುತ್ತಾರೆ… ಹೌದಲ್ಲವೇ ಎಂದು ವ್ಯಂಗ್ಯ ಮಾಡಿದರು.

    ಇಸ್ರೇಲ್‌ ಸಂಸತ್ತಿನಲ್ಲಿ ಟ್ರಂಪ್‌ ಭಾಷಣ
    ಇದಕ್ಕೂ ಮುನ್ನ ಇಸ್ರೇಲ್ (Isreal) ಮತ್ತು ಗಾಜಾದ ಹಮಾಸ್ (Hamas) ಬಂಡುಕೋರರ ನಡುವಿನ ಸುದೀರ್ಘ 2 ವರ್ಷಗಳ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇಸ್ರೇಲ್‌ ಸಂಸತ್ತನ್ನು ಉದ್ದೇಶಿಸಿ ಟ್ರಂಪ್‌ ಮಾತನಾಡಿದ್ದರು. ಹಲವು ವರ್ಷಗಳ ನಿರಂತರ ಯುದ್ಧದ ನಂತರ ಇಂದು ಆಕಾಶವು ಶಾಂತವಾಗಿದೆ. ಬಂದೂಕುಗಳು ಮೌನವಾಗಿವೆ. ಸೈರನ್‌ಗಳು ಶಬ್ಧ ಮಾಡುವುದನ್ನು ನಿಲ್ಲಿಸಿವೆ. ಶಾಂತಿಯಿಂದ ಇರುವ ಪವಿತ್ರ ಭೂಮಿಯ ಮೇಲೆ ಸೂರ್ಯ ಉದಯಿಸುತ್ತಿದ್ದಾನೆ ಎಂದು ಹೇಳಿದರು.

    ಒತ್ತೆಯಾಳುಗಳು ಹಿಂತಿರುಗಿದ್ದಾರೆ, ಅದನ್ನು ಹೇಳಲು ತುಂಬಾ ಸಂತೋಷವಾಗುತ್ತಿದೆ. ನಾನು ಕ್ರೂರಿಯಾಗಿ ವರ್ತಿಸುತ್ತೇನೆ ಎಂದು ಎಲ್ಲರೂ ಭಾವಿಸಿದ್ದರು. ನಾನು ಎಲ್ಲರೊಂದಿಗೆ ಯುದ್ಧಕ್ಕೆ ಹೋಗುತ್ತೇನೆ ಎಂದು ಹಿಲರಿ ಕ್ಲಿಂಟನ್ ಹೇಳಿದ್ದು ನನಗೆ ನೆನಪಿದೆ. ಆದರೆ ನಾನು ಯುದ್ಧ ಬಯಸುವ ವ್ಯಕ್ತಿಯಲ್ಲ. ನನ್ನದು ಯುದ್ಧ ನಿಲ್ಲಿಸುವ ವ್ಯಕ್ತಿತ್ವ ತಾವೇ ಬೆನ್ನುತಟ್ಟಿಕೊಂಡರು.

  • ಟ್ರಂಪ್‌ ಭಾಷಣಕ್ಕೆ ಅಡ್ಡಿ – ಇಬ್ಬರು ಇಸ್ರೇಲ್‌ ಸಂಸದರನ್ನು ಹೊರದಬ್ಬಿದ ಸಿಬ್ಬಂದಿ

    ಟ್ರಂಪ್‌ ಭಾಷಣಕ್ಕೆ ಅಡ್ಡಿ – ಇಬ್ಬರು ಇಸ್ರೇಲ್‌ ಸಂಸದರನ್ನು ಹೊರದಬ್ಬಿದ ಸಿಬ್ಬಂದಿ

    ಜೆರುಸಲೆಮ್: ಡೊನಾಲ್ಡ್‌ ಟ್ರಂಪ್‌ (Donald Trump) ಭಾಷಣಕ್ಕೆ ಅಡ್ಡಿ ಪಡಿಸಿದ್ದಕ್ಕೆ ಇಸ್ರೇಲ್‌ ಸಂಸದರನ್ನು ಸಂಸತ್‌ ಭವನದಿಂದಲೇ ಬಲವಂತವಾಗಿ ಹೊರಹಾಕಿದ ಪ್ರಸಂಗ ಇಂದು ನಡೆಯಿತು.

