Tag: donald trump

  • ಬ್ರಿಕ್ಸ್‌ ಅಮೆರಿಕ ವಿರೋಧಿ ಒಕ್ಕೂಟ – 10% ಹೆಚ್ಚುವರಿ ತೆರಿಗೆ ಹಾಕ್ತೀನಿ: ಟ್ರಂಪ್‌ ವಾರ್ನಿಂಗ್‌

    ಬ್ರಿಕ್ಸ್‌ ಅಮೆರಿಕ ವಿರೋಧಿ ಒಕ್ಕೂಟ – 10% ಹೆಚ್ಚುವರಿ ತೆರಿಗೆ ಹಾಕ್ತೀನಿ: ಟ್ರಂಪ್‌ ವಾರ್ನಿಂಗ್‌

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತೆ ಬ್ರಿಕ್ಸ್‌ (BRICS) ಒಕ್ಕೂಟಕ್ಕೆ ತೆರಿಗೆ ಸಮರದ ಬೆದರಿಕೆ ಹಾಕಿದ್ದಾರೆ. ಬ್ರಿಕ್ಸ್‌ ಜೊತೆ ಹೊಂದಾಣಿಕೆ ಮಾಡುವ ಯಾವುದೇ ದೇಶಕ್ಕೆ 10% ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಬ್ರೆಜಿಲ್‌, ರಷ್ಯಾ, ಇಂಡಿಯಾ, ಚೀನಾ, ಸೌತ್‌ ಆಫ್ರಿಕಾ ಒಳಗೊಂಡಿರುವ ಬ್ರಿಕ್ಸ್‌ ಅನ್ನು ಅಮೆರಿಕ ವಿರೋಧಿ ಎಂದು ಟ್ರಪ್‌ ಪರಿಗಣಿಸಿದ್ದಾರೆ. ತಮ್ಮ ಟ್ರೂತ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಟ್ರಂಪ್‌, ಬ್ರಿಕ್ಸ್‌ ಅಮೇರಿಕನ್ ವಿರೋಧಿ ನೀತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಯಾವುದೇ ದೇಶಕ್ಕೆ ಹೆಚ್ಚುವರಿಯಾಗಿ 10% ಸುಂಕ ವಿಧಿಸಲಾಗುತ್ತದೆ. ಈ ನೀತಿಗೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಗುಡುಗಿದ್ದಾರೆ.  ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಕ್ವಿರುದ್ಧ ಮೋದಿ ಕಟು ವಾಗ್ದಾಳಿ ಬುದ್ಧನ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ

    ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ 17ನೇ ಬ್ರಿಕ್ಸ್ ಶೃಂಗಸಭೆಯ (BRICS Summit) ಸಮಯದಲ್ಲೇ ಟ್ರಂಪ್‌ ಈ ನಿರ್ಧಾರ ಪ್ರಕಟಿಸಿರುವುದು ವಿಶೇಷ. ಇದರ ಜೊತೆ ಭಾರತ (India) ಮತ್ತು ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಕೆಲ ತಿಂಗಳಿನಿಂದ ಮಾತುಕತೆ ನಡೆಸುತ್ತಿರುವ ಸಮಯದಲ್ಲೇ ಟ್ರಂಪ್‌ ಅವರು ಎಚ್ಚರಿಕೆಯ ಪೋಸ್ಟ್‌ ಹಾಕಿದ್ದಾರೆ.

     

    ಏನಿದು ಬ್ರಿಕ್ಸ್‌?
    ಬ್ರಿಕ್ಸ್’ (BRICS) ಎಂಬುದು ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಎಂಬುದರ ಸಂಕ್ಷಿಪ್ತ ರೂಪ. ಜಾಗತಿಕವಾದ ಆರ್ಥಿಕ ಅಭಿವೃದ್ಧಿ ಮತ್ತು ಸಹಕಾರಗಳಿಗೆ ಸಂಬಂಧಿಸಿದಂತೆ ಬೆಳೆಯುತ್ತಿರುವ ಆರ್ಥಿಕ ಶಕ್ತಿಗಳ ನಡುವಿನ ಮೈತ್ರಿಕೂಟವನ್ನು ಇದು ಪ್ರತಿನಿಧಿಸುತ್ತದೆ. ಮೊದಲ ಶೃಂಗಸಭೆಯು 2009 ರಲ್ಲಿ ರಷ್ಯಾದ ಒಕ್ಕೂಟದಲ್ಲಿ ನಡೆದಿತ್ತು. ಆಗ ಜಗತ್ತಿನಾದ್ಯಂತ 20ಕ್ಕೂ ಹೆಚ್ಚು ರಾಷ್ಟ್ರಗಳು ಬ್ರಿಕ್ಸ್‌ನ ಸದಸ್ಯತ್ವವನ್ನು ಕೋರಿ ಅರ್ಜಿಗಳನ್ನು ಸಲ್ಲಿಸಿದ್ದರೆ, ಇತರ 15ಕ್ಕೂ ಹೆಚ್ಚು ದೇಶಗಳು ಬ್ರಿಕ್ಸ್‌ನ ಭಾಗವಾಗುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದವು.  ಇದನ್ನೂ ಓದಿ: ಡಾಲರ್‌ಗೆ ಪೈಪೋಟಿ ನೀಡಲು ಹೊಸ ಕರೆನ್ಸಿ ಆರಂಭಿಸುವ ನಿರ್ಧಾರ ಕೈಗೊಂಡಿಲ್ಲ: ಜೈಶಂಕರ್

    ಏನಿದು ಬ್ರಿಕ್ಸ್‌ ಕರೆನ್ಸಿ?
    ಬ್ರಿಕ್ಸ್‌ ಕರೆನ್ಸಿಯ ಪ್ರಸ್ತಾಪವನ್ನು 2022ರ ಶೃಂಗಸಭೆಯಲ್ಲಿ ರಷ್ಯಾ ಮೊದಲು ಪ್ರಸ್ತಾಪಿಸಲಾಗಿತ್ತು. ನಂತರದ ದಿನಗಳಲ್ಲಿ ಡಾಲರ್‌ ಯಾಕೆ ವಿಶ್ವದ ಕರೆನ್ಸಿಯಾಗಬೇಕು ಎಂಬ ವಿಚಾರಗಳು ಚರ್ಚೆಗೆ ಬಂತು. ನಂತರ ಭಾರತ ರಷ್ಯಾ, ಚೀನಾ, ಬ್ರೆಜಿಲ್‌ಗಳು ರಷ್ಯಾದ ಜೊತೆ ಸ್ಥಳೀಯ ಕರೆನ್ಸಿಯಲ್ಲೇ ವ್ಯವಹಾರ ನಡೆಸುತ್ತಿದೆ. ರಷ್ಯಾದ ಕಾಜಾನ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಬ್ರಿಕ್ಸ್‌ ನೋಟ್‌ ಹಿಡಿದುಕೊಂಡಿದ್ದರು. ಈ ನೋಟು ದೊಡ್ಡ ಸುದ್ದಿಯಾಗುತ್ತಿದ್ದಂತೆ ಬ್ರಿಕ್ಸ್‌ ಕರೆನ್ಸಿಯ ಬಗ್ಗೆ ಚರ್ಚೆ ಹೆಚ್ಚಾಯಿತು. ಆ ಬಳಿಕ ಕಳವಳಗೊಂಡಿದ್ದ ಟ್ರಂಪ್‌ ಅಧಿಕಾರ ಸ್ವೀಕಾರಕ್ಕೂ ಮೊದಲೇ ಬ್ರಿಕ್ಸ್‌ ದೇಶಗಳಿಗೆ 100% ಸುಂಕ ವಿಧಿಸುವ ಎಚ್ಚರಿಕೆ ಕೊಟ್ಟಿದ್ದರು.

