Tag: donald trump

  • ವಿದೇಶಿ ವಿದ್ಯಾರ್ಥಿಗಳಿಗೆ ಹಾರ್ವರ್ಡ್ ವಿವಿಯಲ್ಲಿ ಸಿಗಲ್ಲ ಅವಕಾಶ

    ವಿದೇಶಿ ವಿದ್ಯಾರ್ಥಿಗಳಿಗೆ ಹಾರ್ವರ್ಡ್ ವಿವಿಯಲ್ಲಿ ಸಿಗಲ್ಲ ಅವಕಾಶ

    ವಾಷಿಂಗ್ಟನ್: ಅಮೆರಿಕದ (America) ಪ್ರತಿಷ್ಠಿತ ಹಾರ್ವಡ್ ವಿವಿಗೆ (Harvard University) ವಿದೇಶಿ ವಿದ್ಯಾರ್ಥಿಗಳ ನೋಂದಣಿಯನ್ನು ಟ್ರಂಪ್ ಸರ್ಕಾರ (Trump Government) ನಿಷೇಧಿಸಿದ್ದು, ಅಂತಾರಾಷ್ಟ್ರೀಯ ವೀಸಾ ಹೊಂದಿರುವ ವಿದ್ಯಾರ್ಥಿಗಳು ತಕ್ಷಣವೇ ಬೇರೆ ಕಡೆ ವರ್ಗ ಆಗುವಂತೆ ಎಚ್ಚರಿಸಿದೆ.ಇದನ್ನೂ ಓದಿ: ಮ್ಯಾಥ್ಯೂ ಫೋರ್ಡ್ ಸ್ಫೋಟಕ ಫಿಫ್ಟಿ – ಎಬಿಡಿ ವಿಶ್ವದಾಖಲೆ ಸರಿಗಟ್ಟಿದ ವಿಂಡೀಸ್‌ ಬ್ಯಾಟರ್

    ವಿದೇಶಿ ವಿದ್ಯಾರ್ಥಿಗಳು ಕಾನೂನುಬಾಹಿರ ಮತ್ತು ಹಿಂಸಾತ್ಮಕ ಚಟುವಟಿಕೆಗಳ ನಡೆಸುತ್ತಿದ್ದಾರೆ. ಈ ಬಗ್ಗೆ ಏ.30ರ ಒಳಗೆ ಮಾಹಿತಿ ನೀಡುವಂತೆ ಗೃಹ ಇಲಾಖೆ ಹೇಳಿತ್ತು. ಡೆಡ್‌ಲೈನ್ ಮುಗಿದ ಕಾರಣ ಈಗ ಈ ಕ್ರಮ ತೆಗೆದುಕೊಂಡಿದೆ. ಅಲ್ಲದೆ, ವಿವಿಗೆ ಕೊಡಲಾಗುತ್ತಿದ್ದ 2.7 ಮಿಲಿಯನ್ ಡಾಲರ್‌ಗೂ ಅಧಿಕ ಅನುದಾನವನ್ನು ರದ್ದು ಪಡಿಸಿದೆ ಎಂದು ತಿಳಿಸಿದ್ದಾರೆ.

    ಹಾರ್ವರ್ಡ್ ವಿವಿ ಎಡಪಂಥೀಯ ಸಿದ್ಧಾಂತ ಬೆಂಬಲಿಸುತ್ತದೆ ಎಂಬ ಕಾರಣಕ್ಕೆ ಟ್ರಂಪ್ ಈ ರೀತಿ ನಡೆದುಕೊಳುತ್ತಿದ್ದಾರೆ ಎನ್ನಲಾಗುತ್ತಿದ್ದು, ಮತ್ತೊಂದು ಕಡೆ, ಮೇಡ್ ಇನ್ ಅಮೆರಿಕ ಭರಾಟೆಯಲ್ಲಿ ವಿದೇಶಗಳ ಮೇಲೆ ಅಧ್ಯಕ್ಷ ಟ್ರಂಪ್ ವಕ್ರಗಣ್ಣು ಬೀರಿದ್ದಾರೆ. ಜೊತೆಗೆ ಭಾರತ ಸೇರಿದಂತೆ ವಿದೇಶಗಳಿಂದ ರಫ್ತಾಗುವ ಐಫೋನ್‌ಗಳ ಮೇಲೆ ಶೇ.25ರಷ್ಟು ತೆರಿಗೆ ವಿಧಿಸುವುದಾಗಿ ಟ್ರಂಪ್ ಹೇಳಿದ್ದಾರೆ.ಇದನ್ನೂ ಓದಿ:ಮೇ 30ಕ್ಕೆ ಮೋದಿ ಕಾನ್ಪುರ ಭೇಟಿ – ಪಹಲ್ಗಾಮ್‌ನಲ್ಲಿ ಉಗ್ರ ಗುಂಡೇಟಿಗೆ ಬಲಿಯಾದ ಶುಭಂ ದ್ವಿವೇದಿ ಕುಟುಂಬಸ್ಥರ ಭೇಟಿ ಸಾಧ್ಯತೆ

  • ಭಾರತದ ಮೇಲೆ ಪಾಕ್‌ ಹಾರಿಸಿದ್ದ ಅತ್ಯಾಧುನಿಕ AMRAAM ಮಿಸೈಲ್‌ ಟರ್ಕಿಗೆ ಪೂರೈಸಲು ಅಮೆರಿಕ ಡೀಲ್‌!

    ಭಾರತದ ಮೇಲೆ ಪಾಕ್‌ ಹಾರಿಸಿದ್ದ ಅತ್ಯಾಧುನಿಕ AMRAAM ಮಿಸೈಲ್‌ ಟರ್ಕಿಗೆ ಪೂರೈಸಲು ಅಮೆರಿಕ ಡೀಲ್‌!

    – ಸುಮಾರು 19,000 ಕೋಟಿ ಮೌಲ್ಯದ ಒಪ್ಪಂದಕ್ಕೆ ದೊಡ್ಡಣ್ಣ ಅಸ್ತು

    ಇತ್ತೀಚೆಗೆ ಭಾರತ ನಡೆಸಿದ ʻಆಪರೇಷನ್‌ ಸಿಂಧೂರʼ ಸಂದರ್ಭದಲ್ಲಿ ಪಾಕಿಸ್ತಾನದ ಬೆನ್ನಿಗೆ ನಿಂತ ಟರ್ಕಿಗೆ ಬಹಿಷ್ಕಾರ ಹೇರುವ ಮೂಲಕ ಭಾರತ ಬಿಸಿ ಮುಟ್ಟಿಸಿದೆ. ಪಾಕಿಸ್ತಾನಕ್ಕೆ ಬೆಂಬಲ ನೀಡಿದ ನಂತರ ಟರ್ಕಿಯಿಂದ ಆಮದಾಗುತ್ತಿದ್ದ ಅಮೃತ ಶಿಲೆಗಳು, ತಾಜಾ ಸೇಬು, ಚಿನ್ನ, ತರಕಾರಿ, ಸುಣ್ಣ, ಸಿಮೆಂಟ್‌, ಖನಿಜ ತೈಲ ಇತರ ಎಲ್ಲಾ ಉತ್ಪನ್ನಗಳ ಮೇಲೆ ನಿರ್ಬಂಧ ಹೇರಿದೆ. ಅಲ್ಲದೇ ಟರ್ಕಿ ಪ್ರವಾಸೋದ್ಯಮ, ಟರ್ಕಿಯಲ್ಲಿ ಸಿನಿಮಾ ಚಿತ್ರೀಕರಣವನ್ನೂ ನಿಷೇಧಿಸಿ ದೊಡ್ಡ ಆರ್ಥಿಕ ಹೊಡೆತ ನೀಡಿದೆ.

    ಆದ್ರೆ ಇತ್ತ ನನ್ನಿಂದಲೇ ಭಾರತ-ಪಾಕ್‌ ನಡುವಿನ ಕದನ ವಿರಾಮ ಏರ್ಪಟ್ಟಿದ್ದು ಅಂತ ಬೊಬ್ಬೆ ಹೊಡೆದುಕೊಳ್ಳುತ್ತಿರೋ ಟ್ರಂಪ್‌ ಸರ್ಕಾರ ಹಿಂಬಾಗಿಲಿನಿಂದ ಟರ್ಕಿಗೆ ಮಿಲಿಟರಿ ಸಹಾಯ ನೀಡಲು ಮುಂದಾಗಿದೆ. ಹೌದು. ಟರ್ಕಿಗೆ AIM-120C-8 ಸುಧಾರಿತ ಮಧ್ಯಮ-ಶ್ರೇಣಿಯ ಏರ್-ಟು-ಏರ್ ಮಿಸೈಲ್‌ (AMRAAMs) ಪೂರೈಸುವ 225 ಮಿಲಿಯನ್‌ ಡಾಲರ್‌ (ಸುಮಾರು 19 ಸಾವಿರ ಕೋಟಿ) ಒಪ್ಪಂದಕ್ಕೆ ಅಮೆರಿಕ ಅನುಮೋದನೆ ನೀಡಿದೆ. ಇದು ಭಾರತದ ಕಳವಳ ಹೆಚ್ಚಿಸಿದೆ.