    ಇಸ್ರೇಲ್ ಮತ್ತು ಗಾಜಾದ ಹಮಾಸ್ ಬಂಡುಕೋರರ ನಡುವಿನ ಸುದೀರ್ಘ 2 ವರ್ಷಗಳ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇಸ್ರೇಲ್‌ ಸಂಸತ್ತನ್ನು ಉದ್ದೇಶಿಸಿ ಟ್ರಂಪ್‌ ಭಾಷಣ ಮಾಡಿದರು.

     

    ಹಲವು ವರ್ಷಗಳ ನಿರಂತರ ಯುದ್ಧದ ನಂತರ ಇಂದು ಆಕಾಶವು ಶಾಂತವಾಗಿದೆ. ಬಂದೂಕುಗಳು ಮೌನವಾಗಿವೆ. ಸೈರನ್‌ಗಳು ಶಬ್ಧ ಮಾಡುವುದನ್ನು ನಿಲ್ಲಿಸಿವೆ. ಶಾಂತಿಯಿಂದ ಇರುವ ಪವಿತ್ರ ಭೂಮಿಯ ಮೇಲೆ ಸೂರ್ಯ ಉದಯಿಸುತ್ತಿದ್ದಾನೆ ಎಂದು ಹೇಳಿದರು. ಇದನ್ನೂ ಓದಿ:  ಯುದ್ಧದ ಅಂತ್ಯ ಮಾತ್ರವಲ್ಲ, ಇದು ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯ: ಟ್ರಂಪ್‌

    ಭಾಷಣ ಮಾಡುತ್ತಿದ್ದಾಗ ಟ್ರಂಪ್ ವಿರುದ್ಧ ಹೀಬ್ರೂ ಭಾಷೆಯಲ್ಲಿ ಸಂಸದರಾದ ಐಮನ್ ಒಡೆಹ್ ಮತ್ತು ಓಫರ್ ಕ್ಯಾಸಿಫ್ ಘೋಷಣೆ ಕೂಗಿದರು. ಇವರಿಬ್ಬರು ಪ್ಯಾಲೆಸ್ಟೈನ್ ರಾಷ್ಟ್ರದ ಮಾನ್ಯತೆಗಾಗಿ ಕರೆ ನೀಡುವ ಫಲಕಗಳನ್ನು ಹಿಡಿದಿದ್ದರು. ಘೊಷಣೆ ಕೂಗಿದ ಬೆನ್ನಲ್ಲೇ ಭದ್ರತಾ ಸಿಬ್ಬಂದಿ ಬಲವಂತವಾಗಿ ಎಡಪಂಥಿಯ ಸಂಸದರನ್ನು ಹೊರಗೆ ಎಳೆದುಕೊಂಡು ಹೋದರು.

  • ಯುದ್ಧದ ಅಂತ್ಯ ಮಾತ್ರವಲ್ಲ, ಇದು ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯ: ಟ್ರಂಪ್‌

    ಯುದ್ಧದ ಅಂತ್ಯ ಮಾತ್ರವಲ್ಲ, ಇದು ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯ: ಟ್ರಂಪ್‌

    – ಇಸ್ರೇಲ್‌, ಹಮಾಸ್‌ ನಡುವೆ ಕದನ ವಿರಾಮ
    – ಇಸ್ರೇಲ್‌ ಸಂಸತ್ತಿನಲ್ಲಿ ಟ್ರಂಪ್‌ ಭಾಷಣ

    ಜೆರುಸಲೆಮ್: ಯುದ್ಧದ ಅಂತ್ಯ ಮಾತ್ರವಲ್ಲ. ಇದು ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಬಣ್ಣಿಸಿದ್ದಾರೆ.