    ಸದ್ಯ ಒಂದೊಂದು ದೇಶಗಳಲ್ಲಿ ಒಂದೊಂದು ಕರೆನ್ಸಿ ಇದೆ. ಬ್ರೆಜಿಲ್‌ನಲ್ಲಿ ʻರಿಯಾಲ್‌ʼ, ರಷ್ಯಾದಲ್ಲಿ ʻರುಬೆಲ್‌ʼ, ಭಾರತದಲ್ಲಿ ʻರೂಪಾಯಿʼ, ಚೀನಾದಲ್ಲಿ ʻಯುವಾನ್‌ʼ, ದಕ್ಷಿಣ ಆಫ್ರಿಕಾದಲ್ಲಿ ʻರಾಂಡ್‌ʼ ಇದೆ. ಒಂದೊಂದು ದೇಶದಲ್ಲಿ ಒಂದೊಂದು ಕರೆನ್ಸಿ ಇರುವ ಕಾರಣ ಎಲ್ಲ ದೇಶಗಳಿಗೆ ಒಂದು ದೇಶದ ಕರೆನ್ಸಿಯನ್ನು ಅಪ್ಲೈ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಹೊಸ ಕರೆನ್ಸಿ ಬರಬೇಕು. ಇದಕ್ಕಾಗಿ ʻಬ್ರಿಕ್ಸ್‌ʼ ಮುಂದಾಗಿದೆ.

    ಸದ್ಯ ಹೊಸ ಕರೆನ್ಸಿ ವಿಚಾರದಲ್ಲಿ ಈಗಾಗಲೇ ರಷ್ಯಾ, ಬ್ರೆಜಿಲ್‌, ದಕ್ಷಿಣಾ ಆಫ್ರಿಕಾದ ಒಪ್ಪಿಗೆ ಸೂಚಿಸಿದ್ದು, ಭಾರತದ ನಿಲುವಿಗಾಗಿ ಚೀನಾ ಕಾಯುತ್ತಿದೆ. ಒಟ್ಟಿನಲ್ಲಿ ಬ್ರಿಕ್ಸ್‌ ಒಕ್ಕೂಟ ಮತ್ತಷ್ಟು ಬಲಗೊಂಡರೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಏಕಸ್ವಾಮ್ಯಕ್ಕೆ ಪೆಟ್ಟು ಬೀಳುವುದು ನಿಶ್ಚಿತ.

  • 100 ವರ್ಷಗಳಲ್ಲಿ ಇದೇ ಮೊದಲು – ಟೆಕ್ಸಾಸ್‌ನಲ್ಲಿ ಭೀಕರ ಪ್ರವಾಹಕ್ಕೆ 78 ಮಂದಿ ಬಲಿ, 41 ಜನ ಮಿಸ್ಸಿಂಗ್‌

    100 ವರ್ಷಗಳಲ್ಲಿ ಇದೇ ಮೊದಲು – ಟೆಕ್ಸಾಸ್‌ನಲ್ಲಿ ಭೀಕರ ಪ್ರವಾಹಕ್ಕೆ 78 ಮಂದಿ ಬಲಿ, 41 ಜನ ಮಿಸ್ಸಿಂಗ್‌

    – ವಿಷಪೂರಿತ ಹಾವುಗಳಿಂದ ಕಾರ್ಯಾಚರಣೆಗೆ ಅಡ್ಡಿ

    ವಾಷಿಂಗ್ಟನ್‌: ಅಮೆರಿಕದ ಟೆಕ್ಸಾಸ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ (Texas Flood) ಸಾವನ್ನಪ್ಪಿದವರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಈ ಪೈಕಿ 28 ಮಕ್ಕಳು ಸೇರಿದ್ದಾರೆ. ಇದರೊಂದಿಗೆ 41 ಮಂದಿ ಕಾಣೆಯಾಗಿದ್ದಾರೆ. ಕಳೆದ 100 ವರ್ಷಗಳಲ್ಲೇ ಇದು ಅತ್ಯಂತ ಭೀಕರ ಪ್ರವಾಹ ಎಂದು ವರದಿಗಳಿಂದ ತಿಳಿದುಬಂದಿದೆ.

    ಮುಂದಿನ 48 ಗಂಟೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಹೆಚ್ಚಿನ ಬಿರುಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಆದ್ರೆ ಇಲ್ಲಿ ವಿಷಪೂರಿತ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಇರಾನ್‌-ಇಸ್ರೇಲ್‌ ಯುದ್ಧದ ಬಳಿಕ ನೆತನ್ಯಾಹು-ಟ್ರಂಪ್‌ ಫಸ್ಟ್‌ ಮೀಟ್‌ – ಜು.7ರಂದು ವೈಟ್‌ಹೌಸ್‌ನಲ್ಲಿ ಮಹತ್ವದ ಭೇಟಿ

    ಟ್ರಂಪ್‌ ಸಂತಾಪ
    ಇನ್ನೂ ಮೃತರಿಗೆ ಸಂತಾಪ ಸೂಚಿಸಿರುವ ಯುಎಸ್ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump), ಇದು ನಿಜಕ್ಕೂ ಭಯಾನಕ, ದೇವರು ಜನರಿಗೆ ದುಃಖ ಬರಿಸುವ ಶಕ್ತಿ ಕೊಡಲೆಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಪ್ರವಾಹ ಪೀಡಿತ ಟೆಕ್ಸಾಸ್‌ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಶುಭಾಂಶು ಶುಕ್ಲಾರಿಂದ ಬೆಂಗಳೂರು ನೀರುಕರಡಿ ಪ್ರಯೋಗ ಪೂರ್ಣ

    ಟೆಕ್ಸಾಸ್‌ನಾದ್ಯಂತ ಸುರಿದ 15 ಇಂಚು (38 ಸೆಂ.ಮೀ) ಮಳೆಯಿಂದಾಗಿ ಹಠಾತ್‌ ಪ್ರವಾಹ ಸಂಭವಿಸಿದೆ. ಸದ್ಯ ರಕ್ಷಣಾ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವರೆಗೆ 850ಕ್ಕೂ ಹೆಚ್ಚು ಜನರನ್ನ ರಕ್ಷಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 25 ವರ್ಷದ ಬಳಿಕ ಪಾಕ್‌ ತೊರೆದ ಮೈಕ್ರೋಸಾಫ್ಟ್‌

  • ಇರಾನ್‌-ಇಸ್ರೇಲ್‌ ಯುದ್ಧದ ಬಳಿಕ ನೆತನ್ಯಾಹು-ಟ್ರಂಪ್‌ ಫಸ್ಟ್‌ ಮೀಟ್‌ – ಜು.7ರಂದು ವೈಟ್‌ಹೌಸ್‌ನಲ್ಲಿ ಮಹತ್ವದ ಭೇಟಿ

    ಇರಾನ್‌-ಇಸ್ರೇಲ್‌ ಯುದ್ಧದ ಬಳಿಕ ನೆತನ್ಯಾಹು-ಟ್ರಂಪ್‌ ಫಸ್ಟ್‌ ಮೀಟ್‌ – ಜು.7ರಂದು ವೈಟ್‌ಹೌಸ್‌ನಲ್ಲಿ ಮಹತ್ವದ ಭೇಟಿ

    ವಾಷಿಂಗ್ಟನ್‌: ಇರಾನ್‌-ಇಸ್ರೇಲ್‌ ಯುದ್ಧದ ಬಳಿಕ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ. ಜು.7ರಂದು (ಸೋಮವಾರ) ಶ್ವೇತಭವನದಲ್ಲಿ ನೆತನ್ಯಾಹು ಟ್ರಂಪ್‌ ಅವರನ್ನು ಭೇಟಿ ಮಾಡಲಿದ್ದಾರೆ.

    ಭೇಟಿ ವೇಳೆ ಗಾಜಾ ಪಟ್ಟಿಯಲ್ಲಿ (Gaza Strip) ಕದನ ವಿರಾಮ, ಇರಾನ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಈ ಸಭೆ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಎಂದು ತಜ್ಞರು ಅಂದಾಜಿಸಿರುವುದಾಗಿ ವರದಿಗಳು ತಿಳಿಸಿವೆ.

    ಇಸ್ರೇಲ್‌-ಇರಾನ್‌ ನಡುವಿನ ಕದನ ವಿರಾಮದ ಬಳಿಕ ಟ್ರಂಪ್‌ ಗಾಜಾ ಪಟ್ಟಿಯಲ್ಲಿ ಕದನ ವಿರಾಮಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಶ್ವೇತಭವನದ (White House) ಸಭೆಯಲ್ಲಿ ಉಭಯ ನಾಯಕರ ನಡುವಿನ ಪ್ರಮುಖ ಚರ್ಚಾ ವಿಷಯ ಇದೇ ಆಗಿರಲಿದೆ ಎಂದು ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್ (CSIS) ನ ಹಿರಿಯ ಸಲಹೆಗಾರ್ತಿ ಮೋನಾ ಯಾಕೌಬಿಯನ್ ಹೇಳಿದ್ದಾರೆ.