    ಏನಿದು AMRAAN ಮಿಸೈಲ್‌ ಒಪ್ಪಂದ?
    ವರದಿಗಳ ಪ್ರಕಾರ, ಟರ್ಕಿಯು 53 AIM-120C-8 AMRAAM ಕ್ಷಿಪಣಿ ಮತ್ತು 6 AIM-120C-8 AMRAAM ಗೈಡೆನ್ಸ್‌ ವಿಭಾಗಗಳ ಬೆಂಬಲ ಕೇಳಿದೆ. ಇದರ ವೆಚ್ಚ 225 ಮಿಲಿಯನ್‌ ಡಾಲರ್‌ ಆಗಲಿದೆ. ಜೊತೆಗೆ ಒಟ್ಟು 79.1 ಮಿಲಿಯನ್‌ ಡಾಲರ್‌ ವೆಚ್ಚದಲ್ಲಿ 60 AIM-9X ಸೈಡ್‌ವೈಂಡರ್ ಬ್ಲಾಕ್-II ಆಲ್ ಅಪ್ ರೌಂಡ್ ಮಿಸೈಲ್‌ ಮತ್ತು 11 AIM-9X ಬ್ಲಾಕ್-II ಟ್ಯಾಕ್ಟಿಕಲ್ ಗೈಡೆನ್ಸ್‌ ಯೂನಿಟ್‌ಗಳನ್ನ ಪಡೆಯಲು ಒಪ್ಪಂದ ಮಾಡಿಕೊಂಡಿದೆ.

    ಅಮೆರಿಕದ ಬಳಿಕ NATO ಮೈತ್ರಿಕೂಟದಲ್ಲಿ 2ನೇ ಅತಿದೊಡ್ಡ ಸಶಸ್ತ್ರ ಪಡೆಗಳನ್ನು ಹೊಂದಿರುವ ಟರ್ಕಿ ಇದೀಗ ಅತ್ಯಾಧುನಿಕ AIM-120C-8 AMRAAM ಗಳು ಮತ್ತು AIM-9X ಸೈಡ್‌ವೈಂಡರ್‌ಗಳನ್ನ ಉಡಾಯಿಸಬಲ್ಲ ಎಫ್‌-16 ವಿಮಾನಗಳ ಸಮೂಹವನ್ನೂ ಹೊಂದಿದೆ. AIM-120C-8 ಕ್ಷಿಪಣಿಯು ತನ್ನ ವ್ಯಾಪ್ತಿಗೂ ಮೀರಿದ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಒಟ್ಟಾರೆಯಾಗಿ ಈ ಶಸ್ತ್ರಾಸ್ತ್ರ ಒಪ್ಪಂದವು ಟರ್ಕಿಯ ವಾಯು ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಹಾಯಕವಾಗಲಿದೆ.

    ನಿರಂತರ ಅಭಿವೃದ್ಧಿ
    ಟರ್ಕಿಯ ರಾಜಧಾನಿ ಅಂಕಾರ ತನ್ನ ವಾಯು ರಕ್ಷಣಾ ಸಾಮರ್ಥ್ಯವನ್ನು ಕಾಲಕಾಲಕ್ಕೆ ಮೇಲ್ದರ್ಜೆಗೆ ಏರಿಸುತ್ತಿದೆ. ಈ ನಡುವೆ ಅಮೆರಿಕ ಜೊತೆಗಿನ ಈ ಮಹತ್ವದ ಒಪ್ಪಂದ ನಡೆದಿದೆ. ಅಮೆರಿಕ ಸರಬರಾಜು ಮಾಡಲಿರುವ ಈ ಕ್ಷಿಪಣಿಗಳು ಅಂಕಾರಾದ ವಾಯುಪ್ರದೇಶವನ್ನ ಸುರಕ್ಷಿತಗೊಳಿಸುವ ಮತ್ತು ತನ್ನ ನೆಲದಲ್ಲಿ ನೆಲೆಸಿರುವ ಯುಎಸ್ ಸಿಬ್ಬಂದಿಯನ್ನ ರಕ್ಷಿಸುವುದಕ್ಕೂ ಸದುಪಯೋಗವಾದಂತಾಗಿದೆ.

    2019ರಲ್ಲಿ ಟರ್ಕಿಯು ರಷ್ಯಾ ನಿರ್ಮಿತ ಎಸ್‌-400 ಡಿಫೆನ್ಸ್‌ ಸಿಸ್ಟಮ್‌ ಅನ್ನು ಖರೀದಿ ಮಾಡಿತ್ತು. ಇದರಿಂದ ಕೆರಳಿದ್ದ ಅಮೆರಿಕ ಕಾಟ್ಸಾ (CAATSA) ಕಾಯ್ದೆ ಅಡಿಯಲ್ಲಿ ಟರ್ಕಿಗೆ ನಿರ್ಬಂಧ ಹೇರಿತ್ತು. ಇದರಿಂದ ಟರ್ಕಿಯು ಅಮೆರಿಕದ F-35 ಫೈಟರ್ ಜೆಟ್ ಕಾರ್ಯಕ್ರಮದಿಂದ ಹೊರಗುಳಿಯಬೇಕಾಗಿತ್ತು. ಇದೀಗ ಭಾರತ-ಪಾಕ್‌ ಉದ್ವಿಗ್ನತೆ ನಡುವೆ ಮತ್ತೆ ಟರ್ಕಿಗೆ ಶಸ್ತ್ರಾಸ್ತ್ರ ಕಳಿಸಿಕೊಡಲು ಅಮೆರಿಕ ಮುಂದಾಗಿರುವುದು ಕಳವಳಕಾರಿಯಾಗಿದೆ.

    ಟರ್ಕಿಗೆ ನೀಡಲು ಮುಂದಾಗಿರುವ AMRAAM ಏರ್‌-ಟು-ಏರ್‌ ಮಿಸೈಲ್‌ ವಿಶ್ವದ ಅತ್ಯಂತ ಅತ್ಯಾಧುನಿಕ ವಾಯು ರಕ್ಷಣಾ ಪ್ರಾಬಲ್ಯ ಆಯುಧ ಎಂದು ಬಣ್ಣಿಸಲಾಗಿದೆ. ಇದನ್ನ 4,900ಕ್ಕೂ ಹೆಚ್ಚು ಲೈವ್-ಫೈರ್ ಸನ್ನಿವೇಶಗಳಲ್ಲಿ ಪರೀಕ್ಷಿಸಲಾಗಿದೆ. ಈ ಕ್ಷಿಪಣಿಯನ್ನು F-15, F-16, F/A-18, F-22 ರಾಪ್ಟರ್, ಯೂರೋಫೈಟರ್ ಟೈಫೂನ್, ಗ್ರಿಪೆನ್, ಟೊರ್ನಾಡೊ, ಹ್ಯಾರಿಯರ್ ಮತ್ತು F-35ನ ಎಲ್ಲಾ ರೂಪಾಂತರಗಳು ಸೇರಿದಂತೆ ಬಹು ಯುದ್ಧ ವಿಮಾನಗಳ ಮೂಲಕ ಹಾರಿಸಬಹುದಾಗಿದೆ.

    ಭಾರತದ ಮೇಲೆ ಪಾಕ್‌ ಬಳಸಿದ್ದ ಮಿಸೈಲ್‌ ಈಗ ಟರ್ಕಿಗೆ
    2019ರ ಫೆಬ್ರವರಿ 19ರಂದು ನಡೆದ ಪುಲ್ವಾಮಾ ದಾಳಿಯ ಬಳಿಕ ಭಾರತ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿತ್ತು. ಈ ಸಂದರ್ಭದಲ್ಲಿ ಎಫ್‌-16 ಫೈಟರ್‌ ಜೆಟ್‌ ಮೂಲಕ ಪಾಕಿಸ್ತಾನ ಈಗ ಟರ್ಕಿಗೆ ನೀಡಲು ಮುಂದಾಗಿರುವ AMRAAM ಕ್ಷಿಪಣಿಗಳನ್ನ ಹಾರಿಸಿತ್ತು. ಪಾಕ್‌ ಈ ಕ್ಷಿಪಣಿ ಬಳಸಿತ್ತು ಎಂಬುದಕ್ಕೆ ಭಾರತ ಅಮೆರಿಕಕ್ಕೆ ಸಾಕ್ಷ್ಯವನ್ನೂ ನೀಡಿತ್ತು. ಇದೀಗ ಅದೇ ಮಿಸೈಲ್‌ ಅನ್ನು ಟರ್ಕಿಗೆ ಕೊಡಲು ಅಮೆರಿಕ ಒಪ್ಪಂದ ಮಾಡಿಕೊಂಡಿದೆ.