    ಇಸ್ರೇಲ್(Isreal)  ಮತ್ತು ಗಾಜಾದ ಹಮಾಸ್ (Hamas) ಬಂಡುಕೋರರ ನಡುವಿನ ಸುದೀರ್ಘ 2 ವರ್ಷಗಳ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇಸ್ರೇಲ್‌ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅವರು, ಹಲವು ವರ್ಷಗಳ ನಿರಂತರ ಯುದ್ಧದ ನಂತರ ಇಂದು ಆಕಾಶವು ಶಾಂತವಾಗಿದೆ. ಬಂದೂಕುಗಳು ಮೌನವಾಗಿವೆ. ಸೈರನ್‌ಗಳು ಶಬ್ಧ ಮಾಡುವುದನ್ನು ನಿಲ್ಲಿಸಿವೆ. ಶಾಂತಿಯಿಂದ ಇರುವ ಪವಿತ್ರ ಭೂಮಿಯ ಮೇಲೆ ಸೂರ್ಯ ಉದಯಿಸುತ್ತಿದ್ದಾನೆ ಎಂದು ಹೇಳಿದರು.  ಇದನ್ನೂ ಓದಿ:  ಗಾಜಾ ಯುದ್ಧ ಅಂತ್ಯ | ಇಸ್ರೇಲ್‌ನ 7 ಒತ್ತೆಯಾಳುಗಳನ್ನ ಬಿಡುಗಡೆ ಮಾಡಿದ ಹಮಾಸ್

    ಒತ್ತೆಯಾಳುಗಳು ಹಿಂತಿರುಗಿದ್ದಾರೆ, ಅದನ್ನು ಹೇಳಲು ತುಂಬಾ ಸಂತೋಷವಾಗುತ್ತಿದೆ. ನಾನು ಕ್ರೂರಿಯಾಗಿ ವರ್ತಿಸುತ್ತೇನೆ ಎಂದು ಎಲ್ಲರೂ ಭಾವಿಸಿದ್ದರು. ನಾನು ಎಲ್ಲರೊಂದಿಗೆ ಯುದ್ಧಕ್ಕೆ ಹೋಗುತ್ತೇನೆ ಎಂದು ಹಿಲರಿ ಕ್ಲಿಂಟನ್ ಹೇಳಿದ್ದು ನನಗೆ ನೆನಪಿದೆ. ಆದರೆ ನಾನು ಯುದ್ಧ ಬಯಸುವ ವ್ಯಕ್ತಿಯಲ್ಲ. ನನ್ನದು ಯುದ್ಧ ನಿಲ್ಲಿಸುವ ವ್ಯಕ್ತಿತ್ವ ಎಂದರು. ಇದನ್ನೂ ಓದಿ:  ಯುದ್ಧಗಳನ್ನ ಪರಿಹರಿಸೋದ್ರಲ್ಲಿ ನಾನು ನಿಪುಣ; ಭಾರತ-ಪಾಕ್‌ ಕದನ ವಿರಾಮ ಬಗ್ಗೆ ಮತ್ತೆ ಬೆನ್ನುತಟ್ಟಿಕೊಂಡ ಟ್ರಂಪ್‌

    ಟ್ರಂಪ್ ರಾಜಧಾನಿ ಟೆಲ್ ಅವೀವ್‌ಗೆ ಬಂದಿಳಿದಾಗ ಅದ್ಧೂರಿ ಸ್ವಾಗತ ನೀಡಲಾಯಿತು. ಯುದ್ಧ ನಿಲ್ಲಿಸಲು ಮಧ್ಯಸ್ಥಿತಿಕೆ ವಹಿಸಿದ್ದಕ್ಕೆ ಇಸ್ರೇಲ್‌ ಸಂಸದರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದರು.

     

  • ಗಾಜಾ ಯುದ್ಧ ಅಂತ್ಯ | ಇಸ್ರೇಲ್‌ನ 7 ಒತ್ತೆಯಾಳುಗಳನ್ನ ಬಿಡುಗಡೆ ಮಾಡಿದ ಹಮಾಸ್

    ಗಾಜಾ ಯುದ್ಧ ಅಂತ್ಯ | ಇಸ್ರೇಲ್‌ನ 7 ಒತ್ತೆಯಾಳುಗಳನ್ನ ಬಿಡುಗಡೆ ಮಾಡಿದ ಹಮಾಸ್

    – 2 ವರ್ಷಗಳಿಂದ ಒತ್ತೆಯಾಳುಗಳಾಗಿದ್ದ 20 ಜನರ ಪೈಕಿ 7 ಮಂದಿ ರಿಲೀಸ್

    ಟೆಲ್‌ಅವಿವ್: ಗಾಜಾದಲ್ಲಿ (Gaza) ಯುದ್ಧ ಅಂತ್ಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಣೆ ಬೆನ್ನಲ್ಲೇ ಮೊದಲ ಹಂತವಾಗಿ ಇಸ್ರೇಲ್‌ನ (Israel) 7 ಮಂದಿ ಒತ್ತೆಯಾಳುಗಳನ್ನ ಹಮಾಸ್ (Hamas) ಬಿಡುಗಡೆ ಮಾಡಿದೆ.