    ಅಲ್ಲದೇ ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ಹಮಾಸ್‌ ಕೂಡ ಸಹಮತ ಸೂಚಿಸಿದೆ. ಒತ್ತೆಯಾಳುಗಳ ಬಿಡುಗಡೆ ಮತ್ತು ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಮಾತುಕತೆಗೆ ಸಿದ್ಧವಿರುವುದಾಗಿ ಹಮಾಸ್‌ ಹೇಳಿದೆ ಎಂದು ತಿಳಿಸಿದ್ದಾರೆ.

    ಇರಾನ್‌ ಬಗ್ಗೆಯೂ ಮಹತ್ವದ ಚರ್ಚೆ
    ಮುಂದುವರಿದು ಮಾತನಾಡಿರುವ ಯಾಕೌಬಿಯನ್, ಟ್ರಂಪ್‌ ಮತ್ತು ನೆತನ್ಯಾಹು ಇರಾನ್‌ ಬಗೆಗೆ ಒಂದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ. ಇತ್ತೀಚೆಗೆ ಇರಾನ್‌ ಮೇಲಿನ ಜಂಟಿ ಮಿಲಿಟರಿ ಕಾರ್ಯಾಚರಣೆ ಇದಕ್ಕೆ ನಿದರ್ಶನವಾಗಿದೆ. ಹೀಗಾಗಿ ಭವಿಷ್ಯದ ಕಾರ್ಯತಂತ್ರಗಳ ಬಗ್ಗೆ ಉಭಯ ನಾಯಕರು ಒಗ್ಗಟಿನ ನಿಲುವು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

  • ಅಮೆರಿಕ ಪಾರ್ಟಿ; ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ ಎಲಾನ್‌ ಮಸ್ಕ್‌

    ಅಮೆರಿಕ ಪಾರ್ಟಿ; ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ ಎಲಾನ್‌ ಮಸ್ಕ್‌

    ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಮಾಜಿ ಮಿತ್ರ ಎಲಾನ್ ಮಸ್ಕ್ ಶನಿವಾರ ‘ಅಮೆರಿಕ ಪಾರ್ಟಿ’ (America Party) ಎಂಬ ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದ್ದಾರೆ.

    ಅಧ್ಯಕ್ಷ ಟ್ರಂಪ್ ‘ಒನ್ ಬಿಗ್, ಬ್ಯೂಟಿಫುಲ್ ಬಿಲ್’ಗೆ ಸಹಿ ಹಾಕಿದ ನಂತರ, ಟೆಕ್ ದೈತ್ಯ ಎಲಾನ್‌ ಮಸ್ಕ್ (Elon Musk) ‘ಅಮೆರಿಕ ಪಾರ್ಟಿ’ ಘೋಷಿಸುವ ನಿರ್ಧಾರ ಹೊರಬಿದ್ದಿತ್ತು. 2024 ರ ಚುನಾವಣೆಯಲ್ಲಿ ಟ್ರಂಪ್‌ಗೆ ಬೆಂಬಲವಾಗಿ ಮಸ್ಕ್‌ ನಿಂತಿದ್ದರು. ಇದನ್ನೂ ಓದಿ: ಟ್ರಂಪ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಒಪ್ಪಿಗೆ – ಭಾರತೀಯರಿಗೂ ಕಾದಿದೆ ಆಘಾತ

    ತೆರಿಗೆ ಮತ್ತು ಖರ್ಚು ಮಸೂದೆ ಜಾರಿಗೊಂಡರೆ ಉದ್ಯಮಿ ಎಲಾನ್‌ ಮಸ್ಕ್‌ ಅವರು ಎಲೆಕ್ಟ್ರಿಕ್‌ ವಾಹನಗಳ ಸಬ್ಸಿಡಿಗಿಂತ ಹೆಚ್ಚಿನದನ್ನು ಕಳೆದುಕೊಳ್ಳುವರು ಎಂದು ಟ್ರಂಪ್‌ ಎಚ್ಚರಿಸಿದ್ದಾರೆ.

    ಖರ್ಚು ಮತ್ತು ವೆಚ್ಚ ಮಸೂದೆ (ಡಿಒಜಿಇ) ವಿರೋಧಿಸಿ ರಿಪಬ್ಲಿಕನ್‌ ಸದಸ್ಯರ ವಿರುದ್ಧವೇ ಮಸ್ಕ್‌ ಸಿಡಿದೆದ್ದಿದ್ದಾರೆ. ಅಮೆರಿಕ ಸಂಸತ್‌ ಮುಂದೆ ಇರುವ ಮಸೂದೆ ಕುರಿತಂತೆ ಮಸ್ಕ್‌ ಟೀಕೆಗಳ ಬಳಿಕ ಇಬ್ಬರ ನಡುವೆ ಬಿರುಕು ಮೂಡಿತ್ತು. ಇದನ್ನೂ ಓದಿ: ಅರ್ಜೆಂಟೀನಾದಲ್ಲಿ ಪ್ರಧಾನಿ ಮೋದಿಗೆ ಹಲೋ ಹೇಳಲು 400 ಕಿಮೀ ಪ್ರಯಾಣಿಸಿದ ಭಾರತೀಯ

  • ಟ್ರಂಪ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಒಪ್ಪಿಗೆ – ಭಾರತೀಯರಿಗೂ ಕಾದಿದೆ ಆಘಾತ

    ಟ್ರಂಪ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಒಪ್ಪಿಗೆ – ಭಾರತೀಯರಿಗೂ ಕಾದಿದೆ ಆಘಾತ

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಹತ್ವಾಕಾಂಕ್ಷಿ ಪ್ರಮುಖ ತೆರಿಗೆ ಮಸೂದೆ ಒನ್ ಬಿಗ್ ಬ್ಯೂಟಿಫುಲ್ ಬಿಲ್ (One Big Beautiful Bill) ಅಮೆರಿಕ ಸಂಸತ್ತು ಕಾಂಗ್ರೆಸ್‌ನಲ್ಲಿ ಅಂಗೀಕಾರಗೊಂಡಿದೆ. ಈ ಮೂಲಕ ಟ್ರಂಪ್ ಗೆಲುವಿನ ನಗೆ ಬೀರಿದ್ದಾರೆ.

    ಅಮೆರಿಕದ ಕಾಂಗ್ರೆಸ್ ಅತ್ಯಲ್ಪ ಅಂತರದಿಂದ ಪ್ರಮುಖ ತೆರಿಗೆ ಮಸೂದೆಯನ್ನು ಪಾಸ್ ಮಾಡಿದೆಯಾದರೂ ಈ ಬೆಳವಣಿಗೆ ಟ್ರಂಪ್‌ಗೆ ಪ್ರಮುಖ ರಾಜಕೀಯ ಗೆಲವು ಸಿಕ್ಕಿದೆ ಎಂದು ವಿಶ್ಲೇಷಿಸಲಾಗುತ್ತದೆ. ಇದೂವರೆಗೆ ಸಹಿ ಮಾಡಲಾದ ಮಸೂದೆಗಳ ಪೈಕಿ ಇದು ಅತಿದೊಡ್ಡ ಮಸೂದೆಯಾಗಿದೆ ಅಂತ ಟ್ರಂಪ್ ಬಣ್ಣಿಸಿದ್ದಾರೆ.