    ಅಮೆರಿಕ – ಟರ್ಕಿ ಸಂಬಂಧ ಹೇಗಿದೆ?
    ಅಮೆರಿಕ ಮತ್ತು ಟರ್ಕಿ ನಡುವಿನ ಮಿಲಿಟರಿ ಸಹಕಾರ ಈಗಲೂ ಮುಂದುವರೆದಿದೆ. ಏಕೆಂದರೆ ದಶಕಗಳಿಂದ, ಟರ್ಕಿಯು ಅಮೆರಿಕದ ರಕ್ಷಣಾ ರಫ್ತುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದು ಹಳೆಯ ಎಫ್ -4 ಫ್ಯಾಂಟಮ್‌ಗಳು ಮತ್ತು ಬ್ಲ್ಯಾಕ್ ಹಾಕ್ ಮತ್ತು ಚಿನೂಕ್‌ನಂತಹ ಅಮೆರಿಕನ್‌ ಚಾಪರ್‌ಗಳ ಜೊತೆಗೆ ಎಫ್-16 ಜೆಟ್‌ಗಳಂತಹ ದೊಡ್ಡ ಯುದ್ಧ ವಿಮಾನಗಳನ್ನೂ ಪಡೆದುಕೊಂಡಿದೆ. ಭೂಮಿ ಮತ್ತು ಸಮುದ್ರದಲ್ಲಿ, M60 ಪ್ಯಾಟನ್ ಯುದ್ಧ ಟ್ಯಾಂಕರ್‌ಗಳು, M113 ಶಸ್ತ್ರಸಜ್ಜಿತ ವಾಹನಗಳು ಸೇರಿದಂತೆ ಯುಎಸ್‌ ನಿರ್ಮಿತ ಉಪಕರಣಗಳನ್ನ ಟರ್ಕಿ ತನ್ನ ಸೇನೆಗೆ ನಿಯೋಜಿಸಿದೆ. ಸೈಡ್‌ವಿಂಡರ್ ಮತ್ತು ಮಾವೆರಿಕ್‌ನಂತಹ ಕ್ಷಿಪಣಿಗಳನ್ನ ವಾಯುಪಡೆಗೆ ನಿಯೋಜಿಸಿದೆ.

    ಅಮೆರಿಕವು ಟರ್ಕಿಗೆ C-130 ಹರ್ಕ್ಯುಲಸ್ ಸಾರಿಗೆ ವಿಮಾನ ಮತ್ತು KC-135 ಇಂಧನ ತುಂಬುವ ಟ್ಯಾಂಕರ್‌ಗಳನ್ನ ಸಹ ಪೂರೈಸಿದೆ. ಟರ್ಕಿಯು ಡ್ರೋನ್ ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಿದ್ದರೂ, ಅದು ಮೊದಲು ಅಮೆರಿಕ ನಿರ್ಮಿತ ಕಣ್ಗಾವಲು UAV ಗಳನ್ನು (Unmanned Aerial Vehicle) ಅವಲಂಬಿಸಿದೆ. ಮುಂದಿನ ದಿನಗಳಲ್ಲಿ ವಿಮಾನ ಖರೀದಿಗಾಗಿ ಬೋಯಿಂಗ್‌ ಜೊತೆಗೆ ಮಾತುಕತೆ ನಡೆಸುತ್ತಿದೆ.

    ಒಟ್ಟಾರೆಯಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದ ಅಮೆರಿಕ ಇದೀಗ ಟರ್ಕಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಪೂರೈಸಲು ಒಪ್ಪಂದ ಮಾಡಿಕೊಂಡಿರುವುದು ಟ್ರಂಪ್‌ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗುವಂತೆ ಮಾಡಿದೆ.

  • ಉಕ್ರೇನ್ ಸಂಘರ್ಷ ಕೊನೆಗೊಳಿಸಲು ರಷ್ಯಾ ಸಿದ್ಧ – 2 ಗಂಟೆಗೂ ಹೆಚ್ಚುಕಾಲ ಟ್ರಂಪ್‌-ಪುಟಿನ್‌ ಮಾತುಕತೆ

    ಉಕ್ರೇನ್ ಸಂಘರ್ಷ ಕೊನೆಗೊಳಿಸಲು ರಷ್ಯಾ ಸಿದ್ಧ – 2 ಗಂಟೆಗೂ ಹೆಚ್ಚುಕಾಲ ಟ್ರಂಪ್‌-ಪುಟಿನ್‌ ಮಾತುಕತೆ

    ಮಾಸ್ಕೋ: ಉಕ್ರೇನ್‌ ಜೊತೆಗಿನ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ರಷ್ಯಾ (Russia) ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದಾರೆ.

    ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಜೊತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೂರವಾಣಿ ಮೂಲಕ ಮಾತುಕತೆ ನಡೆಸಿ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದರು. ಈ ವಿಚಾರವಾಗಿ ಇಬ್ಬರ ನಡುವೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಯಿತು. ಇದೇ ವೇಳೆ ಇಬ್ಬರೂ ಸಹ ಯುದ್ಧ ಸೂಕ್ಷ್ಮತೆಗಳ ಕುರಿತು ಚರ್ಚಿಸಿದರು. ಮಾಸ್ಕೋ ಮತ್ತು ಕೈವ್‌ ನಡುವಿನ ಸಂಘರ್ಷವನ್ನು ಪರಿಹರಿಸುವ ಮಾರ್ಗಗಳು ಹಾಗೂ ಕದನ ವಿರಾಮ ಸಂಭವಿಸದಿದ್ದರೆ ಮುಂದೇನು ಮಾಡಬೇಕು ಎಂಬ ಬಗ್ಗೆಯೂ ಚರ್ಚಿಸಿದ್ರು.

    ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪುಟಿನ್‌, ಟ್ರಂಪ್‌ ಅವರ ಜೊತೆಗಿನ ಇಂದಿನ ಮಾತುಕತೆ ತುಂಬಾ ಉಪಯುಕ್ತವಾಗಿತ್ತು. ಮಾಸ್ಕೋ ಮತ್ತು ಕೈವ್ ನಡುವಿನ ನೇರ ಸಂವಾದವನ್ನು ಪುನರಾರಂಭಿಸಲು ಸಹಾಯ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

    ಉಕ್ರೇನ್‌ನೊಂದಿಗೆ ಭವಿಷ್ಯದ ಶಾಂತಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಲು ರಷ್ಯಾ ಸಿದ್ಧವಾಗಿದೆ. ರಷ್ಯಾ ಮತ್ತು ಉಕ್ರೇನ್ ಎರಡೂ ಕಡೆಯವರು ಸ್ವೀಕಾರಾರ್ಹವಾದ ಹೊಂದಾಣಿಕೆ ಕಂಡುಕೊಳ್ಳಬೇಕು. ನಿರೀಕ್ಷಿತ ಒಪ್ಪಂದಗಳನ್ನ ತಲುಪಿದ್ರೆ ಉಕ್ರೇನ್‌ನೊಂದಿಗೆ ಕದನ ವಿರಾಮ ಸಾಧ್ಯ. ಉಕ್ರೇನ್‌ ನಮ್ಮ ಷರತ್ತುಗಳಿಗೆ ಒಪ್ಪಿದ್ರೆ ಕದನ ವಿರಾಮ ಸಾಧ್ಯವಾಗಲಿದೆ ಎಂದು ಎಂದು ತಿಳಿಸಿದ್ದಾರೆ.

    ಇನ್ನೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಉಕ್ರೇನ್‌ನಲ್ಲಿ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಮಾಸ್ಕೋ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

  • ಪಾಕ್‌ನಿಂದ ಯಾವುದೇ ಪರಮಾಣು ದಾಳಿಯ ಸೂಚನೆ ಬಂದಿಲ್ಲ, ಕದನ ವಿರಾಮದಲ್ಲಿ ಅಮೆರಿಕದ ಪಾತ್ರ ಇಲ್ಲ: ವಿಕ್ರಂ ಮಿಸ್ರಿ

    ಪಾಕ್‌ನಿಂದ ಯಾವುದೇ ಪರಮಾಣು ದಾಳಿಯ ಸೂಚನೆ ಬಂದಿಲ್ಲ, ಕದನ ವಿರಾಮದಲ್ಲಿ ಅಮೆರಿಕದ ಪಾತ್ರ ಇಲ್ಲ: ವಿಕ್ರಂ ಮಿಸ್ರಿ

    ನವದೆಹಲಿ: ಪಾಕಿಸ್ತಾನದಿಂದ ಯಾವುದೇ ಪರಮಾಣು ದಾಳಿಯ ಸೂಚನೆ ಬಂದಿಲ್ಲ, ಅಲ್ಲದೇ ʻಆಪರೇಷನ್‌ ಸಿಂಧೂರʼ (Operation Sindoor) ಕದನ ವಿರಾಮ ಮಾತುಕತೆಯಲ್ಲಿ ಅಮೆರಿಕದ ಪಾತ್ರ ಎಲ್ಲಿಯೂ ಇಲ್ಲ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಂ ಮಿಸ್ರಿ (Vikram Misri) ಸ್ಪಷ್ಟನೆ ನೀಡಿದ್ದಾರೆ.