    ಇಸ್ರೇಲ್-ಹಮಾಸ್ ಕದನ ವಿರಾಮದ ಭಾಗವಾಗಿ ಮೊದಲ ಹಂತದಲ್ಲಿ 7 ಒತ್ತೆಯಾಳುಗಳನ್ನು ಹಮಾಸ್ ರೆಡ್‌ಕ್ರಾಸ್‌ಗೆ ಹಸ್ತಾಂತರಿಸಿದೆ. ಆದರೆ ಅವರ ಸದ್ಯದ ಸ್ಥಿತಿಯ ಬಗ್ಗೆ ಮಾಹಿತಿ ಇಲ್ಲ. ಜೊತೆಗೆ ಇಸ್ರೇಲ್ ವಶದಲ್ಲಿರುವ 1,900ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಕೈದಿಗಳಿಗೆ ಬದಲಾಗಿ 20 ಒತ್ತೆಯಾಳುಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಹಮಾಸ್ ಹೇಳಿದೆ. ಅದರಂತೆ 20 ಮಂದಿ ಪೈಕಿ 7 ಒತ್ತೆಯಾಳುಗಳನ್ನ ಬಿಡುಗಡೆಗೊಳಿಸಲಾಗಿದೆ.ಇದನ್ನೂ ಓದಿ: Gaza War Is Over | ಗಾಜಾ ಯುದ್ಧ ಮುಗಿದಿದೆ – ಟ್ರಂಪ್‌ ಘೋಷಣೆ; ಇಸ್ರೇಲ್, ಹಮಾಸ್ ನಡ್ವೆ ಒತ್ತೆಯಾಳು-ಕೈದಿ ವಿನಿಮಯ ಶುರು

    ಹಮಾಸ್ ಬಿಡುಗಡೆಗೊಳಿಸಿರುವ ಒತ್ತೆಯಾಳುಗಳು ಸದ್ಯ ರೆಡ್‌ಕ್ರಾಸ್ ನಿಯಂತ್ರಣದಲ್ಲಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ಬಹಿರಂಗಪಡಿಸಿದ್ದು, ಒತ್ತೆಯಾಳುಗಳ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

    ಗಾಜಾದಲ್ಲಿ ಯುದ್ಧ ಅಂತ್ಯಗೊಂಡು, ಮಧ್ಯಪ್ರಾಚ್ಯದಲ್ಲಿ ಈಗ ಶಾಂತಿ ನೆಲೆಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಹಮಾಸ್ ಒತ್ತೆಯಾಳುಗಳ ಬಿಡುಗಡೆಗೂ ಮುನ್ನ ಟ್ರಂಪ್ ಪಶ್ಚಿಮ ಏಷ್ಯಾಕ್ಕೆ ತೆರಳಿದ್ದಾರೆ. ಇದಕ್ಕೂ ಮುನ್ನ ಏರ್‌ಫೋರ್ಸ್ ಒನ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮುಗಿದಿದೆ ಎಂದು ತಿಳಿಸಿದ್ದರು.

    ಇದೊಂದು ವಿಶೇಷ ಕಾರ್ಯಕ್ರಮ, ಸಹಜವಾಗಿ ಒಂದು ಕಡೆ ಸಂತೋಷ ಇದ್ರೆ, ಮತ್ತೊಂದು ಕಡೆ ದುಃಖ ಇದೆ. ಆದ್ರೆ ಎಲ್ಲರೂ ಅಚ್ಚರಿಯಾಗಿರುವುದು, ರೋಮಾಂಚನಗೊಂಡಿರುವುದು ಇದೇ ಮೊದಲು. ಆದ್ರೆ ಯುದ್ಧ ನಿಲ್ಲಿಸುವ ಭಾಗವಾಗಿರುವುದು ನಿಜಕ್ಕೂ ನನಗೆ ಗೌರವ. ಇನ್ಮುಂದೆ ನಾವು ಹಿಂದೆಂದೂ ಕಾಣದ ಅದ್ಭುತ ಕ್ಷಣಗಳನ್ನು ಕಳೆಯಲಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದರು.