    ಅಮೆರಿಕವು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿದ್ದು, ನಾವು ಇದನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿ ಮಾಡುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಶ್ವೇತಭವನ ಕೂಡ ಪ್ರತಿಕ್ರಿಯಿಸಿದ್ದು, ಅಮೆರಿಕದ ಸುವರ್ಣಯುಗ ಆರಂಭವಾಗಿದ್ದು, ಒನ್ ಬಿಗ್ ಬ್ಯೂಟಿಫುಲ್ ಬಿಲ್ ಅಧ್ಯಕ್ಷರ ಸಹಿಗಾಗಿ ಶೀಘ್ರದಲ್ಲೇ ವೈಟ್‌ಹೌಸ್‌ಗೆ ಬರಲಿದೆ ಎಂದಿದೆ. ಇದನ್ನೂ ಓದಿ: ಟ್ರಿನಿಡಾಡ್‌ನ ಸಾಂಪ್ರದಾಯಿಕ ಸೊಹರಿ ಎಲೆಯಲ್ಲಿ ಭೋಜನ ಸವಿದ ಪ್ರಧಾನಿ ಮೋದಿ

    ಮಸೂದೆಯಲ್ಲಿ ಏನಿದೆ?
    ಅಮೆರಿಕ ಸರ್ಕಾರದ ಬೊಕ್ಕಸ ತುಂಬಿಸುವ ಮಸೂದೆಯಾಗಿದ್ದು ಸರ್ಕಾರಿ ವೆಚ್ಚ ಇಳಿಸುವ ಉದ್ದೇಶ ಹೊಂದಿದೆ. ಟ್ರಂಪ್ ಅವಧಿಯಲ್ಲಿ ಉದ್ಯಮ ತೆರೆದವರಿಗೆ ತೆರಿಗೆ ಕಡಿತ ಮಾಡಲಾಗುತ್ತದೆ. ಆರೋಗ್ಯ ವಿಮೆ ಹೆಚ್ಚಿಸ್ತಿದ್ದು, 11.8 ಕೋಟಿ ಅಮೆರಿಕನ್ನರಿಗೆ ಸಂಕಷ್ಟವಾಗುವ ಸಾಧ್ಯತೆಯಿದೆ

    ಒಟ್ಟು 5 ಟ್ರಿಲಿಯನ್ ಡಾಲರ್ ರಾಷ್ಟ್ರೀಯ ಸಾಲದ ಯೋಜನೆ ಇದಾಗಿದ್ದು ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಇತರೆ ದೇಶಗಳಿಗೆ ಅಮೆರಿಕದ ಸಹಾಯಧನ ಕಡಿತ ಆಗಲಿದೆ. ಆಹಾರ, ಆರೋಗ್ಯ, ಶಿಕ್ಷಣಕ್ಕೆ ನೀಡುವ ನೆರವಿಗೆ ಕತ್ತರಿ ಬೀಳಲಿದೆ. ಇದನ್ನೂ ಓದಿ: ಟ್ರಿನಿಡಾಡ್ ಪ್ರಧಾನಿಗೆ ಮಹಾಕುಂಭದ ಜಲ, ರಾಮಮಂದಿರದ ಪ್ರತಿಕೃತಿ ಉಡುಗೊರೆಯಾಗಿ ನೀಡಿದ ಮೋದಿ

    ಭಾರತೀಯರಿಗೂ ಅಘಾತ
    ಅಮೆರಿಕದಲ್ಲಿದ್ದು ಭಾರತಕ್ಕೆ (India) ಹಣ ಕಳಿಸಿದ್ರೆ 3.5% ಹೆಚ್ಚು ತೆರಿಗೆ ವಿಧಿಸಲಾಗುತ್ತಿದ್ದು ಅಂದಾಜು 10-12 ಲಕ್ಷ ಭಾರತೀಯರ ಮೇಲೆ ಪರಿಣಾಮ ಬೀರಲಿದೆ. ಶಿಕ್ಷಣಕ್ಕೆ ಅಮೆರಿಕಗೆ ಹೋದರೂ ಹೆಚ್ಚುವರಿ ತೆರಿಗೆ ಕಟ್ಟಬೇಕಾಗುತ್ತದೆ. ಭಾರತವಷ್ಟೇ ಅಲ್ಲ ಇತರೆ ದೇಶದ ವಲಸಿಗರಿಗೂ ಸಂಕಷ್ಟ ಆಗಲಿದೆ.

  • ಅಮೆರಿಕದಿಂದ ಮಸ್ಕ್‌ ಗಡಿಪಾರು ಆಗ್ತಾರಾ? – ಸಿಟ್ಟು ಹೊರ ಹಾಕಿ ಟ್ರಂಪ್‌ ವಾರ್ನಿಂಗ್‌

    ಅಮೆರಿಕದಿಂದ ಮಸ್ಕ್‌ ಗಡಿಪಾರು ಆಗ್ತಾರಾ? – ಸಿಟ್ಟು ಹೊರ ಹಾಕಿ ಟ್ರಂಪ್‌ ವಾರ್ನಿಂಗ್‌

    ವಾಷಿಂಗ್ಟನ್‌: ಅಮೆರಿಕದಿಂದ ಎಲೋನ್‌ ಮಸ್ಕ್‌ ಅವರನ್ನು ಗಡಿಪಾರು ಮಾಡಲಾಗುತ್ತಾ ಹೀಗೊಂದು ಪ್ರಶ್ನೆ ಎದ್ದಿದೆ. ಈ ಪ್ರಶ್ನೆ ಏಳಲು ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಮಾಡಿದ ಒಂದು ಪೋಸ್ಟ್‌.

    ನಮ್ಮ ಸಬ್ಸಿಡಿ ಇಲ್ಲದಿದ್ದರೆ ಎಲಾನ್ ಮಸ್ಕ್ (Elon Musk) ಅಂಗಡಿ ಮುಚ್ಚಿ ದಕ್ಷಿಣ ಆಫ್ರಿಕಾಗೆ (South Africa) ಹೋಗಬೇಕಾಗುತ್ತದೆ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. ಮಸ್ಕ್ ಅವರನ್ನು ಗಡಿಪಾರು ಮಾಡಬಹುದೇ ಎಂದು ವರದಿಗಾರರು ಕೇಳಿದ್ದಕ್ಕೆ ಟ್ರಂಪ್‌ “ನನಗೆ ಗೊತ್ತಿಲ್ಲ, ನಾವು ನೋಡಬೇಕು ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಪಾರ್ಟಿ’; ಹೊಸ ರಾಜಕೀಯ ಪಕ್ಷ ಕಟ್ಟುವ ಎಚ್ಚರಿಕೆ ಕೊಟ್ಟ ಮಸ್ಕ್

    ಅಮೆರಿಕದಲ್ಲಿ ಹೊಸ ಪಕ್ಷ ಕಟ್ಟುವ ಬಗ್ಗೆ ಎಚ್ಚರಿಕೆ ನೀಡಿದ್ದಕ್ಕೆ ಟ್ರಂಪ್‌, ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಅನುಮೋದಿಸುವ ಮೊದಲೇ ಅವರಿಗೆ ನಾನು ಇವಿ ಆದೇಶವನ್ನು ಬಲವಾಗಿ ವಿರೋಧಿಸುತ್ತೇನೆ ಎನ್ನುವುದು ಅವರಿಗೆ ತಿಳಿದಿತ್ತು ಎಂದು ಕುಟುಕಿದ್ದಾರೆ.

    ಇವಿ ವಿರೋಧಿಸುವುದು ನನ್ನ ಅಭಿಯಾನದ ಒಂದು ಭಾಗವಾಗಿತ್ತು. ಈಗ ಈ ನಿರ್ಧಾರವನ್ನು ವಿರೋಧಿಸುವುದು ಹಾಸ್ಯಾಸ್ಪದವಾಗಿದೆ. ಇತಿಹಾಸದಲ್ಲಿ ಮಸ್ಕ್‌ಗಿಂತ ಯಾರು ಅತಿ ಹೆಚ್ಚು ಸಬ್ಸಿಡಿ ಪಡೆದಿರಲಾರರು. ಸಬ್ಸಿಡಿ ಇಲ್ಲದೇ ಇದ್ದರೆ ಮಸ್ಕ್‌ ತಮ್ಮ ಅಂಗಡಿ ಮುಚ್ಚಿ ದಕ್ಷಿಣ ಆಫ್ರಿಕಾಗೆ ಹೋಗಬೇಕಾಗಿತ್ತು. ಇನ್ನು ಮುಂದೆ ರಾಕೆಟ್ ಉಡಾವಣೆಗಳು, ಉಪಗ್ರಹಗಳು ಅಥವಾ ಎಲೆಕ್ಟ್ರಿಕ್ ಕಾರು ಉತ್ಪಾದನೆ ಇರುವುದಿಲ್ಲ. ನಾವು ಬಹಳಷ್ಟು ಹಣವನ್ನು ಉಳಿಸಬೇಕು ಎಂದು ಬರೆದಿದ್ದಾರೆ.