    ಆಪರೇಷನ್‌ ಸಿಂಧೂರ ಕದನ ವಿರಾಮ (Ceasefire) ಏರ್ಪಟ್ಟ ಬಳಿಕ ಡೊನಾಲ್ಡ್‌ ಟ್ರಂಪ್‌, ಭಾರತ (India) ಮತ್ತು ಪಾಕಿಸ್ತಾನದ (Pakistan) ಮಧ್ಯೆ ನಡೆಯಬಹುದಾಗಿದ್ದ ಪರಮಾಣು ಸಂಘರ್ಷವನ್ನು (Nuclear Conflict) ನಾವು ನಿಲ್ಲಿಸಿದ್ದೇವೆ ಎಂದು ಕ್ರೆಡಿಟ್‌ ಪಡೆಯಲು ಮುಂದಾಗಿದ್ದರು. ಪದೇ ಪದೇ ಈ ವಿಚಾರವನ್ನು ಒತ್ತಿ ಹೇಳುತ್ತಿದ್ದರು. ಈ ಕುರಿತು ವಿಕ್ರಂ ಮಿಸ್ರಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಭಾರತ, ಪಾಕ್‌ ಮಧ್ಯೆ ನಡೆಯಬಹುದಾಗಿದ್ದ ಪರಮಾಣು ಸಂಘರ್ಷ ನಿಲ್ಲಿಸಿದ್ದೇವೆ: ಟ್ರಂಪ್‌

    ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಯ ಸದಸ್ಯರಿಗೆ ಪಾಕಿಸ್ತಾನದಿಂದ ಯಾವುದೇ ಪರಮಾಣು ದಾಳಿಯ ಸೂಚನೆ ಬಂದಿಲ್ಲ. ಕದನ ವಿರಾಮ ಮನವಿ ಇಸ್ಲಾಮಾಬಾದ್‌ನಿಂದ ಬಂದಿದೆ. ನಿರ್ದಿಷ್ಟವಾಗಿ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ದೆಹಲಿಯಲ್ಲಿರುವ ತಮ್ಮ ಹೈಕಮಿಷನ್‌ ಕಚೇರಿಯನ್ನ ಸಂಪರ್ಕಿಸಿದ್ದಾರೆ. ಇದರಲ್ಲಿ ಎಲ್ಲಿಯೂ ಅಮೆರಿಕದ ಮಧ್ಯಸ್ಥಿಕೆ ಇರಲಿಲ್ಲ ಎಂದು ಮಿಶ್ರಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡುವ ಧರ್ಮಶಾಲೆಯಲ್ಲ – ಸುಪ್ರೀಂ

    ಕಳೆದ ಏಪ್ರಿಲ್‌ 22ರಂದು ನಡೆದ ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ʻಆಪರೇಷನ್‌ ಸಿಂಧೂರʼ ಕಾರ್ಯಾಚರಣೆ ನಡೆಸಿತ್ತು. ಮೇ 7ರ ಮಧ್ಯರಾತ್ರಿ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ (PoK) 9 ಉಗ್ರ ನೆಲೆಗಳನ್ನು ಉಡೀಸ್‌ ಮಾಡಿತ್ತು. ಇದನ್ನೂ ಓದಿ: ಬೆಂಗಳೂರಿನ IISc ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಉಗ್ರ ಪಾಕ್‌ನಲ್ಲಿ ಹತ್ಯೆ

    ಇದಾದ ಬಳಿಕ ಪಾಕಿಸ್ತಾನ ಮೇ 8, 9 ಮತ್ತು 10 ರಂದು ಭಾರತದ ಸೇನಾ ನೆಲೆಗಳ ಮೇಲೆ ದಾಳಿಗೆ ಯತ್ನಿಸಿತ್ತು. ಆದ್ರೆ ಪಾಕ್‌ನ ಎಲ್ಲ ದಾಳಿಗಳನ್ನು ವಿಫಲಗೊಳಿಸಿದ್ದ ಭಾರತದ ವಾಯುರಕ್ಷಣಾ ವ್ಯವಸ್ಥೆ, ಮರುದಿನವೇ ಪಾಕಿಸ್ತಾನದ ಪ್ರಮುಖ 9 ವಾಯುನೆಲೆಗಳನ್ನ ಧ್ವಂಸಗೊಳಿಸಿತ್ತು, ಕರಾಚಿ ಬಂದರು, ನೂರ್‌ ಖಾನ್‌ ವಾಯುನೆಲೆಯ ಮೇಲೂ ದಾಳಿ ಮಾಡಿತ್ತು. ಜೊತೆಗೆ ಪಾಕ್‌ನ ರೆಡಾರ್‌ ಕೇಂದ್ರವನ್ನೇ ಛಿದ್ರಗೊಳಿಸಿತ್ತು. ಇದರಿಂದ ಕಂಗಾಲಾದ ಪಾಕ್‌ ಮೇ 10 ರಂದು ಕದನ ವಿರಾಮಕ್ಕೆ ಮನವಿ ಮಾಡಿತು.

  • ಈಗ U Turn – ಕದನ ವಿರಾಮ ಬಿಲ್ಡಪ್ ಕೊಟ್ಟು ಈಗ ತಣ್ಣಗಾದ ಟ್ರಂಪ್‌!

    ಈಗ U Turn – ಕದನ ವಿರಾಮ ಬಿಲ್ಡಪ್ ಕೊಟ್ಟು ಈಗ ತಣ್ಣಗಾದ ಟ್ರಂಪ್‌!

    ದೋಹಾ: ಭಾರತ- ಪಾಕಿಸ್ತಾನ (India- Pakistan) ಮಧ್ಯೆ ಕದನ ವಿರಾಮಕ್ಕೆ (Ceasefire) ನಾನು ನೇರವಾಗಿ ಮಧ್ಯಸ್ಥಿಕೆ (Mediation) ವಹಿಸಿದ್ದೆ ಎಂದು ಬಿಲ್ಡಪ್‌ ಕೊಟ್ಟಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಈಗ ಯೂಟರ್ನ್‌ ಹೊಡೆದಿದ್ದಾರೆ.

    ನಾನೇ ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಹೇಳಲ್ಲ. ಆದರೆ ಭಾರತ-ಪಾಕ್ ಮಧ್ಯೆ ಸಂಘರ್ಷದ ಸಮಸ್ಯೆ ಬಗೆಹರಿಸಲು ಸಹಾಯ ಮಾಡಿದ್ದೆ ಅಷ್ಟೇ ಎಂದಿದ್ದಾರೆ.

    ಕತಾರ್‌ನಲ್ಲಿರುವ ಅಲ್-ಉದೈದ್ ವಾಯುನೆಲೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಹಾಗೆ ಮಾಡಿದೆ ಎಂದು ಹೇಳಲು ಬಯಸುವುದಿಲ್ಲ, ಆದರೆ ನಾನು ಖಂಡಿತವಾಗಿಯೂ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಿದೆ ಎಂದು ತಿಳಿಸಿದರು.

    ನಾನೇ ಭಾರತ- ಪಾಕ್ ಮಧ್ಯೆ ಮಧ್ಯಸ್ಥಿಕೆ ವಹಿಸಿ ಯುದ್ಧ ನಿಲ್ಲುವಂತೆ ಮಾಡಿದ್ದೆ ಎಂದು ಟ್ರಂಪ್‌ ಹೇಳುವ ಮೂಲಕ ತನ್ನ ಬೆನ್ನನ್ನು ತಾನೇ ತಟ್ಟಿದ್ದರು.

    ಕದನ ವಿರಾಮ ಸಂಬಂಧ ಭಾರತ ಅಧಿಕೃತವಾಗಿ ಪ್ರಕಟಿಸುವ ಮೊದಲೇ ಡೊನಾಲ್ಡ್‌ ಟ್ರಂಪ್‌ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ತಿಳಿಸಿದ್ದರು. ಮೇ 12 ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಮೊದಲು ಟ್ರಂಪ್‌ ಮತ್ತೆ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಇದನ್ನೂ ಓದಿ: ತ್ರಾಲ್ ಸೇನಾ ಕಾರ್ಯಾಚರಣೆ – ಎನ್‌ಕೌಂಟರ್‌ಗೂ ಮುನ್ನ ಮನೆಗೆ ವಿಡಿಯೋ ಕಾಲ್, ಶರಣಾಗುವಂತೆ ಬೇಡಿಕೊಂಡಿದ್ದ ತಾಯಿ

    ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆಯಬಹುದಾಗಿದ್ದ ಪರಮಾಣು ಸಂಘರ್ಷವನ್ನು (Nuclear Conflict) ನಾವು ನಿಲ್ಲಿಸಿದ್ದೇವೆ. ಅದು ಕೆಟ್ಟ ಪರಮಾಣು ಯುದ್ಧವಾಗಿರಬಹುದು ಎಂದು ನಾನು ಭಾವಿಸುತ್ತೇನೆ. ಲಕ್ಷಾಂತರ ಜನರು ಮೃತಪಡಬಹುದಿತ್ತು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರ ಕೆಲಸಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದರು. ಇದನ್ನೂ ಓದಿ: ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವೇ? – ರಾಜನಾಥ್ ಸಿಂಗ್

    ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಿಯೂ ತಮ್ಮ ಭಾಷಣದಲ್ಲಿ ಡೊನಾಲ್ಡ್‌ ಟ್ರಂಪ್‌ ಬಗ್ಗೆ ಮಾತನಾಡಿರಲಿಲ್ಲ. ಅಷ್ಟೇ ಅಲ್ಲದೇ ಭಾರತ ಪಾಕಿಸ್ತಾನದ ವಿಚಾರದಲ್ಲಿ ಮೂರನೇಯವರ ಅಗತ್ಯವಿಲ್ಲ. ನಮ್ಮ ಸಮಸ್ಯೆಯನ್ನು ನಾವೇ ಬಗೆ ಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದರು.

    ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ.ಇದರಲ್ಲಿ ಯಾರು ಮಧ್ಯಸ್ಥಿಕೆ ವಹಿಸಿಲ್ಲ ಎಂದು ಭಾರತ ಹೇಳಿಕೊಂಡೇ ಬಂದಿದೆ.

  • ಆಪಲ್‌ ಫ್ಯಾಕ್ಟರಿ ತೆರೆಯಬೇಡಿ, ನೀವು ಭಾರತವನ್ನು ಕಟ್ಟಬೇಡಿ: ಟಿಮ್‌ ಕುಕ್‌ಗೆ ಟ್ರಂಪ್‌ ಸಲಹೆ

    ಆಪಲ್‌ ಫ್ಯಾಕ್ಟರಿ ತೆರೆಯಬೇಡಿ, ನೀವು ಭಾರತವನ್ನು ಕಟ್ಟಬೇಡಿ: ಟಿಮ್‌ ಕುಕ್‌ಗೆ ಟ್ರಂಪ್‌ ಸಲಹೆ

    ದೋಹಾ: ಭಾರತದಲ್ಲಿ (India) ಆಪಲ್‌ ಫ್ಯಾಕ್ಟರಿ (Apple Factory) ತೆರೆಯುವುದು ನನಗೆ ಇಷ್ಟ ಇಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದಾರೆ.

    ಕತಾರ್‌ನಲ್ಲಿ ಮಾತನಾಡಿದ ಅವರು, ಆಪಲ್‌ ಸಿಇಒ ಟಿಮ್‌ ಕುಕ್‌ (Tim Cook) ನನ್ನ ಸ್ನೇಹಿತ. ಆದರೆ ಅವರ ಜೊತೆ ನನಗೆ ಸಣ್ಣ ಸಮಸ್ಯೆಯಿದೆ. ಆಪಲ್‌ 500 ಬಿಲಿಯನ್‌ ಡಾಲರ್‌ ಗಳಿಸುತ್ತಿದೆ. ಆದರೆ ಭಾರತದಲ್ಲಿ ಫ್ಯಾಕ್ಟರಿ ನಿರ್ಮಿಸುವುದನ್ನು ನಾನು ಬಯಸುವುದಿಲ್ಲ. ಯಾಕೆಂದರೆ ಭಾರತ ಹೆಚ್ಚು ಸುಂಕ ವಿಧಿಸುವ ದೇಶಗಳಲ್ಲಿ ಒಂದಾಗಿದೆ. ಅಲ್ಲಿ ಸರಕುಗಳನ್ನು ಮಾರಾಟ ಮಾಡುವುದು ಕಷ್ಟ ಎಂದು ಹೇಳಿದರು.

    ಭಾರತ ಸರಕುಗಳ ಮೇಲೆ ಯಾವುದೇ ಸುಂಕವನ್ನು ವಿಧಿಸುವುದಿಲ್ಲ ಎಂದು ಹೇಳಿದೆ. ಆದರೆ ಇಲ್ಲಿಯವರೆಗೆ ಸುಂಕ ಕಡಿತದ ಘೋಷಣೆ ಮಾಡಿಲ್ಲ. ಆಪಲ್‌ ಚೀನಾದಲ್ಲಿ ನಿರ್ಮಿಸಿದ ಎಲ್ಲಾ ಫ್ಯಾಕ್ಟರಿಗಳನ್ನು ನಾವು ಸಹಿಸಿಕೊಂಡಿದ್ದೇವೆ. ಭಾರತದಲ್ಲಿ ಫ್ಯಾಕ್ಟರಿ ನಿರ್ಮಾಣ ಮಾಡುವುದು ನಮಗೆ ಆಸಕ್ತಿ ಇಲ್ಲ ಎಂದರು.

    ಅಮೆರಿಕ ಚೀನಾದ ಮೇಲೆ ಸುಂಕ ಸಮರ ಆರಂಭಿಸಿದ ಬಳಿಕ ಆಪಲ್‌ ಭಾರತದಲ್ಲಿ ಹೂಡಿಕೆ ವಿಸ್ತರಿಸಲು ಮುಂದಾಗಿತ್ತು. ಹೂಡಿಕೆ ವಿಸ್ತರಿಸುವ ಸಮಯದಲ್ಲೇ ಟ್ರಂಪ್‌ ಅವರಿಂದ ಈ ಅನಿರಿಕ್ಷಿತ ಹೇಳಿಕೆ ಬಂದಿದೆ. ಇದನ್ನೂ ಓದಿ: ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್‌ ಕಳುಹಿಸಿದ ಆಪಲ್‌

    ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿ ಮಾರಾಟವಾಗುವ ಹೆಚ್ಚಿನ ಐಫೋನ್‌ಗಳು ಭಾರತದಲ್ಲಿ ತಯಾರಾಗಲಿದೆ ಎಂದು ಟಿಮ್‌ ಕುಕ್‌ ತಿಳಿಸಿದ್ದರು.

    ಪ್ರಸ್ತುತ ಭಾರತದ ಮೂರು ಘಟಕಗಳಲ್ಲಿ ಆಪಲ್‌ ಉತ್ಪನ್ನಗಳು ತಯಾರಾಗುತ್ತಿವೆ. ತಮಿಳುನಾಡಿನ ಎರಡು ಕಡೆ ಮತ್ತು ಕರ್ನಾಟಕದಲ್ಲಿ ಘಟಕ ತೆರೆದಿದ್ದು ಈ ಪೈಕಿ ಒಂದು ಫಾಕ್ಸ್‌ಕಾನ್‌ ನಿರ್ವಹಣೆ ಮಾಡುತ್ತಿದ್ದರೆ ಎರಡನ್ನು ಟಾಟಾ ಗ್ರೂಪ್‌ ನಿರ್ವಹಿಸುತ್ತಿದೆ. ಇನ್ನೂ ಎರಡು ಆಪಲ್ ಘಟಕ ತೆರೆಯುವ ಸಂಬಂಧ ಮಾತುಕತೆ ನಡೆಸಯುತ್ತಿದೆ.

    ಮಾರ್ಚ್‌ಗೆ ಕೊನೆಗೊಂಡ ಕಳೆದ ಆರ್ಥಿಕ ವರ್ಷದಲ್ಲಿ, ಆಪಲ್ ಭಾರತದಲ್ಲಿ 22 ಬಿಲಿಯನ್ ಡಾಲರ್‌ ಮೊತ್ತದ ಐಫೋನ್‌ ಉತ್ಪಾದನೆ ಮಾಡಿತ್ತು. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಉತ್ಪಾದನೆಯಲ್ಲಿ 60% ರಷ್ಟು ಹೆಚ್ಚಳವಾಗಿದೆ.

  • ಪಾಕಿಸ್ತಾನದ ವಿರುದ್ಧ ಕದನ ವಿರಾಮ ಘೋಷಣೆ ಯಾಕೆ? ಮೋದಿ ಉತ್ತರ ಕೊಡಲಿ – ದಿನೇಶ್ ಗುಂಡೂರಾವ್

    ಪಾಕಿಸ್ತಾನದ ವಿರುದ್ಧ ಕದನ ವಿರಾಮ ಘೋಷಣೆ ಯಾಕೆ? ಮೋದಿ ಉತ್ತರ ಕೊಡಲಿ – ದಿನೇಶ್ ಗುಂಡೂರಾವ್

    – ಮೋದಿ ಹೇಳೋದನ್ನ ನಂಬೋಕೆ ಆಗ್ತಿಲ್ಲ ಎಂದ ಸಚಿವ

    ಬೆಂಗಳೂರು: ಬಿಜೆಪಿಯವರು (BJP) ತಿರಂಗಾ ಯಾತ್ರೆ ಮಾಡೋ ಬದಲು ಪಾಕಿಸ್ತಾನ ವಿರುದ್ಧ ಕದನ ವಿರಾಮ ಯಾಕೆ ಘೋಷಣೆ ಮಾಡಿದ್ರು? ಅಂತ ಪ್ರಧಾನಿ ನರೇಂದ್ರ ಮೋದಿಯನ್ನ (Narendra Modi) ಕೇಳಲಿ ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಆಗ್ರಹಿಸಿದ್ದಾರೆ.