    ಈ ಯುದ್ಧ ನಿಲ್ಲಿಸಿದ್ದರಿಂದ ಯಹೂದಿಗಳು, ಮುಸ್ಲಿಮರು ಅಥವಾ ಅರಬ್ ದೇಶಗಳಾಗಿರಬಹುದು ಎಲ್ಲರೂ ಸಂತೋಷವಾಗಿದ್ದಾರೆ. ಇದರ ಬಳಿಕ ನಾವು ಈಜಿಪ್ಟ್ಗೆ ಹೋಗ್ತಿದ್ದೀವಿ. ಶಕ್ತಿಶಾಲಿ ಮತ್ತು ದೊಡ್ಡ ದೇಶಗಳ ನಾಯಕರನ್ನು ಹಾಗೂ ಅತ್ಯಂತ ಶ್ರೀಮಂತ ದೇಶಗಳನ್ನ ಭೇಟಿಯಾಗುತ್ತೇವೆ. ಅವರೆಲ್ಲರೂ ಈ ಈ ಒಪ್ಪಂದದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದರು.ಇದನ್ನೂ ಓದಿ: ಯುದ್ಧಗಳನ್ನ ಪರಿಹರಿಸೋದ್ರಲ್ಲಿ ನಾನು ನಿಪುಣ; ಭಾರತ-ಪಾಕ್‌ ಕದನ ವಿರಾಮ ಬಗ್ಗೆ ಮತ್ತೆ ಬೆನ್ನುತಟ್ಟಿಕೊಂಡ ಟ್ರಂಪ್‌

    ಯುದ್ಧ ನಿಲ್ಲಿಸೋದ್ರಲ್ಲಿ ನಾನು ನಿಪುಣ:
    ಇದಕ್ಕೂ ಮುನ್ನ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಸೇರಿದಂತೆ ವಿಶ್ವದ ಹಲವು ಸಘರ್ಷಗಳನ್ನು ಪರಿಹರಿಸುವಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದಾಗಿ ಟ್ರಂಪ್ ಮತ್ತೊಮ್ಮೆ ತಮಗೆ ತಾವೇ ಬೆನ್ನುತಟ್ಟಿಕೊಂಡಿದ್ದಾರೆ. ಜೊತೆಗೆ ಇದನ್ನೆಲ್ಲ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಮಾಡಿಲ್ಲ ಎಂದು ಹೇಳಿದ್ದಾರೆ.

    ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಯೋಚಿಸಿ. ಕೆಲ ಯುದ್ಧಗಳು 31, 32, 37 ವರ್ಷಗಳ ಕಾಲ ನಡೆದವು. ಲಕ್ಷಾಂತರ ಜನರು ಸಾವನ್ನಪ್ಪಿದ್ರು. ಆದ್ರೆ ನಾನು ಒಂದು ದಿನದ ಬಳಗಾಗಿ ಯುದ್ಧ ಪರಿಹರಿಸಿದೆ. ವ್ಯಾಪಾರ ಮತ್ತು ಸುಂಕದAತಹ ಆರ್ಥಿಕ ಕ್ರಮಗಳ ಮೂಲಕ ಸಂಘರ್ಷ ಬಗೆಹರಿಸಿದ್ದೇನೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ತಡೆಯಲು, ನಿಮ್ಮ ಬಳಿ ಪರಮಾಣು ಶಸ್ತ್ರಾಸ್ತ್ರಗಳಿವೆ ಅಂತ ನಾನು ಅವರಿಗೆ ಹೇಳಿದ್ದೆ. ನೀವಿಬ್ಬರೂ ಯುದ್ಧಕ್ಕೆ ಹೋದ್ರೆ ನಿಮ್ಮ ಮೇಲೆ 100%, 150% ಮತ್ತು 200% ಸುಂಕ ವಿಧಿಸುತ್ತೇನೆ ಅಂತ ಎಚ್ಚರಿಕೆ ಕೊಟ್ಟಿದ್ದೆ. ಸುಂಕದ ಎಚ್ಚರಿಕೆ ನೀಡಿದ 24 ಗಂಟೆಗಳಲ್ಲಿ ಯುದ್ಧ ನಿಲ್ಲಿಸಿದೆ. ಇಲ್ಲದಿದ್ದರೆ ಈ ಯುದ್ಧ ನಿಲ್ಲುತ್ತಿರಲಿಲ್ಲ ಎಂದು ಬೀಗಿದ್ದಾರೆ.