    ಟ್ರಂಪ್ ಜಾರಿಗೆ ತರಲು ಹೊರಟಿರುವ ‘ಒನ್ ಬಿಗ್ ಬ್ಯೂಟಿಫುಲ್ ಬಿಲ್’ ತೆರಿಗೆಯಿಂದ ಹಿಡಿದು ಇನ್ಶುರೆನ್ಸ್, ಮಿಲಿಟರಿ, ಗಡಿ ವಿಚಾರಗಳನ್ನೂ ಒಳಗೊಂಡಿದೆ. ಇದು 4.2 ಟ್ರಿಲಿಯನ್ ಡಾಲರ್ (360 ಲಕ್ಷ ಕೋಟಿ ರೂ) ಮೌಲ್ಯದ ಶಾಸನ ಎಂದು ವರ್ಣಿತವಾಗುತ್ತಿದೆ. 1,000 ಪುಟಗಳ ಈ ಮಹಾ ಮಸೂದೆಯು ಅಮೆರಿಕನ್ ಸಂಸತ್ತಿನಲ್ಲಿ ಅನುಮೋದನೆ ಪಡೆಯುವ ಹಾದಿಯಲ್ಲಿದೆ. ಅಮೆರಿಕದ ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್‌ನಲ್ಲಿ ಅನುಮೋದನೆ ಸಿಕ್ಕಿದೆ. ಮೇಲ್ಮನೆಯಾದ ಸೆನೆಟ್‌ನಲ್ಲಿ ಪ್ರಾಥಮಿಕ ಅನುಮೋದನೆ ಪಡೆದಿದೆ.

  • ‘ಅಮೆರಿಕ ಪಾರ್ಟಿ’; ಹೊಸ ರಾಜಕೀಯ ಪಕ್ಷ ಕಟ್ಟುವ ಎಚ್ಚರಿಕೆ ಕೊಟ್ಟ ಮಸ್ಕ್‌

    ‘ಅಮೆರಿಕ ಪಾರ್ಟಿ’; ಹೊಸ ರಾಜಕೀಯ ಪಕ್ಷ ಕಟ್ಟುವ ಎಚ್ಚರಿಕೆ ಕೊಟ್ಟ ಮಸ್ಕ್‌

    ಸರ್ಕಾರದ ಖರ್ಚು ವಿಧೇಯಕಕ್ಕೆ ವಿರೋಧ; ಡೊನಾಲ್ಡ್ ಟ್ರಂಪ್ – ಎಲಾನ್ ಮಸ್ಕ್ ನಡುವೆ ಸಂಘರ್ಷ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಉದ್ಯಮಿ ಎಲಾನ್ ಮಸ್ಕ್‌ (Elon Musk) ನಡುವೆ ಸಂಘರ್ಷ ಏರ್ಪಟ್ಟಿದೆ. ಸರ್ಕಾರದ ಖರ್ಚು ವಿಧೇಯಕದ ವಿರುದ್ಧ ಮಸ್ಕ್ ವ್ಯಕ್ತಪಡಿಸಿದ ಟೀಕೆಗೆ ಪ್ರತಿಕ್ರಿಯೆಯಾಗಿ, ಟ್ರಂಪ್, ಮಸ್ಕ್‌ರ ಸ್ಪೇಸ್‌ಎಕ್ಸ್‌ನ ರಾಕೆಟ್ ಉಡಾವಣೆಗಳು ಮತ್ತು ಟೆಸ್ಲಾದ ಎಲೆಕ್ಟ್ರಿಕ್ ವಾಹನ ಉತ್ಪಾದನೆಯನ್ನು ತಡೆಯುವ ಬೆದರಿಕೆ ಹಾಕಿದ್ದಾರೆ.

    ಟ್ರಂಪ್ ತಮ್ಮ ಹೇಳಿಕೆಯಲ್ಲಿ, ಮಸ್ಕ್‌ ಕಂಪನಿಗಳಿಗೆ ಸಂಬಂಧಿಸಿದ ಒಪ್ಪಂದಗಳನ್ನು ಸರ್ಕಾರ ರದ್ದುಗೊಳಿಸಬಹುದು ಎಂದು ಸೂಚಿಸಿದ್ದಾರೆ. ಮಸ್ಕ್‌ ಎಕ್ಸ್‌ನಲ್ಲಿ ಖರ್ಚು ವಿಧೇಯಕದ ವಿರುದ್ಧ ಟೀಕೆ ಮಾಡಿದ್ದು, ಟ್ರಂಪ್‌ರ ಕೋಪಕ್ಕೆ ಕಾರಣವಾಗಿದೆ. ಈ ವಿಧೇಯಕವು ಸರ್ಕಾರದ ವಿವಿಧ ಯೋಜನೆಗಳಿಗೆ ಧನಸಹಾಯವನ್ನು ಒದಗಿಸುತ್ತದೆ, ಆದರೆ ಮಸ್ಕ್ ಇದನ್ನು ವಿಪರೀತ ಖರ್ಚು ಎಂದು ಟೀಕಿಸಿದ್ದಾರೆ.

    ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, ‘ಎಲಾನ್ ಮಸ್ಕ್ ಅವರು ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಬಲವಾಗಿ ಅನುಮೋದಿಸುವ ಬಹಳ ಹಿಂದೆಯೇ, ನಾನು EV ವ್ಯವಸ್ಥೆಯನ್ನು ಬಲವಾಗಿ ವಿರೋಧಿಸುತ್ತೇನೆ ಎಂದು ಅವರಿಗೆ ತಿಳಿದಿತ್ತು. ಇದು ಹಾಸ್ಯಾಸ್ಪದ ಮತ್ತು ಅದು ಯಾವಾಗಲೂ ನನ್ನ ಅಭಿಯಾನದ ಪ್ರಮುಖ ಭಾಗವಾಗಿತ್ತು. ಎಲೆಕ್ಟ್ರಿಕ್ ಕಾರುಗಳು ಸರಿ, ಆದರೆ ಎಲ್ಲರೂ ಒಂದನ್ನು ಹೊಂದಲು ಒತ್ತಾಯಿಸಬಾರದು’ ಎಂದು ಹೇಳಿದರು.  ಇದನ್ನೂ ಓದಿ: ಭಾರತ ಹೊರಗಿಟ್ಟು ಸಾರ್ಕ್‌ಗೆ ಪರ್ಯಾಯವಾಗಿ ಹೊಸ ಪ್ರಾದೇಶಿಕ ಒಕ್ಕೂಟ ರಚಿಸಲು ಚಿಂತನೆ

    ಇತಿಹಾಸದಲ್ಲಿ ಬೇರೆ ಯಾರು ಪಡೆತದಷ್ಟು ಹೆಚ್ಚು ಸರ್ಕಾರಿ ನೆರವು ಮಸ್ಕ್ ಪಡೆದಿದ್ದಾರೆ ಎಂದು ಟ್ರಂಪ್ ಆರೋಪಿಸಿದರು. ಸಬ್ಸಿಡಿ ಕೊಡದಿದ್ದರೆ ಎಲಾನ್ ಬಹುಶಃ ಅಂಗಡಿಯನ್ನು ಮುಚ್ಚಿ ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಬೇಕಾಗಿತ್ತು ಎಂದು ಕುಟುಕಿದ್ದಾರೆ. ಮಸ್ಕ್ ನೇತೃತ್ವ ವಹಿಸಿದ್ದ ಸರ್ಕಾರಿ ದಕ್ಷತೆ ಇಲಾಖೆಯಾದ DOGEಯ ತನಿಖೆ ನಡೆಸಬೇಕು ಎಂದರು.

    ಟ್ರಂಪ್ ಆಕ್ಷೇಪದ ಬೆನ್ನಲೆ X ನಲ್ಲಿ ಈ ಬಗ್ಗೆ ಮಸ್ಕ್ ಸರಣಿ ಪೋಸ್ಟ್‌ಗಳಲ್ಲಿ ಮಾಡಿದ್ದಾರೆ. ಇದರಲ್ಲಿ ಖರ್ಚು ಯೋಜನೆಯನ್ನು ಬೆಂಬಲಿಸಿದ ಸೆನೆಟ್‌ಗಳನ್ನು ಗುರಿಯಾಗಿಸಿಕೊಂಡರು. ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆ ಪ್ರಚಾರ ಮಾಡಿ ನಂತರ ಇತಿಹಾಸದಲ್ಲಿ ಅತಿದೊಡ್ಡ ಸಾಲ ಹೆಚ್ಚಳಕ್ಕೆ ತಕ್ಷಣವೇ ಮತ ಚಲಾಯಿಸಿದ ಪ್ರತಿಯೊಬ್ಬ ಸದಸ್ಯರು ನಾಚಿಕೆಯಿಂದ ತಲೆ ತಗ್ಗಿಸಬೇಕು ಎಂದು ಅವರು ಹೇಳಿದರು.