    ನಾಳೆಯಿಂದ (ಮೇ 15) ಬಿಜೆಪಿ ತಿರಂಗಾ ಯಾತ್ರೆ ನಡೆಸುತ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತಿರಂಗಾ ಯಾತ್ರೆ ಮಾಡಲಿ. ಆದರೆ ಮೊದಲು ಬಿಜೆಪಿ ಅವರು ಏನ್ ಆಗಿದೆ ಹೇಳಲಿ. ಪಾಕಿಸ್ತಾನದ ಮೇಲೆ ಯುದ್ಧದ ಬಗ್ಗೆ ಮೊದಲು ಮಾಹಿತಿ ‌ಕೊಡಿ. ಕದನ ವಿರಾಮ (Ceasefire) ಯಾಕೆ ಆಯ್ತು ಗೊತ್ತಿಲ್ಲ. ಟ್ರಂಪ್ (Donald Trump) ಯಾಕೆ ಮಧ್ಯಸ್ಥಿಕೆ ವಹಿಸಿದ್ರು ಕೇಂದ್ರ ಹೇಳಲಿ. ಕದನ ವಿರಾಮ ಯಾಕೆ ಆಯ್ತು? ಎಷ್ಟು ದಿನಕ್ಕೆ ಇದು ಇರುತ್ತೆ ಮೊದಲು ಹೇಳಲಿ. ರಾಜಕೀಯ ಲಾಭಕ್ಕೆ ತಿರಂಗಾ ಯಾತ್ರೆ ‌ಮಾಡೋದಲ್ಲ. ಪ್ರಧಾನಿಗಳು ಇದಕ್ಕೆ ಮೊದಲು ಉತ್ತರ ಕೊಡಲಿ ಅಂತ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ್ದಾರೆ.

    ಮೋದಿಗೆ ಭಯ ಅನ್ನಿಸುತ್ತೆ:
    11 ವರ್ಷಗಳಲ್ಲಿ ಪ್ರಧಾನಿಗಳು ಒಂದೇ ಒಂದು ಸುದ್ದಿಗೋಷ್ಠಿಯನ್ನೂ ಕರೆದಿಲ್ಲ. ಮಾಧ್ಯಮಗಳನ್ನ ತಿರಸ್ಕಾರ ಮಾಡಿ ಇಟ್ಟಿದ್ದಾರೆ. ಮಾಧ್ಯಮ ಅಂದರೆ ಕೇರ್ ಮಾಡ್ತಿಲ್ಲ. ಮೋದಿ ಚುನಾವಣೆ ಭಾಷಣ ಮಾಡೋಕೆ ರೆಡಿ, ‌ಮನ್ ಕೀ ಬಾತ್ ಮಾಡೋಕೆ ರೆಡಿ. ಮೊದಲು ಜನರಿಗೆ ಉತ್ತರ ಕೊಡಿ. ಸುಮ್ಮನೆ ಭಾಷಣ ಬಿಗಿಯೋದಲ್ಲ. ಮೋದಿ ಹೇಳೋದು ಯಾವುದು ನಂಬೋಕೆ ಆಗ್ತಿಲ್ಲ. ಯಾವುದಕ್ಕೂ ಸಾಕ್ಷಿಗಳಿಲ್ಲ. ಟ್ರಂಪ್ ಅವರು ಹೇಳಿದ ಮೇಲೆ ಮೋದಿ ಅವರು ಇಲ್ಲ ಅಂತ ಹೇಳಬೇಕಿತ್ತು. ಮೋದಿಗೆ ಭಯ ಅನ್ನಿಸುತ್ತೆ ಅದಕ್ಕೆ ಬಗ್ಗೆ ಮಾತಾಡಿಲ್ಲ. ಇಂದಿರಾ ಗಾಂಧಿ – ಮೋದಿ ಅವರಿಗೂ ಇರೋ ವ್ಯತ್ಯಾಸ ಇಷ್ಟೆ ಅಂತ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

    ಮೋದಿಯದ್ದು ಬರೀ ಮಾತು:
    ರಾಜಕೀಯ ಗಿಮಿಕ್ ಮಾಡಬಾರದು. ಜನರನ್ನ ದಾರಿ‌ ತಪ್ಪಿಸಬಾರದು. ಮುಂಬೈ ಅಟ್ಯಾಕ್ ಅದಾಗ ಮನಮೋಹನ್ ಸಿಂಗ್ ಬಂದು ಮಾತಾಡಿದ್ರು. ಇವರು ಕೇವಲ ಮಾತು ಅಷ್ಟೇ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು.

  • ಟ್ರಂಪ್ ಮತ್ತೆ ತೆರೆಯಲು ಮುಂದಾಗಿರೋ ಅಲ್ಕಾಟ್ರಾಜ್ ಜೈಲು ಅದೆಷ್ಟು ಭಯಾನಕ ಗೊತ್ತಾ?

    ಟ್ರಂಪ್ ಮತ್ತೆ ತೆರೆಯಲು ಮುಂದಾಗಿರೋ ಅಲ್ಕಾಟ್ರಾಜ್ ಜೈಲು ಅದೆಷ್ಟು ಭಯಾನಕ ಗೊತ್ತಾ?

    ಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಬಳಿಯ ದ್ವೀಪವೊಂದರಲ್ಲಿ 60 ವರ್ಷಗಳ (1963) ಹಿಂದೆ ಮುಚ್ಚಲ್ಪಟ್ಟ ಅಲ್ಕಾಟ್ರಾಜ್ ಜೈಲನ್ನು (Alcatraz Jail) ತೆರೆಯಲು ಅಮೆರಿಕ (United States) ಅಧ್ಯಕ್ಷ ಟ್ರಂಪ್‌ (Donald Trump) ಮತ್ತೆ ಮುಂದಾಗಿದ್ದಾರೆ. ಈ ಜೈಲನ್ನು ಮತ್ತೆ ತೆರೆಯುವುದು ಕಾನೂನು, ಸುವ್ಯವಸ್ಥೆ ಮತ್ತು ನ್ಯಾಯದ ಸಂಕೇತ ಎಂದು ಅವರು ಹೇಳಿಕೊಂಡಿದ್ದಾರೆ.

    ಸ್ಯಾನ್ ಫ್ರಾನ್ಸಿಸ್ಕೋ ನಗರದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಅಲ್ಕಾಟ್ರಾಜ್ ಜೈಲನ್ನು ಆ ಕಾಲಘಟ್ಟದಲ್ಲಿ ಅತ್ಯಂತ ಕಠಿಣ ಜೈಲುಗಳಲ್ಲಿ ಒಂದಾಗಿತ್ತು ಎಂದು ಪರಿಗಣಿಸಲಾಗಿತ್ತು. ಈ ಜೈಲು ಮೂಲತಃ ಅಲ್ಕಾಟ್ರಾಜ್ ದ್ವೀಪದ ರಕ್ಷಣಾ ಕೋಟೆಯಾಗಿತ್ತು. ಅಂತರ್ಯುದ್ಧದ ಸಮಯದಲ್ಲಿ, ಇದನ್ನು ಮಿಲಿಟರಿ ಜೈಲಾಗಿ ಪರಿವರ್ತಿಸಲಾಯಿತು. ಇದು ಸುಮಾರು 22 ಎಕರೆ ವಿಸ್ತೀರ್ಣ ಹೊಂದಿದ್ದು, ಅಮೆರಿಕದ ಕುಖ್ಯಾತ ದರೋಡೆಕೋರ ಅಲ್ ಕಾಪೋನ್ ಸೇರಿದಂತೆ ಕೆಲವು ಕುಖ್ಯಾತ ಅಪರಾಧಿಗಳನ್ನು ಇಲ್ಲಿ ಇರಿಸಲಾಗಿತ್ತು.

    ಈ ಜೈಲು ಅದೆಷ್ಟು ಭದ್ರವಾಗಿತ್ತು ಎಂದರೆ, ವಿಶ್ವದ ಅಪಾಯಕಾರಿ ಕೈದಿಗಳು ಸಹ ಇಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಯಾಕಂದ್ರೆ ಈ ಜೈಲಿನಲ್ಲಿದ್ದ ಕೈದಿಗಳಿಗೆ ಕೋಲು ಹಿಡಿದು ಕಾಯುವ ಪೊಲೀಸರು ಇರಲಿಲ್ಲ, ಬದಲಿಗೆ ಶಾರ್ಕ್ ಮೀನುಗಳೇ ಈ ಜೈಲಿನ ಕಾವಲು ಕಾಯುತ್ತಿದ್ದವು. ಇಂತಹ ಜೈಲು 3 ಬಾರಿ ಪ್ರವಾಹಕ್ಕೆ ತುತ್ತಾಗಿದ್ದರಿಂದ ಗೋಡೆಗಳೆಲ್ಲ ಹಾನಿಗೊಳಗಾಗಿತ್ತು. ಅಲ್ಲದೇ ನಿರ್ವಹಣಾ ವೆಚ್ಚ ಹೆಚ್ಚಾದ ಕಾರಣದಿಂದ 1963ರಲ್ಲಿ ಈ ಜೈಲನ್ನು ಬಂದ್‌ ಮಾಡಲಾಗಿತ್ತು.