    ಪಾಕ್-ಅಫ್ಘಾನ್ ಯುದ್ಧವನ್ನೂ ನಿಲ್ಲಿಸುವೆ:
    ನಾನು ಯುದ್ಧಗಳನ್ನು ಪರಿಹರಿಸುವಲ್ಲಿ ನಿಪುಣ. ಇಸ್ರೇಲ್-ಗಾಜಾ ಕದನ ವಿರಾಮ ನಾನು ಪರಿಹರಿಸಿದ 8 ಯುದ್ಧ. ಈಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಸಂಘರ್ಷ ನಡೆಯುತ್ತಿದೆ. ನಾನು ಹಿಂದಿರುಗುವಾಗ ಅದನ್ನೂ ಪರಿಹರಿಸುತ್ತೇನೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.

    ನೊಬೆಲ್ ಶಾಂತಿ ಪ್ರಶಸ್ತಿ ಗೆಲ್ಲುವುದು ತನ್ನ ಗುರಿಯಲ್ಲ. ಆದ್ರೆ ಯುದ್ಧಗಳನ್ನು ನಿಲ್ಲಿಸುವುದು ನನಗೆ ಗೌರವ. 2025 ರಲ್ಲಿ ಇನ್ನೂ ಪ್ರಮುಖ ಕೆಲಸಗಳನ್ನು ಮಾಡಲಾಗುತ್ತದೆ. ಜೀವಗಳನ್ನು ಉಳಿಸುವ ಉದ್ದೇಶದಿಂದ ನಾನು ಈ ಕೆಲಸಗಳನ್ನು ಮಾಡಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.ಇದನ್ನೂ ಓದಿ: ಉಗ್ರರ ಒಳನುಸುಳುವಿಕೆ ತಡೆಯಲು ಬಿಎಸ್‌ಎಫ್ ಕಟ್ಟೆಚ್ಚರ; ಕಾಶ್ಮೀರ ಕಣಿವೆಯಲ್ಲಿ ಭದ್ರತೆ ಹೆಚ್ಚಳ

  • Gaza War Is Over | ಗಾಜಾ ಯುದ್ಧ ಮುಗಿದಿದೆ – ಟ್ರಂಪ್‌ ಘೋಷಣೆ; ಇಸ್ರೇಲ್, ಹಮಾಸ್ ನಡ್ವೆ ಒತ್ತೆಯಾಳು-ಕೈದಿ ವಿನಿಮಯ ಶುರು

    Gaza War Is Over | ಗಾಜಾ ಯುದ್ಧ ಮುಗಿದಿದೆ – ಟ್ರಂಪ್‌ ಘೋಷಣೆ; ಇಸ್ರೇಲ್, ಹಮಾಸ್ ನಡ್ವೆ ಒತ್ತೆಯಾಳು-ಕೈದಿ ವಿನಿಮಯ ಶುರು

    – ಹಮಾಸ್ ಒತ್ತೆಯಾಳು ಬಿಡುಗಡೆಗೂ ಮುನ್ನ ಪಶ್ಚಿಮ ಏಷ್ಯಾಕ್ಕೆ ತೆರಳಿದ ಟ್ರಂಪ್

    ವಾಷಿಂಗ್ಟನ್‌/ಟೆಲ್‌ಅವಿವ್‌: ಗಾಜಾದಲ್ಲಿ ಯುದ್ಧ ಅಂತ್ಯಗೊಂಡಿದ್ದು (Gaza War Is Over), ಮಧ್ಯಪ್ರಾಚ್ಯದಲ್ಲಿ ಈಗ ಶಾಂತಿ ನೆಲೆಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಘೋಷಿಸಿದ್ದಾರೆ.