    ಈ ಮಸೂದೆ ಅಂಗೀಕಾರವಾದರೆ, ಅವರು ಹೊಸ ರಾಜಕೀಯ ಪಕ್ಷವನ್ನು ರಚಿಸುವುದಾಗಿ ಅವರು ಎಚ್ಚರಿಸಿದ್ದಾರೆ. ಈ ಹುಚ್ಚುತನದ ಖರ್ಚು ಮಸೂದೆ ಅಂಗೀಕಾರವಾದರೆ, ಮರುದಿನ ಅಮೆರಿಕ ಪಕ್ಷ ರಚನೆಯಾಗುತ್ತದೆ. ನಮ್ಮ ದೇಶಕ್ಕೆ ಡೆಮೋಕ್ರಾಟ್-ರಿಪಬ್ಲಿಕನ್ ಯುನಿಪಾರ್ಟಿಗೆ ಪರ್ಯಾಯದ ಅಗತ್ಯವಿದೆ, ಇದರಿಂದ ಜನರಿಗೆ ನಿಜವಾಗಿಯೂ ಧ್ವನಿ ಇರುತ್ತದೆ ಎಂದು ಮಸ್ಕ್ ಪೋಸ್ಟ್ ಮಾಡಿದ್ದಾರೆ.

    ಸ್ಪೇಸ್‌ಎಕ್ಸ್‌ನ ರಾಕೆಟ್ ಉಡಾವಣೆಗಳು ನಾಸಾದೊಂದಿಗಿನ ಒಪ್ಪಂದಗಳಿಗೆ ಮಹತ್ವದ್ದಾಗಿದ್ದು, ಟೆಸ್ಲಾ ಇವಿ ಉತ್ಪಾದನೆಯು ಅಮೆರಿಕಾದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಟ್ರಂಪ್‌ರ ಈ ಎಚ್ಚರಿಕೆಯು ಈ ಎರಡೂ ಕ್ಷೇತ್ರಗಳಲ್ಲಿ ಮಸ್ಕ್‌ರ ವ್ಯಾಪಾರಕ್ಕೆ ಗಂಭೀರ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. ಈ ಘಟನೆಯು ರಾಜಕೀಯ ಮತ್ತು ಉದ್ಯಮ ಕ್ಷೇತ್ರದ ನಡುವಿನ ಘರ್ಷಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಇದನ್ನೂ ಓದಿ: ರಷ್ಯಾದಿಂದ ಅತಿದೊಡ್ಡ ವೈಮಾನಿಕ ದಾಳಿ – ಬರೋಬ್ಬರಿ 477 ಡ್ರೋನ್‌, 60 ಮಿಸೈಲ್‌ಗಳಿಂದ ಉಕ್ರೇನ್‌ ಮೇಲೆ ಅಟ್ಯಾಕ್‌

  • ಇರಾನ್‌ನ ಪರಮಾಣು ಯೋಜನೆಗೆ 30 ಶತಕೋಟಿ ಡಾಲರ್‌ ನೆರವು ಪ್ರಸ್ತಾಪಿಸಿದ ಅಮೆರಿಕ

    ಇರಾನ್‌ನ ಪರಮಾಣು ಯೋಜನೆಗೆ 30 ಶತಕೋಟಿ ಡಾಲರ್‌ ನೆರವು ಪ್ರಸ್ತಾಪಿಸಿದ ಅಮೆರಿಕ

    ವಾಷಿಂಗ್ಟನ್‌: ನಾಗರಿಕ ಇಂಧನ ಉತ್ಪಾದಕ ಪರಮಾಣು ಯೋಜನೆಗಾಗಿ (Nuclear Programme) ಇರಾನ್‌ಗೆ (Iran) 30 ಶತಕೋಟಿ ಡಾಲರ್‌ ಸಹಾಯ ಮಾಡಲು ಅಮೆರಿಕ (America) ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಚರ್ಚೆಗಳು ಎರಡು ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಮಾತುಕತೆಗೆ ಪ್ರಮುಖ ತಿರುವು ನೀಡಿದೆ.

    ಇರಾನ್‌ನ ಮೂರು ಪರಮಾಣು ತಾಣಗಳಾದ ಇಸ್ಫಹಾನ್, ಫೋರ್ಡೋ ಮತ್ತು ನಟಾಂಜ್ ಮೇಲೆ ಅಮೆರಿಕ ದಾಳಿಯ ಮರುದಿನ ಶ್ವೇತಭವನದಲ್ಲಿ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಗಲ್ಫ್ ಪಾಲುದಾರರ ನಡುವೆ ನಡೆದ ರಹಸ್ಯ ಮಾತುಕತೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಾಂಬ್‌ ದಾಳಿ ನಡೆದಿರೋದು ಸ್ಪಷ್ಟ – ನಮ್ಮಲ್ಲೇನು ಆಗೇ ಇಲ್ಲ ಎನ್ನುತ್ತಿದ್ದ ಇರಾನ್‌ಗೆ ವಿಡಿಯೋ ಸಮೇತ ಅಮೆರಿಕ ತಿರುಗೇಟು

    ಇರಾನ್ ಯುರೇನಿಯಂನ್ನು ಉತ್ಕೃಷ್ಟಗೊಳಿಸಬಾರದು, ನಾಗರಿಕ ಇಂಧನ ಉದ್ದೇಶಗಳಿಗಾಗಿ ಮಾತ್ರ ಬಳಕೆ ಮಾಡಬೇಕು. ಈ ಯೋಜನೆಗೆ ಅಂದಾಜು 20-30 ಶತಕೋಟಿ ಡಾಲರ್ ಹೂಡಿಕೆ ಮಾಡುವ ಪ್ರಸ್ತಾವನೆಯನ್ನು ಅಮೆರಿಕ ಇಟ್ಟಿದೆ. ವಾಷಿಂಗ್ಟನ್‌ನ ಮಾತುಕತೆಗೆ ಒಪ್ಪದ ಇರಾನ್ ಯುರೇನಿಯಂ ಪುಷ್ಟೀಕರಣದ ಅಗತ್ಯವಿದೆ ಎಂದು ಹೇಳಿದೆ ಎನ್ನಲಾಗಿದೆ.

    ಈ ಮಾತುಕತೆಯಲ್ಲಿ ಟೆಹ್ರಾನ್ ಮೇಲಿನ ಕೆಲವು ನಿರ್ಬಂಧಗಳನ್ನು ಸಂಭಾವ್ಯವಾಗಿ ತೆಗೆದುಹಾಕವ ಭರವಸೆಯನ್ನು ಅಮೇರಿಕ ನೀಡಿದೆ. ಪಶ್ಚಿಮ ಏಷ್ಯಾದ ರಾಷ್ಟ್ರವು ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ಪ್ರಸ್ತುತ 6 ಬಿಲಿಯನ್ ಡಾಲರ್‌ಗಳನ್ನು ಮುಕ್ತವಾಗಿ ಬಳಸಲು ಅನುಮತಿಸುವುದು ಸೇರಿದೆ.

    ಮುಂದಿನ ವಾರ ಎರಡೂ ಕಡೆಯವರು ಸಭೆ ಸೇರಲಿದ್ದಾರೆ ಎಂದು ಟ್ರಂಪ್ ತಿಳಿಸಿದ್ದು, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಇದನ್ನು ತಿರಸ್ಕರಿಸಿದ್ದಾರೆ. ಇರಾನ್‌ ಅಂತಹ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಭಾರತದ ಜೊತೆ ಶೀಘ್ರವೇ ಬಿಗ್‌ ಟ್ರೇಡ್‌ ಡೀಲ್‌ – ಟ್ರಂಪ್‌ ಘೋಷಣೆ

  • ಭಾರತದ ಜೊತೆ ಶೀಘ್ರವೇ ಬಿಗ್‌ ಟ್ರೇಡ್‌ ಡೀಲ್‌ – ಟ್ರಂಪ್‌ ಘೋಷಣೆ

    ಭಾರತದ ಜೊತೆ ಶೀಘ್ರವೇ ಬಿಗ್‌ ಟ್ರೇಡ್‌ ಡೀಲ್‌ – ಟ್ರಂಪ್‌ ಘೋಷಣೆ

    ವಾಷಿಂಗ್ಟನ್‌: ಭಾರತದ (India) ಜೊತೆ ಶೀಘ್ರವೇ ಬಹಳ ದೊಡ್ಡ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಘೋಷಿಸಿದ್ದಾರೆ.