    ಇದೀಗ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಟ್ರಂಪ್‌ ಈ ಜೈಲನ್ನು ಮತ್ತೆ ತೆರೆಯಲು ಪ್ಲ್ಯಾನ್‌ ಮಾಡಿದ್ದಾರೆ. ಈಗ ಪ್ರವಾಸಿ ತಾಣವಾಗಿರುವ ಈ ಕೋಟೆಯನ್ನು ಮತ್ತೆ ಜೈಲನ್ನಾಗಿ ಮಾಡಿ, ಮತ್ತಷ್ಟು ವಿಸ್ತರಿಸಲು ಅವರು ಆದೇಶಿಸಿದ್ದಾರೆ. ಈ ಜೈಲನ್ನು ಅತ್ಯಂತ ಕ್ರೂರಿಗಳನ್ನು ಇರಿಸುವುದಾಕ್ಕಾಗಿ ಮತ್ತೆ ತೆರೆಯಲಾಗುತ್ತಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

    ಟ್ರಂಪ್‌ ಅಲ್ಕಾಟ್ರಾಜ್ ರೀ ಓಪನ್‌ ಬಗ್ಗೆ ಹೇಳಿದ್ದೇನು?
    ಅಲ್ಕಾಟ್ರಾಜ್ ಜೈಲಿನಲ್ಲಿ ಅತ್ಯಂತ ಕ್ರೂರಿಗಳನ್ನು ಇರಿಸಲಾಗುತ್ತದೆ. ಕೆಲಸಕ್ಕಾಗಿ ಹಾಗೂ ನಮ್ಮ ದೇಶಕ್ಕೆ ಅಕ್ರಮವಾಗಿ ಬಂದ ಅಪರಾಧಿಗಳ ವಿರುದ್ಧ ಕ್ರಮಕೈಗೊಳ್ಳಲು ನಮಗೆ ಅವಕಾಶವಿದೆ. ಗೂಂಡಾಗಳಿಗೆ ನಾವಿನ್ನು ಮುಂದೆ ಹೆದರುವುದಿಲ್ಲ. ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುತ್ತೇವೆ ಎಂದು ಟ್ರಂಪ್‌ ಹೇಳಿಕೊಂಡಿದ್ದಾರೆ.

    ಬಹಳ ಸಮಯದಿಂದ, ಅಮೆರಿಕವು ಕ್ರೂರ, ಹಿಂಸಾತ್ಮಕ ಮತ್ತು ಪುನರಾವರ್ತಿತ ಅಪರಾಧಿಗಳಿಂದ ಬಳಲುತ್ತಿದೆ. ಅಂತಹ ಕ್ರಿಮಿನಲ್‌ಗಳು ಸಮಾಜದ ಕಸ, ಅವರು ಸಮಾಜಕ್ಕೆ ದುಃಖವನ್ನು ಹೊರತುಪಡಿಸಿ ಬೇರೆ ಏನನ್ನೂ ನೀಡುವುದಿಲ್ಲ. ಅದಕ್ಕಾಗಿ ಈ ಜೈಲು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಅಲ್ಕಾಟ್ರಾಜ್ ಕೋಟೆ ಜೈಲಾಗಿದ್ದು ಹೇಗೆ?
    ಅಲ್ಕಾಟ್ರಾಜ್ ಜೈಲು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋ ಕರಾವಳಿಯಲ್ಲಿದೆ. ಒಂದು ಕಾಲದಲ್ಲಿ ಕೋಟೆಯಾಗಿದ್ದ ಇದನ್ನು 1912ರಲ್ಲಿ ಯುಎಸ್ ಸೈನ್ಯದ ಮಿಲಿಟರಿ ಜೈಲಾಗಿ ಪರಿವರ್ತಿಸಲಾಯಿತು.

    ಅಲ್ಕಾಟ್ರಾಜ್ ಯಾಕಿಷ್ಟು ಭದ್ರ ಗೊತ್ತಾ?
    ಮೂರು ಅಂತಸ್ತಿನ ಈ ಜೈಲು ಅಮೆರಿಕದಿಂದ ಬೌಗಳಿಕ ಪ್ರದೇಶದ ಸಂಪರ್ಕವಿಲ್ಲದೇ ಪ್ರತ್ಯೇಕವಾಗಿದೆ. ಸುತ್ತ ಸಮುದ್ರ ವ್ಯಾಪಿಸಿದ್ದು, ಭಾರೀ ಅಲೆಗಳು ಮತ್ತು ಶಾರ್ಕ್‌ ಮೀನುಗಳ ಹಾವಳಿಯಿಂದ ಈ ಜೈಲಿನಿಂದ ಕೈದಿಗಳು ತಪ್ಪಿಸಿಕೊಳ್ಳವುದು ಅಸಾಧ್ಯವಾಗಿತ್ತು. ಅಕಸ್ಮಾತ್‌ ತಪ್ಪಿಕೊಂಡ್ರೆ ಅಪರಾಧಿಗಳು ಶಾರ್ಕ್‌ಗಳಿಗೆ ಊಟವಾಗಬೇಕಿತ್ತು!

    ಈ ಜೈಲು ನಾಲ್ಕು ಸೆಲ್ ಬ್ಲಾಕ್‌ಗಳು, ವಾರ್ಡನ್ ಕಚೇರಿ, ಸಂದರ್ಶಕರ ಕೊಠಡಿ, ಗ್ರಂಥಾಲಯ ಮತ್ತು ಕ್ಷೌರಿಕರ ಕೊಠಡಿಯನ್ನು ಒಳಗೊಂಡಿತ್ತು. ಅತ್ಯಂತ ಅಪಾಯಕಾರಿ ಕೈದಿಗಳನ್ನು ಡಿ-ಬ್ಲಾಕ್‌ನಲ್ಲಿ ಇರಿಸಲಾಗುತ್ತಿತ್ತು. 1934ರಲ್ಲಿ ಜೈಲು ಕಟ್ಟಡವನ್ನು ನವೀಕರಿಸಿದಾಗ ಅದರ ಕಬ್ಬಿಣದ ಮೆಟ್ಟಿಲುಗಳು, ಗನ್‌ ಇಡಲು ಗ್ರಾನೈಟ್ ಬ್ಲಾಕ್‌ಗಳನ್ನು ನಿರ್ಮಿಸಲಾಗಿತ್ತು. ಈ ಜೈಲಿನಲ್ಲಿದ್ದ ರಾಬರ್ಟ್ ಫ್ರಾಂಕ್ಲಿನ್ ಎಂಬ ಅಪರಾಧಿ ಜೈಲು ಸಿಬ್ಬಂದಿಯನ್ನೇ ಹತ್ಯೆಗೈದಿದ್ದ.

    ಜೈಲಿನ ನಿವಹಣಾ ವೆಚ್ಚ ಹೆಚ್ಚಾಗಿದ್ದರಿಂದ ಈ ಜೈಲನ್ನು 1963ರಲ್ಲಿ ಮುಚ್ಚಲಾಯಿತು. ಬಳಿಕ ಯುಎಸ್ ಸರ್ಕಾರವು 1972ರಲ್ಲಿ ಈ ದ್ವೀಪವನ್ನು ರಾಷ್ಟ್ರೀಯ ಉದ್ಯಾನವನ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಿತು. ಬಳಿಕ ಇದು ಗೋಲ್ಡನ್ ಗೇಟ್ ಎಂಬ ಹೆಸರಿನ ಪ್ರವಾಸಿ ಸ್ಥಳವಾಗಿ ಹೆಸರಾಯಿತು.

    36 ಕೈದಿಗಳಿಂದ ತಪ್ಪಿಸಿಕೊಳ್ಳೋಕೆ ಯತ್ನ!
    ಇಂತಹ ಭದ್ರ ಜೈಲಿಂದ 36 ಕೈದಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಅದರಲ್ಲಿ ಹೆಚ್ಚಿನ ಕೈದಿಗಳನ್ನು ಸೆರೆಹಿಡಿಯಲಾಗಿತ್ತು. ಅದರಲ್ಲಿ ಕೆಲವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 1962 ರಲ್ಲಿ ಫ್ರಾಂಕ್ ಮೋರಿಸ್ ಮತ್ತು ಆಂಗ್ಲಿನ್ ಸಹೋದರರು ಅಲ್ಲಿಂದ ತಪ್ಪಿಸಿಕೊಂಡಿದ್ದರು. ಆ ಇಬ್ಬರೂ ಏನಾದರೂ ಎಂಬುದು ಇಂದಿಗೂ ತಿಳಿದು ಬಂದಿಲ್ಲ.

  • ಟ್ರಂಪ್‌ಗೆ ಕತಾರ್‌ನಿಂದ 3,400 ಕೋಟಿ ಮೌಲ್ಯದ ಐಷಾರಾಮಿ ವಿಮಾನ ಗಿಫ್ಟ್ – ವಿಶೇಷತೆ ಏನು?

    ಟ್ರಂಪ್‌ಗೆ ಕತಾರ್‌ನಿಂದ 3,400 ಕೋಟಿ ಮೌಲ್ಯದ ಐಷಾರಾಮಿ ವಿಮಾನ ಗಿಫ್ಟ್ – ವಿಶೇಷತೆ ಏನು?