    ಸದ್ಯ ಹಮಾಸ್ ಒತ್ತೆಯಾಳುಗಳ ಬಿಡುಗಡೆಗೂ (Hamas Hostage Release) ಮುನ್ನ ಪಶ್ಚಿಮ ಏಷ್ಯಾಕ್ಕೆ ಟ್ರಂಪ್‌ ತೆರಳಿದ್ದಾರೆ. ಇದಕ್ಕೂ ಮುನ್ನ ಏರ್ ಫೋರ್ಸ್‌ ಒನ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮುಗಿದಿದೆ ಅನ್ನೊ ವಿಶ್ವಾಸ ನಿಮಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಹೌದು ಯುದ್ಧ ಮುಗಿದಿದೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಯುದ್ಧಗಳನ್ನ ಪರಿಹರಿಸೋದ್ರಲ್ಲಿ ನಾನು ನಿಪುಣ; ಭಾರತ-ಪಾಕ್‌ ಕದನ ವಿರಾಮ ಬಗ್ಗೆ ಮತ್ತೆ ಬೆನ್ನುತಟ್ಟಿಕೊಂಡ ಟ್ರಂಪ್‌

    ಇದೊಂದು ವಿಶೇಷ ಕಾರ್ಯಕ್ರಮ, ಸಹಜವಾಗಿ ಒಂದು ಕಡೆ ಸಂತೋಷ ಇದ್ರೆ, ಮತ್ತೊಂದು ಕಡೆ ದುಃಖ ಇದೆ. ಆದ್ರೆ ಎಲ್ಲರೂ ಅಚ್ಚರಿಯಾಗಿರುವುದು, ರೋಮಾಂಚನಗೊಂಡಿರುವುದು ಇದೇ ಮೊದಲು. ಆದ್ರೆ ಯುದ್ಧ ನಿಲ್ಲಿಸುವ ಭಾಗವಾಗಿರುವುದು ನಿಜಕ್ಕೂ ನನಗೆ ಗೌರವ. ಇನ್ಮುಂದೆ ನಾವು ಹಿಂದೆಂದೂ ಕಾಣದ ಅದ್ಭುತ ಕ್ಷಣಗಳನ್ನು ಕಳೆಯಲಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

    ಮುಂದುವರಿದು.. ಈ ಯುದ್ಧ ನಿಲ್ಲಿಸಿದ್ದರಿಂದ ಯಹೂದಿಗಳು, ಮುಸ್ಲಿಮರು ಅಥವಾ ಅರಬ್‌ ದೇಶಗಳಾಗಿರಬಹುದು ಎಲ್ಲರೂ ಸಂತೋಷವಾಗಿದ್ದಾರೆ. ಇದರ ಬಳಿಕ ನಾವು ಈಜಿಪ್ಟ್‌ಗೆ ಹೋಗ್ತಿದ್ದೀವಿ. ಶಕ್ತಿಶಾಲಿ ಮತ್ತು ದೊಡ್ಡ ದೇಶಗಳ ನಾಯಕರನ್ನು ಹಾಗೂ ಅತ್ಯಂತ ಶ್ರೀಮಂತ ದೇಶಗಳನ್ನ ಭೇಟಿಯಾಗುತ್ತೇವೆ. ಅವರೆಲ್ಲರೂ ಈ ಈ ಒಪ್ಪಂದದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ-ಅಫ್ಘಾನಿಸ್ತಾನ ಜಂಟಿ ಹೇಳಿಕೆ ಸರಿಯಲ್ಲ; ಅಫ್ಘಾನ್‌ ರಾಯಭಾರಿಗೆ ಪಾಕಿಸ್ತಾನ ಸಮನ್ಸ್‌

    ಯುದ್ಧ ನಿಲ್ಲಿಸೋದ್ರಲ್ಲಿ ನಾನು ನಿಪುಣ
    ಇದಕ್ಕೂ ಮುನ್ನ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಸೇರಿದಂತೆ ವಿಶ್ವದ ಹಲವು ಸಘರ್ಷಗಳನ್ನು ಪರಿಹರಿಸುವಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದಾಗಿ ಟ್ರಂಪ್‌ ಮತ್ತೊಮ್ಮೆ ತಮಗೆ ತಾವೇ ಬೆನ್ನುತಟ್ಟಿಕೊಂಡಿದ್ದಾರೆ. ಜೊತೆಗೆ ಇದನ್ನೆಲ್ಲ ನೊಬೆಲ್‌ ಶಾಂತಿ ಪ್ರಶಸ್ತಿಗಾಗಿ ಮಾಡಿಲ್ಲ ಎಂದು ಹೇಳಿದ್ದಾರೆ.

    ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಯೋಚಿಸಿ. ಕೆಲ ಯುದ್ಧಗಳು 31, 32, 37 ವರ್ಷಗಳ ಕಾಲ ನಡೆದವು. ಲಕ್ಷಾಂತರ ಜನರು ಸಾವನ್ನಪ್ಪಿದ್ರು. ಆದ್ರೆ ನಾನು ಒಂದು ದಿನದ ಬಳಗಾಗಿ ಯುದ್ಧ ಪರಿಹರಿಸಿದೆ. ವ್ಯಾಪಾರ ಮತ್ತು ಸುಂಕದಂತಹ ಆರ್ಥಿಕ ಕ್ರಮಗಳ ಮೂಲಕ ಸಂಘರ್ಷ ಬಗೆಹರಿಸಿದ್ದೇನೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ತಡೆಯಲು, ನಿಮ್ಮ ಬಳಿ ಪರಮಾಣು ಶಸ್ತ್ರಾಸ್ತ್ರಗಳಿವೆ ಅಂತ ನಾನು ಅವರಿಗೆ ಹೇಳಿದ್ದೆ. ನೀವಿಬ್ಬರೂ ಯುದ್ಧಕ್ಕೆ ಹೋದ್ರೆ ನಿಮ್ಮ ಮೇಲೆ 100%, 150% ಮತ್ತು 200% ಸುಂಕ ವಿಧಿಸುತ್ತೇನೆ ಅಂತ ಎಚ್ಚರಿಕೆ ಕೊಟ್ಟಿದ್ದೆ. ಸುಂಕದ ಎಚ್ಚರಿಕೆ ನೀಡಿದ 24 ಗಂಟೆಗಳಲ್ಲಿ ಯುದ್ಧ ನಿಲ್ಲಿಸಿದೆ. ಇಲ್ಲದಿದ್ದರೆ ಈ ಯುದ್ಧ ನಿಲ್ಲುತ್ತಿರಲಿಲ್ಲ ಎಂದು ಬೀಗಿದ್ದಾರೆ.

    ಪಾಕ್‌-ಅಫ್ಘಾನ್‌ ಯುದ್ಧವನ್ನೂ ನಿಲ್ಲಿಸುವೆ
    ನಾನು ಯುದ್ಧಗಳನ್ನು ಪರಿಹರಿಸುವಲ್ಲಿ ನಿಪುಣ. ಇಸ್ರೇಲ್‌-ಗಾಜಾ ಕದನ ವಿರಾಮ ನಾನು ಪರಿಹರಿಸಿದ 8 ಯುದ್ಧ. ಈಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಸಂಘರ್ಷ ನಡೆಯುತ್ತಿದೆ. ನಾನು ಹಿಂದಿರುಗುವಾಗ ಅದನ್ನೂ ಪರಿಹರಿಸುತ್ತೇನೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ 58 ಸೈನಿಕರ ಹತ್ಯೆ, 30 ಮಂದಿಗೆ ಗಾಯ: ಅಫ್ಘಾನಿಸ್ತಾನ

    ನೊಬೆಲ್ ಶಾಂತಿ ಪ್ರಶಸ್ತಿ ಗೆಲ್ಲುವುದು ತನ್ನ ಗುರಿಯಲ್ಲ. ಆದ್ರೆ ಯುದ್ಧಗಳನ್ನು ನಿಲ್ಲಿಸುವುದು ನನಗೆ ಗೌರವ. 2025 ರಲ್ಲಿ ಇನ್ನೂ ಪ್ರಮುಖ ಕೆಲಸಗಳನ್ನು ಮಾಡಲಾಗುತ್ತದೆ. ಜೀವಗಳನ್ನು ಉಳಿಸುವ ಉದ್ದೇಶದಿಂದ ನಾನು ಈ ಕೆಲಸಗಳನ್ನು ಮಾಡಿದ್ದೇನೆ ಎಂದು ಟ್ರಂಪ್‌ ಹೇಳಿದ್ದಾರೆ.