    ಭಾರತ ಮತ್ತು ಅಮೆರಿಕ (USA) ನಡುವೆ ಕಳೆದ 4 ದಿನಗಳಿಂದ ವ್ಯಾಪಾರ ಒಪ್ಪಂದ ಸಂಬಂಧ ಸುದೀರ್ಘ ಮಾತುಕತೆ ನಡೆಯುತ್ತಿದೆ. ಈ ಮಾತುಕತೆಯ ಸಮಯದಲ್ಲೇ ಟ್ರಂಪ್‌ ಅವರು ಶ್ವೇತ ಭವನದಲ್ಲಿ ನಡೆದ ಬಿಗ್ ಬ್ಯೂಟಿಫುಲ್ ಕಾರ್ಯಕ್ರಮದಲ್ಲಿ ಭಾರತದ ಜೊತೆಗಿನ ಒಪ್ಪಂದ ಬಗ್ಗೆ ಮಾತನಾಡಿದರು.

    ಪ್ರತಿಯೊಬ್ಬರೂ ಒಪ್ಪಂದ ಮಾಡಿಕೊಳ್ಳಲು ಮತ್ತು ಅದರಲ್ಲಿ ಭಾಗವಹಿಸಲು ಬಯಸುತ್ತಾರೆ. ನಾವು ನಿನ್ನೆ ಚೀನಾದೊಂದಿಗೆ ಸಹಿ ಹಾಕಿದ್ದೇವೆ. ನಾವು ಕೆಲವು ಉತ್ತಮ ಒಪ್ಪಂದಗಳನ್ನು ಹೊಂದಿದ್ದೇವೆ. ಬಹುಶಃ ಭಾರತದೊಂದಿಗೆ ಬಹಳ ದೊಡ್ಡ ಒಪ್ಪಂದ ಮಾಡುತ್ತಿದ್ದೇವೆ. ಈ ವೇಳೆ ಅವರು ನಾವು ಎಲ್ಲರೊದಿಗೆ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಕೆಲವರಿಗೆ ಮಾತ್ರ ಪತ್ರ ಕಳುಹಿಸುತ್ತೇವೆ ಎಂದು ಅವರು ಹೇಳಿದರು. ಇದನ್ನೂ ಓದಿ: ಬಾಂಬ್‌ ದಾಳಿ ನಡೆದಿರೋದು ಸ್ಪಷ್ಟ – ನಮ್ಮಲ್ಲೇನು ಆಗೇ ಇಲ್ಲ ಎನ್ನುತ್ತಿದ್ದ ಇರಾನ್‌ಗೆ ವಿಡಿಯೋ ಸಮೇತ ಅಮೆರಿಕ ತಿರುಗೇಟು

    ಮೆಗಾ ವ್ಯಾಪಾರ ಒಪ್ಪಂದದ ಕುರಿತು ನಾಲ್ಕು ದಿನಗಳ ಮಾತುಕತೆ ವೇಳೆ ಎರಡೂ ದೇಶಗಳಲ್ಲಿ ಕೈಗಾರಿಕಾ ಮತ್ತು ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶ, ಸುಂಕ ಕಡಿತ ಮತ್ತು ಸುಂಕ ರಹಿತ ವ್ಯಾಪಾರದ ಬಗ್ಗೆ ಚರ್ಚೆ ನಡೆಸಲಾಗಿದೆ.

    ಮಾತುಕತೆ ವೇಳೆ ಎರಡು ದೇಶಗಳ ನಡುವೆ ಪ್ರಸ್ತುತ ಇರುವ 190 ಬಿಲಿಯನ್ ಡಾಲರ್‌ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು 2023ರ ವೇಳೆಗೆ 500 ಬಿಲಿಯನ್ ಡಾಲರ್‌ಗೆ ಕೊಂಡೊಯ್ಯುವ ಗುರಿಯನ್ನು ಹಾಕಲಾಗಿದೆ.

    ಚೀನಾದ ಜೊತೆ ಅಮೆರಿಕದ ವ್ಯಾಪಾರ ಒಪ್ಪಂದದ ವಿವರ ಲಭ್ಯವಾಗದೇ ಇದ್ದರೂ ಅಪರೂಪದ ಭೂ ಖನಿಜ ರಫ್ತನ್ನು ತ್ವರಿತಗೊಳಿಸಲು ಈ ಒಪ್ಪಂದ ಗಮನಹರಿಸಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

  • ಬಾಂಬ್‌ ದಾಳಿ ನಡೆದಿರೋದು ಸ್ಪಷ್ಟ – ನಮ್ಮಲ್ಲೇನು ಆಗೇ ಇಲ್ಲ ಎನ್ನುತ್ತಿದ್ದ ಇರಾನ್‌ಗೆ ವಿಡಿಯೋ ಸಮೇತ ಅಮೆರಿಕ ತಿರುಗೇಟು

    ಬಾಂಬ್‌ ದಾಳಿ ನಡೆದಿರೋದು ಸ್ಪಷ್ಟ – ನಮ್ಮಲ್ಲೇನು ಆಗೇ ಇಲ್ಲ ಎನ್ನುತ್ತಿದ್ದ ಇರಾನ್‌ಗೆ ವಿಡಿಯೋ ಸಮೇತ ಅಮೆರಿಕ ತಿರುಗೇಟು

    ವಾಷಿಂಗ್ಟನ್‌: ಅಮೆರಿಕದ ಬಾಂಬ್‌ ದಾಳಿಯಿಂದ (America Strikes In Iran) ನಮ್ಮಲ್ಲಿ ಅಂಥದ್ದೇನೂ ಹಾನಿಯಾಗಿಲ್ಲ ಎಂದಿದ್ದ ಇರಾನ್‌ಗೆ ಅಮೆರಿಕ ಈಗ ವಿಡಿಯೋ ಸಮೇತ ತಿರುಗೇಟು ಕೊಟ್ಟಿದೆ.

    ಇರಾನ್‌ನ ಅಣುಸ್ಥಾವರದ ಮೇಲೆ ಮಾಡಿರುವ ಬಿ2 ಬಾಂಬರ್‌ಗಳ (B2 Bomber) ಮಿಡ್‌ನೈಟ್ ಹ್ಯಾಮರ್ ದಾಳಿಯ ಹೊಸ ವಿಡಿಯೋವನ್ನು ಪೆಂಟಗನ್‌ (Pentagon) (ಅಮೆರಿಕ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ) ಅಮೆರಿಕ ಬಿಡುಗಡೆ ಮಾಡಿದೆ. ಈ ವಿಡಿಯೋನಲ್ಲಿ ಅಮೆರಿಕವು ವಿಶ್ವದ ಶಕ್ತಿಶಾಲಿ ವೆಪೆನ್‌ ʻಬಂಕರ್‌ ಬಸ್ಟರ್‌ʼ ಬಳಸಿ ದಾಳಿ ನಡೆಸಿರುವುದು ಸ್ಪಷ್ಟವಾಗಿದೆ. ಇದನ್ನೂ ಓದಿ: ವಿಶ್ವದ ಪವರ್‌ಫುಲ್‌ ವೆಪೆನ್‌ ʻಬಂಕರ್‌ ಬಸ್ಟರ್‌ʼ – 14,000 ಕೆಜಿ ತೂಕದ ಬಾಂಬ್‌ ಬಳಸಿ ಇರಾನ್‌ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ

    ಪೆಂಟಗನ್‌ನ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ಲೆಫ್ಟಿನೆಂಟ್ ಜನರಲ್ ಡ್ಯಾನ್ ಕೈನ್ ಅಮೆರಿಕದ ಬಿ2 ಬಾಂಬರ್‌ಗಳು ಹೇಗೆ ದಾಳಿ ನಡೆಸಿವೆ ಎಂಬುದನ್ನು ಇಂಚಿಂಚಾಗಿ ವಿವರಿಸಿದ್ರು. ಒಂದೊಂದೇ ದೃಶ್ಯಗಳನ್ನು ಬಿಡುಗಡೆ ಮಾಡುತ್ತಾ.. ಸಾಮಾನ್ಯ ಬಾಂಬ್‌ಗಳಿಗಿಂತ ʻಬಂಕರ್‌ ಬಸ್ಟರ್‌ʼ ಎಷ್ಟು ವಿಭಿನ್ನ? ಇದರ ಹಾನಿ ಪ್ರಮಾಣ ಹೇಗಿರುತ್ತೆ? ಭೂಮಿಯನ್ನು ಸೀಳಿಕೊಂಡು ಪರಮಾಣು ಕೇಂದ್ರವನ್ನು ಧ್ವಂಸಗೊಳಿಸಿದ್ದು ಹೇಗೆ? ಎಂಬೆಲ್ಲ ಮಾಹಿತಿಗಳನ್ನ ವಿವರಿಸಿದ್ದಾರೆ.  ಇದನ್ನೂ ಓದಿ: ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್‌ ದಾಳಿ