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ (Donald Trump) ಕತಾರ್ (Qatar) 3,400 ಕೋಟಿ ಮೌಲ್ಯದ ಐಷಾರಾಮಿ ವಿಮಾನವೊಂದನ್ನು ಉಡುಗೊರೆಯಾಗಿ ನೀಡಲು ಮುಂದಾಗಿದೆ. ಮುಂದಿನ ವಾರ ಟ್ರಂಪ್ ಮಧ್ಯಪ್ರಾಚ್ಯ ಪ್ರವಾಸದ ವೇಳೆ ಈ ವಿಮಾನ (Flight) ಹಸ್ತಾಂತರಿಸುವ ಸಾಧ್ಯತೆ ಇದೆ.

    ಉಡುಗೊರೆ ಏಕೆ?
    ಹಾಲಿ ಅಮೆರಿಕ ಅಧ್ಯಕ್ಷರು ಬಳಸುವ ಏರ್‌ಫೋರ್ಸ್-1 ಬಹಳ ಹಳೆಯದ್ದಾಗಿದೆ. ಮೊದಲ ಅವಧಿಗೆ ಅಧ್ಯಕ್ಷರಾಗಿದ್ದಾಲೇ ಟ್ರಂಪ್ ಹೊಸ ವಿಮಾನಕ್ಕೆ ಬೇಡಿಕೆಯಿಟ್ಟಿದ್ದರು. ಶ್ವೇತಭವನ ಬೇಡಿಕೆ ಅನ್ವಯ ಸಿದ್ಧಪಡಿಸಲು 2 ವಿಮಾನಕ್ಕೆ 17,000 ಕೋಟಿ ರೂ. ಅಂದಾಜಿಸಲಾಗಿತ್ತು. ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ಕಾರಣ ವಿಳಂಬವಾಗಿತ್ತು. ಬೇಡಿಕೆ ಸಲ್ಲಿಸಲಾಗಿದೆಯಾದರೂ ಇದು 2029ರ ಹೊತ್ತಿಗೆ ಪೂರೈಕೆಯಾಗುತ್ತದೆ. ಹೀಗಾಗಿ ದುಬೈ ದೊರೆಗಳು ತಮ್ಮ ಬಳಕೆಗೆಂದು ಖರೀದಿಸಿದ್ದ 747-8 ಬೋಯಿಂಗ್ ಅನ್ನು ಟ್ರಂಪ್‌ಗೆ ಉಡುಗೊರೆಯಾಗಿ ಕೊಡಲು ಮುಂದಾಗಿದ್ದಾರೆ. ಕತಾರ್ 747-8 ಬೋಯಿಂಗ್ ವಿಮಾನವನ್ನು ಅಮೆರಿಕ ಅಧ್ಯಕ್ಷರ ಬೇಡಿಕೆಗೆ ಅನ್ವಯ ಮರು ವಿನ್ಯಾಸಗೊಳಿಸಲಾಗುತ್ತದೆ ಎನ್ನಲಾಗಿದೆ.

    ವಿಮಾನದ ವಿಶೇಷತೆ ಏನು?
    ಈ ವಿಮಾನವನ್ನು ಫ್ಲೈಯಿಂಗ್ ಪ್ಯಾಲೆಸ್ ಅಥವಾ ಹಾರುವ ಅರಮನೆ ಎಂದು ಕರೆಯಲಾಗುತ್ತದೆ. ಇದು ಅತ್ಯಾಧುನಿಕ ಸ್ನಾನಗೃಹಗಳು, ಖಾಸಗಿ ಮಲಗುವ ಕೋಣೆಗಳು, ಭವ್ಯವಾದ ಮೆಟ್ಟಿಲುಗಳಿಂದ ಕೂಡಿದ ಒಳಾಂಗಣವನ್ನು ಹೊಂದಿದೆ. ಇದನ್ನು ಆರಂಭದಲ್ಲಿ ಕತಾರ್ ರಾಜಮನೆತದವರು ಬಳಸುತ್ತಿದ್ದರು. ಆ ಬಳಿಕ ಟರ್ಕಿ ಇದನ್ನು ಬಳಸುತ್ತಿತ್ತು.

    13 ವರ್ಷ ಹಳೆಯದಾದ ಕತಾರ್‌ನ ಈ ವಿಮಾನವನ್ನು ಟ್ರಂಪ್ ಅವಧಿ ಮುಗಿದ ನಂತರ ಅಧ್ಯಕ್ಷೀಯ ಗ್ರಂಥಾಲಯ ಪ್ರತಿಷ್ಠಾನಕ್ಕೆ ಸ್ಥಳಾಂತರಿಸಲಾಗುತ್ತದೆ. ಉಚಿತವಾಗಿ ಸಿಕ್ಕ ಜೆಟ್ ಅನ್ನು ಬೇಡ ಎನ್ನುವಷ್ಟು ಮೂರ್ಖ ನಾನಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇದು ಲಂಚ ಅಂತ ವ್ಯಾಪಕ ಚರ್ಚೆ ಆಗುತ್ತಿದೆ.

    ಟ್ರಂಪ್ ಬಳಸುತ್ತಿರುವ ಏರ್‌ಫೋರ್ಸ್-1 ಹೇಗಿದೆ?
    ಏರ್ ಫೋರ್ಸ್ 1 ಅಮೆರಿಕದ ಅಧ್ಯಕ್ಷ ಟ್ರಂಪ್ ಸದ್ಯ ಬಳಸುತ್ತಿರುವ ವಿಮಾನ. ಇದನ್ನು ‘ಹಾರಾಡುವ ಶ್ವೇತ ಭವನ’ ಎಂದು ಕರೆಯುತ್ತಾರೆ. ಈ ವಿಮಾನ ಶ್ವೇತಭವನದ ರೀತಿಯ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಒಂದು ಬಾರಿ ಇಂಧನ ತುಂಬಿದರೆ 20 ಗಂಟೆ ಹಾರಾಡುವ ಸಾಮರ್ಥ್ಯನ್ನು ಇದು ಹೊಂದಿದ್ದು, ಖಾಸಗಿ ಕಚೇರಿ, ಸೆಮಿನಾರ್ ಹಾಲ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ.

  • ಭಾರತ, ಪಾಕ್‌ ಮಧ್ಯೆ ನಡೆಯಬಹುದಾಗಿದ್ದ ಪರಮಾಣು ಸಂಘರ್ಷ ನಿಲ್ಲಿಸಿದ್ದೇವೆ: ಟ್ರಂಪ್‌

    ಭಾರತ, ಪಾಕ್‌ ಮಧ್ಯೆ ನಡೆಯಬಹುದಾಗಿದ್ದ ಪರಮಾಣು ಸಂಘರ್ಷ ನಿಲ್ಲಿಸಿದ್ದೇವೆ: ಟ್ರಂಪ್‌

    ವಾಷಿಂಗ್ಟನ್‌: ಭಾರತ (India) ಮತ್ತು ಪಾಕಿಸ್ತಾನದ (Pakistan) ಮಧ್ಯೆ ನಡೆಯಬಹುದಾಗಿದ್ದ ಪರಮಾಣು ಸಂಘರ್ಷವನ್ನು (Nuclear Conflict) ನಾವು ನಿಲ್ಲಿಸಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದಾರೆ. ಈ ಮೂಲಕ ಮತ್ತೆ ಕದನ ವಿರಾಮದ ಕ್ರೆಡಿಟ್‌ ಪಡೆಯಲು ಮುಂದಾಗಿದ್ದಾರೆ.

    ನಾವು ಪರಮಾಣು ಸಂಘರ್ಷವನ್ನು ನಿಲ್ಲಿಸಿದ್ದೇವೆ. ಅದು ಕೆಟ್ಟ ಪರಮಾಣು ಯುದ್ಧವಾಗಿರಬಹುದು ಎಂದು ನಾನು ಭಾವಿಸುತ್ತೇನೆ. ಲಕ್ಷಾಂತರ ಜನರು ಮೃತಪಡಬಹುದಿತ್ತು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರ ಕೆಲಸಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಅಣ್ವಸ್ತ್ರಗಳಿರೋ ಬೆಟ್ಟದ ಮೇಲೆ ದಾಳಿ – ಬೆದರಿದ ಪಾಕ್‌, ಅಮೆರಿಕಕ್ಕೂ ಶಾಕ್‌- ಕದನ ವಿರಾಮ ಘೋಷಣೆಗೆ ನಿಜವಾದ ಕಾರಣ ಏನು?


    ನಾವು ಪಾಕಿಸ್ತಾನದೊಂದಿಗೆ ಬಹಳಷ್ಟು ವ್ಯಾಪಾರ ಮಾಡಲಿದ್ದೇವೆ. ನಾವು ಭಾರತದೊಂದಿಗೆ ಬಹಳಷ್ಟು ವ್ಯಾಪಾರ ಮಾಡಲಿದ್ದೇವೆ. ನಾವು ಇದೀಗ ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಅಣ್ವಸ್ತ್ರ ಸಂಗ್ರಹ ಇರೋ ಬೆಟ್ಟದ ಮೇಲೆ ದಾಳಿ ಚರ್ಚೆ – ಪತ್ರಕರ್ತನಿಗೆ ಥ್ಯಾಂಕ್ಸ್‌ ಹೇಳಿದ ವಾಯುಸೇನೆ