    ನೆಲದಡಿಯಿಂದ ಸುಮಾರು 80 ರಿಂದ 90 ಮೀಟರ್ (295 ಅಡಿ) ಆಳದಲ್ಲಿರುವ ಫೋರ್ಡೋ ಪರಮಾಣು ಘಟಕವನ್ನು ಅಮೆರಿಕ ಬಿ2 ಬಾಂಬರ್‌ ಧ್ವಂಸಗೊಳಿಸಿರುವುದು, ಅದರ ಭೀಕರತೆ ಹೇಗಿತ್ತು? ಎಂಬುದನ್ನು ವಿಡಿಯೋ ಬಿಚ್ಚಿಟ್ಟಿದೆ.  ಇದನ್ನೂ ಓದಿ: ಅಮೆರಿಕ ಬಳಿಕ ಇರಾನ್‌ನ ಶಕ್ತಿಶಾಲಿ ಫೋರ್ಡೋ ಪರಮಾಣು ಘಟಕದ ಮೇಲೆ ಇಸ್ರೇಲ್‌ ದಾಳಿ

    ಅಮೆರಿಕ ದಾಳಿ ಎಷ್ಟು ಭೀಕರ?
    ಇರಾನ್‌ನ ಫೋರ್ಡೊ, ನಟಾಂಜ್ ಮತ್ತು ಇಸ್ಪಹಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಯಶಸ್ವಿ ಬಾಂಬ್ ದಾಳಿ ನಡೆಸಿತ್ತು. ಅಮೆರಿಕವು 6 ಶಕ್ತಿಶಾಲಿ Northrop B-2 Spirit ಯುದ್ಧವಿಮಾನ ಬಳಸಿಕೊಂಡು ಡಜನ್‌ಗಟ್ಟಲೇ ಜಿಬಿಯು -57 ಎ/ಬಿ ಬೃಹತ್ ಆರ್ಡ್‌ನೆನ್ಸ್ ಪೆನೆಟ್ರೇಟರ್ (MOP) ಬಾಂಬ್‌ಗಳನ್ನ ಬಳಸಿ ದಾಳಿ ನಡೆಸಿತ್ತು. ಇದನ್ನ ʻಬಂಕರ್‌ ಬಸ್ಟರ್‌ʼ ಎಂದೂ ಕರೆಯಲಾಗುತ್ತದೆ. ಈ ʻಬಂಕರ್‌ ಬಸ್ಟರ್‌ʼ ಇರಾನ್‌ ರಾಜಧಾನಿ ಟೆಹ್ರಾನ್‌ನಿಂದ 100 ಕಿಮೀ ದೂರದಲ್ಲಿರುವ ಫೋರ್ಡೋ ಘಟಕದ ಮೇಲೆ ದಾಳಿ ಮಾಡಿದ್ರೆ, ಜಲಾಂತರ್ಗಾಮಿ ನೌಕೆಗಳಿಂದ ಹಾರಿಸಲಾದ 30 ಟೊಮಾಹಾಕ್ ಕ್ಷಿಪಣಿಗಳು (ಕ್ರೂಸ್‌ ಕ್ಷಿಪಣಿ) ಉಳಿದ 2 ಅಣು ಕೇಂದ್ರಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದವು.

    ಫೋರ್ಡೋ ಅಣು ಕೇಂದ್ರ ಎಷ್ಟು ಸೇಫ್‌?
    ಫೋರ್ಡೋ ಪರಮಾಣು ಘಟಕದ ಮುಖ್ಯ ಸಭಾಂಗಣವು ನೆಲದಡಿಯಲ್ಲಿ ಸುಮಾರು 80 ರಿಂದ 90 ಮೀಟರ್ (295 ಅಡಿ) ಆಳದಲ್ಲಿದೆ. ಇಷ್ಟು ಅಡಿ ಆಳದಲ್ಲಿರುವ ಈ ಘಟಕವನ್ನು ಇಸ್ರೇಲ್ ಹೊಂದಿರುವ ಯಾವುದೇ ವೈಮಾನಿಕ ಬಾಂಬ್‌ನಿಂದ ಧ್ವಂಸ ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ ವಿಶ್ವದಲ್ಲೇ ಅತಿಹೆಚ್ಚು ಪವರ್‌ಫುಲ್‌ ಆಗಿರುವ ಸ್ವದೇಶಿ ನಿರ್ಮಿತ GBU-57A/B Massive Ordinance Penetrator ಬಾಂಬ್‌ನಿಂದ ಅಮೆರಿಕ ದಾಳಿ ನಡೆಸಿದೆ.

    ಇನ್ನೂ ಇಸ್ರೇಲ್-ಇರಾನ್ ಮಧ್ಯೆ ಕದನ ವಿರಾಮ ಘೋಷಣೆಯಾಗಿದ್ದರೂ, ಇರಾನ್ ಸಿಟ್ಟು ಕಡಿಮೆಯಾಗಿಲ್ಲ. ಇರಾನ್ ಪರಮೋಚ್ಛ ನಾಯಕ ಖಮೇನಿ ಮತ್ತೆ ಅಮೆರಿಕ ವಿರುದ್ಧ ಕೆಂಡಕಾರಿದ್ದಾರೆ. ಇಸ್ರೇಲ್ ಸೋಲುವ ಭೀತಿಯಿಂದಲೇ ಅಮೆರಿಕ ಎಂಟ್ರಿ ಕೊಟ್ಟಿದೆ. ಈ ಯುದ್ಧದಿಂದ ಅಮೆರಿಕ ಸಾಧಿಸಿದ್ದೇನೂ ಇಲ್ಲ. ನಾವು ಅಮೆರಿಕಕ್ಕೆ ಶರಣಾಗತಿಯಾಗೋ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

    ಇನ್ನು ಇಸ್ರೇಲ್ ಜೊತೆಗಿನ ಕದನ ವಿರಾಮ ಬಳಿಕ ಇರಾನ್ ತನ್ನ ವಾಯುಪ್ರದೇಶವನ್ನು ಮತ್ತೆ ಸಂಚಾರಕ್ಕೆ ಮುಕ್ತಗೊಳಿಸಿದೆ. ಜೂನ್ 12ರಿಂದಲೂ ಇರಾನ್ ವಾಯುಪ್ರದೇಶ ಮುಚ್ಚಿತ್ತು.. ಅಂತಾರಾಷ್ಟ್ರೀಯ, ದೇಶೀಯ ವಿಮಾನಗಳಿಗೆ ಏರ್‌ಸ್ಪೇಸ್ ಓಪನ್ ಮಾಡಲಾಗಿದೆ ಎಂದು ಇರಾನ್ ತಿಳಿಸಿದೆ.

    ಸಂಘರ್ಷಪೀಡಿತ ಇರಾನ್‌ನಲ್ಲಿ ಸಿಲುಕಿದ್ದ ಒಟ್ಟು 3,154 ಭಾರತೀಯ ಪ್ರಜೆಗಳನ್ನು ಆಪರೇಷನ್ ಸಿಂಧು ಕಾರ್ಯಾಚರಣೆಯಡಿ ಕರೆತರಲಾಗಿದೆ. 296 ಭಾರತೀಯರು ಮತ್ತು ನಾಲ್ವರು ನೇಪಾಳಿ ಪ್ರಜೆಗಳನ್ನು ಹೊತ್ತ ವಿಮಾನ ನಿನ್ನೆ ದೆಹಲಿಗೆ ಮರಳಿತ್ತು. ಇದರೊಂದಿಗೆ ಆಪರೇಷನ್ ಸಿಂಧು ಅಡಿಯಲ್ಲಿ ಸ್ಥಳಾಂತರಿಸಲಾದ ಒಟ್ಟು ಭಾರತೀಯರ ಸಂಖ್ಯೆ 3,154ಕ್ಕೆ ತಲುಪಿದೆ.